This page has been fully proofread once and needs a second look.

ಓಂ ಹಯಗ್ರೀವಾಯ ನಮಃ
 
Q)
 

 
ಖಂಡೀಭವ
ದ್ಭ​ಹುಲಡಿಂಡೀರ ಬೃಂ ಜೃಂಭಣ । ಸುಚಂಡೀಕೃತೋದಧಿಮಹಾ

ಕಾಂಡಾತಿ ಚಿತ್ರಗತಿ ಶೌಂಡಾದ್ಯ! ಹೈರದ ಭಾಂಡಾಪ್ರಮೇಯ ಚರಿತ ।

ಚಂಡಾ ಶ್ವಕಂಠದ ಶುಂಡಾಲದುರ್ಹೃದಯಗಂಡಾಭಿಖಂಡ ಕರದೋ-
ಶೃಂ

ಶ್ಚಂ
ಡಾಮರೇಶ ಹಯತುಂಡಾಕೃತೇ ! ದೃಶಮಖಂಡಾಮಲಂ ಪ್ರದಿಶ ಮೇ ॥೨॥
 
2
 

 
ತಾತ್ಪರ್ಯ : ನೊರೆಗಳು ತುಂಡು ತುಂಡಾಗಿ ಮುರಿದೇಳುತ್ತ ಭೋರ್ಗರೆಯುವ

ಮಹಾಸಾಗರದ ಅಗಾಧ ಜಲರಾಶಿಯಲ್ಲಿ ಬಹು ವಿಚಿತ್ರವಾಗಿ ಸಂಚರಿಸುವುದರಲ್ಲಿ

ನಿಪುಣನೆ, ಬಲಯುತವಾದ ನಿನ್ನ ಬಾಹುಗಳಿಂದ ಹಯಗ್ರೀವನೆಂಬ ಸೊಕ್ಕಿನ ಸಲಗದ
(ದೈತ್ಯನ) ಕ್ರೂರವಾದ ಹೃದಯ ಮತ್ತು ಗಂಡಸ್ಥಳಗಳನ್ನು ಸೀಳಿದ ಹಯಗ್ರೀವ
ಸ್ವರೂಪನೆ, ನಿನ್ನ ಮಹಿಮೆಯನ್ನಾರು ಬಲ್ಲರು? ಚಿನ್ನದ ಮತ್ತು ದಂತದ ಭರಣ
ಗಳಿಂದ ಶೋಭಿಸುತ್ತಿರುವ, ಜಗದಾದಿ ಕಾರಣ! ದೇವತೆಗಳ ಒಡೆಯ, ನನಗೆ ಅಖಂಡ
ವಾದ ಧೀಶಕ್ತಿಯನ್ನು ಕರುಣಿಸು.
 

 
ಪ್ರತಿಪದಾರ್ಥ : ಖಂಡೀಭವದ್-ತುಂ=ಡು ತುಂಡಾಗಿ ಮುರಿದೇಳುವ, ಬಹುಲ

ಡಿಂಡೀರ ಬಹಳ ನೊರೆಗಳ, ಬೃಂಜೃಂಭಣ ಅಬ್ಬರದಿಂದ ಭೋರ್ಗರೆವ, ಸುಚಂಡೀಕೃತ :

ಅತಿ ಘೋರವಾಗಿ ಮಾಡಲ್ಪಟ್ಟ, ಉದಧಿ ಮಹಾಕಾಂಡ-ಸಮುದ್ರದ ಅಗಾಧ ಜಲ

ದಲ್ಲಿ, ಅತಿಚಿತ್ರಗತಿ =ವಿಚಿತ್ರವಾಗಿ ಸಂಚರಿಸುವುದರಲ್ಲಿ, ಶೌಂಡ =ನಿಪುಣನೆ! ಆದ್ಯ
=ಜಗದಾದಿ ಕಾರಣ! ಹೈಮರದ ಭಾಂಡ -= ಚಿನ್ನದ ಮತ್ತು ದಂತದ ಆಭರಣಗಳಿಂದ
ಶೋಭಿತನೆ! ಅಪ್ರಮೇಯ ಚರಿತ= ಊಹೆಗೂ ಮೀರಿದ ಮಹಿಮೆಯುಳ್ಳ ಸ್ವಾಮಿ!

ಚಂಡಾಶ್ವಕಂಠ ಪ್ರಚಂಡನಾದ ಹಯಗ್ರೀವ ದೈತ್ಯ ಎಂಬ, ಮದಶುಂಡಾಲ ಮದ

ಭರಿತವಾದ ಆನೆಯ, ಹೃದಯ ಗಂಡ= ಕಠಿನವಾದ ಎದೆ ಮತ್ತು ಗಂಡಸ್ಥಲಗಳನ್ನು,
ಅಭಿಖಂಡಕರ =ಭೇದಿಸಲು ತಕ್ಕುದಾದ, ದೋಶ್ಚಂಡ =ಬಾಹುಗಳಿಂದ ಪ್ರಚಂಡನಾದ
ವನೆ, ಅಮರೇಶ ದೇವತೆಗಳ ಒಡೆಯ! ಹಯತುಂಡಾಕೃತೇ ಕುದುರೆಯ
 
ಮುಖ
 
ವುಳ್ಳ ಹಯಗ್ರೀವ ಸ್ವಾಮಿ! ಮೇ = ನನಗೆ, ಅಖಂಡಾಂ=ಪೂರ್ಣವಾದ, ದೃಶಂ
=ದೃಷ್ಟಿಯನ್ನು (ಜ್ಞಾನವನ್ನು) ಆಲಂ= ಸಾಕಷ್ಟು, ಪ್ರದಿಶ =ಕೊಡು.
 

 
ಇದರಲ್ಲಿ ಹಯಗ್ರೀವನೆಂಬ ದೈತ್ಯ ವೇದಗಳನ್ನು ಕದ್ದೊಯ್ದಾಗ ಹರಿಯು ಹಯ

ಗ್ರೀವಾವತಾರವನ್ನು ತಳೆದು ಆ ದೈತ್ಯನನ್ನು ಸಂಹರಿಸಿದ ಕತೆ ಸೂಚಿತವಾಗಿದೆ.
 
2
 

 
ಕಾಂಡ = ನೀರು, ಕಾಂಡೋsಸ್ತ್ರೀ ದಂಡ ಬಾಣರ್ವ ವರ್ಗಾವಸರ ನಾರಿಸು;

ಭಾಂಡಂ = - " ಸ್ಯಾದ್ಯಾಂಡಮಾಭಾಂಡಮಶ್ವಾಭರಣೇಮತ್ರೇ ಮೂಲವಣಿಗ್ದ​ನೇ' ಕುದುರೆಗೆ
 

ತೋಡಿ
ಸುವ ಆಭರಣ. (ಅಮರ)