This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
240
 
ರಕ್ತಿ, ದೇಶ್ಯರಾಗಗಳೆಂದೂ, ಕೆಲವು ರಾಗಗಳನ್ನು ನಿರ್ದಿಷ್ಟ ಕಾಲದಲ್ಲಿ ಹಾಡಿದರೆ ಅದರ
ಇಂಪು ಸೊಗಸು ಇರುವುದೆಂದು, ರಾಗಗಳನ್ನು ಬೆಳಗಿನ ರಾಗಗಳು, ಮಧ್ಯಾನ್ಹದ ರಾಗ
ಗಳು, ರಾತ್ರಿಯ ರಾಗಗಳು, ಸಾರ್ವಕಾಲಿಕ ರಾಗಗಳೆಂದೂ, ಕೆಲವು ಗ್ರಂಥಗಳಲ್ಲಿ ರಾಗ
ಗಳನ್ನು ಪುರುಷ ಮತ್ತು ಸ್ತ್ರೀ ರಾಗಗಳೆಂದೂ ಹೇಳಿದ್ದಾರೆ. ಇವಲ್ಲದೆ ಲಕ್ಷಣ ಗ್ರಂಧ
ಗಳಲ್ಲಿ ರಾಗಕ್ಕೆ ೧೩ ಲಕ್ಷಣಗಳನ್ನು ಹೇಳಿದ್ದಾರೆ.
 
ನಮ್ಮ ಸಂಗೀತದಲ್ಲಿ ರಾಗ ಎಷ್ಟು ಮುಖ್ಯವೋ ತಾಳ ಅಷ್ಟೇ ಮುಖ್ಯ. ತಾಳ
ಎಂದರೆ ಕಾಲನಿಯತಿ, ಅದಕ್ಕೆ ನಮ್ಮ ಸಂಗೀತದಲ್ಲಿ ಪ್ರಮುಖಪಟ್ಟ. ಸಾಮಾನ್ಯ
ವಾಗಿ ವ್ಯವಹಾರದಲ್ಲಿ ಸುಳಾದಿ ಸಪ್ತತಾಳಗಳು ರೂಢಿಯಲ್ಲಿವೆ. ಲಘುವಿನ ಜಾತಿ
ಭೇದದಿಂದ ೩೫ ತಾಳಗಳಾಗುತ್ತವೆ. ಈ ಏಳು ಸುಳಾದಿ ತಾಳಗಳಲ್ಲಿ ಪುರಂದರದಾಸರು
ಅಲಂಕಾರಗಳನ್ನು ಹೆಣೆದಿದ್ದಾರೆ. ಇವಕ್ಕೆ ತಾಳಾಲಂಕಾರಗಳೆಂದು ಹೆಸರು.
ಕರ್ಣಾಟಕ ಸಂಗೀತ ಕಲಿಯಲಾರಂಭಿಸುವವರು ಮೊದಲು ಸ್ವರಾವಳಿ,
ಅಲಂಕಾರಗಳು, ನಂತರ ಗೀತೆಗಳನ್ನು ಕಲಿತು, ತರುವಾಯ ಸ್ವರಜತಿ, ವರ್ಣ
ಕಲಿಯುತ್ತಾರೆ ವರ್ಣಗಳಾದ ಮೇಲೆ ಕೃತಿಯನ್ನು ಕಲಿಯುತ್ತಾರೆ. ಕೃತಿಯೇ
ಸಂಗೀತಸಾಹಿತ್ಯ ರಚನೆಯ ಪರಾಕಾಷ್ಠತೆ. ಇದರ ನಡುವೆ ಮಧ್ಯ ಮಕಾಲ ಸಾಹಿತ್ಯ
ವಿರಬಹುದು. ಸಾಹಿತ್ಯದ ಕೆಲವು ಕಡೆ ಸಂಗತಿಗಳಿರಬಹುದು. ಇವೆಲ್ಲ ಮಾಧುರ್ಯ
ವರ್ಧಕ ಸಾಧನಗಳು, ಕೃತಿಯಲ್ಲಿ ಧಾತು ಅಂದರೆ ಸ್ವರ ಮತ್ತು ಮಾತು ಅಂದರೆ
ಸಾಹಿತ್ಯ ಇವೆರಡೂ ಇರುತ್ತವೆ. ಕೃತಿಯ ಮೊದಲು ಹಾಡುವುದು ಆಲಾಪನೆ,
ತಾನ ಇವುಗಳೂ, ಕೃತಿಯಲ್ಲಿ ಪಲವಿಗೆ ಸಂಗತಿಗಳನ್ನು ಹಾಕಿ ಹಾಡುವುದೂ ಸಂಗೀತ
ಸಾಧನೆಯ ಕಲಶ. ಇದಕ್ಕೆ ಮನೋಧರ್ಮಸಂಗೀತವೆನ್ನುತ್ತಾರೆ. ರಾಗಾಲಾಪನೆ
ಮುನ್ನುಡಿಯಂತೆ ಸ್ವಲ್ಪದರಲ್ಲಿ ರಾಗದ ಲಕ್ಷಣ ಪೂರ್ತಿ
ನಂತರ ಮಂದ್ರ, ಮಧ್ಯ, ತಾರಸ್ಥಾಯಿಗಳಲ್ಲಿ ವಿಳಂಬ
ಕಾಲದಲ್ಲಿ ಸಂಚಾರ, ನಂತರ ದ್ರುತಕಾಲದ ಸಂಚಾರ ಅಥವಾ ಮೂರ್ಛನಾಪ್ರಸ್ತಾರ
ಇವು ರಾಗವರ್ಧಿನೀ ಕಡೆಯದಾಗಿ ಮಕರಿಣೀ ಅಥವಾ ತಾನ ಆಲಾಪನೆ ಮುಗಿದ
ಮೇಲೆ ಪಲ್ಲವಿ ಹಾಡುವುದು ಅಂದರೆ ಸಾರಿಸಾರಿಗೂ ಪಲ್ಲವಿಯ ಸ್ವರಸಾಹಿತ್ಯ ಹಿಗ್ಗಿಸು
ವುದೆಂದರ್ಧ. ಇದಾದ ಮೇಲೆ ಹಾಡುವ ಕಲ್ಪನಾಸ್ವರವೂ ಮನೋಧರ್ಮ ಸಂಗೀತ.
 
