This page does not need to be proofread.

ಅ ರಿ ಕೆ .
 
ಇದರ
 

 
ಇದರ
 
ಇದು ಶ್ರೀಮದ್ವಾದಿರಾಜ ಶ್ರೀಮಚ್ಚರಣರಿಂದ ರಚಿತವಾದ ದಶಾವತಾರ ಸ್ತುತಿ,

ಇದರಲ್ಲಿ ಅಶ್ವಧಾಟೀ ಬಂಧದ ೩೪ ವೃತ್ತಗಳಿವೆ, ಇದಕ್ಕೆ ದಶಾವತಾರ ಸ್ತುತಿಯೆಂಬ
ಹೆಸರಿದ್ದರೂ ಇದರಲ್ಲಿ ಹಯಗ್ರೀವ, ಧನ್ವಂತರಿ, ನಾರಾಯಣಿ, ಸೀತಾ (ಲಕ್ಷ್ಮಿಮೀ),
ನಾರಾಯಣ ಮುಂತಾದ ಅವತಾರಗಳ ಸ್ತುತಿಯೂ ಬಂದಿದೆ. ಶ್ರೀ ಕೃಷ್ಣ ಮಠದಲ್ಲಿ
ಹಾಗೂ ಇತರ ಮಾಧ್ವ ಪೀಠದ ಮಠಗಳಲ್ಲಿ ಪೂಜಾಕಾಲದಲ್ಲಿ ಇದನ್ನು ಪಠಿಸುವ
ಸಂಪ್ರದಾಯ ಇಂದಿಗೂ ಇದೆ. ಪೂಜಾಕಾಲದಲ್ಲಿ ಈ ಸ್ತೋತ್ರವನ್ನು ಪಠಿಸಿದವರಿಗೆ
ಪರದಲ್ಲಿ ಶ್ರೇಯಸ್ಸಾಗುವುದೆಂಬ ಫಲಶ್ರುತಿಯೂ ಇದರ ಕೊನೆಯಲ್ಲಿದೆ.
ಬಂಧ ತುಸು ಕಠಿನ. ವಿಚಿತ್ರವೂ ಅಪೂರ್ವವೂ ಆದ ಪದಪ್ರಯೋಗಗಳಿವೆ, ಆದರೂ
ಇದಕ್ಕೆ ವಿವರವಾದ ವ್ಯಾಖ್ಯಾನವೊಂದಿಲ್ಲದಿರುವುದು ಕೊರತೆಯೆನಿಸಿತ್ತು. ನನ್ನ ಪೂಜ್ಯ

ಗುರುವರ್ಯರಾದ ದಿ। ಅಗ್ನಿ ಹೋತ್ರಿ ಅಲೆಯೂರು ಸೀತಾರಾಮಾಚಾರ್ಯರು ಅನ್ನ

ಯಾರ್ಥವಿವೃತ್ತಿ ಎಂಬ ವ್ಯಾಖ್ಯಾನವನ್ನು ಬರೆದು ಈ ಕೊರತೆಯನ್ನು ನಿವಾರಿಸಿ

ದ್ದರು. ಅದು ಸಂಸ್ಕೃತದಲ್ಲಿದೆ, ಅದು 1954 ರಲ್ಲಿ ಶ್ರೀ ಸೋದೆ ಮಠದಿಂದ

ಪ್ರಕಟವೂ ಆಗಿತ್ತು. ಕನ್ನಡದಲ್ಲಿ ಇದಕ್ಕೆ ಯಾವ ವ್ಯಾಖ್ಯಾನವೂ ಬಂದಿಲ್ಲ, ಹಾಗೆ

ಪ್ರಕಟವಾಗಿದ್ದರೆ ಅದು ನನಗೆ ತಿಳಿದಿಲ್ಲ, ಹೆಂಗಸರು ಮಕ್ಕಳೂ ಇತರರೂ ಇದನ್ನು

ಹಾಡುವ ರೂಢಿ ಇದೆ. ಇದರ ಭಾವಾರ್ಥ ತಿಳಿಯದೆ ಪಠಿಸಿದಾಗ ಅಲ್ಲಲ್ಲಿ ಲೋಪ

ದೋಷಗಳೂ ಕಾಣಿಸಬಹುದು. ಅರ್ಥ ತಿಳಿದು ಪಠಿಸಿದಾಗ ಹೆಚ್ಚು ಸ್ಪಷ್ಟತೆಯುಂಟಾ

ಗುತ್ತದೆ. ಸಾಮಾನ್ಯ ಜನರಿಗೂ ತಿಳಿಯುವಂತೆ ಇದರ ಭಾವಾರ್ಥವನ್ನು ಬರೆದು

ಪ್ರಕಟಿಸಿದರೆ ಒಳಿತು ಎಂಬ ತಮ್ಮ ಅಪೇಕ್ಷೆಯನ್ನು ಹಲವಾರು ಮಂದಿ ಶ್ರೀ

ಸುಗುಣೇಂದ್ರತೀರ್ಥರ ಮುಂದಿಟ್ಟರು. ಅವರು ಈ ಕೆಲಸವನ್ನು ನನಗೆ ಒಪ್ಪಿಸಿದರು.

ಗುರುಗಳ ಅನುಗ್ರಹವೆಂದು ಭಾವಿಸಿ ನಾನಿದನ್ನು ಒಪ್ಪಿಕೊಂಡೆ. ಶ್ರೀ ವಾದಿರಾಜ

ಯತಿವರ್ಯರ ಪದ್ಯಗಳ ಭಾವವನ್ನು ಸಮಗ್ರವಾಗಿ ಗ್ರಹಿಸುವಷ್ಟು ವೈದುಷ್ಯ

ನನ್ನಲ್ಲಿಲ್ಲವಾದರೂ ಸಂಸ್ಕೃತ ವ್ಯಾಖ್ಯಾನದ ಆಧಾರದ ಮೇಲೆ ನನಗೆ ತಿಳಿದಷ್ಟು

ಬರೆದೇನೆಂಬ ಹುಚ್ಚು ಧೈರ್ಯ ನನ್ನ ಕೆಲಸಕ್ಕೆ ಪ್ರಚೋದಿಸಿತು. ಹಾಗೆ ಬರೆದ
 

 
(iii)