This page has been fully proofread once and needs a second look.

ದೋಷಾssತ್ಮಭೂವ ತುರಾಷಾಡತಿಕ್ರಮಜ ರೋಷಾತ್ಮ
ಭರ್ತವಚಸಾ

ಪಾಷಾಣಭೂತಮುನಿಯೋಷಾ ವರಾತ್ಮತನು ವೇಷಾದಿ ಬಾದಾಯಿ ಚರಣಃ ।

ನೈಷಾದಯೋಷಿದಶುಭೇಷಾಕೃದಂಡಜನಿ ದೋಷಾಚರಾದಿ ಶುಭದೋ

ದೋಷಾಗ್ರ ಜನ್ಮಮೃತಿ ಶೋಷಾಪಹೊsವತು ಸುದೋಷಾಂಘ್ರಘಿೃಜಾತ

ಹನನಾತ್ ॥ ೨೨ ॥
 

 
ತಾ: ಕಾಮಾತುರನಾದ ದೇವೇಂದ್ರ ರಾತ್ರಿ ಹೊತ್ತಿನಲ್ಲಿ ಅಹಲೈಯಲ್ಲಿ ಆತಿ

ಕ್ರಮವನ್ನೆಸಗಿದುದನ್ನು ತಿಳಿದ ಗೌತಮರು ಪತ್ನಿಯಾದ ಅಹಲೈಯನ್ನು ಕೋಪದಿಂದ
ಕಲ್ಲಾಗು ಎಂದು ಶಪಿಸಿದರು. ಹಾಗೆ ಕಲ್ಲಾಗಿ ಬಿದ್ದ ಮುನಿಪತ್ನಿ ಅಹಲೈಯನ್ನು
ತನ್ನ ಚರಣಸ್ಪರ್ಶಮಾತ್ರದಿಂದಲೇ ಪುನಃ ಮೊದಲಿನ ರೂಪಕ್ಕೆ ತಂದ ಮಹಾತ್ಮ,
ಬೇಡಿತಿ (ಶಬರಿ), ಹೆಣವನ್ನು ತಿನ್ನುವ ಹದ್ದು (ಜಟಾಯು), ರಾಕ್ಷಸಕುಲದ ವಿಭೀಷಣ
ಇಂಥವರಿಗೂ ಶುಭವನ್ನೇ ಮಾಡಿದ ಭಕ್ತ ಪರಾಧೀನ, ನಿಷ್ಪಕ್ಷಪಾತಿ, ಹಾಗೆ ಕಲ್ಲೆದೆ
ಯವನೂ ಹೌದು. ತನ್ನ ಯೋಗ್ಯತೆಯನ್ನು ಮೀರಿ ತಪಸ್ಸುಗೈದ ಶೂದ್ರತಪಸ್ವಿ
ಯನ್ನು ಕೈಯಾರೆ ಕೊಂದು ಬ್ರಾಹ್ಮಣನ ಮಗನನ್ನು ಬದುಕಿಸಿ, ಅವನ ಪುತ್ರ
ಶೋಕವನ್ನು ನಿವಾರಿಸಿದ ಕರುಣಾಳು, ಇಂಥ ರಾಮಚಂದ್ರ ನಮ್ಮನ್ನು ಸಲಹಲಿ.
 

 
ಪ್ರ. ಪ : ದೋಷಾ =ರಾತ್ರಿ ಹೊತ್ತು, ಆತ್ಮಭೂವಶ =ಕಾಮಪರವಶನಾದ,

ತುರಾಷಾಟ್= ಇಂದ್ರನ, ಅತಿಕ್ರಮಜ = (ಪಾತಿವ್ರತ್ಯಭಂಗರೂಪದ) ಅತಿಕ್ರಮ

ದಿಂದುಂಟಾದ, ರೋಷ =ಸಿಟ್ಟುಗೊಂಡ, ಆತ್ಮಭರ್ತೃವಚಸಾ ತಮ್= ತನ್ಮ ಪತಿ ಗೌತಮರ
ಶಾಪರೂಪದ ಮಾತಿನಿಂದ, ಪಾಷಾಣಭೂತ =ಕಲ್ಲಾಗಿಬಿದ್ದ, ಮುನಿಯೋಷಾ
=ಮುನಿಪತ್ನಿ ಅಹಲ್ಯಗೆ, ವರಾತ್ಮತನು ವೇಷಾದಿ =ಸುಂದರವಾದ ಮೊದಲಿನ ದೇಹ,
ರೂಪಗಳನ್ನು, ದಾಯಿ =ಕೊಟ್ಟ, ಚರಣ: =ಪಾದಗಳುಳ್ಳವನು, ನೈಷಾದ
ಯೋಷಿತ್ =ಬೇಡತಿಯಾದ ಶಬರಿ, ಅಶುಭೇಷಾಕೃತ =ಅಶುಭವಾದ ಹೆಣವನ್ನು
ತಿನ್ನುವುದೇ ಮುಂತಾದುವುಗಳಲ್ಲಿ ಇಚ್ಛೆ ಮಾಡುವ, ಅಂಡಜನಿ =ಹದ್ದು, ಜಟಾಯು
ಪಕ್ಷಿ, ದೋಷಾಚರಾದಿ =ರಾತ್ರಿಂಚರನಾದ ವಿಭೀಷಣ ಮುಂತಾದ ಭಕ್ತರಿಗೂ,
ಶುಭದಃ= ಮಂಗಲಪ್ರದನೂ, ದೋಷಾ ತನ್ನ ಕೈಯಿಂದಲೇ, ಸುದೋಷ ತುಂಬ
ದೋಷಯುಕ್ತನಾದ, ಅಂಘಿಘಿೃಜಾತ =ಶೂದ್ರ ತಾಪಸನ (ಪದ್ಮಾಂಭ್ಯಾಂ ಶೂದ್ರೋ ಅಜಾ
ಯತ), ಹನನಾತ್ =ಕೊಂದುದರಿಂದ ಅಗ್ರಜನ್ಮ = ಬ್ರಾಹ್ಮಣ (ಪುತ್ರ)ನ, ಮೃತಿ
ಶೋಷಾಪಹಃ = ಸತ್ತದುಃಖವನ್ನು ನಿವಾರಿಸಿದಂಥ ರಾಮಚಂದ್ರನು (ಮಾಂ -
 
ಶೋಷಾಪಹಃ
 
====
 
= ನನ್ನನ್ನು ) ಅವತು ರಕ್ಷಿಸಲಿ.
 
-
 

 
ಇದರಲ್ಲಿ ಅಹಲ್ಯಾ ವೃತ್ತಾಂತ, ಭಕ್ತರಾದ ಶಬರಿ, ಜಟಾಯು, ವಿಭೀಷಣಾದಿ

ಗಳಿಗೆ ಮಾಡಿದ ಅನುಗ್ರಹ, ಶೂದ್ರ ತಪಸ್ವಿಯ ವಧ ಮುಂತಾದ ಘಟನೆಗಳಿಂದ

ರಾಮಚಂದ್ರನ ಗುಣ್ ಣೈಕಪಕ್ಷಪಾತಿತ್ವವನ್ನು ಬಣ್ಣಿಸಿದೆ.
 
22