2023-06-27 06:09:30 by jayusudindra
This page has been fully proofread once and needs a second look.
ಷಡ್ಜಕ್ಕಿಂತ ಸ್ವಲ್ಪ ಕಡಮೆಯಿರುವ ಮತ್ತು ಚ್ಯುತ
ನಿಷಾದಕ್ಕೆ ವಿರುದ್ಧವಾದ ಷಡ್
ಅಜನಿ
ವೆಂಕಟಮಖಿಯ * ಚತುರ್ದಂಡಿ ಪ್ರಕಾಶಿಕಾ' ಎಂಬ ಗ್ರಂಥದ
ಅನುಬಂಧದಲ್ಲಿ ಉಕ್ತವಾಗಿರುವ ಒಂದು ಭಾಷಾಂಗರಾಗ, ಇದು ವೇಗವಾಹಿನಿ
ಮೇಳದ ಒಂದು ಜನ್ಯರಾಗ,
ಅಜಪಾನಟನ
ತಮಿಳುನಾಡಿನ ತಿರುವಾರೂರಿನ ದೇವರಾದ ತ್ಯಾಗರಾಜ
ಸ್ವಾಮಿಯ ಒಂದು ನಾಟ್ಯ ವಿಶೇಷ
ಅಟತಾಳ
(೧) ಸೂಳಾದಿ ಸಪ್ತತಾಳಗಳಲ್ಲಿ ಆರನೆಯ ತಾಳದ ಹೆಸರುಲಘು.
ಲಘು, ದ್ರುತ, ದ್ರುತ ಈ ತಾಳದ ಅಂಗಗಳು,
(೨) ೧೦೮ ತಾಳಗಳಲ್ಲಿ ಒಂದು ಬಗೆಯ ತಾಳ, ಲಘು, ಎರಡು, ದ್ರುತಗಳು,
ಲಘು ಇದರ ಅಂಗಗಳು ಮತ್ತು ಒಂದು ಆವರ್ತವು ೩ ಮಾತ್ರೆಗಳನ್ನು ಹೊಂದಿರುತ್ತದೆ.
ಕಧಕಳಿ ಸಂಗೀತದಲ್ಲಿ ಅಟತಾಳಕ್ಕೆ ಅಟಂತವೆಂದು ಹೆಸರು
ಅಠಾಣ ಅಪ್ಪಯ್ಯ
ಇವರು ತ್ಯಾಗರಾಜರ ಸಮಕಾಲೀನರು ಮತ್ತು
ತಂಜಾವೂರು ರಾಜಾಸ್ಥಾನದ ಒಬ್ಬ ಅತ್ಯಂತ ಪ್ರಸಿದ್ಧ ಸಂಗೀತ ವಿದ್ವಾಂಸರು.
ಅಠಾಣರಾಗವನ್ನು ವಿಶೇಷ ಪ್ರತಿಭೆಯಿಂದ ಹಾಡುತ್ತಿದ್ದುದರಿಂದ ಇವರಿಗೆ
ಅಪ್ಪಯ್ಯ ಎಂಬ ಪ್ರಸಿದ್ಧಿ ಬಂದಿತು.
ಅಠಾಣ
ಅ : ಸ ರಿ ಮ ಪ ನಿ ಸ
ಆ : ಸ ನಿ ಸ ದಾ ಪ ಮ ಗಾ ಮ ರೀ ಸ
(ಸ ನಿ ದಾ ಪ ಮ ಸ ಗಾ ಮ ರೀ ಸ
ಈ ರಾಗವು
ಭಾಷಾಂಗರಾಗ, ಔಡವ ವಕ್ರ ಸಂಪೂರ್ಣರಾಗ, ಷಡ್ಡ ಗ್ರಹ ಸರ್ವಕಾಲೀನರಾಗ,
ಈ ರಾಗದ ಜೀವಸ್ವರವಾದ ಧೈವತವು ಯಾವಾಗಲೂ ಕೈಶಿಕಿ ನಿಷಾದದಿಂದ ಕೂಡಿ
ಬರುವುದರಿಂದ ಈ ರಾಗಕ್ಕೆ ವಿಶೇಷ ಕಳೆಯುಂಟು. ಕೈಶಿಕಿ ಮತ್ತು ಕಾಕಲಿ
ನಿಷಾದಗಳೂ ಮತ್ತು ಅವುಗಳ ಅಕ್ಕ ಪಕ್ಕದ ಶ್ರುತಿಗಳೂ ಮಿಶ್ರಿತವಾಗಿ ಬರುವ
ಕಾರಣ ಕೆಲವು ವಾಗ್ಗೇಯಕಾರರು ಈ ರಾಗವನ್ನು ಹರಿಕಾಂಭೋಜಿ ಮೇಳದಲ್ಲೂ
ಮತ್ತೆ ಕೆಲವರು ಧೀರಶಂಕರಾಭರಣ ಮೇಳದಲ್ಲಿ ಜನ್ಯವೆಂದು ಹೇಳಿದ್ದಾರೆ.
ವೆಂಕಟಮಖಿಯು ಕೈ ಶಿಕಿ ನಿಷಾದವನ್ನು ಲಕ್ಷಣ ಸ್ವರವನ್ನಾಗಿ ಇಟ್ಟು ಈ ರಾಗವು
೨೮ನೆಯ
ಹರಿಕೇದಾರಗೌಳದಲ್ಲಿ ಜನ್ಯವೆಂದು ಹೇಳಿದ್ದಾನೆ. ಈಗ
ರೂಢಿಯಲ್ಲಿ ಈ ರಾಗವನ್ನು ಧೀರಶಂಕರಾಭರಣ ಮೇಳದಲ್ಲಿ ಜನ್ಯವೆಂದೂ ಕೈಶಿಕಿ
ನಿಷಾದ ಮತ್ತು ಸಾಧಾರಣ ಗಾಂಧಾರಸ್ವರವು ಅನ್ಯಸ್ವರಗಳೆಂದೂ ಅಂಗೀಕರಿಸಿರುವರು.
ಬಳಕೆಯಲ್ಲಿ 4 ರಿಮಪನಿ ? ಎಂಬ ವರ್ಜ ಸಂಚಾರದಿಂದ ಆರೋಹಣವನ್ನು