This page has not been fully proofread.

ಸಂಗೀತ ಪಾರಿಭಾಷಿಕ ಕೋಶ
 
ಬಹುರಮಣೀಯವಾಗಿದೆ.
 
ಸಾವಿರ ಇವೆ.
 
ಇವರು ಸಂಸ್ಕೃತ ಮತ್ತು ತಮಿಳಿನಲ್ಲಿ ವಿಪುಲವಾಗಿ ಕೃತಿ
ಗಳನ್ನು ರಚಿಸಿರುವರು. ಇವರ ಸಂಸ್ಕೃತದ ಕೃತಿಗಳು ಜಯದೇವ ಮತ್ತು ನಾರಾಯಣ
ತೀರ್ಧರ ಕೃತಿಗಳಂತಿವೆ. ಇವುಗಳಲ್ಲಿ ಸ್ವರಗುಚ್ಛಗಳು, ಸಾಹಿತ್ಯ ಮತ್ತು ಜತಿಗಳು
ಒಂದಾದ ನಂತರ ಇನ್ನೊಂದು ಇವೆ. ಇವು ನೃತ್ಯ ಮತ್ತು ಭಜನೆಗೆ ಯೋಗ್ಯ
ವಾದುವು. ಸಾಹಿತ್ಯವು ಲಲಿತ ಮತ್ತು ಮನೋಹರವಾಗಿದ್ದು ರಾಧಾಕೃಷ್ಣರ ಪ್ರೇಮದ
ವಿಷಯವನ್ನೊಳಗೊಂಡಿದೆ. ಇವರ ಕೆಲವು ದೀರ್ಘವಾದ ಕೃತಿಗಳು ತ್ಯಾಗರಾಜರ
ಪಂಚರತ್ನ ಕೃತಿಗಳಂತಿವೆ. ಇವರ ಕೃತಿಗಳ ಪ್ರಭಾವವನ್ನು ಸಂಗೀತದ ತ್ರಿರತ್ನರ
ರಚನೆಗಳಲ್ಲಿ ಕಾಣಬಹುದು. ಭಾವ, ರಾಗ, ತಾಳ, ಸಾಹಿತ್ಯ, ಶಬ್ದ ಮತ್ತು ಸ್ವರ
ಗಳ ಸುಮಧುರ ಸಮ್ಮೇಳನವು ಇವರ ರಚನೆಗಳಲ್ಲಿ ಕಂಡು ಬರುತ್ತದೆ. ಇವರು ಸಂಸ್ಕೃತ
ಮತ್ತು ತಮಿಳಿನಲ್ಲಿ ಅನೇಕ ಪದಗಳನ್ನು ರಚಿಸಿದ್ದಾರೆ. ಇವರ ಕೃತಿಗಳು ಸುಮಾರು
ಕಾಳಿಂಗನ ಹೆಡೆಯ ಮೇಲೆ ನಾಟ್ಯವಾಡುತ್ತಿರುವ ಶ್ರೀಕೃಷ್ಣನನ್ನು
ಕುರಿತು ರಚಿಸಿರುವ ಕೃತಿಯೊಂದರಲ್ಲಿ ಐದು ವಿವಿಧ ತಾಳಗಳ ಪ್ರಯೋಗವಿದೆ ಮತ್ತು
ಊತ್ತು ಕಾಡಿನ ಶ್ರೀಕೃಷ್ಣ ವಿಗ್ರಹದ ವಿಶಿಷ್ಟ ಲಕ್ಷಣದ ಸೂಚನೆಯಿದೆ.
ರಾಗದ ಬೃಂದಾವನ ನಿಲಯೇ, ಚಾರುಕೇಶಿರಾಗದ " ರಸಿಕ ಮಹಾತ್ಮಾ', ಭೈರವಿ
ರಾಗದ - ಲೋಲಗೋಪ ಬಾಲ , ಅಠಾಣ ರಾಗದ * ಮಧುರ ಮಧುರ , ಗೌರೀ
ಮನೋಹರಿ ರಾಗದ " ವಿಶತಿ ವಿಶತಿ ಕೃಷ್ಣಃ', ನಾಟಕುರಂಜಿ ರಾಗದ ಪದಿಪುಂ
ಮುಖಂ, ಶುದ್ಧ ಸಾವೇರಿ ರಾಗದ ನೀಮನಿ ಕಂಡು, ಝುಂಝಟ ರಾಗದ ಮುದ್ದು
ಕೃಷ್ಣ ಮೇ ಮುದಂ, ಪುನ್ನಾಗವರಾಳಿ ರಾಗದ " ನಿಲೈವನಂ , ಜಯಂತಶ್ರೀ ರಾಗದ
* ನೀರದ ಶ್ಯಾಮ', ಹುಸೇನಿ ರಾಗದ ' ರಾಧಾಕೃಷ್ಣ ಚಿಂತಯೇ ' ಎಂಬುವು ಇವರ
ಪ್ರಸಿದ್ಧವಾದ ಕೃತಿಗಳು. ವೆಂಕಟಸುಬ್ಬಯರ್ರವರ ಕೃತಿಗಳು ಪುರಂದರದಾಸರು
ಹಾಗೂ ಕ್ಷೇತ್ರಜ್ಞರ ಕಾಲಕ್ಕೂ, ಸಂಗೀತದ ತ್ರಿರತ್ನರ ಕಾಲಕ್ಕೂ ಮಧ್ಯೆಯಿರುವ
ಸೇತುವೆಯಂತಿವೆ ಎನ್ನಬಹುದು.
 
ರೀತಿಗಳ
 
ಊರ್ಧ್ವಮಂಡಲ-ಇದು ಭರತನಾಟ್ಯದ ಒಂದು ವಿಶೇಷ ಹಸ್ತ ಮುದ್ರೆ,
ಹಸ್ತಗಳು ಮೇಲ್ಮುಖವಾಗುವಂತೆ ಎದುರಾಗಿ ತಿರುಗಿಸಿದರೆ ಅದು ಊರ್ಧ್ವಮಂಡಲ
ಮುದ್ರೆ,
 
ಊರ್ಮಿಕ -ಈ ರಾಗವು ೫೭ನೆಯ ಮೇಳಕರ್ತ ಸಿಂಹೇಂದ್ರ ಮಧ್ಯಮದ
ಒಂದು ಜನ್ಯರಾಗ.
 
ಆ .
 
ಸ ರಿ ಗ ಮ ಪ ನಿ ಸ
 
ಸ ನಿ ಪ ಮ ಗ ರಿ ಸ
 
ಮುತ್ತಯ್ಯ ಭಾಗವತರು ರಚಿಸಿರುವ ( ಕಾಳರಾತ್ರಿ ಸ್ವರೂಪಿಣಿ " ಎಂಬುದು ಈ
ರಾಗದ ಒಂದು ಪ್ರಸಿದ್ಧ ಕೃತಿ.
 
-