2023-06-30 07:46:12 by jayusudindra
This page has been fully proofread once and needs a second look.
ಮಾರ್ಗದರ್ಶನದಲ್ಲಿ ಗಾಯಕಿಯರೊಡನೆ ಇವರು ದೇವಾಲಯದ ಗರುಡಸ್ತಂಭದ
ಬಳಿಗೆ ಬಂದು ಅಲ್ಲಿ ಅವನ ನೇತೃತ್ವದಲ್ಲಿ ದೈವವಂದನೆ, ರಾಜಗುರುವಂದನೆಯಾದ
ನಂತರ ನರ್ತಿಸುತ್ತಾರೆ. ಸಾಮಾನ್ಯವಾಗಿ ಚೌಕ, ಮಾನದಂಡಿ, ವರ್ತುಲ, ಘೋರ
ಮತ್ತು ದ್ವಿಮುಖ ಎಂಬ ಐದಂಕದ ವಿನ್ಯಾಸಗಳಲ್ಲಿ ಗೋಧಿ, ಚಿಪುವನಿಕಡಾ,
ಘೋಸರ, ಧಿಯಾಪುಚಿ ಮತ್ತು ಪುಹಾನಿಯ ಎಂಬ ಚಾರೀಕ್ರಮಗಳಲ್ಲಿ ಮಹರಿನೃತ್ಯ
ವಾಗುತ್ತದೆ.
೧೦೧
ಇದರಲ್ಲಿ ಸುಂದರವಾದ ಸಂಬಾಲಪುರಕರಮಾ ಮತ್ತು ದಲಖಾಮ್ ಜಾನ
ವದದ ನೃತ್ತ ಪ್ರಕಾರಗಳಿವೆ. ಕೇಲಿಕಡ, ದಸರ, ಭಾಯಿಜಾಂತಿಯಾ, ಫಾಗುನ್ನು
ಮುಂತಾದ ಸಂದರ್ಭಗಳಲ್ಲಿ ಮಯೂರ್‌ಭಂಜ್, ಸುಂದರಘಡ, ಬೋಲಂಗೀರ್
ಮುಂತಾದ ಗುಡ್ಡಗಾಡುಗಳಲ್ಲಿ ಕರಮಾನೃತ್ಯವನ್ನು ಖರಿಯಾ, ಕಿಸಾನ್, ಓರಾನ್
ಬುಡಕಟ್ಟಿನವರೂ, ಇತರರೂ ಮಾಡುತ್ತಾರೆ. ದಲಖಾಯಿ ನೃತ್ಯವನ್ನು ಬಿಂಝಾರ್,
ಸೌರ, ಕುಡನಿರ್ಧ ಪ್ರದೇಶಗಳಲ್ಲಿ ಕುಣಿಯುವರು. ಒರಿಸ್ಸದ ರಾಸ್ ಮತ್ತು ಗರಬಾ
ನೃತ್ತಗಳು ಪ್ರಸಿದ್ಧವಾದುವು ಮತ್ತು ಸುಂದರವಾದುವು.
ಓಲೇಟಿ ವೆಂಕಟೇಶ್ವರುಲು (ಜ. ೧೯೨೮)-ಕರ್ಣಾಟಕ ಸಂಗೀತ ಕ್ಷೇತ್ರ
ದಲ್ಲಿ ಇಂದು ಪ್ರಸಿದ್ಧರಾಗಿರುವ ವೆಂಕಟೇಶ್ವರುಲು ಆಂಧ್ರದೇಶದ ಒಬ್ಬ ಜನಪ್ರಿಯ
ಕಲಾವಿದರು. ಇವರು ರಾಜಮಹೇಂದ್ರಿಯಲ್ಲಿ ೧೯೨೮ರಲ್ಲಿ ಜನಿಸಿದರು ಇವರ ತಂದೆ
ಸರ್ಕಾರಿ ಉದ್ಯೋಗದಲ್ಲಿದ್ದರು. ಸಂಗೀತ ಪ್ರಿಯರಾಗಿದ್ದರು. ಭಕ್ತಿಗೀತೆಗಳನ್ನು'
ಆತ್ಮಸಂತೋಷಕ್ಕಾಗಿ ಹಾಡಿಕೊಳ್ಳುವುದು ಇವರ ಒಂದು ಹವ್ಯಾಸ, ಓಲೇಟಿಯವರ
ತಾಯಿಯವರಿಗೆ ಒಳ್ಳೆಯ ಶಾರೀರವಿತ್ತು. ಹಾಡುಗಳನ್ನು ಭಾವಪೂರಿತವಾಗಿ ಹಾಡು
ತಿದ್ದರು. ಇಂತಹ ಒಂದು ಸಂಸ್ಕಾರ ಓಲೇಟಿಯವರಿಗೆ ದೊರಕಿತು. ಇವರ ತಂದೆ
ಯವರಿಗೆ ಪುಷ್ಪವನಂರವರ ಗಾಯನವೆಂದರೆ ಒಂದು ಬಗೆಯ ವ್ಯಾಮೋಹ. ಮಗನಿಗೆ
ಗ್ರಾಮಾಫೋನಿಗೆ ಬದಲು ಹಾರ್ಮೋನಿಯಂ ತೆಗೆದುಕೊಟ್ಟರು ಸಂಗೀತ ಶಿಕ್ಷಣ
ಆರಂಭವಾಯಿತು. ತಂದೆಯವರು ಕಾಕಿನಾಡಕ್ಕೆ ವರ್ಗವಾಗಿ ಹೋದಾಗ ಅಲ್ಲಿ
ಮುನುಗುಂಟೆ ವೆಂಕಟರಾವ್ ಪಂತುಲು ಎಂಬ ವಿದ್ವಾಂಸರಲ್ಲಿ ಐದು ವರ್ಷಗಳ ಕಾಲ
ಶಿಕ್ಷಣ ಪಡೆದರು
ವೆಂಕಟರಾಯರ ತಂದೆ ಮುನುಗುಂಟೆ ಶ್ರೀರಾಮುಲು ಮತ್ತು
ಚಿಕ್ಕಪ್ಪ ಪನಕಾಲರಾವ್ ಇವರಿಬ್ಬರೂ ಹಿರಿಯ ವಿದ್ವಾಂಸರಾಗಿದ್ದು ಶ್ರೀರಾಮ
ಸಮಾಜಂ ಎಂಬ ಉಚಿತ ಸಂಗೀತ ಪಾಠಶಾಲೆಯನ್ನು ಸ್ಥಾಪಿಸಿದರು. ಓಲೇಟ
ಯವರು ವೆಂಕಟರಾಯರಲ್ಲಿ ರಾಗಾಲಾಪನೆ ಮತ್ತು ಸ್ವರ ವಿನ್ಯಾಸವನ್ನು ಕಲಿತರು
ಕಾಕಿನಾಡದ ಪಿ. ಆರ್. ಕಾಲೇಜಿನಲ್ಲಿ ವ್ಯಾಸಂಗಮಾಡಿ ಬಿ. ಎ. ಡಿಗ್ರಿಯನ್ನು ೧೯೪೮
ರಲ್ಲಿ ಪಡೆದರು.
ಅಂದಿನಿಂದ ಕಚೇರಿಗಳಲ್ಲಿ ಹಾಡಿ ಮದ್ರಾಸು ಮತ್ತು ಆಂಧ್ರ
ಪ್ರದೇಶದಲ್ಲಿ ಪ್ರಸಿದ್ಧರಾದರು.