This page has not been fully proofread.

ಶಂಪಾಭಚಾಪಲವ ಕಂಪಾಸ್ತ ಶತ್ರುಬಲ ಸಂಪಾದಿತಾಮಿತಯಶಾಃ
ಶಂ ಪಾದತಾನರಸ ಸಂಪಾತಿನೆಲವನುಕಂಪಾರಸೇನ ದಿಶ ಮೇ ।
ಸಂಪಾತಿಪಕ್ಷಿಸಹಜಂ ಪಾಪರಾವಣಹತಂ ಪಾವನಂ ಯದಕೃಥಾಃ
ತ್ವಂ ಪಾಪಕೂಪಪತಿತಂ ಪಾಹಿ ಮಾಂ ತದಪಿ ಪಂಪಾಸರಸ್ಕಟ ಚರ
 
ತಾ: ಮಿಂಚಿನಬಳ್ಳಿಯಂತೆ ಕಣ್ಣು ಕೋರೈಸುವ ಬಿಲ್ಲಿನ ಟಂಕಾರಮಾತ್ರ
ದಿಂದಲೇ ಶತ್ರುಗಳ ಸದ್ದಡಗಿಸಿ, ಅಮಿತಯಶಃಶಾಲಿಯಾದ ಹೇ ರಾಮಚಂದ್ರ! ನಿನ್ನ
ಪಾದಕ್ಕೆರಗಿದ ನನ್ನಲ್ಲಿ ದಯಾರಸವನ್ನು ಸುರಿಸಿ ಸುಖವನ್ನು ನೀಡು.
 
ಹೇ ಪಂಪಾ
 
ತಟಾಕ ತೀರಚಾರಿಯಾದ ರಾಮಚಂದ್ರ! ನೀನು ಆ ಪಾಪಿ ರಾವಣನಿಂದ ಹತನಾದ
ಜಟಾಯುವಿಗೆ, ಅಂತ್ಯಕ್ರಿಯೆಯನ್ನು ನಿನ್ನ ಕೈಯಾರೆ ಮಾಡಿ ಮೋಕ್ಷವನ್ನು ಹೇಗೆ
ಕರುಣಿಸಿದೆಯೋ ಹಾಗೆ, ಪಾಪದ ಮಡುವಿನಲ್ಲಿ ಮುಳುಗಿರುವ ನನ್ನನ್ನೂ ಕೈ ಹಿಡಿದು
ಎತ್ತಿಕೋ ಸ್ವಾಮಿ!
 
ಪಾದತಾಮರಸ ಸಂಪಾತಿನಃ
 
ಪ್ರ. ಪ ಶಂಪಾಭ -ಮಿಂಚಿನಂತೆ ಹೊಳೆಯುವ, ಚಾಪ
ಬಿಲ್ಲಿನ, ಲವ
ಕಂಪ ಈಷನ್ಮಾತ್ರ ಚಲನದಿಂದಲೇ, ಅಸ್ತಶತ್ರುಬಲ ನಿರಸ್ತವಾದ ವೈರಿಸಮೂಹ
ದಿಂದ, ಸಂಪಾದಿತ ಗಳಿಸಲ್ಪಟ್ಟ, ಅಮಿತಯಶಾಃ =ಬಹಳ ಯಶಸ್ಸುಳ್ಳ ನೀನು,
ಚರಣಕಮಲಗಳಿಗೆ ಯಾವಾಗಲೂ ವಂದಿಸುವ,
ದಯಾರಸದಿಂದ, ಅಲಂ.
ಮೇ ನನಗೆ (ಶೇಷೇ ಷಷ್ಠಿ), ಅನುಕಂಪಾರಸೇನ
ಸಾಕಷ್ಟು, ಶಂ =ಸುಖವನ್ನು, ದಿಶ ಕೊಡು, ಪಂಪಾಸರಟಚರ= ಪಂಪಾಸರೋ
ವರದ ತೀರದಲ್ಲಿರುವವನೆ, ಊಂ= ನೀನು, ಯತ್ =ಯಾವ ರೀತಿಯಿಂದ, ಪಾಪ
ರಾವಣಹತಂ ಪಾಪಿಯಾದ ರಾವಣನಿಂದ ಹತನಾದ, ಸಂಪಾತಿಪಕ್ಷಿಸಹಜಂ
ಸಂಪಾತಿಯ ಸೋದರನಾದ ಜಟಾಯುವನ್ನು (ಪಕ್ಷಿಯನ್ನು), ಪಾವನಂ = ಸದ್ಗತಿ
ಮಾಡಿದೆಯೋ, ತತ್ =ಆ ರೀತಿ
ಯನ್ನು ಕೊಟ್ಟು ಪೂತನನ್ನಾಗಿ, ಅಕೃಥಾಃ
ಯಿಂದಲೇ, ಪಾಪಕೂಪ ಪತಿತಂ ಪಾಪದ ಬಾವಿಯಲ್ಲಿ ಬಿದ್ದು ಮೇಲೇಳಲಾಗದ,
ಮಾನಸಿ ನನ್ನನ್ನೂ, ಪಾಹಿ =ಉದ್ಧರಿಸಿ, ರಕ್ಷಿಸು. [ಪಾ= ರಕ್ಷಣೇ
 
-
 
। ೧೭ ॥
 
=
 
-
 
ಇದರಲ್ಲಿ ರಾಮನ ಲೋಕೋತ್ತರವಾದ ಪ್ರಭಾವ, ಶೌರ್ಯಾತಿಶಯ, ಪಕ್ಷಿ
ರಾಜ ಜಟಾಯುವಿಗೆ ತನ್ನ ಕೈಯಾರೆ ಅಗ್ನಿಸಂಸ್ಕಾರಮಾಡಿ ಮುಕ್ತಿಯನ್ನು ಕರುಣಿ
 
ಸಿದ ಕತೆ ಸೂಚಿತವಾಗಿದೆ.
 
17