2023-06-30 06:32:10 by jayusudindra
This page has been fully proofread once and needs a second look.
ಸೂಚಿಸುತ್ತವೆ.
೯೫
ಉ
ಭರತನಾಟ್ಯದಲ್ಲಿ ರೆಪ್ಪೆಗಳ ವಿವಿಧ ಭೇದ ಲಕ್ಷಣಗಳಿಗೆ ಪುಟಕರ್ಮ
ಅವು ಒಂಭತ್ತು ವಿಧ. ಉದ್ದೇಶವು ಅವುಗಳಲ್ಲಿ ಮೊದಲನೆಯ
ಬಗೆ, ರೆಪ್ಪೆಗಳನ್ನು ಬಿಡಿಸಿರುವ ಕರ್ಮ. ಇದು ಕ್ರೋಧಾದಿಗಳನ್ನು ತೋರಿಸು
ವುದರಲ್ಲಿ ಉಪಯೋಗವಾಗುತ್ತದೆ.
ಉಡು
ಇದೊಂದು ಬಗೆಯ ಡಮರು ವಾದ್ಯ, ಗ್ರಾಮಾಣವಾದ್ಯ.
ಈ ವಾದ್ಯದ ಹೊಳವು, ಅನೇಕ ವೇಳೆ ಜೇಡಿಮಣ್ಣಿನಿಂದ ತಯಾರಿಸುವುದುಂಟು.
ಇದಕ್ಕೆ ಎರಡು ತೋಡಿದ ಮುಖಗಳಿದ್ದ, ಮಧ್ಯಭಾಗದಲ್ಲಿ ಮರಸಂಕುಚಿತವಾಗಿರು
ಎರಡು ಮುಖಗಳಿಗೆ ತೆಳುವಾದ ಚರ್ಮದ ಮುಚ್ಚಳಿಕೆ ಇದೆ. ನೂಲಿನ
ದಪ್ಪದಾರದಿಂದ ಬಿಗಿಯಲ್ಪಟ್ಟಿರುತ್ತದೆ. ಮಧ್ಯದ ಸಂಕುಚಿತ ಭಾಗದಲ್ಲಿ ಮುಚ್ಚಳಿಕೆ
ಯನ್ನು ಬಿಗಿಹಿಡಿದಿರುವ ದಾರಗಳೆಲ್ಲಾ ಸೇರುವಂತೆ ಅವುಗಳ ಸುತ್ತಲೂ ಮತ್ತೊಂದು
ದಪ್ಪದಾರವು ಸುತ್ತಿ ಬಂದು ಅವುಗಳನ್ನು ಬಿಗಿಹಿಡಿದಿರುತ್ತದೆ. ಇದನ್ನು ಎಳೆದರೆ
ಶಬ್ದದ ತೀವ್ರತೆಯು ಹೆಚ್ಚುತ್ತದೆ. ಈ ಸೊಂಟಭಾಗದ ಪಟ್ಟಿಯಿಂದ ಹಿಡಿದು ಬಲ
ಮುಖವನ್ನು ಬೆರಳುಗಳಿಂದ ನುಡಿಸಿ, ಪಟ್ಟಿಯನ್ನು ಅದುಮಿ, ಬಿಟ್ಟು, ನುಡಿಸಿದಾಗ
ವಾದ್ಯದ ನಾದಲ್ಲಿ ಘೋಯ್ ಶಬ್ದ ಬರುತ್ತದೆ. ಇದನ್ನು ದಕ್ಷಿಣ ದೇಶದಲ್ಲಿ ಹಳ್ಳಿಯ
ದೇವಸ್ಥಾನಗಳಲ್ಲಿ ಮತ್ತು ಮಾರಮ್ಮನ ಗುಡಿಯಲ್ಲಿ ನುಡಿಸುವ ರೂಢಿಯಿದೆ. ಈ
ವಾದ್ಯಕ್ಕೆ ತಮಿಳಿನಲ್ಲಿ ಇಡ್ಡೆ ಸುರುಂಗುವರೆ ಎಂದು ಹೆಸರು.
ಉಪಪತಿ
ಭರತ ಮುನಿಯು ಹೇಳಿರುವ ನಾಯಕರಲ್ಲಿರುವ ಭೇದಗಳು
ನಾಲ್ಕು ಮತ್ತು ವಿಭೇದಗಳು ಹದಿನಾಲ್ಕು, ಈ ಎಲ್ಲಾ ನಾಯಕರಲ್ಲಿ ಮೂರು ಭೇದ
ಗಳಿವೆ. ಅವುಗಳಲ್ಲಿ ಒಂದು ವಿಧ ಉಪಪತಿ. ಹೀಗೆಂದರೆ ಆಚಾರವನ್ನು ಮಾರು
ವವನು, ಕುವಿಚಾರಿ, ವ್ಯಾಮೋಹಿತ, ಮತ್ತು ಭೋಗಸದೃಶನಾದವನು.
ಉಪವರ್ಣ
ಉಪವರ್ಣ-
ನಾಟ್ಯಾದಿ ಪ್ರಯೋಗಗಳಲ್ಲಿ ಬಣ್ಣ ಬಣ್ಣದ ಕೆಲಸ ಅಥವಾ
ಅಂಗರಚನವು ಮುಖ್ಯವಾದುದು.
ಇದು ಮೂರು ವಿಧ.
ಮೂರುನಾಲ್ಕು ರೀತಿಯ ಬಣ್ಣಗಳಿಂದ ಅಥವಾ ಬಿಳಿ, ಕೆಂಪು, ಹಳದಿ-ಕೆಂಪು, ನೀಲ
ಮೊದಲಾದುವುಗಳನ್ನು ವಿವಿಧಾಂಶಗಳಿಂದ ಅಂಗವರ್ತನವನ್ನಾಗಿಸುವುದು ಸಹಜವಾದ
ರೂಪವನ್ನು ವ್ಯತ್ತಸ್ತಗೊಳಿಸಿ ತಮಗೆ ಬೇಕಾದಂತೆ ವ್ಯಕ್ತಿಗತವಾದ ಆಕಾರವನ್ನು
ಉಪೇಂದ್ರಮತಿ
ಈ ರಾಗವು ೨೨ನೆಯ ಮೇಳಕರ್ತ ಖರಹರಪ್ರಿಯದ
ಒಂದು ಜನ್ಯರಾಗ.
ಆ : ಸ ಗ ಮ ಪ ದ ನಿ ಸ
ಆ
ಅ : ಸ ದ ಮ ರಿ ಗ ರಿ ಸ