2023-06-25 23:29:26 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
'ಕರ್ಣಾಟಕ ಸಾರಂಗ-ಈ ರಾಗವು ೧೫ನೆಯ ಮೇಳಕರ್ತ ಮಾಯಾ
ಮಾಳವಗೌಳದ ಒಂದು ಜನ್ಯರಾಗ,
ಸ ರಿ ಗ ಮ ಪ ದ ನಿ ಸ
ಸ ದ ಮ ಪ ಮ ಗ ರಿ ಸ
೧೩೧
ಶಾರಂಗಪಾಣಿಯು ರಚಿಸಿರುವ ( ಚೆಪ್ಪಿನಂತ ಮಾಟ " ಎಂಬ ತ್ರಿಪುಟತಾಳದ ಪದವು
ಈ ರಾಗದಲ್ಲಿದೆ.
ಕರ್ಣಾಟಕ ಸುರಟ ಈ ರಾಗವು ೪ನೆಯ ಮೇಳಕರ್ತ ವನಸ್ಪತಿಯ
ಒಂದು ಜನ್ಯರಾಗ.
ಆ .
ಅ.
ಸ ರಿ ಗ ಮ ಪ ದ ಸ
ಸ ನಿ ದ ಪ ಮ ರಿ ಸ
ಕರ್ಣಾಟಕ ಸಂಗೀತ ಪಿತಾಮಹ-ಹರಿದಾಸ ಶ್ರೇಷ್ಠರಾದ ಪುರಂದರ
ದಾಸರಿಗೆ (೧೪೮೪-೧೫೬೫) ಸಂದಿರುವ ಬಿರುದು. ಅವರು ಕರ್ಣಾಟಕ ಸಂಗೀತಕ್ಕೆ
ವೈಜ್ಞಾನಿಕ ತಳಹದಿ ಹಾಕಿ ಅದು ವಿಪುಲವಾಗಿ ಬೆಳೆಯಲು ಕಾರಣರಾದರು.
ಕರ್ಣಾಟಕ ಲಘು-ಇದು ೧೬ ಅಕ್ಷರಕಾಲವಿರುವ ಒಂದು ಲಘು. ಒಂದು
ಘಾತ ಮತ್ತು ೧೫ ಬೆರಳೆಣಿಕೆಯಿಂದ ಇದನ್ನು ಲೆಕ್ಕ ಮಾಡಲಾಗುತ್ತದೆ. ಇದಕ್ಕೆ
ದೇಶ್ಯ ಶುದ್ಧ ಸಂಕೀರ್ಣಲಘುವೆಂದು ಹೆಸರು.
ಕತ್ತರಿಮಿಟು-ತಂತೀವಾದ್ಯವನ್ನು ನುಡಿಸುವ ವಿಧಾನಕ್ಕೆ ಮಾಟು ಎಂದು
ಹೆಸರು. ತಂತಿಗಳನ್ನು ಮಾಟುವ ವಿಧಾನವು ೨೩ ಬಗೆಯಾಗಿದೆ. ಇದು ವೀಣೆಗೆ
ಸಂಬಂಧಿಸಿದ ಮಾತು ತರ್ಜನಿ ಬೆರಳು ಮತ್ತು ಮಧ್ಯದ ಬೆರಳಿನಿಂದ ಒಂದರನಂತರ
ಇನ್ನೊಂದರಿಂದ ಮಾಟ ಕಂಪನ ಉಂಟುಮಾಡುವ ವಿಧಾನಕ್ಕೆ ಕತ್ತರಿಮಿಾಟು ಎಂದು
ಹೆಸರು.
ಕತ್ತಿರಿ - ಇದೊಂದು ಬಗೆಯ ಮದ್ದಳೆ.
ಕರ್ತರೀ-ಭರತನಾಟ್ಯದ ಉತ್ಪವನ ಭೇದಗಳಲ್ಲಿ ಒಂದುವಿಧ. ಮುಂಗಾಲಿನ
ಬೆರಳುಗಳ ಮೇಲೆ ಕುಪ್ಪಳಿಸುತ್ತಾ ಎಡಗಾಲಿನ ಹಿಂದುಗಡೆ ಕರ್ತರೀ ಮುಖ ಹಸ್ತ
ವನ್ನೂ, ಸೊಂಟದ ಮೇಲೆ ಕೆಳಮುಖವಾಗಿ ಶಿಖರಹಸ್ತವನ್ನೂ ಪ್ರದರ್ಶಿಸುವುದು
ಕರ್ತರೀ ಉತ್ಪವನವೆನಿಸುವುದು.
ಕರ್ತರೀಮುಖಹಸ್ತ-ಭರತನಾಟ್ಯದ ಅಸಂಯುತ ಹಸ್ತಭೇದಗಳಲ್ಲಿ ಒಂದು
ವಿಧ. ಅರ್ಧಪತಾಕಹಸ್ತದಲ್ಲಿನ ಕಿರುಬೆರಳನ್ನು ಚಾಚಿ ತರ್ಜನೀ ಮಧ್ಯಮಗಳನ್ನು
ಕತ್ತರಿಯ ಬಾಯನೆ ಅಗಲಿಸುವುದಕ್ಕೆ ಕರ್ತರೀ ಮುಖವೆಂದು ಹೆಸರು.
ಪುರುಷರ ಅಗಲಿಕೆ, ವಿಪರ್ಯಾಸ, ಲೂಟಿ, ಕಡೆಗಣ್ಣನೋಟ, ಸಾವು, ಭೇದಭಾವ,
ಮಿಂಚು, ಏಕಶಯ್ಯ, ವಿರಹ, ಪತನ, ಬಳ್ಳಿ ಇವುಗಳನ್ನು ಸೂಚಿಸುವುದೇ ಈ ಹಸ್ತ
ಲಕ್ಷಣ.