This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಬೇಕು.
 
ಪತ್ತೆ ಮಾಡಬೇಕಾಗಿರುವ ಮೇಳರಾಗದ ಹೆಸರಿನ ಮೊದಲ ಎರಡು ಅಕ್ಷರಗಳನ್ನು
ತೆಗೆದುಕೊಂಡು, ಆ ಅಕ್ಷರಗಳಿಗೆ ತಕ್ಕ ಸಂಖ್ಯೆಯನ್ನು ಈ ಪತಕದಿಂದ ನಿರ್ಧರಿಸ
ನಂತರ ಅಂಕಾನಾಂ ವಾಮಕೋಗತಿಃ ಎಂಬ ಸೂರ್ಯಸಿದ್ಧಾಂತದಲ್ಲಿ
ಹೇಳಿರುವ ಮಾತಿನಂತೆ ಆ ಎರಡು ಸಂಖ್ಯೆಯನ್ನು ತಿರುಗು ಮುರುಗು ಮಾಡಿದರೆ
ಮೇಳರಾಗದ ಸಂಖ್ಯೆಯು ಬರುತ್ತದೆ. ದೃಷ್ಟಾಂತಕ್ಕೆ ಚಾರುಕೇಶೀ ರಾಗದ ಮೇಳ
ತಿಳಿಯಬೇಕಾದರೆ – ಚ' ದ ಸಂಖ್ಯೆ ಪತಕದಲ್ಲಿ ೬, 'ರು' ದ ಸಂಖ್ಯೆ ೨ ಅಂದರೆ ೬೨
ಆಯಿತು. ಇದನ್ನು ಹಿಂದು ಮುಂದು ಮಾಡಿದರೆ ೨೬-ಇದೇ ಚಾರುಕೇಶಿಯ
ಮೇಳ ಸಂಖ್ಯೆ. ಹಾಗೆಯೇ ರಸಿಕಪ್ರಿಯ ರ= ೨, ಸಿ=೭ = ೨೭ ಅಂದರೆ
೭೨ನೆ ಮೇಳ ; ಧಾತು ವರ್ಧನಿ- ಧ=೯, ತು=೬೯೬ ಅಂದರೆ ೬೯ನೇ ಮೇಳ ;
ನವನೀತ -ನ-೦, ವ=೪ ೦೪ ಅಂದರೆ ೪೦ನೇ ಮೇಳ ಇತ್ಯಾದಿ.
 
ರಾಗದ
 
ಹೆಸರಿನ ಆದಿಯಲ್ಲಿ ಸಂಯುಕ್ತಾಕ್ಷರವಿದ್ದರೆ ಅದನ್ನು ಬಿಡಿಸಿ ಸಂಖ್ಯೆಯನ್ನು ನಿರ್ಧರಿಸ
ಬೇಕು, ರತ್ನಾಂಗಿ ಎಂಬ ಮೇಳದ ಸಂಖ್ಯೆಯನ್ನು ತಿಳಿಯಲು ಅದನ್ನು
ರತ್+ನಾಂಗಿ ಎಂದು ಬಿಡಿಸಬೇಕು. ಆರ ರ=೨, ನ೦, ಅಂದರೆ ೨೦ = ೨
ನೇ ಮೇಳ ಇತ್ಯಾದಿ. ಈ ಸೂತ್ರವು ಜನ್ಯರಾಗಗಳಿಗೆ ಅನ್ವಯಿಸುವುದಿಲ್ಲ
 
ಕಟಪಯಾದಿ ಸೂತ್ರ ಪದ್ಧತಿಯನ್ನು ಅನ್ವಯಿಸಬಹುದಾದ ೩೫ ಸುಳಾದಿ
ತಾಳಗಳ ಹೆಸರುಗಳ ಪಟ್ಟಿಯಿದೆ. ಧ್ರುವತಾಳದ ತಿಶ್ರ, ಚತುರಶ್ರ, ಖಂಡ, ಮಿಶ್ರ
ಮತ್ತು ತಾಳಗಳಿಗೆ ಪಿಕ, ವಟಿ, ಶಕ, ಲರ ಮತ್ತು ಧಾರ ಎಂಬ ಹೆಸರುಗಳಿವೆ.
ಕಟಪಯಾದಿ ಸೂತ್ರದಂತೆ ಇವುಗಳ ಸಂಖ್ಯೆಯು ಕ್ರಮವಾಗಿ ೧೧, ೧೪, ೧೭, ೨೨
ಮತ್ತು ೨೯ ಆಗುತ್ತವೆ. ಇವು ಪ್ರತಿಯೊಂದು ತಾಳದ ಒಂದಾವರ್ತದ ಅಕ್ಷರ
ಕಾಲವನ್ನು ಸೂಚಿಸುತ್ತವೆ.
 
ಕಟಶ-ಇದೊಂದು ಬಗೆಯ ಮದ್ದಳೆ.
 
DSC
 
-
 
ಕಟ್ಟಬೊಮ್ಮನ್ ಹಾಡು-೧೮ನೆ ಶತಮಾನದಲ್ಲಿದ್ದ ವೀರಪಾಂಡ್ಯ
ಕಟ್ಟಬೊಮ್ಮನ್ ಬ್ರಿಟಿಷರೊಡನೆ ತಾಯ್ಯಾಡಿಗಾಗಿ ಹೋರಾಡಿದ ವಿಷಯವುಳ್ಳ
ಲಾವಣಿ ಹಾಡು. ಕಟ್ಟಬೊಮ್ಮನ್ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ
ಪಾಂಚಾಲಂ ಕುರುಚಿಯನ್ನು ಆಳುತ್ತಿದ್ದನು. ಉಮೈದೊರೆ ಇವನ ಸಹೋದರ.
ಇವರಿಬ್ಬರೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಅಧೀನರಾಗಲು ನಿರಾಕರಿಸಿ
ಹೋರಾಡಿ ಜೀವತೆತ್ತರು.
 

 
ಕಟ್ಟಳೆ ಇದು ತಮಿಳಿನ ತೇವಾರಂ ಹಾಡುಗಳಿಗೆ ಸಂಬಂಧಿಸಿವೆ.
ಪ್ರತಿಯೊಂದು ಪಣ್ ಅಥವಾ ರಾಗಕ್ಕೆ ಎಷ್ಟು ಕಟ್ಟಳೆಗಳಿವೆ ಎಂಬುದನ್ನು ಹೇಳಿದೆ.
ನಟ್ಟ ಪಾಡೈಪಣ್‌ಗೆ ೮ ಕಟ್ಟಳೆಗಳನ್ನು ಹೇಳಿದೆ. ಕಟ್ಟಳೆಯನ್ನು ಕುರಿತು ಮೂರು
ಅಭಿಪ್ರಾಯಗಳಿವೆ.