This page has not been fully proofread.

ತೂಣೀರ ಕಾರ್ಮುಕ ಕೃಪಾಣೀಕಿಣಾಂಕ ಭುಜಪಾಣೀ ರವಿಪ್ರತಿಮಭಾ
ಕೊಣೀಧರಾನಿಭ ಘೋಮುಖಾದಿ ಘನವೇಣೀ ಸುರಕ್ಷಣಕರಃ ।
ಶೋಣೀಭವನ್ನಯನ ಕೋಣೀಜಿತಾಂಬುನಿಧಿ ಪಾಣೀರಿತಾರ್ಹಣಮಣಿ-
ಶ್ರೇಣೀತಾಂಫ್ರಿರಿಹ ವಾಣೀಶನುವರವಾಣೀಸ್ತುತೋ ವಿಜಯತೇ ॥೧೯॥
 
ತಾ : ಬತ್ತಳಿಕೆ, ಬಿಲ್ಲು, ಖಡ್ಗ ಇವನ್ನು ಹಿಡಿದು ಹಿಡಿದು ಜಡ್ಡು ಗಟ್ಟಿದ
ತೋಳು ಮತ್ತು ಕೈಗಳುಳ್ಳವನಾದರೂ ರಾಮ ಸೂರ್ಯನಂತೆ ಪ್ರಖರವಾದ ತೇಜ
ಸುಳ್ಳವನು. ಪರ್ವತದಂತೆ ಮಹಾಕಾಯರಾದ ಕಪಿಗಳ ಸೈನ್ಯದ ರಕ್ಷಣೆಯ ಭಾರ
ಹೊತ್ತವನು, ಒಮ್ಮೆ ಕೋಪದಿಂದ ಕಣ್ಣು ಕೆಂಪಗಾದಾಗ ಸಮುದ್ರದೇವ ಶ್ರೀರಾಮನ
ಪಾದಗಳನ್ನು ಮುಚ್ಚುವಷ್ಟು ರತ್ನರಾಶಿಗಳನ್ನು ಉಪಹಾರವಾಗಿ ತಂದು ಸುರಿಯ
ಲಿಲ್ಲವೆ? ಮೂಲರಾಮಾಯಣದಂಥ ರಾಮಚರಿತೆಯನ್ನು ಹಾಡುವುದರಲ್ಲಿ ಕೃತಾರ್ಥ
ನಾದವನು ಹನುಮಂತ, ಇಂಥ ಮರ್ಯಾದಾ ಪುರುಷೋತ್ತಮನಾದ ರಾಮನೇ
ಸರ್ವೋತ್ಕೃಷ್ಟನಾದ ಭಗವಂತ.
 
-
 
ಪ್ರ. ಪ :
ತೂಣೀರ ಕಾರ್ಮುಕ ಕೃಪಾಣೀ = ಬತ್ತಳಿಕೆ, ಬಿಲ್ಲು, ಖಡ್ಗ
ಇವುಗಳನ್ನು ಧರಿಸುವುದರಿಂದುಂಟಾದ, ಕಿಣಾಂಕ ಭುಜಪಾಣಿಃ : ಕಲೆಯಿಂದ ಅಂಕಿತ
ವಾದ ತೋಳು ಕೈಗಳುಳ್ಳವನೂ, ರವಿಪ್ರತಿಮ ಭಾಃ = ಸೂರ್ಯಸಮಾನವಾದ
 
=
 
ತೇಜೋವಂತನೂ, ಕೊಣೀಧರಾಲಿ ನಿಭ= ಪರ್ವತಶ್ರೇಣಿಯಂತಿರುವ, ಘೋಣಿ
ಮುಖಾದಿ ಕಪಿಗಳೇ ಮೊದಲಾದವರ, ಘನವೇಣಿ ಮಹಾಸೇನೆಯ, ಸುರಕ್ಷಣ
ಕರಃ =ರಕ್ಷಣೆ ಮಾಡುವವನೂ, ಶೋಣೀಭವತ್ = ಕ್ರೋಧದಿಂದ ಕೆಂಪಾದ, ನಯನ
ಕೋಣೀಜಿತ ಕಡೆಗಣ್ಣ ನೋಟದಿಂದಲೇ ವಶಂವದನಾದ, ಅಂಬುನಿಧಿ =ಸಮುದ್ರಾಭಿ
ಮಾನಿ ವರುಣನ, ಪಾಣಿ ಕೈಗಳಿಂದ, ಈರಿತ ಒಪ್ಪಿಸಲ್ಪಟ್ಟ, ಅರ್ಹಣಮಣಿಶ್ರೇಣಿ
ಉಪಹಾರರೂಪವಾದ ರತ್ನರಾಶಿಯಿಂದ,
ವೃತಾಂಘ್ರ =ಮುಚ್ಚಲ್ಪಟ್ಟ ಪಾದ
ಭಾರತೀಪುತ್ರನಾದ ಹನುಮಂತನ, ವರವಾಣಿ
ಮೂಲರಾಮಾಯಣಾದಿ ವರ್ಣನೆಗಳಿಂದ ಕೊಂಡಾಡಲ್ಪಟ್ಟವನೂ ಆದ
ರಾಮಚಂದ್ರನೇ, ವಿಜಯತೇ = ಸರ್ವೋತ್ಕೃಷ್ಟನಾದ ಸ್ವಾಮಿ, (ವಾಣೀಶ ಸೂನು
ಎಂಬಲ್ಲಿ ಜಾಂಬವಂತನಿಂದ ಸ್ತುತನಾದವನೆಂದೂ ಅರ್ಥ).
 
ಗಳುಳ್ಳವನೂ, ವಾಣೀಶಸೂನು
ಸ್ತುತಃ
 
-
 
ಇದರಲ್ಲಿ ರಾಮನ ರೂಪ ಗುಣಗಳಲ್ಲದೆ, ಕಪಿಸೈನ್ಯದ ರಕ್ಷಕ, ಎಂಬುದೂ ಸೇತು
ರಚಿಸಲು ಸಮುದ್ರ ದಾರಿ ಬಿಡದಿರುವಾಗ ರಾಮನಿಗೆ ಉಂಟಾದ ಕ್ರೋಧ, ವರುಣನ
ಶರಣಾಗತಿ, ಹನುಮಂತ ಮಾಡಿದ ರಾಮಸ್ತುತಿ ಇವು ಸೂಚಿತವಾಗಿವೆ.
 
ಘೋಣಿ= ಹಂದಿ, ಕಪಿ,
 
19