This page has been fully proofread once and needs a second look.

ಕಂಸಾದಿಕಾಸದವತಂಸಾವನೀಪತಿ ವಿಹಿಂಸಾಕೃತಾತ್ಮ ಜನುಷಂ

ಸಂಸಾರ ಭೂತಮಿಹ ಸಂಸಾರಬದ್ಧ ಮನಸಂ ಸಾರಚಿತ್ಸು ಖತನುಮ್ ।

ಸಂಸಾಧಯಂತಮನಿಶಂ ಸಾತ್ವಿಕವ್ರಜಹಂ ಸಾದರಂ ಬತ ಭಜೇ

ಹಂಸಾದಿ ತಾಪಸರಿರಂಸಾಸ್ಪದಂ ಪರಮಹಂಸಾದಿ ವಂದ್ಯ ಚರಣ
 
ಮ್॥ ೨೫ ॥
 

 
ತಾ:
 
ಕಂಸ ಮೊದಲಾದ ದುಷ್ಟರಾಜರ ಸಂಹಾರಕ್ಕಾಗಿಯೇ ಭೂಲೋಕದಲ್ಲಿ

ಅವತರಿಸಿದವನೂ, ಸರ್ವಶ್ರೇಷ್ಠರೂ ಭಕ್ತೋತ್ತಮರಲ್ಲಿ ವಿಶೇಷವಾದ ಆಸಕ್ತಿಯುಳ್ಳ

ವರೂ ಆದ ಸಾತ್ವಿಕರಿಗೆ ಜ್ಞಾನಾನಂದಮಯವಾದ ಶರೀರವನ್ನು ಕೊಡುವವನೂ

(ಮುಕ್ತಿಪ್ರದನೂ) ಆದ, ಕುಟೀಚಕ ಬಹೂದಕ ಮೊದಲಾದ ಸಂನ್ಯಾಸಿಗಳಿಗೆ ಧ್ಯಾನ

ಯೋಗ್ಯನೂ, ಸನಕಾದಿಮುನಿಗಳಿಂದ ವಂದ್ಯನೂ ಆದ ಕೃಷ್ಣನನ್ನು ನಾನು ಎಡೆಬಿಡದೆ
ಭಕ್ತಿಯಿಂದ ಮನತುಂಬಿ ಭಜಿಸುತ್ತೇನೆ.
 

 
ಪ್ರ.ಪ : ಇಹ ಈ ಭೂಲೋಕದಲ್ಲಿ, ಕಂಸಾದಿಕ ಕಂಸ ಮೊದಲಾದ ಅಸದವ

ತಂಸಾವನೀಪತಿ-=ದುಷ್ಟಶಿಖಾಮಣಿಗಳಾದ ರಾಜರ, ವಿಹಿಂಸಾಕೃತ-=ವಿನಾಶಕ್ಕಾಗಿಯೇ
ಎತ್ತಿದ, ಆತ್ಮಜನುಷಂ= ಸ್ವ ಅವತಾರವುಳ್ಳವನೂ, ಸಂ+ ಸಾರಭೂತಂ - =ಸರ್ವ
ಶ್ರೇಷ್ಠರೂ, ಸಂಸಾರ = ಉತ್ತಮ ಭಕ್ತರಲ್ಲಿ (ಅಂಥ ಪ್ರಪಂಚದಲ್ಲಿ), ಬದ್ಧ ಮನಸಂ
= ನಿವಿಷ್ಟವಾದ ಮನಸ್ಸುಳ್ಳ, ಸಾತ್ವಿಕವ್ರಜಂ = ಸತ್ವಗುಣ ಸಂಪನ್ನರ (ಸಮುದಾಯ

ವನ್ನು, ಸಾರಚಿತು ತ್ಸುಖತನುಂ -= ಒಳ್ಳೆಯ ಜ್ಞಾನಾನಂದಮಯವಾದ ಶರೀರವುಳ್ಳವ

ರನ್ನಾಗಿ, ಸಾಧಯಂತ =ಮಾಡುತ್ತಿರುವವನೂ, ಹಂಸಾದಿ, ಕುಟೀಚಕ ಬಹೂದಕಾದಿ
ತಾಪಸ - ಸಂನ್ಯಾಸಿಗಳ, ರಿರಂಸಾಸ್ಪದಂ= ವಿಹಾರಭೂಮಿಯೂ, ಪರಮಹಂಸಾದಿ =
ಸನಕಾದಿ ಯೋಗಿಗಳಿಂದ, ವಂದ್ಯ ಚರಣಂ= ಪೂಜನೀಯವಾದ ಪಾದವುಳ್ಳವನೂ ಆದ,
ಕೃಷ್ಣಂ= ಕೃಷ್ಣನನ್ನು, ಅಹಂ = ನಾನು, ಅನಿಶಂ= ಸತತವಾಗಿ, ಸಾದರಂ = ಭಕ್ತಿ
ಯಿಂದ, (ಬತ = ಆಹಾ), ಭಜೇ = ಭಜಿಸುತ್ತೇನೆ.
 
-
 

 
ದುಷ್ಟಶಿಕ್ಷಣ ಶಿಷ್ಟ ರಕ್ಷಣ ಇವೇ ಕೃಷ್ಣಾವತಾರದ ಉದ್ದೇಶ, ಸಾತ್ವಿಕರಿಗೆ

ಮಾತ್ರ ಮುಕ್ತಿದಾಯಕ, ಪರಮಹಂಸಾದಿ ಶ್ರೇಷ್ಠ ಮುನಿಗಳು ಮಾತ್ರ ಯಾವಾಗಲೂ
ಕೃಷ್ಣಧ್ಯಾನದಲ್ಲಿ ನಿರತರಾಗಿರುತ್ತಾರೆ ಎಂಬ ಭಾವ.
 
2.5