This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಮೂಚಿತ, ಸತ್ರಚ್ಛದ, ಎಗ, ಎಡ, ಹಡ, ಬಂಧಕರಣ, ಬಾದಕರಣ, ಸರ

ಕರಣ, ಆಸ್ಥಾನ ಮಂಡಪ, ಕುಟಿಲ ಪೂರ್ಣಿತ, ಗೋಷ್ಠಿ, ಅರ್ಣ, ಕಚ್ಛನ, ಆಣ,

ಆದಿಮಾತೃಕ, ತರಷಣ ಪುತ್ರಿ, ಮಣಿಮಿಶ್ರ ಕಂಕಾಳ, ಕಾವ್ಯಕಂಕಾಳ ಫಲ, ಚಕ್ರ

ವಾಕ, ಆರ್ಯ, ಸರಳ, ವಿರಳ, ಉಮಾಮಂದಿರ, ಬಂಧಮಟ್ಟೆ, ಖಂಡಿತತರ, ಅವ

ಖಂಡ, ಖಂಡಿತ ಚಂದಕಿ, ಅವಿಘುರ್ಣಿತ, ಉತ್ತಮಮೇರು, ತಂಬುಲಿಯಾನ, ಅರ್ಧ

ಕಲಿಕ, ಪಂಚಬ್ರಹ್ಮ, ಪರಿತಲ, ಹರಿನ, ಮಾಯಾ ಖಣ, ಖಂಜರ, ಚತುರತ್ರ

ಖಂಜರ, ಕೃಷ್ಣ ಖಂಜರ, ಅಸಮಾನ ಖಂಜರ
 

 
ಏಕನಿಕ-
ಈ ರಾಗವು ೧೫ನೆಯ ಮೇಳಕರ್ತ ಮಾಯಾಮಾಳವ ಗೌಳದ

ಒಂದು ಜನ್ಯರಾಗ,
 

ಸ ಮ ಗ ಮ ವ ದ ನಿ ಸ
 

ಸ ನಿ ಪ ಮ ಗ ರಿ ಸ
 

 
ಏಕಪಾದ-
ಭರತನಾಟ್ಯದ ಪಾದವಿನ್ಯಾಸಗಳು ಆರು ವಿಧಗಳುಂಟು. ಇವು

ಗಳಲ್ಲಿ ಏಕಪಾದವು ಒಂದು ಬಗೆ. ಒಂದು ಕಾಲಿನ ಮೇಲೆ ನಿಂತು ಇನ್ನೊಂದು

ಕಾಲಿನ ಪಾದವನ್ನು ಅದರ ಮೊಣಕಾಲಿನ ಮೇಲಿಟ್ಟುಕೊಳ್ಳುವುದು ಏಕಪಾದ

ವಿನ್ಯಾಸ. ಇದು ನಿಶ್ಚಲ, ತಪಸ್ಸು ಮಾಡುವುದನ್ನು ತೋರಲು ವಿನಿಯೋಗ
 
ವಾಗುವುದು.
 
೧೦೬
 

 

 
ಏಕಮುದ್ರಕಾರ-
ಒಂದೇ ಒಂದು ಬಗೆಯ ಅಂಕಿತವನ್ನು ಬಳಸಿರುವ
ವಾಗ್ಗೇಯಕಾರ,
ತ್ಯಾಗರಾಜ, ಜಯದೇವ, ಮತ್ತು
ಮುಂತಾದವರು ಏಕಮುದ್ರಕಾರರು
 
ಸ್ವಾಮಿನಾರಾಯಣ
 
ವಾಗ್ಗೇಯಕಾರ,
ತೀರ್ಥ
 

ಮುಂತಾದವರು ಏಕಮುದ್ರಕಾರರು
ತ್ಯಾಗರಾಜರ ಕೃತಿಗಳಲ್ಲಿ

ತ್ಯಾಗರಾಜನುತ, ತ್ಯಾಗರಾಜಾರ್ಚಿತ, ತ್ಯಾಗರಾಜ ಸನ್ನುತ ಎಂಬ ಪ್ರತ್ಯಯಗಳಲ್ಲಿ

ವ್ಯತ್ಯಾಸವಿರುವ ಮುದ್ರೆಗಳಿವೆ.
 

 
ಏಕಮುದ್ರ ಪ್ರಬಂಧ-
ದ್ವಾದಶಮುದ್ರೆಗಳಲ್ಲಿ ಒಂದನ್ನು ಮಾತ್ರ ಅಂಕಿತ

ವಾಗಿರುವ ಸಂಗೀತ ರಚನೆ. ತ್ಯಾಗರಾಜರ - ಮೋಕ್ಷಮುಗಲದಾ ? ಎಂಬ

ಸಾರಮತಿ ರಾಗದ ಕೃತಿಯು ಇಂತಹ ರಚನೆಗೆ ಉದಾಹರಣೆ
 

 
ಏಕಾಂತವಾದ-
ವೀಣೆಯಂತಹ ವಾದ್ಯವನ್ನು ಕೇಳಿ ಆನಂದ ಪಡಬೇಕಾದರೆ

ಅದನ್ನು ಏಕಾಂತದಲ್ಲಿ ಅಥವಾ ಒಂದು ಸಣ್ಣ ಕೊಠಡಿಯಲ್ಲಿ ಕೇಳಬೇಕು.
 

 
ಏಕಡಾಪದ-
ಕಧಾಕಾಲಕ್ಷೇಪಗಳಲ್ಲಿ ಪ್ರಾರಂಭದಲ್ಲಿ ಪಂಚಪದಿ ಎಂಬ ಐದು

ಹಾಡುಗಳನ್ನು ಹಾಡಿ ನಂತರ, ' ಗೋವಿಂದರಾಮಹರೇ ಎಂಬ ಒಂದು ಚಿಕ್ಕ ಭಕ್ತಿ

ಗೀತೆಯನ್ನು ಹಾಡುವ ಪದ್ಧತಿ ರೂಢಿಯಲ್ಲಿದೆ. ಇದು ಭೈರವೀರಾಗದಲ್ಲಿದೆ.
 
ಗೀತೆಗೆ ಏಕಡಾಪದವೆಂದು ಹೆಸರು.
 

 
ಏಕಮುಖವಾದ-ದ್ಯ
ಇದೊಂದು ಬಗೆಯ ಡಮರು. ಒಂದು ಮುಖವಿರುವ
 

ಚರ್ಮವಾದ್ಯ.