This page has not been fully proofread.

ಓಂ ಶ್ರೀ ವಾಮನಾಯ ನಮಃ
 
ಪಿಂಗಾಕ್ಷವಿಕ್ರಮ ತುರಂಗಾದಿಸೈನ್ಯಚತುರಂಗ್ಗಾವಲಿದನುಜಾ-
ಸಾಂಗಾಧರಸ್ಥ ಬಲಿ ಸಾಂಗಾರಪಾತದೃಷ್ಟಿತಾಂಗಾಮರಾಲಿನುತ ತೇ ।
ಶೃಂಗಾರಪಾದನಖ ತುಂಗಾಗ್ರ ಭಿನ್ನ ಕನಕಾಂಗಾಂಡಪಾತಿ ತಟನೀ-
ತುಂಗಾತಿಮಂಗ ತರಂಗಾಭಿಭೂತ ಭಜಕಾಂಗಾಘ! ವಾಮನ! ನಮಃ ॥ ೯ ॥
 
ತಾ:
 
ಮೊದಲು ಅಸುರರೇ ದೇವತೆಗಳ ಸ್ಥಾನವನ್ನಾಕ್ರಮಿಸಿ ಪೂರ್ವ ದೇವಾ
ಎಂದು ಖ್ಯಾತರಾಗಿದ್ದರು. ತಮ್ಮ ಬಳಿ ಸಿಂಹಸಾಹಸವುಳ್ಳ ಕುದುರೆ, ಆನೆ ಮುಂತಾದ
ಚತುರಂಗ ಬಲವಿತ್ತು ಎಂಬ ಗರ್ವವೂ ಅವರಿಗಿತ್ತು. ಆಗ ಅಸುರರಾಜನೆನಿಸಿದ ಬಲಿ
ಚಕ್ರವರ್ತಿ ಇಂದ್ರಪದವಿಯನ್ನು ಬಯಸಿ ಯಾಗ ಮಾಡಿದ. ಬೇಡಿದವರಿಗೆ ಅವರು
ಕೇಳಿದ ವಸ್ತುವನ್ನು ನೀಡದಿದ್ದರೆ ಯಾಗವು ಅಪೂರ್ಣವಾಗುವ ಸಂಭವವಿತ್ತು. ಆಗ
ಶ್ರೀಹರಿ ವಟುವೇಷದ ವಾಮನನಾಗಿ ಬಂದು ಮೂರಡಿ ನೆಲವನ್ನು ಬೇಡಿದ. ಯಾಗ
ಅಪೂರ್ಣವೆನಿಸುವುದರಿಂದ ಬಲಿ ಅದನ್ನು ದಾನಮಾಡಿದ. ವಾಮನ ಒಂದು ಹೆಜ್ಜೆ
ಯಿಂದ ಭೂಮಿಯನ್ನೆಲ್ಲ ಆಕ್ರಮಿಸಿ, ಮತ್ತೊಂದರಿಂದ ಬಾನನ್ನು ಮುಚ್ಚಿದ.
ಮೂರನೇ ಹೆಜ್ಜೆಯನ್ನು ಬಲಿಯ ಅಪೇಕ್ಷೆಯಂತೆ ಆತನ ತಲೆಯ ಮೇಲಿಟ್ಟು ಅವನನ್ನು
ಪಾತಾಲಕ್ಕೆ ತಳ್ಳಿದ. " ಆಗ ದೇವತೆಗಳು ಹರ್ಷೋದ್ಗಾರ ಮಾಡಿದರು. ಎರಡನೇ
ಪಾದ ಆಕಾಶಕ್ಕೆ ನೆಗೆದು ಬ್ರಹ್ಮಾಂಡ ಕಟಾಹವನ್ನು ಭೇದಿಸಲು, ಅದರಾಚೆಯಿಂದ
ಹೀಗೆ ಗಂಗೆ ಹರಿಪಾದೋದ್ಭವೆಯಾಗಿ ಮೂರು
ದಾರಿಯಲ್ಲಿ ಮೂರು ಲೋಕದಲ್ಲಿ ಮಂದಾಕಿನೀ (ದೇವಲೋಕ) ಭಾಗೀರಥೀ (ಭೂ
ಲೋಕ) ಭೋಗವತೀ (ಪಾತಾಳ) ಎಂಬ ಹೆಸರಿನಿಂದ ಹರಿದು ಲೋಕಪಾವನೆಯಾದಳು.
ಈ ಗಂಗೆಯಲ್ಲಿ ಮಿಂದ ಭಕ್ತರು ತಮ್ಮ ಪಾಪಗಳನ್ನೆಲ್ಲ ತೊಳೆದುಕೊಳ್ಳುವಂತೆ ಮಾಡಿದ
ವಾಮನಾವತಾರ ಶ್ರೀಹರಿಯೇ ನಿನಗೆ ನನ್ನ ನಮನವು.
 
