2023-04-16 03:08:18 by Jayashree
This page has been fully proofread once and needs a second look.
J
ರಾಮಾಶಿರೋಮಣಿ ಧರಾಮಾಸಮೇತ, ಬಲರಾಮಾನುಜಾಭಿಧ ರತಿಂ
ಮೈಮಾಸುರಾಂತಕರ, ತೇ ಮಾರತಾತ ದಿಶ ಮೇ ಮಾಧವಾಂತ್ಘ್ರಿಕಮಲೇ ।
ಕಾಮಾರ್ತಭೌನಮಪುರ ರಾಮಾವಲಿ ಪ್ರಣಯನಾಮಾಕ್ಷಿ ಪೀತ ತನುಭಾ
ಭೀಮಾಹಿನಾಥಮುಖ ಮಾನಿಕಭಿನುತ ಭೀಮಾಭಿನಂವಂದ್ರಯಚರಣ ॥ ೨೯ ॥
ತಾ: ಚೆಲುವೆಯರ ಬೈತಲೆವಣಿಗಳಂತಿರುವ ಶ್ರೀದೇವಿ ಭೂದೇವಿಯರಿಂದ
ಕೂಡಿದ ನೀನು ಬಲಭದ್ರನ ಸೋದರ, ಮಯಪುತ್ರನಾದ ಮೈವ್ಯೋಮಾಸುರನನ್ನು ವಧಿಸಿ
ದವನು. ಮದನಜನಕ, ನರಕಾಸುರನ ನಗರದಲ್ಲಿದ್ದ ಹದಿನಾರುಸಾವಿರದ ನೂರು
ಮಂದಿ ಲಲನೆಯರು ಕಾಮವಶರಾಗಿ ತಮ್ಮ ಮಾದಕವಾದ ಬೊಗಸೆಗಣ್ಣುಗಳಿಂದ
ನಿನ್ನ ಅಂಗಲಾವಣ್ಯವನ್ನು ಹೀರಿದರಲ್ಲವೆ! ರುದ್ರ ಶೇಷ ಮುಂತಾದ ದೇವತೆಗಳೂ
ನಿನ್ನ ಅನುಚರರು, ಭೀಮಸೇನನಿಗೆ ನಿನ್ನಲ್ಲಿ ಗಾಢ ಭಕ್ತಿ, ಇಂಥ ಲಕ್ಷ್ಮೀಪತಿಯ
ಯೆ ನಿನ್ನ ಪಾದಕಮಲಗಳಲ್ಲಿ ನನಗೆ ದೃಢವಾದ ಭಕ್ತಿ ಇರುವಂತೆ ಅನುಗ್ರಹಿಸು.
ಪ್ರ. ಪ : ರಾಮಾಶಿರೋಮಣಿ
ಪ್ರ. ಪ :
=ಲಲನೆಯರ ಮುಂದಲೆ ಮಣಿಯಂತಿರುವ,
ಧರಾ ಮಾ ಸಮೇತ =ಭೂದೇವಿ ಶ್ರೀದೇವಿಯರೊಡನಿರುವವನೆ!, ಬಲರಾಮಾನುಜಾಭಿಧ
= ಬಲರಾಮನ ತಮ್ಮನೆನಿಸಿದವನೆ!, ವ್ಯೋಮಾಸುರಾಂತಕರ =ಮಯಪುತ್ರ ವೋಮಾ
ವ್ಯೋಮಾಸುರನ ಸಂಹಾರಕನೆ, ಮಾರತಾತ -=ಮದನ ಜನಕ, ಕಾಮಾರ್ತ =ಕಾಮಪೀಡಿತೆಯ
ರಾದ, ಭೌಮಪುರ ರಾಮಾವಲಿ= ಭೂಮಿಯ ಮಗ ನರಕಾಸುರನ ನಗರದಲ್ಲಿದ್ದ (ಹದಿ .
ನಾರುಸಾವಿರದ ನೂರುಮಂದಿ) ಸುಂದರಿಯರ, ಪ್ರಣಯ ವಾಮಾಕ್ಷಿ -= ಪ್ರೀತಿ ತುಂಬಿದ
ಬೊಗಸೆಗಂಗಳಿಂದ, ಪೀತ ತನು ಭಾರಿಭಾಃ = ಹೀರಲ್ಪಟ್ಟ ಅಂಗಲಾವಣ್ಯವುಳ್ಳವನೆ!,
ಭೀಮಾಹಿನಾಥ ಮುಖ= ರುದ್ರ, ಶೇಷ ಮೊದಲಾದ, ವೈಮಾನಿಕ =ದೇವತೆಗಳಿಂದ
ಅಭಿನುತ = -ಅಭಿವಂದಿತನೆ,,
ಭೀಮಾಭಿವಂದ್ಯ ಚರಣ = ಭೀಮಸೇನನಿಂದ ನಮಸ್ಕರಿ
ಸಲ್ಪಟ್ಟವನೆ, ಮಾಧವ= ಲಕ್ಷ್ಮೀಪತಿಯೇ, ತೇ =ನಿನ್ನ, ಅಂಫ್ಘ್ರಿಕಮಲೇ = ಚರಣ
ಕಮಲಗಳಲ್ಲಿ, ಮೇ =ನನಗೆ, ರತಿಂ= ಭಕ್ತಿಯನ್ನು, ದಿಶ =ಕೊಡು. (ದಿರ ಶ =ಅತಿ
ಸರ್ಜನೇ ಲೋಟ್ )
ಅಭಿನುತ -ಅಭಿನಂದಿತನೆ,
ಇದರಲ್ಲಿ ಕೃಷ್ಣಾವತಾರದ ಕೆಲವು ಘಟನೆಗಳ ಸೂಚನೆಯಿದೆ.
( ಇಂದಿರಾ ಲೋಕಮಾತಾ ಮಾ ಕ್ಷಿ ರೋದ ತನಯಾ ರಮಾ' (ಅಮರ)
-
29