This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಪಾಸನೆಯು ಈ ಕಲೆಯ ಮುಖ್ಯ ಗುರಿ. ಗಾಯನ, ವಾದ್ಯ ಸಂಗೀತ ಮತ್ತು ನೃತ್ಯ
ಈ ಮರು ಸಂಗೀತದಲ್ಲಿ ಅಡಕವಾಗಿದ್ದು ಕ್ರಮೇಣ ನೃತ್ಯವು ಪ್ರತ್ಯೇಕವಾಯಿತು.
ಭಾರತೀಯ ಸಂಗೀತ ಪದ್ಧತಿಯು ವೈದಿಕ ಮತ್ತು ಜಾನಪದ ಸಂಪ್ರದಾಯ
ಮೇಳನೆಯನ್ನು ತೋರಿಸುತ್ತದೆ. ವೇದಾಧ್ಯಯನದ ಪದ, ಕ್ರಮ, ಘನ, ಜಟಾ
ಪಾಠಗಳೂ, ಉದಾತ್ತ ಅನುದಾತ್ತ ಪ್ರಚಯಸ್ವರಿತಗಳೂ ಸಂಗೀತಕ್ಕೆ ಮೂಲ.
ಸಂಗೀತಶಾಸ್ತ್ರ ಗ್ರಂಥಗಳಲ್ಲಿ ಸಾಮವೇದವೇ ಸಂಗೀತಕ್ಕೆ ಮೂಲವೆಂದು ಹೇಳಿದೆ.
ಅನಾದಿ ಸಿದ್ಧವಾದ ಸಂಪ್ರದಾಯದ ಬಲದಿಂದ ಸಾಮಗಾನದ ಹಿರಿಮೆ ರೂಢವಾಗಿ
ನಿಂತಿತು. ಸಂಗೀತ ಗಂಧರ್ವವೇದವೆಂಬ ಉಪವೇದವಾಗಿ ಪರಿಗ್ರಹೀತವಾಯಿತು.
ಸಾಮಗಾನದ ಕುಷ್ಟ, ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಮಂದ್ರ ಮತ್ತು
ಅತಿಸ್ವಾರಗಳೆಂಬುವು ಲೌಕಿಕ ಸಂಗೀತದ ಪಂಚಮ ಮಧ್ಯಮ, ಗಾಂಧಾರ, ಋಷಭ,
ಷಡ್ಡ, ಧೈವತ, ನಿಷಾದ ಸ್ವರಗಳಾದುವು. ಸಂಗೀತಕ್ಕೆ ಸಂಬಂಧಿಸಿದ ಬಹು ಹಿಂದಿನ
ಗ್ರಂಥವೆಂದರೆ ಭರತಮುನಿಯ ನಾಟ್ಯಶಾಸ್ತ್ರ. ಇದರಲ್ಲಿ ಮನುಷ್ಯಸಾಧ್ಯವಾದ ಗಾನದ
ಪ್ರಸ್ತಾಪಬಂದಿದೆ. ಇದಕ್ಕಿಂತ ಹೆಚ್ಚು ಸ್ಪಷ್ಟವಾಗಿರುವ ಪ್ರಮಾಣಗ್ರಂಥ ಮತಂಗನ
ಬೃಹದೇಶೀ. ಇದರ ಕಾಲ ಸು ೪-೫ ಶ. ಭರತನು ಹೇಳುವ ಜಾತಿಗಳ ಬದಲು ರಾಗಗಳ
ಪ್ರಸ್ತಾಪ ಈ ಗ್ರಂಥದಲ್ಲಿ ಮೊಟ್ಟ ಮೊದಲಿಗೆ ಬರುತ್ತದೆ. ಇವನು ರಾಗಗಳನ್ನು ಶುದ್ಧ
ಛಾಯಾಂಗ, ಸಂಕೀರ್ಣವೆಂದು ವಿಭಾಗಮಾಡಿ ಶ್ರುತಿ, ಸ್ವರ, ವರ್ಣ, ಅಲಂಕಾರ
ಮುಂತಾದ ಹಲವು ವಿವರಗಳನ್ನು ಹೇಳಿದ್ದಾನೆ. ಸಂಗೀತಶಾಸ್ತ್ರವು ಬೆಳೆದು ಅದರ
ವಿಧಿನಿಷೇಧಗಳನ್ನು ಸ್ಪಷ್ಟ ಪಡಿಸುವ ಗ್ರಂಥಗಳು ಕಾಲಕ್ರಮದಲ್ಲಿ ರಚಿಸಲ್ಪಟ್ಟವು.
