This page has been fully proofread once and needs a second look.

ಓಂ ವರಾಹಾಯ ನಮಃ
 

 
ನೀಲಾಂಬುದಾಭ! ಶುಭಶೀಲಾದ್ರಿದೇಹಧರ!
 
ಖೇಲಾಹೃತೋದಧಿಧುನೀ
 

ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ !
 

ಕೋಲಾಕೃತೇ
ಲೀಲಾಸ್ಪದೋರುತಲ,
 
! ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ
ಧರಣೀ
ಲೀಲಾಸ್ಪದೋರುತಲ,
ಮೂಲಾಶಿಯೋಗಿವರಣಾಜಾಲಾಭಿವಂದಿತ
 
ಹಿಂದೆ ಹಿರ
 
! ನಮಃ ॥ ೭ ॥
 
 
 
ತಾತ್ಪರ್ಯ: ಮಳೆಮುಗಿಲಂತೆ ಎಣ್ಣೆಗಪ್ಪಿನ ಬಣ್ಣದವನೂ, ಭಾರೀಗಾತ್ರದ ದೇಹ

ವುಳ್ಳವನೂ ಆದ ಆದಿ ವರಾಹ ರೂಪಿ ಪರಮಾತ್ಮನಿಗೆ ನನ್ನ ನಮನವು.
ಹ್
ಹಿಂದೆ ಹಿರಣ್ಯಾಕ್ಷನೆಂಬ ಮಹಾ ದೈತ್ಯನು, ಸಾಗರನದೀ ನದ ಬೆಟ್ಟಗಳಿಂದ ತುಂಬಿದ ಈ ಭೂಮಿ
ಯನ್ನೆ ಚಾಪೆಯಂತೆ ಮಡಚಿಕೊಂಡು ಪಾತಾಳಕ್ಕೆ ಇಳಿದ. ಇವನೇ ಮೊದಲ ಅಸುರ
ನಿರಬೇಕು. ಶ್ರೀಹರಿ ಹಂದಿಯ ರೂಪ ಧರಿಸಿ ಅವನ ಬೆನ್ನಟ್ಟಿ ಹೋಗಿ ಆ ಅಸುರನನ್ನು
ಸಂಹರಿಸಿ ತನ್ನ ಮಡದಿ ಭೂದೇವಿಯನ್ನು ರಕ್ಷಿಸಿದ. ಆಗ ಸಮುದ್ರದ ಅಗಾಧ ಜಲ
ದಲ್ಲಿ ವರಾಹನು ಆಟವಾಡುತ್ತಿದ್ದಾಗ ಈ ಭೂಮಿ ಅವನ ದಾಡೆಯಲ್ಲಿ ಅರಳಿದ ನೀಲ
ಕಮಲದಂತೆ ಶೋಭಿಸುತ್ತಿತ್ತು, ಬಳಿಕ ಆಕೆಯನ್ನು ತನ್ನ ತೊಡೆಯ ಮೇಲಿರಿಸಿ
ಕೊಂಡು ಭೂವರಾಹ ಸ್ವಾಮಿಯೆನಿಸಿದ, ಕಂದಮೂಲಗಳಿಂದಲೇ ಬದುಕುತ್ತಿದ್ದ
ಸಂಯಮಿಗಳಾದ ಮುನಿಗಳು ವರಾಹ ಸ್ವಾಮಿಯನ್ನು ಸ್ತುತಿಸುತ್ತಿದ್ದರು. ಇಂತಹ
ವರಾಹರೂಪಿ ಪರಮಾತ್ಮನಿಗೆ ನಮಸ್ಕಾರಗಳು.
 
2
 
ಧರಣೀ
ನಮಃ ॥ ೭ ॥
 

 
ಪ್ರತಿ ಪದಾರ್ಥ: ನೀಲಾಂಬುದಾಭ= ಕಾರ್ಮೋಡದಂಥ ತನುಕಾಂತಿಯುಳ್ಳ,

ಶುಭಶೀಲ = ಮಂಗಲಕರನಾದ, ಅದ್ರಿದೇಹಧರ = ಪರ್ವತ ಗಾತ್ರದ ಶರೀರವುಳ್ಳ ವರಾ
ಹನೆ! ಖೇಲಾಕೃಹೃತ ಉದಧಿಧುನೀ ಶೈಲಾದಿಯುಕ್ತ ನಿಖಿಲ ಏಲಾಕಟ = ಸಮುದ್ರ ನದಿ
ಪರ್ವತಗಳು ಇಡಿ ಕಿರಿದ ಈ ಭೂಮಿಯನ್ನೆ ಚಾಪೆಯಂತೆ ಮಡಚಿಕೊಂಡು ಲೀಲಾ
ಮಾತ್ರದಿಂದ ಅಪಹರಿಸಿಕೊಂಡು ಹೋದ, ಆದಿ-ಅಸುರ = ಮೊದಲ ರಕ್ಕಸನಾದ
ಹಿರಣ್ಯಾಕ್ಷನೆಂಬ, ತೂಲಾಟವೀ -ಹತ್ತಿಯ ಕಾಡಿಗೆ, ದಹನ = ಬೆಂಕಿಯಂತಿರುವವನೆ
(ಹಿರಣ್ಯಾಕ್ಷನನ್ನು ಸಂಹರಿಸಿದವನೆ!) ಜಲಧಿಕಾಲ= ಸಮುದ್ರವನ್ನ ಆಡುಂಬೊಲ
ವಾಗಿ ಆರಿಸಿಕೊಂಡವನೆ, ಅಚಲಾವಯವ ನೀಲಾಬ್ಬದಂಷ್ಟ್ರ =ಭೂಭಾಗವನ್ನೆ ನೀಲ

ಕಮಲದಂತೆ ತನ್ನ ದಾಡೆಯಲ್ಲಿರಿಸಿಕೊಂಡವನೆ! ಧರಣೀಲೀಲಾಸ್ಪದೋರುತಲ =ಭೂ
ದೇವಿಯ ವಿಹಾರಕ್ಕೆ ಆಸ್ಪದವಾದ ತೊಡೆಯುಳ್ಳವನೆ! ಮೂಲಾಶಿಯೋಗಿವರಜಾಲ
=ಕಂದಮೂಲಗಳನ್ನೆ ತಿಂದು ಬದುಕುವ ಸಂಯಮಿಗಳ ಗಡಣದಿಂದ, ಅಭಿವಂದಿತ ನಮ
= ನಮ ಸ್ಮರಿಸಲ್ಪಟ್ಟ, ಕೋಲಾಕೃತೇ =ವರಾಹರೂಪನೆ! ನಮಃ= ನಿನಗೆ ನನ್ನ ವಂದನೆಗಳು.
 

 
ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹನ ಕತೆ ಇಲ್ಲಿ ಸೂಚಿತವಾಗಿದೆ.

ಕಾಲಃ -ಕಲಯತೀತಿ ಕಾಲಃ (ಜಲಧಿಕಾಲ= ಸಮುದ್ರದಂತೆ ನೀಲ ವರ್ಣನೆ!

ಎಂದೂ ಆಗಬಹುದು). ಭೂಮಿಯನ್ನು ಸಮುದ್ರದಲ್ಲಿ ಮುಳುಗಿಸಿ ಹಿಡಿದಾಗ ಆ

ಹಿರಣ್ಯಾಕ್ಷನನ್ನು ವರಾಹರೂಪಿ ಪರಮಾತ್ಮ ಸಂಹರಿಸಿದನೆಂದು ಭಾಗವತ.
 
www.
 
7