This page has been fully proofread once and needs a second look.

ಓಂ ಕೃಷ್ಣಾಯ ನಮಃ
 

 
ವೃಂದಾವನಸ್ಥ ಪಶುವೃಂದಾವನಂ, ವಿನುತ ವೃಂದಾರಕೈಕ ಶರಣಂ,

ನಂದಾತ್ಮಜಂ, ನಿಹತ ನಿಂದಾಕೃದಾಸುರಜನಂ, ದಾಮಬದ್ಧ ಜಠರಮ್ ।

ವಂದಾಮ​ಹೇ, ವ​ಯಮಮಂದಾವ​ದಾತರುಚಿ ಮಂದಾಕ್ಷಕಾರಿ ವದನಂ,

ಕುಂದಾಲಿದಂತಮುತ ಕಂದಾಸಿತಪ್ರಭತನುಂ, ದಾವರಾಕ್ಷಸಹರಮ್ ॥ ೨೩ ॥
 
9
 

 
ತಾ : ಗೋಕುಲದಲ್ಲಿ ದನಗಳ ಹಿಂಡನ್ನು ರಕ್ಷಿಸುತ್ತಾ, ದೇವತೆಗಳಿಗೂ

ಪ್ರಮುಖ ರಕ್ಷಕನಾಗಿ, ನಿಂದಿಸುವ ರಕ್ಕಸರ ಸೊಕ್ಕನ್ನಡಗಿಸಿ, ಅವರ ಸಂಹಾರಕನಾಗಿದ್ದ
ಆ ದಾಮೋದರ ಕೃಷ್ಣ. ಚಂದ್ರನೂ ನಾಚಿಕೊಳ್ಳುವಂಥ ಚೆಲುವಿನ ಮುಖ ಇವ
ನದು, ಇವನ ದಂತಪಂಕ್ತಿಯೋ ಸಾಲಿಟ್ಟ ದುಂಡುಮಲ್ಲಿಗೆ ಮೊಗ್ಗುಗಳು, ನೋಡಲು
ನೀಲ ಮೇಘಶ್ಯಾಮ, ಕಾಡಿನಲ್ಲಿದ್ದ ದುಷ್ಟ ರಕ್ಕಸರ ಸಂಹಾರವೇ ಇವನ ಕೆಲಸ,. ಹೀಗೆ
ದುಷ್ಟರ ಸಂಹಾರ, ಶಿಷ್ಟರ ಉದ್ಧಾರ ಮಾಡುತ್ತಿರುವ ನಂದಗೋಪನ ಮಗ ಗೋವಿಂದ
ನನ್ನು ನಾವು ನಮಸ್ಕರಿಸುತ್ತೇವೆ.
 

 
ಪ್ರ. ಪ : ವೃಂದಾವನಸ್ಥ = ವೃಂದಾವನದಲ್ಲಿದ್ದ, ಪಶುವೃಂದಾವನಂ
=
ಗೋವುಗಳ ಹಿಂಡಿಗೆ ರಕ್ಷಕನೂ, ವಿನುತ =ಶ್ರೇಷ್ಠರಾದ, ವೃಂದಾರಕ =ದೇವತೆಗಳಿಗೆ,
ಏಕಶರಣಂ =ಮುಖ್ಯ ರಕ್ಷಕನೂ, ನಿಹತ =ಕೊಲ್ಲಲ್ಪಟ್ಟ, ನಿಂದಾಕೃದಾಸುರಜನಂ
=ನಿಂದೆಗೈಯುವ ಕ್ರೂರಜನರುಳ್ಳವನೂ, ದಾಮಬದ್ಧ ಜಠರಂ = ಹಗ್ಗದಿಂದ ಬಿಗಿಯ
 
-
 
ಲ್ಪಟ್ಟ ಉದರಪ್ರದೇಶವುಳ್ಳವನೂ, ಅಮಂದಾವದಾತರುಚಿ= ಅಮಿತ ಶುಭ್ರಕಾಂತಿ
ಯಿಂದ ಬೆಳಗುವ ಚಂದ್ರನಿಗೆ, ಮಂದಾಕ್ಷಕಾರಿ =ಲಕ್ಷೆಯುಂಟುಮಾಡುವಂಥ, ವದನಂ
=ಮುಖವುಳ್ಳವನೂ, ಕುಂದಾಲಿದಂತಂ =ದುಂಡುಮಲ್ಲಿಗೆಯ ಮೊಗ್ಗುಗಳ ಸಾಲಿ
ನಂತೆ ದಂತಪಂಕ್ತಿಯುಳ್ಳವನೂ, ಕಂದ =ನೀರನ್ನು ಕೊಡುವ ಮೋಡದಂತೆ (ಕಂ

ದದಾತೀತಿ), ಅಸಿತಪ್ರಭ ತನುಂ= ನೀಲಕಾಯವುಳ್ಳವನೂ ಆಗಿರುವ, ದಾವ =ವನ
ದಲ್ಲಿದ್ದ, ರಾಕ್ಷಸಹರಂ-= ರಕ್ಕಸರನ್ನು ಕೊಂದ, ನಂದಾತ್ಮಜಂ= ನಂದನಂದನನನ್ನು,
ಉತ.= ಪುನಃ, ವಯಂ-= ನಾವು, ನಂವಂದಾಮಹೇ =ವಂದಿಸುತ್ತೇವೆ.
 
===
 

 
ಇದರಲ್ಲಿ ವೃಂದಾವನ, ಪಶುಪಾಲನೆ, ದುಷ್ಟ ಜನರ ಶಿಕ್ಷೆಯಿಂದ ದೇವತೆಗಳ

ರಕ್ಷಣೆ, ಯಶೋದೆ ಮಗುವಿನ ತುಂಟತನ ತಾಳಲಾರದೆ, ಮಗುವನ್ನು ಹಗ್ಗದಿಂದ

ಕಟ್ಟಿದುದು, ಕೃಷ್ಣನ ಲೋಕೋತ್ತರವಾದ ಲಾವಣ್ಯ ಇವೆಲ್ಲವೂ ಸೂಚಿತವಾಗಿದೆ.
 

 
ದಾನ​=
ಆರಣ್ಯ, ದವದಾಮ್ ವನಾರಣ್ಯವುವಹ್ನೀ (ಅಮರ)
 

 
23