2023-07-01 07:53:16 by jayusudindra
This page has been fully proofread once and needs a second look.
ಸ್ವರಮೇಳಕಲಾನಿಧಿ ಎಂಬ
ಇವನ
ಬಂದ ಲಕ್ಷಣಕಾರರ ಮೇಲೆ ಪ್ರಭಾವ ಬೀರಿತು.
ಗ್ರಂಥವನ್ನು ರಚಿಸಿ ಕರ್ಣಾಟಕ ಸಂಗೀತದಲ್ಲಿ ಕ್ರಾಂತಿ ಉಂಟುಮಾಡಿದನು
ಕಾಲದಲ್ಲಿ ಶ್ರುತಿಗಳ, ಸ್ವರಗಳ, ರಾಗಗಳ, ಮೇಳಗಳ ವಿಚಾರವಾಗಿ ಕೋಲಾಹಲವೇ
ಇದ್ದಿತು. ಈ ಕೋಲಾಹಲವನ್ನು ಸರಿಪಡಿಸಿ ಲಕ್ಷ ಮತ್ತು ಲಕ್ಷಣಗಳ ಸಮನ್ವಯ
ಗೊಳಿಸಲು ಪ್ರಯತ್ನಿಸಿದನು
ಚತುರ್ದಂಡೀ ಪ್ರಕಾಶಿಕಾ ಎಂಬ ಗ್ರಂಥದಲ್ಲಿ ೭೨ ಮೇಳಕರ್ತಗಳ ವ್ಯವಸ್ಥೆಯನ್ನು
ನಿರೂಪಿಸಿದನು ಅವನ ಕಾಲದಲ್ಲಿ ೧೯ ಮೇಳಗಳು ಮಾತ್ರ ಬಳಕೆಯಲ್ಲಿದ್ದವು.
ಮಿಕ್ಕ ೫೩ ಮೇಳಗಳನ್ನು ಶಾಸ್ತ್ರದ ಲಕ್ಷಣದ ಸಾಮರ್ಥ್ಯದಿಂದಲೇ ನಿರೂಪಿಸಿದ್ದನು.
ಅವನ ಎಲ್ಲ ರಾಗಗಳೂ ಪ್ರಚುರವಾಗಲಿಲ್ಲ. ಆದರೆ ಲಕ್ಷಣದ ವಿಧಿನಿಷೇಧಗಳನ್ನು
ಗಣನೆಗೆ ತಂದುಕೊಳ್ಳದೆ, ಪ್ರಯೋಗಸಿದ್ಧವಾದ, ವ್ಯವಹಾರ ಶುದ್ಧವಾದ ಲಕ್ಷ
ಸಂಗೀತವನ್ನು ಪ್ರಚುರಪಡಿಸಿದವರು ಪುರಂದರದಾಸರು. ಜನರ ಹಿತ, ಅಗತ್ಯಗಳನ್ನು
ಅರ್ಥಮಾಡಿಕೊಂಡು ಅವುಗಳಿಗನುಗುಣವಾಗಿ ಸಂಗೀತದ ಕಟ್ಟಡವನ್ನು ಚೊಕ್ಕ
ಗೊಳಿಸಿದರು. ಇವರು ನೂರಾರು ಲಕ್ಷಗೀತಗಳನ್ನು ರಚಿಸಿದರು.
ರಾಗದ ಹಿರಿಮೆಯನ್ನು ಸಾರಿದ್ದರು. ಸಮಾನಾಂತರ ಶ್ರುತಿಯ ಈ ರಾಗದ ಹಿರಿಮೆ
ಯನ್ನು ಅರ್ಥಮಾಡಿಕೊಂಡು ಇದರ ಜನ್ಯವಾದ ಮಲಹರಿಯಲ್ಲಿ ಅಭ್ಯಾಸಿಗಳ
ಅನುಕೂಲಕ್ಕೆಂದು ಗೀತೆಗಳನ್ನು ರಚಿಸಿದರು ಕಾಲಕ್ರಮದಲ್ಲಿ ಸಂಗೀತಾಚಾರ್ಯರ
ಪಂಕ್ತಿಯಲ್ಲಿ ಅಗ್ರಸ್ಥಾನವನಾ ಕ್ರಮಿಸಿ ಸಂಪ್ರದಾಯದ ಗೌರವವನ್ನು ಪಡೆದು
ಉಳಿದಿದ್ದಾರೆ
೧೨೮
ವೆಂಕಟಮಖಿಯ ಸಂಪ್ರದಾಯವನ್ನನುಸರಿಸಿ ಮುತ್ತುಸ್ವಾಮಿ ದೀಕ್ಷಿತರು
ಮೇಳರಾಗಗಳಲ್ಲಿ ಅವುಗಳ ಹಲವಾರು ಜನ್ಯರಾಗಗಳಲ್ಲಿ ಕೃತಿಗಳನ್ನು ರಚಿಸಿದರು.
ಆದರೆ ಕರ್ಣಾಟಕ ಸಂಗೀತದಲ್ಲಿ ಅತಿ ಪ್ರಸಿದ್ಧ ವಾಗ್ಗೇಯಕಾರರೆನಿಸಿರುವ ತ್ಯಾಗ
ರಾಜರೂ ಶ್ಯಾಮಾಶಾಸ್ತ್ರಿಗಳೂ ಈ ಪದ್ಧತಿಯನ್ನು ಅನುಸರಿಸಲಿಲ್ಲ ತ್ಯಾಗರಾಜರು
ವೆಂಕಟಮಖಿಯ ನಂತರ ಇದ್ದ ಸಂಗೀತಸಾರಸಂಗ್ರಹ ಎಂಬ ತೆಲುಗು ಗ್ರಂಥವನ್ನು
ರಚಿಸಿದ ಅಕಳಂಕನ ಪದ್ಧತಿಯನ್ನು ಅನುಸರಿಸಿದರು.
ಸ್ವರೂಪ - ಭಾವದ ಭಾಷೆಯಾದ ಸಂಗೀತದಲ್ಲಿ ನಾದವು ಸರ್ವಸ್ವ. ನಾದವು
ಮನುಷ್ಯನಲ್ಲಿ ಐದು ಬಗೆಯಾಗಿ ಐದು ಸ್ಥಳಗಳಿಂದ ಏಳುತ್ತದೆ. ಆದರೆ ವ್ಯವಹಾರ
ದಲ್ಲಿ ಹೃದಯದಿಂದೆದ್ದ ಮಂದ್ರ, ಕಂಠದಿಂಡೆದ್ದ ಮಧ್ಯ, ಶಿರಸ್ಸಿನಿಂದೆದ್ದ ತಾರ ಇವು
ಗಳನ್ನು ಮಾತ್ರ ಪರಿಗಣಿಸುತ್ತಾರೆ. ಅವಕ್ಕೆ ಸ್ಥಾಯಿ ಎಂದು ಹೆಸರು. ಪ್ರತಿ
ಸ್ಥಾಯಿಯಲ್ಲಿ ಶ್ರುತಿಗಳಿರುತ್ತವೆ. ಇವುಗಳ ಸಂಖ್ಯೆ ಇಪ್ಪತ್ತೆರಡು. ಇವುಗಳ
ನಡುವೆ ಅನುರಣನದಿಂದ ಯುಕ್ತವಾದ ಏಳು ಸ್ವರಗಳಿವೆ. ಇವು ಷಡ್ಡ, ಋಷಭ,