This page has been fully proofread once and needs a second look.

ಸಂಗೀತ ಪಾರಿಭಾಷಿಕ ಕೋಶ
 
ಜೀವನ ನಡೆಸುತ್ತಿದ್ದರು. ಹೀಗಿದ್ದಾಗ ಅಲ್ಲಿ ಒಂದು ಸಲ ಸಂಗೀತಕ್ಕೆ ಸಂಬಂಧಿಸಿದ

ರುದ್ರಲಬ್ಧಂ ಎಂಬ ಮಾರ್ಗದ ಬಗ್ಗೆ ಒಂದು ಉಪನ್ಯಾಸವನ್ನು ಕೇಳಿ ಅದರಿಂದ

ಪ್ರಭಾವಿತರಾದರು.
 

ಈ ಮಾರ್ಗದ ಬಗ್ಗೆ ಉಪದೇಶ ಪಡೆಯಲು ಮೊದಲು ಕೃಷ್ಣ ಯೋಗಿ ಎಂಬು

ವರನ್ನು ಆಶ್ರಯಿಸಿದರು. ಆದರೆ ಯೋಗಿಯು ಉಪದೇಶ ಮಾಡಲು ನಿರಾಕರಿಸಿದರು.

ಇದರಿಂದ ದುಃಖಿತರಾಗಿ, ಹಿರಿಯರ ಆದೇಶದಂತೆ ತಮ್ಮ ಕುಲದೈವವಾದ ಶ್ರೀಕೃಷ್ಣ

ಸಂಕೀರ್ತನೆ
 
ನನ್ನೇ ಆಶ್ರಯಿಸಲು ನಿರ್ಧರಿಸಿ ಕೃಷ್ಣನ ಸನ್ನಿಧಿಗೆ ಹೋಗಿ ಭಗವನ್ನಾಮ

ಮಾಡುತ್ತಾ ಕುಳಿತರು. ಒಂದು ದಿನ ಸಂಕೀರ್ತನೆ ಮಾಡುತ್ತಾ ಕುಳಿತಿರುವಾಗ

ಒಂದು ಚಿಕ್ಕ ಮಗುವು ಬಂದು ಇವರ ತೊಡೆಯ ಮೇಲೆ ಕುಳಿತು

ತಂತಿಯನ್ನು ಹಿಡಿಯಿತು. ಇದರಿಂದ ಅಯ್ಯರ್‌ರವರಿಗೆ ಸಮಾಧಿ

ಮಗುವನ್ನು ತೊಡೆಯಿಂದ ಇಳಿಸಿ ಪುನಃ ಧ್ಯಾನಸ್ಥರಾಗಿ

ಕಣ್ಮುಚ್ಚಿ ಗಾನಸುಧೆಯಲ್ಲಿ ಮುಳುಗಿರುವಾಗ ಪುನಃ ಆ ಮಗುವು
 

ಎಲ್ಲಿಂದಲೋ

ತಂಬೂರಿಯ
 
ಯಿಂದ ಎಚ್ಚರವಾಯಿತು.
 
ತೊಡೆಯೇರಿ
 

ಕುಳಿತು ತಂತಿ ಹಿಡಿಯಿತು.
 

 

ಪುನಃ ಎಚ್ಚೆತ್ತು ಆ ಮಗುವನ್ನು ಕಳುಹಿಸಿದರು.

ಮಗುವು ಸ್ವಲ್ಪ ದೂರ ಹೋಗಿ ನಕ್ಕಿತು. ನಗುವನ್ನು ಕೇಳಿದ ಅಯ್ಯರ್ ಹಿಂತಿರುಗಿ

ನೋಡಿದಾಗ ಅವರಿಗೆ ಬಾಲಕೃಷ್ಣನ ದಿವ್ಯಮಂಗಳ ಮೂರ್ತಿ ಕಂಡಿತು. ಕೂಡಲೇ

ಎದ್ದು ಓಡಿಹೋಗಿ ಆ ಮಗುವನ್ನು ಆನಂದದಿಂದ ಬಾಚಿ ತಬ್ಬಿದರು.

