2023-06-25 23:29:21 by ambuda-bot
This page has not been fully proofread.
ಸಂಗೀತ ಪಾರಿಭಾಷಿಕ ಕೋಶ
ಏಕಕಾಲ-ಇದು ತಾಳಕ್ಕೆ ಸಂಬಂಧಿಸಿದ ಒಂದು ಗಣಿತಾಂಶ. ಇದರಲ್ಲಿ
ಪ್ರತಿಯೊಂದು ತಾಳದ ಅಕ್ಷರಕ್ಕೆ ಒಂದು ಕಾಲವೆಂದು ಎಣಿಕೆ ಮಾಡಲಾಗುತ್ತದೆ.
ಏಕತಾಳ-ಸಪ್ತತಾಳಗಳಲ್ಲಿ ಕೊನೆಯ ತಾಳ. ಇದರಲ್ಲಿ ಒಂದು ಲಘು
ಮಾತ್ರ ಇರುತ್ತದೆ ಅಹೋಬಲನು ಸಂಗೀತ ಪಾರಿಜಾತವೆಂಬ ಗ್ರಂಧದಲ್ಲಿ
ಈ ತಾಳವನ್ನು ಲಘುತಾಳವೆಂದು ಹೆಸರಿಸಿದ್ದಾನೆ.
ಏಕತಂತ್ರಿ-ಇದು ಒಂದು ತಂತಿ ಇರುವ ವಾದ್ಯ, ತೆಂಗಿನ ಕರಟದಿಂದ ಇದರ
ಕೊಡವನ್ನು ಮಾಡಲಾಗಿದೆ. ಇತರ ಭಾಗಗಳನ್ನು ಮರದಿಂದ ಮಾಡಲಾಗಿರುತ್ತದೆ.
ಇದು ಸಂಗೀತ ರತ್ನಾಕರವೆಂಬ ಗ್ರಂಥದಲ್ಲಿ ಉಕ್ತವಾಗಿದೆ.
ಏಕ್ತಾರ್-ಭಿಕ್ಷುಕರು,
೧೦೪
ಬೈರಾಗಿಗಳು, ತತ್ವಗಾನ ಮಾಡುವವರು,
ಲಾವಣಿಯನ್ನು ಹಾಡುವವರು ಶ್ರುತಿಗಾಗಿ ಉಪಯೋಗಿಸುವ ವಾದ್ಯ. ಇದಕ್ಕೆ
ಏಕನಾದವೆಂದು ಹೆಸರು. ತೀರ ದುಂಡಾಗಿಲ್ಲದ, ಸುಮಾರು ಚಪ್ಪಟೆಯಾಗಿರುವ,
ಬಲಿತು ಒಣಗಿದ ಸೋರೆಕಾಯಿಯ ದುಂಡಾದ ಸುತ್ತು ಭಾಗದಲ್ಲಿ ಎದುರೆದುರಾಗಿ
ಎರಡು ರಂಧ್ರಗಳನ್ನು ಕೊರೆಯಲಾಗಿದೆ ಇವು ಒಂದಕ್ಕೊಂದು ನೇರವಾಗಿವೆ.
