This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಅಂಕ -ಒಂಭತ್ತನ್ನು ಸೂಚಿಸುವ ಸಂಜ್ಞಾಸೂಚಕ ಪದ. ಸ್ವರಾರ್ಣವ ಎಂಬ
ಗ್ರಂಥದಲ್ಲಿ ೯ನೆಯ ಸ್ವರಸ್ಥಾನವಾದ ಶುದ್ಧ ಧ್ಯೆವತವನ್ನು ಸೂಚಿಸಲು ಬಳಸಲಾಗಿದೆ.
ಅಂಕಣ್ಣನ್ ೨೦ನೆಯ ಶತಮಾನದಲ್ಲಿದ್ದ ತಂಜಾವೂರಿನ ಒಬ್ಬ ಪ್ರಸಿದ್ಧ
ಮೃದಂಗ ವಿದ್ವಾಂಸ,
 
ಅಂಕಿಯ ಗೀತಗಳು-ಅಸ್ಸಾಂ ರಾಜ್ಯದ ನಾಟಕಗಳಲ್ಲಿ ಬರುವ ಕಥೆ
ಗಳನ್ನು ಒಳಗೊಂಡ ಹಾಡುಗಳು.
 
೧೧೪
 
ಅಂಕೀದೀರ್ಘ ಚತುರಸ್ರಾಕೃತಿಯುಳ್ಳ ಒಂದು ಚಿಕ್ಕ ಮದ್ದಲೆ.
ಅಂಕ - ಒಂದು ಬಗೆಯ ಮದ್ದಲೆ.
 
ಅಂಗ-(೧) ಸಂಗೀತ ರಚನೆಯ ವಿಭಾಗಕ್ಕೆ ಅಂಗವೆಂದು ಹೆಸರು. ಕೃತಿ
ಯಲ್ಲಿ ಪಲ್ಲವಿ, ಅನುಪಲ್ಲವಿ ಮತ್ತು ಚರಣವೆಂಬ ಅಂಗಗಳಿವೆ.
 
(೨) ಸ ರಿ ಗ ಮ ಪ ದ ನಿ ಸ ಎಂಬ ಎಂಟು ಸ್ವರಗಳಲ್ಲಿ ಸರಿಗಮ ಎಂಬ ೪
ಸ್ವರಗಳ ಸಮೂಹಕ್ಕೆ ಪೂರ್ವಾಂಗ ಸ್ವರಗಳೆಂದೂ ಪದನಿಸ ಎಂಬ ೪ ಸ್ವರಗಳ
ಸಮೂಹಕ್ಕೆ ಉತ್ತರಾಂಗವೆಂದು ಹೆಸರು.
 
(೩) ಒಂದು ತಾಳದ ಆವರ್ತಗಳಲ್ಲಿರುವ ಅವಯವಗಳಿಗೆ ಅಂಗವೆಂದು ಹೆಸರು.
ಇದರಲ್ಲಿ ಆರು ವಿಧಗಳಿವೆ ಇವು ಯಾವುವೆಂದರೆ ಅನುದ್ರುತ, ದ್ರುತ, ಲಘು,
 
ಗುರು, ಪುತ ಮತ್ತು ಕಾಕಪಾದ.
 
ಅಂಕುರ-ಭರತನಾಟ್ಯದ ಆಂಗಿಕಾಭಿನಯದ ಆರು ವಿಧಗಳಲ್ಲಿ ಒಂದು ಬಗೆ.
ವಾಕ್ಯದಲ್ಲಿ ಸೇರಿರುವ ವಸ್ತುವನ್ನು ಅಥವಾ ವಿಷಯವನ್ನು ವಚನಶೂನ್ಯವಾದ
ಆಂಗಿಕಾಭಿನಯದಿಂದ ಚಮತ್ಕಾರವಾಗಿ ವ್ಯಕ್ತಪಡಿಸುವುದು.
 
ಅಂಗತಾಳ-೧೭ನೆ ಶತಮಾನದ ಬರತನಾಟ್ಯಶಾಸ್ಕರಂ ಎಂಬ ತಮಿಳು
ಗ್ರಂಥದಲ್ಲಿ ಉಕ್ತವಾಗಿರುವ ಒಂದು ತಾಳ,
 
ಅಂಗಲತಾ-೨೮ನೆಯ ಮೇಳಕರ್ತ
 
ಹರಿಕಾಂಭೋಜಿಯ ಒಂದು
 
ಜನ್ಯರಾಗ,
 
ಸ್ವರೂಪವನ್ನು ಪ್ರಕಟಿಸುವುದರಲ್ಲಿ ಅಂಗ
 
ಸ ಗ ರಿ ಗ ಮ ಪ ನಿ ದ ನಿ ಸ
ಸ ದ ಮ ಗ ರಿ ಮ ಗ ಸ
ಅಂಗ ಲಕ್ಷಣ-ನಾಟ್ಯ ಕಲೆಯ
ಲಕ್ಷಣಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಯಾವವೆಂದರೆ ಮುಖ
ಲಕ್ಷಣಗಳು, ಮುಖರಾಗಗಳು, ಭೂಪುಟ ತಾರಾಕರ್ಮಗಳು, ನಾಸಿಕ, ಗಂಡ,
ದೃಷ್ಟಿ ಭೇದಗಳು, ಶಿರೋ ಭೇದಗಳು, ಗ್ರೀವಾ ಭೇದಗಳು ; ಎದೆ, ಪಾರ್ಶ್ವ, ಸೊಂಟ,
ತೊಡೆ, ಮೊಳಕಾಲು ಪಾದ ಭೇದಗಳು ಮತ್ತು ಅಂಗ ಭಂಗಿಮ ಭೇದಗಳು.
 
ಅಂಗುರು-ಈ ರಾಗವು ೭ನೆಯ ಮೇಳಕರ್ತ ಸೇನಾವತಿಯ ಒಂದು
 
ಜನ್ಯರಾಗ,