This page has not been fully proofread.

ರಾಮೇ, ಸ್ವಣಾಂ ಹೃದಭಿರಾಮೇ, ನರಾಶಿಕುಲಭೀಮೇ, ಮನೋ
ಗೋಮೇದಿನೀಜಯಿ ತಪೋsಮೇಯ ಗಾಧಿಸುತ ಕಾಮೇ
ಶ್ಯಾಮೇ, ಸದಾ ತ್ವಯಿ, ಜಿತಾಮೇಯತಾಪಸಜರಾಮೇ, ಗತಾಧಿಕಸಮೇ
ಭೀಮೇಶಚಾಪದಲನಾಮಯಶೌರ್ಯ ಜಿತನಾಮೇಕ್ಷಣೇ, ವಿಜಯಿನಿ ॥೧೪॥
 
ನಿವಿಷ್ಟ ಮನಸಿ ।
 
ತಾ: ಶ್ಯಾಮಲವರ್ಣದ ಶ್ರೀ ರಾಮಚಂದ್ರ ನರರ ಮನಸೂರೆಗೊಳ್ಳುವ
ಸುರೂಪಿ, ರಾಕ್ಷಸರಿಗೆ ಭಯಂಕರನಾಗಿರುವವನು, ಭೂ ಮೈಮಗಳನ್ನು ಜಯಿಸು
ವಂಥ ತಪಸ್ಸಿನಿಂದ ಊಹೆಗೆ ಮೀರಿದ ಸಾಮರ್ಥ್ಯಶಾಲಿಯಾದ ವಿಶ್ವಾಮಿತ್ರನ ಮನೋ
ಗತವನ್ನು ನೆರವೇರಿಸಿದವನು, ಅಜೇಯನಾದ ಪರಶುರಾಮನನ್ನೂ ಗೆದ್ದವನು, ಇವ
ನಿಂದ ಅಧಿಕರಾದವರಾಗಲಿ ಇವನಿಗೆ ಸಮಾನರಾಗಲಿ ಇಲ್ಲ. ಭಯಂಕರವಾದ ಶಿವ
ಧನುಸ್ಸನ್ನು ಮರಿದು ತನ್ನ ಪರಾಕ್ರಮದಿಂದಲೇ ಸೀತೆಯ ಕೈಹಿಡಿದ ಮಹಾತ್ಮ,
ಸದಾ ವಿಜಯಶಾಲಿಯಾದ ಈ ಶ್ರೀರಾಮನಲ್ಲಿ ನನ್ನ ಚಿತ್ರವು ನಲಿದು ರಮಿಸಲಿ.
 
ಪ್ರ. ಸ ನೃಣಾಂ ಮಾನವರ, ಹೃದಭಿರಾಮೇ ಮನವನ್ನು ಮುದಗೊಳಿ
ಸುವಂಥ ಸುರೂಪನೂ, ನರಾಶಿಕುಲ ಭೀಮೇ =ನರಭಕ್ಷಕರಾದ ರಕ್ಕಸರ ವಂಶಕ್ಕೆ
ಭಯಂಕರನೂ ಆಗಿರುವ, (ಮತ್ತು) ಗೋ ಮೇದಿನೀ ಜಯಿ =ಸ್ವರ್ಗ ಮತ್ತು ಭೂ
ಲೋಕಗಳನ್ನು ಜಯಿಸಬಲ್ಲ, ತಪಃ ತಪಸ್ಸಿನಿಂದ, ಅಮೇಯ ಅಪ್ರಮೇಯನಾದ,
ಗಾಧಿಸುತ=ಗಾಧಿಯ ಮಗ ವಿಶ್ವಾಮಿತ್ರನ, ಕಾಮೇ ಇಚ್ಛೆಯನ್ನು ಪೂರೈಸುವುದ
ರಲ್ಲಿ, ನಿವಿಷ್ಟ ಮನಸಿ ಮನಸ್ಸನ್ನು ತೊಡಗಿಸಿದ, ಶ್ಯಾಮೇ =ನಸುಗಪ್ಪು ಬಣ್ಣದವ
ನಾದ, ಜಿತಾಮೇಯ ತಾಪಸಜ ರಾಮೇ ಅಳತೆಮೀರಿದ ಪರಾಕ್ರಮಶಾಲಿ ಪರಶು
ರಾಮನನ್ನು ಗೆದ್ದ, ಗತಾಧಿಕ ಸಮ ಸಮಾನರಾದವರಾಗಲಿ, ಅಧಿಕರಾಗಲಿ
ಇಲ್ಲವೇ ಇಲ್ಲದ, ಭೀಮೇಶ ಚಾಪದಲನ =ಭಯಂಕರವಾದ ಶಿವಧನುಸ್ಸನ್ನು ಮುರಿದು
(ತೋರಿಸಿ), ಅಮೇಯ ಶೌರ್ಯ ಊಹೆಗೆ ಮೀರಿದ ಶೌರ್ಯದಿಂದ,
ವಾಮೇಕ್ಷಣೇ ಪಣವನ್ನು ಗೆದ್ದು ಸೀತೆಯ ಕೈಹಿಡಿದ, ಸದಾ ವಿಜಯಿನಿ ಯಾವಾ
ಗಲೂ ವಿಜಯಶಾಲಿಯಾದ, ರಾಮೇ =ಶ್ರೀರಾಮನಲ್ಲಿ, ಮನಃ ನನ್ನ ಮನಸ್ಸು,
ಅದ್ಯ =ಈ ಹೊತ್ತು, ರಮತಾಂ ರಮಿಸಲಿ.
 
-
 
14
 
ರಮತಾಂ
 
w
 
=
 
ಈ ಪದ್ಯದಲ್ಲಿ ರಾಮಚಂದ್ರನ ರೂಪ - ಗುಣಗಳನ್ನೂ ವಿಶ್ವಾಮಿತ್ರನ ಯಾಗ
ರಕ್ಷಣೆ, ಪರಶುರಾಮನ ಸೋಲು, ಸೀತಾ ಕಲ್ಯಾಣ ಮುಂತಾದ ರಾಮಾಯಣದ ಕೆಲವು
ಘಟನೆಗಳನ್ನೂ ಸೂಚಿಸಲಾಗಿದೆ.
 
ನ ಮೋsಭ್ಯಧಿಕಃ ಕುತೋನ್ಯಃ ? (ಗೀತಾ ೧೧-೪೩)