2023-04-01 09:39:27 by Jayashree
This page has been fully proofread once and needs a second look.
ಓಂ ರಾಮಾಯ ನಮಃ
ಶ್ರೀರಾಮ ಲಕ್ಷ್ಮಣಶುಕಾರಾಮಭಭೂರವತು ಗೌರಾಮಲಾಮಿತ ಮಹೋ-
ಹಾರಾಮರಸ್ತುತಯಶೋರಾಮಕಾಂತಿ ಸುತನೋ ರಾಮಲಬ್ಬ ಕಲಹ !
ಸ್ವಾರಾಮವರ್ಯ ರಿಪುನೀರಾಮಯರ್ಥಿವೀರಾಮಯರ್ಧಿಕರ ಚೀರಾಮಲಾವೃತಕಟೇ
ಸ್ವಾರಾಮ ದರ್ಶನ ಜಮಾರಾಮಯಾಗತ ಸುಘೋರಾಮನೋರಥಹರ ॥ ೧೨ ॥
ತಾ: ಶುಭ್ರ, ನಿರ್ಮಲ, ಅಮಿತ ಕಾಂತಿಯುಕ್ತವಾದ ಮುತ್ತಿನ ಸರವನ್ನು
ಧರಿಸಿದ, ದೇವತೆಗಳಿಂದ ಕೊಂಡಾಡಲ್ಪಟ್ಟ, ನಯನಾಸೇಚನಕವಾದ ತನುಕಾಂತಿಯುಳ್ಳ
ಶ್ರೀ ರಾಮಚಂದ್ರ! ಲಕ್ಷಣ ಎಂಬ ಗಿಳಿಗೆ ಉಪವನವಾಗಿರುವವನೆ, ಪರಶುರಾಮ
ನೊಡನೆ ಸೆಣಸಿ ಜಯಶೀಲನಾದವನೆ, ದೇವೇಂದ್ರನ ಶತ್ರುಗಳಾದ ದೈತ್ಯರಿಗೆ ರೋಗ
ದಾಯಕನೆ, ನಿರ್ಮಲವಾದ ನಾರುಮಡಿಯನ್ನು ಸೊಂಟದಲ್ಲಿ ಧರಿಸಿದವನೆ, ಪಂಚ
ವಟಿಯ ಉಪವನದಲ್ಲಿ ನಿನ್ನ ದರ್ಶನ ಮಾತ್ರದಿಂದ ಕಾಮಜ್ವರಪೀಡಿತೆಯಾಗಿ ವೈಯಾರ
ದಿಂದ ಎದುರುಬಂದ ಘೋರ ರಕ್ಕಸಿ ಶೂರ್ಪಣಖೆಯ ಮನೋರಥವನ್ನು ಭಂಗಗೊಳಿ
ಸಿದ ಸ್ವಾಮಿ ರಾಮಚಂದ್ರ ! ರಕ್ಷಿಸು.
ಪ .ಪ: ಗೌರಾಮಲಾಮಿತಮಹೋಹಾರ = ಶುಭ್ರವೂ, ನಿರ್ಮಲವೂ, ಉಜ್ವ
ಲವೂ ಆದ ಮುತ್ತಿನ ಸರವುಳ್ಳ, ಆಮರಸ್ತುತಯಶಃ = ದೇವತೆಗಳಿಂದ ಕೊಂಡಾಡಲ್ಪಟ್ಟ
ಕೀರ್ತಿಯುಳ್ಳ, ರಾಮಕಾಂತಿ ಸುತನೋ =ಕಣ್ಣಿಗೆ ತಂಪನ್ನು ಚೆಲ್ಲುವ ಕಾಂತಿ
ಯುತವಾದ ದೇಹವುಳ್ಳ, ಲಕ್ಷ್ಮಣಶುಕಾರಾಮಭೂ= ಲಕ್ಷಷ್ಮಣ ಎಂಬ ಗಿಳಿಗೆ ಉಪ
ವನಭೂಮಿಯಾಗಿರುವ, ರಾಮಲಬ್ಧ ಕಲಹ = ಪರಶುರಾಮನೊಡನೆ ಯುದ್ಧದಲ್ಲಿ
ಗೆದ್ದವನೆ, ಸ್ವಾರಾಮವರ್ಯ -= ಸ್ವರ್ಗದಲ್ಲಿ ರಮಿಸುವ ದೇವತೆಗಳ ಒಡೆಯನಾದ
ಇಂದ್ರನ, ರಿಪುವೀರ= ಶತ್ರುಗಳಾದ ದಾನವ ವೀರರಿಗೆ, ಆಮಯರ್ದ್ದಿಕರ =ರೋಗ
ತಾಪಗಳನ್ನು ಹೆಚ್ಚಿಸುವವನೆ, ಚೀರಾಮಲಾವೃತಕಟೇ –= ಶುಭ್ರವಾದ ನಾರುಮಡಿ
ಸುತ್ತಿದ ನಡುವುಳ್ಳವನೆ, ಸ್ವಾರಾಮ = ತನ್ನನ್ನು ಉಪವನ (ಪಂಚವಟ) ದಲ್ಲಿ,
:
ದರ್ಶನಜ =ನೋಡಿದ ಮಾತ್ರದಿಂದ ಹುಟ್ಟಿದ, ಮಾರಾಮಯ
= ಕಾಮಜ್ವರದಿಂದ,
ಆಗತ =ಬಂದ, ಸುಘೋರಾ = ಘೋರರೂಪಿಯಾದ ಶೂರ್ಪಣಖೆಯ, ಮನೋರಥ
ಹರ= ಇಚ್ಛೆಯನ್ನು ನಾಶಗೊಳಿಸಿದ, ಶ್ರೀರಾಮ =ಶ್ರೀರಾಮಚಂದ್ರ! (ಎಲ್ಲವೂ
ಸಂಬುದ್ಧಿ ಆದ್ದರಿಂದ ಇಲ್ಲಿ ಭವಾನ್ =ನೀನು, ಎಂದು ಅಧ್ಯಾಹಾರ) ಅವತು-ರಕ್ಷಿಸು.
ಇದರಲ್ಲಿ ರಾಮಚಂದ್ರನ ರೂಪಲಾವಣ್ಯವೂ ಪಂಚವಟಿಯ ಘಟನೆಯೂ
ಪ್ರಸ್ತುತವಾಗಿದ.
12
====
ಶ್ರೀರಾಮ ಲಕ್ಷ್ಮಣಶುಕಾರಾಮ
ಹಾರಾಮರಸ್ತುತಯಶೋರಾಮಕಾಂತಿ ಸುತನೋ ರಾಮಲಬ್ಬ ಕಲಹ !
ಸ್ವಾರಾಮವರ್ಯ ರಿಪು
ಸ್ವಾರಾಮ ದರ್ಶನ