This page has not been fully proofread.

ಓಂ ಕರ್ಮಾಯ ನಮು
 
ಕೂರ್ಮಾಕೃತೇ! ತವರು ನರ್ಮಾತ್ಮ ಸೃಷ್ಣಧೃತ ಭರ್ಮಾತ್ಮಮಂದರಗಿರೇ!
ಧರ್ಮಾವಲಂಬನ, ಸುಧರ್ಮಾಸದಾಂ ಕಲಿತಶರ್ಮಾಸುಧಾವಿತರಣಾತ್ ।
ದುರ್ಮಾನರಾಹು ಮುಖದುರ್ಮಾಯಿ ದಾನವಸುಮರ್ಮಾಭಿಭೇದನ ಪಟ್
ಘರ್ಮಾರ್ಕಕಾಂತಿವರವರ್ಮಾ ಭವಾನ್ ಭುವನ ನಿರ್ಮಾಣ ಧೂತ ವಿಕೃತಿಃ ॥
 
॥ ೩ ॥
 
ತಾತ್ಪರ್ಯ: ಸಮುದ್ರಮಥನಕಾಲದಲ್ಲಿ ಹೊಂಬೆಟ್ಟ ವಾದ ಮಂದರವನ್ನು ಲೀಲಾ
ಜಾಲವಾಗಿ ಬೆನ್ನ ಮೇಲೆ ತಳೆದ ಕೂರ್ಮರೂಪನೆ! ಮದಾಂಧರಾದ ರಾಹು ಮೊದಲಾದ
ಕವಡು ರಕ್ಕಸರ ಮರ್ಮ ಭೇದನದಲ್ಲಿ ನೀನು ಜಾಣನೇ ಸರಿ. ಧರ್ಮಾಭಿಮಾನಿ
ದೇವತೆಗಳಿಗೆ ಅಮೃತವನ್ನು ಕೊಟ್ಟು ಅವರನ್ನು ಅಮರರನ್ನಾಗಿ ಮಾಡಿದವನು.
ಬೇಸಗೆಯ ಸೂರ್ಯನಂತೆ ಥಳಥಳಿಸುವ ಕವಚವನ್ನು ಧರಿಸಿದ ಸ್ವಾಮಿ, ಸೃಷ್ಟಿ
ಕಾರ್ಯದಲ್ಲು ನಿರ್ವಿಕಾರನಾಗಿಯೇ ಇರುವ ಕೂರ್ಮರೂಪಿ ಪರಮಾತ್ಮನೆ ನೀನೇ
ನನ್ನನ್ನು ರಕ್ಷಿಸಬೇಕು.
 
ಪ್ರತಿಪದಾರ್ಥ: ನರ್ಮ= ಅನಾಯಾಸದಿಂದ, ಆತ್ಮಸೃಷ್ಣ ತನ್ನ ಬೆನ್ನ ಮೇಲೆ,
ಧೃತ ಭರ್ಮಾತ್ಮ ಮಂದರಗಿರೇ=ಸುವರ್ಣಮಯವಾದ ಮಂದರ ಪರ್ವತವನ್ನು ಧರಿಸಿದ
ವನೆ, ದುರ್ಮಾನ ದುರಭಿಮಾನಿಗಳಾದ, ರಾಹುಮುಖ ರಾಹು ಮುಂತಾದ, ದುರಾ
ಯಿ ದಾನವ ಕೆಟ್ಟ ಮಾಯಾವಿಗಳಾದ ದೈತ್ಯರ, ಸುಮರ್ಮಾಭಿಭೇದನ ಪಟೋ=
ಮರ್ಮ ಸ್ಥಾನಗಳನ್ನು ಭೇದಿಸುವುದರಲ್ಲಿ ಜಾಣನೆ, ಧರ್ಮಾವಲಂಬನ- ಸದ್ಧರ್ಮಗಳಿಗೆ
ಆಶ್ರಯವಾಗಿರುವ, ಸುಧರ್ಮಾಸದಾಂ ದೇವತೆಗಳಿಗೆ, ಸುಧಾ
 
ಅಮೃತವನ್ನು ಕೊಡುವುದರಿಂದ,
 
ಕಲಿತ ಶರ್ಮಾ -ಸುಖವನ್ನು
 
ವಿತರಣಾತ್
ನೀಡಿದವನು,
ವರವರ್ಮಾ
 
ಘರ್ಮಾರ್ಕಕಾಂತಿ ಬೇಸಗೆಯ ಸೂರ್ಯನಂತೆ ಕಾಂತಿಯುಳ್ಳ,
ಶ್ರೇಷ್ಠವಾದ ಕವಚವನ್ನು ಧರಿಸಿ, ಭುವನ ನಿರ್ಮಾಣ= ಭೂಮಿಯ ಸೃಷ್ಟಿ ಯ
ವಿಷಯದಲ್ಲಿ, ಧೂತ ವಿಕೃತಿ= ನಿರ್ವಿಕಾರವಾಗಿ ಇರುವವನು ಕೂರ್ಮಾಕೃತೇ=
ಆಮೆಯ ರೂಪದ ಸ್ವಾಮಿ, ಭವಾನ್ ನೀನು, ತು= ವಿಶೇಷವಾಗಿ, ಅವತು=
ರಕ್ಷಿಸು.
 
ಇದರಲ್ಲಿ ಹರಿಯು ಕೂರ್ಮಾವತಾರ ತಾಳಿ ಮುಳುಗುತ್ತಿರುವ ಮಂದರಗಿರಿಯನ್ನು
ಹೊತ್ತಕತೆ, ಅಮೃತವನ್ನು ದುಷ್ಟರಾದ ದೈತ್ಯರಿಗೆ ನೀಡದೆ ವಂಚಿಸಿದ ವಿಚಾರಗಳ
ಸೂಚನೆ ಇವು ಬಂದಿವೆ.
 
ತು= ವಿಶೇಷವಾಗಿ, ತು ಸ್ಯಾದೇವಧಾರಣೇ (ಅಮರ)
 
3