This page has not been fully proofread.

3
 
KN
 
ಲೋಲಾಕ್ಷಪೇಕ್ಷಿತ ಸುಲೀಲಾ ಕುರಂಗ ವಧಖೇಲಾಕುತೂಹಲ ಗತೇ
ಸ್ವಾಲಾಪಭೂಮಿಜನಿ ಬಾಲಾಪಹಾರ್ಯನುಜಪಾಲಾದ್ಯ, ಭೋ! ಜಯ ಜಯ
ನಾಲಾಗ್ನಿದಗ್ಧ ಪುರಶಾಲಾನಿಲಾತ್ಮಜನಿ ಫಾಲಾ ಪುಲರಜೋ
ನೀಲಾಂಗದಾದಿ ಕಪಿಮಾಲಾ ಕೃತಾಲಿ ಪಥಮೂಲಾಭ್ಯತೀತ ಜಲಧೇ ॥ ೧೮ ॥
 

 
ತಾ: ಸೀತೆ ಬಯಸಿದ ಹೊಂಬಣ್ಣದ ಚಿಗರೆಯನ್ನು ಕೊಲ್ಲಲು ವಿಚಿತ್ರಚಾರಿ
ಯಿಂದ ಗಮಿಸಿದವನೆ, ಮಧುರಭಾಷಿಣಿಯಾದ ಸೀತೆಯನ್ನು ಅಪಹರಿಸಿದ ರಾವಣನ
ತಮ್ಮ [ನಾದ ವಿಭೀಷಣ]ನನ್ನು ಲಂಕೆಯ ರಾಜ್ಯವಿತ್ತು ಸಲಹಿದವನೆ, ಆದಿಪುರುಷನೆ,
ಲಂಕೆಯನ್ನು ತನ್ನ ಬಾಲದ ಬೆಂಕಿಯಿಂದ ಸುಟ್ಟುರುಹಿದ ಹನುಮಂತನು ನಿನ್ನ ಪಾದ
ತಲದ ಧೂಲಿಯನ್ನು ಹಣೆಯಲ್ಲಿ ಹಚ್ಚಿಕೊಂಡನಲ್ಲವೆ;! ನೀಲ, ಅಂಗದ ಮೊದಲಾದ
ಕಪಿವೀರರು ಕಟ್ಟಿದ ಸೇತುವಿನಿಂದಾಗಿ ಸಮುದ್ರವನ್ನು ದಾಟಿದ ಶ್ರೀ ರಾಮಚಂದ್ರ
ನಿನಗೆ ಜಯವಾಗಲಿ.
 
ಪ್ರ. ಪ : ಲೋಲಾಕ್ಷಿ - ಚಂಚಲನೇತ್ರೆ (ಸುಂದರಿ)ಯಾದ ಸೀತೆಯಿಂದ,
ಅಪೇಕ್ಷಿತ =ಬಯಸಲ್ಪಟ್ಟ, ಸುಲೀಲಾ ಕುರಂಗ ಚತುರವಾದ ಚಿನ್ನದ ಚಿಗರೆಯ,
ವಧ= ಸಂಹಾರಕ್ಕಾಗಿ, ಖೇಲಾಕುತೂಹಲಗತೇ ಕುತೂಹಲಕರವಾದ ಲೀಲೆಯಿಂದ
ಓಡಿದವನೆ!, ಸ್ವಾಲಾಪ =ಮಧುರವಾಗಿ ಮಾತಾಡುವ, ಭೂಮಿಜನಿ ಭೂಮಿಯಲ್ಲಿ
ಹುಟ್ಟಿದ, ಬಾಲಾ = ಬಾಲೆ (ಸೀತೆಯನ್ನು, ಅಪಹಾರಿ ಕದ್ದ (ರಾವಣನ),
ಅನುಜಪಾಲ =ತಮ್ಮ (ವಿಭೀಷಣ)ನನ್ನು ರಕ್ಷಿಸಿದವನೆ, ಆದ್ಯ ಜಗದಾದಿ ಕಾರಣನೆ,
ಬಾಲಾಗ್ನಿ =ಬಾಲಕ್ಕೆ ಹಚ್ಚಿದ ಬೆಂಕಿಯಿಂದ, ದಗ್ಧಪುರ ಶಾಲಾ ಲಂಕಾಪುರದ ಮನೆ
ಗಳನ್ನು ಸುಟ್ಟ, ಅನಿಲಾತ್ಮಜನಿ - ವಾಯುಪುತ್ರ ಹನುಮಂತನಿಂದ, ಫಾಲಾ
ಲಲಾಟದಲ್ಲಿ ಸ್ವೀಕೃತವಾದ, ಸತ್ತಲ ರಜಃ ಪಾದತಲದ ಧೂಳಿಯುಳ್ಳವನೆ,
 
ನೀಲಾಂಗದಾದಿ ನೀಲ, ಅಂಗದ ಮೊದಲಾದ, ಕಪಿಮಾಲಾ =ಕಪಿಗಳ ನೆರವಿಯಿಂದ,
 
18
 
=
 
-
 
-
 
.
 
ಕೃತ ನಿರ್ಮಿತವಾದ, ಆಲಿಪಥ =ಸೇತುಮಾರ್ಗದ, ಮೂಲ= ನಿಮಿತ್ತವಾಗಿ, ಅಭ್ಯ
ತೀತ ಜಲಧೇ ಸಮುದ್ರವನ್ನು ದಾಟಿದ ಶ್ರೀ (ಭೋ) ರಾಮಚಂದ್ರ ನಿನಗೆ, ಜಯ
ಜಯ ಜಯಕಾರವು.
 
ಇದರಲ್ಲಿ ಮಾರೀಚವಧೆ, ಸೀತಾಪಹಾರ, ಲಂಕಾದಹನ, ಸೇತು ನಿರ್ಮಾಣ,
ಲಂಕಾಗಮನ ಎಂಬ ರಾಮಾಯಣದ ಘಟನೆಗಳ ಉಲ್ಲೇಖವಿದೆ.
 
ಆಲಿಃ = ಸೇತುವೆ, 'ಸೇತುರಾಲ್ ಯಾಂ ಪುಮಾನ್' (ಅನುರ)