2023-06-30 07:09:32 by jayusudindra
This page has been fully proofread once and needs a second look.
ನೇರವಾಗಿ ಕಲಿತರು.
ಉಮಯಾಳ್ಳುರಂ ಪಾರಾಂತರವು ಇವರಿಂದ ಬಂದಿದೆ.
ಕೃಷ್ಣ ಭಾಗವತರು ಸ್ವರಬತ್ ವಾದ್ಯವನ್ನು ನುಡಿಸುವುದರಲ್ಲಿ ಪ್ರವೀಣರಾಗಿದ್ದರು.
ಉರಪಾರ್ಶ್ವ
ಇದು ಭರತನಾಟ್ಯದ ಒಂದು ವಿಶೇಷ ಹಸ್ತ ಮುದ್ರೆ.
ಪಲ್ಲವ ಹಸ್ತವು ಎದೆಯಿಂದ ಪಾರ್ಶ್ವಕ್ಕೂ, ಅದೇ ಕಾಲದಲ್ಲಿ ಅರಾಳವು ಪಾರ್ಶ್ವದಿಂದ
ಎದೆಯವರೆಗೂ ಬಂದಲ್ಲಿ ಅದು ಉರಪಾರ್ಶ್ವಮಂಡಲ.
ಅಲ
ಉರುಗಮಣಿ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ ಒಂದು
ಜನ್ಯರಾಗ,
೯೭
ಸ ರಿ ಗ ಮ ಪ ದ ನಿ ಸ
ಸ ನಿ ದ ಸ ನ ಮ ಗ ಮ ರಿ ಸ
ಉಲ್ಬಣ
ಇದು ಭರತನಾಟ್ಯದ ಒಂದು ವಿಶೇಷ ಹಸ್ತ ಮುದ್ರೆ, ಹಸ್ತಗಳನ್ನು
ಮೇಲಕ್ಕೆತ್ತಿ ಅಂಸಗಳ ಮೇಲೆ ಬೆರಳನ್ನಾಡಿಸುವ ಕ್ರಿಯೆ.
ಊ
ಮಧುಸೂದನ, ಕಾಮರಾಜ,
ವಿಲಾಸಿನೀ, ವಿಘ್ನಕರ್ತಾ, ಲಕ್ಷ್ಮಣ ಮುಂತಾದ ಅರ್ಥಗಳಿವೆ.
ಊತ್ತು
ಸುಮಾರು ೩೦೦ ವರ್ಷಗಳ
ಹಿಂದೆ ತಮಿಳುನಾಡಿನ ತಂಜಾವೂರು ಜಿಲ್ಲೆಯ ಪಾಪನಾಶಂ ತಾಲ್ಲೂಕಿನ
ಉತ್ತಕ್ಕಾಡ್ ಎಂಬ ಗ್ರಾಮದಲ್ಲಿ ವೆಂಕಟಸುಬ್ಬಯ್ಯರ್ ಜನಿಸಿದರು. ಇವರ
ವಿಷಯವು ನಿರ್ದಿಷ್ಟವಾಗಿ ಗೊತ್ತಿಲ್ಲವಾದರೂ, ಇವರ ಜೀವನದಲ್ಲಿ ನಡೆದ ಕೆಲವು
ಮುಖ್ಯ ಘಟನೆಗಳು ಮಾತ್ರ ನಮಗೆ ತಿಳಿದು ಬಂದಿವೆ.
ಊತ್ತು ಕ್ಯಾಡ್ ಗ್ರಾಮದಲ್ಲಿ ರಾಮಚಂದ್ರವಾದೂಲರ್ ಎಂಬುವರ ಏಕಮಾತ್ರ
ಪುತ್ರನ ಕಿರಿಯ ಪತ್ನಿ ಕಮಲಾಂಬಾಳ್' ಎಂಬುವರಲ್ಲಿ ಕೃಷ್ಣನ್ ಮತ್ತು ವೆಂಕಟ
ಸುಬ್ಬಯ್ಯರ್ ಎಂಬ ಇಬ್ಬರು ಮಕ್ಕಳು ಜನಿಸಿದರು. ಇವರಿಬ್ಬರೂ ಚಿಕ್ಕಂದಿನಿಂದ
ಆ ಊರಿನ ದೇವರಾದ ಕಾಳಿಂಗನರ್ತನ ಕೃಷ್ಣನ ಭಕ್ತರಾಗಿದ್ದರು. ಹಿರಿಯನಾದ
ಕೃಷ್ಣನ್ ಚಿಕ್ಕಂದಿನಿಂದಲೂ ಪ್ರತಿಭಾವಂತರಾಗಿದ್ದರು. ತಮ್ಮ ಸಂಗೀತದ ಪ್ರಭಾವ
ದಿಂದ ತಾತವಾಲರ್ ಕಳೆದುಕೊಂಡಿದ್ದ ನವಗ್ರಾಮಗಳನ್ನು ಆಗಿನ ಮಹಾರಾಜ
ನಿಂದ ವಾಪಸ್ಸು ಪಡೆದರು. ತಮ್ಮನಾದ ವೆಂಕಟಸುಬ್ಬಯ್ಯರಿಗೆ ಸಂಗೀತಾಭ್ಯಾಸ
ಮಾಡಿಸಿದರು. ಉಪನಯನವಾದ ದಿನದಿಂದಲೇ ಇವರ ಕೃಷ್ಣ ಭಕ್ತಿ ಬೆಳೆಯುತ್ತಾ
ಬಂದಿತು. ಇವರು ಮಾಡಿದ ಕೆಲಸಗಳೆಲ್ಲವೂ ಕೃಷ್ಣಮಯವಾಗಿ ಮಾರ್ಪಾಡಾಗುತ್ತಾ
ಹೋದುವು. ಅಣ್ಣನ ವಿವಾಹವಾದ ನಂತರ ವೆಂಕಟ ಸುಬ್ಬಯ್ಯರ್ ಅವರ ಅನುಮತಿ
ಯನ್ನು ಪಡೆದು ನೀಡಾಮಂಗಲಂನಲ್ಲ, ನಂತರ ಮನ್ನಾರ್ ಗುಡಿಯಲ್ಲಿ ನೆಲೆಸಿದರು.
ಶ್ರೀಕೃಷ್ಣನಲ್ಲಿ ಮನಸ್ಸನ್ನು ನಿಲ್ಲಿಸಿ, ಇಹಜೀವನದ ಕಡೆಗೆ ಸ್ವಲ್ಪವೂ ಗಮನಕೊಡದೆ