ನಾರದನ ಸಂಗೀತ ಮಕರಂದ, ತಮಿಳುನಾಡಿನ ಕುಡುಮಿಯಾ ಮಲೈ ಸಂಗೀತ
ಶಾಸನ ಚಾಳುಕ್ಯ ಸೋಮೇಶ್ವರನ ಮಾನಸೋಲ್ಲಾಸ, ಮುಂತಾದ ಗ್ರಂಧಗಳನ್ನು
ಹೆಸರಿಸಬಹುದು. ಗ್ರಂಥಗಳ ರಚನೆಯಾಗಿ ಪ್ರಚಾರವಾದಂತೆ ಅವುಗಳ ನಿರೂಪಣೆ
ಗಾಗಿ ಕೃತಿಗಳು ರಚಿಸಲ್ಪಟ್ಟು ಲಕ್ಷ-ಲಕ್ಷಣ ವಿಭಾಗ ರೂಪುಗೊಂಡಿತು. ಲಕ್ಷಣ
ಗೀತೆಗಳು ರಚನೆಯಾದುವು.
 
ಮತ್ತೊಂದು ಪ್ರಮುಖ ಪ್ರಾಚೀನ ಪ್ರಮಾಣ ಗ್ರಂಧವಾದ ಸಂಗೀತರತ್ನಾಕರ
ವನ್ನು ದೇವಗಿರಿಯ ದೊರೆ ಸಿಂಘಣನ (೧೨೧೦-೪೭) ಆಸ್ಥಾನದಲ್ಲಿದ್ದ ಶಾರ್ಙ್ಗದೇವನು
ರಚಿಸಿದನು. ಈ ಗ್ರಂಥವು ಸಂಗೀತಶಾಸ್ತ್ರಕ್ಕೆ ಭದ್ರವಾದ ಬುನಾದಿ ಹಾಕಿತೆನ್ನ
ಬಹುದು ಇದಕ್ಕೆ ಸಿಂಹಭೂಪಾಲನು (ಸು ೧೩೩೦) ಸುಧಾಕರವೆಂಬ ಟೀಕೆಯನ್ನೂ,
೧೫ ನೆ ಶತಮಾನದಲ್ಲಿದ್ದ ಕಲ್ಲಿನಾಥನು ಕಲಾನಿಧಿ ಎಂಬ ಟೀಕೆಯನ್ನು ಬರೆದನು.
ಇವನಿಗೆ ಮುಂಚೆ ದಕ್ಷಿಣದ ಗೋಪಾಲನಾಯಕನು ದೆಹಲಿಯ ಅಲ್ಲಾವುದ್ದೀನ್
ಖಿಲ್ಟಿಯ (೧೨೯೫-೧೩೧೫) ಆಸ್ಥಾನದಲ್ಲಿ ಪ್ರಖ್ಯಾತ ಗಾಯಕನಾಗಿದ್ದು ತಾಳಾರ್ಣವ,
ರಾಗಕದಂಬ, ಗ್ರಹಸ್ಪರ ಪ್ರಬಂಧ ಮುಂತಾದ ಗ್ರಂಥವನ್ನು ಬರೆದನು.
೧೬ನೆ ಶ.ದಲ್ಲಿ
ಈ ಪರಂಪರೆಯನ್ನು ಅಳವಡಿಸಿಕೊಂಡು ಬೆಂಗಳೂರಿನ ಬಳಿಯಿರುವ ಸಾವನದುರ್ಗದ