This page has not been fully proofread.

ಸಲಭಕ್ಷ್ಯ ಭಯದಾಕ್ಷಿ ಶ್ರವೋಗಣಜಲಾಕ್ಷೇಪ ಪಾಶಯಮನಂ
ಲಾಕ್ಷಾಗೃಹಜ್ವಲನ ರಹಿಡಿಂಬಬಕ ಭೈಕ್ಷಾನ್ನ ಪೂರ್ವವಿಪದಃ ।
ಅಕ್ಷಾನುಬಂಧ ಭವ ರೂಕ್ಷಾಕ್ಷರ ಶ್ರವಣ ಸಾಕ್ಷಾಹಿತ್ಯವಮತಿ
ಕಾ ನುಯಾನಮಧಮಾಪ ಸೇವನನಭಿಕ್ಷಾಪಹಾಸ-

 
ವಸತಾನಮ್ ॥ ೩೦ ॥
 
ಚಕ್ಷಾಣ ಏವ ನಿಜಪಕ್ಷಾಗ್ರಭೂದಶಶತಾಕ್ಷಾತ್ಮ ಜಾದಿಸುಹೃದಾ-
ಮಾಕ್ಷೇಪಕಾರಿ ಕುನೃಪಾಕ್ಷ ಹಿಣೀ ಶತಬಲಾಭ ದೀಕ್ಷಿತಮನಾಃ ।
ತಾರ್ಕ್ಸ್ಸಿಚಾಪಶರ ತೀಕ್ಷಾ ರಿ ಪೂರ್ವನಿಜ ಲಕ್ಷ್ಮಾಣಿ ಚಾಜ್ಯಗಣಯನ್
ವೃಕ್ಷಾ ಲಯಧ್ವ ಜರಿರಕ್ಷಾಕರೋ ಜಯತಿ ಲಕ್ಷ್ಮೀಪತಿಯದುಪತಿಃ ॥ ೩೧ ॥
 
ತಾ: ಕೌರವರು ಭೀಮನಿಗೆ ವಿಷದ ಲಡ್ಡುಗೆ ತಿನಿಸಿದ್ದು, ಕ್ರೂರ ಸರ್ಪಗಳಿಂದ
ಕಚ್ಚಿಸಿದ್ದು, ಅವನನ್ನು ಹಗ್ಗಗಳಿಂದ ಬಿಗಿದು ನೀರಲ್ಲಿ ಮುಳುಗಿಸಿದ್ದು, ಪಾಂಡವರನ್ನು
ಅರಗಿನ ಮನೆಯಲ್ಲಿರಿಸಿ ಅದಕ್ಕೆ ಬೆಂಕಿ ಕೊಟ್ಟಿದ್ದು, ಬಕ ಹಿಡಿಂಬಾದಿ ರಾಕ್ಷಸರೊಡನೆ
ಭೀಮ ಹೋರಾಡಿದ್ದು, ಏಕಚಕ್ರನಗರದಲ್ಲಿ ಪಾಂಡವರು ಭಿಕ್ಷೆ ಬೇಡಿ ಜೀವಿಸಿದ್ದು,
ಮುಂತಾದ ಹಳೆಯ ಕಷ್ಟಗಳನ್ನೂ ಮತ್ತು ದ್ಯೋತದಲ್ಲಿ ಕೌರವರು ಮರ್ಮಭೇದಕ
ವಾದ ನಿಂದೆಯ ಮಾತುಗಳಿಂದ ಚುಚ್ಚಿ ನುಡಿದುದಲ್ಲದೆ, ಪಾಂಡವರ ಮಡದಿ ಬ್ರೌಪದಿ
ಯನ್ನು ತುಂಬಿದ ಸಭೆಯಲ್ಲಿ ಅವಮಾನ ಮಾಡಿದ್ದು ಇವೆರಡು, ಬಳಿಕ ಪಾಂಡವರ
ಅರಣ್ಯ ಗಮನ, ಅವರು ವಿರಾಟನಂಥ ಅಧಮರಾಜರ ಸೇವೆಗೆ ನಿಂತದ್ದು, ದುರ್ಯೋಧ
ನಾದಿ ದುರ್ಜನರು ಹೆಜ್ಜೆ ಹೆಜ್ಜೆಗೂ ಮಾಡಿದ ಅಪಹಾಸ್ಯ ಇವೆಲ್ಲವನ್ನು ಹಲ್ಲು ಕಚ್ಚಿ
ಕೊಂಡು ನೋಡಿದ ಕೃಷ್ಣ, ಬಳಿಕ ಯುಧಿಷ್ಠಿರ ಭೀಮಾರ್ಜುನಾದಿ ಆತ್ಮೀಯರನ್ನು
ನಿಂದಿಸುವ ದ್ವೇಷಿಗಳಾದ ದುಷ್ಟ ರಾಜರ ಹಿಂಡನ್ನು ಧ್ವಂಸಗೈಯುವ ಸಂಕಲ್ಪದಿಂದ,
ಗರುಡ, ಖಡ್ಗ, ಚಕ್ರ ಮುಂತಾದ ತನ್ನ ಯಾವ ಆಯುಧಗಳನ್ನೂ ಬಯಸದೆ, ನಿರಾ
ಯುಧನಾಗಿಯೇ ಕಪಿಧ್ವಜನಾದ ಪಾರ್ಥನನ್ನು ರಕ್ಷಿಸಲು ಮನಸ್ಸು ಮಾಡಿದ ಆ
ಲಕ್ಷ್ಮೀಪತಿಯಾದ ಶ್ರೀಕೃಷ್ಣನಿಗೆ ನನ್ನ ನಮನವು.
 
30
 
ಪ್ರ. ಪ
ಸಲ ಭಕ್ಷ= ವಿಷಭರಿತವಾದ ಲಡ್ಡಿಗೆ (ತಿನ್ನಿಸಿದ್ದು), ಭಯ
ದಾಕ್ಷಿಶ್ರವೋಗಣ -ಭಯಂಕರವಾದ ವಿಷಸರ್ಪಗಳಿಂದ (ಕಚ್ಚಿಸಿದ್ದು), ಜಲಾಕ್ಷೇಪ
ನೀರಲ್ಲಿ ಮುಳುಗಿಸಿದ್ದು, ಪಾಶಯಮನಂ ಹಗ್ಗಗಳಿಂದ ಬಿಗಿದದ್ದು, ಲಾಕ್ಷಾಗೃಹ
ಜ್ವಲನ ಅರಗಿನ ಮನೆಯಲ್ಲಿಟ್ಟು ಬೆಂಕಿ ಕೊಟ್ಟದ್ದು, ರಹಿಡಿಂಬ ಬಕ ರಾಕ್ಷಸ
ರಾದ ಹಿಡಿಂಬ ಬಕ (ಮುಂತಾದವರೊಡನೆ ನಡೆಸಿದ ಹೋರಾಟ), ಬೈಕ್ಷಾನ=