This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ನಿವಾಸಿಯಾದ ಪುಂಡರೀಕವಿಠಲನು ಮೊಗಲ್ ಚಕ್ರವರ್ತಿ ಅಕ್ಷರನಿಂದ ಆಹ್ವಾನಿತ

ನಾಗಿ ಹರಿದಾಸಸ್ವಾಮಿಗಳೊಡನೆ ತಾನ್‌ನನಿಗೆ ಗುರುವಾಗಿದ್ದನು. ಈತನು

ರಾಗಮಾಲಾ, ರಾಗಮಂಜು, ಸದ್ರಾಗಚಂದ್ರೋದಯ ಮುಂತಾದ ಗ್ರಂಥಗಳನ್ನು
 
ಬರೆದನು.
 
೧೨೭
 

ಸುಮಾರು ೧೩-೧೪ನೆ ಶತಮಾನಗಳ ವೇಳೆಗೆ ನಮ್ಮ ಭಾರತೀಯ ಸಂಗೀತವು

ಎರಡು ಪದ್ಧತಿಗಳಾಗಿ ಸೀಳಿತೆನ್ನಬಹುದು. ಅಲ್ಲಾವುದ್ದೀನನ ಕಾಲದಲ್ಲಿ ಪರ್ಷಿಯನ್

ಕವಿ ಮತ್ತು ಸಂಗೀತ ವಿದ್ವಾಂಸನಾಗಿದ್ದ ಅಮಾರ್‌ಖುಸು ತನ್ನ ದೇಶದ ರಾಗಗಳನ್ನೂ

ನಮ್ಮ ದೇಶದ ರಾಗಗಳನ್ನೂ ಸಮನ್ವಯಮಾಡಿ ಹಲವಾರು ಹೊಸರಾಗಗಳನ್ನು

ಸೂಚಿಸಿದನು. ಹೀಗೆ ಪರಕೀಯ ಪ್ರಭಾವದಿಂದ ಪ್ರಾರಂಭವಾದ ಪದ್ಧತಿ ಮೊಗಲರ

ಆಳ್ವಿಕೆಯಲ್ಲಿ ಚೆನ್ನಾಗಿ ಬೇರೂರಿತು. ನಮ್ಮ ಸಂಗೀತ ಉತ್ತರಾದಿ, ದಕ್ಷಿಣಾದಿಗಳೆಂಬ

ಪದ್ಧತಿಗಳಾಗಿ ಕವಲೊಡೆಯಿತು.

ಇವೆರಡು ಪದ್ಧತಿ

ತಿಗಳು ಬೇರೆಬೇರೆಯಾದರೂ

ಶಾಸ್ತ್ರ ಪ್ರಕ್ರಿಯೆ ಎರಡಕ್ಕೂ ಸಾಮಾನ್ಯವೇ ಆಗಿವೆ. ಇವೆರಡಕ್ಕೂ ಕನ್ನಡಿಗರು

ಆಚಾರ್ಯಪುರುಷರಾಗಿದ್ದರೆಂಬುದು ಗಮನಾರ್ಹ. ಉತ್ತರಾದಿ ಪದ್ಧತಿಗೆ ಗೋಪಾಲ

ನಾಯಕ ಮತ್ತು ಪುಂಡರೀಕವಿಠಲ, ದಕ್ಷಿಣದ ಪದ್ಧತಿಗೆ ವಿದ್ಯಾರಣ್ಯ, ಕಲ್ಲಿನಾಥ,

ಗೋವಿಂದ ದೀಕ್ಷಿತರೇ ಮುಂತಾದವರ ಹೆಸರುಗಳು ಒಗ್ಗಿಕೊಂಡು ನಿಂತಿವೆ.
 

