This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಸ ಮ ಗ ಮ ಪ ದ ನಿ ಸ
ಸ ನಿ ದ ಪ ಮ ಗ ರಿ ಸ
 
ಇವೆರಡು ರಾಗಗಳೂ ಸುಂದರವಾದ ಸಾರ್ವಕಾಲಿಕ ಉಪಾಂಗರಾಗಗಳು.
 
ಎಂಬ ಸ್ವರಸಮೂಹದಲ್ಲಿ ಕಾಕಲಿನಿಷಾದದ ಪ್ರಯೋಗವು ತ್ಯಾಗರಾಜರ ನಂತರ
ರೂಢಿಗೆ ಬಂದಿತು.
 
ಕರ್ಣಾಟಕಗೌಡ ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
ಒಂದು ರಾಗ
 
ಕರ್ಣಾಟಕಜೋಗಿ ಈ ರಾಗವು ೧೭ನೆಯ ಮೇಳಕರ್ತ ಸೂರ್ಯಕಾಂತದ
ಒಂದು ಜನ್ಯರಾಗ,
 
ಸ ರಿ ಗ ಮ ಪ ದ ಸ
 
ಸ ನಿ ದ ಪ ಮ ರಿ ಸ
 
ಕರ್ಣಾಟಕ ಬೇಹಾಗ್-ಈ ರಾಗವು ೨೮ನೆಯ ಮೇಳಕರ್ತ ಹರಿ
ಕಾಂಭೋಜಿಯ ಒಂದು ಜನ್ಯರಾಗ, ಇದಕ್ಕೆ ಕರ್ಣಾಟಕ ಬ್ಯಾಗ್ ಎಂದೂ
 
ಹೆಸರಿದೆ.
 
ಸ ರಿ ಗ ಮ ಪ ದ ನಿ ಸ
 

 
ಸ ನಿ ದ ನಿ ಪ ದ ಮ ಗ ರಿ ಗ ಸ
 
ತ್ಯಾಗರಾಜರ 'ನೇನೆಂದು ವೆತಕುದುರಾ' ಎಂಬ ರಚನೆಯು ಈ ರಾಗದ ಒಂದು ಬಹು
ಸುಂದರವಾದ ಕೃತಿ.
 
ಕರ್ಣಾಟಕ ಬಂಗಾಳ-ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ
 
ಒಂದು ರಾಗ.
 
ಕರ್ಣಾಟಕ ಭೂಷಣ-ಇದೇ ಹೆಸರಿನ ಎರಡು ರಾಗಗಳಿವೆ.
 
(೧) ಇದು ೧೬ನೆಯ ಮೇಳಕರ್ತ ಚಕ್ರವಾಕದ ಒಂದು ಜನ್ಯರಾಗ,
ಸ ರಿ ಗ ದ ನಿ ಸ
 
ಸ ನಿ ದ ಪ ಮ ಗ ರಿ ಸ
 
(೨) ಇದು ೭೦ನೆಯ ಮೇಳಕರ್ತ ನಾಸಿಕಾಭೂಷಣಿಯ ಒಂದು ಜನ್ಯರಾಗ,
ಸ ರಿ ಗ ಮ ದ ನಿ ಸ
 
ಸ ನಿ ದ ಮ ಗ ರಿ ಸ
 
ಕರ್ಣಾಟಕ ಮಂಜರಿ -ಈ ರಾಗವು ೫೪ನೆಯ ಮೇಳಕರ್ತ ವಿಶ್ವಂಭರಿಯ
ಒಂದು ಜನ್ಯರಾಗ.
 
ಸ ರಿ ಮ ಪ ದ ನಿ ಸ
ಸ ನಿ ದ ಪ ಮ ಪ ಗ ರಿ ಸ