This page has been fully proofread once and needs a second look.

ಧೀಮಾನಮೇಯ ತನು ಧಾವಾssಮಾಽಽರ್ತ ಮಂಗಲದ ನಾನಾಮಾ ರಮಾ ಕಮಲಭೂ

ಕಾಮಾರಿ ಪನ್ನಗಪ ಕಾಮಾಹಿವೈರಿ ಗುರು ಸೋಮಾದಿವಂದ್ಯ ಮಹಿಮಾ ।

ಸ್ಥೇ
ಮಾದಿನಾಪಗತ ಸೀಮಾsವತಾತ್ಸಖಲ ಸಾಮಾಜರಾವಣರಿಪೂ

ರಾಮಾಭಿಧೋ ಹರಿರಭೌಮಾಕೃತಿಃ ಪ್ರತನಸಾಮಾದಿನೇವೇದವಿಷಯಃ ॥ ೨೧ ॥
 

 

 
ತಾ :
 
ಪ್ರಜ್ಞಾವಂತ, ಅಪರಿಮಿತ ಲಾವಣ್ಯಶಾಲಿ,
 
ದುಃಖಿತರಿಗೆ ಶುಭ ಪ್ರದವಾದ ತಾರಕನಾಮ, ಲಕ್ಷ್ಮಿ, ಬ್ರಹ್ಮ, ಶಿವ, ಶೇಷ,
ಮನ್ಮಥ, ಇಂದ್ರ, ಬೃಹಸ್ಪತಿ, ಚಂದ್ರ ಮೊದಲಾದ ದೇವತೆಗಳು ಕೊಂಡಾಡುವ ಮಹಿಮೆಯುಳ್ಳವ,
ಪ್ರಪಂಚದ ಸೃಷ್ಟಿ ಸ್ಥಿತ್ಯಾದಿ ಕಾರ್ಯಗಳಿಂದ ಅಪ್ರಮೇಯ, ದುಷ್ಟ ಸಚಿವ ಪರಿವೃತ
ನಾದ ರಾವಣನನ್ನು ಸಂಹರಿಸಿದವ, ಅಪ್ರಾಕೃತ ಶರೀರ, ಇಂಥ ವೇದಪ್ರತಿಪಾದ್ಯನಾದ

ರಾಮ ಎಂಬ ಹೆಸರಿನ ಶ್ರೀಹರಿ ನಮ್ಮನ್ನು ರಕ್ಷಿಸಲಿ.
 
ದುಃಖಿತರಿಗೆ ಶುಭ
 
ಮನ್ಮಥ, ಇಂದ್ರ,
 
ಅತಿ
 
-
 

 
ಪ್ರ. ಪ :
ಧೀಮಾನ
ಪ್ರ. ಪ :
= ಪ್ರಜ್ಞಾಶಾಲಿ, ಅಮೇಯ ತನು ಧಾಮಾ
=ಅತಿಶಯವಾದ ಅಂಗಲಾವಣ್ಯಯುಕ್ತ, ಆರ್ತ ಮಂಗಲದ ನಾಮಾ =ಭವ ಪೀಡಿತರಿಗೆ ಶುಭ

ಪ್ರದವಾದ ತಾರಕನಾಮ, ರಮಾ =ಲಕ್ಷ್ಮಿ, ಕಮಲಭೂ= ಬ್ರಹ್ಮ, ಕಾಮಾರಿ =

ಶಿವ, ಪನ್ನಗಪ =ಶೇಷ, ಕಾಮ = ಮನ್ಮಥ, ಅಹಿ ವೈರಿ = ವೃತ್ರಾಸುರನ ಶತ್ರುವಾದ
ಇಂದ್ರ, (ಅಥವಾ ಸರ್ಪಗಳ ವೈರಿಯಾದ ಗರುಡ), ಗುರು = ಬೃಹಸ್ಪತಿ, ಸೋಮಾದಿ :
=ಚಂದ್ರ ಮೊದಲಾದ ದೇವತೆಗಳಿಂದ, ವಂದ್ಯ ಮಹಿಮಾ = ಪೂಜನೀಯವಾದ ಮಹಿಮೆ
ಯುಳ್ಳವನು, ಸ್ಥೇಮಾದಿನಾ= ಪ್ರಪಂಚದ ಸ್ಥಿತಿ, ಲಯ, ಸೃಷ್ಟಿಗಳನ್ನು ಮಾಡು
ವುದರಿಂದ, ಅಪಗತ ಸೀಮಾ= ಸೀಮಾತೀತನು, ಸಖಲಸಾಮಾಜ ರಾವಣ ರಿಪು
= ದುಷ್ಟ ಪರಿವಾರದಿಂದ ಕೂಡಿದ ರಾವಣನನ್ನು ಕೊಂದ, ಅಭೌಮಾಕೃತಿಃ =ಅಪ್ರಾಕೃತ
ಶರೀರವುಳ್ಳ, ಪ್ರತನಸಾಮಾದಿ ವಿಷಯಃ -= ಪ್ರಾಚೀನವಾದ ಸಾಮಾದಿ ವೇದಗಳಿಂದ
ಪ್ರತಿಪಾದ್ಯನೂ ಆದ, ರಾಮಾಭಿಧಃ= ರಾಮ ಎಂಬ ಹೆಸರುಳ್ಳ, ಹರಿ= ನಾರಾ
ಯಣನು (ಮಾಂ= ನನ್ನನ್ನು) ಅವತಾತ್ =ರಕ್ಷಿಸಲಿ.
 

 
ಇದರಲ್ಲಿ ಶ್ರೀರಾಮಚಂದ್ರ ಅಪ್ರಾಕೃತ ಶರೀರವುಳ್ಳ ಸಾಕ್ಷಾತ್ ಪರಮಾತ್ಮ,

ವೇದಪ್ರತಿಪಾದ್ಯ, ಲೋಕೋತ್ತರವಾದ ಲಾವಣ್ಯಪರಿಪೂರ್ಣ, ಸರ್ವದೇವೈಕವಂದ್ಯ
ಎಂಬ ತತ್ವವಿದೆ.
 

 
ಸಾಮಾಜ = ಸಮಾಜ
 
21