2023-06-30 07:43:51 by jayusudindra
This page has been fully proofread once and needs a second look.
ಸಂಗೀತ ಪಾರಿಭಾಷಿಕ ಕೋಶ
ಈ ರಾಗವು ೨೮ನೆಯ ಮೇಳಕರ್ತ ಹರಿಕಾಂಭೋಜಿಯ ಒಂದು
ಜನ್ಯರಾಗ,
ಆ
ಸ ನಿ ದ ನಿ ನ ಮ ಗ ಮ ರಿ ಸ
ಅ : ಸ ನಿ ದ ನಿ ನ ಮ ಗ ಮ ರಿ ಸ
ಏಕಾಕ್ಷರಿ
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ ಗೌಳದ
ಒಂದು ಜನ್ಯರಾಗ.
ಸ ರಿ ಗ ಮ ಪ ದ ನಿ ಸ
ಸ ನಿ ಪ ಮ ರಿ ಗ ಮ ಸ
9:
ಏಮನಿ ಶಂಕರಶಾಸ್ತ್ರಿ (ಜ. ೧೯೨೨)
ಏಮನಿ ಶಂಕರಶಾಸ್ತ್ರಿಗಳು ನಮ್ಮ
ನಾಡಿನ ಅತ್ಯಂತ ಪ್ರಮುಖ ವೈಣಿಕರು. ಇವರು ಆಂಧ್ರಪ್ರದೇಶದ ಗೋದಾವರಿ
ಜಿಲ್ಲೆಯ ದ್ರಾಕ್ಷಾರಾಮ ಎಂಬ ಗ್ರಾಮದವರು. ವೈಣಿಕರ ಮನೆತನಕ್ಕೆ ಸೇರಿದವರು.
ಇವರ ತಾತ ಏಮನಿ ಸುಬ್ಬರಾಯಶಾಸ್ತ್ರಿ ಪ್ರಸಿದ್ಧ ವೈಣಿಕರಾಗಿದ್ದರು. ಇವರ ತಂದೆ
ವೈಣಿಕ ಭೂಷಣ, ವೀಣಾಚಾರ ಅಚ್ಯುತರಾಮಶಾಸ್ತ್ರಿಗಳು. ಶಂಕರಶಾಸ್ತ್ರಿಗಳು
ಅಚ್ಯುತರಾಮಶಾಸ್ತ್ರಿಗಳ ಏಕಮಾತ್ರ ಪುತ್ರ, ಮೂರನೆಯ ವಯಸ್ಸಿನಲ್ಲೇ ಇವರ
ಲಯಜ್ಞಾನದ ಪ್ರತಿಭೆ ಬೆಳಕಿಗೆ ಬಂದಿತು. ಅಕ್ಕ ಸತ್ಯವತಿಯಮ್ಮನ ಪ್ರಯತ್ನದಿಂದ
ಕಾಕಿನಾಡಕ್ಕೆ ಹೋಗಿ ಕಾಲೇಜಿಗೆ ಸೇರಿ ವಿದ್ಯಾಭ್ಯಾಸ ಮಾಡಿ ಎ. ಪದವೀಧರ
ಏಮನಿ ಶಂಕರಶಾಸ್ತ್ರಿ ಎಂದು ಬದಲಾಯಿಸಲ್ಪಟ್ಟಿತು. ಚೆನ್ನಾಗಿ ಸಾಧಕ ಮಾಡಿ
ವೈಣಿಕರಾಗಿ ಸುವರ್ಣಪದಕವನ್ನು ಪಡೆದರು. ತಮ್ಮ ೧೭ನೆಯ ವಯಸ್ಸಿನಲ್ಲಿ
೧೯೪೦ರಲ್ಲಿ ತಿರುಚಿಯ ಆಕಾಶವಾಣಿ ಕೇಂದ್ರದಿಂದ ಪ್ರಥಮ ವೀಣಾ ಕಚೇರಿಯನ್ನು
ಮಾಡಿದರು. ಅಲ್ಲಿಂದ ಮುಂದೆ ಖ್ಯಾತರಾದರು. ಕಾಕಿನಾಡದ ಕೊಮ್ಮಿರೆಡ್ಡಿ ಸೂರ್ಯ
ನಾರಾಯಣ ಮೂರ್ತಿನಾಯ್ತು ಅವರ ಪರಿಚಯವಾಗಿ ಲಘು ಮತ್ತು ಶಾಸ್ತ್ರೀಯ
ಹಿಂದೂಸ್ಥಾನಿ ಮತ್ತು ಪಾಶ್ಚಾತ್ಯ ಸಂಗೀತಗಳ ಪರಿಚಯ ಮಾಡಿಕೊಂಡರು.
ಮದ್ರಾಸಿನ ವಿಧಾನಸಭೆಯ ಅಧ್ಯಕ್ಷರಾಗಿದ್ದ ಬುಲುಸು ಸಾಂಬಮೂರ್ತಿಯವರ
ಸಲಹೆಯಂತೆ ಮದ್ರಾಸಿಗೆ ಹೋಗಿ ನೆಲೆಸಿದರು. ಅಲ್ಲಿ ಎಸ್. ಎಸ್. ವಾಸನ್‌ರವರ
ಜೆಮಿನಿ ಸ್ಟುಡಿಯೋವಿನ ವಾದ್ಯಗೋಷ್ಠಿಯ ನಿರ್ದೇಶಕರಾದರು. ೧೯೬೧ರಲ್ಲಿ ಕೇಂದ್ರ
ಆಕಾಶವಾಣಿ ನಿಲಯದ ರಾಷ್ಟ್ರೀಯ ವಾದ್ಯವೃಂದದ ರಚನಕಾರ ಮತ್ತು ಕಂಡಕ್ಟರ್
ಆಗಿ ತರುವಾಯ ಆಕಾಶವಾಣಿಯ ಚೀಫ್ ಪ್ರೊಡ್ಯೂಸರ್ ಆದರು. ಈ ಕಾಲದಲ್ಲಿ
ಆರು ವೀಣೆಗಳಿಂದ ಕೂಡಿದ ಆದರ್ಶ ಶಿಖರಾರೋಹಣಂ ಎಂಬ ಸಂಗೀತರೂಪಕವನ್ನು
ರಚಿಸಿದರು. ೧೯೫೪ರಲ್ಲಿ ರವಿಶಂಕರ್ ಜೊತೆಯಲ್ಲಿ ಜುಗಲ್‌ಬಂದಿ ಕಾರ್ಯಕ್ರಮ
ವನ್ನೂ, ಬೊಂಬಾಯಿನಲ್ಲಿ ಹಲೀಂಜಾಫರ್‌ಖಾನರ ಜೊತೆಯಲ್ಲಿ ಒಂದು ಜುಗಲ್
ಬಂದಿ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು. ಗಾಂಧೀಜಿಯವರನ್ನು ಕುರಿತು