This page has not been fully proofread.

ಓಂ ನಾರಾಯಣಾಯ ನಮಃ
 
ಸಾರಂಗಕೃತ್ತಿಧರ ಸಾರಂಗ ವಾರಿಧರ! ಸಾರಂಗರಾಜ ವರದಾ-
ಸಾರಂ ಗದಾರಿತರಸಾರಂ ಗತಾತ್ಮಮದಸಾರಂ ಗಷಧಬಲಮ್ ।
ಸಾರಂಗವನ್ನು ಸುಮಸಾರಂ ಗತಂ ಚ ತವ ಸಾರಂಗಮಾಂತ್ರಿಯುಗಲಂ
ಸಾರಂಗವರ್ಣಮಪ ಸಾರಂಗತಾಬ್ದ ಮದಸಾರಂಗದಿಂವ ಮಾಮ್ ॥ ೩೩ ॥
ಮಳೆಮುಗಿಲಿನಂತಿರುವವನೂ,
 
ಮುನಿಗಳೆಂಬ ಚಾತಕಪಕ್ಷಿಗಳಿಗೆ
 
ಗಜೇಂದ್ರವರದನೂ, ಗದಾಧರನೂ ಆದ ಶ್ರೀಹರಿಯೇ ! ಭವರೋಗವೆಂಬ ಶತ್ರುವಿನ
ಸೆಳೆತಕ್ಕೆ ಸಿಕ್ಕಿ ದುರ್ಬಲನೂ, 'ನಾನು' ಎಂಬ ಅಹಂಕಾರವೇನೂ ಉಳಿಯದವನೂ,
ಈ ರೋಗದಿಂದ ಮುಕ್ತನಾಗಲು ಯಾವ ಔಷಧವನ್ನು (ಉಪಾಯವನ್ನು) ಕಾಣ
ದವನೂ ಆಗಿ ತಾವರೆಯ ಚೆಲುವನ್ನು ನಿಂದಿಸುವಂಥ ಮತ್ತು ಉತ್ತಮ ಪದವಿಗೆ
(ನಮ್ಮನ್ನು) ಒಯ್ಯುವಂಥ ಚಿತ್ರವರ್ಣದ ನಿನ್ನ ಪಾದಕಮಲಗಳನ್ನು - ತುಂಬಿಯು
ಮಕರಂದಕ್ಕೆ ಹಾತೊರೆಯುವಂತೆ ಈಗ ಮೊರೆಹೊಕ್ಕಿದ್ದೇನೆ. ನನ್ನನ್ನು ರಕ್ಷಿಸು:
 
=
 
-
 
ಪ್ರ. ಪ :
ಸಾರಂಗಕೃತ್ತಿಧರ = ಮೃಗಚರ್ಮಧಾರಿಗಳಾದ ಮುನಿಗಳೆಂಬ,
ಸಾರಂಗ ಚಾತಕಪಕ್ಷಿಗಳಿಗೆ, ವಾರಿಧರ - ಮಳೆಮುಗಿಲಂತಿರುವವನೆ, ಸಾರಂಗರಾಜ
ಗಜೇಂದ್ರನಿಗೆ, ವರದ ವರವಿತ್ತವನೆ, ಗದಿನ್ = ಗದಾಧರನಾದ ಹರಿಯೇ, ತ್ವಂ =
ನೀನು, ಗದಾರಿತರಸಾ ಭವರೋಗವೆಂಬ ಶತ್ರುವಿನ ಸೆಳೆತದಿಂದ, ಅಸಾರಂ -ದುರ್ಬ
ಲನೂ, ಅರಂ ( ಅಲಂ ) ಸಂಪೂರ್ಣವಾಗಿ ( ರಲಯೋರಭೇದಃ ), ಗತಾತ್ಮಮದ
ಸಾರಂ ಅಹಂಭಾವರೂಪದ ಮದವನ್ನು ಕಳೆದುಕೊಂಡ, ಮತ್ತು ಗತೌಷಧ ಬಲಂ
ಇದರ ನಿವೃತ್ತಿಗೆ ಯಾವ ಮದ್ದೂ (ಉಪಾಯವೂ) ಕಾಣದ, (ನನ್ನನ್ನು), ಕುಸುಮ
ಸಾರಂ (ಪ್ರತಿ) = ಮಕರಂದವನ್ನು ಕುರಿತು, ಸಾರಂಗವತ್ = ದುಂಬಿಯಹಾಗೆ, ಅಪ
ಸಾರಂಗತ ಅಪಸರಣ ಹೊಂದಿದ, ಅಬ್ಬ ಮದಸಾರಂ ತಾವರೆಯ ಸೌಂದರ್ಯ
ಮದವುಳ್ಳ ( ತಾವರೆಗಿಂತಲೂ ಚೆಲುವಾದ ) ಮತ್ತು, ಸಾರಂಗಮ ಶ್ರೇಷ್ಠವಾದ
ವೈಕುಂಠಕ್ಕೆ ಕರೆದೊಯ್ಯುವ, ಸಾರಂಗವರ್ಣ೦ =ಚಿತ್ರವರ್ಣವುಳ್ಳ, ತವ ನಿನ್ನ,
ಅಂಘ್ರಯುಗಲಂ = ಪದದ್ವಂದ್ವಗಳನ್ನು ( ಕುರಿತು ), ಗತಂ
ಮಾಂ ನನ್ನನ್ನು, ಅವ ರಕ್ಷಿಸು.
 
ಶರಣುಬಂದಿರುವ,
 
ಇದರಲ್ಲಿ [ನರ] ನಾರಾಯಣಾವತಾರದ ವರ್ಣನೆ ಇದೆ.
 
( ಚಾತಕೇ ಹರಿಣೇ ಪುಂಸಿ ಸಾರಂಗಃ ಶಬಲೇ ತ್ರಿಷು' (ಅಮರ)
"ಸಾರಂಗಶ್ಚಾತಕೇ ಶೃಂಗೇ ಕುರಂಗೇ ಚ ಮತಂಗಜೇ' (ವಿಶ್ವ)
( ಉತ್ತರೋತ್ತರಮುತ್ಕರ್ಷಃ ಸಾರಃ'
 
-
 
=
 
-
 
33