This page has been fully proofread once and needs a second look.

ಓಂ ಪರಶುರಾಮಾಯ ನಮಃ
 

 
ಧೈರ್ಯಾಂಬುಧೇ ಪರಶುಚರ್ಯಾಧಿಕೃತ್ತ​ ಖಲವರ್ಯಾವನೀಶ್ವರ ಮಹಾ

ಶೌರ್ಯಾಭಿಭೂತ ಕೃತವೀರ್ಯಾತ್ಮ ಜಾತ ಭುಜವೀರ್ಯಾವಲೇಪನಿಕರ ।

ಭಾರ್ಯಾಪರಾಧ ಕುಪಿತಾರ್ಯಾಜ್ಞಯಾ ಗಲಿತನಾರ್ಯಾತ್ಮಸೂಗಲತರೋ

ಕಾರ್ಯಾಪರಾಧಮನಿತ್ತ​ವಿಚಾರ್ಯಾರ್ಯಮೌಘಜಯಿವೀರ್ಯಾಮಿತಾ
 

ಮಯಿ ದಯಾ ॥ ೧೧ ॥
 
ತಾಯಿ
 

 
ತಾ: ಜಮದಗ್ನಿಯನ್ನು ಧಿಕ್ಕರಿಸಿ ಅವನ ಕಾಮಧೇನುವನ್ನು ಬಲಾತ್ಕಾರ

ದಿಂದ ಕಾರ್ತವೀರ್ಯಾರ್ಜುನ (ಕೃತವೀರ್ಯನ ಮಗ) ಕೊಂಡುಹೋಗಿದ್ದ. ಇದನ್ನು
ತಿಳಿದ ಪರಶುರಾಮ (ಜಮದಗ್ನಿಯ ಮಗ) ಆ ಕಾರ್ತವೀರ್ಯನ ಸಾವಿರ ತೋಳು
ಗಳನ್ನು ಕೊಡಲಿಯಿಂದ ಕತ್ತರಿಸಿದ್ದಲ್ಲದೆ, ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ತಿರುಗಿ
ದುಷ್ಟ ರಾಜರ ಪಿಳ್ಳೆಯೊಂದೂ ಉಳಿಯದಂತೆ ನಿರ್ಮೂಲ ಮಾಡಿದ ಮಹಾಸಾಹಸಿ.
ರೇಣುಕ ನೀರಿಗೆ ಹೋದಾಗ ಗಂಧರ್ವರಾಜನ ವಿಹಾರವನ್ನು
ನೋಡುತ್ತಾ ನಿಂತು ತಳುವಿದಳೆಂದು ಕುಪಿತನಾದ ತಂದೆ ಜಮದಗ್ನಿ ರೇಣುಕೆಯ
ಕತ್ತನ್ನು ಕತ್ತರಿಸೆಂದು ಆದೇಶವಿತ್ತೊಡನೆ, ತನ್ನ ತಾಯಿಯೆನ್ನದೆ, ಕೊನೆಗೆ ಸ್ತ್ರೀ
ತ್ಯೆ ಪಾಪವೆಂದೂ ಪರಿಗಣಿಸದೆ ಆಕೆಯ ಕತ್ತನ್ನು ಮರದ ಕೊಂಬೆಯಂತೆ ಕತ್ತರಿಸಿಬಿಟ್ಟು,
ಮತ್ತೆ ತಂದೆಯ ವರದಿಂದಲೇ ಬದುಕಿಸಿದ ಮಹಾತ್ಮ, ಕೋಟಿ ಸೂರರರ್ಯರ​ ಪ್ರಖರತೆ
ಗಿಂತ ಮಿಗಿಲಾದ ಪರಾಕ್ರಮಶಾಲಿ ಪರಶುರಾಮನೆ! ನನ್ನ ಅಪರಾಧವನ್ನು ಲೆಕ್ಕಿಸದೆ
ನನ್ನಲ್ಲಿ ಅಸೀಮವಾದ ದಯೆಯನ್ನು ತೋರು.
 

 
ಪ್ರ.ಪ: ಧೈರ್ಯಾಂಬುಧೇ =ಧೈರ್ಯದ ಸಾಗರನೆ, ಪರಶುಚರ್ಯಾ =ಕೊಡ

ಲಿಯ ಹೊಡೆತದಿಂದ, ಅಧಿಕೃತ =ಖಲವರ್ಯಾವನೀಶ್ವರ= ದುಷ್ಟ ಕ್ಷತ್ರಿಯರನ್ನು

ತುಂಡರಿಸಿದವನೆ, ಮಹಾಶೌರ್ಯ =ತುಂಬು ಎದೆಗಾರಿಕೆಯಿಂದ, ಅಭಿಭೂತ ಕೃತ
 
ವೀರ್ಯಾತ್ಮಜಾತ ಭುಜವೀರ್ಯಾವಲೇಪ ನಿಕರ = ಕೃತವೀರ್ಯನ ಮಗ ಕಾರ್ತ
ವೀರ್ಯನ ಭುಜಬಲದ ಮದವನ್ನು ನಿವಾರಿಸಿದವನೆ, ಭಾರ್ಯಾಪರಾಧ ಕುಪಿತ
 
= ಹೆಂಡತಿಯಾದ ರೇಣುಕೆಯ ತಪ್ಪಿನಿಂದ ಕ್ರುದ್ಧನಾದ, ಆರ್ಯಾಜ್ಞ ಯಾ= ತಂದೆ
ಯಾದ ಜಮದಗ್ನಿಯ ಅಪ್ಪಣೆಯ ಮೇರೆಗೆ, ಗಲಿತನಾರ್ಯಾತ್ಮಸೂಗಲತರೋ
= ಒಬ್ಬ ಹೆಂಗಸೆಂದು ಬಗೆಯದೆ, ಕೊನೆಗೆ ತನ್ನ ತಾಯಿಯೆಂದೂ ಅಳುಕದೆ ರೇಣುಕೆಯ
ಕತ್ತನ್ನು ಮರವನ್ನು ಕಡಿದಂತೆ ಕತ್ತರಿಸಿದವನೆ, ಅರ್ಯಮೌಘಜಯಿ ವೀರ್ಯ
ಸಾವಿರಾರು ಸೂರ್ಯರ ಪ್ರಖರತೆಯನ್ನು ಮೀರುವ ಪರಾಕ್ರಮಶಾಲಿಯೆ, ಪರಶು
ರಾಮನೆ! ಅಪರಾಧಂ =(ನನ್ನ) ತಪ್ಪನ್ನು, ಅವಿಚಾರ್ಯ =ಪರಿಗಣಿಸದೆ, ಮಯಿ
=ನನ್ನಲ್ಲಿ, ಅಮಿತಾ =ಮೇರೆಯಿಲ್ಲದ, ದಯಾ -=ಕೃಪೆಯು, ಕಾರ್ಯಾ= ಮಾಡ
ತಕ್ಕದು.
 

 
-
 

 
tr
 

 
11