This page has not been fully proofread.

ಹುಂಕಾರಪೂರ್ವಮಥ ಟಂಕಾರನಾದಮತಿ ಪಂಕಾವಧಾರ್ಯ ಚಲಿತಾ
ಲಂಕಾ ಶಿಲೋಚ್ಚಯ ವಿಶಂಕಾಪತದುರಶಂಕಾಸ ಯಸ್ಯ ಧನುಷಃ ।
ಲಂಕಾಧಿಪೋನನುತ ಯಂ ಕಾಲರಾತ್ರಿಮಿವ ಶಂಕಾ ಶತಾಕುಲ ಧಿಯಾ
ತಂ ಕಾಲದಂಡಶತಸಂಕಾಶಕಾರ್ಮುಕಶಶಾಂಕಾನ್ವಿತಂ ಭಜ ಹರಿಮ್ ॥ ೨೦ ॥
 
ರಾಮಚಂದ್ರ ಒಮ್ಮೆ ಹೂಂಕರಿಸಿ ಧನುಷ್ಟಂಕಾರ ಮಾಡಿದ್ದನ್ನು ಕೇಳಿದ
ಕೂಡಲೇ, ಪಾಪಿಗಳಿಂದ ತುಂಬಿದ ಲಂಕಾ(ಭಿಮಾನಿ ದೇವತೆ), ಇದು ಪರ್ವತದ ಮೇಲೆ
ಬಿದ್ದ ಬರಸಿಡಿಲೆಂದು ಭ್ರಮಿಸಿ ನಡುಗಿತು. ರಾವಣನೋ ನೂರಾರು ಚಿಂತೆಗಳಿಂದ
ತಲೆಕೆಡಿಸಿಕೊಂಡು ರಾಮನನ್ನು ಸಾಕ್ಷಾತ್ ಯಮನೆಂದೇ ಬಗೆದ. ಯಮದಂಡ
ದಂಥ ಧನುರ್ಬಾಣಗಳನ್ನು ತಳೆದ ಅಂಥ ನಾರಾಯಣ ಸ್ವರೂಪನಾದ ಶ್ರೀರಾಮನನ್ನು
(ಎಲೋ ಮನವೇ) ಧ್ಯಾನಿಸು.
 
ಪ್ರ. ಪ ಅಥ ಮತ್ತು ಯಸ್ಯ ಧನುಷಃ ಯಾರ ಬಿಲ್ಲಿನ, ಹುಂಕಾರ
ಪೂರ್ವಂ= ಹುಂ ಎಂದ ಬಳಿಕ, ಟಂಕಾರನಾದಂ ಠಣ್ ಎಂಬ ಶಬ್ದವನ್ನು, ಅವ
ಧಾರ್ಯ -ಕೇಳಿ, ಅತಿಪಂಕಾ ಬಹುಲ ಪಾಪಭೂಮಿಯಾದ, ಲಂಕಾ – ಲಂಕಾ
ನಗರಿಯು (ತದಧಿಷ್ಠಾನ ದೇವತೆಯೂ), ಶಿಲೋಚ್ಚಯೇ ಪರ್ವತದಲ್ಲಿ, ವಿಶಂಕಂ
ನಿಸ್ಸಂದೇಹವಾಗಿ, ಆಪತತ್ =ಬೀಳುತ್ತಿರುವ, ಭಿದುರ ಶಂಕಾ -ಸಿಡಿಲೆಂದು ಭ್ರಾಂತಿ
ಯಿಂದ, ಚಲಿತಾ ನಡುಕವುಳ್ಳುದಾಗಿ, ಆಸ= ಆಯಿತೋ, (ಮತ್ತು) ಲಂಕಾಧಿಪಃ
ರಾವಣನೂ, ಶಂಕಾಶತಾಕುಲಿತ ಧಿಯಾ ನೂರಾರು ಚಿಂತೆಗಳಿಂದ ಸಂಭ್ರಾಂತವಾದ
ಬುದ್ಧಿಯುಳ್ಳವನಾಗಿ(ಯಿಂದ), ಯಂ =ಯಾವ ರಾಮನನ್ನು, ಕಾಲರಾತ್ರಿಮಿವ
ಕಾಲಮೃತ್ಯುವನ್ನೆಂಬಂತೆ, ಅವನುತ ಭಾವಿಸಿದನೋ, ತಂ =ಅಂಥ, ಕಾಲದಂಡ
ಶತ ಸಂಕಾಶ ನೂರಾರು ಯಮನ ದಂಡಗಳಿಗೆ ಸಮಾನವಾದ, ಕಾರ್ಮುಕ ಶರಾಂ
ಕಾನ್ವಿತಂ = ಬಿಲ್ಲು ಬಾಣಗಳ ಚಿಹ್ನೆಗಳಿರುವ, ಹರಿಂ ನಾರಾಯಣಸ್ವರೂಪನಾದ
ರಾಮನನ್ನು (ಎಲೆ ಮನವೇ), ಭಜ ಸೇವಿಸು.
 
-
 
20
 
www.
 
-
 
ಇದರಲ್ಲಿ ರಾಮನ ವ್ಯಕ್ತಿತ್ವ ಮತ್ತು ರಾಮನು ಲಂಕೆಗೆ ಬಂದ ವಿಚಾರ ಕೇಳಿ
ರಾವಣನಿಗುಂಟಾದ ಆತಂಕ ಇತ್ಯಾದಿ ಸೂಚಿತವಾಗಿದೆ.