2023-06-30 07:56:22 by jayusudindra
This page has been fully proofread once and needs a second look.
ಸ ನಿ ದ ಮ ಗ ಸ
೧೦ಟ
ಅಂಚಿತ
(೧) ಭರತನಾಟ್ಯದ ಗ್ರೀವಾ ಭೇದಗಳಲ್ಲಿ ಒಂದು ವಿಧ.
ತಲೆಯೊಂದಿಗೆ ಹಿಂದಕ್ಕೆ ತಿರುಗಿದ ಕತ್ತು.
ಮುಖ ತೋರದಿರುವುದು, ಅಹಿತ,
ನಡೆ ಮುಂತಾದುವನ್ನು ತೋರಲು ವಿನಿಯೋಗವಾಗುತ್ತದೆ.
(೨) ಅಭಿನಯದರ್ಪಣವೆಂಬ ನಂದಿಕೇಶ್ವರನ ಗ್ರಂಥದಲ್ಲಿ ಹೇಳಿರುವ ೯
ಶಿರೋಭೇದಗಳಲ್ಲಿ ಒಂದು ವಿಧ. ಎರಡು ಪಕ್ಕಗಳಿಗೂ ಶಿರಸ್ಸನ್ನು ಸ್ವಲ್ಪವಾಗಿ
ಬಗ್ಗಿಸುವುದು ಅಂಚಿತ ಶಿರಸ್ಸು, ದುಶ್ಚಿಂತೆ, ಮೋಹ, ಮೂರ್ಛಯೇ ಮೊದಲಾದ
ಕಾವ್ಯಗಳಲ್ಲಿ ಈ ಶಿರವು ವಿನಿಯೋಗವಾಗುವುದು.
ಅಂಜನಗೀತ
ಕಥಾಕಾಲಕ್ಷೇಪಗಳಲ್ಲಿ ಹಾಡಲಾಗುವ ಒಂದು ಬಗೆಯ
ಗೀತ.
ಅಂಜನಾವತಿ
ಈ ರಾಗವು ೪೩ನೆಯ ಮೇಳಕರ್ತ ಗವಾಂಬೋಧಿಯ
ಒಂದು ಜನ್ಯರಾಗ
ಸ ರಿ ಗ ಮ ಪ ದ ಸ
ಸ ದ ಪ ಮ ಗ ರಿ ಸ
ಅಂಜಲಿಹಸ್ತ
ಭರತನಾಟ್ಯದ ಒಂದು ಹಸ್ತಭೇದ. ಎರಡು ಪತಾಕ
ಹಸ್ತಗಳ ಅಂಗೈಗಳನ್ನು ಸೇರಿಸಿ ಹಿಡಿಯುವುದು ಅಂಜಲಿಹಸ್ತ. ದೇವತೆಗಳು,
ಗುರು, ಬ್ರಾಹ್ಮಣರಿಗೆ ನಮಸ್ಕಾರ ಮಾಡಲು ಈ ಹಸ್ತ ವಿನಿಯೋಗವಾಗುವುದು.
ಅಂಜಿ
ಕುರವಂಜಿ ನಾಟಕಗಳಲ್ಲಿ ಬರುವ ನಾಟ್ಯದ ಪಾದ ವಿನ್ಯಾಸ.
ಅಂಫಿ-
ಅಂಘ್ರಿ
ಮತಂಗ ವಿರಚಿತ ಬೃಹದೇಶೀ ಎಂಬ ಗ್ರಂಥದಲ್ಲಿ ಉಕ್ತವಾಗಿರುವ
ಅಂತರ-
ಅಂತರ
ದೂರ, ವ್ಯತ್ಯಾಸ, ವಿರಾಮ.
ಅಂತರಾ
(೧ ) ಹಿಂದೂಸ್ಥಾನಿ ಸಂಗೀತದ ರಾಗದ ಎರಡನೆಯ ಭಾಗ,
(೨) ಭರತನು ಹೇಳಿರುವ ಗಾಂಧಾರದ ವಿಕೃತ ರೂಪ.
ಅಂತರ ಮತ್ತು ಕಾಕಲಿ
ಸಾಮಗಾನದ ಸ್ವರಸಪ್ತಕಗಳು ತಿಳಿದನಂತರ
ಇವೆರಡು ಸ್ವರಗಳ ಪರಿಚಯ ಉಂಟಾಯಿತು. ಇವು ಷಡ್ಡ ಗ್ರಾಮರಾಗಗಳಲ್ಲಿ ಅಲ್ಪ
ಪ್ರಯೋಗಗಳಾಗಿ ಬಳಸಲಾಗುತ್ತಿತ್ತು. ಇವುಗಳನ್ನು ಭರತನು ಹೇಳಿದ್ದಾನೆ.
ಸ್ವರಗಳನ್ನು ಈಗಿನ ಆನಂದ ಭೈರವಿ ಮುಂತಾದ ರಾಗಗಳಲ್ಲಿ ಕಾಣಬಹುದು
ಅಂತರಗಾಂಧಾರ
ಇದು ಗಾಂಧಾರದ ತೀವ್ರ ಸ್ವರೂಪದ ಸ್ವರ,
ಅಂತರಕ್ರೀಡ
ಇದು ೧೦೮ ತಾಳಗಳಲ್ಲಿ ಒಂದು ಬಗೆಯ ತಾಳ, ಮೂರು
ಮತ್ತು ಒಂದು ಅನುದ್ರುತ ಇದರ ಅಂಗಗಳು. ಇದರ ಒಂದಾ
ದ್ರುತಗಳು