2023-06-30 08:03:17 by jayusudindra
This page has been fully proofread once and needs a second look.
(೧) ಸಂಗೀತರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿರುವ, ಈಗ
ಅಪ್ರಚಲಿತವಾಗಿರುವ ಒಂದು ರಾಗ.
(೨) ಸಂಗೀತರತ್ನಾಕರದಲ್ಲಿ ಹೇಳಿರುವ ವೀಣೆಯ ಒಂದು ಭಾಗ
ಕರ್ಕರಿ
ಋ
ಕಚರಾಗ
ಈ ರಾಗವು ೨೭ನೆಯ ಮೇಳಕರ್ತ ಸರಸಾಂಗಿಯ ಒಂದು
೧೧೮
ಜನ್ಯರಾಗ,
ಸ ರಿ ಗ ಪ ದ ನಿ ಸ
ಸ ದ ಪ ಮ ರಿ ಸ
ಕಚ್ಛಪೀ
ಸರಸ್ವತೀ ದೇವಿಯ ವೀಣೆಯ ಹೆಸರು.
ಇವರು
ಕಚ್ಚಿ ಶಾಸ್ತ್ರಿ
ಇವರು ಕಾಂಚೀಪುರದವರು ಪ್ರಸಿದ್ಧ ಸಂಗೀತ ವಿದ್ವಾಂಸರೂ,
ವಾಗ್ಗೇಯಕಾರರೂ ಆಗಿದ್ದ ಸುಬ್ಬರಾಯ ಶಾಸ್ತ್ರಿಯ ಅಳಿಯಂದಿರು
ಉತ್ತಮಗಾಯಕರೂ, ಪಿಟೀಲು ವಾದಕರೂ ಆಗಿದ್ದುದಲ್ಲದೆ ತಾಳಜ್ಞಾನಕ್ಕೆ ಬಹಳ
ಖ್ಯಾತರಾಗಿದ್ದರು.
ಕಚ್ಚಿ ಕಲ್ಯಾಣರಂಗ ಉಡೈಯರ್
ತಮಿಳುನಾಡಿನ ಉಡೈಯಾರ್
ಪಾಳ್ಯದ ಜಮೀನ್ದಾರರು ಇವರು ಘನ ಕೃಷ್ಣಯ್ಯರ್‌ರವರ ಪೋಷಕರಾಗಿದ್ದರು.
ಕಲ್ಯಾಣರಾಗದ (ಆದಿತಾಳ) ಪಾರೆಂಗುಂ ಪಾರ್ತಾಲುಂ ಎಂಬ ಪದದಲ್ಲಿ ಉಡೈಯರನ್ನು
ಸ್ಮರಿಸಲಾಗಿದೆ.
ಕಚ್ಚಿ ರಂಗ ಉಡೈಯರ್
ಇವರೂ ಸಹ ಉಡೈಯರ್ ಪಾಳ್ಯದ
ಜಮಿನ್ದಾರರಾಗಿದ್ದು ಘನಂಕೃಷ್ಣಯ್ಯರ್‌ರವರ ಪೋಷಕರಾಗಿದ್ದರು.
ಕ್ವಚಿತ್ ಪ್ರಯೋಗ
ಒಂದು ರಾಗದಲ್ಲಿ ಅಪರೂಪವಾಗಿ ಪ್ರಯೋಗಿಸಲ್ಪಡುವ
ಒಂದು ಸ್ವರಗುಚ್ಛ ಅಥವಾ ಸ್ವರ.
ಕಟಕ
ಭರತನಾಟ್ಯದ ಅಸಂಯುತ ಹಸ್ತಗಳಲ್ಲಿ ಇದೊಂದು ಬಗೆಯ ಹಸ್ತ
ಭೇದ. ಕಪಿತ್ಥ ಹಸ್ತದಲ್ಲಿನ ತರ್ಜನಿ ಅಂಗುಷ್ಠಗಳೊಂದಿಗೆ ಮಧ್ಯದ ಬೆರಳನ್ನು
ಸೇರಿಸುವುದೇ ಕಟಕಾಮುಖಹಸ್ತ. ಹೂ ಬಿಡಿಸುವುದು, ಮುತ್ತಿನಹಾರ, ಹೂ ಹಾರ
ಗಳನ್ನು ಧರಿಸಿಕೊಳ್ಳುವುದು, ಬಾಣಗಳ ಮಂದಾಕರ್ಷಣೆ, ವೀಳಯವನ್ನೀಯುವುದು,
ಕಸ್ತೂರಿ ಮೊದಲಾದ ದ್ರವ್ಯಗಳನ್ನು ಅರೆಯುವುದು, ಸುಗಂಧ ದ್ರವ್ಯಗಳನ್ನು ಹಚ್ಚು
ವುದು, ಮಾತು, ದೃಷ್ಟಿಗಳನ್ನು ಪ್ರಕಟಿಸುವುದಕ್ಕೆ ಈ ಹಸ್ತ ವಿನಿಯೋಗವಾಗುವುದು.
ಕಟಕಂ
ಇದೊಂದು ರಾಗಕೋಶ. ಇದರಲ್ಲಿ ಬಹುಸಂಖ್ಯೆಯಲ್ಲಿ ರಾಗಗಳ
ಪಟ್ಟಿಯಿದೆ ಪ್ರತಿಯೊಂದು ರಾಗದ ವಿಶೇಷ ಸಂಚಾರ ಮತ್ತು ಪ್ರಯೋಗಗಳನ್ನು
ತಾನ ಮತ್ತು ಸರಳವಾದ ಸ್ವರಸಮೂಹಗಳ ರೂಪದಲ್ಲಿ ಕೊಡಲಾಗಿದೆ. ಇವಲ್ಲದೆ
ಕ್ರಮ ಮತ್ತು ಅಪೂರ್ವ ಸಂಚಾರಗಳನ್ನೂ ಕೊಡಲಾಗಿದೆ. ಇಂತಹ ಪುಸ್ತಕಗಳಿಗೆ