This page has been fully proofread once and needs a second look.

ಗೋಪಾಲಕೋತ್ಸವ ಕೃತಾಪಾರ ಭಕ್ಶ್ಯ​ರಸ ಸೂಪಾನ್ನ ಲೋಪ ಕುಪಿತಾ-

ಶಾಪಾಲ ಯಾಪಿತಲಯಾಪಾಂಬುದಾಲಿ ಸಲಿಲಾಪಾಯಧಾರಿತ ಗಿರೇ ।

ಸ್ವಾಸಾಂಪಾಂಗ ದರ್ಶನಜ ತಾಪಾಂಗ ರಾಗಯುತ ಗೋಪಾಂಗನಾಂಶುಕಕೃಹೃ ತಿ-

ವ್ಯಾಪಾರಪೌಂ ಶೌಂಡ, ವಿವಿಧಾಪಾಯತಸ್ತ್ವಮವ ಗೋಪಾರಿಜಾತ ಹರಣ ॥ ೨೪ ॥
 

 
ತಾ :
 
ನಂದಗೋಪ ಮೊದಲಾದ ಗೋವಳ ಹಿರಿಯರು ಪ್ರತಿವರ್ಷ ಮಾಡುವ

ಇಂದ್ರೋತ್ಸವಕ್ಕಾಗಿ ವಿವಿಧ ಭಕ್ಷ್ಯಭೋಜ ಶಾಲ್ಯನ್ನಗಳನ್ನು ಅಣಿಗೊಳಿಸಿದಾಗ,

ಕೃಷ್ಣ ಆ ಉತ್ಸವವನ್ನು ತಡೆಹಿಡಿದು, ತಮ್ಮನ್ನು ಕಾಪಾಡುವ ಗೋವರ್ಧನಕ್ಕೆ ಉತ್ಸವ
ವಾಗಲಿ ಎಂದು ಸೂಚಿಸಿದ. ತನಗೆ ಸಲ್ಲಬೇಕಾದ ಪೂಜೆಗೆ ವಿಘ್ನ ಮಾಡಿದನೆಂದು
ಕುಪಿತನಾದ ಇಂದ್ರ, ಅಲ್ಲಿ ಉತ್ಸವವಾಗದಂತೆ ಮಳೆಗರೆಯಲು ಮೇಘಗಳನ್ನೆಲ್ಲ
ಕಳುಹಿಸಿದ. ಎಲ್ಲೆಲ್ಲೂ ಧಾರಾಸಂಪಾತವಾದ ಪ್ರಲಯವೃಷ್ಟಿ ಆಯಿತು. ಗೋವು
ಗಳನ್ನೂ ಗೋವಳರನ್ನೂ ಈ ಅತಿವೃಷ್ಟಿಯಿಂದ ರಕ್ಷಿಸಲು ಕೃಷ್ಣ ಗೋವರ್ಧನ ಗಿರಿ
ಯನ್ನೆ ಕೊಡೆಯ ಹಾಗೆ ಎತ್ತಿಹಿಡಿದ.
 
ಎಲ್ಲೆಲ್ಲೂ
 

 
ಕೃಷ್ಣನ ಓರೆನೋಟದಿಂದಲೇ ಮೋಹಗೊಂಡ ಗೋಪಿಯರಿಗೆ ಮೈಬಿಸಿಯಾ

ಯಿತು, ಅವರು ಚಂದನ ಕುಂಕುಮಾದಿಗಳನ್ನು ಹಚ್ಚಿಕೊಂಡು ಸ್ನಾನಕ್ಕೆ ಇಳಿದೊಡನೆ
ಅವರ ಸೀರೆಗಳನ್ನು ಕದ್ದು ಮರವನ್ನೇರಿ ಕುಳಿತ ಜಾಣ (ಮತ್ತೆ ಶರಣಾಗತರಾಗಿ ನಿಂತ
ಅವರಿಗೆ ವಸ್ತ್ರಗಳನ್ನು ಹಿಂದಿರುಗಿಸಿದ). ಗೋವಳರ ಶತ್ರುಗಳನ್ನು ತರಿದುಹಾಕಿದ,
ಸ್ವರ್ಗದಿಂದ ಪಾರಿಜಾತವೃಕ್ಷವನ್ನು ತಂದು ಭೂಮಿಯಲ್ಲಿ ನೆಟ್ಟ, ಇಂಥ ಅದ್ಭುತ
ಗಳನ್ನು ಮೆರೆದ ಶ್ರೀಕೃಷ್ಣ ನಮ್ಮನ್ನು ಎಲ್ಲ ತರದ ಅಪಾಯಗಳಿಂದ ರಕ್ಷಿಸಲಿ.
 