ಇವುಗಳ ಮೂಲಕ ತೂರಿ ಬರುವ ಎರಡು ಅಂಗುಲ ವ್ಯಾಸ ಮತ್ತು ನಾಲ್ಕು ಅಡಿ
ಉದ್ದವಿರುವ ಬಿದಿರು ಕೋಲನ್ನು ಸೇರಿಸಿರುವರು. ಕೆಳಗಿನ ಭಾಗದಲ್ಲಿ ಕೋಲು
ಎರಡು ಅಂಗಲ ಉಳಿದಿರುತ್ತದೆ. ಮಿಕ್ಕ ಭಾಗವು ಸೋರೆಕಾಯಿಯ ಅಡ್ಡಗಲವನ್ನು
ದಾಟಿರುತ್ತದೆ. ಇದರ ಬಿಡಿ ಭಾಗದ ತುದಿಯಲ್ಲಿ ಸುಮಾರು ಮೂರು ಅಂಗುಲದಷ್ಟು
ಕೋಲಿನ ಗಾತ್ರದಲ್ಲಿ ತೂರುವಂತೆ ಒಂದು ಬಿರಡೆ ಸೇರಿಸಲ್ಪಟ್ಟಿರುತ್ತದೆ. ಸೋರೆ
ಬುರುಡೆಯ ಚಪ್ಪಟೆಯಾದ ಭಾಗದ ಕೇಂದ್ರದಲ್ಲಿ ಒಂದು ಮರದ ತೆಳ್ಳನೆಯ
ಕುದುರೆ'ಯನ್ನು ಅಳವಡಿಸಲಾಗಿದೆ. ಬುರುಡೆಯ ಕೆಳಗೆ ಇರುವ ಬಿದಿರಿನ ಬಿಡಿ
ಭಾಗಕ್ಕೆ ತಂತಿಯನ್ನು ಬಿಗಿಯಲಾಗಿದೆ, ಇದು ಕುದುರೆಯ ಮೇಲೆ ಹಾದು
ಬಂದು ಮೇಲ್ಬಾಗದ ತುದಿಯಲ್ಲಿರುವ ಬಿರಡೆಗೆ ಕಟ್ಟಲ್ಪಟ್ಟಿದೆ. ಬಿರಡೆಯನ್ನು
ತಿರುಗಿಸಿ ಬೇಕಾದ ಶ್ರುತಿಯನ್ನು ಮಾಡಿಕೊಳ್ಳಬಹುದು. ಕುದುರೆಯ ಮೇಲೆ
ಹೋಗಿರುವ ತಂತಿಯ ಕೆಳಗೆ ಒಂದು ಚೂರು ಹತ್ತಿಯದಾರ, ಅಥವಾ ರೇಷ್ಮೆದಾರ
ಅಥವಾ ಉಣ್ಣೆಯದಾರವನ್ನು ಸೇರಿಸಿ ಹಿಂದು ಮುಂದು ಜರುಗಿಸುತ್ತಾ ಬಂದರೆ
ತಂತಿಯನಾದವು ಪುಷ್ಟವಾಗಿ ಕೇಳಿಬರುತ್ತದೆ. ಇದಕ್ಕೆ ಜೀವಾಳವೆಂದು ಹೆಸರು.
ಸೋರೆ ಬುರುಡೆಯ ಕೆಳಭಾಗದಲ್ಲಿ ನಾದವರ್ಧನಕ್ಕಾಗಿ ದೊಡ್ಡ ರಂಧ್ರವನ್ನು
ಉತ್ತರ ಭಾರತದ ಏಕತಾರ್‌ನಲ್ಲಿ ಸೋರೆ ಬುರುಡೆಯ ಚಪ್ಪಟೆ
ಯಾದ ಕಡೆಗೆ ಚರ್ಮದ ಮುಚ್ಚಳಿಕೆ ಹಾಕಿ, ಇದರ ಮಧ್ಯದಲ್ಲಿ ಕುದುರೆಯನ್ನಿಟ್ಟು
ತಂತಿಯನ್ನು ಕಟ್ಟುತ್ತಾರೆ. ಏಕನಾದವು ಭಾರತದ ಅತ್ಯಂತ ಪ್ರಾಚೀನ ವಾದ್ಯ.
ಭಕ್ತರಾದ ತುಕಾರಾಮ್, ತುಳಸೀದಾಸ್, ಕನಕದಾಸರೇ ಮುಂತಾದವರು ಏಕನಾದ
ವನ್ನು ಮಾಟ ಗೀತೆಗಳನ್ನು ಹಾಡುತ್ತಿದ್ದರು. ಈಗಲೂ ಬಹು ಮಂದಿ ಸಾಧುಗಳು,
ಮಾಡಲಾಗಿದೆ