This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 

 
ವಾಗಿ ಅಭಿನಯಿಸಿಕೊಂಡು ಬರುವ ಏರ್ಪಾಡು ಮಾಡಿದನು. ೧೮ನೆಯ ಶತಮಾನ
ದಲ್ಲಿ ವೈಷ್ಣವ ಸಂತರು ರಾಧಾಕೃಷ್ಣ ಪ್ರೇಮವನ್ನು ಅಮರಗೊಳಿಸಿ ರಚಿಸಿದ ಹಾಡು
ಗಳಿಗೆ ಲಾಸ್ಯ-ತಾಂಡವ ಸಂಪ್ರದಾಯಗಳನ್ನು ಅಳವಡಿಸಿ ನಟರು ಬೆಳೆಸಿದರು.
ರಾಜ್ಯದ ನೃತ್ಯ ಕಲೆಯು ಶೈವ, ವೈಷ್ಣವ ಮತ್ತು ಬೌದ್ಧ ಮತಗಳ ಪ್ರಭಾವದಿಂದ
ಬೆಳೆಯಿತು. ಚೈತನ್ಯ ಪಂಥದ ರಾಧಾಕೃಷ್ಣ ಪ್ರೇಮವಿಷಯವುಳ್ಳ ಅಭಿನಯಪೂರ್ಣ
ವಾದ ಲಾಸ್ಯ ಪ್ರಕಾರಗಳು ನೃತ್ಯ ಕಲೆಯನ್ನು ಬೆಳೆಸಿದುವು. ಹಾಗೆಯೇ ಶೈವ ಮತ್ತು
 
ಬೌದ್ಧ ಮತದಲ್ಲಿ ತಂತ್ರಶಾಸ್ತ್ರದ ಪ್ರಭಾವದಿಂದ ನೃತ್ಯ ಸಂಪ್ರದಾಯವು ಬೆಳೆಯಿತು.
ಇದಲ್ಲದೆ ಜಯದೇವನ - ಗೀತ ಗೋವಿಂದ 'ದ ನೃತ್ಯ ಅಚ್ಚಳಿಯದ ಪ್ರಭಾವ ಬೀರಿತು
ಇಲ್ಲಿಯ ನೃತ್ಯವು ತನ್ನದೇ ಆದ ಕೆಲವು ಹಸ್ತ ಮುದ್ರೆಗಳು, ಭಂಗಿಗಳು, ಸ್ಥಾನಕಗಳು,
ಭ್ರಮರಿಗಳು ಮತ್ತು ಚಾಲನಿಕಗಳನ್ನು ರೂಪಿಸಿಕೊಂಡು ವಿಶಿಷ್ಟತೆಯನ್ನು
 
ಪಡೆದಿದೆ.
 
೧೧೦
 
ಒರಿಸ್ಸದ ಸಂಪ್ರದಾಯದಲ್ಲಿ ಮೊದಲು ಭೂಮಿ ಮತ್ತು ನಾಟ್ಯಾಚಾರ್ಯನನ್ನು
ವಂದಿಸಿ, ನಂತರ ರಂಗಾಧಿಪತಿಗಳಿಗೆ, ಸಂಗೀತ ವಾದ್ಯಗಳಿಗೆ, ವಿಘ್ನನಿವಾರಣೆಗಾಗಿ
ಗಣೇಶನ ವಂದನೆಯನ್ನು ಸಲ್ಲಿಸಿ, ತರುವಾಯ ಕಚೇರಿ ವಟುಕ ಭೈರವ ಪೂಜಾ
ಸಂಕೇತವಾದ ವಟುವೃತ್ತದಿಂದ ನರ್ತಕಿಯು ಪ್ರಾರಂಭಿಸುತ್ತಾಳೆ. ಇದರಲ್ಲಿ
ತಾಂಡವ ನೃತ್ಯ ವಿನ್ಯಾಸಗಳೂ ಕಷ್ಟಕರವಾದ ಭಂಗಿಗಳೂ ಇವೆ. ನಂತರ ಪಲ್ಲವಿಯ
ನೃತ್ತ ಲಾಸ್ಯ ಭಂಗಿಗಳು ಮುಖ್ಯರಸಕ್ಕೆ ಕರೆದೊಯ್ಯಲು
ವಾತಾವರಣವನ್ನು ಸೃಷ್ಟಿಸುತ್ತವೆ. ಮದ್ದಲೆಯ ಪಾಟಾಕ್ಷರಗಳಿಗೆ ಕುಣಿಯುವುದು
 