 
ಪ್ರ. ಪ :
ಗೋಪಾಲಕ =ನಂದ ಮೊದಲಾದವರು ಮಾಡುವ, ಉತ್ಸವಕೃತ
=
ಇಂದ್ರಪೂಜೆಗಾಗಿ ತಯಾರಿಸಿದ, ಅಪಾರ ಭಕ್ಷ-ಶ್ಯ​=ರಸ-ಸೂಪ-ಅನ್ನ ಲೋಪ ವಿಶೇಷ
ವಾದ ಭಕ್ಷ್ಯಗಳು, ಪಾಯಸ, ತೋವೆ, ಶಾಲ್ಯನ್ನ ಮುಂತಾದ ವಸ್ತುಗಳು ತನಗೆ
ತಪ್ಪಿದುದರಿಂದ, ಕುಪಿತ= ಆಕ್ರೋಧಗೊಂಡ, ಆಶಾಪಾಲ​= ದಿಕ್ಷಾಲಕನಾದ ಇಂದ್ರ
ನಿಂದ, ಯಾಪಿತ =ಕಳುಹಿಸಲ್ಪಟ್ಟ, ಲಯಾಪ = ಪ್ರಲಯಕಾಲದಂತೆ ನೀರು ಸುರಿಸುವ,
ಅಂಬುದಾಲಿ= ಮೇಘ ಸಮುದಾಯದ, ಸಲಿಲಾಪಾಯ = ಜಲಪ್ರವಾಹದ ಪರಿಹಾರ
ಕಾಗಿ, ಧಾರಿತಗಿರೇ= ಎತ್ತಿಹಿಡಿದ ಗೋವರ್ಧನಗಿರಿಯುಳ್ಳವನೇ, ಸ್ವಾಪಾಂಗದರ್ಶನಜ
ತಾಪ ತನ್ನ ಕಟಾಕ್ಷವೀಕ್ಷಣಮಾತ್ರದಿಂದುಂಟಾದ ತಾಪ (ಶಮನಕ್ಕಾಗಿ), ಅಂಗರಾಗ
ಯುತ - ಚಂದನಾದಿ ಪರಿಮಲದ್ರವ್ಯ ಹಚ್ಚಿಕೊಂಡ, ಗೋಪಾಂಗನಾ ಗೋಪಿಕಾ ಸ್ತ್ರೀ
 
-
 
ಯರ, ಅಂಶುಕಕೃಹೃತಿ =ವಸ್ತ್ರಾಪಹಾರದ (ಸ್ತ್ರೀಯಾಂ ಕಿನ್), ವ್ಯಾಪಾರಸೌಂಶೌಂಡ ಕೆಲಸ
ದಲ್ಲಿ ನಿಪುಣನೆ, ಗೋಪ-=ಗೋವಳರ, ಅರಿಜಾತ=ಶತ್ರು ಸಮುದಾಯದ, ಹರಣ
=
ವಿನಾಶಕರನೆ [ಅಥವಾ ಗೋ-ಸ್ವರ್ಗಲೋಕದ, ಪಾರಿಜಾತ-=ಪಾರಿಜಾತದ ಮರವನ್ನು,
ಹರಣ =ಅಪಹರಿಸಿಕೊಂಡು ಬಂದವನೆ ತ್ವಂ - =ನೀನು, ವಿವಿಧಾಪಾಯತಃ-=ನಾನಾವಿಧದ
ಅಪಾಯಗಳಿಂದ (ನಮ್ಮನ್ನು), ಅವ= ರಕ್ಷಿಸು.
 

 
 
ಇದರಲ್ಲಿ ಗೋವರ್ಧನೋದ್ಧಾರ, ಗೋಪೀವಸ್ತ್ರಾಪಹಾರ, ಪಾರಿಜಾತಾಪಹರಣ

ಮುಂತಾದ ಭಾಗವತದ ಕತೆ ಸೂಚಿತವಾಗಿದೆ.
 
24