This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಲಾವಣಿಯವರು, ಮತ್ತು ಭಿಕ್ಷುಕರು ಏಕನಾದವನ್ನು ಉಪಯೋಗಿಸುತ್ತಾರೆ.
ತಂತಿಯನ್ನು ಮಧ್ಯದ ಬೆರಳಿನಿಂದ ಮಾಟುತ್ತಾರೆ.
 
ಇವನ ಹೆಸರು ಪಠಣಕರ,
 
ಏಕಧಾತು ದಿವ್ಯನಾಮ ಕೀರ್ತನ-ಇವು ಪಲ್ಲವಿ ಮತ್ತು ಚರಣಗಳ
ಧಾತುವು ಒಂದೇ ವಿಧವಾಗಿರುವ ದಿವ್ಯನಾಮ ಕೀರ್ತನೆಗಳು. ಇವುಗಳಲ್ಲಿ ಚರಣ
ವನ್ನು ಹಾಡಿದ ನಂತರ ಪಲ್ಲವಿಯನ್ನು ಪುನಃ ಹಾಡುವುದಿಲ್ಲ. ತ್ಯಾಗರಾಜರ ಯದು
ಕುಲ ಕಾಂಭೋಜಿ ರಾಗದ ( ಶ್ರೀರಾಮ ಜಯರಾಮ ' ಎಂಬ ಕೀರ್ತನೆಯು ಏಕ
ಧಾತು ಕೀರ್ತನೆಗೆ ಉದಾಹರಣೆ.
ದ್ವಿಧಾತು ದಿವ್ಯನಾಮ ಕೀರ್ತನೆಗಳಲ್ಲಿ ಚರಣದ
ಧಾತುವು ಪಲ್ಲವಿಯ ಧಾತುವಿಗಿಂತ ಬೇರೆಯಾಗಿರುತ್ತದೆ ಮತ್ತು ಚರಣದ ಕೊನೆ
ಯಲ್ಲಿ ಪಲ್ಲವಿಯನ್ನು ಪುನಃ ಹಾಡಲಾಗುವುದು ತ್ಯಾಗರಾಜರ ಶಹಾನ ರಾಗದ
* ಶ್ರೀರಾಮ ಶ್ರೀರಾಮ " ಎಂಬ ಕೀರ್ತನೆಯು ದ್ವಿಧಾತು ಕೀರ್ತನೆಗೆ ಉದಾಹರಣೆ.
ಏಕನಾಥ (ಕ್ರಿ.ಶ. ೧೫೪೮)-ಇವನು ಮಹಾರಾಷ್ಟ್ರದ ಒಬ್ಬ ಪ್ರಸಿದ್ಧ ಭಕ್ತ.
ಇವನ ಗುರು ಜನಾರ್ದನಸ್ವಾಮಿ. ಗುರುವಿನಲ್ಲಿ
ಜ್ಞಾನೇಶ್ವರೀ, ಅಮೃತಾನುಭವ ಮೊದಲಾದ ಗ್ರಂಥಗಳ ಅಧ್ಯಯನ ಮಾಡಿ, ದೇವ
ಘಡದ ಬೆಟ್ಟದಲ್ಲಿ ಆರು ವರ್ಷಗಳ ಕಾಲ ತಪಸ್ಸು ಮಾಡಿ ಭಗವಂತನ ಸಾಕ್ಷಾತ್ಕಾರ
ಪಡೆದನು. ಇವನಿಗೆ ದೀನ ದಲಿತರಲ್ಲಿ ಅಪಾರ ಕರುಣೆಯಿತ್ತು. ಜನರ ಭಾಷೆಯಲ್ಲಿ
ವೇದಾಂತ ರಹಸ್ಯವನ್ನೂ, ಜ್ಞಾನಸಾರವನ್ನೂ, ಭಾಗವತ ಧರ್ಮವನ್ನೂ ಪ್ರಚಾರ
ಮಾಡಿದನು. ಓವಿ ಎಂಬ ಮರಾಠಿ ಜಾನಪದ ಗೀತೆಯಲ್ಲಿ ೨೦೦೦೦ ಓವಿಗಳನ್ನೊಳ
ಗೊಂಡ ಭಾಗವತದ ೧೧ನೆಯ ಸ್ಕಂದದ ವಿಸ್ಕೃತ ಪದ್ಯ ವಿವರಣೆಯನ್ನು ರಚಿಸಿದನು.
ರುಕ್ಕಿಣೀ ಸ್ವಯಂವರವೆಂಬ ೧೮ ಅಧ್ಯಾಯಗಳ ಪೌರಾಣಿಕ ಕಾವ್ಯವು ಇವನ
ಮತ್ತೊಂದು ರಚನೆ.
ಓವಿ ಮತ್ತು ಅಭಂಗಗಳ ಮೇಲೆ ಇವನ ಪ್ರಭುತ್ವವು
ಅದ್ವಿತೀಯ. ಇದಲ್ಲದೆ ಚಿಕ್ಕ ಪೌರಾಣಿಕ ಆಖ್ಯಾನಗಳನ್ನೂ ಇತರ ಹಲವು ರಚನೆ
ಗಳನ್ನೂ ರಚಿಸಿದ್ದಾನೆ. ಮರಾಠಿ ಭಕ್ತಿ ಸಾಹಿತ್ಯಕ್ಕೆ ಇವನ ಕಾಣಿಕೆ ಅಮೋಘ
 
ವಾದುದು.
 
೧೦೫
 
ಏಕೋಜಿ ತಂಜಾವೂರಿನ ಮರಾಠ ದೊರೆ. ಷಹಾಜಿ ಮಹಾರಾಜನ
ತಂದೆ, ಪಲ್ಲಕ್ಕಿ ಸೇವಾ ಪ್ರಬಂಧು ಎಂಬ ತೆಲುಗು ಗೇಯ ನೃತ್ಯ ನಾಟಕವನ್ನು
ರಚಿಸಿದನು.
 
9
 
ಏಕೋತ್ತರ ಶತತಾಳಗಳು ಪಾರ್ಶ್ವದೇವನ * ಸಂಗೀತ ಸಮಯಸಾರ ,
ನಾರದನ - ಸಂಗೀತ ಮಕರಂದ ' ಮುಂತಾದ ಹಿಂದಿನ ಸಂಗೀತಶಾಸ್ತ್ರ ಗ್ರಂಥಗಳಲ್ಲಿ
ಪುರಾತನವಾದ ೧೦೧ ತಾಳಗಳನ್ನು ಹೇಳಿದೆ. ಇವುಗಳಲ್ಲಿ ಅನೇಕ ತಾಳಗಳು ನಂತರದ
೧೦೮ ತಾಳಗಳಲ್ಲಿ ಸೇರಿಹೋಗಿವೆ. ಪಾಲ್ಕುರಿಕೆ ಸೋಮನಾಥನು ತನ್ನ ಗ್ರಂಥವಾದ
ಪಂಡಿತಾರಾಧ್ಯ ಚರಿತಮು ಎಂಬುದರ ಪರ್ವತ ಪ್ರಕರಣದಲ್ಲಿ ಹೇಳಿರುವ ೧೦೮ ತಾಳ
ಗಳಲ್ಲಿ ಹಲವು ಹೊಸ ತಾಳಗಳನ್ನು ಹೇಳಿದ್ದಾನೆ. ಅವುಗಳಲ್ಲಿ ಕೆಲವು ಯಾವುದೆಂದರೆ :