ಮಗುವು ಅದೃಶ್ಯವಾಯಿತು ಇದು ಅಯ್ಯರ್‌ರವರ ಪ್ರಧಮ ದಿವ್ಯಾನುಭವ. ಇವರು

ರಚಿಸಿರುವ ಇದ್ ಒರುದಿರು ಮಾಮೋ ಮತ್ತು ಕಾಯಾಂಪೂ ಎಂಬ ಎರಡು ಕೃತಿ

ಗಳು ಈ ಘಟನೆಯನ್ನು ಸೂಚಿಸುತ್ತವೆ.
 

ಆದರೆ ಆ
 
೯೨
 
ಇವರು ಶ್ರೀಕೃಷ್ಣ ಗಾನ,

ಪ್ರಭಾವ, ರಾಜಗೋಪಾಲ
 

ರುದ್ರಶಬ್ದಂ, ನಂದನಗೀತಂ, ಕಾಳಿಂಗನರ್ತನ

ನಿತ್ಯೋತ್ಸವ ಎಂಬ ಗ್ರಂಥಗಳನ್ನು ರಚಿಸಿದ್ದಾರೆ.

ಶ್ರೀಕೃಷ್ಣ ಗಾನಂ ಎಂಬ ಗ್ರಂಧವು ಭಾಗವತದ ಭಾಷಾಂತರವೂ ಮತ್ತು ವ್ಯಾಖ್ಯಾನವೂ

ಆಗಿದೆ. ಇದರ ಒಂದು ಭಾಗವು ಮಾತ್ರ ಕೀರ್ತನೆಗಳ ರೂಪದಲ್ಲಿದೆ. ರಾಸಸಪ್ತಂ

ಎಂಬ ಇವರ ಕೃತಿಗಳು ಅನೇಕವಾಗಿವೆ. ತಾಯೇ ಯಶೋದಾ ಎಂಬ ತೋಡೀರಾಗದ

ಕೃತಿಯನ್ನು ಆಗಿನ ಪ್ರಸಿದ್ಧ ನಾಗಸ್ವರ ವಿದ್ವಾಂಸರಾಗಿದ್ದ ಪೆರಿಯ ರುದ್ರಪತಿ ಪಿಳ್ಳೆ

ಎಂಬುವರು ಅಯ್ಯರ್‌ರವರು ಹಾಡುತ್ತಿದ್ದಾಗ ಮರೆಯಲ್ಲಿ ನಿಂತು ಕೇಳಿ ಬರೆದು

ಕೊಂಡು ಪ್ರಚಾರಕ್ಕೆ ತಂದರು. ಅಯ್ಯರ್‌ರವರ ಅಣ್ಣನ ಮಗ ಇವರು ಹಾಡುತ್ತಿದ್ದ

ಕೃತಿಗಳನ್ನು ಬರೆದುಕೊಂಡರು. ಇವುಗಳನ್ನು ಆ ವಂಶದವರಾದ ಮದ್ರಾಸಿನ ಸಂಗೀತ

ವಿದ್ವಾನ್ ಜಿ. ಕೃಷ್ಣಮೂರ್ತಿ ಭಾಗವತರ್ ಎಂಬುವರು ಈಚೆಗೆ ಸ್ವಲ್ಪ ಮಟ್ಟಿಗೆ

ಪ್ರಚಾರಕ್ಕೆ ತಂದರು.
 

ವೆಂಕಟಸುಬ್ಬಯ್ಯರ್‌ರವರು ಶ್ರೀ ಕೃಷ್ಣನ ಸಾಕ್ಷಾತ್ಕಾರ ಪಡೆದರು. ಇವರ

ಕೃತಿಗಳು ಭಕ್ತಿರಸ ಪ್ರಧಾನವಾಗಿವೆ. ಇವುಗಳ ಸಾಹಿತ್ಯ ಮತ್ತು ಪದಜೋಡಣೆ