2023-06-30 07:44:53 by jayusudindra
This page has been fully proofread once and needs a second look.
ಮೇಳವನ್ನು ನಡೆಸಿಕೊಟ್ಟರು. ಭ್ರಮರ ವಿನ್ಯಾಸ ಮತ್ತು ಇನ್ನೂ ಹಲವು ನೂತನ
ಪ್ರಯೋಗಗಳನ್ನು ನಡೆಸಿಕೊಟ್ಟಿದ್ದಾರೆ. ಪಾಶ್ಚಾತ್ಯ ದೇಶಗಳು, ಅಮೆರಿಕಾ ಮುಂತಾದ
ದೇಶಗಳಲ್ಲಿ ಹಲವಾರು ಕಚೇರಿಗಳನ್ನು ಮಾಡಿ ಬಹುಪ್ರಖ್ಯಾತರಾಗಿದ್ದಾರೆ
ಏವ ನಿಯವರು ಸಂಪ್ರದಾಯದ ಚೌಕಟ್ಟಿನಲ್ಲಿ ಆಧುನಿಕತೆ ಮತ್ತು ನವೀನತೆ
ಯನ್ನು ಅಳವಡಿಸಿ ನುಡಿಸಬಲ್ಲ ಅದ್ಭುತ ಕಲಾವಿದರು ಇವರ ವಾದನದಲ್ಲಿ ಒಂದು
ದಿವ್ಯವಾದ ಸಹಜ ಸೌಂದರ್ಯ, ಇಂಪು, ತಂಪು, ಸೊಗಸು, ವಾಂಡಿತ್ಯ, ರಾಗ-ರಸ
ಭಾವ, ಲಯಶುದ್ಧತೆ ಎಲ್ಲವೂ ಇವೆ. ವೀಣೆಯಲ್ಲಿ ಎಂತಹ ಸಂಗೀತವನ್ನಾದರೂ
ನುಡಿಸಬಲ್ಲರು. ಇವರ ವಾದನವೆಂದರೆ ಅದೊಂದು ಮುತ್ತಿನ ಚಪ್ಪರ, ನಾದಸೌಧ.
ಇವರು ಅಕ್ಷರಶಃ ವೈಣಿಕ ಶಿಖಾಮಣಿ, ಇವರಿಗೆ ಸಂದಿರುವ ಬಿರುದುಗಳಲ್ಲಿ
ಚತುರ್ದಂಡಿ ಪಂಡಿತ, ಮಹಾಮಹೋಪಾಧ್ಯಾಯ, ವೈಣಿಕ ಶಿಖಾಮಣಿ ಎಂಬುವು
ಮುಖ್ಯವಾದುವು. ಇವರ ಸಹೋದರಿ
ಸಹೋದರಿ ವಿ. ಸರಸ್ವತಿ, ಮಗಳು ಏಮನಿಕಲ್ಯಾಣಿ
ಮತ್ತು ಚಿಟ್ಟ ಬಾಬು ಇವರ ಪ್ರಮುಖ ಶಿಷ್ಯರು.
ಒ-ಓ
ಓ-ಸದ್ಯೋಜಾತ, ವಾಸುದೇವ, ಗಾಯ, ಲಕ್ಷ್ಮೀ, ವಾಣಿ,
ಕೈಲಾಸ, ದಿಗಂಬರ, ಸ್ಮರಣೆ, ಅನುಕಂಪ ಎಂಬ ನಾನಾರ್ಥಗಳಿವೆ.
ಬಹಳ ಹಿಂದಿನ ಕಾಲದಿಂದ ಬೆಳೆದು ಬಂದಿದೆ
ಒರಿಸ್ಸ ದೇಶದ ನೃತ್ಯ ಪದ್ಧತಿ
ಒರಿಸ್ಸ ದೇಶದಲ್ಲಿ ನೃತ್ಯ ಪದ್ಧತಿಯು
ಆವಂತಿ, ದಾಕ್ಷಿಣಾತ್ಯ, ಪಾಂಚಾಲೀ,
ಓಡ್ರಮಾಗಧೀ ಎಂಬ ನಾಲ್ಕು ನಾಟ್ಯ ರೀತಿಗಳನ್ನು ಭರತಮುನಿಯು ಹೇಳಿದ್ದಾನೆ.
