This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
೧೦೩
 
ವಾಗ್ಗೇಯಕಾರರಾಗಿದ್ದರು. ಸುಬ್ಬರಾಮ ದೀಕ್ಷಿತರು ಬರೆದ - ಸಂಗೀತ ಸಂಪ್ರದಾಯ
ಪ್ರದರ್ಶಿನಿ' ಎಂಬ ಉದ್ಧಂಥವನ್ನು ೧೯೦೪ರಲ್ಲಿ ಎಟ್ಟಿಯಾವುರಂ ಸಂಸ್ಥಾನವು
ಪ್ರಕಟಿಸಿತು. ರಾಷ್ಟ್ರಕವಿ ಸುಬ್ರಹ್ಮಣ್ಯ ಭಾರತಿ ಇಲ್ಲಿ ಜನ್ಮತಾಳಿದರು.
ಎಡಕ-ಕೊಡಗು ಸೀಮೆಯ ಒಂದು ಚರ್ಮವಾದ್ಯ. ಇದು ಡಮರ
ವಿನಂತಿದೆ. ಇದನ್ನು ಲೋಹದಿಂದ ಮಾಡಿದೆ.
 
ಎಡುಪು-ರಾಗಾಲಾಪನೆ ಅಥವಾ ರಾಗವರ್ಧನಿಯ ಮೊದಲ ಹಂತದ
 
ಹೆಸರು.
 
ಎಡುಪ್ಪು ತಾಳಾವರ್ತದಲ್ಲಿ ಸಂಗೀತವು ಆರಂಭವಾಗುವ ಜಾಗ ಅಧವಾ
ಗ್ರಹ. ಇದರಲ್ಲಿ ಸಮ, ಅತೀತ, ಅನಾಗತ ಎಂಬ ಮೂರು ವಿಧಗಳಿವೆ. ಸಂಗೀತ
ಮತ್ತು ತಾಳ ಇವೆರಡೂ ಒಂದೇ ಸಲ ಆರಂಭವಾದರೆ ಅದು ಸಮ. ತಾಳಕ್ಕೆ ಮೊದಲು
ಸಂಗೀತವು ಆರಂಭವಾದರೆ ಅದು ಅತೀತ. ತಾಳವು ಪ್ರಾರಂಭವಾದ ನಂತರ
ಸಂಗೀತವು ಆರಂಭವಾದರೆ ಅದು ಅನಾಗತ.
 
ಎರುಕಾಲರುಂಪೆ-ಯಕ್ಷಗಾನಗಳಲ್ಲಿ ಬರುವ ಒಂದು ತಾಳ
 
ಎರುಕಲಕಾಂಭೋಜಿ-ಈಗ ಯದುಕುಲ ಕಾಂಭೋಜಿ ಎಂದು ಪ್ರಚಲಿತ
ವಾಗಿರುವ ರಾಗದ ಹಿಂದಿನ ಹೆಸರು,
 
ಎಸಾಂಧೋಳಿ-ಈ ರಾಗವು ೪೬ನೆಯ ಮೇಳಕರ್ತ ಷಡ್ಡಿದ ಮಾರ್ಗಿಣಿಯ
ಒಂದು ಜನ್ಯರಾಗ.
 
ಸ ರಿ ಮ ಪ ನಿ ಸ
 
ಸ ನಿ ದ ಪ ಮ ಗ ಮ ರಿ ಸ
 
ಎಸಾರಿ. ಈ ರಾಗವು ೧೩ನೆಯ ಮೇಳಕರ್ತಗಾಯಕಪ್ರಿಯದ ಒಂದು
ಜನ್ಯರಾಗ,
 
ಸ ರಿ ಗ ಮ ಪ ದ ಸ
ಸ ನಿ ದ ಪ ಮ ಗ ರಿ ಸ
 
ನುಡಿಯುವ ತಂತೀವಾದ್ಯ, ಬಂಗಾಳದಲ್ಲಿ
ಹೆಚ್ಚು ಬಳಕೆಯಲ್ಲಿದೆ. ಇದು ಸಾರಂಗಿಗಿಂತ ಸ್ವಲ್ಪ ಚಿಕ್ಕದು ಬೆರಳಿನಿಂದ ನುಡಿಸುವ
ಭಾಗದಲ್ಲಿ ಚಲಿಸಲು ಅನುಕೂಲವಾದ ಮೆಟ್ಟಿಲುಗಳಿಗೆ ಲೋಹದ ತಂತಿಗಳನ್ನು
ಕಟ್ಟಿರುತ್ತಾರೆ ಇವಲ್ಲದೆ ಅನುರಣನೆಯ ತಂತಿಗಳಿರುತ್ತವೆ. ಈ ವಾದ್ಯವನ್ನು
ಎಸ್ರಾರ್ ಎನ್ನುವುದುಂಟು.
 
ಎಸ್ಪಾಜ್ಕಮಾನಿನಿಂದ
 
ಏದುರ್ಗಾ, ವಾಣಿ, ಸರಸ್ವತೀ, ದಾಮೋದರ, ಮಹೇಶ್ವರ, ಸ್ಮರಣ,
ಆಮಂತ್ರಣ, ಭಯ, ಜ್ಞಾನ, ವ, ವಿಷ್ಣು, ಭಗವತಿ, ಮೋಹಿನೀ, ಪದ್ಮನಾಭ,
ಅಸೂಯೆ, ಅನುಕಂಪ ಮುಂತಾದ ಅರ್ಥಗಳಿವೆ.