ವಿಜಯನಗರ ಸಾಮ್ರಾಜ್ಯದಲ್ಲಿ ಕಲಾ ಸಾಹಿತ್ಯಗಳಿಗೆ ವಿಶೇಷ ಪ್ರೋತ್ಸಾಹ

ವಿದ್ದಿತು. ವಿದ್ಯಾರಣ್ಯ ಸ್ವಾಮಿಗಳು ಶೃಂಗೇರಿ ಮಠದವರು. ವಿಜಯನಗರ ಸಂಸ್ಥಾನ

ವನ್ನು ಸ್ಥಾಪಿಸಿದವರೆಂದು ಪ್ರಸಿದ್ಧರಾದವರು. ಅವರು ಈ ಕಾಲದಲ್ಲಿ ಸಂಗೀತಸಾರ

ವೆಂಬ ಲಕ್ಷಣ ಗ್ರಂಥವನ್ನು ರಚಿಸಿದರು. ಅವರು ಸ್ಪುಟಪಡಿಸಿದ ಸಂಗೀತ ಪದ್ಧತಿಗೆ

ಕರ್ಣಾಟಕ ಸಂಗೀತವೆಂಬ ಹೆಸರು ಬಂದಿತು. ವಿದ್ಯಾರಣ್ಯರು ವಿವೇಚಿಸಿ ದೊಡ್ಡ

ದೊಂದು ಸಂಪ್ರದಾಯವನ್ನು ಹಾಕಿಕೊಟ್ಟರು. ಅವರ ಸಂಗೀತಸಾರವೆಂಬ ಗ್ರಂಥ

ದಲ್ಲಿ ೧೫ ಮೇಳರಾಗಗಳನ್ನು ಹೇಳಿ ೫೦ ಪ್ರಚುರ ಪ್ರಯೋಗಗಳುಳ್ಳ ರಾಗಗಳನ್ನು

ಅಳವಡಿಸಿದ್ದಾರೆಂದು ಗೋವಿಂದ ದೀಕ್ಷಿತರ ಸಂಗೀತ ಸುಧಾ (೧೬೧೪) ಎಂಬ ಗ್ರಂಥ

ದಿಂದ ತಿಳಿದುಬರುತ್ತದೆ. ಇದಲ್ಲದೆ ರಾಗಾಲಾಪನೆಯ ವಿಧಿಗಳನ್ನೂ ನಿರೂಪಿಸಿದರು.
 

ಗೋವಿಂದ ದೀಕ್ಷಿತರು ಕರ್ಣಾಟಕದವರು. ಅವರು ತಂಜಾವೂರಿನ ದೊರೆ

ರಘುನಾಧನಾಯಕನ (೧೬೧೪-೧೬೨೮) ಮಂತ್ರಿಯಾಗಿದ್ದರು. ಸಂಗೀತಸುಧಾ

ಎಂಬ ಲಕ್ಷಣಗ್ರಂಧವನ್ನು ರಚಿಸಿದರು. ಈಗ ಪ್ರಚುರವಾಗಿರುವ ವೀಣೆಯ ಸ್ವರೂಪ

ವನ್ನು ಸಿದ್ಧ ಮಾಡಿಕೊಟ್ಟರು. ಹಲವು ಲಕ್ಷಣಗೀತಗಳನ್ನೂ ರಚಿಸಿದ್ದಾರೆ.
 

೧೫ನೆ ಶತಮಾನದ ಅಂತ್ಯಭಾಗದಲ್ಲಿ ವಿಜಯನಗರದ ೨ನೆ ದೇವರಾಯನ

ಆಸ್ಥಾನದಲ್ಲಿದ್ದ ಕಲ್ಪಪ್ಪದೇಶಿಕನು ಶಾರ್ಙ್ಗದೇವನ ಸಂಗೀತರತ್ನಾಕರವೆಂಬ ಗ್ರಂಥಕ್ಕೆ

ಸಂಗೀತ ಕಲಾನಿಧಿ ಎಂಬ ಸ್ವತಂತ್ರ ವ್ಯಾಖ್ಯಾನವನ್ನು ರಚಿಸಿದನು.

ಸಂಗೀತದ ವಿಕಾಸದಲ್ಲಿ ಮಾರ್ಗದರ್ಶನ ಮಾಡುವ ಶಕ್ತಿಯಾಗಿ ಪರಿಣಮಿಸಿ, ನಂತರ
 
ಇದು ಅಂದಿನ