ಶೈವತಂತ್ರದ ಪ್ರಕಾರ ನೃತ್ಯ ಕಲೆಯು ರಾಜರ ವಿದ್ಯಾಭ್ಯಾಸದ ಅವಿಭಾಜ್ಯ ಅಂಗ.
ಕೇಸರಿವಂಶ ಮತ್ತು ಚೋಡಗಂಗ ದೇವನ ವಂಶದ ದೊರೆಗಳು ದೇವಾಲಯ
ಗಳಲ್ಲಿ ಹಲವಾರು ನಾಟ್ಯಮಂದಿರಗಳನ್ನು ಕಟ್ಟಿಸಿದರು. ಇವರು ನಾಟ್ಯ ಕಲಾ
ಪ್ರೇಮಿಗಳೂ, ಪೋಷಕರೂ ಆಗಿದ್ದರು. ಪುರಿಯ ಜಗನ್ನಾಥ ದೇವಾಲಯದಲ್ಲಿ
ಇಂದಿಗೂ ರಂಗಪೂಜೆಯ ಅಂಗವಾಗಿ ಶುದ್ಧವಾದ ನಾಟ್ಯ ಸಂಪ್ರದಾಯವು ಉಳಿದು
ಒರಿಸ್ಸದ ಶಿಲ್ಪ ಕಲೆಯಲ್ಲಿ ನೃತ್ಯಕ್ಕೆ ಸಂಬಂಧಿಸಿದ ಹಲವು ಸುಂದರ ಶಿಲ್ಪ
ಗಳಿವೆ. ೧೬ನೆಯ ಶತಮಾನದಲ್ಲಿ ಪ್ರತಾಪರುದ್ರ ದೇವನ ಮಂತ್ರಿಯಾಗಿದ್ದ ರಾಮ್
ರಮಾನಂದನು ಸ್ವತಃ ನರ್ತಕನಾಗಿದ್ದು ಹಲವು ದೇವದಾಸಿಯರಿಗೆ ನಾಟ್ಯಾಚಾರ್ಯ
ನಾಗಿದ್ದನು. ಈತನು ಒರಿಸ್ಸ ದೇಶದ ವೃತ್ತಕ್ಕೆ ಅಭಿನಯವನ್ನು ಸೇರಿಸಿ ಅದನ್ನು
ನೃತ್ಯವನ್ನಾಗಿ ಮಾರ್ಪಡಿಸಿದನೆಂದು ಪ್ರತೀತಿ. ೧೩ನೆಯ ಶತಮಾನದಲ್ಲಿ
ಕೋನಾರ್ಕದ ದೇವಾಲಯವನ್ನು ಕಟ್ಟಿಸಿದ ನರಸಿಂಹದೇವನ ಮಗಳು ಚಂದ್ರಾದೇವಿ
ಒಬ್ಬ ಪ್ರಸಿದ್ಧ ನರ್ತಕಿಯಾಗಿದ್ದಳು. ಗಜಪತಿ ಕಪಿಲೇಂದ್ರನು ಸಂಗೀತ ಮತ್ತು
ನೃತ್ಯ ಕಲೆಗಳ ಉದಾರ ಪೋಷಕನಾಗಿದ್ದುದಲ್ಲದೆ, ಪರಶುರಾಮ ವಿಜಯವೆಂಬ ನೃತ್ಯ
ನಾಟಕವನ್ನು ಬರೆದು, ಅದನ್ನು ಪುರಿಯ ಜಗನ್ನಾಥ ದೇವಾಲಯದಲ್ಲಿ ಅನೂಚಾನ
COF