This page has been fully proofread once and needs a second look.

ಶ್ರೀಕೇಶವ! ಪ್ರದಿಶ, ನಾಕೇಶಜಾತ ಕಪಿಲೋಕೇಶ ಭಗ್ನರವಿಭೂ-
ಸೈ

ಸ್ತೋ
ಕೇತರಾರ್ತಿಹರಣಾ ಕೇವಲಾರ್ಥಸುಖಧೀ ಕೇಕಿ ಕಾಲಜಲದ !

ಸಾಕೇತನಾಥವರ ಪಾಕೇಶಮುಖ್ಯ ಸುತ ಕೋಕೇನ! ಭಕ್ತಿ ಮತುಲಾಂ

ರಾಕೇಂದುಬಿಂಬಮುಖ! ಕಾಕೇಕ್ಷಣಾಪಹ! ಹೃಷೀಕೇಶ! ತೇಂಘ್ರಕಮಲೇ
 
॥ ೧೩ ॥
 

 
ತಾ:
 
ವಾಲಿಯಿಂದ ಪೆಟ್ಟು ತಿಂದು ಮುಖಭಂಗ ಮಾಡಿಸಿಕೊಂಡ ಸುಗ್ರೀವನ

ಮಹಾದುಃಖವನ್ನು ನಿವಾರಿಸಿದವನೆ, ಪಾರಮಾರ್ಥಿಕ ಚಿಂತನೆಯಲ್ಲಿ ತೊಡಗಿದ ಬ್ರಹ್ಮ
ಜ್ಞಾನಿಗಳೆಂಬ ನವಿಲುಗಳಿಗೆ ಕಾರ್ಮೋಡದಂತೆ ಸುಖದಾಯಕನೆ, ದಶರಥನ ಪ್ರಿಯ
ಪುತ್ರನೆ, ಮುಖ್ಯ ಪ್ರಾಣನ ಮಗ ಹನುಮಂತನಿಗೆ ದರ್ಶನ ಮಾತ್ರದಿಂದಲೇ ಸೌಹಿತ್ಯ
ದಾಯಕನಾದವನೆ, ಪೂರ್ಣ ಚಂದ್ರನಂತೆ ದುಂಡಗಿನ ಮುಖವುಳ್ಳವನೆ, ಕಾಕಾಸುರನ
ಒಂದು ಕಣ್ಣನ್ನು ಮಾತ್ರ ಕಿತ್ತ ಕರುಣಾಳು, ಇಂದ್ರಿಯಗಳ ನಿಯಾಮಕನೆ,
ಬ್ರಹ್ಮರುದ್ರಾದ್ಯರಿಗೂ ಒಡೆಯನಾದ ಶ್ರೀರಾಮಚಂದ್ರ ನಿನ್ನ ಅಡಿದಾವರೆಯಲ್ಲಿ ನನಗೆ
ಕವಡಿಲ್ಲದ ಭಕ್ತಿಯನ್ನು ದಯಪಾಲಿಸು.
 

 

 
ಪ.
ಪ: ನಾಕೇಶ ಜಾತ = ಇಂದ್ರನ ಮಗನೂ, ಕಪಿ ಲೋಕೇಶ= ಕಪಿಗಳ

ಲೋಕಕ್ಕೆ ನಾಯಕನೂ ಆದ ವಾಲಿಯಿಂದ, ಭಗ್ನ = ಭಂಗಹೊಂದಿದ, ರವಿಭೂ
=
ಸೂರ್ಯನ ಮಗನಾದ ಸುಗ್ರೀವನ, ಸೈಕೇತರ ಸ್ತೋಕೇತರ =ವಿಪುಲವಾದ, ಆರ್ತಿಹರಣ
=
ದುಃಖವನ್ನು ನಿವಾರಿಸಿದವನೆ, ಅಕೇವಲಾರ್ಥಸುಖಧೀ =ಕೇವಲ
 
ವಿಷಯಸುಖ
 

ವನ್ನೊಲ್ಲದೆ ಪಾರಮಾರ್ಥಿಕ ಸುಖವನ್ನೂ ಚಿಂತಿಸುವ ಬ್ರಹ್ಮಜ್ಞಾನಿಗಳೆಂಬ, ಕೇಕಿ
=
ನವಿಲುಗಳಿಗೆ, ಕಾಲಜಲದ= ಕಾರ್ಮೋಡದಂತೆ ಸಂತಸ ನೀಡುವವನೆ, ಸಾಕೇತನಾಥ
ವರಪಾಕ =ಸಾಕೇತಾಧಿಪತಿ ದಶರಥನ ಪುತ್ರಶ್ರೇಷ್ಠನೆ, ಈರಮುಖ್ಯ ಸುತ ಸುತ =ಮುಖ್ಯ
ಪ್ರಾಣನ ಮಗನಾದ ಹನುಮಂತನೆಂಬ, ಕೋಕ =ಚಕ್ರವಾಕ ಪಕ್ಷಿಗೆ, ಇನ -
=ಸೂರ್ಯನಾಗಿರುವವನೆ, ರಾಕೇಂದುಬಿಂಬಮುಖ= ಹುಣ್ಣಿಮೆಯ ಚಂದ್ರನಂತಿರುವ
ಮೊಗದವನೆ, ಕಾಕೇಕ್ಷಣಾಪಹ =ಕಾಕಾಸುರ (ಜಯಂತ)ನ ಒಂದು ಕಣ್ಣನ್ನು ಮಾತ್ರ
ಕೆಡಿಸಿದವನೆ, ಹೃಷಿಕೇಶ -=ಇಂದ್ರಿಯಗಳ ನಿಯಾಮಕನೆ, ಶ್ರೀಕೇಶವ =ಬ್ರಹ್ಮರುದ್ರಾ
 
ದ್ಯರಿಗೂ ಒಡೆಯನಾದ ಶ್ರೀರಾಮಾ ! ತೇ =ನಿನ್ನ, ಅಂಫ್ರಿಕಮಲೇ =ಅಡಿದಾವರೆ
ಗಳಲ್ಲಿ, ಅಮಲಾಂ =ನಿಷ್ಕಲ್ಮಶವಾದ, ಭಕ್ತಿಂ= ಭಕ್ತಿಯನ್ನು, ಪ್ರದಿಶ =ಕೊಡು.
 

 

 
ಇದರಲ್ಲಿ ಸುಗ್ರೀವನ ಸಖ್ಯ, ಮುನಿಗಳ ರಕ್ಷಣ, ಹನುಮಂತನಿಗೆ ಮಾಡಿದ ಅನು

ಗ್ರಹ, ಕಾಕಾಸುರನ ವೃತ್ತಾಂತ ಮೊದಲಾದ ರಾಮಾಯಣದ
ಕಥಾನಕಗಳ
ಸೂಚನೆ ಬಂದಿದೆ.
 
ಕಥಾನಕಗಳ
 
13