This page has not been fully proofread.

ಧ್ಯಾನಾರ್ಹ ವಾಮನತನೋ ನಾಥ ಪಾಹಿ ಯಜಮಾನಾಸುರೇಶ ವಸುಧಾ,
ದಾನಾಯ ಯಾಚನಿಕ ಲೀನಾರ್ಥವಾಗ್ವಶಿತ (ನಾನಾಸದಸ್ಯದನುಜ ।
ಮೂನಾಂಕ ನಿರ್ಮಲನಿಶಾನಾಥಕೋಟಿ ಲಸಮಾನಾತ್ಮ ಮೌಂಜಿಗುಣ ಕೌ
ಪೀನಾಕೃಸೂತ್ರ ಪದ(ಯ)ಗಾನಾತಪತ್ರಕರಕಾನಮ್ಯದಂಡವರನೃತ್ ॥ ೧೦ ॥
 
ತಾ. ಯಾಗದಲ್ಲಿ ದೀಕ್ಷಿತನಾಗಿ ಕುಳಿತಿದ್ದ ಬಲಿಯಿಂದ ಮೂರು ಹೆಜ್ಜೆಯಷ್ಟು
ನೆಲವನ್ನು ಬೇಡಲು ಗಿಡ್ಡ ಹಾರುವನಾಗಿ ಬಂದೆಯಲ್ಲ, ಧ್ಯಾನಾರ್ಹನಾದ ಸ್ವಾಮಿ !
ನಿನ್ನ ರೋಚಕವಾದ ಮಾತುಗಳಿಂದ ಅಲ್ಲಿದ್ದ ಅಸುರ ಋತ್ವಿಜರನ್ನು ವಶೀಕರಿಸಿಕೊಂಡ
ವನೆ, ಕೋಟಿ ಮನ್ಮಥರಂತೆ ಕಮನೀಯವಾಗಿಯೂ ಕಲಂಕರಹಿತವಾದ ಸಾವಿರಾರು
 
ಚಂದ್ರರಂತೆ ಹೊಳೆಯುವಂಥದೂ ಆಗಿರುವ ನಿನ್ನ ಮೈಯಲ್ಲಿ ಮೇಖಲೆ, ಕೌಪೀನ,
ಯಜ್ಯೋಪವೀತ, ಕೊಡೆ ಇವನ್ನು ಧರಿಸಿ, ತುಸು ಬಾಗಿದ ದಂಡವನ್ನೂ ಕಮಂಡಲು
ವನ್ನೂ ಹಿಡಿದುಕೊಂಡು ಬಾಯಲ್ಲಿ ಋಗೈದ ಪದಪಾಠವನ್ನು ಪಠಿಸುತ್ತಾ ಬಂದ
ನಾಮನರೂಪನೆ ! ರಕ್ಷಿಸು.
 
ಪ್ರ. ಪ: ಯಜಮಾನ ಯಾಗದಲ್ಲಿ ದೀಕ್ಷಿತನಾಗಿರುವ, ಅಸುರೇಶ ರಾಕ್ಷಸ
ರಾಜನಾದ ಬಲಿಯಿಂದ, ವಸುಧಾ =ಭೂಮಿಯನ್ನು, ಅದಾನಾಯ = ಪಡೆಯಲು,
ಯಾಚನಿಕ ಯಾಚಕನಾಗಿ ಬಂದ, ಧ್ಯಾನಾರ್ಹ ನಾಥ ಧ್ಯಾನಯೋಗ್ಯನಾದ
ಸ್ವಾಮಿ ! ಲೀನಾರ್ಥವಾಕ್ ಗೂಢಾರ್ಥದ ಮಾತುಗಳಿಂದ, ವಶಿತ ನಾನಾಸದಸ್ಯ
ದನುಜ= ಎಲ್ಲಾ ಅಸುರ ಋತ್ವಿಜರನ್ನು ವಶೀಕರಿಸಿಕೊಂಡವನೆ, ಮೀನಾಂಕ ನಿರ್ಮಲ
ನಿಶಾನಾಥಕೋಟಿ ಕೋಟಿ ಮನ್ಮಥರಂತೆಯೂ, ನಿಷ್ಕಲಂಕವಾದ ಚಂದ್ರಬಿಂಬ
ಕೋಡಿಯಂತೆಯೂ, ಲಸಮಾನಾತ್ಮ ಶೋಭಿಸುವ ತನ್ನ ದೇಹದಲ್ಲಿ, ಮೌಂಜಿಗುಣ
ಮೇಖಲೆ, ಕೌಪೀನ –ಕಟ್ಟೆ, ಅಚ್ಚಸೂತ್ರ (ಆತ್ಮಸೂತ್ರ, ಪಾಠಾಂತರ)= ಯ
ಪವೀತ, ಪದಗಾನ =ಪದ ಪಾಠ ಗಾನ, ಆತಪತ್ರ =ಕೊಡೆ (ಛತ್ರಿ), ಕರಕ
ಕಮಂಡಲು, ಆನಮ್ಯದಂಡವರ ತುಸು ಬಾಗಿದ ದಂಡ ಇವನ್ನು, ನೃತ್ =ಧರಿಸಿದ,
ವಾಮನತನೋ -ಗಿಡ್ಡ ಹಾರುವನ ರೂಪವುಳ್ಳ ನಾಮನ ಸ್ವಾಮಿ ! ಪಾಹಿ-ರಕ್ಷಿಸು.
 
ಇದರಲ್ಲಿ ವಾಮನಮೂರ್ತಿಯ ಸ್ವಾಭಾವಿಕವಾದ ವರ್ಣನೆಯಿದೆ.
 
10
 
ಅಚ್ಛಸೂತ್ರ ಆತ್ಮಸೂತ್ರ (ಪಾಠಾಂತರ)
ಪದಗಾನ ಪದಯಾನ (ಪಾಠಾಂತರ) ಪದಯಾನ= ಕಾಲ್ನಡಿಗೆ ।
 
ಪಾ)