2023-06-25 23:29:25 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
೧೨೧
(೧) ಕಟ್ಟಳೆಯು ಒಂದು ನಿರ್ದಿಷ್ಟವಾದ ರಾಗವನ್ನು ಸೂಚಿಸುತ್ತದೆ. ನಮ್ಮ
ಪಾಡೈಪಣ್‌ನ ೮ ಕಟ್ಟಳೆಗಳು ಎಂಟು ಬಗೆಯ ರಾಗಗಳಿವೆಯೆಂದು ಸೂಚಿಸುತ್ತವೆ.
(೨) ಕಟ್ಟಳೆಯು ತೇವಾರಂಗೀತೆಗಳ ವಿವಿಧ ಛಂದಸ್ಸನ್ನು ಸೂಚಿಸುತ್ತವೆ.
(೩) ಕಟ್ಟಳೆಗಳು ತಾಳಗಳನ್ನು ಸೂಚಿಸುತ್ತವೆ.
ಈ ಅಭಿಪ್ರಾಯಗಳಲ್ಲಿ ಮೊದಲ ಅಭಿಪ್ರಾಯವು ಸಂಗೀತದ ಐತಿಹಾಸಿಕ
ದೃಷ್ಟಿಯಿಂದ ಸಮರ್ಪಕವಾದುದೆಂದು ವೋ, ಸಾಂಬಮೂರ್ತಿಯವರು ಹೇಳಿದ್ದಾರೆ.
ಕಟ್ ಪು-ರಾಜಾಸ್ಥಾನದ ಬೊಂಬೆ ಕುಣಿತದ ఆ ಗಂಡನು
ಸೂತ್ರಗಳನ್ನು ಆಡಿಸುವುದರ ಮೂಲಕ ಬೊಂಬೆಗಳನ್ನು ಹೆಂಡತಿಯು ಹಾಡುವ
ಕಥೆಯ ಹಾಡಿನ ತಾಳಕ್ಕೆ ಕುಣಿಸುತ್ತಾನೆ. ಹೆಂಡತಿಯು ಹಾಡುವುದಲ್ಲದೆ ಡೋಲಕ್
ನುಡಿಸುತ್ತಾಳೆ.
ಕಟಚನ-ಆಶ್ಚರ್ಯ ಅಥವಾ ವಿಸ್ಮಯವನ್ನು ಸೂಚಿಸುವ ಭರತನಾಟ್ಯದ
ಕಟಭ್ರಾಂತ-ಉದ್ವೇಗವನ್ನು ಸೂಚಿಸುವ ಭರತನಾಟ್ಯದ ಒಂದು ಭಂಗಿ
ಕಟಸಮ-ಸಮರೇಖೆಯನ್ನು ಸೂಚಿಸುವ ಭರತನಾಟ್ಯದ ಒಂದು ಭಂಗಿ.
ಕಟೀಭೇದ-ಭರತನಾಟ್ಯದಲ್ಲಿ ಸೊಂಟ ಅಧವಾ ಐದು ವಿಧವಾದ ಕಟೀ
ಭೇದಗಳಿವೆ. ಇವು ಚಿನ್ನ, ನಿವೃತ್ತ, ರೇಚಿತ, ಪ್ರಕಂಪಿತ ಮತ್ತು ಉದ್ವಾಹಿತ,
(೧) ಕಟೀಮಧ್ಯಮವು ವಲಿತವಾದಲ್ಲಿ ಅದು ಚಿನ್ನ.
(೨) ತಿರುಗಿಸಿದ ಸೊಂಟವನ್ನು ಸ್ವಸ್ಥಾನಕ್ಕೆ ತರುವುದು ನಿವೃತ್ತ.
(೩) ಸೊಂಟವನ್ನು ಚಕ್ರದಂತೆ ಗುಂಡುಗುಂಡಾಗಿ ತಿರುಗಿಸುವುದು ಅಥವಾ
ವೃತ್ತಾಕಾರವಾಗಿ ತಿರುಗಿಸುವುದು ರೇಚಿತ.
(೪) ವೇಗವಾಗಿ, ಅಡ್ಡವಾಗಿ ಸೊಂಟವನ್ನೂ ಅತ್ತಿತ್ತ ಅಲ್ಲಾಡಿಸುವುದು
ಪ್ರಕಂಪಿತ.
(೫) ನಿಧಾನವಾಗಿ ಸೊಂಟ, ತೊಡೆ ಮತ್ತು ಪಾರ್ಶಗಳನ್ನು ಮೇಲೆತ್ತಿ
ಇಳಿಸುವುದು ಉದ್ಘಾಹಿತ
ಒಂದು ಭಂಗಿ,
ಕಟೀರೇಚಕ-ಭರತನಾಟ್ಯದ ನಾಲ್ಕು ಬಗೆಯ ರೇಚಕಗಳಲ್ಲಿ ಒಂದು ವಿಧ.
ಇದರಲ್ಲಿ ಉದ್ವರ್ತನ, ವಲಿತ, ಅಪಸ್ವರಿತ ಎಂಬ ಮೂರು ವಿಧವಾದ ಕ್ರಿಯೆಗಳಿವೆ.
ಸೊಂಟವನ್ನು ಮೇಲಕ್ಕೆತ್ತುವುದು ಉದ್ವರ್ತನ. ಸೊಂಟವನ್ನು ಗುಂಡಾಗಿ
ತಿರುಗಿಸುವುದು ವಲಿತ. ಸೊಂಟವನ್ನು ಹಿಂದೆಳೆಯುವುದು ಅಪಸ್ವರಿತ.
ಕಟ್ಟುತಾನ - ಇದೊಂದು ಬಗೆಯ ತಾನ ಅಥವಾ ರಾಗಾಲಾಪನೆಯ ಒಂದು
ಭಾಗ, ಶಾನಪುಸ್ತಕ, ಕಟಕ ಮತ್ತು ರಾಗ ನಿಘಂಟು ಎಂಬ ಗ್ರಂಥಗಳಲ್ಲಿ
ರಾಗಗಳಿಗೆ ವಿವರವಾದ ಕಟ್ಟುತಾನಗಳನ್ನು ಬರೆದಿದ್ದಾರೆ. ಹಲವು ಬಗೆಯ ತಾನಗಳಿವೆ.
ಅವು (೧) ಚಿಟ್ಟಿ ತಾನ-ಇವು ಘನರಾಗ ಮತ್ತು ರಕ್ತಿರಾಗಗಳ ಅಭ್ಯಾಸಗಳು.