ದೇವಗಂಗೆ ಕೆಳಗಿಳಿಯತೊಡಗಿದಳು.
 
ಪ್ರ. ಪ:
ಸೈನ್ಯ ಚತುರಂಗ
 
ಅವಲಿ ದನುಜ
 
-
 
ಪಿಂಗಾಕ್ಷ ವಿಕ್ರಮ ಸಿಂಹದಂತೆ ಬಲಶಾಲಿಗಳಾದ, ತುರಂಗಾದಿ
ಅನೆ, ಕುದುರೆ, ರಥ, ಪದಾತಿಗಳೆಂಬ ಚತುರಂಗ ಬಲದಿಂದ,
ಉದ್ದಪ್ತರಾದ ದಾನವರ, ಅಸಾಂಗಾಧರಸ್ಥ = ಅಪೂರ್ಣವೆನಿ
ಸುವ ಯಜ್ಞದಲ್ಲಿ ಯಜಮಾನನಾಗಿ ಕುಳಿತ, ಬಲಿ-ಬಲೀಂದ್ರನನ್ನು, ಸಾಂಗಾವ
ಪಾತ - ಸದೇಹವಾಗಿ ಪಾತಾಳಕ್ಕೆ ತಳ್ಳಿದ್ದರಿಂದ, ಕೃಷಿತಾಂಗ - ಪುಲಕಿತರಾದ,
ಅಮರಾಲಿ-ದೇವತೆಗಳ ಗಡಣದಿಂದ, ನುತ-ಹೊಗಳಲ್ಪಟ್ಟವನೆ!, ಶೃಂಗಾರಪಾದನಖ-
ಸುಂದರವಾದ ಕಾಲುಬೆರಳಿನ ಉಗುರಿನ, ತುಂಗಾಗ್ರ = ಉನ್ನತವಾದ ತುದಿಯಿಂದ,
ಭಿನ್ನ-ಒಡೆಯಲ್ಪಟ್ಟ, ಕನಕಾಂಗಾಂಡ-ಹೇಮಮಯ ಬ್ರಹ್ಮಾಂಡದಿಂದ, ಪಾತಿ-ಸುರಿ
ಯುವ, ತಟಿನೀದೇವಗಂಗೆಯ, ತುಂಗಾತಿ ಮಂಗಲ ತರಂಗ ಉನ್ನತವೂ ಪಾವನವೂ
ಆದ ಪ್ರವಾಹದಿಂದ, ಅಭಿಭೂತ = ನಾಶಮಾಡಲ್ಪಟ್ಟ, ಭಜಕಾಂಗಾಘ-ಭಕ್ತರ
ಬಾಹ್ಯಾಭ್ಯಂತರಾಂಗಗಳ ಪಾಪವುಳ್ಳವನೆ, ವಾಮನ ವಟುರೂಪಿ ವಾಮನನೆ, ತೇ
ನಿನಗೆ, ನಮಃ-ನಮಸ್ಕಾರವು.
 
-
 
www
 
9