ಹಂತಗಳಿವೆ.
 
ಯಲ್ಲಿ ನಾಲ್ಕು
ಸಂಗ್ರಹಿಸುವುದು ಆಕ್ಷಿಪ್ತಿಕಾ
 
ವಾಗ್ಗೇಯಕಾರರಲ್ಲಿ ತ್ಯಾಗರಾಜ, ಮುತ್ತು ಸ್ವಾಮಿ ದೀಕ್ಷಿತರು, ಶ್ಯಾಮಾಶಾಸ್ತ್ರಿ
ಗಳು, ಪಟ್ಟಂ ಸುಬ್ರಹ್ಮಣ್ಯ ಅಯ್ಯರ್, ವೀಣಾ ಕುಪ್ಪಯ್ಯರ್, ತಿರುವೋಟ್ಟಿಯೂರು
ತ್ಯಾಗಯ್ಯರ್‌, ಸ್ವಾತಿ ತಿರುನಾಳ, ಮೈಸೂರು ಸದಾಶಿವರಾವ್, ಪಲ್ಲವಿ ಗೋಪಾಲ
ಅಯ್ಯರ್, ವೀಣೆ ಶೇಷಣ್ಣ, ಮೈಸೂರು ವಾಸುದೇವಾಚಾರ್ಯರೇ ಮುಂತಾದವರು
ಪ್ರಸಿದ್ಧರು. ಕರ್ಣಾಟಕ ಸಂಗೀತ ಕಚೇರಿಯಲ್ಲಿ ವರ್ಣ, ನಂತರ ಪ್ರಸಿದ್ಧ
ವಾಗ್ಗೇಯಕಾರರ ಕೃತಿಗಳು, ದೇವರನಾಮಗಳು, ಶ್ಲೋಕ, ರಾಗಮಾಲಿಕೆ, ತಿಲ್ಲಾನ,
ಭಜನ್‌ಗಳನ್ನು ಹಾಡಿ ಮುಗಿಸುತ್ತಾರೆ.