ಪೋಷಕವಾದ
 
ವಾದ್ಯಪಲ್ಲವಿ. ಹಾಡಿಗೆ ಕುಣಿಯುವುದು ಸ್ವರಪಲ್ಲವಿ. ನಂತರ ರಸನೃತ್ಯದ
 
ಆರಂಭ
 
ರಸನೃತ್ಯದಲ್ಲಿ ವನಮಾಲೀದಾಸ ಉಪೇಂದ್ರ ಭಂಜ್, ಬಲದೇವರಧ,
ಜಯದೇವನ ಅಷ್ಟಪದಿಗಳನ್ನು ಆರಿಸಿಕೊಂಡು ಕಾವ್ಯರಸದೊಡನೆ ವೃತ್ತರಸ,
ಗೀತರಸಗಳಿಂದ ಬೆಳೆಸಲಾಗುತ್ತದೆ. ಇದರಲ್ಲಿ ಪ್ರತಿನುಡಿಯ ನಂತರ ನರ್ತಕಿಯು
ದ್ರುತಗತಿಯಲ್ಲಿ ನೃತ್ಯವನ್ನು ಮಾಡುತ್ತಾಳೆ. ಭಾವನೃತ್ತದಿಂದ ಪ್ರದರ್ಶನವು
ಅಂತ್ಯಗೊಳ್ಳುತ್ತದೆ. ಇದನ್ನು ಝಾಲ, ಪಹಪಟತಾಳಗಳ ದ್ರುತಗತಿಯಲ್ಲಿ
ಪಾಟಪ್ರಧಾನವಾಗಿ ವೃತ್ತದಿಂದ ಮಾಡಲಾಗುವುದು. ಶಾಸ್ತ್ರೀಯ ನೃತ್ಯದಲ್ಲಿ
ಸ್ಥಾಯಿ, ನಟವರ, ಚೌಕ, ಚೀರ, ಲಕ್ಷ್ಮಿ, ಬೈತಿ, ಚೌರಸ್ ಮುಂತಾದ
ಭಂಗಿಗಳನ್ನು ಬಳಸಲಾಗುವುದು. ಈ ಪರಂಪರೆಯಲ್ಲಿ ಇಪ್ಪತ್ತಾರು ಗಾಂಧಿಕ
ಅಸಂಯುತ ಹಸ್ತಗಳೂ, ಗುರು ಪರಂಪರೆಯಿಂದ ಬಂದ ಎಂಟು ಅಸಂಯುತ ಹಸ್ತ
ಸೇರಿ ಮೂವತ್ತನಾಲ್ಕು ಹಸ್ತಗಳು ಮತ್ತು ಹಲವು ನಾನಾರ್ಧ ಹಸ್ತಗಳೂ ಸೇರಿವೆ.
 
ಭರತನಾಟ್ಯದ ದೇವದಾಸಿ ಪದ್ಧತಿಯು ಮಹರಿಗಳಿಂದ ಒರಿಸ್ಸದಲ್ಲಿ ಮುಂದು
ಪರಿಯಿತು ಇವರಲ್ಲಿ ಬಾಹರ್‌ನೀ (ಗಣಿಕಾ) ಮತ್ತು ಭೀಕರ್‌ ಎಂಬ ಎರಡು