This page has been fully proofread once and needs a second look.

ರಾಜೀವನೇತ್ರ ವಿದುರಾಜೀವ ಮಾಮವತು ರಾಜೀವ ಕೇತನ ವಶಂ
ವಾಜೀಭಪತ್ತಿ ನೃಪರಾಜೀರಥಾನ್ವಿತ ಜರಾಜೀವಗರ್ವಶಮನ ।
ವಾಜೀಶವಾಹ ಸಿತವಾಜೀಶ ದೈತ್ಯತನುವಾಜೀಶಭೇದಕರದೋ-
ರ್ಜಾಜೀಕದಂಬನವರಾಜೀವ ಮುಖ್ಯಸುಮರಾಜೀಸುವಾಸಿತ ಶಿರಃ ॥ ೨೬ ॥
 
ತಾಃ ಜ್ಞಾನಿಗಳಿಗೆ ಜೀವನಾಧಾರಭೂತನಾದ ರಕ್ಷಕನೆ, ಚತುರಂಗಬಲೋ
ಪೇತನೂ ರಾಜರ ಸಹಾಯವುಳ್ಳವನೂ ಆಗಿದ್ದ ಆ ಜರಾಸಂಧನ ಗರ್ವವನ್ನು ಮುರದವನೆ, ಗರುಡವಾಹನ, ಪಾರ್ಥನ ಸ್ವಾಮಿ, ಕುದುರೆಯ ರೂಪತಳೆದು ಬಂದ ಕೇಶಿ ಎಂಬ ದಾನವನನ್ನು ಕೊಂದವನೆ, ಜಾಜಿ, ಬಯನೆ, ಹೊಸ ತಾವರೆ ಹೂವುಗಳಿಂದ ಪರಿಮಳ ತುಂಬಿದ ಕೇಶವುಳ್ಳ ತಾವರೆಗಣ್ಣನಾದ ಕೃಷ್ಣ ನನ್ನನ್ನು ಕಾಮಬಾಧೆಯಿಂದ ರಕ್ಷಿಸು.
 
ಪ್ರ. ಪ : ರಾಜೀವನೇತ್ರ = ತಾವರೆಗಣ್ಣನೆ, ವಿದುರಾಜೀವ =ಜ್ಞಾನಿಗಳಿಗೆ
(ಅಥವಾ ವಿದುರನಿಗೆ ಜೀವನಾಧಾರಭೂತನಾದ ರಕ್ಷಕನೆ, ವಾಜಿ = ಕುದುರೆ, ಇಭ= ಆನೆ, ಪತ್ತಿ = ಕಾಲಾಳು, ನೃಪರಾಜೀ= ರಾಜರ ಸೈನ್ಯ, ರಥ= ತೇರು ಇವುಗಳಿಂದ, ಅನ್ವಿತ= ಕೂಡಿದ, ಜರಾಜೀವ =ಜರೆಯಿಂದ ಬದುಕಿಸಲ್ಪಟ್ಟ ಜರಾಸಂಧನ, ಗರ್ವಶಮನ = ಮದವನ್ನು ಮುರಿದವನೆ, ವಾಜೀಶವಾಹ= ಗರುಡವಾಹನನೆ (ನಗೌಕೋವಾಜಿ ವಿಕಿರಃ), ಸಿತವಾಜೀಶ= ಶ್ವೇತವಾಹನನಾದ ಪಾರ್ಥನ ಸ್ವಾಮಿಯೆ, ದೈತ್ಯತನು ವಾಜೀಶ= ಕುದುರೆಯ ರೂಪದಲ್ಲಿ ಬಂದ ಕೇಶಿ ಎಂಬ ದೈತ್ಯನ ಶರೀರವನ್ನು, ಭೇದಕರದೋಃ =ಭೇದಿಸಿದ ತೋಳುಗಳುಳ್ಳವನೆ, ಜಾಜೀ =ಜಾಜಿಹೂವು, ಕದಂಬ=ಬಯನೆ, ನವ ರಾಜೀವ= ಹೊಸ ತಾವರೆ, ಮುಖ್ಯ =ಮುಂತಾದ, ಸುಮರಾಜಿ= ಹೂವುಗಳಿಂದ, ಸುವಾಸಿತಶಿರಃ = ಪರಿಮಳಿತವಾದ ತಲೆಗೂದಲುಳ್ಳ, ಶ್ರೀಕೃಷ್ಣ,(ಭವಾನ್ =ನೀನು), ರಾಜೀವಕೇತನ ವಶಂ= ಮೀನಕೇತನನಾದ ಮನ್ಮಥನ ಅಧೀನನಾದ, ಮಾಂ= ನನ್ನನ್ನು, (ರಾಜೀವಃ ಶಕುಲಸ್ತಿಮಿಃ), ಅವತು =ರಕ್ಷಿಸು. (ಎಲ್ಲವು ಸಂಬುದ್ಧಿ ಆದ್ದರಿಂದ ಭವಾನ್ ಎಂಬುದಿಲ್ಲಿ ಅಧ್ಯಾಹಾರ)
 
ಜರಾಸಂಧ ವಧೆ, ಕೇಶಿಗರ್ವಮರ್ದನ, ಮುಂತಾದ ಭಾಗವತದ ಕತೆ ಇಲ್ಲಿ
ಸೂಚಿತವಾಗಿದೆ.
 
( ಜ್ಞಾತಾ ತು ವಿದುರೋ ವಿಂದುಃ' (ಅಮರ)