ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತಃ ತಂತ್ರಸಾರಸಂಗ್ರಹಃ (ಶ್ರೀ ವರದೇಂದ್ರ-ವಸುಧೇಂದ್ರ ತೀರ್ಥ ವಿರಚಿತಟೀಕಾಸಮೇತಃ) ಪ್ರಕಾಶನ ಶ್ರೀ ಗುರು ಸಾರ್ವಭೌಮ ಸಂಶೋಧನಾ ಮಂದಿರ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತಃ ತಂತ್ರಸಾರಸಂಗ್ರಹಃ (ಶ್ರೀ ವರದೇಂದ್ರ-ವಸುಧೇಂದ್ರ ತೀರ್ಥ ವಿರಚಿತಟೀಕಾಸಮೇತಃ) ಅನುವಾದಕರು ವಿದ್ವಾನ್ ಡಾ॥ ಚತುರ್ವೇದಿ ವೇದವ್ಯಾಸಾಚಾರ್ಯ ಎಂ.ಎ., ಎಂ.ಎ., ಬಿ ಎಡ್, ಪಿ.ಹೆಚ್.ಡಿ. ಪ್ರಕಾಶನ ಶ್ರೀ ಗುರು ಸಾರ್ವಭೌಮ ಸಂಶೋಧನಾ ಮಂದಿರ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ - ಆಂಧ್ರಪ್ರದೇಶ ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತ ತಂತ್ರಸಾರಸಂಗ್ರಹಃ (ಶ್ರೀ ವರದೇಂದ್ರ-ವಸುಧೇಂದ್ರ ತೀರ್ಥ ವಿರಚಿತ ಟೀಕಾಸಮೇತಃ) ಅನುವಾದಕರು ವಿದ್ವಾನ್ ಡಾ ॥ ಚತುರ್ವೇದಿ ವೇದವ್ಯಾಸಾಚಾರ್ಯ, ಎಂ.ಎ., ಪಿ.ಹೆಚ್.ಡಿ. ಪ್ರಥಮಮುದ್ರಣ : 2013 ಬೆಲೆ : ರೂ ।ಪ್ರಕಾಶನ ಶ್ರೀ ಗುರು ಸಾರ್ವಭೌಮ ಸಂಶೋಧನಾ ಮಂದಿರ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ - ಆಂಧ್ರಪ್ರದೇಶ ಪ್ರತಿಗಳು : 1000 ಅಕ್ಷರಸಂಯೋಜನೆ : ಕೆ.ಸುಬ್ಬಣ್ಣ, (080) 26761614; 9945252661 ಮುದ್ರಣ: ಹರಿಓಂ ಪ್ರಿಂಟರ್ ಹೊಸಕೆರೆಹಳ್ಳಿ, ಬೆಂಗಳೂರು-58 ಮೊ : 9448551703 ಶ್ರೀಶ್ರೀ ೧೦೦೮ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು, ಜಗದ್ಗುರು ಶ್ರೀಮನ್ಮಧ್ವಾಚಾರ್ಯಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಗುರುಸಾರ್ವಭೌಮರ ಮಠ, ಮಂತ್ರಾಲಯ, ಆಂಧ್ರಪ್ರದೇಶ, ಅನುಗ್ರಹವಚನ -೧ ಶ್ರೀಮದಾಚಾರ್ಯರ ತಂತ್ರಸಾರಗ್ರಂಥ''ವು ಶ್ರೀಮದಾಚಾರ್ಯರ ಅಪೂರ್ವ ಕೃತಿಯಾಗಿದೆ. ಸರ್ವಜ್ಞರಾದ ಶ್ರೀಮದಾಚಾರ್ಯರು ತಿಳಿಯದ ವಿಷಯವೇ ಇರುವುದಿಲ್ಲ. ಇದೊಂದು ಕಲ್ಪವೃಕ್ಷ- ವಾಗಿದೆ. ಮಂತ್ರಾಧ್ಯಾಯದಲ್ಲಿರುವ ಒಂದೊಂದು ಮಂತ್ರವೂ ವಿಶಿಷ್ಟಫಲವನ್ನು ನೀಡಲು ಸಮರ್ಥವಾಗಿವೆ. ಏಳುಕೋಟಿವೈಷ್ಣವಮಂತ್ರವಿದೆಯೆಂದು ಶ್ರೀರಾಘವೇಂದ್ರ- ತೀರ್ಥರು ತಮ್ಮ ಪ್ರಾತಃಸಂಕಲ್ಪಗದ್ಯದಲ್ಲಿ ತಿಳಿಸಿರುತ್ತಾರೆ. ಇವು- ಗಳಲ್ಲಿ ಅತ್ಯಂತವೀರ್ಯವತ್ತಾದ ಎಪ್ಪತ್ತನಾಲ್ಕು ಮಂತ್ರಗಳನ್ನು ಋಷಿ-ದೇವತೆ-ಛಂದಸ್ಸು ಸಹಿತವಾಗಿ ತಂತ್ರಸಾರದಲ್ಲಿ ನಿರೂಪಿಸ ಲಾಗಿದೆ. ತಂತ್ರಸಾರಸಂಗ್ರಹಕ್ಕೆ ಇಪ್ಪತ್ತಕ್ಕೂ ಹೆಚ್ಚು ವ್ಯಾಖ್ಯಾನ- ಗಳಿವೆ. ಅವುಗಳಲ್ಲಿ ಶ್ರೀರಾಘವೇಂದ್ರಮಠದ ಪರಂಪರೆಯಲ್ಲಿ ಬಂದ ಶ್ರೀ ವಸುಧೇಂದ್ರ ತೀರ್ಥರ ವ್ಯಾಖ್ಯಾನವು ಸಂಕ್ಷೇಪ- ವಾದರೂ ಗಾಂಭೀರ್ಯಶೈಲಿಯಲ್ಲಿ ರಚಿತವಾಗಿದೆ. ವಿದ್ವಾಂಸರಾದ ಶ್ರೀವೇದವ್ಯಾಸಾಚಾರ್ಯರು ವಸುಧೇಂದ್ರ- ತೀರ್ಥರ ಟೀಕಾಸಹಿತ ತಂತ್ರಸಾರಸಂಗ್ರಹವನ್ನು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಈ ಕಾರ್ಯಕ್ಕಾಗಿ ಅವರು ಅಭಿನಂದಾ- ರ್ಹರು. ಇವರಿಗೆ ಮೂಲರಾಮಚಂದ್ರದೇವರು ವಿಶೇಷವಾಗಿ ಇತೋಪ್ಯಧಿಕವಾಗಿ ಅನುಗ್ರಹಿಸಲಿ ಎಂದು ನಮ್ಮ ಉಪಾಸ್ಯ- ಮೂರ್ತಿ ಮೂಲರಾಮಚಂದ್ರದೇವರನ್ನು ಪ್ರಾರ್ತಿಸುವೆವು. ಇತಿ ನಾರಾಯಣಸ್ಮರಣೆಗಳು ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು Arಮೂಲರಾಭೋ ಜಯತ भागचंद्र ಶಾತವಾಹನಶಕ ಗುರುರಾಜೋ ಬಯತೇ ನೇ ಶ್ರೀ ಮತ್ಪರಮಹಂಸ ಪರಿವ್ರಾಜಕಾಚಾರ್ಯ ಪದವಾಕ್ಯ ಪ್ರಮಾಣಪಾರಾವಾರಪಾರಂಗತ ಸರ್ವತಂತ್ರಸ್ವತಂತ್ರ ಶ್ರೀಮದ್ವ ಷ್ಣವಸಿದ್ಧಾಂತಪ್ರತಿಷ್ಠಾಪನಾಚಾರ್ಯ ಶ್ರೀಮನ್ಮೂಲರಘುಪತಿವೇದವ್ಯಾಸದೇವರದಿವ್ಯಶ್ರೀಪಾದಪದ್ಮಾರಾಧಕ ant fದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನಾಧೀಶ್ವರರಾದ ಶ್ರೀರಾಘವೇಂದ್ರಸ್ವಾಮಿಗಳವರಮಠದ ವೇದಾಂತಸಾಮ್ರಾಜ್ಯದಿಗ್ವಿಜಯವಿದ್ಯಾಸಿಂಹಾಸನಾಧೀಶ್ವರರಾದ ಶ್ರೀಮತ್ಸುಜಯೀಂದ್ರ ತೀರ್ಥ ಶ್ರೀಪಾದಂಗಳವರ ಕರಕಮಲಸಂಜಾತರಾದ ಶ್ರೀಮತ್ಸುಶಮೀಂದ್ರತೀರ್ಥ ಶ್ರೀಪಾದಂಗಳವರ ವರಕುಮಾರಕರಾದ 45 108 ಶ್ರೀಮತ್ಸುಯತೀಂದ್ರತೀರ್ಥ ಶ್ರೀಪಾದಂಗಳವರು ಶ್ರೀನಂದನನಾಮಸಂವತ್ಸರ ಮಾರ್ಗಶಿರ ಶುದ್ಧ ನವಮಿ ಶುಕ್ರವಾರ ದಿನಾಂಕ 21.12.2012 ಅನುಗ್ರಹ ಸಂದೇಶ ''ಸಪ್ತಮೋ ಮತ್ಸಮೋ ಯೋಗೀ ವರದೇಂದ್ರೋ ಭವಿಷ್ಯತಿ" ಎಂಬ ಗುರುರಾಜರ ಷ್ಯವಾಣಿಯಂತೆ ಶ್ರೀಗುರುರಾಜರಂತೆ ಭಕ್ತಾನುಗ್ರಹಪರರಾದ ವಾದಿಮಲ್ಲರೆನಿಸಿದ ನಮ್ಮ ಪೂರ್ವೀಕಗುರುಗಳಾದ ಶ್ರೀವರದೇಂದ್ರತೀರ್ಥಶ್ರೀಪಾದಂಗಳವರು ಮಹಾಮಹಿಮರಲ್ಲದೆ 'ನೇಕ ಗ್ರಂಥಗಳನ್ನೂ ರಚಿಸಿರುತ್ತಾರೆ. ಅವರು ರಚಿಸಿದ ಗ್ರಂಥಗಳಲ್ಲಿ ತಂತ್ರಸಾರಾಸಂಗ್ರಹ ವ್ಯಾಖ್ಯಾನವು ಒಂದು. ಅದನ್ನು ನಮಗೆ ಅತ್ಯಂತ ಪ್ರೀತ್ಯಾಸದರಾದ ಸಂಶೋಧಕರೂ ಅನುವಾದಕರೂ ಆದ, ವಿದ್ವಾಂಸರಾದ ಚತುರ್ವೇದಿ ವೇದವ್ಯಾಸಾಚಾರ್ಯರು ಮೂಲತಂತ್ರಸಾರಕ್ಕೆ ವರದೇಂದ್ರತೀರ್ಥರು ಬರೆದ ವ್ಯಾಖ್ಯಾನದ ಜೊತೆಯಲ್ಲಿ ಅಲ್ಲಲ್ಲೇ ಬೇಕಾದ ವಿವರಗಳನ್ನು ನೀಡಿದ್ದಾರೆ. ಈ ಪುಸ್ತಕವನ್ನು ನಮ್ಮ ಶ್ರೀಗುರುಸಾರ್ವಭೌಮಸಂಶೋಧನಮಂದಿರದಿಂದ ಮುದ್ರಿಸಿ ನಮ್ಮ ಶ್ರೀಮಠದಿಂದ ಉಡುಪಿಯಲ್ಲಿ ನಡೆಯುವ ವಿದ್ವತ್ಸಭೆಯಲ್ಲಿ ಬಿಡುಗಡೆಗೊಳಿಸುವುದು ಸಂತೋಷವೆನಿಸುತ್ತದೆ. ಇದನ್ನು ಸಂಶೋಧಿಸಿ ಅನುವಾದಿಸಿದ ವಿದ್ವಾನ್ ಚತುರ್ವೇದಿ ವೇದವ್ಯಾಸಾಚಾರ್ಯರಿಗೆ ಇನ್ನೂ ಇಂತಹ ಗ್ರಂಥಸಂಶೋಧನಾ ಕಾರ್ಯದಲ್ಲಿ ಮತ್ತಷ್ಟು ಶಕ್ತಿಯನ್ನು ದಯಪಾಲಿಸಲೆಂದು ಅಸದ್ಗುರ್ವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಮೂಲರಘುಪತಿವೇದವ್ಯಾಸದೇವರಲ್ಲಿ ಪ್ರಾರ್ಥಿಸುತ್ತೇವೆ. ಹೀಗೆಂದು ಮಂತ್ರಾಲಯ ಮೊಕ್ಕಾಂನಿಂದ ಬರೆಸಿದ ಅನುಗ್ರಹ ಸಂದೇಶ. ಇತಿ ನಾರಯಣಸ್ಮರಣೆಗಳು ಮುನ್ನುಡಿ ಪ್ರಾಸ್ತಾವಿಕ ತಂತ್ರಸಾರಸಂಗ್ರಹವು ಶ್ರೀಮದಾನಂದತೀರ್ಥರ ಶ್ರೀನಾರಾಯಣಪಂಡಿತಾಚಾರ್ಯರು ಸುಮಧ್ವವಿಜಯ(೧೫/೭೮)ದಲ್ಲಿ 'ಈ ತಂತ್ರಸಾರಂ ಸಂಪ್ರಾಪ್ಯ ನ ಸ್ಯಾತ್ ಪರ್ಯಾಪ್ತವಾಂಛಿತ ೫ ಅನ್ಯಾದೃಶಕೃತಿಯೆನಿಸಿದೆ. ತಂತ್ರಸಾರ ಗ್ರಂಥವನ್ನು ಆಶ್ರಯಿಸಿದ ಯಾರುತಾನೇ ತನ್ನ ಇಷ್ಟಾರ್ಥವನ್ನು ಪೂರ್ಣವಾಗಿ ಹೊಂದದಿರುವನು? ಎಂದಿರುವರು. ಸ್ವತಃ ಶ್ರೀಮದಾಚಾರ್ಯರೇ ಗ್ರಂಥೋSಯಂ ಪಾಠಮಾತ್ರೇಣ ಸಕಲಾಭೀಷ್ಟಸಿದ್ದಿದಃ (೪/೧೬೫) ಎಂದು ಹೇಳಿರುವರು. 'ಕಲಿಯುಗದಲ್ಲಿ ಮಂತ್ರಗಳ ಶಕ್ತಿ ಪ್ರಾಸವಾಗುತ್ತದೆ. ಆದರೂ ಶ್ರೀಕೃಷ್ಣಮಂತ್ರ, ವೇದವ್ಯಾಸಮಂತ್ರಗಳು ಕಲಿಯುಗದಲ್ಲಿಯೂ ವಿಶೇಷವಾಗಿ ಶಕ್ತಿಯುತಗಳಾಗಿದ್ದು, ಸಕಲಕಾಮನೆಗಳನ್ನೂ ಪೂರೈಸಬಲ್ಲವು' ಎಂದಿದ್ದಾರೆ. ಕುಂಠಿತಕಲಿಯುಗದಲ್ಲಿ ಮಂತ್ರಗಳಿಗೆ ಐಹಿಕಫಲಗಳನ್ನು ನೀಡುವ ಶಕ್ತಿ ವಾದರೂ, ನಾವು ತಂತ್ರಸಾರದಲ್ಲಿ ಹೇಳಿರುವ ಮಂತ್ರಗಳಿಗೆ ಆ ನಿಯಮವಿಲ್ಲ. ಐಹಿಕ-ಪಾರತ್ರಿಕ ಉಭಯಫಲಗಳನ್ನು ನೀಡುವ ಶಕ್ತಿ ಹೊಂದಿವೆ. ಅವುಗಳ ಲ್ಲಿಯೂ ವಾಸಿಷ್ಣಕೃಷ್ಣ ಯಾದವಕೃಷ್ಣ ಮಂತ್ರಗಳಾದರೂ ಉಭಯಫಲ ನೀಡುವಲ್ಲಿ ಹೆಚ್ಚು ಶಕ್ತಿಯುತಗಳಾಗಿವೆ. ಚ ಆದರೂ ಭಗವಂತನ ಅನುಗ್ರಹವನ್ನಷ್ಟೇ ಬಯಸಿ ಈ ಮಂತ್ರಗಳ ಜಪ ನಡೆದಾಗ ಉಭಯಫಲವು ದೊರಕುತ್ತದೆಯಾಗಿ ಸಕಾಮನೆಯಿಂದ ಇಲ್ಲಿ ಹೇಳಿರುವ ಜಪಕ್ಕಿಂತಲೂ ನಿಷ್ಕಾಮನೆಯಿಂದ ಮಾಡಬೇಕು. ಸ ಕಾಮೇಭ್ಯಃ ಅಮಿತಗುಣಾಃ ಹ್ಯಕಾಮೈಸ್ತು ಕೃತಾಃ ಕ್ರಿಯಾಃ (೪/೧೧೨) ಶ್ರೀಮದಾಚಾರ್ಯರ ಸರ್ವಮೂಲಗ್ರಂಥಗಳೆಲ್ಲವೂ ತತ್ವಜ್ಞಾನವನ್ನು ನೀಡಲೆಂದೇ ಪ್ರವೃತ್ತವಾಗಿರುವಂತಹವು, ತಂತ್ರಸಾರವೂ ಇದಕ್ಕೆ ಹೊರತಲ್ಲ. ತಂತ್ರಸಾರದಲ್ಲಿ ತತ್ವಜ್ಞಾನ ಸಿದ್ಧಿಸಲು ತಂತ್ರಶಾಸ್ತ್ರದ ಉಪಯೋಗ ಎಷ್ಟಿದೆ ಎಂಬುದನ್ನು ತಿಳಿಯಬಹುದಾಗಿದೆ. ಇದನ್ನೇ 'ತತ್ವಜ್ಞಾನಪ್ರದಾಯಕಾಃ, ಜ್ಞಾನಮೋಕ್ಷಪ್ರದಾಯಕಾ, ತಂತ್ರಸಾರಸಂಗ್ರಹ ಸಟೀಕಾ ಹರಿತುಷ್ಟಿದಃ' ಇತ್ಯಾದಿವಾಕ್ಯಗಳಿಂದ ತಿಳಿಯಬಹುದಾಗಿದೆ. ಈಗಿನ ಯಾತ್ರಿಕಯುಗದ ಭ್ರಮಿತಜನರು ತಂತ್ರಶಾಸ್ತ್ರದಿಂದ ದೂರಾಗಿ, ವಿಜ್ಞಾನದಲ್ಲಿ ತಂತ್ರಶಾಸ್ತ್ರದ ಕೊಡುಗೆಯನ್ನು ತಿಳಿಯದವರಾಗಿದ್ದಾರೆ. ಶ್ರೀಮದಾಚಾರ್ಯರು ಈ ಕೃತಿಯಲ್ಲಿ ವಿಜ್ಞಾನಕ್ಕೆ ತಂತ್ರಶಾಸ್ತ್ರದ ಕೊಡುಗೆ ಏನೆಂಬುದನ್ನು ಸಂಕ್ಷೇಪವಾಗಿ ತಿಳಿಸಿದ್ದಾರೆ. ಶ್ರೀಮದಾಚಾರ್ಯರು ತಮ್ಮ ಗ್ರಂಥಗಳಲ್ಲಿ ತಿಳಿಸಿರುವ ಮಾನವನ ಮುಖ್ಯಧೈಯವಾದ ತತ್ವಜ್ಞಾನಸಂಪಾದನೆಯಲ್ಲಿ ತಂತ್ರಶಾಸ್ತ್ರವು ಹೇಗೆ ಆವಶ್ಯ ಎಂಬುದನ್ನು ಕಾಣಬಹುದಾಗಿದೆ. ಶ್ರೀಮದಾಚಾರ್ಯರ ಕಡೆಯ ಕೃತಿ ಎನಿಸಿದರೂ ಸಂಕ್ಷಿಪ್ತವಾದರೂ ನಿಖರವೂ, ಶುದ್ಧರೂಪವೂ ಆಗಿ ಮೂಡಿಬಂದಿರುವುದು ಈ ಕೃತಿಯ ವೈಶಿಷ್ಟ್ಯ. ಶ್ರೀಮದಾಚಾರ್ಯರು ಭಗವಂತನನ್ನು ತಿಳಿಯಬಯಸುವವರು ಶ್ರವಣಾದಿಗಳಲ್ಲಿ ಮಾತ್ರ ತೊಡಗದೆ ಯಜ್ಞಯಾಗಾದಿಕರ್ಮಗಳನ್ನೂ ಶುದ್ಧರೂಪದಲ್ಲಿ ಆಚರಿಸಲೇಬೇಕು ಎಂದು ತಿಳಿಸಿ, ಅದನ್ನು ತಾವೇ ಪ್ರಾಯೋಗಿಕವಾಗಿ ಮಾಡಿ, ಇತರರಿಂದ ಮಾಡಿಸಿಯೂ ಇರುತ್ತಾರೆ. ಗುರುಪುತ್ರ ವಾಸುದೇವನ ಮೂಲಕ ಯಾಗವನ್ನು ಮಾಡಿಸಿದ್ದು ದೃಷ್ಟಾಂತವಾಗಿದೆ. ಕರ್ಮಾಚರಣೆಯ ಆವಶ್ಯಕತೆಯನ್ನು ಸುಮಧ್ವವಿಜಯವೂ ತಿಳಿಸಿದೆ "ಬ್ರಹ್ಮವೇದನನಿವಿಷ್ಟಚೇತಸಾಂ ಕರ್ಮ ತತ್ರ ಕರಣಾಂತರಂ ಭವೇತ್', ಇತರ ಆಚಾರ್ಯರ (ತಂತ್ರಗಳ ಮೇಲಿನ?) ಕೃತಿಗಳು ಗಾತ್ರದಲ್ಲಿ ಬೃಹತ್ತಾದರೂ ಶುದ್ಧವಾಗಿಲ್ಲ. ತಾಮಸತಂತ್ರಗಳಿಗೆ ಶರಣಾಗಿರುವ ಅಂಶಗಳನ್ನು ಅವುಗಳಲ್ಲಿ ಕಾಣಬಹುದಾಗಿದೆ. ಮತ್ತೆ ಕೆಲವರದು ಪೂಜೆಗೆ ಮಾತ್ರ ಸೀಮಿತವಾಗಿದ್ದು ಇತರ ವಿಷಯಗಳ ಗೋಜಿಗೆ ಹೋಗದೇ ತೆಪ್ಪಗಾಗಿವೆ. ಶ್ರೀಮದಾಚಾರ್ಯರ ಈ ಕೃತಿಯಾದರೋ ಗಾತ್ರದಲ್ಲಿ ಚಿಕ್ಕದಾದರೂ ಮಹತ್ವದಲ್ಲಿ ಇತರ ಗ್ರಂಥಗಳನ್ನು ಮೀರಿ ನಿಂತಿದೆ. ಅಷ್ಟಲ್ಲದೇ ಇದು ಶುದ್ಧ ವೈಷ್ಣವವಾಗಿದ್ದು, ಶುದ್ಧವೈದಿಕವಾಗಿದ್ದು, ಶುದ್ಧಸಾತ್ವಿಕವಾಗಿದೆ ಎಂಬುದೂ ಮತ್ತೊಂದು ವಿಶೇಷ. ತಂತ್ರಸಾರಗ್ರಂಥವು ಪರಮಪ್ರಾಮಾಣಿಕವಾಗಿದ್ದು ಸ್ವಕಪೋಲಕಲ್ಪಿತವಾದ ಯಾವ ಅಂಶವೂ ಇದರಲ್ಲಿ ನುಸುಳಿಲ್ಲ. ಆಚಾರ್ಯರೇ ತಿಳಿಸುವಂತೆ ಅವರ ಈ ಗ್ರಂಥಕ್ಕೆ (ಆಧಾರ?) ಶ್ರೀಮಹಾವಿಷ್ಣುವೇ ರಚಿಸಿರುವ ತಂತ್ರಸಾರ. ಮುನ್ನುಡಿ ಈ ವಿಷದಿತ ತಂತ್ರಸಾರವನ್ನು ಬ್ರಹ್ಮದೇವನಿಗೆ ಶ್ರೀವಿಷ್ಣು ಉಪದೇಶಿಸಿರುವನು. ಅದರ ಸಂಕ್ಷೇಪರೂಪವೇ ಈ ತಂತ್ರಸಾರಸಂಗ್ರಹ, ಅಂತ್ಯದ ಮಂಗಳಾಚರಣೆಯಲ್ಲಿ ಈ ಅಂಶವನ್ನು ಗಮನಿಸಬಹುದು. ಬ್ರಹ್ಮಣೇ ಕಥಿತಾತ್ ತಂತ್ರಸಾರಾದ್ ಉದ್ಘತ್ಯ ಸಾದರಮ್ । ಆನಂದತೀರ್ಥಮುನಿನಾ ಕೃತೋ ಗ್ರಂಥೋಽಯಮಂಜಸಾ (೪/೧೬೩) ಹೇಳುವಂತೆ 2 ಶ್ರೀಮದಾಚಾರ್ಯರೇ ಬಹುವಾಗಿ ನಿರೂಪಿಸಿರುವನು. ಈ ಗ್ರಂಥವಾದರೋ ಸಂಗ್ರಹವೆನಿಸಿದೆ - ತೇನ್ವಯಂ ಸುಗಮೋ ಮಾರ್ಗಃ ಸುಫಲಶ್ಚ ಭಗವಂತನೇ ಭಗವಂತನೇ ತಂತ್ರಸಾರಮಾರ್ಗವನ್ನು ಆ ಗ್ರಂಥಗಳ ಸಾರಎಷ್ಟನ್ನು ಆಚರಿಸಿದರೆ ಕರ್ತವ್ಯ ಕರ್ಮಗಳು ಪೂರ್ತಿಯಾಗುತ್ತವೋ ಅಷ್ಟನ್ನು ಇಲ್ಲಿ ಪೂರ್ಣವಾಗಿಯೂ, ವಿಧಿವತ್ತಾಗಿಯೂ ನಿರೂಪಿಸಲ್ಪಟ್ಟಿದೆ. ಯಾವತೋ ಹ್ಯನನುಷ್ಠಾನೇ ಕರ್ಮಪೂರ್ತಿ ನ ವಿದ್ಯತೇ । ತಾವತ್ ಸಮಸ್ತಂ ಕಥಿತಂ ..... (೩/೧೫೬) ತಂತ್ರಸಾರಸಂಗ್ರಹದ ವ್ಯಾಪ್ತಿ ಆಚಾರ್ಯರು ತಮ್ಮ ತಂತ್ರಸಾರಸಂಗ್ರಹದಲ್ಲಿ ತಂತ್ರಶಬ್ದದ ಅರ್ಥವು ಸರಿಯಾಗಿ ಹೊಂದುವಂತೆ ನಿರೂಪಿಸಿ, ತಂತ್ರಶಾಸ್ತ್ರದ ವೈಶಿಷ್ಟ್ಯವನ್ನು ಎತ್ತಿ ಹಿಡಿದಿದ್ದಾರೆ. ತಂತ್ರವೆಂದರೆ ತನೋತಿ ವಿಪುಲಾನ್ ಅರ್ಥಾನ್ ತತ್ವಮಂತ್ರಸಮನ್ವಿತಾನ್ । ತ್ರಾಣಂ ಚ ಕುರುತೇ ಯಸ್ಮಾತ್ ತಂತ್ರಮಿತ್ಯಭಿಧೀಯತೇ । ಸರ್ವಥರ್ಾ: ಯೇನ ತನ್ಯಂತೇ ತ್ರಾಯಂತೇ ಚ ಭಯಾಜ್ಜನಾಃ ॥ 'ತನೋತಿ ವಿಪುಲಾನ್ ಅರ್ಥಾನ್' ಎಂಬ ಭಾಗ ತಂತ್ರಸಾರಗ್ರಂಥವ್ಯಾಪ್ತಿಯ ವೈಶಾಲ್ಯವನ್ನು ತಿಳಿಸುತ್ತದೆ. ಅಷ್ಟಮಹಾಮಂತ್ರಗಳು, ಛಂದಸ್ಸು, ದೇವತೆ, ನ್ಯಾಸಗಳು, ದೇವತಾ ಧ್ಯಾನಶ್ಲೋಕಗಳು, ಬಣ್ಣಗಳು, ಆಯುಧಗಳು, ಭುಜಗಳು, ಈ ರೀತಿ ಚಿಂತನೆಯ ಫಲವಿಶೇಷ, ಹೋಮಾದಿಗಳು, ಪೂಜಾದಿಗಳು, ಪೀಠಪೂಜೆ, ಆವಾಹನವಿಧಿ, ತಂತ್ರಸಾರಸಂಗ್ರಹ ಸಟೀಕಾ ಆವರಣಪೂಜೆ, ಅನುಯಾಗ, ಪುಷ್ಪಾಂಜಲಿಹೋಮ, ತತ್ವನ್ಯಾಸ ಮಾತೃಕಾನ್ಯಾಸ, ಕಲಶದೇವತೆಗಳು, ಅಭಿಷೇಕ-ದೀಕ್ಷಾವಿಧಿ, ಹೋಮವಿಧಿ, ಸಂಖ್ಯೆ- ಕುಂಡಲಕ್ಷಣ, ಅಗ್ನಿಸಂಸ್ಕಾರಗಳು, ಹೋಮದ್ರವ್ಯ-ಸಮಿತ್ತು ಅವುಗಳ ಪ್ರಮಾಣ, ದಕ್ಷಿಣೆ ಇವುಗಳು. ಆ ದೇವಾಲಯ ಪ್ರತಿಷ್ಠೆ ಪ್ರತಿಮಾಲಕ್ಷಣ ಪ್ರತಿಮಾ ನಿರ್ಮಾಣವಿಧಿ, ಶಿಲೆಯ ಪರೀಕ್ಷೆ, ಸ್ತ್ರೀಪುಂನಪುಂಸಕಶಿಲೆಗಳು, ದೇವಾಲಯನಿರ್ಮಾಣಕ್ಕೆ ಯೋಗ್ಯಸ್ಥಳ, ಭೂಸಂಶೋಧನೆ, ದೇವಾಲಯನಿರ್ಮಾಣರೀತಿ, ವಿಮಾನಲಕ್ಷಣ ಪ್ರಾಕಾರ, ಮಂಟಪ, ಪಿಂಡಿಕಾ, ಗಲಾದಿಪ್ರಮಾಣಗಳು, ಮಂಟಪವಿಧಿ, ವಾಸ್ತುಪೂಜೆ, ವಾಸ್ತುದೇವತೆ, ಪ್ರಾಸಾದವಾಸ್ತುದೇವತೆಗಳು, ಮಂಡಲಗಳು, ಅಂಕುರಾರ್ಪಣ, ಅಧಿವಾಸನವಿಧಿ, ಚಕ್ರಾಬ್ಬ ಭದ್ರಕಾದಿಲಕ್ಷಣ, ಕಲಶಸಂಖ್ಯೆ, ಅದರಲ್ಲಿ ಹಾಕಬೇಕಾದ ಔಷಧಿಗಳು, ಕಲಶಸ್ಥಾಪನಕ್ರಮ, ಆವಾಹಿಸಬೇಕಾದ ರೂಪಗಳು, ಅಭಿಷೇಕಮಂತ್ರಗಳು, ಪ್ರತಿಷ್ಠಾಪನೆ ಪೂಜಾದಿಗಳು, ಅನ್ನಸಂತರ್ಪಣೆ, ಉತ್ಸವವಿಧಾನ, ಅವಭತಸ್ನಾನ, ಜೀರ್ಣೋದ್ಧಾರ ಪದ್ಧತಿ, ಸಂಪ್ರೋಕ್ಷಣ. ವರಾಹಮಂತ್ರ ನೃಸಿಂಹಾದಿ ಸುಮಾರು ಎಪ್ಪತ್ತನಾಲ್ಕು ಮಂತ್ರಗಳ ಉದ್ಧಾರ, ಧನ್ವಂತರೀ ಹೋಮ, ಹೋಮಸಂಖ್ಯೆ, ದೇವತಾತಾರತಮ್ಯ, ಬ್ರಹ್ಮಾದಿಗಳ ಗುರುತ್ವ, ದ್ವಾದಶಗುರುಗಳು, ಸೃಷ್ಟಾದಿನ್ಯಾಸ, ಯಮನಿಯಮನಾದಿಗಳು, ನಾಡಿಗಳು, ವಿಶೇಷನಾಡಿಗಳು, ಭಕ್ತಿಯ ಮಹಿಮೆ ಇತ್ಯಾದಿ ವಿಷಯಗಳು ತಂತ್ರಗಳ ವ್ಯಾಪ್ತಿಯಲ್ಲಿ ಬಂದಿರುತ್ತವೆ. ಇದರಿಂದಾಗಿ ವಿಪುಲವಾದ ತಾಂತ್ರಿಕವಸ್ತುವಿಷಯವನ್ನು ತನ್ನೊಡಲಲ್ಲಿ ಇಟ್ಟುಕೊಂಡಿದ್ದು, ತಂತ್ರ ಎಂಬ ತಂತ್ರಶಬ್ದದ ಅರ್ಥವು ಇಲ್ಲಿ ಪೂರ್ಣವಾಗಿ ಮೈ ತಳೆದಂತಿದೆ. ತತ್ವಮಂತ್ರಸಮನ್ವಿತಾನ್ ಎಂಬುದು ತಂತ್ರದ ಇನ್ನೊಂದು ಮುಖ. ತತ್ವಜ್ಞಾನವನ್ನು ಹಾಗೂ ಮಂತ್ರಜ್ಞಾನವನ್ನು ನೀಡುವಂತಹುದು ತಂತ್ರ. ವಸ್ತುತಃ ವಿಚಾರಮಾಡಿದರೆ ತತ್ವಜ್ಞಾನವನ್ನು ಪಡೆಯುವುದೇ ತಂತ್ರಶಾಸ್ತ್ರದ ಮುಖ್ಯಗುರಿ. ತಂತ್ರಶಾಸ್ತ್ರವೂ ತತ್ತ್ವಜ್ಞಾನವೇ. ಮಂತ್ರ, ಪೂಜೆ, ಹೋಮಹವನಾದಿಗಳು, ವ್ರತೋಪವಾಸಗಳು ತಂತ್ರಶಾಸ್ತ್ರದಲ್ಲಿ ಅಡಕವಾಗಿದ್ದು ತತ್ವಜ್ಞಾನೇಚ್ಚುಗಳಿಗೆ ಇವು ಸಾಧನಗಳೆನಿಸಿವೆ. ಮುನ್ನುಡಿ ತಂತ್ರಶಾಸ್ತ್ರವನ್ನು ತಿಳಿಯದ ಯಾವನೊಬ್ಬನೂ ತತ್ವಜ್ಞಾನವನ್ನು ಪಡೆಯಲಾರ. ತಂತ್ರಶಾಸ್ತ್ರದಲ್ಲಿ ಬಿತ್ತರಿಸಿದ ಯಜ್ಞಯಾಗಾದಿಗಳಾಗಲೀ, ಯಾವುದೋ ಒಂದು ತತ್ವವನ್ನು ತಿಳಿಯಲೆಂದೇ ಆಗಿದೆ ಎಂಬುದನ್ನು ತಂತ್ರಶಾಸ್ತ್ರ ಅಧ್ಯಯನಶೀಲರು ತಿಳಿಯದೇ ಇರಲಾರರು. ಮಂತ್ರತಂತ್ರಗಳಾಗಲೀ ೯ ಶ್ರೀಮದಾಚಾರ್ಯರು ತಮ್ಮ ಯಾವುದೇ ತಾಂತ್ರಿಕವಿಷಯವನ್ನು ತಿಳಿಸುವಾಗ ಪ್ರಧಾನತತ್ವವಾದ ಭಗವತತ್ವವನ್ನು ಹೇಳದೇ ಬಿಟ್ಟಿಲ್ಲ. ತತ್ವಗಳಾಗಲೀ, ತತ್ವದೇವತೆಗಳಾಗಲೀ, ಪೂಜೆಯಾಗಲೀ, ಪೂಜಾವಿಧಾನವಾಗಲೀ, ಹೋಮಾದಿಗಳಾಗಲೀ, ಮಂತ್ರ ಜಪವಾಗಲೀ ಭಗವಂತನ ಚಿಂತನೆಯಿಲ್ಲದೇ ಅವರಿಂದ ನಿರೂಪಿತಗಳಾಗಿಲ್ಲ. ಯಾವ ದೇವತೆಯನ್ನಾಗಲೀ ಕುರಿತು ಯಜ್ಞಯಾಗಾದಿಗಳನ್ನು ಮಾಡಲಿ ಆ ಕರ್ಮವು ಆಯಾಯ ದೇವತೆಗಳಲ್ಲಿದ್ದು ಶಕ್ತಿ ನೀಡುವ 'ಮಹಾಶಕ್ತಿ' ಎನಿಸುವ ಭಗವಂತನದೇ ಎಂದು ತಿಳಿಯಿರಿ ಎಂದು ಅಲ್ಲಲ್ಲಿ ತಿಳಿಸುತ್ತಾರೆ. ಮಂತ್ರ ಜಪಾದಿಗಳಲ್ಲೂ ಭಗವಂತನನ್ನು ಮರೆಯಲಾಗದು ವಿಮುಖ ನ ಹರೇಃ ಯದಿ(೪/೯೯); ತ್ರಾಣಂ ಚ ಕುರುತೇ. ಈ ಅಂಶವನ್ನು ಮಂತ್ರವಿಧಿಯನ್ನು ತಿಳಿಸುವ ನಾಲ್ಕನೆಯ ಅಧ್ಯಾಯದಲ್ಲಿ ಕಾಣಬಹುದಾಗಿದೆ. ಈ ಭಾಗದಲ್ಲಿರುವ 'ಸರ್ವವ್ಯಾಧಿವಿನಾಶನಂ', 'ಕಾಮದೋ ಭಯನಾಶನಃ', 'ಸಂಸ್ಕೃತಿರ್ವ್ಯಾಧಿನಾಶನಃ', 'ಸರ್ವೆ ರೋಗಾಃ ಪ್ರಣಶ್ಯಂತಿ' ಇತ್ಯಾದಿವಾಕ್ಯಗಳು ಈ ತಂತ್ರಶಾಸ್ತ್ರದಲ್ಲಿ ಹೇಳಿರುವ ಯಜ್ಞಯಾಗಾದಿಗಳನ್ನೂ, ಮಂತ್ರಗಳ ಜಪಹೋಮಾದಿಗಳನ್ನೂ ಮಾಡುವವರು ಸಕಲ ಸಂಸಾರಭಯದಿಂದ ನಿವೃತ್ತರಾಗಿ ಸುಖಿಸುವರು ಎಂದು ತಿಳಿಸುತ್ತವೆ. ಇದರಿಂದಾಗಿ ತಂತ್ರಪದದ ಅರ್ಥವಾದ 'ತ್ರಾಣಂ ಚ ಕುರುತೇ' ಎಂಬ ಅಂಶ ಈ ತಂತ್ರಸಾರಸಂಗ್ರಹದಲ್ಲಿ ಹೇಗೆ ಮೂಡಿದೆ ಎಂದು ತಿಳಿಯುತ್ತದೆ. ಈ ರೀತಿಯಾಗಿ 'ತಂತ್ರ'ದ ನಿಜ ಅರ್ಥವನ್ನು ಪೂರ್ಣರೀತಿಯಲ್ಲಿ ನಿರೂಪಿಸಿ ಅನುಗ್ರಹಿಸಿದ ಶ್ರೀಮದಾಚಾರ್ಯರು ಸಕಲ ಆಕಜನರಿಂದ ಮಾನ್ಯರಾಗಿರುವರು. ಈ ಗ್ರಂಥಕ್ಕೆ ಪೇಜಾವರಮಠಾಧೀಶರಾದ ಪರಮಪೂಜ್ಯ ಶ್ರೀ೧೦೮ ವಿಶ್ವೇಶತೀರ್ಥ ಶ್ರೀಪಾದಂಗಳವರು ಅನುಗ್ರಹವಚನವನ್ನು ನೀಡಿ ಆಶೀರ್ವದಿಸಿದ್ದಾರೆ. ಅವರಿಗೆ ನನ್ನ ಹತ್ತೂರ್ವಕ ಪ್ರಣಾಮಗಳನ್ನು ಅರ್ಪಿಸುತ್ತೇನೆ. ಎರಡನೆಯದಾಗಿ ಪರಮಪೂಜ್ಯರೂ, ಶ್ರೀರಾಘವೇಂದ್ರಸ್ವಾಮಿಗಳ ಕರುಣಾಪಾತ್ರರೂ ೧೦ ತಂತ್ರಸಾರಸಂಗ್ರಹ ಸಟೀಕಾ ಆಗಿರುವ ಶ್ರೀಶ್ರೀರಾಘವೇಂದ್ರಮಠದ ಪ್ರಸ್ತುತ ಮಠಾಧೀಶರಾಗಿರುವ ಶ್ರೀ೧೦೦೮ ಶ್ರೀ ಸುಶಮೀಂದ್ರತೀರ್ಥಶ್ರೀಪಾದಂಗಳವರು ತಮ್ಮ ಅನುಗ್ರಹವಚನವನ್ನು ನೀಡಿ ಆಶೀರ್ವದಿಸಿರುವರು. ಅವರ ಪಾದಕಮಲಗಳಲ್ಲಿ ಭಕ್ತಿಪೂರ್ವಕ ಪ್ರಣಾಮಾಂಜಲಿಯನ್ನು ಅರ್ಪಿಸುತ್ತೇನೆ. ವಸುಧೇಂದ್ರರು ಹಾಗೂ ವರದೇಂದ್ರರು ರಾಘವೇಂದ್ರ ಮಠದ ಶಿಷ್ಯ ಸಂಪತ್ತಿನಲ್ಲಿದ್ದ ಮಹಾಮಹಿಮೋಪೇತರು. ವರದೇಂದ್ರತೀರ್ಥರು ಅನೇಕ ವಾದಿ ಪ್ರತಿವಾದಿಗಳನ್ನು ವಾದದಲ್ಲಿ ಸೋಲಿಸಿ ದೈತ ದುಂದುಭಿಯನ್ನು ಮೊಳಗಿಸಿದವರು. ಚತುಶಾಸ್ತ್ರ ಪಾಂಡಿತ್ಯ ಪಡೆದಿದ್ದ ವರದೇಂದ್ರರು ಅನೇಕ ಗ್ರಂಥಗಳನ್ನು ರಚಿಸಿರುವರು. ಅವುಗಳಲ್ಲಿ ತಂತ್ರಸಾರ ಸಂಗ್ರಹದ ಟೀಕೆಯೂ ಒಂದಾಗಿದೆ. ಅಪೂರ್ವ ವಿಷಯಗಳಿಂದ ತುಂಬಿರುವ ಈ ಗ್ರಂಥ ತಂತ್ರಸಾರ ಅವಶ್ಯ ಓದಲೇಬೇಕಾದ ಕೃತಿಯಾಗಿದೆ. ಸಂಗ್ರಹ ವರದೇಂದ್ರ ಟೀಕೆ ಹಾಗೂ ಅವಶ್ಯವಾದ ವಿವರಣೆಗಳೊಂದಿಗೆ ಸಂಸ್ಕೃತದಲ್ಲಿರುವ ಈ ಕೃತಿಯನ್ನು ಪ್ರಪ್ರಥಮ ಬಾರಿಗೆ ಮುದ್ರಣವನ್ನು ಶ್ರೀ ಮಠದಿಂದ ಮುದ್ರಿಸಲಾಯಿತು. ಜನಸಾಮಾನ್ಯರಿಗೂ ತಲುಪಿ ವರದೇಂದ್ರರ ಅನುಗ್ರಹವಾಗಲಿ ಎಂಬ ಸದುದ್ದೇಶದಿಂದ ಶ್ರೀಮಠವು ಇದನ್ನು ನನಗೆ ಅನುವಾದ ಮಾಡಲು ಅನುಗ್ರಹಿಸಿತು. ಇದೊಂದು ಶ್ರೀರಾಯರು ಹಾಗು ವರದೇಂದ್ರರ ಅನುಗ್ರಹವೆಂದೇ ನಾನು ಭಾವಿಸುವೆ. ನಾನು ಅನುವಾದ ಮಾಡಿರುವ ಸಟೀಕಾ ತಂತ್ರಸಾರ ಸಂಗ್ರಹ ಗ್ರಂಥವನ್ನು ಅಧುನಾ ಪೀಠದಲ್ಲಿ ವಿರಾಜಮಾನರಾಗಿರುವ ಶ್ರೀ ಶ್ರೀ 1008 ಶ್ರೀ ಸುಯತೀಂದ್ರ ತೀರ್ಥ ಶ್ರೀಪಾದರು ಅವಲೋಕಿಸಿ, ಮೆಚ್ಚಿಗೆ ಸೂಚಿಸಿರುವರು ಇವರಿಗೆ ನನ್ನ ಸಾಷ್ಟಾಂಗ ಭಕ್ತಿಪೂರ್ವಕ ನಮನಗಳು. ಈ ಅನುವಾದ ಕಾರ್ಯದಲ್ಲಿ ನನ್ನನ್ನು ತೊಡಗಿಸಿ ವರದೇಂದ್ರರ ಹಾಗೂ ಶ್ರೀರಾಘವೇಂದ್ರರ ಕರುಣಾಕವಚವನ್ನು ನನಗೆ ತೊಡಿಸಿದ ರಾಘವೇಂದ್ರ ಮಠದ ಹೆಚ್ಚುವರಿ ಅಧಿಕಾರಿಗಳಾದ ಸುಯಮೀಂದ್ರಾಚಾರ್ಯರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ರಾಘವೇಂದ್ರಮಠದ ವಿದ್ಯಾಪೀಠದ ಪ್ರಾಂಶುಪಾಲರೂ ವಿದ್ವಾಂಸರೂ ಆದ ಶ್ರೀ ವಾದಿರಾಜಾಚಾರ್ಯರು ಮಠದ ಕಡೆಯಿಂದ ಬೇಕಾದ ಸಾಮಗ್ರಿಯನ್ನು ಒದಗಿಸಿರುವರು ಇವರಿಗೆ ನನ್ನ ಅನಂತಾನಂತ ಪ್ರಣಾಮಗಳು. ಇತಿ ಸಜ್ಜನ ವಿಧೇಯ ಡಾ॥ ಚರ್ತುವೇದಿ ಎಸ್. ವೇದವ್ಯಾಸಾಚಾರ್ ॥ಶ್ರೀಃ ॥ ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತ ತಂತ್ರಸಾರಸಂಗ್ರಹಃ (ಶ್ರೀವರದೇಂದ್ರ-ವಸುಧೇಂದ್ರ ತೀರ್ಥಟೀಕಾಸಹಿತಮ್) ಮಂಗಳಾಚರಣಮ್ ಜಯತ್ಯಬ್ಜಭವೇಶೇಂದ್ರವಂದಿತಃ ಕಮಲಾಪತಿ: [^1]। ಅನಂತವಿಭವಾನಂದಶಕ್ತಿಜ್ಞಾನಾದಿಸದ್ಗುಣ: ॥ ೧ ॥ ಅರ್ಥ- ಅಬ್ಬಭವಃ = ಚತುರ್ಮುಖನು, ಈಶಃ = ರುದ್ರನು, ಇಂದ್ರಃ =ಇಂದ್ರದೇವರು ಇವರಿಂದ, ವಂದಿತಃ =ವಂದಿತನಾದವನು, ಅನಂತ = ಕೊನೆಯಿರದ, ವಿಭವ = ಐಶ್ವರ್ಯದ, ಶಕ್ತಿಜ್ಞಾನಾದಿ- ಸದ್ಗುಣ = ಸಾಮರ್ಥ್ಯ, ಆನಂದ ಮೊದಲಾದ ಸದ್ಗುಣಗಳಿಂದ ಪೂರ್ಣನಾದ, ಕಮಲಾಪತಿಃ = ಲಕ್ಷ್ಮೀರಮಣನು, ಜಯತಿ = ಉತ್ಕೃಷ್ಟನಾಗಿದ್ದಾನೆ. ವಸುಧೇಂದ್ರತೀರ್ಥರ ಟೀಕಾ ಈ ಮೊದಲನೆಯ ಶ್ಲೋಕದಲ್ಲಿ ಈ ತಂತ್ರಸಾರದಲ್ಲಿ ಹೇಳಲ್ಪಟ್ಟ ವಸ್ತು ಯಾವುದೆಂದು ವಸ್ತುನಿರ್ದೇಶ ಮಾಡಿದ್ದಾರೆ. ಕಮಲಾಪತಿರ್ವಿಜಯತಿ- ಭಗವಂತನಿಗೆ ಯಾವಾಗಲೂ ಜಯವೇ ಇರುವುದರಿಂದ ಜಯವಾಗಲಿ ಎಂದರೆ ಉತ್ಕೃಷ್ಟನಾಗಿದ್ದಾನೆ = ಎಲ್ಲರಿಗಿಂತಲೂ ಮಿಗಿಲಾಗಿದ್ದಾನೆ ಎಂದರ್ಥ. ಭಗವಂತನು ಉತ್ಕೃಷ್ಟನಾಗಿದ್ದಾನೆ ಎನ್ನಲು 'ಅಬ್ಜಭವೇಶ- ವಂದಿತನಾಗಿರುವುದೂ ಹಾಗೂ 'ಅನಂತವೂ ವೈಭವೋಪೇತವೂ ಆದ ಶಕ್ತಿ, ಜ್ಞಾನಾನಂದಾದಿ ಸದ್ಗುಣವಿರುವುದು' ಎಂಬ ಎರಡು ಹೇತುಗಳನ್ನು ಹೇಳಲಾಗಿದೆ. ಅನಂತವಿಭವ ಎಂಬಲ್ಲಿ ಅನಂತವೆಂದರೆ ಪೂರ್ಣವೆಂದರ್ಥ. ಈ ಪೂರ್ಣತ್ವವೆಂಬ ಅನಂತತ್ವವಿಶೇಷಣವನ್ನು ವಿಭವ, ಆನಂದ, ಶಕ್ತಿ, ಜ್ಞಾನಗಳಿಗೂ ಸೇರಿಸಬೇಕು. ಇದರಿಂದಾಗಿ ಪೂರ್ಣವಾದ ಐಶ್ವರ್ಯವುಳ್ಳವನು, ಪೂರ್ಣಾನಂದವುಳ್ಳವನು, ಪೂರ್ಣಶಕ್ತಿ- ಯುಳ್ಳವನು ಭಗವಂತನೆಂದು ಸಿದ್ಧಿಸುತ್ತದೆ. [^1]. 'ಯಂ ಕಾಮಯೇ ತಂ ತಮುಗ್ರಂ ಕೃಣೋಮಿ । ತಂ ಬ್ರಹ್ಮಾಣಂ ತಮೃಷಿಂ' ಇತ್ಯಾದಿ. 'ಮಮ ಯೋನಿಃ ಅಪ್ಸ್ವಂತಃಸಮುದ್ರೇ' – ಅಂಭೃಣೀಸೂಕ್ತ. ಬ್ರಹ್ಮರುದ್ರಾದಿವಂದಿತತ್ವ ಸಿದ್ಧವಾದ ಮೇಲೆ ಜಗದ್ವಂದ್ಯತ್ವವು ಸಿದ್ಧಿಸಿದಂತೆಯೇ. ಈ ಬ್ರಹ್ಮರುದ್ರಾದಿಗಳಿಗೂ ಸ್ವೇಚ್ಛಯಾ ಬ್ರಹ್ಮಾದಿಪದವಿಯನ್ನು ನೀಡುವ ಲಕ್ಷ್ಮೀದೇವಿಗೂ ನಿಯಾಮಕ- ನೆಂದು ಕಮಲಾಪತಿ ಎಂಬ ವಿಶೇಷಣ ಸೂಚಿಸುತ್ತದೆ. ವಿಧಿಂ ವಿಧಾಯ ಸರ್ಗಾದೌ ತೇನ ಪೃಷ್ಟೋಽಬ್ಜಲೋಚನಃ । ಆಹ ದೇವೋ ರಮೋತ್ಸಂಗವಿಲಸತ್ ಪಾದಪಲ್ಲವಃ ॥ ೨ ॥ ಅ : ರಮಾದೇವಿಯ ಉತ್ಸಂಗದಲ್ಲಿ ತನ್ನ ಚಿಗುರಿನಂತಿರುವ ಪಾದಗಳನ್ನಿರಿಸಿದ ಶ್ರೀಮನ್ನಾರಾಯಣನು ಸೃಷ್ಟಿಯ ಮೊದಲು, ತನ್ನಿಂದ ಜನಿಸಿದ ಬ್ರಹ್ಮದೇವನು ಕೇಳಿದ ಪ್ರಶ್ನೆಗಳಿಗೆ ಹೀಗೆ ಉತ್ತರ ನೀಡಿದನು. ವ.ಟೀ - ಸರ್ಗಾದೌ = ಜಗದುತ್ಪತೇಃ ಪೂರ್ವಮ್, ವಿಧಿಂ = ಬ್ರಹ್ಮಾಣಂ, ರಮಾಯಾ ಉತ್ಸಂಗಃ ತಸ್ಮಿನ್ ವಿಲಸನ್ಪಾದಪಲ್ಲವಃ ಯಸ್ಯ ಸಃ । ತಥಾ ಸುಖೋಪವಿಷ್ಟಃ ವಿಷ್ಣು ವಿಧಿಮಾಹ ಇತ್ಯನೇನ ವಿಷ್ಣೋಃ ವಿಪ್ರಲಂಭಕತ್ವಾದಯೋ ದೋಷಾಃ ಪರಿಹೃತಾ ಭವತಿ ॥ ಟೀಕಾರ್ಥ - ಇಲ್ಲಿರುವ ಸರ್ಗಾದೌ ಎಂದರೆ ಈ ಜಗತ್ತನ್ನು ಸೃಷ್ಟಿ ಮಾಡುವ ಮೊದಲು ಎಂದರ್ಥ. ವಿಧಿಂ ಎಂದರೆ ಬ್ರಹ್ಮನನ್ನು ಎಂದರ್ಥ; 'ರಮಾದೇವಿಯ ತೊಡೆಯಲ್ಲಿರಿಸಿದ ಪಾದಕಮಲ- ಗಳನ್ನಿಟ್ಟು ಸುಖವಾಗಿದ್ದ ಭಗವಂತನು ಬ್ರಹ್ಮದೇವನಿಗೆ ಉತ್ತರಿ- ಸಿದನು' ಎಂಬುದರಿಂದ ವಕ್ತ್ರಾನುಕೂಲ್ಯಕ್ಕೆ ಆವಶ್ಯವೆನಿಸಿದ ಅವಿಪ್ರಲಂಭಕತ್ವಾದಿ ದೋಷಗಳಾವುವೂ ಇರುವುದಿಲ್ಲವಾದ್ದ- ರಿಂದ ವಕ್ತ್ರಾನುಕೂಲ್ಯಾದಿಗಳು ಲಭಿಸುತ್ತವೆ ಎಂದುತಿಳಿಯಬೇಕು. [^1] [^1]. ವಿಶೇಷಾಂಶ -"ಆಹ'' ಉತ್ತರಿಸಿದನು ಎಂಬುದರಿಂದ ವಕ್ತೃವಿಗೆ ಬೇಕಾದ ಹೇಳಬೇಕೆಂಬ ಇಚ್ಛೆಯು (ವಿವಕ್ಷಾ) ಇದೆಯೆಂದೂ, 'ದೇವಃ' ಎಂಬುದರಿಂದ ವಿವಕ್ಷಿತಾರ್ಥತತ್ತ್ವಜ್ಞಾನವೂ, ಕರಣ- ಪಾಟವವೂ ಇದೆಯೆಂದೂ ಸೂಚಿಸಿ ವಕ್ತ್ರಾನುಕೂಲ್ಯವಿದೆಯೆಂದು ತಿಳಿಸಲಾಗಿದೆ. ವಿಧಯೇ ಬ್ರಹ್ಮನಿಗಾಗಿ ಎಂದದ್ದರಿಂದ ಬ್ರಹ್ಮದೇವನು ಅಧಿಕಾರಿ ಗಳಲ್ಲಿ ಉತ್ತಮನಾದ್ದರಿಂದ ತತ್ತ್ವಜ್ಞಾನಯೋಗ್ಯತೆಯೆಂಬ ಶ್ರೋತ್ರಾನುಕೂಲ್ಯವೂ ಸಿದ್ಧಿಸುತ್ತದೆ. ಸರ್ಗಾದೌ ಎಂದದ್ದರಿಂದ ವಿರಿಂಚಿಯನ್ನು ಹೊರತು ಬೇರೆ ಪ್ರಪಂಚವೇ ಸೃಷ್ಟಿಯಾಗಿಲ್ಲವಾಗಿ, ಬ್ರಹ್ಮನು ಪುತ್ರನಾದ್ದರಿಂದ ವಕ್ತುಪ್ರೀತಿವಿಷಯತ್ವವೂ ಸೂಚಿತವಾಗಿದೆ. ಪೃಷ್ಟ ಆಹ ಪ್ರಶ್ನಿಸಿದಾಗ ಉತ್ತರಿಸಿದನು ಎಂಬುದರಿಂದ ಪ್ರಸಂಗಾ ನುಕೂಲ್ಯವನ್ನು ತಿಳಿಸಿರುವರು. ಬ್ರಹ್ಮದೇವರು ಜ್ಞಾನಿಗಳಾದರೂ ವಿಶೇಷಜ್ಞಾನಕ್ಕಾಗಿ ಈ ಪ್ರಶ್ನೆಯಾಗಿದೆ. ಜಾನಂತೋಪಿ ವಿಶೇಷಾರ್ಥಜ್ಞಾನಾಯ ಸ್ಥಾಪನಾಯ ಚ । ಪೃಚ್ಛಂತಿ ಸಾಧವೋ ಯಸ್ಮಾತ್ ತಸ್ಮಾತ್ ಪೃಚ್ಛಸಿ ಪಾರ್ಥಿವ !! (ಭಾ.ತಾ.) ಪ್ರಣವಮಾಹಾತ್ಮ್ಯೆ ಅಹಮೇಕೋಽಖಿಲಗುಣೋ ವಾಚಕಃ ಪ್ರಣವೋ ಮಮ । ಅಕಾರಾದ್ಯತಿಶಾಂತಾಂತಃ ಸೋಽಯಮಷ್ಟಾಕ್ಷರೋ ಮತಃ ॥ ೩ ॥ ಅ : ಬ್ರಹ್ಮನೇ! ನಾನೊಬ್ಬನೇ ಅನಂತಗುಣಪೂರ್ಣನಾದವನು. ಅಕಾರ,ಉಕಾರ, ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂಬ ಅಷ್ಟಾಕ್ಷರಗಳಿಂದ ಕೂಡಿದ ಪ್ರಣವವಾದರೂ ನನ್ನನ್ನೇ ಮುಖ್ಯವಾಗಿ ಪ್ರತಿಪಾದಿಸುತ್ತದೆ ಎಂದು ತಿಳಿ. ವ.ಟೀ. - ಪ್ರಣವೋ ಮತ್ಸ್ವರೂಪವಾಚಕಃ । ಸೋಽಯಂ ಪ್ರಣವಃ ಅಷ್ಟಾಕ್ಷರಃ, ಕಥಮ್? ಅಕಾರಾದ್ಯತಿಶಾಂತಾಂತಃ = ಆಕಾರದ್ಯತಿ ಶಾಂತಾವಸಾನಃ, ಅಕಾರೋಕಾರ-ಮಕಾರ-ನಾದ-ಬಿಂದು-ಘೋಷ-ಶಾಂತಾತಿಶಾಂತಭೇದೇನ ಅಷ್ಟಾಕ್ಷರೋ ಮತಃ ಪ್ರಸಿದ್ಧ ಇತ್ಯರ್ಥಃ ॥ ಟೀಕಾರ್ಥ - ಪ್ರಣವವು = ಓಂಕಾರವು ನನ್ನ ಸ್ವರೂಪವನ್ನೇ ನಿರೂಪಿಸುತ್ತದೆ. ಈ ಪ್ರಣವವಾದರೂ ಎಂಟು ಅಕ್ಷರಗಳಿಂದ ಕೂಡಿದೆ. ಹೇಗೆಂದರೆ? ಅಕಾರ, ಉಕಾರ, ಮಕಾರ, ನಾದ, ಬಿಂದು, ಘೋಷ, ಶಾಂತ, ಅತಿಶಾಂತ ಎಂದು ಅಕಾರದಿಂದ ಅತಿಶಾಂತ- ದವರೆಗೂ ಎಂಟಾಗುತ್ತವೆ. ವಿಶೇಷಾಂಶ - ಓಂಕಾರದಲ್ಲಿ ಅಕಾರ-ಉಕಾರ-ಮಕಾರ-ನಾದ- ಬಿಂದು-ಘೋಷ-ಶಾಂತ-ಅತಿಶಾಂತ ಎಂದು ಎಂಟು ಅಕ್ಷರಗಳಿವೆ. ಕೆಲವು ಕಡೆ ಘೋಷದ ಬದಲಾಗಿ 'ಕಲಾ' ಎನ್ನಲಾಗಿದೆ. ಬೃಹದಾರಣ್ಯಕಭಾವಬೋಧದಲ್ಲಿ ಪ್ರಣವ ಅಕಾರೋಕಾರಮ-ಕಾರನಾದಬಿಂದುಕಲಾಶಾಂತಾತಿಶಾಂತರೂಪಾಷ್ಟಾಕ್ಷರಾತ್ಮಕಃ' ಎನ್ನಲಾಗಿದೆ. ಆದರೆ ಶ್ರೀರಾಘವೇಂದ್ರತೀರ್ಥರ ಬೃಹದಾರಣ್ಯಕಖಂಡಾರ್ಥದಲ್ಲಿ 'ಕಲಾ' ಬದಲಾಗಿ'ಘೋಷ'ವೆನ್ನಲಾಗಿದೆ. ಗುರುಗಳ ಮಾರ್ಗವನ್ನೇ ವಸುಧೇಂದ್ರರೂ ಅನುಸರಿಸಿದ್ದಾರೆ. ಕೆಲವು ಕಡೆ ಶಾಂತಾತಿ- ಶಾಂತದ ಬದಲಾಗಿ 'ಕಲಾತೀತ', 'ತತ್ಪರ'ವೆಂದು ಹೇಳಲಾಗಿದೆ.[^1] ಪ್ರಣವಪ್ರತಿಪಾದ್ಯಹರಿಮೂರ್ತಿಗಳು ಸ ವಿಶ್ವತೈಜಸಪ್ರಾಜ್ಞತುರೀಯಾತ್ಮಾಂತರಾತ್ಮನಾಮ್। ಪರಮಾತ್ಮಜ್ಞಾನಾತ್ಮಯುಜಾಂ ಮದ್ರೂಪಾಣಾಂ ಚ ವಾಚಕಃ ॥ ೪ ॥ [^1]. ಕಲಾತೀತಾ ಸಪ್ತಮಾಕ್ಷರೋ ಭವತಿ । ತತ್ಪರಶ್ಚಾಷ್ಟಮೋಽಕ್ಷರೋ ಭವತಿ' - ತಾರೋಪನಿಷತ್ ಅರ್ಥ - ಹಿಂದೆ ಹೇಳಿದ ಅಷ್ಟಾಕ್ಷರವುಳ್ಳ ಓಂಕಾರವು; ವಿಶ್ವ ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ವವೆಂಬ ನನ್ನದೇ ಆದ ಎಂಟು ರೂಪಗಳನ್ನು ಪ್ರತಿಪಾದಿಸುತ್ತದೆ. ವ.ಟೀಕಾ - ಅಷ್ಟಾಕ್ಷರಾಣಾಂ ದೇವತಾ ಆಹ - ಸ ಇತಿ ॥ ಸೋಽಯಮಷ್ಟಾಕ್ಷರವಾನ್ ಪ್ರಣವಃ । ವಿಶ್ವ-ತೈಜಸ-ಪ್ರಾಜ್ಞ-ತುರೀಯಾತ್ಮಾಂತರಾತ್ಮಪರಮಾತ್ಮಜ್ಞಾನಾತ್ಮಸಂಜ್ಞಕಾನಾಮ್ ಅಷ್ಟಾಕ್ಷರರೂಪಾಣಾಂ ಕ್ರಮೇಣ ವಾಚಕ ಇತ್ಯರ್ಥಃ ॥ ಟೀಕಾರ್ಥ- ಹಿಂದೆ ಹೇಳಿದ ಅಕಾರಾದಿ ಎಂಟು ಅಕ್ಷರಗಳಿಗೂ ಸಂಬಂಧಪಟ್ಟ ಭಗವದ್ರೂಪಗಳನ್ನು ಹೇಳುತ್ತಿದ್ದಾರೆ- 'ಸ' ಎಂಬ ಶ್ಲೋಕದಿಂದ, ಸಃ ಎಂದರೆ ಹಿಂದೆ ಹೇಳಿದ ಎಂಟಕ್ಷರವುಳ್ಳ ಪ್ರಣವವು ಎಂದರ್ಥ. ಅಕಾರಾದಿ ಎಂಟು ಅಕ್ಷರಗಳಿಗೆ ಕ್ರಮವಾಗಿ ವಿಶ್ವ, ತೈಜಸ, ಪ್ರಾಜ್ಞ, ತುರೀಯ, ಆತ್ಮ, ಅಂತರಾತ್ಮ ಪರಮಾತ್ಮ, ಜ್ಞಾನಾತ್ಮ ಎಂಬ ಎಂಟುರೂಪಗಳು ಪ್ರತಿಪಾದ್ಯವಾಗಿವೆ. ವಿಶೇಷಾಂಶ - ಯತಿಪ್ರಣವಕಲ್ಪದಲ್ಲಿ ಕೃಷ್ಣ, ನೃಸಿಂಹ, ವರಾಹ, ವಿಷ್ಣು, ಪರಂಜ್ಯೋತಿ, ಪರಂಬ್ರಹ್ಮ, ವಾಸುದೇವ ಎಂದು ಭಗವಂತನ ಬೇರೆ ರೂಪಗಳನ್ನು ಅಕಾರಾದಿಗಳಿಂದ ಪ್ರತಿಪಾದ್ಯ- ವೆನ್ನಲಾಗಿದೆ. ಇದನ್ನು ಶ್ರೀಮದಾಚಾರ್ಯರು 'ಮದ್ರೂಪಾಣಾಂ ಚ ವಾಚಕಃ' ಎಂಬಲ್ಲಿರುವ 'ಚ'ಕಾರದಿಂದ ಹೇಳಿದ್ದಾರೆ. ತತ್ವಸಾರದಲ್ಲಿ ಸೃಷ್ಟಿಯನ್ನು ಮಾಡುವ ಬ್ರಹ್ಮಾಂತರ್ಯಾಮಿ- ಯಾದ ರೂಪ, ಪಾಲನೆ ಮಾಡುವ ವಿಷ್ಣುರೂಪ, ಸಂಹಾರ ಮಾಡುವ ಶಿವಾಂತರ್ಯಾಮಿರೂಪ, ಅನಿರುದ್ಧಾದಿ ಪಂಚ ರೂಪಗಳು; ಇವು ಸೇರಿ ಒಟ್ಟು ಎಂಟುರೂಪಗಳು ಎಂದು ಹೇಳಿದೆ. ಐವತ್ತು ಮಾತೃಕಾರೂಪಗಳು ತದ್ರೂಪಭೇದಾಃ ಪಂಚಾಶನ್ಮೂರ್ತಯೋ ಮಮ ಚಾಪರಾಃ । ಪಂಚಾಶದ್ವರ್ಣವಾಚ್ಯಾಸ್ತಾ ವರ್ಣಾಸ್ತಾರಾರ್ಣಭೇದಿತಾಃ ॥ ೫ ॥ ಅರ್ಥ - ಈ ವಿಶ್ವಾದಿಎಂಟುರೂಪಗಳಿಂದ ವ್ಯಕ್ತಗಳಾದ, ವಿಶ್ವಾದಿ ರೂಪಗಳಿಂದ ಬೇರೆಯಾದ ನನ್ನ ಐವತ್ತು ರೂಪಗಳಿವೆ. ಓಂಕಾರದ ಅಷ್ಟಾಕ್ಷರಗಳಿಂದ ಅಭಿವ್ಯಕ್ತಗಳಾದ ಅಕಾರಾದಿ-ಳಕಾರದವರೆಗಿನ ಐವತ್ತು ವರ್ಣಗಳು ಈ ಐವತ್ತು ರೂಪಗಳನ್ನು ಪ್ರತಿಪಾದಿಸುತ್ತವೆ. ವ.ಟೀ. - ಮಾತೃಕಾದೇವತಾ ಆಹ - ತದ್ರೂಪಭೇದಾ ಇತ್ಯಾದಿ ॥ ಪಂಚಾಶದಕ್ಷರಾಣಾಂ ಮೂರ್ತಯಃ, ಅಥ ನಾರಾಯಣಾಷ್ಟಾಕ್ಷರ ಮೂರ್ತಯಶ್ಚ ತದ್ರೂಪ- ಭೇದಾಃ । ಪ್ರಣವಾಷ್ಟಾಕ್ಷರವಾಚ್ಯ ಅಷ್ಟರೂಪೇಭ್ಯೋ ವಿಶ್ವಾದಿಭ್ಯೋ ಜಾತಾ ಇತ್ಯರ್ಥ: ॥ ಟೀಕಾರ್ಥ – ಅಕಾರಾದಿ ಐವತ್ತು ಅಕ್ಷರಗಳಿಂದ ಪ್ರತಿಪಾದ್ಯ ದೇವತೆಗಳನ್ನು 'ತದ್ರೂಪಭೇದಾಃ' ಎಂಬುದರಿಂದ ತಿಳಿಸುವರು. ಅಕಾರಾದಿ ಳಕಾರದವರೆಗಿನ ಐವತ್ತು ಅಕ್ಷರ ಪ್ರತಿಪಾದ್ಯ ಅಜಾದಿ ಮೂರ್ತಿಗಳಾದರೂ, ನಾರಾಯಣಾಷ್ಟಾಕ್ಷರಪ್ರತಿಪಾದ್ಯ ವಿಶ್ವಾದಿ ಎಂಟು ಮೂರ್ತಿಗಳಿಂದ ಅಭಿವ್ಯಕ್ತವಾದವುಗಳು. ದ್ವಿರಷ್ಟಪಂಚಕಚತುಃಪಂಚೇತ್ಯೇವಾಷ್ಟವರ್ಗಗಾಃ । ಅಜ ಆನಂದ ಇಂದ್ರೇಶಾವುಗ್ರ ಊರ್ಜ ಋತಂಭರಃ ॥ ೬ ॥ ಅರ್ಥ - ದ್ವಿರಷ್ಟ : ಹದಿನಾರುಸ್ವರಗಳು, ಪಂಚಕ = ಕವರ್ಗದಿಂದ ಪವರ್ಗ-ದವರೆಗಿನ ಐದೈದರ ಐದು ವ್ಯಂಜನಗುಂಪು, ಚತುಃ = ಯರಲವಗಳ ನಾಲ್ಕು, ಪಂಚ = ಶಷಸಹಳಗಳ ಐದು ಅಕ್ಷರಗಳ ಒಂದೊಂದು, ಹೀಗೆ ಐವತ್ತು ಅಕ್ಷರಗಳು ಎಂಟು ಗುಂಪುಗಳಾಗಿವೆ. [^1] ವ.ಟೀ. - ಪಂಚಾಶನ್ಮೂರ್ತಯಶ್ಚ ಪಂಚಾಶದಕ್ಷರವಾಚ್ಯಾಃ । ತಾನಿ ಪಂಚಾಶದಕ್ಷರಾಣಿ ಪ್ರಣವಾಷ್ಟಾಕ್ಷರೇಭ್ಯೋ ಜಾತಾನಿ। ತತ್ಕಥಮಿತ್ಯತ ಆಹ - ದ್ವಿರಷ್ಟೇತಿ ॥ ಷೋಡಶ ಅಕಾರಾದ್ಯಾ ಉಚ್ಯಂತೇ । ಪಂಚಕಮಿತಿ ಕವರ್ಗಾದಿವರ್ಗಪಂಚಕಮ್ । ಚತುರಿತಿ ಯರಲವಾಃ । ಪಂಚೇತಿ - ಶಷಸಹಲಾಃ ಏವಮಷ್ಟ ವರ್ಗತ್ವೇನ ಸ್ಥಿತಾಃ ವರ್ಣಾಃ ಪಂಚಾಶದ್ವರ್ಣಾ: । ಏಕೈಕ ವರ್ಣಾದಕೈಕವರ್ಗಕ್ರಮೇಣಪ್ರಣವಾಷ್ಟಾಕ್ಷರೇಭ್ಯೋ ಜಾತಾ ಇತ್ಯರ್ಥಃ । ಟೀಕಾರ್ಥ-ಐವತ್ತು ಅಜಾದಿಮೂರ್ತಿಗಳು ಅಕಾರಾದಿ ಐವತ್ತು ವರ್ಣಗಳಿಂದ ವಾಚ್ಯಗಳಾಗಿವೆ. ಈ ಐವತ್ತು ಅಕ್ಷರಗಳಾದರೂ ಓಂಕಾರದ ಎಂಟು ಅಕ್ಷರಗಳಿಂದ [^1]. ಅ,ಆ,ಇ, ಈ, ಉ,ಊ,ಋ,ಋ,ಲೃ,ಲೄ, ಎ,ಐ,ಒ, ಔ,ಅಂ,ಅಃ - ೧೬ ಉ- ಕ,ಖ,ಗ,ಘ,ಜ ೦೫ ಮ - ಚ,ಛ,ಜ,ಝ,ಞ ೦೫ ನಾದ - ಟ,ಠ,ಡ,ಢ,ಣ ೦೫ ಬಿಂದು - ತ,ಥ,ದ,ಧ,ನ ೦೫ ಘೋಷ - ಪ,ಫ,ಬ,ಭ,ಮ ೦೫ ಶಾಂತ- ಯ,ರ,ಲ,ವ ೦೪ ಅತಿಶಾಂತ- ಶ,ಷಸ,ಹಳ ೦೫ ೫೦ ಹುಟ್ಟಿರುವಂತಹವು ಎನ್ನಲಾಯಿತು. ಅದು ಹೇಗೆಂದು ದ್ವಿರಷ್ಟ ಎಂಬ ಶ್ಲೋಕದಲ್ಲಿ ತಿಳಿಸುತ್ತಾರೆ. 'ದ್ವಿರಷ್ಟ' ಎಂದರೆ ಅಕಾರಾದಿ ಹದಿನಾರು ಸ್ವರಾಕ್ಷರಗಳು, ಪಂಚಕವೆಂದರೆ ಕವರ್ಗ, ಚವರ್ಗ, ಟವರ್ಗ, ತವರ್ಗ, ಪವರ್ಗಗಳೆಂಬ ಐದಕ್ಷರಗಳ ಐದು ಗುಂಪು ಹೇಳಲ್ಪಡುತ್ತವೆ. 'ಚತುಃ' ಎಂದರೆ ಯರಲವ ಅಂತಸ್ಥಾಕ್ಷರಗಳು, ಪಂಚ ಎಂದರೆ ಊಷ್ಮಾಕ್ಷರಗಳಾದ ಶಷಸಹಳ ಅಕ್ಷರಗಳು. ಹೀಗೆ ಅಷ್ಟಾಕ್ಷರದ ಒಂದೊಂದು ಅಕ್ಷರದಿಂದ ಎಂಟು ಗುಂಪುಗಳಾ- ಗಿರುವ ಐವತ್ತು ವರ್ಣಗಳು, ಋಘಲೃಶೌ ಲೄಜಿರೈಕಾತ್ಮೈರ ಓಜೋಭೃದೌರಸಃ । ಅಂತೋSರ್ಧಗರ್ಭಃ ಕಪಿಲಃ ಖಪತಿರ್ಗರುಡಾಸನಃ II ೭ ॥ ಘರ್ಮೋ ಙಸಾರಶ್ಚಾರ್ವಂಗಶ್ಛಂದೋಗಮ್ಯೋ ಜನಾರ್ದನಃ । ಝಾಟಿತಾರಿರ್ಞಮಷ್ಟಂಕೀ ಠಲಕೋ ಡಲಕೋ ಢರೀ ॥ ೮ ॥ ಣಾತ್ಮಾತಾರಸ್ಥಭೋ ದಂಡೀ ಧನ್ವಿ ನಮ್ಯಃ ಪರಃ ಫಲೀ। ಬಲಿ ಭಗೋ ಮನುರ್ಯಜ್ಞೋ ರಾಮೋ ಲಕ್ಷ್ಮೀಪತಿರ್ವರಃ ॥ ೯ ॥ ಶಾಂತಸಂವಿತ್ ಷಡ್ಗುಣಶ್ಚ ಸಾರಾತ್ಮಾ ಹಂಸಳಾಳುಕೌ । ಪಂಚಾಶನ್ಮೂರ್ತಯಸ್ತ್ವೇತಾ ಮಮಾಕಾರಾದಿಲಕ್ಷಕಾಃ ॥ ೧೦ ॥ ಅರ್ಥ - ಅಕಾರ - ಅಂ ಅಜಾಯ ನಮಃ । ಆಂ ಆನಂದಾಯ ನಮಃ । ಇಂ ಇಂದ್ರಾಯ ನಮಃ । ಈಂ ಈಶಾನಾಯ ನಮಃ । ಉಂ ಉಗ್ರಾಯ ನಮಃ ।ಊಂ ಊರ್ಜಾಯ ನಮಃ । ಋಂ ಋತುಂಭ- ರಾಯ ನಮಃ । ೠಂ ೠಘಾಯ ನಮಃ । ಲೃಂ ಲೃಶಾಯ ನಮಃ । ಲೄಂ ಲೄಜಯೇ ನಮಃ । ಏಂ ಏಕಾತ್ಮನೇ ನಮಃ । ಐಂ ಐರಾಯ ನಮಃ । ಓಂ ಓಜ(ಜೋ ?)ಭೃತೇ ನಮಃ । ಔಂ ಔರಸಾಯ ನಮಃ । ಅಂ ಅಂತಾಯ ನಮಃ । ಅಃ ಅರ್ಧಗರ್ಭಾಯ ನಮಃ । ಇವಿಷ್ಟು ಹದಿನಾರು ಅಕಾರವಾಚ್ಯ ರೂಪಗಳು. ಉಕಾರ- ಕಂ ಕಪಿಲಾಯ ನಮಃ । ಖಂ ಖಪತಯೇ ನಮಃ । ಗಂ ಗರುಡಾಸನಾಯ ನಮಃ । ಘಂ ಘರ್ಮಾಯ ನಮಃ । ಙಂ ಙಸಾರಾಯ ನಮಃ । ಮಕಾರ - ಚಂ ಚಾರ್ವಂಗಾಯ ನಮಃ । ಛಂ ಛಂದೋಗಮ್ಯಾಯ ನಮಃ । ಜಂ ಜನಾರ್ದನಾಯ ನಮಃ । ಝಂ ಝಟಿತಾರಯೇ ನಮಃ । ಞಂ ಞಮಾಯ ನಮಃ । ನಾದ- ಟಂ ಟಂಕಿನೇ ನಮಃ । ಠಂ ಠಳಕಾಯ ನಮಃ । ಡಂ ಡರಕಾಯ ನಮಃ । ಢಂ ಢರಿಣೇ ನಮಃ । ಣಂ ಣಾತ್ಮನೇ ನಮಃ । ಬಿಂದು - ತಂ ತಾರಾಯ ನಮಃ । ಥಂ ಥಭಾಯ ನಮಃ । ದಂ ದಂಡಿನೇ ನಮಃ । ಧಂ ಧನ್ವಿನೇ ನಮಃ । ನಂ ನಮ್ಯಾಯ ನಮಃ । ಘೋಷ-ಪಂ ಪರಾಯ ನಮಃ । ಫಂ ಫಲಿನೇ ನಮಃ । ಬಂ ಬಲಿನೇ ನಮಃ । ಭಂ ಭಗಾಯ ನಮಃ । ಮಂ ಮನವೇ ನಮಃ । ಶಾಂತ- ಯಂ ಯಜ್ಞಾಯ ನಮಃ । ರಂ ರಾಮಾಯ ನಮಃ । ಲಂ ಲಕ್ಷ್ಮೀಪತಯೇ ನಮಃ । ವಂ ವರಾಯ ನಮಃ । ಅತಿಶಾಂತ-ಶಂ ಶಾಂತಸಂವಿದೇ ನಮಃ । ಷಂ ಷಡ್ಗುಣಾಯ ನಮಃ । ಸಂ ಸಾರಾತ್ಮನೇ ನಮಃ । ಹಂ ಹಂಸಾಯ ನಮಃ । ಳಂ ಳಾಳುಕಾಯ ನಮಃ । ಈ ಐವತ್ತುಮೂರ್ತಿಗಳು ಅಕಾರಾದಿ ಐವತ್ತುವರ್ಣಗಳಿಂದ ವಾಚ್ಯಗಳಾಗಿವೆ. ವ.ಟೀ - ಪಂಚಾಶದ್ವರ್ಣವಾಚ್ಯಾಃ ಕಾ ಇತ್ಯಾಹ - ಅಜೇತಿ ॥ ಕ್ಷಕಾರಸ್ಯ ನೃಸಿಂಹೋ ದೇವತಾ । ಏತಾಃ ಪಂಚಾಶನ್ಮೂರ್ತಯಶ್ಚ ಮಮ ಅಕಾರಾದೀನಾಂ ರೂಪಗುಣಕ್ರಿಯಾದೀನಾಂ ಲಕ್ಷಕಾಃ ಜ್ಞಾಪಕಾಃ ಇತ್ಯರ್ಥ: । ವರ್ಣಾನಾಂ ವಾಚಕಶತ್ವಶಕ್ತಿಸ್ತು ಪರಮಾತ್ಮಾಧೀನೇತಿ ಯಾವತ್ । ಟೀಕಾರ್ಥ - ಪಂಚಾಶದ್ವರ್ಣಗಳಿಂದ ವಾಚ್ಯಗಳಾದ ಮೂರ್ತಿಗಳು ಯಾವುವೆಂದು ಅಜ ಇತ್ಯಾದಿ ಶ್ಲೋಕಗಳಿಂದ ತಿಳಿಸುವರು. ಕ್ಷಕಾರಕ್ಕೆ ನರಸಿಂಹ ದೇವತೆಯೆಂದು ತಿಳಿಯಬೇಕು. ಈ ನನ್ನ ಐವತ್ತು ಮೂರ್ತಿಗಳು ಅಕಾರಾದಿಅಕ್ಷರಗಳಿಗೂ ರೂಪ, ಗುಣಕ್ರಿಯೆಗಳಿಗೂ ಜ್ಞಾಪಕಗಳಾಗಿವೆ. ಅಕಾರಾದಿವರ್ಣಗಳು ಭಗವಂತನನ್ನು ತಿಳಿಸುವ ಶಕ್ತಿಯಾದರೂ ಭಗವದಧೀನವೆಂದು ತಿಳಿಯಬೇಕು.[^1]] ಅಷ್ಟಾಕ್ಷರ- ವ್ಯಾಹೃತಿಮಂತ್ರಗಳು ನಾರಾಯಣಾಷ್ಟಾಕ್ಷರಶ್ಚ ತಾರಾಷ್ಟಾಕ್ಷರಭೇದವಾನ್ । [^1]. ವಿಶೇಷಾಂಶ - ಕ್ಷಕಾರವು ನೃಸಿಂಹನನ್ನು ತಿಳಿಸುತ್ತದೆ. ಕ್ಷ ಎಂಬುದು ಕ +ಷ ಗಳ ಯೋಗದಿಂದ ಆಗಿದ್ದು ಕಕಾರವು ಕಾಡಿನಲ್ಲಿ ವಾಸಿಸುವ ಕಾನನರಾಜನಾದ ಸಿಂಹವನ್ನು ಹೇಳಿದರೆ ಷಕಾರವು ಪುರುಷನನ್ನು ಹೇಳುತ್ತಾ ಸಿಂಹ + ಪುರುಷರ ಸಂಯೋಗವನ್ನೇ ಕ್ಷಕಾರವು ಸೂಚಿಸುತ್ತದೆ. ಆದ್ಯೈಸ್ತಾರಚತುವರ್ಣೈರ್ಭಿನ್ನಾವ್ಯಾಹೃತಯಃ ಕ್ರಮಾತ್ ॥ ೧೧ ॥ ಅರ್ಥ- 'ಓಂ ನಮೋ ನಾರಾಯಣಾಯ' ಎಂಬ ಅಷ್ಟಾಕ್ಷರ ಮಂತ್ರದ ಎಂಟು ಅಕ್ಷರಗಳೂ ಓಂಕಾರದ ಎಂಟು ಅಕ್ಷರಗಳಿಂದ ವ್ಯಕ್ತವಾಗಿವೆ. ಹಾಗೆಯೇ ಓಂಕಾರದ ಮೊದಲಿನ ಅ-ಉ-ಮ-ನಾದಗಳಿಂದ ಕ್ರಮವಾಗಿ ಭೂಃ, ಭುವಃ, ಸ್ವಃ, ಭೂರ್ಭುವಸ್ಸ್ವಃ ಎಂಬ ವ್ಯಸ್ತಸಮಸ್ತವ್ಯಾಹೃತಿಗಳು ಅಭಿವ್ಯಕ್ತವಾಗಿವೆ. ವ.ಟೀ.- ಅಧುನಾ ನಾರಾಯಣಾಷ್ಟಾಕ್ಷರೋತ್ಪತ್ತಿಮಾಹ- ನಾರಾಯಣೇತಿ ॥ ತಾರಾಷ್ಟಾಕ್ಷರೇಭ್ಯಃ = ಪ್ರಣವಾಷ್ಟಾಕ್ಷರೇಭ್ಯಃ, ಕ್ರಮೇಣ ನಾರಾಯಣಾಷ್ಟಾಕ್ಷರೋ ಜಾತ ಇತ್ಯರ್ಥಃ । ವ್ಯಾಹೃತ್ಯು- ತ್ಪತ್ತಿಮಾಹ - ಆದ್ಯೈರಿತಿ ॥ ತಾರಸ್ಯ = ಪ್ರಣವಸ್ಯ, ಆದ್ಯೈಃ ಚತುರ್ವರ್ಣೈಃ ಅಕಾರೋಕಾರಮಕಾರಬಿಂದುಭಿಃ ವ್ಯಾಹೃತಯೋ ವ್ಯಸ್ತ-ಸಮಸ್ತ-ನ್ಯಾಯೇನ ಚತಸ್ರಃ ಕ್ರಮಾದುತ್ಪನ್ನಾಃ ॥ ಟೀಕಾರ್ಥ - ಈಗ ನಾರಾಯಣಾಷ್ಟಾಕ್ಷರವು ಉತ್ಪನ್ನವಾದ ರೀತಿ- ಯನ್ನು ಹೇಳುವರು ನಾರಾಯಣ ಇತ್ಯಾದಿ ಶ್ಲೋಕದಿಂದ, ತಾರಾಷ್ಟಾಕ್ಷರೇಭ್ಯಃ ಎಂದರೆ ಪ್ರಣವದ ಎಂಟು ಅಕ್ಷರಗಳಿಂದ ಎಂದರ್ಥ. ಕ್ರಮೇಣ ಓಂ ನಮೋ ನಾರಾಯಣಾಯ ಎಂಬ ಅಷ್ಟಾಕ್ಷರಮಂತ್ರವು ಉತ್ಪನ್ನವಾಯಿತು. ಇನ್ನು ವ್ಯಾಹೃತಿಯು ಉತ್ಪನ್ನವಾದ ಬಗೆಯನ್ನು ಆದ್ಯೈಃ ಎಂಬುದರಿಂದ ಹೇಳುವರು. ಪ್ರಣವದ ಮೊದಲಿನ ನಾಲ್ಕು ಅಕ್ಷರಗಳಾದ ಅಕಾರ, ಉಕಾರ, ಮಕಾರ, ಬಿಂದುಗಳಿಂದ ಭೂಃ, ಭುವಃ, ಸ್ವಃ ಎಂಬ ಮೂರು ವ್ಯಸ್ತ ವ್ಯಾಹೃತಿಗಳೂ, ಭೂರ್ಭುವಸ್ಸ್ವಃ ಎಂಬ ಸಮಸ್ತವ್ಯಾಹೃತಿಯೂ ಕ್ರಮವಾಗಿ ಅಂದರೆ ಅಕಾರದಿಂದ ಭೂಃ, ಉಕಾರದಿಂದ ಭುವಃ, ಮಕಾರದಿಂದ ಸ್ವಃ, ಬಿಂದುವಿನಿಂದ ಅಥವಾ ನಾದದಿಂದ ಭೂರ್ಭುವಸ್ವಃ ಎಂಬ ವ್ಯಾಹೃತಿಯೂ ಹುಟ್ಟಿತು.[^1] ವಾಸುದೇವದ್ವಾದಶಾಕ್ಷರಮಂತ್ರದ ಉತ್ಪತ್ತಿ [^1]. ವಿಶೇಷಾಂಶ - ವಸುಧೇಂದ್ರರು ಅಕಾರ, ಉಕಾರ, ಮಕಾರ, ಬಿಂದು, ನಾದವೆಂದು; ಬಿಂದುವು ನಾಲ್ಕನೆ ಅಕ್ಷರವಾಗಿಯೂ, ನಾದವು ಐದನೆ ಅಕ್ಷರವಾಗಿಯೂ ಹೇಳಿದ್ದಾರೆ. ರಾಘವೇಂದ್ರರೂ ಸಹ ನಾದವನ್ನೇ ಮೊದಲು ಹೇಳಿದ್ದಾರೆ. ಇದಕ್ಕೆ ಮಾಂಡೂಕೋಪನಿಷತ್ತಿನ ಸಮಾಖ್ಯೆ ಇದೆ. ಶ್ರೀಮದಾಚಾರ್ಯರೂ ಸಹ 'ಬಿಂದುರ್ವಕ್ತ್ಯನಿರುದ್ಧಕಮ್, ಪ್ರದ್ಯುಮ್ನಾದೀನ್ ನಾದಪೂರ್ವಾಃ' ಎಂದು ಬಿಂದುವನ್ನೇ ಮೊದಲು ಹೇಳಿದ್ದಾರೆ. ಇದನ್ನೇ ಬಳಸಿಕೊಂಡಿರುವಂತಿದೆ. ಅನಿರುದ್ಧಾದಿಕಾಸ್ತಾಸಾಂ ದೇವತಾ ವ್ಯುತ್ಕ್ರಮೇಣ ವಾ । ತಾಶ್ಚತುಮೂರ್ತಯಸ್ತ್ವೇವ ದ್ವಾದಶಾರ್ಣಪದೋದಿತಾಃ ॥ ೧೨ ॥ ಅರ್ಥ - ಈ ನಾಲ್ಕು ವ್ಯಾಹೃತಿಗಳಿಗೆ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ಎಂಬ ನಾಲ್ಕು ಭಗವಂತನ ರೂಪಗಳು ದೇವತೆಗಳಾಗಿವೆ. ಈ ನಾಲ್ಕು ಭಗವದ್ರೂಪಗಳೇ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ದ್ವಾದಶಾಕ್ಷರದ ಪದಗಳಿಂದ ವ್ಯುತ್ಕ್ರಮವಾಗಿ ಪ್ರತಿಪಾದ್ಯವಾಗಿವೆ. ಓಂಕಾರದಿಂದ ವಾಸುದೇವ, ನಮೋ - ಸಂಕರ್ಷಣ, ಭಗವತೇ - ಪ್ರದ್ಯುಮ್ನ, ವಾಸುದೇವಾಯ ಪದದಿಂದ ಅನಿರುದ್ಧ ಹೀಗೆ ಹಿಂದು ಹೇಳಿದ ಕ್ರಮಕ್ಕಿಂತ ವ್ಯತ್ಯಸ್ತ ವಾಗಿ ಪ್ರತಿಪಾದಿತವಾಗಿವೆ. ವ.ಟೀ.- ವ್ಯಾಹೃತೀನಾಂ ದೇವತಾಮಾಹ - ಅನಿರುದ್ಧಾದೀತಿ ॥ ತಾಸಾಂ ವ್ಯಾಹೃತೀನಾಮ್ ಅನಿರುದ್ಧ-ಪ್ರದ್ಯುಮ್ನ-ಸಂಕರ್ಷಣ-ವಾಸುದೇವಾ: ವ್ಯುತ್ಕ್ರಮೇಣ ವಾಸುದೇವಾದಿಕಾ ವಾ ಜ್ಞೇಯಾ ಇತಿ ಶೇಷಃ । ಅನಿರುದ್ಧಾದ್ಯಾಃ ಚತಸ್ರೋ ಮೂರ್ತಯೋ ದ್ವಾದಶಾಕ್ಷರಚತುಷ್ಟಯಪ್ರತಿಪಾದ್ಯಾಃ । ಟೀಕಾರ್ಥಃ - ವ್ಯಾಹೃತಿಗಳಿಂದ ಪ್ರತಿಪಾದ್ಯದೇವತೆಯನ್ನು ಅನಿರುದ್ಧಾದಿಕಾಸ್ತಾಸಾಂ ಇತ್ಯಾದಿ ಪದ್ಯದಿಂದ ತಿಳಿಸುವರು. ತಾಸಾಂ ಎಂದರೆ ವ್ಯಾಹೃತೀನಾಂ ಎಂದರ್ಥ. ಈ ನಾಲ್ಕು ಭೂರಾದಿ ವ್ಯಾಹೃತಿಗಳಿಗೆ ಅನಿರುದ್ಧ, ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ಈ ಕ್ರಮದಿಂದಾಗಲೀ ಅಥವಾ ವ್ಯುತ್ಕ್ರಮದಿಂದಾ- ಗಲೀ ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂದಾ- ಗಲೀ ಪ್ರತಿಪಾದ್ಯದೇವತೆಗಳಾಗಿರುತ್ತವೆ. 'ಹೀಗೆ ತಿಳಿಯಬೇಕು' ಎಂದು ಶೇಷಪೂರಣಮಾಡಿಕೊಳ್ಳಬೇಕು. ಅನಿರುದ್ಧಾದಿ ನಾಲ್ಕು ಮೂರ್ತಿಗಳೇ ಓಂ ನಮೋ ಭಗವತೇ ವಾಸುದೇವಾಯ ಎಂಬ ದ್ವಾದಶಾಕ್ಷರ ಮಂತ್ರದ ನಾಲ್ಕು ಪದಗಳಿಂದ ಪ್ರತಿಪಾದ್ಯವಾಗಿವೆ. ನಾರಾಯಣಾಷ್ಟಾಕ್ಷರಾಚ್ಚ ವ್ಯಾಹೃತಿಭ್ಯಸ್ತಥೈವ ಚ । ವಿಭೇದೋ ದ್ವಾದಶಾರ್ಣಾನಾಂ ಕೇಶವಾದ್ಯಾಶ್ಚದೇವತಾಃ ॥ ೧೩ ॥ ಅರ್ಥ - ವಾಸುದೇವಾದ್ವಾದಶಾಕ್ಷರ ಮಂತ್ರದಲ್ಲಿರುವ ಹನ್ನೆರಡು ವರ್ಣಗಳಲ್ಲಿ ಎಂಟು ವರ್ಣಗಳು ಅಷ್ಟಾಕ್ಷರಮಂತ್ರದ ಎಂಟು ಅಕ್ಷರಗಳಿಂದಲೂ, ನಾಲ್ಕು ವ್ಯಾಹೃತಿಗಳಿಂದಲೂ ಅಭಿವ್ಯಕ್ತ- ವಾಗಿವೆ. ಈ ದ್ವಾದಶಾಕ್ಷರಮಂತ್ರದ ಹನ್ನೆರಡು ಅಕ್ಷರಗಳಿಗೆ ಕೇಶವಾದಿ ಹನ್ನೆರಡು ರೂಪಗಳು ವಾಚ್ಯವಾಗಿವೆ. ವ.ಟೀ.- ದ್ವಾದಶಾಕ್ಷರಮಂತ್ರಾಣಾಂ ನಾರಾಯಣಾಷ್ಟಾಕ್ಷರಾದ್ ವ್ಯಾಹೃತಿ-ಚತುಷ್ಟಯಾಚ್ಚ ಉತ್ಪತ್ತಿರ್ಜ್ಞೇಯಾ । ದ್ವಾದಶಾ- ಕ್ಷರಾಣಾಂ ಕೇಶವಾದ್ಯಾ ದ್ವಾದಶದೇವತಾ ಜ್ಞೇಯಾ ಇತ್ಯರ್ಥ: ॥ ಟೀಕಾರ್ಥ- ದ್ವಾದಶಾಕ್ಷರಮಂತ್ರದಲ್ಲಿರುವ ಹನ್ನೆರಡು ಅಕ್ಷರಗಳಲ್ಲಿ ಎಂಟಕ್ಷರ ಅಷ್ಟಾಕ್ಷರದಿಂದಲೂ, ನಾಲ್ಕು ಅಕ್ಷರಗಳು ನಾಲ್ಕು ವ್ಯಾಹೃತಿಗಳಿಂದ ಉತ್ಪನ್ನವಾದವೆಂದು ತಿಳಿಯಬೇಕು. ಈ ದ್ವಾದಶಾಕ್ಷರದ ಹನ್ನೆರಡು ಅಕ್ಷರಗಳಿಗೆ ಕೇಶವ,ನಾರಾಯಣ, ಮಾಧವಾದಿ ಹನ್ನೆರಡು ರೂಪಗಳು ದೇವತೆಗಳಾಗಿವೆ. ವೇದಮಾತೆಗಾಯತ್ರಿಯ ನಿಷ್ಪತ್ತಿ ನಾರಾಯಣಾಷ್ಟಾಕ್ಷರಾಚ್ಯ ವ್ಯಾಹೃತಿತ್ರಿಗುಣಾತ್ ಪುನಃ । ವೇದಮಾತಾ ತು ಗಾಯತ್ರೀ ದ್ವಿಗುಣಾ ದ್ವಾದಶಾಕ್ಷರಾತ್ ॥ ೧೪ ॥ ಅರ್ಥ - ಮೂರು ಬಾರಿ ಉಚ್ಚರಿಸಲ್ಪಟ್ಟ ಅಷ್ಟಾಕ್ಷರಮಂತ್ರದಿಂದ 8x3:24; ಎರಡುಬಾರಿ ಆವೃತ್ತಿ ಮಾಡಿದ ದ್ವಾದಶಾಕ್ಷರ ಮಂತ್ರ- ದಿಂದ ವೇದಗಳಿಗೆ ಮಾತೆಯೆನಿಸಿದ ಇಪ್ಪತ್ತನಾಲ್ಕು ಅಕ್ಷರಗಳುಳ್ಳ ಗಾಯತ್ರೀಮಂತ್ರವು ಉತ್ಪನ್ನವಾಗಿದೆ. ವ.ಟೀ.-ಗಾಯತ್ರ್ಯುತ್ಪತ್ತಿಮಾಹ ನಾರಾಯಣೇತಿ ॥ ತ್ರಿಗುಣಿತ ವ್ಯಾಹರಣೇ ಅಷ್ಟಾಕ್ಷರಸ್ಯ ಚತುರ್ವಿಂಶತ್ಯಕ್ಷರತ್ವಂ ಭವತಿ । ತಸ್ಮಾತ್ ನಾರಾಯಣಾಷ್ಟಾಕ್ಷರಾತ್ ಗಾಯತ್ರ್ಯುತ್ಪನ್ನೇತ್ಯರ್ಥಃ । ಟೀಕಾರ್ಥ- ನಾರಾಯಣಾಷ್ಟಾಕ್ಷರಾಚ್ಚ ಎಂಬ ಶ್ಲೋಕದಲ್ಲಿ ಗಾಯತ್ರಿಯು ಉತ್ಪನ್ನವಾದ ಬಗೆಯನ್ನು ಹೇಳುತ್ತಾರೆ. ನಾರಾಯಣಾಷ್ಟಾಕ್ಷರಮಂತ್ರವನ್ನು ಮೂರು ಬಾರಿ ಉಚ್ಚರಿಸಿದರೆ ಇಪ್ಪತ್ತನಾಲ್ಕು ಅಕ್ಷರವಾಗುವುದರಿಂದ ನಾರಾಯಣಾಷ್ಟಾಕ್ಷರ ದಿಂದಲೇ ಗಾಯತ್ರಿಯೂ ಉತ್ಪನ್ನವಾಯಿತೆಂದು ತಿಳಿಯುತ್ತದೆ.[^1] ಗಾಯತ್ರೀವರ್ಣದೇವತೆ - ಪುರುಷಸೂಕ್ತ ಚತುರ್ವಿಂಶನ್ಮೂರ್ತಯೋಽಸ್ಯಾಃ ಕಥಿತಾ ವರ್ಣದೇವತಾಃ । [^1]. ವಿಶೇಷಾಂಶ - ಈ ಶ್ಲೋಕಕ್ಕೆ ಇನ್ನೊಂದು ರೀತಿಯ ವ್ಯಾಖ್ಯಾನವೂ ಇದೆ. "ನಾರಾಯಣಾಷ್ಟಾಕ್ಷರದಿಂದ ಹಾಗು ಮೂರುಬಾರಿ ಉಚ್ಚರಿಸಿದ ವ್ಯಾಹೃತಿ ಹಾಗೂ ಪುನಃ ಇನ್ನೊಂದು ಬಾರಿ ಉಚ್ಚರಿಸಿದ ವ್ಯಾಹೃತಿಯಿಂದ (8+4+4+4+4 =24) ಗಾಯತ್ರಿಯು ಉತ್ಪನ್ನವಾಗುತ್ತದೆ'' ಎಂದು. ತದ್ಭೇದಃ ಪೌರುಷಂ ಸೂಕ್ತಂ ವೇದಾಃ ಪುರುಷಸೂಕ್ತಗಾಃ ॥ ೧೫ ॥ ಅರ್ಥ - ಗಾಯತ್ರಿಯ ಇಪ್ಪತ್ತನಾಲ್ಕು 'ತತ್' ಮೊದಲಾದ ಅಕ್ಷರ- ಗಳಿಗೆ ಕೇಶವಾದಿ ಇಪ್ಪತ್ತನಾಲ್ಕು ಮೂರ್ತಿಗಳು ವರ್ಣದೇವತೆ- ಗಳೆನಿಸಿವೆ. ಗಾಯತ್ರಿಯ ಮೂರುಪಾದಗಳಿಂದ ಪುರುಷಸೂಕ್ತದ ಮೂರುವರ್ಗಗಳೂ ಅಭಿವ್ಯಕ್ತವಾದವು. ವರ್ಗತ್ರಯಾತ್ಮಕವಾದ ಪುರುಷಸೂಕ್ತದಿಂದ ಋಕ್,ಯಜುಃ,ಸಾಮವೆಂಬ ಮೂರು ವೇದಗಳು ಅಭಿವ್ಯಕ್ತವಾದವು. ವ.ಟೀ.- ಗಾಯತ್ರ್ಯಕ್ಷರದೇವತಾಃ ಕೇಶವಾದಿಕೃಷ್ಣಾಂತಾಃ ಚತುರ್ವಿಂಶತಿಮೂರ್ತಯಃ । ತದ್ಭೇದಃ = ಗಾಯತ್ರೀಭೇದಃ । ಟೀಕಾರ್ಥ- ಗಾಯತ್ರಿಯಲ್ಲಿರುವ ಇಪ್ಪತ್ತನಾಲ್ಕು ತತ್ಸವಿತುಃ ಮೊದಲಾದ ಅಕ್ಷರಗಳಿಗೆ ಕೇಶವ ಮೊದಲಾಗಿಶ್ರೀಕೃಷ್ಣಪರ್ಯಂತ ರೂಪಗಳು ದೇವತೆಗಳು. ತದ್ಭೇದಃ ಎಂದರೆ ತ್ರಿಪಾದವುಳ್ಳ ಗಾಯತ್ರಿ ಯಿಂದ ಭಿನ್ನವೆಂದರ್ಥ; ಅಭಿವ್ಯಕ್ತವಾಗಿವೆ ಎಂದು ಭಾವ. ವೈದಿಕಾಸ್ಸರ್ವಶಬ್ದಾಶ್ಚ ತಸ್ಮಾತ್ ಸರ್ವಾಭಿಧೋ ಹ್ಯಹಮ್ । ಪಂಚಾಶದ್ವರ್ಣಭಿನ್ನಾಶ್ಚ ಸರ್ವಶಬ್ದಾ ಅತೋಽಪಿ ಚ ॥ ೧೬ ॥ ಅರ್ಥ - ಪುರಾಣೇತಿಹಾಸಾದಿಗಳು, ವಿಷ್ಣುಷಡಕ್ಷರ ಮೊದಲಾದ ಮಂತ್ರಪ್ರಪಂಚ, ಸಂಸ್ಕೃತಶಬ್ದಗಳೆಲ್ಲವೂ ವೇದಗಳಿಂದಲೇ ಅಭಿವ್ಯಕ್ತಗಳಾಗಿವೆ. ಆದ್ದರಿಂದಲೇ ನಾನು ಸರ್ವಶಬ್ದವಾಚ್ಯನಾಗಿ- ದ್ದೇನೆ. ನನ್ನನ್ನು ಪ್ರಧಾನವಾಗಿ ತಿಳಿಸುವ ಓಂಕಾರದಿಂದ ಅಭಿವ್ಯಕ್ತಿ ಹೊಂದಿದ ಐವತ್ತು ಅಕ್ಷರಗಳೇ ಶಬ್ದಪ್ರಪಂಚವನ್ನೆಲ್ಲ ವ್ಯಾಪಿಸಿರುವುದರಿಂದಲೂ ನಾನುಸರ್ವಶಬ್ದವಾಚ್ಯನಾಗಿರುವೆನು. ವ.ಟೀ.- ಯುಕ್ತಾಂತರ ಚಾಹ - ಪಂಚಾಶದಿತಿ ॥ ಅತಶ್ಚ ಸರ್ವ- ಶಬ್ದಾಭಿಧೇಯೋsಸ್ತೀತಿ ಸಂಬಂಧಃ । ಟೀಕಾರ್ಥ –ಸಮಸ್ತಶಬ್ದಪ್ರಪಂಚವೂ ವೇದಗಳಿಂದಲೇ ಅಭಿವ್ಯಕ್ತ ಗಳಾಗಿವೆ. ಆದ್ದರಿಂದ ನಾನು ಸರ್ವಶಬ್ದವಾಚ್ಯನಾಗಿರುವೆನು. ಇದು ಸರ್ವಶಬ್ದವಾಚ್ಯತ್ವದಲ್ಲಿ ಒಂದು ಯುಕ್ತಿಯಾಯಿತು. 'ಪಂಚಾಶತ್' ಎಂಬುದರಿಂದ ಮತ್ತೊಂದು ಯುಕ್ತಿಯನ್ನು ಹೇಳುತ್ತಿರುವರು. ನನ್ನನ್ನು ತಿಳಿಸುವ ಓಂಕಾರದಿಂದ ಅಭಿವ್ಯಕ್ತ- ಗಳಾದ ಐವತ್ತು ಅಕ್ಷರಗಳಿಂದಲೇ ಶಬ್ದ ಪ್ರಪಂಚವೆಲ್ಲ ತುಂಬಿರು ವುದರಿಂದಲೂ ನಾನು ಸರ್ವಶಬ್ದವಾಚ್ಯನೆಂದು ಭಾವ. ಪ್ರಣವಾದಿಮಂತ್ರಗಳ ಋಷಿದೇವತೆಗಳು ಋಷಿಶ್ಚ ದೇವತೈಕೋಽಹಂ ತಾರಾದೀನಾಂ ವಿಶೇಷತಃ । ಛಂದೋಮದೀಯಾ ಗಾಯತ್ರೀ ತಾರಾಷ್ಟಾಕ್ಷರಯೋರ್ಮತಾ ॥ ೧೭ ॥ ಅರ್ಥ-ಪ್ರಣವಾದಿಮಹಾಮಂತ್ರಗಳಿಗೂ ಮುಖ್ಯವಾಗಿ ದ್ರಷ್ಟಾರ ನೆನಿಸಿದ ಋಷಿಯೂ, ಮಂತ್ರಪ್ರತಿಪಾದ್ಯದೇವತೆಯೂ ನಾನೇ ಆಗಿರುವೆನು. ಓಂಕಾರ ಹಾಗೂ ಅಷ್ಟಾಕ್ಷರಮಂತ್ರಗಳಿಗೆ ಛಂದಸ್ಸು 'ದೈವೀಗಾಯತ್ರಿ' ಎಂದು ಕರೆಯಲಾಗಿದೆ. ವ.ಟೀ. - ಋಷ್ಯಾದಿಕಮಾಹ - ಋಷಿರಿತಿ ॥ ಪ್ರಣವಾಷ್ಟಾಕ್ಷರಯೋಃ ಅಂತರ್ಯಾಮಿಋಷಿತ್ವ, ಪರಮಾತ್ಮದೇವತಾಕತ್ವಂ ವಿಶೇಷತೋ ಮತಮ್ । ಟೀಕಾರ್ಥ - ಜಪಿಸಬೇಕಾದ ಮಂತ್ರಗಳಿಗೆ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿ ಹೇಳುತ್ತಿರುವರು. ಅಂತರ್ಯಾಮಿಯೇ ಋಷಿಯು, ಪರಮಾತ್ಮನೇ ದೇವತೆಯೆಂದು ತಿಳಿಯಬೇಕು[^1]. [^1]. ವಿಶೇಷಾಂಶ - ಬ್ರಹ್ಮದೇವನು ಕೇಳಿದ ಪ್ರಶ್ನೆಗಳಲ್ಲಿ ಜಪ್ಯವಾದ ಮಂತ್ರಗಳಾವುವು? ಎಂದು. ಅದಕ್ಕೆ ಉತ್ತರವನ್ನು ಇಲ್ಲಿ ನೀಡಲಾಗಿದೆ. ಯಾವುದೇ ಮಂತ್ರ ಜಪಿಸುವಾಗ, ಅಧ್ಯಯನಾದಿಗಳನ್ನು ಮಾಡು ವಾಗ ಋಷಿ, ಛಂದಸ್ಸು, ದೇವತೆಗಳನ್ನು ತಿಳಿದು ಜಪಿಸಬೇಕು. ದೇವರ್ಷಿಛಂದಾಂಸಿ ಸಮ್ಯಗೇವ ವಿಚಾರಯೇತ್ । ಮಂತ್ರದೇವತೆಯನ್ನು ತಿಳಿಯದಿದ್ದರೆ ಮೃತ್ಯುವು; ಛಂದೋಜ್ಞಾನ ವಿಲ್ಲವಾದರೆ ಮಂತ್ರಜಪವು ವ್ಯರ್ಥವು : ಮೃತ್ಯು: ಸ್ಯಾದ್ ದೇವತಾऽಜ್ಞಾನೇ ಛಂದೋಽಜ್ಞಾನೇ ತು ನಿಷ್ಪಲಮ್ । ಛಂದಸ್ಸನ್ನು ತಿಳಿಯುವಾಗ ಅಕ್ಷರಗಣನೆಯನ್ನು ಮಾತ್ರ ತಿಳಿಯು ವುದಲ್ಲದೆ, ಛಂದೋದೇವತೆಗಳನ್ನೂ ತಿಳಿಯಬೇಕು : ಛಂದಸ್ತ್ವೇನ ಮುನಿತ್ವೇನ ತಾಸಾಂ ಸ್ಮೃತಿರುದಾಹೃತಾಃ (ಋಗ್ವಾಷ್ಯ); ಋಷಿಚ್ಛಂದೋ ದೈವತಾನಿ ಜ್ಞಾತ್ವಾऽರ್ಥ೦ ಚೈವ ಭಕ್ತಿತಃ; ಯೋ ಹವಾsವಿದಿತಾರ್ಷಛಂದೋದೈವತಬ್ರಾಹ್ಮಣೇನ ಯಜತಿ ಯಾಜಯತಿ.......ಸ್ಥಾಣುಂವರ್ಛತಿ !! ಋಷಿಚ್ಛಂದೋ ದೈವತಾನಿ ಬ್ರೂಯಾತ್ ತಸ್ಯ ಕ್ರಮಾತ್ ಸುಧೀಃ । ಅಂತರ್ಯಾಮೀತಿ ಗಾಯತ್ರೀ ಪರಮಾತ್ಮೈತ್ಯನುಕ್ರಮಾತ್ ॥ ಋಷಿರ್ನಾರಾಯಣಸ್ತಸ್ಯ ದೇವತಾ ಶ್ರೀಶ ಏವ ಚ । ಛಂದಸ್ತು ದೈವೀಗಾಯತ್ರೀ ಪ್ರಣವೋ ಬೀಜಮುಚ್ಯತೇ ॥ ಉದ್ಯದ್ಭಾಸ್ವತ್ಸಮಾಭಾಸಶ್ಚಿದಾನಂದೈಕದೇಹವಾನ್ । ಚಕ್ರಶಂಖಗದಾಪದ್ಮಧರೋ ಧ್ಯೇಯೋಽಹಮೀಶ್ವರಃ ॥ ೧೮ ॥ ಲಕ್ಷ್ಮೀಧರಾಭ್ಯಾಮಾಶ್ಲಿಷ್ಟಃ ಸ್ವಮೂರ್ತಿಗಣಮಧ್ಯಗಃ । ಬ್ರಹ್ಮವಾಯುಶಿವಾಹೀಶವಿಪೈ: ಶಕ್ರಾದಿಕೈರಪಿ ॥ ೧೯ ॥ ಸೇವ್ಯಮಾನೋSಧಿಕಂ ಭಕ್ತ್ಯಾ ನಿತ್ಯನಿಃಶೇಷಶಕ್ತಿಮಾನ್ । ಮೂರ್ತಯೋಽಷ್ಟಾವಸಿ ಧೈಯಾಶ್ಚಕ್ರಶಂಖವರಾಭಯೈಃ । ಯುಕ್ತಾಃ ಪ್ರದೀಪವರ್ಣಾಶ್ಚ ಸರ್ವಾಭರಣಭೂಷಿತಾಃ ॥ ೨೦ ॥ ಅರ್ಥ -ಉದಯಿಸುವ ಸೂರ್ಯನಂತೆ ಕಾಂತಿಯುಳ್ಳ, ಸಚ್ಚಿದಾ- ನಂದರೂಪಿಯಾದ, ಚಕ್ರಶಂಖಗದಾಪದ್ಮಗಳನ್ನು ಧರಿಸಿರುವ, ಶ್ರೀದೇವಿಭೂದೇವಿಯಿಂದ ಆಲಿಂಗಿತನಾಗಿರುವ, ವಿಶ್ವಾದಿ ಎಂಟು ಮೂರ್ತಿಗಳ ಮಧ್ಯೆ ಕುಳಿತಿರುವ, ಬ್ರಹ್ಮ-ವಾಯು,ರುದ್ರಶೇಷ- ಗರುಡ ಇಂದ್ರಾದಿದೇವತೆಗಳಿಂದ ಸೇವ್ಯನಾದ, ನಿತ್ಯವೂ ಪರಿಪೂರ್ಣಶಕ್ತಿಯುಳ್ಳವನೂ ಆದ ನನ್ನನ್ನು ಭಕ್ತಿಯಿಂದ ಧ್ಯಾನ ಮಾಡಬೇಕು. ಹಾಗೆಯೇ ದೀಪದಂತೆ ಪ್ರಕಾಶಮಾನಗಳೂ ಸರ್ವಾ- ಭರಣಗಳಿಂದ ಅಲಂಕೃತಗಳೂ, ಚಕ್ರ ಶಂಖ ವರ ಅಭಯಗಳನ್ನು ಧರಿಸಿರುವವೂ ಆದ ವಿಶ್ವತೈಜಸಾದಿ ಎಂಟು ಮೂರ್ತಿಗಳನ್ನು ಧ್ಯಾನ ಮಾಡಬೇಕು. ವ.ಟೀ. - ಧೈಯಸ್ವರೂಪಮಾಹ - ಉದ್ಯದಿತಿ ॥ ಮೂರ್ತಯಃ = ಪ್ರಣವಾಷ್ಟಾಕ್ಷರ-ವರ್ಣಮೂರ್ತಯಃ । ಏವಮಷ್ಟಾಕ್ಷರೋ ಮಂತ್ರೋ ಧೈಯಃ ಸರ್ವಾರ್ಥಸಾಧಕಃ ॥ ಪಾದ್ಮ2.54-18 ಗಾಯತ್ರೀಛಂದಸ್ಸಿಗೆ ಮುಖ್ಯಾಭಿಮಾನಿ ಲಕ್ಷ್ಮೀ ದೇವಿಯಾದರೆ ಸರಸ್ವತಿಯೂ ಅಭಿಮಾನಿಯೇ ಅಭಿಮಾನಿನೀ ತು ಗಾಯಾತ್ರ್ಯಾ: ಮುಖ್ಯಾ ಶ್ರೀಃ ಪರಿಕೀರ್ತಿತಾ । ಬ್ರಹ್ಮಾಣೀ ಅಮುಖ್ಯತೋ ಜೇಯಾ ........ ಹೀಗೆ ಸರಸ್ವತಿ ಹಾಗೂ ಲಕ್ಷ್ಮೀದೇವಿಯರಿಬ್ಬರಲ್ಲೂ ಗಾಯತ್ರೀ ಶಬ್ದವಿದ್ದರೂ ಲಕ್ಷ್ಮೀದೇವಿಯನ್ನೇ ತೆಗೆದುಕೊಳ್ಳಬೇಕೆಂದು ಮದೀಯಾ ಗಾಯತ್ರಿ ಎನ್ನಲಾಗಿದೆ. ಇದನ್ನೇ ದೈವೀಗಾಯತ್ರೀ ಎನ್ನಲಾಗಿದೆ : ಗಾಯತ್ರೀ ಯತ್ರ ದೈವೀ ಸ್ಯಾತ್ ತತ್ರ ಶ್ರೀಃ ಪರಿಕೀರ್ತಿತಾ । ಟೀಕಾರ್ಥ - ತಾರಾಷ್ಟಾಕ್ಷರಮಂತ್ರಗಳ ಜಪಕಾಲದಲ್ಲಿ ಧ್ಯಾನ ಮಾಡುವ ಧೈಯಸ್ವರೂಪವನ್ನು 'ಉದ್ಯದ್' ಎಂಬುದರಿಂದ ತಿಳಿಸುವರು. 'ಮೂರ್ತಯೋಅಷ್ಟಾವಪಿ' ಎಂಬಲ್ಲಿರುವ ಮೂರ್ತಯಃ ಎಂದರೆ ಪ್ರಣವ- ಅಷ್ಟಾಕ್ಷರವರ್ಣಮೂರ್ತಿಗಳಾದ ವಿಶ್ವಾದಿ ಎಂಟು ಮೂರ್ತಿಗಳು ಎಂದರ್ಥ.[^1] ಐವತ್ತು ಮಾತೃಕಾಮೂರ್ತಿಗಳ ಸ್ವರೂಪ ತಾದೃಗ್ರೂಪಾಶ್ಚ ಪಂಚಾಶದ್ ಜ್ಞಾನಮುದ್ರಾಭಯೋದ್ಯತಾಃ । ಟಂಕಿ ದಂಡೀ ಚ ಧನ್ವಿ ಚ ತತ್ತದ್ಯುಕ್ತಾಸ್ತು ವಾಮತಃ ॥ ೨೧ ॥ ಅರ್ಥ- ಅಜಾದಿ ಐವತ್ತು ಮೂರ್ತಿಗಳೂ ಸಹ ಮೇಲೆ ಹೇಳಿದ ರೂಪಗಳಂತೆಯೇ ಪ್ರದೀಪವರ್ಣಗಳಾಗಿವೆ. ಹಾಗೂಜ್ಞಾನಮುದ್ರೆ, ಅಭಯಮುದ್ರೆಗಳನ್ನು ಧರಿಸಿವೆ. ಇವುಗಳಲ್ಲಿ ಟಂಕೀ, ದಂಡಿ, ಧನ್ವಿ ಎಂಬ ಮೂರುರೂಪಗಳು ಮಾತ್ರ ತಮ್ಮ ಎಡಗೈಯ್ಯಲ್ಲಿ ಅಭಯಮುದ್ರೆಯ ಬದಲಾಗಿ ಚೇಣಾಯುಧ, ದಂಡ ಮತ್ತು ಧನುಸ್ಸನ್ನು ಹಿಡಿದಿವೆ. ವ.ಟೀ - ಪಂಚಾಶನ್ಮೂರ್ತಯಶ್ಚ ಪ್ರದೀಪವರ್ಣಾ ಇತ್ಯಾಹ - ತಾದೃಗ್ರೂಪಾ ಇತಿ ॥ [^1]. - ವಿಶೇಷಾಂಶ ಋಷ್ಯಾದಿನ್ಯಾಸವನ್ನು ಮೊದಲು ಮಾಡಿಕೊಂಡು ಅನಂತರ ಧ್ಯಾನಮಾಡಬೇಕು. ಕ್ರಮ ಹೀಗಿದೆ – ಅಸ್ಯ ಶ್ರೀ ಪ್ರಣವಾಷ್ಟಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ ಶಿರಸಿ । ದೈವೀ ಗಾಯತ್ರೀ ಛಂದಃ ಮುಖೇ, ಶ್ರೀನಾರಾಯಣೋ ದೇವತಾ ಹೃದಯೇ ಜಪೇ ವಿನಿಯೋಗಃ' ಎಂದು ಋಷಿನ್ಯಾಸ, ನಂತರ ಉದ್ಯದ್ ಭಾಸ್ವತ್ ಎಂಬ ಧ್ಯಾನಶ್ಲೋಕವನ್ನು ಪಠಿಸ- ಬೇಕು. ಈ ಕ್ರಮ (ಎಂದರೆ ಋಷಿನ್ಯಾಸ ಮತ್ತುಧ್ಯಾನಶ್ಲೋಕಪಠಣೆ) ಇತರ ಮಂತ್ರಜಪಗಳಿಗೂ ಅನ್ವಯವಾಗುತ್ತದೆ. ಆವರಣಪೂಜೆಯೂ ಈ ಧ್ಯಾನಶ್ಲೋಕದಲ್ಲಿ ವಿವರವಾಗಿದೆ ಅದರ ಕ್ರಮ ಹೀಗಿದೆ ಈ ಧ್ಯಾನಶ್ಲೋಕದಲ್ಲಿ 'ಲಕ್ಷ್ಮೀಧರಾಭ್ಯಾಂ' ಎಂಬುದರಿಂದ ಪ್ರಥಮಾವರಣವನ್ನೂ, 'ಸ್ವಮೂರ್ತಿಗಣಮಧ್ಯಗಃ' ಎನ್ನುವುದ- ರಿಂದ ಕ್ರುದ್ಧೋಲ್ಕಾದಿ ದ್ವಿತೀಯಾವರಣವನ್ನೂ, ವಾಸುದೇವಾದಿ ತೃತೀಯಾವರಣವನ್ನೂ, ಕೇಶವಾದಿ ನಾಲ್ಕನೇ ಆವರಣವನ್ನೂ, ಮತ್ಸ್ಯಾದಿ ಐದನೇ ಆವರಣವನ್ನೂ ತಿಳಿಸಿ, 'ಬ್ರಹ್ಮವಾಯುಶಿವಾ- ಹೀಶವಿಪೈಃ' ಷಷ್ಠಾವರಣವನ್ನೂ, 'ಶಕ್ರಾದಿಕೈ' ಎಂದು ಇಂದ್ರಾದಿ ಹತ್ತು ದಿಕ್ಷಾಲಕರ ಏಳನೆಯ ಆವರಣವನ್ನೂ ತಿಳಿಸಲಾಗಿದೆ. ಅಯಂ ವಿಶೇಷಃ । ಜ್ಞಾನಮುದ್ರಾ ಅಭಯೇನ ಚ ಉದ್ಯತಾಃ = ಯುಕ್ತಾಃ । ಅನೇನ ವರಾಭಯಸ್ಥಾನೇ ಅಜಾದಿಷು ತ್ರಯಾಣಾಂ ಟಂಕ್ಯಾದೀನಾಂ ಟಂಕಾದ್ಯಾಯುಧಯುಕ್ತತ್ವಂ ಜ್ಞೇಯಮ್। ಅಥವಾ ಜ್ಞಾನಾಭಯೇ ತಾಭ್ಯಾಂ ಯುಕ್ತದ್ವಿಹಸ್ತತ್ವಂ ಜ್ಞೇಯಮ್। ಟೀಕಾರ್ಥ- ಐವತ್ತು ಅಕ್ಷರಗಳಿಂದ ಪ್ರತಿಪಾದ್ಯ ಅಜಾದಿಮೂರ್ತಿ- ಗಳೂ ಸಹ ಮೂಲರೂಪದಂತೆ ಪ್ರದೀಪವರ್ಣಗಳಾಗಿವೆ. ಇದನ್ನು 'ತಾದೃಗ್ರೂಪಾಃ' ಎಂಬ ಪದ ತಿಳಿಸುತ್ತದೆ. ಇಲ್ಲಿ ಹೇಳಿರುವ ಐವತ್ತು ಅಜಾದಿರೂಪಗಳೂ ಎರಡು ಕೈಗಳನ್ನು ಹೊಂದಿದ್ದು ಜ್ಞಾನಮುದ್ರೆ ಹಾಗೂ ಅಭಯಮುದ್ರೆಯನ್ನು ಹೊಂದಿವೆ. ಈ ಅಜಾದಿ ಐವತ್ತು ಮೂರ್ತಿಗಳಲ್ಲಿ ಟಂಕೀ, ದಂಡೀ, ಧನ್ವಿ ಈ ಮೂರನ್ನು ಹೊರತು ಪಡಿಸಿ ಉಳಿದ 47ರೂಪಗಳು ಜ್ಞಾನ-ಅಭಯಮುದ್ರೆಯಿಂದ ಕೂಡಿವೆ. ಈ ಮೂರು ಮಾತ್ರ ಚೇಣ, ದಂಡ ಹಾಗೂ ಧನುಸ್ಸನ್ನು ಧರಿಸಿವೆ. ವ.ಟೀ. - ವ್ಯಾಹೃತಿದೇವತಾಲಕ್ಷಣಮಾಹ - ವಾಸುದೇವಾದಿಕಾ ಇತಿ ॥ ಟೀಕಾರ್ಥ-ವ್ಯಾಹೃತಿಪ್ರತಿಪಾದ್ಯದೇವತೆಗಳಾದ ವಾಸುದೇವಾದಿ- ಗಳ ಲಕ್ಷಣವನ್ನು 'ವಾಸುದೇವಾದಿಕಾಃ' ಎಂಬುದರಿಂದ ವರ್ಣಿಸುತ್ತಾರೆ. ವಾಸುದೇವಾದಿಮೂರ್ತಿಗಳ ಲಕ್ಷಣ ವಾಸುದೇವಾದಿಕಾ: ಶುಕ್ಲರಕ್ತಪೀತಾಸಿತೋಜ್ಜ್ವಲಾಃ । ಶಂಖಚಕ್ರಗದಾಬ್ಜೇತಃ ಪ್ರಥಮೋ ಮುಸಲೀ ಹಲೀ ॥ ೨೨ ॥ ಸಶಂಖಚಕ್ರಪರಸ್ತೃತೀಯಃ ಶಾರ್ಙ್ಗಬಾಣವಾನ್ । ಸಶಂಖಚಕ್ರಸ್ತುರ್ಯಸ್ತು ಚಕ್ರಶಂಖಾಸಿಚರ್ಮವಾನ್ ॥ ೨೩ ॥ ಅರ್ಥ- ಚತುರ್ಮೂರ್ತಿಗಳಲ್ಲಿ ವಾಸುದೇವನ ಬಣ್ಣ ಬಿಳಿ, ಸಂಕರ್ಷಣನ ಬಣ್ಣ ಕೆಂಪು, ಪ್ರದ್ಯುಮ್ನನದು ಹಳದಿ, ಅನಿರುದ್ಧ ನದು ನೀಲಬಣ್ಣವಾಗಿದೆ. ಈ ಮೂರ್ತಿಗಳಲ್ಲಿ ವಾಸುದೇವನು ಚಕ್ರ-ಶಂಖ-ಗದಾ-ಪದ್ಮ ಆಯುಧಗಳನ್ನು ಹೊಂದಿರುವನು. ಸಂಕರ್ಷಣನು ಒನಕೆ, ನೇಗಿಲು, ಚಕ್ರ ಹಾಗೂ ಶಂಖ ಧರಿಸಿದ್ದಾನೆ. ಪ್ರದ್ಯುಮ್ನನು ಶಾರ್ಙ್ಗಧನುಸ್ಸು, ಬಾಣ, ಶಂಖ ಹಾಗೂ ಚಕ್ರಗಳನ್ನು ಧರಿಸಿದ್ದಾನೆ. ಅನಿರುದ್ಧನಾದರೋ ಚಕ್ರ,ಶಂಖ,ಖಡ್ಗ ಹಾಗೂ ಗುರಾಣಿಗಳನ್ನು ಧರಿಸಿದ್ದಾನೆ. ಕೇಶವೋ ಮಧುಸೂದನಃ ಸಂಕರ್ಷಣದಾಮೋದರೌ । ಸವಾಸುದೇವಪ್ರದ್ಯುಮ್ನಾ ದಕ್ಷೋಚ್ಚಕರಶಂಖಿನಃ ॥ ೨೪ ॥ ಅರ್ಥ-ಕೇಶವ, ಮಧುಸೂದನ, ಸಂಕರ್ಷಣ, ದಾಮೋದರ, ವಾಸುದೇವ, ಪ್ರದ್ಯುಮ್ನ ಈ ಆರು ಮೂರ್ತಿಗಳು ಮೇಲಿನ ಬಲಕೈಯ್ಯಲ್ಲಿ ಶಂಖವನ್ನು ಧರಿಸಿವೆ. ವಿಷ್ಣುಮಾಧವಾನಿರುದ್ಧಪುರುಷೋತ್ತಮಾಧೋಕ್ಷಜಾಃ । ಜನಾರ್ದನಶ್ಚ ವಾಮೋಚ್ಚಕರಸ್ಥಿತದರಾ ಮತಾಃ ॥ ೨೫ ॥ ಅರ್ಥ- ವಿಷ್ಣು, ಮಾಧವ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ಜನಾರ್ದನ ಇವುಗಳು ಮೇಲಿನ ವಾಮಕರದಲ್ಲಿ ಶಂಖವನ್ನು ಧರಿಸಿವೆ. ಗೋವಿಂದಶ್ಚ ತ್ರಿವಿಕ್ರಮಸ್ಸಶ್ರೀಧರಹೃಷಿಕಪಾಃ । ನೃಸಿಂಹಾಚ್ಯುತಶ್ಚೈವ ವಾಮಾಧಃಕರಶಂಖಿನಃ ॥ ೨೬ ॥ ಅರ್ಥ - ಗೋವಿಂದ, ತ್ರಿವಿಕ್ರಮ, ಶ್ರೀಧರ, ಹೃಷಿಕೇಶ, ನೃಸಿಂಹ, ಅಚ್ಯುತ ಇವು ಕೆಳಗಿನ ಎಡಗೈಯ್ಯಲ್ಲಿ ಶಂಖವನ್ನು ಧರಿಸಿವೆ. ವಾಮನಃಸನಾರಾಯಣಃ ಪದ್ಮನಾಭ ಉಪೇಂದ್ರಕಃ । ಹರಿಃ ಕೃಷ್ಣಶ್ಚ ದಕ್ಷಾಧಃಕರೇ ಶಂಖಧರಾ ಮತಾಃ ॥ ೨೭ ॥ ಅರ್ಥ- ವಾಮನ, ನಾರಾಯಣ, ಪದ್ಮನಾಭ, ಉಪೇಂದ್ರ, ಹರಿ, ಕೃಷ್ಣ ಈ ಆರುರೂಪಗಳು ಕೆಳಗಿನ ಬಲಗೈಯ್ಯಲ್ಲಿ ಶಂಖವನ್ನು ಧರಿಸಿರುತ್ತವೆ. ವ.ಟೀ. - ಗಾಯತ್ರ್ಯಕ್ಷರದೇವತಾಲಕ್ಷಣಮಾಹ - ಕೇಶವ ಇತಿ ॥ ದಕ್ಷಭಾಗೋನ್ನತಕರೇ ಶಂಖಯುಕ್ತಾಃ । ಏವಮನ್ಯತಾಪಿ ॥೨೪-೨೭॥ ಟೀಕಾರ್ಥ- ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರಗಳ ದೇವತೆಗಳ ಲಕ್ಷಣವನ್ನು ಹೇಳುವರು 'ಕೇಶವ' ಎಂಬಿತ್ಯಾದಿ ಶ್ಲೋಕಗಳಿಂದ. 'ಬಲಭಾಗದ ಮೇಲಿನ ಕರದಲ್ಲಿ ಶಂಖದಿಂದ ಕೂಡಿದವುಗಳು' ಎಂದರ್ಥ,[^1] ಉಳಿದ ಕಡೆಯೂ ಹೀಗೆಯೇ ತಿಳಿಯಬೇಕು. [^1]. (ಕ್ರಮವಾಗಿ 25,26,27ನೇ ಶ್ಲೋಕಗಳಲ್ಲಿ ವಾಮೋಚ್ಚಕರೇ = ಮೇಲಿನ ಎಡಕೈಯ್ಯಲ್ಲಿ ; ವಾಮಾಧಃಕರ=ಕೆಳಗಿನ ಎಡಕೈಯ್ಯಲ್ಲಿ; ದಕ್ಷಾಧಃಕರೇ = ಕೆಳಗಿನ ಬಲಕೈಯ್ಯಲ್ಲಿ ಎಂಬುದಾಗಿ) ಶಂಖಚಕ್ರಗದಾಪದ್ಮಧರಾಶ್ಚೈತೇ ಹಿ ಸರ್ವಶಃ। ಕ್ರಮವ್ಯುತ್ಕ್ರಮಪದ್ಮಾದಿಗದಾದಿವ್ಯುತ್ಕ್ರಮಸ್ತಥಾ । ಅರ್ಧಕ್ರಮಃ ಸಾಂತರಶ್ಚ ಷಟ್ಟು ಷಟ್ಸ್ವರಿಪೂರ್ವಿಣಾಮ್ ॥28॥ ಅರ್ಥ – ಶಂಖ, ಚಕ್ರ, ಗದಾ, ಪದ್ಮಧಾರಿಗಳಾದ ಈ ಇಪ್ಪತ್ತನಾಲ್ಕು ಮೂರ್ತಿಗಳ ಲಕ್ಷಣವು ಹೀಗೆ ಪ್ರತ್ಯೇಕವಾಗಿವೆ. ಇವುಗಳಲ್ಲಿ ಶಂಖ, ಚಕ್ರ,ಗದಾ,ಪದ್ಮ ಹೀಗೆ ಕ್ರಮವಾಗಿಯೂ; ಪದ್ಮ,ಗದಾ,ಶಂಖ,ಚಕ್ರ ಹೀಗೆ ವ್ಯುತ್ಕ್ರಮವಾಗಿಯೂ; ಶಂಖ ಹಾಗೂ ಪದ್ಮಾದಿ ವ್ಯುತ್ಕ್ರಮ ವಾಗಿ; ಪದ್ಮ, ಚಕ್ರ, ಗದೆಗಳು, ಗದಾದಿವ್ಯುತ್ಕ್ರಮವಾಗಿ; ಶಂಖ ಹಾಗೂ ಗದಾ,ಚಕ್ರ ಪದ್ಮಗಳು ಅರ್ಧಕ್ರಮವಾಗಿ; ಶಂಖ,ಚಕ್ರ, ಪದ್ಮ, ಗದೆಗಳು ಹಾಗೂ ಗದಾ ಪದ್ಮಗಳನ್ನು ಮಧ್ಯದಲ್ಲಿ ಬರು- ವಂತೆ (ಸಾಂತರ) ಶಂಖ ಗದಾ ಪದ್ಮ ಚಕ್ರಗಳು. ಹೀಗೆ ಆರಾರು ಮೂರ್ತಿಗಳ ನಾಲ್ಕು ಗುಂಪುಗಳೇರ್ಪಡುತ್ತವೆ.[^1] ವ.ಟೀ.- ಕ್ರಮವ್ಯುತ್ಕ್ರಮ: ಇತ್ಯಸ್ಯಾಯಮರ್ಥಃ - ಶಂಖ, ಚಕ್ರ, ಗದಾ, ಪದ್ಮಮಿತಿ ಕ್ರಮೈಃ । ಶಂಖಪದ್ಮಗದಾಚಕ್ರಮಿತಿ ವ್ಯುತ್ಕ್ರಮಃ। ಶಂಖಪದ್ಮಚಕ್ರಗದೇತಿ ಪದ್ಮಾದಿ ವ್ಯುತ್ಕ್ರಮಃ । ಶಂಖಗದಾಪದ್ಮ- ಚಕ್ರಮಿತಿ ಸಾಂತರಕ್ರಮಃ ಕೇಶವಾದಿಷು ಷಟ್ಸು ಚಕ್ರಪ್ರಮುಖಾ- ನಾಮಯಂ ಕ್ರಮೋ ಜ್ಞೇಯಃ ॥ ಟೀಕಾರ್ಥ - ಕ್ರಮವ್ಯುತ್ಕ್ರಮಃ ಎಂಬ ಮೂಲದಲ್ಲಿರುವ ಪದಗಳಿಗೆ ಈ ರೀತಿ ಅರ್ಥವಾಗುತ್ತದೆ. ಚಕ್ರಶಂಖಗದಾಪದ್ಮ ಹೀಗೆ ಬಲಗೈಯ ಮೇಲಿನ ಕೈಯಿಂದ ಆಯುಧಗಳನ್ನು ಪ್ರದಕ್ಷಿಣಾಕಾರವಾಗಿ ಶಂಖಚಕ್ರಗದಾಪದಗಳನ್ನು ತಿಳಿಯುವುದು ಕ್ರಮವು . ಉದಾಕೇಶವಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡದ ಭಾಗ ಮೇಲಿನ ಕೈಯ್ಯಲ್ಲಿ ಚಕ್ರ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು, ಬಲಭಾಗದ ಕೆಳಗೈಯ್ಯಲ್ಲಿ ಪದ್ಮವಿರುವುದು. ವ್ಯುತ್ಕ್ರಮ - ಮೇಲೆ ಹೇಳಿದ ಕ್ರಮಕ್ಕೆ ವಿರುದ್ಧವಾದ ಕ್ರಮವೇ ವ್ಯುತ್ಕ್ರಮ. ಶಂಖ, ಪದ್ಮ,ಗದಾ ಚಕ್ರವಿರುವುದು ವ್ಯುತ್ಕ್ರಮ. ಮಧುಸೂದನನ ಬಲಭಾಗದ ಮೇಲಿನ ಕೈಯ್ಯಲ್ಲಿ [^1]. ವಿಶೇಷಾಂಶ - ಚತುರ್ವಿಂಶತಿರೂಪಗಳ ವಿವರಣೆಯು ಅಗ್ನಿ ಪುರಾಣದಲ್ಲಿಯೂ, ಸ್ಕಾಂದಪುರಾಣದ ಕಾಶೀಖಂಡದಲ್ಲಿಯೂ, ವಾದಿರಾಜರ ಚತುರ್ವಿಂಶತಿಸ್ತೋತ್ರದಲ್ಲಿಯೂ,ಕೃಷ್ಣಾಚಾರ್ಯರ ಸ್ಮೃತಿಮುಕ್ತಾವಳಿಯಲ್ಲೂ ನೋಡಬಹುದಾಗಿದೆ. ತಂತ್ರಸಾರದಲ್ಲಿರುವ ಲಕ್ಷಣವಾದರೋ ಅಗ್ನಿಪುರಾಣದಿಂದ ಆಚಾರ್ಯರು ಸ್ವೀಕರಿಸಿರುವಂತಿದೆ. ಪಂಚರಾತ್ರಾಗಮದಲ್ಲಿಯೂ ಇದರ ಉಲ್ಲೇಖ ಬಂದಿದೆ. ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮವು, ಎಡಭಾಗದ ಕೆಳಕೈಯ್ಯಲ್ಲಿ ಗದೆಯು, ಬಲಭಾಗದ ಕೆಳ ಕೈಯ್ಯಲ್ಲಿ ಚಕ್ರವು ಹೀಗೆ ವ್ಯುತ್ಕ್ರಮವು. ಪದ್ಮಾದಿ ವ್ಯುತ್ಕ್ರಮವೆಂದರೆ ಶಂಖ, ಪದ್ಮ,ಚಕ್ರ, ಗದಾ ಹೀಗೆ, ಉದಾ-ಸಂಕರ್ಷಣನ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖ, ಎಡಭಾಗದ ಮೇಲಿನ ಕೈಯ್ಯಲ್ಲಿ ಪದ್ಮ, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರ, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆ. ಗದಾದಿ ವ್ಯುತ್ಕ್ರಮ - ಶಂಖ, ಗದಾ, ಚಕ್ರ, ಪದ್ಮ ಹೀಗೆ ಗದಾದಿ ವ್ಯುತ್ಕ್ರಮ. ಉದಾ-ದಾಮೋದರನ ಬಲಭಾಗದ ಮೇಲಿನ ಕೈಯಲ್ಲಿ ಶಂಖವು, ಎಡಭಾಗದ ಮೇಲಿನ ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು. ಅರ್ಧಕ್ರಮ-ಶಂಖಚಕ್ರಪದ್ಮಗದೆಯು ಅರ್ಧಕ್ರಮವು. ಉದಾ- ವಾಸುದೇವಮೂರ್ತಿಯ ಬಲಭಾಗದ ಮೇಲಿನ ಕೈಯ್ಯಲ್ಲಿ ಶಂಖವು , ಎಡಭಾಗದ ಮೇಲಿನ ಕೈಯ್ಯಲ್ಲಿ ಚಕ್ರವು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಗದೆಯು ಹೀಗೆ ಅರ್ಧಕ್ರಮವು. ಸಾಂತರಕ್ರಮ - ಶಂಖ, ಗದಾ,ಪದ್ಮ,ಚಕ್ರವೆಂಬುದೇ ಸಾಂತರ- ಕ್ರಮವು, ಉದಾ-ಪ್ರದ್ಯುಮ್ನ, ಪ್ರದ್ಯುಮ್ನನ ಬಲಭಾಗದ ಮೇಲಿನ ಕೈಯಲ್ಲಿ ಶಂಖ, ಎಡಭಾಗದ ಮೇಲಿನ ಕೈಯ್ಯಲ್ಲಿ ಗದೆಯು, ಎಡಭಾಗದ ಕೆಳಗಿನ ಕೈಯ್ಯಲ್ಲಿ ಪದ್ಮವು, ಬಲಭಾಗದ ಕೆಳಗಿನ ಕೈಯ್ಯಲ್ಲಿ ಚಕ್ರವು. ವರ್ಣಗಳ ಪೂರ್ವಾಪರಭಾವ(?) ಕ್ರಮ ವರ್ಣಾನಾಂ ದೇವತಾನಾಂ ಚ ನಿತ್ಯತ್ವಾತ್ ನ ಕ್ರಮಃ ಸ್ವತಃ । ವ್ಯಕ್ತಿಕ್ರಮಂ ಬ್ರಹ್ಮಬುದ್ಧಾವಪೇಕ್ಷ್ಯ ಕ್ರಮ ಉಚ್ಯತೇ ॥ ೨೯ ॥ ಅರ್ಥ- ತಾರಾರ್ಣಭೇದಿತಾಃ ಎಂಬಲ್ಲಿ ಹೇಳಿದ ಐವತ್ತು ವರ್ಣ- ಗಳಾಗಲೀ, ಅವುಗಳ ಅಜಾದಿ ಐವತ್ತು ರೂಪಗಳಾಗಲೀ ಸರ್ವತ್ರ ನಿತ್ಯವೂ ವ್ಯಾಪ್ತವೂ ಆಗಿರುವುದರಿಂದ ದೈಶಿಕ-ಕಾಲಿಕ ಕ್ರಮ ಹೇಳಲು ಬರುವುದಿಲ್ಲ. ಆದ್ದರಿಂದ ಅಕಾರವಾದ ಮೇಲೆ ಆಕಾರ ಹುಟ್ಟಿತು ಎಂಬ ಕ್ರಮವನ್ನು ಹೇಳಲು ಬಾರದು. ಆದರೂ ಯಾವ ವರ್ಣವು ಬ್ರಹ್ಮದೇವರ ಬುದ್ಧಿಯಲ್ಲಿ ಮೊದಲು ಅಭಿವ್ಯಕ್ತ- ವಾಯಿತೋ ಆ ಕ್ರಮವನ್ನು ಇಟ್ಟುಕೊಂಡು ವರ್ಣ ಹಾಗೂ ವರ್ಣದೇವತೆಗಳಲ್ಲಿ ಮೊದಲು ಹುಟ್ಟಿದ್ದು ಅನಂತರ ಹುಟ್ಟಿದ್ದು ಎನ್ನಲಾಗಿದೆ. ವ. ಟೀ. - ಬ್ರಹ್ಮಬುದ್ಧೌ ಯದ್ರೂಪಂ ಪ್ರಥಮತೋ ವ್ಯಕ್ತಂ ತದ್ರೂಪಾಂತರಾಪೇಕ್ಷಯಾ ಪ್ರಥಮಮುಚ್ಯತೇ ಇತಿ ಸಂಬಂಧಃ ॥ ಟೀಕಾರ್ಥ- ಬ್ರಹ್ಮಬುದ್ಧಿಯಲ್ಲಿ ಯಾವ ಅಜಾದಿರೂಪವು ಮೊದಲು ಅಭಿವ್ಯಕ್ತವಾಯಿತೋ ಆ ರೂಪವು ಆನಂದಾದಿರೂಪ ಗಳಿಗಿಂತ ಮೊದಲು ಎಂದು ಪೂರ್ವಾಪರಭಾವವನ್ನು ತಿಳಿಯಬೇಕು. ಮಂತ್ರಗಳ ಅಂಗನ್ಯಾಸಾದಿಗಳು ಅವತಾರಿಕಾ- ತಾರಾದಿಸರ್ವಮಂತ್ರಗಳ ಋಷಿದೇವತೆಯನ್ನು ಹೇಳಲಾಯಿತು. ಹಾಗೂ ಪ್ರಣವ ಅಷ್ಟಾಕ್ಷರಗಳಿಗೆ ಛಂದಸ್ಸು ಮತ್ತು ದೇವತಾಧ್ಯಾನವನ್ನು ಹೇಳಲಾಯಿತು. ಈಗ ಪ್ರಣವಾದಿ ಅಷ್ಟಮಹಾಮಂತ್ರಗಳ ಅಂಗನ್ಯಾಸವನ್ನು ತಿಳಿಸುತ್ತಾರೆ. ಸಮಾಸವ್ಯಾಸಯೋಗೇನ ವ್ಯಾಹೃತೀನಾಂ ಚತುಷ್ಟಯಮ್ । ಸತ್ಯಂ ಚಾಂಗಾನಿ ತಾರಸ್ಯ ಪ್ರೋಚ್ಯಂತೇಽಷ್ಟಾಕ್ಷರಸ್ಯ ಚ ॥ ೩೦ ॥ ಅರ್ಥ- ಭೂಃ, ಭುವಃ, ಸ್ವಃ ಎಂದು ಬೇರೆಬೇರೆಯಾಗಿಯೂ(ವ್ಯಾಸ) 'ಭೂರ್ಭುವಸ್ವಃ' ಎಂಬ ಸಮುದಿತವಾದ ಒಂದು ವ್ಯಾಹೃತಿಯೂ ಹೀಗೆ ನಾಲ್ಕು ವ್ಯಾಹೃತಿಗಳೂ ಮತ್ತು ಸತ್ಯಂ' ಎಂಬ ಒಂದು ಪದವೂ ಸೇರಿದಾಗ ಓಂಕಾರದ ಪಂಚಾಂಗನ್ಯಾಸವೇರ್ಪಡುತ್ತದೆ. [^1] [^1]. ವಿಶೇಷಾಂಶ - ಪ್ರಣವದ ಅಂಗನ್ಯಾಸದ ಕ್ರಮ ಅಸ್ಯ ಶ್ರೀ ಪ್ರಣವಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ಪರಮಾತ್ಮಾ ದೇವತಾ । ದೈವೀ ಗಾಯತ್ರೀ ಛಂದಃ ಪ್ರಣವ ಮಂತ್ರ ಜಪೇ ವಿನಿಯೋಗಃ । ಅಂಗನ್ಯಾಸಃ - ಓಂ ಭೂಃ(ಅನಿರುದ್ಧಾಯ) ಹೃದಯಾಯ ನಮಃ । ಓಂ ಭುವಃ ಶಿರಸೇ ಸ್ವಾಹಾ । ಓಂ ಸುವಃ ಶಿಖಾಯೈ ವಷಟ್ । ಓಂ ಭೂರ್ಭುವಸ್ವಃ ಕವಚಾಯ ಹುಮ್ । ಸತ್ಯಂ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಅಷ್ಟಾಕ್ಷರದ ಅಂಗನ್ಯಾಸಕ್ರಮ - ಅಸ್ಯ ಶ್ರೀನಾರಾಯಣಾಷ್ಟಾಕ್ಷರ ಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ । ಪರಮಾತ್ಮಾ ದೇವತಾ । ಓಂ ಕೃದ್ಧೋಲ್ಕಾಯ ಹೃದಯಾಯ ನಮಃ । ಮಹೋಲ್ಕಾಯ ಶಿರಸೇ ಸ್ವಾಹಾ । ವೀರೋಲ್ಕಾಯ ಶಿಖಾಯೈ ವಷಟ್ । ದ್ಯೂಲ್ಕಾಯ ಕವಚಾಯ ಹುಮ್ । ಸಹಸ್ರೋಲ್ಕಾಯ ವ.ಟೀ.- ಭೂಃ, ಭುವಃ, ಸುವಃ ಇತಿ ವ್ಯಾಸಃ । ಭೂರ್ಭುವಸ್ವಃ ಇತಿ ಸಮಾಸಃ । ಸಮಾಸವ್ಯಾಸರೂಪಯೋಗೇನ ವ್ಯಾಹೃತೀನಾಂ ಚತುಷ್ಟಯಂ ಸತ್ಯಂ ಚ ತಾರಸ್ಯ ಪಂಚಾಂಗನ್ಯಾಸಃ । ಟೀಕಾರ್ಥ - ಭೂಃ ಭುವಃ ಸುವಃ ಎಂದು ವ್ಯಾಸವೆನಿಸಿದರೆ, ಇವುಗಳನ್ನು ಭೂರ್ಭುವಸ್ವಃ ಎಂದು ಸೇರಿಸಿ ಹೇಳುವುದು ಸಮಾಸವೆನಿಸುತ್ತದೆ. ಕೃದ್ಧೋಲ್ಕಾದಿಮೂರ್ತಿಗಳು ಕೃದ್ಧಮಹಾವೀರದ್ಯುಲ್ಕಸಹಸ್ರಸಹಿತೋಲ್ಕಕಾಃ । ಚತುರ್ಥ್ಯಂತಾ ಹೃದಾದೀನಿ ಪೃಥಗ್ರೂಪಾಣಿ ತಾನಿ ಚ ॥ ೩೧ ॥ ಅರ್ಥ- ನಾರಾಯಣಾಷ್ಟಾಕ್ಷರಮಂತ್ರಜಪದಲ್ಲಾದರೂ ಕೃದ್ಧಾದಿ ಗಳಿಗೆ ಉಲ್ಕಪದವನ್ನು ಸೇರಿಸಿ ಚತುರ್ಥ್ಯಂತವಾಗಿ ಪಠಿಸಿದರೆ ಕೃದ್ಧೋಲ್ಕಾಯ,ಮಹೋತ್ಕಾಯ, ವೀರೋಲ್ಕಾಯ, ದ್ಯೂಲ್ಕಾಯ, ಸಹಸ್ರೋಲ್ಕಾಯ[^1] ಎಂದು ಪಂಚಾಂಗನ್ಯಾಸವೇರ್ಪಡುತ್ತದೆ. ಈ ರೂಪಗಳು ಹೃದಯ, ಶಿರಸ್ಸು, ಶಿಖೆ, ಕವಚ, ಅಸ್ತ್ರಗಳಲ್ಲಿದ್ದು ಆಯಾಯ ಪದವಾಚ್ಯಗಳಾಗಿವೆ. ಅವತಾರಿಕಾ - ಭಗವಂತನ ರೂಪಗಳಲ್ಲಿ ಅಭೇದವಿದ್ದುದ್ದರಿಂದ ಕೃದ್ಧೋಲ್ಕಾದಿ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಧ್ಯಾನಮ್ - 'ಉದ್ಯದ್ಭಾಸ್ವತಮಾಭಾಸಃ........ಸರ್ವಾಭರಭೂಷಿತಾಃ' । ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣ- ಪ್ರೇರಣಯಾ ....ತತ್ಪ್ರೀತ್ಯರ್ಥಂಯಥಾಶಕ್ತಿ ನಾರಾಯಣಾಷ್ಟಾಕ್ಷರ (ಪ್ರಣವ)ಮಂತ್ರಜಪ-ತರ್ಪಣಾಖ್ಯಂ ಕರ್ಮ ಕರಿಷ್ಯೆ ॥ [^1].ಕೃದ್ಧೋಲ್ಕ - ಹಿರಣ್ಯಾಕ್ಷಾದಿ ದೈತ್ಯರ ಮೇಲೆ ಕೋಪಗೊಂಡು ಕಿಡಿಕಾರುತ್ತಿರುವ ನೃಸಿಂಹ ಇವನಿಗೆ ಈ ಹೃದಯ ಸಮರ್ಪಿತ. ಮಹೋಲ್ಕ - ಜಗತ್ತನ್ನೇ ಬೆಳಗಿಸುವ ಸೂರ್ಯನಾರಾಯಣನಿಗೆ ಈ ಶಿರಸ್ಸು ಅರ್ಪಿತ. ವೀರೋಲ್ಕ - ವೀರರೆನಿಸಿದ ಗರುಡ ವಾಯ್ವಾದಿಗಳನ್ನು ಪ್ರಳಯದಲ್ಲಿ ನುಂಗುವ ಪ್ರಲಯ ನರಸಿಂಹನಿಗೆ ಈ ಶಿಖೆ ಅರ್ಪಿತ. ದ್ಯೂಲ್ಕ - ಅಂತರಿಕ್ಷವೇ ಮೊದಲಾದ ಮೇಲಿನ ಲೋಕಗಳಲ್ಲಿದ್ದು ನಮ್ಮನ್ನು ಕವಚದಂತೆ ರಕ್ಷಿಸುವ ತ್ರಿವಿಕ್ರಮನಿಗೆ ಕವಚವು ಅರ್ಪಿತ. ನನ್ನ ಶತ್ರುಗಳನ್ನು ಹುಂಕಾರದಿಂದಲೇ ಅಡಗಿಸಲಿ. ಸಹಸ್ರೋಲ್ಕ - ದಿಕ್ಕು ವಿದಿಕ್ಕು ಮೇಲೆ ಕೆಳಗೆ ಸುತ್ತಲೂ ಶತ್ರು- ಗಳಿಂದ ಬರಬಹುದಾದ ಆಯುಧಗಳನ್ನು ಅನಂತಕಿರಣಗಳಿಂದ ತಡೆದು ರಕ್ಷಿಸುವ ನೃಸಿಂಹನಿಗೆ ನಮಸ್ಕಾರ. ಭಿನ್ನ ಭಿನ್ನರೂಪಗಳಾಗುವುದು ಹೇಗೆ? ಎಂಬ ಪ್ರಶ್ನೆಗೆ ಉತ್ತರಿಸುವರು. ವಿಷ್ಣೋರೇವಾತ್ಯಭೇದೇಽಪಿ ತದೈಶ್ವರ್ಯಾತ್ ತದನ್ಯವತ್ । ಚಕ್ರಶಂಖವರಾಭೀತಿಹಸ್ತಾನ್ಯೇತಾನಿ ಸರ್ವಶಃ ॥ ೩೨ ॥ ಮೂಲರೂಪಸವರ್ಣಾನಿ ಕೃಷ್ಣವರ್ಣಾ ಶಿಖೋಚ್ಯತೇ । ಚತುರ್ವಿಂಶನ್ಮೂರ್ತಯಶ್ಚ ಮೂಲರೂಪಸವರ್ಣಕಾಃ ॥ ೩೩ ॥ ಅರ್ಥ - ಈ ರೂಪಗಳೆಲ್ಲಾ ಭಗವಂತನಿಂದ ಭಿನ್ನವಲ್ಲದೆ ಒಂದೇ ಆಗಿದ್ದರೂ ಅಚಿಂತ್ಯಾದ್ಭುತಶಕ್ತಿಯಿಂದಲೇ ಅವು ಬೇರೆ ಬೇರೆ- ಯೆನಿಸುವವು. ಬೇರೆ ಬೇರೆ ರೀತಿಯಲ್ಲಿ ರಕ್ಷಿಸುವ ಅಚಿಂತ್ಯಶಕ್ತಿ- ಯನ್ನು ತೋರಿಸಲೆಂದೇ ಈ ರೂಪಭೇದಗಳು ಎಂದು ಭಾವ. (ಇನ್ನು ಕೃದ್ಧೋಲ್ಕಾದಿರೂಪಗಳ ಧ್ಯಾನ ತಿಳಿಸಲಾಗುತ್ತದೆ.) ಕೃದ್ಧೋಲ್ಕ ಮೊದಲಾದ ಪಂಚರೂಪಗಳೂ ಚಕ್ರ-ಶಂಖ-ವರ- ಅಭಯಮುದ್ರೆಗಳನ್ನು ಧರಿಸಿವೆ. ಇವುಗಳಲ್ಲಿ ಕೃದ್ಧೋಲ್ಕಾದಿ ನಾಲ್ಕು ರೂಪಗಳು ಮೂಲರೂಪದಂತೆ ಉದ್ಯದಾದಿತ್ಯಪ್ರಕಾಶ- ವೆನಿಸಿದರೆ ಶಿಖಾದಲ್ಲಿ ಸನ್ನಿಹಿತನಾದ ವೀರೋಲ್ಕಮೂರ್ತಿಯು ಮಾತ್ರ ನೀಲವರ್ಣನು, ಗಾಯತ್ರಿಯ ಇಪ್ಪತ್ತನಾಲ್ಕು ಅಕ್ಷರ ಪ್ರತಿಪಾದ್ಯಗಳಾದ ಕೇಶವಾದಿ ರೂಪಗಳಾದರೋ ಮೂಲರೂಪ ದಂತೆ ಸೂರ್ಯಸದೃಶಪ್ರಕಾಶವುಳ್ಳವುಗಳಾಗಿವೆ. ವ.ಟೀ. - ಕೃದ್ಧೋಲ್ಕಮಹೋಲ್ಕವೀರೋಲ್ಕದ್ಯುಲ್ಕಸಹಸ್ರೋಲ್ಕಾಃ ಚತುರ್ಥ್ಯಂತಾಃ ಅಷ್ಟಾಕ್ಷರಸ್ಯ ಪಂಚಾಂಗಮ್ । ಏತಾನಿ ರೂಪಾಣಿ ಮೂಲರೂಪಸವರ್ಣಾನಿ । ಉದ್ಯದ್ಭಾಸ್ವತ್ಸಮಾಭಾ- ಸಾನಿ । ಶಿಖಾ ಕೃಷ್ಣವರ್ಣಾ - ವೀರೋಲ್ಕಾಖ್ಯರೂಪಂ ನೀಲವರ್ಣಮ್ । ಟೀಕಾರ್ಥ - ಚತುರ್ಥ್ಯಂತಗಳಾದ ಕೃದ್ಧೋಲ್ಕಾದಿ ಐದುಪದಗಳು [^1]ಅಷ್ಟಾಕ್ಷರಮಂತ್ರ ಜಪಿಸುವಾಗ ಪಂಚಾಂಗಗಳು, ಈ ಐದು ರೂಪಗಳೂ ಮೂಲರೂಪದಂತೆ ಉದಯಿಸಿದ ಸೂರ್ಯನಂತೆ ಪ್ರಕಾಶಮಾನವಾದವುಗಳು. ಕೃದ್ಧೋಲ್ಕಾದಿಗಳು ಮೂಲರೂಪ ದಂತೆ ಪ್ರಕಾಶಮಾನಗಳಾದರೆ ಶಿಖಾವಾಚ್ಯನಾದ ವೀರೋಲ್ಕ- ರೂಪಮಾತ್ರ ನೀಲವರ್ಣದ್ದು. ನ್ಯಾಸದ ಸ್ಥಳಗಳು [^1]. ಕೃದ್ಧೋಲ್ಕಾಯ, ಮಹೋಲ್ಕಾಯ, ವೀರೋಲ್ಕಾಯ, ದ್ಯುಲ್ಕಾಯ, ಸಹಸ್ರೋಲ್ಕಾಯ ಇತ್ಯಾದಿ ? ಆದಿವರ್ಣತ್ರಯಂ ನಾಭಿಹೃಚ್ಛಿರಸ್ಸು ಯಥಾಕ್ರಮಮ್ । ವ್ಯಸನೀಯಂ ಚ ತದ್ವರ್ಣದೇವತಾಧ್ಯಾನಪೂರ್ವಕಮ್ ॥ ೩೪ ॥ ಅರ್ಥ - ಓಂಕಾರಮಂತ್ರಜಪದಲ್ಲಿ ಅಕ್ಷರನ್ಯಾಸಸ್ಥಾನಗಳು ಹೀಗಿವೆ ಪ್ರಣವದಲ್ಲಿರುವ ಎಂಟು ಅಕ್ಷರಗಳಲ್ಲಿ ಮೊದಲ ಮೂರು ಅಕ್ಷರ ಗಳಾದ ಅಕಾರ ಉಕಾರ ಮಕಾರಗಳನ್ನು ಅವುಗಳ ದೇವತೆಗಳಾದ ವಿಶ್ವ-ತೈಜಸ-ಪ್ರಾಜ್ಞರೂಪಗಳ ಧ್ಯಾನಪೂರ್ವಕವಾಗಿ ನಾಭಿ, ಹೃದಯ, ಶಿರಸ್ಸುಗಳಲ್ಲಿ ನ್ಯಾಸಮಾಡಿಕೊಳ್ಳಬೇಕು.[^1] ವ.ಟೀ. - ಪ್ರಣವವರ್ಣನ್ಯಾಸಪ್ರಕಾರಮಾಹ - ಆದೀತಿ ॥ಅಕಾರೋಕಾರಮಕಾರಾದಿವರ್ಣಾಃ ॥ ಟೀಕಾರ್ಥ - ಓಂಕಾರದ ವರ್ಣನ್ಯಾಸ ಮಾಡುವ ರೀತಿಯನ್ನು 'ಆದಿವರ್ಣತ್ರಯಂ' ಇತ್ಯಾದಿ ಶ್ಲೋಕದಲ್ಲಿ ಹೇಳುತ್ತಾರೆ. ಆದಿ- ವರ್ಣತ್ರಯವೆಂದರೆ ಪ್ರಣವದ ಎಂಟು ಅಕ್ಷರಗಳಲ್ಲಿ ಮೊದಲ ಅಕಾರೋಕಾರಮಕಾರಗಳು ಎಂದರ್ಥ. ಅಷ್ಟಾಕ್ಷರ-ವ್ಯಾಹೃತಿಗಳ ನ್ಯಾಸಸ್ಥಾನಗಳು ಪಜ್ಜಾನುನಾಭಿಹೃದಯವಾಙ್ ನಾಸಾನೇತ್ರಕೇಷು ಚ । ಅಷ್ಟಾಕ್ಷರಾಣಾಂ ನ್ಯಾಸಃ ಸ್ಯಾತ್ ವ್ಯಾಹೃತೀನಾಂ ಪ್ರಜಾಪತಿಃ ॥ ೩೫ ॥ ಮುನಿಶ್ಛಂದಸ್ತು ಗಾಯತ್ರೀ ದೇವತಾ ಭಗವಾನ್ ಹರಿಃ । ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಃ ॥ ೩೬ ॥ ಅರ್ಥ- ಅಷ್ಟಾಕ್ಷರಮಂತ್ರದ ಎಂಟು ಅಕ್ಷರಗಳ ನ್ಯಾಸವನ್ನು ಕ್ರಮವಾಗಿ ಪಾದಗಳಲ್ಲಿ, ಮೊಣಗಂಟು, ನಾಭಿ, ಹೃದಯ, ಬಾಯಿ, ಮೂಗು, ನೇತ್ರ, ತಲೆಗಳಲ್ಲಿ ಮಾಡಿಕೊಳ್ಳಬೇಕು. ಈ ಎಂಟು ಅಕ್ಷರಗಳಿಗೆ ಎಂಟು ನ್ಯಾಸ ಸ್ಥಾನಗಳಾಗಿವೆ.[^2]. [^1]. ವಿಶೇಷಾಂಶ - ಪ್ರಣವಮಂತ್ರದ ನ್ಯಾಸಕ್ರಮವು ಹೀಗಿದೆ - ಅಂ ವಿಶ್ವಾಯ ನಮಃ (ನಾಭೌ); ಉಂ ತೈಜಸಾಯ ನಮಃ (ಹೃದಯೇ); ಮಂ ಪ್ರಾಜ್ಞಾಯ ನಮಃ (ಶಿರಸಿ). [^2]. ಅಷ್ಟಾಕ್ಷರಗಳ ನ್ಯಾಸಕ್ರಮವು ಹೀಗಿದೆ – ಓಂ ವಿಶ್ವಾಯ ನಮಃ (ಪಾದಯೋಃ); ಓಂ ನಂ ತೈಜಸಾಯ ನಮಃ (ಜಾನ್ವೋಃ); ಓಂ ಮೋಂ ಪ್ರಾಜ್ಞಾಯ ನಮಃ (ನಾಭೌ); ಓಂ ನಾಂ ತುರ್ಯಾಯ ನಮಃ (ಹೃದಯೇ); ಓಂ ರಾಂ ಆತ್ಮನೇ ನಮಃ (ವಾಗಿಂದ್ರಿಯೇ); ಓಂ ಯಂ ಅಂತರಾತ್ಮನೇ ನಮಃ (ನಾಸಾಯಾಂ); ವ್ಯಾಹೃತಿಗಳ ಜಪದಲ್ಲಿ ಬ್ರಹ್ಮನೇ ಋಷಿಯೆಂದೂ, ಗಾಯತ್ರಿಯೇ ಛಂದಸ್ಸೆಂದೂ, ಉದಯಿಸುತ್ತಿರುವ ಸೂರ್ಯನಂತೆ ಅರುಣ ವರ್ಣಪ್ರಕಾಶವುಳ್ಳ(?) ಜ್ಞಾನ, ಅಭಯಮುದ್ರೆಗಳನ್ನು ಧರಿಸಿರುವ ಭಗವಂತನಾದ ಶ್ರೀಹರಿಯೇ ದೇವತೆಯೆಂದೂ ತಿಳಿಯಬೇಕು. ವ.ಟೀ. - ಭೂರಾದಿವ್ಯಾಹೃತೀನಾಂ ಋಷಿರ್ಬ್ರಹ್ಮಾ। ಪರಮಾತ್ಮಾ ಹರಿರ್ದೇವತಾ । ಗದಾಪದ್ಮಸ್ಥಾನೇ ಜ್ಞಾನಮುದ್ರಾಭಯಾಭ್ಯಾಂ ಯುಕ್ತಾಃ(ಕ್ತಃ) । ಪಂಚಾಂಗಾನಿ । ಟೀಕಾರ್ಥ – 'ಭೂಃ ಭುವಃ ಸ್ವಃ' ಎಂಬ ವ್ಯಾಹೃತಿಮಂತ್ರವನ್ನು ಜಪಮಾಡುವಾಗ ಚತುರ್ಮುಖನೇ ಋಷಿಯೆಂದೂ, ಪರಮಾತ್ಮ ನಾದ ಶ್ರೀಹರಿಯೇ ದೇವತೆಯೆಂದೂ ತಿಳಿಯಬೇಕು. ದೇವತಾ- ಧ್ಯಾನದಲ್ಲಿ ಚಕ್ರಶಂಖ ಹಾಗು ಗದಾಪದ್ಮಗಳ ಬದಲಾಗಿ ಜ್ಞಾನ- ಮುದ್ರೆ ಅಭಯಮುದ್ರೆಯನ್ನು ಧರಿಸಿರುವನೆಂದು ತಿಳಿಯಬೇಕು. ತಾರೇಣ ವ್ಯಾಹೃತೀಭಿಶ್ಚ ಜ್ಞೇಯಾನ್ಯಂಗಾನಿ ಪಂಚ ಚ । ನಾಭಿಹೃತ್ಕೇಷು ಸರ್ವೆಷು ಚತಸ್ರೋ ವ್ಯಾಹೃತೀರ್ನ್ಯಸೇತ್ ॥ ೩೭ ॥ ಅರ್ಥ - ಓಂಕಾರ, ನಾಲ್ಕು(ಭೂಃ, ಭುವಃ, ಸ್ವಃ, ಭೂರ್ಭುವಸ್ವಃ ಎಂಬ) ವ್ಯಾಹೃತಿಮಂತ್ರಗಳಿಂದ ವ್ಯಾಹೃತಿಮಂತ್ರಜಪದಲ್ಲಿ ಪಂಚಾಂಗನ್ಯಾಸ ಮಾಡಬೇಕು. ನಾಭಿ, ಹೃದಯ, ತಲೆ, ಸರ್ವಾ- ವಯವಗಳಲ್ಲಿ ನಾಲ್ಕು ವ್ಯಾಹೃತಿಗಳಿಂದ ನ್ಯಾಸಮಾಡಬೇಕು. ವ.ಟೀ. - ಪ್ರಣವೇನ ವ್ಯಾಹೃತಿಚತುಷ್ಟಯೇನ ಚ ಪಂಚಾಂಗಾನಿ । ನ್ಯಾಸಾಂತರಮಾಹನಾಭೀತಿ ॥ ಟೀಕಾರ್ಥ- ಓಂಕಾರದಿಂದ ಹಾಗೂ ವ್ಯಸ್ತ-ಸಮಸ್ತಗಳಾದ ನಾಲ್ಕು ವ್ಯಾಹೃತಿಗಳಿಂದಲೂ ಪಂಚಾಂಗನ್ಯಾಸ ಮಾಡಿಕೊಳ್ಳಬೇಕು. 'ನಾಭಿ' ಎಂಬುದರಿಂದ ಮತ್ತೊಂದು ವ್ಯಾಹೃತಿ ನ್ಯಾಸಕ್ರಮವನ್ನು ಹೇಳುತ್ತಾರೆ.[^1] ಓಂ ಣಾಂ ಪರಮಾತ್ಮನೇ ನಮಃ (ನೇತ್ರಯೋ); ಓಂ ಯಂ(?) ಜ್ಞಾನಾತ್ಮನೇ ನಮಃ (ಶಿರಸಿ) [^1]. ವಿಶೇಷಾಂಶ - ಪ್ರಣವ,ವ್ಯಾಹೃತಿಗಳ ನ್ಯಾಸಕ್ರಮವು ಕೆಳ- ಕಂಡಪ್ರಕಾರಗಳಲ್ಲಿ ಇದೆ. ವ್ಯಾಹೃತಿನ್ಯಾಸಕ್ರಮಃ (ಸೃಷ್ಟಿಕ್ರಮಃ) ಅಸ್ಯ ಶ್ರೀ ವ್ಯಾಹೃತಿಮಂತ್ರಸ್ಯ ಬ್ರಹ್ಮಾಋಷಿಃ । ಗಾಯತ್ರೀ ಛಂದಃ । ಶ್ರೀಹರಿರ್ದೇವತಾ । ನ್ಯಾಸೇ ವಿನಿಯೋಗಃ ॥ ದ್ವಾದಶಾಕ್ಷರಮಂತ್ರದ ನ್ಯಾಸಾದಿಗಳು ದ್ವಾದಶಾರ್ಣಸ್ಯ ಜಗತೀ ಛಂದೋऽನ್ಯತ್ ತಾರವತ್ ಸ್ಮೃತಮ್ । ಅಚ್ಚವರ್ಣೋಭಯವರಕರೋ ಧ್ಯೇಯೋऽಮಿತದ್ಯುತಿಃ ॥ ೩೮ ॥ ಅರ್ಥ 'ಓಂ ನಮೋ ಭಗವತೇ ವಾಸುದೇವಾಯ' ಎಂಬ ದ್ವಾದಶಾ ಕ್ಷರಮಂತ್ರದ ಛಂದಸ್ಸು ಜಗತೀ; ಉಳಿದ ಋಷಿ, ದೇವತೆಗಳು ಓಂಕಾರಮಂತ್ರ (ತಾರಮಂತ್ರ) ಜಪದಲ್ಲಿ ಹೇಳಿದಂತೆ ಇಲ್ಲಿಯೂ ಅಂತರ್ಯಾಮಿಯೇ ಋಷಿ ಹಾಗೂ ವಾಸುದೇವನೇ ದೇವತೆ- ಯೆಂದು ತಿಳಿಯಬೇಕು. ಮಂತ್ರದೇವತೆಯ ಓಂ ನಾರಾಯಣಾಯ ಹೃದಯಾಯ ನಮಃ । ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ । ಓಂ ಭುವಃ ಸಂಕರ್ಷಣಾಯ ಶಿಖಾಯೈ ವಷಟ್ । ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ್ ಹುಮ್ । ಓಂ ಭೂರ್ಭುವಃಸ್ವಃ ಅನಿರುದ್ಧಾಯ ಅಸ್ತ್ರಾಯ ಫಟ್ ॥ ಇತಿ ದಿಗ್ವಂಧಃ । ಧ್ಯಾನಂ– ಉದ್ಯದಾದಿತ್ಯವರ್ಣಶ್ಚ ಜ್ಞಾನಮುದ್ರಾಭಯೋದ್ಯತಾಃ। ಲಕ್ಷ್ಮೀಧರಾಭ್ಯಾಮಾಶ್ಲಿಷ್ಟಃ ಸ್ವಮೂರ್ತಿಗಣಮಧ್ಯಗಃ ॥ ಮತ್ತೊಂದು ಅಂಗನ್ಯಾಸಕ್ರಮವು ಹೀಗಿದೆ (ಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ) ಓಂ ಭೂಃ ಅನಿರುದ್ಧಾಯ ನಮಃ (ನಾಭೌ) ಓಂ ಭುವಃ ಪ್ರದ್ಯುಮ್ನಾಯ ನಮಃ (ಹೃದಯೇ) ಓಂ ಸ್ವಃ ಸಂಕರ್ಷಣಾಯ ನಮಃ (ಶಿರಸಿ) ಓಂ ಭೂರ್ಭುವಃಸ್ವಃ ವಾಸುದೇವಾಯ ನಮಃ (ಸರ್ವಾಂಗೇ) (ಸೃಷ್ಟಿಸಂಹಾರಕ್ರಮದಲ್ಲಿನ ಅಂಗನ್ಯಾಸಪ್ರಕಾರ)ಓಂ ಭೂಃ ವಾಸುದೇವಾಯ ನಮಃ (ಶಿರಸಿ) ಓಂ ಭುವಃ ಸಂಕರ್ಷಣಾಯ ನಮಃ (ಹೃದಯೇ) ಓಂ ಸ್ವಃ ಪ್ರದ್ಯುಮ್ನಾಯ ನಮಃ (ನಾಭೌ) ಓಂ ಭೂರ್ಭುವಃಸ್ವಃ ಅನಿರುದ್ಧಾಯ ನಮಃ (ಸರ್ವಾಂಗೇ) ಧ್ಯಾನಂ – ವಾಸುದೇವಾದಿಕಾಃ ಶುಕ್ಲರಕ್ತಪೀತಾಸಿತೋಜ್ಜ್ವಲಾಃ । ಶಂಖಚಕ್ರಗದಾಬ್ಜೇತಃ ಪ್ರಥಮೋ ಮುಸಲೀ ಹಲೀ ಸಚಕ್ರಶಂಖಸ್ತ್ವಪರಸ್ತೃತೀಯ: ಶಾರ್ಙ್ಗಬಾಣವಾನ್ । ಚಕ್ರಶಂಖ(ಸ ಶಂಖ)ಸ್ತೃರೀಯಸ್ತು ಚಕ್ರಶಂಖಾಸಿಚರ್ಮವಾನ್॥ ಧ್ಯಾನರೂಪದಲ್ಲಿ ಮಾತ್ರ ವ್ಯತ್ಯಾಸ ತಿಳಿಯುವುದು. ಈ ರೂಪವು ಸ್ವಚ್ಛವೂ ಅತಿಪ್ರಕಾಶಮಾನವೂ ಆಗಿರುತ್ತದೆ ಹಾಗೂ ಅಭಯ ಮುದ್ರೆ, ವರಮುದ್ರೆಗಳನ್ನು ಧರಿಸಿರುತ್ತದೆ. ವ.ಟೀ.- ಅನ್ಯತ್ - ಅಂತರ್ಯಾಮಿಋಷಿಕತ್ವಂ, ಪರಮಾತೃ- ದೇವತಾಕತ್ವಂ ಪ್ರಣವವತ್ । ಅಚ್ಚವರ್ಣಃ - ಧವಲವರ್ಣ: ಗದಾಪದ್ಮಸ್ಥಾನೇ ಅಭಯ-ವರಯುಕ್ತಃ । ಊರ್ಧ್ವಹಸ್ತದ್ವಯೇ ಚಕ್ರ-ಶಂಖವತ್ವೇಸಮಾನಮ್ ॥ ಟೀಕಾರ್ಥ - 'ಅನ್ಯತ್ ತಾರವತ್' ಎಂಬಲ್ಲಿ ಅಂತರ್ಯಾಮಿ ಋಷಿಯಾಗಿರುವಿಕೆ, ಪರಮಾತ್ಮನು ದೇವತೆಯಾಗಿರುವಿಕೆಯು ಪ್ರಣವಜಪದಲ್ಲಿ ಹೇಳಿದಂತೆಯೇ ವಾಸುದೇವಮಂತ್ರಕ್ಕೂ ಅನ್ವಯಿಸುತ್ತದೆ. ಈ ಮಂತ್ರದೇವತೆಯ ಬಣ್ಣವಾದರೂ ಶುಭ್ರ (ಧವಲವರ್ಣ)ವಾಗಿದೆ; ನಾಲ್ಕು ಕೈಗಳಲ್ಲಿ ಹಿಡಿದಿರುವ ಶಂಖ-ಚಕ್ರ-ಗದಾ-ಪದ್ಮಗಳಲ್ಲಿ ಗದಾ-ಪದ್ಮಗಳ ಸ್ಥಾನದಲ್ಲಿ ಅಭಯ- ಮುದ್ರೆ- ವರಮುದ್ರೆಗಳನ್ನು ಚಿಂತಿಸಬೇಕು. ಶಂಖ-ಚಕ್ರಗಳ ಸ್ಥಾನವು ಸಮಾನವಾಗಿರುತ್ತದೆ. ಪದೈಃ ವ್ಯಸ್ತೈಃ ಸಮಸ್ತೈಶ್ಚ ಜ್ಞೇಯಾನ್ಯಂಗಾನಿ ಪಂಚ ಚ । ಅಷ್ಟಾಕ್ಷರಾಣಾಂ ಸ್ಥಾನೇಷು ಬಾಹ್ವೋರೂರ್ವೋಶ್ಚ ವಿನ್ಯಸೇತ್ ॥ ೩೯ ॥ ಅರ್ಥ - ದ್ವಾದಶಾಕ್ಷರದ ಮಂತ್ರದಲ್ಲಿರುವ ನಾಲ್ಕು ಪದಗಳನ್ನು ಪ್ರತ್ಯೇಕವಾಗಿ, ಹಾಗೂ ಪೂರ್ತಿಮಂತ್ರವನ್ನು ಒಂದುಬಾರಿ ಹೇಳಿದರೆ ಪಂಚಾಂಗನ್ಯಾಸವಾಗುತ್ತದೆ. ಅಕ್ಷರನ್ಯಾಸಮಾಡುವಾಗ ಅಷ್ಟಾಕ್ಷರಗಳಿಗೆ ಹೇಳಿದ ಪಾದ, ಜಾನು, ನಾಭಿ, ಹೃದಯ, ಮಾತು, ನಾಸಾ, ನೇತ್ರ, ಶಿರಸ್ಸು ಇವುಗಳ ಜೊತೆಗೆ ಎಡ-ಬಲ ಬಾಹುಗಳೂ ಹಾಗೂ ಎಡಬಲ ತೊಡೆಗಳೂ ಸೇರಿಸಿದರೆ ಹನ್ನೆರಡು ಸ್ಥಾನ- ಗಳಾಗುತ್ತವೆ.[^1] [^1].ವಿಶೇಷಾಂಶ - ದ್ವಾದಶಾಕ್ಷರಮಂತ್ರದ ನ್ಯಾಸಕ್ರಮಗಳು ಹೀಗಿವೆ- ವಾಸುದೇವಮಂತ್ರದ ನ್ಯಾಸಕ್ರಮ (ಸೃಷ್ಟಿಕ್ರಮ) ಅಸ್ಯ ಶ್ರೀ ವಾಸುದೇವದ್ವಾದಶಾಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ಜಗತೀಛಂದಃ । ಶ್ರೀವಾಸುದೇವೋ ದೇವತಾ॥ ಓಂ ವಾಸುದೇವಾಯ ಹೃದಯಾಯ ನಮಃ (ಹೃದಯೇ) ಓಂ ನಮಃ ಸಂಕರ್ಷಣಾಯ ಶಿರಸೇ ಸ್ವಾಹಾ (ಶಿರಸಿ) ಓಂ ಭಗವತೇ ಪ್ರದ್ಯುಮ್ನಾಯ ಶಿಖಾಯೈ ವಷಟ್ (ಶಿಖಾ) ಓಂ ವಾಸುದೇವಾಯ ಅನಿರುದ್ಧಾಯ ಕವಚಾಯ್ ಹುಮ್ ವ.ಟಿ. - ವ್ಯಸ್ತೈಃ = ದ್ವಾದಶಾಕ್ಷರಮಂತ್ರಗತೋಂಕಾರಾದಿವಿಶ- ಕಲಿತಪದೈಃ। ಸಮಸ್ತೈಃ ಸಮಗ್ರಮಂತ್ರೇಣ । ಅಕ್ಷರನ್ಯಾಸಮಾಹ - ಅಷ್ಟೇತಿ ॥ ಟೀಕಾರ್ಥ – ವ್ಯಸ್ತೈಃ ಎಂದರೆ ದ್ವಾದಶಾಕ್ಷರಮಂತ್ರದಲ್ಲಿರುವ ಓಂ, ನಮೋ, ಭಗವತೇ, ವಾಸುದೇವಾಯ ಎಂದು ಪ್ರತ್ಯೇಕವಾದ ನಾಲ್ಕುಪದಗಳಿಂದ ಎಂದರ್ಥ. ಸಮಸ್ತೈಃ ಎಂದರೆ "ಓಂ ನಮೋ ಭಗವತೇ ವಾಸುದೇವಾಯ' ಎಂಬ ಪೂರ್ತಿಮಂತ್ರದಿಂದ ಎಂದರ್ಥ. ಗಾಯತ್ರೀಮಂತ್ರದ ಋಷ್ಯಾದಿನ್ಯಾಸಗಳು ಅವತಾರಿಕಾ - ಇಲ್ಲಿ ಗಾಯಮಂತ್ರದ ಋಷ್ಯಾದಿಗಳನ್ನು ಹೇಳುತ್ತಾರೆ. ವಿಶ್ವಾಮಿತ್ರಸ್ತು ಸಂಧ್ಯಾರ್ಥೇ ತದನ್ಯತ್ರ ಪ್ರಜಾಪತಿಃ । ಮುನಿರ್ದೇವಸ್ತು ಸವಿತೃನಾಮಾ ಸ್ರಷ್ಟೃತ್ವತೋ ಹರಿಃ ॥ ೪೦ ॥ ಅರ್ಥ - ಗಾಯತ್ರಿಯು ವಿಶ್ವಾಮಿತ್ರಗಾಯತ್ರೀ, ಬ್ರಹ್ಮಗಾಯತ್ರೀ ಎಂದು ಎರಡು ವಿಧವಾಗಿದ್ದು ವ್ಯಾಹೃತಿಸಹಿತವಾದ ಗಾಯತ್ರಿಯು ವಿಶ್ವಾಮಿತ್ರಗಾಯತ್ರಿ ಎನಿಸಿದೆ. ಈ ಓಂ ನಮೋ ಭಗವತೇ ವಾಸುದೇವಾಯ ನಾರಾಯಣಾಯ ಅಸ್ತ್ರಾಯ ಫಟ್ ॥ಇತಿ ದಿಗ್ಬಂಧಃ ॥ ಅಕ್ಷರನ್ಯಾಸಕ್ರಮ – ಓಂ ಓಂ ಕೇಶವಾಯ ನಮಃ (ಶಿರಸ್ಸು) ಓಂ ನಂ ನಾರಾಯಣಾಯ ನಮಃ (ಚಕ್ಷುಸ್) ಓಂ ಮೋಂ ಮಾಧವಾಯ ನಮಃ (ನಾಸಾಯಾಂ) ಓಂ ಭಂ ಗೋವಿಂದಾಯ ನಮಃ ಕವಚಾಯ್ ಹುಮ್ ಓಂ ಗಂ ವಿಷ್ಣವೇ ನಮಃ (ಹೃದಿ) ಓಂ ವಂ ಮಧುಸೂದನಾಯ ನಮಃ (ನಾಭೌ) ಓಂ ತೇಂ ತ್ರಿವಿಕ್ರಮಾಯ ನಮಃ (ಜಾನ್ವೋಃ) ಓಂ ವಾಂ ವಾಮನಾಯ ನಮಃ (ಪಾದಯೋಃ) ಓಂ ಸುಂ ಶ್ರೀಧರಾಯ ನಮಃ (ದಕ್ಷಬಾಹೌ) ಓಂ ದೇಂ ಹೃಷೀಕೇಶಾಯ ನಮಃ (ವಾಮಬಾಹೌ) ಓಂ ವಾಂ ಪದ್ಮನಾಭಾಯ ನಮಃ (ದಕ್ಷೋರೌ) ಓಂ ಯಂ ದಾಮೋದರಾಯ ನಮಃ (ವಾಮೋರೌ) ಧ್ಯಾನಮ್ - ಅಚ್ಛವರ್ಣೋಽಭಯವರಕರೋ ಧೈಯೋಽಮಿತ- ದ್ಯುತಿಃ । ಲಕ್ಷ್ಮೀಧರಾಭ್ಯಾಮಾಶ್ಲಿಷ್ಟ......... ಗಾಯತ್ರಿಯಲ್ಲಿ ವಿಶ್ವಾಮಿತ್ರನೇ ಋಷಿಯು. ವ್ಯಾಹೃತಿ ಇಲ್ಲದ ಗಾಯತ್ರಿಯು ಬ್ರಹ್ಮಗಾಯತ್ರಿಯಾಗಿದ್ದು ಇದರ ಜಪದಲ್ಲಿ ಪ್ರಜಾಪತಿಯು ಋಷಿಯಾಗಿರುವನು. ಈ ಜಗತ್ತನ್ನು ಸೃಷ್ಟಿ ಮಾಡುವುದರಿಂದ ಸವಿತೃ ಎನಿಸಿದ ಶ್ರೀಹರಿಯೇ ದೇವತೆಯು. ಪ್ರಸಿದ್ಧಸೂರ್ಯನು ದೇವತೆಯೆಂದು ಭ್ರಮಿಸಬಾರದು. ವ.ಟೀ. - ಗಾಯತ್ರ್ಯಾ ಋಷ್ಯಾದಿಕಮಾಹ - ವಿಶ್ವಾಮಿತ್ರ ಇತಿ ॥ ಟೀಕಾರ್ಥ - ಉಭಯವಿಧಗಾಯತ್ರಿ ಮಂತ್ರದ ಋಷ್ಯಾದಿಗಳನ್ನು 'ವಿಶ್ವಾಮಿತ್ರಸ್ತು' ಎಂಬುದರಿಂದ ಹೇಳುವರು. ಗಾಯತ್ರೀಧ್ಯೇಯಮೂರ್ತಿ ಪ್ರೋದ್ಯದಾದಿತ್ಯವರ್ಣಶ್ಚ ಸೂರ್ಯಮಂಡಲಮಧ್ಯಗಃ । ಚಕ್ರಶಂಖಧರೋऽ೦ಕಸ್ಥದೋರ್ದ್ವಯೋಧ್ಯೇಯ ಏವ ಚ ॥ ೪೧ ॥ ಅರ್ಥ - ಉದಯವಾಗುತ್ತಿರುವ ಸೂರ್ಯನಂತೆ ಪ್ರಕಾಶಮಾನ- ನಾದ, ಸೂರ್ಯಮಂಡಲದ ಮಧ್ಯೆ ಕುಳಿತಿರುವ, ಮೇಲಿನ ಎರಡು ಕೈಗಳಲ್ಲಿ ಚಕ್ರಶಂಖಗಳನ್ನು ಧರಿಸಿ ಉಳಿದೆರಡು ಕೈಗಳನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ ಭಗವಂತನನ್ನು ಧ್ಯಾನ ಮಾಡಬೇಕು. ವ.ಟೀ.-ಅಂಕಸ್ಥದೋರ್ದ್ವಯಃ-ಊರೂಸ್ಥಉತ್ತಾನಪಾಣಿದ್ವಯಃ। ಟೀಕಾರ್ಥ - ತೊಡೆಯ ಮೇಲೆ ಮೇಲ್ಮುಖವಾಗಿ ಇಟ್ಟಿರುವ ಎರಡು ಕೈಗಳನ್ನುಳ್ಳವನೆಂದರ್ಥ. ಬ್ರಹ್ಮಗಾಯತ್ರೀ ನ್ಯಾಸಾದಿಗಳು ಸತಾರಾಶ್ಚ ವ್ಯಾಹೃತಯೋ ಗಾಯತ್ರ್ಯಂಗಾನಿ ಪಂಚ ಚ । ದೋಃಪತ್ಸಂಧಿಷು ಸಾಗ್ರೇಷು ನಾಭಿಹೃನ್ಮುಖಕೇಷು ಚ ॥ ೪೨ ॥ ವರ್ಣನ್ಯಾಸಶ್ಚ ಕರ್ತವ್ಯಃ .... ಅರ್ಥ-ಓಂಕಾರದಿಂದ ಸಹಿತವಾದ ನಾಲ್ಕು ವ್ಯಾಹೃತಿಗಳೇ ಹಿಂದೆ ವ್ಯಾಹೃತಿಯಲ್ಲಿ ಹೇಳಿದಂತೆ ಗಾಯತ್ರೀಮಂತ್ರದಲ್ಲೂ ಅಂಗ- ನ್ಯಾಸಮಂತ್ರಗಳಾಗುತ್ತವೆ. ಕೈಬೆರಳುಗಳ ನಾಲ್ಕು ಸಂಧಿಗಳು ಮತ್ತು ಅವುಗಳ ಅಗ್ರಭಾಗವು; ಕಾಲಿನ ಬೆರಳುಗಳ ಸಂಧಿ ಹಾಗೂ ಕಾಲ್ಬೆರಳುಗಳ ತುದಿಗಳು, ಒಟ್ಟು ಇಪ್ಪತ್ತು ಸ್ಥಳಗಳು; ನಾಭಿ, ಎದೆ,ಮುಖ, ಶಿರಸ್ಸು ಇವು ನಾಲ್ಕು ಒಟ್ಟಿಗೆ ಇಪ್ಪತ್ತನಾಲ್ಕು ಸ್ಥಾನಗಳು ಇವುಗಳಲ್ಲಿ ಗಾಯತ್ರಿಯ ಅಕ್ಷರಗಳಾದ ತತ್ಸವಿತುವರೇಣ್ಯಂ ಇತ್ಯಾದಿ ಇಪ್ಪತ್ತನಾಲ್ಕು ಅಕ್ಷರಗಳ ನ್ಯಾಸ ಮಾಡಬೇಕು.[^1] [^1]. ವಿಶೇಷಾಂಶ - ಪಂಚಾಂಗನ್ಯಾಸಃ ಓಂ ನಮೋ ನಾರಾಯಣಾಯ ಹೃದಯಾಯ ನಮಃ ಓಂ ಭೂಃ ವಾಸುದೇವಾಯ ಶಿರಸೇ ಸ್ವಾಹಾ ಓಂ ಭುವಃ ಸಂಕರ್ಷಣಾಯ ಶಿಖಾಯೈ ವಷಟ್ ಓಂ ಸ್ವಃ ಪ್ರದ್ಯುಮ್ನಾಯ ಕವಚಾಯ ಹುಮ್ ಓಂ ಭೂರ್ಭುವಃಸ್ವಃ ಅನಿರುದ್ಧಾಯ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ ॥ ಅಕ್ಷರನ್ಯಾಸಃ ಓಂ ತಂ ಕೇಶವಾಯ ನಮಃ ಓಂ ತ್ಸಂ ನಾರಾಯಣಾಯ ನಮಃ ಓಂ ವಿಂ ಮಾಧವಾಯ ನಮಃ ಓಂ ತುಂ ಗೋವಿಂದಾಯ ನಮಃ ಓಂ ವಿಂ ವಿಷ್ಣವೇ ನಮಃ - ಬಲಭುಜದ ನಾಲ್ಕು ಸಂಧಿಗಳು ಹಾಗೂ ಅಗ್ರಭಾಗ ಓಂ ರೇಂ ಮಧುಸೂದನಾಯ ನಮಃ ಓಂ ಣೇಂ ತ್ರಿವಿಕ್ರಮಾಯ ನಮಃ ಓಂ ಯಂ ವಾಮನಾಯ ನಮಃ ಓಂ ಭಂ ಶ್ರೀಧರಾಯ ನಮಃ ಓಂ ರ್ಗೋಂ ಹೃಷೀಕೇಶಾಯ ನಮಃ - ಎಡಭುಜದ ನಾಲ್ಕು ಸಂಧಿ ಹಾಗೂ ತುದಿ ಓಂ ದೇಂ ಪದ್ಮನಾಭಾಯ ನಮಃ ಓಂ ವಂ ದಾಮೋದರಾಯ ನಮಃ ಓಂ ಸ್ಯಂ ಸಂಕರ್ಷಣಾಯ ನಮಃ ಓಂ ಧೀಂ ವಾಸುದೇವಾಯ ನಮಃ ಓಂ ಮಂ ಪ್ರದ್ಯುಮ್ನಾಯ ನಮಃ - ಬಲಗಾಲಿನ ನಾಲ್ಕು ಸಂಧಿಗಳು ಅಗ್ರಭಾಗ ಓಂ ಹಿಂ ಅನಿರುದ್ಧಾಯ ನಮಃ ಓಂ ಧಿಂ ಪುರುಷೋತ್ತಮಾಯ ನಮಃಓಂ ಯೋಂ ಅಧೋಕ್ಷಜಾಯ ನಮಃ ಓಂ ಯೋಂ ನಾರಸಿಂಹಾಯ ನಮಃ ಪುರುಷಸೂಕ್ತನ್ಯಾಸಾದಿಗಳು .............................................ತಾರವನ್ನಿಖಿಲಂ ಸ್ಮೃತಮ್ । ಪಂಚಾಶದಕ್ಷರಾಣಾಂ ಚ ಪುಂಸೂಕ್ತಸ್ಯಾಪಿ ಸರ್ವಶಃ ॥ ೪೩ ॥ ಅನುಷ್ಟುಭಶ್ಚ ತ್ರಿಷ್ಟುಪ್ ಚ ಛಂದೋSಸ್ಯ ತ್ರಿಷ್ಟುಭೋಽಪಿ ವಾ । ಅರ್ಥ- ಐವತ್ತು ಅಕ್ಷರಗಳಿರುವ ಮಾತೃಕಾಮಂತ್ರಗಳಿಗೂ ಪುರುಷಸೂಕ್ತಕ್ಕೂ ಋಷಿ, ದೇವತೆ, ಧ್ಯಾನಶ್ಲೋಕ, ಅಂಗನ್ಯಾಸಗಳೆ ಲ್ಲವೂ ಪ್ರಣವಮಂತ್ರದಲ್ಲಿ ಹೇಳಿದಂತೆಯೇ ತಿಳಿಯಬೇಕು. ಪುರುಷಸೂಕ್ತದಲ್ಲಿರುವ ಹದಿನಾರು ಋಕ್ಕುಗಳಲ್ಲಿ ಹದಿನೈದು ಋಕ್ಕುಗಳು ಅನುಷ್ಟುಪ್ ಛಂದಸ್ಸಿನಲ್ಲಿದ್ದರೆ ಕಡೆಯ ಒಂದು ಋಕ್ಕು ಮಾತ್ರ ತ್ರಿಷ್ಟುಪ್ ಛಂದಸ್ಸಿನಲ್ಲಿದೆ. ಯಜುರ್ವೇದದ ಪುರುಷಸೂಕ್ತದಲ್ಲಿ ಹದಿನೆಂಟು ಮಂತ್ರಗಳಿದ್ದು ಮೊದಲ ಹದಿನೈದು ಅನುಷ್ಟುಪ್ ಛಂದಸ್ಸಾದರೆ ಉಳಿದ ಮೂರು ಕಡೆಯ ಋಕ್ಕುಗಳು ತ್ರಿಷ್ಟುಪ್ ಛಂದಸ್ಸಿನಲ್ಲಿವೆ.[^1] ಓಂ ನಂ ಅಚ್ಯುತಾಯ ನಮಃ - ಎಡಗಾಲಿನ ನಾಲ್ಕು ಸಂಧಿಗಳು ಹಾಗೂ ಅಗ್ರಭಾಗ ಓಂ ಪಂ ಜನಾರ್ದನಾಯ ನಮಃ (ಶಿರಸಿ) ಓಂ ಚೋಂ ಉಪೇಂದ್ರಾಯ ನಮಃ (ಮುಖೇ) ಓಂ ದಂ ಹರಯೇ ನಮಃ (ಹೃದಿ) ಓಂ ಯಾತ್ ಕೃಷ್ಣಾಯ ನಮಃ (ನಾಭೌ) ಅಸ್ಯ ಶ್ರೀ ಬ್ರಹ್ಮಗಾಯತ್ರೀಮಂತ್ರಸ್ಯ ಪ್ರಜಾಪತಿ ಋಷಿಃ । ದೈವೀಗಾಯತ್ರೀಛಂದಃ । ಸವಿತಾದೇವತಾ । ಯಥಾಶಕ್ತಿ ಜಪೇ ವಿನಿಯೋಗಃ । ಧ್ಯಾನಂ-ಪ್ರೋದ್ಯದಾದಿತ್ಯವರ್ಣಶ್ಚ ಸೂರ್ಯಮಂಡಲಮಧ್ಯಗಃ। ಚಕ್ರಶಂಖಧರೋऽ೦ಕಸ್ಥದೋರ್ದ್ವಯೋ ಧ್ಯೇಯ ಏವ ಚ ॥ [^1]. ವಿಶೇಷಾಂಶ - ಮಾತೃಕಾನ್ಯಾಸಕ್ರಮ ಋಷ್ಯಾದಿನ್ಯಾಸ - ಏತೇಷಾಂ ಮಾತೃಕಾಮಂತ್ರಾಣಾಂ ಅಂತರ್ಯಾಮಿ ಋಷಿಃ । ದೇವೀ ಗಾಯತ್ರೀ ಛಂದಃ । ಶ್ರೀಭಾರತೀ ರಮಣಮುಖ್ಯಪ್ರಾಣಾಂತರ್ಗತ ಅಜಾದಿರೂಪೀ ಶ್ರೀಲಕ್ಷ್ಮೀನಾರಾಯಣೋ ದೇವತಾ ಹೃದಯೇ । ನ್ಯಾಸೇ ವಿನಿಯೋಗಃ ॥ ಅಂಗನ್ಯಾಸ ಓಂ ಭೂಃ ಅಗ್ನ್ಯಾತ್ಮನೇ ಶ್ರೀಅನಿರುದ್ಧಾಯ ಹೃದಯಾಯ ನಮಃ। ಓಂ ಭುವಃ ವಾಯ್ವಾತ್ಮನೇ ಶ್ರೀಪ್ರದ್ಯುಮ್ನಾಯ ಶಿರಸೇ ಸ್ವಾಹಾ । ಓಂ ಸುವಃ ಸೂರ್ಯಾತ್ಮನೇ ಶ್ರೀಸಂಕರ್ಷಣಾಯ ಶಿಖಾಯೈ ವಷಟ್ । ಓಂ ಭೂರ್ಭುವಃಸ್ವಃ ಪ್ರಜಾಪತ್ಯಾತ್ಮನೇ ಶ್ರೀವಾಸುದೇವಾಯ ಕವಚಾಯ ಹುಮ್ ಓಂ ಸತ್ಯಂ ಶ್ರೀನಾರಾಯಣಾಯ ಅಸ್ತ್ರಾಯ ಫಟ್ ॥ ಓಂ ಭೂರ್ಭುವಃಸ್ವಃ ಓಂ ಇತಿ ದಿಗ್ಬಂಧಃ ॥ ಧ್ಯಾನಮ್ - ಉದ್ಯದ್ಬಾಸ್ವತ್ ಸಮಾಭಾಸಃ ಚಿದಾನಂದೈಕ ದೇಹವಾನ್ । ತಾದೃಗ್ರೂಪಾಶ್ಚಪಂಚಾಶಜ್ಞಾನಮುದ್ರಾಭಯೋದ್ಯತಾಃ । ಟಂಕೀ ದಂಡೀ ಚ ಧನ್ವೀ ಚ ತತ್ತದ್ಯುಕ್ತಾಸ್ತು ವಾಮತಃ ॥ ಧ್ಯಾಯೇನ್ನೃಸಿಂಹಮುರುವೃತ್ತರವಿತ್ರಿಣೇತ್ರಂ ಜಾನುಪ್ರಸಕ್ತಕರಯುಗ್ಮಮಥಾಪರಾಭ್ಯಾಮ್ । ಚಕ್ರಂ ದರಂ ಚ ದಧತಂ ಪ್ರಿಯಯಾ ಸಮೇತಂ ತಿಗ್ಮಾಂಶುಕೋಟ್ಯಧಿಕತೇಜಸಮಗ್ರಶಕ್ತಿಮ್ ॥ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಅಜಾದಿರೂಪೀ ಶ್ರೀಲಕ್ಷ್ಮೀನಾರಾಯಣ ಪ್ರೇರಣಯಾ ಶ್ರೀಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ಮಾತೃಕಾ ಮಂತ್ರಜಪಮಹಂ ಕರಿಷ್ಯೇ. ಓಂ ಅಂ ಅಜಾಯ ನಮಃ । ಓಂ ಆಂ ಆನಂದಾಯ ನಮಃ । ಓಂ ಇಂ ಇಂದ್ರಾಯ ನಮಃ । ಓಂ ಈಂ ಈಶಾನಾಯನಮಃ । ಓಂ ಉಂ ಉಗ್ರಾಯನಮಃ । ಓಂ ಊಂ ಊರ್ಜಾಯ ನಮಃ । ಓಂ ಋಂ ಋತಂಬರಾಯ ನಮಃ । ಓಂ ೠಂ ೠಘಾಯನಮಃ । ಓಂ ಲೃಂ ಲೃಶಾಯ ನಮಃ । ಓಂ ಲೄಂ ಲೄಜಯೇ ನಮಃ। ಓಂ ಏಂ ಏಕಾತ್ಮನೇ ನಮಃ । ಓಂ ಐಂ ಐರಾಯ ನಮಃ । ಓಂ ಓಂ ಓಜೋಭೃತೇ ನಮಃ । ಓಂ ಔ ಔರಸಾಯನಮಃ । ಓಂ ಅಂ ಅಂತಾಯ ನಮಃ । ಓಂ ಅಃ ಅರ್ಧಗರ್ಭಾಯ ನಮಃ । ಓಂ ಕಂ ಕಪಿಲಾಯ ನಮಃ । ಓಂ ಖಂ ಖಪತಯೇ ನಮಃ । ಓಂ ಗಂ ಗರುಡಾಸನಾಯ ನಮಃ । ಓಂ ಘಂ ಘರ್ಮಾಯ ನಮಃ । ಓಂ ಙಂ ಙಸಾರಾಯ ನಮಃ । ಓಂ ಚಂ ಚಾರ್ವಾಂಗಾಯ ನಮಃ । ಓಂ ಛಂ ಛಂದೋಗಮ್ಯಾಯ ನಮಃ । ಓಂ ಜಂ ಜನಾರ್ದನಾಯ ನಮಃ । ಓಂ ಝಂ ಝಟಿತಾರಯೇ ನಮಃ । ಓಂ ಞಂ ಞಮಾಯ ನಮಃ । ಓಂ ಟಂ ಟಂಕಿನೇ ನಮಃ । ಓಂ ಠಂ ಠಲಕಾಯ ನಮಃ । ಓಂ ಡಂ ಡರಕಾಯ ನಮಃ । ಓಂ ಢಂ ಢರಿಣೇ ನಮಃ । ಓಂ ಣಂ ಣಾತ್ಮನೇ ನಮಃ । ಓಂ ತಂ ತಾರಾಯ ನಮಃ । ಓಂ ಥಂ ಥಬಾಯ ನಮಃ । ಓಂ ದಂ ದಂಡಿನೇ ನಮಃ । ಓಂ ಧಂ ಧನ್ವಿನೇ ನಮಃ । ಓಂ ನಂ ನಮ್ಯಾಯ ನಮಃ । ಓಂ ಪಂ ಪರಾಯ ನಮಃ । ಓಂ ಫ ಫಲಿನೇ ನಮಃ । ಓಂ ಬಂ ಬಲಿನೇ ನಮಃ । ಓಂ ಭಂ ಭಗಾಯ ನಮಃ । ಓಂ ಮಂ ಮನವೇ ನಮಃ । ವ.ಟಿ. - ಪಂಚೋತ್ತರದಶಾನಾಂ ಪುಂಸೂಕ್ತಋಚಾಂ ಅನುಷ್ಟುಪ್ ಛಂದಃ । ಯಜ್ಞನ ಇತ್ಯಂತೈಕಾ ತ್ರಿಷ್ಟುಪ್ । ಇದಂ ಅಶ್ವಲಾಯ- ನಾನಾಮ್ । ಆಪಸ್ತಂಬಾನಾಂ ವೇದಾಹಮೇತಮಿತ್ಯಾರಭ್ಯ ಅಂತ್ಯಾ ತ್ರಿಷ್ಟುಪ್ ಛಂದಃ । ಓಂ ಯಂ ಯಜ್ಞಾಯ ನಮಃ । ಓಂ ರಂ ರಾಮಾಯ ನಮಃ । ಓಂ ಲಂ ಲಕ್ಷ್ಮೀಪತಯೇ ನಮಃ । ಓಂ ವಂ ವರಾಯ ನಮಃ । ಓಂ ಶಂ ಶಾಂತಸಂವಿದೇ ನಮಃ । ಓಂ ಷಂ ಷಡ್ಗುಣಾಯ ನಮಃ । ಓಂ ಸಂ ಸಾರಾತ್ಮನೇ ನಮಃ । ಓಂ ಹಂ ಹಂಸಾಯ ನಮಃ । ಓಂ ಳಂ ಳಾಳುಕಾಯ ನಮಃ । ಓಂ ಕ್ಷಂ ಲಕ್ಷ್ಮೀನೃಸಿಂಹಾಯ ನಮಃ । ಪುನಃ ಧ್ಯಾನ, ಕರನ್ಯಾಸ ಮಾಡಿ ತರ್ಪಣ, ಧ್ಯಾನ ಉಪಸಂಹಾರ ಮಾಡಬೇಕು. ಪುರುಷಸೂಕ್ತಋಷ್ಯಾದಿನ್ಯಾಸಃ ಪ್ರಾಣಾಯಾಮ- "ಓಂ ನಮೋ ನಾರಾಯಣಾಯ ಓಂ' ಎಂದು ಪ್ರಾಣಾಯಾಮ. ಋಷಿನ್ಯಾಸಃ - (ಋಗೈದಿಗಳಿಗೆ) ಅಸ್ಯ ಶ್ರೀಪುರುಷಸೂಕ್ತಮಹಾಮಂತ್ರಸ್ಯ ಅಂತರ್ಯಾಮಿಋಷಿಃ । ಪಂಚದಶಃ ಅನುಷ್ಟುಭಃ ಅಂತ್ಯಾ ಋಕ್ ತ್ರಿಷ್ಟುಪ್ । ಜಪೇ ವಿನಿಯೋಗಃ । (ಯಜುರ್ವೇದಿಗಳಿಗೆ) ಅಸ್ಯ ಶ್ರೀಪುರುಷಸೂಕ್ತಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ಪಂಚದಶಃ ಅನುಷ್ಟುಭಃ ಅಂತ್ಯಾಃ ತಿಸ್ರಃ ತ್ರಿಷ್ಟುಭಃ । ಜಪೇ ವಿನಿಯೋಗಃ । ಅಂಗನ್ಯಾಸಃ - ಓಂ ಭೂಃ ಅಗ್ನ್ಯಾತ್ಮನೇ ಅನಿರುದ್ಧಾಯ ಹೃದಯಾಯ ನಮಃ । ಓಂ ಭುವಃ ವಾಯ್ವಾತ್ಮನೇ ಪ್ರದ್ಯುಮ್ನಾಯ ಶಿರಸೇ ಸ್ವಾಹಾ । ಓಂ ಸ್ವಃ ಸೂರ್ಯಾತ್ಮನೇ ಸಂಕರ್ಷಣಾಯ ಶಿಖಾಯೈ ವಷಟ್ । ಓಂ ಭೂರ್ಭುವಃಸ್ವಃ ಪ್ರಜಾಪತ್ಯಾತ್ಮನೇ ವಾಸುದೇವಾಯ ಕವಚಾಯ್ ಹುಮ್ । ಓಂ ಸತ್ಯಂ ನಾರಾಯಣಾಯ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ ॥ ಧ್ಯಾನಮ್ - ಉದ್ಯದ್ಭಾಸ್ವತ್ಸಮಾಭಾಸಃ ಚಿದಾನಂದೈಕ ದೇಹವಾನ್ । ....................................................ನಿತ್ಯ ನಿಃಶೇಷಶಕ್ತಿಮಾನ್ ॥ ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಲಕ್ಷ್ಮೀನಾರಾಯಣಪ್ರೇರಣಯಾ ತತ್ಪ್ರೀತ್ಯರ್ಥಂ ಪುರುಷಸೂಕ್ತಮಹಾಮಂತ್ರಜಪಂ ಕರಿಷ್ಯೇ ॥ "ಸಹಸ್ರಶೀರ್ಷಾಪುರುಷಃ..........ಸಾಧ್ಯಾಃ ಸಂತಿ ದೇವಾಃ'' ಇತಿ ಜಪಃ। ಪುನಃ ಪ್ರಾಣಾಯಾಮ ಧ್ಯಾನ ಅಂಗನ್ಯಾಸ ಉಪಸಂಹಾರ. ಟೀಕಾರ್ಥ - ಪುರುಷಸೂಕ್ತದಲ್ಲಿರುವ ಹದಿನೈದು ಋಕ್ಕು(ಮಂತ್ರ)ಗಳು ಅನುಷ್ಟುಪ್ ಛಂದಸ್ಸಿನಲ್ಲಿವೆ. 'ಯಜ್ಞೇನ ಯಜ್ಞ' ಎಂಬ ಹದಿನಾರನೆಯ ಮಂತ್ರವು ತ್ರಿಷ್ಟುಪ್ಛಂದಸ್ಸಿನಲ್ಲಿದೆ. ಇದು ಋಗ್ವೇದಿಗಳಿಗೆ ನಿಯಮವಾಗಿರುತ್ತದೆ. ಆಪಸ್ತಂಬರಿಗೆ (ಯಜುರ್ವೇದಿಗಳಿಗೆ) ಹದಿನೈದು ಮಂತ್ರಗಳು ತ್ರಿಷ್ಟುಪ್ ಛಂದಸ್ಸಿನಲ್ಲಿರುತ್ತವೆ. ವಿಷ್ಣು ಷಡಕ್ಷರಮಂತ್ರ ನ್ಯಾಸಾದಿಗಳು ವಿಷ್ಣುಶಬಶ್ಚತುರ್ಥ್ಯಂತೋಹೃದಯೇತಃ ಷಡಕ್ಷರ: । ತಾರವತ್ ಸರ್ವಮಸ್ಯಾಪಿ ಶ್ಯಾಮೋ ಧ್ಯೇಯೋ ಹರಿಃ ಸ್ವಯಮ್ ॥ ೪೪ ॥ ಅರ್ಥ- ಚತುರ್ಥೀವಿಭಕ್ತ್ಯಂತವಾದ ವಿಷ್ಣವೇ ಎಂಬ ಶಬ್ದಹಾಗೂ ನಮಃ ಶಬ್ದವು ಸೇರಿದರೆ 'ವಿಷ್ಣವೇ ನಮಃ' ಎಂಬ ವಿಷ್ಣುಷಡಕ್ಷರ ಮಂತ್ರವಾಗುತ್ತದೆ. ಋಷಿ, ಛಂದಸ್ಸು ಎಲ್ಲವೂ ಪ್ರಣವದಲ್ಲಿ ಹೇಳಿದಂತೆಯೇ ಆದರೆ ಧ್ಯೇಯವಾದ ವಿಷ್ಣುರೂಪವಾದರೂ ನೀಲವರ್ಣವಾಗಿದೆ. ವ.ಟಿ. - ಹೃದಯೇತಃ = ನಮಃಸಹಿತಃ । ಟೀಕಾರ್ಥ - ಹೃದಯೇತಃ ಎಂದರೆ ಹೃದಯಸ್ಥಾನದಲ್ಲಿ ನ್ಯಾಸ ಮಾಡುವ ನಮಃ ಎಂಬ ಪದದಿಂದ ಕೂಡಿರುವ ಎಂದರ್ಥ. ವರ್ಣಾ ಏವ ಷಡಂಗಾನಿ ಷಣಯೋರ್ಭೇದಯೋಗತಃ । ಪಜ್ಜಾನುನಾಭಿಹೃನ್ನಾಸಾಕೇಷು ನ್ಯಾಸಶ್ಚ ವರ್ಣಶಃ ॥ 45 ॥ ಅರ್ಥ - 'ವಿಷ್ಣವೇ ನಮಃ' ಎಂಬ ಮಂತ್ರದ ಅಕ್ಷರಗಳಿಂದಲೇ ಷಡಂಗನ್ಯಾಸ ಮಾಡಿಕೊಳ್ಳಬೇಕು. 'ಷ್ಣ' ಎಂಬಲ್ಲಿರುವ ಷಕಾರ-ಣಕಾರಗಳನ್ನು ಬಿಡಿಸಿ ಬೇರೆ ಮಾಡಿದಾಗ ಆರುವರ್ಣಗಳಾಗಿ ಷಡಂಗನ್ಯಾಸ ಮಾಡಿಕೊಳ್ಳಬಹುದಾಗಿದೆ. ಕಾಲು, ಜಾನು, ನಾಭಿ, ಎದೆ, ಮೂಗು, ಶಿರಸ್ಸುಗಳಲ್ಲಿ ವರ್ಣನ್ಯಾಸವನ್ನು ಮಾಡಬೇಕು.[^1] [^1]. ವಿಶೇಷಾಂಶ - ವಿಷ್ಣುಷಡಕ್ಷರಮಂತ್ರನ್ಯಾಸಾದಿಗಳು ಪ್ರಾಣಾಯಾಮ- ವಿಷ್ಣವೇ ನಮಃ ಇತಿ ಪ್ರಾಣಾಯಾಮಃ । ಋಷಿನ್ಯಾಸಃ ಅಸ್ಯ ಶ್ರೀ ವಿಷ್ಣು ಷಡಕ್ಷರಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀಗಾಯತ್ರೀ ಛಂದಃ । ವಿಷ್ಣುರ್ದೇವತಾ । ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀವಿಷ್ಣುಪ್ರೇರಣಯಾ ಶ್ರೀವಿಷ್ಣುಪ್ರೀತ್ಯರ್ಥ೦ ವಿಷ್ಣುಷಡಕ್ಷರಮಂತ್ರಜಪೇ ವಿನಿಯೋಗಃ । ಮೂಲಮಹಾಮಂತ್ರಗಳ ಮಹಿಮೆ ಏತೇ ತು ಸರ್ವಮಂತ್ರಾಣಾಂ ಮೂಲಮಂತ್ರಾ ವಿಶೇಷತಃ ॥ 46 ॥ ಏತಜ್ಞಾನಾತ್ ಸಮಸ್ತಂ ಚ ಜ್ಞಾತಂ ಸ್ಯಾಚ್ಛಬ್ದಗೋಚರಮ್ । ಏತಜ್ಜಪಾತ್ ಸಮಸ್ತಾನಾಂ ಮಂತ್ರಾಣಾಂ ಜಾಪಕೋ ಭವೇತ್ ॥ 47 ॥ ಅಂಗನ್ಯಾಸಃ - ಓಂ ವಿಂ ವಿಶ್ವಾಯ ಹೃದಯಾಯ ನಮಃ । ಓಂ ಷಂ ತೈಜಸಾಯ ಶಿರಸೇ ಸ್ವಾಹಾ । ಓಂ ಣಂ ಪ್ರಾಜ್ಞಾಯ ಶಿಖಾಯೈ ವಷಟ್ । ಓಂ ವೇಂ ತುರ್ಯಾಯ ಕವಚಾಯ ಹುಮ್ । ಓಂ ನಂ ಆತ್ಮನೇ ನೇತ್ರಾಭ್ಯಾಂ ವೌಷಟ್ । ಓಂ ಮಂ ಅಂತರಾತ್ಮನೇ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ ॥ ವರ್ಣನ್ಯಾಸಃ - (ಸೃಷ್ಟಿನ್ಯಾಸ - ತಲೆಯಿಂದ ಪಾದ) ಓಂ ವಿಂ ವಿಶ್ವಾಯ ನಮಃ (ಶಿರಸಿ) ಓಂ ಷಂ ತೈಜಸಾಯ ನಮಃ (ನಾಸಯೋಃ) ಓಂ ಣಂ ಪ್ರಾಜ್ಞಾಯ ನಮಃ (ಹೃದಯೇ) ಓಂ ವೇಂ ತುರ್ಯಾಯ ನಮಃ (ನಾಭೌ) ಓಂ ನಂ ಆತ್ಮನೇ ನಮಃ (ಜಾನ್ವೋಃ) ಓಂ ಮಂ ಅಂತರಾತ್ಮನೇ ನಮಃ (ಪಾದಯೋಃ) (ಅರ್ಧಸೃಷ್ಟಿ, ಅರ್ಧಸಂಹಾರನ್ಯಾಸಃ) ಓಂ ವಿಂ ವಿಶ್ವಾಯ ನಮಃ (ಶಿರಸಿ) ಓಂ ಷಂ ತೈಜಸಾಯ ನಮಃ (ನಾಸಯೋಃ) ಓಂ ಣಂ ಪ್ರಾಜ್ಞಾಯ ನಮಃ (ಹೃದಯೇ) ಓಂ ವೇಂ ತುರ್ಯಾಯ ನಮಃ (ಪಾದಯೋಃ) ಓಂ ನಂ ಆತ್ಮನೇ ನಮಃ (ಜಾನ್ವೋಃ) ಓಂ ಮಂ ಅಂತರಾತ್ಮನೇ ನಮಃ (ನಾಭೌ) ಧ್ಯಾನಮ್- ಇಂದ್ರನೀಲಸಮಾಭಾಸಃ ಚಿದಾನಂದೈಕದೇಹವಾನ್। ಚಕ್ರಶಂಖಗದಾಪದ್ಮಧರೋ ಧ್ಯೇಯೋಽಹಮೀಶ್ವರಃ ॥ ................................................ಸರ್ವಾಭರಣಭೂಷಿತಾಃ । ಶ್ರೀಭಾರತೀರಮಣಮುಖ್ಯಪ್ರಾಣಾಂತರ್ಗತಶ್ರೀವಿಷ್ಣುಪ್ರೇರಣಯಾ ತತ್ಪ್ರೀತ್ಯರ್ಥಂ ವಿಷ್ಣುಷಡಕ್ಷರಮಹಾಮಂತ್ರಜಪಮಹಂ ಕರಿಷ್ಯೇ॥ "ಓಂ ವಿಂ ವಿಷ್ಣವೇ ನಮಃ ಓಂ'' (ಎಂದು ಜಪ). ಅರ್ಥ - ಈ ಮೇಲೆ ವಿವರಿಸಿದ ಪ್ರಣವಾದಿ ಅಷ್ಟಮಹಾಮಂತ್ರ ಗಳಾದರೂ ಮುಂದೆ ಹೇಳುವ ವರಾಹಾದಿಮಂತ್ರಗಳಿಗೂ ಮೂಲ ಭೂತವಾದ ಮಂತ್ರಗಳೆನಿಸಿದ್ದುವ್ಯಾಖ್ಯಾನರೂಪದಂತಿವೆ. ಆದ್ದರಿಂದ ಇವುಗಳನ್ನೇ ಸರ್ವರೂ ಮುಖ್ಯವಾಗಿ ಜಪಿಸತಕ್ಕದ್ದು. (ಮುಖ್ಯವಾಗಿ ಈ ಮಂತ್ರಗಳನ್ನೇ ಜಪಿಸಲು ಇನ್ನೊಂದು ಕಾರಣ) ಈ ಅಷ್ಟಮಹಾಮಂತ್ರಗಳ ಅರ್ಥಾನುಸಂಧಾನದಿಂದ ಸಮಸ್ತ ಮಂತ್ರ ಹಾಗೂ ಮಂತ್ರಪ್ರತಿಪಾದ್ಯವಿಷಯವನ್ನೂ ತಿಳಿದಂತಾ-ಗುತ್ತದೆ. ಸಮಸ್ತಮಂತ್ರಾರ್ಥಜ್ಞಾನದ ಫಲವು ಅಷ್ಟಮಹಾ- ಮಂತ್ರಾರ್ಥಜ್ಞಾನದಲ್ಲಿಯೇ ಅಡಕವಾಗುತ್ತವೆ ಎಂದು ಭಾವ. ಇಷ್ಟಲ್ಲದೇ ಇನ್ನೊಂದು ಕಾರಣವೂ ಇದೆ. - ಈ ಅಷ್ಟಮಹಾ ಮಂತ್ರಗಳ ಜಪ ಮಾಡುವುದರಿಂದ ಉಳಿದ ಸಮಸ್ತಮಂತ್ರ- ಗಳನ್ನೂ ಜಪಮಾಡಿದಂತಾಗುತ್ತದೆ.[^1] [^1]. ವಿಶೇಷಾಂಶ - ಈ ಅಷ್ಟಮಹಾಮಂತ್ರಗಳನ್ನು ನಾಲ್ಕು ಅಶ್ರಮದವರೂ ಜಪಿಸಬೇಕೆಂದು ವಿಧಿಸಿದ್ದಾರೆ. ಆದರೆ ಪ್ರಣವ ಮಂತ್ರಜಪವಾದರೋ ಯತಿಗಳಿಗೆ ಮಾತ್ರ ವಿಹಿತವಾಗಿದೆ. ಗೃಹಸ್ಥರಿಗೆ ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ವರಾಹಪುರಾಣದಲ್ಲಿ 'ಪ್ರಣವೋ ಯತೀನಾಮೇವ ಗೃಹಿಭಿಃ ಜ್ಞಾಯತೇ ನ ತು' ಎಂದು ಹೇಳಿದೆ. ಕೆಲವರು ಗೃಹಸ್ಥರಿಗೂ ಪ್ರಣವಮಂತ್ರಜಪವಿದೆ ಎಂದು ತಿಳಿ- ಯುವರು. ಅವರ ಅಭಿಪ್ರಾಯ ಹೀಗಿದೆಶ್ರೀಮದಾಚಾರ್ಯರೇ ಮೂರನೆಯ ಅಧ್ಯಾಯದಲ್ಲಿ (3/110)ರಲ್ಲಿ 'ಪ್ರತಿಮಾಂ ಪ್ರಣವೇನ ತು' ಎಂದು ಗೃಹಸ್ಥರಿಗೂ ಪ್ರಣವಾವೃತ್ತಿ- ಯನ್ನು ಹೇಳಿದ್ದಾರೆ. ವಿಷ್ಣುತೀರ್ಥರ ಸನ್ನ್ಯಾಸಪದ್ಧತಿಯಲ್ಲಿ ನಾರಾಯಣಾಷ್ಟಾಕ್ಷರಂ ಚ ವೈಷ್ಣವಂ ಚ ಷಡಕ್ಷರಮ್ । ದ್ವಾದಶಾರ್ಣೋ ವ್ಯಾಹೃತಯಃ ಷಡೇತೇ ಮನವೋಽಖಿಲೈಃ ॥ ಮುಮುಕ್ಷುಭಿಃ ಸದಾ ಜಪ್ಯಾಃ...............(2/120) ಎಂದು ಗೃಹಸ್ಥರಿಗೂ ಅಷ್ಟಮಹಾಮಂತ್ರಗಳನ್ನೂ ಜಪಿಸಲು ಹೇಳಿದ್ದಾರೆ. ಹಾಗಾದರೆ ವರಾಹಪುರಾಣದ ಮಾತಿಗೆ ವಿರೋಧ ಬಂದಿತಲ್ಲಾ? ಎಂದರೆ, ಯತಿಗಳು ಹೇಗೆ ಪುರಶ್ಚರಣದಲ್ಲಿ ಸಾವಿರಾರು ಜಪ ಮಾಡುವ- ರೋ ಹಾಗೆ ಗೃಹಸ್ಥನಿಗೆಇರುವುದಿಲ್ಲ ; ಮಂತ್ರವನ್ನೇ ನಿಷೇಧಿಸಿಲ್ಲ; ಪಂಚಗವ್ಯಮೇಲನದಲ್ಲಿ, ಪ್ರತಿಮಾಸ್ಥಾಪನೆಯಲ್ಲಿ, ಸ್ನಾನಾದಿ- ಗಳಲ್ಲಿಯೂ ಮಂತ್ರಾವೃತ್ತಿಯನ್ನು ಹೇಳಿದ್ದಾರೆ. ಪೂಜಾಕ್ರಮ ಆದರೆ ವಿಶೇಷವನ್ನು ಮಾಧವಸ್ಮೃತಿಯಲ್ಲಿ ಹೇಳಿದ್ದಾರೆ - ''ಸಂಧ್ಯಾಸು ಮಂತ್ರಾ ಇಮಮೇವ ಜಪ್ಯಾಃ'' (ಸಂಧ್ಯಾಕಾಲಗಳಲ್ಲಿ ಎಲ್ಲರೂ ಈ ಅಷ್ಟಮಹಾಮಂತ್ರಗಳನ್ನೇ ಜಪಿಸಬೇಕು. ಆದರೆ ಯತಿಗಳು ಓಂಕಾರವನ್ನು ಮೊದಲು ಜಪಿಸಿ ಅನಂತರ ಉಳಿದ ಮಂತ್ರಗಳನ್ನು ಜಪಿಸಬೇಕು : 'ತಾರೋ ಯತೀನಾಂ ಪ್ರಥಮೋ ಹಿ ಮಂತ್ರಃ''. ಬೇರೆ ಗೃಹಸ್ಥಾಶ್ರಮಿ ಮೊದಲಾದವರು ಮೊದಲು ಗಾಯತ್ರಿ- ಯನ್ನು ಜಪಿಸಿ ನಂತರ ಇತರ ಮಂತ್ರಗಳನ್ನು ಜಪಿಸಬೇಕು -"ಸಾವಿತ್ರ ಉಕ್ತಶ್ಚ ತಥಾ ಪರೇಷಾಂ ದ್ವಿಜನನಾಂ'', ಶೌನಕರೂ ಸಮ್ಮತಿಯನ್ನು ಸೂಚಿಸಿದ್ದಾರೆ 'ಗೃಹಸ್ಥಾದ್ಯಾಃ ತಥಾ ಶುದ್ಧಾಃ ಪೌನಶ್ಚರಣಕಂ ವಿನಾ । ನಿತ್ಯಮೇವ ಜಪಂ ಕುರ್ಯುಃ........................' ಬೇರೆ ಪತ್ನಿಯರ ಸಂಬಂಧವಿಲ್ಲದೆ ಶುದ್ಧರಾದ ಗೃಹಸ್ಥರೂ ಬ್ರಹ್ಮಚಾರಿಗಳೆನಿಸಿದ್ದು ಪ್ರಣವಮಂತ್ರವನ್ನು ಜಪಿಸಬಹುದು. ಆದರೆ ಯತಿಗಳಂತೆ ಪುರಶ್ಚರಣವಿಧಿಯಂತಲ್ಲ. ಅಂತೂ ಗೃಹಸ್ಥರು ಮೊದಲು ವಿಶ್ವಾಮಿತ್ರಗಾಯತ್ರಿಯನ್ನು ಜಪಿಸಿ ನಂತರ ಉಳಿದ ಅಷ್ಟಮಹಾಮಂತ್ರಗಳನ್ನು ಜಪಿಸಬೇಕು. ಯತಿಗಳಾದರೋ ಪ್ರಣವಜಪವನ್ನು ಮೊದಲು ಮಾಡಿ ಉಳಿದ ವಿಶ್ವಾಮಿತ್ರಗಾಯತ್ರೀ ಅಷ್ಟಾಕ್ಷರ ಮಂತ್ರಗಳನ್ನು ಜಪಿಸಬೇಕು ಎಂದಂತಾಯಿತು. ಇದರಿಂದ ಯತಿಗಳೂ ವಿಶ್ವಾಮಿತ್ರಗಾಯತ್ರೀ ಜಪವನ್ನು ಮಾಡಲೇ ಬೇಕು ಎಂದಾಯಿತು. ಗಾಯತ್ರಿಯಲ್ಲಿ ಏಕೋಂಕಾರ, ಸಂಪುಟೋಂಕಾರ, ಷಡೋಂಕಾರ ಎಂದು ಮೂರು ವಿಧಗಳಿವೆ. "ಏಕೋಂಕಾರಾ ಸಂಪುಟಾ ಚ ಷಡೋಂಕಾರೇತಿ ಸಾ ತ್ರಿಧಾ''. ಆದಿಯಲ್ಲಿ ಮಾತ್ರ ಓಂಕಾರವಿರುವ 'ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್'' ಇದು ಬ್ರಹ್ಮಚಾರಿ, ಗೃಹಸ್ಥರಿಗೆ ಯುಕ್ತವಾಗಿದೆ. ಆದಿಯಲ್ಲಿ ಹಾಗೂ ಅಂತ್ಯದಲ್ಲಿ ಓಂಕಾರವಿರುವ ಸಂಪುಟೋಂ- ಕಾರಗಾಯತ್ರೀಯು ಹೀಗಿದೆ'ಓಂ ಭೂರ್ಭುವಃಸ್ವಃ ತತ್ಸವಿತುರ್ವರೇಣ್ಯಂ ಭರ್ಗೊ ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್ ಓಂ'' ಓಂಕಾರಂ ಪೂರ್ವಮುಚ್ಚಾರ್ಯ ಭೂರ್ಭುವಸ್ವಸ್ತಥೈವ ಚ । ಗಾಯತ್ರೀಂ ಪ್ರಣವಂ ಚಾಂತೇ ಗಾಯತ್ರೀ ಸಂಪುಟಾ ಮತ॥ - ಯಾಜ್ಞವಲ್ಕ ಸ್ಮೃತಿ 4/26 ಷಡೋಂಕಾರಗಾಯತ್ರಿಯ ಸ್ವರೂಪ ಹೀಗಿದೆ - ಓಂ ಓಂ ಭೂಃ, ಓಂ ಭುವಃ, ಓಂ ಸ್ವಃ, ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ । ಧಿಯೋ ಯೋ ನಃ ಪ್ರಚೋದಯಾತ್ ಓಂ. ಅಂದರೆ ಆದಿ-ಅಂತ್ಯದಲ್ಲಿ ಎರಡು ಓಂಕಾರಗಳು, ಮೂರು ಅವತಾರಿಕಾ- ಸರ್ವತ್ರ ಪೂಜ್ಯನಾರು? ಅವನನ್ನು ಪೂಜಿಸುವ ರೀತಿ ಯಾವುದು ? ಎಂಬ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ಪೂಜ್ಯಶ್ಚ ಭಗವಾನ್ನಿತ್ಯಂ ಚಕ್ರಾಬ್ಜಾದಿಕಮಂಡಲೇ। ಹೃದಯೇ ವಾ ಚಲೇ ವಾಽಪಿ ಜಲೇ ವಾ ಕೇವಲ ಸ್ಥಲೇ ॥ 48 ॥ ಅರ್ಥ- ಶ್ರೀಮನ್ನಾರಾಯಣನೇ ಸರ್ವತ್ರಪೂಜ್ಯನು. ಅವನನ್ನು ಚಕ್ರಾಬ್ಜ, ಭದ್ರಕ ಮೊದಲಾದ ಮಂಡಲಗಳಲ್ಲಿಯೂ ಆಯಾಯ ದೇವತಾಯಂತ್ರಗಳಲ್ಲಿ ಆವಾಹಿಸಿ ಪೂಜಿಸಬೇಕು. ಅಥವಾ ಪ್ರತಿಮೆ, ಸಾಲಿಗ್ರಾಮಾದಿ ಅಚಲಪ್ರತೀಕಗಳಲ್ಲಿ, ದೇವಾಲಯ- ಗಳಲ್ಲಿರುವ ಸ್ಥಿರಪ್ರತಿಮೆಗಳಾಗಲೀ, ಗುರು ಯತಿಗಳು ಮೊದಲಾದ ಚಲಪ್ರತಿಮೆಗಳಾಗಲೀ, [^1] , ಕೇವಲ ಭೂಮಿಯಲ್ಲಿ ಮಂಡಲ ಬರೆದು, ಭೂಸ್ಥಂಡಿಲದಲ್ಲಿಯೇ ಮಂಡಲ ಬರೆದು ಭೂಸ್ಥಂಡಿಲ ದಲ್ಲಿಯೇ ಭಗವಂತನನ್ನು ಪೂಜಿಸಬಹುದು. ವ.ಟೀ. - ಪೂಜಾವಿಧಾನಮಾಹ - ಪೂಜ್ಯ ಇತಿ ॥ ಚಕ್ರಾಂಬ್ಜಂ ಏಕಂ ಮಂಡಲಮ್ । ವ್ಯಾಹೃತಿಗಳ ಮೊದಲು ಓಂಕಾರಗಳೂ, ಗಾಯತ್ರಿ ಮಂತ್ರದ ಆದಿ- ಯಲ್ಲಿ ಒಂದು ಓಂಕಾರ ಹೀಗೆ ಆರು ಓಂಕಾರಗಳು. ಇದು ಯತಿ ಹಾಗೂ ವಾನಪ್ರಸ್ಥರಿಗೆ ಯೋಗ್ಯವಾಗಿದೆ. ಯತಿಗಳಿಗೆ ಗಾಯತ್ರಿಯು ಆವಶ್ಯಕವೇ? ದ್ವಿಜನಾದವನು ಗಾಯತ್ರೀಪ್ರಧಾನಕವಾದ ಸಂಧ್ಯಾವಂದನೆ- ಯನ್ನು ಬಿಟ್ಟರೆ ಬದುಕಿರುವಾಗಲೇ ಶೂದ್ರನಾಗುವನು. ಸನ್ಯಾಸಿಯು ಮನೆ, ಮಡದಿ, ಮಠ ಎಲ್ಲವನ್ನೂ ಬಿಡಬಹುದು. ಆದರೆ ತಂದೆ ಉಪದೇಶಿಸಿದ ವೇದಮಾತೆಯನ್ನು ತ್ಯಜಿಸಬಾರದು. 'ಸರ್ವಂ ಚ ಸನ್ನ್ಯಸೇದ್ ವಿದ್ವಾನ್ ವೇದಮೇಕಂ ನ ಸಂತ್ಯಜೇತ್'. ಕುಟೀಚಕ, ಬಹೂದಕ, ಹಂಸ, ಪರಮಹಂಸನಾಗಲೀ ವೇದಮಾತೆ ಯನ್ನು ತ್ಯಜಿಸಬಾರದು. ತ್ಯಜಿಸಿದರೆ ಚಂಡಾಲನಿಗಿಂತಲೂ ಅಧಮನೆನಿಸುವನು. "ಗಾಯತ್ರೀರಹಿತಾಃ ಸರ್ವೆ ಚಂಡಾಲಾದಧಮಃ ಸ್ಮೃತಃ" ಈ ಮಾತುಗಳೆಲ್ಲ ವ್ಯಾಹೃತಿಸಹಿತವಾದ ಗಾಯತ್ರಿಯನ್ನು ಕುರಿತೇ ಹೇಳುತ್ತಿವೆ. ಬ್ರಹ್ಮಗಾಯತ್ರೀಯಾದರೋ ವ್ಯಾಹೃತಿರಹಿತ- ವಾದದ್ದು. ಆದ್ದರಿಂದ ಯತಿಗಳೂ ಸಹ ವಿಶ್ವಾಮಿತ್ರಗಾಯತ್ರಿ- ಯನ್ನು ಹತ್ತಕ್ಕೆ ಕಡಿಮೆಯಾಗದಂತೆ ಜಪಿಸಲೇಬೇಕು. ಆದರೆ ಸಂಧ್ಯಾವಂದನೆಯಲ್ಲಿ ಅರ್ಘ್ಯಪರ್ಯಂತ ಮಾಡಿ ಗಾಯತ್ರಿ ಯನ್ನು ಜಪಿಸುವುದು. ಉಪಸ್ಥಾನಾದಿಗಳಿಲ್ಲ. [^1]. ಸನ್ಯಾಸಿಗಳನ್ನು ಭಿಕ್ಷೆಗೆ ಆಹ್ವಾನಿಸಿದಾಗ ಪ್ರತಿಮೆ ಹಾಗೂ ಸನ್ನ್ಯಾಸಿಗಳ ಅಂತರ್ಯಾಮಿ ಪೂಜೆ ನಡೆಯುವುದರಿಂದ ಸನ್ನ್ಯಾಸಿಭಿಕ್ಷೆಗೆ ವಿಶೇಷಸ್ಥಾನವಿದೆ. ಆದಿಪದೇನ ಸರ್ವತೋ ಭದ್ರಾದಿಕಮ್ । ಹೃದಯೇ ಅಂತಃ । ಟೀಕಾರ್ಥ - ಪೂಜೆಯನ್ನು ಮಾಡುವ ವಿಧಾನವನ್ನು 'ಪೂಜ್ಯಶ್ಚ' ಎಂಬಲ್ಲಿಂದ ಹೇಳುವರು. "ಚಕ್ರಾಬ್ಜ'ವೆಂಬುದು ಒಂದು ಮಂಡಲವು. ಆದಿಪದದಿಂದ ಸರ್ವತೋಭದ್ರಮಂಡಲವನ್ನೂ ತೆಗೆದುಕೊಳ್ಳಬೇಕು. ಹೃದಯೇ ಎಂದರೆ ಹೃದಯಾಕಾಶದಲ್ಲಾ- ದರೂ ಭಗವಂತನನ್ನು ಆವಾಹಿಸಿ ಪೂಜಿಸಬಹುದು.[^1] ಪೀಠಪೂಜಾಕ್ರಮ ಅಷ್ಟಾಕ್ಷರೇಣ ಸಂಪೂಜ್ಯ ಪ್ರಥಮಂ ದೇವತಾಂ ಪರಾಮ್ । ಮಧ್ಯೆ ಸವ್ಯೇ ಗುರೂಂಶ್ಚೈವ ದಕ್ಷಿಣೇ ಸರ್ವದೇವತಾಃ ॥ ೪೯ ॥ ಪುನಃ ಸತ್ಯೇ ಸರ್ವಗುರೂನಾಗ್ನೇಯಾದಿಷು ಚ ಕ್ರಮಾತ್ । ಗರುಡಂ ವ್ಯಾಸದೇವಂ ಚ ದುರ್ಗಾಂ ಚೈವ ಸರಸ್ವತೀಮ್ ॥ ೫೦ ॥ ಅರ್ಥ- ಪೀಠಸ್ಥಾಪನದೇಶದ ಮಧ್ಯದಲ್ಲಿ ಮೊದಲು ಪರಮ- ದೇವತೆಯಾದ ಶ್ರೀಮನ್ನಾರಾಯಣನನ್ನು ಮೂಲಮಂತ್ರದಿಂದ ಅಭಿಮಂತ್ರಣಮಾಡಿ ಆವಾಹಿಸಬೇಕು. ಹೀಗೆ ಆವಾಹಿತ ನಾರಾಯಣನ ಬಲಭಾಗದಲ್ಲಿ ಸರ್ವದೇವತೆಗಳನ್ನೂ ಪುನಃ ಎಡಭಾಗದಲ್ಲಿ ಸರ್ವಗುರುಗಳನ್ನೂ ಪೂಜಿಸಬೇಕು. ನಂತರ ಆಗ್ನೇಯಾದಿ ನಾಲ್ಕು ವಿದಿಕ್ಕುಗಳಲ್ಲಿ ಕ್ರಮವಾಗಿ ಗರುಡ, ವ್ಯಾಸ, ದುರ್ಗಾ, ಸರಸ್ವತಿಯರನ್ನೂ ಪೂಜಿಸಬೇಕು. ಧರ್ಮಾಧರ್ಮಾದಿದೇವತೆಗಳು ಧರ್ಮ೦ ಜ್ಞಾನಂ ಚ ವೈರಾಗ್ಯಮೈಶ್ವರ್ಯ೦ ಚೈವ ಕೋಣಗಾನ್ । ತದಂತಃಪೂರ್ವದಿಕ್ ಪೂರ್ವಮಧರ್ಮಾದೀಂಶ್ಚ ಪೂಜಯೇತ್ ॥ ೫೧ ॥ ಅರ್ಥ - ಮೇಲ್ಬಾಗದಲ್ಲಿ ಧರ್ಮ, ಜ್ಞಾನ, ವೈರಾಗ್ಯ, ಐಶ್ವರ್ಯಗಳ ಅಭಿಮಾನಿಗಳನ್ನೂ ಪೂಜಿಸಬೇಕು. ಅವುಗಳ ಮಧ್ಯದಲ್ಲಿ ಪೂರ್ವಾದಿದಿಕ್ಕುಗಳಲ್ಲಿ ಪೂರ್ವದಿಂದಾರಂಭಿಸಿ ಅಧರ್ಮ, ಅಜ್ಞಾನ, ಅವೈರಾಗ್ಯ ಮತ್ತು ಅನೈಶ್ವರ್ಯ [^1]. ಅರ್ಚಾಯಾಂ ಸ್ಥಂಡಿಲೇ ಸೂರ್ಯೇ ಜಲೇ ವಹ್ನೌ ಗುರಾವಪಿ । – ಭಾಗವತ ದ್ವೇ ರೂಪೇ ವಾಸುದೇವಸ್ಯ ಚಲಂ ಚಾಚಲಮೇವ ಚ । ಚಲಂ ಸನ್ನ್ಯಾಸಿನಾಂ ರೂಪಂ ಅಚಲಂ ಪ್ರತಿಮಾದಿಕಮ್ ॥ - ಅತ್ರಿಸ್ಮೃತಿ ದೇವತೆಗಳನ್ನೂ ಪೂಜಿಸಬೇಕು. ವ.ಟೀ.- ಪೂರ್ವದಿಕ್ಪೂರ್ವಮಿತ್ಯತ್ರ ದೇವಪ್ರಾಚೀತಿ ಗುರು- ಮತಮ್ । ಮನುಷ್ಯಪ್ರಾಚೀತ್ಯನ್ಯಮತಮ್ ॥ ಟೀಕಾರ್ಥ- ಪೂರ್ವದಿಕ್ ಪ್ರಾಚೀದಿಕ್ ಪೂರ್ವಾ ಆದ್ಯಾ ಯಥಾ ಸ್ಯಾತ್ ತಥಾ ಪೂರ್ವಾದಿಕ್ರಮೇಣೇತ್ಯರ್ಥಃ (ಇದು ಟೀಕಾ ಮೂಲವೇ ?), ಪೂರ್ವದಿಕ್ಕು ಮೊದಲು ಬರುವಂತೆ ಎಂದರ್ಥ. ಇಲ್ಲಿ ಯಾರ ಪೂರ್ವದಿಕ್ಕು ? ದೇವರಿಗೋ? ಪೂಜಕನಿಗೋ? ಎಂಬ ಪ್ರಶ್ನೆ. ರಾಘವೇಂದ್ರಗುರುಗಳ ಪ್ರಕಾರ (ಗುರುಮತಂ) ಭಗವಂತನ ಮುಂದಿರುವ ದಿಕ್ಕು ಪೂರ್ವದಿಕ್ಕು ಎಂದರ್ಥ. 'ದೇವ ಹಾಗೂ ಪೂಜಕನ ಮಧ್ಯೆ ಇರುವ ದಿಕ್ಕು ಪೂರ್ವವು' ಎಂಬ ನೃಸಿಂಹಪುರಾಣವಚನದಂತೆ ದೇವ ಹಾಗೂ ಪೂಜಕನ ಮಧ್ಯವೇ ಪೂರ್ವವೆಂದೂ, ಅಲ್ಲಿಂದಾರಂಭಿಸಿ ಆಗ್ನೇಯಾದಿದಿಕ್ಕನ್ನು ತಿಳಿಯಬೇಕೆಂದು ಮತ್ತೊಂದು ಪಕ್ಷವಿದೆ. ಅಪೂಜಿತಾ ಅಧರ್ಮಾದಿದಾತಾರಃ ತೇ ತಥಾಽಭಿಧಾಃ । ನಿರ್ಋತಿಶ್ಚೈವ ದುರ್ಗಾ ಚ ಕಾಮೋ ರುದ್ರಶ್ಚ ದೇವತಾಃ ॥ ೫೨ ॥ ಅರ್ಥ (ಧರ್ಮಾದಿಗಳನ್ನು ಪೂಜಿಸಿದರೆ ಧರ್ಮಾದಿಗಳು ಸಿದ್ಧಿಸು- ವಂತೆ) ಅಧರ್ಮಾದಿದೇವತೆಗಳಾದ ನಿರ್ಋತಿ, ದುರ್ಗೆ, ಕಾಮ, ರುದ್ರದೇವ ಇವರನ್ನು ಪೂಜಿಸದಿದ್ದರೆ ಅಧರ್ಮಾದಿಗಳನ್ನೇ ತಂದೊಡ್ಡುವರು. ಆದ್ದರಿಂದಲೇ ಇವರು ಅಧರ್ಮದೇವತೆಗಳು ಹೊರತು ಅಧರ್ಮಮಾಡುವುದರಿಂದ ಎಂದು ತಿಳಿಯಲಾಗದು. ಯಮವಾಯುಶಿವೇಂದ್ರಾಶ್ಚ ಜ್ಞೇಯಾ ಧರ್ಮಾದಿದೇವತಾಃ । ಪರಮಃ ಪುರುಷೋ ಮಧ್ಯೇ ಶಕ್ತಿರಾಧಾರರೂಪಿಣೀ ॥ ೫೩ ॥ ಅರ್ಥ – ಧರ್ಮಕ್ಕೆ ಯಮಧರ್ಮ, ಜ್ಞಾನಕ್ಕೆ ವಾಯುದೇವ, ವೈರಾಗ್ಯಕ್ಕೆ ಶಿವ, ಐಶ್ವರ್ಯಕ್ಕೆ ಇಂದ್ರದೇವನು ಅಭಿಮಾನಿಗಳು, ಪೀಠದ ಮಧ್ಯದ ಕೆಳಗೆ ಇರುವ ಬ್ರಹ್ಮಾಂಡ, ಅದರ ಕೆಳಗೆ ಇರುವ ಪರಮಪುರುಷನೆನಿಸಿದ ನಾರಾಯಣನು, ಆನಂತರ ಆಧಾರಶಕ್ತಿ (ರೂಪದಿಂದ?) ಲಕ್ಷ್ಮೀದೇವಿಯೂ ಇರುವರೆಂದು ಧ್ಯಾನಿಸಬೇಕು. [^1] [^1]. ವಿಶೇಷಾಂಶ - ಬ್ರಹ್ಮಾಂಡದ ಕೆಳಗೆ ಪರಮಪುರುಷನಾದ ನಾರಾಯಣನು ನೀರು, ಅಗ್ನಿ, ಗಾಳಿ, ವ.ಟೀ. - ಆಧಾರಶಕ್ತಿಃ = ಲಕ್ಷ್ಮೀಃ ಟೀಕಾರ್ಥ - ಆಧಾರಶಕ್ತಿಯೆಂದರೆ ಲಕ್ಷ್ಮೀದೇವಿಯು. ಕೂರ್ಮೋऽನಂತಶ್ಚ ಪೃಥಿವೀ ಕ್ಷೀರಸಾಗರ ಏವ ಚ । ಶ್ವೇತದ್ವೀಪೋ ಮಂಟಪಶ್ಚ ದಿವ್ಯರತ್ನಮಯೋ ಮಹಾನ್ ॥ 54 ॥ ಅರ್ಥ - ಆಧಾರಶಕ್ತಿಯ ಮೇಲೆ ಬ್ರಹ್ಮಾಂಡಕ್ಕೆ ಆಧಾರವಾದ ಕೂರ್ಮ[^1] ಅದರ ಬೆನ್ನನ್ನಾಶ್ರಯಿಸಿರುವ ಶೇಷದೇವ, ಅವನ ಸಾವಿರಹೆಡೆಯ ಒಂದು ಹೆಡೆಯಲ್ಲಿ ಪೃಥಿವಿಯು ಇದೆ. ಪೃಥಿವಿ ಯಲ್ಲಿ ಕ್ಷೀರಸಾಗರ, ಅಲ್ಲಿ ಶ್ವೇತದ್ವೀಪ, ಅಲ್ಲಿ ದಿವ್ಯರತ್ನಖಚಿತ- ವಾದ ದೊಡ್ಡ ಮಂಟಪ; ಪದ್ಮಮೇತತ್ ತ್ರಯಂ ದೇವೀ ರಮೈವ ಬಹುರೂಪಿಣೀ। ಸೂರ್ಯಸೋಮಹುತಾಶಾಶ್ಚ ಪದ್ಮೇ ಶ್ರೀಸ್ತ್ರಿಗುಣಾತ್ಮಿಕಾ ॥ ೫೫ ॥ ಅರ್ಥ - ಪೀಠದ ಮೇಲೆ ಪದ್ಮ, ಶ್ವೇತದ್ವೀಪ, ದಿವ್ಯಮಂಟಪ ಇವುಗಳು ಬಹುರೂಪಧರಿಸಿದ ರಮೆಯ ರೂಪಗಳೇ ಆಗಿವೆ. ಈ ಆರುದಳಗಳುಳ್ಳ ಪದ್ಮವಾದರೋ[^2] ಎದುರು ಬದುರಿನಲ್ಲಿ ಆರು ದಳಗಳನ್ನು ಹೊಂದಿದ್ದು ಎದುರಿನಲ್ಲಿ ಆಕಾಶ, ಅಹಂಕಾರ, ಮಹತತ್ತ್ವ, ತಮಸ್ಸು, ರಜಸ್ಸು, ಸತ್ವವೆಂಬ ಒಂಭತ್ತು ಆವರಣಸಹಿತವಾದ ಬ್ರಹ್ಮಾಂಡವನ್ನು ತಲೆಯ ಮೇಲೆ ಧರಿಸಿ, ಪದ್ಮಾಸನದಲ್ಲಿ ಪೂರ್ವಾಭಿಮುಖವಾಗಿದ್ದಾನೆ ಎಂದು ತಿಳಿಯಬೇಕು. ಅದರ ಮೇಲ್ಬಾಗದಲ್ಲಿ ಸಾಕ್ಷಾತ್ತಾಗಿ ಆವರಣಗಳಿಗೆ ಆಧಾರವಾಗಿರುವ ಶಕ್ತಿಯೆಂಬ ಹೆಸರುಳ್ಳ ಲಕ್ಷ್ಮೀದೇವಿಯನ್ನು ಪೂಜಿಸಬೇಕು ಎಂದು ಭಾವ. [^1]. ಇಲ್ಲಿ ಕೂರ್ಮ ಎಂದು ಒಂದೇ ಕೂರ್ಮವನ್ನು ಹೇಳಿದ್ದರೂ ಮೂರು ಕೂರ್ಮಗಳನ್ನುಗ್ರಹಿಸಬೇಕು. 1. ಬ್ರಹ್ಮಾಂಡಕ್ಕೆ ಆಧಾರವಾದ ವಿಷ್ಣುಕೂರ್ಮ. 2. ಬ್ರಹ್ಮಾಂಡದೊಳಗಿರುವ ಅಗಾಧಜಲಕ್ಕೆ ಆಧಾರಭೂತ- ವಾದ ವಿಷ್ಣು ಕೂರ್ಮ. 3. ಇದರ ಮೇಲೆ ವಾಯುಕೂರ್ಮ. ಅದರ ಪುಚ್ಛದಲ್ಲಿ ಶೇಷ. ಬಿಭರ್ತ್ಯಂಡಂ ಹರಿ: ಕೂರ್ಮಃ ಅಂಡೇ ಚಾಪ್ಯುದಕಂ ಮಹತ್ ಉದಕೇ ಕೂರ್ಮರೂಪಸ್ಯ ವಾಯುಃ ಪುಚ್ಛಂ ಸಮಾಶ್ರಿತಃ ॥ ಸ ಏವ ಕೂರ್ಮರೂಪೇಣ ವಾಯುರಂಡೋದಕೇ ಸ್ಥಿತಃ । ವಿಷ್ಣುನಾ ಅನಂತರೂಪೇಣ ಧಾರಿತೋಽನಂತಧಾರಕಃ ॥ - ಬೃಹದಾರಣ್ಯಕದ್ಭಾಷ್ಯ [^2]. ಇಲ್ಲಿ ಪದ್ಮವೆಂದು ಒಂದೇ ಪದವನ್ನು ಹೇಳಿದ್ದರೂ ಆರುದಳಗಳ ಪದ್ಮವನ್ನೂ, ಅದರ ಮೇಲೆ ಎಂಟು ದಳಗಳ ಪದವನ್ನೂ ತಿಳಿಯಬೇಕು. ಆರು ದಳದ ಪದ್ಮದ ಮೂರು ದಳಗಳಲ್ಲಿ ಸೂರ್ಯ-ಚಂದ್ರ-ಅಗ್ನಿಗಳನ್ನೂ, ಉಳಿದ ಮೂರು ದಳದಲ್ಲಿ ಸತ್ವರಜಸ್ಸುತಮಸ್ಸಿಗೆ ಅಭಿಮಾನಿನಿಯಾದ ಶ್ರೀಭೂದುರ್ಗೆಯ- ರನ್ನು ಚಿಂತಿಸಬೇಕು. ವಿಮಲಾದಿ ನವಶಕ್ತಿಗಳು ಆತ್ಮಾಂತರಾತ್ಮಪರಮಜ್ಞಾನಾತ್ಮಾನಶ್ಚ ಮೂರ್ತಯಃ । ವಿಮಲೋತ್ಕರ್ಷಿಣೀ ಜ್ಞಾನಾ ಕ್ರಿಯಾ ಯೋಗಾತಥೈವ ಚ ॥ ೫೬ ॥ ಪ್ರಹ್ವೀ ಸತ್ಯಾ ತಥೇಶಾನಾऽನುಗ್ರಹಾ ಚೇತಿ ಶಕ್ತಯಃ । ಅಷ್ಟದಿಕ್ಷು ಚ ಮಧ್ಯೆ ಚ ಸ್ವರೂಪಾಣ್ಯೇವ ತಾ ಹರೇಃ ॥ ೫೭ ॥ ಅರ್ಥ-ಪೂರ್ವವೇ ಮೊದಲಾದ ದಿಕ್ಕುಗಳಲ್ಲಿ ಭಗವಂತನದೇ ಆದ ಆತ್ಮ-ಅಂತರಾತ್ಮ-ಪರಮಾತ್ಮ-ಜ್ಞಾನಾತ್ಮ ಎಂಬ ನಾಲ್ಕು ರೂಪ ಗಳನ್ನು ಚಿಂತಿಸಬೇಕು. ಎಂಟು ದಳವುಳ್ಳ ಕಮಲದ ಅಷ್ಟದಳ- ಗಳಲ್ಲಿ ಪೂರ್ವಾದಿ ಎಂಟು ದಿಕ್ಕುಗಳಲ್ಲಿ ವಿಮಲಾ- ಉತ್ಕರ್ಷಿಣೀ- ಜ್ಞಾನಾ- ಕ್ರಿಯಾ- ಯೋಗಾ- ಪ್ರಹ್ವೀ- ಸತ್ಯಾ- ಈಶಾನಾ ಎಂಬ ಎಂಟು ಭಗವಚ್ಛಕ್ತಿಗಳನ್ನೂ ಇವುಗಳ ಮಧ್ಯದಲ್ಲಿ ಛತ್ರ ಚಾಮರ ದರ್ಪಣ ವ್ಯಜನ ಗೀತ ವಾದಿತ್ರ ನೃತ್ಯ ಸ್ತೋತ್ರಗಳ ಸೇವೆ ಮಾಡು- ತ್ತಿರುವ ಎಂಟು ಶಕ್ತಿಗಳ ಮಧ್ಯದಲ್ಲಿ ಆ ಸೇವೆ ಸ್ವೀಕರಿಸುತ್ತಿರುವ 'ಅನುಗ್ರಹಾ' ಎಂಬ ಭಗವಂತನ ಶಕ್ತಿಯನ್ನೂ ಚಿಂತಿಸಬೇಕು.[^1] ದೀಪದಂತೆ ಬೆಳಗುವ ಸೂರ್ಯ, ಚಂದ್ರ, ಅಗ್ನಿಗಳನ್ನೂ; (ಉಳಿದ ಮೂರು ದಳಗಳಲ್ಲಿ ಶ್ರೀಭೂದುರ್ಗೆಯರನ್ನೂ ?); ಎಂಟು ದಳಗಳ ಪದ್ಮದ ದಳಗಳಲ್ಲಿ ವಿಮಲಾ- ಉತ್ಕರ್ಷಿಣೀ ಮೊದಲಾದ ಶಕ್ತಿ- ಗಳನ್ನೂ ಚಿಂತಿಸಬೇಕು. ಚತುಷ್ಕೋಣಂ ತು ಪೀಠಂ ಸ್ಯಾತ್ ಷಟ್ಕೋಣಂ ತಸ್ಯ ಮಧ್ಯತಃ । ತನ್ಮಧ್ಯೇऽಷ್ಟದಲಂ ಪದ್ಮಂ ತತ್ರ ಪದ್ಮೇಶಮರ್ಚಯೇತ್ ॥ [^1]. ವಿಶೇಷಾಂಶ : ಇಲ್ಲಿ ಆತ್ಮ, ಅಂತರಾತ್ಮಾದಿಗಳು ಪೀಠದ ನಾಲ್ಕೂ ದಿಕ್ಕಿನಲ್ಲಿರುವ ಸೋಪಾನಗಳ ದೇವತೆಗಳೆಂದು ತಿಳಿಯಬೇಕು. ಸೋಪಾನದೇವತಾ ಪೂಜ್ಯಾಃ ಆತ್ಮಾದ್ಯಾಃ ದಿಕ್ಚತುಷ್ಟಯೇ । ಪದ್ಮಗಳ ಎಂಟು ಪತ್ರಗಳಲ್ಲಿ ಹಾಗೂ ಮಧ್ಯದಲ್ಲಿ ಪೂರ್ವಾದಿ ದಿಕ್ಕುಗಳಲ್ಲಿ ಎಂಟು ಭಗವಂತನ ಶಕ್ತಿಗಳನ್ನು ಪೂಜಿಸಬೇಕು. ಪೂರ್ವಪತ್ರಂ ಸಮಾರಭ್ಯ ತದ್ದಲೇಷು ಯಥಾಕ್ರಮಂ । ಆವಾಹನಪ್ರಕಾರ - ಅರ್ಘ್ಯಾದಿಸಮರ್ಪಣೆ ತತೋऽನಂತಂ ಯೋಗಪೀಠಸ್ವರೂಪಂ ಪೂಜಯೇದ್ದರೇಃ । ತತ್ರಾವಾಹ್ಯ ಹರಿಂ ಚಾರ್ಘ್ಯ೦ ಪಾದ್ಯಮಾಚಮನೀಯಕಮ್ ॥ ೫೮ ॥ ಮಧುಪರ್ಕ೦ ಪುನಶ್ಚಾಚಾಂ ಸ್ನಾನಂ ವಾಸೋವಿಭೂಷಣಮ್ । ಉಪವೀತಾಸನೇ ದತ್ವಾ ಗಂಧಪುಷ್ಪೇ ತಥೈವ ಚ ೫೯ ॥॥ ಅರ್ಥ- ಅಷ್ಟದಳಪದ್ಮದ ಮಧ್ಯದಲ್ಲಿರುವ 'ಅನುಗ್ರಹಾ' ಎಂಬ ಆಸನರೂಪವಾದ ಭಗವಂತನ ಶಕ್ತಿಯಲ್ಲಿ ಯೋಗಾಸನರೂಪ- ದಲ್ಲಿರುವ ತಲ್ಪಾಕಾರನಾದ ಶೇಷನನ್ನು ಪೂಜಿಸಬೇಕು. ಹೀಗೆ ಯೋಗಪೀಠಸ್ವರೂಪದಂತಿರುವ ಶೇಷಾಸನದಲ್ಲಿ ಕುಳಿತಿರುವ ಭಗವತ್ಪ್ರತಿಮೆಯಲ್ಲಿ ಸ್ವಬಿಂಬಮೂರ್ತಿಯನ್ನು ಆವಾಹಿಸಿ, ಆಸನ, ಅರ್ಘ್ಯ, ಪಾದ್ಯ, ಆಚಮನೀಯ, ಮಧುಪರ್ಕ, ಪುನರಾ- ಚಮನ, ಸ್ನಾನ, ವಸ್ತ್ರ, ಅಲಂಕಾರ, ಉಪವೀತ, ಗಂಧ, ಪುಷ್ಪ ಇವುಗಳನ್ನು ಅರ್ಪಿಸಬೇಕು. ಪುಷ್ಪೋಪಚಾರಪೂಜೆಯಾದ ಮೇಲೆ ಧೂಪ, ದೀಪ, ನೈವೇದ್ಯದ ಮೊದಲು ಆವರಣಪೂಜೆ ಮಾಡಬೇಕು[^1] ವಿಮಲಾದ್ಯಾಸ್ತು ಪೂಜ್ಯಾಃ ಸ್ಯುಃ.................- ಪಂಚರಾತ್ರ ಈ ವಿಮಲಾದಿ ಎಂಟು ಶಕ್ತಿಗಳೂ ಸ್ತ್ರೀರೂಪದ ಭಗವಂತನ ಸ್ವರೂಪಭೂತಗಳಾದವುಗಳು. ಈ ಶಕ್ತಿಗಳು ರಮಾರೂಪವಾದವು ಗಳೂ ಹೌದು. ಇದೇ ರೀತಿ ಬ್ರಹ್ಮವಾಯುಗಳ ಗರುಡ-ಶೇಷರು- ಗಳಿಂದ ಅಭಿಮನ್ಯವಾದ ವಿಮಲಾದಿ ಹೆಸರಿನ ಒಂಭತ್ತು ಶಕ್ತಿಗಳನ್ನೂ ಪೀಠಪೂಜೆಯಲ್ಲಿ ಪೂಜಿಸಬೇಕು. ವಿಷ್ಣೋ ಶ್ರಿಯಃ ಬ್ರಹ್ಮಣಶ್ಚ ವಾಯೋ ಸಂಕರ್ಷಣಸ್ಯ ಚ । ಗರುಡಸ್ಯ ಚ ಸಂಪ್ರೋಕ್ತಾಃ ಪ್ರತ್ಯೇಕಂ ನವಮೂರ್ತಯಃ ॥ ಪೂಜ್ಯಾಃ ಸಾತ್ವತತಂತ್ರೇಷು ತತ್ರಾದ್ಯಾ ಮೂರ್ತಯೋ ಹರೇಃ । ಪ್ರಧಾನಾಸ್ತಾ ಹಿ ಸರ್ವಾಸಾಂ ಮೂರ್ತಿನಾಂ ಹರಿಮೂರ್ತಯಃ ॥ - ಭಾಗ.ತಾ. 11/16/32 [^1]ಪೀಠಪೂಜೆ ಪೀಠಮಧ್ಯೆ ಪರದೇವತಾಯೈ ಶ್ರೀಲಕ್ಷ್ಮೀನಾರಾಯಣಾಭ್ಯಾಂ ನಮಃ । ವಾಮೇ ಪ್ರಧಾನ ವಾಯವೇ ನಮಃ । ದಕ್ಷಿಣೇ ಸರ್ವ ದೇವತಾಭ್ಯೋ ನಮಃ । ಪುನರ್ವಾಮೇಸರ್ವಗುರುಭ್ಯೋ ನಮಃ. (ಪೀಠಪಾದಾಧೋ ಭಾಗೇ ಆಗ್ನೇಯಾದಿ ಕೋಣೇಷು) ಆಗ್ನೇಯೇ ಗರುಡಾಯ ನಮಃ । ನೈಋತ್ವೇ ವೇದವ್ಯಾಸಾಯ ನಮಃ । ವಾಯವ್ಯೇ ದುರ್ಗಾಯೈ ನಮಃ । ಐಶಾನ್ಯೇ ಸರಸ್ವತ್ಯೈ ನಮಃ । (ಪೀಠಪಾದೋರ್ಧ್ವಭಾಗೇ) ಓಂ ಧರ್ಮಾಧಿಪತಯೇ ವೃಷತನವೇ ರಕ್ತವರ್ಣಾಯ ಯಮಾಯ ನಮಃ । ಓಂ ಜ್ಞಾನಾಧಿಪತಯೇ ಸಿಂಹಾಕಾರಾಯ ಶ್ಯಾಮವರ್ಣಾಯ ವಾಯವೇ ನಮಃ । ಓಂ ವೈರಾಗ್ಯಾಧಿಪತಯೇ ಭೂತಾಕಾರಾಯ ಪೀತವರ್ಣಾಯ ಶಿವಾಯ ನಮಃ । ಓಂ ಐಶ್ವರ್ಯಾಧಿಪತಯೇ ಗಜಾಕಾರಾಯ ಕೃಷ್ಣವರ್ಣಾಯ ಇಂದ್ರಾಯ ನಮಃ । (ಪೀಠ ಫಲಕೇಷು) ಪೂರ್ವ ಅಧರ್ಮಾಧಿಪತಯೇ ನಿರ್ಋತಯೇ ನಮಃ । ದಕ್ಷಿಣೇ ಅಜ್ಞಾನಾಧಿಪತಯೇ ದುರ್ಗಾಯೈ ನಮಃ । ಪಶ್ಚಿಮೇ ವೈರಾಗ್ಯಾಧಿಪತಯೇ ಕಾಮಾಯ ನಮಃ । ಉತ್ತರೇ ಅನೈಶ್ವರ್ಯಾಧಿಪತ್ಯೇ ರುದ್ರಾಯ ನಮಃ । (ಪೀಠಸ್ಯ ಅಧಸ್ತಾತ್) ಓಂ ಪರಮಪುರುಷಾಯ ನಮಃ । ಓಂ ಆಧಾರರೂಪಿಣ್ಯೈ ಶಕ್ತ್ಯೈ ನಮಃ । ಓಂ ವಿಷ್ಣು ಕೂರ್ಮಾಯ ನಮಃ । ಓಂ ತತ್ಫುಚ್ಛಾಶ್ರಿತವಾಯುಕೂರ್ಮಾಯ ನಮಃ । ಓಂ ತತ್ಪುಚ್ಛಾಶ್ರಿತಅನಂತಾಖ್ಯಶೇಷಾಯ ನಮಃ । ಓಂ ತತ್ಫಣಾಶ್ರಿತಪೃಥಿವ್ಯಭಿಮಾನಿನ್ಯೈ ಭೂಮ್ಯೈ ನಮಃ । ತದುಪರಿ ಓಂ ಕ್ಷೀರಸಾಗರಾಭಿಮಾನಿನೇ ವರುಣಾಯ ನಮಃ ಓಂ ರಮಾರೂಪ ಶ್ವೇತದ್ವೀಪಾಯ ನಮಃ । ಓಂ ರಮಾರೂಪಮಹಾದಿವ್ಯರತ್ನಮಂಟಪಾಯ ನಮಃ । ಓಂ ರಮಾರೂಪ ಕಂದನಾಳಸಹಿತಪದ್ಮಾಯ ನಮಃ । ಓಂ ಅಂ ಅರ್ಕಮಂಡಲಾಯ ನಮಃ । ಓಂ ಉಂ ಸೋಮಮಂಡಲಾಯ ನಮಃ । ಓಂ ಮಂ ಹುತಾಶನಮಂಡಲಾಯ ನಮಃ । (ಪದ್ಮಷಟ್ಕೋಣೇಷು) ದಕ್ಷಿಣಕೋಣೇ ಓಂ ಸೂರ್ಯಾಯ ನಮಃ । ವಾಮಕೋಣೇ ಓಂ ಸೋಮಾಯ ನಮಃ । ಸಮ್ಮುಖೇ ಓಂ ಹುತಾಶನಾಯ ನಮಃ । ದೇವ ವಾಮಕೋಣೇ ಓಂ ಸತ್ತ್ವಾತ್ಮಿಕಾಯೈ ಶ್ರಿಯೈ ನಮಃ । ದಕ್ಷಿಣಕೋಣೇ ಓಂ ರಜೋಭಿಮಾನಿ ಭೂಮ್ಯೈ ನಮಃ । ದೇವಸ್ಯ ಪೃಷ್ಠಭಾಗೇ ಓಂ ಉಪಬರ್ಹಣರೂಪಾಯೈ ತಮೋSಭಿ ಮಾನಿನ್ಯೈ ದುರ್ಗಾಯೈ ನಮಃ । (ಸೋಪಾನ ಸ್ಥಲೇ) ಪೂರ್ವೇ ಓಂ ಆತ್ಮನೇ ನಮಃ । ದಕ್ಷಿಣೇ ಓಂ ಅಂತರಾತ್ಮನೇ ನಮಃ ಪಶ್ಚಿಮೇ ಓಂ ಪರಮಾತ್ಮನೇ ನಮಃ । ಉತ್ತರೇ ಓಂ ಜ್ಞಾನಾತ್ಮನೇ ನಮಃ । ಪೂರ್ವಾದಿ ಕಮಲಾಷ್ಟಪತ್ರೇಷುಓಂ ಛತ್ರಧಾರಿಣ್ಯೈ ವಿಮಲಾಯೈ ನಮಃ । ಓಂ ಚಾಮರಧಾರಿಣ್ಯೈ ಉತ್ಕರ್ಷಿಣ್ಯೈ ನಮಃ । ಓಂ ವ್ಯಜನಧಾರಿಣ್ಯೈ ಜ್ಞಾನಾಯೈ ನಮಃ । ಓಂ ದರ್ಪಣಧಾರಿಣ್ಯೈ ಕ್ರಿಯಾಯೈ ನಮಃ। ಓಂ ಗಾನಕರ್ತ್ರ್ಯೈ ಯೊಗಾಯೈ ನಮಃ। ಓಂ ನೃತ್ಯಂತ್ಯೈ ಪ್ರಹ್ವ್ಯೈ ನಮಃ । ಓಂ ವಾದ್ಯಹತ್ಸಾಯೈ ಸತ್ಯಾಯೈ ನಮಃ । ಓಂ ಸ್ತೋತ್ರಕರ್ತ್ರ್ಯೈ ಈಶಾನಾಯೈ ನಮಃ । ಏತಾಭಿಃ ಕೃತಸೇವಾಂ ಸಮರ್ಪಯಂತ್ಯೈ ಮಧ್ಯೆ ಅನುಗ್ರಹಾಯೈ ನಮಃ। ಅನುಗ್ರಹಾಖ್ಯ ಶಕ್ತೌ। ಸಹಸ್ರ ಫಣಾಮಂಡಲ ಮಂಡಿತಾಯ ತಲ್ಪಾಕಾರಾಯ ಹರೇರ್ಯೋಗಾಸನರೂಪಾಯ ಶ್ರೀಮದನಂತಾಯನಮಃ ॥ ಇತಿ ಪೀಠಪೂಜಾಂ ಸಮರ್ಪಯಾಮಿ ॥ ಹೀಗೆ ಪೀಠಪೂಜೆಯಾದ ನಂತರ ಯೋಗಪೀಠಸ್ವರೂಪವಾದ ಅನಂತಾಸನದಲ್ಲಿರುವ ಪ್ರತಿಮೆಯಲ್ಲಿ ಸ್ವಹೃದಯಸ್ಥ ಬಿಂಬ ಮೂರ್ತಿಯನ್ನು ಆವಾಹಿಸಬೇಕು. ಆವಾಹನಪ್ರಕಾರ ಅಷ್ಟೈಶ್ವರ್ಯಯುಕ್ತನಾದ ನಿರ್ಮಲನೂ, ಬಿಳಿತಾವರೆಯಲ್ಲಿರುವ ವನೂ, ಶಂಖಚಕ್ರಗದಾಪದ್ಮ ಧರಿಸಿ ಸರ್ವಾಭರಣಭೂಷಿತನೂ, ವನಮಾಲಾಧರನೂ ಆದ ನಾರಾಯಣನನ್ನು ಮಾನಸ ಉಪಚಾರಗಳಿಂದ ಪೂಜಿಸಬೇಕು. ಹೃದಯಕಮಲವನ್ನು ಓಂ ಯಂ ಓಂ' ಎಂಬ ವಾಯುಬೀಜದಿಂದ ಅರಳಿಸಬೇಕು.ಜ್ಞಾನಾರ್ಕ ದಿಂದ ಅರಳಿದೆ ಎಂದು ಭಾವಿಸಿ, ಸುಷುಮ್ನಾ ಮಾರ್ಗದಿಂದ ಬ್ರಹ್ಮರಂಧ್ರಕ್ಕೆ ದೇವನನ್ನು ತಂದು ಎಡ ಹೊಳ್ಳೆಯಲ್ಲಿರುವನೆಂದು ಚಿಂತಿಸಿ, ಅಲ್ಲಿಂದ ತನ್ನ ಬೊಗಸೆಯಲ್ಲಿ ಬಂದಿದ್ದಾನೆಂದು ತಿಳಿದು, ಪ್ರತಿಮೆಯಲ್ಲಿ ಪುಷ್ಪವನ್ನೇರಿಸಿ ಭಗವಂತನು ಹೃದಯ- ದಿಂದ ಪ್ರತಿಮೆಯಲ್ಲಿ ನೆಲೆಸಿರುವನೆಂದು ಚಿಂತಿಸಬೇಕು. ನಂತರ ಪುರುಷಸೂಕ್ತ ಹಾಗೂ ಮೂಲಮಂತ್ರಗಳಿಂದ ಆವಾಹನೆ ಮಾಡಬೇಕು. ಭೋ ಸ್ವಾಮಿನ್ ಜಗತಾಂನಾಥ ಯಾವತ್ಪೂಜಾವಸಾನಕಮ್ । ಆವರಣಪೂಜೆ ಲಕ್ಷ್ಮೀಧರೇ ಯಜೇತ್ತತ್ರ ಪಾರ್ಶ್ವಯೋರುಭಯೋರ್ಹರೇ: । ಹೃದಯಾದೀಂಸ್ತಥೇಂದ್ರಾದಿದಿಕ್ಷ್ವಸ್ತ್ರಂ ಕೋಣಕೇಷು ಚ ॥ ೬೦ ॥ ಅರ್ಥ- ಯೋಗಪೀಠದ ಮೇಲಿರುವ ಪರಮಪುರುಷನ ಎಡಬಲ ಗಳಲ್ಲಿ ಲಕ್ಷ್ಮೀದೇವಿಯನ್ನೂ, ಧರಾದೇವಿಯನ್ನೂ ಪೂಜಿಸಬೇಕು. ಇದು ಪ್ರಥಮಾವರಣ ಪೂಜೆಯು. ನಂತರ ಹೃದಯಾದಿನಾಮ- ಗಳುಳ್ಳ ಕೃದ್ಧೋಲ್ಕ, ಮಹೋಲ್ಕ, ವೀರೋಲ್ಕ, ದ್ಯುಲ್ಕರನ್ನು ಪೂರ್ವಾದಿ ನಾಲ್ಕು ದಿಕ್ಕುಗಳಲ್ಲಿಯೂ ಅಸ್ತ್ರನಾಮಕ ಸಹಸ್ರೋಲ್ಕನನ್ನು ಆಯಾದಿ ವಿದಿಕ್ಕುಗಳಲ್ಲೂ ಪೂಜಿಸಬೇಕು. ಇದು ದ್ವಿತೀಯಾವರಣಪೂಜೆ. ವಾಸುದೇವಾದಿಕಾನ್ ದಿಕ್ಷು ಕೇಶವಾದೀಂಸ್ತತಃ ಪರಮ್ । ಮತ್ಸ್ಯಂ ಕೂರ್ಮಂ ವರಾಹಂ ಚ ನಾರಸಿಂಹಂ ಚ ವಾಮನಮ್ ॥ ೬೧ ॥ ಭಾರ್ಗವಂ ರಾಘವಂ ಕೃಷ್ಣಂ ಬುದ್ಧಂ ಕಲ್ಕಿನಮೇವ ಚ । ಅನಂತಂ ವಿಶ್ವರೂಪಂ ಚ ತದ್ಬಹಿಃ ಪೂಜಯೇತ್ ಕ್ರಮಾತ್ ॥ ೬೨ ॥ ಅರ್ಥ - ನಂತರ ತೃತೀಯಾವರಣರೂಪದಲ್ಲಿರುವ ವಾಸುದೇವ ಸಂಕರ್ಷಣ ಪ್ರದ್ಯುಮ್ನ ಅನಿರುದ್ಧರನ್ನು (ಪೂರ್ವಾದಿದಿಕ್ಕು- ಗಳಲ್ಲೂ) ಆಗ್ನೇಯಾದಿ ವಿದಿಕ್ಕುಗಳಲ್ಲಿ ಮಾಯಾ, ಜಯಾ, ಕೃತಿ, ಶಾಂತಿಯರನ್ನೂ ಪೂಜಿಸಬೇಕು. ಇದು ತೃತೀಯಾವರಣ ಪೂಜೆ. ಚತುರ್ಥಾವರಣದಲ್ಲಿ ಕೇಶವಾದಿ ಹನ್ನೆರಡು ರೂಪಗಳನ್ನು ಕೇಶವಾದಿ ಎರಡೆರಡುರೂಪಗಳನ್ನು ಪೂರ್ವಾದಿ ದಿಕ್ಕುಗಳಲ್ಲೂ, ಒಂದೊಂದು ರೂಪವನ್ನು ವಿದಿಕ್ಕುಗಳಲ್ಲಿಯೂ ಪೂಜಿಸಬೇಕು. ತಾವತ್ ಸಂಪ್ರೀತಿಭಾವೇನ ಬಿಂಬೇಽಸ್ಮಿನ್ ಸನ್ನಿಧಿಂ ಕುರು ॥ ಎಂದು ಪ್ರತಿಮೆಯ ಪಾದಗಳಿಗೆ ಪುಷ್ಪಾಂಜಲಿ ಅರ್ಪಿಸುವುದು. ಓಂ ನಮೋ ನಾರಾಯಣಾಯ ಓಂ ಅರ್ಘ್ಯಂ ಸಮರ್ಪಯಾಮಿ, ಪಾದ್ಯಂ ಸಮರ್ಪಯಾಮಿ, ಇತ್ಯಾದಿಯಾಗಿ ಹೇಳುತ್ತಾ ಉದ್ಧರಣೆ- ಯಿಂದ ನೀರನ್ನು ಬಿಡಬೇಕು. ನಂತರ ಉಳಿದ ಉಪಚಾರ ಪೂಜೆ- ಯನ್ನೂ ಮೂಲಮಂತ್ರದಿಂದ ಅರ್ಪಿಸಿ ಗಂಧಪುಷ್ಪಗಳನ್ನರ್ಪಿಸಿ ಆವರಣಪೂಜೆ ಮಾಡಬೇಕು. ನಂತರ ಪಂಚಮಾವರಣರೂಪವಾಗಿ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ, ಅನಂತ, ವಿಶ್ವರೂಪಗಳೆಂಬ ಹನ್ನೆರಡು ರೂಪಗಳನ್ನು ಮತ್ಸ್ಯಾಯ ನಮಃ, ಅನಂತಾಯ ನಮಃ ಇತ್ಯಾದಿಯಾಗಿ ಹಿಂದೆ ಹೇಳಿದ ಕ್ರಮದಲ್ಲಿಯೇ ಪೂಜಿಸುವುದು. ಅನಂತಬ್ರಹ್ಮವಾಯ್ವೀಶಾನ್ ವೀಶಂ ಚಾಗ್ರೇ ಪ್ರಪೂಜಯೇತ್ । ವಾರುಣೀಂ ಚೈವ ಗಾಯತ್ರೀಂ ಭಾರತೀಂ ಗಿರಿಜಾಮಪಿ ॥ ೬೩ ॥ ಕೋಣೇಷು ವೀಂದ್ರವಾಮೇ ಚ ಸೌಪರ್ಣೀಂ ಪೂಜಯೇದಪಿ । ಇಂದ್ರಾದೀನ್ ಶೇಷವಿಧ್ಯಂತಾನ್ ಸಭಾರ್ಯಾನ್ ಸಪರಿಗ್ರಹಾನ್ [^1] ॥ 64 ॥ ಆವರಣ ಪೂಜಾ :[^1]. ಮಧ್ಯೆ- ಓಂ ಪರಮಪುರುಷಾಯ ನಮಃ । ವಾಮೇ- ಓಂ ಲಕ್ಷ್ಮೈ ನಮಃ । ದಕ್ಷಿಣೇ-ಓಂ ಧರಾಯೈ ನಮಃ । ಇತಿ ಪ್ರಥಮಾವರಣಪೂಜಾ ತದ್ಬಹಿಃ ಪೂರ್ವೇ ಓಂಕೃದ್ಧೋಲ್ಕಾಯ ನಮಃ । ದಕ್ಷಿಣೇ ಮಹೋಲ್ಕಾಯ ನಮಃ । ಪಶ್ಚಿಮೇ ವೀರೋಲ್ಕಾಯ ನಮಃ । ಉತ್ತರೇ ದ್ಯುಲ್ಕಾಯ ನಮಃ । ಆಗ್ನೇಯೇ ಸಹಸ್ರೋಲ್ಕಾಯ ನಮಃ । ನೈಋತ್ಯಾಯ ಸಹಸ್ರೋಲ್ಕಾಯ ನಮಃ । ವಾಯವ್ಯೈ ಸಹಸ್ರೋಲ್ಕಾಯ ನಮಃ । ಈಶಾನ್ಯೈ ಸಹಸ್ರೋಲ್ಕಾಯ ನಮಃ । ದ್ವಿತೀಯಾವರಣ ಪೂರ್ವೇ ಓಂ ವಾಸುದೇವಾಯ ನಮಃ । ದಕ್ಷಿಣೇ ಓಂ ಸಂಕರ್ಷಣಾಯ ನಮಃ । ಪಶ್ಚಿಮೇ ಓಂ ಪ್ರದ್ಯುಮ್ನಾಯ ನಮಃ । ಉತ್ತರೇ ಓಂ ಅನಿರುದ್ಧಾಯ ನಮಃ । ಆಗ್ನೇಯೇ ಓಂ ಮಾಯಾಯೈ ನಮಃ । ನೈಋತ್ಯಾಯ ಓಂ ಜಯಾಯೈ ನಮಃ । ವಾಯವ್ಯೈ ಓಂ ಕೃತ್ಯೈ ನಮಃ । ಈಶಾನ್ಯೈ ಓಂ ಶಾಂತ್ಯೈ ನಮಃ । ತೃತೀಯಾವರಣಪೂಜಾ ಪೂರ್ವ ಓಂ ಕೇಶವಾಯ ನಮಃ । ಓಂ ನಾರಾಯಣಾಯ ನಮಃ । ಆಗ್ನೇಯೇ ಓಂ ಮಾಧವಾಯ ನಮಃ । ದಕ್ಷಿಣೇ ಓಂ ಗೋವಿಂದಾಯ ನಮಃ । ಓಂ ವಿಷ್ಣವೇ ನಮಃ । ನೈಋತ್ಯೈ ಓಂ ಮಧುಸೂದನಾಯ ನಮಃ । ಪಶ್ಚಿಮೇ ಓಂ ತ್ರಿವಿಕ್ರಮಾಯ ನಮಃ । ಓಂ ವಾಮನಾಯ ನಮಃ । ವಾಯವ್ಯೈ ಓಂ ಶ್ರೀಧರಾಯ ನಮಃ । ಉತ್ತರೇ ಓಂ ಹೃಷಿಕೇಶಾಯ ನಮಃ । ಓಂ ಪದ್ಮನಾಭಾಯ ನಮಃ । ಈಶಾನ್ಯೈ ಓಂ ದಾಮೋದರಾಯ ನಮಃ । ಶೇಷನನ್ನು, ಬ್ರಹ್ಮ, ವಾಯು, ರುದ್ರರನ್ನೂ ಮಧ್ಯದಲ್ಲಿ ದೇವರ ಅಗ್ರಭಾಗದಲ್ಲಿ ಚತುರ್ಥಾವರಣಪೂಜಾ ಪೂರ್ವೇ ಓಂ ಸಂಕರ್ಷಣಾಯ ನಮಃ । ಓಂ ವಾಸುದೇವಾಯ ನಮಃ । ಆಗ್ನೇಯೇ ಓಂ ಪ್ರದ್ಯುಮ್ನಾಯ ನಮಃ । ದಕ್ಷಿಣೇ ಓಂ ಅನಿರುದ್ಧಾಯ ನಮಃ । ಓಂ ಪುರುಷೋತ್ತಮಾಯ ನಮಃ । ನೈಋತ್ಯೇ ಓಂ ಅಧೋಕ್ಷಜಾಯ ನಮಃ । ಪಶ್ಚಿಮೇ ಓಂ ನಾರಸಿಂಹಾಯ ನಮಃ । ಓಂ ಅಚ್ಯುತಾಯ ನಮಃ । ವಾಯವ್ಯೈ ಓಂ ಜನಾರ್ದನಾಯ ನಮಃ । ಉತ್ತರೇ ಓಂ ಉಪೇಂದ್ರಾಯ ನಮಃ । ಓಂ ಹರಯೇ ನಮಃ । ಈಶಾನ್ಯೈ ಓಂ ಶ್ರೀಕೃಷ್ಣಾಯ ನಮಃ । ಪಂಚಮಾವರಣಪೂಜಾ ಪೂರ್ವ ಓಂ ಮತ್ಸ್ಯಾಯ ನಮಃ । ಓಂ ಕೂರ್ಮಾಯ ನಮಃ । ಆಗ್ನೇಯೇ ಓಂ ವರಾಹಾಯ ನಮಃ । ದಕ್ಷಿಣೇ ಓಂ ನಾರಸಿಂಹಾ- ಯ ನಮಃ । ಓಂ ವಾಮನಾಯ ನಮಃ । ನೈಋತ್ಯೇ ಓಂ ಪರಶು- ರಾಮಾಯ ನಮಃ । ಪಶ್ಚಿಮೇ ಓಂ ರಾಮಾಯ ನಮಃ । ಓಂ ಕೃಷ್ಣಾಯ ನಮಃ । ವಾಯವ್ಯೈ ಓಂ ಬುದ್ಧಾಯ ನಮಃ । ಉತ್ತರೇ ಓಂ ಕಲ್ಕಿನೇ ನಮಃ । ಓಂ ಅನಂತಾಯ ನಮಃ । ಈಶಾನ್ಯೈ ಓಂ ವಿಶ್ವರೂಪಾಯ ನಮಃ । ಷಷ್ಠಾವರಣಪೂಜಾ ಪೂರ್ವ ಓಂ ಅನಂತಾಯ ನಮಃ । ಆಗ್ನೇಯೇ ಓಂ ವಾರುಣ್ಯೈ ನಮಃ । ದಕ್ಷಿಣೇ ಓಂ ಬ್ರಹ್ಮಣೇ ನಮಃ । ನೈಋತ್ಯೇ ಓಂ ಸರಸ್ವತ್ಯೈ ನಮಃ । ಪಶ್ಚಿಮೇ ಓಂ ವಾಯವೇ ನಮಃ । ವಾಯವ್ಯೈ ಓಂ ಭಾರತ್ಯೈ ನಮಃ । ಉತ್ತರೇ ಓಂ ಈಶ್ವರಾಯ( ರುದ್ರಾಯ) ನಮಃ । ಈಶಾನ್ಯೈ ಓಂ ಪಾರ್ವತ್ಯೈ ನಮಃ। ಮುಂಭಾಗದಲ್ಲಿ ಓಂ ಗರುಡಾಯ ನಮಃ । ಅವರ ಪಕ್ಕದಲ್ಲಿ ಓಂ ಸುಪರ್ಣ್ಯೈ ನಮಃ । ಸಪ್ತಮಾವರಣ ಪೂರ್ವಸುರಾಧಿಪತಯೇ ಓಂ ವಾಂ ಇಂದ್ರಾಯ ಶಚೀಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು- ಪಾರ್ಷದಾಯ ನಮಃ । ಆಗ್ನೇಯೇ ತೇಜೋSಧಿಪತಯೇ ಓಂ ರಾಂ ಆಗ್ನಯೇ ಸ್ವಾಹಾ ಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣುಪಾರ್ಷದಾಯ ನಮಃ । ದಕ್ಷಿಣೇ ಧರ್ಮಾಧಿಪತಯೇ ಓಂ ಯಾಂ ಯಮಾಯ ಶಾಮಳಾ ಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ । ನೈಋತ್ಯೇ ರಕ್ಷೋSಧಿಪತಯೇ ಓಂ ಷಾಂ ನಿಋತಯೇ ದೀರ್ಘಗ್ರೀವಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣುಪಾರ್ಷದಾಯ ನಮಃ । ಪಶ್ಚಿಮೇ ಜಲಾಧಿಪತಯೇ ಓಂ ವಾಂ ವರುಣಾಯ ಕಾಳಿಕಾ- ಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣುಪಾರ್ಷದಾಯ ನಮಃ । ಗರುಡನನ್ನೂ ಪೂಜಿಸುವುದು. ನಾಲ್ಕು ವಿದಿಕ್ಕುಗಳಲ್ಲಿ ವಾರುಣೀ, ಗಾಯತ್ರೀ, ಭಾರತೀ, ಗಿರಿಜೆಯರನ್ನೂ ಮಧ್ಯದಲ್ಲಿ ಗರುಡನನ್ನೂ ಎಡಗಡೆ ಸೌಪರ್ಣಿಯನ್ನೂ ಪೂಜಿಸಬೇಕು. ಇದು ಷಷ್ಠಾವರಣ ಪೂಜೆ. ನಂತರದ ಏಳನೆಯ ಆವರಣದಲ್ಲಿ ಇಂದ್ರಾದಿ ಅಷ್ಟದಿಕ್ಪಾಲ ಕರನ್ನೂ, ಹಾಗೂ ಊರ್ಧ್ವಲೋಕ, ಅಧೋಲೋಕಗಳಿಗೆ ಅಧಿಪತಿಗಳಾದ ಬ್ರಹ್ಮ-ಶೇಷರನ್ನೂ, ಅವರಪತ್ನಿಯರು, ಪರಿವಾರ ಆಯುಧಗಳೊಂದಿಗೆ ಪೂರ್ವಾದಿದಿಕ್ಕುಗಳಲ್ಲಿ ಪೂಜಿಸಬೇಕು. ಧೂಪದೀಪಾದಿ ಸಮರ್ಪಣೆ - ಅನುಯಾಗ ಧೂಪದೀಪೌ ತತೋ ದತ್ವಾ ನೈವೇದ್ಯಂ ಮೂಲಮಂತ್ರತಃ । ಅನೇನ ಕ್ರಮಯೋಗೇನ ಜುಹುಯಾತ್ ಸಂಸ್ಕೃತೇಽನಲೇ ॥ ೬೫ ॥ ಅರ್ಥ- ಆವರಣಪೂಜೆಯನ್ನು ಮಾಡಿದ ನಂತರ ಉಳಿದ ಉಪಚಾರ ಪೂಜೆಗಳಾದ ಧೂಪವನ್ನೂ, ದೀಪವನ್ನೂ ಅರ್ಪಿಸಿ, 'ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರದಿಂದ ನೈವೇದ್ಯವನ್ನು ಪ್ರೋಕ್ಷಿಸಿ ನೈವೇದ್ಯವನ್ನು ಮುಟ್ಟಿ 'ಓಂ ನಮೋ ನಾರಾಯಣಾಯ' ಎಂದು ಜಪಿಸಿ, ಪುಷ್ಪದಿಂದ ಅರ್ಚಿಸಿ, ನಂತರ ನೈವೇದ್ಯವನ್ನು ಅರ್ಪಿಸಬೇಕು. ಹೀಗೆ ಪೀಠಪೂಜಾದಿಕ್ರಮದಿಂದ ಸಂಸ್ಕೃತವಾದ ಅಗ್ನಿಯಲ್ಲಿ ಅನುಯಾಗವನ್ನೂ [^1] ಮಾಡಬೇಕು. ವಾಯವ್ಯೈ ಜ್ಞಾನಾಧಿಪತಯೇ ಓಂ ಯಾಂ ವಾಯವೇ ಮೋಹಿನೀಸಹಿತಾಯ ಸಾಯುಧಾಯ ಸವಾಹನಾಯ ಸಪರಿ- ಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ । ಉತ್ತರೇ ಧನಾಧಿಪತಯೇ ಓಂ ಸಾಂ ಸೋಮಾಯ(ಕುಬೇರಾಯ) ರೋಹಿಣೀಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ । ಈಶಾನ್ಯೈ ಭೂತಾಧಿಪತಯೇ ಓಂ ಹಾಂ ರುದ್ರಾಯ ಉಮಾ- ಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣು ಪಾರ್ಷದಾಯ ನಮಃ । ನಿಋತಿವರುಣಯೋರ್ಮಧ್ಯೆ ನಾಗಾಧಿಪತಯೇ ಓಂ ಆಂ ಶೇಷಾಯ ನಾಗಿನೀಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀವಿಷ್ಣು ಪಾರ್ಷದಾಯ ನಮಃ । ಇಂದ್ರೇಶಾನಯೋರ್ಮಧ್ಯೇ ಸತ್ಯಲೋಕಾಧಿಪತಯೇ ಓಂ ಹ್ರೀಂ ಬ್ರಹ್ಮಣೇ ಗಾಯತ್ರಿಸಹಿತಾಯ ಸಾಯುಧಾಯ ಸವಾಹನಾಯ ಸಪರಿಗ್ರಹಾಯ ಶ್ರೀ ವಿಷ್ಣುಪಾರ್ಷದಾಯ ನಮಃ । [^1]ಅನುಯಾಗ ಪುಷ್ಪಾಂಜಲಿ ಹೋಮ ಪುಷ್ಪಾಂಜಲಿಶ್ಚ ಹೋಮಶ್ಚ ಮೂಲೇನಾಷ್ಟೋತ್ತರಂ ಶತಮ್ । ಹಸ್ತಮಾತ್ರ ಕುಂಡ (ಅಗ್ಗಿಷ್ಟಿಕೆ) ತಯಾರಿಸಿಕೊಂಡು, ಆ ಕುಂಡ- ದಲ್ಲಿ ಶ್ರೀದೇವಿಯನ್ನು ಚಿಂತಿಸಬೇಕು. ವಿಷ್ಣುವೀರ್ಯಾತ್ಮಕವಾದ ಅಗ್ನಿಯನ್ನು 'ಓಂ ಭೂರ್ಭುವಸ್ವರೋಮ್' ಎಂಬ ವ್ಯಾಹೃತಿ- ಮಂತ್ರದಿಂದ ಪ್ರತಿಷ್ಠಾಪಿಸಬೇಕು. ವ್ಯಾಹೃತಿಗಳಿಂದ ಹದಿನಾರು ಸಂಸ್ಕಾರಗಳನ್ನು ಅಗ್ನಿಗೆ ಮಾಡಬೇಕು. ಅಗ್ನಿಯಲ್ಲಿ ಪೀಠಪೂಜೆ ಮಾಡಿ, ಪರಶುರಾಮನನ್ನು ಆವಾಹಿಸಬೇಕು. ಅರ್ಘ್ಯಾದಿ ಪುಷ್ಪಾರ್ಚನೆಯವರೆಗೆ ಉಪಚಾರಪೂಜೆ ಮಾಡಿ, ಆವರಣಪೂಜೆ ಮಾಡಿ ದೇವರ ಜೊತೆಗೆ ಅವರಿಗೂ ಧೂಪದೀಪಗಳನ್ನು ತೋರಿಸಿ, ನೈವೇದ್ಯವನ್ನು ದೇವರಿಗೆ ಅರ್ಪಿಸಬೇಕು. ನೈವೇದ್ಯ ಕಾಲದಲ್ಲಿ- ಯೇ ಹೋಮಕ್ಕಾಗಿ ಸ್ವಲ್ಪ ಅನ್ನವನ್ನು ಪ್ರತ್ಯೇಕವಾಗಿಟ್ಟು-ಕೊಳ್ಳ ಬೇಕು. ನಂತರ ನೈವೇದ್ಯವನ್ನು ಅರ್ಪಿಸಿ ಯಥಾಶಕ್ತಿ ನೂರೆಂಟು ಬಾರಿ ಮೂಲಮಂತ್ರವನ್ನು ಜಪಿಸಿ, ಪುಷ್ಪಾಂಜಲಿಯನ್ನು ಅರ್ಪಿಸಿ ಹೋಮವನ್ನು ಮಾಡಬೇಕು. ಗರುಡಾದಿ ಯೋಗಪೀಠಾಂತಪೀಠದೇವತೆಗಳಿಗೂ, ಹಾಗೂ ಲಕ್ಷ್ಮೀಧರಾದೇವಿಯರಿಂದ ಶೇಷ, ವಿಧಿಪರ್ಯಂತ ಆವರಣ ದೇವತೆಗಳಿಗೂ ಒಂದೊಂದು ಬಾರಿ ಪುಷ್ಪಾಂಜಲಿಅರ್ಪಿಸಿ ನಂತರ ನಾಲ್ಕು ನಾಲ್ಕು ಬಾರಿ ಆಯಾಯ ಪೀಠಾವರಣದೇವತಾ ಮಂತ್ರಗಳಿಂದಲೇ ತುಪ್ಪದಿಂದ ಹೋಮಿಸಬೇಕು. ಹೀಗೆ ಜಾತ- ಕರ್ಮಾದಿ ಸಂಸ್ಕೃತವಾದ ಅಗ್ನಿಯಲ್ಲಿಮೂಲಮಂತ್ರದಿಂದ ನೂರೆಂಟು ಬಾರಿ ಹೋಮಿಸಬೇಕು. ಇಲ್ಲಿ ಪೀಠಾವರಣದೇವತೆಗಳಿಗೆ ಆಹುತಿ ನೀಡುವಾಗ ಮೊದಲು ಪೀಠದೇವತೆಗಳಿಗೂ ನಂತರ ಅಷ್ಟಾಕ್ಷರದಿಂದಲೂ ನಂತರ ಆವರಣದೇವತಾಮಂತ್ರಗಳಿಂದಲೂ ಹೋಮಿಸಬೇಕು. ಹುತ್ವಾ ವ್ಯಾಹೃತಿಭಿಃ ಪೀಠದೇವೇಭ್ಯೋಽಪ್ಯಥ ಮೂಲತಃ । ಉಕ್ತಾವರಣದೇವೇಭ್ಯೋಪ್ಯಥ ಸಮ್ಯಕ್ ಸ್ಮರನ್ ಹರಿಮ್ II (ಯೋಗದೀಪಿಕಾ 3/48) ಹೋಮಾನಂತರ ಸ್ವಿಷ್ಟಕೃದಾದಿಪ್ರಾಯಶ್ಚಿತ್ತಾಂತವಾಗಿ ಹೋಮಿಸಿ, ಉತ್ತರಾಪೋಶನ ನೀಡಿ ನೈವೇದ್ಯ ವಿಸರ್ಜಿಸಬೇಕು. ಇದೇ ರೀತಿ ಮೂಲಮಂತ್ರಕ್ಕಿಂತ ಬೇರೆಯಾದ ಪ್ರಣವಾದಿ ಅಷ್ಟಮಹಾಮಂತ್ರಗಳಿಂದಲೂ, ಮುಂದೆ ಹೇಳುವ ವರಾಹಾದಿ ಮಂತ್ರಗಳಿಂದಲೂ ಒಂದು ಬಾರಿ ಪುಷ್ಪಾಂಜಲಿ ಹಾಗೂ ಚತುರ್ಗುಣಹೋಮವನ್ನಾಚರಿಸಬೇಕು. ಹೀಗೆ ಅನುಯಾಗಸಹಿತಮಾಡುವ ಪೂಜೆಯು ಅತ್ಯಂತಶ್ರೇಷ್ಠ ವಿಧಾನವೆನಿಸಿದೆ. ತತ್ರಾऽದ್ಯಾತ್ಯಂತಫಲದಾ ದ್ವಿತೀಯಾ ಸಫಲಾ ಮತಾ - ನಾರದೀಯ ವಿಶೇಷ - ಮೂಲಮಂತ್ರದಿಂದ ನೂರೆಂಟುಬಾರಿ ಪುಷ್ಪಾಂಜಲಿ ಹಾಗೂ ನೂರೆಂಟುಬಾರಿ ಹೋಮವನ್ನು ಮಾಡಬೇಕು. ಇತರ ದ್ವಾದಶಾಕ್ಷರ ಮಂತ್ರಗಳಿಂದ ಒಂದೊಂದು ಬಾರಿ ಪುಷ್ಪಾರ್ಪಣೆ, ಹಾಗೂ ಅದರ ನಾಲ್ಕುಪಟ್ಟು ಹೋಮ ಮಾಡಬೇಕು. ಪೀಠಾವರಣದೇವತಾಪೂಜಾ-ಹೋಮವನ್ನು ಹೀಗೆ ಮಾಡಬೇಕು. ಸಕೃತ್ ಸಕೃತ್ ಪುಷ್ಪಮನ್ಯೈರ್ಹೋಮಸ್ತಸ್ಯ ಚತುರ್ಗುಣಃ ॥೬೬ ॥ ವಿಸರ್ಜಯಿತ್ವಾ ನೈವೇದ್ಯಂ ಮೂಲೇನ ತ್ರಿಃಸಮರ್ಚ್ಯ ಚ । ಧೂಪದೀಪೌ ಪುನರ್ದತ್ವಾ ಪುನರ್ಮೂಲೇನ ಪೂರ್ವವತ್ ॥ ೬೭॥ ಅರ್ಥ ಈ ನಿತ್ಯಹೋಮವಾದ ಅನುಯಾಗದಲ್ಲಿ ಅಷ್ಟಾಕ್ಷರ ಮಂತ್ರದಿಂದ ಪುಷ್ಪಾಂಜಲಿ ಹಾಗೂ ಹೋಮಗಳನ್ನು ನೂರೆಂಟು ಬಾರಿ ಮಾಡಬೇಕು. ಬೇರೆ ದ್ವಾದಶಾಕ್ಷರಾದಿ ಮಂತ್ರಗಳು, ವರಾಹಾದಿ ಮುಂದೆ ಹೇಳುವ ಮಂತ್ರಗಳು, ಪೀಠಾವರಣದೇವತೆ- ಗಳಿಗೂ ಒಂದೊಂದು ಬಾರಿ ಪುಷ್ಪವನ್ನು ಅರ್ಪಿಸಿ, ನಾಲ್ಕು ನಾಲ್ಕು ಬಾರಿ ಅದೇ ಮಂತ್ರಗಳಿಂದ ಹೋಮಿಸಬೇಕು. ನಂತರ ನೈವೇದ್ಯವನ್ನು 'ಅಮೃತಾಪಿಧಾನಮಸಿ' ಎಂದು ಉತ್ತರಾ ಪೋಶನ ನೈವೇದ್ಯವನ್ನು ವಿಸರ್ಜಿಸುವುದು. ಪುನಃ ಮೂಲಮಂತ್ರ ದಿಂದ ಮೂರುಬಾರಿ ಪುಷ್ಪಾಂಜಲಿಯನ್ನರ್ಪಿಸಿ ಪೂಜಿಸಬೇಕು. ವ.ಟೀ.- ಪೀಠಾವರಣದೇವತಾಮಂತ್ರೈ: ಏಕವಾರಂ ಪುಷ್ಪ- ಸಮರ್ಪಣಮ್ । ಚತುರ್ವಾರಂ ಹೋಮ; ಮೂಲೇನ = ಅಷ್ಟಾಕ್ಷರೇಣ । ಟೀಕಾರ್ಥ- ಪೀಠಾವರಣದೇವತಾಮಂತ್ರಗಳಿಂದ ಒಂದೊಂದು ಬಾರಿ ಪುಷ್ಪ ಸಮರ್ಪಣೆ ಮಾಡಬೇಕು. ನಾಲ್ಕು ಬಾರಿ ಹೋಮ ಮಾಡಬೇಕು. ಇಲ್ಲಿರುವ ಮೂಲೇನ ಎಂದರೆ ನಾರಾಯಣಾಷ್ಟಾಕ್ಷರಮಂತ್ರದಿಂದ ಎಂದರ್ಥ. ॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ಶ್ರೀಮತ್ತಂತ್ರಸಾರಸಂಗ್ರಹೇ ಶ್ರೀವಸುಧೇಂದ್ರರಚಿತವ್ಯಾಖ್ಯಾನೇ ಪ್ರಥಮೋಪಧ್ಯಾಯಃ ॥ ಪುನಃ ಅಷ್ಟಾಕ್ಷರಜಪ- ಧ್ಯಾನಾದಿಗಳು ಅರ್ಚಯಿತ್ವಾ ಪುನರ್ಧ್ಯಾತ್ವಾ ಜಪೇದಷ್ಟೋತ್ತರಂ ಶತಮ್ । ಪುನರ್ಧ್ಯಾಯೇದ್ಧರಿಂ ಸರ್ವದೇವದೇವೇಶ್ವರಂ ಪ್ರಭುಮ್ II ೬೮ ॥ ಅರ್ಥ- ಹೀಗೆ ಮಂತ್ರಗಳಿಂದ ಪುಷ್ಪಾಂಜಲಿಯನ್ನು ಅರ್ಪಿಸಿದ ನಂತರ 'ಜಿತಂತೇ ಪುಂಡರೀಕಾಕ್ಷ' ಇತ್ಯಾದಿ ಸ್ತೋತ್ರಪಾಠಗಳಿಂದ ಪ್ರದಕ್ಷಿಣನಮಸ್ಕಾರಪೂರ್ವಕವಾಗಿ ಮೂರು ಬಾರಿ ಪುಷ್ಪಾಂಜಲಿ ಯಿಂದ ಹರಿಯನ್ನು ಪೂಜಿಸಬೇಕು. ನಂತರ 'ಉದ್ಯದ್ಭಾಸ್ವತ್' ಇತ್ಯಾದಿ ಮಂತ್ರದಿಂದ ಹರಿಯನ್ನು ಧ್ಯಾನಿಸಿ, ಮೂಲ ಮಂತ್ರಜಪವನ್ನು ನೂರೆಂಟು ಬಾರಿ ಮಾಡಬೇಕು. ಇದರಿಂದ ಪೂಜೆಯ ಪೂರ್ಣಫಲ ಲಭಿಸುತ್ತದೆ. ಜಪಾನಂತರ 'ನಾಹಂ ಕರ್ತಾ ಹರಿಃ ಕರ್ತಾ' ಎಂಬುದಾಗಿ ಹರಿಯ ಸ್ವಾತಂತ್ರ್ಯವನ್ನು ಧ್ಯಾನಿಸಬೇಕು. ಇಷ್ಟೇ ಅಲ್ಲದೆ ನ್ಯಾಸವನ್ನು ಮಾಡಿ ದೇವನನ್ನು ಹೃದಯದಲ್ಲಿ ಆವಾಹಿಸಿಕೊಂಡು, ತನಗೂ ನ್ಯಾಸವನ್ನು ಮಾಡಿಕೊಳ್ಳಬೇಕು. ಜಪದ ಫಲಸ್ತುತಿ ಜಪಧ್ಯಾನಹುತಾರ್ಚಾದೀನ್ ಏವಂ ಯಃ ಕುರುತೇ ಸದಾ । ಧರ್ಮಾರ್ಥಕಾಮಮೋಕ್ಷಾಣಾಂ ಭಾಜನಂ ಸ್ಯಾತ್ ಸ ಏವ ಹಿ ॥೬೯ ॥ ಅರ್ಥ - ಯಾವ ಗುರುವು ಶಿಷ್ಯನ ಉದ್ಧಾರಕ್ಕಾಗಿ ಹಿಂದೆ ಹೇಳಿ- ದಂತೆ ಜಪ-ಧ್ಯಾನ- ಹೋಮ- ಪೂಜಾದಿಗಳನ್ನು ಮಾಡುವನೋ ಆ ಗುರುವೇ ಧರ್ಮಾರ್ಥ ಕಾಮಮೋಕ್ಷಗಳಿಗೆ ಭಾಗಿಯಾಗುವನು. ತನ್ನ ಶಿಷ್ಯನನ್ನು ಸಹ ಧರ್ಮಾದಿಭಾಗಿಯನ್ನಾಗಿಸುವನು. ಪೂಜಾಮಹಿಮ ಸರ್ವೋತ್ತಮಂ ಹರಿಂ ಜ್ಞಾತ್ವಾ ಯ ಏವಂ ಭಕ್ತಿಪೂರ್ವಕಮ್ । ಜಪಧ್ಯಾನಾದಿಭಿರ್ನಿತ್ಯಂ ಪೂಜಯೇನ್ನಾಸ್ಯ ದುರ್ಲಭಮ್ ॥ ೭೦ ॥ ಅರ್ಥ - ಹೀಗೆ ಯಾರು ಹರಿಸರ್ವೋತ್ತಮತ್ವಜ್ಞಾನಪೂರ್ವಕ ಭಕ್ತಿಯಿಂದ ಜಪ, ಧ್ಯಾನ, ಪೂಜಾದಿಗಳನ್ನು ನಿತ್ಯವೂ ಆಚರಿಸು- ವರೋ ಅವರಿಗೆ ಧರ್ಮಾರ್ಥಕಾಮಮೋಕ್ಷಗಳಲ್ಲಿ ದುರ್ಲಭ- ವಾದದ್ದು ಯಾವುದೂ ಇರುವುದಿಲ್ಲ. ಭಕ್ತಿಂ ಕೃತ್ವಾಽನ್ಯದೇವೇಷು ಬ್ರಹ್ಮರುದ್ರಾದಿಕೇಷ್ವಪಿ । ಸರ್ವೋತ್ಕರ್ಷಮವಿಜ್ಞಾಯ ವಿಷ್ಣೋರ್ಯಾತಿ ತಮೋ ಧ್ರುವಮ್ ॥ ೭೧ ॥ ಅರ್ಥ - ಶ್ರೀಹರಿಯನ್ನೇ ಸರ್ವೋತ್ತಮನೆಂದು ತಿಳಿದು ಈ ರೀತಿ ಭಕ್ತಿಯಿಂದ ಅವನನ್ನು ಪೂಜಿಸಬೇಕು. ಇದನ್ನು ತಿಳಿಯದೆ, ಬ್ರಹ್ಮರುದ್ರಾದಿಗಳೇ ಸರ್ವೋತ್ತಮರೆಂದು ತಿಳಿದು ಅವರಲ್ಲಿ ಭಕ್ತಿಯನ್ನು ಮಾಡಿ ಜಪಧ್ಯಾನಾದಿಗಳನ್ನು ಆಚರಿಸಿದರೂ ತಮಸ್ಸಿಗೆ ಬೀಳುವುದು ನಿಶ್ಚಿತ. ನ ಯಜ್ಞಾ ನ ಚ ತೀರ್ಥಾನಿ ನೋಪವಾಸವ್ರತಾನಿ ಚ। ದೈವತಾನಿ ಚ ಸರ್ವಾಣಿ ತ್ರಾತುಂ ತಂ ಶಕ್ನುಯುಃ ಕ್ವಚಿತ್ ॥ ೭೨ ॥ ಅರ್ಥ- ಹರಿಯನ್ನು ಭಕ್ತಿಯಿಂದ ಪೂಜಿಸದ ವ್ಯಕ್ತಿಯು ಮಾಡಿದ ಯಜ್ಞಗಳಾಗಲೀ, ಪುಣ್ಯತೀರ್ಥಸೇವನೆಯಾಗಲೀ, ವ್ರತೋಪವಾಸ ಗಳಾಗಲೀ, ಸಮಸ್ತದೇವತೆಗಳಾಗಲೀ, ವಿಷ್ಣುವನ್ನು ಬಿಟ್ಟ ಆ ವ್ಯಕ್ತಿಯನ್ನು ರಕ್ಷಿಸಲಾರವು. ಹರಿಸರ್ವೋತ್ತಮ ಪ್ರಶಂಸೆ - ಉಪಸಂಹಾರ ಹರಿರ್ಹಿ ಸರ್ವದೇವಾನಾಂ ಪರಮ: ಪೂರ್ಣಶಕ್ತಿಮಾನ್ । ಸ್ವತಂತ್ರೋಽನ್ಯ ತದ್ವಶಾ ಹಿ ಸರ್ವೇऽತಃ ಸ ಜಗದ್ಗುರುಃ ॥ ೭೩ ॥ ಅರ್ಥ - ಸಮಸ್ತದೇವತೆಗಳಿಂದಲೂ ಶ್ರೀಹರಿಯೇ ಶ್ರೇಷ್ಠನೂ, ಪೂರ್ಣಶಕ್ತನೂ, ಸ್ವತಂತ್ರನೂ ಆಗಿರುವನು. ಉಳಿದ ಬ್ರಹ್ಮಾದಿ ದೇವತೆಗಳೆಲ್ಲರೂ ಅವನ ವಶರಾಗಿದ್ದು ಸೇವಕರಾಗಿರುತ್ತಾರೆ. ಆದ್ದರಿಂದಲೇ ಶ್ರೀಹರಿಯು 'ಜಗದ್ಗುರು' ಎನ್ನಿಸಿರುವನು. ಬ್ರಹ್ಮಾದಯಶ್ಚ ತದ್ಭಕ್ತ್ಯಾ ಭಾಗಿನೋ ಭೋಗಮೋಕ್ಷಯೋಃ । ತಸ್ಮಾಜ್ಞೇಯಶ್ಚ ಪೂಜ್ಯಶ್ಚ ವಂದ್ಯೋ ಧೈಯಃ ಸದಾ ಹರಿಃ ॥ ೭೪ ॥ ॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರಹೇ ಪ್ರಥಮೋsಧ್ಯಾಯಃ ॥ ಅರ್ಥ- ಬ್ರಹ್ಮಾದಿದೇವತೆಗಳೂ ಸಹ ಭಗವಂತನ ಆರಾಧನಾದಿ- ಗಳಿಂದಲೇ ಸುಖಾದಿಭೋಗಗಳಿಗೂ, ಕಡೆಗೆ ಮೋಕ್ಷಕ್ಕೂ ಭಾಗಿ- ಗಳಾಗುವರು. ಆದ್ದರಿಂದ ಭಗವಂತನ ಮಹಾಮಹಿಮೆಯನ್ನು ತಿಳಿದು ಅವನನ್ನೇ ಎಂದಿಗೂ ಪೂಜಿಸಬೇಕು. ವಂದಿಸಿ ಧ್ಯಾನಿಸ- ಬೇಕು. ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ ಮೊದಲನೆಯ ಅಧ್ಯಾಯವು ಮುಗಿದುದು ॥ಶ್ರೀಕೃಷ್ಣಾರ್ಪಣಮಸ್ತು!! ದ್ವಿತೀಯೋsಧ್ಯಾಯಃ ಮಾತೃಕಾನ್ಯಾಸಪದ್ಧತಿ ಯಸ್ಯ ಕಸ್ಯಾಪಿ ಮಂತ್ರಸ್ಯ ನ್ಯಾಸಃ ಪಂಚಾಶದಕ್ಷರೈಃ । ವೀರ್ಯದಃ ಕೇಽಭಿತೋ ವಕ್ತ್ರಮಕ್ಷಿಕರ್ಣೇಷು ನಾಸಯೋಃ ॥ ೧ ॥ ಗಂಡಯೋರೋಷ್ಠಯೋರ್ದಂತಪಂಕ್ತ್ಯೋರ್ಮೂರ್ಧನಿ ವಾಚಿ ಚ । ದೋಃ ಪತ್ಸಂಧಿಷು ಸಾಗ್ರೇಷು ಪಾರ್ಶ್ವಯೋಃ ಪೃಷ್ಠಗುಹ್ಯಯೋಃ ॥ ೨ ॥ ತುಂದೇ ಚ ಹೃದಿ ಧಾತೂನಾಂ ಸಪ್ತಕೇ ಪ್ರಾಣಜೀವಯೋಃ । ಸಕ್ಷಕಾರಾನ್ ನ್ಯಸೇದ್ವರ್ಣಾನ್ ನೃಸಿಂಹಃ ಕ್ಷಸ್ಯ ದೇವತಾ ॥ ೩ ॥ ಜಪೇ ನ್ಯಾಸೇ ಚ ವಿಹಿತಃ ಕ್ಷೋऽಕ್ಷರಾಣಾಂ ಸದಾಂऽತತಃ । ಅರ್ಥ- ಯಾವುದೇ ಮಂತ್ರವನ್ನು ಜಪಮಾಡುವಾಗ ಜಪದ ಆದಿಯಲ್ಲಿ ಹಾಗೂ ಅಂತ್ಯದಲ್ಲಿ 'ಓಂ ಅಂ ಅಜಾಯ ನಮಃ' ಇತ್ಯಾದಿ ಐವತ್ತು ಅಕ್ಷರಗಳಿಂದ ಮಾತೃಕಾನ್ಯಾಸವನ್ನು ಮಾಡಿ ಕೊಳ್ಳಬೇಕು. ಹೀಗೆ ಮಂತ್ರಜಪದ ಆದ್ಯಂತಗಳಲ್ಲಿ ಐವತ್ತು ಅಕ್ಷರಗಳ ನ್ಯಾಸವು ಮಂತ್ರವನ್ನು ವೀರ್ಯವತ್ತಾಗಿ ಮಾಡಿ ಅಭೀಷ್ಟಫಲ ನೀಡುವಲ್ಲಿ ಸಮರ್ಥವಾಗುತ್ತದೆ. ಐವತ್ತು ಅಕ್ಷರಗಳ ನ್ಯಾಸಸ್ಥಾನಗಳು ಹೀಗಿವೆ 1- ಹಣೆಯ ಮೇಲ್ಭಾಗ; 2- ಮುಖ; 3- ಬಲಗಣ್ಣು; 4- ಎಡಗಣ್ಣು; 5 - ಬಲಗಿವಿ; 6 - ಎಡಗಿವಿ; 7 - ಬಲಮೂಗಿನ ಹೊಳ್ಳೆ ; 8 - ಎಡಮೂಗಿನ ಹೊಳ್ಳೆ; 9 - ಬಲಗೆನ್ನೆ; 10 - ಎಡಗೆನ್ನೆ; 11 – ತುಟಿಯ ಮೇಲ್ಭಾಗ 12 - ಕೆಳ ತುಟಿ; 13 - ಮೇಲಿನ ದಂತಪಂಕ್ತಿ; 14 - ಕೆಳಗಿನ ದಂತಪಂಕ್ತಿ; 15 - ತಲೆ; 16 - ಬಾಯಿ; 17-21 - ಬಲಭುಜದ ಸಂಧಿ ಹಾಗೂ ಅಗ್ರಭಾಗಗಳು; 22-26 - ಎಡಭುಜದ ಸಂಧಿ ಹಾಗೂ ಅಗ್ರಭಾಗಗಳು; 27-31 - ಬಲಗಾಲಿನ ಸಂಧಿ ಹಾಗೂ ಅಗ್ರಭಾಗಗಳು; 32-36 - ಎಡಗಾಲಿನ ಸಂಧಿ ಹಾಗೂ ಅಗ್ರಭಾಗಗಳು; 37-38 – ಹೊಟ್ಟೆಯ ಬಲ-ಎಡಪಾರ್ಶ್ವಗಳು; 39 – ಹೊಟ್ಟೆಯ ಹಿಂಭಾಗ; 40 - ಗುಹ್ಯೇಂದ್ರಿಯ; 41- ಗುದ; 42 -ಹೃದಯ; 43 - ತ್ವಕ್; 44 - ಚರ್ಮ; 45 - ಮಾಂಸ; 46 - ರಕ್ತ; 47 - ಮೇದಸ್ಸು; 48 - ಮಜ್ಜೆ ; 49 - ಎಲುಬು; 50 - ಪ್ರಾಣ; 51 - ಜೀವ. ಕ್ಷಕಾರಕ್ಕೆ ನರಸಿಂಹನು ದೇವತೆ, ಮಾತೃಕಾಜಪದಲ್ಲಿ ಹಾಗೂ ಮಾತೃಕಾನ್ಯಾಸದಲ್ಲಿ ಕ್ಷಕಾರವನ್ನು ಕಡೆಯಲ್ಲಿ ಹೇಳಬೇಕು. ವ.ಟೀ - ಏತದಧ್ಯಾಯೇ ಅಕ್ಷರನ್ಯಾಸ-ಪ್ರಾಣಾಯಾಮ-ಕಲಶಾ- ರ್ಚನಾದಿಕಂ ನಿರೂಪಯತಿ - ಯಸ್ಯೇತ್ಯಾದಿನಾ ॥ ಕೇ = ಶಿರಸಿ, ಅಭಿತೋ ವಕ್ತ್ರಂ=ಸರ್ವತಃ ಪ್ರದಕ್ಷಿಣೇನ ಮುಖೇ । ಮೂರ್ಧ್ನಿ ವಾ ಉಪರಿ । ವಾಚಿ ಗತಃ । ತುಂದೇ = ಉದರೇ। ಟೀಕಾರ್ಥ- ಈ ಎರಡನೆಯ ಅಧ್ಯಾಯದಲ್ಲಿ ಮಾತೃಕಾನ್ಯಾಸ, ಪ್ರಾಣಾಯಾಮ, ಕಲಶಪೂಜೆ ಮೊದಲಾದವುಗಳನ್ನು ನಿರೂಪಿಸು ತ್ತಾರೆ. ಕೇ = ಎಂದರೆ 'ತಲೆಯಲ್ಲಿ' ಎಂದರ್ಥ. ಅಭಿತಃ ವಕ್ತ್ರಂ= ಎಂದರೆ ಪ್ರದಕ್ಷಿಣಾಕಾರವಾಗಿ ಇಡೀ ಮುಖವನ್ನು ಮುಟ್ಟಬೇಕು ಎಂದು ಭಾವ, ಮೂರ್ಧ್ನಿ ಉಪರಿ = ತಲೆಯ ಮೇಲೆ, ವಾಚಿ ಎಂದರೆ ಬಾಯಿ ಎಂದು ತಿಳಿಸಿದೆ. ಪ್ರಾಣಾಯಾಮ ಪ್ರಾಣಾಯಾಮೋ[^1] ರೇಚಯಿತ್ವಾ ಪೂರಯಿತ್ವಾ ಚ ಕುಂಭಕೇ ॥ ೪ ॥ ತಾರೈಸ್ತ್ರಿದ್ವಾದಶಾವರ್ತೈಃ ದ್ವ್ಯೇಕದ್ವಾದಶಕೇನ ವಾ । ತತ್ತನ್ಮಂತ್ರೇಣ ವಾ ಕಾರ್ಯೋ ಗಾಯತ್ರ್ಯಾ ದಶತಾರಕೈಃ ॥ ೫ ॥ ಅರ್ಥ - ಬಲಹೊಳ್ಳೆಯಿಂದ ಶ್ವಾಸವಾಯುವನ್ನು ಹೊರಗೆ ಬಿಡುವುದು ರೇಚಕ, ಎಡಹೊಳ್ಳೆಯಿಂದ ಶುದ್ಧಗಾಳಿಯನ್ನು ಸೆಳೆಯುವುದು ಪೂರಕ, ಅಂಗುಲಿಗಳಿಂದ ಎರಡೂ ಹೊಳ್ಳೆ- ಗಳನ್ನು ಸುಷುಮ್ನಾ ನಾಡಿಯಲ್ಲಿ ವಾಯುನಿರೋಧಿಸುವುದಕ್ಕೆ [^1]. ರೇಚಯೇದ್ ದಕ್ಷಯಾ ನಾಸಾ ಪೂರಯೇದ್ ವಾಮತಸ್ತತಃ । ಕುಂಭಕಶ್ಚ ಸುಷುಮ್ನಾಯಾ ವಿಷ್ಣುಂ ವಾಯುಂ ಚ ಸಂಸ್ಮರೇತ್ । ಪ್ರಾಣೋ ವಾಯುರಿತಿ ಪ್ರೋಕ್ತಃ ಆಯಾಮಃ ತನ್ನಿರೋಧನಮ್ ॥ ಪ್ರಾಣಾಯಾಮ ಎಂದು ಹೆಸರು. ಪ್ರಾಣಾಯಾಮ ಮಾಡುವಾಗ 36 ಓಂಕಾರಗಳನ್ನು (12•3), ಹನ್ನೆರಡನ್ನು ಮೂರುಬಾರಿ ಗುಣಿಸಿ ಬಂದ ಸಂಖ್ಯೆಯಷ್ಟು (12•3=36) ಓಂಕಾರವನ್ನು ಉಚ್ಚರಿಸಿಯಾಗಲೀ, ಹನ್ನೆರಡನ್ನು ಎರಡು ಬಾರಿ ಗುಣಿಸಿ ಬಂದ ಸಂಖ್ಯೆಯಷ್ಟು (12x2=24); ಹನ್ನೆರಡು ಸಂಖ್ಯೆಯಿಂದಾಗಲೀ ಓಂಕಾರವನ್ನು ಉಚ್ಚರಿಸಿ ಸನ್ಯಾಸಿಗಳು ಪ್ರಾಣಾಯಾಮವನ್ನು ಮಾಡಬೇಕು. ಹಾಗೆಯೇ ಕೃಷ್ಣಾದಿ ಯಾವ ಮಂತ್ರವನ್ನು ಜಪಿಸಬೇಕೋ ಆ ಮಂತ್ರದಿಂ-ದಾಗಲೀ ಮೇಲೆ ಹೇಳಿದಷ್ಟು ಬಾರಿ ಜಪಿಸುವುದು, ಹಾಗೂ ಹತ್ತು ಓಂಕಾರಗಳಿರುವ ಗಾಯತ್ರಿಯಿಂದಾಗಲೀ ಪ್ರಾಣಾಯಾಮವನ್ನು [^1]ಮಾಡಬೇಕು. 1. ವಿಶೇಷಾಂಶ - ಪ್ರಾಣಾಯಾಮವನ್ನು ಮಾಡಿದಾಗ ಹೃದಯ- ದಲ್ಲಿರುವ ನರಸಿಂಹನ ಜ್ವಾಲೆ ಉಜ್ವಲಗೊಳ್ಳುತ್ತದೆ. ಇದರಿಂದಾಗಿ ಸಮಸ್ತಪಾಪಗಳೂ ಸುಟ್ಟು ಭಸ್ಮವಾಗುತ್ತವೆ. ಅದನ್ನು ಘ್ರಾಣದ (ಮೂಗಿನ) ಬಲಹೊಳ್ಳೆಯಿಂದ ಹೊರಹಾಕಿದಾಗ ಜೀವನು ಪುಟವಿಟ್ಟ ಬಂಗಾರದಂತೆ ಶುದ್ದನಾಗುವನು. ತಲೆಯ ಮೇಲಿರುವ ಸಹಸ್ರಾರಪದ್ಮದಲ್ಲಿರುವ ಚಂದ್ರಮಂಡಲದಿಂದ ಅಮೃತ ಸುರಿದು ಶರೀರವೂ ಶುದ್ಧವಾಗುತ್ತದೆ. ಹೀಗೆ ಜೀವ-ಶರೀರವೆರಡೂ ಶುದ್ಧಿಯಾಗುವ ವಿಧಾನವೇ ಪ್ರಾಣಾಯಾಮ. ಮೂರುವರ್ಷ ಪ್ರಾಣಾಯಾಮ ಮಾಡಿದ ವ್ಯಕ್ತಿಯು ಅಪಮೃತ್ಯು ವನ್ನು ಗೆದ್ದು ದೀರ್ಘಾಯುಷಿನಾಗುವನು : ಸಂವತ್ಸರತ್ರಯಾದೂರ್ಧ್ವ೦ ಪ್ರಾಣಾಯಾಮಪರೋ ನರಃ । ಅಪಮೃತ್ಯುಮತಿಕ್ರಮ್ಯ ದೀರ್ಘಮಾಯುರವಾಪ್ನುಯಾತ್ ॥ ಯತಿಗಳ ಪ್ರಾಣಾಯಾಮ- ಮೂಗಿನ ತುದಿಯನ್ನು ಕನಿಷ್ಠಿಕಾ, ಅನಾಮಿಕಾ ಬೆರಳುಗಳಿಂದಲೂ, ಬಲಭಾಗದಲ್ಲಿ ಅಂಗುಷ್ಠ- ದಿಂದಲೂ ಒತ್ತಿ ಹಿಡಿಯುವುದು ಓಂಕಾರಮುದ್ರಿಕೆ ಎನಿಸಿದ್ದು ಯತಿಗಳು ಮತ್ತು ಬ್ರಹ್ಮಚಾರಿಗಳಿಗೆ ವಿಹಿತವಾಗಿದೆ. ಐದೂ ಬೆರಳುಗಳ ತುದಿಯಿಂದ ಮೂಗನ್ನು ಒತ್ತಿ ಹಿಡಿಯುವುದು 'ಪ್ರಣವಮುದ್ರೆ' ಎನಿಸಿದ್ದು ಗೃಹಸ್ಥಾಶ್ರಮಿಗಳಿಗೆ ಪ್ರಶಸ್ತವಾಗಿದೆ. ಕನಿಷ್ಠಿಕಾನಾಮಿಕಾಂಗುಷ್ಠೈಃ ನಾಸಾಗ್ರಸ್ಯ ಪ್ರಪೀಡನಮ್ । ಓಂಕಾರಮುದ್ರಿಕಾ ಸೇಯಂ ಯತೇಶ್ಚಬ್ರಹ್ಮಚಾರಿಣಃ ॥ ಪಂಚಾಂಗುಲಿಭಿಃ ನಾಸಾಗ್ರಪೀಡನಂ ಪ್ರಣವಾಭಿಧಾ । ವ.ಟೀ.- ಪ್ರಾಣಾಯಾಮಃ - ಕುಂಭಕೇ ವಿಹಿತತ್ವಾದಿತಿ ಶೇಷಃ । ಕಿಂ ಕೃತ್ವಾ? ರೇಚಯಿತ್ವಾ । ವಾಮತಃ ಶ್ವಾಸಸ್ಯ ಅಧೋ ವಿಸರ್ಜನಂ ಕೃತ್ವಾ। ದಕ್ಷಿಣತಃ ಶ್ವಾಸಸ್ಯ ಊರ್ಧ್ವವಿಸರ್ಜನಂ ಕೃತ್ವಾ ; ದಕ್ಷಿಣತೋ ರೇಚನಮ್, ವಾಮತಃ ಪೂರಣಮಿತಿ ವಾ । ಕುಂಭಕಃ = ಶ್ವಾಸನಿರೋಧಃ । ತ್ರಿರ್ದ್ವಾದಶಾವೃತೈಃ = ಷಟ್ತ್ರಿಂಶೈಃ, ದ್ವ್ಯೇಕ- ದ್ವಾದಶಕೇನ ವಾ । ಶಕ್ತ್ಯಭಾವೇ ದ್ವಿರ್ದ್ವಾದಶಕೇನ = ಚತುರ್ವಿಂಶೈಃ । ಏಕಾದ್ವಾದಶೈಃ । ಗಾಯತ್ರ್ಯಾ ದಶತಾರಕೈಃ ಓಂ ಭೂರಿತ್ಯಾರಭ್ಯ - ಸುವರೋಮಿತ್ಯಂತೈಃ ಗಾಯತ್ರ್ಯಾ ದಶಪ್ರಣ:ವೈಃ । ಟೀಕಾರ್ಥ- ಪ್ರಾಣಾಯಾಮವನ್ನು ತಿಳಿಸುತ್ತಾರೆ. 'ಕುಂಭಕೇ' ಎಂಬುದರ ನಂತರ 'ವಿಹಿತತ್ವಾತ್' ಎಂಬ ಪದವನ್ನು ತಿಳಿಯಬೇಕು. ಸುಷುಮ್ನಾನಾಡಿಯಲ್ಲಿ ವಾಯುನಿರೋಧವು ವಿಧಿಸಲ್ಪಟ್ಟ ಕಾರಣದಿಂದ ಎಂದರ್ಥ. ಏನು ಮಾಡಿ ಕುಂಭಕ ಮಾಡಬೇಕು? ಎಂದರೆ 'ರೇಚನ ಮಾಡಿ' ಎಂದು ಉತ್ತರ. ಮೂಗಿನ ಎಡಭಾಗದ ರಂಧ್ರದಿಂದ ಒಳಗಿರುವ ಗಾಳಿಯನ್ನು ಹೊರದಬ್ಬಿ, ಬಲಭಾಗದ ರಂಧ್ರದಿಂದ ಶುದ್ಧಗಾಳಿಯನ್ನು ಮೇಲಕ್ಕಳೆದು- ಕೊಂಡು (ಒಳತೆಗೆದುಕೊಂಡು, ಕುಂಭಕವನ್ನು ಮಾಡಬೇಕು ಎಂದರ್ಥ. ಅಥವಾ, ಬಲಭಾಗದ ಹೊಳ್ಳೆಯಿಂದ ಗಾಳಿಯನ್ನು ಹೊರಗೆ ಹಾಕಿ, ಎಡಭಾಗದ ಹೊಳ್ಳೆಯಿಂದ ಶುದ್ಧಗಾಳಿಯನ್ನು ಸೆಳೆದುಕೊಳ್ಳಬಹುದು. ಯಾವ ಕ್ರಮವನ್ನು ಅನುಸರಿಸಿರುತ್ತೇ- ವೆಯೋ ಹಾಗೆಯೇ ಮುಂದುವರೆಸಿಕೊಂಡು ಹೋಗಬೇಕು. ಶ್ಲೋಕದಲ್ಲಿರುವ ತ್ರಿರ್ಧ್ವಾದಶಾವೃತೈಃ ಎಂದರೆ ದ್ವಾದಶವನ್ನು ಮೂರರಿಂದ ಗುಣಿಸಿದರೆ ಬರುವಷ್ಟು ಎಂದರ್ಥ. ಅಂದರೆ 36 ಬಾರಿ ಅಥವಾ ದ್ವಿರ್ದ್ವಾದಶಕದಿಂದಲೂ, ಏಕದ್ವಾದಶಕದಿಂದಲು ಪ್ರಾಣಾಯಾಮ ಮಾಡಬಹುದು. ಇಪ್ಪತ್ತನಾಲ್ಕು ಬಾರಿ, ಹನ್ನೆರಡುಬಾರಿಯಾದರೂ ಓಂಕಾರವನ್ನು ಉಚ್ಚರಿಸುತ್ತಾ ಪ್ರಾಣಾಯಾಮ ಮಾಡಬಹುದು. ಶಕ್ತಿ ಇದ್ದವರು 36, ಅಶಕ್ತರಾದರೆ 24 ಅಥವಾ 12 ಬಾರಿ ಜಪಿಸ- ಬಹುದು. ಅಥವಾ ಹತ್ತು ಓಂಕಾರಗಳಿರುವ ಗಾಯತ್ರೀಯಿಂದಲಾದರೂ ಪ್ರಾಣಾಯಾಮ ವಿಹಿತವಾಗಿದೆ. ಓಂಕಾರದಿಂದ ಪ್ರಾಣಾಯಾಮ ಸನ್ನ್ಯಾಸಿಗಳಿಗಾದರೆ,ದಶೋಂಕಾರ ಗಾಯತ್ರೀಯಿಂದ ಗೃಹಸ್ಥರಿಗೆ. ದಶ೦ಕಾರಗಾಯತ್ರಿಯ ಸ್ವರೂಪವು ಹೀಗಿದೆ- 'ಓಂ(1) ಭೂಃ, ಓಂ(2) ಭುವಃ, ಓಂ(3)ಸ್ವಃ, ಓಂ(4) ಮಹಃ, ಓಂ(5) ಜನಃ, ಓಂ(6) ತಪಃ, ಓಂ(7) ಸತ್ಯಮ್, ಓಂ(8) ತತ್ಸವಿತುರ್ವರೇಣ್ಯಂ ಭರ್ಗೊ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ । ಓಂ(9) ಆಪೋ ಜ್ಯೋತೀರಸೋsಮೃತಂ ಬ್ರಹ್ಮ ಭೂರ್ಭುವಃ ಸ್ವರೋಮ್(10) ಎಂಬುದಾಗಿ. ಮುದ್ರೇಯಂ ಸರ್ವಪಾಪಘ್ನಾ ವಾನಪ್ರಸ್ಥಗೃಹಸ್ಥಯೋಃ ॥ ಪಾಪಪುರುಷವಿಸರ್ಜನೆ ಆದಾವೇವ ಜಪೇ ಕುರ್ಯಾತ್ ಶೋಷಣಂ ದಹನಂ ಪ್ಲುತಿಮ್ । ವಾಯ್ವಗ್ನಿವಾರುಣೈಃ ಬೀಜೈಃ ಧ್ಯಾತ್ವಾ ತನ್ಮಂಡಲೇ ಹರಿಮ್ ॥ ೬ ॥ ಅರ್ಥ- ಮಂತ್ರಜಪದ ಮೊದಲಲ್ಲೇ ಅಧಿಕಾರಿಯು ವಾಯು, ಅಗ್ನಿ, ವರುಣ ಬೀಜಾಕ್ಷರಗಳೆನಿಸಿದ ಯಂ, ರಂ, ವಂ ಬೀಜಾಕ್ಷರ- ಗಳ ಜಪದಿಂದ ಉದರ, ಹೃದಯ ಮತ್ತು ತಲೆಗಳಲ್ಲಿ ಶ್ರೀಹರಿ- ಯನ್ನು ಧ್ಯಾನಿಸಿ ಪಾಪಪುರುಷನ ಶೋಷಣೆ ದಹನ ಹಾಗೂ ಅಮೃತಪ್ಲಾವನವನ್ನು ಮಾಡಬೇಕು. ವ.ಟೀ. - ಅಯಮತ್ರ ಕ್ರಮಃ - (೧) ಭೂತೋಚ್ಚಾಟನಂ (೨)ಆಸನಶುದ್ಧಿ: (೩) ಗುರುನಮಸ್ಕಾರ: (೪)ವಾಯ್ವಗ್ನಿಬೀಜೈ: ಶೋಷಣದಹನಪ್ಲಾವನಾನಿ (೫)ಕರನ್ಯಾಸಶ್ಚ ಏತೈಃ ಬೀಜೈಃ ಕಾರ್ಯಃ । ಅನಂತರಂ ಮಾತೃಕಾನ್ಯಾಸಃ । ವಕ್ಷ್ಯಮಾಣ ಪ್ರಕಾರೇಣ ತತ್ತ್ವನ್ಯಾಸಃ । ಅನಂತರಮುಕ್ತನ್ಯಾಯೇನ ಪ್ರಣವೇನ ದಶತಾರಯುಕ್ತಗಾಯತ್ರ್ಯಾ ತತ್ತನಂತ್ರೇಣ ವಾ ಪ್ರಾಣಾಯಾಮಂ ಕೃತ್ವಾ ಅಂಗನ್ಯಾಸಮ್ ಅಕ್ಷರನ್ಯಾಸಂ ಚ ಕೃತ್ವಾ ಧ್ಯಾನಶ್ಲೋಕೋ ಕ್ತ ಪ್ರಕಾರೇಣ ಧ್ಯಾನಪೂರ್ವಕಂ ಜಪಮಾರಭೇತ್ ॥ ಟೀಕಾರ್ಥ- ಇಲ್ಲಿರುವ ಕ್ರಮ ಹೀಗೆ ತಿಳಿಯಬೇಕುಮೊದಲು ಭೂತೋಚ್ಚಾಟನೆಯನ್ನು ಮಾಡಿಕೊಳ್ಳಬೇಕು. ನಂತರ ಆಸನಶುದ್ಧಿ; ದ್ವಾದಶಗುರುಗಳ ನಮಸ್ಕಾರ ವಾಯು, ಅಗ್ನಿ, ವರುಣಬೀಜಾಕ್ಷರಗಳಿಂದ ಶೋಷಣ, ದಹನ, ಪ್ಲವನಗಳನ್ನು ಮಾಡಿಕೊಳ್ಳಬೇಕು. ಈ ಬೀಜಾಕ್ಷರಗಳಿಂದ ಕರನ್ಯಾಸವನ್ನು ಮಾಡಬೇಕು. ನಂತರ ಮಾತೃಕಾನ್ಯಾಸ, ಮುಂದೆ ಹೇಳುವ ರೀತಿ- ಯಿಂದ ತತ್ವನ್ಯಾಸವನ್ನು ಮಾಡಿಕೊಳ್ಳಬೇಕು. ಅನಂತರ ಹಿಂದೆ ಹೇಳಿದಂತೆ ಪ್ರಣವದಿಂದಾಗಲೀ, ದಶೋಂಕಾರ ಗಾಯತ್ರಿಯಿಂ- ದಾಗಲೀ, ಆಯಾಯಾ ಮಂತ್ರಗಳಿಂದಾಗಲೀ ಪ್ರಾಣಾಯಾಮ- ವನ್ನು ಮಾಡಿ,ಅಂಗನ್ಯಾಸ ಹಾಗೂ ಅಕ್ಷರನ್ಯಾಸಗಳನ್ನು ಮಾಡಿ, ಧ್ಯಾನಶ್ಲೋಕದಲ್ಲಿ ಹೇಳಿದ ರೀತಿಯಂತೆ ಆ ಧೈಯಮೂರ್ತಿ ಯನ್ನು ಧ್ಯಾನಿಸುತ್ತಾ ಜಪ ಮಾಡಬೇಕು.[^1] [^1]. ಆಸನಮಂತ್ರ ಪೃಥ್ವಿತಿಮಂತ್ರಸ್ಯ ಮೇರುಪೃಷ್ಠ ಋಷಿಃ । ಕೂರ್ಮೋ ದೇವತಾ । ಸುತಲಂ ಛಂದಃ । ಆಸನೇ ವಿನಿಯೋಗಃ । ಪೃಥ್ವಿ! ತ್ವಯಾ ಧೃತಾ ಲೋಕಾ ದೇವಿ! ತ್ವಂ ವಿಷ್ಣುನಾ ಧೃತಾ । ತ್ವಂ ಚ ಧಾರಯ ಮಾಂ ದೇವಿ ಪವಿತ್ರಂ ಕುರು ಚಾಸನಮ್ ॥ ಇತಿ । ಆಸನದೇವತಾಪ್ರಾರ್ಥನಾ ಮಂತ್ರ ಓಂ ಆಧಾರರೂಪಿಣ್ಯೈ ಶಕ್ತ್ಯೈ ನಮಃ । ಓಂ ಕುಂ ಕೂರ್ಮಾಯ ನಮಃ । ಓಂ ಮಂ ಮಂಡೂಕಾಯ ನಮಃ । ಓಂ ಕಂ ಕಾಲಾಗ್ನಿ ರುದ್ರಾಯ ನಮಃ । ಓಂ ವಂ ವಜ್ರಾಯ ನಮಃ । ಓಂ ವಂ ವರಾಹಾಯ ನಮಃ। ಓಂ ಶಂ ಶೇಷಾಯ ನಮಃ(?) । ಓಂ ಪಂ ಪೃಥಿವ್ಯೈ ನಮಃ । ಭೂತೋಚ್ಚಾಟನಮ್ - ಅಪಸರ್ಪಂತು ಯೇ ಭೂತಾಃ ಯೇ ಭೂತಾ ಭುವಿ ಸಂಸ್ಥಿತಾಃ । ಯೇ ಭೂತಾ ವಿಘ್ನಕರ್ತಾರಃ ತೇ ನಶ್ಯಂತು ಶಿವಾಜ್ಞಯಾ ಅಪಕ್ರಾಮಂತು ಯೇ ಭೂತಾಃ ಕ್ರೂರಾಶ್ಚೈವ ತು ರಾಕ್ಷಸಾಃ । ತೇಷಾಮಪ್ಯವಿರೋಧೇನ ಬ್ರಹ್ಮಕರ್ಮಸಮಾರಭೇ ॥ ಗುರುನಮಸ್ಕಾರಕ್ರಮ : ಸ್ಮೃತ್ವಾ ಗುರುಂ ಪೂರ್ವಗುರುಮಾದಿಮೂಲಗುರುಂ ತಥಾ । ದೇವತಾಂ ವಾಸುದೇವಂ ಚ ವಿದ್ಯಾಭ್ಯಾಸೀ ತು ಸಿದ್ಧಿಭಾಕ್ ॥ ಓಂ ಶ್ರೀಗುರುಭ್ಯೋ ನಮಃ । ಶ್ರೀಪರಮಗುರುಭ್ಯೋ ನಮಃ। ಶ್ರೀಮದಾನಂದತೀರ್ಥಭಗವತ್ಪಾದಗುರುಭ್ಯೋ ನಮಃ । ಶ್ರೀವೇದವ್ಯಾಸಾಯ ನಮಃ । ಶ್ರೀಭಾರತ್ಯೈ ನಮಃ। ಶ್ರೀಸರಸ್ವತೈ ನಮಃ । ಶ್ರೀವಾಯವೇ ನಮಃ । ಶ್ರೀಬ್ರಹ್ಮಣೇ ನಮಃ । ಶ್ರೀಮಹಾ(?)ಲಕ್ಷ್ಮೈ ನಮಃ । ಶ್ರೀನಾರಾಯಣಾಯ ನಮಃ । (ಏಕಾದಶಸ್ಥಾನೇ) ಉಪಾಸ್ಯದೇವತಾಯೈ ನಮಃ। ಶ್ರೀವಾಸುದೇವಾಯ ನಮಃ । ಪಾಪಪುರುಷವಿಸರ್ಜನೆ ಕ್ರಮ ಪಾಪಪುರುಷಚಿಂತನಕ್ರಮ : ಬ್ರಹ್ಮಹತ್ಯಾಶಿರಸ್ಕಂ ಚ ಸ್ವರ್ಣಸ್ತೇಯಭುಜದ್ವಯಮ್ । ಸುರಾಪಾನಹೃದಾ ಯುಕ್ತಂ ಗುರುತಲ್ಪಕಟಿದ್ವಯಮ್॥ ತತ್ಸಂಯೋಗಪದದ್ವಂದ್ವಮಂಗಪ್ರತ್ಯಂಗಪಾತಕಮ್ । ಉಪಪಾತಕರೋಮಾಣಂ ರಕ್ತಶ್ಮಶ್ರುವಿಲೋಚನಮ್ । ಖಡ್ಗಚರ್ಮಧರಂ ಕೃಷ್ಣಂ ಕುಕ್ಷೌ ವಾಮೇ ವಿಚಿಂತಯೇತ್ ॥ ಇತಿ ಪಾಪಪುರುಷಂ ಧ್ಯಾತ್ವಾ ತಂ ನಾಭಿದೇಶಂ ಆನೀಯ, ನಾಭೌ - 'ಷಟ್ಕೋಣಮಂಡಲಮಧ್ಯಸ್ಥೋ ನೀಲವರ್ಣೋ ವಾಯುಬೀಜ ವಾಚ್ಯಃ ಶಂಖಚಕ್ರಗದಾಯುಧಃ ಪ್ರದ್ಯುಮ್ನೋ ಭಗವಾನ್ ಮಚ್ಛರೀರಸ್ಥಂ ಪಾಪಪುರುಷಂ ವಾಯುನಾ ಶೋಷಯೇತ್' ಇತ್ಯುಕ್ತ್ವಾ ಪೂರಕರೀತ್ಯಾ ವಾಯುಮಾಪೂರಯೇತ್ । 'ಓಂ ಯಂ ಓಂ' ಇತಿ ವಾಯುಬೀಜಂ ಷಡ್ವಾರಂ ಜಪ್ತ್ವಾ ತಂ ಶುಷ್ಕಂ ಭಾವಯೇತ್ ॥ ತತಃ ತಂ ಹೃದಯದೇಶಮಾನೀಯ, " ಹೃದಯೇ ತ್ರಿಕೋಣ- ಮಂಡಲಮಧ್ಯಸ್ಥೋ ರಕ್ತವರ್ಣೋ ಅಗ್ನಿಸ್ಥಃ ಶಂಖಪದ್ಮಚಕ್ರಗದಾಯುಧಃ ಸಂಕರ್ಷಣೋ ಭಗವಾನ್ ಮಚ್ಛರೀರಸ್ಥಂ ಪಾಪಪುರುಷಂ ಅಗ್ನಿನಾ ನಿರ್ದಹೇತ್'' ಇತ್ಯುಕ್ತ್ವಾ 'ಓಂ ರಂ ಓಂ' ಇತಿ ಅಗ್ನಿಬೀಜಂ ದ್ವಾದಶವಾರಂ ಜಪ್ತ್ವಾ ತಂ ದಗ್ಧಂ ಭಾವಯೇತ್ ॥ ತದ್ಭಸ್ಮವಾಮನಾಸಾಪುಟೇನ ರೇಚಕಪ್ರಕಾರೇಣ ಬಹಿಃ ನಿಸ್ಸಾರ- ಯೇತ್ । ತತಃ ಶಿರಸಿ ವರ್ತುಲಮಂಡಲಮಧ್ಯಸ್ಥಃ ಭಗವಾನ್ ಶ್ವೇತ- ವರ್ಣೋ ವರುಣಸ್ಥೋ ವರುಣಬೀಜವಾಚ್ಯಃ ಶಂಖಚಕ್ರಪದ್ಮ ಗದಾಯುಧಃ ಶ್ರೀವಾಸುದೇವೋ ಭಗವಾನ್ ಮಚ್ಛರೀರಂ ಆಪಾದತಲಮಸ್ತಕಂ ವರುಣೇನ ಅಮೃತವೃಷ್ಟ್ಯಾ ಆಪ್ಲಾವಯೇತ್ ॥ 'ಓಂ ವಂ ಓಂ' ಇತಿ ಚತುರ್ವಿಂಶತಿವಾರಂ ಕುಂಭಕರೀತ್ಯಾ ಜಪೇತ್ । ಕರಶುದ್ಧಿ- ಮಣಿಬಂಧೇ ಪ್ರಕೋಷ್ಠೇ ಚ ಕೂರ್ಪರೇ ಹಸ್ತಸಂಧಿಷು । ತತ್ಪೃಷ್ಠಪಾರ್ಶ್ವಯೋಶ್ಚೈವ ಕರಶುದ್ಧಿರುದಾಹೃತಾ ॥ ಓಂ ಯಂ ಓಂ (ಮಣಿಬಂಧೇ) । ಓಂ ರಂ ಓಂ (ಪ್ರಕೋಷ್ಠೇ) । ಓಂ ವಂ ಓಂ (ಕೂರ್ಪರೇ) । ಓಂ ಯಂ ಓಂ (ಹಸ್ತಸಂಧಿಷು) । ಓಂ ರಂ ಓಂ (ತತ್ಪೃಷ್ಠೇ) । ಓಂ ವಂ ಓಂ (ಪಾರ್ಶ್ವಯೋಃ) । ತತ್ವನ್ಯಾಸಮಾತೃಕಾನ್ಯಾಸಗಳು- (ದೇವತಾಪ್ರತಿಮೆಗಳ ಪ್ರತಿಷ್ಠಾಪನೆ, ಪೂಜಾದಿಗಳಲ್ಲಿ ಪ್ರತಿಮೆ- ಯಲ್ಲಿ ಮೊದಲು ಮಾತೃಕಾನ್ಯಾಸವನ್ನು ಮಾಡಿ, ನಂತರ ತತ್ವನ್ಯಾಸವನ್ನು ಮಾಡಬೇಕು. ಪೂಜಕನು ವೈಷ್ಣವಮಂತ್ರ ಜಪಕಾಲದಲ್ಲಿ ನ್ಯಾಸ ಮಾಡಿಕೊಳ್ಳುವಾಗ ಮೊದಲು ತತ್ವನ್ಯಾಸ ನಂತರ ಮಾತೃಕಾನ್ಯಾಸಗಳನ್ನು ಮಾಡಿಕೊಳ್ಳಬೇಕು. ಪ್ರಮಾಣ - "ವೈಷ್ಣವೇಷು ಮಂತ್ರೇಷು ತತ್ವಾನಾಂ ನ್ಯಸನಂ ಪುರಾ । ತತಸ್ತು ಮಾತೃಕಾನ್ಯಾಸಂ ಕುರ್ಯಾದನ್ಯತ್ರ ಚಾನ್ಯಥಾ॥ '' ವಸುಧೇಂದ್ರತೀರ್ಥರು ಮಾತೃಕಾನ್ಯಾಸವನ್ನು ಮೊದಲು, ನಂತರ ತತ್ವನ್ಯಾಸವೆಂಬ ಪಕ್ಷವನ್ನು ಹಿಡಿಯಲು ಈ ಪ್ರಮಾಣವನ್ನೇ ಎತ್ತಿ ಹಿಡಿದಿದ್ದಾರೆ. ಇಲ್ಲಿ ಅನ್ಯತ್ರ = ದೇವಪೂಜಾದಿಗಳಲ್ಲಿ ಪ್ರತಿಮೆ- ಯಲ್ಲಿ ಎಂದರ್ಥ. ಅನ್ಯಥಾ = ಮಾತೃಕಾನ್ಯಾಸಂ ಪೂರ್ವಂ ಕೃತ್ವಾ ಪಶ್ಚಾತ್ ತತ್ವನ್ಯಾಸಃ ಎಂದರ್ಥ.) ತತ್ವನ್ಯಾಸ :- "ಓಂ ನಮೋ ನಾರಾಯಣಾಯ ಓಂ' ಎಂದು ಎಂಟು ಬಾರಿ ಮೂಲಮಂತ್ರದಿಂದ ಪ್ರಾಣಾಯಾಮ ಮಾಡಬೇಕು. ಅಂಗನ್ಯಾಸ - ಓಂ ಭೂಃ ಅಗ್ನ್ಯಾತ್ಮನೇ ಶ್ರೀಅನಿರುದ್ಧಾಯ ಹೃದಯಾಯ ನಮಃ। ಓಂ ಭುವಃ ವಾಯ್ವಾತ್ಮನೇ ಶ್ರೀಪ್ರದ್ಯುಮ್ನಾಯ ಶಿರಸೇ ಸ್ವಾಹಾ । ಓಂ ಸುವಃ ಸೂರ್ಯಾತ್ಮನೇ ಶ್ರೀಸಂಕರ್ಷಣಾಯ ಶಿಖಾಯೈ ವಷಟ್ । ಓಂ ಭೂರ್ಭುವಃಸ್ವಃ ಪ್ರಜಾಪತ್ಯಾತ್ಮನೇ ಶ್ರೀವಾಸುದೇವಾಯ ಕವಚಾಯ ಹುಮ್ ಓಂ ಸತ್ಯಂ ಶ್ರೀನಾರಾಯಣಾಯ ಅಸ್ತ್ರಾಯ ಫಟ್ ॥ ಓಂ ಭೂರ್ಭುವಃಸ್ವಃ ಓಂ ಇತಿ ದಿಗ್ಬಂಧಃ ॥ ಋಷ್ಯಾದಿನ್ಯಾಸ - ಏತೇಷಾಂ ತತ್ವಮಂತ್ರಾಣಾಂ ಅಂತರ್ಯಾಮಿ ಋಷಿಃ । ದೇವೀ ಗಾಯತ್ರೀ ಛಂದಃ । ಶ್ರೀಭಾರತೀರಮಣ- ಮುಖ್ಯಪ್ರಾಣಾಂತರ್ಗತ ಪ್ರಧಾನಾದಿರೂಪೀ ಶ್ರೀಲಕ್ಷ್ಮೀನಾರಾಯಣೋ ದೇವತಾ । ಹೃದಯೇ । ನ್ಯಾಸೇ ವಿನಿಯೋಗಃ ॥ ಪ್ರಧಾನೋಪಮವರ್ಣಾನಿ ದ್ವಿಭುಜಾನ್ಯಶೇಷತಃ । ಕೃತಾಂಜಲಿಪುಟಾನ್ಯೇವ ಪ್ರಧಾನಂ ತಂ ಹರಿಂ ಪ್ರತಿ ॥ ಓಂ ಪರಾಯ ಶಕ್ತಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಪ್ರತಿಷ್ಠಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಸಂವಿದಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಸ್ಫೂರ್ತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಪ್ರವೃತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಕಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ವಿದ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ। ಓಂ ಪರಾಯ ಮತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ। ಓಂ ಪರಾಯ ನಿಯತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಮಾಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಕಾಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ। ಓಂ ಪರಾಯ ಪುರುಷಾತ್ಮನೇ ಬ್ರಹ್ಮವಾಯುಭ್ಯಾಂ ನಮಃ । (ಈ ಮೇಲಿನ ಮಂತ್ರಗಳಿಂದ ಹೃದಯದಲ್ಲಿ ಮಾಲಾಕಾರವಾಗಿ ಕೈಯಲ್ಲಿ ತುಳಸಿದಳ ಹಿಡಿದುನ್ಯಾಸ ಮಾಡಬೇಕು) ಓಂ ಪರಾಯ ಅವ್ಯಕ್ತಾತ್ಮನೇ ಬ್ರಹ್ಮಾಣೀ ಭಾರತೀಭ್ಯಾಂ ನಮಃ ।(ಬಲಭುಜ) ಓಂ ಪರಾಯ ಮಹದಾತ್ಮನೇ ಬ್ರಹ್ಮವಾಯುಭ್ಯಾಂ ನಮಃ। (ಎಡಭುಜ) ಓಂ ಪರಾಯ ಅಹಂಕಾರಾತ್ಮನೇ ಗರುಡಶೇಷರುದ್ರೇಭ್ಯೋ ನಮಃ। (ಬಲತೊಡೆ) ಓಂ ಪರಾಯ ಮನ ಆತ್ಮನೇ ಸ್ಕಂದೇಂದ್ರಾಭ್ಯಾಂ ನಮಃ। (ಎಡತೊಡೆ) ಕಲಶಾರ್ಚನೆ - ಭಗವದ್ರೂಪಗಳು ಏಕಪಂಚಾಶದ್ವರ್ಣಾನಾಂ ಚತುರ್ವಿಂಶತಿಮೂರ್ತಯಃ । ಆತ್ಮಾದ್ಯಾ ವಾಸುದೇವಾದ್ಯಾ ವಿಶ್ವಾದ್ಯಾ ಮತ್ಸ್ಯಕಚ್ಛಪೌ ॥ ೭ ॥ ಕೋಲೋ ನೃಸಿಂಹಃ ಸವಟುರ್ಜಾಮದಗ್ನ್ಯರಘೂದ್ವಹೌ । ವಾಸಿಷ್ಠಯಾದವೌ ಕೃಷ್ಣಾವಾತ್ರೇಯೋ ಬುದ್ಧಕಲ್ಕಿನೌ ೮ ॥ ॥ ಶಿಂಶುಮಾರತಿ ಶತಂ ಕಲಾಃ ಕಲಶನಾಮಕಾಃ । ಏತಾಭಿಃ ಸಹಿತಾಂ ಮೂಲಮೂರ್ತಿಂ ಕುಂಭೋದಕೇ ಸುಧೀಃ ॥ ೯ ॥ ಅರ್ಥ- ದೇವಪೂಜೆಯ ಕಲಶದಲ್ಲಿ ಆವಾಹಿಸಬೇಕಾದ ಭಗವದ್ರೂಪಗಳು ಓಂ ಪರಾಯ ಶ್ರೋತ್ರಾತ್ಮನೇ ದಿಗ್ದೇವತಾಭ್ಯೋ ನಮಃ । (ಬಲಗೈ ಹೆಬ್ಬೆರಳು) ಓಂ ಪರಾಯ ತ್ವಗಾತ್ಮನೇ ಪ್ರಾಣಾಯ ನಮಃ । (ಬಲಗೈತೊರ ಬೆರಳು) ಓಂ ಪರಾಯ ಚಕ್ಷುರಾತ್ಮನೇ ಸೂರ್ಯಾಯ ನಮಃ (ಬಲಗೈ ಮಧ್ಯಬೆರಳು) ಓಂ ಪರಾಯ ಜಿಹ್ವಾತನೇ ವರುಣಾಯ ನಮಃ (ಬಲಗೈ ಅನಾಮಿಕಾಬೆರಳು) ಓಂ ಪರಾಯ ಘ್ರಾಣಾತ್ಮನೇ ಅಶ್ವಿಭ್ಯಾಂ ನಮಃ (ಬಲಗೈಕಿರು- ಬೆರಳು) ಓಂ ಪರಾಯ ವಾಗಾತ್ಮನೇ ವಹ್ನಯೇ ನಮಃ ।(ಎಡಗೈ ಹೆಬ್ಬೆರಳು) ಓಂ ಪರಾಯ ಪಾಣ್ಯಾತ್ಮನೇ ದಿಕ್ಷಾಯ ನಮಃ । (ಎಡಗೈತೊರ- ಬೆರಳು) ಓಂ ಪರಾಯ ಪಾದಾತ್ಮನೇ ಜಯಂತಾಯ ನಮಃ (ಎಡಗೈ ಮಧ್ಯಬೆರಳು) ಓಂ ಪರಾಯ ಪಾಯ್ವಾತನೇ ಮಿತ್ರಾಯ ನಮಃ । (ಎಡಗೈ ಅನಾಮಿಕಾ ಬೆರಳು) ಓಂ ಪರಾಯ ಉಪಸ್ಥಾತ್ಮನೇ ಮನವೇ ನಮಃ (ಎಡಗೈಕಿರುಬೆರಳು) ಓಂ ಪರಾಯ ಶಬ್ದಾತ್ಮನೇ ಬೃಹಸ್ಪತಿ ಪ್ರಾಣಾಭ್ಯಾಂ ನಮಃ । (ಬಲಪಾದದ ಹೆಬ್ಬೆರಳು) ಓಂ ಪರಾಯ ಸ್ಪರ್ಶಾತ್ಮನೇ ಅಪಾನಾಯ ನಮಃ । (ಬಲಪಾದದ ತೋರಬೆರಳು) ಓಂ ಪರಾಯ ರೂಪಾತ್ಮನೇ ವ್ಯಾನಾಯ ನಮಃ (ಬಲಪಾದದ ಮಧ್ಯದ ಬೆರಳು) ಓಂ ಪರಾಯ ರಸಾತ್ಮನೇ ಉದಾನಾಯ ನಮಃ ।(ಬಲಪಾದದ ಬೆರಳು) ಓಂ ಪರಾಯ ಗಂಧಾತ್ಮನೇ ಸಮಾನಾಯ ನಮಃ (ಬಲಪಾದದ ಕಿರುಬೆರಳು) ಓಂ ಪರಾಯ ಆಕಾಶಾತ್ಮನೇ ಮಹಾಗಣಪತೆಯೇ ನಮಃ । (ಎಡಪಾದದ ಹೆಬ್ಬೆರಳು) ಓಂ ಪರಾಯ ವಾಯ್ವಾತ್ಮನೇ ಪ್ರವಹ ವಾಯವೇ ನಮಃ । (ಎಡಪಾದದ ಎರಡನೆಬೆರಳು) ಓಂ ಪರಾಯ ತೇಜ ಆತ್ಮನೇ ವಹ್ನಯೇ ನಮಃ (ಎಡಪಾದದ ಮಧ್ಯಬೆರಳು) ಓಂ ಪರಾಯ ಅಬಾತ್ಮನೇ ವರುಣಾಯ ನಮಃ (ಎಡಪಾದದ ನಾಲ್ಕನೆಬೆರಳು) ಓಂ ಪರಾಯ ಪೃಥಿವ್ಯಾತ್ಮನೇ ಶನೈಶ್ಚರಧರಾಭ್ಯಾಂ ನಮಃ । (ಎಡಪಾದದ ಕಿರುಬೆರಳು) ಮಾತೃಕಾನ್ಯಾಸೋಕ್ತ ಅಜಾದಿ-ಕ್ಷಕಾರಾಂತ 51 ಅಕ್ಷರಗಳಿಂದ ಪ್ರತಿಪಾದ್ಯಮೂರ್ತಿಗಳು; ಕೇಶವಾದಿ 24 ಮೂರ್ತಿಗಳು (51+24=75); ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ ಎಂಬ ನಾಲ್ಕು ಮೂರ್ತಿಗಳು (75+4=79); ವಾಸುದೇವ, ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂಬ ನಾಲ್ಕು ಮೂರ್ತಿಗಳು (79+4=83); ವಿಶ್ವ, ತೈಜಸ, ಪ್ರಾಜ್ಞ, ತುರೀಯ ಎಂಬ ನಾಲ್ಕು ಮೂರ್ತಿಗಳು (83+4=87); ಮತ್ಸ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ವೇದವ್ಯಾಸ, ಶ್ರೀಕೃಷ್ಣ, ದತ್ತಾತ್ರೇಯ, ಬುದ್ಧ, ಕಲ್ಕಿ, ಶಿಂಶುಮಾರಗಳೆಂಬ 13ರೂಪಗಳು (87+13=100). ಎಂದರೆ ಒಟ್ಟು 100ರೂಪಗಳು. ಇವುಗಳು ಕಲಶದಲ್ಲಿ ಸನ್ನಿಹಿತ ವಾಗಿದ್ದು ಕಲಶನಾಮಕವಾಗಿವೆ. ಈ ನೂರು ಮೂರ್ತಿಗಳಿಂದ ಕೂಡಿರುವ ಮೂಲರೂಪಿ ಶ್ರೀಮನ್ನಾರಾಯಣನನ್ನು ಕುಂಭೋ- ದಕದಲ್ಲಿ ಆವಾಹಿಸಬೇಕು. ಎಲ್ಲಿ ಕಲಶಪೂಜೆ ಮಾಡ ಬೇಕೆಂದು ವಿಧಿಸುವರೋ ಅಲ್ಲಿ ಅಜಾದಿ-ಶಿಂಶುಮಾರಾಂತ ನೂರು ಕಲೆ- ಗಳನ್ನು ಆವಾಹಿಸಬೇಕು. ಸನ್ನ್ಯಾಸಾದಿ ದೀಕ್ಷೆಯ ಅಂಗವಾಗಿ ವಿಹಿತಕಲಶಪೂಜೆಮಾಡುವಾಗಲೂ ನೂರು ಕಲಶದೇವತೆ- ಗಳನ್ನು ಆವಾಹಿಸಬೇಕು ಎಂದು ಭಾವ[^1]. [^1]. ವಿಶೇಷಾಂಶ - ದೇವಪೂಜೆಯಲ್ಲಿ ಸ್ನಾನೀಯಕಲಶ, ಪೂರ್ಣಕುಂಭ ಎಂಬ ಎರಡು (ಸ್ನಾನಕ್ಕೆ ಸಂಬಂಧಪಟ್ಟ?) ಕಲಶಗಳಿವೆ. ಸ್ನಾನೀಯ- ಕಲಶದಲ್ಲಿ ಅಜಾದಿಶಿಂಶುಮಾರವರೆಗಿನ ನೂರುರೂಪಗಳನ್ನು ಕ್ರಮವಾಗಿ ಆವಾಹಿಸಬೇಕು. ಪ್ರಮಾಣ - ಆಹೂಯ ಪೂಜಯೇದೇತಾಃ ಸ್ನಾನೀಯಕಲಶೇ ಬುಧಃ । - ಪಂಚರಾತ್ರ ಪೂರ್ಣಕುಂಭದಲ್ಲಾದರೂ ಅಜಾದಿನೂರು ಮೂರ್ತಿಗಳೊಂದಿಗೆ ಉದ್ಯದ್ ಭಾಸ್ವತ್ ಎಂಬಲ್ಲಿ ಹೇಳಿದ ಲಕ್ಷಣಗಳುಳ್ಳ ಮೂಲ- ಮೂರ್ತಿಯನ್ನು ಆವಾಹಿಸಬೇಕು. 'ಏತಾಭಿಃ ಸಹಿತಾಂ ಮೂಲಮೂರ್ತಿಂ ಕುಂಭೋದಕೇ' ಎಂದು ವಿಶೇಷವಾಗಿ ತಂತ್ರಸಾರದಲ್ಲಿ ಹೇಳಿದೆ. ಆದುದರಿಂದ ನೂರೊಂ- ದು ಮೂರ್ತಿಗಳನ್ನು ಕುಂಭೋದಕದಲ್ಲಿ ಆವಾಹಿಸಬೇಕು. ಆವಾಹನೆಯನ್ನು ಮಾಡುವಾಗ ಓಂ ಶಿಂಶುಮಾರಾಯ ನಮಃ; ಕಲ್ಕಿನೇ ನಮಃ, ಬುದ್ಧಾಯ ನಮಃ, ದತ್ತಾತ್ರೇಯಾಯ ನಮಃ, ಕೃಷ್ಣಾಯ ನಮಃ, ವೇದವ್ಯಾಸಾಯ ನಮಃ, ರಾಮಾಯ ನಮಃ, ಪರಶುರಾಮಾಯ ನಮಃ, ವಾಮನಾಯ ನಮಃ, ನರಸಿಂಹಾಯ ನಮಃ, ವರಾಹಾಯ, ಕೂರ್ಮಾಯ, ಮತ್ಸ್ಯಾಯ, ತುರೀಯಾಯ, ಪ್ರಾಜ್ಞಾಯ, ತೈಜಸಾಯ, ವಿಶ್ವಾಯ ಸಂಕರ್ಷಣಾಯ, ವಾಸುದೇವಾಯ, ಪ್ರದ್ಯುಮ್ನಾಯ, ಅನಿರುದ್ಧಾಯ ವ.ಟೀ. - ಪೂಜಾಕಾಲೇ ಧ್ಯಾನಸ್ಯ ಕರ್ತವ್ಯತಾಜ್ಞಾಪನಾಯ ಸಂಕಲಯ್ಯ ಕಥನಮ್ । ಏಕಪಂಚಾಶದ್ವರ್ಣಾನಾಂ ಮೂರ್ತಯೋಃ ಅಜಾದ್ಯಾಃ । ಚತುರ್ವಿಂಶತಿಮೂರ್ತಯಃ ಕೇಶವಾದ್ಯಾಃ । ಆತ್ಮಾದ್ಯಾಃ ಆತ್ಮಾಂತರಾತ್ಮಪರಮಾತ್ಮಜ್ಞಾನಾ- ತ್ಮಾನಃ । ವಾಸುದೇವ-ಸಂಕರ್ಷಣ- ಪ್ರದ್ಯುಮ್ನ- ಅನಿರುದ್ಧಾಃ । ವಿಶ್ವಾದ್ಯಾಃ = ವಿಶ್ವತೈಜಸಪ್ರಾಜ್ಞತುರ್ಯಾಃ । ಮತ್ಸ್ಯಾದಿ ಶಿಂಶುಮಾರಾಂತಾಃ ಏಕಶತಮ್ ॥ ಟೀಕಾರ್ಥ - ಪೂಜೆಯ ಕಾಲದಲ್ಲಿ ಕಲಶಾದಿಮೂರ್ತಿಗಳ ಧ್ಯಾನವೂ ಆವಶ್ಯಕವೆಂದು ತಿಳಿಸಲು ನೂರುಮೂರ್ತಿಗಳನ್ನು ಒಂದೆಡೆ ಶ್ರೀಮದಾಚಾರ್ಯರು ಸಂಗ್ರಹಿಸಿ ತಿಳಿಸಿದ್ದಾರೆ. ಏಕಪಂಚಾಶದ್ಮೂರ್ತಿಗಳೆಂದರೆ ಮಾತೃಕಾನ್ಯಾಸದಲ್ಲಿ ಹೇಳಿರುವ ಅಜಾದಿ- ನರಸಿಂಹಾಂತ 51. ಚತುರ್ವಿಂಶತಿ ಮೂರ್ತಿ ಗಳೆಂದರೆ ಕೇಶವ, ನಾರಾಯಣರಿಂದ ಜ್ಞಾನಾತ್ಮನೇ, ಪರಮಾತ್ಮನೇ, ಅಂತರಾತ್ಮನೇ, ಆತ್ಮನೇ,ಕೃಷ್ಣಾಯ, ಹರಯೇ, ಉಪೇಂದ್ರಾಯ, ಜನಾರ್ದನಾಯ, ಅಚ್ಯುತಾಯ, ನಾರಸಿಂಹಾಯ, ಅಧೋಕ್ಷಜಾಯ, ಪುರುಷೋತ್ತಮಾಯ, ಅನಿರುದ್ಧಾಯ, ಪ್ರದ್ಯುಮ್ನಾಯ, ವಾಸುದೇವಾಯ, ಸಂಕರ್ಷಣಾಯ, ದಾಮೋದರಾಯ, ಪದ್ಮನಾಭಾಯ, ಹೃಷಿಕೇಶಾಯ, ಶ್ರೀಧರಾಯ, ವಾಮನಾಯ, ತ್ರಿವಿಕ್ರಮಾಯ, ಮಧುಸೂದನಾಯ,ಶ್ರೀವಿಷ್ಣುವೇ, ಗೋವಿಂದಾಯ, ಮಾಧವಾಯ, ನಾರಾಯಣಾಯ, ಕೇಶವಾಯ,ನರಸಿಂಹಾಯ, ಲಾಲುಕಾಯ, ಹಂಸಾಯ, ಸಾರಾತ್ಮನೇ, ಷಡ್ಗುಣಾಯ, ಶಾಂತ- ಸಂವಿದೇ, ವರಾಯ, ಲಕ್ಷ್ಮೀಪತಯೇ, ರಾಮಾಯ, ಯಜ್ಞಾಯ । ಮನವೇ, ಭಗಾಯ, ಬಲಿನೇ, ಫಲಿನೇ, ಪರಾಯ । ನಮ್ಯಾಯ, ಧನ್ವನೇ, ದಂಡಿನೇ, ಥಬಾಯ, ತಾರಾಯ । ಣಾತ್ಮನೇ, ಢರಿಣೇ, ಡರಕಾಯ, ಠಳಕಾಯ, ಟಂಕಿನೇ । ಞಮಾಯ, ಝಾಟಿತಾರಯೇ, ಜನಾರ್ದನಾಯ, ಛಂದೋಗಮ್ಯಾಯ, ಚಾರ್ವಂಗಾಯ । ಙಸಾರಾಯ, ಘರ್ಮಾಯ, ಗರುಡಾಸನಾಯ, ಖಪತಯೇ, ಕಪಿಲಾಯ । ಅರ್ಧಗರ್ಭಾಯ, ಅಂತಾಯ, ಔರಸಾಯ, ಓಜೋಭೃತೇ, ಐರಾಯ, ಏಕಾತ್ಮನೇ, ಲೄಜಯೇ,ಲೃಶಾಯ, ಋಘಾಯ, ಋತುಂಭರಾಯ, ಊರ್ಜಾಯ, ಉಗ್ರಾಯ, ಈಶಾಯ, ಇಂದ್ರಾಯ,ಆನಂದಾಯ, ಓಂ ಅಜಾಯ ನಮಃ ॥ ಹೀಗೆ ವ್ಯುತ್ಕ್ರಮದಿಂದ ಆವಾಹಿಸಬೇಕು. ಪ್ರಮಾಣ ಸತಾರಂ ಶಿಂಶುಮಾರಾದ್ಯಂ ಪ್ರತಿಲೋಮಂ ಕಲಾಶತಮ್ II' - ಯೋಗದೀಪಿಕಾ (೧/೩೫) ಯತಿಗಳಾದರೋ ಸ್ನಾನೀಯಕಲಶದಲ್ಲಿ ನಾಲ್ಕು ದಿಕ್ಕಿಗೂ ಗಂಧಹಚ್ಚಿ, ಮಾತೃಕಾನ್ಯಾಸ ಮೊದಲು ಮಾಡಿ, ತತ್ತ್ವನ್ಯಾಸ ವನ್ನು ಪ್ರತಿಲೋಮಕ್ರಮದಿಂದ ಮಾಡಬೇಕು. ಕುಂಭೋದಕದಲ್ಲಾದರೋ ಅನಿರುದ್ಧಾದಿಗಳಿಂದ ಗಂಧಹಚ್ಚಿ ತತ್ತ್ವನ್ಯಾಸ ಹಾಗೂ ಮಾತೃಕಾನ್ಯಾಸ ಮಾಡಬೇಕು. ಪ್ರಾರಂಭಿಸಿ ಶ್ರೀಕೃಷ್ಣಮೂರ್ತಿಪರ್ಯಂತವಿರುವ 24ಮೂರ್ತಿ- ಗಳು. ಆತ್ಮಾದ್ಯಾಃ ಎಂದರೆ ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮವೆಂಬ ನಾಲ್ಕುರೂಪಗಳು. ವಾಸುದೇವಾದ್ಯಾಃ ಎಂದರೆ ವಾಸುದೇವ-ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧಮೂರ್ತಿಗಳು. ವಿಶ್ವಾದ್ಯಾಃ ಎಂದರೆ ವಿಶ್ವ-ತೈಜಸ-ಪ್ರಾಜ್ಞ-ತುರೀಯ ಎಂಬ ನಾಲ್ಕು ಮೂರ್ತಿಗಳು, ಮತ್ಸ್ಯ ಮೊದಲಾಗಿ ಶಿಂಶುಮಾರಾಂತ- ವಾಗಿರುವ 13ಮೂರ್ತಿಗಳು; ಒಟ್ಟು ಒಂದು ನೂರು ಮೂರ್ತಿಗಳು. ದೀಕ್ಷಾವಿಧಿ ಪೂರ್ವೋಕ್ತವಿಧಿನಾಭ್ಯರ್ಚ್ಯ ಪ್ರತಿಮಾಂ ಶಿಷ್ಯಮೇವ ವಾ। ಸ್ನಾಪಯೇತ್ ಪೂರ್ವಮರ್ಚಾಯಾಂ ಜಪೋಽನೂನಃ ಸಹಸ್ರತಃ ॥ ೧೦ ॥ ಅರ್ಥ- ಈ ಹಿಂದೆ ಹೇಳಿದಂತೆ ಕಲಶದಲ್ಲಿ ಪೀಠಪೂಜೆ, ಆವರಣದೇವತಾ ಪೂಜೆ ಸಹಿತ ಅರ್ಘ್ಯಾದಿ ಷೋಡಶೋಪಚಾರ ದಿಂದ ಕಲಶವನ್ನು ಪೂಜಿಸಿ, ಹೀಗೆ ಸಂಸ್ಕಾರದಿಂದ ಪವಿತ್ರವಾದ ಆ ಕಲಶಜಲದಿಂದ ಪ್ರತಿಮೆಗೆ ಅಭಿಷೇಕಿಸಬೇಕು. ವೈಷ್ಣವದೀಕ್ಷೆ- ಯನ್ನು ಹೊಂದುವ ಹಾಗೂ ಮಂತ್ರಸ್ವೀಕಾರ ಮಾಡಬೇಕಾದ ಶಿಷ್ಯನಿಗೂ ಗುರುವು ದೀಕ್ಷೆಗಾಗಿ ಇದೇರೀತಿ ಅಭಿಷೇಕಿಸಬೇಕು. ಹೊಸ ಪ್ರತಿಮೆಗಳಿಗೆ ಅಭಿಷೇಕ ಮಾಡುವ ಮೊದಲು ಒಂದು ಸಾವಿರಕ್ಕೆ ಕಡಿಮೆಯಾಗದಂತೆ ಮೂಲಮಂತ್ರವನ್ನುಜಪಿಸಬೇಕು. ವ.ಟೀ. - ಸ್ನಾನಾತ್ ಪೂರ್ವ೦ ಸಹಸ್ರತೋ ಅನೂನಃ ಜಪಃ । ಶಿಷ್ಯಸ್ಯ ಸನ್ನ್ಯಾಸದೀಕ್ಷಾ ಸ್ನಾನಾನಂತರಂ ಚ ಮೂಲಮಂತ್ರಸ್ಯ ಪ್ರಣವಾಷ್ಟಾಕ್ಷರರೂಪ ತತ್ತನ್ಮೂರ್ತಿಮಂತ್ರಸ್ಯ ಚಾಕ್ಷರಾಂಗ- ನ್ಯಾಸಃ ಕರ್ತವ್ಯಃ ॥ ಟೀಕಾರ್ಥ- ಪ್ರತಿಮೆಗೆ ಅಭಿಷೇಕಮಾಡುವ ಮೊದಲು ಹೊಸದಾಗಿ ಪ್ರತಿಷ್ಠೆ ಮಾಡುವ ಪ್ರತಿಮೆಯಾದರೆ ಪ್ರತಿಮೆಯನ್ನು ಮುಟ್ಟಿ- ಕೊಂಡು ಸಾವಿರಕ್ಕೆ ಕಡಿಮೆಯಿಲ್ಲದಂತೆ ಮೂಲಮಂತ್ರವನ್ನು ಜಪಿಸಬೇಕು. ಪ್ರತಿಷ್ಠಿತವಾದ ಪ್ರತಿಮೆಯಲ್ಲಾದರೆ ಯಥಾಶಕ್ತಿ ಜಪಿಸಬೇಕು. ಸ್ನಾನಾನಂತರವೂ ಪ್ರತಿಮೆಯಲ್ಲಿ ಪ್ರಣವಾಷ್ಟಾಕ್ಷರ ಹಾಗೂ ಆಯಾಯ ಮೂರ್ತಿಗಳ ಮಂತ್ರಗಳನ್ನು, ಆಯಾಯ ಅಂಗಗಳಲ್ಲಿ ತತ್ತ್ವನ್ಯಾಸಮಾತೃಕಾನ್ಯಾಸಗಳನ್ನೂ ಮಾಡಬೇಕು. ಸನ್ನ್ಯಾಸದೀಕ್ಷೆಯನ್ನು ಹೊಂದಬೇಕಾದ ಶಿಷ್ಯನಿಗೆ ಕಲಶೋದಕ- ದಿಂದ ಅಭಿಷೇಕ ಮಾಡಿ ನಂತರ ಮೂಲಮಂತ್ರವನ್ನು ಯಥಾ- ಶಕ್ತಿ ಜಪಿಸಬೇಕು. [^1]. ವಿಶೇಷಾಂಶ - ಕಲಶೋದಕದಿಂದ ಉತ್ಸವ - ಪರ್ವಕಾಲಾದಿವಿಶೇಷ ಸಂದರ್ಭ- ದಲ್ಲಿ ಪ್ರತಿಮೆಯನ್ನು ಮುಟ್ಟಿ ಸಾವಿರ ಮೂಲಮಂತ್ರಸ್ಯ ಚಾಂಗಾನಾಂ ನ್ಯಾಸಃ ಸ್ನಾನಾದನಂತರಮ್ । ಪ್ರತಿಮಾಯಾಂ ಸನ್ನಿಧಿಕೃಚ್ಛಿಷ್ಯೇ ಮಾಹಾತ್ಮ್ಯಕೃದ್ಭವೇತ್ ॥ ೧೧ ॥ ಅರ್ಥ - ಹೀಗೆ ಪೂಜಾಪ್ರತಿಮೆಗೂ, ಪ್ರತಿಷ್ಠಿತ ಹಾಗೂ ಪ್ರತಿಷ್ಠಾಪಿ- ಸಲ್ಪಡುವ ಪ್ರತಿಮೆಗಳಿಗೂ ಕಲಶೋದಕದಿಂದ ಅಭಿಷೇಕಮಾಡ ಬೇಕು. ಹಾಗೆಯೇ ಸನ್ನ್ಯಾಸ ದೀಕ್ಷೆಹೊಂದಲಿರುವ ಶಿಷ್ಯನಿಗೂ ಕಲಶೋದಕದಿಂದ ಅಭಿಷೇಕ ಮಾಡಬೇಕು. ಸ್ನಾನಾನಂತರ ಪ್ರತಿಮೆ ಹಾಗೂ ಶಿಷ್ಯನ ಅಂಗಗಳಲ್ಲಿ ಅಕಾರಾದಿ ಅಕ್ಷರನ್ಯಾಸ ತತ್ವನ್ಯಾಸಗಳನ್ನೂ ಮಾಡಬೇಕು. ಇದರಿಂದಾಗಿ ಪ್ರತಿಮೆಯಲ್ಲಿ ಸನ್ನಿಧಾನವುಂಟಾಗಿ ಭಗವಂತನು ಅನುಗ್ರಹೋನ್ಮುಖನಾಗು- ವನು. ಶಿಷ್ಯನಲ್ಲಿ ಭಕ್ತಿಜ್ಞಾನಾದಿಮಹತ್ವವುಂಟಾಗುತ್ತದೆ. ವ.ಟಿ. - ತತ್ತತ್ ಫಲಮಾಹ - ಪ್ರತಿಮಾಯಾಮಿತ್ಯಾದಿನಾ ॥ ಟೀಕಾರ್ಥ - ಹೀಗೆ ಅಭಿಷೇಕ, ಅಂಗನ್ಯಾಸಾದಿಗಳಿಂದ ಲಭಿಸುವ ಫಲವನ್ನು ಪ್ರತಿಮಾಯಾಂ ಇತ್ಯಾದಿಗಳಿಂದ ಹೇಳುವರು.[^1] ಮೂಲಮಂತ್ರಜಪಿಸಿ ಅಭಿಷೇಕವನ್ನು ಮಾಡಿ ನಂತರವೂ ಯಥಾಶಕ್ತಿ ಮೂಲಮಂತ್ರ, ಪ್ರಣವ, ಆಯಾಯಾ ಮೂರ್ತಿ- ಮಂತ್ರಗಳನ್ನೂ ಜಪಿಸಬೇಕು. ಹಾಗೂ ಪ್ರತಿಮೆಗಳ ಅಂಗೋ- ಪಾಂಗಗಳಲ್ಲಿ ತತ್ತ್ವನ್ಯಾಸ ಮಾತೃಕಾನ್ಯಾಸಗಳನ್ನೂಮಾಡಬೇಕು. ಅಭಿಷೇಕಾತ್ ಪುರಾ ವಾಪಿ ಪಶ್ಚಾದ್ವಾ ಪರಮಾತ್ಮನಿ । ತತ್ವನ್ಯಾಸಾದಿಧ್ಯಾನಾಂತಂ ಕೃತ್ವಾ ಪೂಜಾಂ ಸಮಾಚರೇತ್ ॥ - ಪದ್ಯಮಾಲಾ ೭೯ 'ಅರ್ಚಾಯಾಮ್' ಎಂದು ವಿಶೇಷವಾಗಿ ಹೇಳಿದ್ದರಿಂದ ಸನ್ನ್ಯಾಸ ದೀಕ್ಷೆಯನ್ನು ಹೊಂದುವ ಶಿಷ್ಯನಿಗೆ ಅಭಿಷೇಕಕ್ಕೆ ಮೊದಲು ಸಾವಿರಜಪ ವಿಧಿಸಿರುವುದಿಲ್ಲ 'ಶಿಷ್ಯೇ ತು ಅಭಿಷೇಕಾತ್ಪೂರ್ವಂ ನ ಜಪೋ ಅಪೇಕ್ಷಿತಃ' – ತತ್ವಕಣಿಕಾ; ಅಥವಾ, 'ಅರ್ಚಾಯಾಮ್' ಎಂಬುದನ್ನು ಉಪಲಕ್ಷಣಯಾ ಇಟ್ಟುಕೊಂಡು ಶಿಷ್ಯನಲ್ಲಿಯೂ ಅಭಿಷೇಕಕ್ಕೆ ಮೊದಲು ಹಾಗೂ ಅನಂತರವೂ ಯಥಾಶಕ್ತಿ ಮೂಲಮಂತ್ರಜಪವನ್ನು ಮಾಡ- ಬಹುದು ಎಂದು ಛಲಾರೀಯ ವ್ಯಾಖ್ಯಾನದಲ್ಲಿ ಹೇಳಿದ್ದಾರೆ. "ಯದ್ವಾ, ಅರ್ಚಾಯಾಮಿತ್ಯುಪಲಕ್ಷಣಮ್ ! ಶಿಷ್ಯೇಽಪಿ ಪ್ರತಿಮಾವತ್ ಜಪಾದಿಸರ್ವಂ ಕಾರ್ಯಂ'' [^1]. ವಿಶೇಷಾಂಶ - ಶಿಷ್ಯನಿಗೆ ದೀಕ್ಷೆ ಕೊಡುವಾಗ ಮಾಡುವ ಕಲಶಪೂಜೆಯಲ್ಲಿ ಸನ್ನ್ಯಾಸಿಗಳು ತಾವು ನಾಲ್ಕೂ ವೇದಗಳ ಆದ್ಯಂತ ಶ್ಲೋಕ(ಮಂತ್ರ)ಗಳನ್ನು ಸನ್ನಿಧಾನವಿಶೇಷಕ್ಕಾಗಿ ಪಠಿಸಬೇಕು. ದೀಕ್ಷಿತನಿಗೆ ಅಭಿಷೇಕಮಾಡುವಾಗಲೂ ಮೊದಲು ಪುರೋಹಿತರೇ ಕಲಶೋದಕದಿಂದ ಪ್ರೋಕ್ಷಿಸುವರು. ನಂತರ ಸನ್ನ್ಯಾಸನೀಡುವ ಗುರುಗಳೂ ಪ್ರೋಕ್ಷಿಸುತ್ತಾರೆ. ಇದಾದ ಮೇಲೆ ಅಬ್‌ಲಿಂಗಮಂತ್ರಕಲಶಮಹಿಮೆ ಕಲಶಃ ಕೀರ್ತಿಮಾಯುಷ್ಯಂ ಪ್ರಜ್ಞಾಂ ಮೇಧಾಂ ಶ್ರಿಯಂ ಬಲ(ಭಗ?)ಮ್ । ಯೋಗ್ಯತಾಂ ಪಾಪಹಾನಿಂ ಚ ಪುಣ್ಯವೃದ್ಧಿಂ ಚ ಸಾಧಯೇತ್ ॥೧೨ ॥ ಅರ್ಥ- ಹೀಗೆ ಹಿಂದೆ ತಿಳಿಸಿದಂತೆ ಕಲಶವನ್ನು ಅರ್ಚಿಸಿ, ಕಲಶೋದಕ ಅಭಿಷೇಕ ಮಾಡುವುದರಿಂದ ಹಿಂದೆ ಹೇಳಿದ ಭಗವತ್ಸನ್ನಿಧಾನಮಾತ್ರವಲ್ಲದೇ ಕೀರ್ತಿ, ಆಯುರಭಿವೃದ್ಧಿ, ಬುದ್ಧಿಶಕ್ತಿ, ಧಾರಣಾಶಕ್ತಿ, ದೈಹಿಕಕಾಂತಿ, ಐಶ್ವರ್ಯಾಭಿವೃದ್ಧಿ, ಭಗವಂತನ ಪೂಜಾದಿಗಳಲ್ಲಿ ಯೋಗ್ಯತಾಭಿವ್ಯಕ್ತಿ, ಪಾಪನಿವೃತ್ತಿ ಪೂರ್ವಕ ಪುಣ್ಯವೃದ್ಧಿಯಾಗುವುದು.[^1] ಹೋಮಾದಿಲಕ್ಷಣ; ಹೋಮವಿಧಿ; ಹೋಮಸಂಖ್ಯೆ ಉಪಸರ್ಗಷು ಜಾತೇಷು ದೈವಭೂತಾತ್ಮಹೇತುಷು। ಆಯುಷ್ ವಾಽಥ ಶಾಂತ್ಯೈ ವಾ ಪ್ರಿಯೇ ವಾ ಪುಣ್ಯವೃದ್ಧಯೇ ॥ ೧೩ ॥ ಯೋಗ್ಯತಾಯೈ ಮಂತ್ರಸಿದ್ಧೈ ವಿಷ್ಣೋಃ ಪ್ರೀತ್ಯರ್ಥಮೇವ ವಾ । ಜುಹುಯಾತ್ ಸಹಸ್ರಮಯುತಂ ಲಕ್ಷಂ ಕೋಟಿಮಥಾಪಿ ವಾ ॥ ೧೪ ॥ ಗಳಿಂದ ಮಾರ್ಜನ ಮಾಡುವರು. ಇದರಿಂದಾಗಿ ಶಿಷ್ಯನಲ್ಲಿ ಭಗವಂತನ ಸಾನ್ನಿಧ್ಯವುಂಟಾಗಿ ನಿಗ್ರಹಾನುಗ್ರಹಸಾಮರ್ಥ್ಯ ವ್ಯಕ್ತವಾಗುತ್ತದೆ. "ಸನ್ನಿಧಾನಂ ತು ತತ್ಪ್ರೋಕ್ತಂ ಸಾಮರ್ಥ್ಯವ್ಯಂಜನಂ ಹರೇಃ'' ವೈಷ್ಣವದೀಕ್ಷೆ ನೀಡಬಹುದಾದ ಶಿಷ್ಯನನ್ನು ಅಭಿಮಂತ್ರಿತ ಕಲಶೋದಕದಿಂದ ಅಭಿಷೇಕಿಸುವಾಗ ಮೂಲಮಂತ್ರ, ಕಲಾ- ಮಂತ್ರಗಳಿಂದ ಅಭಿಷೇಕಿಸಿ, ನಂತರ ಅವನ ತಲೆಯ ಮೇಲೆ ತನ್ನ ಹಸ್ತವನ್ನಿಟ್ಟು ತತ್ವನ್ಯಾಸಾದಿಗಳನ್ನೂ, ಆಯಾಯ ಮಂತ್ರ- ಗಳನ್ನೂ ಪಠಿಸಬೇಕು. ಇದರಿಂದಾಗಿ ಶಿಷ್ಯನಿಗೆ ಆ ಮಂತ್ರಗಳೆಲ್ಲ ಬೇಗ ಸಿದ್ಧಿಸುತ್ತವೆ. "ಮೂಲಮಂತ್ರೈಃ ಕಲಾಮಂತ್ರೈಃ ಅಭಿಷಿಚ್ಯ ನ್ಯಸೇನ್ಮನುಮ್ । ತತ್ವಾದೀನ್ ನ್ಯಸ್ಯ ಕೇ ಹಸ್ತಂ ಸ್ಥಾಪ್ಯ ಮಂತ್ರಂ ವದೇದಥ ॥ ಮಂತ್ರಸಿದ್ಧಸ್ಯ ತಸ್ಯಾऽಶು ಪರಮಾತ್ಮಾಪ್ರಸೀದತಿ ॥ -ಯೋಗದೀಪಿಕಾ [^1]. ಪಂಚರಾತ್ರಾಗಮದಲ್ಲಿ ದೀಕ್ಷಾಂಗವಾಗಿ ಹೋಮವನ್ನು ಮಾಡಬೇಕೆಂದು ಹೇಳಲಾಗಿದೆ. ಅದನ್ನು ಆಚಾರ್ಯರು ' 'ಏವಮೇವ ತು ದೀಕ್ಷಾಯಾಂ ಆಜ್ಯೇನೈವಾऽಹುತಿಕ್ರಿಯಾ' ಎಂದು ಮುಂದೆ ಹೇಳುವರು(2/13). ಅನೇನ ಕ್ರಮಯೋಗೇನ ಜುಹುಯಾತ್ ಸಂಸ್ಕೃತೇಽನಲೇ ಎಂದು ಈ ಮೊದಲೇ ಸೂಚನೆ ನೀಡಿದ್ದಾರೆ. ಪೂರ್ವವತ್ ಸಂಸ್ಕೃತೇ ವಹ್ನೌ ಧ್ಯಾತ್ವಾ ದೇವಂ ಜನಾರ್ದನಮ್ । ಅರ್ಥ- ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕಗಳೆಂಬ ತಾಪತ್ರಯ ಗಳ ಶಾಂತಿಗಾಗಿಯೂ, ಅಪಮೃತ್ಯು ಪರಿಹಾರಪೂರ್ವಕ ದೀರ್ಘಾ ಯುಷ್ಯಕ್ಕಾಗಿಯೂ, ಐಶ್ವರ್ಯಾಭಿವೃದ್ಧಿಗಾಗಿಯೂ, ಯೋಗ್ಯತೆ ಸಂಪಾದನೆಗಾಗಿಯೂ, ಮಂತ್ರಗಳ ಸಿದ್ಧಿಗಾಗಿಯೂ, ಭಗವಂತನ ಪ್ರೀತಿಯುಂಟಾಗಲೂ ಹೋಮಗಳನ್ನು ಮಾಡುತ್ತಿರಬೇಕು. ಈ ಹೋಮಗಳಲ್ಲಿ ಸಾವಿರ, ಹತ್ತುಸಾವಿರ, ಲಕ್ಷ, ಕೋಟಿಸಂಖ್ಯೆಯಲ್ಲಿ ಯಥಾಶಕ್ತಿ ಆಹುತಿಗಳನ್ನು ನೀಡಬೇಕು. ಈ ಮೊದಲು ಅಗ್ನಿಗೆ ಮುಂದೆ ಹೇಳುವಂತೆ ಅಗ್ನಿಸಂಸ್ಕಾರಾದಿಗಳನ್ನು ಮಾಡಿ ಅಂಗ್ನ್ಯತರ್ಗತ ಪರಶುರಾಮನನ್ನು ಧ್ಯಾನಿಸಿ ಹೋಮಿಸಬೇಕು. ವ.ಟೀ. - ಹೋಮಾದಿಲಕ್ಷಣಮಾಹ - ಜುಹುಯಾದಿತ್ಯಾದಿನಾ ॥ ಟೀಕಾರ್ಥ - 'ಜುಹುಯಾತ್' ಎಂಬುದರಿಂದ ಹೋಮ, ಅದರ ಲಕ್ಷಣ, ಆಹುತಿ, ಆಹುತಿಸಂಖ್ಯೆ ಮೊದಲಾದವುಗಳನ್ನು ನಿರೂಪಿಸುತ್ತಾರೆ.[^1] [^1]. ವಿಶೇಷಾಂಶ - ಇಲ್ಲಿ ಹೋಮವನ್ನು ಮಾಡಬೇಕಾದ ಸಂದರ್ಭಗಳನ್ನು ತಿಳಿಸುತ್ತಿದ್ದಾರೆ. ತಾಪತ್ರಯಪರಿಹಾರಾದಿಗಳು ಹೋಮದ ಉದ್ದೇಶವಾದರೂ ಪ್ರಧಾನವಾಗಿ ಭಗವಂತನ ಪ್ರೀತ್ಯುದ್ದೇಶಕವಾಗಿರಬೇಕು. ಇಲ್ಲದಿದ್ದರೆ ಅಲ್ಪಫಲವೇಬಂದೀತು. ಇದನ್ನು ಏವಾರ್ಥಕವಾದ ವಾಶಬ್ದದಿಂದ ಸೂಚಿಸಲಾಗಿದೆ. 'ಉಪಸರ್ಗ'ವೆಂದರೆ ಉಪದ್ರವಗಳು. ಇವು ಮೂರುವಿಧವಾಗಿವೆ. ಆಧ್ಯಾತ್ಮಿಕ, ಆದಿಭೌತಿಕ, ಆಧಿದೈವಿಕ ಎಂದು. ದುಃಸ್ವಪ್ನಾದಿಗಳಿಂದ ಸೂಚಿತ ಅರಿಷ್ಟಗಳಿಗೆ ಆಧ್ಯಾತ್ಮಿಕವೆಂದೂ, ಭೂಕಂಪ, ಅಗ್ನಿಪರ್ವತಸ್ಫೋಟ, ಸುನಾಮಿ, ಪ್ರವಾಹಾದಿ ಭೂಮಿಯಲ್ಲಾಗುವ ಉಪದ್ರವಗಳು ಆಧಿಭೌತಿಕ(?)ವೆಂದೂ, ದೇವತೆಗಳ ವ್ಯಾಕೋಪದಿಂದಾಗುವ ಅತಿವೃಷ್ಟಿ, ಅನಾವೃಷ್ಟಿ, ಸೈಕ್ಲೋನ್ ಮೊದಲಾದವುಗಳು ಆಧಿದೈವಿಕಗಳು. ಏಳುಗ್ರಹಗಳು ಒಂದೆಡೆ ಸೇರುವುದು, ಸೂರ್ಯನ ಸುತ್ತಲೂ ಪರಿವೇಷ ತೋರುವುದು, ಸೂರ್ಯನಲ್ಲಿ ರಂಧ್ರ ಕಾಣುವುದು ಆದಿಭೌತಿಕಗಳೆಂದು ತಿಳಿಯಬೇಕು. ದುಃಸ್ವಪ್ನಗಳು – ೧. ಮುಂಡಿತರ ಜೊತೆಗೆ ಸಂಭಾಷಣೆ ಹಾಗೂ ಅವರ ಜೊತೆಗೆ ವಾಸವು ೨.ತಾನೇ ಮುಂಡಿತನಾಗುವುದು ೩. ಹರಿದಿರುವ ನೀಲವಸ್ತ್ರಧಾರಣೆ ೪. ಹರಿದ ಕೆಂಪುವಸ್ತ್ರಧಾರಣೆ, ಹೊಸವಸ್ತ್ರಧಾರಣೆ ೫.ನೀಲಿಪುಷ್ಪ ಧರಿಸುವುದು ೬. ಕತ್ತೆಯ ಮೇಲೆ ಸವಾರಿ ೭.ಮುರಿದಿರುವ ಗಾಡಿಯಲ್ಲಿ ಪ್ರಯಾಣ ೮.ಹರಿದಿರುವ ಛತ್ರಿಯನ್ನು ಧರಿಸುವುದು ೯. ಎಮ್ಮೆ, ಒಂಟೆಯ ಮೇಲೆ ಕುಳಿತು ದಕ್ಷಿಣಾಭಿಮುಖವಾಗಿ ಪ್ರಯಾಣ ಮಾಡುವುದು. ೧೦. ಕಪಿ, ತೋಳ, ನರಿಗಳಿಂದ ಕಚ್ಚಲ್ಪಡುವುದು ೧೧. ಕಿವಿ, ಕಾಲು, ತಲೆ ಉರುಳಿ ಬೀಳುವುದು. ೧೨. ಹಲ್ಲುಗಳು ಬೀಳುವುದು, ೧೩. ರಾಜಭಟರು ಪಾಶದಿಂದ ಬಂಧಿಸುವುದು, ಶಿಕ್ಷೆ ನೀಡುವುದು. ೧೪. ವಿಧವೆಯ ಆಲಿಂಗನ. ೧೫. ನೀಚರಾದ ವೇದಬಾಹ್ಯರು, ಪ್ರತಿಲೋಮಜಾತರೊಂದಿಗೆ ವಾಸ. ೧೬. ದೇವಾಲಯದ ಗೋಪುರ, ಗಿಡಮರಗಳ ಕೊಂಬೆಗಳು ಬೀಳುವುದು. ೧೭. ಕುದುರೆಯೇರುವುದು, ಭುಂಜಿಸುವುದು, ಬೌದ್ಧಾಲಯದಲ್ಲಿ ವಾಸ. ೧೮, ಸುರಾಪಾನಿಗಳು, ಪಾಪರೋಗಿಗಳು, ಕಿತವರೊಂದಿಗೆ ವಾಸ. ೧೯. ದೇವಾಲಯದ ದೀಪ ಆರುವುದು, ಗ್ರಾಮಕ್ಕೆ ಬೆಂಕಿ ಬೀಳುವುದು. ೨೦. ಹಣ್ಣುಗಳನ್ನು ಭಕ್ಷಿಸುವುದು, ನೆರಳು ನೋಡುವುದು. ೨೧. ಯಾತ್ರೆ ಹೋಗುವುದು, ಭಟರಿಂದ ಯುದ್ಧಕ್ಕೆ ಸಿದ್ಧತೆ. ೨೨. ಅಭ್ಯಂಜನ, ಎಣ್ಣೆಯನ್ನು ಪಡೆಯುವುದು, ಮೆಣಸು ಉಪ್ಪುಗಳ ದರ್ಶನ ಈ ಮೇಲ್ಕಂಡ ಸ್ವಪ್ನಗಳು ಬಿದ್ದಾಗ ಅನಿಷ್ಟವೆನಿಸುತ್ತವೆ. ಅವುಗಳ ಪರಿಹಾರಕ್ಕಾಗಿ ಜಪ ಹೋಮಾದಿಗಳಿಂದ ಶಾಂತಿಯನ್ನಾಚರಿಸ- ಬೇಕು. ಸ್ವಪ್ನದಲ್ಲಿ ಅಪೂಪದ ಜೊತೆಗೆ ಜೇನುತುಪ್ಪ ತಿಂದವನಿಗೆ ಶೀಘ್ರದಲ್ಲಿಯೇ ಮೃತ್ಯುವಶನಾಗುವನೆಂದು ತಿಳಿಯಬೇಕು. ರಕ್ತವಸ್ತ್ರವನ್ನು ತಲೆಗೆ ಪೇಟವನ್ನಾಗಿ ಸುತ್ತಿದರೂ ಮೃತ್ಯುವು. "ಬೃಹತ್ತಮಂ ಯದಿ ಸಹಾಪೂಪಂ ಪ್ರಭಕ್ಷಯೇತ್ । ಸ್ವಷ್ಟೇ ತಸ್ಯ ಅಚಿರಾಮೃತ್ಯೂ ರಕ್ತಾ ವಾ ಶಿರೋಧೃತೇ ॥ ರಾತ್ರಿದೇವತೆ ದುರ್ಗೆಯು - ಅವಳನ್ನು ವಿಶೇಷವಾಗಿ ಪೂಜಿಸಿ, ರಾತ್ರಿಸೂಕ್ತದಿಂದ ಪಾಯಸದ್ರವ್ಯದಿಂದ ಹೋಮಿಸಿದರೆ ಅಪಮೃತ್ಯು ಪರಿಹಾರವು. (ರಾರ್ವ್ಯಖ್ಯದಾಯತಿ.. ಎಂದು ಸೂಕ್ತವು) "ಯದಂತಿ ಯಚ್ಚ ದೂರಕೇ'' ಎಂಬ ಪವಮಾನಮಂಡಲದ ಮಂತ್ರಜಪದಿಂದ ದುಃಸ್ವಪ್ನನಾಶನವು. ಇದಕ್ಕೆ ಪ್ರಮಾಣ : ಕುಂಡಲಕ್ಷಣ ಕೃತ್ವಾ ತ್ರಿಮೇಖಲಂ ಕುಂಡಂ ಚತುರ್ವಿಂಶಾಗುಲೋಚ್ಛ್ರಿತಮ್ ॥ ೧೫ ॥ ತಾವತ್ ಖಾತಂ ಚತುಷ್ಕೋಣಮುಚ್ಛ್ರಿತಂ ದ್ವಾದಶೈವ ವಾ। ದ್ವ್ಯಂಗುಲಂ ತ್ರ್ಯಂಗುಲಂವಾऽಪಿ ಚತುರಂಗುಲಮೇವ ವಾ॥ ೧೬ ॥ ವಿಸ್ತಾರೋ ಮೇಖಲಾನಾಂ ಸ್ಯಾದಂತ್ಯಾ ವಾ ಚತುರಂಗುಲಾ। ಚತುರ್ವಿಂಶಾಂಗುಲಂ ವಾ ತದ್ವಿಸ್ತಾರೋ ದ್ವಾದಶೈವ ವಾ ॥ ೧೭ ॥ ಅರ್ಥ- ಮೇಖಲೆ ಎಂದರೆ ಹೋಮಕುಂಡದ ಸುತ್ತಲೂ ಚತುರಸ್ರಾ ಕಾರವಾಗಿಯೋ, ವೃತ್ತಾಕಾರದಲ್ಲಿಯೇ ನಾಲ್ಕು ಅಂಗುಲಪರಿ- ಮಾಣವುಳ್ಳ ಮೆಟ್ಟಲುಗಳಂತಿರುವ ವೇದಿಕೆಯು, ಇಂತಹ ವೇದಿಕೆಯು ಮೂರು ಇರಬೇಕು. ಭೂಮಿಗಿಂತ ಹನ್ನೆರಡು ಅಂಗುಲವಾಗಲೀ, ಇಪ್ಪತ್ತನಾಲ್ಕು ಅಂಗುಲ ಎತ್ತರವಾಗಲೀ ಇರ- ಬೇಕು. ಭೂಮಿಯ ಒಳಗೂ ಸಹ ಇದೇ ರೀತಿ ಹನ್ನೆರಡು, ಇಪ್ಪತ್ತ- ನಾಲ್ಕು ಅಂಗುಲ ಆಳವಿರಬೇಕು. ಕುಂಡದ ಆಳದಷ್ಟೇ ಉದ್ದ ಅಗಲವಿರಬೇಕೆಂದು ತಾತ್ಪರ್ಯ. ಮೇಖಲೆಯ ಕೆಳಗಿರುವ ಮೆಟ್ಟಲು ನಾಲ್ಕಂಗುಲ ಅಂಗುಲವೂ ಮಧ್ಯದ ಮೇಖಲೆಯು ಮೂರಂಗುಲ ಅಗಲವೂ, ಮೇಲಿನ ಮೇಖಲೆಯ ಅಗಲ ಎರಡಂಗುಲ ಅಗಲವೂ ಇರಬೇಕು. ವ.ಟಿ. - ತ್ರಿಮೇಖಲಂ = ವೇದಿತ್ರಯಸಹಿತಮ್ । ಕುಂಡನ್ನತ್ಕಾಂತ- ರ್ವಿಸ್ತಾರಮಾಹ- ಚತುರ್ವಿಂಶತಿ ॥ ಉಚ್ಛ್ರಿತಂ = ಉನ್ನತಮ್ । ತಾವತ್‌ ಖಾತಂ = ಯಾವ ದಂತವಿಸ್ತಾರಮ್। ಚತುಷ್ಕೋಣಂ = ಚತುರಸ್ರಮ್ । ಔನ್ನತ್ಯೇ ಪಕ್ಷಾಂತರಂ ದ್ವಾದಶೈವೇತಿ ಕುಂಡಂ ತಾವಧ್ವಿಕೃತಮ್ । ಮೇಖಲಾವಿಸ್ತೃತಮಾಹ - ದ್ವ್ಯಂಗುಲ- ಮಿತ್ಯಾದಿನಾ ॥ ವೇದಿತ್ರಯಂ ಪ್ರತ್ಯೇಕಂ, ದ್ವ್ಯಂಗುಲಮ್ ಅಧಮ- ಕಲ್ಪೇ , ತ್ರ್ಯಂಗುಲಂ ಮಧ್ಯಮಕಲ್ಪೇ, ಚತುರಂಗುಲಮ್ ಉತ್ತಮ- ಕಲ್ಪೇ । ಚತುರಂಗುಲವಿಸ್ತೃತತ್ವಮ್ । ಸರ್ವಕಲ್ಪೇಷ್ವಂತ್ಯಮೇಖಲಾಯಾ ಆವಶ್ಯಕತ್ವಮಾಹ - ಅಂತ್ಯಾ ಇತಿ ॥ ಸಹಸ್ರಹೋಮಾದೌ ವಿಶೇಷಮಾಹ "ಯದಂತೀತ್ಯಾದೃಶಃ ಸರ್ವಾ ಅಪಿ ದುಃಸ್ವಪ್ನದರ್ಶನೇ । ಜಪ್ಯಾ ಏವ ವಿಶೇಷೋSಯಂ ಹೋಮೋ ದುಃಸ್ವಪ್ನದರ್ಶನೇ !!'' ಐ.ಭಾ. ೩/೨/೪ "ದಿವ್ಯಂತರಿಕ್ಷಭೌಮೇಷು ಅದ್ಭುತೇಷು ನ ಸಂಶಯಃ । ಕೋಟಿಹೋಮಂ ವಿದುಃ ಪ್ರಾಜ್ಞಾಃ ಲಕ್ಷಂ ವಾऽಯುತಮೇವ ವಾ॥ ಚತುರ್ವಿಂಶೇತಿ ॥ ತದ್ವಿಸ್ತಾರೋ ಮೇಖಲಾತ್ರಯವಿಸ್ತಾರಃ । ಚತರ್ವಿಂಶಾಂಗುಲಮ್ ಏಕೈಕಸ್ಯಾ ವೇದ್ಯಾ ಅಷ್ಟಾಂಗುಲ ಸಂಖ್ಯಯಾ ದ್ವಾದಶೈವ ವಾ ವಿಸ್ತಾರಃ । ಏಕೈಕಸ್ಯಾಃ ಚತುರಂಗುಲ ಸಂಖ್ಯಯಾ ದ್ವಾದಶೈವ ವೇತ್ಯತ್ರ ಮೇಖಲಾನಾಂ ಪ್ರತ್ಯೇಕಂ ದ್ವಾದಶತ್ವಂ ವಾ । ಚತುರಂಗುಲಪಕ್ಷಸ್ಯ ಚತುರಂಗುಲಮೇವ ಚೇತ್ಯನೇನ ಪೂರ್ವಮೇವೋಕ್ತತ್ವಾತ್ । ಕುಂಡಸ್ಯೋನ್ನತತ್ವೇ ವಿಸ್ತೃತೇ ಚ ಪೂರ್ಣಪರಿಮಾಣಾಪೇಕ್ಷಯಾ ದ್ವಿಗುಣಿತತ್ವಂ ವಾ । ಅಷ್ಟಾಂಗುಲಿತ್ವಪಕ್ಷೇ ದ್ವಾದಶಾಂಗುಲಿತ್ವಪಕ್ಷೇ ತು ತ್ರಿಗುಣಿತತ್ವಂ ಜ್ಞಾತವ್ಯಮ್ ॥ ಟೀಕಾರ್ಥ - ಹೋಮಾದಿಗಳ ಲಕ್ಷಣವನ್ನು ಜುಹುಯಾತ್ ಎಂಬಿತ್ಯಾದಿ ಶ್ಲೋಕದಲ್ಲಿ ತಿಳಿಸುತ್ತಾರೆ. ತ್ರಿಮೇಖಲಂ = ಮೂರುವೇದಿಗಳಿಂದ ಸಹಿತವಾದದ್ದೆಂದರ್ಥ, ಹೋಮಕುಂಡದ ಎತ್ತರ ಹಾಗೂ ಒಳಗಿನ ವಿಸ್ತಾರವನ್ನು 'ಚತುರ್ವಿಂಶ' ಎಂಬಲ್ಲಿ ಹೇಳುವರು. ಉಚ್ಛ್ರಿತಂ ಎಂದರೆ ಎತ್ತರ. ಕುಂಡವು ಹನ್ನೆರಡು ಅಂಗುಲ ಅಥವಾ ಇಪ್ಪತ್ತನಾಲ್ಕು ಅಂಗುಲ ಎತ್ತರವಿರಬೇಕೆಂದರ್ಥ. ತಾವತ್‌ ಖಾತಮ್ ಎಂದರೆ ಒಳಗಿನ ವಿಸ್ತಾರದಷ್ಟೆ ಎಂದರ್ಥ. ಕುಂಡದ ಮೇಲಿನ ಭಾಗ 24ಅಂಗುಲವಿದ್ದರೆ ಕುಂಡದ ಒಳಗೂ ಅಷ್ಟೆ ಆಳವಿರಬೇಕೆಂದರ್ಥ. ಚತುಷ್ಕೋಣಂ ಎಂದರೆ ಚಚ್ಚೌಕ- ವಾಗಿರಬೇಕು. ಎತ್ತರ ಹನ್ನೆರಡು ಅಂಗುಲಗಳಿದ್ದರೆ ಸಾಕೆಂಬುದು ಇನ್ನೊಂದು ಪಕ್ಷ ಆಗ ಕುಂಡವೂ ಅಷ್ಟೇ ವಿಸ್ತಾರವಾಗಿರಬೇಕು. ದ್ವ್ಯಂಗುಲಂ ಎಂಬುದರಿಂದ ಮೇಖಲೆಯ ವಿಸ್ತಾರವನ್ನು ಹೇಳುತ್ತಿರುವರು- ಮೇಖಲೆಗಳು ಪ್ರತ್ಯೇಕವಾಗಿ ಮೂರು ಇರಬೇಕು. ಇದರ ಅಗಲವು ಕ್ರಮವಾಗಿ ಎರಡಂಗುಲ, ಮೂರಂಗುಲ, ನಾಲ್ಕಂಗುಲವಿರಬೇಕು. ಮೂರೂ ಮೇಖಲೆಗಳು ಎರಡೆರಡಂಗುಲವಿದ್ದರೆ ಅಧಮಕಲ್ಪ, ಮೂರು ಮೂರಂಗುಲವಿದ್ದರೆ ಮಧ್ಯಮಕಲ್ಪ, ನಾಲ್ಕು ನಾಲ್ಕು ಅಂಗುಲವಿದ್ದರೆ ಉತ್ತಮಕಲ್ಪ. ಈ ಮೂರುಕಲ್ಪಗಳಲ್ಲಿ ಮೊದಲೆರಡು ಕಲ್ಪಗಳಲ್ಲಿ ಪಕ್ಷಾಂತರ- ವಿದೆಯಾದರೂ ಕೊನೆಯ ಮೇಖಲೆ ಮಾತ್ರ ನಾಲ್ಕು ಅಂಗುಲವಿದ್ದೇ ಇರಬೇಕು. ಇದು ಅವಶ್ಯಕವೆಂದು ಅಂತ್ಯಾ ವಾ ಎಂಬಲ್ಲಿ ಹೇಳಲಾಗಿದೆ.[^1] ಸಾವಿರಹೋಮದಲ್ಲಿ ವಿಶೇಷವನ್ನು 'ಚತುರ್ವಿಂಶಾಂಗುಲಮ್' ಎಂಬುದರಿಂದ [^1]. ವಿಶೇಷಾಂಶ - ಕುಂಡದ ಮೇಲಿನ ಎತ್ತರ ಹನ್ನೆರಡುಅಂಗುಲ ವಿದ್ದರೆ ಕೆಳಗೂ (ಖಾತವೂ) ಹನ್ನೆರಡು ಅಂಗುಲದಷ್ಟೇ ಆಳ- ವಿರಬೇಕು ಎಂದು ಒಂದು ಪಕ್ಷವಾದರೆ ಮತ್ತೊಂದು, ಮೇಲೆ ಹನ್ನೆರಡು ಅಂಗುಲವಾದರೂ ಕೆಳಗೆ ಮಾತ್ರ ಇಪ್ಪತ್ತನಾಲ್ಕು ಅಂಗುಲವೇ ಇರಬೇಕು. ಹೇಳುತ್ತಾರೆ. ಕುಂಡದ ಒಟ್ಟು ಉದ್ದ ಅಗಲ ಇಪ್ಪತ್ತನಾಲ್ಕು, ಒಳಗಿನ ಅಂತರವೂ ಇಪ್ಪತ್ತನಾಲ್ಕು. ಇದು ಸಾವಿರಹೋಮ ಮಾಡುವಾಗ ತಯಾರಾಗಬೇಕಾಗಿರುವ ಕುಂಡಪ್ರಮಾಣ ಎಂದರ್ಥ. ತದ್ವಿಸ್ತಾರೋ ಎಂದರೆ ಮೇಖಲಾತ್ರಯವಿಸ್ತಾರ ಎಂದರ್ಥ. ಒಂದೊಂದು ವೇದಿಕೆ ಎಂಟೆಂಟಂಗುಲದಂತೆ ಒಟ್ಟು ಮೂರೂ ಮೇಖಲೆಗಳ ವಿಸ್ತಾರ ಇಪ್ಪತ್ತನಾಲ್ಕು ಎಂದರ್ಥ (8×3=24) ದ್ವಾದಶೈವ ವಾ ಎಂಬಲ್ಲಿ ಮೂರೂ ಮೇಖಲೆಗಳೂ ಪ್ರತ್ಯೇಕವಾಗಿ ನಾಲ್ಕು ನಾಲ್ಕು ಅಂಗುಲವೆಂದಿಟ್ಟುಕೊಂಡಾಗ ಹನ್ನೆರಡು (3x4=12) ಅಂಗುಲ. ಪ್ರತ್ಯೇಕವಾಗಿ ಮೂರು ಮೇಖಲೆಗಳ ವಿಸ್ತಾರ ಎರಡು ಮೂರು ಅಥವಾ ನಾಲ್ಕುಅಂಗುಲವೆಂದು ಚತುರಂಗುಲ- ಮೇವ ವಾ ಎಂಬಲ್ಲಿ ಹೇಳಲಾಯಿತು. ಈಗ ದ್ವಾದಶೈವ ವಾ ಎಂಬಲ್ಲಿ ಮೂರು ಮೇಖಲೆಗಳೂ ಪ್ರತ್ಯೇಕವಾಗಿ ನಾಲ್ಕು ನಾಲ್ಕು ಅಂಗುಲ.[^1 ] [^1]. ವಿಶೇಷಾಂಶ - ವಸುಧೇಂದ್ರತೀರ್ಥರ ಟೀಕೆಯಂತೆ ಈ ಶ್ಲೋಕಗಳ ಅಭಿಪ್ರಾಯವನ್ನು ಹೀಗೆ ಸಂಗ್ರಹಿಸಬಹುದು. ಹೋಮ ಕುಂಡಕ್ಕೆ ಮೂರು ಮೇಖಲೆಗಳಿರಬೇಕು. ಹೋಮಕುಂಡದ ಉದ್ದ + ಅಗಲ (ವಿಸ್ತಾರ) ಇಪ್ಪತ್ತನಾಲ್ಕು ಅಂಗುಲವಿರಬೇಕು. ಕುಂಡದ ಒಳಗಿನ ವಿಸ್ತಾರವೂ ಇಪ್ಪತ್ತನಾಲ್ಕು ಅಂಗುಲ. ಇದೊಂದು ಪಕ್ಷ. ಹನ್ನೆರಡಂಗುಲ ಉದ್ದವಾದರೆ ಕುಂಡದ ಆಳವೂ ಹನ್ನೆರಡಾದರು ಇರಬೇಕು. ಅಥವಾ ಹನ್ನೆರಡು ಅಂಗುಲ ಎತ್ತರವಿದ್ದರೆ ಖಾತಮಾತ್ರ ೨೪ಅಂಗುಲವೇ ಇರಬೇಕೆಂಬುದು ಇನ್ನೊಂದು ಪಕ್ಷ. (ವಸುಧೇಂದ್ರರು) ಇಪ್ಪತ್ತನಾಲ್ಕು ಅಂಗುಲ ಆಳದ ಹೋಮಕುಂಡದ ಉದ್ದ ಅಗಲ ಇಪ್ಪತ್ತನಾಲ್ಕು ಅಂಗುಲ. ಹನ್ನೆರಡು ಅಂಗುಲ ಆಳವಿರುವ ಕುಂಡದ ವಿಸ್ತಾರ ಹನ್ನೆರಡು ಅಂಗುಲ. ಅಂದರೆ ಕುಂಡದ ಆಳ ಎಷ್ಟಿದೆಯೋ ಅಷ್ಟೇ ಉದ್ದಗಲವೆಂದು ಅಭಿಪ್ರಾಯ. ವೇದಿಗಳ ವಿಷಯದಲ್ಲಿ ಮೂರು ಮೇಖಲೆಗಳು ಎರಡೆರಡು ಅಂಗುಲವಿದ್ದರೆ ಅಧಮಪಕ್ಷ. ಮೂರು ಮೂರು ಅಂಗುಲವಿದ್ದರೆ ಮಧ್ಯಮಪಕ್ಷ, ನಾಲ್ಕುನಾಲ್ಕು ಅಂಗುಲವಿದ್ದರೆ ಉತ್ತಮಪಕ್ಷ. ಅಥವಾ ಪ್ರತಿಯೊಂದು ಎಂಟೆಂಟು ಅಂಗುಲವಿದ್ದು ಒಟ್ಟು ಮೂರರ ಮೊತ್ತ ಇಪ್ಪತ್ತನಾಲ್ಕು(೮*೩-೨೪). ಇದನ್ನೇ 'ಚತುರ್ವಿಂಶಾಂಗುಲಮ್' ಎನ್ನಲಾಗಿದೆ. ಅಥವಾ ಪ್ರತಿಮೇಖಲೆ- ಯೂ ನಾಲ್ಕರಂತೆ ಒಟ್ಟು ಹನ್ನೆರಡು ಅಂಗುಲ. ಇದನ್ನೇ ದ್ವಾದಶೈವ ವಾ ಎನ್ನಲಾಗಿದೆ. ಕುಂಡದ ಉದ್ದಗಲಪೂರ್ಣಪರಿಮಾಣವೆಷ್ಟೋ ಅದರ ಎರಡರಷ್ಟು ಮೇಖಲಾತ್ರಯದವಿಸ್ತಾರವಿರಬೇಕು. ಕುಂಡದ ವಿಸ್ತಾರ ಹನ್ನೆರಡು ಅಥವಾ ಇಪ್ಪತ್ತನಾಲ್ಕು ಇದ್ದಾಗ, ಮೂರು ಮೇಖಲೆಯ ಪ್ರಮಾಣ ಅಶ್ವತ್ಥಪತ್ರಾಕೃತಿಃ ಸ್ಯಾನ್ಮೂಲತೋ ದ್ವಾದಶಾಂಗುಲಾ । ಯೋನಿಃ ಖಾತೇ ಚ ವಿನತಾ ಪ್ರವಿಷ್ಟಾ ದ್ವ್ಯಂಗುಲಂ ತಥಾ ॥ ೧೮ ॥ ಅರ್ಥ - ಮೇಲೆ ಇರುವ ಮೇಖಲೆಯು ಮೇಲೆ ಅಶ್ವತ್ಥದ ಪತ್ರದಂತೆ ಇರುವ ಆಕಾರದಲ್ಲಿ ಹನ್ನೆರಡಂಗುಲ ಉದ್ದವಾದ ಯೋನಿ- ಯೊಂದನ್ನು ರಚಿಸಬೇಕು. ಅದುಕುಂಡದ ಒಳಗೆ ಇಳಿದಿರಬೇಕು. ಹನ್ನೆರಡು ಅಂಗುಲ ಯೋನಿಯಲ್ಲಿ ಹತ್ತಂಗುಲ ಮೇಖಲೆಯ ಮೇಲೂ ಉಳಿದೆರಡಂಗುಲ ಕುಂಡದ ಒಳಗೆ ಹೋಗಿರಬೇಕು. ವ.ಟೀ. - ಯೋನಿ ಮೂಲತಃ ಮೂಲಮಾರಭ್ಯ ಅಗ್ರಪರ್ಯಂತಂ ದ್ವಾದಶಾಂಗುಲಾ । ತನ್ಮಧ್ಯೆ ಖ್ಯಾತೇ ಕುಂಡೇ ದ್ವ್ಯಂಗುಲಾ ವಿನತಾ ಅಧೋಮುಖೀ ಸತೀ ಪ್ರವಿಷ್ಟಾ॥ ಟೀಕಾರ್ಥ - ಆಹುತಿ ನೀಡುವ ಮೂರನೆಯ ಮೆಟ್ಟಲಿನ ಮೂಲ- ದಿಂದಾರಂಭಿಸಿ ಕುಂಡದ ಒಳಗಿನ ಪರ್ಯಂತ ಹನ್ನೆರಡು ಅಂಗುಲವಿರಬೇಕು. ವೇದಿಯ ಮೇಲ್ಬಾಗದ ಮಧ್ಯದಲ್ಲಿ ಕುಂಡ- ದೊಳಗೆ ಎರಡಂಗುಲ ಅಧೋಮುಖವಾಗಿ ಪ್ರವಿಷ್ಟವಾಗಿರಬೇಕು. [^1] ತಲಾ ನಾಲ್ಕು ನಾಲ್ಕರಂತೆ ತ್ರಿಗುಣಿತ ಮಾಡಬೇಕು (೪×೩=೧೨) ಅಥವಾ ಇಪ್ಪತ್ತನಾಲ್ಕು ಇದ್ದಾಗ ಎಂಟೆಂಟರಂತೆ ಇಪ್ಪತ್ತನಾಲ್ಕು ಅಂಗುಲವಿರಬೇಕು. (೮x೩-೨೪) ಇಲ್ಲಿ ಹೇಳಿರುವ ಕುಂಡಪ್ರಮಾಣ ಸಾವಿರಹೋಮಕ್ಕೆ ಸಂಬಂಧಿಸಿ ದ್ದಾಗಿದೆ. ಹತ್ತುಸಾವಿರವಾದರೆ ನಲವತ್ತೆಂಟು ಅಂಗುಲ ವಿಸ್ತಾರ ವಾಗಿರಬೇಕು. ಲಕ್ಷಹೋಮವಾದರೆ ಇದರ ನಾಲ್ಕುಪಟ್ಟು. ಕೋಟಿ ಹೋಮವಾದರೆ ಎಂಟುಮೊಳ ಉದ್ದಗಲವಿರುವ ಕುಂಡವಾಗಬೇಕು. "ಮುಷ್ಟಿಮಾನ ಶತಾರ್ಧೇ ತು ಶತೇ ಚಾರತ್ನಿಮಾತ್ರಕಮ್ । ಸಹಸ್ರೇ ತ್ವಥ ಹೋತವ್ಯೇ ಕುರ್ಯಾತ್ ಕುಂಡಂ ಕರಾತ್ಮಕಮ್ ॥ ದ್ವಿಹಸ್ತಮಯಯುತೇ ತದ್ವತ್ ಲಕ್ಷಹೋಮೇ ಚತುಷ್ಕರಮ್ । ಅಷ್ಟಹಸ್ತಾತ್ಮಕಂ ಕುಂಡಂ ಕೋಟಿಹೋಮೇ ತು ನಾಧಿಕಮ್ ॥'' ಚತುರ್ವಿಂಶಾಂಗುಲೋಚ್ಛ್ರಿತಂ ಎಂಬಲ್ಲಿ ಆಚಾರ್ಯರು ಸಾವಿರಹೋಮದಲ್ಲಿ ಕುಂಡಪ್ರಮಾಣವನ್ನು ತಿಳಿಸಿದ್ದಾರೆ. [^1]. ವಿಶೇಷಾಂಶ - ನಾಭಿ, ಯೋನಿಗಳಿದ್ದು ಮೂರುವೇದಿಕೆ ಗಳಿರುವ ಹೋಮಕುಂಡವು ಶ್ರೇಷ್ಠವಾಗಿರುತ್ತದೆ. ಎರಡು ವೇದಿಕೆ ಮಧ್ಯಮವೆನಿಸಿದರೆ ಒಂದು ಮೇಖಲೆ ಇರುವ ಕುಂಡ ಕನಿಷ್ಠ ಕುಂಡವೆನಿಸಿದೆ. ಅಗ್ಗಿಷ್ಟಿಕೆ ಈ ಜಾತಿಯದು. ನಾಭಿಯೋನಿಸಮಾಯುಕ್ತಂ ಕುಂಡಂ ಶ್ರೇಷ್ಠಂ ತ್ರಿಮೇಖಲಮ್ । ಕುಂಡಂ ದ್ವಿಮೇಖಲಂ ಮಧ್ಯಂ ನೀಚಂ ಸ್ಯಾದೇಕಮೇಖಲಮ್ ॥ - ಕ್ರಿಯಾಸಾರ ಕುಂಡದ ಮೇಲ್ಭಾಗದಲ್ಲಿ ಘೃತಾದಿ ಆಹುತಿ ನೀಡುವ ಭಾಗದಲ್ಲಿ ಅಶ್ವತ್ಥಪತ್ರದಂತೆ ಇರುವ ಅಗ್ನಿಸಂಸ್ಕಾರ ತದಾತ್ಮನಿ ಹರಿಂ ಧ್ಯಾತ್ವಾ ಕುಂಡೇ ದೇವೀಂ ಶ್ರಿಯಂ ತಥಾ । ವಿಷ್ಣುವೀರ್ಯಾತ್ಮಕಂ ವಹ್ನಿಂ ನಿಕ್ಷಿಪೇತ್ ಪ್ರಣವೇನ ಹಿ ॥ ೧೯ ॥ ಅರ್ಥ- ಈ ರೀತಿ ಇರುವ ಕುಂಡದಲ್ಲಿ ಪರಮಾತ್ಮನ ಪ್ರತಿಮಾ ರೂಪವಾದ ಲಕ್ಷ್ಮೀಸಹಿತನಾರಾಯಣನನ್ನು ಧ್ಯಾನಿಸುತ್ತಾ ವಿಷ್ಣು ವೀರ್ಯಾತ್ಮಕವಾದ ಅಗ್ನಿಯನ್ನು ಪ್ರತಿಷ್ಠಾಪಿಸಬೇಕು. ಅಗ್ನಿಪ್ರತಿಷ್ಠಾಪನೆಯನ್ನು 'ಓಂ ಭೂರ್ಭುವಸ್ವಃ' ಎಂಬ ಪ್ರಣವ- ಪೂರ್ವಕವಾಗಿ ವ್ಯಾಹೃತಿಯಿಂದ ಅಗ್ನಿಯನ್ನು ಸ್ಥಾಪಿಸಬೇಕು. ಕುರ್ಯಾತ್ ಕ್ರಿಯಾಃ ಷೋಡಶ ಚ ವ್ಯಾಹೃತೀಭಿಃ ಪೃಥಕ್ ಪೃಥಕ್। ವಹ್ನಸ್ತದ್ಗಹರೇಃ ಪ್ರೀತಿಂ ಕುರ್ವನ್ ದ್ರವ್ಯೈರ್ಯಜೇತ್ ತತಃ ॥ ೨೦ ॥ ಅರ್ಥ - ಹೀಗೆ ಸ್ಥಂಡಿಲದಲ್ಲಿ ರಮಾನಾರಾಯಣರನ್ನು ಧ್ಯಾನಿಸಿ, ನಾಲ್ಕು ವ್ಯಾಹೃತಿಗಳಿಂದ ಪ್ರತ್ಯೇಕ ಪ್ರತ್ಯೇಕವಾಗಿ ಅಗ್ನಿಗೆ ಹದಿನಾರು ಸಂಸ್ಕಾರಸಿದ್ಧಿಗಾಗಿ ಹೋಮಿಸಬೇಕು. ಪುಷ್ಪವನ್ನು ಸಮರ್ಪಿಸಿ ಭೂರಾದಿ ವ್ಯಾಹೃತಿದೇವತೆಗಳನ್ನು ಧ್ಯಾನಿಸುತ್ತಾ ವ್ಯಾಹೃತಿಮಂತ್ರಗಳಿಂದ ಅಗ್ನಿಗೆ ಹದಿನಾರು ಸಂಸ್ಕಾರಗಳನ್ನು ಮಾಡಬೇಕು.[^ 1] ತುಪ್ಪವನ್ನು ಹಾಕಲು ಅನುವಾಗುವಂತೆ ಮಣ್ಣಿನಿಂದ ರಚಿತವಾದ, ಒಂದಂಗುಲ ಎತ್ತರ, ನಾಲ್ಕಂಗುಲ ಅಗಲ, ಹನ್ನೆರಡು ಅಂಗುಲ ಉದ್ದವಿರುವ ಭಾಗವೇ ಯೋನಿ. ಇಂತಹ ಹೋಮ- ಕುಂಡದಲ್ಲಿ ಲಕ್ಷ್ಮಿಯೊಂದಿಗೆ ನಾರಾಯಣನು ವಿಹರಿಸುತ್ತಾನೆ. ಆ ಕಾಲದಲ್ಲಿ ಶ್ರೀಹರಿಯು ಅಗ್ನ್ಯಾತ್ಮಕವಾದ ವೀರ್ಯವನ್ನು ಆ ಯೋನಿಯಲ್ಲಿಡುವನು ಎಂಬ ಅನುಸಂಧಾನದಿಂದ ಅಗ್ನಿಯನ್ನು ಪ್ರತಿಷ್ಠಾಪಿಸಬೇಕು. ಹರಿಯು ಲಕ್ಷ್ಮೀದೇವಿಯಲ್ಲಿ ಗರ್ಭಾಧಾನ ಮಾಡುವನೆಂದು ಚಿಂತಿಸಬೇಕು. ''ರಮಮಾಣಂ ಸ್ಮರೇದ್ ದೇವ್ಯಾ ಪರಂ ನಾರಾಯಣಂ ತತಃ । ಯೋನೌ ನ್ಯಸ್ಯ ಹರೇರ್ವೀರ್ಯಂ ಇತಿ ಸ್ಮೃತ್ವಾ ಸಮರ್ಚಯೇತ್ । ಕುಂಡೇ ನ್ಯಸೇತ್ ಹರಿರ್ಗರ್ಭಂ ಆಧತ್ತೇತಿ ವಿಚಿಂತಯೇತ್ ॥ -ಯೋಗದೀಪಿಕಾ ೭/೫೦ [^1]. ವಿಶೇಷಾಂಶ - ಹೋಮಕುಂಡದಲ್ಲಿ ಭಗವಂತನು ರಮಾ ದೇವಿಯೊಡನೆ ರಮಿಸುತ್ತಿದ್ದಾನೆಂದೂ, ಅದರಿಂದ ಉಂಟಾದ ವೀರ್ಯವೇ ಅಗ್ನಿಯೆಂದೂ, 'ವಿಷ್ಣುವೀರ್ಯಾತ್ಮಕಂ ಅಗ್ನಿಂ ಪ್ರತಿಷ್ಠಯಾಮಿ' ಎಂದು ಅಗ್ನಿ ಯನ್ನು ಪ್ರತಿಷ್ಠಾಪಿಸಬೇಕು. ಸಂಸ್ಕಾರವಿಲ್ಲದ ಅಗ್ನಿಯಲ್ಲಿ ಮಾಡಿದ ಹೋಮವು ನಿಷ್ಪಲವಾದ್ದರಿಂದ ಗರ್ಭಾಧಾನಾದಿ ಹೋಮದ ವಸ್ತುಗಳು, ಸಮಿತ್ತುಗಳು ಆಜ್ಯೇನ ವಾ ಪಾಯಸೇನ ಸಮಿದ್ಭಿಃ ಕ್ಷೀರಿಣಾಮಥ । ತಿಲೈರ್ವಾऽಥ ತಂಡುಲೈರ್ವಾಽಪಿ ಮಧುರೈಸ್ತ್ರಿಭಿರೇವ ವಾ ॥ ೨೧ ॥ ಬ್ರಹ್ಮವೃಕ್ಷಸಮಿದ್ಭಿರ್ವಾ ಸಮಿದ್ಭಿರ್ವಾಽಮೃತೋದ್ಭವೈಃ । ಅಮೃತಾಃ ಸಮಿಧೋ ಜ್ಞೇಯಾಃ ಸರ್ವತ್ರ ಚತುರಂಗುಲಾಃ ॥ ೨೨ ॥ ಅರ್ಥ - ಅಗ್ನಿ ಹಾಗೂ ಅಗ್ನ್ಯಂತರ್ಗತ ಪರಶುರಾಮನ ಪ್ರೀತಿ ಗೋಸ್ಕರವಾಗಿ ಶಾಸ್ತ್ರದಲ್ಲಿ ಹೇಳಿದ ದ್ರವ್ಯಗಳಿಂದ ವಿಧಿವತ್ತಾಗಿ ಹೋಮಿಸಬೇಕು. ಯಜ್ಞದ್ರವ್ಯಗಳು - ತುಪ್ಪ, ಚರು, ಎಳ್ಳು, ಪಾಯಸ, ಹಾಲನ್ನು ಸುರಿಸುವ ಕ್ಷೀರಿವೃಕ್ಷಗಳ ಸಮಿತ್ತುಗಳು, ತುಪ್ಪ-ಹಾಲು-ಜೇನು ಇವುಗಳ ಮಿಶ್ರಣವೆನಿಸಿದ ಮಧುರತ್ರಯ, ಪಾಲಾಶಸಮಿತ್ತು (ಮುತ್ತುಗ), ಅಮೃತ ಉಳ್ಳ ಸಮಿತ್ತು, ಅಶ್ವತ್ಥ ಮೊದಲಾದವು ಹೋಮದ್ರವ್ಯಗಳು. ಅಮೃತವಳ್ಳಿಯಿಂದ ಹೋಮಿಸುವುದಾದರೆ ಅದು ನಾಲ್ಕು ಅಂಗುಲ ಪ್ರಮಾಣವಿರಬೇಕು. ಇತರ ಸಮಿತ್ತುಗಳಿಗೆ ಈ ನಿಯಮವಿರುವುದಿಲ್ಲ. ಹೋಮವಿಧಿ ಉಪಸಂಹಾರ ಏವಮೇವ ತು ದೀಕ್ಷಾಯಾಮಾಜ್ಯೇನೈವಾಹುತಿಕ್ರಿಯಾ। ಪೂಜಾ ಚ ಕಾರ್ಯಾ ವಿಧಿವತ್ಪೂರ್ವಂ ಸರ್ವಹುತೇಷ್ವಪಿ ॥ ೨೩ ॥ ಅರ್ಥ- ವೈಷ್ಣವದೀಕ್ಷೆಯನ್ನು ನೀಡುವಾಗ, ಶಿಷ್ಯನಿಗೆ ಪ್ರಣವ- ಮಂತ್ರಾದಿ ಉಪದೇಶಕಾಲದಲ್ಲಿಯೂ ಹೀಗೆ ಹೋಮಕುಂಡ ನಿರ್ಮಾಣ, ಅಗ್ನಿಸ್ಥಾಪನೆ, ಹದಿನಾರು ಸಂಸ್ಕಾರಗಳು, ವಿಷ್ಣು- ವೀರ್ಯತ್ವಸಿದ್ಧಿಹೋಮಗಳನ್ನೂ ಮಾಡಬೇಕು. ಹದಿನಾರು ಸಂಸ್ಕಾರಗಳನ್ನು ವ್ಯಾಹೃತಿಯಿಂದಲೇ ಮಾಡಬೇಕು. 'ಅಗ್ನೇಃ ಗರ್ಭಾಧಾನಾಖ್ಯಂ ಕರ್ಮ ಸಂಪಾದಯಾಮಿ' ಇತ್ಯಾದಿ ಯಾಗಿ ಸಂಕಲ್ಪಿಸಿ, ವ್ಯಾಹೃತಿದೇವತೆಗಳಾದ ವಾಸುದೇವಾದಿಗಳನ್ನು ಪುಷ್ಪದಿಂದ ಅರ್ಚಿಸಬೇಕು. ನಾಲ್ಕು ವ್ಯಾಹೃತಿಗಳಿಂದ ನಾಲ್ಕು ಆಜ್ಯಾಹುತಿಗಳನ್ನು ನೀಡಬೇಕು. ನಂತರ 'ಗರ್ಭಾಧಾನ ಕೃತಂ ಸ್ವಾಮಿನ್' ಎಂದು ಕೈ ಮುಗಿದು ಪ್ರಾರ್ಥಿಸಬೇಕು. ಇದೇ ರೀತಿ ಉಳಿದ ಸಂಸ್ಕಾರಗಳನ್ನು ಮಾಡಬೇಕು. ಆದರೆ ದೀಕ್ಷಾಹೋಮದಲ್ಲಿ ತುಪ್ಪದಿಂದಲೇ ಆಹುತಿಗಳನ್ನು ನೀಡಬೇಕು. ಯಾವುದೇ ಪೂರ್ವೋಕ್ತ ಹೋಮದ್ರವ್ಯಗಳಿಂದಲ್ಲ. ಹೋಮಮಾಡುವುದಕ್ಕಿಂತ ಮೊದಲು ಗುರುದೇವತಾಪೂಜೆ- ಗಳನ್ನೂ, ಪುಣ್ಯಾಹ, ನಾಂದಿ, ನವಗ್ರಹಾದಿಪೂಜೆಗಳನ್ನು ಆಚರಿಸಬೇಕು. ಗುರುದಕ್ಷಿಣಾ ವಿಚಾರ ಗುರವೇ ದಕ್ಷಿಣಾಂ ದದ್ಯಾಲ್ಲಕ್ಷೇ ಲಕ್ಷೇ ಶತಂ ಸುಧೀಃ । ಆತ್ಮನೈವ ಕೃತೇ ಹೋಮೇ ಶಕ್ತಿತೋ ಗುರುದಕ್ಷಿಣಾಮ್ ॥ ೨೪ ॥ ॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ತಂತ್ರಸಾರಸಂಗ್ರಹೇ ದ್ವಿತೀಯೋsಧ್ಯಾಯಃ॥ ೨ ॥ ಅರ್ಥ- ಹೋಮ ಮುಗಿದ ನಂತರ ಆಚಾರ್ಯರಿಗೆ ದಕ್ಷಿಣೆ ನೀಡಬೇಕು. ಆಚಾರ್ಯನೇ ಹೋಮ ಮಾಡಿದ್ದರೆ, ಒಂದು ಲಕ್ಷ ಹೋಮವಾಗಿದ್ದರೆ, ನೂರು ನೂರು ಗೋವುಗಳನ್ನು ಅಥವಾ ಗೋವಿಗೆ ಪ್ರತ್ಯಾಮ್ನಾಯವಾಗಿ ದಕ್ಷಿಣೆಯನ್ನು ನೀಡಬೇಕು. ಯಜಮಾನನು ತಾನೇ ಹೋಮ ಮಾಡಿದ್ದರೆ ಯಥಾಶಕ್ತಿ ಗುರುದಕ್ಷಿಣೆ ನೀಡಬಹುದು.[^1] ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ ಎರಡನೆಯ ಅಧ್ಯಾಯವು ಮುಗಿದುದು. [^]1. ವಿಶೇಷಾಂಶ - ದಕ್ಷಿಣೆ ಎಂದರೆ ಹೋಮಾದಿಗಳಲ್ಲಿ ಉಂಟಾಗಬಹುದಾದ ಮಾನಸಿಕ, ಕಾಯಿಕ, ವಾಚನಿಕ ಪಾಪಗಳಿಗೆ ಪ್ರಾಯಶ್ಚಿತ್ತವಾಗಿದೆ. ದಕ್ಷಿಣೆ ಇಲ್ಲದ ಹೋಮಾದಿಗಳು ನಿಷ್ಫಲ- ವೆನಿಸಿವೆ. ಪ್ರತಿಷ್ಠಾ ದಕ್ಷಿಣಾಹೀನಾ ಯಜಮಾನಂ ಹಿನಸ್ತಿ ಹಿ। ದಕ್ಷಿಣೆ ಇಲ್ಲದ ಯಜ್ಞಯಾಗಾದಿಗಳು ಯಜಮಾನನಿಗೆ ಮಾರಕ ವಾಗುತ್ತವೆ. ದಕ್ಷಿಣೆ ಎಂದರೆ 'ದಕ್ಷ ವೃದ್ಧೌ' ಧಾತುಪಾಠದಂತೆ (?), ಯಜ್ಞದಲ್ಲಿ ನಡೆಯಬಹುದಾದ ನ್ಯೂನತೆಯನ್ನು ಪರಿಹರಿಸಿ, ಪುಣ್ಯವೃದ್ಧಿಯನ್ನು ಉಂಟುಮಾಡುವುದೇ ದಕ್ಷಿಣೆ. ತೃತೀಯೋsಧ್ಯಾಯಃ ಪ್ರತಿಮಾಲಕ್ಷಣ ಪ್ರತಿಷ್ಠಾಂ ಕಾರಯನ್ ವಿಷ್ಟೋಃ ಕುರ್ಯಾತ್ ಸುಪ್ರತಿಮಾಂ ಬುಧಃ । ಲೋಹೈರ್ವಾ ಶಿಲಯಾ ದಾರ್ವಾ ಮೃದಾ ವಾऽಪಿ ಯಥಾಕ್ರಮಮ್ ॥ ೧ ॥ ಅರ್ಥ - ವಿಷ್ಣುವಿನ ಪ್ರತಿಷ್ಠೆಯನ್ನು ಮಾಡಿಸುವ ಭಕ್ತನು ಮೊದಲು ಲೋಹಗಳಿಂದಾಗಲೀ, ಶಿಲೆಯಿಂದಾಗಲೀ, ಮರ- ದಿಂದಾಗಲೀ, ಅಥವಾ ಮಣ್ಣಿನಿಂದಾಗಲೀ ಲಕ್ಷಣಯುಕ್ತವಾದ ಪ್ರತಿಮೆಯನ್ನು[^1] ಮಾಡಿಸಬೇಕು. [^1]. ವಿಶೇಷಾಂಶ - 'ಪೂಜ್ಯಶ್ಚ ಭಗವಾನ್ ನಿತ್ಯಂ' ಎಂಬುದಾಗಿ ವಿಷ್ಣುವನ್ನು ಪೂಜಿಸ ಬೇಕೆಂದು ತಿಳಿಸಲಾಯಿತು. ಅಪ್ರಬುದ್ಧರೂ, ಅಜ್ಞಾನಿಗಳೂ ಆದ ನಮ್ಮಂತಹವರಿಗೆ 'ಪ್ರತಿಮಾಪೂಜೆ' ವಿಹಿತವಾಗಿದೆ. 'ಪ್ರತಿಮಾಸು ಅಪ್ರಬುದ್ಧಾನಾಮ್' ಎಂದು ಹೇಳಲ್ಪಟ್ಟಿದೆ. ಆದರೆ ಶಾಸ್ತ್ರೋಕ್ತರೀತಿಯಲ್ಲಿ ಪ್ರತಿಷ್ಠೆ ಮಾಡದ ಹಾಗೂ ಅಗ್ನಿ...…...... ಆಗದ ಪ್ರತಿಮೆಯನ್ನು ಪೂಜಿಸಲು ನಿಷೇಧವೂ ಇದೆ. 'ಅಪ್ರತಿಷ್ಠಿತಬಿಂಬಸ್ಯ ಪೂಜನಂ ಸಿದ್ಧಿಹಾನಿಕೃತ್' ಆದುದರಿಂದ ಆಚಾರ್ಯರು ಈ ಮೂರನೆಯ ಅಧ್ಯಾಯದಲ್ಲಿ ಪ್ರತಿಮಾಲಕ್ಷಣ, ಪ್ರತಿಷ್ಠಾವಿಧಾನ, ಪ್ರತಿಮಾನಿರ್ಮಾಣವಿಧಿ, ಪ್ರತಿಮಾಸ್ಥಾಪನೆಗಾಗಿ ದೇವಾಲಯನಿರ್ಮಾಣವಿಧಿ, ಜೀರ್ಣ- ದೇವಾಲಯದ ಉದ್ಧಾರಾದಿಗಳನ್ನು ನಿರೂಪಿಸುತ್ತಿದ್ದಾರೆ. ಪ್ರತಿಮೆಯನ್ನು ಸುವರ್ಣ, ರಜತ, ತಾಮ್ರ ಮೊದಲಾದ ಲೋಹ ಗಳಿಂದಲೂ; ಶಿಲೆ, ಮರ, ಮಣ್ಣುಗಳಿಂದಲೂ ಮಾಡಿಸಬಹುದು. (ಪ್ರತಿಮೆಗಾಗಿ ಬಳಸುವ ಪದಾರ್ಥಕ್ಕನುಗುಣವಾಗಿ ಫಲಗಳನ್ನೂ ಹೇಳಲಾಗಿದೆ. ತದ್ಯಥಾ?) ಸುವರ್ಣಪ್ರತಿಮ – ಸರ್ವಸಂಪತ್ತನ್ನು ನೀಡುತ್ತದೆ. ರಜತಪ್ರತಿಮೆ- ಧನ-ಪಶು-ವಿಜಯ-ವಿಜ್ಞಾನಗಳನ್ನು ನೀಡುತ್ತದೆ. ತಾಮ್ರಪ್ರತಿಮೆ – ಧರ್ಮ, ಬಹುಸೌಖ್ಯ ವೃದ್ಧಿಯನ್ನು ನೀಡುತ್ತದೆ. ಶಿಲಾಪ್ರತಿಮೆ - ಖೇದವನ್ನು ಪರಿಹರಿಸುತ್ತದೆ. ಮರದ ಪ್ರತಿಮೆ - ತೇಜಸ್ಸನ್ನು ವೃದ್ಧಿಮಾಡುತ್ತದೆ. ಮಣ್ಣಿನ ಪ್ರತಿಮೆ - ನಿರಂತರಶುಭವನ್ನು ನೀಡುತ್ತದೆ. ಹಿತ್ತಾಳೆಯ ಪ್ರತಿಮೆ - ಶತ್ರುನಾಶಕವಾಗಿದೆ. 'ಹಿರಣ್ಮಯೀ ಪ್ರತಿಕೃತಿಃ ಸರ್ವಸಂಪತ್ಕರೀ ಭವೇತ್ । ವಿತ್ತಂ ಪಶೂಂಶ್ಚ ವಿಜಯಂ ವಿಜ್ಞಾನಂ ರಾಜತೀ ಫಲಮ್ ॥ ವ.ಟೀ - ಪ್ರತಿಮಾಸ್ಥಾಪನಾದಿಲಕ್ಷಣಮಸ್ಮಿನ್ ಅಧ್ಯಾಯೇ ನಿರೂಪಯತಿ ಪ್ರತಿಷ್ಠಾಮಿತ್ಯಾದಿನಾ ॥ ಷಣ್ಣವತ್ಯಂಗುಲಾಂ ಯೋಗ ಆಸೀನಾಮಥವಾ ಸ್ಥಿತಾಮ್ । ಶಯಾನಾಂ ವಾ ಮುಮುಕ್ಷೂಣಾಂ ವ್ಯಾಚಕ್ಷಾಣಾಂ ನಿಜಾಂ ಸ್ಥಿತಿಮ್ ॥ ೨ ॥ ಅರ್ಥ - ಪ್ರತಿಮೆಯ ಅಳತೆ ಪ್ರತಿಮೆಯ ಅಂಗುಲದಿಂದ 96 ಅಂಗುಲವಿರಬೇಕು. ಕುಳಿತಿರುವ ಅಥವಾ ನಿಂತಿರಬಹುದು. ಮಲಗಿರುವಂತೆಯೂ ನಿರ್ಮಿಸಬಹುದು. ಈ ಮೂರೂ ವಿಧದ ಪ್ರತಿಮೆಗಳು[^1] ಮುಮುಕ್ಷುಗಳಿಗೆ ತನ್ನ ಸ್ವರೂಪವನ್ನು ತಿಳಿಸು- ತ್ತಿರುವ ಜ್ಞಾನಮುದ್ರೆಯನ್ನು ಹೊಂದಿರಬೇಕು. ಮುಖಾದೂರ್ಧ್ವ೦ ದ್ವ್ಯಂಗುಲೋಚ್ಚಾಂ ನವಾಂಗುಲಲಸನ್ ಮುಖಾಮ್ । ಸುವೃತ್ತತ್ರ್ಯಂಗುಲಗ್ರೀವಾಮ್ ಆಸ್ತನಾಚ್ಚ ಷಡಂಗುಲಾಮ್ ॥ ೩ ॥ ಪಂಚಾದಶಾಂಗುಲಾಂ ನಾಭೇಃ ಆಸಾರ್ಧದಶಕಾಂಗುಲಾಮ್ । ವೃಷಣಾದ್ ಆಮೂಲತಶ್ಚ ಸಾರ್ಧದ್ವ್ಯಂಗುಲಮಾಯತಾಮ್ ॥ ೪ ॥ ತಾವದ್ ಆಗುದತೋ ದೀರ್ಘಾ೦ ಚೈತ್ಯಾದ್ ಆ ಅಷ್ಟಾದಶಾಂಗುಲಾಮ್ । ತಾಮ್ರಾ ಧರ್ಮ೦ ವೃದ್ಧಿಂ ಚ ಕರೋತಿ ಬಹುಸೌಖ್ಯದಾ । ಖೇದಪ್ರದಾ ಶಿಲಾಜಾ ತೇಜೋದಾ ದಾರುಜಾ ತಥಾ । ಶುಭಾ ಪ್ರೋಕ್ತಾ ಮೃಣ್ಮಯೀ ಚ ಪೈತ್ತಲೀ ಶತ್ರುನಾಶಿನೀ ॥ [^1]. ಕುಳಿತಿರುವ ಪ್ರತಿಮೆಗಳು - ವ್ಯಾಸ, ಹಯಗ್ರೀವಾದಿಗಳು. ನಿಂತಿರುವ ಪ್ರತಿಮೆಗಳು - ಶ್ರೀನಿವಾಸ, ಶ್ರೀರಾಮ, ಶ್ರೀಕೃಷ್ಣ ಮಲಗಿರುವ ಪ್ರತಿಮೆಗಳು - ಶ್ರೀರಂಗನಾಥ, ಅನಂತಶಯನಗಳು. ಪ್ರತಿಮೆಯು ಚೋಟುದ್ದ ಪ್ರಮಾಣದಿಂದ ಪುರುಷಪ್ರಮಾಣ- ದಷ್ಟಿರಬಹುದು. ಅಂಗುಲವೆಂದರೆ ಯಾವುದೇ ಪ್ರತಿಮೆಯಾದರೂ ಅದರ ಕೈಬೆರಳ ಮಧ್ಯಪರ್ವದ ಉದ್ದವಾಗಿರುತ್ತದೆ. ಯಾವುದೇ ಪ್ರತಿಮೆಯಾದರೂ (ಅದರ ಅಳತೆಯ?) 96ನೇ ಒಂದು ಭಾಗವು ಬೆರಳಿನ ಮಧ್ಯಭಾಗದ ರೇಖೆಯ ಉದ್ದವಾಗಿರುತ್ತದೆ. ಪ್ರತಿ- ಯೊಂದು ಪ್ರತಿಮೆಯೂ ಅದರ ಬೆರಳಿನಿಂದ 96ಅಂಗುಲ (ಅಳತೆ?) ಇದ್ದೇ ಇರುತ್ತದೆ. ಶರೀರಂ ಸರ್ವಜಂತನಾಮ್ ಅಂಗುಲೀಭಿರನಾಮಯಮ್ । ಸ್ವಾಭಿಃ ಸ್ವಾಭಿಃ ಸುರಮುನೇ ಷಣ್ಣವಂತ್ಯಂಗುಲಾತ್ಮಕಮ್ ॥ – ಅಹಿರ್ಬುದ್ಧ್ನ್ಯ ಸಂಹಿತಾ ತಥಾ ದ್ವ್ಯಂಗುಲಚೈತ್ಯಾಂ ಚ ದ್ವಾವಿಂಶಜ್ಜಂಘಯಾ ಯುತಾಮ್ II ೫ ॥ ಅರ್ಥ - ಪ್ರತಿಮೆಯ 96ಅಂಗುಲ ಎತ್ತರವು ಈ ಪ್ರಮಾಣದಲ್ಲಿರ- ಬೇಕು. 1. ಹಣೆಯಿಂದ ನೆತ್ತಿಯವರೆಗೆ 2 ಅಂಗುಲ 2. ಮುಖದ ಉದ್ದ 9 ಅಂಗುಲ 3. ಕುತ್ತಿಗೆ 3 ಅಂಗುಲ 4. ಕುತ್ತಿಗೆಯಿಂದ ಸ್ತನದವರೆಗೆ 6 ಅಂಗುಲ 5. ಸ್ತನದಿಂದ ನಾಭಿಯವರೆಗೆ 15 ಅಂಗುಲ 6.ನಾಭಿಯಿಂದ ವೃಷಣ 10 1/2 ಅಂಗುಲ 7. ವೃಷಣದಿಂದ ಮೂಲ 2 1/2 ಅಂಗುಲ 8. ವೃಷಣಮೂಲದಿಂದ ಗುದ 2 1/2 ಅಂಗುಲ 9.ಗುದದಿಂದ ಕಾಲಿನ ಗಂಟು 18 ಅಂಗುಲ 10.ಕಾಲಿನಗಂಟು 02 ಅಂಗುಲ 11. ಗಂಟಿನಿಂದ ಮೊಣಕಾಲಿನವರೆಗೆ 22 ಅಂಗುಲ 12. ಗುಲ್ಬದಿಂದ(ಗಂಟು) ಪಾದದ ತುದಿ ಪರ್ಯಂತ 4 1/2 ಅಂಗುಲ ವ.ಟೀ - ಪ್ರಥಮಂ ಪ್ರತಿಮಾಲಕ್ಷಣಮಾಹ - ಮುಖಾದಿತ್ಯಾದಿನಾ ॥ ಆಸ್ತನಾಚ್ಚ = ಸ್ತನಪರ್ಯಂತಮಿತ್ಯರ್ಥಃ । ಅತ್ರ ಆಙ್ ಮರ್ಯಾದಾಮ್ । ಏವಮ್ ಉತ್ತರತ್ರಾಪಿ ದೃಷ್ಟವ್ಯಮ್ । ವೃಷಣಾದಾಮೂಲತಶ್ಚೇತ್ಯತ್ರ ವೃಷಣಾತ್ ಆಮೂಲತ ಇತಿ ಪದವಿಭಾಗಃ । ಚೈತ್ಯಾದ್ ಆ = ಚೈತ್ಯಪರ್ಯ೦ತಮ್ । ಅಷ್ಟಾದಶಾಂಗುಲಮಿತಿ ಭಾವಃ ॥ ಟೀಕಾರ್ಥ- 'ಮುಖಾದೂರ್ಧ್ವಮ್' ಎಂಬಲ್ಲಿಂದ ಪ್ರತಿಮಾ ಲಕ್ಷಣವನ್ನು ತಿಳಿಸುತ್ತಾರೆ. ' ಆ ಸ್ತನಾಚ್ಚ' ಎಂದರೆ ಸ್ತನಪರ್ಯಂತ ವಾಗಿ ಎಂದರ್ಥ. ಇಲ್ಲಿ ಆಙ್ ಎಂಬುದು ಮರ್ಯಾದೆ (=ವರೆಗೆ) ಎಂದರ್ಥ. ಮುಂದೆಯೂ ಹೀಗೆಯೇ ತಿಳಿಯುವುದು. ವೃಷಣಾದ್ ಆ ಮೂಲತಃ ಎಂದು ಆ ಪದವನ್ನು ಬಿಡಿಸಬೇಕು. ಚೈತ್ಯಾದಾ ಎಂದರೆ ಜಾನುವಿನವರೆಗೂ ಹದಿನೆಂಟು ಅಂಗುಲವಿರಬೇಕು ಎಂದರ್ಥ.[^1] [^1]. ವಿಶೇಷಾಂಶ- ಪ್ರತಿಮೆಯ ಅಳತೆ ೯೬ ಅಂಗುಲವಿರಬೇಕು. ಇಲ್ಲಿ ೯೭ ಅಂಗುಲ ಬರುತ್ತದೆ. ವಸ್ತುತಃ ಇಲ್ಲಿ ವೃಷಣದಿಂದ ಗುದಪರ್ಯಂತ ಇರುವ ಉದ್ದಗಲಗಳು ಎರಡೂವರೆ ಅಂಗುಲ. ಪ್ರತಿಮೆಯ ಆರಭ್ಯ ಗುಲ್ಫಮಧ್ಯಂ ಚ ಸಹಾರ್ಧಚತುರಂಗುಲಾಮ್ । ಷಡಂಗುಲೋಚ್ಚಪ್ರಪದಾಂ ಸಾರ್ಧದ್ವ್ಯಂಗುಲಮೇವ ಚ ॥ ೬ ॥ ಪ್ರಪದೋಚ್ಚಯುತಾಮಂತೇ ದ್ವ್ಯಂಗುಲಪ್ರಪದೋಚ್ಛ್ರಯಾಮ್ । ತ್ರ್ಯಂಗುಲದ್ವ್ಯಂಗುಲಾಮರ್ಧಹೀನಮಧ್ಯಾಂಗುಲಾಮಪಿ ॥7॥ ತ್ರಿಪದಾಂಗುಲಹೀನಾನ್ಯಾಂತತಸ್ತಾದೃಶತತ್ಪರಾಮ್ । ಅರ್ಥ ಕಾಲಿನ ಗಂಟಿನಿಂದಾರಂಭಿಸಿ ಪಾದತಲದವರೆಗೂ ನಾಲ್ಕುವರೆ ಅಂಗುಲವು. ಹಿಂಬದಿಯಲ್ಲಿ ಕಾಲಿನ ಬುಡದಿಂದ ಗಂಟಿನವರೆಗೂ 6ಅಂಗುಲವು. ಕಾಲಿನ ಮಧ್ಯ = ಮೂರುವರೆ ಅಂಗುಲ. ಕಾಲಿನ ತುದಿ ಎರಡು ಅಂಗುಲ. ಕಾಲಿನ ಹೆಬ್ಬೆರಳಿನಿಂ- ದಾರಂಭಿಸಿ ಮೊದಲಿನ ಎರಡು ಬೆರಳುಗಳ ಉದ್ದ ಮೂರಂಗುಲ- ಗಳು. ಕಾಲಿನ ಮಧ್ಯದ ಬೆರಳು ಅರ್ಧಾಂಗುಲ ಕಡಿಮೆ. ನಾಲ್ಕನೆಯ ಬೆರಳಿನ ಉದ್ದ ಎರಡೂ ಕಾಲು. ಐದನೆಯ ಬೆರಳೂ ಹಾಗೆಯೇ. ಹೆಬ್ಬೆರಳಿನ ಉಗುರು ಮುಕ್ಕಾಲು ಅಂಗುಲ ಉದ್ದವಿರ- ಬೇಕು. ಹೆಬ್ಬೆರಳಿನ ಅರ್ಧದಷ್ಟು ನಂತರ ಬೆರಳಿನ ಉಗುರು. ಮುಂದಿನ ಎಲ್ಲಾ ಬೆರಳುಗಳ ಉಗುರುಗಳು ಹಿಂದಿನದಕ್ಕಿಂತ ಕಾಲು ಅಂಗುಲ ಕಡಿಮೆ ಇರಬೇಕು. ಉಗುರಿನ ಅಳತೆಯಲ್ಲಿ ಕ್ರಮೇಣ ಕಾಲು ಅಂಗುಲ ಕಡಿಮೆಯಾಗು- ತ್ತಾ ಹೋಗಬೇಕು. ಅಂದರೆ ಮೊದಲನೆ ಬೆರಳಿನ ಉಗುರು ಮುಕ್ಕಾಲು. ಎರಡನೆಯ ಬೆರಳಿನ ಉಗುರು ಮೂರನೆ ಎಂಟು ಭಾಗ, ನಾಲ್ಕನೆಯ ಬೆರಳಿನ ಉಗುರು ಒಂಭತ್ತನೇ ಮೂವತ್ತೆರಡು. [^1] ಉದ್ದವನ್ನು ೯೬ ಎಂದು ಹೇಳಿದಾಗ ಇದರಲ್ಲಿ ಅಗಲವನ್ನು ಸೇರಿಸಲಾಗದು. ವೃಷಣದ ಅಗಲ ಒಂದಂಗುಲವನ್ನು ಸೇರಿಸದೇ ಇದ್ದಾಗ ೯೬ ಅಂಗುಲ ಬರುತ್ತದೆ. ಹೀಗಾಗಿ ತಲೆಯಿಂದಾರಂಭಿಸಿ ವೃಷಣಪರ್ಯಂತ ೪೫ ೧/೨ ಅಂಗುಲ ವೃಷಣದ ಪರಿಮಾಣ ೦೪ ಅಂಗುಲ ವೃಷಣದಿಂದ ಪಾದಾಗ್ರದವರೆಗೂ ೪೬ ೧/೨ ಅಂಗುಲ ಒಟ್ಟು ೯೬ ಅಂಗುಲ [^1]. ವಿಶೇಷಾಂಶ ಈ ಶ್ಲೋಕಗಳಲ್ಲಿ ಕಾಲಿನ ಎತ್ತರ, ಬೆರಳುಗಳ ಉದ್ದ ಹಾಗೂ ನಖಗಳ ಉದ್ದವನ್ನು ಹೇಳುತ್ತಿದ್ದಾರೆ. ಪಾದೋನೋಚ್ಚಾಂಗುಷ್ಠನಖಾಂ ತದರ್ಧತದನಂತರಾಮ್ ॥ ೮ ॥ ಕ್ರಮಶಃ ಪಾದಹೀನಾನ್ಯಾಂ ರಕ್ತಪಾದನಖಾಂ ಶುಭಾಮ್ । ವ.ಟೀ. - ಷಡಂಗುಲೋಚ್ಚಃ । ಮಧ್ಯಭಾಗಃ । ಸಾರ್ಧಚತುರಂಗು- ಲಮ್ । ಟೀಕಾರ್ಥ- ಕಾಲಿನ ಬುಡದಿಂದ ಗಂಟಿನ ಎತ್ತರ 6 ಅಂಗುಲ. ಗಂಟಿನಿಂದ ಕಾಲಿನ ತುದಿಯವರೆಗೂ ನಾಲ್ಕುವರೆ ಅಂಗುಲ- ವೆಂದರ್ಥ. ವ.ಟೀ. - ತ್ರ್ಯಂಗುಲದೀರ್ಘಂಮಗುಷ್ಠಮ್ । ತದರ್ಧ೦ ತದ- ನಂತರಮ್ ಅಂಗುಲಂ ಯಸ್ಯಾ ಸಾ ಅಂಗುಲಾರ್ಧಹೀನಂ ಮಧ್ಯಾಂಗುಲಂ ಯಸ್ಯಾ ಸಾ ಅರ್ಧಹೀನಮಧ್ಯಾಂಗುಲಾ ಸಾರ್ಧದ್ವಯಾಂಗುಲೇತ್ಯರ್ಥ: ಟೀಕಾರ್ಥ - ಹೆಬ್ಬೆರಳಿನಿಂದಾರಂಭಿಸಿ ಮೊದಲೆರಡು ಬೆರಳುಗಳ ಉದ್ದ ಮೂರಂಗುಲ. ಇವೆರಡಕ್ಕಿಂತ ನಂತರದ ಬೆರಳು ಎಂದರೆ ಕಾಲಿನ ಮಧ್ಯದ ಬೆರಳು. ಅದು ಮೊದಲಿನ ಎರಡು ಬೆರಳುಗಳಿ- ಗಿಂತ ಅರ್ಧ ಅಂಗುಲ ಕಡಿಮೆ, ಎಂದರೆ ಎರಡುವರೆ ಅಂಗುಲ (ಸಾರ್ಧದ್ವಯಾಂಗುಲೇತ್ಯರ್ಥ). ನಾಲ್ಕನೆಯ ಬೆರಳಿನ ಉದ್ದ ಮುಕ್ಕಾಲು ಅಂಗುಲ ಕಡಿಮೆಯಾದ ಮೂರಂಗುಲ. ಎಂದರೆ ಎರಡುಕಾಲು ಅಂಗುಲ (ತ್ರಿಪಾದಹೀನ ಮಂಗುಲತ್ರಯಮ್; ಸಪಾದಾಂಗುಲದ್ವಯಾಮಿತಿ ಯಾವತ್). [^1] ಬೆರಳುಗಳಲ್ಲಿ ಮೊದಲ ಎರಡು ಬೆರಳ ಉದ್ದ ಸಮಾನವಾಗಿರ- ಬೇಕು. ಕಾಲಿನ ನಾಲ್ಕನೆಯ ಬೆರಳು ಹಿಂದಿನ ಬೆರಳಿಗಿಂತ ಮುಕ್ಕಾಲು ಅಂಗುಲ ಕಡಿಮೆ ಇರಬೇಕು. [^]1. ವಿಶೇಷಾಂಶ - ವಸುಧೇಂದ್ರರ ಪ್ರಕಾರ ನಾಲ್ಕನೆಯ ಹಾಗೂ ಐದನೆಯ ಬೆರಳುಗಳ ಉದ್ದವು ಹಿಂದೆ ಹೇಳಿದ ಮೂರಂಗುಲದಲ್ಲಿ ಕಾಲುಭಾಗ ಕಡಿಮೆಯಾದ ಎಂದರೆ ಎರಡಂಗುಲ ಉದ್ದವಿರುತ್ತದೆ ಎಂದು. (ಪೂರ್ವಸಂಖ್ಯಾಯಾಃ ಪಾದನ್ಯೂನಾ ತದನಂತರಾಂ, ಅಂಗುಲದ್ವಯದೀರ್ಘಾಮಿತಿ ಭಾವಃ) ಹೆಬ್ಬೆರಳಿನ ಉಗುರು ಕಾಲುಭಾಗಕಮ್ಮಿ ಒಂದಂಗುಲ ಉದ್ದ. ಅಂದರೆ ಮುಕ್ಕಾಲು ಅಂಗುಲ. ತದನಂತರದ ಬೆರಳಿನ ಉಗುರು ಅದರ ಅರ್ಧದಷ್ಟು. ತದರ್ಧಂ ತದನಂತರಂ ನಖಾಂತರಂ ಯಸ್ಯಾ ಸಾ ತದರ್ಧತದನಂತರಾ ತಾಮ್. ಹೆಬ್ಬೆರಳಿನ ಉಗುರು ಮುಕ್ಕಾಲು ಅಂಗುಲ. ಅದರ ಅರ್ಧದಷ್ಟು ನಂತರದ ಬೆರಳಿನ ಉಗುರು. ಮುಂದಿನ ಎಲ್ಲಾ ಬೆರಳುಗಳ ಉಗುರುಗಳು ಹಿಂದಿನವುಗಳಿಗಿಂತ ಕಾಲು ಭಾಗ ಕಡಿಮೆ. ಅಂದರೆ ಮೊದಲ ಬೆರಳು ಮುಕ್ಕಾಲು. ಎರಡನೆ ಬೆರಳಿನ ಉಗುರು ಎಂಟನೇ ಮೂರುಭಾಗ(೩/೮). ವಿಸ್ತಾರಃ ಪ್ರಪದಸ್ಯಾಪಿ ಷಡಂಗುಲ ಉದಾಹೃತಃ ॥ ೯ ॥ ಅಂಗುಷ್ಠಪರಿಣಾಹಸ್ತು ಚತುರಂಗುಲ ಈರಿತಃ । ತ್ರ್ಯಂಗುಲಂ ತು ತದನ್ಯಃ ಸ್ಯಾದ್ ವ್ರೀಹ್ಯರ್ಧೋನಾಃ ಕ್ರಮಾತ್ ಪರಾಃ ॥ ೧೦ ॥ ಅರ್ಥ- ಪಾದದ ಅಂಗುಲವಾದರೋ ಆರಂಗುಲ. ಹೆಬ್ಬೆರಳಿನ ಸುತ್ತಳತೆ ನಾಲ್ಕಂಗುಲ. ನಂತರ ಬೆರಳು ಮೂರಂಗುಲ, ಮುಂದಿನ ಬೆರಳು ಕ್ರಮವಾಗಿ ಹಿಂದಿನಕ್ಕಿಂತ ಭತ್ತಧಾನ್ಯದ ಅರ್ಧದಷ್ಟು ಕಡಿಮೆಯಾಗುತ್ತದೆ. ದಶಾಂಗುಲಂ ಜಂಘಮೂಲಂ ಮಧ್ಯಂ ತು ತ್ರ್ಯಂಗುಲಾಧಿಕಮ್ । ಸಪ್ತಾದಶಾಂಗುಲಂ ತೂರ್ಧ್ವಂ ಜಾನುರಷ್ಟಾದಶಾಂಗುಲಃ ॥ ೧೧ ॥ ಊರ್ವಂತೋಽಪಿ ತಥಾ ಜ್ಞೇಯೋ ಮಧ್ಯಂ ದ್ವಿರ್ದ್ವಾದಶಾಂಗುಲಮ್ । ಚತುರಂಗುಲಾಧಿಕಂ ಮೂಲಂ ಗುಹ್ಯಂ ಸಾರ್ಧಚತುಷ್ಟಯಮ್ ॥ ೧೨ ॥ ಸಾರ್ಧತ್ರಯಂ ಪರೀಣಾಹಾದ್ ವೃಷಣಂ ಚತುರಂಗುಲಮ್ । ಸಪ್ತಾಂಗುಲಂ ಪರೀಣಾಹಾದ್ ವೃತ್ತಂ ಪ್ರೋಕ್ತಂ ಸಮಸ್ತಶಃ ॥ ೧೩॥ ಅರ್ಥ - ಮೊಣಕಾಲಿನ ಸುತ್ತಳತೆ ಹತ್ತು ಅಂಗುಲ; ಮೊಣಕಾಲಿನ ಮಧ್ಯದ ಸುತ್ತಳತೆ ಹದಿಮೂರು. ಮೊಣಗಂಟಿನ ಸುತ್ತಳತೆ ಹದಿನೆಂಟು. ತೊಡೆಯ ಕೆಳಭಾಗದ ಸುತ್ತಳತೆ ಹದಿನೆಂಟು, ಮಧ್ಯಭಾಗದ ಸುತ್ತಳತೆ ಇಪ್ಪತ್ತನಾಲ್ಕು ಮೂರನೇ ಬೆರಳಿನ ಉಗುರು ೩೨ನೇ ೯ಭಾಗ(೯/೩೨). ನಾಲ್ಕನೇ ಬೆರಳಿನ ಉದ್ದ ಅದರ ಮುಕ್ಕಾಲಂಶ (೨೭/೧೨೮). ಕಿರುಬೆರಳಿನ ಉಗುರಿನ ಉದ್ದ ಅದರ ಮುಕ್ಕಾಲಂಶ. ಮೊದಲಿನ ಉಗುರಿಗಿಂತ ಮುಂದಿನ ಬೆರಳುಗಳ ಉಗುರುಗಳ ಅಳತೆಯಲ್ಲಿ ಕಾಲುಭಾಗ ಕಮ್ಮಿಯಾಗಿರುತ್ತದೆ. ಎಂದರೆ ಪ್ರತಿಯೊಂದು ಅಳತೆಯನ್ನೂ ನಾಲ್ಕು ಭಾಗ ಮಾಡಿ, ಅದರ ಮೂರುಭಾಗಗಳನ್ನು ಮುಂದಿನ ಉಗುರಿನ ಅಳತೆ ಎಂದು ತಿಳಿಯಬೇಕು. ಅಯಂ ಭಾವಃ - ಅಂಗುಷ್ಠಸ್ಯ ತ್ರಿಪಾದೋಚ್ಚತ್ವಮ್ । ತದನಂತರಸ್ಯ ಸಾರ್ಧೈಕಪಾದೋಚತ್ವಮ್ । ತದನಂತರಸ್ಯ ಸಾರ್ಧೈಕಪಾದಸ್ಯ ಚತುರ್ಧಾವಿಭಾಗೇ ಕೃತೇ ತ್ರಿಭಾಗೋಚ್ಚತ್ವಮ್, ತದನಂತರಯೋರಪಿ ತದದ್ವದಿತಿ । (ವ.ಟೀ) ಮೇಲ್ಭಾಗದ ಸುತ್ತಳತೆ ಇಪ್ಪತ್ತೆಂಟು ಅಂಗುಲ. ಗುಹ್ಯಾಂಗದ ದೈರ್ಘ್ಯ ನಾಲ್ಕುವರೆ ಅಂಗುಲ. ಅದರ ಸುತ್ತಳತೆ ಮೂರುವರೆ ಅಂಗುಲ. ವೃಷಣದ ಉದ್ದ ನಾಲ್ಕು ಅಂಗುಲ, ಸುತ್ತಳತೆ ಏಳಂಗುಲ. ಇವೆಲ್ಲವೂ ವೃತ್ತಾಕಾರವಾಗಿರಬೇಕು. ಮೊಣಕಾಲಿನ ಮಧ್ಯದ ಸುತ್ತಳತೆ ಹದಿಮೂರು ಅಂಗುಲ 'ಮಧ್ಯಂ ತ್ರಯೋದಶಾಂಗುಲಪರಿಣಾಹಃ' ವ.ಟೀ. ಮೊಣಕಾಲಿನ ಮೇಲ್ಭಾಗ ಹದಿನೇಳು - ಊರ್ಧ್ವ೦ ಜಂಘಾವಸಾ- ನಮ್. ತೊಡೆಯ ಮಧ್ಯಭಾಗದ ಸುತ್ತಳತೆ ಇಪ್ಪತ್ತನಾಲ್ಕು ಅಂಗುಲ. ಮೂಲವೆಂದರೆ ತೊಡೆಯ ಮೂಲ ಎಂದರೆ ತೊಡೆಯ ಮೇಲ್ಭಾ- ಗದ ಸುತ್ತಳತೆಯು ಹಿಂದಿನಸಂಖ್ಯೆಯಾದ ಇಪ್ಪತ್ತನಾಲ್ಕು ಅಂಗು- ಲಕ್ಕೆ ನಾಲ್ಕನ್ನು ಸೇರಿಸಿದರೆ ಇಪ್ಪತ್ತೆಂಟು ಅಂಗುಲವಾಗುತ್ತದೆ - ಚತುರಂಗುಲಾಧಿಕಮ್, ಪೂರ್ವೋಕ್ತಸಂಖ್ಯಾಯಾ ಇತಿ ಶೇಷಃ (ವ.ಟೀ.) ಲಿಂಗದ ಉದ್ದ ನಾಲ್ಕುವರೆ ಅಂಗುಲ; ಲಿಂಗದ ಸುತ್ತಳತೆ ಮೂರುವರೆ. ವೃಷಣವೆಂದರೆ ಅಂಡಕೋಶ; ಅದು ನಾಲ್ಕಂಗುಲವಿರಬೇಕು. ಸುತ್ತಳತೆ ಏಳು ಅಂಗುಲ. ವೃಷಣಶಬ್ದೇನ ಅಂಡಕೋಶೋ ವಿವಕ್ಷಿತಃ । ತಚ್ಚತುರಂಗುಲದೀರ್ಘಮ್ (ವ.ಟೀ.) ಕಟಿಪರಿಮಾಣ ಅಷ್ಟತ್ರಿಂಶಾಂಗುಲಂ ಕಟ್ಯಾಃ ಪರೀಣಾಹ ಉದಾಹೃತಃ । ಸುವೃತ್ತತ್ವಂ ತಥಾ ಶ್ರೋಣ್ಯೋಃ ಪೀನತ್ವಂ ಚ ಸಮಸ್ತಶಃ ॥ ೧೪ ॥ ವಿಸ್ತಾರಶ್ಚ ತಥಾ ಕಟ್ಯಾ: ಸುಪ್ರತಿಷ್ಠಿತತಾ ಪದೋಃ । ಅರ್ಥ- ಸೊಂಟದ ಸುತ್ತಳತೆ 38 ಅಂಗುಲಗಳು, ನಿತಂಬಗಳು ದುಂಡಾಗಿರಬೇಕು. ಇತರ ಎಲ್ಲಾ ಅವಯವಗಳೂ ಸುಪುಷ್ಟ- ವಾಗಿದ್ದು ಸುಂದರವಾಗಿರಬೇಕು. ಕಟಿಯು ವಿಸ್ತಾರವಾಗಿರಬೇಕು. ಪಾದಗಳು ಪೀಠದ ಮೇಲೆ ಚೆನ್ನಾಗಿ ಸಮತಲವಾಗಿರಬೇಕು. ಕಟ್ಯಾಶ್ಚೈ ವಾಂಗುಲಾಧಿಕ್ಯಂ ನಾಭೇರಧ ಉದಾಹೃತಮ್ ॥ ೧೫ ॥ ನಾಭಿಃ ಸಾರ್ಧಾಂಗುಲಶ್ಚೈವ ಗಂಭೀರೋSರ್ಧಾಂಗುಲೋಂತತಃ । ವೃತ್ತಃ ಪ್ರದಕ್ಷಿಣಶ್ಚೈವ ದ್ವಿಚತ್ವಾರಿಂಶದಂಗುಲಮ್ ॥ ೧೬ ॥ ಮಧ್ಯಂ ಸ್ತನೇ ಪರೀಣಾಹಃ ಷಡಂಗುಲಮತೋSಧಿಕಃ । ಅರ್ಥ - ನಾಭಿಯ ಕೆಳಗಿನ ಹೊಟ್ಟೆಯ ಸುತ್ತಳತೆ ಟೊಂಕಕ್ಕಿಂತ ಒಂದಂಗುಲ ಅಧಿಕ ಎಂದರೆ 39 ಅಂಗುಲ, ನಾಭಿಯು ಒಂದುವರೆ ಅಂಗುಲವು. ನಾಭಿಯ ಸುಳಿಯ ಆಳ ಅರ್ಧಾಂಗುಲ, ನಾಭಿಯು ದುಂಡಾಗಿದ್ದು ಪ್ರದಕ್ಷಿಣಾಕಾರವಾದ ಸುಳಿಯಿಂದ ಕೂಡಿರಬೇಕು ನಾಭಿಃ ಸಾರ್ಧಾಂಗುಲಗಂಭೀರಃ, ಅಂತೇ ಅರ್ಧಾಂಗುಲವಿಸ್ತಾರಃ (ವ.ಟೀ.) ನಡುವಿನ ಮಧ್ಯಭಾಗದ ಸುತ್ತಳತೆ 42 ಅಂಗುಲ. ಎದೆಯ ಸುತ್ತಳತೆ ನಡುಭಾಗಕ್ಕಿಂತ ಆರಂಗುಲ ಅಧಿಕ. ನಲವತ್ತೆಂಟು ಅಂಗುಲ- ವೆಂದರ್ಥ. ಏಕೋನವಿಂಶಾಂಗುಲಂ ತದುರೋವಿಸ್ತಾರಲಕ್ಷಣಮ್ ॥ ೧೭ ॥ ಪಾದೋನಮಂಗುಲಂ ಚೈವ ಭುಜಾಭ್ಯಾಂ ಸಹ ಸಾರ್ಧಕಮ್ । ಅರ್ಥ - ಹತ್ತೊಂಭತ್ತು ಅಂಗುಲ ಮತ್ತು ಮುಕ್ಕಾಲು ಅಂಗುಲ ಕೂಡಿಸಿದಾಗ ಬರುವ ಹತ್ತೊಂಭತ್ತು ಮುಕ್ಕಾಲು ಎದೆಯ ವಿಸ್ತಾರವಿರಬೇಕು.[^1]. ಎರಡು ಭುಜಗಳಿಂದ ಕೂಡಿಸಿ ಎದೆಯ ವಿಸ್ತಾರ ಹೇಳಿದಾಗ (28+1/4+1=29-1/4) ಇಪ್ಪತ್ತೊಂಭತ್ತು ಕಾಲು ಆಗುತ್ತದೆ.[^2] [^1]. ಏಕೋ ನ ವಿಂಶಾಂಗುಲಂ + ಪಾದೋನೈಕಾಂಗುಲಂ ಚ । ಉರೋ ವಿಸ್ತಾರಲಕ್ಷಣಮ್ [^2]. ಭುಜಾಭ್ಯಾಂ ಸಹ ಸಾರ್ಧಕಮಿತ್ಯ ಸ್ಯಾಭಿಪ್ರಾಯಮಾಹ । ದ್ವಾಭ್ಯಾಂ ಭುಜಾಭ್ಯಾಂ ಸಹ ಉರಸೋ ಮಾನೇ ಕೃತೇ ಸತಿ ಸಾರ್ಧೈಕಪಾದಾಷ್ಟಾವಿಂಶಾಂಗುಲಂ ಭವೇತ್ - ವ.ಟೀ. ವಿಶೇಷಾಂಶ-೨೯ಕಾಲು ಅಂಗುಲವೆಂದು ಇಟ್ಟುಕೊಂಡರೆ ಉರಸ್ಸಿನ ಐದುಪಟ್ಟು ದೇಹವಿರುತ್ತದೆ ಎಂಬ ಪ್ರಮಾಣದಂತೆ ೯೮ಮುಕ್ಕಾಲು ಆಗುತ್ತದೆ. ೯೬ ಆಗುವುದಿಲ್ಲ. ಎದೆಯ ವಿಸ್ತಾರ ೧೯ ಎಂದು ಒಪ್ಪಿದರೆ ೧೯×೫=೯೫ ಅಂಗುಲ. ೯೬ ಅಂಗುಲವಾಗು- ವುದಿಲ್ಲ. ಆದರೂ ಶರೀರವು ದಶತಾಲವೆಂದಿರುವ ಆಚಾರ್ಯರು ೯೫ಅಂಗುಲಗಳನ್ನೂ ಒಪ್ಪಿರುತ್ತಾರೆ. ಒಂದು ತಾಲವೆಂದರೆ ೯-೧/೨ ಅಂಗುಲ ೯೫ ಅಂಗುಲಗಳೇ ಆಗುತ್ತವೆ. ಅಂಸಯೋರ್ವಿಸ್ತೃತಿಶ್ಚೈವ ಪೃಥಗಷ್ಟಾಂಗುಲಾ ಮತಾ ೧೮ ॥॥ ಸಪ್ತಾಂಗುಲೋಚ್ಛ್ರಯಃ ಕಕ್ಷಾದುಪರಿ ಸ್ಕಂಧಯೋರ್ಮತಾ। ಅರ್ಥ- ಹೆಗಲಿನ ವಿಸ್ತಾರವಾದರೋ ಪ್ರತ್ಯೇಕಪ್ರತ್ಯೇಕವಾಗಿ ಎಂಟು ಅಂಗುಲ. ಕಂಕುಳಿನಿಂದ ಹೆಗಲಿನವರೆಗೂ ಏಳು ಅಂಗುಲ. ಅಷ್ಟತ್ರಿಂಶಾಂಗುಲಂ ಚೈವ ಹಸ್ತಯೋರ್ಮಾನಮುಚ್ಯತೇ ॥ ೧೯ ॥ ಅಷ್ಟಾದಶಾಂಗುಲೋ ಬಾಹ್ವೋಃ ಪರೀಣಾಹ ಉದಾಹೃತಃ । ಕ್ರಮಾದೂನಂ ತದಂತೇ[^1] ತುಸಾರ್ಧಾಷ್ಟಾಂಗುಲಮೀರಿತಮ್ ॥ ೨೦ ॥ ಅರ್ಥ - ಬಾಹುಗಳ ಉದ್ದ 38 ಅಂಗುಲಗಳು, ತೋಳಿನ ಸುತ್ತಳತೆ ಹದಿನೆಂಟು ಅಂಗುಲ. ಕ್ರಮವಾಗಿ ಕೆಳಗೆ ಇಳಿದಂತೆ ಕಡಿಮೆ- ಯಾಗುತ್ತಾ ಬಾಹುವಿನ ತುದಿಯಲ್ಲಿ ಎಂಟುವರೆ ಅಂಗುಲಗಳು. ಸಾಂಗುಲಸ್ತು ತಲಃ ಸಾರ್ಧನವಾಂಗುಲ ಉದಾಹೃತಃ । ಸಮಂ ತದುಭಯಂ ಜ್ಞೇಯಂ ತಥೈವ ತಲವಿಸ್ತೃತಿಃ ॥ ೨೧ ॥ ಅರ್ಧಾಂಗುಲೋನ್ನತಾ ಮಧ್ಯಾ ದ್ವಯೋಃ ಸಾರ್ಧಾಂಗುಲೋ- ನ್ನತಾ । ಕನಿಷ್ಠಿಕಾಯಾಸ್ತಸ್ಯಾಸ್ತು ವ್ರೀಹಿಮಾನಾಧಿಕಃ ಪರಃ ॥ ೨೨ ॥ ಅರ್ಥ - ನಡುಬೆರಳಿನಿಂದ ಕೂಡಿದ ಅಂಗೈಯ ಉದ್ದ 9ವರೆ(91/2) ಅಂಗುಲಗಳು, ಅಂಗೈಯ ಉದ್ದ ಮಾತ್ರವಾದರೆ ನಾಲ್ಕು ಮುಕ್ಕಾಲು ಅಂಗುಲಗಳು. ಅಂಗೈಯ ಅಗಲವೂ ಸಹ ನಾಲ್ಕು ಮುಕ್ಕಾಲು(4 3/4) ಅಂಗುಲಗಳು, ಮಧ್ಯದ ಬೆರಳು ನಾಲ್ಕು ಮುಕ್ಕಾಲು ಅಂಗುಲ. ತರ್ಜನಿ ಹಾಗೂ ಅನಾಮಿಕೆಗಳು ಮಧ್ಯದ ಬೆರಳಿನ ಉದ್ದಕ್ಕಿಂತ ಅರ್ಧಾಂಗುಲ ಕಡಿಮೆ ಉದ್ದ. ತರ್ಜನಿಯ ಹಾಗೂ ಅನಾಮಿಕೆಯ ಉದ್ದ ನಾಲ್ಕು ಕಾಲು ಅಂಗುಲ(4 1/4) ಕಿರುಬೆರಳಾದರೋ ನಡುಬೆರಳಿಗಿಂತ ಒಂದುವರೆ ಅಂಗುಲ ಕಡಿಮೆ. ಅಂದರೆ ಮೂರೂಕಾಲು (3 1/4) [^1]. ತದಂತೇ - ಬಾಹಂತೇ । ಸಾರ್ಧಾಷ್ಟಾಂಗುಲಂ ಜ್ಞೇಯಮ್ (ವ.ಟೀ.) ಅಂಗುಲ. ಕಿರುಬೆರಳಿಗಿಂತ ಹೆಬ್ಬೆರಳು ಭತ್ತದ ಕಾಳಿನಷ್ಟು ಮಾತ್ರ ಉದ್ದವಾಗಿದೆ.[^1] ಸಾರ್ಧತ್ರಯಪರೀಣಾಹೌ ಮಧ್ಯಜ್ಯೇಷ್ಠಾವುದಾಹೃತೌ । ಅನ್ಯೌ ವ್ರೀಹಿತದರ್ಧೋನೌ ಅನ್ಯಾ ಸಾರ್ಧದ್ವಯಾಂಗುಲಾ ॥ ೨೩ ॥ ಪಾದೋನಾಂತಪರಿಣಾಹಾಃ ಸರ್ವೆ ಜ್ಯೇಷ್ಠಂ ವಿನಾ ಸ್ಮೃತಮ್ । ಅರ್ಥ - ಮಧ್ಯದ ಬೆರಳು ಹಾಗೂ ಹೆಬ್ಬೆರಳಿನ ಸುತ್ತಳತೆ ಮೂರು- ವರೆ ಅಂಗುಲಗಳು, ಉಳಿದ ತರ್ಜನಿ-ಅನಾಮಿಕೆಗಳ ಸುತ್ತಳತೆ ಮಧ್ಯ ಹಾಗೂ ಹೆಬ್ಬೆರಳಿಗಿಂತ ಅರ್ಧಾಂಗುಲ ಕಡಿಮೆ. ಅಂದರೆ ಮೂರುಅಂಗುಲ ಸುತ್ತಳತೆ. ತರ್ಜನೀ ಹಾಗೂ ಅನಾಮಿಕೆಗಿಂತ ಕಿರುಬೆರಳಿನ ಸುತ್ತಳತೆ ಅರ್ಧಾಂಗುಲ ಕಮ್ಮಿಯಾಗಿದ್ದು ಎರಡು- ವರೆ ಅಂಗುಲ ಸುತ್ತಳತೆಯು. ಹೆಬ್ಬೆರಳನ್ನು ಬಿಟ್ಟು ಉಳಿದ ಎಲ್ಲಾ ಬೆರಳುಗಳೂ ಬುಡಕ್ಕಿಂತಲೂ ತುದಿಯಲ್ಲಿ ಕಾಲಂಗುಲ ಕಮ್ಮಿ ಸುತ್ತಳತೆ ಇರುತ್ತವೆ. ಹೆಬ್ಬೆಟ್ಟಿನ ಆದಿ ಹಾಗೂ ಅಂತ್ಯಗಳಲ್ಲಿ ಸುತ್ತಳತೆ ಒಂದೇ ರೀತಿ ಇರುತ್ತದೆ.[^2] ವಕ್ಷೋವಿಸ್ತಾರಸದೃಶಃ ಪರಿಣಾಹೋ ಗಲಸ್ಯ ಚ॥ ೨೪ ॥ ಲಲಾಟಕುಕ್ಷಿಕಂಠಾಸ್ತು ದೀರ್ಘರೇಖಾತ್ರಯಾನ್ವಿತಾಃ । ವೃತ್ತೋ ಗಲೋ ಬಾಹವಶ್ಚ ಸ್ತನಾವಂಗುಲಯಸ್ತಥಾ ॥25॥ ರಕ್ತಾಃ ತಲನಖಾಶ್ಚೈವ ನೇತ್ರಾಂತೋಽಧರ ಏವ ಚ । ಅರ್ಥ - ಎದೆಯ ವಿಸ್ತಾರ 19ಮುಕ್ಕಾಲು (19 3/4), ಅಷ್ಟೇ ಕುತ್ತಿಗೆಯ ಸುತ್ತಳತೆ ಇರಬೇಕು. ಲಲಾಟ, ಉದರ, ಕುತ್ತಿಗೆಗಳಲ್ಲಿ ಉದ್ದವಾದ ಮೂರು ರೇಖೆಗಳಿರಬೇಕು. ಹಾಗೂ ಕುತ್ತಿಗೆ, ತೋಳು ಗಳು, ಸ್ತನ ಹಾಗೂ ಬೆರಳು ದುಂಡಾಗಿರಬೇಕು. ಅಂಗೈ, ಅಂಗಾಲು, ನಖಗಳು, ಕಣ್ಣಿನ ತುದಿ, ಕೆಳಗಿನ ಹಾಗೂ [^]1. ಅಂಗುಲೀಭಿಃ ಸಹಿತಃ ಸಾಂಗುಲಃ ತಲಃ ಅಂಗುಲಶ್ಚೇತ್ಯು- ಭಯಂ ಸಮಮ್ । ತಲವಿಸ್ತೃತಿಶ್ಚ ತದ್ವದೇವ । ತಲವಿಸ್ತೃತಿಃ ತಲದೈರ್ಘ್ಯಂ ಚೇತಿ ತ್ರಯಂ ಪೃಥಕ್ ಪೃಥಕ್ ಸಪಾದ-ಸಾರ್ಧ ಚತುರಂಗುಲಮಿತಿ ಭಾವ- ವ.ಟೀ. [^2]. ಸರ್ವಾಂಗುಲೀನಾಂ ಕ್ರಮಾತ್ ಪಾದನ್ಯೂನತ್ವಂ ತತ್ಪರಿಣಾಹೋ ಭವೇದಿತಿ ಭಾವಃ - ವ.ಟೀ. ಮೇಲಿನ ತುಟಿಗಳು, ನಾಲಿಗೆ ಇವುಗಳು ಕೆಂಪಾಗಿರಬೇಕು. ಉತ್ತರೋಷ್ಠಶ್ಚ ಜಿಹ್ವಾಚ ನಖೌ ಪಾದೋನಕಾಂಗುಲೌ॥ ೨೬ ॥ ಅರ್ಧಾಂಗುಲೌ ತಥಾ ಮಧ್ಯಾವನ್ಯೇಽಷ್ಟಾಂಶಕ್ರಮೋನಕಾಃ । ಅರ್ಥ – ಅಂಗೈ ಹಾಗೂ ಬಲಗೈಗಳ ಹೆಬ್ಬೆರಳಿನ ಉಗುರುಗಳ ಉದ್ದ ಮುಕ್ಕಾಲಂಗುಲ(3/4) [^1]. ಮಧ್ಯದ ಬೆರಳುಗಳ ಉಗುರು ಅರ್ಧಾಂಗುಲ ಉದ್ದ, ಉಳಿದ ಬೆರಳುಗಳು ಕ್ರಮವಾಗಿ ತಮ್ಮ ಪೂರ್ವದಲ್ಲಿರುವ ಉಗುರುಗಳಿ ಗಿಂತ ಅಷ್ಟಾಂಶ ಕಮ್ಮಿಯಾಗಿರಬೇಕು.[^2] ನಾಸಿಕಾಯಾ ಅಧಸ್ತಾಚ್ಚನಾಸಿಕಾ ಚ ರರಾಟಿಕಾ ॥ ೨೭ ॥ ಸಮಾ ಮಾನೇನ ನಾಸಾಯಾ ಉಚ್ಚತ್ವೇನೈವ ಮಾಪನೇ । ಅರ್ಧಾಂಗುಲಾಧಿಕಂ ಸರ್ವಮುಖಸ್ಯ ತು ಭವಿಷ್ಯತಿ ॥ ೨೮ ॥ ಅರ್ಥ – ಮೂಗಿನ ಕೆಳಗಿನಿಂದ ಚುಬುಕದವರೆಗೂ ಹಾಗೂ ಮೂಗು ಹಣೆ (ರರಾಟಿಕಾ) ಈ ಮೂರರ ಅಳತೆ 9 ಅಂಗುಲ ವಾಗಿದ್ದು ಮುಖವನ್ನು ಗಲ್ಲ,ಮೂಗು, ಹಣೆಗಳಲ್ಲಿ ಹಂಚಿದರೆ ತಲಾ ಮೂರಂಗುಲಗಳೇರ್ಪಡುತ್ತವೆ. ಮೂಗಿನ ಎತ್ತರವನ್ನೂ ಸೇರಿಸಿಕೊಂಡಾಗ ಇಡೀ ಮುಖದ ಅಳತೆ ಒಂಭತ್ತೂವರೆ(9 1/2) [^1]. ನಖೌ ಅಂಗುಷ್ಠನಖೌ, ಪಾದೋನೈಕಾಂಗುಲದೀರ್ಘೌ - ವ.ಟೀ. [^2]. ವಿಶೇಷಾಂಶ - 'ಅಷ್ಟಾಂಶಕ್ರಮೋನಕಾಃ' ಎಂಬಲ್ಲಿ ಮಧ್ಯದ ಬೆರಳಿನ ಎಡಬಲದಲ್ಲಿರುವ ತರ್ಜನಿ, ಅನಾಮಿಕೆಗಳು ಅಷ್ಟಾಂಶ ಹೀನವೆಂದೂ ಒಂದು ಪಕ್ಷ- ಇದು ವಿಷ್ಣುತೀರ್ಥರ ಪಕ್ಷ. ಇನ್ನೊಂದು ಪಕ್ಷ - ಮಧ್ಯದ ಬೆರಳಿನ ಉಗುರಿಗಿಂತಲೂ ತರ್ಜನಿಯ ಉಗುರು ಅಷ್ಟಾಂಶ ನ್ಯೂನವು, ತರ್ಜನಿಯಿಂದ ಅನಾಮಿಕೆಯ ಉಗುರು ಅಷ್ಟಾಂಶನ್ಯೂನವು. ಅನಾಮಿಕೆಗಿಂತ ಕಿರುಬೆರಳಿನ ಉಗುರು ಅಷ್ಟಾಂಶನ್ಯೂನವು – ಎಂಬುದಾಗಿ. ವಸುಧೇಂದ್ರರು ವಿಷ್ಣುತೀರ್ಥ ಪಕ್ಷವನ್ನು ವಹಿಸಿದ್ದಾರೆ. 'ಮಧ್ಯ- ಮಾಂಗುಲಿನಖಾತ್ ಪವಿತ್ರಾಂಗುಲಿನಖೋ ಅಷ್ಟಾಂಶೋನಃ । ತರ್ಜನೀನಖಸ್ಯಾಪಿ ತದ್ವತ್ । ತತೋ ಅಷ್ಟಾಂಶೇನ ಕನಿಷ್ಠಿಕಾ- ನಖಃ ಇತಿ ಭಾವಃ।- ವ.ಟೀ. ಅಂಗುಲವಾಗುತ್ತದೆ.[^1] ಚತುರಂಗುಲಂ ತಥೈವಾಸ್ಯಂ ಸಾರ್ಧವ್ರೀಹ್ಯಧರಂ ಸ್ಮೃತಮ್ । ಉತ್ತರಂ ವ್ರೀಹಿಮಾತ್ರಂ ತು ತದೂರ್ಧ್ವ೦ ಚಾಧರೋಪಮಮ್ ॥೨೯ ॥ ಸಾರ್ಧಾಂಗುಲಮಧಃ ಪ್ರೋಕ್ತಂ ಅಧರಾದಧ ಏವ ಚ । ಅರ್ಥ - ಬಾಯಿಯ ಅಗಲ ನಾಲ್ಕು ಅಂಗುಲವಿರಬೇಕು. ಕೆಳ ತುಟಿಯ ದಪ್ಪ ಒಂದುವರೆ ಭತ್ತದ ಕಾಳಿನಷ್ಟಿರಬೇಕು. (ಅಧರೋಷ್ಠಂ ಸಾರ್ಧೈಕವ್ರೀಹಿಮಾನಮ್). ಮೇಲಿನ ತುಟಿಯ ದಪ್ಪ ಒಂದು ಭತ್ತದ ಕಾಳಿನಷ್ಟಿರಬೇಕು (ಉತ್ತರೋಷ್ಠೋವ್ರೀಹಿಮಾತ್ರಮಾನಃ). ಮೇಲಿನ ತುಟಿಯಿಂದ ಮೂಗಿನವರೆಗೂ ಅರ್ಧಾಂಗುಲವಿರಬೇಕು. ಕೆಳತುಟಿಯಿಂದ ಗಲ್ಲದವರೆಗೂ ಒಂದುವರೆ(1 1/2) ಅಂಗುಲ.[^2] ಆಸ್ಯಪಾರ್ಶ್ವದ್ವಯಂ ಪ್ರೋಕ್ತಮಾಕರ್ಣಾತ್ ತು ಷಡಂಗುಲಮ್ ॥ ೩೦ ॥ [^1]. ಉಚ್ಚತ್ವೇನ ಮಾಪನೇ = ಚುಬುಕಾದಿಮಾರಭ್ಯ ನಾಸಾಗ್ರೇಣ ಲಲಾಟಪರ್ಯಂತಂ ಮಾಪನೇ ಕೃತೇ ಸತಿ ಸರ್ವಮುಖಸ್ಯ ಅರ್ಧಾಂಗುಲಾನಿ ಕರೇ ಭವಿಷ್ಯತಿ - ವ.ಟೀ. 'ನವಾಂಗುಲಲಸನ್ಮುಖಮ್' ಇತಿ ಪ್ರಾಗುಕ್ತಮ್ । ಅತ್ರ ನಾಸಾಯಾಃ ಅಧೋಭಾಗಃ ತ್ರ್ಯಂಗುಲಃ । ನಾಸಾ ತ್ರ್ಯಂಗುಲಾ । ರರಾಟಿಕಾ ತ್ರ್ಯಂಗುಲೇತಿ ಭಾವಃ । [^2]. ವಿಶೇಷಾಂಶ - ಮೇಲುತುಟಿಯಿಂದ ಮೂಗಿನವರೆಗೂ ಒಂದು ವ್ರೀಹಿ, ಮೇಲುತುಟಿಯಿಂದ ಅಧರೋಷ್ಠಪರ್ಯಂತ ಎರಡು ವ್ರೀಹಿ. ಒಟ್ಟು ಮೂರುವ್ರೀಹಿಗಳಾದವು. ಮೂರು ವ್ರೀಹಿಗಳೆಂದರೆ ಒಂದಂಗುಲವೆಂದರ್ಥ. ಕೆಳತುಟಿಯ ಅಧೋಭಾಗ- ವಾದರೋ ಅರ್ಧವ್ರೀಹಿಯಷ್ಟು ಕಡಿಮೆಯಾದ ಒಂದಂಗುಲ ಎಂದರೆ ಎರಡುವರೆ ವ್ರೀಹಿಯ ಮಾನದಷ್ಟು ಎಂದರ್ಥ. ಒಟ್ಟು ಅರ್ಧವ್ರೀಹಿ ಕಡಿಮೆ ಮೂರಂಗುಲವಾಯಿತು. ಆದರೆ ಮೂಗಿನ ಕೆಳಭಾಗವನ್ನು ಮೂರಂಗುಲವೆಂದಿದ್ದಾರೆ. ಈ ಅರ್ಧವ್ರೀಹಿ- ಯನ್ನು ಮಂದಸ್ಮಿತವನ್ನು ಸೂಚಿಸುತ್ತದೆ ಎಂದು ತಿಳಿಯಬೇಕು. ಹಿಂದೆ ಹೇಳಿದ ಮೂರಂಗುಲದಲ್ಲಿ ಮಂದಸ್ಮಿತದ ಎರಡು ತುಟಿಗಳ ಮಧ್ಯದ ಭಾಗ ಸೇರಿಸಿ ಹೇಳಿದ್ದಾರೆ. ಇಲ್ಲಿ ಅದನ್ನು ಬಿಟ್ಟು ಹೇಳಿದ್ದಾರಷ್ಟೆ. ತತ್ರಾಯಂ ವಿಶೇಷಃ - ಉತ್ತರೋಷ್ಠಾದ್ ಊರ್ಧ್ವಭಾಗಸ್ಯ ಅದರೋಷ್ಠಸ್ಯ ಚ ಏಕಾಂಗುಲಿತ್ವಮ್ । ವ್ರೀಹಿತ್ರಯಸ್ಯ ಏಕಾಂಗುಲತ್ವಮ್ । ದೀರ್ಘಸ್ಯ ಕಲಮಾಸ್ತಿಸ್ರಃ ಇತಿ ವಕ್ಷ್ಯತಿ । ಅಧರಾದಧೋಭಾಗಸ್ಯ ಲವಾರ್ಧೈಕಾಂಗುಲತ್ವಮ್ । ತಥಾ ಅರ್ಧವ್ರೀಹಿನ್ಯೂನದ್ವ್ಯಂಗುಲತ್ವಂ ಸಿದ್ಧ್ಯತಿ । ಅರ್ಧವ್ರೀಹಿ ಮಾತ್ರಂ ಮಂದಸ್ಮಿತಮುಚ್ಯತ ಇತಿ ತಾತ್ಪರ್ಯಮವಗಂತವ್ಯಮ್। - ವಸು.ಟೀ. ಸಪ್ತಾಂಗುಲಂ ನಾಸಿಕಾಯಾಃ ಪಾರ್ಶ್ವಮ್ ಆಕರ್ಣತಃ ಸ್ಮೃತಮ್ । ಅರ್ಥ - ಬಾಯಿಯಿಂದ ಕಿವಿಯವರೆಗೂ ಇರುವ ಎರಡು ಪಾರ್ಶ್ವಗಳ ಅಳತೆ ಆರಂಗುಲಗಳು. ಮೂಗಿನಿಂದಾರಂಭಿಸಿ ಕಿವಿಯವರೆಗಿನ ಎರಡೂ ಪಾರ್ಶ್ವಗಳ ದೂರ ಏಳಂಗುಲ. ಸಪಾದಾಂಗುಲಮುಚ್ಚಾಚ ನಾಸಿಕಾ ಪರಿಕೀರ್ತಿತಾ ॥ ೩೧ ॥ ಅರ್ಧಾಂಗುಲೇ ಪುಟೇ ತಸ್ಯಾಃ ಮಧ್ಯಂ ಚ ಸಮುದಾಹೃತಮ್ । ಅರ್ಥ - ಮೂಗಿನ ಎತ್ತರ ಒಂದೂಕಾಲಂಗುಲ, ಮೂಗಿನ ರಂಧ್ರಗಳ ಹರವು ಅರ್ಧಾಂಗುಲ. ಎರಡೂ ರಂಧ್ರಗಳನ್ನು ಕೂಡಿಸುವ ಮಧ್ಯಭಾಗ ಅರ್ಧಾಂಗುಲ. ನಾಸಿಕಾ ವ್ರೀಹಿವಿಸ್ತಾರಾ ಚಕ್ಷುಷೀ ಚಾಂಗುಲತ್ರಯೇ ॥ ೩೨ ॥ ಅಂಗುಲಂ ಚೈವ ವಿಸ್ತೀರ್ಣ ಫುಲ್ಲೇsರ್ಧ೦ ಚ ತದನ್ಯಥಾ । ಅರ್ಥ - ಮೂಗಿನ ತುದಿಯ ವಿಸ್ತಾರ ಒಂದು ವ್ರೀಹಿಯಷ್ಟಿರಬೇಕು. ಕಣ್ಣುಗಳ ಉದ್ದ ಮೂರಂಗುಲ. ಅರಳಿರುವ ಕಣ್ಣಿನ ಅಗಲ- ವಾದರೆ ಒಂದಂಗುಲ. ಸಾಮಾನ್ಯವಾಗಿರುವಾಗ ಅರ್ಧಾಂಗುಲ. ಚತುರಂಗುಲೌ ಭ್ರುವೌ ಚೈವ ತಥಾಽರ್ಧಾ೦ಗುಲವಿಸ್ತೃತೌ ॥ ೩೩ ॥ ಅಸಂಹತೌ ಚ ನಿಬಿಡೌ ತಥಾ ಪಕ್ಷ್ಮಸುನೀಲಕಮ್ । ಅರ್ಥ - ಹುಬ್ಬುಗಳ ಉದ್ದವಾದರೂ ನಾಲ್ಕಂಗುಲ. ಅಗಲ- ವಾದರೋ ಅರ್ಧಾಂಗುಲ. ಹುಬ್ಬುಗಳು ಒಂದಕ್ಕೊಂದು ತಾಕಿರದೆ ನಿಬಿಡವಾಗಿರಬೇಕು. ಕಣ್ಣಿನ ರೋಮ ಗಳು ಕಪ್ಪಾಗಿರಬೇಕು. ಕರ್ಣೌ ಚ ತ್ರ್ಯಂಗುಲೌ ಸಾರ್ಧದ್ವಯವಿಸ್ತಾರಸಂಯುತೌ ॥ ೩೪ ॥ ಸಕುಂಡಲಂ ತಾವದೇವ ವಿವರಂ ಸಂಪ್ರಕೀರ್ತಿತಮ್ । ತಥಾ ದ್ವ್ಯಂಗುಲವಿಸ್ತಾರೋ ಲತಾಭ್ಯಾಂ ಸಹ ಕಥ್ಯತೇ ॥ ೩೫ ॥ ಕರ್ಣಪೂರಯುತೌ ಕರ್ಣೌ ಉತ್ಪಲಾಭ್ಯಾಂ ಚ ಸಂಯುತೌ । ಅರ್ಥ - ಕಿವಿಗಳ ಉದ್ದವು ಮೂರಂಗುಲವಿರಬೇಕು. ಕಿವಿಗಳ ವಿಸ್ತಾರ ಎರಡುವರೆ ಅಂಗುಲ. ಕುಂಡಲಗಳಂತೆ ವೃತ್ತಾಕಾರವಿ- ರುವ ಕಿವಿಯ ರಂಧ್ರದ ಆಳವೂ ಎರಡುವರೆ ಅಂಗುಲ. ಕಿವಿಯ ರಂಧ್ರದ ಮೇಲ್ಭಾಗವನ್ನು ಲತೆಯೆನ್ನಲಾಗಿದೆ. ಇದರ ಒಳಭಾಗ ಎರಡಂಗುಲವಿದ್ದರೆ ಹೊರಭಾಗ ಅರ್ಧಾಂಗುಲ. ಕುಂಡಸಹಿತ ಕರ್ಣದ ವಿವರವು ಎರಡುವರೆ ಅಂಗುಲವು. ಕಿವಿಯಲ್ಲಿ ಕರ್ಣ- ಪೂರವೆಂಬ ಆಭರಣವನ್ನೂ ಹಾಗು ನೀಲಕಮಲಗಳನ್ನೂ ಕಡೆದಿರಬೇಕು.[^1] ನೀಲಾಲಕಸಹಸ್ರೇಣ ಯುಕ್ತಂ ತನ್ಮುಖಪಂಕಜಮ್ ೩೬ ॥॥ ಲಲಾಟಂ ಸುವಿಶಾಲಂ ಚ ತಥಾ ಸಾರ್ಧನವಾಂಗುಲಮ್ । ವಿಸ್ತಾರೋ ಮೂರ್ಧ್ನಿ ವೃತ್ತಂ ಚ ಶಿರಃ ಛತ್ರಾಕೃತಿ ಸ್ಮೃತಮ್ ॥ ೩೭ ॥ ಅರ್ಥ - ಕಪ್ಪಾಗಿರುವ ಉದ್ದವಾದ ಗುಂಗುರುಕೂದಲು ರಾಶಿ- ಯಿಂದ ರಾರಾಜಿಸುವ ಮುಖಕಮಲ; ವಿಶಾಲವಾದ ಲಲಾಟ, ತಲೆಯ ವಿಸ್ತಾರವಾದರೋ ಒಂಭತ್ತುವರ(9 1/2) ಅಂಗುಲ. ಛತ್ರಾಕಾರವಾಗಿರುವ ಶಿರಸ್ಸಿನ ಮಧ್ಯಭಾಗವು ಸ್ವಲ್ಪ ಉನ್ನತ- ವಾಗಿರಬೇಕು. ದೀರ್ಘಾಶ್ಚ ಕುಂಚಿತಾಗ್ರಾಶ್ಚ ನೀಲಾಃ ಕೇಶಾ ಹರೇರ್ಮತಾಃ । ಮುಖಮಾನೇನ ಚೈವೋಚ್ಚಂ ಕಿರೀಟಂ ಕೇಶವಸ್ಯ ಹಿ ॥ ೩೮ ॥ ಅರ್ಥ - ಭಗವಂತನ ಕೇಶರಾಶಿಯಾದರೋ ನೀಲ ಹಾಗೂ ದೀರ್ಘ; ಉಂಗುರು ಉಂಗುರಾಗಿರುತ್ತದೆ. ತಲೆಯಲ್ಲಿ ಧರಿಸಿರುವ ಕಿರೀಟವೂ ಮುಖದಷ್ಟೇ ಒಂಭತ್ತು ಅಂಗುಲ ಎತ್ತರವಿದೆ. [^1]. ಲತೆಯೆಂದರೆ ಕಿವಿಯ ಬಳ್ಳಿ. 'ಕರ್ಣಪಾಲೀ' ಇದು ಕಿವಿಯ ರಂಧ್ರದ ಪಕ್ಕದಲ್ಲಿರುವ ನೀಳವಾಗಿರುವ ಎತ್ತರದ ಭಾಗವೇ ಕರ್ಣ- ಲತೆ. ಅಲ್ಲಿಂದ ಒಳಗಿನ ಸ್ಥಳ ಎರಡಂಗುಲವಾದರೆ ಹೊರಗಿರುವ ಸ್ಥಳ ಅರ್ಧಾಂಗುಲ. ಒಟ್ಟು ಎರಡುವರೆ ಅಂಗುಲ. ಲತಾಭ್ಯಾಂ ಕರ್ಣಛಿದ್ರಪೂರ್ವಾಪರಭಾಗಾಭ್ಯಾಂ ಸಹ ದ್ವ್ಯಂಗುಲವಿಸ್ತಾರಃ ಕೀರ್ತಿತಃ- ವ.ಟೀ. ಕಿವಿಯ ಬಳ್ಳಿಯಿಂದ ಕೂಡಿ ಒಳಭಾಗದ ಅಗಲ ಎರಡಂಗುಲ- ವೆಂದರ್ಥ. ಪ್ರತಿಮಾ ಆಭರಣಗಳ ವಿಚಾರ ಕುಂಡಲೇ ಮಕರಾಕಾರೇ ವಕ್ಷಶ್ಚೈವ ಸಕೌಸ್ತುಭಮ್ । ಸಶ್ರೀವತ್ಸಂ ದಕ್ಷಿಣತಃ ಪೀನತುಂಗಮುದಾಹೃತಮ್॥ ೩೯ ॥ ಹಾರಗ್ರೈವೇಯಸಹಿತಮುಪವೀತಯುತಂ ತಥಾ । ಅರ್ಥ - ಭಗವಂತನ ಕರ್ಣಕುಂಡಲಗಳು ಮಕರಾಕಾರವಾಗಿರ- ಬೇಕು. ಎದೆಯಲ್ಲಿ ಕೌಸ್ತುಭಮಣಿ. ಬಲಭಾಗದಲ್ಲಿ ಶ್ರೀವತ್ಸಚಿಹ್ನೆ, ಎದೆಯಾದರೋ ಪುಷ್ಟವಾಗಿದ್ದು ಉನ್ನತವಾಗಿರಬೇಕು. ಮುತ್ತಿನ ಹಾರ ಹಾಗೂ ಕಂಠಾಭರಣಗಳಿಂದ ಅಲಂಕೃತವಾಗಿರಬೇಕು. ಯಜ್ಞಪವೀತವಿರಬೇಕು. ಬಾಹವಶ್ಚ ಸಕೇಯೂರಕಂಕಣಾಂಗದಮುದ್ರಿಕಾಃ ॥ ೪೦ ॥ ಸಮಧ್ಯಬಂಧಂ ಮಧ್ಯಂ ಚ ನಿತಂಬೇ ಪೀತಮಂಬರಮ್ । ಕಾಂಚೀಗುಣಶ್ಚ ಪದಯೋಃ ನೂಪುರೇ ಚಾತಿಸುಸ್ವರೇ ॥ ೪೧ ॥ ಅಂಗುಲೀಯಾನಿ ಚ ಪದೋಃ ಕೃತಿಭಿಃ ಸಾಧು ಕಾರಯೇತ್ । ಅರ್ಥ - ತೋಳುಗಳ ಮಧ್ಯದಲ್ಲಿ ವಂಕಿ, ಕರಗಳಲ್ಲಿ ಬಳೆಗಳು, ಬಾಹುಮೂಲದಲ್ಲಿ ಕೇಯೂರ, ಬೆರಳುಗಳಲ್ಲಿ ಉಂಗುರಗಳು, ಸೊಂಟದಲ್ಲಿ ಪೀತಾಂಬರ ಹಾಗೂ ಡಾಬು ಮತ್ತು ಪಟ್ಟಿ, ಕಾಲಿನಲ್ಲಿ ಕಿಣಿ ಕಿಣಿ ಶಬ್ದಗೈಯ್ಯುವ ಗೆಜ್ಜೆಗಳು. ಇವುಗಳನ್ನು ಶಿಲ್ಪಿಗಳಿಂದ ಶಾಸ್ತ್ರೋಕ್ತವಾಗಿ ಲಕ್ಷಣವಾಗಿ ಕಡೆಸಬೇಕು. ಸೋತ್ತರೀಯಂ ಚ ಚಕ್ರಾದ್ಯೈಃ ಆಯುಧೈಶ್ಚ ಸಮನ್ವಿತಮ್ ।142॥ ದಂತಲಕ್ಷಣ- ದೃಷ್ಟಿಲಕ್ಷಣ ಅನುನ್ನತೈಃ ಅವಿರಿಲೈಃ ದಂತೈಃ ಯುಕ್ತಂ ಚ ಸುಸ್ಮಿತಮ್ । ಸಮದೃಷ್ಟಿಯುತಂ[^1] ಕಾರ್ಯಂ ಸ್ನಿಗ್ಧಂ ಚೈವ ಮನೋಹರಮ್ ॥ ೪೩ ॥ [^1]. ಊರ್ಧ್ವದೃಷ್ಟಿಂ ಅಧೋದೃಷ್ಟಿಂ ತಿರ್ಯಗ್ ದೃಷ್ಟಿಂ ಚ ವರ್ಜಯೇತ್ । ಊರ್ಧ್ವದೃಷ್ಟ್ಯಾ ವಿತ್ತನಾಶಃ ಹ್ಯಧೋದೃಷ್ಟ್ಯಾ ಕುಲಕ್ಷಯಃ ॥ ತಿರ್ಯಗ್‌ದೃಷ್ಟ್ಯಾ ದ್ವಯೋರ್ನಾಶಃ ತಸ್ಮಾದ್ ಗ್ರಾಹ್ಯಾ ಸಮೇಕ್ಷಣಾ ।-ತಿಲಕ ಅರ್ಥ - ಹೆಗಲಿನಲ್ಲಿ ಹೊದೆಯುವ ಉತ್ತರೀಯವಿರಬೇಕು. ಹಸ್ತ- ಗಳಲ್ಲಿ ಚಕ್ರಾದಿ ಆಯುಧಗಳನ್ನು ಕೆತ್ತಿರಬೇಕು. ದಂತಗಳಾದರೋ ಉಬ್ಬಿರದಂತೆ, ಎಡಬಿಡದಂತೆ ಇದ್ದು ಮಂದಸ್ಮಿತ ಬೀರುವಂತಿರ- ಬೇಕು. ಪ್ರತಿಮೆಯ ದೃಷ್ಟಿ ಮೇಲೋ ಕೆಳಗೋ ನೋಡುತ್ತಿರದೆ, ವಕ್ರವಾಗಿ ಪಕ್ಕಕ್ಕೆ ನೋಡುತ್ತಿರದೆ ನೇರವಾಗಿ ನೋಡುತ್ತಿರಬೇಕು. ಹಾಗೂ ಪ್ರತಿಮೆಯು ಸುಂದರವಾಗಿರಬೇಕು. ಪ್ರತಿಮಾನಿರ್ಮಾಣವಿಧಿ ಪ್ರತಿಮಾರ್ಥಂ ವ್ರಜನ್ ಪಂಚಧ್ವನಿಭಿಃ ಮಂಗಲೈರ್ಯುತಃ । ಗತ್ವಾ ಶುಚಿಸ್ಥಲಂ ತತ್ರ ಶಿಲಾಂ ಚೈವ ಪರೀಕ್ಷಯೇತ್॥ ೪೪ ॥ ಅರ್ಥ - ಪ್ರತಿಮೆಯನ್ನು ತಯಾರಿಸಲು ಶಿಲೆಯನ್ನು ತರಲು ಹೊರಟಾಗ ನಗಾರಿ, ಮದ್ದಲೆ, ವೀಣೆ, ತಾಳ, ಕೊಳಲು ಈ ಪಂಚವಾದ್ಯ ಮಂಗಳಧ್ವನಿ(?)ಯೊಂದಿಗೆ (ಮಂಗಳದ್ರವ್ಯಗಳೊಂ- ದಿಗೆ) ಶಿಲೆಯ ಸ್ಥಳಕ್ಕೆ ಹೋಗಬೇಕು. ಅಲ್ಲಿರುವ ಶಿಲೆಯನ್ನು ಪರೀಕ್ಷಿಸಬೇಕು. ಶಿಲೆಯ ಪರೀಕ್ಷೆ ಧ್ವನಿಭೇದೇನ ವಿಜ್ಞಾಯ ಶಿಲಾಂ ಗರ್ಭವತೀಂ ತ್ಯಜೇತ್ । ಮೂಲಮಂತ್ರಂ ಜಪನ್ ವಿಷ್ಣುಂ ಧ್ಯಾಯಂಸ್ತಿಷ್ಠೇದುಪೋಷಿತಃ ॥ ೪೫ ॥ ವೃಕ್ಷಪ್ರತಿಮೆಯಲ್ಲಿ ವಿಶೇಷ ವಾರ್ಕ್ಷೀ ಚೇದ್ ಯಜ್ಞವೃಕ್ಷಸ್ಯ ಸಾರೇಣೈವ ತು ಕಾರಯೇತ್ । ಅರ್ಥ - ಧ್ವನಿಯ ವ್ಯತ್ಯಾಸದಿಂದ ಕಪ್ಪೆ ಇರುವ ಗರ್ಭವತೀ ಶಿಲೆ ಹಾಗೂ ಟೊಳ್ಳಾದ ಶಿಲೆಯನ್ನು ತಿಳಿಯಬೇಕು. ಅಂತಹ ಶಿಲೆ- ಯನ್ನು ಬಿಟ್ಟು, ಗಟ್ಟಿಯಾದ ಶಿಲೆಯನ್ನು ಆರಿಸಬೇಕು. 'ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರವನ್ನು ಜಪಿ- ಸುತ್ತಾ, ವಿಷ್ಣುವನ್ನೇ ಧ್ಯಾನಮಾಡುತ್ತಾ, ಶಿಲೆಯ ಸಮೀಪ ಉಪವಾಸದಿಂದಿರಬೇಕು. ಮರದ ಪ್ರತಿಮೆಯನ್ನು ಮಾಡುವುದಾ- ದರೆ ದೇವದಾರು, ಬಿಲ್ವ, ಶಮೀ, ಮಧೂಕ, ಅಶ್ವತ್ಥಾದಿ ಯಜ್ಞೋ- ಪಯೋಗೀ ವೃಕ್ಷಗಳಿಂದಲೇ ಮಾಡಬೇಕು. ಬಲಿದಾನನಿರೂಪಣೆ ಬಲಿದಾನಂ ಚ ಸಂಕ್ಷೇಪವಿಧಾನೇನೈವ ಕಥ್ಯತೇ॥ ೪೬ ॥ ಅಸ್ಯ ಸಂಕ್ಷೇಪಶಾಸ್ತ್ರತ್ವಾತ್ ನ ವಿಸ್ತರವಿರೋಧಿತಾ । ಅರ್ಥ - ಶಿಲೆಯನ್ನು ಆರಿಸಿದ ಮೇಲೆ ನಡೆಸಬೇಕಾದ ಬಲಿವಿಧಾನ ವನ್ನು ಮುಂದೆ ಸಂಕ್ಷೇಪವಾಗಿ ತಿಳಿಸುತ್ತೇವೆ. ಬಲಿದಾನವಿಧಾನ ಅತಿವಿಸೃತವಾಗಿದ್ದು, ಈ ಶಾಸ್ತ್ರವಾದರೂ ಯಾವುದನ್ನು ಮಾಡಿ- ದರೆ ಕರ್ಮಲೋಪವಾಗುವುದಿಲ್ಲವೋ, ಎಷ್ಟು ಮಾಡಲೇಬೇಕೋ ಅಷ್ಟನ್ನು ಮಾತ್ರ ತಿಳಿಸುವುದಾಗಿದ್ದು, ವಿಸ್ತಾರವಾಗಿ ಹೇಳುವ ಆ ಶಾಸ್ತ್ರಕ್ಕೆ ಇದರಿಂದ ವಿರೋಧವುಂಟಾಗುವುದಿಲ್ಲ.[^1] ದತ್ವೋಪಹಾರಂ ಹರಯೇ ತದ್ಭೂತೇಭ್ಯೋ ಬಲಿಂ ಹರೇತ್ ॥೪೭11 ಪ್ರಾಚ್ಯೇಭ್ಯೋ ವಿಷ್ಣುಭೂತೇಭ್ಯ ಇತ್ಯಾದ್ಯಖಿಲದಿಕ್ಷು ಚ । ಅರ್ಥ - "ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರ- ದಿಂದ ಶ್ರೀಹರಿಗೆ ನೈವೇದ್ಯವನ್ನು ಸಮರ್ಪಿಸಿ, ಭಗವಂತನ ಪಾರ್ಷದರಾದ ಕುಮುದಕುಮುದಾಕ್ಷಾದಿಗಳಿಗೂ 'ಪ್ರಾಚ್ಯೇಭ್ಯೋ ವಿಷ್ಣುಭೂತೇಭ್ಯಃ ನಮಃ' ಇತ್ಯಾದಿ ಎಂಟು ದಿಕ್ಕುಗಳಲ್ಲಿರುವ ವಿಷ್ಣುಭೂತಗಳಿಗೂ[^2], ಇಂದ್ರಾದಿದಿಕ್ಪಾಲಕರಿಗೂ ಬಲಿಯನ್ನು ಅರ್ಪಿಸಬೇಕು. ಆದಾಯ ವಿಷ್ಣುಭೂತೇಭ್ಯೋ ಲೋಕಪೇಭ್ಯಸ್ತಥಾ ಹರೇಃ ॥ ೪೮ ॥ ಅನುಜ್ಞಾಮುದ್ಧರೇದ್ ವೃಕ್ಷಂ ಶಿಲಾಂ ವಾ ಪ್ರತಿಮಾಕೃತೇ । ಅರ್ಥ - ನಂತರ ವಿಷ್ಣುಭೂತಗಳು, ಇಂದ್ರಾದಿದಿಕ್ಪಾಲಕರು ಹಾಗೂ ಭಗವಂತನಿಂದಲೂ ಅನುಮತಿ ಪಡೆದು ಪ್ರತಿಮೆಗಾಗಿ ಶಿಲೆಯನ್ನಾಗಲೀ, [^1]. ವಸ್ತುತಃ ಅಂಕುರಾರ್ಪಣೆ, ಕಲಶಪ್ರತಿಷ್ಠೆ,ಚತುರ್ದಿಕ್ಕುಗಳಲ್ಲಿ ಹೋಮ, ಭಗವಂತನನ್ನುದ್ದೇಶಿಸಿ ಆಜ್ಯಾಹುತಿ; ನಂತರ ಬಲಿಹರಣ 2. ವಿಷ್ಣುಭೂತಗಳು ಎಂಟು – ಕುಮುದಃ ಕುಮುದಾಕ್ಷಶ್ಚ ಪುಂಡರೀಕಶ್ಚ ವಾಮನಃ । ಶಂಕುಕರ್ಣ: ಸ್ವರ್ಣನೇತ್ರಃ ಸುಮುಖಃ ಸುಪ್ರತಿಷ್ಠಿತಃ ॥ ಅರ್ಥ - ಉತ್ಸವಮೂರ್ತಿಗಳಿಗೆ ಅಭಿಷೇಕಮಾಡಲು, ಉಯ್ಯಾಲೆ ಉತ್ಸವಾದಿಗಳನ್ನು ಮಾಡಲು ಅನುಕೂಲವಾಗುವಂತೆ ಸಭಾ- ಮಂಟಪವು ಗರ್ಭಗುಡಿಗೆ ಅಂಟಿಕೊಂಡಿರಬಹುದು ಅಥವಾ ಪ್ರತ್ಯೇಕವಾಗಿಯೂ ಇರಬಹುದು[^1]. ಎರಡು ಮೂರು ಸಭಾ- ಮಂಟಪಗಳೂ ಇರಬಹುದಾಗಿದೆ. ದೇವಾಲಯಕ್ಕೆ ಪ್ರವೇಶ ಮಾಡುವ ಪ್ರಧಾನದ್ವಾರದ ಮೇಲೆಯೂ ಗೋಪುರವನ್ನು ಕಟ್ಟಿಸಿ ಇನ್ನಷ್ಟು ಸುಂದರಗೊಳಿಸಬಹುದು. ಪ್ರಾಕಾರಲಕ್ಷಣ ಪ್ರಾಕಾರವೃತ್ತಯುಕ್ತಂ ವಾ ಸಪ್ತಪ್ರಾಕಾರಮೇವ ವಾ। ಸದ್ಮವೃತ್ತಂ ಕಿಷ್ಕುಮಾತ್ರಂ ಬಹಿರ್ವಾ ಚತುರಸ್ರಕಮ್ ॥ ೬೮ ॥ ಅರ್ಥ - ದೇವಾಲಯಕ್ಕೆ ಒಂದು ಪ್ರದಕ್ಷಿಣ ಪ್ರಾಕಾರವಾಗಲೀ ಏಳುಪ್ರಕಾರಗಳಾಗಲೀ ಇರಬಹುದು. ಪ್ರಾಕಾರವೂ ಸಹ ವೃತ್ತಾ- ಕಾರವಾಗಲೀ, ಚತುರಸ್ರಾಕಾರವಾಗಲೀ ಇರಬಹುದು. ಈ ಪ್ರದಕ್ಷಿಣೆಯ ಪ್ರಾಕಾರವು ಗರ್ಭಗುಡಿಯಿಂದ 42ಅಂಗುಲ ಅಂತರವಿರಬೇಕು.[^2] ಮಂಟಪದ ಲಕ್ಷಣ ತತಃ ಪರಂ ಕಿಷ್ಕುಮಾತ್ರಂ ಸಭಾಯಾ ಅಂತರಂ ಯದಿ। [^1]. ತಿರುಮಲದಲ್ಲಿ ಗರ್ಭಗುಡಿಗೆ ತಗುಲಿಕೊಂಡೇ ತಿರುಮಾ- ಮಣಿ ಸಭಾಮಂಟಪವಿದೆ. ಹಾಗೂ ಕಲ್ಯಾಣೋತ್ಸವಾದಿಗಳಿಗೆ ಪ್ರತ್ಯೇಕವಾದ ಕಲ್ಯಾಣಮಂಟಪವೂ ಇದೆ. ರಂಗನಾಥ ಮಂಟಪ ಪ್ರತ್ಯೇಕವಾದದ್ದು. ಗರ್ಭಗುಡಿಗೆ ತಗುಲಿಕೊಂಡೇ ಇರುವ ಸಭಾ- ಮಂಟಪವನ್ನು ಅನಂತೇಶ್ವರ ದೇವಾಲಯದಲ್ಲಿ ನೋಡಬಹುದು ಶ್ರೀರಂಗನಾಥದೇವಾಲಯವೂ ಇದೇ ರೀತಿಯದು. ಸಾವಿರಕಂಬ- ಗಳ ಮಂಟಪ ಗರ್ಭಗುಡಿಗೆ ಅಂಟಿಕೊಳ್ಳದೇ ಪ್ರತ್ಯೇಕವಾಗಿಯೇ ಇದೆ. [^2]. ತಿರುಮಲ ಹಾಗೂ ರಂಗನಾಥದೇವಾಲಯಗಳಲ್ಲಿ ಏಳು ಪ್ರಾಕಾರಗಳಿವೆ. ಶ್ರೀರಂಗದಲ್ಲಿ 'ಸಪ್ತಪ್ರಾಕಾರಪ್ರದಕ್ಷಿಣೆ' ಎಂಬ ಸೇವೆಯನ್ನು ಭಕ್ತರು ಸಲ್ಲಿಸುತ್ತಾರೆ. ತಿರುಮಲ ಹಾಗೂ ಶ್ರೀರಂಗ ದೇವಾಲಯಗಳ ಪ್ರಾಕಾರಗಳು ಚತುರಸ್ರಾಕಾರವಾಗಿವೆ. ಅನಂತೇಶ್ವರದೇವಾಲಯದಲ್ಲಿ ಒಳಗೆ ಒಂದು ಪ್ರದಕ್ಷಿಣಪ್ರಾಕಾರ ಹಾಗೂ ಹೊರಗೆ ವಿಶಾಲವಾದ ಇನ್ನೊಂದು ಪ್ರಾಕಾರ. ಹೀಗೆ ಎರಡು ಪ್ರಾಕಾರಗಳಿವೆ. ಒಂದರಿಂದ ಏಳರವರೆಗ ಎಷ್ಟಾದರೂ ಇರಬಹುದು ಎಂದರ್ಥ. (96ಅಂಗುಲ) ಆಗಲಿ, ಪ್ರತಿಮೆಯ ದುಪಟ್ಟಾಗಲೀ, ಒಂದುವರೆ ಪಾಲಿನಷ್ಟಾಗಲೀ ಇರಬೇಕು. ಶಿಖರಾಂತರೇ ತು ಪ್ರತಿಮಾಮಾನಂ ತದ್ಗಲ ಉಚ್ಯತೇ । ತತ್ರಿಪಾದಂ ತದರ್ಧಂ ವಾ ತದಧ್ಯರ್ಧಮಥಾಪಿ ವಾ ॥ ೬೪ ॥ ಅರ್ಥ - ಎರಡಂತಸ್ತಿನ ಶಿಖರವಾದರೆ ಗೋಪುರದ ಎರಡನೇ ಶಿಖರದ ಕುತ್ತಿಗೆಯಂತೆ ಇರುವ ಗಲದ ಎತ್ತರವಾದರೋ 96 ಅಂಗುಲ, ಅಥವಾ 72 ಅಂಗುಲ, ಅಥವಾ 48 ಅಂಗುಲ ಅಥವಾ 24 ಅಂಗುಲವಾಗಲೀ ಇರಬೇಕು. ವಿಮಾನಲಕ್ಷಣ ವರ್ತುಲಂ ಪದ್ಮಸದೃಶಂ ಹಸ್ತಿಪೃಷ್ಠಸಮಂ ತಥಾ । ಚತುರಸ್ರಂ ಚಾಷ್ಟಕೋಣಂ ವಿಮಾನಂ ಪರಿಕೀರ್ತಿತಮ್ ॥ ೬೫ ॥ ಪ್ರತಿಮಾಯಾ ದಶಗುಣಂ ವಿಂಶದ್ ಗುಣಮಥಾಪಿ ವಾ । ವರ್ತುಲಂ ಶಿಖರಂ ತ್ವೇಕಂ ಕಿರೀಟಾಕೃತಿಮದ್ ಭವೇತ್ ॥ ೬೬ ॥ ಅರ್ಥ - ಗರ್ಭಗುಡಿಯು ವೃತ್ತಾಕಾರವಾಗಿರಬಹುದು, ಪದ್ಮದಂತೆ- ಯೂ, ಅಷ್ಟಕೋಣಾಕೃತಿಯಲ್ಲಾಗಲೀ ಇರಬಹುದು. ಗೋಪುರ- ವಾದರೋ ಒಳಗಿರುವ ಪ್ರತಿಮೆಯ ಹತ್ತುಪಟ್ಟು ಇಲ್ಲವೇ ಇಪ್ಪತ್ತು ಪಟ್ಟು ಎತ್ತರವಾಗಿರಬೇಕು[^1]. ಅನೇಕ ಗೋಪುರಗಳನ್ನು ಮಾಡು ವುದಾದರೆ ಕಡೆಯ ಶಿಖರವು ವೃತ್ತಾಕಾರವಾಗಿ ಕಿರೀಟದಂತಿರ- ಬೇಕು. ಸಭಾಪ್ರಮಾಣ ಸಭಯಾsಪಿ ಸಮೇತಂ ವಾ ಪೃಥಕ್‌ಭಮಥಾಪಿ ವಾ। ದ್ವಿಸಭಂ ತ್ರಿಸಭಂ ವಾಽಪಿ ಸಗೋಪುರಮಥಾಪಿ ವಾ ॥ ೬೭ ॥ [^1]. ಭುವನೇಶ್ವರದ ದೇವಾಲಯ ಹಾಗೂ ಪೂರಿ ಜಗನ್ನಾಥ- ದೇವಾಲಯಪ್ರತಿಮೆಯ ಇಪ್ಪತ್ತು ಪಟ್ಟು ಎತ್ತರವಿದೆ ಅಲ್ಲಿನ ಗೋಪುರ. ಉಡುಪಿಯ ಅನಂತೇಶ್ವರದೇವಾಲಯದ ಗೋಪುರವು ಆನೆಯ ಬೆನ್ನಿನಂತೆ ಇಳಿಜಾರಾಗಿದೆ. ಗರ್ಭಗೃಹದ್ವಾರದ ಪ್ರಮಾಣ, ಪೀಠಪ್ರಮಾಣ ಪ್ರತಿಮಾಧ್ಯರ್ಧಕಂ ದ್ವಾರಮೂರ್ಧ್ವಮಧ್ಯಂ ಚ ವಿಸ್ತೃತಿಃ । ಪ್ರತಿಮಾರ್ಧಪ್ರಮಾಣೇನ ಪೀಠಸ್ಯೋಚ್ಚತ್ವಮಿಷ್ಯತೇ ॥ ೬೦ ॥ ಅರ್ಥ - ದೇವಾಲಯದ ಗರ್ಭಗೃಹದ ದ್ವಾರದ ಎತ್ತರವಾದರೂ ಪುರುಷಪ್ರಮಾಣಪ್ರತಿಮೆಯ ಒಂದುವರೆಯಷ್ಟು ಇರಬೇಕು. ಅಗಲವಾದರೋ ಅರ್ಧಭಾಗದಷ್ಟು ಇರಬೇಕು. ಪೀಠದ ಎತ್ತರ- ವಾದರೋ ಪ್ರತಿಮೆಯ ಅರ್ಧದಷ್ಟಿರಬೇಕು. ಪಿಂಡಿಕಾಪ್ರಮಾಣ ಉನ್ನತಿ: ಪಿಂಡಿಕಾಯಾಃ ತಚ್ಚತುರಂಗುಲಮಾನತಃ । ತ್ರ್ಯಂಗುಲಂ ದ್ವ್ಯಂಗುಲಂ ವಾಽಪಿ ಗೃಹಾಂತಃ ಪ್ರತಿಮಾಸಮಮ್ ॥೬೧ ॥ ಉಚ್ಚಂ ಪರ್ಯಕ್ ಚ ಕ್ರಮಶ ಉಚ್ಚತ್ವಂ ಮಧ್ಯತಃ ಸ್ಮೃತಮ್ । ಅರ್ಥ- ಪೀಠದ ಕೆಳಗಿರುವ ಪಿಂಡಿಕಾಶಿಲೆಯ ಎತ್ತರ ಸ್ಥಾಪಿತ- ಪ್ರತಿಮೆಯ ಅಂಗುಲದಿಂದ ನಾಲ್ಕು ಅಂಗುಲವಾಗಲೀ, ಮೂರು ಅಥವಾ ಎರಡಂಗುಲ ಇರಬೇಕು. ಪ್ರತಿಮೆ ಇಡುವ ಮೇಲ್ಭಾಗ ಛಾವಣಿಯ ಎತ್ತರ ಮಧ್ಯದಲ್ಲಿ ಪ್ರತಿಮೆಯಷ್ಟೇ ಅವಕಾಶವಿರ- ಬೇಕು. ಎಂದರೆ 96 ಅಂಗುಲವಿರಬೇಕು. ಸುತ್ತಲೂ ಗೋಡೆಯಿಂದ ಮಧ್ಯದ ತನಕ ಕ್ರಮೇಣ ಏರುತ್ತಾ ಹೋಗಬೇಕು. ಶಿಖರಪ್ರಮಾಣ ತಾವದುಚ್ಚಂ ಬಹಿಶ್ಚೈವ ಯದ್ಯೇಕಶಿಖರಂ ಭವೇತ್ ॥ ೬೨ ॥ ಅರ್ಧೋಚ್ಚಮಥವಾಽಪಿ ಸ್ಯಾದ್ ಅಧಸ್ತಾತ್ ಪ್ರತಿಮೋನ್ನತಮ್ । ತತೋ ದ್ವಿಗುಣಮಾನಂ ವಾ ಸಾರ್ಧಪ್ರತಿಮಮೇವ ವಾ॥ ೬೩ ॥ ಅರ್ಥ- ದೇವಾಲಯವು ಒಂದೇ ಗೋಪುರದ್ದಾದರೆ ಹೊರಗಿನ ಶಿಖರದ ಎತ್ತರವೂ ಪ್ರತಿಮೆಯಷ್ಟೆ 96 ಅಂಗುಲವಿರಬೇಕು. ಅಥವಾ 48 ಅಂಗುಲವಾದರೂ ಇರಬಹುದು. ಗುಡಿಯಗೋಡೆಯ ಪ್ರದೇಶವಾದರೂ ಪ್ರತಿಮೆಯಷ್ಟೇ ಅಂಗುಲೀಲಕ್ಷಣ ದೀರ್ಘಾಶ್ಚ ಕಲಮಾಸ್ತಿಃಸ್ರಃ ತಿರ್ಯಗಷ್ಟಯವೋದರಾಃ ॥ ೫೭ ॥ ಅಂಗುಲ್ಯಾ ಮಧ್ಯರೇಖಾಯಾಃ ಸಮಾ ಲಕ್ಷಣತಃ ಸ್ಮೃತಾಃ । ಅರ್ಥ - ಒಂದರ ತುದಿಗೊಂದರಂತೆ ಮೂರು ಭತ್ತಗಳನ್ನು ಉದ್ದ- ವಾಗಿಟ್ಟಾಗ ಏರ್ಪಡುವ ಅಳತೆ ಅಥವಾ ಎಂಟು ಜವೆಗೋಧಿ- ಯನ್ನು ವೃತ್ತಾಕಾರವಾಗಿಟ್ಟಾಗ ಏರ್ಪಡುವ ವೃತ್ತದ ಮಧ್ಯಭಾಗ- ದ ವ್ಯಾಸ ಅಥವಾ ಉತ್ತಮಲಕ್ಷಣವುಳ್ಳ ಪುರುಷನ ಹೆಬ್ಬೆರಳಿನ ಮಧ್ಯಭಾಗದ ರೇಖೆ ಈ ಮೂರೂ ಒಂದಂಗುಲ ಅಳತೆಗೆ ಸಮವಾಗಿರುತ್ತವೆ. ಪ್ರತಿಮೆಯ ಅಳತೆ ಸ್ವಾಂಗುಲ್ಯಾ ಮಧ್ಯರೇಖಾ ತು ಪ್ರತಿಮಾದಿಷು ಲಕ್ಷಣಮ್ ॥ ೫೮ ॥ ಹ್ರಸ್ವಮಧ್ಯೋಚ್ಚಭೇದೇನ ತತ್ತನ್ಮಾನಂ ಸಮಸ್ತಶಃ । ಪ್ರಾದೇಶಹಸ್ತಪುರುಷಮಾನಂ ಸಾಮಾನ್ಯಲಕ್ಷಣಮ್ ॥ ೫೯ ॥ ಅರ್ಥ - ಅದರ ಪ್ರತಿಮೆಯನ್ನು ಅಳೆಯುವಾಗ ಆಯಾಯ ಪ್ರತಿಮೆಯ ಹೆಬ್ಬೆರಳ ಮಧ್ಯಗೆರೆಯ ಅಳತೆಯನ್ನು ಒಂದಂಗುಲ- ವನ್ನಾಗಿ ತಿಳಿಯಬೇಕು. ಈ ಅಂಗುಲದಿಂದಲೇ 96 ಅಂಗುಲವಿರು- ವಂತೆ ನಿರ್ಮಿಸಬೇಕು. ಅಂಗುಲದ ಅಳತೆಯಲ್ಲಿಯೂ ಹ್ರಸ್ವ-ಮಧ್ಯಮ-ಉತ್ತಮ ಎಂದು ಮೂರು ವಿಧಗಳಿವೆ. ಆರು ಯವ- ದಷ್ಟು ಅಳತೆಯ ಅಂಗುಲ ಕನಿಷ್ಟವೂ, ಏಳು ಯವದ ಅಳತೆ ಮಧ್ಯಮ, ಎಂಟು ಯವಗಳ ಅಳತೆಯ ಅಂಗುಲ ಉತ್ತಮ ಎನಿಸಿದೆ. ಅಂಗುಲ ಹ್ರಸ್ವದ್ದಾಗಿದ್ದರೆ ಪ್ರತಿಮೆಯೂ ಚಿಕ್ಕದಾಗು- ತ್ತದೆ. ಮಧ್ಯಮಾಂಗುಲದಿಂದ ಮಧ್ಯಮ, ಉತ್ತಮಾಂಗುಲದಲ್ಲಿ ಕಡೆದ ಪ್ರತಿಮೆ ದೊಡ್ಡದಾಗುತ್ತದೆ[^1] [^1]. ಯಜಮಾನನ ಬಲಗೈಯ ಮಧ್ಯಮ ಬೆರಳಿನ ಮಧ್ಯ- ಪರ್ವದ ಮಧ್ಯಗೆರೆಯ ಅಳತೆಯೇ ಅಂಗುಲ. ಕರ್ತುಃ ದಕ್ಷಿಣ ಹಸ್ತಸ್ಯ ಮಧ್ಯಮಾಂಗುಲಿಪರ್ವಣಃ । ಮಧ್ಯಸ್ಯ ದೈರ್ಘ್ಯಮಾನೇನ ಮಾನಾಂಗುಲಮುದೀರಿತಮ್ ॥ - ಗೌತಮೀತಂತ್ರ ಕೇಶಾಂಗಾರಾಸ್ಥಿವಲ್ಮೀಕಲೋಷ್ಟಾಶ್ಮಾದಿವಿವರ್ಜಿತೇ । ಹರಿಂ ತತ್ರಾಪಿ ಸಂಪೂಜ್ಯ ಬಲಿಂ ದತ್ವಾ ಚ ಪೂರ್ವವತ್ ॥ ೫೬ ॥ ಮೃದ್ದಾರುಶೈಲೈಃ ಲೋಹೈರ್ವಾ ಕುರ್ಯಾದ್ದೇವಾಲಯಂ ದೃಢಮ್ । ಅರ್ಥ- ದೇವಾಲಯನಿರ್ಮಾಣಸ್ಥಲದ ಭೂಮಿಯನ್ನು ಒಂದೂವರೆ ಆಳಿನಷ್ಟು ಅಗೆದು ಕೂದಲು, ಇದ್ದಿಲು, ಅಸ್ಥಿಗಳು, ಹುತ್ತ ಅಥವಾ ಯಾವುದೇ ರೀತಿಯ ಕಲ್ಲು - ಮಣ್ಣಿನ ಹೆಂಟೆಗಳು ಇಲ್ಲದಿರುವ ಪ್ರದೇಶದಲ್ಲಿ ವಿಷ್ಣುವನ್ನು ಪೂಜಿಸಿ, ನೈವೇದ್ಯ ಸಮರ್ಪಿಸಿ, ದಿಗ್ದೇವತೆಗಳಿಗೆ ಬಲಿದಾನಗಳನ್ನರ್ಪಿಸಿ, ಮಣ್ಣುಕಲ್ಲು- ಗಳಿಂದಾಗಲೀ ಕೇವಲ ಮರದಿಂದಾಗಲೀ ಕಬ್ಬಿಣ ಮೊದಲಾದ ಲೋಹದಿಂದಾಗಲೀ ದೃಢವಾಗಿರುವಂತೆ ದೇವಾಲಯವನ್ನು ನಿರ್ಮಿಸಬೇಕು[^1] [^1]. ಭೂಶೋಧನೆ - ಭೂಮಿಯನ್ನು ಒಂದು ಪುರುಷಪ್ರಮಾಣ- ದಷ್ಟು ಆಳತೋಡಿ, ಅದರಲ್ಲಿರುವ ಕೂದಲು, ಎಲುಬು ಮೊದಲಾದ ಅಶುದ್ಧವಸ್ತುಗಳನ್ನು ತೆಗೆದು, ಅದರಲ್ಲಿ ಬೇರೆ ಕೆಮ್ಮಣ್ಣು, ಮರಳುಗಳನ್ನು ತುಂಬಿ, ನೀರು ಬಿಟ್ಟು ಗಟ್ಟಿಗೊಳಿಸಬೇಕು. ದೇವಾಲಯದ ಕೆಳಗೆ ಕೂದಲು ಮೊದಲಾದವು ಇನ್ನೂ ಸಿಗುತ್ತಿ- ದ್ದರೆ ಮೂರು ಪುರುಷ ಮಾನದಷ್ಟು ತೋಡಿ ಅವುಗಳನ್ನೆಲ್ಲ ತೆಗೆದುಹಾಕಬೇಕು. ದೇವಾಲಯ ನಿರ್ಮಿಸಬೇಕಾದ ಸ್ಥಳದಲ್ಲಿ ಭೂಶೋಧನೆಯ ಮೊದಲು ಹಾಗೂ ನಂತರವೂ ವಿಶೇಷಪೂಜೆ, ನೈವೇದ್ಯ ಮಾಡ- ಬೇಕು. ನಂತರ ಶ್ವೇತಸರ್ಷಪವನ್ನು (ಬಿಳಿಯ ಸಾಸಿವೆಯನ್ನು) "ಯೇ ಭೂತಾಃ ವಿಚರಂತಿ ಪ್ರತುದಸ್ಯ ಪ್ರೇಷ್ಯಾಃ । ಸ್ವಸ್ತೈಯನಂ ತಾರ್ಕ್ಷ್ಯಮರಿಷ್ಟನೇಮಿಂ" ಇತ್ಯಾದಿ ಮಂತ್ರಗಳಿಂದ ಚೆಲ್ಲಿ, ಪ್ರದೇಶದ ಸುತ್ತಲೂ ಹಸಿದಾರ- ದಿಂದ ಸೂತ್ರವೇಷ್ಟನ ಮಾಡಬೇಕು. ನಂತರ ವಾಸ್ತುಮಂಡಲ- ವನ್ನು ಬರೆದು ಅದರಲ್ಲಿ ವಾಸ್ತುಪುರುಷನನ್ನು ಪೂಜಿಸಬೇಕು. ವಾಸ್ತುಪ್ರತಿಮೆಯನ್ನು ಪೂರ್ವಾಭಿಮುಖವಾಗಿಯೂ, ಕೈಕಾಲು- ಗಳು ಈಶಾನ್ಯಾದಿ ಮೂಲೆ ದಿಕ್ಕುಗಳಲ್ಲಿರುವಂತೆಯೂ ಚಿಂತಿಸಿ ಅಲ್ಲಿ ಆವಾಹಿಸಿ, ಅದರ ಬಲಭಾಗದಲ್ಲಿ ವಾಸ್ತುದೇವತಾ ಹೋಮ ವನ್ನು ತುಪ್ಪ ಹಾಗೂ ಬಿಲ್ವದ ಕಾಯಿಯಿಂದ ಮಾಡಬೇಕು. ಚತುಹೋಮವನ್ನು ಮಾಡಬಹುದು. ನಂತರ ಅಲ್ಲಿರುವ ಯಕ್ಷರಾಕ್ಷಸಾದಿಗಳಿಗೆ ಉತ್ತರಾಣಿ ಶಮ್ಯಾದಿ- ಗಳಿಂದ ಎಂಟಾಹುತಿಗೆ ಕಡಿಮೆ ಇಲ್ಲದಂತೆ ಹೋಮಿಸಿ, ಮೂಲ- ಮಂತ್ರದಿಂದ ನೂರೆಂಟು, ಸಾವಿರದೆಂಟು ಬಾರಿ ನಾರಾಯಣನಿಗೆ ಆಹುತಿಯನ್ನು ನೀಡಿ, ನಂತರ ಅಷ್ಟದಿಕ್ಪಾಲಕರಿಗೂ ಬಲಿದಾನ ಮಾಡಬೇಕು. ನಂತರ ಪಂಚಗವ್ಯದಿಂದ ಪ್ರೋಕ್ಷಿಸಿ, ಭೂಶುದ್ಧಿ- ಯನ್ನು ಮಾಡಬೇಕು. ಇದರ ಅಂಗವಾಗಿ ಬ್ರಾಹ್ಮಣ- ಸುವಾಸಿನಿ- ಯರಿಗೆ ಅನ್ನಸಂತರ್ಪಣೆಯನ್ನು ಮಾಡಬೇಕು. ನಿಲ್ಲಬಾರದು. ಜಲಾಶಯದ ಮಧ್ಯದಲ್ಲಿ ದೇವಾಲಯವು ವಿಶೇಷ ಸನ್ನಿಧಾನವಿರುವಂತಾಗುತ್ತದೆ. ದೇವಾಲಯಕ್ಕೆ ಗಿಡಮರಗಳ ತಡೆ- ಯಾಗಲೀ ಕಲ್ಲುಗಳ ತಡೆಯಾಗಲೀ ಇರಬಾರದು.[^1] ದೇವಾಲಯವು ಸ್ಮಶಾನಕ್ಕಿಂತ ದೂರವಿರಬೇಕು. ಹಾಗೂ ಜನಾ- ಕರ್ಷಕವಾಗಿದ್ದು ಹನ್ನೆರಡರಿಂದ ನೂರು ಕಿಷ್ಕುಪ್ರದೇಶದಷ್ಟು ವಿಶಾಲವಾಗಿರಬಹುದು. ಕಿಷ್ಕು ಎಂದರೆ ಎರಡು ಮೊಳ ಅಥವಾ 42 ಅಂಗುಲಗಳು. ಭೂಶೋಧನೆ; ದೇವಾಲಯನಿರ್ಮಾಣ ರೀತಿ ಕೃತ್ವಾ ಭೂಶೋಧನಂ ಸಮ್ಯಕ್ ಸಾರ್ಧಪುಂಮಾನತಸ್ತ್ವಧಃ ॥ ೫೫ ॥ [^1]. ಉಪವನ, ಸರೋವರ, ವೃಕ್ಷಾದಿಗಳಿಂದ ಆವೃತವಾಗಿದ್ದು ನೆರಳಿರುವ, ನದೀತೀರ, ಝರಿ ಮೊದಲಾದ ನೀರಿನ ತಾಣಗಳಲ್ಲಿ ಕಟ್ಟಿದ ದೇವಾಲಯಗಳಲ್ಲಿ ದೇವತೆಗಳು ಸನ್ನಿಹಿತರಾಗಿರುತ್ತಾರೆ. ಪರ್ವತಾಗ್ರದೇವಾಲಯಕ್ಕೆ - ತಿರುಮಲ, ಸಿಂಹಾದ್ರಿ, ಕರಿಗಿರಿ, ಶ್ರೀಶೈಲದಲ್ಲಿರುವ ದೇವಾಲಯಗಳು ಉದಾಹರಣೆಗಳು. ಸುತ್ತಲೂ ನೀರಿರುವ ದೇವಾಯಕ್ಕೆ - ಶ್ರೀರಂಗಾದಿ ತ್ರಿರಂಗಗಳು ಉದಾಹರಣೆಗಳು. ಸರೋವರವಿರುವ ದೇವಾಲಯಕ್ಕೆ - ಪದ್ಮಸರೋವರ, ನೃಸಿಂಹ- ತೀರ್ಥ, ಮಧ್ವಸರೋವರವಿರುವ ಪ್ರದೇಶಗಳಲ್ಲಿರುವ ದೇವಾಲಯಗಳು. ನದಿಯ ತೀರದಲ್ಲಿರುವ ದೇವಾಲಯಗಳಿಗೆ ಕಾವೇರಿ, ತುಂಗ- ಭದ್ರಾದಿ ನದಿಗಳ ತೀರಗಳಲ್ಲಿರುವ ಸುಮಾರು ದೇವಾಲಯಗಳು; ನವವೃಂದಾವನವಾದರೋ ಸುತ್ತಲೂ ನೀರಿರುವ ತಾಣವಾಗಿದೆ. ಝರಿ ಬೀಳುವ ಕಪಿಲತೀರ್ಥಕ್ಷೇತ್ರವು(ತಿರುಪತಿ) ಪ್ರಸಿದ್ಧವಾಗಿದೆ. ಸಲಿಲೋದ್ಯಾನಯುಕ್ರೇಷು ಕೃತೇಷು ಅಕೃತೇಷು ಸರಸ್ಸು ನಲಿನಾಚ್ಛನ್ನನಿರಸ್ತ ರವಿರಶ್ಮಿಷು । ವನೋಪಾಂತನದೀಶೈಲನಿರ್ಝರೋಪಾಂತಭೂಮಿಷು ಸ್ಥಾನೇಷ್ವೇತೇಷು ಸಾನ್ನಿಧ್ಯಮುಪಗಚ್ಛಂತಿ ದೇವತಾಃ ॥ ಕಿಷ್ಕು – ಎಂದರೆ ಎರಡು ರತ್ನಿಗಳು, ರತ್ನಿ ಎಂದರೆ ಇಪ್ಪತ್ತೊಂದು ಅಂಗುಲ. ಎರಡು ರತ್ನಿ ಎಂದರೆ 42 ಅಂಗುಲ. - ಕಿಷ್ಕು: ಸ್ಮೃತೋ ದ್ವಿರತ್ನಿಸ್ತು ದ್ವಿಚತ್ವಾರಿಂಶದಂಗುಲಃ । ಸುಮಾರು ಎರಡು ಮೊಳ ಕಿಷ್ಕು ಎನಿಸುತ್ತದೆ. - ಹಸ್ತದ್ವಯಂ ಕಿಷ್ಕುಃ (ವ.ಟೀ.) ೪೨×೧೨ = ೫೦೪ ಅಂಗುಲವಾಗಲೀ, ದ್ವಿಗುಣವೆಂದರೆ ೨೦೧೬ ಅಂಗುಲಗಳು, ಅಥವಾ ನೂರು ಕಿಷ್ಕುಗಳಾಗಲೀ ೪೨೦೦ ಅಂಗುಲ- ಗಳಷ್ಟು ಹರವು ಉಳ್ಳ ಪ್ರದೇಶದಲ್ಲಿ ನಿರ್ಮಿತವಾಗಿರಬೇಕು. ಕಡಿಮೆ ಎಂದರೆ ೫೦೪ ಅಂಗುಲಗಳಿರಬೇಕು. ದೇವಾಲಯಕ್ಕೆ ಯೋಗ್ಯಸ್ಥಳ ವೇದಮಂಗಲಘೋಷೇಣ ವಾದ್ಯೈಃತತ್ ಪ್ರತಿಮಾಂ ಹರೇತ್ । ಪ್ರಾಗುದಕ್ ಪ್ರವಣೇ[^1] ದೇಶೇ ಕುರ್ಯಾದ್ ದೇವಾಲಯಂ ಸುಧೀಃ ॥ ೫೧ ॥ ಅರ್ಥ- ವಿಧಿವತ್ತಾಗಿ ಪ್ರತಿಮೆಯು ತಯಾರಾದ ಮೇಲೆ ಮಂಗಳ- ವಾದ್ಯ, ಶಂಖ, ಭೇರಿ, ಮೃದಂಗ, ವೇದಗಳ ಧ್ವನಿಯನ್ನು ಮಾಡುತ್ತಾ (ಮನೆಗೆ/ಊರಿಗೆ) ಆ ಪ್ರತಿಮೆಯನ್ನು ತರಬೇಕು. ಮಳೆಯು ಬಿದ್ದಾಗ ನೀರು ಪೂರ್ವ, ಉತ್ತರ, ಈಶಾನ್ಯದಿಕ್ಕಿಗೆ ಹರಿಯುವ ಪ್ರದೇಶದಲ್ಲಿ ದೇವಾಲಯವನ್ನು ನಿರ್ಮಿಸಬೇಕು. ರಾಮಾವೃತೇ ದಕ್ಷಿಣತಃ ಪಶ್ಚಾದ್ ಗಿರ್ಯಗ್ರ ಏವ ವ। ಮಧ್ಯೆ ವಾ ಗ್ರಾಮಪುರಯೋಃ ವಿಶಾಲೇ ಸುಶುಚೌ ತಥಾ ॥ ೫೨ ॥ ಐಶಾನೀಂ ದಿಶಮೇಕಾಂ ತು ವಿನೋದಕವಿವರ್ಜಿತೇ । ಜಲಾಶಯಸ್ಯ ಮಧ್ಯೆ ವಾ ಶಿಲಾವೃಕ್ಷವಿವರ್ಜಿತೇ ॥ ೫೩ ॥ ಸ್ಮಶಾನಾದಿದೇಶಾನಾಂ ವಿದೂರೇ ಸುಮನೋಹರೇ । ಕಿಷ್ಕು ದ್ವಾದಶತೋಽನೂನಂ ಕುರ್ಯಾದ್ದೇವಾಲಯಸ್ಥಲಮ್ II ೫೪ ॥ ದ್ವಿಗುಣಂ ಚತುರ್ಗುಣಂ ವಾಪಿ ಶತಕಿಷ್ಕು ಪ್ರಮಾಣಕಮ್ । ಅರ್ಥ - ದೇವಾಲಯವನ್ನು ಉದ್ಯಾನವನಗಳಿಂದ ಆವೃತವಾಗಿ- ರುವ ಪ್ರದೇಶದಲ್ಲಿ ದರ್ಭೆ, ಗರಿಕೆ, ತುಲಸೀ ಮೊದಲಾದವು ಸಮೃದ್ಧವಾಗಿರುವ ದೇಶದಲ್ಲಾಗಲೀ ಪರ್ವತದ ಅಗ್ರಭಾಗದಲ್ಲಾ- ಗಲೀ, ಪರ್ವತದ ಬಲಭಾಗದಲ್ಲಾಗಲೀ, ಗ್ರಾಮ ಅಥವಾ ನಗರ- ಮಧ್ಯದೇಶದಲ್ಲಾಗಲೀ ದೇವಾಲಯವನ್ನು ನಿರ್ಮಿಸಬೇಕು. ದೇವಾಲಯದ ಪ್ರದೇಶ ಶುದ್ಧವಾಗಿರಬೇಕು. ಹಾಗೂ ಯಾವುದೇ ನೀರು [^1]. ವಿಶೇಷಾಂಶ - ಮಳೆಯ ನೀರು ಹರಿಯುವ ದಿಕ್ಕನ್ನು ನೋಡಿ ದೇವಾಲಯ ನಿರ್ಮಿಸಬೇಕು. ನೀರು ಪೂರ್ವಕ್ಕೆ ಹರಿದರೆ 'ಪ್ರಾಚೀ- ಪ್ರವಣ'ವೆಂದೂ, ಉತ್ತರದಿಕ್ಕಿಗೆ ಹರಿದರೆ 'ಉದೀಚೀ ಪ್ರವಣ'- ವೆಂದೂ, ಈಶಾನ್ಯಕ್ಕೆ ಹರಿದರೆ 'ಪ್ರಾಗುದಕ್ ಪ್ರವಣ'ವೆಂದೂ ಹೆಸರು. ಪ್ರಾಚೀ,ಈಶಾನ ಪ್ರವಣದಲ್ಲಿ ದೇವಾಲಯವು ಸರ್ವತೋS ಭಿವೃದ್ಧಿಯನ್ನುಂಟು ಮಾಡುತ್ತದೆ. ಆನಯೇಚ್ಛಂಖನಿರ್ಘೋಷೈಃ ಗೀತಮಂಗಲನಿಃಸ್ವನೈಃ । ಋಗ್ಯಜುಃಸಾಮಶಬ್ದ ಪ್ರತಿಮಾಂ ಕಾರಿತಾಂ ಶುಭಾಮ್ !! ವೃಕ್ಷವನ್ನಾಗಲೀ ಕತ್ತರಿಸಬೇಕು. ಶಿಲೆಯ ಪ್ರಭೇದಗಳು ಪ್ರತಿಮಾಂ ಪಿಂಡಿಕಾಂ ಪೀಠಂ ಶಿಲಾಭಿಸ್ತು ತ್ರಿಜಾತಿಭಿಃ ॥ ೪೯ ॥ ಸ್ವರಸ್ಥೂಲತ್ವಭೇದೇನ ಪುಂಸ್ತ್ರ್ಯಾದ್ಯಾ ಜಾತಿತಃ ಶಿಲಾ । ಪುಂಶಿಲಾಂ ಪ್ರತಿಮಾರ್ಥಂ ತು ಸ್ತ್ರೀಶಿಲಾಂ ಪೀಠಕ್ಲೃಪ್ತಯೇ ॥ ೫೦ ॥ ಅರ್ಥ - ಪುಲ್ಲಿಂಗಶಿಲೆ, ಸ್ತ್ರೀಲಿಂಗಶಿಲೆ, ನಪುಂಸಕಶಿಲೆಯೆಂದು ಶಿಲೆಯಲ್ಲಿ ಮೂರು ಜಾತಿಗಳಿದ್ದು, ಇವುಗಳಿಂದ ಕ್ರಮವಾಗಿ ಪ್ರತಿಮೆ, ಪೀಠ, ಅಡಿಗಲ್ಲುಗಳನ್ನು ತಯಾರಿಸಬೇಕು. ಯಾವಶಿಲೆ- ಯನ್ನು ಬಡಿದಾಗ ಕಂಚಿನಂತೆ ಶಬ್ದಮಾಡುವುದೋ ಅದು ಪುಂಶಿಲೆ, ಶಬ್ದವು ಒಡೆದ ಗಂಟೆಯ ಶಬ್ದದಂತೆ ಮಂದವಾಗಿದ್ದರೆ ಅದು ಸ್ತ್ರೀಶಿಲೆಯು. ಈ ಪ್ರತಿಮೆ ಸ್ತ್ರೀದೇವತೆಯ ಪ್ರತಿಮೆಗೆ ಯೋಗ್ಯವಾಗಿರುತ್ತದೆ. ಯಾವ ಧ್ವನಿಯನ್ನೂ ಮಾಡದ ಶಿಲೆ ನಪುಂಸಕಶಿಲೆ, ಪುಂಶಿಲೆಯನ್ನು ಪ್ರತಿಮೆಗಾಗಿಯೂ, ಸ್ತ್ರೀಶಿಲೆ ಯನ್ನು ಪಾಣಿಪೀಠಕ್ಕಾಗಿಯೂ, ಪೀಠದ ಕೆಳಗೆ ನವನಿಧಿಗಾಗಿ ಇಡಬೇಕಾದ ಶಿಲೆಗಾಗಿ ನಪುಂಸಕಶಿಲೆಯನ್ನು ಉಪಯೋಗಿಸ- ಬೇಕು. ಪ್ರತಿಮೆಗೆ ಆಧಾರಭೂತವಾದ ಒರಳಿನಂತಿರುವ ಶಿಲೆಯೇ (ಭಾಗವೇ) ಪಿಂಡಿಕೆಯು. [^1]. ವಿಶೇಷಾಂಶ - ಪಿಂಡಿಕಾ ಎಂದರೆ ಪ್ರತಿಮೆಯ ಶಿಲೆಯು ಸರಿಯಾಗಿ ಕುಳಿತುಕೊಳ್ಳಲು ಒರಳಿನಂತೆ ಮಾಡಲ್ಪಟ್ಟಿರುವ ಶಿಲೆ. ಇದು ಸ್ತ್ರೀಶಿಲೆಯಾಗಿದ್ದರೆ ಒಳಿತು. ಪ್ರತಿಮೆಯು ಪುಂಶಿಲೆ- ಯಾಗಿದ್ದು ಪರಮಪುರುಷನನ್ನು ಸಂಕೇತಿಸಿದರೆ, ಪಿಂಡಿಕೆಯು ಪರಮಪುರುಷನ ಪತ್ನಿ ಮಹಾಶಕ್ತಿ ಶ್ರೀದೇವಿಯನ್ನು ಸಂಕೇತಿಸು- ತ್ತದೆ. ಇವರಿಬ್ಬರನ್ನೂ ಒಂದುಗೂಡಿಸುವುದು ಪ್ರತಿಷ್ಠೆ. ಪಿಂಡಿಕಾಯಾಂ ಮಹಾದೇವೀ ಪ್ರತೀಕೇ ಸ್ಯಾದ್ ಪರೋ ವರಃ । ತಯೋರ್ಯಃ ಕ್ರಿಯತೇ ಯೋಗಃ ಸಾ ಪ್ರತಿಷ್ಠೇತಿ ಗದ್ಯತೇ ॥ -ಅಜಿತಾಗಮ ೨/೩೫/೯೬ ಪ್ರತಿಮೆಯನ್ನು ಪುಂಜಾತಿಶಿಲೆಯಿಂದಲೂ ಪ್ರತಿಮೆಯು ನಿಲ್ಲಲು ಬೇಕಾದ ಪೀಠವನ್ನು ಸ್ತ್ರೀಜಾತಿ ಶಿಲೆಯಿಂದಲೂ, ಪಿಂಡಿಕಾವನ್ನು ನಪುಂಸಕಶಿಲೆಯಿಂದಲೂ ಮಾಡಬೇಕು. ನಪುಂಸಕಶಿಲಾ ಪಿಂಡಿಕಾಕ್ಲೃಪ್ತಯೇ ಇತಿ ಶೇಷಃ (ವ.ಟೀ.) ಪಿಂಡಿಕೆಯು ಕ್ರಿಯಾಶಕ್ತಿ ಎನಿಸಿದರೆ, ಪ್ರತಿಮೆಯು ಜ್ಞಾನಶಕ್ತಿ ಎನಿಸಿದೆ. ಜ್ಞಾನಶಕ್ತಿಯನ್ನು ಕ್ರಿಯಾಶಕ್ತಿಯೊಂದಿಗೆ ಹೊಂದಿಸು- ವುದೇ ಪ್ರತಿಷ್ಠೆ- 'ಪಿಂಡಿಕಾಯೋಗ'ವನ್ನೇ ಪ್ರತಿಷ್ಠೆ ಎನ್ನಲಾಗಿದೆ. ಕ್ರಿಯತೇ ಪಿಂಡಿಕಾಯೋಗ: ತಾಂ ಪ್ರತಿಷ್ಠಾಂ ಪ್ರಚಕ್ಷತೇ ॥ ತತಸ್ತಾವತ್ ತೃತೀಯಾಯಾಃ ಸಾರ್ಧಮೇವ ಹ್ಯುದಾಹೃತಮ್ ॥ ೬೯ ॥ ಅರ್ಥ - ಗರ್ಭಗೃಹಕ್ಕೆ ಅಂಟಿಕೊಳ್ಳದೆ ಬೇರೆಯಾಗಿ ಸಭಾಮಂಟಪ ವನ್ನು ಮಾಡುವುದಾದರೆ ಗರ್ಭಗೃಹದಿಂದ ಎರಡು ಮೊಳ ದೂರದಲ್ಲಿ ರಚಿತವಾಗಬೇಕು. ಎರಡನೆ ಮಂಟಪವಾದರೋ ಗರ್ಭಗೃಹದಿಂದ ನಾಲ್ಕು ಮೊಳದೂರದಲ್ಲಿ, ಮೂರನೆಯ ಮಂಟಪ 6ಮೊಳ ದೂರದಲ್ಲಿಯೂ ರಚಿಸಲ್ಪಡಬೇಕು. ಅಂತು ಪ್ರದಕ್ಷಿಣೆಗೆ ಅನುವಾಗಿರುವಂತೆ ಮಂಟಪ ರಚಿಸಬೇಕು ಎಂದರ್ಥ. ಕಿಷ್ಕುತ್ರಯಂ ಚ ಶಕ್ರಾದೇಃ ಸ್ಥಾನಂ ತದ್ವೃತ್ತತಃ ಸ್ಮೃತಮ್ । ತತಸ್ತು ಮಂಟಪಂ ಕುರ್ಯಾತ್ ಪ್ರತಿಷ್ಠಾಯಾಃ ಸುಲಕ್ಷಣಮ್ II ೭೦ II ಅರ್ಥ – ದೇವಾಲಯದ ಸುತ್ತಲೂ ಆರುಮೊಳ ಪರಿಮಾಣದಷ್ಟು ಇಂದ್ರಾದಿ ದಿಕ್ಪಾಲಕರ ಮಂಟಪವನ್ನು ನಿರ್ಮಿಸಬೇಕು. ದೇವಾಲಯದ ನಿರ್ಮಾಣವಾದ ಮೇಲೆ ನಿಗದಿತ ಪ್ರತಿಮೆಯನ್ನು ಸ್ಥಾಪಿಸಲು ಲಕ್ಷಣವಾದ ಮಂಟಪವನ್ನು ರಚಿಸಬೇಕು. ವಾಸ್ತುಪುರುಷಪೂಜೆ ಪೂಜಯೇದ್ ವಾಸ್ತುಪುರುಷಸ್ಯೋಪರಿಸ್ಥಾಂಸ್ತು ಸರ್ವದಾ । ದೇವಾನ್ ಬ್ರಹ್ಮಾದಿಕಾನ್ ವಾಸ್ತು: ವರಾಹಸ್ಯ ಹರೇಃ ಸುತಃ ॥ ೭೧ ॥ ಪಾತಿತೋ ದೈವತೈಃ ಭೂಮೌ ಚತುರಸ್ರಾಕೃತಿಃ ಸ್ಥಿತಃ । ಅರ್ಥ- ವಾಸ್ತುಪುರುಷನು ವರಾಹರೂಪೀ ಹರಿಯ ಬೆವರಿನಿಂದ ಜನಿಸಿದವನು. ಇವನನ್ನು ಹಾಗೂ ಇವನ ಮೇಲಿರುವ ಬ್ರಹ್ಮಾದಿ ದೇವತೆಗಳನ್ನು ಪೂಜಿಸದಿದ್ದರೆ ಮಾಡಿದ ಕರ್ಮ ವಿಫಲವಾಗುತ್ತದೆ. ಸುಖಾದಿಗಳಿಗೆ ಕುಂದುಂಟಾಗುತ್ತದೆ. ಆದ್ದರಿಂದ ಇವನನ್ನು ಪೂಜಿಸಲೇಬೇಕು. ಇದು ವರ. ಇವನು ದೇವತೆಗಳನ್ನೇ ನಿಗ್ರಹಿಸಲು ಸ್ವರ್ಗಕ್ಕೆ ಮುತ್ತಿಗೆ ಹಾಕಿದಾಗ ದೇವತೆಗಳೆಲ್ಲರೂ ಅಲ್ಲಿಂದ ತಬ್ಬಿಭೂಮಿಯಲ್ಲಿ ಒತ್ತಿದಾಗ ಚತುರಸ್ರಾಕಾರವಾದನು. [^1] [^1]. ವಾಸ್ತುರ್ನಾಮಾ ಚತುರ್ವಕ್ತ್ರೋ ಭಗವತ್ ಸ್ವೇದಸಂಭವಃ। ಅಭ್ಯದ್ರವತ್ ಸುರಾನ್ ಹಂತುಂ ಆತ್ಮನೋ ಬಲದರ್ಪಿತಃ ॥ ಸ ದೇವೈ: ತ್ರಾಸಿತಃ ತೂರ್ಣಮಪದದ್ ಭುವಿ ವಿಹ್ವಲಃ । ಕೃತ್ವಾಽಷ್ಟಕಾಷ್ಟಕೋಷ್ಠಾನಿ ಮಧ್ಯೇ ಬ್ರಹ್ಮಾ ಚತುಷ್ಟಯೇ ॥ ೭೨ ॥ ಪೂಜ್ಯೋ ದ್ವಯೇ ದ್ವಯೇ ಶಕ್ರೋ ಯಮೋ ವರುಣ ಏವ ಚ । ಸೋಮಶ್ಚ ಪೂಜ್ಯಾಃ ಕೋಣೇಷು ವಹ್ನ್ಯಾದ್ಯಾಃ ಕೋಣದೇವತಾಃ ॥ ೭೩ ॥ ಅರ್ಥ - ರಂಗೋಲೆಯಿಂದ ಎಂಟೆಂಟರಂತೆ 64ಚೌಕಾಕಾರದ ಕೋಣೆಗಳನ್ನು ಮಾಡಿ ಮಧ್ಯದ ನಾಲ್ಕು ಕೋಣೆಗಳಲ್ಲಿ ಬ್ರಹ್ಮ- ದೇವನನ್ನು, ಎರಡನೇ ಆವರಣದ ಪೂರ್ವಾದಿ ಎರಡೆರಡು ಕೋಣೆಗಳಲ್ಲಿ ಕ್ರಮವಾಗಿ ಇಂದ್ರ-ಯಮ-ವರುಣ-ಸೋಮರನ್ನೂ ಆವಾಹಿಸಬೇಕು. ಹಾಗೆಯೇ ವಿದಿಕ್ಕುಗಳ ದೇವತೆಗಳಾದ ಅಗ್ನಿನಿರ್ಋತಿ-ವಾಯು-ಈಶಾನರನ್ನು ಪೂಜಿಸಬೇಕು.[^1] ಅಧೋಮುಖಂ ಪ್ರಾಕ್ ಶಿರಸಂ ವಿನ್ಯಸೇದ್ ವಾಸ್ತುಪೂರುಷಮ್ ॥ ತಮರ್ಚಯೇತ್ ಪ್ರಯತ್ನನ ಕರ್ಮದೈವಂ ಯಥಾ ಭವೇತ್ । ಅನರ್ಚಿತೇ ವಾಸ್ತುದೇವೇ ಕೃತಂ ಕರ್ಮಾಸುರಂ ಭವೇತ್ ॥ ವಾಸ್ತುಪುರುಷ - ದೇವಾಲಯಕ್ಕೆ ಸ್ಥಳಶುದ್ದಿಯಾದಮೇಲೆ ವಾಸ್ತು ವಿನ್ಯಾಸ, ವಾಸ್ತುಪೂಜೆ,ವಾಸ್ತುಹೋಮ, ವಾಸ್ತುಬಲಿ, ವಾಸ್ತುಶಾಂತಿಯಾಗಬೇಕು. ವಾಸ್ತುಪುರುಷನನ್ನು ೮x೮:೬೪ ಕೋಣೆಗಳಲ್ಲಾಗಲೀ, ೯x೯=೮೧ ಕೋಣೆಗಳಿರುವ ವಾಸ್ತುಮಂಡಲದಲ್ಲಿ ಚಿತ್ರಿಸಬೇಕು. ೮೧ ಮನೆಗಳಿರುವ ಮಂಡಲವನ್ನು 'ಪರಮಶಾಯಿಕಾ' ಎನ್ನ- ಲಾಗಿದ್ದು ಇದನ್ನು ನಿರ್ಮಾಣದಲ್ಲಿ ಉಪಯೋಗಿಸಲಾಗುವುದು. ೬೪ಕೋಣೆಗಳ ಮಂಡಲವಾದರೂ 'ಮಂಡೂಕ' ಎನಿಸಿದ್ದು, ದೇವಾಲಯನಿರ್ಮಾಣದಲ್ಲಿ ಬರೆಯಲಾಗುವುದು. ವಾಸ್ತುಪುರುಷನು ಮುಖ ಕೆಳಗೆ ಹಾಕಿಕೊಂಡಿರುವನು. ಈಶಾನ್ಯ ದಿಕ್ಕಿನಲ್ಲಿ ತಲೆಯಿರುತ್ತದೆ. ನೈರುತ್ಯದಲ್ಲಿ ಎರಡೂ ಕಾಲುಗಳು ಇರುತ್ತವೆ. ಕೈಗಳು ಆಗ್ನೇಯ-ವಾಯವ್ಯಗಳಲ್ಲಿದ್ದು ಇಡೀ ಸ್ಥಳ- ವನ್ನು ವ್ಯಾಪಿಸಿರುತ್ತಾನೆ. ಅಧೋಮುಖೋऽದ್ಯಾಪಿ ವಾಸ್ತುಃ ಈಶಾನದಿಕ್ ಶಿರಾಃ । ಪ್ರಸಾರ್ಯ ಪಾದೌ ನೈರ್ಋತ್ಯಾಂ ಅಧಿಶೇತೇ ಸ್ಮಕಾಶ್ಯಪೀಮ್ !! - ಭೂಮಿಗೆ ಬೀಳಿಸಿ ಅವನು ಪುನಃ ಏಳದಂತೆ ಅದುಮಿ ಹಿಡಿದು ಅವನ ಮೇಲೆ ಇರುವ ದೇವತೆಗಳಿಗೂ ಪೂಜೆಯಾಗಬೇಕು. [^1]. ಅಷ್ಟಕಾಷ್ಟಕ ಎಂದರೆ 8x8 = 64 ಕೋಣೆಗಳೆಂದರ್ಥ. ಇವುಗಳನ್ನು ನಾಲ್ಕು ಆವರಣಗಳಾಗಿ ವಿಭಾಗ ಮಾಡಬೇಕು. ಒಂದನೇ ಆವರಣದಲ್ಲಿ ನಾಲ್ಕು ಕೋಣೆಗಳು, ಇಲ್ಲಿ ಚತುರ್ಮುಖನನ್ನು ಆವಾಹಿಸುವುದು. ಎರಡನೇ ಆವರಣದಲ್ಲಿ ಹನ್ನೆರಡು ಮನೆಗಳು. ಮೂರನೆ ಆವರಣದಲ್ಲಿ ಇಪ್ಪತ್ತು ಮನೆಗಳು, ನಾಲ್ಕರಲ್ಲಿ 28 ಕೋಣೆಗಳು. ಇವುಗಳಲ್ಲಿ 49 ವಾಸ್ತುಮಂಡಲದೇವತೆಗಳು ಪುನಃ ತ್ರಯೇ ತ್ರಯೇ ಕಾಮಂ ಧಾತಾರಂ ಸವಿಧಾತೃಕಮ್ । ಸ್ಕಂದಂ ಚ ಪೂಜಯೇತ್ ಕೋಣೇ ಸೂರ್ಯಂ ಚೈವ ವಿನಾಯಕಮ್ ॥ ೭೪ ॥ ಕಾಲಂ ಕುಬೇರಂ ಚ ಬಹಿಃ ಪ್ರತ್ಯೇಕಂ ದಿಕ್ಷು ಪೂಜಯೇತ್ । ಹಾರಿಂ ಹರಿಂ ಗಭೀರಂ ಚ ಗಾಹನಂ ಗಹನಂ ಗುಹಮ್ II ೭೫ ॥ ತಾತಮಂಗಾರಕಂ ಚೈವ ಪೂರ್ವಸ್ಯಾಂ ದಿಶಿ ಪೂಜಯೇತ್ । ದಾರುಣಂ ವಿದರಿಂ ದ್ಯೋತಂ ಪ್ರದ್ಯೋತಂ ದ್ಯೋತನಂ ಹರಿಮ್ ॥ ೭೬ ॥ ಮೃತ್ಯುಂ ಶನೈಶ್ಚರಂ ಚೈವ ದಕ್ಷಿಣಸ್ಯಾಂ ಪ್ರಪೂಜಯೇತ್ । ಪುಷ್ಕರಂ ಕ್ಷರಣಂ ಕ್ಷಾರಿಂ ವಿಕ್ಷಣಂ ಕ್ಷೋಭಣಂ ಕ್ಷಣಮ್ ೭೭ ॥॥ ಚಾರ್ವಂಗಂ ಭಾರ್ಗವಂ ಚೈವ ಪಶ್ಚಿಮಾಯಾಂ ಪ್ರಪೂಜಯೇತ್ । ಚಾರಂ ವಿಚಾರಂ ಪ್ರಚರಂ ಸಂಚಾರಂ ಚರಣಂ ಚರಮ್ II ೭೮ ॥ ಬೃಹಸ್ಪತಿಂ ಬುಧಂ ಚೈವಾಪ್ಯುತ್ತರಸ್ಯಾಂ ಪ್ರಪೂಜಯೇತ್ । ಏವಮೇವ ವಿಮಾನಸ್ಯ ಕೃತೇಃ ಪ್ರಾಗಪಿ ಪೂಜಯೇತ್ ॥ ೭೯ ॥ ಅರ್ಥ - ಮೂರನೇ ಆವರಣದ ಪೂರ್ವಾದಿ ದಿಕ್ಕುಗಳಲ್ಲಿ ಪ್ರತಿ- ಪೂರ್ವಾದಿ ದಿಕ್ಕಿನ ಮೂರು ಮೂರು ಕೋಣೆಗಳಲ್ಲಿ ಕಾಮ, ಧಾತಾ, ವಿಧಾತಾ, ಸ್ಕಂದರನ್ನು ಆವಾಹಿಸಿ ಪೂಜಿಸಬೇಕು. ವಿದಿಕ್ಕು ಗಳಲ್ಲಿ ಸೂರ್ಯ, ವಿನಾಯಕ, ಕಾಲ, ಕುಬೇರರನ್ನು ಪೂಜಿಸು- ವುದು. ನಾಲ್ಕನೆಯ ಆವರಣದ ಪೂರ್ವಾದಿ ಎಂಟೂ ಮನೆಗಳಲ್ಲಿ ಹಾರಿ, ಹರಿ, ಗಭೀರ, ಗಾಹನ, ಗಹನ, ಗುಹ, ಭಾನು, ಅಂಗಾರಕರನ್ನು ಪೂಜಿಸುವುದು. ದಕ್ಷಿಣದಿಕ್ಕಿನ ಅಷ್ಟಕೋಷ್ಠಗಳಲ್ಲಿ ದಾರುಣ, ವಿದರ, ದ್ಯೋತ, ಪ್ರದ್ಯೋತ, ದ್ಯೋತನ, ಹರಿ, ಮೃತ್ಯು, ಶನೈಶ್ಚರರನ್ನು ಪೂಜಿಸ- ಬೇಕು. ಪಶ್ಚಿಮದ ಎಂಟು ಕೋಣೆಗಳಲ್ಲಿ ಕ್ರಮವಾಗಿ ನೈರ್ಋತ್ಯದಿಂದ ವಾಯವ್ಯದ ದೇವತೆಗಳನ್ನು ಆವಾಹಿಸುವುದು. ವರೆಗೆ ಪುಷ್ಕರ, ಕ್ಷರಣ, ಕ್ಷಾರ, ವಿಕ್ಷರ, ಕ್ಷೋಭಣ, ಕ್ಷರ,ಚಾರ್ವಾಂಗ, ಭಾರ್ಗವರನ್ನು ಪೂಜಿಸುವುದು. ಉತ್ತರದಲ್ಲಿ ಚಾರ - ವಿಚಾರ - ಪ್ರಚರ - ಸಂಚಾರ - ಚಾರಣ- ಚರ - ಬೃಹಸ್ಪತಿ - ಬುಧ ಇವರನ್ನು ಪೂಜಿಸಬೇಕು. ಇದೇ ರೀತಿ ಗರ್ಭ- ಗುಡಿಯ ಗೋಪುರ ನಿರ್ಮಾಣದಲ್ಲೂ ವಾಸ್ತುಪೂಜೆಯಾಗಬೇಕು [^1] [^1]. ವಾಸ್ತುದೇವತೆಗಳು- ಅರವತ್ತನಾಲ್ಕು ಕೋಣೆಗಳಲ್ಲಿ 49ದೇವತೆಗಳನ್ನು ಆವಾಹಿಸಿ ಪೂಜಿಸಬೇಕು. ವಾಸ್ತುದೇವತೆಗಳು ನಾಲ್ಕು ಭುಜ ಹೊಂದಿದ್ದು ಖಡ್ಗಾದಿ ಆಯುಧಗಳನ್ನು ಎರಡು ಕೈಯ್ಯಲ್ಲಿ ಧರಿಸಿ ಉಳಿದ ಎರಡು ಕೈಗಳನ್ನು ಜೋಡಿಸಿಕೊಂಡು ಮಧ್ಯದಲ್ಲಿ ಬ್ರಹ್ಮದೇವರನ್ನೇ ನೋಡುತ್ತಿರುತ್ತಾರೆ. - ಬ್ರಹ್ಮಾಣಂ ಸನ್ನಿರೀಕ್ಷ್ಯಂತೇ ತದ್ವಕ್ತ್ರಾಭಿಮುಖಾಶ್ಚತೇ । ಬ್ರಹ್ಮದೇವನಾದರೋ ರಕ್ತವರ್ಣದವನಾಗಿದ್ದು, ತನ್ನ ನಾಲ್ಕು ಕೈಗಳಲ್ಲಿ ಅಕ್ಷಮಾಲೆ, ಸ್ರುವ, ದಂಡ, ಕಮಂಡಲುಗಳನ್ನು ಧರಿಸಿರುವನು. ವಾಸ್ತುಪೂಜೆ ಹಿಂದೆ ವರಾಹನ ಬೆವರಿನಿಂದ ಜನಿಸಿದವನೇ ವಾಸ್ತುಪುರುಷ. ಇವನಿಗೆ ಸಕಲಲೋಕಗಳನ್ನೂ ವ್ಯಾಪಿಸಿರುವ ದೇಹವಿತ್ತು. ಇವನನ್ನು ನೋಡಿ ಭಯಪಟ್ಟ ದೇವತೆಗಳೆಲ್ಲರೂ ಒಟ್ಟಿಗೆ ಇವನನ್ನು ಹಿಡಿದು ಭೂಮಿಗೆ ಬೀಳಿಸಿದರು. ಯಾವ ಯಾವ ಅವಯವಗಳನ್ನು ಯಾವ ಯಾವ ದೇವತೆಗಳು ಹಿಡಿದಿದ್ದರೋ ಅಲ್ಲಲ್ಲಿ ಆಯಾಯ ದೇವತೆಗಳನ್ನು ಪೂಜಿಸಿ, ಬಲಿದಾನ ಮಾಡುವುದರಿಂದ ದೇವತೆಗಳು ಸಂತುಷ್ಟರಾಗುತ್ತಾರೆ. ಯತ್ರ ಯೇನ ಗೃಹೀತಾನಿ ತತ್ರ ತಸ್ಯ ಬಲಿಂ ಹರೇತ್ । ಬಲಿಂ ಗೃಹೀತ್ವಾ ತೇ ಸರ್ವೇ ಪ್ರೀಣಂತಿ ಸುಚಿರಂ ಸುರಾಃ ॥ ವಾಸ್ತುದೇವತೆಗಳನ್ನು ಪೂಜಿಸದಿದ್ದರೆ ಅವರು ಆಯಾಯಾ ವಾಸ್ತುವಿನ ಅಂಗಗಳನ್ನು ಬಿಟ್ಟುನ್ಹೊರಟು ಹೋಗುತ್ತಾರೆ. ದೇವತೆಗಳು ಹೊರಟು ಹೋದಾಗ ಗೃಹವಾಸ್ತುವು ನಾಶ ಹೊಂದುತ್ತದೆ. ಯದಿ ತೇಷಾಂ ತದಾ ಪೂಜಾ ಸುರಾಣಾಂ ನ ವಿಧೀಯತೇ । ತದಾ ದೇವಾಃ ತದಂಗಾನಿ ಹಿತ್ವಾಗಚ್ಛಂತಿ ವೈ ಧ್ರುವಮ್ ॥ ಗತೇಷು ತೇಷು ತದ್ವಾಸ್ತು ಕ್ಷೀಯತೇ ನಾತ್ರ ಸಂಶಯಃ । ತಸ್ಮಾತ್ ತದ್ವಾಸ್ತುದೇಹಸ್ಥಾನ್ ಅಮರಾನ್ ಅರ್ಚಯೇತ್ ಸುಧೀಃ ॥ - ಅಜಿತಾಗಮ 8ನೇ ಪಟಲ ಮಂಟಪಮಾಡುವ ರೀತಿ ಸಪ್ತಪರ್ಣಮಯಂ ಸಾಧು ಕಾರಯೇನ್ಮಂಡಪಂ ತತಃ । ಸಪ್ತಹಸ್ತಂ ದ್ವಿಷಡ್‌ಹಸ್ತಮಥವಾ ದ್ವಿಗುಣಂ ತತಃ ॥ ೮೦ ॥ ಚತುರ್ಗುಣಂ ವಾ ಸಮ್ಯಕ್ ತು ಚತುರಸ್ರಂ ಸಹಾಜಿರಮ್ । ಅರ್ಥ- ವಾಸ್ತುಪೂಜೆಯಾದ ಮೇಲೆ ಏಳೆಲೆ ಬಾಳೆ ಅಥವಾ ಸೂರ್ಯಬಾಳೆಯಿಂದ ಸುಂದರವಾದ ಮಂಟಪವನ್ನು ನಿರ್ಮಿಸ ಬೇಕು. ಮಂಟಪವು ಕಲಶದ ಸಂಖ್ಯೆಗೆ ತಕ್ಕಂತೆ ಒಂದು ಕಲಶಕ್ಕೆ ಏಳು ಮೊಳ, ಇಪ್ಪತ್ತೈದು ಕಲಶವಾದರೆ ಹನ್ನೆರಡು ಮೊಳ, ಅಧಿಕವಾದಂತೆ 48 ಮೊಳಗಳು. ಈ ಮಂಟಪದ ಸುತ್ತಲೂ ವಿಶಾಲಸ್ಥಳವಿರಬೇಕು. ಅನ್ಯಚ್ಚಮಂಟಪಂ ದೀರ್ಘ೦ ಪಂಚಹಸ್ತಂ ತು ಕಾರಯೇತ್ ॥ ೮೧ ॥ ತ್ರಿಚತುಷ್ಕೋಷ್ಠಕಂ ತತ್ರ ಮಧ್ಯೇ ಪ್ರಾಗಾಯತಂ ಶುಭಮ್ । ಕಾರಯೇನ್ಮಂಡಲಂ ಸಾಧು ಹಸ್ತಮಾತ್ರಂ ತು ವಿಸ್ತೃತಮ್ ॥ ೮೨ ॥ ತತ್ರ ದ್ವಾದಶಪಾತ್ರಾಣಿ ಸ್ಥಾಪಯೇತ್ ಪಾಲಿಕಾದಿಕಮ್ । ಪಾಲಿಕಾಸ್ತು ಚತುರ್ವಿಂಶತ್ಯಂಗುಲೋಚ್ಛ್ರಯಸಂಯುತಾಃ ॥ ೮೩ ॥ ಅಷ್ಟಾದಶಾಂಗುಲಾಶ್ಚೈವ ತಥಾ ಪಂಚಮುಖಾ ಇತಿ । ದ್ವಾದಶಾಂಗುಲಕಾಶ್ಚೈವ ಶರಾವಾಃ ಪಶ್ಚಿಮಾನುಗಾಃ ॥ ೮೪ ॥ ಅರ್ಥ- ಮೊದಲು ತಯಾರಿಸಿದ ಮಂಟಪದ ಪಾರ್ಶ್ವದಲ್ಲಿಯೇ ಮತ್ತೊಂದು ಅಂಕುರಾರ್ಪಣಕ್ಕಾಗಿ ಐದು ಮೊಳವುಳ್ಳ ಮಂಟಪ ವನ್ನು ವಾಸ್ತುಪುರುಷನು ವರಾಹಹರಿಯ ಪುತ್ರನಾಗಿದ್ದು ದೇವನೆಂದು ಕರೆಯಲಾಗಿದೆ. ವಾಸ್ತುದೇವನ ಪೂಜೆ ಪುಣ್ಯಾಹಾದಿಗಳಲ್ಲಿ 'ವಾಸ್ತೋಷ್ಪತೇ' ಇತ್ಯಾದಿ ಐದು ಮಂತ್ರಗಳಿಂದ ವಿಹಿತವಾಗಿದೆ. ವಿಶೇಷಾಂಶ - 'ಪೂಜಯೇದ್ವಾಸ್ತುಪುರುಷಸ್ಯೋಪರಿಸ್ಥಾಂಸ್ತು ಸರ್ವದಾ' ಎಂದು ಆಚಾರ್ಯರು ವಾಸ್ತುಪುರುಷನ ಮೇಲಿರುವ ೪೯ ದೇವತೆಗಳನ್ನು ಪೂಜಿಸಬೇಕೆಂದು ಹೇಳಿದರೂ ವಾಸ್ತು- ಪುರುಷನ ಪೂಜೆ ಬೇಡವೆಂದಿಲ್ಲ. ಇವನ ಪೂಜೆಯೂ ಆಚಾರ್ಯ- ರಿಗೆ ಸಮ್ಮತವೆಂದು 'ತು'ಶಬ್ದವು ತಿಳಿಸುತ್ತದೆ - 'ತು ಶಬ್ದಾತ್ ವಾಸ್ತುಪುರುಷಮಪಿ' -(ಛಲಾರೀಯ) ತಯಾರಿಸಬೇಕು. ನಾಲ್ಕು ಕೋಣೆಗಳಿರುವ ಮೂರು ಮಂಡಲ- ಗಳನ್ನು ಆ ಮಂಟಪದ ಮಧ್ಯದಲ್ಲಿ ರಚಿಸಬೇಕು. ಈ ಮಂಡಲ ಪೂರ್ವದಿಂದ ಪಶ್ಚಿಮಕ್ಕೆ ಆಯತಾಕಾರವಾಗಿರಬೇಕು. ಈ ಮಂಡಲದ ವಿಸ್ತಾರ ಒಂದು ಮೊಳ. ಈ ಹನ್ನೆರಡು ಮನೆಗಳಲ್ಲಿ ಪಾಲಿಕೆಗಳು, ಪಂಚಮುಖಿಗಳು, ಶರಾವಗಳೆಂಬ ಹನ್ನೆರಡು ಪಾತ್ರೆಗಳನ್ನಿಡಬೇಕು.[^1] ಇವುಗಳಲ್ಲಿ ಪಾಲಿಕೆಗಳು ಹನ್ನೆರಡು ಅಂಗುಲವಿರಬೇಕು. ಪಂಚಮುಖಿಗಳು ಹದಿನೆಂಟು ಅಂಗುಲ ಎತ್ತರವಿರಬೇಕು. ಶರಾವಗಳು ಹನ್ನೆರಡು ಅಂಗುಲ ಎತ್ತರ. ನಾಲ್ಕು ನಾಲ್ಕು ಪಾತ್ರೆಗಳನ್ನು ಪೂರ್ವಾದಿ ಕ್ರಮದಲ್ಲಿ ಪೂರ್ವದಿಕ್ಕು - ಮಧ್ಯ - ಪಶ್ಚಿಮದಿಕ್ಕುಗಳ ಮಂಡಲದಲ್ಲಿ ಸ್ಥಾಪಿಸಬೇಕು. [^1]. ಪಾಲಿಕೆ - ಕೆಳಗೆ ಉಮ್ಮತ್ತಿ ಹೂವಿನಂತಿರುವ, ಮೇಲೆ ಕಮಲದಂತೆ ಅಗಲವಾಗಿರುವ, ಕಂಠದ ವಿಸ್ತಾರ ಸುತ್ತಲೂ ಏಳಂಗುಲವಿರುವ ಮಡಿಕೆಯಂತಹ ವಸ್ತುವನ್ನೇ (ಪಾತ್ರೆಯನ್ನೇ) ಪಾಲಿಕೆ ಎನ್ನುವರು. ಮಧ್ಯಖಿಲಾದುಪರ್ಯಂಭೋಜವದ್ಭವೇತ್ । ಅಧಶ್ಚೋನ್ಮತ್ತಕುಸುಮಸಮಂ ಚೇತ್ ಪಾಲಿಕಾಂ ವಿದುಃ ॥ ಪಂಚಮುಖೀ ನಾಲ್ಕಂಗುಲವಿಸ್ತಾರವುಳ್ಳ ನಾಲ್ಕು ಮುಖಗಳುಳ್ಳ, ಮೇಲೆ ಒಂದು ಮುಖವುಳ್ಳ ಘಟಾಕೃತಿಯೇ ಪಂಚಮುಖೀ. ಚತುರಂಗುಲವಿಸ್ತಾರಂ ಕಲ್ಪಯೇಚ್ಚ ಚತುರ್ಮುಖಮ್ । ಘಟಕಾಲಕ್ಷಣಂ ತ್ವೇವಂ ಪಂಚವಕ್ತ್ರಾ ಘಟಾಕೃತೀಃ ॥ ಪಾಲಿಕೆಗಳು ಒಡೆಯಬಾರದು. ಹೀಗಾದಲ್ಲಿ ಅನಿಷ್ಟವು. ಅಯುಗ್ಮಾಃ ಪಾಲಿಕಾ ಸ್ಯುಃ ಪಾಲಿಕಾದ್ಯಾಃ ತೇಷಾಂ ಭೇದಂ ಕದಾಚನ । ನ ಕುರ್ಯಾದ್ ಯದಿ ಕುರ್ವೀತ ದೋಷಾಯ ಮಹತೋ ಭವೇತ್ ॥ ಪಾಲಿಕೆ-ಪಂಚಮುಖೀ-ಶರಾವ ಈ ಮೂರೂ ಕ್ರಮವಾಗಿ ಹನ್ನೆರಡು - ಹದಿನಾರು - ಇಪ್ಪತ್ತನಾಲ್ಕು ಅಂಗುಲ ಎತ್ತರ- ವಿರಬೇಕು. ಈ ಮೂರರಲ್ಲಿ ಬ್ರಹ್ಮ-ವಿಷ್ಣು-ಮಹೇಶ್ವರರನ್ನು ಆವಾಹಿಸಿ ಪೂಜಿಸಬೇಕು. ದ್ವಿಷಡ್ ದ್ವಿರಷ್ಟಚತುರ್ವಿಂಶದುಚ್ಛ್ರಿತಾನಿ ಯಥಾಕ್ರಮಮ್ । ನಾರಾಯಣಮಹೇಶಾನಬ್ರಹ್ಮರೂಪಾಣಿ ತಾನ್ಯಪಿ ॥ ಕೆಲವು ತಂತ್ರಗಳಲ್ಲಿ ಪಾಲಿಕೆ ಹದಿನಾರು, ಪಂಚಮುಖೀ ೧೨, ಶರಾವ ೮ಅಂಗುಲವಿರಬೇಕೆಂದು ಹೇಳಿದೆ. ಏವಮುಚ್ಚಾಯ ಉನ್ನೇಯಃ ಷೋಡಶ-ದ್ವಾದಶಾಷ್ಟಭಿಃ । ಅಂಕುರಾರ್ಪಣೆ ತತ್ರ ವಿಷ್ಣುಂ ಚತುರ್ಮೂರ್ತಿಂ ಪೂಜಯೇದ್ ಭಕ್ತಿತಃ ತ್ರಿಶಃ । ಸಪ್ತಧಾನ್ಯಾನಿ ತೇಷ್ವೇವ ಪೂರಯೇದಂಕುರಾರ್ಥತಃ ॥ ೮೫ ॥ ಅರ್ಥ - ಈ ದ್ವಾದಶ ಅಂಕುರಾರ್ಪಣ ಪಾಲಿಕಾದಿಗಳಲ್ಲಿ ವಾಸುದೇವ ಪ್ರದ್ಯುಮ್ನ ಸಂಕರ್ಷಣ ಅನಿರುದ್ಧರನ್ನಾಗಲೀ, ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ವಾಸುದೇವಮೂರ್ತಿಗಳ- ನ್ನಾಗಲೀ ಆವಾಹಿಸಿ ಪೂಜಿಸಬೇಕು. ಅವುಗಳಲ್ಲಿ ಅಂಕುರೋ- ತ್ಪಾದನೆಗಾಗಿ ಜವೆಗೋಧಿ, ಭತ್ತ, ಹೆಸರುಕಾಳು, ಉದ್ದಿನಕಾಳು, ಎಳ್ಳು, ಸಾಸುವೆ, ಸಾಮೆ ಎಂಬ ಸಪ್ತಧಾನ್ಯಗಳನ್ನು ತುಂಬಿಸಬೇಕು. [^1] [^1] ಅಂಕುರಾರೋಪಣ ಯಜಮಾನನು ತಾನು ಮಾಡುವ ಕರ್ಮವು ಸಫಲವಾಗಿ ಶುಭಪರಂಪರೆಯುಂಟಾಗಲಿ ಎಂದು ಅಂಕುರಾರೋಪಣವನ್ನು ಮಾಡಬೇಕು. ಗೋಮಯದಿಂದ ಭೂಮಿಯನ್ನು ಶುದ್ಧಿಮಾಡಿ ರಂಗವಲ್ಯಾದಿಗಳಿಂದ ಅಲಂಕರಿಸಿ ವಸ್ತ್ರವನ್ನು ಹಾಸಿ ಅದರ ಮೇಲೆ ಅಕ್ಕಿಯನ್ನು ಹರಡಬೇಕು. ಶರಾವಗಳಿಗೆ ಹಸೀದಾರದಿಂದ ವೇಷ್ಟನೆ ಮಾಡಿ, ಅದರಲ್ಲಿ ಮಣ್ಣು, ಮರಳು, ಬೆರಣಿಗಳನ್ನು ಹಾಕಿ ಏಳು ಧಾನ್ಯಗಳನ್ನು ಹನ್ನೆರಡು ಮಣ್ಣಿನ ಪಾತ್ರೆಗಳಲ್ಲೂ ಅಥವಾ ಎಲ್ಲಾ ಬೀಜಗಳನ್ನು ಒಂದೇ ಶರಾವದಲ್ಲಿ ಹಾಕಿಯಾ- ದರೂ ಅಂಕುರಾರ್ಪಣೆ ಮಾಡಬೇಕು. ನಂತರ 'ಕರ್ಮಸಾಫಲ್ಯ ನಿರಂತರಶುಭತ್ವಪರಂಪರಾಪ್ರಾಪ್ತಿದ್ವಾರಾ ಸರ್ವಾಭೀಷ್ಟ- ಸಿದ್ಧ್ಯರ್ಥಮ್ ಅಂಕುರಾರೋಪಣಂ ಕರಿಷ್ಯೇ ' ಎಂಬುದಾಗಿ ಸಂಕಲ್ಪ ಮಾಡಬೇಕು. ನಂತರ ಮಂಟಪದಲ್ಲಿ ಶರಾವಗಳಲ್ಲಿ ಚತುರ್ಮೂರ್ತಿಗಳನ್ನು ಆವಾಹಿಸುವುದು. ಇವುಗಳಲ್ಲಿ ಪಾಲಿಕೆಯಲ್ಲಿ ವಾಸುದೇವಾದಿ ಅನಿರುದ್ಧಪರ್ಯಂತವೂ, ಮಧ್ಯದಲ್ಲಿ ವಾಸುದೇವ ಪ್ರದ್ಯುಮ್ನ ಸಂಕರ್ಷಣ ಅನಿರುದ್ಧರನ್ನು ಕಡೆಯ ಶರಾವದಲ್ಲಿ ಅನಿರುದ್ಧ ಪ್ರದ್ಯುಮ್ನ ಸಂಕರ್ಷಣ ವಾಸುದೇವರನ್ನೂ ಆವಾಹಿಸಬೇಕು. ಅಥವಾ ಐದು ಶರಾವಗಳಿದ್ದಲ್ಲಿ ಮಧ್ಯ ಶರಾವದಲ್ಲಿ ಬ್ರಹ್ಮನನ್ನು 'ಬ್ರಹ್ಮಜಜ್ಞಾನಮ್' ಎಂದೂ, ಮೇಲಿನ ಶರಾವದಲ್ಲಿ ವಿಷ್ಣುವನ್ನು ಇದಂ ವಿಷ್ಣುಃ ' ಎಂದೂ, ಬ್ರಹ್ಮನ ಎಡದಲ್ಲಿ ರುದ್ರದೇವನನ್ನು 'ತ್ರ್ಯಂಬಕಂ' ಎಂದೂ ಆವಾಹಿಸಬೇಕು. ನಾರಾಯಣಮಹೇಶಾನಬ್ರಹ್ಮರೂಪಾಣಿ ತಾನ್ಯಪಿ । ನಂತರ ಈ ಮೂರುಪಾತ್ರೆಯ ಸುತ್ತಲೂ ಇಂದ್ರಾದಿದೇವತೆ- ಗಳಿಗಾಗಿ ನಾಲ್ಕು ಶರಾವಗಳನ್ನು ಸ್ಥಾಪಿಸಬೇಕು. ಇವುಗಳಲ್ಲಿ ಇಂದ್ರಾದಿದೇವತೆಗಳನ್ನು ಸ್ಥಾಪಿಸಿ, ಅನಿರುದ್ಧ, ಪುರುಷೋತ್ತಮ, ಅಧೋಕ್ಷಜ, ನಾರಸಿಂಹರೂಪಗಳನ್ನು ಆವಾಹಿಸಬೇಕು. ಈ ಅಭಿಪ್ರಾಯದಿಂದಲೇ 'ವಿಷ್ಣುಂ ಚತುರ್ಮೂರ್ತಿಂ' ಎಂದು ಆಚಾರ್ಯರು ಹೇಳಿದ್ದಾರೆ. ಇವೆಲ್ಲವೂ ಶಾಸ್ತ್ರೀಯವಾದ್ದರಿಂದ ಗ್ರಾಹ್ಯಗಳೇ ಆಗಿವೆ. ಬಲಿದಾನವಿಧಾನ ತತ್ರ ನಿತ್ಯಂ ಬಲಿಂ ದದ್ಯಾದ್ ವಿಷ್ಣವೇ ದಶರಾತ್ರಕಮ್ । ಬ್ರಹ್ಮಶಂಕರಗೀರ್ವಾಣಪಿತೃಗಂಧರ್ವಯಕ್ಷಕೈಃ ॥ ೮೬ ॥ ಧಾನ್ಯಗಳು ಏಳು ಎಂದಿದ್ದರೂ ಹತ್ತು, ಹನ್ನೆರಡು ಧಾನ್ಯಗಳನ್ನು ತಂತ್ರಗಳಲ್ಲಿ ತಿಳಿಸಲಾಗಿದೆ. ಗೌತಮೀ ತಂತ್ರವು(೬/೪೧) ಹತ್ತು ಧಾನ್ಯಗಳನ್ನು ಹೇಳಿದೆ. ವಿನ್ಯಸ್ಯ ಶಾಲಿಶ್ಯಾಮಾನಿ ಪ್ರಿಯಂಗುಫಲಸರ್ಷಪಾನ್ । ಮುದ್ಗಮಾಷೌ ಶಿಂಖಿಕುಲಿತ್ಥಿಂ ಚಾಢಕೀಂ ಯವಸಂ ತಥಾ ॥ ಅಂಕುರಾರೋಪಣವು ರಾತ್ರಿಯಲ್ಲಿ ನಡೆದರೆ ಉತ್ತಮ. ರಾತ್ರಿಯ ಹಾಗೂ ವನಸ್ಪತಿಯ ದೇವತೆಯಾದ ಚಂದ್ರನ ಅನುಗ್ರಹವು ದೊರಕಿ ವಿಶೇಷಫಲವುಂಟಾಗುವುದು. ಬೀಜಾನಾಂ ದೈವತಂ ಸೋಮಃ ಸ ರಾತ್ರೌ ಕಾಂತಿಮಾನ್ ಯತಃ । ತಸ್ಮಾದಾಹೃತ್ಯ ಬೀಜಾನಿ ನಿಶಾಯಾಮೇವ ವಾಪಯೇತ್ ॥ ಧಾನ್ಯಗಳಲ್ಲಿ ದೇವತಾವಾಹನೆ ಯವದಲ್ಲಿ ಬ್ರಹ್ಮದೇವರು; ಸಾಸಿವೆಯಲ್ಲಿ ರುದ್ರದೇವರು; ಮುದ್ಗ- ದಲ್ಲಿ ಶ್ರೀಹರಿ; ನಿಷ್ಪಾವದಲ್ಲಿ ವಾಯುದೇವ; ಪ್ರಿಯಂಗುವಿನಲ್ಲಿ ಸ್ಕಂದ; ಮಾಷದಲ್ಲಿ ಇಂದ್ರದೇವ; ಕುಲಿತ್ಥದಲ್ಲಿ ಅಗ್ನಿ; ಭತ್ತದಲ್ಲಿ ಸೂರ್ಯ; ಎಳ್ಳಿನಲ್ಲಿ ಯಮದೇವ; ರಾಜಮಾಷದಲ್ಲಿ ವರುಣ; ತೊಗರಿಯಲ್ಲಿ ಲಕ್ಷ್ಮೀದೇವಿ; ಸಾಮೆಯಲ್ಲಿ ಚಂದ್ರರನ್ನು ಆವಾಹಿಸಬೇಕು. ಯವಸರ್ಷಪಮುದ್ಗೇಷು ಬ್ರಹ್ಮಾರುದ್ರೋ ಹರಿಃ ಕ್ರಮಾತ್ । ವಾಯುಃ ಪೂಜ್ಯಸ್ತು ನಿಷ್ಟಾವೇ, ಸ್ಕಂದಶ್ಚೈವ ಪ್ರಿಯಂಗವೇ ॥ ಮಾಷೇಷ್ವಿಂದ್ರಃ ಕುಲಿತ್ಥೇಽಗ್ನಿಃ ಶಾಲಿಷ್ವರ್ಕೋ ಯಮಸ್ತಿಲೇ। ವರುಣೋ ರಾಜಮಾಷೇ ಶ್ರೀರಾಢಕ್ಯಾಂ ಶ್ಯಾಮಗಃ ಶಶೀ ॥ -ವಿಷ್ಣುಸಂಹಿತಾ 15/42 ಹೀಗೆ ಆವಾಹಿಸಿ ಮೂಲಮಂತ್ರಜಪಿಸಿ, 'ಹಿರಣ್ಯವರ್ಣಾಂ' ಎಂಬುದರಿಂದ ನೀರನ್ನು ಪ್ರೋಕ್ಷಿಸಿ, 'ಬ್ರಹ್ಮಾದ್ಯಾವಾಹಿತ- ದೇವತಾಭ್ಯೋ ನಮಃ' ಎಂದು ಷೋಡಶೋಪಚಾರೆಯನ್ನು ಮಾಡಬೇಕು. ನಂತರ ಪುನಃ ಹುತ್ತದ ಮಣ್ಣು ಬೆರಣಿ ಪುಡಿಗಳನ್ನು ಅವುಗಳ ಮೇಲೆ ಹಾಕಿ ಎರಡೂ ಕಾಲದಲ್ಲಿ ನೀರನ್ನು ಹಾಕುತ್ತಿರ- ಬೇಕು. ನಂತರ ವಸ್ತ್ರದಿಂದ ಅದನ್ನು ಮುಚ್ಚಬೇಕು. ಹೀಗೆ ಏಳು ದಿನ, ಒಂಭತ್ತು ದಿನಗಳ ವರೆಗೆ ಪೂಜಿಸಬೇಕು. ಕಡೇ ಪಕ್ಷ ಮೂರುದಿವಸವಾದರೂ ಇರಬೇಕು. ಸಸ್ಯ ವೃದ್ಧಿಯನ್ನು ನೋಡಿ ಕಾರ್ಯವೃದ್ಧಿಯನ್ನು ತಿಳಿಯಬೇಕು. ನೇರವಾಗಿ ಬಂದಿದ್ದರೆ ಕಾರ್ಯಸಿದ್ಧಿ. ಪ್ರರೂಢೈಃ ಅಂಕುರೈಃ ಕರ್ತುಃ ನಿರ್ದಿಶೇಚ್ಚ ಶುಭಾಶುಭಾ ॥ -ಗೌತಮೀತಂತ್ರ ಭೂತೈಶ್ಚ ಪಾಯಸೇನೈವ ತಥಾ ಪದ್ಮಾಕ್ಷತೇನ ಚ । ಅನ್ನಾಪೂಪೇನ ಪುಷ್ಪಾನ್ನೈಃ ಅನ್ನಲಾಜಾಕ್ಷತೈರಪಿ । ಸುಕ್ತುಭಿಶ್ಚ ಕ್ರಮೇಣೈವ ದೇವಾಂತಂ ಪಾಯಸೇನ ವಾ ॥ ೮೭ ॥ ಅರ್ಥ - ಬೀಜಾವಾಪವಾದ ದಿನದಿಂದಾರಂಭಿಸಿ ಹತ್ತುದಿವಸಗಳ- ವರೆಗೆ ಅಲ್ಲಿ ಭಗವಂತನಿಗೆ ನಿತ್ಯವೂ ನೈವೇದ್ಯವನ್ನರ್ಪಿಸಿ ಪೂಜಿಸಬೇಕು. ಜೊತೆಗೆ ಬ್ರಹ್ಮರುದ್ರಾದಿ ಇತರದೇವತೆಗಳಿಗೂ, ಪಿತೃಗಳು, ಗಂಧರ್ವರು, ಯಕ್ಷರು, ಭೂತಗಳಿಗೂ ಬಲಿಯನ್ನರ್ಪಿ-ಸಬೇಕು. ವಿಷ್ಣುವಿಗೆ ಪಾಯಸವನ್ನೂ, ಬ್ರಹ್ಮದೇವನಿಗೆ ತುಂಡಾಗದ ಅಕ್ಕಿ ಹಾಗೂ ತಾವರೆಯ ಹೂವನ್ನರ್ಪಿಸಬೇಕು. ರುದ್ರದೇವನಿಗೆ ಅನ್ನಸಹಿತವಾದ ಅಪೂಪವನ್ನೂ; ದೇವತೆಗಳಿಗೆ ಪುಷ್ಪಗಳಿಂದ ಪೂಜೆ ಹಾಗೂ ಅನ್ನನೈವೇದ್ಯವನ್ನೂ ; ಪಿತೃಗಳಿಗೆ ಸತಿಲಾನ್ನ- ವನ್ನೂ ; ಗಂಧರ್ವರಿಗೆ ಅರಳನ್ನೂ; ಯಕ್ಷರಿಗೆ ಅಕ್ಕಿಕಾಳು ಹಾಗೂ ಅರಳನ್ನೂ, ಭೂತಗಳಿಗೆ ಹುರಿಹಿಟ್ಟು ಅಥವಾ ಎಲ್ಲರಿಗೂ ಹರಿನಿವೇದಿತ ಪಾಯಸವನ್ನೇ ನೀಡಬಹುದು[^1]. ಅಧಿವಾಸನವಿಧಿ ತತ್ರೈವ ಪ್ರತಿಮಾಯಾಶ್ಚ ಕಾರಯೇದಧಿವಾಸನಮ್ । ಪಂಚಗವ್ಯೇ ಸಪ್ತರಾತ್ರಂ ಕ್ಷಿಪ್ತ್ವಾ ಪುರುಷಸೂಕ್ತತಃ ॥ ೮೮ ॥ ಅರ್ಥ - ಅಂಕುರಾರ್ಪಣಕಾಲದಲ್ಲಿಯೇ ಪ್ರತಿಷ್ಠಿಸಬೇಕಾದ ಪ್ರತಿಮೆಯನ್ನು [^1]. ವಿಶೇಷಾಂಶ - ಅಂಕುರಾರೋಪಣ ಮಾಡಿದ ದಿನದಿಂದ ನೈವೇದ್ಯವನ್ನು ಅರ್ಪಿಸುತ್ತಿರಬೇಕು. ಬಲಿಯನ್ನು ನೀಡದೇ ಮಾಡಿದ ಅಂಕುರಾರೋಪಣವು ನಿಷ್ಫಲ. ಬಲ್ಯದಾನೇ ತು ನೈಷ್ಫಲ್ಯಾತ್ ಸರ್ವಥಾಂऽಕುರಾರೋಪಣಮ್ । ಬಲಿನಾ ಸಹ ಕರ್ತವ್ಯಂ ಪ್ರಯತ್ನಾತ್ ದೇಶಿಕೋತ್ತಮೈಃ । ರಾತ್ರೀಶೇಭ್ಯೋ ಬಲಿಂ ದದ್ಯಾತ್ ಪಾರ್ಷದಾಂತಂ ಜಲಾನ್ವಿತಮ್ ॥ - ಓಂ ವಿಷ್ಣವೇ ನಮಃ, ಓಂ ಬ್ರಹ್ಮಣೇ ನಮಃ, ಓಂ ರುದ್ರಾಯ ನಮಃ ಎಂದು ಓಂಕಾರಸಹಿತ ದೇವತಾನಾಮಗಳಿಗೆ ನಮಃ ಸೇರಿಸಿ ಬಲಿಯನ್ನರ್ಪಿಸಬೇಕು. ವಿಷ್ಣುವಿಗೆ ಪಾಯಸದಿಂದ ಪದ್ಮಾಕೃತ- ದಿಂದ ಬ್ರಹ್ಮಶಂಕರದೇವತೆಗಳಿಗೆ, ಪುಷ್ಪಾನ್ನದಿಂದ ಗಂಧರ್ವರಿಗೆ, ಅನ್ನಲಾಜಾಕ್ಷತೆಗಳಿಂದ ಯಕ್ಷರುಗಳಿಗೆ, ಹುರಿಹಿಟ್ಟಿನಿಂದ ಭೂತಗಳಿಗೆ ಎಂದು ಒಂದು ಪಕ್ಷವಿದೆ. ಪುರುಷಸೂಕ್ತವನ್ನು ಹೇಳಿ, ಪಂಚಗವ್ಯತುಂಬಿದ ಪಾತ್ರೆಯಲ್ಲಿ ಏಳು ದಿವಸ ಮುಳುಗಿಸಿಟ್ಟಿರಬೇಕು. ಇದರಿಂದ ಭಗವಂತನ ಸನ್ನಿಧಾನ ಹೆಚ್ಚುತ್ತದೆ.[^1] (ಬಿಂಬಸ್ಯ ಅಧಿವಾಸನ ಅಧಿವಾಸವೆಂದರೆ ಭಗವಂತನ ಸಾನ್ನಿಧ್ಯವನ್ನುಂಟು ಮಾಡುವ ಕಾರ್ಯಕ್ರಮ. ಹರೇಃ ಸಾನ್ನಿಧ್ಯಕರಣಮಧಿವಾಸನಮುಚ್ಯತೇ । ಇದು ಜಲ, ಕ್ಷೀರ, ಧಾನ್ಯ, ವಸ್ತ್ರ, ರತ್ನ, ಪುಷ್ಪ, ಶಯ್ಯಾಧಿವಾಸ- ಗಳೆಂದು ಅನೇಕವಿಧವಿದೆ. ಜಲ, ಧಾನ್ಯ, ಪಂಚಗವ್ಯ, ಪಂಚಾಮೃತ ವಸ್ತ್ರಾಧಿವಾಸಗಳನ್ನು ಹೇಳಿದ್ದಾರೆ. ಜಲಾಧಿವಾಸ- ಗಳನ್ನು ಮಾಡುವಾಗ ಪಂಚಗವ್ಯವನ್ನು ಸೇರಿಸಲೇಬೇಕು. ಯಾವುದನ್ನು ಮಾಡಿದರೆ ಕರ್ಮಸಂಪೂರ್ತಿಯಾಗುವುದೋ ಅದನ್ನೇ ಈ ತಂತ್ರಸಾರಸಂಗ್ರಹದಲ್ಲಿ ಆಚಾರ್ಯರು ಹೇಳಿದ್ದಾರೆ. ಆದ್ದರಿಂದ ಪಂಚಗವ್ಯದಿಂದ ಅಧಿವಾಸಮಾಡದೇ ಹರಿಯ ಸಾನ್ನಿಧ್ಯ ಬರಲಾರದು. ಜಲಾಧಿವಾಸ - 'ಬಿಂಬಾನಾಂ ತೇಜೋವತ್ತಾಸಿದ್ಧ್ಯರ್ಥಂ ಅಧಿವಾಸನಂ ಕರಿಷ್ಯೇ' ಎಂದು ಸಂಕಲ್ಪ. ಮಂಡಲದಲ್ಲಿ ಪಾತ್ರೆಯನ್ನಿಟ್ಟು ಶುದ್ಧಜಲತುಂಬಿಸಿ ವರುಣ- ನನ್ನು ಸಕಲನದ್ಯಭಿಮಾನಿಗಳನ್ನು ಆವಾಹಿಸಿ ಪುಣ್ಯಾಹೋದಕ, ಪಂಚಗವ್ಯ ಸೇರಿಸಿ ಅದರಲ್ಲಿ ಪ್ರತಿಮೆಯನ್ನು ವಸ್ತ್ರದಿಂದ ಆಚ್ಛಾದಿಸಿ ಮುಳುಗಿಸಬೇಕು. ಅಥವಾ ಸತತವಾಗಿ ಜಲಧಾರೆ- ಯನ್ನು ಪುರುಷಸೂಕ್ತದಿಂದ ಅಭಿಷೇಕಿಸಬೇಕು. ಪವಮಾನ- ಮಂತ್ರಗಳನ್ನು ಪಠಿಸಬೇಕು. ನಂತರ ಉಪಚಾರಪೂಜೆ, ನೀರಾಜನಗಳನ್ನು ಅರ್ಪಿಸಬೇಕು. ಕ್ಷೀರಾಧಿವಾಸ - ಕಟಾಹದಲ್ಲಿ ಕ್ಷೀರವನ್ನು ತುಂಬಿಸಿ ಪಂಚಗವ್ಯ- ವನ್ನು ಹಾಕಿ, ಕ್ಷೀರದಲ್ಲಿ ಸೋಮನನ್ನು ಆವಾಹಿಸಿ, ಪುರುಷ- ಸೂಕ್ತದಿಂದ ಕ್ಷೀರಾಧಿವಾಸ ಮಾಡಿಸಬೇಕು. ನಂತರ ಪಂಚೋಪಚಾರಪೂಜೆ, ನೀರಾಜನವನ್ನು ಅರ್ಪಿಸಬೇಕು. ಧಾನ್ಯಾಧಿವಾಸ - ಪಾತ್ರೆಯಲ್ಲಾಗಲೀ, ಕಟಾಹದಲ್ಲಾಗಲೀ ಧಾನ್ಯ- ವನ್ನು ತುಂಬಿ ಪುಣ್ಯಾಹೋದಕ, ಪಂಚಗವ್ಯದಿಂದ ಪ್ರೋಕ್ಷಿಸಿ, 'ಯೇನ ತೋಕಾಯ ಧಾನ್ಯ' ಮಂತ್ರದಿಂದ ಧಾನ್ಯಾಧಿದೇವತೆ- ಯನ್ನು ಆವಾಹಿಸಿ, ಪುರುಷಸೂಕ್ತದಿಂದ ಅಧಿವಾಸ ಮಾಡಿಸ- ಬೇಕು. ವಸ್ತ್ರಾಧಿವಾಸ - ಪ್ರತಿಮೆಯನ್ನು ವಸ್ತ್ರದಿಂದ ಅಲಂಕರಿಸಿ, ಪಂಚಗವ್ಯಪ್ರೋಕ್ಷಿಸಿ, ಅಧಿವಾಸ ಮಾಡುವುದು. ವಿಷ್ಣುಸೂಕ್ತಾದಿ- ಗಳನ್ನು ಪಠಿಸಬೇಕು. ಇದೇ ರೀತಿ ಪಂಚಗವ್ಯ, ಪಂಚಾಮೃತಗಳಲ್ಲಿಯೂ ಅಧಿವಾಸನ- ವನ್ನು ಮಾಡಿ, ಕಡೆಯಲ್ಲಿ ತತ್ತ್ವನ್ಯಾಸ ಪೂರ್ವಕ (ಮಂಡಲ- ದೇವತೆ ಹಾಗೂ ನಿದ್ರಾಕಲಶವನ್ನು ಸ್ಥಾಪಿಸಿ?) ಶಯ್ಯಾಧಿ ವಾಸವನ್ನು ಮಾಡಿಸಬೇಕು. ನಂತರ ವಸ್ತ್ರದಿಂದ ಆಚ್ಛಾದಿಸಿ ನೀರಾಜನ ಮಾಡಬೇಕು. ಜಲ, ಮೃತ್ತಿಕೆ, ಧಾನ್ಯ, ಪಂಚಗವ್ಯ, ಪಂಚಾಮೃತಾಧಿವಾಸಗಳನ್ನು ಏಳುರಾತ್ರಿ, ಐದು, ಮೂರು, ಅಥವಾ ಒಂದು ರಾತ್ರಿಯಾದರೂ ಅಧಿವಾಸ ಆಗಲೇಬೇಕು. ಶುದ್ಧಯೇ ಜಲಾಧಿವಾಸಂ ಕುರ್ಯಾತ್). ಚತುರ್ವೇದಪಾರಾಯಣ ವೇದಾಂಶ್ಚ ಚತುರಃ ಸಮ್ಯಕ್ ಪಾರಯೇಯುಃ ದ್ವಿಜೋತ್ತಮಾಃ । ಪ್ರಾಚ್ಯಾದಿದ್ವಾರಗೌ ದ್ವೌ ದ್ವೌ ಏಕೈಕಂ ತು ದಶಾವರಾ:। ಯಥಾಲಬ್ಧಂ ಯಥಾವಿತ್ತಮ್ ಅಥವಾ ವಿಷ್ಣುತತ್ವರಾಃ ॥ 89 ॥ ಅರ್ಥ - ಮಂಟಪದ ನಾಲ್ಕು ದಿಕ್ಕಿನ ದ್ವಾರಗಳಲ್ಲಿ ಒಂದೊಂದು ವೇದಕ್ಕೆ ಇಬ್ಬಿಬ್ಬರಂತೆ ನಾಲ್ಕು ವೇದಗಳನ್ನೂ ಪಾರಾಯಣ ಮಾಡಬೇಕು. ಪೂರ್ವದಲ್ಲಿ ಋಗ್ವೇದಪಾರಾಯಣ, ದಕ್ಷಿಣದಲ್ಲಿ ಯಜುರ್ವೇದ, ಪಶ್ಚಿಮದಲ್ಲಿ ಸಾಮವೇದ, ಉತ್ತರದಲ್ಲಿ ಅಥರ್ವವೇದ ಪಾರಾ- ಯಣ ನಡೆಯಬೇಕು. ಇವರಲ್ಲದೆ ಈಶಾನ್ಯದಲ್ಲಿ ವಿಷ್ಣುಮಂತ್ರ- ಗಳನ್ನು ಜಪಿಸುವ ಒಬ್ಬರು. ಆಗ್ನೇಯದಿಕ್ಕಿನಲ್ಲಿ ವಿಷ್ಣುವಿಗೆ ಸಂಬಂಧಪಟ್ಟ ಪುರುಷಸೂಕ್ತ, ವಿಷ್ಣುಸೂಕ್ತಗಳನ್ನು ಪಠಿಸುತ್ತಾ ಇರಬೇಕು. ಅಂತೂ ಹತ್ತಕ್ಕೆ ಕಡಿಮೆ ಇಲ್ಲದಂತೆ ವಿಷ್ಣುಭಕ್ತರಾದ ವಿಪ್ರರಿಂದ ವೇದಾದಿಪಾರಾಯಣ ನಡೆಸಬೇಕು. ಋಗ್ವೇದಾದಿ ಜಾಪಕರು ಇಬ್ಬರು ಅಲಭ್ಯರಾದರೆ ಒಬ್ಬೊಬ್ಬರಾದರೂ ಸರಿಯೇ, ಅಥವಾ ಇಬ್ಬರಿಗಿಂತ ಎಷ್ಟುಮಂದಿಯನ್ನಾದರೂ ಪಾರಾಯಣಕ್ಕೆ ಕೂಡಿಸಬಹುದು. ಪಾರಾಯಣ ಅಧಿಕವಾದಷ್ಟು ಸನ್ನಿಧಾನ ಹೆಚ್ಚುತ್ತದೆ. ಆದರೆ ಯಜಮಾನನು ತನ್ನ ಯೋಗ್ಯತೆ ತಕ್ಕಂತೆ ಎಷ್ಟುಮಂದಿಯನ್ನಾದರೂ ಆಹ್ವಾನಿಸಬಹುದು. ಪ್ರತಿಷ್ಠಾಂಗ ಹೋಮಕುಂಡನಿರ್ಮಾಣಕ್ರಮ ತ್ರಯೋದಶಾತ್ರ ಕುಂಡಾನಿ ಪರಿತಃ ಕಾರಯೇದ್ಬುಧಃ । ಉಕ್ತಲಕ್ಷಣಯುಕ್ತಾನಿ ಪ್ರಧಾನಂ ತ್ವಗ್ನಿಕೋಣಕೇ । ಏವಂ ಕೃತ್ವಾಧಿವಾಸಂ ತು ತ್ರಿರಾತ್ರಂ ವೈಕರಾತ್ರಕಮ್ । ತಥೈವ ಸ್ವಪ್ನಮಾಕಾಂಕ್ಷೇತ್........ ಏಳು ದಿನ, ಐದು, ಮೂರು, ಒಂದು ಅಥವಾ ಪ್ರತಿಷ್ಠಾಸಮಯ- ದಲ್ಲಾದರೂ ಅಧಿವಾಸ ಮಾಡಲೇಬೇಕು. ಅಂದು ರಾತ್ರಿ ಸ್ವಪ್ನ- ದಲ್ಲಿ ಶುಭಸೂಚನೆ ಸಿಗುತ್ತದೆ. ಸ್ವಪ್ನವು ಅಶುಭವಾದರೆ ಶಾಂತಿ- ಹೋಮ ಮಾಡಬೇಕು. ಸಾಕ್ಷಾತ್ ತು ಕೋಣಗಾದ್ಧಸ್ತಮಾತ್ರಮಂತರತಃ ಸುಧೀಃ ॥ ೯೦ ॥ ಅರ್ಥ- ಯಾಗಶಾಲೆಯಲ್ಲಿ ಪೂರ್ವಾದಿದಿಕ್ಕುಗಳಲ್ಲಿ ಎರಡೆರಡ- ರಂತೆ ನಾಲ್ಕು ದಿಕ್ಕುಗಳಲ್ಲಿ ಎಂಟು ಹೋಮಕುಂಡಗಳು. ವಿದಿಕ್ಕು- ಗಳಲ್ಲಿ ಒಂದೊಂದು ಹೋಮಕುಂಡ, ಒಟ್ಟು ಹನ್ನೆರಡು ಹೋಮ ಕುಂಡಗಳು, ಪ್ರಧಾನಕುಂಡವನ್ನು ಆಗ್ನೇಯಕೋಣೆಯಲ್ಲಿ ರಚಿಸಬೇಕು. ಪ್ರಧಾನಕುಂಡದಿಂದ ಇತರ ಪ್ರಾಚ್ಯಾದಿ ಕುಂಡಗಳ ಅಂತರ ಒಂದು ಮೊಳ ಎಂದರೆ 24 ಅಂಗುಲವಿರಬೇಕು. ಪ್ರತಿಷ್ಠಾಂಗಹೋಮವಿಧಿ ಆಜ್ಯಾಹುತಿಂ ತೇಷು ಕುರ್ಯಾತ್ ಪ್ರತ್ಯೇಕಂ ಲಕ್ಷಸಂಖ್ಯಯಾ । ಪ್ರತ್ಯೇಕಮಯುತಂ ವಾऽಪಿ ಪ್ರಧಾನೇ ಲಕ್ಷಸಂಖ್ಯಕಮ್ ॥ ೯೧ ॥ ಅರ್ಧ೦ ತದರ್ಧಮಥವಾ ಮೂಲಮಂತ್ರೇಣ ಮಂತ್ರವಿತ್ । ಅರ್ಥ - ಈ ಪ್ರತಿಷ್ಠೆಗಾಗಿ ನಿರ್ಮಿತಗಳಾದ ಹದಿಮೂರು ಕುಂಡ- ಗಳಲ್ಲಿ 'ಓಂ ನಮೋ ನಾರಾಯಣಾಯ' ಎಂಬ ಮೂಲಮಂತ್ರ- ದಿಂದ ಒಂದೊಂದು ಕುಂಡದಲ್ಲೂ ಲಕ್ಷಹೋಮವಾದರೆ ಉತ್ತಮೋತ್ತಮ, ಅಥವಾ ಪ್ರಧಾನಕುಂಡದಲ್ಲಿ ಲಕ್ಷಹೋಮ ಮಾಡಿ, ಉಳಿದ ಹನ್ನೆರಡು ಕುಂಡಗಳಲ್ಲಿ ಹತ್ತುಸಾವಿರಹೋಮವನ್ನಾದರೂ ಮಾಡುವುದು ಉತ್ತಮಪಕ್ಷ. ಅಥವಾ ಪ್ರಧಾನಕುಂಡ ದಲ್ಲಿ 50ಸಾವಿರಮಾಡಿ, ಇತರ ಕುಂಡಗಳಲ್ಲಿ 5ಸಾವಿರಹೋಮ- ವನ್ನಾಗಲೀ ಮಾಡುವುದು ಮಧ್ಯಮ ಪಕ್ಷ, ಅಥವಾ ಪ್ರಧಾನ- ಕುಂಡದಲ್ಲಿ 25 ಸಾವಿರ ಘೃತಾಹುತಿ ನೀಡಿ, ಇತರ ಕುಂಡಗಳಲ್ಲಿ ಸಾವಿರದೆಂಟು ಆಜ್ಯಾಹುತಿಗಳನ್ನು ನೀಡುವುದು ಕನಿಷ್ಠಪಕ್ಷ, ಅಥವಾ ಪ್ರಧಾನಕುಂಡದಲ್ಲಿ ಹತ್ತು ಸಾವಿರ ಆಜ್ಯಾಹುತಿಯನ್ನು ನೀಡಿ ಉಳಿದ ಕುಂಡಗಳಲ್ಲಿ ಸಾವಿರದೆಂಟು ಆಜ್ಯಾಹುತಿ ಪಕ್ಷವೂ ಕನಿಷ್ಠಪಕ್ಷವೇ[^1] [^1]. ವಿಶೇಷಾಂಶ - ದೊಡ್ಡ ದೊಡ್ಡ ದೇವಾಲಯ ಸ್ಥಾಪಿತ- ವಾಗುವಾಗ ಈ ರೀತಿ ಪ್ರತಿದಿಕ್ಕಿಗೂ ಹನ್ನೆರಡು ಕುಂಡಗಳು ಮತ್ತು ಒಂದು ಪ್ರಧಾನಕುಂಡಗಳನ್ನು ರಚಿಸುವ ಪದ್ಧತಿಯಿದೆ. ಚಿಕ್ಕದೇವಾಲಯಗಳಲ್ಲಿ ಒಂದೊಂದು ದಿಕ್ಕಿಗೆ ಒಂದೊಂದರಂತೆ ಕುಂಡವನ್ನು ಸ್ಥಾಪಿಸಿ, ಹತ್ತು ಸಾವಿರ ಪ್ರಧಾನಕುಂಡದಲ್ಲಿ, ಹಾಗೂ ಇತರ ಕುಂಡಗಳಲ್ಲಿ ಸಾವಿರದೆಂಟು ಆಹುತಿಗಳನ್ನು ನೀಡುವುದು ಪದ್ಧತಿಯಲ್ಲಿದೆ. ಪಂಚವಿಂಶತಿತತ್ತ್ವಾರ್ಥೇ ಪ್ರಧಾನೇ ಜುಹುಯಾತ್ ಪುರಃ ॥92॥ ಪ್ರತ್ಯೇಕಂ ತು ಸಹಸ್ರಂ ವಾ ಪ್ರತ್ಯೇಕಂ ಶತಮೇವ ವಾ। ಶತಂ ಪುರುಷಸೂಕ್ತೇನ ಗಾಯತ್ರ್ಯಾ ಚ ಸಹಸ್ರಕಮ್ । ಕೃತ್ವಾಜಲಾಧಿವಾಸಂ ಚ ಪೂರ್ವಂ ವಾ ಪಂಚಗವ್ಯತಃ ॥ ೯೩ ॥ ಅರ್ಥ- ಮೇಲೆ ಹೇಳಿದ ಮೂಲಮಂತ್ರಹೋಮಮಾಡುವ ಮೊದಲೇ ಪಂಚವಿಂಶತಿ ತತ್ವಾಭಿಮಾನಿದೇವತೆಗಳಿಗೆ ಪ್ರೀತಿ- ಯುಂಟುಮಾಡಲು ಸಾವಿರ ಆಹುತಿಗಳನ್ನಾಗಲೀ ಅಥವಾ ನೂರು ಆಹುತಿಯನ್ನಾಗಲೀ ನೀಡಬೇಕು. ಇದೇ ರೀತಿ ಪ್ರಧಾನ ಕುಂಡದಲ್ಲಿಯೇ ಪುರುಷಸೂಕ್ತದಿಂದ ನೂರು ಆಹುತಿಗಳನ್ನು ಹಾಗೂ ಗಾಯತ್ರೀಮಂತ್ರದಿಂದ ಸಾವಿರ ಆಹುತಿಗಳನ್ನು ಹೋಮಿಸಬೇಕು. ಈ ಹೋಮ ಮುಗಿದ ಮೇಲೆ ಪ್ರತಿಮೆಯನ್ನು ಶಕುನಸೂಕ್ತದಿಂದ ನೀರಿನಲ್ಲಿ ಅಧಿವಾಸ ಮಾಡಿಸಬೇಕು. ಅಥವಾ ಪಂಚಗವ್ಯಾಧಿವಾಸ ಮುಗಿದ ಮೇಲೆಯೂ ಜಲಾಧಿವಾಸ ಮಾಡಿಸಬಹುದು[^1]. ಅಷ್ಟಾಕ್ಷರೇಣ ಜುಹುಯಾದ್ ಆಜ್ಯಾಹುತಿಸಹಸ್ರಕಮ್ - ವಿಷ್ಣು.ಸಂಹಿತಾ. ಹದಿಮೂರು ಕುಂಡಗಳು ಅಥವಾ ಒಂಭತ್ತು ಅಥವಾ ಐದಾದರೂ ಇರಬೇಕು. ಸತ್ರಯೋದಶಕುಂಡಂ ವಾ ನವ ವಾ ಪಂಚಪೂರ್ವವತ್ ಆಯಾಯ ದಿಕ್ಕಿನಲ್ಲಿರಬೇಕಾದ ಕುಂಡಗಳ ಆಕಾರವನ್ನು ತಿಳಿಸಲಾಗಿದೆ. ಚತುರಸ್ರಯೋನಿಮರ್ಧಚಂದ್ರಂ ಷಟ್ಕೋಣ-ಪಂಕಜೇ । ಪಂಚಕೋಣಂ ತ್ರ್ಯಸ್ರಂ ಕುಂಡಂ ಅಷ್ಟಾಸ್ರಂ ತಾನಿ ನಾಮತಃ ॥ ಅಥವಾ ಎಲ್ಲವೂ ಚತುರಸ್ರಾಕಾರವಾಗಿದ್ದು ಒಂದು ಮೊಳದಷ್ಟಿರ ಬಹುದು. 'ಹಸ್ತಮಾತ್ರಾಣಿ ಸರ್ವಾಣಿ'. [^1]. ವಿಶೇಷಾಂಶ - ಪ್ರಧಾನಕುಂಡದಲ್ಲಿ ಪುರುಷ, ಅವ್ಯಕ್ತ, ಮಹತ್ತತ್ವ, ಅಹಂಕಾರ, ಮನಸ್ತತ್ವ, ದಶೇಂದ್ರಿಯಗಳು, ಶಬ್ದ- ತನ್ಮಾತ್ರೆಗಳು, ಪಂಚಭೂತಗಳು ಇವುಗಳ ಅಭಿಮಾನಿದೇವತೆಗಳಿಗೆ ನೂರಕ್ಕೆ ಕಡಿಮೆ ಇಲ್ಲದಂತೆ ಆಹುತಿಗಳನ್ನು (?) ಹೋಮಿಸಬೇಕು. ನಂತರ ಪುರುಷಸೂಕ್ತದಿಂದ ನೂರುಬಾರಿ ಹೋಮ, ಗಾಯತ್ರಿ- ಯಿಂದ ಸಾವಿರಬಾರಿ. ಪುರುಷಸೂಕ್ತದ ಪ್ರತಿಮಂತ್ರವನ್ನೂ ನೂರು ಬಾರಿ ಆವೃತ್ತಿ ಮಾಡಬೇಕು. ಅಂದರೆ ೧೦೦x೧೬ : ೧೬೦೦ ಆಹುತಿಗಳಾಗುತ್ತವೆ. ಅಥವಾ ಪುರುಷಸೂಕ್ತವನ್ನು ಪೂರ್ತಿ ಹೇಳಿ ಒಂದು ಆಹುತಿಯಂತೆ ನೂರು ಬಾರಿ ಹೋಮಿಸಬೇಕು. ಗಾಯತ್ರೀಯೆಂದರೆ 'ನಾರಾಯಣಾಯ ವಿದ್ಮಹೇ ವಾಸುದೇವಾಯ ಧೀಮಹಿ । ತನ್ನೋ ವಿಷ್ಣುಪ್ರಚೋದಯಾತ್' ಎಂಬ ವಿಷ್ಣು- ಗಾಯತ್ರಿ, ಕಲಶಮಂಡಲಗಳು- ಚಕ್ರಾಬ್ಜ ಅಥವಾ ಭದ್ರಕ ಚಕ್ರಾಬ್ಜಂ ಭದ್ರಕಂ ವಾऽಪಿ ಮಂಟಪೇ ಮಂಡಲಂ ಶುಭಮ್ । ಪದ್ಮಂ ವೃತ್ತತ್ರಯಂ ಚಕ್ರಂ ರಾಶಯೋ ವೀಥಿಕಾ ತಥಾ ॥ ೯೪ ॥ ಶೋಭೋಪಶೋಭಿಕಾಶ್ಚೈವ ಚಕ್ರಾಬ್ಜಸ್ಯ ತು ಲಕ್ಷಣಮ್ । ಚತುರಸ್ರಂ ವಿನಾ ಚಕ್ರಂ ವಿಶೇಷೋ ಭದ್ರಕೇ ಸ್ಮೃತಃ ॥ ೯೫ ॥ ಅರ್ಥ - ಕಲಶಮಂಟಪದಲ್ಲಿ ಚಕ್ರಾಬ್ಜಮಂಡಲವನ್ನಾಗಲೀ, ಭದ್ರಕಮಂಟಪವನ್ನಾಗಲೀ ರಚಿಸಬೇಕು. ಚಕ್ರಾಬ್ಜವೆಂದರೆ ಒಳಗಡೆ ಎಂಟುದಳಕಮಲ, ಅದರ ಹೊರಗೆ ಮೂರು ವೃತ್ತಗಳು, ಚಕ್ರ, ಹನ್ನೆರಡು ರಾಶಿಗಳು, ವೀಥಿ, ಶೋಭೆ ಹಾಗೂ ಉಪಶೋಭೆ- ಗಳು ಕ್ರಮವಾಗಿ ಇರುವ ಮಂಡಲವು. ವೃತ್ತಗಳಿರುವ ಬದಲು ಚತುರಸ್ರವಿದ್ದರೆ ಚಕ್ರರಹಿತವಾದ ಮಂಡಲವೇ ಭದ್ರಕ ಮಂಡಲ. ಕಲಶಸಂಖ್ಯೆಗಳು ಸಹಸ್ರಮರ್ಧಂ ಪಾದಂ ವಾ ಕಲಶಾಂಸ್ತತ್ರ ಪೂಜಯೇತ್ । ಶತಂ ತದರ್ಧಂ ಪಾದಂ ವಾ ವಿತ್ತಾಭಾವೇ ನಿಗದ್ಯತೇ ॥ ೯೬ ॥ ಅರ್ಥ - ಈ ಮಂಡಲದಲ್ಲಿ ಸಾವಿರಕಲಶ, ಐನೂರು, ಇನ್ನೂರೈ- ವತ್ತು ಕಲಶಗಳನ್ನಾಗಲೀ ಇಡಬಹುದು. ಇಷ್ಟು ಸಂಖ್ಯೆಯ ಕಲಶ ಗಳನ್ನಿಡಲು ಅನಾನುಕೂಲವುಳ್ಳವರು ನೂರು, ಐವತ್ತು, ಇಪ್ಪತ್ತೈದನ್ನಾಗಲೀ ಇಡಬಹುದು. ಕಲಶದಲ್ಲಿರಬೇಕಾದ ದ್ರವ್ಯಗಳು ಕ್ವಾಥೇನ ಕ್ಷೀರವೃಕ್ಷಾಣಾಂ ತಥಾ ಪಂಚಾಮೃತೈರಪಿ । ಪಂಚಗವ್ಯೇನ ಶುದ್ಧೇನ ಜಲೇನ ಚ ಪೃಥಕ್ ಪೃಥಕ್ ॥ ೯೭ ॥ ಪೂರಯೇತ್ ಕಲಶಾನ್ ಮಧ್ಯಂ ಶುದ್ಧೋದೇನೈವ ಪೂರಯೇತ್ । ಅರ್ಥ- ಅತ್ತಿಮೊದಲಾದ ಕ್ಷೀರವೃಕ್ಷಗಳ ತೊಗಟೆಯ ಕಷಾಯ, ಪಂಚಾಮೃತ, ಪಂಚಗವ್ಯ, ಶುದ್ಧವಾದ ಜಲ ಇವುಗಳು ಕಲಶ- ದಲ್ಲಿರಬೇಕಾದ ದ್ರವ್ಯಗಳು. ಸುತ್ತಲೂ ಇಡುವ ಕಲಶಗಳಲ್ಲಿ ಕಷಾಯ, ಪಂಚಾಮೃತ, ಪಂಚಗವ್ಯ, ಶುದ್ಧಜಲಗಳನ್ನು ತುಂಬಿಸಿ ಇಡಬೇಕು. ಮಧ್ಯದ ಕಲಶವನ್ನು ಶುದ್ಧೋದಕದಿಂದಲೇ ತುಂಬಿಸಬೇಕು. ಬ್ರಾಹ್ಮಸ್ಯೈವ ಚತುರ್ದಿಕ್ಷು ಗಂಧೋದಾನಾಂ ಚತುಷ್ಟಯಮ್ ॥೯೮ ॥ ಚತುರ್ದಲೇ ಸಿತೇ ಪದ್ಮಚತುಷ್ಕೇ ಮಂಡಲೇ ಸ್ಥಿತೇ । ಪೂರ್ವಾದಿಕ್ರಮಯೋಗೇನ ರಸಕ್ಷಾಥಶುಭೋದಕಾನ್ ॥ ೯೯ ॥ ಗಂಧಾಂಶ್ಚ ಸ್ಥಾಪಯೇತ್ ಪಂಚಗವ್ಯಂ ಶುದ್ಧಾಂತರೇ ನ್ಯಸೇತ್ । ಪೃಥಕ್ ಚತುರ್ದಲಂ ಪದ್ಮಂ ರಕ್ತಂ ಕೃತ್ವಾಽಲ್ಪಕಂ ಸುಧೀಃ II ೧೦೦ ॥ ಅರ್ಥ- ನಾಲ್ಕು ದಿಕ್ಕಿನ ಕಲಶಗಳ ಮಧ್ಯಕಲಶವೇ ಬ್ರಹ್ಮಕಲಶ. ಇದರ ಸುತ್ತಲೂ ನಾಲ್ಕು ದಿಕ್ಕಿನಲ್ಲಿ ಲಾವಂಚ, ಕೇಸರೀ, ಜಟಾಮಾಂಸೀ, ಗಂಧ, ಪಚ್ಚಕರ್ಪೂರ ಮೊದಲಾದವುಗಳ ಮಿಶ್ರಣದಿಂದಾದ ಗಂಧೋದಕದ ಕಲಶಗಳು. ಮಧ್ಯದಲ್ಲಿ ಶುದ್ಧೋದಕಕಲಶ. ಹೀಗೆ ಒಟ್ಟು ಐದು ಕಲಶಗಳು. ಚಕ್ರಾಬ್ಜ ಅಥವಾ ಭದ್ರಕಮಂಡಲದ ವೀಥಿಯಲ್ಲಿ ನಾಲ್ಕು ದಳದ ಪದ್ಮ ಬರೆಯಬೇಕು. ಈ ಪದ್ಮದ ಮಧ್ಯದಲ್ಲಿ ಒಂದು ಕಲಶ, ಹಾಗೂ ನಾಲ್ಕು ದಳಗಳಲ್ಲಿ ಒಂದೊಂದು ಕಲಶ ಹೀಗೆ ಐದು. ಇದೇ ರೀತಿಯ ಉಳಿದ ವೀಥಿಗಳಲ್ಲಿಯೂ ಐದೈದು ಕಲಶವಿಡ- ಬೇಕು. ಮಧ್ಯದಲ್ಲಿ ಐದು ಇಪ್ಪತ್ತೈದುಕಲಶಗಳಾದವು. ಪೂರ್ವದ ಚತುರ್ದಲಕಮಲದಲ್ಲಿರುವ ಪಂಚಕಲಶಗಳಲ್ಲೂ ಪಂಚಾಮೃತ ವನ್ನೂ, ದಕ್ಷಿಣ ದಿಕ್ಕಿನಲ್ಲಿರುವ ಕಲಶಗಳಲ್ಲಿ ಕ್ವಾಥೋದಕ, ಪಶ್ಚಿಮದ ಐದು ಕಲಶಗಳಲ್ಲಿ ಶುದ್ಧೋದಕ, ಉತ್ತರದಿಕ್ಕಿನ ಐದು ಕಲಶಗಳಲ್ಲಿ ಗಂಧೋದಕ, ಪಶ್ಚಿಮದಿಕ್ಕಿನ ಶುದ್ಧೋದಕಕಲಶಗಳ ಮತ್ತು ಬ್ರಹ್ಮಕಲಶದ ಮಧ್ಯದಲ್ಲಿ ರಕ್ತವರ್ಣದ ಚಿಕ್ಕ ಪದ್ಮ ಬರೆದು ಅಲ್ಲಿ ಪಂಚಗವ್ಯದ ಮತ್ತೊಂದು ಕಲಶವನ್ನಿಡಬೇಕು. ಕಲಶಸ್ಥಾಪನಾಕ್ರಮ ಪಂಚಾಶತ್ವೇ ತು ಗಂಧೋದಂ ಸರ್ವಮಧ್ಯೇ ನಿಧಾಪಯೇತ್ । ಬ್ರಾಹ್ಮಸ್ಯ ಪುರತಸ್ತ್ವೇಕಂ ಶಾರ್ವಂ ಸಂಸ್ಥಾಪಯೇದ್ ಬೃಹತ್ II ೧೦೧ ॥ ಅಷ್ಟದಿಕ್ಷು ಅಷ್ಟಪದ್ಮೇಷು ಪಂಚಕಂ ಪಂಚಕಂ ನ್ಯಸೇತ್ । ಅನೇನ ಕ್ರಮಯೋಗೇನ ಕಲಶಾ ಅಖಿಲಾ ಅಪಿ ॥ ೧೦೨ ॥ ತತ್ತದ್ ದ್ರವ್ಯಮಯಾಃ ತತ್ರ ತತ್ರ ಸ್ಥಾಪ್ಯಾಸ್ತು ಬಾಹ್ಯತಃ । ತದೈವಾಂಕುರಪಾತ್ರಾಣಿ ಪರಿತಃ ತತ್ರ ವಿನ್ಯಸೇತ್ ॥ ೧೦೩ ॥ ಅರ್ಥ - ಐವತ್ತು ಕಲಶಗಳನ್ನು ಸ್ಥಾಪಿಸುವುದಾದರೆ ಭದ್ರಕಾದಿ ಮಂಡಲದ ಮಧ್ಯದಲ್ಲಿರುವ ಎಂಟು ದಳ ಕಮಲಗಳಲ್ಲಿ ಎಂಟು ಕಲಶ. ಮಧ್ಯ ಕಲಶಗಳ ಸುತ್ತಲೂ ಎಂಟು ದಿಕ್ಕುಗಳಲ್ಲಿಯೂ ನಾಲ್ಕು ದಳದ ಎಂಟು ಪದ್ಮಗಳನ್ನು ಬರೆದು, ಅದರಲ್ಲಿ ನಾಲ್ಕು ದಳಗಳಲ್ಲಿ ನಾಲ್ಕು ಕಲಶಗಳು ಮಧ್ಯದಲ್ಲಿ ಒಂದರಂತೆ ಹೀಗೆ ಐದೈದರಂತೆ ಒಟ್ಟು ನಲವತ್ತು ಕಲಶಗಳು. ಅಷ್ಟದಳದ ಕಮಲ- ದಲ್ಲಿ ಎಂಟು ಗಂಧೋದಕ ಕಲಶಗಳು. ಗಂಧೋದಕದ ಎಂಟು ಕಲಶಗಳ ಮಧ್ಯದಲ್ಲಿ ಬ್ರಹ್ಮ ಕಲಶ. ಇದರ ಮುಂದೆ ಪೂರ್ವಭಾಗ ದಲ್ಲಿ ರುದ್ರದೇವತಾಕವಾದ ಅಥವಾ ಸರ್ವದೇವತಾಕವಾದ ಇನ್ನೊಂದು ಕಲಶ. ಹೀಗೆ 40+8+2 = 50. ಪೂರ್ವ ದಿಕ್ಕಿನ ಕಲಶದ ದ್ರವ್ಯವೇ ಅದರ ಪಕ್ಕದ ಆಗ್ನೇಯಾದಿ ದಿಕ್ಕಿನ ದ್ರವ್ಯಗಳಾಗುತ್ತವೆ. ಅಂಕುರಾರ್ಪಣದ ಶರಾವಗಳನ್ನು ಇವುಗಳ ಸುತ್ತಲೂ ಇಡಬೇಕು. ವಿಶೇಷಕಲಶಗಳು ಕುಶೋದಕಂ ಚ ಕಾರ್ಪೂರಂ ಕುಂಕುಮಂ ಚಂದನಂ ತಥಾ । ತುಹಿನೋದಂ ಹರಿದ್ರೋದಮ್ ಔಶೀರಂ ಕೋಷ್ಠಸಾರ್ವಕಮ್ ॥ ೧೦೪ ॥ ನದೀಸಂಗಮಜಂ ಚೈವ ತಾಡಾಗಂ ಕೌಪ್ಯಮೇವ ವಾ । ನಿರ್ಝರೋದಮಿತಿ ಪ್ರೋಕ್ತಾ ವಿಶೇಷಕಲಶಾಸ್ತ್ವಿಮೇ । ಶುದ್ಧೋದದ್ವಯಮಪ್ಯೇತನ್ ಮಹಾತೀರ್ಥಸಮುದ್ಭವಮ್ ॥ ೧೦೫ ॥ ಅರ್ಥ - ಮೇಲೆ ಹೇಳಿದ ಎಲ್ಲಾ ಕಲಶಸ್ಥಾಪನೆಯ ಪಕ್ಷದಲ್ಲಿಯೂ ಹದಿಮೂರು ಕಲಶಗಳನ್ನು ಇಡಬೇಕು. ಇವುಗಳ ನಂತರ ಅಂಕುರ ಪಾತ್ರೆಗಳನ್ನಿಡಬೇಕು. ಈ ವಿಶೇಷಕಲಶಗಳಲ್ಲಿ ತುಂಬಿಸಬೇಕಾದ ನೀರು ಮಹಾತೀರ್ಥಗಳಿಂದ ತಂದದ್ದಾಗಿದ್ದು, ಈ ಕೆಳಗಿನ ಔಷಧಿಗಳು ಮಿಶ್ರಿತವಾಗಿರಬೇಕು. (1) ದರ್ಭೆ ಮಿಶ್ರಿತನೀರು; (2) ಪಚ್ಚಕರ್ಪೂರಮಿಶ್ರಿತ ಜಲ; (3) ಕೇಸರೀಮಿಶ್ರಿತನೀರು; (4) ಗಂಧಮಿಶ್ರಿತಜಲ; (5) ಹಿಮಕರಗಿದ ನೀರು; (6) ಅರಿಷಿಣಬೆರತಜಲ; (7) ಲಾವಂಚ ಬೆರತಜಲ; (8) ಕಂಕುಷ್ಠಬೆರೆತ ಜಲ; (9) ಕೃಷ್ಣಾಗರು ಬೆರತಜಲ; (10) ನದೀಸಂಗಮಜಲ; (11) ತಡಾಗೋದಕ; (12) ಕೂಪೋದಕ; (13)ಝರಿಯ ನೀರು. ಕಲಶಗಳಲ್ಲಿ ಆವಾಹಿಸಬೇಕಾದ ಮೂರ್ತಿಗಳು ಚತುರ್ವಿಂಶತಿಮೂರ್ತೀನಾಂ ವರ್ಣಮೂರ್ತೀಃ ತಥಾಪರಾಃ। ಆವಾಹಯೇತ್ ಶತತ್ವೇ ತು ಕ್ರಮವ್ಯುತ್ಕ್ರಮತಸ್ತು ತಾಃ ॥ ೧೦೬ ॥ ವರ್ಣಮೂರ್ತಿಃ ಪುನಶ್ಚೈವ ದ್ವಿಚತುರ್ವಾರಮೇವ ಚ । ಸಹಸ್ರಕಲಶಾದಿತ್ವೇ ಜಪೇನ್ ಮಂತ್ರಾಂಶ್ಚ ಶಕ್ತಿತಃ ॥ ೧೦೭ ॥ ಅರ್ಥ - ಇಪ್ಪತ್ತೈದು ಕಲಶಗಳನ್ನಿಡುವುದಾದರೆ ಇಪ್ಪತ್ತನಾಲ್ಕು ಕಲಶಗಳಲ್ಲಿ ಕೇಶವಾದಿ ಚತುರ್ವಿಂಶತಿರೂಪಗಳನ್ನುಕೇಶವಾಯ ನಮಃ ಕೇಶವಂ ತರ್ಪಯಾಮಿ ಎಂದು ಆವಾಹಿಸಬೇಕು. ಐವತ್ತು ಕಲಶಗಳಾದರೆ ಮಾತೃಕಾನ್ಯಾಸಪ್ರತಿಪಾದ್ಯ ಐವತ್ತು ವರ್ಣಗಳ ದೇವತಾಮೂರ್ತಿಯನ್ನು ಆವಾಹಿಸುವುದು, ನೂರು ಕಲಶಗಳಾ- ದರೆ ಕೇಶವಾದಿ 24, ಅಜಾದಿ 51, ಆತ್ಮ, ಅಂತರಾತ್ಮ, ಪರಮಾತ್ಮ, ಜ್ಞಾನಾತ್ಮ, ವಾಸುದೇವಾದಿ ನಾಲ್ಕು ರೂಪಗಳು, ವಿಶ್ವಾದಿ ನಾಲ್ಕು ರೂಪಗಳು, ಮತ್ಸ್ಯಾದಿ ಹತ್ತು ರೂಪಗಳು, ವೇದವ್ಯಾಸ, ದತ್ತಾತ್ರೇಯ, ಶಿಂಶುಮಾರ ಹೀಗೆ ದೇವತಾರ್ಚನೆಯ ಕಲಶಪೂಜೆ- ಯಲ್ಲಿ ಹೇಳಿದ ನೂರು ಮೂರ್ತಿಗಳನ್ನು ಆವಾಹಿಸಬೇಕು. ಇನ್ನೂರಐವತ್ತು ಕಲಶಗಳನ್ನು ಇಡುವುದಾದರೆ ಮೇಲೆ ಹೇಳಿದಂತೆ ನೂರು ಮೂರ್ತಿಗಳು ಹಾಗೂ ಶಿಂಶುಮಾರಾದಿ ಅಜಾದಿಪರ್ಯಂತ ಹಿಂದಿನಿಂದ ನೂರು ಮೂರ್ತಿಗಳನ್ನು, ಪುನಃ ಅಜಾದಿ ಳಾಳುಕಾಯ ಐವತ್ತು ಮಾತೃಕಾನ್ಯಾಸಮೂರ್ತಿಗಳು ಹೀಗೆ ಇನ್ನೂರೈವತ್ತು ರೂಪಗಳು. ಐನೂರು ಕಲಶಗಳಾದರೆ ಮೇಲೆ ಹೇಳಿದ ಇನ್ನೂರೈವತ್ತು ಮೂರ್ತಿಗಳನ್ನೇ ಎರಡು ಬಾರಿ ಆವಾಹಿಸುವುದು. ಸಾವಿರಕಲಶ- ಗಳನ್ನಿಡುವುದಾದರೆ ನಾಲ್ಕು ಬಾರಿ ಆವಾಹಿಸಬೇಕು. ಇದಲ್ಲದೆ ಕಲಶಗಳನ್ನು ಸ್ಪರ್ಶಿಸಿಕೊಂಡು ಇಲ್ಲಿ ಹೇಳಿರುವ ಎಲ್ಲ ಅಷ್ಟಮಹಾಮಂತ್ರಗಳನ್ನೂ ಯಥಾಶಕ್ತಿ ಜಪಿಸಬೇಕು. ಕಲಶಾಭಿಷೇಕಕ್ರಮ ತತಸ್ತು ಪಂಚಘೋಷೈಶ್ಚ ವೇದಘೋಷೈಸ್ತಥಾssದರಾತ್ । ಆನೀಯ ಪ್ರತಿಮಾಂ ಸ್ನಾನಂ ಕಾರಯೇತ್ ಪ್ರಣವೇನ ತು ॥ ೧೦೮ ॥ ಮಂತ್ರೈಃ ಪುರುಷಸೂಕ್ತಾಂತೈಃ ವಿಶ್ವತಶ್ಚಕ್ಷುಷಾ ತಥಾ । ಅರ್ಥ - ಕಲಶಸ್ಥಾಪನೆಯಾದ ನಂತರ ಪ್ರತಿಷ್ಠೆ ಮಾಡುವ ಪ್ರತಿಮೆ ಯನ್ನು ಪಂಚವಾದ್ಯಗಳೊಂದಿಗೆ ವೇದಜ್ಞರು ಭಕ್ತಿಯಿಂದ ವೇದ- ಘೋಷಮಾಡುತ್ತಿರುವಂತೆಯೇ ಪ್ರತಿಮೆಯನ್ನುಸ್ನಾನಮಂಟಪಕ್ಕೆ ತಂದು, ಪ್ರಣವಮಂತ್ರ, ಪುರುಷಸೂಕ್ತ, ವಿಶ್ವಕರ್ಮಸೂಕ್ತಗಳನ್ನು ಪಠಿಸುತ್ತಾ ಆವಾಹಿತಕಲಶೋದಕಗಳಿಂದ ಅಭಿಷೇಕಿಸಬೇಕು[^1] ನಂತರ ಅಷ್ಟಾಕ್ಷರಮಂತ್ರದಿಂದಲೂ, ಪ್ರಣವದಿಂದಲೂ ಅಷ್ಟ- ಗಂಧಗಳಿಂದ ಪರಮಳಿತವಾದ ಗಂಧೋದಕಾದಿಗಳಿಂದಲೂ ಪ್ರತಿಮೆಯನ್ನು (ಗೆ?) ಅಭಿಷೇಕ ಮಾಡಬೇಕು. ನಂತರ ಪ್ರತಿಮೆ- ಯನ್ನು ವಸ್ತ್ರದಿಂದ ಒರೆಸಿ ಗಂಧವನ್ನು ಹಚ್ಚಿ ಪುಷ್ಪಾದಿಗಳಿಂದ ಚೆನ್ನಾಗಿ ಅಲಂಕರಿಸಬೇಕು. ನಂತರ ಪ್ರಣವಮಂತ್ರವನ್ನು ಉಚ್ಚರಿಸುತ್ತಾ ಗರ್ಭಗೃಹದಲ್ಲಿ ಸ್ಥಾಪಿಸಬೇಕು. [^1]. ಅಭಿಷೇಕ - 'ವಿಶ್ವತಃ ಚಕ್ಷು' ಮಂತ್ರದಿಂದ ಪಂಚಗವ್ಯಾ- ಭಿಷೇಕಮಾಡಿ, ಆತ್ವಾಹಾರ್ಷಸೂಕ್ತ ಪಠಿಸುತ್ತಾ ವಿಶೇಷ ಕಲಶ- ಗಳಿಂದಲೂ ಅಭಿಷೇಕಿಸಬೇಕು. ಈ ಕಾಲದಲ್ಲಿ ವಿಷ್ಣು ಸೂಕ್ತ, ಪುರುಷಸೂಕ್ತ ಪಠಿಸುತ್ತಾ, ಪುನಃ ಪವಮಾನಸೂಕ್ತದಿಂದ ಅಭಿಷೇಕಿಸಬೇಕು. ನಂತರ ಪೀಠವನ್ನು ರಚಿಸಿ, ಬಿಂಬಶುದ್ಧಿಗಾಗಿ ಅರ್ಚಿಸಬೇಕು. ಸೂರ್ಯಮಂಡಲದಲ್ಲಿರುವ ಭಗವಂತನನ್ನು ಕೈಯ್ಯಲ್ಲಿರುವ ಜಲಪಾತ್ರೆಯಲ್ಲಿ ಸವಿತೃಮಂಡಲದಿಂದ ಆವಾಹಿಸಿ ಬಿಂಬದಲ್ಲಿ ಸ್ಥಾಪಿಸಬೇಕು. ಈ ನೀರನ್ನು ಪುಷ್ಪಸಹಿತವಾಗಿ ಅಭಿಷೇಕಿಸಬೇಕು. ಸೂರ್ಯಮಂಡಲಮಧ್ಯದಲ್ಲಿರುವ ಭಗವಂತನು ಪ್ರತಿಮೆಯ ಅಭಿಮುಖನಾಗಿರುವನೆಂದು ಚಿಂತಿಸಿ, ಉಪಚಾರಪೂಜೆ ನೀಡಿ, ಪ್ರತಿಮೆಯಲ್ಲಿ ಬ್ರಹ್ಮರಂಧ್ರವನ್ನು ಚಿಂತಿಸಿ, ಆ ಮಾರ್ಗದಿಂದ ಸಹಸ್ರಶೀರ್ಷಮಂತ್ರದಿಂದ ಹಾಗೂ ಮೂಲಮಂತ್ರದಿಂದ ಆವಾಹಿಸಬೇಕು. ಅಭಿಷೇಕಮಂತ್ರಗಳು ಪುನಶ್ಚಾಷ್ಟಾಕ್ಷರೇಣೈವ ಪ್ರಣವೇನ ಚ ಭಕ್ತಿತಃ ॥ ೧೦೯ ॥ ಸ್ನಾಪಯಿತ್ವಾ ಗಂಧಜಲೈರ್ಗಂಧಪುಷ್ಪಾದಿಭಿಃ ಪುನಃ । ಅಲಂಕೃತ್ಯ ಸ್ಥಾಪಯೇತ್ತು ಪ್ರತಿಮಾಂ ಪ್ರಣವೇನ ತು ॥ ೧೧೦ ॥ ಜಪೇದಷ್ಟಾಕ್ಷರಂ ಮಂತ್ರಂ ತತ್ತನ್ಮೂರ್ತಿಮನುಂ ತಥಾ । ಅಷ್ಟೋತ್ತರಶತಂ ಮಂತ್ರೀ ಧ್ಯಾಯೇತ್ ತೇಜೋಮಯೀಂ ಪುನಃ ॥ ೧೧೧ ॥ ಪ್ರತಿಮಾಂ ಪ್ರತಿಮಾಂತಸ್ಥಾಂ ತನ್ಮಧ್ಯೇ ಪರಮಂ ವಪುಃ । ಚಿದಾನಂದರಸಂ ಪೂರ್ಣಗುಣಸಂಪೂರ್ಣಮುತ್ತಮಮ್ ॥ ೧೧೨ ॥ ಅರ್ಥ- ನಂತರ ಮೂಲಮಂತ್ರಜಪಿಸಬೇಕು. ಆಯಾಯ ಮೂರ್ತಿಗಳ ಮಂತ್ರಗಳನ್ನು ಜಪಿಸಬೇಕು. ನೂರೆಂಟು ಬಾರಿ ಕಡಿಮೆಯಾಗದಂತೆ ಜಪಿಸುವುದು. (...... ಅನುವಾದ ಬೇಕೇ ?) ನಂತರ ಜಡವಾದ ಪ್ರತಿಮೆಯ ಒಳಗೆ ತೇಜೋಮಯರೂಪದ ವಾಯುದೇವರ ಪ್ರತಿಮೆಯನ್ನು, ಅದರಲ್ಲಿ ಚಿದಾನಂದಾತ್ಮಕ- ನಾದ, ಸರ್ವಗುಣಪರಿಪೂರ್ಣನಾದ ಭಗವಂತನನ್ನು ಚಿಂತಿಸ- ಬೇಕು. ಹೀಗೆ ಗೋಲಕದ್ವಯ ಅಥವಾ ಗೋಲಕತ್ರಯ ಚಿಂತನೆ ಮಾಡಿ ಅಲ್ಲಿ ರಮಾದೇವಿಯೊಂದಿಗೆ ನೀರು + ಹಾಲಿನಂತೆ ಒಟ್ಟಿಗಿರುವ ಭಗವಂತನನ್ನು ಚಿಂತಿಸಿ ಆವಾಹಿಸಬೇಕು.[^1] [^1]. ಪ್ರತಿಮಾಂ ಪ್ರತಿಮಾಂತಸ್ಥಾಂ ವಾಯೋಃ ತೇಜೋಮಯೀಂ ಸುಧೀಃ । ವಿಷ್ಣೋರ್ವಪುಶ್ಚ ತನ್ಮಧ್ಯೇ ಧ್ಯಾಯೇದಾನಂದಚಿದ್ಘನಮ್ ॥ ವಿನಾ ಪ್ರತೀಕಂ ಪ್ರಾಣಸ್ಯ ಸ್ಮರನ್ ನಿರಯಭಾಗ್ ಭವೇತ್ । ಪ್ರತಿಮಾಂ ಪ್ರತಿಮಾಂತಸ್ಥಾಂ ತೇಜಃಸಾರಮಯೀಂ ದೃಢಾಮ್ ॥ ಧ್ಯಾತ್ವಾ ಪ್ರಾಣಾಧಿಪಂ ತತ್ರ ಪ್ರತಿಮಾರೂಪಿಣಂ ವಿಭುಮ್ । ವಾಯುಂ ವಿನಾ ನ ಗೃಹ್ಣಾಮಿ ಯತ್ಕಿಂಚಿತ್‌ವಸ್ತು ಮೇ ಪ್ರಿಯಮ್ ॥ ತಸ್ಮಾದ್ ವಾಯುಮುಖೈಃ ದೇವೈಃ ವಾಯುಹಸ್ತೇನ ದಾಪಯೇತ್ ॥ ಹೀಗೆ ಧ್ಯಾನಿಸಿ, ವಿಷ್ಣು ಷಡಕ್ಷರಗಳನ್ನು ಜಪಿಸಬೇಕು. ನಂತರ 'ಏಹ್ಯೇಹಿ ಭಗವನ್ ವಿಷ್ಣೋ ಲೋಕಾನುಗ್ರಹಕಾರಕ' ಎಂದು ಪ್ರಾರ್ಥಿಸಬೇಕು. ಚಿಂತನಕ್ರಮವು ಹೀಗಿದೆ ಎದುರಿಗಿರುವ ಪ್ರತಿಮೆ, ಅದರೊಳಗೆ ತೇಜಃಸಾರಮಯಪ್ರತಿಮೆ, ಧ್ಯೇಯದೇವತೆಗಳು ಪಂಚವಿಂಶತಿತತ್ತ್ವಾನಾಂ ದೇವತಾಸ್ತದನಂತರಮ್ । ಸ್ಥಾಪಯೇತ್ ಪ್ರತಿಮಾಮಧ್ಯೇ ಪರಿತಃ ಕೇಶವಸ್ಯ ತು ॥ ೧೧೩ ॥ ಅರ್ಥ - ಪ್ರತಿಮೆಯ ಮಧ್ಯದಲ್ಲಿ ಸಾನ್ನಿಧ್ಯ ಹೊಂದಿದ ಭಗವಂತನ ಸುತ್ತಲೂ ಇಪ್ಪತ್ತೈದು ತತ್ವಾಭಿಮಾನಿದೇವತೆಗಳ ಸಾನ್ನಿಧ್ಯವನ್ನು ಚಿಂತಿಸಬೇಕು.[^1] ಅಲ್ಲಿ ಚಿದಾನಂದಘನನಾದ ಭಗವಂತನನ್ನು ಧ್ಯಾನಿಸುವುದು. ಅಥವಾ ವಿಷ್ಣು - ಲಕ್ಷ್ಮೀ - ವಾಯುಪ್ರತಿಮೆಗಳಲ್ಲಿ ಪ್ರತಿಮಾಂತಃ- ಸ್ಥಿತವಾದ ತೇಜಃಸಾರಮಯಶಬ್ದಿತ ವಾಯುಪ್ರತಿಮೆ ಹಾಗೂ ಲಕ್ಷ್ಮೀಪ್ರತಿಮೆ ಎಂದು ಎರಡು ಪ್ರತಿಮೆಗಳು. ಇದನ್ನೇ ಪ್ರತಿಮಾಂ ಪ್ರತಿಮಾಂತಸ್ಥಾಂ ವಾಯೋಃ ತೇಜೋಮಯೀಂ ಸುಧೀಃ । ವಿಷ್ಣೋಃವಪುಶ್ಚತನ್ಮಧ್ಯೆ ಧ್ಯಾಯೇದ್............. ಎಂಬ ಪ್ರಮಾಣ ತಿಳಿಸುತ್ತದೆ. ಭಗವಂತನಿಗೆ ಮುಖ್ಯ ಪ್ರತಿಮೆ ಲಕ್ಷ್ಮೀದೇವಿಯೇ ಆಗಿರುವಳು. ಪ್ರತಿಮಾಧಿಕಸಾದೃಶ್ಯಾತ್ ಮುಖ್ಯಾ ವಿಷ್ಟೋಃ ಸದಾ ರಮಾ । ಇದರ ಹಿಂದಿನ ಅಭಿಪ್ರಾಯ ಹೀಗಿದೆ ವಿಷ್ಣು - ಲಕ್ಷ್ಮೀ - ವಾಯು ಪ್ರತಿಮಾಗಳಲ್ಲಿ ವಾಯುಪ್ರತಿಮೆ, ಅದರಲ್ಲಿ ಲಕ್ಷ್ಮೀಪ್ರತಿಮೆ, ಅದರೊಳಗೆ ಶ್ರೀಹರಿ, ಹೀಗೆ ಹರಿಗೆ ಎರಡು ಪ್ರತಿಮೆಗಳು. ವಿಷ್ಣು, ಲಕ್ಷ್ಮೀ, ವಾಯುಪ್ರತಿಮೆಗಳನ್ನು ಹೊರತು ಇತರ ಶಿವಾದಿ ಪ್ರತಿಮೆಗಳಲ್ಲಿ ಎದುರಿಗೆ ಇರುವ ಪ್ರತಿಮೆಗಳೊಳಗೆ ಶಿವಾದಿಪ್ರತೀಕ, ಅದರೊಳಗೆ ವಾಯುಪ್ರತಿಮೆ, ಅದರೊಳಗೆ ಲಕ್ಷ್ಮೀಪ್ರತಿಮೆ ಅದರೊಳಗೆ ವಿಷ್ಣುವು. ಇದು ವಿಷ್ಣುವಿಗೆ ಗೋಲಕತ್ರಿತಯವೆಂದು ಹೇಳಲ್ಪಡುತ್ತದೆ. ಭಗವಂತನ ಪ್ರತಿಮೆಯಾದರೆ ಎದುರಿಗೆ ಇರುವ ಪ್ರತಿಮೆ, ಅದರೊಳಗೆ ತೇಜಃಸಾರಮಯವಾದ ಪ್ರತಿಮೆ ಹೀಗೆ ಗೋಲಕದ್ವಿತಯ. ಈ ಪ್ರತಿಮೆಯ ಮಧ್ಯದಲ್ಲಿ ನಾರಾಯಣನು ರಮಾದೇವಿಯೊಂದಿಗೆ ಹಾಲು ನೀರು ಬೆರೆತಂತಿರುವ ಸ್ಥಿತಿ- ಯೆಂದು ತಿಳಿಯಬೇಕು. ಭಗವಂತನಿಂದ ಸಮವ್ಯಾಪ್ತಳಾದ ಲಕ್ಷ್ಮೀ ದೇವಿಗೆ ಗೋಲಕತ್ವ ಹಾಗೂ ಸಹಾಸೀನತ್ವವಿರುದ್ಧವಾಗುವುದಿಲ್ಲ. [^1]. ವಿಶೇಷಾಂಶ - ಭಗವಂತನ ಸಾನ್ನಿಧ್ಯಕ್ಕಾಗಿ ಪ್ರತಿಮೆಯ ಹೃದಯಾದಿಗಳನ್ನು ತುಲಸಿಯಿಂದ ಸ್ಪರ್ಶಿಸುತ್ತಾ, ಪುರುಷಸೂಕ್ತ ಹಾಗೂ ತತ್ವಗಳ ನ್ಯಾಸ ಮಾಡಬೇಕು. ಸಾನ್ನಿಧ್ಯಕರಣಾರ್ಥಾಯ ಹೃದಯಂ ಸ್ಪೃಶ್ಯ ದೈಶಿಕಃ । ಪೌರುಷಂ ತು ಜಪೇತ್ ಸೂಕ್ತಂ ಧ್ಯಾಯನ್ ದೇವಂ ಸುರೇಶ್ವರಮ್ ॥ ಪಠಿಸಬೇಕಾದ ವೈದಿಕಮಂತ್ರಗಳು ತತ್ರಾऽತ್ವಾಹಾರ್ಷಸೂಕ್ತಂ ಚ ಘರ್ಮಸೂಕ್ತಂ ಚ ವೈಷ್ಣವಮ್ । ಸೂಕ್ತಂ ಚ ವಿಶ್ವಕರ್ಮೀಯಂ ಪೌರುಷಂ ಸೂಕ್ತಮೇವ ಚ ॥ ೧೧೪ ॥ ಜಪ್ತ್ವಾಚೈವ ನಿಜಂ ಮಂತ್ರಂ ಪುನರಷ್ಟಾಕ್ಷರಂ ಸುಧೀಃ । ಪ್ರಣವಂ ಚ ಜಪೇದ್ ವಿಷ್ಣುಂ ಧ್ಯಾಯನ್ ಉತ್ತಮರೂಪಿಣಮ್ ॥೧೧೫ ॥ ಅರ್ಥ - ಆವಾಹಿಸುವಾಗ ಆತ್ವಾಽಹಾರ್ಷಸೂಕ್ತ (ಋ 10/173)- ವನ್ನೂ, 'ಘರ್ಮಾ ಸಮಂತಾ ತ್ರಿವೃತಂ ವ್ಯಾಪತುಃ' ಇತ್ಯಾದಿ ಘರ್ಮಸೂಕ್ತವನ್ನೂ (10/-114), 'ಅತೋ ದೇವಾ ಅವಂತು ನೋ ಯತೋ ವಿಷ್ಣುರ್ವಿಚಕ್ರಮೇ' ಎಂಬ ವಿಷ್ಣುಸೂಕ್ತವನ್ನೂ (1/154) 'ವಿಶ್ವತಶ್ಚಕ್ಷುರುತ ವಿಶ್ವತೋ ಮುಖೋ' ಇತ್ಯಾದಿ ವಿಶ್ವಕರ್ಮ ಸೂಕ್ತವನ್ನೂ (10/81), 'ಸಹಸ್ರಶೀರ್ಷಾ ಪುರುಷಃ' ಇತ್ಯಾದಿ ಪುರುಷಸೂಕ್ತವನ್ನೂ (10/90) ಜಪಿಸುತ್ತಾ, ಸರ್ವದೇವೋತ್ತಮ- ನಾದ ವಿಷ್ಣುವನ್ನು ಪ್ರತಿಮೆಯಲ್ಲಿ ಚಿಂತಿಸುತ್ತಾ, ಪ್ರತಿಷ್ಠಾಪಿಸಬೇ- ಕಾಗಿರುವ ಮೂರ್ತಿಯ ಮಂತ್ರವನ್ನೂ, ಮೂಲಮಂತ್ರವನ್ನೂ, ಓಂಕಾರವನ್ನೂ ಜಪಿಸಬೇಕು. ಇದರಿಂದಾಗಿ ಪ್ರತಿಮೆಯಲ್ಲಿ ವಿಶೇಷಸನ್ನಿಧಾನವುಂಟಾಗುತ್ತದೆ. ಕಲಶಾಭಿಷೇಕಕ್ರಮ ತತಸ್ತು ಕಲಶೈಃ ಬಾಹ್ಯಕ್ರಮೇಣೈವ ಜನಾರ್ದನಮ್ । ಸ್ನಾಪಯೇದ್ ಉಕ್ತಮಂತ್ರೈಸ್ತು ಮಧ್ಯಮಂ ಪ್ರಣವೇನ ತು ॥ ೧೧೬ ॥ ಅಷ್ಟಾರ್ಣೇನ ನಿಜೇನಾಪಿ ತಥಾ ಪುರುಷಸೂಕ್ತತಃ । ಆವಾಹನಂ ಚ ಸ್ನಪನಂ ಪಂಚಗವ್ಯಸ್ಯ ಮಧ್ಯವತ್ । ಪೂರ್ವಾದ್ಯುತ್ತರಪರ್ಯಂತಃ ಕಲಶಕ್ರಮ ಉಚ್ಯತೇ ॥೧೧೭ ॥ ಅರ್ಥ - ಪೀಠದಲ್ಲಿ ದೇವತಾಪ್ರತಿಮೆಯನ್ನು ಇಟ್ಟು ಸೂಕ್ತ, ಮಂತ್ರ ಜಪಾನಂತರ ಆವಾಹಿತಕಲಶಗಳನ್ನು ಮಂಡಲದ ಹೊರಭಾಗದಿಂದ ಪ್ರಾರಂಭಿಸಿ ಕ್ರಮವಾಗಿ ತೆಗೆದು ಪುರುಷಸೂಕ್ತ, ಆತ್ವಾಹಾರ್ಷ, ಘರ್ಮಸೂಕ್ತ, ವಿಷ್ಣುಸೂಕ್ತ, ಹಿರಣ್ಯಗರ್ಭಸೂಕ್ತ, ಮೂಲಮಂತ್ರ, ಪ್ರಣವಾದಿಗಳಿಂದ ಪ್ರತಿಮೆಯನ್ನು ಅಭಿಷೇಕಿಸಬೇಕು. ಮಂಡಲದ ಪಂಚಕಮಲದಳಗಳಲ್ಲಿ ಆವಾಹಿತವಾಗಿರುವ ಕಲಶಗಳಲ್ಲಿ ಪೂರ್ವಾದಿದಿಕ್ಕಿನಿಂದಾ ರಂಭಿಸಿ ಉತ್ತರದಿಕ್ಕಿನಲ್ಲಿರುವ ಕಲಶಪರ್ಯಂತ ಹೊರಗಿನಿಂದ ತೆಗೆದು ಅಭಿಷೇಕಿಸಿ, ನಂತರ ಮಧ್ಯದ ಕಲಶವನ್ನು ತೆಗೆದು ಅಭಿಷೇಕಿಸಬೇಕು. ಹಾಗೆಯೇ ಪೂರ್ವದಳದ ಕಲಶಗಳನ್ನು ಪೂರ್ಣ ತೆಗೆದು ಅಭಿಷೇಕಿಸಿದ ನಂತರ ದಕ್ಷಿಣದಿಕ್ಕಿನ ಕಲಶ- ಗಳನ್ನು ಪೂರ್ವಾದಿಕ್ರಮದಿಂದ ತೆಗೆದು ಅಭಿಷೇಕಿಸಬೇಕು. ನಂತರ ಪಶ್ಚಿಮ, ಕಡೆಗೆ ಉತ್ತರದಿಕ್ಕಿನ ಕಲಶಗಳನ್ನು ಬಾಹ್ಯಾದಿ ಕ್ರಮದಿಂದ ತೆಗೆದು ಅಭಿಷೇಕಿಸಬೇಕು[^1]. ಪಂಚಗವ್ಯಕಲಶದಲ್ಲಿ ಆವಾಹನೆ ಹಾಗೂ ಅಭಿಷೇಕಕ್ಕೆ ಮಂತ್ರ- ಗಳನ್ನು ಮಧ್ಯದ ಕಲಶದಂತೆಯೇ ನಡೆಸಬೇಕು[^2]. ಪ್ರತಿದಿಕ್ಕಿ- ನಲ್ಲಿಯೂ ಒಂದು ಕಮಲದ ಕಲಶಗಳನ್ನು ಪೂರ್ವದಿಕ್ಕಿನಿಂದಾ- ರಂಭಿಸಿ ಉತ್ತರದವರೆಗೂ ತೆಗೆದು ಅಭಿಷೇಕಿಸಬೇಕು. ಹೀಗೆ ಪೂರ್ವ ದಿಕ್ಕಿನ ಕಮಲದ ಐದು ಕಲಶಗಳನ್ನು ತೆಗೆದು ಅಭಿಷೇಕವಾದ ಮೇಲೆ ದಕ್ಷಿಣದಿಕ್ಕಿನಲ್ಲಿರುವ ಕಮಲದ ಕಲಶಗಳನ್ನು ತೆಗೆಯ- ಬೇಕು. ಪ್ರತಿಮಾಪೂಜೆ, ಬಲಿದಾನ, ಗುರುದಕ್ಷಿಣಾ ಜಪ್ತ್ವಾ ಪುನಶ್ಚ ತನ್ಮಂತ್ರಾನ್ ಪೂಜಯೇಚ್ಚ ವಿಧಾನತಃ । ದ್ವಾರಲೋಕಪತಿಭ್ಯಶ್ಚ ಬಲಿಂ ದತ್ವಾ ಯಥಾಕ್ರಮಮ್ ॥೧೧೮ ॥ ]^1]. ವಿಶೇಷಾಂಶ - ಸಂಪ್ರೋಕ್ಷಣವಿಧಿಯಲ್ಲಿ ಹಾಗೂ ದೇವತಾ ಪ್ರತಿಷ್ಠಾಪನದಲ್ಲಿ ಪರಮಹಂಸಾಶ್ರಮಿಗಳಿಂದಲೇ ಅಭಿಷೇಕ ಮಾಡಿಸುವ ಪದ್ಧತಿಯಿದೆ. ಸಂಪ್ರೋಕ್ಷಣಶ್ಚಾಭಿಷೇಕಶ್ಚ ಯತಿಭೀರೇವ ಕಾರಯೇತ್ ॥ ಮಧ್ಯದ ಬ್ರಹ್ಮಕಲಶದಲ್ಲಿ ಆ ದೇವತೆಯನ್ನೇ ಆವಾಹಿಸಬೇಕು. ಪಂಚಗವ್ಯಕಲಶದಲ್ಲಿಯೂ ಆವಾಹಿಸುವಾಗ ಹಾಗೂ ಅದರಿಂದ ಅಭಿಷೇಕಿಸುವಾಗಲೂ ಮಧ್ಯ ಬ್ರಹ್ಮಕಲಶದ ನಿಯಮವನ್ನೇ ಸ್ವೀಕರಿಸಬೇಕು. [^2]. 'ಪಂಚಗವ್ಯೇನ ಮಧ್ಯವತ್' ಎಂಬಲ್ಲಿ ಮಧ್ಯಮಬ್ರಹ್ಮಕಲಶ- ದಲ್ಲಿ ಯಾವ ಭಗವದ್ರೂಪದ ಆವಾಹನೆಯೋ ಅದೇ ರೂಪದ ಆವಾಹನೆ ಪಂಚಗವ್ಯದ ಕಲಶದಲ್ಲಿಯೂ ನಡೆಸಬೇಕು. ಮಧ್ಯದ ಕಲಶದ ಆವಾಹನೆಯಲ್ಲಿ ಯಾವ ಮಂತ್ರವನ್ನು ಪಠಿಸಲಾ- ಯಿತೋ ಅದೇ ಮಂತ್ರವನ್ನೇ ಪಂಚಗವ್ಯಕಲಶದ ಆವಾಹನೆ ಯಲ್ಲಿಯೂ ((())) ಪ್ರಣವ, ಮೂಲಮಂತ್ರ, ಮೂರ್ತಿಮಂತ್ರ ಹಾಗೂ ಪುರುಷಸೂಕ್ತಗಳಿಂದಲೇ ಆವಾಹಿಸಬೇಕು. ಆತ್ವಾರ್ಹಾದಿ ಗಳಿಂದ ಅಲ್ಲ. ಅಭಿಷೇಕ ಮಾಡುವಾಗಲೂ ಸಹ ಮಧ್ಯಕಲಶ- ದಲ್ಲಿ ಅಭಿಷೇಕಿಸಬಹುದಾದ ಪ್ರಣವಾದಿ ಮಂತ್ರಗಳಿಂದ ಅಭಿಷೇಕಿಸಬೇಕು. ವಸ್ತ್ರರತ್ನಹಿರಣ್ಯಾದ್ಯೈರಲಂಕೃತ್ಯ ವಿಭೂತಿತಃ । ಗುರವೇ ದಕ್ಷಿಣಾಂ ದದ್ಯಾತ್ಕೋಟಿಂ ಲಕ್ಷಂ ಸಹಸ್ರಕಮ್ ॥ ೧೧೯ ॥ ಶತಮರ್ಧ೦ ತದರ್ಧಂ ವಾ ನಿಃಸ್ವೋ ಭಕ್ತ್ಯಾ ಕ್ಷಮಾಪಯೇತ್ । ತದರ್ಧಮೃತ್ವಿಜಾಂ ಚೈವ ತದರ್ಧ೦ ಪಾರಣಾಕೃತಾಮ್ ॥ ೧೨೦ ॥ ಅರ್ಥ - ಕಲಶಗಳಿಂದ ಅಭಿಷೇಕವಾದ ಮೇಲೆ ಹಿಂದೆ ಹೇಳಿದ ಆತ್ವಾಹಾರ್ಷಾದಿ ಮಂತ್ರಗಳನ್ನು ಪುನಃ ಪುನಃ ಪಠಿಸುತ್ತಿರಬೇಕು. ಹಾಗೂ ಪ್ರಥಮಾಧ್ಯಾಯದಲ್ಲಿ ಹೇಳಿದ ಪೂಜಾವಿಧಾನದಿಂದ ಪ್ರತಿಮೆಯನ್ನು ಪೂಜಿಸಬೇಕು. ನಂತರ ದ್ವಾರಪಾಲಕರಿಗೂ ಹಾಗೂ ಇಂದ್ರಾದಿ ದಿಗಧಿಪತಿಗಳಿಗೂ ತಾರತಮ್ಯಾನುಸಾರವಾಗಿ ನೈವೇದ್ಯೋಪಹಾರಗಳನ್ನು ಅರ್ಪಿಸಬೇಕು[^1]. ಬಲ್ಯಾದಿ ಕಾರ್ಯಕ್ರಮ ಮುಗಿದಮೇಲೆ ಗುರುಗಳಿಗೆ ದಕ್ಷಿಣೆಯನ್ನು ನೀಡಬೇಕು. ಗುರುವನ್ನು ಕೂಡಿಸಿ ವಸ್ತ್ರ, ರತ್ನ, ಹಿರಣ್ಯಾದಿಗಳಿಂದ ಅಲಂಕರಿಸಿ ಗುರುವಿಗೆ ದಕ್ಷಿಣಾವನ್ನು ತನ್ನ ಐಶ್ವರ್ಯಕ್ಕೆ ತಕ್ಕಂತೆ ನೀಡಬೇಕು. ಕೋಟಿನಾಣ್ಯಗಳನ್ನಾಗಲೀ, ಲಕ್ಷ ನಾಣ್ಯಗಳನ್ನಾಗಲೀ, ಸಾವಿರ- ನಾಣ್ಯಗಳನ್ನಾಗಲೀ, ನೂರು ನಾಣ್ಯಗಳನ್ನಾಗಲೀ, ಅಥವಾ ಐವತ್ತು ನಾಣ್ಯಗಳನ್ನಾಗಲೀ ನೀಡಬೇಕು. ಬಡವನಾಗಿದ್ದು ಮೇಲೆ ಹೇಳಿದಷ್ಟು ನೀಡಲು ಅಶಕ್ತನಾದರೆ ಭಕ್ತಿಯಿಂದ ಗುರುಗಳನ್ನು ಕ್ಷಮೆ ಯಾಚಿಸಿದರೂ ಪೂರ್ಣಫಲ ಬಂದೇ ಬರುತ್ತದೆ. ಇನ್ನು ಇತರ ಋತ್ವಿಕ್ಕುಗಳಿಗೆ ಪ್ರಧಾನಾಚಾರ್ಯರಿಗೆ ನೀಡಿದ ದಕ್ಷಿಣೆಯ ಅರ್ಧದಷ್ಟು ನೀಡಬೇಕು. ಅದರ ಅರ್ಧಭಾಗದಷ್ಟು ವೇದಾದಿ ಪಾರಾಯಣ ಮಾಡಿದವರಿಗೂ, ಮಂತ್ರಾದಿ ಜಪ ಮಾಡಿದವರಿಗೂ ನೀಡಬೇಕು.[^2]. [^1]. 'ದ್ವಾರಲೋಕಪತಿ'' ಎಂಬಲ್ಲಿ ದ್ವಾರಪತಿಗಳಾದ ಜಯ-ವಿಜಯಾದಿ ಎಂಟು ದೇವತೆಗಳನ್ನೂ ಮತ್ತು ಲೋಕಪತಿಗಳಾದ ಇಂದ್ರಾದಿದೇವತೆಗಳನ್ನೂ ಪೂಜಿಸಬೇಕು. ಅದರ ಕ್ರಮ ಹೀಗಿದೆ ಮೊದಲು ಎಲ್ಲರಿಗೂ ಸೇರಿ ಸಾಷ್ಟಾಂಗನಮಸ್ಕಾರ ಹಾಕಬೇಕು. ಅಂಜಲಿಮುದ್ರೆಯಿಂದ ನಮಸ್ಕರಿಸಿ 'ನೀವೆಲ್ಲರೂ ಈ ಕಾರ್ಯ- ದಲ್ಲಿ ಸನ್ನಿಹಿತರಾಗಿರಿ' ಎಂದು ಪ್ರಾರ್ಥಿಸಬೇಕು. ಅವರಿಗೆ ಸಂಬಂಧಿಸಿದ ವೇದಮಂತ್ರಗಳನ್ನು ಪಠಿಸಿ, ಮೂಲಮಂತ್ರ ಜಪಿಸಬೇಕು. ನಂತರ ಬಲಿಹರಣವನ್ನು ಮಾಡಬೇಕು. [^2]. ಪ್ರತಿಷ್ಠಾ, ಹೋಮಾದಿಗಳಲ್ಲಿ ಆಚಾರ್ಯರನ್ನು ವಂದಿಸಿ ಸಾವಿರಧೇನುಗಳನ್ನಾಗಲೀ ಅಥವಾ ಅದಕ್ಕೆ ತಗಲುವ ಧನ- ವನ್ನಾಗಲೀ ನೀಡಬೇಕು. ಅನ್ನದಾನವಿಧಿ ಆಶ್ವಭ್ಯಃ ಶ್ವಪಾಕೇಭ್ಯೋ ದದ್ಯಾದನ್ನಂ ಸಮಸ್ತಶಃ । ಪುರಸ್ತಾತ್ ಪರತಶ್ಚೈವ ಸಪ್ತರಾತ್ರಂ ನಿರಂತರಮ್ ॥ ೧೨೧ ॥ ಅರ್ಥ - ಉತ್ಸವಾದಿ ದಿನಗಳಲ್ಲಿ ಎಲ್ಲಾ ಜಾತಿಯ ಜನರಿಗೂ, ಪಶುಪಕ್ಷಿಗಳಿಗೂ ಸಹಸ್ರಮಾಖ್ಯಾತ್ರೇ ದದ್ಯಾತ್ ಸಹಸ್ರಂ ಧೇನವೋ ದೇಯಾಃ ದಕ್ಷಿಣಾಃ ಗುರವೇ ತಥಾ । ಸಾವಿರಸುವರ್ಣನಾಣ್ಯಗಳು ಉತ್ತಮೋತ್ತಮ. ಅದರರ್ಧ ಉತ್ತಮ, ಅದರರ್ಧ ಮಧ್ಯಮ. ಯಥಾಶಕ್ತಿ ನೀಡಿ ಭಕ್ತಿಯಿಂದ ಕ್ಷಮೆ ಯಾಚಿಸುವುದು ಕನಿಷ್ಠಪಕ್ಷ. ಸಹಸ್ರನಿಷ್ಕಮಥವಾ ದಕ್ಷಿಣಾ ಚೋತ್ತಮಾ ಮತಾ। ತದರ್ಧಾ ಮಧ್ಯಮಾ ಜ್ಞೇಯಾ ತದರ್ಧಾ ಚಾಧಮಾ ಮತಾ । ಯಥಾವಿತ್ತಾನುಸಾರೇಣ ದಕ್ಷಿಣಾ ಪರಿಕೀರ್ತಿತಾ ॥ ಬೃಹತೀಸಹಸ್ರ, ಪವಮಾನಹೋಮಾದಿಗಳಲ್ಲಿ ಬೃಹತೀಸಹಸ್ರ- ವಾದರೆ ೧೦ಸಾವಿರರೂಗಳನ್ನು ಪ್ರಧಾನಾಚಾರ್ಯನಿಗೂ, ಋತ್ವಿಕ್ಕುಗಳಿಗೆ ತಲಾ ಐದುಸಾವಿರರೂಗಳಂತೆ, ಬೃಹತೀ- ಪಾರಾಯಣ ಮಾಡುವವರಿಗೆ ಎರಡುವರೆ ಸಾವಿರದಂತೆಯೂ, ವಿಷ್ಣುಸಹಸ್ರನಾಮ ಪಾರಾಯಣ, ಸಹಸ್ರನಾಮಾರ್ಚನೆ ಮಾಡು- ವವರಿಗೆ ಒಂದೊಂದು ಸಾವಿರದಂತೆಯೂ ಇತರ ಸಹಾಯಕರಿಗೆ ಐನೂರು ರೂಗಳಂತೆಯೂ ದಕ್ಷಿಣೆ ನೀಡಬೇಕು. ಪವಮಾನಹೋಮವಾದರೆ ಪ್ರಧಾನಾರ್ಚಕನಿಗೆ ೫ಸಾವಿರವೂ, ಋತ್ವಿಕ್ಕುಗಳಿಗೆ ಎರಡುವರೆ ಸಾವಿರದಂತೆಯೂ, ಪಾರಾಯಣಾದಿ ಗಳಲ್ಲಿ ನಿಯಮಿತರಾದವರಿಗೆ ಸಾವಿರರೂಪಾಯಿನಂತೆಯೂ ದಕ್ಷಿಣಾದಾನ ಮಾಡಬೇಕು. ಈ ಶ್ಲೋಕಗಳಲ್ಲಿ ಹೇಳಿರುವ ಮೊತ್ತ ರಾಜಾದಿಗಳು ದೇವಾಲಯ- ವನ್ನು ನಿರ್ಮಿಸುವವರಿದ್ದರೆ ಅವರು ಶಕ್ತರಾದ್ದರಿಂದ ಕೋಟಿ, ಲಕ್ಷಾದಿ ಸಂಖ್ಯೆಗಳು. ವಸ್ತುತಃ ಕೊಡುವವನ ವಿತ್ತಾನುಸಾರ ನಿರ್ವಂಚನೆಯಿಂದ ದಕ್ಷಿಣಾದಿಗಳಿಂದ ವಿಪ್ರರನ್ನು ಸಂತುಷ್ಟಿ- ಗೊಳಿಸಬೇಕು. ನೂರು ಗೋವುಗಳನ್ನು ಪ್ರತ್ಯಾಮ್ನಾಯ ನೀಡಿದಾಗ ಅದರ ದಶಾಂಶವಾದರೂ ಋತ್ವಿಕ್ಕುಗಳಿಗೆ ನೀಡಬೇಕು. ಹತ್ತು ನೀಡಿದಾಗ ಒಂದು ಗೋವನ್ನಾದರೂ ನೀಡಬೇಕು. ಗೋಶತೇ ತು ದಶಾಂಶೇನ ಸರ್ವಮೇತತ್ ಪ್ರಕಲ್ಪಯೇತ್ । ಋತ್ವಿಗ್ಭ್ಯಃ ಧೇನುಮೇಕೈಕಾಂ ... ಅಂತೂ ದಕ್ಷಿಣೆಯಿಲ್ಲದೆ ಹೋಮಾದಿಗಳಿಲ್ಲ. ಇದರಿಂದ ಯಜಮಾನನಿಗೆ ಆಶ್ರೇಯಸ್ಸು. ಪ್ರತಿಷ್ಠಾದಕ್ಷಿಣಾ ಹೀನಾ ಯಜಮಾನಂ ಹಿನಸ್ತಿ ಹಿ ॥ ಅನ್ನಸಂತರ್ಪಣೆ ಮಾಡಬೇಕು. ಇದು ನಾಯಿಯಿಂದಾರಂಭಿಸಿ ನಾಯಿ ತಿನ್ನುವವರವರೆಗೂ ನಡೆಯಬೇಕು. ಈ ಅನ್ನದಾನ ಪ್ರತಿಷ್ಠೆಯ ಮೊದಲು ಏಳುದಿನಗಳು, ಪ್ರತಿಷ್ಠೆಯಾದ ಮೇಲೆ ಏಳು ದಿನಗಳು ನಡೆಯಬೇಕು[^1] ಅಭ್ಯಾಗತಪೂಜೆ ಸುವರ್ಣವಸ್ತ್ರರತ್ನಾದ್ಯೈಃ ಆಗತಾಭ್ಯಾಗತಾನಪಿ । ಪೂಜಯೇತ್ ಶಕ್ತಿತೋ ಭಕ್ತ್ಯಾ ಪ್ರೀಯತಾಂ ಭಗವಾನಿತಿ॥ ೧೨೨ ॥ ಅರ್ಥ - ಪ್ರತಿಷ್ಠಾದಿ ಉತ್ಸವಗಳಲ್ಲಿ ಬಂದ ಅತಿಥಿಅಭ್ಯಾಗತರನ್ನು ಸುವರ್ಣ, ವಸ್ತ್ರ, ರತ್ನಾದಿಗಳಿಂದ ತನ್ನ ಶಕ್ತ್ಯಾನುಸಾರವಾಗಿ ಉಪಚರಿಸಬೇಕು. ಈ ಎಲ್ಲಾ ರೀತಿಯ ದಾನಾದಿಗಳಲ್ಲಿಯೂ ಅಹಂಕಾರವನ್ನು ಹೊಂದದೆ 'ಭಗವಂತನು ಈ ಅನ್ನದಾನಾದಿಗಳಿಂದ ಪ್ರೀತನಾಗಲಿ' ಎಂಬ ಭಕ್ತಿಭಾವದಿಂದ ಕೂಡಿರಬೇಕು[^2]. ಉತ್ಸವವಿಧಾನ ಗೀತನೃತ್ಯೈಶ್ಚ ವಾದ್ಯೈಶ್ಚ ಪುರಾಣೈರಿತಿಹಾಸಕೈಃ । ಸೂಕ್ತೈಃ ಮಂಗಲಘೋಷೈಶ್ಚ ವೈದಿಕೈಃ ದಿನಸಪ್ತಕಮ್ ॥ ೧೨೩ ॥ ಅವಭೃಥಸ್ನಾನ ನಯೇತ್ ತತೋ ಮಹಾರಾಜವಿಭೂತ್ಯಾSವಭೃಥಂ ಸುಧೀಃ । [^1]. ಪ್ರತಿಷ್ಠೆಯ ಮೊದಲಿನ ಸಪ್ತಾಹ ಹಾಗೂ ಪ್ರತಿಷ್ಠಾನಂತರ ಸಪ್ತಾಹಗಳಲ್ಲಿ ಬ್ರಾಹ್ಮಣಭೋಜನ ನಿರಂತರ ನಡೆಯಬೇಕು. ಇವರ ಅನ್ನಾದಿಶೇಷದಿಂದ ನಾಯಿ, ನೀಚಯೋನಿಯವರು ಮೊದಲಾದವರು ತೃಪ್ತರಾಗುವಂತೆ ಮಾಡಬೇಕು. ಬ್ರಾಹ್ಮಣ- ಭೋಜನ ಪ್ರಧಾನವಾಗಿ ನಡೆಯಬೇಕು. ತದನಂತರ ಇತರ ಎಲ್ಲ ಜಾತಿಯ ಜನರಿಗೂ ತೃಪ್ತಿಪಡಿಸಬೇಕು. ಅನ್ನಕ್ಕಾಗಿ ಬಂದ ಯಾರನ್ನೂ ಬೇಜಾರು(ನಿರಾಸೆ?) ಮಾಡಬಾರದೆಂದು ಅಭಿಪ್ರಾಯ. 2. ಯಾವುದೇ ದಾನಮಾಡುವಾಗಲೀ 'ಭಗವಂತನು ಪ್ರೀತನಾಗಲಿ' ಎಂಬ ಭಗವತ್ಪ್ರಜ್ಞೆ ಜಾಗೃತವಾಗಿರಬೇಕು. 'ಭಗವಂತನ ಪ್ರೀತಿಯಾಗಲಿ' ಎಂಬ ಉದ್ದೇಶವಿಲ್ಲದೆ ಒಂದು ಕಾಳು ಅಕ್ಕಿಯ- ನ್ನಾಗಲೀ, ಒಂದು ಹನಿ ನೀರನ್ನಾಗಲೀ ಯಾರಿಗೂ ನೀಡಬಾರದು. ಇದರಿಂದ ಕ್ಷೇಮವಿಲ್ಲ. 'ತತ್ ಪ್ರೀತ್ಯರ್ಥಂ ವಿನಾ ಕಿಂಚಿತ್ ನೋದಬಿಂದುಂ ನ ತಂಡುಲಮ್'; 'ಕ್ಷೇಮಂ ನ ವಿಂದಂತಿ ವಿನಾ ಯದರ್ಪಣಮ್' – ಭಾಗವತ. ಕಾರಯೇದ್ ದೇವದೇವಸ್ಯ ಸ್ವಾಧ್ಯಾಯೈಃ ಗೀತನೃತ್ತಕೈಃ ॥ ೧೨೪ ॥ ಮಹಾನದೀಸಂಗಮೇ ತು ತೀರ್ಥೇ ವಾತಿಪ್ರಶಸ್ತಕೇ । ಸ್ನಾಪಯೇತ್ ಪೂರ್ವವನ್ಮಂತ್ರೈಃ ಪುಂಸೂಕ್ತಾಂತೈಃ ಸ್ಮರನ್ ಹರಿಮ್ ॥ ೧೨೫ ॥ ಅರ್ಥ - ಪ್ರತಿಷ್ಠೆಯಾದ ನಂತರವೂ ಏಳು ದಿನಗಳಲ್ಲಿ ಗಾನ, ನರ್ತನ, ವಾದ್ಯಘೋಷ, ವೇದಪುರಾಣ, ಇತಿಹಾಸಾದಿಗಳ ಪಠನ, ವಾಚನ, ಸೂಕ್ತಪಾರಾಯಣ, ಋಗಾದಿವೇದಗಳ ಮಂಗಳಧ್ವನಿ- ಗಳಿಂದ ಮಹೋತ್ಸವವನ್ನು ಆಚರಿಸಬೇಕು. ಸಪ್ತಾಹ ಕಳೆದ ನಂತರ ಛತ್ರ, ಚಾಮರ ಮೊದಲಾದ ರಾಜೋಪಚಾರ, ಗಾನ, ನರ್ತನಾದಿಗಳಿಂದ ಮಹಾನದಿಗಳು, ಸಂಗಮಸ್ಥಾನಾದಿಗಳ ಸಮೀಪ ಹೋಗಿ ಪುರುಷಸೂಕ್ತಾದಿ ವೇದಮಂತ್ರಗಳನ್ನು ಪಠಿಸುತ್ತಾ ಭಗವಂತನ ಉತ್ಸವಮೂರ್ತಿಗೆ ಅವಭೃಥಸ್ನಾನ[^1] ಮಾಡಿಸಬೇಕು. ಅವಭೃಥಸ್ನಾನ [^1]. - ಯಜಮಾನನು ಆಚಾರ್ಯಸಹಿತನಾಗಿ ನಿತ್ಯಕರ್ಮ ಮುಗಿಸಿ, ದೇವಾಲಯಕ್ಕೆ ಬಂದು, 'ಉತ್ತಿಷ್ಠೋತ್ತಿಷ್ಠಗೋವಿಂದ' ಎಂದು ಎಬ್ಬಿಸಿ ನಿರ್ಮಾಲ್ಯ ವಿಸರ್ಜನೆ ಮಾಡಿ ಹೀಗೆ ಪ್ರಾರ್ಥಿಸ- ಬೇಕು. ತೀರ್ಥಯಾತ್ರಾ ತ್ವಯಾ ದೇವ ಸ್ವೀಕರ್ತವ್ಯಾ ಸುರೇಶ್ವರ। ತತ್ರ ಪ್ರತಿಸರಾಮ ತ್ವಂ ಅನುಜ್ಞಾಂ ದಾತುಮರ್ಹಸಿ ॥ ಹೀಗೆ ಪಲ್ಲಕ್ಕಿಯಲ್ಲಿ ಕೂಡಿಸಿ, ನಾನಾವಿಧ ವಾದ್ಯಘೋಷ, ವೇದ- ಘೋಷಗಳನ್ನು ಮಾಡುತ್ತಾ ದೇವಾಲಯಕ್ಕೆ ಪ್ರದಕ್ಷಿಣೆ ಬರಬೇಕು. ನದೀಸಂಗಮ, ದೇವತಟಾಕಾದಿಗಳ ಸಮೀಪ ದಾರಿಯಲ್ಲಿ ಅರಳನ್ನು ಎರಚುತ್ತಾ ದೇವನನ್ನು ಕರೆತರಬೇಕು. ನದ್ಯಾದಿ ತೀರದಲ್ಲಿ ರಂಗಾವಲಿಯಿಂದ ಅಲಂಕೃತವಾದ ಸ್ಥಳ- ದಲ್ಲಿ ದೇವಪ್ರತಿಮೆಯನ್ನು ಕೂಡಿಸಬೇಕು. ಮಹಾಕುಂಭವನ್ನು ಸ್ಥಾಪಿಸಿ, ಕಲಶಪೂಜೆ ವರುಣಪೂಜೆ ಮಾಡಿ ಗಂಗಾದಿ ಸಕಲತೀರ್ಥಾಭಿಮಾನಿಗಳನ್ನೂ ಆವಾಹಿಸಿ ಪೂಜಿಸು- ವುದು. ನಂತರ ಆತ್ವಾಹಾರ್ಷ, ಪುರುಷಸೂಕ್ತಾದಿಗಳಿಂದ ಶಂಖದಿಂದ ಪ್ರತಿಮೆಗೆ ಅಭಿಷೇಕವನ್ನು ಮಾಡಬೇಕು. ಪ್ರತಿಮೆಗೆ ಉದ್ವರ್ತನಸೇವೆಯನ್ನು ಮಾಡಬೇಕು. ಅಂದರೆ ಕಡಲೇ ಹಿಟ್ಟಿನಿಂದ ಉಜ್ಜಿ ತೊಳೆಯುವುದು. ಹಿಂದೆ ಸ್ಥಾಪಿಸಿದ ಅಂಕುರಾ ರೋಪಣಪಾಲಿಕೆಗಳನ್ನು ಬ್ರಾಹ್ಮಣರು ಶಿರಸ್ಸಿನಲ್ಲಿ ಧರಿಸಿ 'ಹಿರಣ್ಯಶೃಂಗಂ', 'ಅಂಬಯೋ ಯಂತ್ಯಧ್ವಭಿಃ' ಇತ್ಯಾದಿ ನವಮಂತ್ರಗಳಿಂದ ವರುಣನನ್ನು ದಾನವಿಧಿ ತತಃ ಪೂರ್ವವದಾಗತ್ಯ ಪ್ರವೇಶ ಪುರುಷೋತ್ತಮಮ್ । ಪೂಜಯಿತ್ವಾವಿಧಾನೇನ ದತ್ವಾ ದಾನಾನಿ ಶಕ್ತಿತಃ ॥ ೧೨೬ ॥ ಗುರುಂ ಚ ಭಕ್ತ್ಯಾ ಸಂಪೂಜ್ಯ ಸ್ವೀಕುರ್ಯಾದ್ ಆಶಿಷಸ್ತತಃ । ಅರ್ಥ - ಅವಭೃಥಸ್ನಾನಾನಂತರ ಹಿಂದಿನಂತೆ ರಾಜೋಪಚಾರ ಗಳಿಂದ ಭಗವಂತನನ್ನು ಗರ್ಭಗುಡಿಗೆ ಕರೆತಂದು ಪೀಠದಲ್ಲಿ ಕುಳ್ಳಿರಿಸಬೇಕು. ನಂತರ ಷೋಡಶೋಪಚಾರಪೂಜೆಯನ್ನು ಮಾಡಬೇಕು. ಅವಭೃಥಾಂಗವಾಗಿ ಯಥಾಶಕ್ತಿ ಬ್ರಾಹ್ಮಣರನ್ನು ದಕ್ಷಿಣಾದಿಗಳಿಂದ ಸಂತೋಷಪಡಿಸಬೇಕು. ಆಚಾರ್ಯನನ್ನು ಪ್ರಾರ್ಥಿಸಬೇಕು. ನಂತರ ನದ್ಯಾದಿ ಜಲದಲ್ಲಿ ಚತುಸ್ರಯಂತ್ರವನ್ನು ಬರೆದು, ಮೂಲಮಂತ್ರವನ್ನು ಬರೆಯಬೇಕು. ಮೂರುವರೆಕೋಟಿ ತೀರ್ಥಾಭಿಮಾನಿಗಳನ್ನು ಆವಾಹಿಸಬೇಕು. ಶಂಖ,ಚಕ್ರ,ಗರುಡ- ಮುದ್ರೆಗಳನ್ನು ತೋರಿಸಿ 'ಯಾ ಪ್ರವತ ನಿವೃತ ಉದ್ವತಃ' ಇತ್ಯಾದಿ ಮಂತ್ರದಿಂದ ಪ್ರಾರ್ಥಿಸಿ, 'ಋತಂ ಚ ಸತ್ಯಂ ಚ' ಇತ್ಯಾದಿ ಅಘಮರ್ಷಣದಿಂದ ಜಲವನ್ನು ಅವಲೋಡನ ಮಾಡಿ, ಪುರುಷ- ಸೂಕ್ತ ಪಠನ ಮಾಡುತ್ತಾ ಚಕ್ರ ಹಾಗೂ ಉತ್ಸವಮೂರ್ತಿಯನ್ನು ಆಚಾರ್ಯರು ತಲೆಯ ಮೇಲಿಟ್ಟುಕೊಂಡು ಮುಳುಗಿ ಅಭಿಷೇಕಿಸ- ಬೇಕು. ಈ ಉತ್ಸವಮೂರ್ತಿ ಮುಳುಗಿದಾಗ ಸಮಸ್ತ ಭಕ್ತವೃಂದವೂ ಅವಭೃಥಸ್ನಾನಮಾಡಬೇಕು. ಈ ರೀತಿ ದೇವನೊಂದಿಗೆ ಮುಳುಗಿ- ದವರ ಸಮಸ್ತ ಮಹಾಪಾತಕಗಳು ಪರಿಹೃತವಾಗಿ ಶುದ್ಧರಾಗು- ತ್ತಾರೆ. ಮುಂದೆ ಉತ್ತಮಲೋಕಗಳನ್ನು ಹೊಂದುವರು. ನಿಮಜ್ಜಯೇತ್ ತತ್ರ ಬಿಂಬಂ ಚಕ್ರಂ ಮಂತ್ರೈಃ ಯಥಾವಿಧಿ। ದೇವೇನ ಸಹ ತತ್ಕಾಲೇ ನಿಮಜ್ಜಂತಿ ಚ ಯೇ ಜನಾಃ ॥ ತೇ ನಿರ್ಧೂಯಾಶುಭಂ ಸರ್ವಂ ಮಹಾಪಾತಕಮಪ್ಯುತ । ಯಾಂತಿ ಧ್ರುವಂ ಸುದುಷ್ಟ್ರಾಪ್ಯಂ ಸ್ಥಾನಂ ಆಚಂದ್ರತಾರಕಮ್ ॥ ಅವಭೃಥಸ್ನಾನವಾದಮೇಲೆ ಬಿಂಬಕ್ಕೆ ಷೋಡಶೋಪಚಾರ ಪೂಜೆಯನ್ನು ಮಾಡಿ ದೇವಾಲಯಕ್ಕೆ ತರಬೇಕು. ಈ ರೀತಿ ಅವಭೃಥಸ್ನಾನಮಾಡುವವರು ರಾಜಸೂಯಯಾಗದ ಫಲವನ್ನು ಪಡೆಯುವರು. ಯ ಏವಂ ಕುರುತೇ ಸ್ನಾನಂ ದೇವದೇವಸ್ಯ ಚಕ್ರಿಣಃ । ರಾಜಸೂಯಫಲಂ ಸೋಽಪಿ ಪ್ರಾಪ್ನೋತ್ಯೇವ ನ ಸಂಶಯಃ ॥ ವಸ್ತ್ರಾದಿಗಳಿಂದ ಪೂಜಿಸಿ, ಯಜಮಾನನು ಅವರಿಂದ ಆಶೀರ್ವಾದ ಪಡೆಯಬೇಕು[^1]. ನೈವೇದ್ಯದ ಪ್ರಮಾಣ ಶತಪ್ರಸ್ಥಾದನೂನಂ ತು ನೈವೇದ್ಯಂ ಪಾಯಸೋತ್ತರಮ್ ॥ ೧೨೭ ॥ ದಿನೇಷ್ವೇತೇಷು ದಾತವ್ಯಂ ಸಘೃತಂ ಸಸಿತಾದಿಕಮ್ । ಪಶ್ಚಾದಪಿ ಯಥಾಶಕ್ತಿ ಪೂಜಾ ಕಾರ್ಯಾ ಹರೇಃ ಸದಾ ॥ ೧೨೮ ॥ ಅರ್ಥ - ಪ್ರತಿಷ್ಠಾದಿ ಉತ್ಸವದಿವಸಗಳಲ್ಲಿ ನೂರು ಮಂದಿ ಬ್ರಾಹ್ಮಣರು ಹೊಟ್ಟೆ ತುಂಬ ತಿನ್ನುವಷ್ಟು ಎಂದರೆ ನೂರು ಪ್ರಸ್ಥಕ್ಕೆ ಕಮ್ಮಿ ಇಲ್ಲದಂತೆ ನೈವೇದ್ವವನ್ನು, ಪಾಯಸ, ತುಪ್ಪ, ಸಕ್ಕರೆ, ಜೇನುತುಪ್ಪಗಳೊಂದಿಗೆ ಶ್ರೀಹರಿಗೆ ನಿವೇದಿಸಬೇಕು. ಉತ್ಸವ ಮುಗಿದ ನಂತರವೂ ಪ್ರತಿದಿನವೂ ಶಕ್ತ್ಯಾನುಸಾರವಾಗಿ ಶ್ರೀಹರಿಗೆ ಪೂಜಾ,ನೈವೇದ್ಯಾದಿಗಳು ನಡೆಯುವಂತೆ ವ್ಯವಸ್ಥೆ ಮಾಡಬೇಕು. [^2]. ಜೀರ್ಣೋದ್ಧಾರವಿಧಿ ಜೀರ್ಣಾಲಯೋದ್ಧೃತೌ ಚೈವ ತತ್ತ್ವಮಂತ್ರಾನ್ ಸ್ವಕಂ ತಥಾ । ಪ್ರತಿಲೋಮೇನ ಜಪ್ತ್ವೈವ ಮೂರ್ತೌ ಸಂಕೋಚಯೇದ್ಧರಿಮ್ ॥ ೧೨೯ ॥ ಅರ್ಥ - ಜೀರ್ಣವಾದ ದೇವಾಲಯವನ್ನು ಪುನಃ ಕಟ್ಟಿಸುವ ಸಂದರ್ಭದಲ್ಲಿ, ಪ್ರತಿಮೆಯಲ್ಲಿಯೂ, ಗರ್ಭಗೃಹಾದಿ ಮಂಟಪ ಮೊದಲಾದವುಗಳಲ್ಲಿ ಸನ್ನಿಹಿತನಾದ ಭಗವಂತನನ್ನು ತತ್ತ್ವ- ದೇವತಾಮಂತ್ರ ಹಾಗೂ ಆಯಾಯ ಮೂರ್ತಿಮಂತ್ರಗಳನ್ನು ಪ್ರತಿಷ್ಠಾಕ್ರಮಕ್ಕಿಂತ ವ್ಯುತ್ಕ್ರಮವಾಗಿ ಜಪಿಸಬೇಕು. ಹಾಗೂ ಭಗವಂತನನ್ನು ಕೇವಲ [^1]. ಆಚಾರ್ಯನು ಪ್ರತಿಷ್ಠೆ ಮಾಡಿದ ಪೂರ್ಣಫಲವನ್ನು ಯಜಮಾನನಿಗೆ ತಲುಪುವಂತೆ ಆಶೀರ್ವದಿಸುವುದು. ಫಲಂ ಸಮರ್ಪಯೇತ್ ತಸ್ಮೈ ಪರಿತುಷ್ಟಮನಾಃ ಗುರುಃ। [^2]. ಪ್ರತಿಷ್ಠೆಯ ಕಾಲದ ಏಳು ದಿವಸಗಳಲ್ಲಿ ನೂರು ಪ್ರಸ್ತಕ್ಕೆ ಕಮ್ಮಿ ಇರದಂತೆ ಪಾಯಸಾದಿ ಭಕ್ಷ್ಯಗಳಿಂದ ಶ್ರೀಹರಿಗೆ ನೈವೇದ್ಯ ಮಾಡಬೇಕು. ಪಾಯಸಾದಿಗಳು ಇರಲೇಬೇಕು. ಹಾಗೆಯೇ ಸಘೃತಂ, ಸಸಿತಾದಿಕಮ್ ಎಂದು ಹೇಳಿದ್ದರಿಂದ ಪಂಚಾಮೃತಾದಿ ಗಳೂ ನಡೆಯಬೇಕೆಂದು ಸೂಚಿತವಾಗುತ್ತದೆ. ಪಂಚಾಮೃತಂ ಚ ಕುರ್ವೀತ ದಿನೈರೇತೈಃ ದ್ವಿಜೋತ್ತಮಃ(?) ಪ್ರತಿಮೆಯಲ್ಲಿಯೇ ಸನ್ನಿಹಿತನಾಗಿರುವಂತೆ ಪ್ರಾರ್ಥಿಸಬೇಕು[^1]. [^1]. ದೇವಾಲಯವು ಜೀರ್ಣವಾದರೆ ಉದ್ಧಾರವನ್ನು ಇಲ್ಲಿ ಹೇಳಿದ್ದರೂ 'ಚ'ಶಬ್ದದಿಂದ ಪ್ರತಿಮೆ ಜೀರ್ಣವಾಗಿದ್ದರೂ ಅದರ ಉದ್ಧಾರವನ್ನೂ ತಿಳಿಯಬೇಕು. - ಅಜೀರ್ಣ ಧ್ರುವಬೇರೇ ತು ಜೀರ್ಣೇ ಧಾಮನಿ ತಾನ್ ಸ್ಥಿತಾನ್ । ದೇವಾನ್ ದೇವಪರೀವಾರಾನ್ ಮೂಲಬೇರೇ ನಿವೇಶಯೇತ್ । ಪ್ರಾಸಾದೇ ಪತಿತೇ ಹರ್ಮ್ಯೇ ಗೋಪುರೇ ಮಂಟಪಾದಿಕೇ। ತದಕಾರಂ ಚ ತದ್ದ್ರವ್ಯಂ ತನ್ಮಾನಂ ತತ್ರ ಕಾರಯೇತ್ ॥ ಪ್ರಾಚೀನ ಋಷಿ, ಮುನಿಗಳು ಪ್ರತಿಷ್ಠಾಪಿಸಿದ ಪ್ರತಿಮೆಗಳ ಅಂಗಾಂಗಗಳು ಮುರಿದಿದ್ದರೆ ಪ್ರತಿಮೆಯನ್ನೇ ಬದಲಿಸದೆ ಮುರಿದ ಅಂಗವನ್ನು ಸುವರ್ಣದಿಂದ ಮಾಡಿಸಬೇಕು. ನಂತರ ಕಲಾ- ಕರ್ಶಣಮಾಡಿ ಪ್ರತಿಮೆಯಲ್ಲಿರುವ ಜೀವಕಲೆಯನ್ನು ಕಲಶೋ- ದಕದಲ್ಲಿ ಆವಾಹಿಸಿ, ಮುರಿದ ಅಂಗವನ್ನು ಸರಿಮಾಡಿಸಿ, ನಂತರ ಅಧಿವಾಸಾದಿಗಳಿಂದ ಬಿಂಬಶುದ್ಧಿಮಾಡಿ, ನಂತರ ಯಥಾವಿಧಿ ಪ್ರತಿಷ್ಠಾಪಿಸಬೇಕು. ಪ್ರಾಸಾದ ಹಾಗೂ ಪ್ರತಿಮೆ ಎರಡೂ ಶಿಥಿಲವಾಗಿದ್ದರೆ ಹೊಸದಾಗಿ ತಾತ್ಕಾಲಿಕವಾಗಿ ತಯಾರಿಸಿದ ಗರ್ಭಗೃಹದಲ್ಲಿ ಪೂಜಿಸುತ್ತಿರ- ಬೇಕು. ಪ್ರತಿಮಾಶೈಥಿಲ್ಯದ ಅನೇಕವಿಧಗಳು ಪ್ರತಿಷ್ಠಿತಸ್ಥಾನದಿಂದ ಬೇರೆಡೆ ಹೋಗುವುದು, ಪ್ರವಾಹದಿಂದ ಅನ್ಯತ್ರ ಹೊರಟಿದ್ದು, ಚೋರಾದಿಗಳು ಕಿತ್ತುಹಾಕಿದ್ದು ಇಂತಹ ಪ್ರತಿಮೆಗಳನ್ನು ಪುನಃ ಸ್ಥಾಪಿಸಬಹುದು. ಪೂಜಾದಿಗಳನ್ನು ಮಾಡಲು ಶಕ್ಯವಲ್ಲದ ಸ್ಥಳದಲ್ಲಿರುವ ಪ್ರತಿಮೆ ದಿಙ್ಮೂಢಪ್ರತಿಮೆಯೆನಿಸಿದೆ. ಹಳ್ಳದಲ್ಲಿ ಬಿದ್ದಿರುವ ಪ್ರತಿಮೆಯಾಗಲೀ, ಮಹಾನುಭಾವರು ಪ್ರತಿಷ್ಠಾಪಿಸಿದ್ದರೆ ಅದು ಜೀರ್ಣವಾಗಿರಲಿ, ಭಗ್ನವಾಗಿರಲೀ, ಅದನ್ನು ಜೀರ್ಣೋದ್ಧಾರಕ್ರಮದಿಂದ ವಿಧಿವತ್ತಾಗಿಯೂ ಆ ಸ್ಥಾನದಿಂದ ಪಲ್ಲಟಗೊಳಿಸಬಾರದು. ಸಿದ್ಧೈಸ್ತು ಮುನಿಭಿರ್ಧೇವೈಃ ತತ್ವವಿದ್ಭಿ ಪ್ರತಿಷ್ಠಿತಮ್ । ಜೀರ್ಣಂ ವಾಪ್ಯಥವಾ ಭಗ್ನಂ ವಿಧಿನಾಪಿ ನ ಚಾಲಯೇತ್ ॥ ಇತರ ಪ್ರತಿಷ್ಠೆಯಾದ ಪ್ರತಿಮೆಗಳು ಅಂಗಹೀನವಾಗುವುದು, ಭಗ್ನವಾಗುವುದು, ಪೀಠಾದಿಗಳು ಭಗ್ನವಾಗಿರುವುದು, ಕಳ್ಳಕಾಕ- ರಿಂದ ಶಿಥಿಲಗೊಂಡಿರುವ ಪ್ರತಿಮೆಗಳಲ್ಲಿರುವ ದೈವಶಕ್ತಿಯು ಅನ್ಯತ್ರ ನೆಲೆಸುತ್ತದೆ. ತುಂಡಾದ ಲಿಂಗಾದಿ ಪ್ರತೀಕಗಳಲ್ಲಿ ಭೂತ- ಪ್ರೇತಗಳು ವಾಸಿಸುತ್ತವೆ. ದೇವತೆ ಹೋದಾಗ ನಿಃಸತ್ವವಾದ ಪ್ರತಿಮೆಗಳನ್ನು ಬ್ರಹ್ಮರಾಕ್ಷಸರು ಆಶ್ರಯಿಸುತ್ತಾರೆ. ಖಂಡಿತಂ ಚೂರ್ಣಿತಂ ಬಿಂಬಂ ಪ್ರೇತಾದ್ಯಾಃ ಆಶ್ರಯಂತಿ ಯತ್ ಬಿಂಬಾದ್ಯಂ ಸತ್ವಶೂನ್ಯತ್ವಾತ್ ತಥಾ ಬ್ರಹ್ಮಾದಿರಾಕ್ಷಸಾಃ । ಕರ್ತುಃ ನೃಪಾಣಾಂ ರಾಷ್ಟ್ರಸ್ಯ ತದ್ಗ್ರಾಮಸ್ಯ ವಿಶೇಷತಃ । ನೂತನದೇವಾಲಯ ಉಕ್ತೇನೈವ ವಿಧಾನೇನ ತದರ್ಧವಿಭವೈಃ ಸುಧೀಃ । ಪಾದಮಾತ್ರೈರಪಿ ಹರಿಂ ಸ್ನಾಪಯಿತ್ವಾ ಯಥೋದಿತಮ್ ॥ ೧೩೦॥ ಅರ್ಥ - ಜ್ಞಾನಿಯು ಹಿಂದೆ ಹೇಳಿದ ವಿಧಿಯಿಂದ ಕಲಶಾದಿ- ಗಳನ್ನು ಇಟ್ಟು ಪ್ರತಿಷ್ಠಾಕಾಲದಲ್ಲಿ ವ್ಯಯಮಾಡಬಹುದಾದ (ವೈಭವದ?) ಅರ್ಧ ಅಥವಾ ಕಾಲುಭಾಗದಷ್ಟು ಉಪಚಾರ- ಗಳಿಂದಾಗಲೀ ಶಾಸ್ತ್ರೋಕ್ತಪ್ರಕಾರ ಅಭಿಷೇಕಾದಿಗಳನ್ನು ಮಾಡಿ ದೇವಾಲಯನಿರ್ಮಾಣವಾಗುವವರೆಗೂ ಅನ್ಯತ್ರ ಸ್ಥಾಪಿಸಿ ಪೂಜಾದಿಗಳನ್ನು ಅರ್ಪಿಸುತ್ತಿರಬೇಕು. ಪೀಡಾಂ ಕುರ್ವಂತಿ ತೇ ಹ್ಯುಗ್ರಾಂ ದುರ್ಭಿಕ್ಷಮರಣಾದಿಕಮ್ । ತಸ್ಮಾತ್ ಸರ್ವಪ್ರಯತ್ನೇನ ಕುರ್ಯಾದ್ ಉದ್ಧರಣಕ್ರಿಯಾಮ್ । ಲೋಹಾದ್ಯಂ ಛಿನ್ನಭಿನ್ನಾಂಗಂ ಸದ್ಯಮಸ್ಥಾಪಯೇತ್ ಪುನಃ ॥ ಹೀಗೆ ಭಿನ್ನಭಿನ್ನಾಂಗವುಳ್ಳ ದಾರ್ವಾದಿಪ್ರತಿಮೆಗಳನ್ನು ಜೀರ್ಣೋದ್ಧಾರಮಾಡಿದ ನಂತರ ಪೂರ್ಣವಾಗಿ ತ್ರುಟಿತವಾಗಿ- ದ್ದರೆ, ದಾರು ಪ್ರತೀಕವಾಗಿದ್ದರೆ ಅದನ್ನು ಪೂರ್ಣವಾಗಿ ತ್ಯಜಿಸಿ ಹೊಸ ಪ್ರತಿಮೆಯನ್ನು ಪೂರ್ವೋಕ್ತವಿಧಿಯಿಂದ ಪ್ರತಿಷ್ಠಾಪಿಸ- ಬೇಕು. ತ್ರುಟಿತ ಪ್ರತಿಮೆಯು ಮರದ್ದಾಗಿದ್ದರೆ ಅಗ್ನಿಯಲ್ಲಿ ಹಾಕ- ಬೇಕು. ಕಲ್ಲಿನ ಪ್ರತಿಮೆಯಾದರೆ ನೀರಿನಲ್ಲಿ ತ್ಯಜಿಸಬೇಕು. ಅಥವಾ ವಸ್ತ್ರಾದಿಗಳಿಂದ ಆಚ್ಛಾದಿಸಿ ಶಂಖಾದಿವಾದ್ಯಗಳಿಂದ ಸಹಿತವಾಗಿ ಸಮುದ್ರಾದಿಗಳಲ್ಲಿ ಹಾಕಬೇಕು. ಅತಿಜೀರ್ಣಿತಾಮವ್ಯಂಗಾಂ(?) ದಾರವೀಂ ಶೈಲಜಾಮಪಿ । ಪರಿತ್ಯಜ್ಯ ನ್ಯಸೇದನ್ಯಾಂ ಪೂರ್ವೋಕ್ತವಿಧಿನಾ ಗುರುಃ । ದಾರವೀಂ ದಾಹಯೇದ್ ವಹ್ನೌ ಶೈಲಜಾಂ ಪ್ರಕ್ಷಿಪೇತ್ ಜಲೇ। ಯಾನಮಾರೋಪ್ಯ ಜೀರ್ಣಂ ವಾಽಽಚ್ಛಾದ್ಯ ವಸ್ತ್ರಾದಿನಾ ಗುರುಃ । ನೀತ್ವಾsಗಾಧಂ ಜಲಂ ರಮ್ಯಂ ಭಾಗೀರಥ್ಯಾಮಥಾರ್ಣವೇ ॥ - ಪಂಚರಾತ್ರ. ಬಾಲಾಲಯನಿರ್ಮಾಣ - ಇಂದ್ರ-ಈಶಾನದಿಕ್ಕಿನಲ್ಲಿ, ಸೋಮ-ಈಶಾನದಿಕ್ಕು, ಅಗ್ನಿ -ಯಮ, ವಾಯು-ಸೋಮರ ಮಧ್ಯದಲ್ಲಿ ಯಾಗಲೀ ಬಾಲಾಲಯ ನಿರ್ಮಾಣ ಮಾಡಬೇಕು. ಅಲ್ಲಿ ಏಳು ಮೊಳ ಅಥವಾ ಏಳು ಮೊಳದ ಜಾಗದಲ್ಲಿ ಬಾಲಾಲಯವನ್ನು ಕಲ್ಪಿಸಬೇಕು. ಮೂಲಮಂದಿರದ ಜಲಾಶಯವಿರುವ ದಿಕ್ಕಿನಲ್ಲಿ ಬಾಲಾಲಯ ನಿರ್ಮಿಸಬೇಕು. ಬಾಲಾಲಯದಲ್ಲಿ ಶೈಲಾದಿಗಳಿಂದ ಪ್ರತಿಮೆ- ಯನ್ನು ಮಾಡಿಸಬೇಕು. ಅದರಲ್ಲಿ ತತ್ವಮಂತ್ರಗಳನ್ನು ವ್ಯುತ್ಕ್ರಮದಿಂದ ಆವಾಹಿಸಬೇಕು. ಉತ್ಸವವಿಧಿ ಏತೇನೈವ ವಿಧಾನೇನ ಕೃತ್ವಾ ದೇವಾಲಯಂ ಪುನಃ । ಸ್ನಾಪಯೇತ್ ಪುಂಡರೀಕಾಕ್ಷಂ ದ್ವಿಗುಣೇನ ಪ್ರವಾಹಣಾತ್ ॥೧೩೧॥ ವಿಭವೇನಾನುಲೋಮೇನ ಜಪೇನ್ಮಂತ್ರಾನ್ ಪುನಸ್ತಥಾ । ಆರಾಧಯೇಜ್ಜಗನ್ನಾಥಂ ಧ್ಯಾಯನ್ ಭಕ್ತ್ಯಾ ಯಥೋದಿತಮ್ ॥೧೩೨ ॥ ಯಾತ್ರಾऽಪಿ ಪೂರ್ವವತ್ ತತ್ರಾಪ್ಯುತ್ಸವೇಷು ಚ ಸರ್ವಶಃ । ಕಲಶೋಕ್ತವಿಧಾನೇನ ಪೂಜಾ ಬಲಿಹೃತಿಸ್ತಥಾ ॥ ೧೩೩ ॥ ಉತ್ಸವೇಷು ಸದಾ ಕಾರ್ಯಾ ಕಲಶಶ್ಚೋತ್ಸವಾದನು । ಯಾತ್ರಾ ಸ್ನಾನಂ ಚ ಕರ್ತವ್ಯಂ ಸಮ್ಯಗುಕ್ತವಿಧಾನತಃ ॥ ೧೩೪ ॥ ಅರ್ಥ- ನಂತರ ಹಿಂದೆ ಹೇಳಿದ ಕ್ರಮದಂತೆ ದೇವಾಲಯ ನಿರ್ಮಿಸಿ ಭಗವಂತನನ್ನು ಪ್ರತಿಷ್ಠಾಪಿಸಿ, ಪ್ರತಿಮೋದ್ಧಾರಕಾಲದಲ್ಲಿ ಮಾಡಿದ ವೈಭವಕ್ಕಿಂತ ಎರಡು ಪಟ್ಟು ವೈಭವದಿಂದ ಹವನ ಹೋಮಾದಿಗಳನ್ನು ಮಾಡಬೇಕು. ತತ್ವದೇವತಾ ತತ್ತನ್ಮೂರ್ತಿ ಮಂತ್ರಗಳನ್ನು ಪ್ರಥಮಾಧ್ಯಾಯದಲ್ಲಿ ನಿರೂಪಿಸಿದಂತೆ ಅನುಲೋಮವಾಗಿ (ಸೃಷ್ಟಿಕ್ರಮ) ಜಪಿಸಿ, ಪ್ರತಿಷ್ಠೆಯ ಕಾಲದ ಕಲಶಸ್ಥಾಪನಾದಿಗಳನ್ನು ಮಾಡಿ ಭಕ್ತಿಯಿಂದ ಪೂಜಿಸಬೇಕು. ಇದೇ ರೀತಿ ವಾರ್ಷಿಕಉತ್ಸವ[^1] ಮಾಡುವಾಗಲೂ ಕಲಶ ಸ್ಥಾಪನೆ, ಹೋಮಾದಿ [^1] ಉತ್ಸವಪ್ರಯೋಗ ಗರುಡಾದಿ ಪ್ರತಿಷ್ಠಾಗೆ ಮೊದಲು ಸುಮುಹೂರ್ತದಲ್ಲಿ ವಿಷ್ವಕ್ಸೇನ ಗರುಡಾದಿಗಳ ಪೂಜೆ ಮಾಡಬೇಕು. ಪ್ರತಿಮೆಯನ್ನು ಅಲಂಕರಿಸಿ ಪಲ್ಲಕ್ಕಿಯಲ್ಲಿ ಕೂಡಿಸಿ, ವೇದಾದಿಮಂಗಳಘೋಷದಿಂದ ಪೂರ್ವೋತ್ತರಾದಿ ದಿಕ್ಕುಗಳಿಗೆ ಹೋಗಬೇಕು. ಪೀಠದಲ್ಲಿ ಕುಳ್ಳಿರಿಸಿ ಹೀಗೆ ಸಂಕಲ್ಪಿಸಬೇಕು. 'ಶುಭತಿಥೌ ಅಸ್ಯ ದೇವದೇವಸ್ಯ ಶ್ರೀಭೂದುರ್ಗಾಸಮೇತಸ್ಯ ಭಗವತೋ ವಾಸುದೇವಸ್ಯ ನವದಿನ (ಸಪ್ತದಿನ/ತ್ರಿದಿನ) ಮಹೋತ್ಸವಕರ್ಮಕುರ್ವಾಣಃ ತದಂಗ- ಭೂತಂ ಮೃತ್ಸಂಗ್ರಹಣಂ ಕರಿಷ್ಯೇ' । ತದಂಗ ಶುದ್ಧಪುಣ್ಯಾಹ- ವಾಚನಂ ಕರಿಷ್ಯೇ ' . ಹೀಗೆ ಸಂಕಲ್ಪಿಸಿದನಂತರ ಅಂಕುರಾರ್ಪಣ, ವಾಸ್ತುಪೂಜಾದಿಗಳನ್ನು, ಪರ್ಯಗ್ನಿಕರಣಾಂತವಾಗಿ ಮಾಡಬೇಕು. ಉತ್ಸವದಿನ ಪ್ರಾತಃಕಾಲದಲ್ಲಿ ಆಚಾರ್ಯನು ನಿತ್ಯಾಹ್ನಿಕವನ್ನು ಮುಗಿಸಿ, ತಿಥ್ಯಾದಿಗಳನ್ನು ಹೇಳಿ, 'ಶ್ರೀಭಗವತಃ ನವದಿನಪರ್ಯಂತಂ ಕಲಶೋಕ್ತವಿಧಾನೇನ ಪೂಜಾಬಲಿದಾನಂ ಯಾನಮಾರೋಪ್ಯ ಯಾತ್ರಾದ್ಯುತ್ಸವಂ ಕರಿಷ್ಯೇ' ಎಂದು ಸಂಕಲ್ಪಿಸಿ, ವಾಸ್ತುಪೂಜೆ, ತದಂಗ ಚಂಡ-ಪ್ರಚಂಡ, ವಿಷ್ವಕ್ಸೇನ ಗರುಡಾದಿಗಳ ಪ್ರತಿಷ್ಠೆ ಮಾಡಬೇಕು. ದ್ವಾರದಲ್ಲಿ ಚಂಡಪ್ರಚಂಡರನ್ನೂ, ಕ್ಷೇತ್ರಪಾಲಕ, ಇಂದ್ರಾದಿ ಅಷ್ಟದಿಕ್ಪಾಲಕರನ್ನೂ, ಆಯಾಯಾ ದಿಕ್ಕಿನಲ್ಲಿ ಸ್ಥಾಪಿಸಬೇಕು. ನಂತರ 'ಅಸ್ಮಿನ್ ಉತ್ಸವಕರ್ಮಣಿ ರಕ್ಷಾಬಂಧನಂ ಕರಿಷ್ಯೇ' ಎಂದು ಪುಣ್ಯಾಹ ಮಾಡಿ ಆ ನೀರಿನಿಂದ ಸ್ಥಳಶುದ್ಧಿ ಮಾಡಬೇಕು. 'ಸಹಸ್ರಾರ ಹುಂ ಫಟ್' ಎಂದು ಏಳು ಬಾರಿ ಅಭಿಮಂತ್ರಿಸಿ, ದೇವನ ಬಲಗೈಗೂ, ಶ್ರೀಭೂದೇವಿಯರಿಗೆ ವಾಮಹಸ್ತದಲ್ಲೂ ಬಂಧಿಸ- ಬೇಕು. ಓಂ ನಮೋ ನಾರಾಯಣಾಯ ಎಂದು ಪ್ರತಿಮೆಯನ್ನು ಮುಟ್ಟಿ ನೂರೆಂಟು ಬಾರಿ ಜಪಿಸಬೇಕು. 'ಯೋ ಬ್ರಹ್ಮಾ ಬ್ರಹ್ಮಣ ಉಜ್ಜಹಾರ' ಇತ್ಯಾದಿ ಘೃತಸೂಕ್ತದಿಂದ ಅಭಿಮಂತ್ರಿಸಿ, 'ಬೃಹಾತ್ಸಾಮಕ್ಷತ್ರಭೃದ್' ಇತ್ಯಾದಿ ಮಂತ್ರದಿಂದ ಧೂಪಪಾತ್ರೆಯ ಭಸ್ಮದಿಂದ ರಕ್ಷೆಯನ್ನಿಡಬೇಕು. ನಂತರ ಅರ್ಘ್ಯಪಾದ್ಯಾದಿಗಳಿಂದ ಅರ್ಚಿಸಿ ಅಪೂಪಾದಿ ನೈವೇದ್ಯ ಮಾಡಿ, 'ಶತಂ ಜೀವ ಶರದೋ' 'ಯೇ ಯಜ್ಞೇನ' 'ತ್ರ್ಯಂಬಕಂ ಯಜಾಮಹೇ' ಇತ್ಯಾದಿ ಮಂತ್ರ- ಗಳಿಂದ ರಕ್ಷೆಯನ್ನು ಅಭಿಮಂತ್ರಿಸಿ, ಬಲಗೈಗೆ ಕಟ್ಟಬೇಕು. ನಂತರ ಸಮವಾಗಿ ಮಿಲಿತವಾದ ಪಂಚಗವ್ಯದಿಂದ ಪುರುಷಸೂಕ್ತದಿಂದ ಪಠಿಸುತ್ತಾ ಚಂಡ-ಪ್ರಚಂಡ, ಕ್ಷೇತ್ರಪಾಲಕ, ಗರುಡ, ವಿಷ್ವಕ್ಸೇನ, ಗಣೇಶ, ಅಷ್ಟದಿಕ್ಪಾಲಕರನ್ನು ಪ್ರೋಕ್ಷಿಸಬೇಕು. ನಂತರ ಪ್ರತಿಷ್ಠಾವಿಧಿಯಲ್ಲಿ ಹೇಳಿದಂತೆ ಕಲಶಗಳನ್ನು ಪರಿವಾರ ದೇವತಾಕಲಶಗಳನ್ನು ಸ್ಥಾಪಿಸಿ, ಉಪಚಾರಪೂಜೆ, ತತ್ವನ್ಯಾಸಾದಿ ಗಳಿಂದ ಪೂಜಿಸಿ, ಕುಂಡದಲ್ಲಿ ಅಗ್ನಿಪ್ರತಿಷ್ಠಾಪನಾಪೂರ್ವಕ ನವಗ್ರಹ ಹೋಮಮಾಡಿ ನಂತರ ಹಿಂದೆ ತಿಳಿಸಿದಂತೆ ಹತ್ತು- ಸಾವಿರ ಅಥವಾ ನೂರೆಂಟು ಬಾರಿ ವಿಷ್ಣುಗಾಯತ್ರಿಯಿಂದ ಸಮಿತ್ತು, ಚರು, ಆಜ್ಯಾದಿಗಳಿಂದ ಹೋಮಿಸಬೇಕು. ಈ ಹೋಮ ಲಕ್ಷಸಂಖ್ಯೆಯಲ್ಲಿ ಮಾಡುವುದಿದ್ದರೆ ಒಂಭತ್ತು ದಿವಸಗಳಲ್ಲಿಯೂ ವಿಭಾಗಿಸಿ ಹೋಮಿಸಬೇಕು. ಇದೇ ರೀತಿ ಹತ್ತು ಸಾವಿರ ಮಾಡುವು- ದಾದರೂ ವಿಭಾಗಿಸಿ ಹೋಮಿಸುವುದು. ಪುರುಷಸೂಕ್ತದಿಂದ ಹೋಮವನ್ನು ಒಂಭತ್ತು ದಿವಸಗಳಲ್ಲಿಯೂ ಮಾಡಬೇಕು. ಪರಿವಾರದೇವತೆಗಳ ಮಂತ್ರಗಳಿಂದ ನೂರೆಂಟು ಬಾರಿ ಹೋಮಿಸ ಬೇಕು. ನಂತರ ಎಲ್ಲ ದೇವತೆಗಳಿಗೂ ಪ್ರಾಣಪ್ರತಿಷ್ಠಾ ಮೂಲಕ ಧ್ಯಾನಾವಾಹನಾದಿಗಳನ್ನು ಸಮರ್ಪಿಸಬೇಕು. ಚಕ್ರಾಬ್ಜಕಲಶ- ಗಳಿಂದ ದೇವರನ್ನು ಅಭಿಷೇಕಿಸಿ, ವಾದ್ಯಘೋಷಗಳಿಂದ ಆಯಾಯ ಪ್ರತಿಮೆಗಳಿಗೂ ಪ್ರೋಕ್ಷಿಸಬೇಕು. ಧ್ವಜಸಮೀಪ ಬಂದು ಹಿಂದಿನಂತೆ ಪ್ರೋಕ್ಷಿಸಿ, ಉಪಚಾರಪೂಜೆ ಮಾಡಿ ಘಂಟಾನಾದ- ಪೂರ್ವಕ 'ಸುಪರ್ಣೋಸಿ ಗರುತ್ಮಾನ್' (ತೈ 4/1/19), 'ತ್ರಿವೃತ್ತೋ ಶಿರೋ ಗಾಯತ್ರಂ ಚಕ್ಷುಸ್ತೋಮ ಆತ್ಮಾ' ಇತ್ಯಾದಿ ಮಂತ್ರಗಳಿಂದ ಗರುಡನ ಚಿತ್ರವಿರುವ ಪತಾಕೆಯನ್ನು ಏರಿಸಬೇಕು. ಇದು ದೇವತೆ ಗಳನ್ನು ಉತ್ಸವಕ್ಕೆ ಆಹ್ವಾನಪತ್ರಿಕೆ ಕಳುಹಿಸಿದಂತೆ. ಧ್ವಜಸ್ತಂಭ- ದಲ್ಲಿ ದರ್ಭೆಕೂರ್ಚ, ಅಶ್ವತ್ಥಪಲ್ಲವಾದಿಗಳನ್ನು ಕಟ್ಟಬೇಕು. ನಂತರ ಗ್ರಾಮದಿಂದ ಹೊರಗೆ ಹೋಗಿ, ಮೂಲಪ್ರತಿಮೆಯಲ್ಲಿ ಮೂಲಮಂತ್ರದಿಂದ ಆವಾಹಿಸಿ, ಅಷ್ಟದಿಕ್ಪಾಲಕಾದಿಗಳಿಗೆ ಬಲಿಯನ್ನು ನೀಡಿ ಉತ್ಸವವನ್ನು ಮಾಡಬೇಕು. ನಂತರ ಅವಭೃಥಸ್ನಾನ ಧ್ವಜಾವರೋಹಣ ಕಾರ್ಯ ಮಾಡಿ ಭಗವಂತ- ನಲ್ಲಿ ಗಳು ಪೂಜೆ, ಪಾರ್ಷದರಿಗೆ ಬಲಿಪ್ರದಾನ, ಕಡೆಯಲ್ಲಿ ಅವಭೃಥ, ಬ್ರಾಹ್ಮಣ ಭೋಜನಾದಿಗಳು ನಡೆಯಬೇಕು. ಸಂಪ್ರೋಕ್ಷಣವಿಧಿ ಚೋರಚಂಡಾಲಪತಿತಶ್ವೋದಕ್ಯಾದಿಪ್ರವೇಶನೇ । ಶವಾದ್ಯುಪಹತೌ ಚೈವ ಪೂಜಾವಿಚ್ಛೇದನೇ ತಥಾ II ೧೩೫ ॥ ಸ್ನಪನೋಕ್ತೇನ ಮಾರ್ಗೇಣ ಪ್ರಾಯಶ್ಚಿತ್ತವಿಧಿಃ ಸ್ಮೃತಃ । ಅರ್ಥ - ಕಳ್ಳರು, ಚಂಡಾಲರು, ಪತಿತರು, ಪಾಪಿಗಳು, ನಾಯಿ, ಬೆಕ್ಕು, ಕತ್ತೆ ಮೊದಲಾದ ಪ್ರಾಣಿಗಳು, ರಜಸ್ವಲೆಯರಾದ ಸ್ತ್ರೀಯರು, ದೇವಾಲಯಪ್ರವೇಶ ಮಾಡಿದರೆ ಆಗ ಸಂಪ್ರೋಕ್ಷಣ ವಿಧಿಯಿಂದ ಶುದ್ಧಿ ಮಾಡಬೇಕು. ಹಾಗೆಯೇ ಶವಾದಿಗಳಿಂದ ದೇವಾಲಯದ ಪರಿಸರ ಮಲಿನವಾದಾಗಲೂ[^1] ಸಂಪ್ರೋಕ್ಷಣ ಸಮರ್ಪಿಸಬೇಕು. [^1]. ವಿಶೇಷಾಂಶ - ಕಳ್ಳರು ದೇವಾಲಯಕ್ಕೆ ನುಗ್ಗಿ ದೇವರನ್ನು ಮುಟ್ಟಿ ಆಭರಣಾದಿಗಳನ್ನುಅಪಹರಿಸಿದಾಗ, ಬ್ರಹ್ಮಹತ್ಯಾದಿ- ಗಳಿಂದ ಕೂಡಿದ ಪಾತಕಿಗಳ ಪ್ರವೇಶವಾದಾಗಲೂ, 'ಉದಕ್ಯಾ' ಎಂದರೆ ರಜಸ್ವಲೆಯು. ಆದಿಪದದಿಂದ ಕತ್ತೆ, ಕಾಗೆ, ಗೂಬೆ ಮೊದಲಾದವುಗಳನ್ನು ಇಟ್ಟುಕೊಳ್ಳಬೇಕು. ಇಲ್ಲಿ ಕೇವಲ ಅಭಿಷೇಕವನ್ನು ಮಾತ್ರ ಹೇಳಿದ್ದರಿಂದ ಪಂಚಗವ್ಯಾದಿ ಅಧಿ- ವಾಸನ ವಾಗಲೀ, ಅಂಕುರಾರ್ಪಣಾದಿಗಳು ಬೇಕಾಗಿಲ್ಲ. 'ಜಲಾಧಿವಾಸರಹಿತಂ ನೇತ್ರೋನ್ಮೀಲನವರ್ಜಿತಾ'. ಸಂಪ್ರೋಕ್ಷಣವಿಧಿ ಆಚಮನ, ಪವಿತ್ರಪಾಣಿಯಾಗಿ ಪ್ರಾಣಾಯಾಮಮಾಡಿ 'ಶುಭತಿಥೌ ಅಸ್ಯಾಃ ಪ್ರತಿಮಾಯಾಃ ಚೋರಚಂಡಾಲಪತಿತಾದಿಜನಿತಸ್ಪೃಷ್ಟಾ ಸ್ಪೃಷ್ಟದೋಷಪರಿಹಾರಾರ್ಥಂ ತಥಾ ಪ್ರತಿಮಾಯಾಂ ಭಗವತ್ ಸನ್ನಿಧಾನಸಿದ್ಧ್ಯರ್ಥಂ ಸಂಪ್ರೋಕ್ಷಣಂ ಕರಿಷ್ಯೇ' ಎಂದು ಸಂಕಲ್ಪಿಸಿ, ಗಣಪತಿಪೂಜೆ, ವರುಣಪೂಜೆ, ಪುಣ್ಯಾಹ, ಋತ್ವಿಕ್‌- ವರಣ, 'ಶುಚೀವೋ ಹವ್ಯಾ' ಇತ್ಯಾದಿ ಮಂತ್ರದಿಂದ ಯಾಗ- ಭೂಮಿಯನ್ನು ಶುದ್ಧಿಮಾಡಿ, 'ಸ್ವಸ್ತ್ಯಯನಂ' ಇತ್ಯಾದಿ ಮಂತ್ರ- ದಿಂದ ಬಿಳಿಸಾಸಿವೆಯನ್ನುಎರಚಿ, ದೇವರ ಮುಂದೆ ಗೋಮಯಾ- ದಿಗಳಿಂದ ಶುದ್ಧಿಮಾಡಿ, ಚಕ್ರಾಬ್ಜಮಂಡಲವನ್ನು ಬರೆಯಬೇಕು. ಅದರ ಮೇಲೆ ಎಂಟು ದಿಕ್ಕುಗಳಲ್ಲಿಯೂ ತೊಗರಿ, ಉದ್ದು, ಹುರುಳಿ, ಯವ, ಗೋಧಿ, ಅವರೆ, ಕಡಲೆ, ಅಲಸಂದೆಗಳನ್ನು ಇಡಬೇಕು. ಮಧ್ಯ ಅಕ್ಕಿಯ ರಾಶಿಯಲ್ಲಿ ಬ್ರಹ್ಮನ ಕಲಶವನ್ನು ಸ್ಥಾಪಿಸಿ, ಉಳಿದ ಎಂಟು ದಿಕ್ಕುಗಳಲ್ಲಿ ಕಲಶಸ್ಥಾಪಿಸಬೇಕು. ಪೂರ್ವಕಲಶದಲ್ಲಿ ಅರಿಷಿಣದ ನೀರು, ಆಗ್ನೇಯಕಲಶದಲ್ಲಿ ಪಂಚಾಮೃತ, ದಕ್ಷಿಣಕಲಶದಲ್ಲಿ ಪಂಚ ತೊಗಟೆ, ಪಂಚಪಲ್ಲವ ಹಾಗೂ ಸಪ್ತಮೃತ್ತಿಕೆಗಳು, ನೈರುತ್ಯ ಕಲಶದಲ್ಲಿ ಜಾಜಿ, ಕೋಷ್ಠ, ಏಲಾ, ಕರ್ಪೂರ, ಕಸ್ತೂರಿ, ಲವಂಗ, ಕೇಸರಿ, ಪಿಪ್ಪಲಿಗಳು; ಪಶ್ಚಿಮಕಲಶದಲ್ಲಿ ಸುವರ್ಣಾದಿಗಳು, ವಾಯವ್ಯಕಲಶದಲ್ಲಿ ಪಂಚಗವ್ಯ, ಉತ್ತರದಲ್ಲಿ ನಾರಿಕೇಲೋದಕ, ಈಶಾನ್ಯಕಲಶದಲ್ಲಿ ಅನೇಕ ಔಷಧಿಗಳನ್ನು ಹಾಕಿ ಕಲಶಗಳನ್ನು ಸ್ಥಾಪಿಸಬೇಕು. ಬ್ರಹ್ಮಕಲಶದಲ್ಲಿ ಶುದ್ಧೋದಕವನ್ನು ಹಾಕಿ ವರುಣಪೂಜೆ, ಕಲಶದೇವತೆಗಳ ಆವಾಹನೆಗಳನ್ನು ಪ್ರತ್ಯೇಕವಾಗಿ ಮಂತ್ರಗಳಿಂದ ಆವಾಹಿಸಬೇಕು. ಇಲ್ಲಿ ವಿನಿಯೋಗಿಸಬೇಕಾದ ಮಂತ್ರಗಳು - (1) ಸಮುದ್ರಜ್ಯೇಷ್ಠಾ' (2) ಪವಸ್ವಸೋಮ ಮಂದನಾ, (3) ಇಮಂ ಮೇ ಗಂಗೇ, (4) ಸುಮಿತ್ರ್ಯಾ ನ ಆಪ ಔಷಧಯಃ, (5) ಇಮೇ ಭೋಜಾಃ , (6) ಶಂ ನ ಇಂದ್ರಾಗ್ನಿ, (7) ಭದ್ರಂ ಕರ್ಣೇಭಿಃ, (8) ಆತೂನ ಇಂದ್ರಕ್ಷುಮಂತಂ, (9) ನವೋ ನವೋ ಭವತಿ. ಈ ಮಂತ್ರಗಳಿಂದ ಆವಾಹಿಸಿ ಪೂಜಿಸಬೇಕು. ನಂತರ ಪೂರ್ವಾದಿಕಲಶಗಳಿಂದ ಆರಂಭಿಸಿ ಅಭಿಷೇಕಿಸಬೇಕು. ನಂತರ ವಿಷ್ಣುಸೂಕ್ತ, ಘರ್ಮ, ಪುರುಷ, ಸಮುದ್ರ, ಪವಮಾನಾದಿ ಸೂಕ್ತಗಳನ್ನು ಪಠಿಸುತ್ತಾ ಬ್ರಹ್ಮಕಲಶದಿಂದ ಅಭಿಷೇಕಿಸಬೇಕು. ನಂತರ ಪ್ರತಿಮೆಯಲ್ಲಿ ಪ್ರಣವ, ಬೀಜಾಕ್ಷರನ್ಯಾಸ, ಮಾತೃಕಾನ್ಯಾಸ ತತ್ವನ್ಯಾಸ, ಅಷ್ಟಾಕ್ಷರನ್ಯಾಸ ಮಾಡಬೇಕು. ನಂತರ 'ಉದ್ಯದ್ ಭಾಸ್ವತ್ಸಮಾಭಾಸಃ' ಇತ್ಯಾದಿ ಧ್ಯಾನಶ್ಲೋಕವನ್ನು ಹೇಳಿ ವಿಶೇಷ ಸಾನ್ನಿಧ್ಯಕ್ಕಾಗಿ ಪ್ರತಿಮೆಯನ್ನು ಮುಟ್ಟಿಕೊಂಡು ನೂರೆಂಟುಬಾರಿ ಮೂಲಮಂತ್ರವನ್ನು ಜಪಮಾಡಬೇಕು. ನಂತರ ಗಂಧ, ಪುಷ್ಪಾದಿ ಧೂಪ ದೀಪ ನೈವೇದ್ಯಾದಿಗಳನ್ನು ಅರ್ಪಿಸಿ ಮಹಾಮಂಗಲ- ನೀರಾಜನ ಮಾಡಿ, ಪುಷ್ಪಾಂಜಲಿ ಸಮರ್ಪಿಸಬೇಕು. ನಂತರ ಪುರುಷಸೂಕ್ತ, ವಿಷ್ಣೋರ್ನುಕಂ, ಅತೋದೇವ, ಮಹಾ ವ್ಯಾಹೃತಿ, ವಿಷ್ಣುಗಾಯತ್ರಿಗಳಿಂದ ಹೋಮ ಮಾಡಬೇಕು. ಉಪಯೋಗಿಸಬೇಕಾದ ದ್ರವ್ಯಗಳು ವಿಷ್ಣುಗಾಯತ್ರಿಗೆ ಅಶ್ವತ್ಥಸಮಿತ್ತು - ಪಾಯಸ; ವಿಷ್ಣೋರ್ನುಕಂ ಮತ್ತು ಅತೋದೇವ-ತುಪ್ಪಮಿಶ್ರಿತಾನ್ನ; ಪುರುಷಸೂಕ್ತ- ತುಪ್ಪದಿಂದ ಮಾತ್ರ. ಈ ರೀತಿ ಸ್ವಿಷ್ಟಕೃದಾದಿ ಹೋಮಶೇಷವನ್ನು ಮುಗಿಸಿ ಆಚಾರ್ಯಾ ದಿಗಳಿಗೆ ದಕ್ಷಿಣಾದಿ ದಾನ, ಬ್ರಾಹ್ಮಣಭೋಜನಾದಿಗಳನ್ನು ಮಾಡಿಸಬೇಕು. ಪ್ರಾರ್ಥನೆ ದೇವದೇವ ರಮಾಕಾಂತ ಬ್ರಹ್ಮರುದ್ರಾದಿಪೂಜಿತ । ಯಸ್ಮಿನ್ ಗೃಹೇ ದೃಢಂ ಸ್ಥಿತ್ವಾತಸ್ಮಿನ್ ಗೇಹೇ ಪುನಾತಿ ಹಿ। ಅಶುಚಿತ್ವಂ ಯದಾ ಸ್ಯಾತ್ ತದಾ ಸಂಪ್ರೋಕ್ಷಣಮ್ ॥ ಎಂದು ಹೇಳಿರುವಂತೆ ಸಂಪ್ರೋಕ್ಷಣೆಗೆ ಕಾಲನಿಯಮವಿಲ್ಲ. ಯಾವ ದಿನದಲ್ಲಿ ಅಶುಚಿತ್ವವೋ ಆ ದಿನವೇ ಸಂಪ್ರೋಕ್ಷಣೆ ಮಾಡಿದಾಗ ಕಾಲನಿಯಮವಿರುವುದಿಲ್ಲ. ಕಾಲಾಂತರದಲ್ಲಿ ವಿಹಿತವಾಗಿದೆ. ವಿಧಿಸಹಿತವಾದ ಪೂಜಾದಿಗಳು ನಡೆಯದೇ ಹೋದಾಗಲೂ ಹಿಂದೆ ಹೇಳಿದ ಕ್ರಮದಲ್ಲಿ ಕಲಶಸ್ಥಾಪನಾ- ಪೂರ್ವಕವಾಗಿ ಪುನಃ ಸನ್ನ್ಯಾಸಿಗಳಿಂದ ಅಭಿಷೇಕ ಮಾಡಿಸಿದರೆ ಶುದ್ಧವಾಗಿ ಸಾನ್ನಿಧ್ಯವುಂಟಾಗುತ್ತದೆ. ವಿಷ್ಣುಗಾಯತ್ರೀ ಸರ್ವತ್ರ ವಿಷ್ಣುಗಾಯತ್ರ್ಯಾ ಹೋಮಃ ಸ್ಯಾದಯುತಾವರಃ ॥ ೧೩೬॥ ನಾವಾವ್ಯಾದ್ಯಭಿಧಾನಾನು ವಿದ್ಮಹೇ ಧೀಮಹೇ ತಥಾ । ಪ್ರಚೋದಯಾತ್ ತೃತೀಯಾಧೋ ತನ್ನೋ ಗಾಯತ್ರಿನಾಮಿಕಾ ॥೧೩೭ ॥ ಅರ್ಥ - ಜೀರ್ಣೋದ್ಧಾರ, ಹಾಗೂ ಸಂಪ್ರೋಕ್ಷಣಾದಿಕಾಲಗಳಲ್ಲಿ ವಿಷ್ಣುಗಾಯತ್ರಿಯಿಂದ ಹತ್ತು ಸಾವಿರ ಆಹುತಿಗೆ ಕಡಿಮೆ ಇಲ್ಲದಂತೆ ಹೋಮವಾಗಬೇಕು. ವಿಷ್ಣುಗಾಯತ್ರೀ ಎಂದರೆ ನಾರಾಯಣಾಯ, ವಾಸುದೇವಾಯ, ವಿಷ್ಣು ಎಂಬ ನಾಮಗಳ ಅನಂತರ ಕ್ರಮವಾಗಿ 'ವಿದ್ಮಹೇ' 'ಧೀಮಹಿ' ಎಂಬ ಪದಗಳನ್ನು, ವಿಷ್ಣು ಎಂಬ ಪದದ ಆದಿ ಹಾಗೂ ಅಂತ್ಯಗಳಲ್ಲಿ ಕ್ರಮವಾಗಿ 'ತನ್ನೋ' ಎಂಬ ಪದ ಹಾಗೂ 'ಪ್ರಚೋದಯಾತ್' ಎಂಬ ಪದ- ಗಳನ್ನು ಸೇರಿಸಿದರೆ ವಿಷ್ಣುಗಾಯತ್ರಿಯಾಗುತ್ತದೆ. ದುರ್ಗಾದಿದೇವತಾ ಪ್ರತಿಷ್ಠೆ ಮಾಡುವುದಾದರೆ ಮೃಗಶಿರಾ, ಅನೂರಾಧಾದಿ ನಕ್ಷತ್ರಗಳಿರುವ, ನಂದಾ(??) ರಿಕ್ತ ತಿಥಿಗಳನ್ನು ಬಿಟ್ಟು ಒಳ್ಳೆಯ ಮುಹೂರ್ತದಲ್ಲಿ ಮಾಡಬೇಕೆಂದು ಅಭಿಪ್ರಾಯ. ಸಂಕ್ಷೇಪವಾಗಿ ಮಾಡುವುದಾದರೆ "ಅಸ್ಮಿನ್ ಸಂಪ್ರೋಕ್ಷಣಾಂಗ ಹವನೇ ದೇವತಾ ಪರಿಗ್ರಹಾರ್ಥಂ ಅನ್ವಾಧಾನಂ ಕರಿಷ್ಯೇ-ವಿಷ್ಣುಗಾಯತ್ರ್ಯಾ ಅಷ್ಟೋತ್ತರಶತವಾರಂ ಘೃತೇನ, ಪುರುಷಸೂಕ್ತೇನ ಏಕವಾರಂ ಘೃತೇನ .....' ಇತ್ಯಾದಿ ಮಾಡಿ ಪೂರ್ಣಾಹುತಿ ಮಾಡಿ ವಿಷ್ಣ್ವರ್ಪಣ ಮಾಡುವುದು. ಪೂಜೆ ನಿಂತಲ್ಲಿ ವಿಶೇಷ- ಒಂದು ದಿನ ಪೂಜೆ ನಿಂತರೆ ಎರಡು ಬಾರಿ ಪೂಜೆ ಮಾಡುವುದು, ಮೂರು ದಿನ ಪೂಜೆ ನಿಂತರೆ ಮಹಾಪೂಜೆ ಮಾಡುವುದು, ಮೂರುದಿನದ ನಂತರ ಎಷ್ಟು ದಿವಸ ಪೂಜೆ ನಿಂತಿದ್ದರೂ ಸಂಪ್ರೋಕ್ಷಣವೇ ಹೊರತು ಪುನಃ ಪ್ರತಿಷ್ಠೆ ಬೇಕಾಗಿಲ್ಲ. ವರ್ಷ- ಗಟ್ಟಲೆ ಪೂಜಾದಿಗಳೇ ಇಲ್ಲದಿದ್ದಾಗ ಪುನಃ ಪ್ರತಿಷ್ಠೆಯೇ ಆಗಬೇಕು. ದುರ್ಗಾಶಿವಸ್ಕಂದಸೂರ್ಯವಿನಾಯಕಮುಖಾನಪಿ । ಸ್ಥಾಪಯೇದ್ ಉಕ್ತಮಾರ್ಗೇಣ ತತ್ತನ್ಮಂತ್ರೈಃ ಸ್ಮರನ್ ಹರಿಮ್ ॥ ೧೩೮ ॥ ಅರ್ಥ - ದುರ್ಗೆ, ಶಿವ, ಸ್ಕಂದ, ಸೂರ್ಯ, ವಿನಾಯಕಾದಿ ಇತರ ದೇವತೆಗಳನ್ನು ಪ್ರತಿಷ್ಠಾವಿಧಾನದಲ್ಲಿ ಹೇಳಿದ ಕ್ರಮದಂತೆಯೇ ಪ್ರತಿಷ್ಠಿತಬೇಕು. ಹಾಗೂ ಆಯಾಯದೇವತೆಗಳ ಧ್ಯಾನ ಹಾಗೂ ಮಂತ್ರಗಳಿಂದ ಹಾಗೂ ಆಯಾಯ ದೇವತೆಗಳಲ್ಲಿ ನಿಯಾಮಕ- ನಾಗಿರುವ ಶ್ರೀಹರಿಯ ಮಂತ್ರಗಳಿಂದಲೂ, ಮೂಲಮಂತ್ರಗಳಿಂದ ಶ್ರೀಹರಿಯನ್ನೇ ಸ್ಮರಿಸುತ್ತಾ ಪ್ರತಿಷ್ಠಾಪಿಸಬೇಕು. ಗೋಲಕದ್ವಿತಯಂ ವಿಷ್ಣೋಃ ತ್ರಿತಯಂ ವಾऽಪಿ ಕೀರ್ತಿತಮ್ । ಅನ್ಯದೇವಪ್ರತಿಷ್ಠಾಸು ತದಂತಃ ಚಿಂತಯೇದ್ಧರಿಮ್ ॥ ೧೩೯ ॥ ಅರ್ಥ - ಭಗವಂತನ ಪ್ರತಿಮೆಯನ್ನು ಸ್ಥಾಪಿಸುವಾಗ ಎದುರಿ- ಗಿರುವ ಪ್ರತಿಮೆ ಒಂದು ಅಧಿಷ್ಠಾನ(ಗೋಲಕ), ಅದರೊಳಗೆ ತೇಜೋಮಯ ಮುಖ್ಯಪ್ರಾಣ ಪ್ರತಿಮೆ ಎಂದು ಎರಡು ಗೋಲಕ- ಗಳನ್ನು ಹೇಗೆ ಧ್ಯಾನಿಸಬೇಕೋ ಹಾಗೆಯೇ ಇತರ ದೇವತಾಪ್ರತಿಮೆ ಗಳನ್ನು ಸ್ಥಾಪಿಸುವಾಗಲೂ ಕಾಣುವ ಪ್ರತಿಮೆ ಒಂದು ಗೋಲಕ, ಅದರೊಳಗೆ ರುದ್ರಾದಿದೇವತೆಗಳೂ ಅದರೊಳಗೆ ತೇಜೋಮಯ ಮುಖ್ಯಪ್ರಾಣ ಹೀಗೆ ಮೂರು ಗೋಲಕಗಳನ್ನು ಚಿಂತಿಸಿ ಅದರೊ- ಳಗೆ ಸನ್ನಿಹಿತನಾದ ಭಗವಂತನನ್ನು ಧ್ಯಾನಿಸಬೇಕು[^1] [^1]. ವಿಶೇಷಾಂಶ - ಗೋಲಕದ್ವಿತಯ ಎಂದರೆ ಎದುರಿಗಿರುವ ಲೋಹಾದಿಪ್ರತಿಮೆಯನ್ನು ವಿವಕ್ಷೆ ಮಾಡದೆ ಪ್ರತಿಮೆಯಲ್ಲಿರುವ ತೇಜೋಮಯವಾದ ವಾಯುಪ್ರತಿಮೆ ಹಾಗೂ ಲಕ್ಷ್ಮೀ ಪ್ರತಿಮೆ- ಯೆಂದು ಗೋಲಕದ್ವಿತಯ. ಗೋಲಕವೆಂದರೆ ಅಧಿಷ್ಠಾನವೆಂದು ಅರ್ಥ. ಪ್ರತಿಮಾಧಿಕಸಾದೃಶ್ಯಾನ್ ಮುಖ್ಯಾ ವಿಷ್ಣೋಃ ಸದಾ ರಮಾ ಎಂಬ ಪ್ರಮಾಣದಂತೆ ಭಗವಂತನ ಮುಖ್ಯ ಪ್ರತಿಮೆಯೆನಿಸಿದ ಲಕ್ಷ್ಮೀ- ದೇವಿಯನ್ನು ತೆಗೆದುಕೊಳ್ಳಬೇಕು. ಇದೇ ರೀತಿ ಶಿವಾದಿಪ್ರತಿಮೆಗಳು, ಅದರೊಳಗೆ ತೇಜೋಮಯವಾದ ವಾಯು ಹಾಗೂ ಲಕ್ಷ್ಮೀದೇವಿ- ಯ ಪ್ರತಿಮೆಗಳು. ಹೀಗೆ ಒಟ್ಟು ಮೂರು ಗೋಲಕಗಳು. ವಿಷ್ಣು- ಲಕ್ಷ್ಮೀ - ವಾಯುಪ್ರತಿಮೆಗಳಲ್ಲಿ ವಾಯುಪ್ರತಿಮೆ, ಲಕ್ಷ್ಮೀಪ್ರತಿಮೆ. ಇದರೊಳಗೆ ವಿಷ್ಣುಪ್ರತಿಮೆ ಹೀಗೆ ಗೋಲಕದ್ವಿತಯ. ವಿಷ್ಣು - ಲಕ್ಷ್ಮೀ - ವಾಯುಪ್ರತಿಮೆ ಹೊರತು ಇತರ ಶಿವಾದಿ ಪ್ರತಿಮೆಗಳಲ್ಲಿ (೧) ಎದುರಿಗಿರುವ ಪ್ರತಿಮೆಯೊಳಗಿರುವ ಶಿವಾದಿಪ್ರತಿಮೆ; (೨) ಹರಿಸ್ಮರಣೆಯ ಆವಶ್ಯಕತೆ ವಿಷ್ಣುಸ್ಮೃತಿವಿಹೀನಾ ತು ಪೂಜಾ ಸ್ಯಾದಾಸುರೀ ತಥಾ । ಗೃಹ್ಣಂತಿ ದೇವತಾಃ ನೈತಾಂ ತತಃ ಸ್ಯಾದ್ ದೇಶವಿಪ್ಲವಃ । ವ್ಯಾಧಿಜೋರಾದಿಭಿಃ ತಸ್ಮಾದ್ ಅಂತರ್ಧ್ಯೇಯೋ ಹರಿಃ ಸದಾ ॥ ೧೪೦ ॥ ಅರ್ಥ - ವಿಷ್ಣುವಿನ ಸಾನ್ನಿಧ್ಯಚಿಂತನೆ ಇಲ್ಲದೆ ಪೂಜಿಸಿದರೆ ಇದೊಂದು ದೈತ್ಯರು ಮಾಡುವ ಪೂಜೆಯಂತಾಗಿ ದೇವತೆಗಳು ಇದನ್ನು ಸ್ವೀಕರಿಸುವುದಿಲ್ಲ. ಇದರಿಂದ ರೋಗರುಜಿನಗಳು, ಕಳ್ಳಕಾಕರ ಭಯ, ಅತಿವೃಷ್ಟಿ-ಅನಾವೃಷ್ಟಿಗಳು ಉಂಟಾಗಿ ದೇಶವೇ ತಲ್ಲಣಿಸುವಂತಾಗುತ್ತದೆ. ಆದ್ದರಿಂದ ಅಂತರ್ನಿಯಾಮಕ -ನನ್ನು ಧ್ಯಾನಿಸಲೇ ಬೇಕು. ವಿಷ್ಣುಸ್ಮರಣೆರಹಿತವಾದದ್ದು ಅಸುರಪೂಜೆ ವಿಷ್ಣುಭಕ್ತಿವಿಹೀನಸ್ಯ ಗತಿಃ ಸ್ಯಾನ್ನ ಶುಭಾ ಕ್ವಚಿತ್ । ಭಕ್ತಸ್ಯಾಪ್ಯನ್ಯದೇವೇಷು ತಸ್ಮಾದ್ಧ್ಯೇಯೋ ಹರಿಃ ಸದಾ ॥ ೧೪೧ ॥ ಸಂಸ್ಮೃತೋ ಭಗವಾನ್ ವಿಷ್ಣುಃ ಸರ್ವಮಂಗಲಮಂಗಲಃ । ಸಮಸ್ತಾಭೀಷ್ಟದಾಯೀ ಸ್ಯಾತ್ತೇನ ಧ್ಯೇಯೋऽಖಿಲೈಃ ಜನೈಃ ॥ ೧೪೨ ॥ ಅರ್ಥ - ವಿಷ್ಣುಭಕ್ತಿ ಇಲ್ಲದೆ ಅನ್ಯದೇವತೆಗಳಲ್ಲಿ ಎಷ್ಟೇ ಭಕ್ತಿ- ಯನ್ನು ಮಾಡಿದರೂ ಅದರಿಂದ ಸದ್ಗತಿ ಇಲ್ಲ. ಅಷ್ಟೇ ಅಲ್ಲದೆ ನರಕಾದಿ ಅನರ್ಥವೂ ಉಂಟಾಗುತ್ತದೆ. ಅದರೊಳಗಿರುವ ವಾಯುಪ್ರತಿಮೆ; (೩) ಅದರೊಳಗೆ ಲಕ್ಷ್ಮೀ- ಪ್ರತಿಮೆ. ಅದರೊಳಗೆ ವಿಷ್ಣುವು. ಹೀಗೆ ಗೋಲಕತ್ರಿತಯ ಶ್ರೀಮದಾಚಾರ್ಯರ ಪ್ರಯೋಗದಂತೆ ಎದುರಿಗಿರುವ ವಿಷ್ಣುವಿನ ಪ್ರತಿಮೆ. ಅದರೊಳಗೆ ತೇಜೋಮಯವಾದ ವಾಯುವಿನ ಪ್ರತಿಮೆ. ಇದರೊಳಗೆ ಲಕ್ಷ್ಮೀಸಹಿತನಾದ ನಾರಾಯಣನು ಇರುವನು. ಭಗವಂತನಿಂದ ಸಮವ್ಯಾಪ್ತಿಯುಳ್ಳ ಲಕ್ಷ್ಮೀದೇವಿಗೆ ಗೋಲಕತ್ವ ಹಾಗೂ ಸಹಾಸೀನತ್ವಗಳು ವಿರುದ್ಧವಲ್ಲ. ಆದ್ದರಿಂದಲೇ 'ಪರಿದೃಶ್ಯಮಾನಪ್ರತಿಮಾಂತಃಸ್ಥಿತ ತೇಜಃಸಾರಮಯಪ್ರತಿಮಾಂ- ತಃಸ್ಥಿತ ಮುಖ್ಯಪ್ರಾಣಪ್ರತಿಮಾಯಾಂ ರಮಯಾ ಸಹ ಕ್ಷೀರನೀರವದಾಸೀನಸ್ವಪ್ರತಿಮಾಯಾಂ ನಾರಾಯಣಂ ಆವಾಹಯಾಮಿ' ಎಂದು ಹೇಳಿದಂತಾಗುತ್ತದೆ. ಪರಮಮಂಗಳಸ್ವರೂಪನಾದ ಭಗವಂತನನ್ನು ಧ್ಯಾನಿಸಿದರೆ ಕರುಣಾಳುವಾದ ಅವನು ನಮ್ಮ ಅನಿಷ್ಟಗಳನ್ನೆಲ್ಲ ಪರಿಹರಿಸಿ ಸಮಸ್ತಾಭೀಷ್ಟಗಳನ್ನು ವರ್ಷಿಸುತ್ತಾನೆ. ತತ್ತ್ವ- ತತ್ವದೇವತೆಗಳು ಪುರುಷೋಽವ್ಯಕ್ತಂ ಚ ಮಹಾನಹಂಕಾರೋ ಮನಸ್ತಥಾ । ದಶೇಂದ್ರಿಯಾಣಿ ಶಬ್ದಾದ್ಯಾ ಭೂತೇತಾಃ ಪಂಚವಿಂಶತಿಃ ॥ ೧೪೩ ॥ ತತ್ತ್ವಾಖ್ಯಾಃ ಕಾಲಮಾಯೇ ಚ ನಿಯತಿರ್ಮತಿರೇವ ಚ । ವಿದ್ಯಾ ಕಲಾ ಪ್ರವೃತಿಶ್ಚ ದ್ವಾತ್ರಿಂಶತ್ ತತ್ತ್ವ ಸಂಗ್ರಹಃ ॥ ೧೪೪ ॥ ಸ್ಫೂರ್ತಿಃ ಸಂವಿತ್ ಪ್ರತಿಷ್ಠಾ ಚ ಶಕ್ತಿರಿತ್ಯಪರಾಣಿ ಚ । ಅರ್ಥ- ತತ್ವಗಳು ಪುರುಷ, ಅವ್ಯಕ್ತ, ಮಹತ್ತತ್ವ, ಅಹಂಕಾರತತ್ವ, ಮನಸ್ತತ್ವ, ಹತ್ತು ಇಂದ್ರಿಯಗಳು, ಶಬ್ದಾದಿ ಐದು ತನ್ಮಾತ್ರೆಗಳು, ಪಂಚಭೂತಗಳು. ಹೀಗೆ ಇಪ್ಪತ್ತೈದು ತತ್ವಗಳು. ಈ ಇಪ್ಪತ್ತೈದು ತತ್ವಗಳೊಂದಿಗೆ ಕಾಲ, ಮಾಯಾ, ನಿಯತಿ, ಮತಿ, ವಿದ್ಯೆ, ಕಲಾ, ಪ್ರವೃತ್ತಿಗಳನ್ನು ಸೇರಿಸಿದರೆ ಮುವತ್ತೆರಡು ತತ್ವಗಳಾ- ಗುತ್ತವೆ. ಸ್ಫೂರ್ತಿ, ಸಂವಿತ್, ಪ್ರತಿಷ್ಠೆ, ಶಕ್ತಿಗಳೆಂಬ ಬೇರೆ ನಾಲ್ಕು ತತ್ವಗಳನ್ನು ಸೇರಿಸಿದರೆ ಮುವ್ವತ್ತಾರು ತತ್ವಗಳಾಗುತ್ತವೆ.[^1] [^1]. ವಿಶೇಷಾಂಶ - ಭಾಗವತದಲ್ಲಿ ತ್ರಯೋವಿಂಶತಿ ತತ್ವಾನಿ' ಎಂಬುದಾಗಿ 'ಇಪ್ಪತ್ತಮೂರು ತತ್ವಗಳಿವೆ' ಎನ್ನಲಾಗಿದೆ. ಇಪ್ಪತ್ತಾರೆಂದು, ಇಪ್ಪತ್ತೇಳೆಂದೂ ಹೇಳಿರುತ್ತಾರೆ. ಇವೆಲ್ಲವೂ ವಿವಕ್ಷಾಭೇದದಿಂದ ಹೇಳಿದ್ದೆಂದು ತಿಳಿಯಬೇಕು. ಅಭಿಮಾನಿ- ದೇವತೆಗಳ ವಿವಕ್ಷೆ ಮಾಡದೆ ಪ್ರಕೃತ್ಯಾದಿ ಜಡತತ್ವಗಳ ವಿವಕ್ಷೆ- ಯಿದ್ದಾಗ ಶಬ್ದಾದಿ ೨೩ + ಜಡಪ್ರಕೃತಿ + ಅಬಿಮಾನಿಚೇತನ- ಸಮೂಹ + ಮಹಾವಿಷ್ಣು : ೨೬ತತ್ವಗಳು. ಇಪ್ಪತ್ತಮೂರು ತತ್ವಗಳು + ಅಭಿಮಾನಿಗಳು + ಜೀವ + ಪ್ರಕೃತ್ಯಭಿಮಾನಿನಿಯಾದ ಲಕ್ಷ್ಮೀ+ ನಾರಾಯಣ = ೨೭. ಪ್ರಕೃತಿಸ್ತು ಚತುರ್ವಿಂಶಾ ಪಂಚವಿಂಶೋ ಹರಿಃ ಸ್ವಯಮ್ । ಯದಾ ಜಡಾಂಶಸ್ವೀಕಾರೋ ಜೀವಃ ತತ್ಪಂಚವಿಂಶಕಃ ॥ ಭಾಗ.ತಾ. 3/7/2 ಮಹಾಲಕ್ಷ್ಮೀಸ್ವರೂಪಾಣಿ ಹ್ಯೇಕಾದಶ ವಿದೋ ವಿದುಃ । ವಿಷ್ಣೋರಪಿ ಹಿ ರೂಪಾಣಿ ತನ್ನಾಮ್ನೈಕಾದಶೈವ ತು ॥ ೧೪೫ ॥ ಅರ್ಥ - ಈ ಹನ್ನೊಂದು ತತ್ವಗಳೂ, ಅದೇ ಹೆಸರಿನಿಂದ ಕರೆಯಲ್ಪಡುವ ಮಹಾಲಕ್ಷ್ಮಿಯ ಹನ್ನೊಂದು ರೂಪಗಳಿಂದ ನಿಯಮಿಸಲ್ಪಟ್ಟಿವೆ. ಹಾಗೆಯೇ ತತ್ವ ಹಾಗೂ ತತ್ವಾಭಿಮಾನಿ ಲಕ್ಷ್ಮೀದೇವಿಯನ್ನೂ ನಿಯಮಿಸುವ ಭಗವಂತನ ಹನ್ನೊಂದು ರೂಪಗಳೂ ಬೇರೆ ಇವೆ ಎಂದು ಜ್ಞಾನಿಗಳ ಮತ. ತತ್ವದೇವತಾಸ್ವರೂಪ ಪ್ರಧಾನೋಪಮವರ್ಣಾನಿ ದ್ವಿಭುಜಾನ್ಯಶೇಷತಃ । ಕೃತಾಂಜಲಿಪುಟಾನ್ಯೇವ ಪ್ರಧಾನಂ ತಂ ಹರಿಂ ಪ್ರತಿ ॥ ೧೪೬ ॥ ಅರ್ಥ - ಪುರುಷಾದಿತತ್ವಾಭಿಮಾನಿದೇವತೆಗಳಾದರೋ ಮೂಲ- ರೂಪದಂತೆ ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಮಾನ- ರಾಗಿದ್ದು, ಎರಡು ಭುಜಗಳನ್ನು ಹೊಂದಿರುತ್ತಾರೆ. ಸರ್ವೋತ್ತಮ ನಾದ ಶ್ರೀಹರಿಗೆ ಅಭಿಮುಖವಾಗಿ ನಿಂತು ಕೈಜೋಡಿಸಿ ನಿಂತಿರು- ತ್ತಾರೆ. ಸರ್ವಾಣ್ಯೇತಾನಿ ತತ್ತ್ವಾನಿ ಬ್ರಹ್ಮಾತು ಪುರುಷಃ ಸ್ಮೃತಃ । ಮಹಾಂಶ್ಚಾವ್ಯಕ್ತನಾಮ್ನೀ ತು ಬ್ರಹ್ಮಾಣೀ ಸಂಪ್ರಕೀರ್ತಿತಾ ॥ ೧೪೭ ॥ ಏವಂ ವಾಯುರಪಿ ಜ್ಞೇಯೋ ಭಾರತೀ ಚಾಪಿ ತತ್ ತ್ರಯಮ್ । ರುದ್ರೋಽಹಂಕಾರ ಉದ್ದಿಷ್ಟಃ ಸ್ಕಂದೇಂದ್ರೌ ಮನ ಉಚ್ಯತೇ ॥ ೧೪೮ ॥ ಅಹಂಕಾರಃ ಶೇಷವೀಂದ್ರಾವಪಿ ವಿದ್ವದ್ಭಿರೀರಿತೌ । ಅರ್ಥ - ಜೀವತತ್ವ ಹಾಗೂ ಮಹತ್ತತ್ವಗಳಗೆ ಚತುರ್ಮುಖ- ಬ್ರಹ್ಮನು ಅಭಿಮಾನಿ ದೇವತೆಯು, ಸರಸ್ವತಿಯು ಅವ್ಯಕ್ತತತ್ವದ ಅವಾಂತರ ಅಭಿಮಾನಿಯು. ಈ ತತ್ವಗಳಿಗೆ ಬ್ರಹ್ಮ-ಸರಸ್ವತಿ- ಯರಂತೆ ವಾಯುಭಾರತೀದೇವಿಯರೂ ಅಭಿಮಾನಿಗಳು. ರುದ್ರ ಶೇಷ ಗರುಡರು ಅಹಂಕಾರತತ್ವಕ್ಕೂ, ಇಂದ್ರಕಾಮರು ಮನಸ್ಸಿಗೂ ಅಭಿಮಾನಿಗಳು. ದಿಗ್ವಾಯುಸೂನುಸೂರ್ಯಾಶ್ಚ ವರುಣಶ್ಚಾಶ್ಚಿನಾವಪಿ ॥ ೧೪೯ ॥ ವಹ್ನಿದಕ್ಷೌ ಇಂದ್ರಸೂನುಃ ಮಿತ್ರಶ್ಚೈವ ಮನುಸ್ತಥಾ । ಇಂದ್ರಿಯಾಖ್ಯಾಃ ಶಬ್ದನಾಮಾ ಬೃಹಸ್ಪತಿರುದಾಹೃತಃ ॥ ೧೫೦ ॥ ಅನ್ಯೇ ತು ಸೂನವೋ ವಾಯೋ ರುದ್ರಸ್ಯಾಪಿ ಪ್ರಕೀರ್ತಿತಾಃ । ಏತೇಷು ಭಗವಾನ್ ವಿಷ್ಣುಃ ಪ್ರಧಾನತನುರೇವ ತು ॥ ೧೫೧ ॥ ಅರ್ಥ - ದಿಗಭಿಮಾನಿಗಳಾಗಿದ್ದು ದಿಗ್ದೇವತೆಗಳೆನಿಸಿದ ಮಿತ್ರ, ಯಮ, ಕುಬೇರ, ವರುಣ, ಚಂದ್ರರು ಶ್ರೋತೇಂದ್ರಿಯಕ್ಕೆ ಅಭಿಮಾನಿಗಳಾಗಿದ್ದಾರೆ. ವಾಯುವಿನ ಪುತ್ರನಾದ ಪ್ರಾಣನು ತ್ವಗಭಿಮಾನಿಯು. ಸೂರ್ಯನು ಚಕ್ಷುರಭಿಮಾನಿಯು, ವರುಣನು ಜಿಹ್ವೇಂದ್ರಿಯಕ್ಕೆ ಅಭಿಮಾನಿಯು, ಅಶ್ವಿನೀದೇವತೆ- ಗಳು ಘ್ರಾಣೇಂದ್ರಿಯಕ್ಕೆ ಅಭಿಮಾನಿಗಳು, ವಾಗಿಂದ್ರಿಯಾಭಿಮಾನಿ ಅಗ್ನಿಯು, ಪಾಣಿಗೆ ಇಂದ್ರಪುತ್ರನಾದ ಜಯಂತನು, ಪಾಯುವಿಗೆ ಮಿತ್ರ ಹಾಗೂ ಯಮ, ನಿರ್ಋತಿಗಳು ಅಭಿಮಾನಿಗಳು, ಸ್ವಾಯಂಭುವ ಮನು, ದಕ್ಷಪ್ರಜಾಪತಿಗಳು ಗುಹ್ಯೇಂದ್ರಿಯಕ್ಕೆ ಅಭಿಮಾನಿಗಳು. ಗಣಪತಿ ಆಕಾಶಕ್ಕೂ, ಪ್ರವಹವಾಯು ಭೂತ- ವಾಯುವಿಗೂ, ತೇಜಸ್ಸಿಗೆ ವಹ್ನಿಯೂ, ಜಲಕ್ಕೆ ವರುಣನೂ, ಪೃಥಿವಿಗೆ ಶನೈಶ್ಚರ ಧರಾದೇವಿಯರೂ ಅಭಿಮಾನಿಗಳು. ಶಬ್ದ ಸ್ಪರ್ಶ ರೂಪ ರಸ ಗಂಧಗಳಿಗೆ ಕ್ರಮವಾಗಿ ಪ್ರಾಣಾಪಾನವ್ಯಾನೋ- ದಾನಸಮಾನರು ಮತ್ತು ರುದ್ರಪುತ್ರರಾದ ಪ್ರಾಣಾಪಾನಾದಿಗಳೂ ಅಭಿಮಾನಿಗಳಾಗಿರುವರು. ಪುರುಷ ಮೊದಲಾದ ತತ್ವಗಳಿಗೂ ಸರ್ವೋತ್ತಮನಾದ ಭಗವಂತನೇ ಅಂತರ್ನಿಯಾಮಕನಾಗಿರು- ವನೆಂದು ಚಿಂತಿಸಬೇಕು. ತತ್ವನ್ಯಾಸಕ್ರಮ ಧ್ಯೇಯಃ ಪರಾತ್ಮನೋರ್ಮಧ್ಯೇ ತತ್ತ್ವನಾಮ ತದರ್ಥಯೋಃ । ಜಪೇ ನ್ಯಾಸೇ ನಮೋಽಂತಸ್ತು ಸ್ವಾಹಾಂತೋ ಹೋಮಕರ್ಮಣಿ ॥೧೫೨ ॥ ಅರ್ಥ - ಭಗವದ್ವಾಚಕಗಳಾದ ಪರ ಮತ್ತು ಆತ್ಮಶಬ್ದಗಳ ಮಧ್ಯ- ದಲ್ಲಿ ತತ್ವವಾಚಕಗಳಾದ ಪುರುಷ ಮೊದಲಾದ ಪದಗಳನ್ನೂ, ಆತ್ಮಶಬ್ದದ ನಂತರ ಜಪ ಮತ್ತು ನ್ಯಾಸ ಮಾಡಿಕೊಳ್ಳುವಾಗ 'ನಮಃ' ಶಬ್ದವನ್ನು ಹೇಳಿ, 'ಪರಾಯ ಪುರುಷಾತ್ಮನೇ ನಮಃ', 'ಪರಾಯ ಅವ್ಯಕ್ತಾತ್ಮನೇ ನಮಃ' ಇತ್ಯಾದಿಯಾಗಿ ಹೇಳಬೇಕು. ತತ್ವಗಳ ಹೋಮದಲ್ಲಾದರೋ ಪರಾಯ ಪುರುಷಾತ್ಮನೇ ಸ್ವಾಹಾ, ಪರಾಯ ಅವ್ಯಕ್ತಾತ್ಮನೇ ಸ್ವಾಹಾ ಇತ್ಯಾದಿಯಾಗಿ ಹೇಳಬೇಕು[^1] ತತ್ವನ್ಯಾಸವಿಧಗಳು ತ್ರಿಚತುಃ ಷಟ್ ದಶಾವೃತ್ತಿರೇತೇಷಾಂ ತು ಹುತಾದಿಕೇ। ನ್ಯಾಸೋಽಂಗುಲೀಷೂರುಬಾಹುಮಧ್ಯೇಷು ವ್ಯುತ್ಕ್ರಮೇ ಸ್ಮೃತಃ । ಕ್ರಮೇ ವಿಪರ್ಯಯೇಣಾತ್ರ ಶಾಕ್ತ್ಯಾದಿತ್ವಂ ಪ್ರಕೀರ್ತಿತಮ್ ॥ ೧೫೩ ॥ ಅರ್ಥ - ಈ ತತ್ವಮಂತ್ರಗಳ ಹೋಮ, ಜಪ, ನ್ಯಾಸಾದಿಗಳಲ್ಲಿ ಮೂರು, ನಾಲ್ಕು, ಆರು, ಹತ್ತು ಬಾರಿ ತತ್ವಮಂತ್ರಗಳನ್ನು ಆವೃತ್ತಿ ಮಾಡಬೇಕು. ಇನ್ನು ತತ್ವಗಳ ಸ್ಥಾನಗಳು ಹೀಗಿವೆ. ಇಪ್ಪತ್ತು ಬೆರಳು ಗಳು, ಎರಡು ತೊಡೆಗಳು, ಎರಡು ತೋಳುಗಳು, ಹೃದಯ ಹೀಗೆ ಕ್ರಮವಾಗಿ ಸಂಹಾರಕ್ರಮದಲ್ಲಿ ಅಂಗನ್ಯಾಸಗಳು. ಸೃಷ್ಟಿಕ್ರಮ- ನ್ಯಾಸದಲ್ಲಿ ಹೃದಯದಿಂದ ಆರಂಭಿಸಿ ಎಡಗಾಲಿನ ಕಿರುಬೆರಳಿನ ವರೆಗೂ ನ್ಯಾಸ ಮಾಡಬೇಕು[^2] [^1]. ವಿಶೇಷಾಂಶ - 'ಪರಾಯ ಶಕ್ತ್ಯಾತ್ಮನೇ ಸ್ವಾಹಾ' । ಪರಾಯ ಪ್ರತಿಷ್ಠಾತ್ಮನೇ ಸ್ವಾಹಾ' ಇತ್ಯಾದಿಯಾಗಿ ತತ್ವನ್ಯಾಸ ಸ್ವಾಹಾಕಾರ ಹೇಳಬೇಕು. 'ಪರಯಾ ಶಕ್ತ್ಯಾತ್ಮನೇ ಲಕ್ಷ್ಮೀನಾರಾಯಣಾಭ್ಯಾಂ ಸ್ವಾಹಾ' ಇತ್ಯಾದಿಯಾಗಿ ಸ್ವಾಹಾಕಾರ ವಿಹಿತವಲ್ಲ. 'ಲಕ್ಷ್ಮೀನಾರಾಯಣಾಭ್ಯಾಂ' ಇತ್ಯಾದಿಯಾಗಿ ಪ್ರತಿಪಾದ್ಯ ದೇವತಾ ಸ್ಮರಣೆಗಾಗಿ ಮಾತ್ರ. ತತ್ವದೇವತೆಗಳ ಮಂತ್ರದಿಂದ ಆಯಾಯ ಅಂಗಗಳನ್ನು ಮುಟ್ಟಿದಾಗ ಮಂತ್ರದಿಂದ ಪೂತ ದೇಹವುಳ್ಳವನಾಗುವನೇ ಹೊರತು ಆಯಾಯ ಅಂಗಗಳಲ್ಲಿ ದೇವತೆಗಳಿದ್ದಾರೆ ಎಂದು ತಾತ್ಪರ್ಯವಲ್ಲ. 'ನ ತು ತದಂಗೇ ತೇ ದೇವಾ ಆಶ್ರಿತಾ ಇತಿ'. [^2]. ವಿಶೇಷಾಂಶ - ಮಂತ್ರವನ್ನು ಉಚ್ಚಾರಣೆ ಮಾಡಿ ಆಯಾಯ ದೇವತೆಗಳನ್ನು ನಿರ್ದಿಷ್ಟ ಅವಯವಗಳಲ್ಲಿ ಧ್ಯಾನಿಸುವುದೇ ನ್ಯಾಸ. ತತ್ತತ್ ದೇವತಾನಾಂ ತತ್ತದಂಗೇಷು ಧ್ಯಾನಮೇವ ನ್ಯಾಸಃ - ತತ್ವಕಣಿಕಾ ನ್ಯಾಸದಿಂದ ಭಗವಂತನ ಸಾನ್ನಿಧ್ಯ ಹೆಚ್ಚುತ್ತದೆ. ದೈಹಿಕವಾಗಿ ಪಾವಿತ್ರ್ಯತೆಯೂ ಲಭಿಸುತ್ತದೆ. ತತ್ವನ್ಯಾಸೋಽಯಮಚಿರಾತ್ ಕೃಷ್ಣ ಸಾನ್ನಿಧ್ಯಕಾರಕಃ । ಯಃ ಕುರ್ಯಾತ್ ತತ್ವವಿನ್ಯಾಸಃ ಸ ಪೂತೋ ಭವತಿ ಧ್ರುವಮ್ II - ಪಂಚರಾತ್ರ. ಗ್ರಂಥಪ್ರಶಸ್ತಿ ತತ್ವನ್ಯಾಸವು ಸೃಷ್ಟಿನ್ಯಾಸ, ಸಂಹಾರನ್ಯಾಸವೆಂದು ಎರಡು ವಿಧ. ಪ್ರಕೃತಿಯಿಂದಾರಂಭಿಸಿ ತಾವು ಸೃಷ್ಟಿಯಾದ ಕ್ರಮದಲ್ಲಿಯೇ ಚಿಂತನೆ ಮಾಡಿದರೆ ಸೃಷ್ಟಿನ್ಯಾಸ, ಲಯವಾಗುವ ಕ್ರಮದಲ್ಲಿ ಚಿಂತಿಸಿದರೆ ಲಯನ್ಯಾಸ. ಓಂ ಪರಾಯ ಶಕ್ತಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಪ್ರತಿಷ್ಠಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಸಂವಿದಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಸ್ಫೂರ್ತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಪ್ರವೃತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಕಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ವಿದ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ। ಓಂ ಪರಾಯ ಮತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ। ಓಂ ಪರಾಯ ನಿಯತ್ಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಮಾಯಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ । ಓಂ ಪರಾಯ ಕಾಲಾತ್ಮನೇ ಶ್ರೀ ಲಕ್ಷ್ಮೀನಾರಾಯಣಾಭ್ಯಾಂ ನಮಃ। ಓಂ ಪರಾಯ ಪುರುಷಾತ್ಮನೇ ಬ್ರಹ್ಮವಾಯುಭ್ಯಾಂ ನಮಃ । (ಈ ಮೇಲಿನ ಮಂತ್ರಗಳಿಂದ ಹೃದಯದಲ್ಲಿ ಮಾಲಾಕಾರವಾಗಿ ಕೈಯಲ್ಲಿ ತುಳಸಿದಳ ಹಿಡಿದು ನ್ಯಾಸ ಮಾಡಬೇಕು) ಓಂ ಪರಾಯ ಅವ್ಯಕ್ತಾತ್ಮನೇ ಬ್ರಹ್ಮಾಣೀ ಭಾರತೀಭ್ಯಾಂ ನಮಃ (ಬಲಭುಜ) ಓಂ ಪರಾಯ ಮಹದಾತ್ಮನೇ ಬ್ರಹ್ಮವಾಯುಭ್ಯಾಂ ನಮಃ (ಎಡಭುಜ) ಓಂ ಪರಾಯ ಅಹಂಕಾರಾತ್ಮನೇ ಗರುಡಶೇಷರುದ್ರೇಭ್ಯೋ ನಮಃ। (ಬಲತೊಡೆ) ಓಂ ಪರಾಯ ಮನ ಆತ್ಮನೇ ಸ್ಕಂದೇಂದ್ರಾಭ್ಯಾಂ ನಮಃ (ಎಡತೊಡೆ) ಓಂ ಪರಾಯ ಶ್ರೋತ್ರಾತ್ಮನೇ ದಿಗ್ದೇವತಾಭ್ಯೋ ನಮಃ । (ಬಲಗೈ ಹೆಬ್ಬೆರಳು) ಓಂ ಪರಾಯ ತ್ವಗಾತ್ಮನೇ ಪ್ರಾಣಾಯ ನಮಃ । (ಬಲಗೈತೊರ- ಬೆರಳು) ಓಂ ಪರಾಯ ಚಕ್ಷುರಾತ್ಮನೇ ಸೂರ್ಯಾಯ ನಮಃ (ಬಲಗೈ ಮಧ್ಯಬೆರಳು) ಓಂ ಪರಾಯ ಜಿಹ್ವಾತ್ಮನೇ ವರುಣಾಯ ನಮಃ । (ಬಲಗೈ ಅನಾಮಿಕಾಬೆರಳು) ಓಂ ಪರಾಯ ಘ್ರಾಣಾತ್ಮನೇ ಅಶ್ವಿಬ್ಯಾಂ ನಮಃ (ಬಲಗೈಕಿರು ಬೆರಳು ) ಓಂ ಪರಾಯ ವಾಗಾತ್ಮನೇ ವಹ್ನಯೇ ನಮಃ (ಎಡಗೈ ಹೆಬ್ಬೆರಳು) ಓಂ ಪರಾಯ ಪಾಣ್ಯಾತ್ಮನೇ ದಿಕ್ಷಾಯ ನಮಃ (ಎಡಗೈತೊರ- ಬೆರಳು) ಓಂ ಪರಾಯ ಪಾದಾತ್ಮನೇ ಜಯಂತಾಯ ನಮಃ। (ಎಡಗೈ ಮಧ್ಯ ಬೆರಳು) ಓಂ ಪರಾಯ ಪಾಶ್ವಾತ್ಮನೇ ಮಿತ್ರಾಯ ನಮಃ । (ಎಡಗೈ ಅನಾಮಿಕಾ ಬೆರಳು) ಋಷಿಚ್ಛಂದೋದೇವತಾಂಗಧ್ಯಾನಾನುಕ್ತೌ ಪ್ರಧಾನವತ್ । ಜ್ಞೇಯಾ ಮಂತ್ರಾಃ ಸಮಸ್ತಾಸ್ತೇ ಪೃಥಙ್ಮೋಕ್ಷಾದಿದಾಯಕಾಃ ॥ ೧೫೪ ॥ ಓಂ ಪರಾಯ ಉಪಸ್ಥಾತ್ಮನೇ ಮನವೇ ನಮಃ (ಎಡಗೈಕಿರುಬೆರಳು) ಓಂ ಪರಾಯ ಶಬ್ದಾತನೇ ಬೃಹಸ್ಪತಿ ಪ್ರಾಣಾಭ್ಯಾಂ ನಮಃ । (ಬಲಪಾದದ ಹೆಬ್ಬೆರಳು) ಓಂ ಪರಾಯ ಸ್ಪರ್ಶಾತ್ಮನೇ ಅಪಾನಾಯ ನಮಃ । (ಬಲಪಾದದ ತೋರಬೆರಳು) ಓಂ ಪರಾಯ ರೂಪಾತ್ಮನೇ ವ್ಯಾನಾಯ ನಮಃ । (ಬಲಪಾದದ ಮಧ್ಯದ ಬೆರಳು) ಓಂ ಪರಾಯ ರಸಾತ್ಮನೇ ಉದಾನಾಯ ನಮಃ । (ಬಲಪಾದದ ಬೆರಳು) ಓಂ ಪರಾಯ ಗಂಧಾತ್ಮನೇ ಸಮಾನಾಯ ನಮಃ ।(ಬಲಪಾದದ ಕಿರುಬೆರಳು) ಓಂ ಪರಾಯ ಆಕಾಶಾತ್ಮನೇ ಮಹಾಗಣಪತೆಯೇ ನಮಃ । (ಎಡಪಾದದ ಹೆಬ್ಬೆರಳು) ಓಂ ಪರಾಯ ವಾಯ್ವಾತ್ಮನೇ ಪ್ರವಹ ವಾಯವೇ ನಮಃ । (ಎಡಪಾದದ ಎರಡನೆಬೆರಳು) ಓಂ ಪರಾಯ ತೇಜ ಆತ್ಮನೇ ವಹ್ನಯೇ ನಮಃ (ಎಡಪಾದದ ಮಧ್ಯಬೆರಳು) ಓಂ ಪರಾಯ ಅಬಾತನೇ ವರುಣಾಯ ನಮಃ (ಎಡಪಾದದ ನಾಲ್ಕನೆಬೆರಳು) ಓಂ ಪರಾಯ ಪೃಥಿವ್ಯಾತ್ಮನೇ ಶನೈಶ್ಚರಧರಾಭ್ಯಾಂ ನಮಃ । (ಎಡಪಾದದ ಕಿರುಬೆರಳು) ಇದು ಸೃಷ್ಟಿನ್ಯಾಸ. ಇದರಲ್ಲಿ ಮಹದಾದಿ ತತ್ವಗಳಿಂದಾರಂಭಿಸಿ ಪೃಥಿವಿಯವರೆಗೂ ಇರುವುದು ತತ್ವನ್ಯಾಸವು. ಬಲಗೈಯ ಹೆಬ್ಬೆರಳಿನಿಂದಾರಂಭಿಸಿ ಕಿರುಬೆರಳುಗಳವರೆಗೂ ನ್ಯಾಸವಿರುತ್ತದೆ. ಸಂಹಾರನ್ಯಾಸದಲ್ಲಿ ಎಡಗಾಲಿನ ಕಿರುಬೆರಳಿನಿಂದಾರಂಭಿಸಿ 'ಪರಾಯ ಪೃಥಿವ್ಯಾತ್ಮನೇ ಶನೈಶ್ಚರಧರಾಭ್ಯಾಂ ನಮಃ' ಎಂಬಲ್ಲಿಂದ ಪ್ರಾರಂಭವಾಗಿ ಪಂಚಭೂತಗಳು, ಬಲಗಾಲಿನ ಕಿರುಬೆರಳಿನಿಂದ ಶಬ್ದಾದಿತನ್ಮಾತ್ರೆಗಳು, ಎಡಗೈಯ ಕಿರುಬೆರಳಿ- ನಿಂದಾರಂಭಿಸಿ ಐದು ಜ್ಞಾನೇಂದ್ರಿಯಗಳು, ಬಲಗೈ ಕಿರುಬೆರಳಿ- ನಿಂದ ಪಂಚಕರ್ಮೇಂದ್ರಿಯಗಳು, ಎಡತೊಡೆಯಲ್ಲಿ ಮನಸ್ತತ್ವ, ಬಲತೊಡೆಯಲ್ಲಿ ಅಹಂಕಾರ, ಎಡತೋಳು ಮಹತ್ತತ್ವ, ಬಲತೋಳು ಅವ್ಯಕ್ತತತ್ವ. ಶಕ್ತ್ಯಾದಿಗಳು ಹಿಂದಿನಂತೆಯೇ ಮಾಲಾಕಾರವಾಗಿ ನ್ಯಾಸವು. ಇದು ಸಂಹಾರನ್ಯಾಸ. ಕಲಾಕರ್ಷಣೆ ಹಾಗೂ ಪೂಜಾನಂತರಸನ್ನಿಧಾನವನ್ನು ಹಿಂದಕ್ಕೆ ಪಡೆಯಲು ಸಂಹಾರಕ್ರಮವು. ಪೂಜಾಕಾಲದಲ್ಲಿ ತತ್ವನ್ಯಾಸ ಮಾಡಿ ಸಂಕಲ್ಪ ಮಾಡಿ ಪೀಠಪೂಜೆಯಾದ ಮೇಲೆ ಸೃಷ್ಟಿಕ್ರಮ ದಿಂದ ಇನ್ನೊಂದು ಬಾರಿ ನ್ಯಾಸ. ಪೂಜೆ ಮುಗಿದ ಮೇಲೆ ಸಂಹಾರಕ್ರಮದಿಂದ ಪುನಃ ತತ್ವನ್ಯಾಸ. ಮಠಗಳಲ್ಲಿ ಸಂಸ್ಥಾನ ಪೂಜೆಯಲ್ಲಿ ಈ ಕ್ರಮವನ್ನು ನೋಡಬಹುದು. ಹೀಗೆ ಮೂರು- ಬಾರಿ ನ್ಯಾಸವು. ಸ್ಥಿತಿನ್ಯಾಸ - ಅರ್ಧಭಾಗ ಕ್ರಮವಾಗಿಯೂ, ಅರ್ಧಭಾಗ ವ್ಯುತ್ಕ್ರಮವಾಗಿಯೂ ನ್ಯಾಸ ಮಾಡಿದರೆ ಸ್ಥಿತಿನ್ಯಾಸ. ಆದೌ ಮೂರ್ಧಾನಮಾರಭ್ಯ ವದನಾವಧಿಕಶ್ಚಯಃ । ಪಾದಾದಿ ಹೃದಯಾಂತಶ್ಚ ಸ್ಥಿತಿರೇವ ಪ್ರಕೀರ್ತಿತಾಃ ॥ ಅರ್ಥ - ಯಾವ ಮಂತ್ರಗಳಲ್ಲಿ ಋಷಿ, ಛಂದಸ್ಸು, ದೇವತೆ, ಅಂಗನ್ಯಾಸ, ಧ್ಯಾನಗಳನ್ನು ಹೇಳಿಲ್ಲವೋ, ಅಂತಹ ಮಂತ್ರಗಳಲ್ಲಿ ಪ್ರಧಾನಮಂತ್ರವೆನಿಸಿದ ಪ್ರಣವ ಮಂತ್ರಕ್ಕೆ ಹೇಳಿದ ಋಷಿ, ಛಂದಸ್ಸು, ದೇವತೆಗಳನ್ನು ಇಲ್ಲಿಯೂ ತಿಳಿಯಬೇಕು.[^1] ಈ ತತ್ವನ್ಯಾಸಮಂತ್ರಗಳು ಪ್ರತ್ಯೇಕವಾಗಿಯೂ ಮೋಕ್ಷಾದಿ- ಪುರುಷಾರ್ಥಗಳನ್ನು ನೀಡಲು ಸಮರ್ಥವಾಗಿವೆ. ತಂತ್ರಮಾರ್ಗಾಸ್ತು ಹರಿಣಾ ಹ್ಯಸಂಖ್ಯಾ: ಕೀರ್ತಿತಾ ಅಪಿ। ತೇಷ್ವಯಂ ಸುಗಮೋ ಮಾರ್ಗಃ ಸಫಲಶ್ಚಾನುತಿಷ್ಠತಾಮ್ ॥ ೧೫೫ ॥ ಯಾವತೋ ಹ್ಯನನುಷ್ಠಾನೇ ಕರ್ಮಪೂರ್ತಿಃ ನ ವಿದ್ಯತೇ । ತಾವತ್ ಸಮಸ್ತಂ ಕಥಿತಂ ಅಸ್ಮಿನ್ ತಂತ್ರೇ ಯಥಾವಿಧಿ II ೧೫೬ ॥ ಉಪಸಂಹಾರ ಪ್ರೀಯತೇಽನೇನ ಮಾರ್ಗೇಣ ಪೂಜಿತೋ ಮುಕ್ತಿದೋ ಭವೇತ್ । ಕಾಮದಶ್ಚ ಸ್ವಭಕ್ತಾನಾಂ ಭಗವಾನ್ ಪುರುಷೋತ್ತಮಃ ॥ ೧೫೭ ॥ ॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯಪ್ರಣೀತ- ತಂತ್ರಸಾರಸಂಗ್ರಹೇ ತೃತೀಯೋsಧ್ಯಾಯಃ ಸಂಪೂರ್ಣಃ ॥ ಅರ್ಥ - ವಸ್ತುತಃ ಶ್ರೀಹರಿಯೇ ಪಂಚರಾತ್ರಾದಿ ಆಗಮಗಳಲ್ಲಿ ಭಗವತ್ಪೂಜೆ, ಮಂತ್ರ, ಜಪ, ಹೋಮ, ಪ್ರತಿಮಾನಿರ್ಮಾಣ, ಆಲಯ ನಿರ್ಮಾಣಾದಿಗಳನ್ನು ಬಹುರೀತಿಯಲ್ಲಿ ಬಿತ್ತರಿಸಿದ್ದಾನೆ. ಆದರೆ ಅವು ಬಹಳವಿಧವಿರುವುದರಿಂದಲೂ, ಅತ್ಯಂತವಿಸ್ತೃತ- ವಾಗಿರುವುದರಿಂದಲೂ, ಅಲ್ಪಜ್ಞಾನಾದಿಗಳುಳ್ಳ ಈಗಿನ ಪುರುಷ- ರಿಗೆ ದುರ್ಬೋಧವಾಗಿರುವುದರಿಂದಲೂ, ಅವುಗಳನ್ನು ಆಚರಿಸುವುದಕ್ಕೆ ಕಠಿಣಸಾಧ್ಯವಾದ್ದರಿಂದಲೂ ಅವುಗಳ ಸಾರ- ಸಂಗ್ರಹವೆನಿಸಿದ ನಾವು ಹೇಳಿದ ಈ ತಂತ್ರಮಾರ್ಗವು ಅನಾಯಾಸವಾಗಿ ತಿಳಿಯಲಿಕ್ಕೂ, ಅನುಷ್ಠಾನ ಮಾಡುವುದಕ್ಕೂ ಸುಲಭವಾಗಿದೆ. [^1]. ತತ್ವನ್ಯಾಸಕ್ಕೆ ಪ್ರಣವದಂತೆ ಋಷ್ಯಾದಿಗಳನ್ನು ತಿಳಿಯಬೇಕು. "ಅಸ್ಯಶ್ರೀ ತತ್ವನ್ಯಾಸಮಹಾಮಂತ್ರಸ್ಯ ಅಂತರ್ಯಾಮಿ ಋಷಿಃ । ದೈವೀ ಗಾಯತ್ರೀ ಛಂದಃ । ಶಕ್ತ್ಯಾದಿ ತತ್ವರೂಪೀ ಶ್ರೀಪರಮಾತ್ಮಾ ದೇವತಾ । ನ್ಯಾಸೇ ವಿನಿಯೋಗಃ । "ಉದ್ಯದ್ ಭಾಸ್ವತ್ ಸಮಾಭಾಸಃ ..........' (1/18) ಈ ತಂತ್ರದಲ್ಲಿ ಹೇಳಿದಂತೆ ಕರ್ಮಾನುಷ್ಠಾನ ಮಾಡುವವರಿಗೆ ವಿಶೇಷವಾಗಿ ಫಲವು ಲಭಿಸುತ್ತದೆ. ಎಷ್ಟು ಕರ್ಮಗಳನ್ನು ಮಾಡದಿದ್ದರೆ ಆ ಕರ್ಮವು ಸಫಲವಾಗು- ವುದಿಲ್ಲವೋ ಆ ಎಲ್ಲಾ ಕರ್ಮಗಳನ್ನೂ ಈ ತಂತ್ರಸಾರಸಂಗ್ರಹ ದಲ್ಲಿ ಆಗಮದಲ್ಲಿ ಹೇಳಿದ ಪ್ರಕಾರ ಸಂಗ್ರಹಿಸಿ ಹೇಳಲಾಗಿದೆ. ಈ ತಂತ್ರಸಾರಸಂಗ್ರಹದಲ್ಲಿ ಹೇಳಿದಂತೆ ಪೂಜಿತನಾದ ಭಗವಂತನು ಭಕ್ತರಿಗೆ ಪ್ರಸನ್ನನಾಗಿ ಸಮಸ್ತ ಇಷ್ಟಾರ್ಥವನ್ನು ನೆರೆಗೂಡಿಸುವನು. ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ ಮೂರನೆಯ ಅಧ್ಯಾಯವು ಮುಗಿದುದು. ಚತುರ್ಥೋಽಧ್ಯಾಯಃ ವ.ಟೀ. - ಶ್ರೀವೇದವ್ಯಾಸಾಯ ನಮಃ । ಮಂತ್ರೋದ್ಧಾರಾದಿಕಮ್ ಅಸ್ಮಿನ್ನಧ್ಯಾಯೇ ನಿರೂಪಯತಿ ॥ ಟೀಕಾರ್ಥ- ಈ ಪ್ರತಿಮಾಸಂಬಂಧಿವಿಚಾರಗಳನ್ನು ತಿಳಿಸಿ, ಅನೇಕ ಮಂತ್ರಗಳ ಉದ್ಧಾರವನ್ನು ಈ ಅಧ್ಯಾಯದಲ್ಲಿ ನಿರೂಪಿಸುವರು. ಅಥ ವಿಷ್ಣೂದಿತೇ ತಂತ್ರಸಾರೇ ಮಂತ್ರಗಣೋ ಹಿ ಯಃ । ಉದಿತಃ ಸಂಗ್ರಹೇಣಾಸಾವುಚ್ಯತೇsಖಿಲಸಾಧನಃ ॥ ೧ ॥ ಅರ್ಥ- ಸಾಕ್ಷಾತ್ತಾಗಿ ಭಗವಂತನೇ ಹೇಳಿರುವ ತಂತ್ರಸಾರವೆಂಬ ಗ್ರಂಥದಲ್ಲಿ ಹೇಳಲ್ಪಟ್ಟಿರುವ ಸರ್ವಾರ್ಥಗಳನ್ನು ನೀಡಲು ಸಮರ್ಥಗಳಾದ ಕೆಲವು ಮಂತ್ರಗಳನ್ನು ಸಂಗ್ರಹವಾಗಿ ಇಲ್ಲಿ ನಿರೂಪಿಸಲಾಗುತ್ತದೆ. ೩೨ಅಕ್ಷರದ ವರಾಹಮಂತ್ರ ಯಾಷ್ಟಮಸ್ತೂಯುತೋಽಂತೇನ ಸಮೇತಶ್ಚೈವ ಭೂಭೃತಃ । ಬೀಜಂ ನಮಶ್ಚ ಭಗವಾನ್ ಸೋದ್ದೇಶ್ಯೋ ರೂಪಸಂಯುತಃ ॥ ೨ ॥ ಸ ಏವ ತಾದೃಶೋ ಲೋಕತ್ರಯಪಾಲೋ ಭುವಃ ಪತೇಃ । ಭಾವಂ ಮೇ ದೇಹಿ ದಾಂತೇ ತು ದಾಪಯ ಸ್ವಾಹಯಾ ಯುತಃ ॥ ೩ ॥ ಅರ್ಥ - ಯಕಾರದಿಂದ ಎಂಟನೆಯ ಅಕ್ಷರವಾದ ಹಕಾರಕ್ಕೆ ಊ ಕಾರ ಮತ್ತು ಅನುಸ್ವಾರ ಸೇರಿದರೆ ಅದು ವರಾಹಮಂತ್ರದ ಬೀಜಾಕ್ಷರವೆನಿಸುತ್ತದೆ. (ಹೂಂ) ಇದರೊಂದಿಗೆ ನಮಃಶಬ್ದವನ್ನು ಹಾಗೂ ಚತುರ್ಥಿವಿಭಕ್ತಿಯ ಭಗವತ್ ಎಂಬ ಶಬ್ದ. ((ಅನುವಾದ ಪೂರ್ತಿಯಾಗಿಲ್ಲ??????????????) ವ.ಟೀ. - ತತ್ರ ಪ್ರಥಮಂ ವರಾಹಮಂತ್ರೋದ್ಧಾರಮಾಹ - ಯಾऽಷ್ಟಮ ಇತಿ ॥ ಯಕಾರಾಸ್ಯಾಷ್ಟಮೋ ವರ್ಣಃ ಹಕಾರಃ । ಊಯುತಃ । ಊಕಾರೇಣಯುಕ್ತಃ । ಅಂತೇನ ಸಮೇತಃ । ಏತದ್ ಭೂಭೃತೋ ವರಾಹಸ್ಯ ಬೀಜಮ್[^1] । ತತ್ಪರಂ ನಮಃ । ಭಗವಾನ್ 1. ತಿಥಿಸ್ವರಯುತಂ ವ್ಯೋಮ ವಾಮಕರ್ಣವಿಭೂಷಿತಮ್ । ವರಾಹಬೀಜಮುದಿತಂ ಸರ್ವಸಂಪತ್ಪ್ರದಾಯಕಮ್ ॥ ಉದ್ದೇಶ್ಯ ಇತ್ಯಸ್ಯಾಯಮರ್ಥಃ । ಭಗವಚ್ಛಬ್ದಸ್ಯ ಚತುರ್ಥ್ಯಂತ- ಪ್ರಯೋಗಃ । ಉತ್ತರತ್ರಾऽಪ್ಯುದ್ದೇಶ್ಯ ಇತ್ಯಸ್ಯ ಪದಸ್ಯ ಚತುರ್ಥ್ಯಂತ ಪದಪ್ರಯೋಗ ಇತಿ ಭಾವಃ ॥ ಟೀಕಾರ್ಥ - ಮೊದಲು ವರಾಹಮಂತ್ರಸ್ವರೂಪವನ್ನು ತಿಳಿಸು- ವರು. ಯಕಾರದಿಂದ ಎಂಟನೆಯ ಅಕ್ಷರವಾದ ಹಕಾರಕ್ಕೆ ಊಕಾರ ಸೇರಿಸಿದರೆ ಹೂ ಎಂದಾಗುತ್ತದೆ. ಅಂತದಿಂದ ಸೇರಿಸ- ಬೇಕು. 'ಅಂ ಅಂತಾಯ ನಮಃ' ಎಂಬಂತೆ ಅನುಸ್ವಾರವನ್ನು ಸೇರಿಸಿದಾಗ 'ಹೂಂ' ಎಂದಾಗುತ್ತದೆ. ಇದೇ ವರಾಹಮಂತ್ರದ ಬೀಜಾಕ್ಷರವು. ಇದರ ನಂತರ ನಮಃಪದವನ್ನು ಸೇರಿಸಬೇಕು. ಭಗವಚ್ಛಬ್ದ- ವಾದರೂ ಉದ್ದೇಶ್ಯವಾಗಿರುತ್ತದೆ. ಅಂದರೆ ಚತುರ್ಥೀವಿಭಕ್ತಿಯ ಭಗವಚ್ಛಬ್ದವೆಂದಿಟ್ಟುಕೊಳ್ಳಬೇಕು. ಮುಂದೆಯೂ ಹೀಗೆಯೇ ಉದ್ದೇಶ್ಯವೆಂದು ಹೇಳಿದಾಗ ಚತುರ್ಥೀವಿಭಕ್ತ್ಯಂತಪದವನ್ನು ತೆಗೆದುಕೊಳ್ಳಬೇಕು. ಇದರಿಂದಾಗಿ 'ಓಂ ಹೂಂ ನಮೋ ಭಗವತೇ' ಎಂದಾಯಿತು. ವ.ಟಿ. - ತತ್ಪರಂ ಸ ಏವ । ತಾದೃಶ್ಚತುರ್ಥ್ಯ೦ತಃ । ರೂಪ- ಸಂಯುತಶ್ಚ। ವರಾಹರೂಪಾಯೇತ್ಯರ್ಥಃ । ಲೋಕತ್ರಯಪಾಲಃ । ಭೂರ್ಭುವಃಸ್ವಃಪತಿಃ । ಭುವಃ ಪತೇಃ ಭುವಃಪತಿತ್ವಂ ಭಾವಂ ಮೇ ದೇಹೀತಿ ತತ್ವಮ್ । ತದಂತೇ ದದಾಪಯ ಸ್ವಾಹಾ ಇತಿ ಏಕೋ ಮಂತ್ರಃ । ಟೀಕಾರ್ಥ- "ಓಂ ಹೂಂ ನಮೋ ಭಗವತೇ'' ಎಂಬುದರ ನಂತರ ಚತುರ್ಥೀವಿಭಕ್ತಿಯಿಂದ ಕೂಡಿರುವ ವರಾಹಶಬ್ದವನ್ನು ಸೇರಿಸ- ಬೇಕು. ಆಗ 'ವರಾಹರೂಪಾಯ' ಎಂದಾಗುತ್ತದೆ. ನಂತರ ಲೋಕತ್ರಯಪಾಲಕವೆಂಬರ್ಥ ಬರುವ ಭೂರ್ಭುವಸ್ವಃಪತಿ ಎಂಬ ಶಬ್ದ ಸೇರಿಸಬೇಕು. ನಂತರ 'ಭೂಪತಿತ್ವಂ ಮೇ ದೇಹಿ ದದಾಪಯ' ಎಂಬ ಪದಗಳನ್ನು ಸೇರಿಸಿ, ಅಂತ್ಯದಲ್ಲಿ ಸ್ವಾಹಾ ಎಂಬ ಪದಸೇರಿಸಿದಾಗ 32ಅಕ್ಷರಗಳ ವರಾಹಮಂತ್ರ ಲಭಿಸುತ್ತದೆ. "ಓಂ ಹೂಂ ನಮೋ ಭಗವತೇ ವರಾಹರೂಪಾಯ ಭೂರ್ಭುವಃ ಸ್ವಃಪತಯೇ ಭೂಪತಿತ್ವಂ ಮೇ ದೇಹಿ ದದಾಪಯ ಸ್ವಾಹಾ'' ಎಂದು ಪೂರ್ಣಮಂತ್ರಸ್ವರೂಪವು. ತಿಥಿಃ = ಹದಿನೈದನೆಯ 'ಅಮ್' ಎಂಬಲ್ಲಿಯ ಅನುಸ್ವಾರ. ವ್ಯೋಮ = ಆಕಾಶಬೀಜ ಹಕಾರವು. ವಾಮಕರ್ಣಭೂಷಿತಮ್ = ಉಕಾರದಿಂದ ಯುಕ್ತವಾದದ್ದು ವರಾಹಬೀಜಾಕ್ಷರವು ಎಂದು ವೈಹಾಯಸಸಂಹಿತೆಯಲ್ಲಿದೆ. ವರಾಹಪುರಾಣದಲ್ಲಿ 'ಓಂ ನಮಃ ಶ್ರೀವರಾಹಾಯ ಧರಣ್ಯುದ್ಧರ- ಣಾಯ ಸ್ವಾಹಾ' ಎಂಬ ಮಂತ್ರವಿದ್ದು ಇದನ್ನು ಹದಿನಾಲ್ಕು ಲಕ್ಷಬಾರಿ ಜಪಿಸಿ ಪಾಯಸಾನ್ನಹೋಮ ಮಾಡಿದರೆ ಸಕಲ ಭೂಪತಿತ್ವಾದಿಫಲವೆಂದು ತಿಳಿಸಲಾಗಿದೆ. ಇದೊಂದು ವರಾಹದೇವರ ಮಂತ್ರವು. ಏಳು ಹಾಗೂ ಹದಿನಾಲ್ಕು ಅಕ್ಷರ ವರಾಹಮಂತ್ರ ಮನುಸ್ತಸ್ಯಾಪರಸ್ತಾರಬೀಜೋದ್ದೇಶನಮೋಯುತಃ । ನಮಃ ಸೋದ್ದೇಶಭಗವಾನ್ ಮಹಾಶಬ್ದಯುತಶ್ಚ ಸಃ । ತಾದೃಶಃ ಸ್ವಾಹಯಾ ಯುಕ್ತೋ ವರಾಹಸ್ಯಾಪರೋ ಮನುಃ ॥ ೪ ॥ ವ.ಟೀ - ತಾರಬೀಜಸಂಯುಕ್ತವರಾಹಃ ಚತುರ್ಥ್ಯಂತೋ ನಮಸ್ಕಾರಯುತೋऽಷ್ಟಾಕ್ಷರೋಽಪರೋ ಮಂತ್ರಃ । 'ನಮೋ ಭಗವತೇ ಮಹಾವರಾಹಾಯ ಸ್ವಾಹಾ' ಇತ್ಯಪರೋ ಮಂತ್ರಃ ॥ ಟೀಕಾರ್ಥ - ವರಾಹಪದದ ಆದಿಯಲ್ಲಿ ಓಂಕಾರ, ಹೂಂ ಎಂಬ ಬೀಜಾಕ್ಷರಗಳನ್ನು ಕಡೆಯಲ್ಲಿ ನಮಃಪದವನ್ನೂ ಸೇರಿಸಿದಾಗ ವರಾಹಾಷ್ಟಾಕ್ಷರದ ಮತ್ತೊಂದು ಮಂತ್ರವಾಗುತ್ತದೆ. 'ಓಂ ಹೂಂ ವರಾಹಾಯ ನಮಃ' ಎಂದು ಮಂತ್ರದ ಸ್ವರೂಪ. ನಮಃಶಬ್ದದ ನಂತರ ಚತುರ್ಥೀವಿಭಕ್ತ್ಯಂತಗಳಾದ 'ಭಗವತೇ' ಹಾಗೂ 'ಮಹಾ ವರಾಹಾಯ' ಎಂಬ ಪದಗಳನ್ನು ಹಾಗೂ ಕಡೆಯಲ್ಲಿ 'ಸ್ವಾಹಾ' ಎಂಬ ಪದವನ್ನೂ ಸೇರಿಸಿದಾಗ 'ಓಂ ನಮೋ ಭಗವತೇ ಮಹಾವರಾಹಾಯ ಸ್ವಾಹಾ' ಎಂದು ಹದಿನಾಲ್ಕು ಅಕ್ಷರಗಳ ಮೂರನೇ ವರಾಹಮಂತ್ರವೇರ್ಪಡುತ್ತದೆ. ವ.ಟೀ. - ಮಂತ್ರತ್ರಯಸ್ಯ ಧ್ಯಾನಮಾಹ - ಶ್ಯಾಮ ಇತಿ ॥ ಟೀಕಾರ್ಥ - ಮೇಲಿನ ಮೂರೂ ವರಾಹಮಂತ್ರಗಳ ಧ್ಯಾನಶ್ಲೋಕ ವನ್ನು 'ಶ್ಯಾಮ' ಎಂಬುದರಿಂದ ತಿಳಿಸುತ್ತಿರುವರು. ಭೂವರಾಹಧ್ಯಾನ ಶ್ಯಾಮಃ ಸುದರ್ಶನದರಾಭಯಸದ್ವರೇತೋ ಭೂಮ್ಯಾ ಯುತೋऽಖಲನಿಜೋಕ್ತಪರಿಗ್ರಹೈಶ್ಚ। ಧ್ಯೇಯೋ ನಿಜೈಶ್ಚ ತನುಭಿಃ ಸಕಲೈರುಪೇತಃ ಕೋಲೋ ಹರಿಃ ಸಕಲವಾಂಛಿತಸಿದ್ಧಯೇऽಜಃ ॥ ೫ ॥ ಅರ್ಥ - ಕಪ್ಪುಬಣ್ಣದಿಂದ ಶೋಭಿಸುತ್ತಿರುವ, ಚಕ್ರ,ಶಂಖ,ಅಭಯ, ವರ ಮುದ್ರೆಗಳನ್ನು ಧರಿಸಿ, ಎಡಭಾಗದಲ್ಲಿ ಭೂದೇವಿಯ ಸಹಿತನಾದ, ತನ್ನ ಪರಿವಾರ ದೇವತೆಗಳಾದ ಬ್ರಹ್ಮಾದಿಗಳಿಂದ ಯುಕ್ತನಾದವನೂ, ಮತ್ತು ತನ್ನದೇ ಆದ ಮತ್ಸ್ಯಾದಿರೂಪಗಳಿಂದಲೂ ಕೃದ್ಧೋಲ್ಕಾದಿರೂಪ- ಗಳಿಂದಲೂ ಸುತ್ತುವರೆದಿರುವ ವರಾಹರೂಪಿಯಾದ ಶ್ರೀಹರಿ- ಯನ್ನು ಸಕಲಾಭೀಷ್ಟಸಿದ್ಧಿಗಾಗಿ ಧ್ಯಾನ ಮಾಡಬೇಕು[^1] ಮಂತ್ರಗಳ ಋಷಿ, ಛಂದಾದಿಗಳು ವೈಷ್ಣವಾನಾಂ ಮುನಿರ್ಬ್ರಹ್ಮಾ ಮಂತ್ರಾಣಾಂ ವರ್ಣಭೇದತಃ । ಜ್ಞೇಯಂ ಛಂದೋ ದೇವತೈಕಃ ತತ್ತದ್ರೂಪೋ ಹರಿಃ ಪರಃ ॥ ೬ ॥ ಅರ್ಥ- ವೈಷ್ಣವಮಂತ್ರಗಳಿಗೆಲ್ಲ ಬ್ರಹ್ಮದೇವನೇ ಋಷಿಯಾಗಿರು- ವನು. ಛಂದಸ್ಸಾದರೋ ಅಕ್ಷರಗಣನೆಯಿಂದ ತಿಳಿಯಬೇಕು. ಎಲ್ಲಾ ಮಂತ್ರಗಳಿಗೂ ಆಯಾಯ ಮಂತ್ರರೂಪನಾದ ಭಗವಂತನೇ ಪ್ರತಿಪಾದ್ಯನಾಗಿರುವನು. ಪ್ರಣವೇನ ಸ್ವನಾಮ್ನಾ ಚ ಭೂಧರೇಣ ಪರಾತ್ಮನಾ । ಸರ್ವಜ್ಞಸರ್ವಶಕ್ತಿಭ್ಯಾಂ ಷಡಂಗಾನಿ ವಿದೋ ವಿದುಃ ॥ ೭ ॥ ಅರ್ಥ - ಓಂಕಾರ, ವರಾಹಪದ, ಭೂಧರ, ಪರಾತ್ಮಪದಗಳು ಹಾಗೂ ಸರ್ವಜ್ಞ ಸರ್ವಶಕ್ತಿಪದಗಳಿಂದ ವರಾಹಮಂತ್ರಗಳ ಷಡಂಗನ್ಯಾಸವನ್ನು ಮಾಡಬೇಕು[^2]. [^1]. ವರಾಹಪುರಾಣದಲ್ಲಿ ''ಶುದ್ಧಸ್ಫಟಿಕಶೈಲಾಭಂ ರಕ್ತಪದ್ಮಾಯತೇಕ್ಷಣಮ್ । ವರಾಹವದನಂ ಸೌಮ್ಯಂ ಚತುರ್ಬಾಹುಂ ಕಿರೀಟಿನಮ್ ॥ ಶ್ರೀವತ್ಸವಕ್ಷಸಂ ಚಕ್ರಶಂಖಾಭಯಕರಾಂಬುಜಂ ವಾಮೋರುಸ್ಥಿತಯಾ ಯುಕ್ತಂ......................॥ ಎಂದು ಇನ್ನೊಂದು ಧ್ಯಾನಶ್ಲೋಕವನ್ನು ಹೇಳಲಾಗಿದೆ. [^2]. ಅಂಗನ್ಯಾಸಕ್ರಮಃ – ಅಸ್ಯ ಶ್ರೀವರಾಹಮಂತ್ರಸ್ಯ ಬ್ರಹ್ಮಾ ಋಷಿಃ । ವರಾಹರೂಪೀ ಭಗವಾನ್ ದೇವತಾ । ನ್ಯಾಸೇ ವಿನಿಯೋಗಃ ॥ (1) ಓಂ ಹೃದಯಾಯ ನಮಃ (2) ಓಂ ವರಾಹಾಯ ಶಿರಸೇ ಸ್ವಾಹಾ (3) ಓಂ ಭೂಧರಾಯ ಶಿಖಾಯೈ ವೌಷಟ್ (4) ಓಂ ಪರಾತ್ಮನೇ ಕವಚಾಯ ಹುಮ್ (5) ಓಂ ಸರ್ವಜ್ಞಾಯ ನೇತ್ರಾಭ್ಯಾಂ ವಷಟ್ (6) ಓಂ ಸರ್ವಶಕ್ತಯೇ ಅಸ್ತ್ರಾಯ ಫಟ್ ಎಂದು ಷಡಂಗನ್ಯಾಸ. ಈ ರೀತಿ ಎಲ್ಲಾ ಮಂತ್ರಗಳಿಗೂ ವರಾಹಪದದ ಸ್ಥಾನದಲ್ಲಿ ಆಯಾಯ ದೇವತಾನಾಮಗಳನ್ನು ಸೇರಿಸಿ ಅಂಗನ್ಯಾಸ ಮಾಡಬಹುದು. ವ.ಟೀ. - ಸ್ವನಾಮ್ನಾವರಾಹೇತಿ ನಾಮ್ನಾ । ಟೀಕಾರ್ಥ - ಅಥವಾ ಎಲ್ಲಾ ವೈಷ್ಣವಮಂತ್ರಗಳಿಗೂ ಸಾಧಾರಣ ವಾದ ಅಂಗನ್ಯಾಸವನ್ನು ಇಲ್ಲಿ ಹೇಳುತ್ತಿರುವರು. ಸ್ವನಾಮ್ನಾ ಎಂದರೆ ವರಾಹ ಎಂಬ ನಾಮದಿಂದ ಎಂದರ್ಥ. ಜ್ಞಾನೈಶ್ವರ್ಯಪ್ರಭಾನಂದತೇಜಃ ಶಕ್ತಿಭಿರೇವ ವಾ । ಪೂರ್ಣಾತ್ಮಮಧ್ಯಗೈಃ ಸರ್ವವೈಷ್ಣವಾಂಗಾನ್ಯಥೋ ವಿದುಃ ॥ ೮ ॥ ಅರ್ಥ - ಪೂರ್ಣ ಮತ್ತು ಆತ್ಮ ಎಂಬ ಶಬ್ದಗಳ ಮಧ್ಯದಲ್ಲಿರುವ ಜ್ಞಾನ, ಐಶ್ವರ್ಯ, ಪ್ರಭಾ, ಆನಂದ, ತೇಜಃ ಮತ್ತು ಶಕ್ತಿ ಈ ಪದಗಳಿಂದಲೂ ಎಲ್ಲಾ ವೈಷ್ಣವ ಮಂತ್ರಗಳಿಗೆ ಅಂಗನ್ಯಾಸ ಮಾಡಬಹುದು.[^1] ವ.ಟೀ. - ಪೂರ್ಣಾತ್ಮಮಧ್ಯಗೈ: = ಪೂರ್ಣಾತ್ಮಶಬ್ದಯೋಃ ಮಧ್ಯಗತೈಃ । ಜ್ಞಾನೈಶ್ವರ್ಯಾದಿಭಿಃ ವಾ ಷಡಂಗಾನಿ ವಿದುಃ ॥ ಶ್ರೀಕರಾಷ್ಟಾಕ್ಷರ ಮಂತ್ರ ತಿಷ್ಠೋದಾದಿಸ್ವಜಾಯಾಯಾಃಕಾರಣಂ ಸ್ವಾಹಯಾ ಯುತಃ । ಶ್ರೀಕರೋಽಷ್ಟಾಕ್ಷರೋ ಮಂತ್ರೋ ಗರುಡಾರೂಢಸಂಸ್ಮೃತಿಃ ॥ ೯ ॥ ಅರ್ಥ - ಉತ್ತಿಷ್ಠ ಎಂಬ ಪದದ ನಂತರ ಸಂಪತ್ಕರ ಎಂಬರ್ಥ ನೀಡುವ ಶ್ರೀಕರ ಎಂಬ ಶಬ್ದ ಹಾಗೂ ಸ್ವಾಹಾ ಎಂಬ ಶಬ್ದಗಳು ಸೇರಿದಾಗ ಶ್ರೀಕರಾಷ್ಟಾಕ್ಷರ ಮಂತ್ರವಾಗುವುದು. ಇದಕ್ಕೆ ಗರುಡನ ಮೇಲೆ ಕುಳಿತಿರುವ ಭಗವದ್ರೂಪವೇ ಧ್ಯೇಯಮೂರ್ತಿಯಾಗಿದೆ. 'ಸ್ವಜಾಯಾ ಕಾರಣಮ್' ತನ್ನ ಪತ್ನಿಯಾದ ಶ್ರೀದೇವಿಗೆ ಕಾರಣವೆಂಬರ್ಥ ನೀಡುವ ಶ್ರೀಕರಶಬ್ದವು. ನಂತರ ಸ್ವಾಹಾಶಬ್ದ. ತಥಾ ಚ 'ಉತ್ತಿಷ್ಠ ಶ್ರೀಕರ ಸ್ವಾಹಾ' [^1]. ಇಲ್ಲಿ ತಿಳಿಸಿದ ಹಾಗೆ ಅಂಗನ್ಯಾಸ ಕ್ರಮ ಹೀಗಿದೆ (1) ಓಂ ಪೂರ್ಣಜ್ಞಾನಾತ್ಮನೇ ಹೃದಯಾಯ ನಮಃ (2) ಓಂ ಪೂರ್ಣೈಶ್ವರ್ಯಾತ್ಮನೇ ಶಿರಸೇ ಸ್ವಾಹಾ (3) ಓಂ ಪೂರ್ಣಪ್ರಭಾತ್ಮನೇ ಶಿಖಾಯೈ ವೌಷಟ್ (4) ಓಂ ಪೂರ್ಣಾನಂದಾತ್ಮನೇ ಕವಚಾಯ್ ಹುಮ್ (5) ಓಂ ಪೂರ್ಣತೇಜಾತ್ಮನೇ ನೇತ್ರಾಭ್ಯಾಂ ವಷಟ್ (6) ಓಂ ಪೂರ್ಣಶಕ್ತ್ಯಾತ್ಮನೇ ಅಸ್ತ್ರಾಯ ಫಟ್ ಎಂದು ಎಂಟು ಅಕ್ಷರಗಳ ಶ್ರೀಕರಮಂತ್ರವೇರ್ಪಡುತ್ತದೆ.[^1] ವ.ಟೀ.- ತಿಷ್ಠೋದಾದಿಃ ಉತ್ತಿಷ್ಠೇತ್ಯರ್ಥಃ । ಸ್ವಜಾಯಾ ಕಾರಣಮ್। ಶ್ರೀಕರ ಇತಿ ಭಾವಃ । ಸ್ವಾಹಾಯುಕ್ತೋऽರಷ್ಟಾಕ್ಷರಃ । ಅಯಮೇಕೋ ಮಂತ್ರಃ ॥ ಶ್ರೀಕರಾಷ್ಟಾಕ್ಷರಮಂತ್ರದ ನ್ಯಾಸವಿಧಿ ದ್ವಿರ್ಭೀಷಯ ತ್ರಾಸಯ ಚ ಪ್ರಮರ್ದಯ ತಥೈವ ಚ । ಪ್ರಧ್ವಂಸಯಾಥೋ ರಕ್ಷೇತಿ ಪಂಚಾಂಗಶ್ಚೇತ್ಯುದಾಹೃತಃ ॥ ೧೦ ॥ ಅರ್ಥ - ಶ್ಲೋಕದಲ್ಲಿಯ ದ್ವಿಃ ಎಂಬುದಕ್ಕೆ ಎರಡು ಬಾರಿ ಎಂದರ್ಥ. ಭೀಷಯ ಭೀಷಯ ಎಂದು ಎರಡು ಬಾರಿ ಹೇಳ- ಬೇಕೆಂದರ್ಥ. ಇದೇ ರೀತಿ ತ್ರಾಸಯ ತ್ರಾಸಯ ಎಂದೂ, ಪ್ರಮರ್ದಯ ಪ್ರಮರ್ದಯ ಎಂದೂ, ಪ್ರಧ್ವಂಸಯ ಪ್ರಧ್ವಂಸಯ ಎಂದೂ, ರಕ್ಷ ರಕ್ಷ ಎಂದೂ, ತಿಳಿಯಬೇಕು[^2] ವ.ಟಿ. - ದ್ವಿಃ = ದ್ವಿವಾರಂ, ಭೀಷಯ ಭೀಷಯ ಇತಿ । ಏವಮನ್ಯ- ತ್ರಾಪಿ ॥ ಮೂವತ್ತೆರಡು ಅಕ್ಷರದ ನರಸಿಂಹಮಂತ್ರ ಕ್ರೂರಂ ವೀರಂ ಬೃಹದ್ವಿಷ್ಣುಂ ದೀಪ್ಯಂತಂ ವಿಶ್ವತೋಮುಖಮ್ । ಪುಂಮೃಗೇಂದ್ರಂ ಭಯಕರಂ ಶುಭಂ ಮೃತ್ಯೋಶ್ಚ ಮಾರಕಮ್ । ನಮಾಮಿ ಸ್ವಯಮಿತ್ಯೇಷ ದ್ವಾತ್ರಿಂಶಾರ್ಣೋ ಮನುರ್ಹರೇಃ ॥ ೧೧ ॥ ಅರ್ಥ [^1]. ವಿಶೇಷಾಂಶ - ಶ್ರೀಕರಮಂತ್ರದ ಧ್ಯಾನಶ್ಲೋಕವು ಹೀಗಿದೆ - ಆದಿತ್ಯ ಚಂದ್ರಾವಪಿ ಶಂಖಚಕ್ರೌ ಶಂಖಪ್ರಸೂನಾಖ್ಯನಿಧೀ ದಧಾನಃ । ಚಿಂತ್ಯಃ ಕರಾಭ್ಯಾಂ ವಸು ತರ್ಪಯನ್ನಃ ಸ್ವಾಂಕಸ್ಥಲಕ್ಷ್ಮೀಗರುಡಾ ಸನಸ್ಥಃ ॥ [^2]. ಈ ಕ್ರಮದಿಂದ ಶ್ರೀಕರಮಂತ್ರದ ಅಂಗನ್ಯಾಸವು ಹೀಗಿದೆ - (1) ಭೀಷಯ ಭೀಷಯ ಹೃದಯಾಯ ನಮಃ । (2) ಓಂ ತ್ರಾಸಯ ತ್ರಾಸಯ ಶಿರಸೇ ಸ್ವಾಹಾ । (3) ಓಂ ಪ್ರಮರ್ದಯ ಪ್ರಮರ್ದಯ ಶಿಖಾಯೈ ವೌಷಟ್ । (4) ಓಂ ಪ್ರಧ್ವಂಸಯ ಪ್ರಧ್ವಂಸಯ ಕವಚಾಯ ಹುಮ್ । (5) ಓಂ ರಕ್ಷ ರಕ್ಷ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । ವ.ಟೀ - ಉಗ್ರವೀರಮಿತ್ಯರ್ಥೋ ಜ್ಞೇಯಃ ॥ ಟೀಕಾರ್ಥ - ಶ್ಲೋಕದಲ್ಲಿರುವ 'ಕ್ರೂರ'ವೆಂಬ ಪದಕ್ಕೆ 'ಉಗ್ರಂ ವೀರಂ' ಎಂದರ್ಥ ತಿಳಿಯಬೇಕು[^1]. ಹದಿನಾಲ್ಕು ಅಕ್ಷರ ನೃಸಿಂಹಮಂತ್ರ ದ್ವಿರ್ಜಯಸ್ಯೋಪರಿ ನಿಜಂ ಸೋದ್ದೇಶಂ ಸರ್ವವಿತ್ ತಥಾ । ಮಹಾತೇಜೋ ಬಲಂ ವೀರ್ಯಂ ತಾದೃಶಂ ಸ್ವಾಹಯಾ ಯುತಮ್ । ಚತುರ್ವಿಂಶಾಕ್ಷರೋ ಮಂತ್ರೋ ನಿಖಿಲೇಷ್ಟಪ್ರದಾಯಕಃ ॥ ೧೨ ॥ ಅರ್ಥ 'ಜಯ ಜಯ' ಎಂದು ಎರಡು ಬಾರಿ ಉಚ್ಚರಿಸಬೇಕು. ನಂತರ ಚತುರ್ಥೀವಿಭಕ್ತ್ಯಂತವಾದ ನರಸಿಂಹಶಬ್ದ, ಚತುರ್ಥೀ ವಿಭಕ್ತ್ಯಂತವಾದ ಸರ್ವಜ್ಞ ಎಂಬ ಪದವನ್ನು ಉಚ್ಚರಿಸಬೇಕು. ಈ ಪದಗಳ ನಂತರ 'ಮಹಾತೇಜೋಬಲವೀರ್ಯ' ಎಂಬ ಪದ; ಕಡೆ- ಯಲ್ಲಿ ಸ್ವಾಹಾ ಎಂಬ ಪದ. ಇವಿಷ್ಟು ಸೇರಿದರೆ ಇಪ್ಪತ್ತನಾಲ್ಕು ಅಕ್ಷರಗಳ ಮತ್ತೊಂದು ನೃಸಿಂಹಮಂತ್ರವಾಗುತ್ತದೆ[^2] ವ.ಟೀ. - ದ್ವಿರ್ಜಯಸ್ಯ ಜಯ ಜಯೇತ್ಯಸ್ಯ ಉಪರಿ ಸೋದ್ದೇಶಃ । ನರಸಿಂಹಶ್ಚತುರ್ಥ್ಯಂತಃ । ತತ್ಪರಂ ಸಃ ಸರ್ವವಿತ್ ಸರ್ವಜ್ಞಾ- ಯೇತಿ । ತತ್ಪರಂ ಮಹಾತೇಜೋಬಲಶಬ್ದಶ್ಚ। ತಾದೃಶಃ ಚತುರ್ಥ್ಯಂತಃ । ತತ್ವರಂ ಸ್ವಾಹಾಯುಕ್ತಃ ಚತುರ್ವಿಂಶಾಕ್ಷರೋ ಅಪರೋ ಮಂತ್ರೋ ನೃಸಿಂಹಸ್ಯ ಇತಿ ಜ್ಞೇಯಃ । [^1]. ವಿಶೇಷಾಂಶ "ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್। ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ॥'' ಎಂದು ನರಸಿಂಹಾನುಷ್ಟುಪ್ ಮಂತ್ರಸ್ವರೂಪವೇ ೩೨ಅಕ್ಷರಗಳ ನರಸಿಂಹಮಂತ್ರವಾಗಿರುತ್ತದೆ. ಅಗ್ನಿಪುರಾಣದಲ್ಲಿ "ಓಂ ಅಂ ಇಂ ಉಮ್ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್ । ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ॥'' ಎಂದು ಹೇಳಲಾಗಿದೆ. ಈ ನೃಸಿಂಹಾನುಷ್ಟುಪ್ ಜಪದಿಂದ ವಿಷ, ವ್ಯಾಧಿಗಳೆಲ್ಲವೂ ನಾಶ- ವಾಗುವವು. [^2]. ಈ ಮಂತ್ರದ ಸ್ವರೂಪ ಹೀಗಿದೆ "ಓಂ ಜಯ ಜಯ ನೃಸಿಂಹಾಯ ಸರ್ವಜ್ಞಾಯ ಮಹಾತೇಜೋ ಬಲವೀರ್ಯಾಯ ಸ್ವಾಹಾ' ನೃಸಿಂಹಗಾಯತ್ರೀ ವಿದ್ಮಹೇ ಧೀಮಹೇ ಪೂರ್ವಂ ಸ್ವಯಂ ಚೈವ ಮಹಾಬಲಃ । ಪ್ರೇರಯೇತ್ ತನ್ನ ಇತ್ಯೇತನ್ಮಧ್ಯೇऽನಂತಃ ಪ್ರಕೀರ್ತಿತಃ ॥ ೧೩ ॥ ಅರ್ಥ- 'ಸ್ವಯಂ' ಎಂದರೆ ಚತುರ್ಥ್ಯಂತವಾದ 'ನೃಸಿಂಹಾಯ' ಎಂಬ ಪದ. ಇದರನಂತರ ವಿದ್ಮಹೇ ಎಂಬ ಪದ. ಈ ಪದದ ನಂತರ 'ಮಹಾಬಲಾಯ' ಎಂಬ ಪದ. ನಂತರ 'ಧೀಮಹಿ' ಎಂಬ ಪದವನ್ನು ಹೇಳಬೇಕು. ಕಡೆಯಲ್ಲಿ 'ತನ್ನೋ ಅನಂತಃ ಪ್ರಚೋದಯಾತ್' ಎಂದು ಉಚ್ಚರಿಸಿದಾಗ ನೃಸಿಂಹಗಾಯತ್ರೀ ಮಂತ್ರವೇರ್ಪಡುತ್ತದೆ[^1]. ವ. ಟೀ. - ಸ್ವಯಂ ನೃಸಿಂಹಶ್ಚತುರ್ಥ್ಯಂತಃ । ತದುಪರಿ ವಿದ್ಮಹೇ ಇತಿ । ತತ್ಪರಂ ಮಹಾಬಲಃ ಚತುರ್ಥ್ಯಂತಃ । ತದುಪರಿ ಧೀಮಹೀತಿ ತನ್ನೋSನಂತಃ ಪ್ರಚೋದಯಾತ್ ಇತಿ । ನೃಸಿಂಹಗಾಯತ್ರೀಮಂತ್ರೇಷು ಪೂರ್ವಯೋಃ ಮಂತ್ರಯೋಃ ಇತಿ ಶೇಷಃ ॥ ನೃಸಿಂಹಮಂತ್ರದ ನ್ಯಾಸಕ್ರಮ ಪಾದೈರ್ವ್ಯಸ್ತೇಃ ಸಮಸ್ತೈಶ್ಚ ಪದೈಶ್ಚಾಂಗಂ ಪ್ರಕೀರ್ತಿತಮ್ । ಪೂರ್ವಯೋಸ್ತತ್ರ ಪೂರ್ವಂ ತು ಸರ್ವಜ್ಞೇನ ಷಡಂಗಕಮ್ । ತೃತೀಯಂ ತು ದ್ವಿರಾವೃತ್ತೈಃ ಪಾದೈರಂಗಸಮನ್ವಿತಮ್ ॥ ೧೪ ॥ ಅರ್ಥ- ಹಿಂದೆ ಹೇಳಿದ ಎರಡು ನೃಸಿಂಹಮಂತ್ರಗಳಲ್ಲಿ ಪಂಚಾಂಗನ್ಯಾಸವನ್ನು ಮಂತ್ರದ ನಾಲ್ಕು ಪಾದ ಹಾಗೂ ಸಮಸ್ತಮಂತ್ರದಿಂದ ಮಾಡಬೇಕು. ಇದಕ್ಕೆ 'ಸರ್ವಜ್ಞ' ಎಂಬ ಪದ ಸೇರಿಸಿ ಷಡಂಗನ್ಯಾಸವನ್ನು ಮಾಡಬಹುದು. ದ್ವಿತೀಯ ಮಂತ್ರ- ದಲ್ಲಿ ಆರುಪದಗಳಿಂದಲೇ ಷಡಂಗನ್ಯಾಸವು. ಮೂರನೆಯದ್ದಾದ ನೃಸಿಂಹಗಾಯತ್ರಿಯಲ್ಲಾದರೋ ಪಾದಗಳನ್ನೇ ಎರಡು ಬಾರಿ ಉಚ್ಚರಿಸಿ ಷಡಂಗನ್ಯಾಸ ಮಾಡಬೇಕು[^2] [^1]. ಮಂತ್ರಸ್ವರೂಪ ಹೀಗಿದೆ "ನೃಸಿಂಹಾಯ ವಿದ್ಮಹೇ ಮಹಾಬಲಾಯ ಧೀಮಹಿ । ತನ್ನೋSನಂತಃ ಪ್ರಚೋದಯಾತ್ '' [^2]. ಈ ಶ್ಲೋಕದಿಂದ ಹೇಳಿದ ನ್ಯಾಸವಿವರಗಳನ್ನು ಹೀಗೆ ಸಂಗ್ರಹಿಸಬಹುದು. ಮೊದಲನೆಯ ನೃಸಿಂಹಾನುಷ್ಟುಪ್ ಮಂತ್ರದ ಅಂಗನ್ಯಾಸ (1) ಉಗ್ರಂ ವೀರಂ ಮಹಾವಿಷ್ಣುಂ ಹೃದಯಾಯ ನಮಃ । (2) ಜ್ವಲಂತಂ ಸರ್ವತೋಮುಖಂ ಶಿರಸೇ ಸ್ವಾಹಾ । ವ.ಟಿ. - ನೃಸಿಂಹಗಾಯತ್ರೀಮಂತ್ರೇಷು ಪೂರ್ವಯೋಃ ಮಂತ್ರಯೋಃ ಇತಿ ಶೇಷಃ ॥ ನೃಸಿಂಹಧ್ಯಾನ ಧ್ಯಾಯೇನ್ನೃಸಿಂಹಮುರುವೃತ್ತರವಿತ್ರಿನೇತ್ರಂ ಜಾನುಪ್ರಸಕ್ತಕರಯುಗ್ಮಮಥಾಪರಾಭ್ಯಾಮ್ । ಚಕ್ರಂ ದರಂ ಚ ದಧತಂ ಪ್ರಿಯಯಾ ಸಮೇತಂ ತಿಗ್ಮಾಂಶುಕೋಟ್ಯಧಿಕತೇಜಸಮಗ್ರ್ಯಶಕ್ತಿಮ್ ॥ ೧೫ ॥ ಅರ್ಥ- ಉತ್ಕೃಷ್ಟ ಹಾಗೂ ದುಂಡಾಗಿರುವ, ಸೂರ್ಯನಂತೆ ಬೆಳಗುವ ತ್ರಿನೇತ್ರಧಾರಿಯಾದ, ಎರಡು ಕೈಗಳನ್ನು ಮೊಳಕಾಲಿ- ನಲ್ಲಿರಿಸಿಕೊಂಡ, ಉಳಿದೆರಡು ಕೈಗಳಲ್ಲಿ ಚಕ್ರ-ಶಂಖಗಳನ್ನು ಧರಿಸಿಕೊಂಡ, ಕೋಟಿಕೋಟಿ ಸೂರ್ಯರಿಗಿಂತಲೂ ಅಧಿಕ ತೇಜಸ್ಸಿನಿಂದ ಉಜ್ಜ್ವಲನಾದ, ಲಕ್ಷ್ಮೀದೇವಿಯಿಂದ ಕೂಡಿರುವ, ಸಮಗ್ರಶಕ್ತಿಯ (3) ನೃಸಿಂಹಂ ಭೀಷಣಂ ಭದ್ರಂ ಶಿಖಾಯೈ ವೌಷಟ್ । (4) ಮೃತ್ಯು ಮೃತ್ಯುರ್ನಮಾಮ್ಯಹಂ ಕವಚಾಯ ಹುಮ್ । (5) ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಮ್ ನೃಸಿಂಹಂ ಭೀಷಣಂ ಭದ್ರಂ ಮೃತ್ಯೋ ಮೃತ್ಯುಂ ನಮಾಮ್ಯಹಮ್ ಅಸ್ತ್ರಾಯಫಟ್ । ಎರಡನೆಯ ಚತುರ್ವಿಂಶತ್ಯಕ್ಷರನೃಸಿಂಹಮಂತ್ರದ ಅಂಗನ್ಯಾಸ (೧) ಜಯ ಹೃದಯಾಯ ನಮಃ (೨) ಜಯ ಶಿರಸೇ ಸ್ವಾಹಾ (೩) ನರಸಿಂಹಾಯ ಶಿಖಾಯೈ ವೌಷಟ್ (೪) ಸರ್ವಜ್ಞಾಯ ಕವಚಾಯ ಹುಮ್ (೫) ಮಹಾತೇಜೋಬಲವೀರ್ಯಾಯ ನೇತ್ರಾಯ ವೌಷಟ್ (೬) ಸ್ವಾಹಾ ಅಸ್ತ್ರಾಯಫಟ್ ॥ ಇತಿ ದಿಗ್ಬಂಧಃ । ಮೂರನೆಯ ನೃಸಿಂಹಗಾಯಮಂತ್ರದ ಅಂಗನ್ಯಾಸ (೧) ನೃಸಿಂಹಾಯ ವಿದ್ಮಹೇ ಹೃದಯಾಯ ನಮಃ (೨) ಮಹಾಬಲಾಯ ಧೀಮಹಿ ಶಿರಸೇ ಸ್ವಾಹಾ (೩) ತನ್ನೋSನಂತಃ ಪ್ರಚೋದಯಾತ್ ಶಿಖಾಯೈ ವೌಷಟ್ (೪) ನೃಸಿಂಹಾಯ ವಿದ್ಮಹೇ ಕವಚಾಯ ಹುಮ್ (೫) ಮಹಾಬಲಾಯ ಧೀಮಹಿ ನೇತ್ರಾಯ ವೌಷಟ್ (೬) ತನ್ನೋSನಂತಃ ಪ್ರಚೋದಯಾತ್ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । ಖನಿಯಾದ ನೃಸಿಂಹನನ್ನು ಧ್ಯಾನಿಸಬೇಕು. ಧ್ಯೇಯಮೂರ್ತಿಯ ಬಾಹುಗಳಲ್ಲಿ ವಿಶೇಷ; ಧ್ಯೇಯರೂಪದ ಧ್ಯಾನ ಸರ್ವೇಷ್ವಪಿ ಹಿ ಮಂತ್ರೇಷು ದ್ವ್ಯಾದ್ಯನಂತಾಂತಬಾಹುಕಃ । ಚೇತನಾಂತಸ್ಥಮಾರಭ್ಯ ಸರ್ವಗಾಂತಸ್ಥರೂಪವಾನ್ ॥ ೧೬ ॥ ಅನಂತರೂಪೋ ಧ್ಯೇಯೋSತಃ ಸ್ವಗುರೂಕ್ತಾನುಸಾರತಃ । ಯಥಾಯೋಗ್ಯಂ ಯಥಾಶಕ್ತಿ ತತ್ತದಾಯುಧಭೂಷಣಃ ॥ ೧೭ ॥ ಅರ್ಥ - ಯಾವುದೇ ಮಂತ್ರಪ್ರತಿಪಾದ್ಯವಾದ ಭಗವನ್ಮೂರ್ತಿಗಳಿಗೆ ಎರಡಾಗಲೀ ನಾಲ್ಕಾಗಲೀ ಕೈಗಳೆಂಬ ನಿಯಮವಿರುವುದಿಲ್ಲ. ಅನಂತಾನಂತಬಾಹುಗಳಿರುತ್ತವೆ. ಅದರಂತೆಯೇ ಭಗವಂತನ ರೂಪಗಳ ವಿಷಯದಲ್ಲಿಯೂ ಕೂಡ. ಆದರೂ ತನ್ನ ಸಾಮರ್ಥ್ಯ- ವನ್ನೂ, ಯೋಗ್ಯತೆಯನ್ನೂ ತಿಳಿದ ಯೋಗ್ಯಗುರುಗಳ ಉಪದೇಶದಂತೆ, ತನಗೆ ನಿಲುಕುವ ಭಗವಂತನ ರೂಪಗಳನ್ನೂ, ಅವಯವ, ಆಯುಧ, ಭೂಷಣಗಳನ್ನೂ ಧ್ಯಾನಿಸಬೇಕು. ಶಂಖಚಕ್ರಗದಾಪದ್ಮಖಡ್ಗಖೇಟಾಃ ಸಶಾರ್ಙ್ಗಕಾಃ। ಶರೋ ಮುಸಲವಜ್ರೌ ಹಲಃ ಪಾಶಾಂಕುಶೌ ತಥಾ ॥ ೧೮ ॥ ಶೂಲಂ ಚ ಭಿಂಡಿಪಾಲಶ್ಚ ಪಟ್ಟಶೋऽಗ್ನಿರ್ವರಾಭಯೇ । ತರ್ಕಮುದ್ರಾऽಕ್ಷಮಾಲಾ ಚ ಪುಸ್ತಕಂ ಚ ವಿದಾರಣಮ್ । ಇತ್ಯಾದೀನ್ಯಖಿಲಾನ್ಯೇವ ವಿಷ್ಣೋಶ್ಚಿಂತ್ಯಾನಿ ಬಾಹುಷು ॥ ೧೯ ॥ ಅರ್ಥ - ಭಗವಂತನ ಚಕ್ರ, ಶಂಖ, ಗದೆ, ಪದ್ಮ, ಖಡ್ಗ, ಗುರಾಣಿ, ಬಿಲ್ಲು, ಬಾಣ, ಒನಕೆ, ವಜ್ರಾಯುಧ, ನೇಗಿಲು, ಪಾಶ, ಅಂಕುಶ, ಶೂಲ, ಈಟಿ, ಭರ್ಜಿ ಮೊದಲಾದ ಆಯುಧಗಳನ್ನೋ; ಅಗ್ನಿ, ವರಮುದ್ರೆ, ಅಭಯಮುದ್ರೆ, ಜ್ಞಾನಮುದ್ರೆಯನ್ನೋ ; ಅಕ್ಷಮಾಲೆ, ಪುಸ್ತಕ ಅಥವಾ ಇನ್ನ್ಯಾವುದೋ ಆಯುಧಗಳನ್ನು ಧರಿಸಿರುವ ಭಗವಂತನನ್ನು ಧ್ಯಾನಿಸಬಹುದು ಅಥವಾ ತನ್ನ ಕೈಗಳಿಂದ ಶತ್ರುವಾದ ಹಿರಣ್ಯಾಕ್ಷನನ್ನು ಬಗೆಯುತ್ತಿರುವ ನರಸಿಂಹನ ರೂಪಗಳನ್ನು ಧ್ಯಾನಿಸಬಹುದು. ಹಂಸಮಂತ್ರಗಳು ವಿಯತ್ ಸ ಇತಿ ಯುಗ್ಮಾರ್ಣೋ ವಿಪರೀತಶ್ಚ ಸ ಸ್ಮೃತಃ । ಸ ಸರ್ಗಹೀನೋ ವೇತಶ್ಚ ಬಿಂದುಹೀನೋತ್ತರಸ್ತಥಾ ॥ ೨೦ ॥ ತ್ರಯ ಏತೇ ಮಹಾಮಂತ್ರಾಃ ಪುರುಷಾರ್ಥಚತುಷ್ಟಯೇ । ಕಲ್ಪವೃಕ್ಷಾಃ ಪ್ರಿಯಾ ವಿಷ್ಣೋಃ ವಿಶೇಷಾತ್ ಜ್ಞಾನದಾಯಕಾಃ ॥೨೧ ॥ ಅರ್ಥ - ವಿಯತ್ ಎಂದರೆ ಹಕಾರವು. ಇದಕ್ಕೆ ಬಿಂದು ಸೇರಿಸಿದರೆ ಹಂ ಎಂದಾಗುತ್ತದೆ. ಇದರ ನಂತರ ಸಕಾರ ಸೇರಿಸಿದಾಗ 'ಹಂಸಃ' ಎಂದು ಎರಡಕ್ಷರಗಳ ಒಂದು ಮಂತ್ರವಾಗುತ್ತದೆ. ಅದೇ ಅಕ್ಷರ- ಗಳನ್ನು ಹಿಂದುಮುಂದಾಗಿಸಿದರೆ 'ಸೋSಹಂ' ಎಂದಾಗುತ್ತದೆ. ಇದು ಇನ್ನೊಂದು ಮಂತ್ರ. ಸಃ ಎಂಬಲ್ಲಿನ ವಿಸರ್ಗವನ್ನು ತೆಗೆದು ವಾಕಾರ ಸೇರಿಸಿ, ಅದರ ನಂತರದ ಹಂ ಎಂಬಲ್ಲಿನ ಅನುಸ್ವಾರ ತೆಗೆದು ಆಕಾರ ಸೇರಿಸಿದರೆ ಸ್ವಾಹಾ ಎಂದಾಗಿ ಮೂರನೇ ಮಂತ್ರ- ವೇರ್ಪಡುತ್ತದೆ. ಹೀಗೆ ಇವು ಮೂರು ಮಂತ್ರಗಳು, 'ಹಂಸಃ ಸೋಽಹಂ ಸ್ವಾಹಾ' ಎಂಬುದು ಹಂಸಮಂತ್ರದ ಸ್ವರೂಪ. ವ.ಟೀ. - ವಿಯದ್ವರ್ಣಾಃ ಹಕಾರಃ, ಬಿಂದ್ವಂತಃ । ತತ್ಪರಃ ಸಕಾರಃ। ಅಯಮೇಕೋ ಮಂತ್ರಃ । ಸ ಏವೇತಿ ವಿಪರೀತಃ । ಪ್ರಾತಿಲೋಮ್ಯೇನೋಕ್ತ ಏಕೋ ಮಂತ್ರಃ । ಸಕಾರಸ್ಯ ಓಂಕಾರ ಸಂಯೋಗೇ ವಿಶೇಷಃ । ತತ್ಪರಂ ಸಃ ಸಕಾರಃ ಸರ್ಗಹೀನೋ ಬಿಂದುಹೀನಃ । ವಾಕಾರೇಣ ಯುಕ್ತಃ । ಉತ್ತರಃ ಮಕಾರೋಽಪಿ ತಥಾ = ಬಿಂದುಹೀನಃ ದೀರ್ಘಯುಕ್ತಃ । ಸ್ವಾಹಾ ಇತಿ ಭಾವಃ । ಅಯಮೇಕೋ ಮಂತ್ರಃ । ಏವಮೇತೇ ತ್ರಯೋ ಮಂತ್ರಾಃ ॥ ಹಂಸಮಂತ್ರದ ಅಂಗನ್ಯಾಸ ಏತೈರೇವ ದ್ವಿರಾವೃತ್ತೈಃ ಅಂಗಮೇಷಾಂ ಪ್ರಕೀರ್ತಿತಮ್ । ಅರ್ಥ - ಈ ಮೂರುಮಂತ್ರಗಳನ್ನು ಎರಡು ಬಾರಿ ಆವೃತ್ತಿಗೊಳಿಸಿ ದಾಗ ಷಡಂಗನ್ಯಾಸವೇರ್ಪಡುತ್ತದೆ[^1] [^1]. ಷಡಂಗನ್ಯಾಸಕ್ರಮವು ಹೀಗಿದೆ ಹಂಸಃ ಹೃದಯಾಯ ನಮಃ । ಸೋಽಹಂ ಶಿರಸೇ ಸ್ವಾಹಾ । ಸ್ವಾಹಾ ಶಿಖಾಯೈ ವಷಟ್ । ಹಂಸಃ ಕವಚಾಯ ಹುಮ್ । ಸೋಽಹಂ ನೇತ್ರಾಭ್ಯಾಂ ವೌಷಟ್ । ಶ್ವಾಸಸಂಖ್ಯೆ- ಪ್ರಾತರ್ಯೋಗ ಶ್ವಾಸರೂಪೋ ಜಪೋ ನಿತ್ಯಮುಭಯೋರ್ವಿದ್ವದಜ್ಞಯೋಃ ॥ ೨೨ ॥ ಏಕವಿಂಶತ್ ಸಹಸ್ರಾತ್ಮಾ ಸಷಟ್‌ಶತಮಹರ್ನಿಶಮ್ । ಅರ್ಪಣೀಯೋ ಹರೌ ನಿತ್ಯಂ ಪ್ರಾತರ್ಯೋಗೋ ಮಹಾನಯಮ್ ॥ ೨೩ ॥ ಅರ್ಥ - ಜ್ಞಾನಿಗಳು ಹಾಗೂ ಅಜ್ಞಾನಿಗಳು ಪ್ರತಿದಿವಸವೂ 21,600 ಶ್ವಾಸರೂಪವಾದ ಹಂಸಮಂತ್ರವನ್ನು ಜಪಿಸುತ್ತಿರುತ್ತಾರೆ. ಇದನ್ನು ಪ್ರತಿದಿನವೂ ಭಗವಂತನಿಗೆ ಅರ್ಪಿಸಬೇಕು. ಈ ಕೆಲಸವನ್ನು ವಾಯುದೇವರು ಮಾಡುವರು. ಪ್ರಾತಃಕಾಲದಲ್ಲಿ ಅರ್ಪಿಸುವುದರಿಂದ ಇದನ್ನು ಪ್ರಾತರ್ಯೋಗ ಎನ್ನಲಾಗಿದೆ. ಹಂಸಮಂತ್ರದ ಮಹಿಮೆ ಅಶೇಷದೋಷದಹನಃ ತತ್ತ್ವಜ್ಞಾನಪ್ರದಾಯಕಃ । ಅಷ್ಟೈಶ್ವರ್ಯಪ್ರದಶ್ಚೈವ ಕೃತಾದೌ ಸಮುಪಾಸತಾಮ್ । ತಾರಯೋಗೋऽಪ್ಯೇವಮೇವ ಬ್ರಹ್ಮಾದಾವೇವ ವರ್ತತೇ ॥ ೨೪ ॥ ಅರ್ಥ- ಈ ಮಂತ್ರವಾದರೋ ಕೃತಾದಿಚತುರ್ಯುಗಗಳಲ್ಲಿ ಮಂತ್ರಾವೃತ್ತಿ ಮಾಡುವವರ ಸಕಲದೋಷಗಳನ್ನು ನಾಶಪಡಿಸು ತ್ತದೆ. ಅಣಿಮಾದ್ಯಷ್ಟಸಿದ್ಧಿಯನ್ನು ನೀಡುತ್ತದೆ. ಈ ಮಂತ್ರದ ಆದಿಯಲ್ಲಿ ಓಂಕಾರ ಸೇರಿಸಿದರೆ 'ಓಂ ಹಂಸಃ ಸೋಽಹಂ ಸ್ವಾಹಾ' ಎಂದು ಏರ್ಪಡುತ್ತದೆ. ಇದು ಇನ್ನೊಂದು ಹಂಸಮಂತ್ರವಾಗು- ತ್ತದೆ. ಆದರೆ ಇದನ್ನು ಜಪಿಸುವ ಅಧಿಕಾರ ಬ್ರಹ್ಮಾದಿದೇವತೆಗಳಿಗೆ ಮಾತ್ರವಿರುತ್ತದೆ. ವ.ಟೀ. - ಅಥ ತಾರಯೋಗಃ = ಪ್ರಣವಯೋಗಃ । ಸೋऽಪ್ಯೇಕೋ ಮಂತ್ರಃ ತಥಾ। ಟೀಕಾರ್ಥ - ತಾರಯೋಗವೆಂದರೆ ಪ್ರಣವವನ್ನು ಆದಿಯಲ್ಲಿ ಸೇರಿಸುವುದು. ಹೀಗೆ ಮಂತ್ರದ ಆದಿಯಲ್ಲಿ ಓಂಕಾರವಿರುವ ಹಂಸಮಂತ್ರವೂ ಹಂಸಮಂತ್ರವೆನಿಸುತ್ತದೆ. ಹಂಸಮಂತ್ರದ ಧ್ಯೇಯರೂಪ ಅವತಾರಿಕಾ – ಹಂಸಮಂತ್ರದ ಧ್ಯಾನಶ್ಲೋಕವನ್ನು ತಿಳಿಸುತ್ತಾರೆ. ಸ್ವಾಹಾ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । ಧ್ಯಾಯೇದ್ರವೀಂದುಕರಮಿಂದುಸಹಸ್ರಲಕ್ಷಕಾಂತಿಂ ಪ್ರಿಯಾಸಹಿತಮಾಸ್ಥಿತಮಿಂದುಬಿಂಬೇ। ಶಂಖಾರಿದೋರ್ದ್ವಯಮುದರ್ಕಮಹೇಂದುಬಿಂಬಾತ್ ಸಂಸಿಚ್ಯಮಾನಮಮೃತೇನ ರಮಾಧಿನಾಥಮ್ ॥ ೨೫ ॥ ಅರ್ಥ - ತನ್ನ ಎರಡು ಕೈಗಳಲ್ಲಿ ಸೂರ್ಯಚಂದ್ರರನ್ನು, ಮತ್ತೆರಡು ಕೈಗಳಲ್ಲಿ ಶಂಖಚಕ್ರಗಳನ್ನು ಧರಿಸಿಕೊಂಡು, ಅನಂತಾನಂತ ಚಂದ್ರರಿಗಿಂತಲೂ ಅತ್ಯಧಿಕ ಪ್ರಕಾಶದಿಂದ ಶೋಭಿಸುತ್ತಿರುವ, ರಮಾದೇವಿಯೊಡನೆ ಚಂದ್ರಮಂಡಲದಲ್ಲಿ ಕುಳಿತಿದ್ದು, ಚಂದ್ರಮಂಡಲದ ಮೇಲಿನ ಭಾಗದಿಂದ ಸುರಿಯು- ತ್ತಿರುವ ಅಮೃತದಿಂದ ಅಭಿಷೇಕಿಸಲ್ಪಡುತ್ತಿರುವ ಹಂಸನಾಮಕ ಭಗವಂತನನ್ನು ಧ್ಯಾನ ಮಾಡಬೇಕು. ಅಷ್ಟಾಕ್ಷರಹಂಸಮಂತ್ರ ಅಂತ್ಯಸ್ಯ ರಕ್ತವರ್ಣೋ ವಾ ಧ್ಯೇಯೋ ವಿಷ್ಣುಃ ಸನಾತನಃ । ವಿದ್ಯುದ್ವರ್ಣೋಽಥವಾ ಧ್ಯೇಯಃ ಶಕ್ತ್ಯೇತಃ ಪಂಚಮಂತ್ರಯುಕ್ ॥ ೨೬ ॥ ಅಷ್ಟಾಕ್ಷರೋ ಮಹಾಮಂತ್ರಃ ತೈರೇವಾಂಗೈಃ ಸಮನ್ವಿತಃ । ಅಂತ್ಯಧ್ಯಾನಯುತಶ್ಚೈವ ನಿಃಶೇಷಪುರುಷಾರ್ಥದಃ ॥ ೨೭ ॥ ಅರ್ಥ- ಸಪ್ತಾಕ್ಷರವುಳ್ಳ ಕಡೆಯಲ್ಲಿ ಹೇಳಿದ ಓಂಕಾರಸಹಿತ ಹಂಸಮಂತ್ರದ ಧ್ಯಾನದಲ್ಲಿ ಭಗವಂತನು ರಕ್ತವರ್ಣನೆಂದಾಗಲೀ, ವಿದ್ಯುತ್ತಿನಂತೆ ಕಾಂತಿಯುಳ್ಳವನೆಂದಾಗಲೀ ಧ್ಯಾನಿಸಬೇಕು. ಇದರ ಜೊತೆಗೆ 'ಹ್ರೀಂ ಎಂಬ ಶಕ್ತಿ ಬೀಜಾಕ್ಷರವನ್ನು 'ಓಂ ಹ್ರೀಂ ಹಂಸಃ ಸೋಹಂ ಸ್ವಾಹಾ' ಎಂಬ ಅಷ್ಟಾಕ್ಷರಹಂಸಮಂತ್ರ ಏರ್ಪಡುತ್ತದೆ. ಇದು ಇನ್ನೊಂದು ಮಂತ್ರವಾಗುತ್ತದೆ. ಒಟ್ಟು ಓಂಕಾರ, ಹ್ರೀಂಕಾರ ಗಳಿಂದಾಗಿ ಒಟ್ಟು ಮೂರು ಮಂತ್ರಗಳಾಗುತ್ತವೆ. ಓಂ, ಹ್ರೀಂ, ಹಂಸಃ, ಸೋಽಹಂ, ಸ್ವಾಹಾ ಎಂಬ ಐದು ಮಂತ್ರಗಳಿಂದ ಕೂಡಿದ ಮಾಲಾಮಂತ್ರವೇ ಹಂಸಮಂತ್ರವು. ಹೀಗೆ ಪಂಚಮಹಾಮಂತ್ರ- ಗಳು ಒಟ್ಟಿಗೆ ಅಷ್ಟಾಕ್ಷರಹಂಸಮಂತ್ರವೆನಿಸುತ್ತವೆ. ಈ ಮಂತ್ರದ ಐದು ಪದಗಳಿಂದಲೇ ಈ ಮಂತ್ರದ ಅಂಗನ್ಯಾಸ- ಮಾಡಿಕೊಳ್ಳಬಹುದು. ಸಪ್ತಾಕ್ಷರಕ್ಕೆ ಹೇಳಿದಂತೆ ರಕ್ತವರ್ಣ ಅಥವಾ ವಿದ್ಯುದ್ವರ್ಣವನ್ನಾಗಲೀ ತಿಳಿಯಬೇಕು. ಈ ಮಂತ್ರವು ಸಕಲ ಇಷ್ಟಾರ್ಥಗಳನ್ನೂ ಕೊಡಲು ಸಮರ್ಥವಾಗಿದೆ. [^1 ವ.ಟೀ. - ಶಕ್ತ್ಯೇತಃ ಹ್ರೀಂಕಾರೇಣ ಯುಕ್ತಃ । ಅಯಮೇಕೋ ಮಂತ್ರಃ । ಪ್ರಣವ ಹ್ರೀಂಕಾರಾಭ್ಯಾಂ ಏತೇ ತ್ರಯೋ ಮಂತ್ರಾಃ । ಪಂಚಮಂತ್ರಾಃ ಭವಂತಿ । ಅಂತ್ಯಸ್ಯೇತಿ = ಮಂತ್ರಸ್ಯ, ಸ್ವಾಹಾಮಂತ್ರಸ್ಯ ರಕ್ಷವರ್ಣೋ ಜ್ಞೇಯಃ ॥ ದಧಿವಾಮನಮಂತ್ರ ಮೂಲಂ ನಃ ಪ್ರತಿಷೇಧಶ್ಚ ಸೋದ್ದೇಶೋ ಭಗವಾನಪಿ । ವಿಷ್ಣುರ್ಭೋಜ್ಯಾಧಿಪಃ ಸ್ವಾಹಾಯುಕ್ತೋऽಷ್ಟಾದಶವರ್ಣಕಃ ॥ ೨೮ ॥ ಅರ್ಥಃ - ಸರ್ವವೇದಮೂಲವೆನಿಸಿದ ಓಂಕಾರವು, ನಕಾರವು, ಪ್ರತಿಷೇಧಾರ್ಥಕಮೋಕಾರವು, ಚತುರ್ಥ್ಯಂತಗಳಾದ ಭಗವಚ್ಛಬ್ದ, ವಿಷ್ಣು ಮತ್ತು ಭೋಜ್ಯಾಧಿಪ ಎಂಬರ್ಥ ನೀಡುವ ಅನ್ನಾಧಿಪತಿ ಎಂಬ ಶಬ್ದ, ಇವುಗಳ ಕಡೆಯಲ್ಲಿ ಸ್ವಾಹಾ ಎಂಬ ಶಬ್ದ ಸೇರಿದಾಗ ಹದಿನೆಂಟು ಅಕ್ಷರಗಳಿರುವ 'ಓಂ ನಮೋ ಭಗವತೇ ವಿಷ್ಣವೇ ಅನ್ನಾಧಿಪತಯೇ ಸ್ವಾಹಾ' ಎಂಬ ದಧಿವಾಮನಮಂತ್ರವೇರ್ಪ-ಡುತ್ತದೆ. ಇದೊಂದು ಮಂತ್ರ ಚಿಂತಾಮಣಿಯೆನಿಸಿದೆ[^2]. ವ.ಟೀ. - ಭಗವಚ್ಛಬ್ದವಾಚ್ಯಃ ಚತುರ್ಥ್ಯಂತ: । ವಿಷ್ಣುಶಬ್ದೇಽಪಿ ಪಿತೃವದ್ ಭೋಜ್ಯಾ [^1]. ಹಂಸಮಂತ್ರ ಅಂಗನ್ಯಾಸಕ್ರಮ - ಅಸ್ಯ ಶ್ರೀ ಹಂಸಮಂತ್ರಸ್ಯ ಬ್ರಹ್ಮಾ ಋಷಿಃ । ಗಾಯತ್ರೀಛಂದಃ । ಹಂಸರೂಪೀ ಭಗವಾನ್ ದೇವತಾ । ಜಪೇ ವಿನಿಯೋಗಃ । ಓಂ ಹೃದಯಾಯ ನಮಃ । ಓಂ ಹ್ರೀಂ ಶಿರಸೇ ಸ್ವಾಹಾ ಓಂ ಹಂಸಃ ಶಿಖಾಯೈ ವಷಟ್ ಸೋsಹಂ ಕವಚಾಯ ಹುಮ್ ಸ್ವಾಹಾ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । ಅರ್ಪಣೆ - 'ಪೂರ್ವೇದ್ಯುಃ ಪ್ರಾತಃ ಸೂರ್ಯೋದಯಮಾರಭ್ಯ ಅದ್ಯ ಪ್ರಾತಃ ಸೂರ್ಯೋದಯಪರ್ಯಂತಂ ಮದಹೃದಿಸ್ಥೇನ ಮುಖ್ಯಪ್ರಾಣಕೃತೇನ ಷಟ್‌ಶತಾಧಿಕೈಕವಿಂಶತ್ಸಹಸ್ರಸಂಖ್ಯಾಕ ಶ್ವಾಸರೂಪಹಂಸಮಹಾಮಂತ್ರಜಪೇನ ತಥಾ ಮುಖ್ಯಪ್ರಾಣ- ಪ್ರೇರಿತೇನ ಮಯಾ ಕೃತೇನ ದಶಹಂಸಮಂತ್ರಜಪೇನ ಭಗವಾನ್ ಮುಖ್ಯಪ್ರಾಣಪತಿಃ ಹಂಸರೂಪಿ ಲಕ್ಷ್ಮೀಪತಿನಾರಾಯಣಃ ಪ್ರೀಯತಾಮ್ । ಓಂ ಹಂಸಃ ಸೋऽಹಂ ಸ್ವಾಹಾ ಓಂ ಹಂಸಂ ತರ್ಪಯಾಮಿ ॥ [^2]. ವಿಷ್ಣು ಭೋಜ್ಯಾಧಿಪಃ ಎಂಬಲ್ಲಿ ವಿಷ್ಣುಶಬ್ದದಲ್ಲಿ 'ಪಿತೃವದ್ಭೋಜ್ಯಾಧಿಪತಿಃ' ಎಂಬ ಪಾಠಾಂತರವಿರುತ್ತದೆ. ಇದರಂತೆ "ಓಂ ನಮೋ ಭಗವತೇ ವಿಷ್ಣವೇ ಪಿತೃವದನ್ನಾಧಿಪತಯೇ ಸ್ವಾಹಾ' ಎಂದು ಮಂತ್ರಸ್ವರೂಪವನ್ನು ತಿಳಿಯಬೇಕು. ಧಿಪತಿಃ । ಅನ್ನಾಧಿಪತಿರಿತ್ಯರ್ಥಃ ಸ್ಯಾತ್ । ಸೋऽಪಿ ಚತುರ್ಥ್ಯಂತಃ ಸ್ವಾಹಾಯುಕ್ತೋSಷ್ಟಾದಶಾಕ್ಷರಃ ॥ ದಧಿವಾಮನಮಂತ್ರದ ಅಂಗನ್ಯಾಸ - ಮಹಿಮೆ ಅಂಗಾನಿ ತತ್ಪದೈರೇವ ಮಂತ್ರಚಿಂತಾಮಣಿಸ್ತ್ವಯಮ್ । ಯಥೇಷ್ಟಭಕ್ಷಭೋಜ್ಯಾದಿದಾತಾ ಮುಕ್ತಿಪ್ರದಾಯಕಃ ॥ ೨೯ ॥ ಅರ್ಥ - ಈ ದಧಿವಾಮನಮಂತ್ರದ ಆರುಪದಗಳಿಂದಲೇ ಷಡಂಗನ್ಯಾಸ ಮಾಡಬೇಕು. [^1].ಈ ಮಂತ್ರವು ಯಥೇಷ್ಟವಾದ ಭಕ್ಷ್ಯಭೋಜ್ಯಗಳನ್ನು, ಸಕಲ ಸಂಪತ್ತನ್ನೂ, ಕಡೆಗೆ ಮುಕ್ತಿಯನ್ನೂ ನೀಡುವ ಮಂತ್ರಚಿಂತಾಮಣಿಯಾಗಿದೆ. ದಧಿವಾಮನಮಂತ್ರದಲ್ಲಿ ಧ್ಯೇಯರೂಪ ಧ್ಯಾಯೇತ್ ಸುಶುಕ್ಲಮರವಿಂದದಲಾಯತಾಕ್ಷಂ ಸೌವರ್ಣಪಾತ್ರದಧಿಭೋಜ್ಯಮಥಾಮೃತಂ ಚ । ದೋರ್ಭ್ಯಾಂ ದಧಾನಮಖಿಲೈಶ್ಚ ಸುರೈಃ ಸಮೇತಂ ಶೀತಾಂಶುಮಂಡಲಗತಂ ರಮಯಾ ಸಮೇತಮ್ ॥ ೩೦ ॥ ಅರ್ಥ - ಕಮಲದಂತೆ ವಿಶಾಲನೇತ್ರಗಳುಳ್ಳವನೂ, ಸುವರ್ಣದ ಪಾತ್ರೆಯಲ್ಲಿ ಮೊಸರನ್ನ ಹಾಗೂ ಅಮೃತವನ್ನು ತನ್ನೆರಡೂ ಕೈಗಳಲ್ಲಿ ಧರಿಸಿರುವವನೂ, ಬ್ರಹ್ಮಾದಿ ದೇವತೆಗಳಿಂದ ಸುತ್ತು- ವರೆದು ರಮಾದೇವಿಯಿಂದಲೂ ಕೂಡಿರುವ ಅಚ್ಚಬಿಳಿವರ್ಣದ ದಧಿವಾಮನನನ್ನು ಚಿಂತಿಸಬೇಕು. ಅಷ್ಟಾಕ್ಷರವಾಮನಮಂತ್ರ [^1]. ಅಂಗನ್ಯಾಸ ಕ್ರಮ - 1. ಓಂ ಹೃದಯಾಯ ನಮಃ 2. ಓಂ ನಮಃ ಶಿರಸೇ ಸ್ವಾಹಾ 3. ಓಂ ಭಗವತೇ ಶಿಖಾಯೈ ವಷಟ್ 4. ಓಂ ವಿಷ್ಣವೇ ಕವಚಾಯ ಹುಮ್ 5. ಓಂ ಅನ್ನಾಧಿಪತಯೇ ನೇತ್ರಾಭ್ಯಾಂ ವೌಷಟ್ 6. ಓಂ ಸ್ವಾಹಾ ಅಸ್ತ್ರಾಯ ಫಟ್ ಇತಿ ದಿಗ್ಬಂಧಃ । ಅಸ್ಯ ಶ್ರೀ ಚಿಂತಾಮಣಿ ದಧಿವಾಮನಮಂತ್ರಸ್ಯ । ಬ್ರಹ್ಮಾ ಋಷಿಃ । ದಧಿ ವಾಮನೋ ದೇವತಾ । ಜಪೇ ವಿನಿಯೋಗಃ। ಅಮೃತಂ ಸ್ವಯಮುದ್ದೇಶಯುತಃ ಸಹೃದಯೋ ಮನುಃ। ಸತಾರೋಽಷ್ಟಾಕ್ಷರೋಽಂಗಾನಿ ಪದೈಃ ವ್ಯಸ್ತೈಃ ಸಮಸ್ತಕೈಃ ॥ ೩೧ ॥ ಅರ್ಥ - ಅಮೃತಂ ಎಂದರೆ ಬಿಂದುಸಹಿತವಾದ ವಕಾರ- ವೆಂದರ್ಥ. ಚತುರ್ಥ್ಯಂತವಾದ ವಾಮನಶಬ್ದವು ಕಡೆಯಲ್ಲಿ ನಮಃಪದ ಹಾಗೂ ಆದಿಯಲ್ಲಿ ಓಂಕಾರ ಸೇರಿದಾಗ ಎಂಟಕ್ಷರದ ವಾಮನಮಂತ್ರವಾಗುವುದು. ಅಮೃತಂ ಎಂದಿದ್ದರಿಂದ 'ಅಮೃತಾತ್ಮನೇ ನಮಃ' ಎಂಬ ಇನ್ನೊಂದು ವಾಮನಾಷ್ಟಾಕ್ಷರ ಮಂತ್ರವೂ ವಿವರಿಸಿದಂತಾಗಿದೆ. ಮಂತ್ರದ ನಾಲ್ಕು ಪದಗಳಿಂದಲೂ, ಸಮಸ್ತ ಮಂತ್ರದಿಂದಲೂ ಪಂಚಾಂಗನ್ಯಾಸವು. ಓಂ ಅಮೃತಾತ್ಮನೇ ನಮಃ ಎಂಬ ಇನ್ನೊಂದು ಮಂತ್ರದ ಪದಗಳನ್ನು ಎರಡು ಬಾರಿ ಆವೃತ್ತಿ ಮಾಡಿದಾಗ ಷಡಂಗನ್ಯಾಸ ವಾಗುವುದು[^1] ವ.ಟೀ - ಅಮೃತಂ ವಕಾರೋ ಬಿಂದುಯುತಃ । ಸ್ವಯಂ ವಾಮನಃ ಚತುರ್ಥ್ಯಂತಃ । ಸಹೃದಯಃ । ನಮಸ್ಕಾರಯುಕ್ತಃ । ಸಪ್ರಣವೋಽಷ್ಟಾಕ್ಷರಃ । ಅನೇನ 'ಅಮೃತಾತ್ಮನೇ ನಮಃ' ಇತ್ಯನ್ಯೋSಪಿ ಮಂತ್ರೋ ವಿವೃತೋ ಭವತಿ । ಪೂರ್ವಮಂತ್ರಸ್ಯ ವ್ಯಸ್ತಸಮಸ್ತೈಃ ಪದ್ಯೈಃ ಪಂಚಾಂಗಾನಿ । ಉಕ್ತಸ್ಯ ಸಪ್ರಣವಸ್ಯ ದ್ವಿರಾವೃತ್ತೈಃ ಪದೈಃ ಷಡಂಗಾನೀತಿ ಭಾವಃ ॥ ಅಷ್ಟಾಕ್ಷರವಾಮನಮಂತ್ರದ ಧ್ಯೇಯರೂಪ ಉದ್ಯದ್ರವಿಪ್ರಭಮರೀಂದ್ರದರೌ ಗದಾಂ ಚ ಜ್ಞಾನಂ ಚ ಬಿಭ್ರತಮಜಂ ಪ್ರಿಯಯಾ ಸಮೇತಮ್ । ವಿಶ್ವಾವಕಾಶಮಭಿತಃ ಪ್ರತಿಪೂರಯಂತಂ ಭಾಸಾ ಸ್ವಯಾ ಸ್ಮರತ ವಿಷ್ಣುಮಜಾದಿವಂದ್ಯಮ್ ॥ ೩೨ ॥ ಅರ್ಥ - ಆಗ ತಾನೇ ಉದಯಿಸುತ್ತಿರುವ ಸೂರ್ಯನಂತೆ ಪ್ರಕಾಶಮಾನನೂ, [^1] ಪಂಚಾಂಗನ್ಯಾಸ ಓಂ ಓಂ ಹೃದಯಾಯ ನಮಃ । ಓಂ ವಂ ಶಿರಸೇ ಸ್ವಾಹಾ । ಓಂ ವಾಮನಾಯ ಶಿಖಾಯೈ ವಷಟ್ । ಓಂ ನಮಃ ಕವಚಾಯ ಹುಮ್। ಓಂ ವಂ ವಾಮನಾಯ ಅಸ್ತ್ರಾಯ ಫಟ್ । ಷಡಂಗನ್ಯಾಸ – ಓಂ ಓಂ ಹೃದಯಾಯ ನಮಃ । ಓಂ ಅಮೃತಾತ್ಮನೇ ಶಿರಸೇ ಸ್ವಾಹಾ । ಓಂ ನಮಃ ಶಿಖಾಯೈ ವಷಟ್ । ಓಂ ಓಂ ಕವಚಾಯ ಹುಮ್ । ಓಂ ಅಮೃತಾತ್ಮನೇ ನೇತ್ರಾಭ್ಯಾಂ ವೌಷಟ್ ! ಓಂ ನಮಃ ಅಸ್ತ್ರಾಯ ಫಟ್ । ಹಸ್ತಗಳಲ್ಲಿ ಚಕ್ರಶಂಖಗದಾಜ್ಞಾನಮುದ್ರೆಯನ್ನು ಧರಿಸಿರು- ವವನೂ, ರಮಾದೇವಿಯಿಂದ ಯುಕ್ತನೂ, ತನ್ನ ಕಾಂತಿಯಿಂದ ಜಗತ್ತನ್ನೆಲ್ಲ ಬೆಳಗುತ್ತಿರುವವನೂ ಆಗಿದ್ದು ಬ್ರಹ್ಮಾದಿಸಕಲ- ದೇವತಾವಂದ್ಯನಾದ ಆದ್ಯಂತಶೂನ್ಯನಾದ ವಿಷ್ಣುವನ್ನು ಧ್ಯಾನಿಸಬೇಕು. ತ್ರಿವಿಕ್ರಮಗಾಯತ್ರೀ ತ್ರಿವಿಕ್ರಮಸ್ತು ಸೋದ್ದೇಶೋ ವಿಶ್ವರೂಪಶ್ಚ ತತ್ಪರಃ। ಧೀವಿದೌ ಚ ಮಹೇ ವಿಷ್ಣುಃ ತನ್ನಃ ಪ್ರೇರಣಮಧ್ಯಗಃ ॥ ೩೩ ॥ ಅರ್ಥ - ಚತುರ್ಥ್ಯಂತವಾದ ತ್ರಿವಿಕ್ರಮ ಪದ, ಅದರ ನಂತರ ವಿಶ್ವರೂಪ ಎಂಬ ಪದವು. ತ್ರಿವಿಕ್ರಮಪದದ ನಂತರ ವಿದ್ಮಹಿ ಎಂದು, ವಿಶ್ವರೂಪಪದದ ನಂತರ ಧೀಮಹಿ ಎಂದು, ತನ್ನೋ ವಿಷ್ಣುಃ ಪ್ರಚೋದಯಾತ್ ಎಂದು ಸೇರಿಸಿದರೆ ವಾಮನಗಾಯತ್ರೀ ಮಂತ್ರವೇರ್ಪಡುತ್ತದೆ[^1] ವ.ಟೀ. - ಸೋದ್ದೇಶಃ ಚತುರ್ಥ್ಯಂತಃ ತ್ರಿವಿಕ್ರಮಃ । ತತ್ಪರಂ ವಿಶ್ವರೂಪ ಇತಿ ಯಾವತ್ । ತ್ರಿವಿಕ್ರಮಾತ್ ಪರಂ ವಿದ್ಮಹಿ, ವಿಶ್ವರೂಪಾತ್ ಪರಂ ಧೀಮಹೀತಿ । ತನ್ನೋ ವಿಷ್ಣುಃ ಪ್ರಚೋದಯಾತ್ ಇತಿ ಚ ಯೋಜ್ಯಮ್ । ರಾಮಷಡಕ್ಷರಮಂತ್ರ ಸ್ವಯಮುದ್ದೇಶಸಂಯುಕ್ತಃ ತದಾದ್ಯರ್ಣಪುರಃಸರಃ । ಸನತಿಃ ಷಡಕ್ಷರೋ ಮಂತ್ರೋ ವರ್ಣೈರಂಗಕ್ರಿಯಾ ಮತಾ II ೩೪ ॥ ಅರ್ಥ - ಚತುರ್ಥ್ಯಂತವಾದ ಜಾಮದಗ್ನರಾಮ ಹಾಗೂ ದಾಶರಥಿ ರಾಮ ಹೀಗೆ ಉಭಯರಾಮರಿಗೂ ಸೇರಿದ ಮಂತ್ರವಿದು. ಚತುರ್ಥ್ಯಂತರಾಮಶಬ್ದ, ಅದರ ಆದಿಯಲ್ಲಿ 'ರಾಂ' ಎಂಬ ಶಬ್ದ, ಕಡೆಯಲ್ಲಿ 'ನಮಃ'ಶಬ್ದ. 'ಓಂ ರಾಂ ರಾಮಾಯ ನಮಃ' ಎಂಬುದು ರಾಮಷಡಕ್ಷರಮಂತ್ರದ ಸ್ವರೂಪ. ಇದೇ ಪರಶುರಾಮ ಹಾಗೂ ದಾಶರಥಿರಾಮಮಂತ್ರವೂ ಆಗುತ್ತದೆ. ಮಂತ್ರದಲ್ಲಿ ಆರು ಅಕ್ಷರಗಳಿಂದಲೇ ಷಡಂಗನ್ಯಾಸ- ವನ್ನು ಮಾಡಿಕೊಳ್ಳಬೇಕು. [^1]. 'ತ್ರಿವಿಕ್ರಮಾಯ ವಿದ್ಮಹಿ, ವಿಶ್ವರೂಪಾಯ ಧೀಮಹಿ । ತನ್ನೋ ವಿಷ್ಣುಃ ಪ್ರಚೋದಯಾತ್' ಎಂದು ಮಂತ್ರದ ಸ್ವರೂಪವು. [^2]. ಅಂಗನ್ಯಾಸವು ಹೀಗೆ ಏರ್ಪಡುತ್ತದೆ ಓಂ ರಾಂ ಹೃದಯಾಯ ನಮಃ । ಓಂ ರಾಂ ಶಿರಸೇ ಸ್ವಾಹಾ । ಓಂ ಮಾಂ ಶಿಖಾಯೈ ವ.ಟೀ.- ಸ್ವಯಂ ರಾಮಯೋಃ । ಜಾಮದಗ್ನದಾಶರಥೋರುಭಯೋರಪಿ ಮಂತ್ರಃ । ಪರಶುರಾಮಧ್ಯಾನಶ್ಲೋಕ ಅಂಗಾರವರ್ಣಮಭಿತೋಽಂಡಬಹಿಃ ಪ್ರಭಾಭಿ- ರ್ವ್ಯಾಪ್ತಂ ಪರಶ್ವಧಧನುರ್ಧರಮೇಕವೀರಮ್ । ಧ್ಯಾಯೇದಜೇಶಪುರುಹೂತಮುಖೈಸ್ತುವದ್ಭಿ- ರಾವೀತಮಾತ್ಮಪದವೀಂ ಪ್ರತಿಪಾದಯಂತಮ್ ॥ ೩೫ ॥ ಅರ್ಥ - ಕೆಂಡದಂತೆ ನಿಗಿನಿಗಿಸುವ ಕಾಂತಿಯುಳ್ಳ, ಒಳಗೆ-ಹೊರಗೆ ಎಲ್ಲೆಲ್ಲಿಯೂ ತನ್ನ ಕಾಂತಿಯಿಂದ ವ್ಯಾಪಿಸಿರುವ ಕೈಯ್ಯಲ್ಲಿ ಪರಶು ಹಾಗೂ ಬಿಲ್ಲನ್ನು ಧರಿಸಿರುವ, ಸ್ತೋತ್ರಮಾಡುತ್ತಿರುವ ಬ್ರಹ್ಮಾದಿಗಳಿಗೆ ತನ್ನ ಸ್ವರೂಪವನ್ನು ಉಪದೇಶಿಸುತ್ತಿರುವ, ಮಹಾವೀರನಾದ ಪರಶುರಾಮದೇವರನ್ನು ಧ್ಯಾನಿಸಬೇಕು. ದಾಶರಥಿರಾಮಧ್ಯಾನಶ್ಲೋಕ ಶ್ಯಾಮಂ ರವೀಂದ್ವಮಿತದೀಧಿತಿಕಾಂತಿಯುಕ್ತಂ ಜ್ಞಾನಂ ಶರಂ ಚ ದಧತಂ ಪ್ರಿಯಯಾ ಸಮೇತಮ್ । ಸ್ವಾತ್ಮಸ್ವರೂಪಮಮಿತಂ ಹನುಮನ್ಮುಖೇಷು ಸಂದರ್ಶಯಂತಮಜಿತಂ ಸ್ಮರತೋರುಗೀರ್ಭಿಃ ॥ ೩೬ ॥ ಅರ್ಥ - ಸೂರ್ಯಚಂದ್ರರಿಗಿಂತಲೂ ಅತ್ಯಧಿಕಕಾಂತಿಯಿಂದ ಬೆಳಗುತ್ತಿರುವ, ಜ್ಞಾನಮುದ್ರೆ ಹಾಗೂ ಬಾಣವನ್ನೂ ಧರಿಸಿರುವ, ತನ್ನ ಸ್ವರೂಪವನ್ನು ಹನುಮದಾದಿಗಳಿಗೆ ಉತ್ಕೃಷ್ಟವಚನ- ಗಳಿಂದ ತಿಳಿಸುತ್ತಿರುವ, ಸೀತಾದೇವಿಯೊಂದಿಗೆ ಇರುವ, ಕಪ್ಪು- ದೇಹಕಾಂತಿಯ ಶ್ರೀರಾಮಚಂದ್ರನನ್ನು ಚಿಂತಿಸಬೇಕು. ಏಕಾಕ್ಷರ ಭಾರ್ಗವ, ರಾಮಮಂತ್ರ ನಿಜಗೋತ್ರಂ ತು ಸೋದ್ದೇಶಂ ಪೂರ್ವಾಕ್ಷರಪುರಃಸರಮ್ । ನತ್ಯಂತಂ ತಾರಪೂರ್ವಂ ಚ ಮನುರಷ್ಟಾಕ್ಷರೋ ಮತಃ ॥ ೩೭ ॥ ವಷಟ್ । ಓಂ ಯಂ ಕವಚಾಯ್ ಹುಮ್ । ಓಂ ನಂ ನೇತ್ರಾಭ್ಯಾಂ ವೌಷಟ್ । ಓಂ ಮಂ ಅಸ್ತ್ರಾಯ ಫಟ್ । ಅರ್ಥ- ಗೋತ್ರವಾಚಕಗಳಾದ ಚತುರ್ಥ್ಯಂತಗಳಾದ ಪರಶುರಾಮ ಹಾಗೂ ದಾಶರಥಿರಾಮರ ವಾಚಕಗಳಾದ ಭಾರ್ಗವ ಹಾಗೂ ರಾಘವಪದಗಳು, ಅವುಗಳ ಆದಿಯಲ್ಲಿ ಮಂತ್ರದ ಪೂರ್ವಾಕ್ಷರ ಗಳಾದ ಭಾಂ, ರಾಂ ಎಂಬ ಅಕ್ಷರಗಳು, ಹಾಗೂ ಓಂಕಾರ, ಕಡೆ- ಯಲ್ಲಿ ನಮಃ ಪದ ಸೇರಿಸಿದಾಗ "ಓಂ ಭಾಂ ಭಾರ್ಗವಾಯ ನಮಃ, ಓಂ ರಾಂ ರಾಮಾಯ ನಮಃ' ಎಂಬ ಭಾರ್ಗವಾಷ್ಟಾಕ್ಷರ ಹಾಗೂ ರಾಘವಾಷ್ಟಾಕ್ಷರಮಂತ್ರಗಳು ಏರ್ಪಡುತ್ತವೆ. ವ.ಟೀ. - ನಿಜಗೋತ್ರಮ್, ಭಾರ್ಗವಶ್ಚತುರ್ಥ್ಯಂತಃ । ಪೂರ್ವಾಕ್ಷರಂ ಭಕಾರಃ, ಆಕಾರಃ ಬಿಂದ್ವಂತಃ । ನಮಸ್ಕಾರ- ಯುತೋಽಷ್ಟಾಕ್ಷರೋಽಪರೋ ಭಾರ್ಗವಮಂತ್ರ: । ಭಾರ್ಗವ, ರಾಮಮಂತ್ರಮಹಿಮಾವಿಚಾರ ತೇ ಚ ಬೀಜೇ ಬೀಜಭೂತೇ ಧರ್ಮಾದೀನಾಮಶೇಷತಃ । ಅರ್ಥ - ಭಾಂ, ರಾಂ, ಎಂಬ ಬೀಜಾಕ್ಷರಗಳೂ ಸಹ ಸ್ವತಂತ್ರ ಮಂತ್ರಗಳಾಗಿದ್ದು ಜಪಿಸುವವರ ಧರ್ಮಾದಿಪುರುಷಾರ್ಥನೀಡಲು ಸಮರ್ಥವಾಗಿವೆ. ಏತೇ ವಿಜಯದಾ ಮಂತ್ರಾ ಜ್ಞಾನಮೋಕ್ಷಪ್ರದಾಯಕಾಃ । ಹಿರಣ್ಯರತ್ನರಾಜ್ಯಾದಿಸಮಭೀಷ್ಟಸುರದ್ರುಮಾಃ ॥ ೩೮ ॥ ಅರ್ಥ- ಈ ಮಂತ್ರಗಳು ವಿಜಯಪ್ರದಗಳಾಗಿದ್ದು, ಜ್ಞಾನ, ಮೋಕ್ಷಾದಿಗಳನ್ನು ಕೊಡಲು ಸಮರ್ಥವಾಗಿವೆ. ಇದಲ್ಲದೆ ಸುವರ್ಣ, ರತ್ನ, ರಾಜ್ಯಾದಿ ಐಹಿಕಫಲಗಳನ್ನು ನೀಡಲು ಸಮರ್ಥ ವಾಗಿರುವವು. ಅಷ್ಟಾದಶಾಕ್ಷರಮದನಗೋಪಾಲಕೃಷ್ಣಮಂತ್ರ ಕೃಷ್ಣೋ ಗೋವಿಚ್ಚ ಕಾಮೇತಃ ಸೋದ್ದೇಶೋ ಬಲ್ಲವೀಜನಃ । ಪ್ರಿಯಶ್ಚ ತಾದೃಶಸ್ವಾಹಾಯುಕ್ತೋऽಷ್ಟಾದಶವರ್ಣಕಃ । ಪದೈರಂಗಾನಿ ಸಂಪ್ರೀತಿಕಾಮಮೋಕ್ಷಪ್ರದೋ ಮನುಃ ॥ ೩೯ ॥ ವ.ಟಿ. - ಕಾಮಯುತಃ =ಕ್ಲೀಂಕಾರಯುತಃ । ಕೃಷ್ಣಃ ಚತುರ್ಥ್ಯಂತಃ। ಗೋವಿಂದೋ ಗೋವಿಂದಶ್ಚತುರ್ಥ್ಯಂತಃ । ವಲ್ಲವೀಜನಪ್ರಿಯಃ । ಗೋಪೀಜನವಲ್ಲಭಃ ತಾದೃಶಃ ತಾದೃಶಚತುರ್ಥ್ಯಂತಃ । ಸ್ವಾಹಾಯುಕ್ತೋऽ ಷ್ಟಾದಶಾಕ್ಷರಃ ॥ ಟೀಕಾರ್ಥ - ಕಾಮೇತೌ ಎಂದರೆ ಕ್ಲೀಂ ಎಂಬ ಬೀಜಾಕ್ಷರದಿಂದ ಕೂಡಿರುವ ಎಂದರ್ಥ. ಚತುರ್ಥ್ಯಂತವಾದ ಕೃಷ್ಣಶಬ್ದ ಹಾಗೂ ಗೋವಿಂದಶಬ್ದಗಳು, ನಂತರ ಗೋಪಿಯರಿಗೆ ಪ್ರಿಯ ಎನ್ನುವ ಅರ್ಥವಿರುವ ಚತುರ್ಥ್ಯಂತಗೋಪೀಜನವಲ್ಲಭ ಎಂಬ ಶಬ್ದ, ಕಡೆಯಲ್ಲಿ ಸ್ವಾಹಾಶಬ್ದಗಳನ್ನು ಪಠಿಸಿದಾಗ ಹದಿನೆಂಟು ಅಕ್ಷರ- ಗಳ ಮದನಗೋಪಾಲಮಂತ್ರವಾಗುವುದು. 'ಓಂ ಕ್ಲೀಂ ಕೃಷ್ಣಾಯ ಗೋವಿಂದಾಯ ಗೋಪೀಜನವಲ್ಲಭಾಯ ಸ್ವಾಹಾ ಓಂ' ಎಂದು ಮಂತ್ರಸ್ವರೂಪ. ಈ ಮಂತ್ರವು ಐಹಿಕಭೋಗಗಳೆಲ್ಲವನ್ನೂ ನೀಡಿ, ಭಗವಂತನ ಪ್ರೀತಿ ಹಾಗೂ ಪ್ರಸನ್ನತೆಯ ಫಲವಾದ ಮೋಕ್ಷವನ್ನು ನೀಡುವುದು. ಈ ಮಂತ್ರದ ಪದಗಳಿಂದಲೇ ಪಂಚಾಂಗನ್ಯಾಸವು. [^1] ಕೃಷ್ಣಮಂತ್ರದ ಧ್ಯಾನಶ್ಲೋಕ ಧ್ಯಾಯೇದ್ಧರಿನ್ಮಣಿನಿಭಂ ಜಗದೇಕವಂದ್ಯಂ ಸೌಂದರ್ಯಸಾರಮರಿಶಂಖವರಾಭಯಾನಿ । ದೋರ್ಭಿರ್ದಧಾನಮಜಿತಂ ಸರಸಂ ಚ ಭೈಷ್ಮೀ- ಸತ್ಯಾಸಮೇತಮಖಿಲಪ್ರದಮಿಂದಿರೇಶಮ್ ॥ ೪೦ ॥ ಅರ್ಥ- ಇಂದ್ರನೀಲಮಣಿಯ ಕಾಂತಿಯುಳ್ಳವನೂ, ಜಗತ್ಪೂಜ್ಯ- ನೂ, ಸೌಂದರ್ಯಸಾರನೂ, ಕೈಗಳಲ್ಲಿ ಚಕ್ರಶಂಖವರಾಭಯ- ಮುದ್ರಾಧರಿಸಿರುವವನೂ, ದಯಾಮಯನೂ, ರುಗ್ಮಿಣೀ ಸತ್ಯಭಾಮೆಯರನ್ನು ಇಕ್ಕೆಲಗಳಲ್ಲಿ ಹೊಂದಿರುವವನೂ, ಯಾರಿಂದಲೂ ವಶನಾಗದವನೂ ಆಗಿರುವ ಶ್ರೀಕೃಷ್ಣನನ್ನು ಧ್ಯಾನಿಸಬೇಕು. ಕೃಷ್ಣಷಡಕ್ಷರಮಂತ್ರ; ಏಕಾಕ್ಷರಕೃಷ್ಣಮಂತ್ರ ಸಕಾಮಃ ಸ್ವಯಮುದ್ದೇಶೀ ನತ್ಯಂತೋSಯಂ ಷಡಕ್ಷರಃ । ತದಾದಿರಪಿ ಸರ್ವೆಷ್ಟಚಿಂತಾಮಣಿರುದಾಹೃತಃ ॥ ೪೧ ॥ ಅರ್ಥ - ಕಾಮಬೀಜವಾದ ಕ್ಲೀಂಕಾರದಿಂದ, ಹಾಗೂ ನಮಃಪದ- ದಿಂದ ಕೂಡಿರುವ ಚತುರ್ಥ್ಯಂತಕೃಷ್ಣಪದವು ಕೃಷ್ಣಷಡಕ್ಷರ ಎನಿಸುತ್ತದೆ. 'ಕ್ಲೀಂ ಕೃಷ್ಣಾಯ ನಮಃ' ಎಂಬುದು ಮಂತ್ರದ ಸ್ವರೂಪ. ಅದೇ ಕೃಷ್ಣಮಂತ್ರದ ಆದಿಯಲ್ಲಿರುವ ಕ್ಲೀಕಾರವೂ ಕೂಡ [^1]. ಓಂ ಕ್ಲೀಂ ಹೃದಯಾಯ ನಮಃ । ಓಂ ಕೃಷ್ಣಾಯ ಶಿರಸೇ ಸ್ವಾಹಾ । ಓಂ ಗೋವಿಂದಾಯ ಶಿಖಾಯೈ ವೌಷಟ್ । ಓಂ ಗೋಪೀಜನವಲ್ಲಭಾಯ ಕವಚಾಯ ಹುಮ್ । ಓಂ ಸ್ವಾಹಾ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಪ್ರತ್ಯೇಕವಾಗಿ ಏಕಾಕ್ಷರಕೃಷ್ಣಮಂತ್ರವಾಗುತ್ತದೆ. 'ಓಂ ಕ್ಲೀಂ ಓಂ' ಎಂದು ಮಂತ್ರಸ್ವರೂಪ. ಇದರ ಜಪವು ಚಿಂತಾಮಣಿಯಂತೆ ಸಕಲೇಷ್ಟಪ್ರದಾಯಕವಾಗಿದೆ. ವ.ಟೀ. - ಕಾಮಬೀಜಯುಕ್ತಃ, ಚತುರ್ಥ್ಯಂತನಾಮಯುತಃ । ಷಡಕ್ಷರೋ ಮಂತ್ರಃ । ಕೃಷ್ಣಸ್ಯ ತದಾದಿರಪಿ ಕ್ಲೀಂಕಾರಃ । ಕಲಿಯುಗದಲ್ಲಿ ಮಂತ್ರಗಳ ವಿಚಾರ ದೃಷ್ಟಾರ್ಥ ಏವ ಮಂತ್ರಾಣಾಂ ಕಲೌ ವೀರ್ಯಂ ತಿರಸ್ಕೃತಮ್ । ತತ್ರಾಪ್ಯುದ್ದೀಪ್ತವೀರ್ಯಾ ಹಿ ಮಂತ್ರಾ ಅತ್ರ ಪ್ರಕೀರ್ತಿತಾಃ । ವಾಸಿಷ್ಠವೃಷ್ಣಿಪ್ರವರಮಂತ್ರಾಃ ತತ್ರಾಪಿ ವೀರ್ಯದಾಃ ॥ ೪೨ ॥ ಅರ್ಥ - ಮಂತ್ರಗಳಿಗೆ ಪ್ರತ್ಯಕ್ಷದಲ್ಲಿ ಕಾಣುವ ಐಹಿಕವಿಷಯ- ಪದಾರ್ಥಗಳನ್ನು ಸಾಧಿಸಿಕೊಡುವ ಶಕ್ತಿ ಕಲಿಯುಗದಲ್ಲಿ ಎಲ್ಲಾ ಮಂತ್ರಗಳಿಗೂ ತಿರಸ್ಕೃತವೆಂದು ಒಪ್ಪಬಹುದಾದರೂ ಈ ತಂತ್ರಸಾರಸಂಗ್ರಹದಲ್ಲಿ ಕೊಡಲಾಗಿರುವ ಮಂತ್ರಗಳೆಲ್ಲವೂ ಕಲಿಯುಗದಲ್ಲಿಯೂ ಸಾಧಿಸಿಕೊಡುವ ಶಕ್ತಿಯುಳ್ಳವುಗಳಾಗಿವೆ. ಇವುಗಳ ಶಕ್ತಿ ಅಪಾರ ಹಾಗೂ ಅತಿರೋಹಿತ. ಇವುಗಳಲ್ಲಿಯೂ 'ಕ್ಲೀಂ ಕೃಷ್ಣಾಯ ನಮಃ' ಎಂಬ ಕೃಷ್ಣಮಂತ್ರ ಹಾಗೂ 'ವ್ಯಾಂ ವೇದವ್ಯಾಸಾಯ ನಮಃ' ಎಂಬ ವ್ಯಾಸಮಂತ್ರಗಳಂತೂ ಮತ್ತೂ ಹೆಚ್ಚಿನ ಸಾಮರ್ಥ್ಯಾದಿಗಳನ್ನು ನೀಡುವ ಮಂತ್ರರತ್ನಗಳಾಗಿವೆ. ವ.ಟೀ - ದೃಷ್ಟಾರ್ಥೇ = ಪ್ರತ್ಯಕ್ಷವಿಷಯಾರ್ಥೇ। ವೇದವ್ಯಾಸಾಷ್ಟಾಕ್ಷರಮಂತ್ರ ಸ್ವಯಂ ವೇದಪದಾರೂಢಃ ಪೂರ್ವವರ್ಣಪುರಃಸರಃ। ನತ್ಯಂತೋऽಷ್ಟಾಕ್ಷರೋ ಮಂತ್ರಃ ಪ್ರಿಯೋ ವಿಜ್ಞಾನಗೋಪತೇಃ ॥ ೪೩ ॥ ವ್ಯಾಖ್ಯಾಶ್ರೀಸರ್ವವಿಜ್ಞಾನಕವಿತಾದಿಗುಣಪ್ರದಃ । ವಾದೇ ವಿಜಯದೋ ನಿತ್ಯಂ ಯಥಾ ಯುದ್ಧೇ ನೃಕೇಸರೀ ॥ ೪೪ ॥ ಅರ್ಥ- ವೇದಪದಾರೂಢಃ ವೇದಪದಕ್ಕೆ ಆಧಾರವೆನಿಸಿರುವ ಎಂದರ್ಥ. ವೇದ ಎಂಬ ಪದದ ಅನಂತರದಲ್ಲಿರುವ ವ್ಯಾಸಶಬ್ದ- ದಲ್ಲಿ ಮೊದಲಲ್ಲಿರುವ ವ್ಯಾ ಎಂಬ ಶಬ್ದವು ಬಿಂದುವಿನಿಂದ ಕೂಡಿ.((??)) ವೇದಪದಕ್ಕೆ ಆಧಾರವಾದ ಚತುರ್ಥ್ಯಂತ ವೇದವ್ಯಾಸಶಬ್ದವು ವ್ಯಾಸವೆಂಬ ಶಬ್ದದ ಪೂರ್ವವರ್ಣವೆನಿಸಿದ ವ್ಯಾ ಎಂಬ ಅನುಸ್ವಾರಸಹಿತ ಬೀಜಾಕ್ಷರವು ಮೊದಲು ಇರಬೇಕು. ಹಾಗೆಯೇ ಕಡೆಯಲ್ಲಿ ನಮಃಶಬ್ದದಿಂದ ಕೂಡಿದಾಗ ವೇದವ್ಯಾಸಾಷ್ಟಾಕ್ಷರ ಮಂತ್ರವೇರ್ಪಡುತ್ತದೆ. 'ವ್ಯಾಂ ವೇದವ್ಯಾಸಾಯ ನಮಃ' ಎಂದು ಮಂತ್ರದ ಸ್ವರೂಪ. ಇದು ವೇದವ್ಯಾಸರಿಗೆ ಅತ್ಯಂತಪ್ರಿಯಮಂತ್ರ ವಾಗಿದ್ದು, ಜಪಿಸುವವರಿಗೆ ವ್ಯಾಖ್ಯಾನಕೌಶಲ, ವಿಜ್ಞಾನ, ಕಾವ್ಯ- ರಚನಾಪಟುತ್ವ ನೀಡುತ್ತದೆ. ನೃಸಿಂಹಮಂತ್ರವು ಯುದ್ಧದಲ್ಲಿ ಜಯ ನೀಡುವಂತೆ ಇದು ವಾದದಲ್ಲಿ ಜಯ ನೀಡುವ ಸಾಮರ್ಥ್ಯ ಹೊಂದಿದೆ. ವ.ಟೀ. - ವೇದಪದಾಧಾರಃ ವೇದವ್ಯಾಸಃ ಚತುರ್ಥ್ಯಂತಃ । ಪೂರ್ವವರ್ಣಃ ಆಕಾರೋ ಬಿಂದ್ವಂತಃ । ಸೋಽಪ್ಯಾಕಾರಃ ಪುರಃಸರೋ ಯಸ್ಯ ಸಃ, ತಥಾ ನಮಸ್ಕಾರಯುತೋ ಪರಃ, ಅಷ್ಟಾಕ್ಷರ ಇತಿ ಭಾವಃ । ವೇದವ್ಯಾಸಧ್ಯಾನಶ್ಲೋಕ ವಿಜ್ಞಾನರೋಚಿಃಪರಿಪೂರಿತಾಂತ- ರ್ಬಾಹ್ಯಾಂಡಕೋಶಂ ಹರಿತೋಪಲಾಭಮ್ । ತರ್ಕಾಭಯೇತಂ ವಿಧಿಶರ್ವಪೂರ್ವ- ಗೀರ್ವಾಣವಿಜ್ಞಾನದಮಾನತೋSಸ್ಮಿ ॥ ೪೫ ॥ ಅರ್ಥ - ತನ್ನ ವಿಜ್ಞಾನದ ಕಾಂತಿಯಿಂದ ಜಗತ್ತಿನ ಒಳಹೊರಗೆಲ್ಲ ಬೆಳಗಿಸುತಿರುವವನೂ, ನೀಲಮಣಿಯಂತೆ ದೇಹಕಾಂತಿಯುಳ್ಳ- ವನೂ, ಜ್ಞಾನಮುದ್ರೆಅಭಯಮುದ್ರೆಯನ್ನು ಕೈಗಳಲ್ಲಿ ಹೊಂದಿರುವವನೂ, ಬ್ರಹ್ಮರುದ್ರಾದಿ ಸರ್ವದೇವತೆಗಳಿಗೂ ವಿಶಿಷ್ಟಜ್ಞಾನನೀಡುವವನೂ ಆದ ವೇದವ್ಯಾಸದೇವನನ್ನು ಭಕ್ತಿಯಿಂದ ನಮಿಸುವೆ. ವೇದವ್ಯಾಸಗಾಯತ್ರಿ ಜ್ಞಾನಾನಂದಪುರಃ ಪೂರ್ಣೋ ವಿದ್ಮಹೇ ಧೀಮಹೇ ತಥಾ । ತನ್ನಃ ಪ್ರೇರಣಮಧ್ಯೇತು ವ್ಯಾಸೋ ಮಂತ್ರಾಧಿಪಾಧಿಪಃ ॥ ೪೬ ॥ ಅರ್ಥ - ಚತುರ್ಥ್ಯಂತವಾದ ಜ್ಞಾನ ಮತ್ತು ಆನಂದಶಬ್ದಗಳ ನಂತರ ಕ್ರಮವಾಗಿ ವಿದ್ಮಹೇ ಮತ್ತು ಧೀಮಹಿ ಪದಗಳನ್ನು ಪಠಿಸುವುದು. ತನ್ನಃ ಎಂಬ ಪದ ಹಾಗೂ ಪ್ರಚೋದಯಾತ್ ಎಂಬ ಪದಗಳ ಮಧ್ಯದಲ್ಲಿ ವ್ಯಾಸಃ ಎಂಬ ಪದ ಸೇರಿಸಿದರೆ ವ್ಯಾಸಗಾಯತ್ರೀ ಏರ್ಪಡುತ್ತದೆ. ಇದು ಮಂತ್ರಗಳ- ಲ್ಲಿಯೇ ಅತ್ಯಂತಶ್ರೇಷ್ಠವಾದ ಮಂತ್ರರಾಜವೆನಿಸಿದೆ. "ಪೂರ್ಣಜ್ಞಾನಾಯ ವಿದ್ಮಹೇ ಪೂರ್ಣಾನಂದಾಯ ಧೀಮಹಿ । ತನ್ನೋ ವ್ಯಾಸಃ ಪ್ರಚೋದಯಾತ್ " ॥ ಎಂದು ವ್ಯಾಸಗಾಯತ್ರಿಯ ಸ್ವರೂಪ. ವ.ಟಿ. - ಚತುರ್ಥ್ಯಂತಯೋಃ ಜ್ಞಾನಾನಂದಪದಯೋಃ ಪೂರ್ವ೦ ಕ್ರಮೇಣ ವಿದ್ಮಹೇ ಧೀಮಹೀತಿ ಯೋಜ್ಯಮ್ । ತತ್ಪರಂ ತನ್ನೋ ವ್ಯಾಸಃ ಪ್ರಚೋದಯಾತ್ ಇತಿ ವ್ಯಾಸಗಾಯತ್ರೀ ॥ ಏಕಾಕ್ಷರವ್ಯಾಸಮಂತ್ರ ಆದಿಬೀಜಂ ಸ್ಥಿರಾದೋಷಜ್ಞಾನಬೀಜಂ ವಿಮುಕ್ತಿದಮ್ । ಸರ್ವಪಾಪಕ್ಷಯಕರಂ ಸರ್ವವ್ಯಾಧಿವಿನಾಶನಮ್॥ ೪೭ ॥ ಅರ್ಥ - ಹಿಂದಿನ ಮಂತ್ರದ ಆದಿಯಲ್ಲಿರುವ ವ್ಯಾಂ ಎಂಬ ಬೀಜಾಕ್ಷರವೂ ಒಂದು ಪ್ರತ್ಯೇಕ ವ್ಯಾಸಮಂತ್ರವೇ ಆಗಿರುತ್ತದೆ. ಇದರ ಜಪವು ಸರ್ವಪಾಪಪರಿಹಾರಕವೂ, ಸರ್ವರೋಗ ನಿವಾರಕವೂ ಆಗಿರುತ್ತದೆ. ವ.ಟೀ. - ಆದಿಬೀಜಮ್ = ವ್ಯಾಮಿತ್ಯಾದಿಬೀಜಮ್ । ಏಕಾಕ್ಷರವ್ಯಾಸಮಂತ್ರದ ಧ್ಯೇಯರೂಪ ಧ್ಯಾಯೇಚ್ಛಶಾಂಕಶತಕೋಟ್ಯತಿಸೌಖ್ಯಕಾಂತಿಂ ಸಂಸಿಚ್ಯಮಾನಮಮೃತೋರುಘಟೈಃ ಸುರೇಶೈಃ । ವರ್ಣಾಭಿಮಾನಿಭಿರಜೇಶಮುಖೈಃ ಸಹೈವ ಪಂಚಾಶತಾ ಪ್ರತಿಗಿರಂತಮಶೇಷವಿದ್ಯಾ ॥ ೪೮ ॥ ಅರ್ಥ - ಅನಂತಾನಂತಚಂದ್ರರ ಚಂದ್ರಿಕೆಯಂತೆ ಸೌಖ್ಯವುಂಟು ಮಾಡುವ ಕಾಂತಿಯುಳ್ಳವನೂ, ವರ್ಣಾಭಿಮಾನಿಬ್ರಹ್ಮಾದಿ ದೇವತೆಗಳಿಂದ ಸುರಿಸಲ್ಪಟ್ಟ ಅಮೃತದಿಂದ ಆಪ್ಲಾವಿತನಾದ- ವನೂ, ಅಜಾದಿ ಐವತ್ತೊಂದು ರೂಪಗಳೊಂದಿಗೆ ಸಮಸ್ತವಿದ್ಯೆ- ಗಳನ್ನು ಅವರಿಗೆ ಅವರಿಗೆ ಉಪದೇಶ ನೀಡುತ್ತಿರುವ ವೇದವ್ಯಾಸ- ರೂಪವನ್ನು ಧ್ಯಾನಿಸಬೇಕು. ಹಯಗ್ರೀವಮಂತ್ರದ ಮಹಿಮೆ, ಧ್ಯಾನ ಸೋದ್ದೇಶಸ್ತು ಸ್ವಯಂ ದೀರ್ಘಪೂರ್ವಾದ್ಯಾರ್ಣೋ ನಮೋಯುತಃ । ಸರ್ವವಿದ್ಯಾಪ್ರದೋಽಷ್ಟಾರ್ಣಃ ಪ್ರತಿವಾದಿಜಯಪ್ರದಃ । ವಿಮುಕ್ತಿಸಾಧನಃ ಕೀರ್ತಿಬುದ್ಧಿಸ್ತೈರ್ಯಪ್ರದಃ ಸದಾ ॥ ೪೯ ॥ ಅರ್ಥ - ಚತುರ್ಥ್ಯಂತವಾದ ಹಯಶಿರಸ್ ವಾಚಕಪದ, ಅದರ ಮೊದಲಲ್ಲಿ ಮಂತ್ರದ ಮೊದಲನೆಯ ವರ್ಣವಾದ ಹಕಾರವನ್ನು ಆಕಾರಬಿಂದುಸಹಿತಗಳಾಗಿ ಪಠಿಸಬೇಕು. ಆದಿಯಲ್ಲಿ ಆಕಾರ ಹಾಗೂ ಬಿಂದು ಸಹಿತವಾದ ಆದ್ಯಕ್ಷರವಾದ ಹಕಾರ ಯುಕ್ತ- ವಾದದ್ದುಹಾಗೂ ಅಂತ್ಯದಲ್ಲಿ ನಮಃ ಎಂದು ಪದಯುಕ್ತ- ವಾದದ್ದೇ ಹಯಗ್ರೀವ ಮಂತ್ರವು. 'ಹಾಂ ಹಯಶಿರಸೇ ನಮಃ, ಹಾಂ ಹಯಗ್ರೀವಾಯ ನಮಃ, ಹಾಂ ಹಯಶೀರ್ಷಾಯ ನಮಃ, ಹಾಂ ಹಯಶೀರ್ಷ್ಣೇ ನಮಃ'' ಎಂದು ನಾಲ್ಕು ಮಂತ್ರಗಳು ವಿವಕ್ಷಿತವಾಗಿವೆ. ಈ ಮಂತ್ರಜಪದಿಂದ ಶಾಸ್ತ್ರಪಾಂಡಿತ್ಯವು, ಪ್ರತಿವಾದಿನಿಗ್ರಹ ಸಾಮರ್ಥ್ಯವು ಲಭಿಸುವುದು. ಕೀರ್ತಿ, ಬುದ್ಧಿ ನೀಡಿ ಕಡೆಗೆ ವಿಮುಕ್ತಿಗೂ ಸಾಧನವಾಗುವುದು. ವ.ಟೀ. - ಸೋದ್ದೇಶಂ = ಚತುರ್ಥ್ಯಂತಃ । ಸ್ವಯಂ = ಹಯಶಿರಾಃ। ದೀರ್ಘವರ್ಣಪೂರ್ವಾರ್ಣಾದ್ಯಾ ಆಕಾರಬಿಂದ್ವಂತೌ ಹಕಾರ ಆದ್ಯಾಕ್ಷರಯುತಃ ನಮಸ್ಕಾರಯುಕ್ತೋ ಹಯಗ್ರೀವ ಇತಿ ಭಾವಃ ॥ ವಂದೇ ತುರಂಗವದನಂ ಶಶಿಬಿಂಬಸಂಸ್ಥಂ ಚಂದ್ರಾವದಾತಮಮೃತಾತ್ಮಕರೈಃ ಸಮಂತಾತ್ । ಅಂಡಾಂತರಂ ಬಹಿರಪಿ ಪ್ರತಿಭಾಸಯಂತಂ ಶಂಖಾಕ್ಷಪುಸ್ತಕಸುಬೋಧಯುತಾಬ್ಜಬಾಹುಮ್ ॥ ೫೦ ॥ ನಸ್ತೋ ಮುಖಾದಪಿ ನಿರಂತರಮುದ್ಗಿರಂತಂ ವಿದ್ಯಾ ಅಶೇಷತ ಉತಾಬ್ಜಭವೇಶಮುಖ್ಯೈಃ । ಸಂಸೇವ್ಯಮಾನಮತಿಭಕ್ತಿಭರಾವನಮ್ರೈರ್ಲಕ್ಷ್ಮ್ಯಾऽಮೃತೇನ ಸತತಂ ಪರಿಷಿಚ್ಯಮಾನಮ್ ॥ ೫೧ ॥ ಅರ್ಥ - ಕುದುರೆಯ ಮುಖವುಳ್ಳ, ಚಂದ್ರಬಿಂಬದಲ್ಲಿರುವ, ಚಂದ್ರನಂತೆಯೇ ಕಾಂತಿ ಹೊಂದಿರುವ, ಅಮೃತವನ್ನೇ ಸುರಿಸುತ್ತಿರುವ, ತನ್ನ ಕಿರಣಗಳಿಂದ ಬ್ರಹ್ಮಾಂಡದ ಒಳಹೊರಗೂ, ಎಲ್ಲೆಡೆಯೂ ಬೆಳಗುತ್ತಿರುವ, ಕೈಯ್ಯಲ್ಲಿ ಶಂಖ, ಅಕ್ಷಮಾಲೆ, ಪುಸ್ತಕ, ಜ್ಞಾನಮುದ್ರೆ ಧರಿಸಿರುವ, ಮೂಗು ಹಾಗೂ ಬಾಯಿ- ಯಿಂದ ನಿರಂತರವಾಗಿ ಸಕಲವಿದ್ಯೆಗಳನ್ನು ಹೊರಗೆಡಹುತ್ತಿರುವ, ಭಕ್ತಿಯಿಂದ ಬಗ್ಗಿರುವ ಬ್ರಹ್ಮಾದಿದೇವತೆಗಳಿಂದ ಸೇವಿಸಲ್ಪಡು- ತ್ತಿರುವ, ಪಕ್ಕದಲ್ಲಿರುವ ಲಕ್ಷ್ಮೀದೇವಿಯಿಂದ ಅಮೃತಾಭಿಷೇಕ- ವನ್ನು ಪಡೆಯುತ್ತಿರುವ ಹಯಗ್ರೀವ ಭಗವಂತನನ್ನು ನಮಸ್ಕರಿಸು ತ್ತೇನೆ. ಕಪಿಲ - ದತ್ತಾತ್ರೇಯ ಮಂತ್ರ; ಧ್ಯೇಯಸ್ವರೂಪವಿಚಾರ ಸ್ವಯಮುದ್ದೇಶವಾನ್ ಪೂರ್ವವರ್ಣಪೂರ್ವೋ ನಮೋಯುತಃ । ಸತಾರೋSಷ್ಟಾಕ್ಷರಶ್ಚೈವ ನವಾರ್ಣಶ್ಚ ಮನೂ ಸ್ಮೃತೌ II ೫೨ ॥ ಅರ್ಥ - ಸ್ವಯಂ ಎಂದರೆ ಕಪಿಲ ಹಾಗೂ ದತ್ತಾತ್ರೇಯ ಎಂಬ ಶಬ್ದಗಳೆಂದರ್ಥ. ಓಂಕಾರದಿಂದ ಕೂಡಿರುವ, ತನ್ನ ಮೊದಲನೆಯ ಅಕ್ಷರಗಳಿಂದ ಕೂಡಿರುವ, ಚತುರ್ಥ್ಯಂತಗಳಾದ ಕಪಿಲ, ದತ್ತಾತ್ರೇಯ ಶಬ್ದಗಳ ಕಡೆಯಲ್ಲಿ ನಮಃಶಬ್ದದಿಂದ ಕೂಡಿದಾಗ ಕಪಿಲಾಷ್ಟಾಕ್ಷರ ಹಾಗೂ ದತ್ತಾತ್ರೇಯಾಷ್ಟಕ್ಷರ ಮಂತ್ರಗಳ ಆದಿ ಅಕ್ಷರಗಳು ಕ ಮತ್ತು ದ ಎಂದು ಅಭಿಪ್ರಾಯ. ವ.ಟಿ. - ಸ್ವಯಂ ಕಪಿಲದತ್ತಾತ್ರೇಯೌ। ಸ್ವಪೂರ್ವಾಕ್ಷರ- ಪೂರ್ವಾಕ್ಷರೌ । ಸಪ್ರಣವೌ । ನಮಸ್ಕಾರಯುತೌ । ಕ್ರಮೇಣಾಷ್ಟಾಕ್ಷರೌ ಕ, ದ ಪೂರ್ವಾರ್ಣೌ ಇತಿ ಭಾವಃ ॥ ಉಭಯೋರಪ್ಯೇಕಪ್ರಕಾರಂ ಧ್ಯಾನಮಾಹ - ಪ್ರೋದ್ಯದಿತಿ ॥ ಅರ್ಥ - ಕಪಿಲ ಹಾಗೂ ದತ್ತಾತ್ರೇಯ ಈ ಎರಡೂ ಮಂತ್ರಗಳಿಗೆ ಸಮಾನವಾದ ಧ್ಯಾನಶ್ಲೋಕವನ್ನು 'ಪ್ರೋದ್ಯತ್' ಎಂದು ಹೇಳುತ್ತಾರೆ. ಪ್ರೋದ್ಯದ್ದಿವಾಕರಸಮಾನತನುಂ ಸಹಸ್ರಸೂರ್ಯೋರುದೀಧಿತಿಭಿರಾಪ್ತಸಮಸ್ತಲೋಕಮ್ । ಜ್ಞಾನಾಭಯಾಂಕಿತಕರಂ ಕಪಿಲಂ ಚ ದತ್ತಂ ಧ್ಯಾಯೇದಜಾದಿಸಮಿತಿಂ ಪ್ರತಿಬೋಧಯಂತಮ್ ॥ ೫೩ ॥ ಅರ್ಥ - ಉದಯಿಸುವ ಸೂರ್ಯನಂತೆ ಅರುಣಬಣ್ಣವುಳ್ಳ, ಸಾವಿರಾರು ಸೂರ್ಯರಿಗಿಂತಲೂ ಅಧಿಕಕಾಂತಿಯಿಂದ ಸಕಲ ಲೋಕಗಳನ್ನು ತುಂಬಿರುವ, ಜ್ಞಾನಾಭಯಮುದ್ರೆ ಧರಿಸಿರುವ ಮತ್ತು ಬ್ರಹ್ಮಾದಿದೇವತೆಗಳ ವೃಂದಕ್ಕೆ ತತ್ವಜ್ಞಾನವನ್ನು ಬೋಧಿಸುತ್ತಿರುವ, ಕಪಿಲ ಹಾಗೂ ದತ್ತಾತ್ರೇಯನನ್ನು ಧ್ಯಾನಿಸಬೇಕು. ಕಪಿಲದತ್ತಾತ್ರೇಯಮಂತ್ರಗಳ ಮಹಿಮೆ ಅಧೃಷ್ಯತಾಜ್ಞಾನಮೋಕ್ಷಪ್ರದೌ ಭಕ್ತೇಷ್ವಿಮೌ ಸದಾ । ಅರ್ಥ - ಈ ಕಪಿಲ ಹಾಗೂ ದತ್ತಾತ್ರೇಯಮಂತ್ರಗಳು ಉಪಾಸನೆ ಮಾಡುವವರಿಗೆ ಶತ್ರುಗಳಿಂದ ಪರಾಭವ ಹೊಂದದಿರುವಿಕೆ-ಯನ್ನು, ಜ್ಞಾನ ಹಾಗೂ ಮೋಕ್ಷವನ್ನು ನೀಡುವುಗಳಾಗಿವೆ. ವೇದೋಕ್ತ ಹರಿಮಂತ್ರಗಳು ಸೂಕ್ತಂ ದೀರ್ಘತಮೋದೃಷ್ಟಂ 'ವಿಷ್ಣೋರ್ನು ಕಮ್' ಇತಿ ಪ್ರಭೋಃ ॥ ೫೪ ॥ ಸರ್ವಾರ್ಥದಂ ಗಾರ್ತ್ಸಮದಂ 'ಯೋ ಜಾತ' ಇತಿ ಚಾಪರಮ್ । ವಾಸಿಷ್ಠಂ ಚ ಪರೋ ಮಾತ್ರಯೇತಿ ಜ್ಞಾನವಿಮುಕ್ತಿದಮ್ ॥ ೫೫ ॥ ಭೌವನೀಯಂ ಸರ್ವಕಾಮಮೋಕ್ಷದಂ ಯ ಇಮೇತ್ಯಪಿ । ಏವಮೇವಾಖಿಲಾ ವೇದಾ ಜ್ಞಾತವ್ಯಾ ವಿಷ್ಣುತತ್ವರಾ ॥ ೫೬ ॥ ಅರ್ಥ - ದೀರ್ಘತಮಸ್ಸೆಂಬ ಋಷಿಯಿಂದ ಕಂಡುಕೊಂಡ, ವಿಷ್ಣುವನ್ನು ಪ್ರತಿಪಾದಿಸುವ 'ವಿಷ್ಣೋರ್ನು ಕಂ ವೀರ್ಯಾಣಿ' ಎಂಬ ವಿಷ್ಣುಸೂಕ್ತವು ಸರ್ವಾರ್ಥ ಸಾಧಕವಾಗಿದೆ. ಗೃತ್ಸಮದಋಷಿಯು ಕಂಡುಕೊಂಡ 'ಯೋ ಜಾತ ಏವ ಪ್ರಥಮೋ ಮನಸ್ವಾನ್' ಇತ್ಯಾದಿ ಮಂತ್ರವೂ ಸರ್ವಾರ್ಥಪ್ರದವಾಗಿದ್ದು, ವಸಿಷ್ಠಋಷಿ ಕಂಡುಹಿಡಿದ 'ಪರೋ ಮಾತ್ರಯಾ' ಇತ್ಯಾದಿ ಸೂಕ್ತವು ವಿಷ್ಣುಪ್ರತಿಪಾದಕವಾಗಿದ್ದು ಜ್ಞಾನಮೋಕ್ಷಗಳನ್ನು ಕೊಡಬಲ್ಲ ಮಂತ್ರವಾಗಿದೆ. ಇನ್ನೊಂದು 'ಯ ಇಮಾ ವಿಶ್ವಾ ಭುವನಾನಿ ಜುಹ್ವತ್' ಇತ್ಯಾದಿ ಸೂಕ್ತವೂ ಸಹ ಸಮಸ್ತ ಇಷ್ಟಾರ್ಥಗಳನ್ನು ಪೂರೈಸುತ್ತದೆ. ಇದು ಭೌವನನೆಂಬ ಹೆಸರುಳ್ಳ ವಿಶ್ವಕರ್ಮದೃಷ್ಟವಾದದ್ದಾಗಿದೆ. ಇವು ಮಾತ್ರವಲ್ಲದೇ ವಿಷ್ಣು ಎಂದು ತಿಳಿದಾಗ ಸಮಸ್ತವೇದಗಳೂ ಸಕಲೇಷ್ಟದಾಯಕವಾಗು- ತ್ತದೆ. ವೈದಿಕಲಕ್ಷ್ಮೀಮಂತ್ರ; ಅಂಗನ್ಯಾಸಾದಿ ಸ್ವದೃಷ್ಟಂ ಸೂಕ್ತಮಖಿಲಂ ಕಾಮದಂ ಹರಿತುಷ್ಟಿದಮ್ । ವಾಚೋऽ೦ಭ್ರಿಣ್ಯಾಃ ಶ್ರಿಯೋಽಂಗಾನಿ ಶ್ರೀರ್ಲಕ್ಷ್ಮೀರ್ಮೆಂದಿರಾ ರಮಾ ॥ ೫೭ ॥ ಅರ್ಥ - ವಾಗ್ದೇವತೆಯಾದ ಅಂಭ್ರಣೀ ಎನಿಸಿಕೊಂಡ ಲಕ್ಷ್ಮೀದೇವಿ ಯನ್ನು ಪ್ರತಿಪಾದಿಸುವ ಹಾಗೂ ಲಕ್ಷ್ಮೀದೇವಿಯಿಂದಲೇ ಕಂಡುಕೊಂಡ 'ನನಗೆ ಕಾರಣನಾದವನು ನೀರಿನಲ್ಲಿರುವ ನಾರಾಯಣನೇ!' ಎಂದು ತಿಳಿಸುವ ಅಂಭ್ರಣೀಸೂಕ್ತವು ಸಕಲ ಅಭೀಷ್ಟಗಳನ್ನೂ ನೀಡುವ ಸೂಕ್ತವಾಗಿದೆ. ಭಗವಂತನೂ ಪ್ರೀತನಾಗುವನು. ಈ ಮಂತ್ರಕ್ಕೆ 'ಶ್ರೀ, ಲಕ್ಷ್ಮೀ, ಮಾ, ಇಂದಿರಾ, ರಮಾ' ಎಂಬ ಪದಗಳಿಂದ ಅಂಗನ್ಯಾಸ ಮಾಡಿಕೊಳ್ಳಬೇಕು[^1]. ವ.ಟೀ. - ವಾಚೋ ವಾಗ್ದೇವತಾಯಾಃ । ಅಂಭ್ರಣೀಸಂಜ್ಞಾಯಾಃ ಶ್ರೀಯಃ ಲಕ್ಷ್ಮಾಃ ಸ್ವದೃಷ್ಟಂ ಸೂಕ್ತಮ್ 'ಮಮ ಯೋನಿರಪ್ಸ್ವಂತಃ ಸಮುದ್ರೇ' ಇತ್ಯಾದಿ । ಕೌಶೇಯಪೀತವಸನಾಮ್ ಅರವಿಂದನೇತ್ರಾಂ ಪದ್ಮದ್ವಯಾಭಯವರೋದ್ಯತಪದ್ಮಹಸ್ತಾಮ್ । ಉದ್ಯಚ್ಛತಾರ್ಕಸದೃಶಾಂ(ಶೀಂ) ಪರಮಾಂಕಸಂಸ್ಥಾಂ ಧ್ಯಾಯೇದ್ ವಿಧೀಶನುತಪಾದಯುಗಾಂ ಜನಿತ್ರೀಮ್ ॥ ೫೮ ॥ ಅರ್ಥ - ಪೀತಾಂಬರಧಾರಿಣಿಯಾದ, ಕಮಲನೇತ್ರೆಯಾದ, ತನ್ನ ಎರಡೂ ಕೈಗಳಲ್ಲಿ ಎರಡು ಪದ್ಮಗಳನ್ನು ಹಾಗೂ ಅಭಯವರ ಮುದ್ರೆಗಳನ್ನು ಧರಿಸಿರುವ, ಸಾವಿರಾರು ಸೂರ್ಯರ ಕಾಂತಿ- ಯಂತೆ ಬೆಳಗುತ್ತಿರುವ, ಬ್ರಹ್ಮರುದ್ರಾದಿವಂದಿತಪಾದಳಾದ ಲಕ್ಷ್ಮೀದೇವಿಯನ್ನು ಧ್ಯಾನ ಮಾಡಬೇಕು. ಲಜ್ಜಾಬೀಜ-ಹ್ರೀಬೀಜಮಂತ್ರಗಳು [^1]. ಅಂಗನ್ಯಾಸಃ - ಓಂ ಶ್ರಿಯೇ ಹೃದಯಾಯ ನಮಃ । ಓಂ ಲಕ್ಷ್ಮೈ ಶಿರಸೇ ಸ್ವಾಹಾ। ಓಂ ಮಾಯೈ ಶಿಖಾಯೈ ವಷಟ್ । ಓಂ ಇಂದಿರಾಯೈ ಕವಚಾಯ್ ಹುಮ್ । ಓಂ ರಮಾಯ್ಕೆ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಲಜ್ಜಾಬೀಜಂ ಚ ತದ್ಬೀಜಂ ತಸ್ಯಾ ಏವಾಭಿಧಾಯಕಮ್ । ಪಾಶಾಂಕುಶೌ ರಕ್ತವಸ್ತ್ರೇ ಲಜ್ಜಾಬೀಜೇ ವಿಶಿಷ್ಯತೇ ॥ ೫೯ ॥ ಅಮಧ್ಯಯುಗ್ಮಸ್ವರಗತೇನೈವಾಂಗಮುದಾಹೃತಮ್ । ಅರ್ಥ - ನಾಚಿಕೆ ಎಂಬ ಅರ್ಥ ನೀಡುವ ಹ್ರೀಕಾರವೆಂಬ ಬೀಜಾ- ಕ್ಷರ ಹಾಗೂ ಲಕ್ಷ್ಮೀ ಬೀಜಾಕ್ಷರ ಇವೆರಡೂ ಸಹ ಲಕ್ಷ್ಮೀದೇವಿ- ಯನ್ನು ಪ್ರತಿಪಾದಿಸುವ ಮಂತ್ರಗಳು. ಲಜ್ಜಾಬೀಜಾಕ್ಷರ ಧ್ಯಾನದಲ್ಲಿ ಪಾಶ-ಅಂಕುಶಗಳನ್ನೂ, ಹಾಗೂ ಪೀತಾಂಬರ ಸ್ಥಳದಲ್ಲಿ ರಕ್ತಾಂಬರವನ್ನೂ ಧ್ಯಾನಿಸಬೇಕು. ಆ, ಈ, ಊ, ಐ, ಔ, ಅಃ ಎಂಬ ಸ್ವರಸಹಿತವಾದ ಲಜ್ಜಾಬೀಜಾಕ್ಷರ- ಗಳಿಂದಲೇ ಅಂಗನ್ಯಾಸ[^1] ವ.ಟೀ - ತದ್ಬೀಜಮ್ = ಲಕ್ಷ್ಮೀಬೀಜಮ್ = ಹ್ರೀಂಕಾರಃ । ಆ, ಈ, ಊ, ಏ, ಔ, ಅಃ ಏತೈಃ ಸ್ವರೈಃ ಯುಕ್ತೇನ ತೇನ ಹ್ರೀಂಕಾರೇಣ ಅಂಗಮುದಾಹೃತಂ ಜ್ಞೇಯಮ್ । ಭೂಬೀಜಾಕ್ಷರ - ದುರ್ಗಾಬೀಜ ಸತ್ತಾಬೀಜಂ ಚ ದುರ್ಬೀಜಂ ತದ್ವದೇವ ಪ್ರಕೀರ್ತಿತಮ್ ॥ ೬೦ ॥ ವರ್ಣಃ ಶ್ಯಾಮೋ ವಿಶೇಷೋऽತ್ರ ತಾಂಬೂಲಂ ನೀಲ ಮುತ್ಪಲಮ್ । ಶಂಖಚಕ್ರೌ ತರ್ಜನಂಚ ಶೂಲಮಿತ್ಯ ಪರತ್ರ ಚ ೬೧ ॥ ॥ ಅರ್ಥ- 'ಇರುವುದು' ಎಂಬ ನೀಡುವ ಭೂತಶಬ್ದಬೀಜವೂ, ದುಃ ಎಂಬ ದುರ್ಗಾಬೀಜಾಕ್ಷರವೂ ಹಿಂದೆ ಹೇಳಿದಂತೆ ಲಕ್ಷ್ಮೀದೇವಿಯ ಮಂತ್ರಗಳೇ ಆಗಿವೆ. ಅಂಗನ್ಯಾಸಗಳೂ ಹಿಂದಿನಂತೆಯೇ. ಧ್ಯೇಯ ಲಕ್ಷ್ಮೀದೇವಿಯ ಬಣ್ಣದಲ್ಲಿ ಕಪ್ಪುಬಣ್ಣವನ್ನು ಚಿಂತಿಸಬೇಕು. ಭೂಬೀಜಾಕ್ಷರಧ್ಯಾನದಲ್ಲಿ ಕೈಗಳಲ್ಲಿ ಪದ್ಮದ್ವಯದ ಬದಲಾಗಿ ತಾಂಬೂಲ ಹಾಗೂ ನೀಲಕಮಲವನ್ನು ಧ್ಯಾನಿಸಬೇಕು. ದುರ್ಗಾಬೀಜದ ಧ್ಯೇಯಸ್ವರೂಪದಲ್ಲಿ ಚಕ್ರಶಂಖ, ಹಾಗೂ ತರ್ಜನ, ಶೂಲಗಳನ್ನು ಧ್ಯಾನಿಸಬೇಕು. [^1]. ಅಂಗನ್ಯಾಸ - ಓಂ ಹ್ರಾಂ ಹೃದಯಾಯ ನಮಃ । ಓಂ ಹ್ರೀಂ ಶಿರಸೇ ಸ್ವಾಹಾ । ಓಂ ಹ್ರೂಂ ಶಿಖಾಯೈ ವಷಟ್ । ಓಂ ಹ್ರೈಂ ಕವಚಾಯ ಹುಮ್ । ಓಂ ಹ್ರೌಂ ನೇತ್ರಾಭ್ಯಾಂ ವೌಷಟ್ । ಓಂ ಹ್ರಃ ಅಸ್ತ್ರಾಯ ಫಟ್ । ವ.ಟೀ. - ಸತ್ತಾಬೀಜಮ್ = ಭೂರಿತಿ ದುರ್ಬೀಜಂ = ದುಃ ಇತಿ । ಪಂಚಾಕ್ಷರ ಭೂಮಂತ್ರ - ದುರ್ಗಾಷಡಕ್ಷರಮಂತ್ರ ನಮೋऽಹಂತಂ ಸ್ವೇನ ಸಹಿತಸ್ತದೇವಾನ್ಯೋ ಮನುಃ ಸ್ಮೃತಃ । ದುರ್ಗಾ ತ್ರಿಷ್ಟುಪ್ ಕಶ್ಯಪೋಕ್ತಾ ತತ್ರ ವರ್ಣೋऽಗ್ನಿವತ್ ಸ್ಮೃತಃ ॥೬೨ ॥ ಅರ್ಥ - ನಮಸ್ಕಾರಯುಕ್ತವಾದ, ಚತುರ್ಥ್ಯಂತ ಪದವಾದ ದುರ್ಗಾಪದದಿಂದ ಕೂಡಿರುವ ದುಃಎಂಬ ಬೀಜಾಕ್ಷರವುಳ್ಳ 'ದುಂ ದುರ್ಗಾಯೈಃ ನಮಃ' ಎಂಬ ಮಂತ್ರ; ಹಾಗೂ 'ಭೂಂ ಭುವೇ ನಮಃ' ಎಂಬ ಭೂಪಂಚಾಕ್ಷರಮಂತ್ರವೇರ್ಪಡುತ್ತದೆ. ದುರ್ಗೆಯ ಮತ್ತೊಂದು ಮಂತ್ರವೆಂದರೆ ದುರ್ಗಾತ್ರಿಷ್ಟುಪ್ ವೇದಮಂತ್ರ. ಇದು ಕಶ್ಯಪ ಋಷಿಯಿಂದ ದೃಷ್ಟವಾಗಿದ್ದು 'ಜಾತವೇದಸೇ ಸುನವಾಮ ಸೋಮ' ಇತ್ಯಾದಿ ಋಙ್ಮಂತ್ರವು. ಧ್ಯಾನದಲ್ಲಿ ಅಗ್ನಿ- ಯಂತೆ ಬಣ್ಣವುಳ್ಳದ್ದು ಧ್ಯೇಯದುರ್ಗಾರೂಪವೆಂದು ತಿಳಿಯುವುದು. ವ.ಟೀ. - ನಮಸ್ಕಾರಯುತೈಃ । ಚತುರ್ಥ್ಯಂತೇನ ದುರ್ಗಾಪದೇನ ಸಂಯುಕ್ತಂ ದುರ್ಬೀಜಮ್ । ಅನ್ಯೋ ಮನುಃ ಸ್ಮೃತಃ । ದುರ್ಗಾ ತ್ರಿಷ್ಟುಪ್ । ದುರ್ಗಾಸ್ವರೂಪ ತ್ರಿನೇತ್ರತ್ವಂ ಚ ದುರ್ಗಾಯಾಃ ಪ್ರಾಯಃ ಸರ್ವತ್ರ ಕಥ್ಯತೇ । ಪಾದೈಃ ಸಮಸ್ತೇನ ತಥಾ ಷಡ್ವರ್ಣೇನಾಂಗಮುಚ್ಯತೇ ॥ ೬೩ ॥ ಅರ್ಥ- ದುರ್ಗಾದೇವಿಯ ಮಂತ್ರಧ್ಯಾನದಲ್ಲಿ ಧ್ಯೇಯಮೂರ್ತಿ- ಯನ್ನು ಧ್ಯಾನಿಸುವಾಗ ಅವಳು ತ್ರಿನೇತ್ರಳೆಂದೇ ಧ್ಯಾನಮಾಡು- ವುದು ಬಹುಶ ಎಲ್ಲಕಡೆ ಕಂಡುಬರುತ್ತದೆ. ವೈದಿಕದುರ್ಗಾಮಂತ್ರದ ಅಂಗನ್ಯಾಸವನ್ನು 'ಜಾತವೇದಸೇ' ಇತ್ಯಾದಿ ಪದಗಳಿಂದಲೂ ಹಾಗೂ ಸಮಸ್ತಪಾದಗಳಿಂದಲೂ ಸೇರಿಸಿ ಮಾಡಬೇಕು. ಹಾಗೆಯೇ ದುರ್ಗಾಷಡಕ್ಷರಮಂತ್ರಕ್ಕೂ ಮಂತ್ರದ ಅಕ್ಷರಗಳಿಂದಲೇ ಅಂಗನ್ಯಾಸ ಮಾಡಿಕೊಳ್ಳಬೇಕು[^1] [^1]. ವೈದಿಕದುರ್ಗಾಮಂತ್ರದ ಅಂಗನ್ಯಾಸ ಓಂ ಜಾತವೇದಸೇ ಸುನವಾಮ ಸೋಮಂ ಹೃದಯಾಯ ನಮಃ । ರಮಯಾ ಏವ ರೂಪಾಣಿ ಶ್ವೇತಾನಿ ಹಿ ವಿದೋ ವಿದುಃ । ಮುಖ್ಯತೋ ಜಾಮದಗ್ನ್ಯಸ್ತು ದೇವತಾऽಸ್ಯ ಮನೋಃ ಸ್ಮೃತಃ ॥ ೬೪ ॥ ಅರ್ಥ - ಶ್ರೀ,ಭೂ, ದುರ್ಗೆ ಈ ರೂಪಗಳೆಲ್ಲ ಲಕ್ಷ್ಮೀದೇವಿಯದೇ ರೂಪಗಳು. ದುರ್ಗಾವೈದಿಕಮಂತ್ರಕ್ಕೆ ಮುಖ್ಯವಾಗಿ ಪರಶುರಾಮ ದೇವರು ಪ್ರತಿಪಾದ್ಯವಾಗಿರುವರು. ನಂತರ ದುರ್ಗೆಯೂ ಪ್ರತಿಪಾದ್ಯಳೇ ಆಗಿರುವಳು ಚತುರ್ಮುಖಬ್ರಹ್ಮಮಂತ್ರ ಹಿರಣ್ಯಗರ್ಭಸೂಕ್ತಂ ಚ ಭೃಗುದೃಷ್ಟಂ ಪ್ರಕೀರ್ತಿತಮ್ । ಬ್ರಹ್ಮಧಾತೃವಿರಿಂಚಾಜಪಾದ್ಮೈರಂಗಮುದಾಹೃತಮ್ ॥ ೬೫ ॥ ಅರ್ಥ - ಭೃಗುಋಷಿಯಿಂದ ಕಂಡು ಹಿಡಿಯಲ್ಪಟ್ಟ 'ಹಿರಣ್ಯಗರ್ಭಃ ಸಮವರ್ತತಾಗ್ರೇ' ಎಂಬ ಹಿರಣ್ಯಗರ್ಭವೈದಿಕ- ಸೂಕ್ತ(10/121)ವು ಬ್ರಹ್ಮದೇವರ ಮಂತ್ರವಾಗಿದೆ. ಬ್ರಹ್ಮ, ಧಾತೃ, ವಿರಿಂಚ, ಅಜ, ಪಾದ್ಮ ಪದಗಳಿಂದ ಅಂಗನ್ಯಾಸ ಮಾಡಬೇಕು[^1] ವ.ಟೀ. - ಹಿರಣ್ಯಗರ್ಭಸೂಕ್ತಮ್ - 'ಹಿರಣ್ಯಗರ್ಭಃ ಸಮವರ್ತತಾಗ್ರೇ' ಇತಿ । ಧ್ಯಾಯೇನ್ನಿಷಣ್ಣಮಜಮಚ್ಯುತನಾಭಿಪದ್ಮ ಪ್ರೋದ್ಯದ್ದಿವಾಕರಸಮೂಹನಿಕಾಶಮಗ್ರ್ಯಮ್ । ಓಂ ಅರಾತೀಯತೋ ನಿದಹಾತಿ ವೇದಃ ಶಿರಸೇ ಸ್ವಾಹಾ। ಓಂ ಸನಃ ಪರ್ಷದತಿ ದುರ್ಗಾಣಿ ವಿಶ್ವಾ ಶಿಖಾಯೈ ವಷಟ್ । ಓಂ ನಾವೇವ ಸಿಂಧುಂ ದುರಿತಾತ್ಯಗ್ನಿಃ ಕವಚಾಯ ಹುಮ್ । ಓಂ ಜಾತವೇದಸೇ ಸುನವಾಮ ಸೋಮಮರಾತೀಯತೋ ನಿದಹಾತಿ ವೇದಃ । ಸನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ ಅಸ್ತ್ರಾಯ ಫಟ್ । ದುರ್ಗಾಮಂತ್ರದ ಅಂಗನ್ಯಾಸ ಕ್ರಮ ದುಂ ಹೃದಯಾಯ ನಮಃ । ದುಂ ಶಿರಸೇ ಸ್ವಾಹಾ । ಗಾಂ ಶಿಖಾಯೈ ವಷಟ್ । ಯೈಂ ಕವಚಾಯ್ ಹುಮ್ । ನಂ ನೇತ್ರತ್ರಯಾಯ ವೌಷಟ್ । ಮಂ ಅಸ್ತ್ರಾಯ ಫಟ್ । [^1]. ಅಂಗನ್ಯಾಸಕ್ರಮ – ಓಂ ಬ್ರಹ್ಮಣೇ ಹೃದಯಾಯ ನಮಃ । ಓಂ ಧಾತ್ರೆ ಶಿರಸೇ ಸ್ವಾಹಾ । ಓಂ ವಿರಿಂಚಾಯ ಶಿಖಾಯೈ ವಷಟ್ । ಅಜಾಯ ಕವಚಾಯ ಹುಂ। ಪಾದ್ಮಾಯ ಅಸ್ತ್ರಾಯ ಫಟ್ । ಮಾತೃಪ್ರಕಾರಕರಮುತ್ತಮಕಾಂತಿಮದ್ಭಿ- ರ್ವಕ್ತ್ರೈಃ ಸೃಜಂತಮಖಿಲೈಃ ಪರಮಾರ್ಥವಿದ್ಯಾಃ ॥ ೬೬ ॥ ಅರ್ಥ - ಭಗವಂತನ ನಾಭಿಕಮಲದಲ್ಲಿ ಕುಳಿತಿರುವ, ಉದಯಿಸುತ್ತಿರುವ ಸೂರ್ಯರಂತೆ ಜೀವೋತ್ತಮರಾದ, ತನ್ನ ತಾಯಿಯಂತೆ ತಾನೂ ಎರಡು ಕೈಗಳಲ್ಲಿ ಎರಡು ಕಮಲಗಳನ್ನು ಹಾಗೂ (ಮತ್ತೆರಡು ಕೈಗಳಲ್ಲಿ) ವರಾಭಯಮುದ್ರೆಗಳನ್ನು ಧರಿಸಿರುವ, ಸುಂದರವಾದ ನಾಲ್ಕೂ ಮುಖಗಳಿಂದ ಪರಮತತ್ವ ವನ್ನು ಬೋಧಿಸುವ ವೇದಗಳನ್ನು ಉಚ್ಚರಿಸುತ್ತಿರುವ, ಅಜ- ನೆನಿಸಿದ ಚತುರ್ಮುಖಬ್ರಹ್ಮದೇವನನ್ನು ಧ್ಯಾನಿಸಬೇಕು. ಪಂಚಾಕ್ಷರ ಹಾಗೂ ಅಷ್ಟಾಕ್ಷರ ಬ್ರಹ್ಮಮಂತ್ರಗಳು ಸ್ವಯಮುದ್ದೇಶನತಿಮಾಂಸ್ತಸ್ಯ ಪಂಚಾಕ್ಷರೋ ಮನುಃ । ಸ್ವಯಮೇವಾಪರೋಽಷ್ಟಾರ್ಣಸ್ತಾದೃಶಃ ಸಂಪ್ರಕೀರ್ತಿತಃ ॥ ೬೭ ॥ ಅರ್ಥ - ನಮಃಶಬ್ದದಿಂದ ಕೂಡಿರುವ ಚತುರ್ಥ್ಯಂತ ಬ್ರಹ್ಮಶಬ್ದ- ದಿಂದ ಕೂಡಿರುವ ಮಂತ್ರವೇ ಬ್ರಹ್ಮಪಂಚಾಕ್ಷರಮಂತ್ರ, 'ಬ್ರಹ್ಮಣೇ ನಮಃ' ಎಂಬುದು ಇದರ ಸ್ವರೂಪ. ಬ್ರಹ್ಮಪದದ ಬದಲಾಗಿ ಹಿರಣ್ಯಗರ್ಭವೆಂಬ ಪದವನ್ನು ಸೇರಿಸಿದರೆ ಪಂಚಾಕ್ಷರಮಂತ್ರವೇ 'ಹಿರಣ್ಯಗರ್ಭಾಯ ನಮಃ' ಎಂದು ಅಷ್ಟಾಕ್ಷರಮಂತ್ರವಾಗುತ್ತದೆ. ವ.ಟೀ. - ಚತುರ್ಥ್ಯಂತನಮಸ್ಕಾರಯುತೋ ಬ್ರಹ್ಮಾ । ಸ್ವಯಮೇಕೋ ಮನುಃ । ತಾದೃಶೋ ಹಿರಣ್ಯಗರ್ಭ: ತತ್ಪರೋ ಮನುಃ ॥ ವೈದಿಕಮುಖ್ಯ ಪ್ರಾಣಮಂತ್ರ ಬಳಾದ್ಯಂ ಭ್ರಗುಣಾ ದೃಷ್ಟಂ ಪ್ರಾಣಾಗ್ನೇಃ ಸೂಕ್ತಮುಚ್ಯತೇ । ಪ್ರಾಣಾದ್ಯೈಃ ಪಂಚಭಿಸ್ತಸ್ಯಾಪ್ಯಂಗಾನ್ಯುಕ್ತಾನಿ ಸೂರಿಭಿಃ ॥ ೬೮ ॥ ಅರ್ಥ - ಭೃಗುಋಷಿಯಿಂದ ಕಾಣಲ್ಪಟ್ಟ 'ಬಳಿತ್ಥಾ' ಇತ್ಯಾದಿ ಮಂತ್ರವು (1/141) ಪ್ರಾಣಾಗ್ನಿ ಎನಿಸಿರುವ ವಾಯುದೇವನನ್ನು ಪ್ರತಿಪಾದಿಸುತ್ತದೆ. ಈ ಮಂತ್ರಕ್ಕೆ ಪ್ರಾಣಾ-ಪಾನ-ವ್ಯಾನೋ-ದಾನ-ಸಮಾನ-ಪದಗಳಿಂದ ಪಂಚಾಂಗನ್ಯಾಸವು[^1]. [^1]. ಅಂಗನ್ಯಾಸ ಮುಖ್ಯಪ್ರಾಣಧ್ಯೇಯರೂಪ ಉದ್ಯದ್ರವಿಪ್ರಕರಸನ್ನಿಭಮಚ್ಯುತಾಂಕೇ ಸ್ವಾಸೀನಮಸ್ಯ ನುತಿನಿತ್ಯವಚಃ ಪ್ರವೃತ್ತಿಮ್ । ಧ್ಯಾಯೇದ್ಗದಾಭಯಕರಂ ಸುಕೃತಾಂಜಲಿಂ ತಂ ಪ್ರಾಣಂ ಯಥೇಷ್ಟತನುಮುನ್ನತಕರ್ಮಶಕ್ತಿಮ್ ॥ ೬೯ ॥ ಅರ್ಥ - ಉದಯಿಸುತ್ತಿರುವ ಸೂರ್ಯನಂತೆ ಬೆಳಗುತ್ತಾ, ಭಗವಂತನ ಬಲ ತೊಡೆಯ ಮೇಲೆ ಕುಳಿತಿರುವ, ಭಗವಂತನನ್ನು ನಿರಂತರವೂ ಸ್ತೋತ್ರಮಾಡುತ್ತಿರುವ, ಎರಡು ಕೈಗಳಲ್ಲಿ ಗದೆ ಹಾಗೂ ಅಭಯಮುದ್ರೆಯನ್ನು ಧರಿಸಿ, ಮತ್ತೆರಡು ಹಸ್ತಗಳನ್ನು ಒಂದುಗೂಡಿಸಿ ಬದ್ಧಾಂಜಲಿಯಾಗಿ ಭಗವಂತನನ್ನು ನಮಸ್ಕರಿ-ಸುತ್ತಿರುವ, ಅದ್ಭುತಕಾರ್ಯಸಮರ್ಥನಾದ ಇಚ್ಛಾರೂಪೀ ಪ್ರಾಣದೇವನನ್ನು ಧ್ಯಾನಿಸಬೇಕು. ಪ್ರಾಣಾದಿಪಂಚಮಂತ್ರಗಳು ಪ್ರಾಣಾದ್ಯಾಃ ಪಂಚಮಂತ್ರಾಶ್ಚ ತಸ್ಯ ದೇವಸ್ಯ ವಾಚಕಾಃ । ಉಚ್ಯತೇ ಹರಿರಪ್ಯೇತೈಃ ಸಾಕ್ಷಾನ್ನಾರಾಯಣಾದಿಕಃ ॥ ೭೦ ॥ ಅರ್ಥ - ಪ್ರಾಣ, ಅಪಾನಾದಿ ಪಂಚಮಂತ್ರಗಳೂ ಸಹ ಆ ವಾಯು ದೇವನನ್ನೇ ಪ್ರತಿಪಾದಿಸುತ್ತವೆ. ಈ ಪ್ರಾಣಾದಿಪಂಚಪದಗಳು ಪ್ರಾಣಾದಿಪಂಚರೂಪಗಳಲ್ಲಿ ಅಂತರ್ಯಾಮಿಯಾಗಿರುವ ನಾರಾಯಣಾದಿ ಪಂಚರೂಪಗಳೂ ಪ್ರತಿಪಾದಿತವಾಗಿವೆ. ವೈದಿಕಸರಸ್ವತೀ-ಭಾರತೀಮಂತ್ರ ಬ್ರಹ್ಮಾಣ್ಯಾ ಅಪಿ ಭಾರತ್ಯಾ ಗೌರೀರ್ಯಸ್ತ ಇತಿ ಶ್ರುತೌ । ಮಂತ್ರೌ ದೀರ್ಘತಮೋದೃಷ್ಟೌ ಸರ್ವಾಭೀಷ್ಟಪ್ರದಾಯಕೌ II ೭೧ ॥ ಅರ್ಥ 'ಗೌರೀರ್ಮಿಮಾಯ ಸಲಿಲಾನಿ' ಇತ್ಯಾದಿ ವೈದಿಕಮಂತ್ರ, ಹಾಗೂ 'ಯಸ್ತೇ ಸ್ತನಃ ಶಶಯೋ' ಇತ್ಯಾದಿ ವೇದಮಂತ್ರಗಳು ಕ್ರಮವಾಗಿ ಭಾರತೀ ಓಂ ಪ್ರಾಣಾಯ ಹೃದಯಾಯ ನಮಃ । ಓಂ ಅಪಾನಾಯ ಶಿರಸೇ ಸ್ವಾಹಾ । ಓಂ ವ್ಯಾನಾಯ ಶಿಖಾಯೈ ವಷಟ್ । ಓಂ ಉದಾನಾಯ ಕವಚಾಯ ಹುಮ್ । ಓಂ ಸಮಾನಾಯ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಸರಸ್ವತಿಯರನ್ನು ಪ್ರತಿಪಾದಿಸುತ್ತವೆ. ಈ ಮಂತ್ರಗಳಾದರೋ ದೀರ್ಘತಮಸ್ ಎಂಬ ಋಷಿಯಿಂದ ಕಾಣಲ್ಪಟ್ಟವುಗಳಾಗಿದ್ದು, ಸರ್ವಾಭೀಷ್ಟಪ್ರದಾಯಕಗಳಾಗಿವೆ[^1] ಉದ್ಯದ್ದಿವಾಕರಸಮೂಹನಿಭಾಂ ಸ್ವಭರ್ತುಃ ಅಂಕಸ್ಥಿತಾಮಭಯಸದ್ವರಬಾಹುಯುಗ್ಮಾಮ್ । ಮುದ್ರಾಂ ಚ ತತ್ತ್ವದೃಶಯೇ ವರಪುಸ್ತಕಂ ಚ ದೋರ್ಯುಗ್ಮಕೇನ ದಧತೀಂ ಸ್ಮರತಾऽತ್ಮವಿದ್ಯಾಮ್ ॥ ೭೨ ॥ ಅರ್ಥ - ಉದಯಿಸುತ್ತಿರುವ ಸೂರ್ಯರ ಕಾಂತಿಯಂತೆ ಪ್ರಕಾಶಿಸುತ್ತಿರುವ, ತನ್ನ ಪತಿಯ ಅಂಕದಲ್ಲಿ (ತೊಡೆಯಲ್ಲಿ) ಕುಳಿತಿರುವ, ಕೈಗಳಲ್ಲಿ ಅಭಯಮುದ್ರೆ ವರಮುದ್ರೆಯನ್ನು ಧರಿಸಿರುವ, ಉಳಿದೆರಡು ಕೈಗಳಲ್ಲಿ ಜ್ಞಾನಮುದ್ರೆಯನ್ನೂ, ಸದ್ಗ್ರಂಥವನ್ನೂ ಧರಿಸಿರುವ ಭಗವತ್ ತತ್ವವಿದ್ಯೆಯ ಅಭಿಮಾನಿನಿಯಾದ ಸರಸ್ವತಿ ಮತ್ತು ಭಾರತಿದೇವಿಯರನ್ನು ಧ್ಯಾನಿಸಬೇಕು. ಬಹ್ಮಾಣಿ, ಭಾರತೀಮಂತ್ರಗಳ ಅಂಗನ್ಯಾಸ ಪಾದೈರ್ವ್ಯಸ್ತೈಃ ಸಮಸ್ತೈಶ್ಚ ತದಂಗಾನಿ ವಿದೋ ವಿದುಃ । ಸ್ವಯಮುದ್ದೇಶನತ್ಯಂತೌ ಮಂತ್ರೌ ದ್ವಾವಪರೌ ತಯೋಃ ॥ ೭೩ ॥ ಅರ್ಥ - ನಮಃಶಬ್ದದಿಂದ ಕೂಡಿದ ಚತುರ್ಥ್ಯಂತಗಳಾದ ಬ್ರಹ್ಮಾಣೀ ಹಾಗೂ ಭಾರತೀಪದಗಳೇ ಸರಸ್ವತೀಭಾರತೀ ಮಂತ್ರ- ಗಳಾಗುತ್ತವೆ. ವೈದಿಕಮಂತ್ರಗಳು ಹಾಗೂ ಪಂಚಾಕ್ಷರಮಂತ್ರ- ಗಳಿಗೂ ಆಯಾಯ ಮಂತ್ರದ ಪಾದಗಳಿಂದ ಹಾಗೂ ಇಡೀ ಮಂತ್ರದಿಂದ ಪಂಚಾಂಗನ್ಯಾಸವು[^2] [^1]. ಪೂರ್ಣಮಂತ್ರಗಳ ಸ್ವರೂಪ ಹೀಗಿದೆ ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕಪದಿ ದ್ವಿಪದೀ ಸಾ ಚತುಷ್ಪದೀ । ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ವ್ಯೋಮನ್ ॥ - 1/164/41 ಯಸ್ತೇ ಸ್ತನಃ ಶಶಯೋ ಯೋ ಮಯೋಭೂರ್ಯೇನ ವಿಶ್ವಾ ಪುಷ್ಯಸಿ ವಾರ್ಯಾಣಿ । ಯೋ ರತ್ನಧಾ ವಸುವಿದ್ಯಃ ಸುದಃತ್ರ ಸರಸ್ವತಿ ತಮಿಹ ಧಾತವೇಕಃ ॥ 1/166/46 [^2]. ಸರಸ್ವತೀಮಂತ್ರದ ಅಂಗನ್ಯಾಸ ಯಸ್ತೇ ಸ್ತನಃ ಶಶಯೋ ಯೋ ಮಯೋಭೂಃ - ಹೃದಯಾಯ ನಮಃ । ಯೇನ ವಿಶ್ವಾ ಪುಷ್ಯಸಿ ವಾರ್ಯಾಣಿ - ಶಿರಸೇ ಸ್ವಾಹಾ । ವ.ಟೀ. ಬ್ರಹ್ಮಾಣೀಭಾರತ್ಯೌ ಚತುರ್ಥ್ಯಂತೌ । ನಮಸ್ಕಾರಯುತೌ । ದ್ವೌ ಮಂತ್ರಾವಿತ್ಯರ್ಥ: ॥ ಮಂತ್ರಗಳ ಮಹಿಮೆ; ಇಷ್ಟದೇವತೆ, ಸೌಭಾಗ್ಯದೇವತೆ, ಗುರುಗಳ ವರ್ಣನೆ ಮಂತ್ರಾ ಹ್ಯೇತೇ ಹರೇಃ ಪ್ರೀತಿದಾಯಕಾಃ ಸರ್ವಕಾಮದಾಃ । ಇಷ್ಟಂ ದೈವಂ ಹರಿಃ ಸಾಕ್ಷಾತ್ ಲಕ್ಷ್ಮೀಃ ಭಾಗ್ಯಸ್ಯ ದೇವತಾ । ಗುರುರ್ಬ್ರಹ್ಮಾऽಥ ವಾಯುರ್ವಾ ವಿದ್ಯಾ ದೇವ್ಯೌ ಪ್ರಕೀರ್ತಿತೇ II ೭೪ ॥ ಅರ್ಥ - ಈ ಮಂತ್ರಗಳೆಲ್ಲವೂ ಭಗವಂತನ ಪ್ರೀತಿಪಾತ್ರವಾಗಿದ್ದು ಜಪಿಸುವವರ ಸರ್ವಕಾಮನೆಗಳು ಪೂರ್ಣವಾಗುವವು. ಈ ಮಂತ್ರಗಳ ಜಪಿಸುವವರಿಗೆ ಸರ್ವೇಷ್ಟಪ್ರದನಾದವನು ಸರ್ವೇಷ್ಟ ಪ್ರಿಯನಾದ ಶ್ರೀಹರಿಯು, ಲಕ್ಷ್ಮೀದೇವಿಯಾದರೂ ಸೌಭಾಗ್ಯ ದೇವತೆಯು, ಬ್ರಹ್ಮವಾಯುಗಳು ಮೂಲಗುರುಗಳಾಗಿರುವರು. ಸರಸ್ವತೀಭಾರತಿಯರು ವಿದ್ಯಾಭಿಮಾನಿಯಾಗಿರುವರು. ವಿಷ್ಣುಪ್ರೀತಿಗಾಗಿ ಇವರೆಲ್ಲರ ಜ್ಞಾನ ಹಾಗೂ ಪೂಜೆಯ ಆವಶ್ಯಕತೆ ತಸ್ಮಾದೇತೇ ಪ್ರಿಯಾ ವಿಷ್ಣೋರಂತರಂಗತಯಾ ಸದಾ । ಜ್ಞೇಯಾಶ್ಚೈವ ಪ್ರಪೂಜ್ಯಾಶ್ಚ ವಿಷ್ಣೋಃ ಪ್ರೀತಿಮಭೀಪ್ಸತಾ ॥ ೭೫ ॥ ಅರ್ಥ - ಪರಶುಕ್ಲತ್ರಯರಾದ ಲಕ್ಷ್ಮೀ, ಬ್ರಹ್ಮಾ, ವಾಯು, ಸರಸ್ವತೀ ಹಾಗೂ ಯೋ ರತ್ನಧಾ ವಸುವಿದ್ಯಃ ಸುದತ್ರಃ - ಶಿಖಾಯೈ ವಷಟ್ । ಸರಸ್ವತಿ ತಮಿಹ ಧಾತವೇ ಕಃ - ಕವಚಾಯ ಹುಮ್ । 'ಯಸ್ತೇ.......... ಧಾತವೇ ಕಃ' - ಅಸ್ತ್ರಾಯ ಫಟ್ । ಭಾರತೀ ಮಂತ್ರದ ಅಂಗನ್ಯಾಸ । ಗೌರೀರ್ಮಿಮಾಯ ಸಲಿಲಾನಿ ತಕ್ಷತಿ - ಹೃದಯಾಯ ನಮಃ । ಏಕಪದೀ ದ್ವಿಪದೀ ಸಾ ಚತುಷ್ಪದೀ - ಶಿರಸೇ ಸ್ವಾಹಾ । ಅಷ್ಟಾಪದೀ ನವಪದೀ ಬಭೂವಿಷೀ – ಶಿಖಾಯೈ ವಷಟ್। ಸಹಸ್ರಾಕ್ಷರಾ ಪರಮೇ ವ್ಯೋಮನ್ - ಕವಚಾಯ ಹುಮ್ । 'ಗೌರೀರ್ಮಿಮಾಯ ಸಲಿಲಾನಿ ತಕ್ಷತ್ಯೇಕಪದಿ ದ್ವಿಪದೀ ಸಾ ಚತುಷ್ಪದೀ । ಅಷ್ಟಾಪದೀ ನವಪದೀ ಬಭೂವುಷೀ ಸಹಸ್ರಾಕ್ಷರಾ ಪರಮೇ ವ್ಯೋಮನ್ ॥' ಅಸ್ತ್ರಾಯ ಫಟ್ ॥ ಭಾರತಿಯರು ಭಗವಂತನಿಗೆ ಅತ್ಯಂತ ಪ್ರಿಯರಾದ್ದರಿಂದ ಈ ದೇವತೆಗಳನ್ನು (ವಿಷ್ಣುವಿನ ಪ್ರೀತಿಯನ್ನು ಅಪೇಕ್ಷಿಸುವವರು) ತಿಳಿದು ಪೂಜಿಸಬೇಕು. ಶಿವಪಂಚಾಕ್ಷರೀಮಂತ್ರ, ನ್ಯಾಸ ಹಾಗೂ ಧ್ಯಾನಾದಿಗಳು ಉದ್ದೇಶನತಿಯುಙ್ಮಂತ್ರಃ ಸ್ವಯಮೇವ ಶಿವಸ್ಯ ತು। ವರ್ಣೈರೇತೈಃ ತದಂಗಾನಿ ವಾಮದೇವೋ ಮುನಿಃ ಸ್ಮೃತಃ । ಪಂಕ್ತಿಶಬ್ದಾರ್ಥವಿಜ್ಞಾನೇ ನ ಹಿ ಛಂದಸಿ ಸಂಶಯಃ ॥ ೭೬ ॥ ಅರ್ಥ - ಚತುರ್ಥ್ಯಂತವೂ, ನಮಃಶಬ್ದಯುಕ್ತವಾದ ಶಿವಶಬ್ದವು ಶಿವಪಂಚಾಕ್ಷರ ಮಂತ್ರವು, ಈ ಮಂತ್ರದ ಐದು ಅಕ್ಷರಗಳಿಂದಲೇ ಅಂಗನ್ಯಾಸ[^1] ವಿಹಿತವಾಗಿದೆ. ಋಷಿ ವಾಮದೇವ, ಛಂದಸ್ಸು ಪಂಕ್ತಿ. 'ಓಂ ನಮಃ ಶಿವಾಯ' ಎಂದು ಮಂತ್ರವು. ವ.ಟೀ - ಚತುರ್ಥ್ಯಂತೋ ನಮಸ್ಕಾರಯುತಃ ಶಿವಪಂಚಾಕ್ಷರಃ । ಧ್ಯೇಯಃ ಪಂಚಮುಖೋ ರುದ್ರಃ ಸ್ಫಟಿಕಾಮಲಕಾಂತಿಮಾನ್ । ವಿದ್ಯುಚ್ಛುಭ್ರಾಸಿತರಜಃ ಶ್ಯಾಮಾನ್ಯಸ್ಯ ಮುಖಾನಿ ಚ । ಜಟಾವಬದ್ಧೇಂದುಕಲಃ ಪ್ರಿಯಾಯುಙ್ ನಾಗಭೂಷಣಃ ॥ ೭೭ ॥ ಅರ್ಥ - ಸ್ಫಟಿಕದಂತೆ ಕಾಂತಿಯುಳ್ಳ, ವಿದ್ಯುತ್, ಬಿಳಿ, ಕಪ್ಪು, ಕೆಂಪು, ನೀಲಿ ಬಣ್ಣಗಳಿಂದ ಶೋಭಿಸುವ ಐದು ಮುಖಗಳಿಂದ ಕೂಡಿರುವ, ಜಟೆಯಲ್ಲಿ ಚಂದ್ರನ ಕಲೆ, ಭೂಷಣವಾಗಿರುವ ಸರ್ಪವುಳ್ಳ, ತೊಡೆಯಲ್ಲಿ ಪಾರ್ವತೀದೇವಿಯುಳ್ಳ ಶಿವನನ್ನು ಧ್ಯಾನಿಸಬೇಕು. ಮಂತ್ರಗಳಲ್ಲಿ ಓಂಕಾರದ ಬಳಕೆಯ ಹಿನ್ನೆಲೆ ಮಂತ್ರೇಷ್ವೇತೇಷು ಸರ್ವೇಷು ವಾಚ್ಯಸ್ತಾರೇಣ ಕೇಶವಃ । [^1]. ಅಸ್ಯ ಶ್ರೀ ಶಿವಪಂಚಾಕ್ಷರಮಂತ್ರಸ್ಯ ವಾಮದೇವ ಋಷಿಃ । ಪಂಕ್ತೀ ಛಂದಃ । ನ್ಯಾಸೇ ವಿನಿಯೋಗಃ । ಓಂ ನಂ ಹೃದಯಾಯ ನಮಃ । ಓಂ ಮಂ ಶಿರಸೇ - ಸ್ವಾಹಾ। ಓಂ ಶಿಂ ಶಿಖಾಯೈ ವಷಟ್ । ಓಂ ವಾಂ ಕವಚಾಯ ಹುಮ್ । ಓಂ ಯಂ ಅಸ್ತ್ರಾಯ ಫಟ್ । ಅಂತರ್ಯಾಮಿತಯಾ ಧ್ಯೇಯಃ ಸರ್ವದೇವೇಷು ಸರ್ವದಾ ॥ ೭೮ ॥ ಅರ್ಥ - ಈ ಮೇಲೆ ಹೇಳಿದ ಮಂತ್ರಗಳ ಆದಿಯಲ್ಲಿ ಸ್ರವಣ- ವಿಶರಣದೋಷ ಪರಿಹಾರಕ್ಕಾಗಿ ಓಂಕಾರವನ್ನು ಹೇಳಲೇಬೇಕು. ಈ ಓಂಕಾರವಾಚ್ಯನಾದವನು ಭಗವಂತನೇ ಆಗಿರುವನು. ಇದೇ ರೀತಿ ಎಲ್ಲಾ ಮಂತ್ರಪ್ರತಿಪಾದ್ಯದೇವತೆಗಳ ಅಂತರ್ಯಾಮಿಯಾದ ಭಗವಂತನೇ ಸಮಸ್ತಮಂತ್ರಗಳಿಗೆ ಮುಖ್ಯ ಪ್ರತಿಪಾದ್ಯನಾಗಿರು- ವನೆಂದು ತಿಳಿಯಬೇಕು. ಪಾರ್ವತೀಪಂಚಾಕ್ಷರ ಮಂತ್ರ ಸ ಏವ ವನಿತಾಲಿಂಗಃ ಪಾರ್ವತ್ಯಾ ಮನುರುಚ್ಯತೇ । ಗೌರೀ ವರಾಭಯಕರಾ ಧ್ಯೇಯಾ ಪೀತಾಂಬರಾ ಚ ಸಾ ॥ ೭೯ ॥ ಅರ್ಥ - ಶಿವಪಂಚಾಕ್ಷರಮಂತ್ರದಲ್ಲಿರುವ ಶಿವಶಬ್ದವನ್ನು ಸ್ತ್ರೀಲಿಂಗದಲ್ಲಿ ಪಠಿಸಿದರೆ ಪಾರ್ವತೀಮಂತ್ರವಾಗುತ್ತದೆ. (ಓಂ ನಮಃ ಶಿವಾಯೈ' ಎಂದು ಮಂತ್ರಸ್ವರೂಪ), ಗೌರೀದೇವಿಯು ತನ್ನ ಕರಗಳಲ್ಲಿ ವರಮುದ್ರೆ - ಅಭಯಮುದ್ರೆ ಧರಿಸಿದ್ದು, ಪೀತಾಂಬರ- ಧಾರಿಯಾಗಿರುವ ಪಾರ್ವತೀದೇವಿಯನ್ನು ಧ್ಯಾನಿಸಬೇಕು. ವ.ಟೀ - ಸ ಶಿವ ಏವ ವನಿತಾಲಿಂಗಃ ಪಾರ್ವತೀಮಂತ್ರಃ ।[^1] ಶೇಷಮಂತ್ರ; ಅಂಗನ್ಯಾಸ, ಧ್ಯಾನಾದಿಗಳು [^1]. ಪಾರ್ವತೀಪಂಚಾಕ್ಷರ - ಅಸ್ಯಶ್ರೀ ಪಂಚಾಕ್ಷರಮಂತ್ರಸ್ಯ, ವಾಮದೇವ ಋಷಿಃ, ಪಂಕ್ತಿಛಂದಃ, ಜಪೇ ವಿನಿಯೋಗಃ - ಅಕ್ಷರಗಳಿಂದಲೇ ಅಂಗನ್ಯಾಸ - ಓಂ ಓಂ ಹೃದಯಾಯ ನಮಃ । ಓಂ ನಮಃ ಶಿರಸೇ ಸ್ವಾಹಾ । ಓಂ ಶಿವಾಯೈ ಶಿಖಾಯೈ ವೌಷಟ್ । ಓಂ ಓಂ ಕವಚಾಯ ಹುಮ್ । ಓಂ ನಮಃ ನೇತ್ರಾಭ್ಯಾಂ ವೌಷಟ್ । ಓಂ ಶಿವಾಯೈ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ । ಗೌರ್ಯಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತ ಶ್ರೀಜಯಾಪತಿಸಂಕರ್ಷಣ ಪ್ರೇರಣಯಾ ತತ್ಪ್ರೀತ್ಯರ್ಥಂ ಯಥಾಶಕ್ತಿ ಪಾರ್ವತೀಪಂಚಾಕ್ಷರಜಪಾಖ್ಯಂ ಕರ್ಮ ಕರಿಷ್ಯೇ ಈ ಮಂತ್ರ ಜಪದ ಫಲ – ದಾಂಪತ್ಯ ಜೀವನ ಸುಖವಾಗಿರುವುದು, ಪುತ್ರಪೌತ್ರಾದಿಸಂಪತ್ತು, ಭಗವಂತನಲ್ಲಿ ಮನಸ್ಸು, ಭಕ್ತ್ಯಾದಿಗಳು ಲಭ್ಯ. ಸ್ವಯಮುದ್ದೇಶನತ್ಯಂತಃ ಪೂರ್ವಪೂರ್ವಃ ಷಡಕ್ಷರಃ । ಸನತ್ಕುಮಾರದೃಷ್ಟೋऽಯಂ ಮಂತ್ರಃ ಶೇಷಸ್ಯ ಕಾಮದಃ ॥ ೮೦ ॥ ವ.ಟಿ. - ಶೇಷಪೂರ್ವಃ । ಪೂರ್ವಾಕ್ಷರಃ ಸ ಪೂರ್ವೋ ಯಸ್ಯ ಸಃ ಪೂರ್ವಪೂರ್ವನಮಸ್ಕಾರಯುತಃ ಷಡಕ್ಷರ ಇತಿ ಭಾವಃ। ಟೀಕಾರ್ಥ - ಪೂರ್ವಪೂರ್ವ ಎಂದರೆ ಶೇಷಶಬ್ದದ ಪೂರ್ವವಾದ ಶೇಂ ಎಂಬ ಪದವು ಎಂದರ್ಥ. ಮೊದಲಲ್ಲಿರುವ ಚತುರ್ಥ್ಯಂತ- ವಾದ ಶೇಷ ಎಂಬ ಶಬ್ದ. ಕೊನೆಯಲ್ಲಿ 'ನಮಃ' ಎಂಬ ಪದವು ಸೇರಿಸಿದರೆ ಸನತ್ಕುಮಾರನಿಂದ ಕಂಡು ಹಿಡಿದಿರುವ 'ಓಂ ಶೇಂ ಶೇಷಾಯ ನಮಃ' ಎಂದಾಗುತ್ತದೆ. ಈ ಮಂತ್ರಪದದಿಂದ ಸಕಲೇಪ್ಸಿತಗಳನ್ನೂ ಪಡೆಯಬಹುದಾಗಿದೆ.[^1] ಶೇಷಮಂತ್ರದ ಧ್ಯಾನಶ್ಲೋಕ ದಧಾನೋ ಹಲ ಸೌನಂದೌ ಶ್ವೇತವರ್ಣಃ ಕೃತಾಂಜಲಿಃ । ಸಹಸ್ರಮೂರ್ಧಾऽದ್ವಿತೀಯಕರ್ಣಭೂಷಃ ಪ್ರಿಯಾಯುತಃ । ವನಮಾಲೀ ನೀಲವಾಸಾ ಧ್ಯೇಯೋ ವಿಷ್ಣೋಸ್ತು ಪೃಷ್ಠತಃ ॥ ೮೧ ॥ ಅರ್ಥ - ನೇಗಿಲು ಮತ್ತು ಮುಸಲವನ್ನು ಧರಿಸಿರುವ, ಶ್ವೇತವರ್ಣ- ದವನಾದ, ಕೈಜೋಡಿಸಿ ಅಂಜಲಿಬದ್ಧನಾದ, ಸಾವಿರಹೆಡೆಗಳುಳ್ಳ, ಒಂದು ಕಿವಿಯಲ್ಲಿ ಮಾತ್ರ ಕರ್ಣಾಭರಣವನ್ನು ಧರಿಸಿರುವ, ನೀಲಾಂಬರಧಾರಿಯಾದ, ಭಗವಂತನ ಹಿಂಭಾಗದಲ್ಲಿ ನಿಂತಿರುವ ಶೇಷದೇವನನ್ನು ಧ್ಯಾನಿಸಬೇಕು[^2] [^1]. ಶೇಷಮಂತ್ರದ ಅಂಗನ್ಯಾಸ ಓಂ ಶೇಂ ಹೃದಯಾಯ ನಮಃ । ಓಂ ಶೇಷಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯೈ ವೌಷಟ್ । ಓಂ ಶೇಂ ಕವಚಾಯ ಹುಮ್ । ಓಂ ಶೇಷಾಯ ನೇತ್ರಾಭ್ಯಾಂ ವಷಟ್ । ಓಂ ನಮಃ ಅಸ್ತ್ರಾಯ ಫಟ್ । ಇತಿ ದಿಗ್ಬಂಧಃ [^2]. ವಿಶೇಷಾಂಶ - ಶೇಷದೇವನು ಸಾವಿರಹೆಡೆಯಿಂದ ಕೂಡಿದ್ದು, ಬಿಳಿಬಣ್ಣದವನಾಗಿರುವನು. ತನ್ನ ಎಡಭಾಗದ ಕಿವಿಯಲ್ಲಿ ಮಾತ್ರ ಕರ್ಣಭೂಷಣಧರಿಸಿರುವನು. ಎಡಗೈಯಲ್ಲಿ ನೇಗಿಲು ಹಾಗೂ ಬಲಗೈಯಲ್ಲಿ ಒನಕೆ ಹಿಡಿದಿರುವನು. ಶತ್ರು- ವನ್ನು ನೇಗಿಲಿನಿಂದ ತನ್ನೆಡೆಗೆ ಎಳೆದು, ಮಣ್ಣಿನ ಹೆಂಟೆಯನ್ನು ಒಡೆಯುವಂತೆ ಒನಕೆಯಿಂದ ತಲೆಯನ್ನು ಒಡೆದು ಹಾಕುವನು. ನೀಲವಾದ ವಸ್ತ್ರಧರಿಸಿರುವವನು. ಕುತ್ತಿಗೆಯಿಂದ ಆರಂಭಿಸಿ ಪಾದಗಳವರೆಗೂ ಜೋಲಾಡುತ್ತಿರುವ ವನಮಾಲೆಯನ್ನು ಧರಿಸಿರುವನು. ಗರುಡಮಂತ್ರ - ಋಷ್ಯಾದಿಗಳು, ಧ್ಯಾನಪ್ರಕಾರ ವ್ಯತ್ಯಸ್ತಪಕ್ಷಿತಾರೌ ಚ ಸ್ವಾಹಾಂತೋ ಗಾರುಡೋ ಮನುಃ । ಕಶ್ಯಪೋಽಸ್ಯ ಮುನಿರ್ಧ್ಯೇಯಃ ಸುಧಾಪೂರ್ಣ೦ ಹಿರಣ್ಮಯಮ್ ॥ ೮೨ ॥ ದಧಾನಃ ಕುಂಭಮಭಯಂ ಪೀತಶುಕ್ಲಾರುಣೋ ಹರಿತ್ । ಕೃಷ್ಣಶ್ಚಾಜಾನುತೋ ನಾಭೇಃ ಕಂಠಾತ್ ಕಾದಂತ ಏವ ಚ ॥ ೮೩ ॥ ಪ್ರಿಯಾಯುಕ್ ಪುರತೋ ವಿಷ್ಣೋಃ ಪಕ್ಷತುಂಡಸಮನ್ವಿತಃ । ಜಂಗಮಸ್ಥಾವರವಿಷಹೃದಯಂ ಸರ್ವಕಾಮದಃ ॥ ೮೪ ॥ ಅರ್ಥ - ಪಕ್ಷಿಶಬ್ದವನ್ನು ತಿರುಗಿಸಿ ಹೇಳಿ, ಅದರೊಂದಿಗೆ ಓಂಕಾರ ಹಾಗೂ ಸ್ವಾಹಾ ಎಂಬ ಪದವನ್ನು ಸೇರಿಸಬೇಕು. 'ಕ್ಷಿಪ ಓಂ ಸ್ವಾಹಾ' ಎಂದಾಗುತ್ತದೆ. ಇದು ಕಾಶ್ಯಪಋಷಿಯು ಕಂಡ ಗರುಡಮಂತ್ರ. ಗರುಡನು ಸುವರ್ಣದ ಅಮೃತಕಲಶವನ್ನು, ಅಭಯಮುದ್ರೆ ಯನ್ನು ಧರಿಸಿರುವನು. ದೇಹದಲ್ಲಿ ಪಾದದಿಂದ ಮೊಣಕಾಲಿನ- ವರೆಗೆ ಹಳದಿಬಣ್ಣವು, ಅಲ್ಲಿಂದ ನಾಭಿಪರ್ಯಂತ ಬಿಳಿಯ ಬಣ್ಣವು, ಅಲ್ಲಿಂದ ಕಂಠದವರೆಗೂ ಕೆಂಪು ಬಣ್ಣವು, ಅಲ್ಲಿಂದ ಶಿರಸ್ಸಿನವರೆಗೂ ಹಸಿರುಬಣ್ಣ, ಶಿರಸ್ಸಾದರೋ ಕಪ್ಪುಬಣ್ಣ ಹಾಗೂ ತನ್ನ ಪತ್ನಿಯಾದ ಸೌಪರ್ಣಿಯ ಜೊತೆಗೆ ಕುಳಿತು ಭಗವಂತನ ಮುಂಭಾಗದಲ್ಲಿರುತ್ತಾನೆ. ರೆಕ್ಕೆ ಹಾಗೂ ಕೊಕ್ಕುಗಳಿಂದ ಶೋಭಿಸು- ತ್ತಿರುವ ಗರುಡನನ್ನು ಧ್ಯಾನಿಸಬೇಕು. ಈ ಮಂತ್ರಜಪದಿಂದ ಸ್ಥಾವರಗಳೆನಿಸಿದ ವಿಷವೃಕ್ಷಗಳ ಭಯವನ್ನು, ಜಂಗಮವೆನಿಸಿದ ಸರ್ಪಾದಿಗಳ ವಿಷಯಭಯದಿಂದಲೂ ರಕ್ಷಿಸುತ್ತದೆ. ಇದಲ್ಲದೆ ಯಾವುದೇ ಇಷ್ಟಾರ್ಥವನ್ನೂ ಗರುಡಮಂತ್ರಜಪದಿಂದ ಹೊಂದಬಹುದಾಗಿದೆ[^1]. ದಿಕ್ಷಾಲಕರ ಮಂತ್ರಗಳು ಮಂತ್ರಾಶ್ಚ ಲೋಕಪಾಲಾನಾಂ ನಮೋಂऽತಾಃ ಸರ್ವಕಾಮದಾಃ। ಪೀತರಕ್ತಾಸಿತಶ್ವೇತರಕ್ತಶುಕ್ಲಾಶ್ಚ ವರ್ಣತಃ ॥ ೮೫ ॥ ಸಪ್ರಿಯಾಃ ಸಾಭಯಾ ವಜ್ರಶಕ್ತಿದಂಡಾಸಿಪಾಶಿನಃ । [^1]. ಗಾರುಡೋ ಮನುರಾಖ್ಯಾತಃ ವಿಷದ್ವಯವಿನಾಶನಃ । ಗದಾಕುಮುದಶೂಲರ್ಷ್ಟಿಖಡ್ಗಿನೋ ಭೂಷಣೋಜ್ವಲಾಃ॥ ೮೬ ॥ ಅರ್ಥ - ದಿಕ್ಪಾಲಕರ ನಾಮದೊಂದಿಗೆ 'ನಮಃ' ಎಂಬ ಪದ ಸೇರಿಸಿದರೆ ದಿಕ್ಪಾಲಕರ ಮಂತ್ರವೇರ್ಪಡುತ್ತದೆ. ಓಂ ಇಂದ್ರಾಯ ನಮಃ । ಓಂ ಅಗ್ನಯೇ ನಮಃ । ಯಮಾಯ ನಮಃ । ನಿರ್ಋತಯೇ ನಮಃ । ವರುಣಾಯ ನಮಃ । ವಾಯವೇ ನಮಃ । ಕುಬೇರಾಯ ನಮಃ । ಈಶಾನಾಯ ನಮಃ । ಹೀಗೆ ದಿಕ್ಪಾಲಕರ ಮಂತ್ರಸ್ವರೂಪ. ಈ ಮಂತ್ರಗಳು ಸರ್ವಾಭೀಷ್ಟಗಳನ್ನೂ ನೀಡಲು ಸಮರ್ಥ- ವಾಗಿರುವವು. ದಿಕ್ಷಾಲಕರ ಬಣ್ಣ, ಆಯುಧ, ವಾಹನಗಳೂ ಹೀಗಿವೆ. 1. ಇಂದ್ರ -ಪೀತವರ್ಣ- ವಜ್ರಾಯುಧಧಾರಿ-ಐರಾವತವಾಹನ 2. ಅಗ್ನಿ-ಕೆಂಪುಬಣ್ಣ-ಶಕ್ತ್ಯಾಯುಧ-ಮೇಷವಾಹನ 3. ಯಮ-ಕಪ್ಪುಬಣ್ಣ-ದಂಡಾಯುಧ-ಮಹಿಷವಾಹನ 4. ನಿಋರ್ತಿ-ಕಪ್ಪು-ಖಡ್ಗಾಯುಧ-ನರವಾಹನ 5. ವರುಣ-ಶ್ವೇತವರ್ಣ-ಪಾಶಾಯುಧ-ಮಕರವಾಹನ 6.ವಾಯು-ಕಪ್ಪು-ಗದಾಯುಧ-ಹರಿಣವಾಹನ 7. ಚಂದ್ರ-ಶ್ವೇತ-ಗದಾಯುಧ-ಅಶ್ವವಾಹನ 8. ಈಶಾನ-ಬಿಳಿ-ತ್ರಿಶೂಲಾಯುಧ-ವೃಷಭವಾಹನ 9. ಶೇಷ-ಬಿಳಿ-ಖಡ್ಗಾಯುಧ-ಕೂರ್ಮವಾಹನ 10. ಬ್ರಹ್ಮಾ-ಕೆಂಪು-ಪುಷ್ಕರಾಯುಧ-ಹಂಸವಾಹನ ಸ್ಕಂದಮಂತ್ರ - ಋಷಿ, ನ್ಯಾಸ, ಧ್ಯಾನಾದಿಗಳು ಅಗ್ನಿಶ್ಚ ಸ್ವಯಮುದ್ದೇಶೀ ಸನಮಃ ಸ್ಕಂದವಾಚಕಃ । ಕೌಶಿಕೋऽಸ್ಯ ಮುನಿರ್ವಹ್ನಿವರ್ಣಃ ಷಣ್ಮುಖ ಉಜ್ಜ್ವಲಃ । ಧನುಃಶಕ್ತಿಧರೋ ಧ್ಯೇಯಃ ಕಾಮದೋ ಭಯನಾಶನಃ ॥ ೮೭ ॥ ಅರ್ಥ - 'ರಂ' ಎಂಬ ಅಗ್ನಿಬೀಜಾಕ್ಷರ, ಹಾಗೂ ಚತುರ್ಥಿವಿಭಕ್ತಿ- ಯಲ್ಲಿರುವ ಸ್ಕಂದಾಯ ಎಂಬ ಪದ ಮತ್ತು ಕಡೆಯಲ್ಲಿ ನಮಃ ಎಂಬ ಪದ ಸೇರಿದಾಗ ಸ್ಕಂದಮಂತ್ರವೇರ್ಪಡುತ್ತದೆ. 'ಓಂ ರಂ ಸ್ಕಂದಾಯ ನಮಃ' ಎಂದು ಮಂತ್ರೋದ್ಧಾರ. ಈ ಮಂತ್ರವು ವಿಶ್ವಾಮಿತ್ರ ಋಷಿಯಿಂದ ದ್ರಷ್ಟವಾದದ್ದು. ಬೆಂಕಿಯಂತೆ ಬಣ್ಣವುಳ್ಳವನೂ, ಅತ್ಯಂತ ತೇಜಸ್ವಿಯೂ, ಧನುಸ್ಸು ಹಾಗೂ ಶಕ್ತಿ ಎಂಬ ಆಯುಧಧರಿಸಿರುವ, ಆರುಮುಖಗಳಿಂದ ಕೂಡಿರುವ ಸ್ಕಂದನನ್ನು ಧ್ಯಾನಿಸಬೇಕು. ಇದರ ಜಪದಿಂದ ಶತ್ರು ಭಯಪರಿಹಾರ ಹಾಗೂ ಸಕಲಾಭೀಷ್ಟ ಸಿದ್ದಿಯಾಗುತ್ತದೆ[^1]. ಸೂರ್ಯಮಂತ್ರ ಹ್ರಸ್ವಃ ಕೃಪಾಲುಃ ಸೇತಶ್ಚ ಸ್ವಯಮನ್ಯಃ ಸ್ವಯಂ ತಥಾ । ಸತಾರೋऽಷ್ಟಾಕ್ಷರಃ ಸೌರಃ ಕ್ರಮವ್ಯುತ್ಕ್ರಮತಃ ಪದೈಃ ॥ ೮೮ ॥ ಅಂಗಾನಿ ಪದ್ಮಯುಗಲಧರೋ ಧ್ಯೇಯೋऽರುಣೋ ರವಿಃ । ಸರ್ವವ್ಯಾಧಿಹರಃ ಶ್ರೀದೋ ದೃಷ್ಟಿದೋಽಯಂ ಮನುಃ ಸ್ಮೃತಃ ॥೮೯ ॥ ಅರ್ಥ - ದಯಾಲುವೆಂಬರ್ಥ ನೀಡುವ 'ಘೃಣೀ' ಶಬ್ದವನ್ನು ಹ್ರಸ್ವ ಮಾಡಿದಾಗ ಏರ್ಪಡುವ ಘೃಣಿ ಎಂಬ ಪದವು, ಈ ಪದವನ್ನು ವಿಸರ್ಗಯುಕ್ತವನ್ನಾಗಿ ಮಾಡಿದಾಗ ಘೃಣಿಃ ಎಂದಾಗುತ್ತದೆ. ನಂತರ ಸೂರ್ಯನನ್ನು ಹೇಳುವ ಸೂರ್ಯ ಎಂಬ ಪದ ಹಾಗೂ ಸೂರ್ಯವಾಚಕವಾದ ಇನ್ನೊಂದು ಪದವಾದ ಆದಿತ್ಯವೆಂಬು- ದನ್ನು ವಿಸರ್ಗಯುಕ್ತವನ್ನಾಗಿಸಿದಾಗ ಉಂಟಾಗುವ ಆದಿತ್ಯಃ ಎಂಬ ಪದ. ಇವುಗಳೊಂದಿಗೆ ಆದಿಯಲ್ಲಿ ಓಂಕಾರಸೇರಿಸಿ 'ಓಂ ಘೃಣಿಃ ಸೂರ್ಯ ಆದಿತ್ಯಃ' ಎಂಬ ಸೂರ್ಯಾಷ್ಟಾಕ್ಷರ ಮಂತ್ರವೇರ್ಪಡುತ್ತದೆ. ಈ ಮಂತ್ರದ ಪದಗಳನ್ನೇ 'ಘೃಣಿಃ ಸೂರ್ಯ ಆದಿತ್ಯ' ಎಂದು ಕ್ರಮವಾಗಿ ; ಆದಿತ್ಯ ಸೂರ್ಯ ಘೃಣಿಃ ಎಂದು ವ್ಯುತ್ಕ್ರಮ- ವಾಗಿಯೂ ಹೇಳಿದಾಗ ಅಂಗನ್ಯಾಸವೇರ್ಪಡುತ್ತದೆ. ತನ್ನ ಎರಡು ಹಸ್ತಗಳಲ್ಲಿ ಎರಡು ತಾವರೆಗಳನ್ನು ಧರಿಸಿ, ಅರುಣಬಣ್ಣವಿರುವ [^1]. ಅಂಗನ್ಯಾಸ ಅಸ್ಯ ಶ್ರೀ ಸ್ಕಂದಮಹಾಮಂತ್ರಸ್ಯ ವಿಶ್ವಾಮಿತ್ರ ಋಷಿಃ । ಸ್ಕಂದಾಂತರ್ಯಾಮಿ ಭಾ.ಮು. ಶ್ರೀಜಯಾಪತಿಸಂಕರ್ಷಣೋ ದೇವತಾ । ಜಪೇ ವಿನಿಯೋಗಃ । ಓಂ ರಂ ಹೃದಯಾಯ ನಮಃ । ಓಂ ಸ್ಕಂದಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯೈ ವೌಷಟ್ । ಓಂ ರಂ ಕವಚಾಯ ಹುಮ್ । ಓಂ ಸ್ಕಂದಾಯ ನೇತ್ರಾಭ್ಯಾಂ ವಷಟ್ । ಓಂ ನಮಃ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । ಸೂರ್ಯನನ್ನು ಧ್ಯಾನಿಸಬೇಕು. ಈ ಮಂತ್ರಜಪದಿಂದ ಎಲ್ಲಾ ರೀತಿಯ ವ್ಯಾಧಿಗಳು ನಾಶವಾಗುತ್ತವೆ. ಸಂಪತ್ತನ್ನು ನೀಡುವುದರೊಂದಿಗೆ ಕಾಲಕಾಲಕ್ಕೆ ಮಳೆಯನ್ನೂ ಪಡೆಯಬಹುದಾಗಿದೆ[^1] ಗಣಪತಿಮಂತ್ರ ಮೋನಯದಾಸಾಪ್ರಪ್ರಕ್ಷಿ ವ್ಯತ್ಯಸ್ತೋ ವಿಘ್ನರಾಣ್ಮನುಃ । ರಕ್ತಾಂಬರೋ ರಕ್ತತನೂ ರಕ್ತಮಾಲ್ಯಾನುಲೇಪನಃ ॥ ೯೦ ॥ ಮಹೋದರೋ ಗಜಮುಖಃ ಪಾಶದಂತಾಂಕುಶಾಭಯೇ । ಬಿಭ್ರದ್ ಧ್ಯೇಯೋ ವಿಘ್ನಹರಃ ಕಾಮದಸ್ತ್ವರಯಾ ಹ್ಯಯಮ್ ॥ ೯೧ ॥ ಅರ್ಥ - 'ಮೋನಯದಾಸಾಪ್ರಪ್ರಕ್ಷಿ' ಎಂಬ ಅಕ್ಷರಗಳನ್ನು ಹಿಂದು ಮುಂದಾಗಿ ಪಠಿಸಿದರೆ 'ಕ್ಷಿಪ್ರಪ್ರಸಾದಾಯ ನಮಃ' ಎಂದು ಗಣಪತಿ ಮಂತ್ರವು ಏರ್ಪಡುತ್ತದೆ. ಗಣಪತಿಯ ಧ್ಯೇಯಮೂರ್ತಿ ಹೀಗಿದೆ - ರಕ್ತದಂತೆ ಕೆಂಪಾದ ದೇಹ ಹಾಗೂ ಕೆಂಪುಬಣ್ಣದ ವಸ್ತ್ರವನ್ನು ಧರಿಸಿರುವ, ಅವನು ಧರಿಸಿ- ರುವ ಹೂಮಾಲೆ ಹಾಗೂ ಗಂಧವೂ ಸಹ ರಕ್ತವರ್ಣದ್ದಾಗಿರುತ್ತದೆ. ವಿಶಾಲಹೊಟ್ಟೆ, ಆನೆಯ ಮುಖದಂತೆ ಮುಖವಿದ್ದು ತನ್ನ ನಾಲ್ಕು ಹಸ್ತಗಳಲ್ಲಿ ಪಾಶ, ದಂತ, ಅಂಕುಶ, ಅಭಯಗಳನ್ನು ಧರಿಸಿರುವನು. ಇಂತಹ ಸರ್ವವಿಘ್ನಪರಿಹಾರಕನಾದ ಶೀಘ್ರವಾಗಿ ಫಲನೀಡುವ ಗಣಪತಿಯನ್ನು ಧ್ಯಾನಿಸಬೇಕು[^2]. [^1]. ಸೂರ್ಯಮಂತ್ರದ ಅಂಗನ್ಯಾಸ ಓಂ ಘ್ರಣಿಃ ಹೃದಯಾಯ ನಮಃ । ಓಂ ಸೂರ್ಯಃ ಶಿರಸೇಸ್ವಾಹಾ I ಓಂ ಆದಿತ್ಯಃ ಶಿಖಾಯೈ ವೌಷಟ್ । ಓಂ ಆದಿತ್ಯಃ ಕವಚಾಯ ಹುಮ್ । ಓಂ ಸೂರ್ಯಃ ನೇತ್ರಾಭ್ಯಾಂ ವಷಟ್ । ಓಂ ಘೃಣಿಃ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । ಅಸ್ಯ ಶ್ರೀ ಸೂರ್ಯ ಅಷ್ಟಾಕ್ಷರಮಂತ್ರಸ್ಯ ದೇವಭಾಗ ಋಷಿಃ । ಗಾಯತ್ರೀಚ್ಛಂದಃ । ಸೂರ್ಯಾಂತರ್ಯಾಮಿ ಶ್ರೀಭಾ.ಮು. ಶ್ರೀಲಕ್ಷ್ಮೀನಾರಾಯಣಪ್ರೇರಣಯಾ ಪ್ರೀತ್ಯರ್ಥಂ ಸೂರ್ಯಾಷ್ಟಾಕ್ಷರಮಂತ್ರಜಪೇ ವಿನಿಯೋಗಃ । [^2]. ಗಣಪತಿಮಂತ್ರ ಅಸ್ಯ ಶ್ರೀ ಗಣಪತಿಮಹಾಮಂತ್ರಸ್ಯ..... ಋಷಿಃ । ಗಣಪತ್ಯಂತರ್ಗತ ಶ್ರೀ .ಭಾ.ಮು. ಸರ್ವರೂ ವಿಷ್ಣುವಿನ ಅಧೀನರು ತತ್ರ ತತ್ರ ಸ್ಥಿತೋ ವಿಷ್ಣುಸ್ತತ್ತಚ್ಛಕ್ತೀಃ ಪ್ರಬೋಧಯನ್ । ಏಕ ಏವ ಮಹಾಶಕ್ತಿಃ ಕುರುತೇ ಸರ್ವಮಂಜಸಾ[^1] ॥ ೯೨ ॥ ಅರ್ಥ- ಗಣಪತ್ಯಾದಿಗಳಲ್ಲಿ ಅಂತರ್ನಿಯಾಮಕನಾಗಿರುವ ಭಗವಂತನೇ ಆಯಾಯ ಮಂತ್ರಪ್ರತಿಪಾದ್ಯದೇವತೆಗಳಲ್ಲಿದ್ದು, ಆಯಾಯ ದೇವತೆಗಳಿಗೆ ಫಲವನ್ನು ನೀಡುವ ಶಕ್ತಿಯನ್ನು ನೀಡುತ್ತಾ, ಸಮಸ್ತದೇವತೆಗಳಿಗೂ 'ಮಹಾಶಕ್ತಿ' ಎನಿಸಿದ್ದಾನೆ. ಅವನೇ ಎಲ್ಲವನ್ನೂ ಸ್ವತಂತ್ರವಾಗಿ ಮಾಡುವನು. ಧನ್ವಂತರೀಮಂತ್ರ; ಜಪ, ತರ್ಪಣಾದಿಗಳು ಸ್ವಯಮುದ್ದೇಶವಾನ್ ಪೂರ್ವಪೂರ್ವೋ ಹೃದಯಸಂಯುತಃ । ಧಾನ್ವಂತರೋ ಮಹಾಮಂತ್ರಃ ಸಂಸೃತಿವ್ಯಾಧಿನಾಶನಃ । ಅತ್ರೋಕ್ತಸರ್ವಮಂತ್ರಾಣಾಂ ನಾಯಕೋಪಲಸನ್ನಿಭಃ ॥ ೯೩ ॥ ಅರ್ಥ - ಚತುರ್ಥೀವಿಭಕ್ತ್ಯಂತವಾದ 'ಧನ್ವಂತರಿ' ಎಂಬ ಶಬ್ದ, ಹಾಗೂ ಅದರ ಮೊದಲನೆಯ ಅಕ್ಷರವಾದ ಧಕಾರವನ್ನು ಅನುಸ್ವಾರಸಹಿತವಾಗಿ ಪಠಿಸಬೇಕು. ಕಡೆಯಲ್ಲಿ 'ನಮಃ' ಎಂಬ ಪದವನ್ನು ಸೇರಿಸಿ ಪಠಿಸಿದರೆ 'ಧಂ ಧನ್ವಂತರಯೇ ನಮಃ' ಎಂದು ಮಂತ್ರಸ್ವರೂಪವೇರ್ಪಡುತ್ತದೆ. ಈ ಧನ್ವಂತರೀಮಂತ್ರವಾದರೋ ಮಹಾಮಂತ್ರವೆನಿಸಿದ್ದು ಸಂಸಾರದಲ್ಲಿರುವ ಶ್ರೀವಿಶ್ವಂಭರೋ ದೇವತಾ ತತ್ಪ್ರೀತ್ಯರ್ಥೇ ಜಪೇ ವಿನಿಯೋಗಃ ಓಂ ಕ್ಷಿಪ್ರ ಹೃದಯಾಯ ನಮಃ । ಓಂ ಪ್ರಸಾದಾಯ ಶಿರಸೇ ಸ್ವಾಹಾ । ಓಂ ನಮಃ ಶಿಖಾಯೈ ವೌಷಟ್ । ಓಂ ಕ್ಷಿಪ್ರ ಕವಚಾಯ ಹುಮ್ । ಓಂ ಪ್ರಸಾದಾಯ ನೇತ್ರಾಭ್ಯಾಂ ವಷಟ್ । ಓಂ ನಮಃ ಅಸ್ತ್ರಾಯ ಫಟ್ ॥ ಇತಿ ದಿಗ್ಬಂಧಃ । [^1]. ತತ್ರ ತತ್ರ ಸ್ಥಿತೋ ವಿಷ್ಣುಃ ತತ್ತಚ್ಛಕ್ತಿಪ್ರಬೋಧಕಃ । ದೂರತೋಽಪ್ಯತಿಶಕ್ತಶ್ಚ ಲೀಲಯಾ ಕೇವಲಂ ಪ್ರಭುಃ ॥ -ಅನುವ್ಯಾಖ್ಯಾನ 1/2/1 ತೇಷು ಸ್ಥಿತ್ವಾ ಸ್ವಯಂ ವಿಷ್ಣುಃ ತತ್ವಾಹ್ವೇಷು ಶರೀರಿಷು । ತತ್ವಾದ್ಯೈಃ ಕಾರಯತ್ಯದ್ಧಾ ಪೃಥಕ್ ಶಕ್ತಾ ನ ತೇ ಯತಃ ॥ -ವಾಯುಪುರಣ ಯೇಽಪ್ಯನ್ಯದೇವತಾ ಭಕ್ತಾಃ ಯಜಂತೇ ಶ್ರದ್ಧಯಾನ್ವಿತಾಃ । ತೇಽಪಿ ಮಾಮೇವ ಕೌಂತೇಯ ಯಜಂತ್ಯವಿಧಿಪೂರ್ವಕಮ್ II – ಭಗವದ್ಗೀತಾ ಜನರ ಸಮಸ್ತವ್ಯಾಧಿಗಳನ್ನು ಪರಿಹರಿಸಿ, ಕಡೆಗೆ ಸಂಸಾರವ್ಯಾಧಿ- ಯನ್ನು ಪರಿಹರಿಸುತ್ತದೆ. ವ.ಟೀ. - ಸ್ವಯಂ ಧನ್ವಂತರಿಃ । ಉದ್ದೇಶವಾನ್ = ಚತುರ್ಥ್ಯಂತಃ ವರ್ಣಃ । ಪೂರ್ವಬಿಂದ್ವಂತಃ । ಧಕಾರಪೂರ್ವೋ ಹೃದಯ- ಸಂಯುತಃ । ನಮಸ್ಕಾರಯುಗಿತಿ ಭಾವಃ । ಅಯಮಷ್ಟಾಕ್ಷರೋ ಮಂತ್ರಃ । ಸರ್ವವ್ಯಾಧಿವಿನಾಶನಃ । ಅಷ್ಟಮಂತ್ರಾಃ ಹಾರಾಣಾಂ ನಾಯಕೋಪಲಸನ್ನಿಭಃ । ಟೀಕಾರ್ಥ - ಶ್ಲೋಕದಲ್ಲಿರುವ 'ಸ್ವಯಂ'ಪದಕ್ಕೆ ಧನ್ವಂತರೀ ಎಂಬ ಪದವನ್ನು, ಉದ್ದೇಶವಾನ್ ಎಂದರೆ ಚತುರ್ಥ್ಯಂತವಾದ ಎಂದರ್ಥ. 'ಧನ್ವಂತರಯೇ' ಎಂದಾಗುತ್ತದೆ. ಧನ್ವಂತರೀ ಎಂಬ ಪದದ ಪೂರ್ವವರ್ಣವಾದ 'ಧ'ಎಂಬ ವರ್ಣವು, ಬಿಂದು ಸಹಿತವಾಗಿದ್ದು, ಹೃದಯಸಂಯುತಃ ನಮಃ ಎಂಬ ಪದದಿಂದ ಕೂಡಿದಾಗ 'ಓಂ ಧಂ ಧನ್ವಂತರಯೇ ನಮಃ' ಎಂದಾಗುತ್ತದೆ. ವಸುಧೇಂದ್ರರು 'ಪೂರ್ವಪೂರ್ವೋ ಹೃದಯಸಂಯುತಃ' ಎಂಬ ಪಾಠವನ್ನು ಸ್ವೀಕರಿಸಿದ್ದಾರೆ. ಅವರ ಪ್ರಕಾರ ಪೂರ್ವ ಎಂಬ ಪದಕ್ಕೆ 'ಧನ್ವಂತರಿ' ಎಂಬ ಪದದ ಪೂರ್ವದಲ್ಲಿರುವ ಬಿಂದು ಎಂದರ್ಥ. ಅದನ್ನು ಕಡೆಯಲ್ಲಿ ಹೊಂದಿರುವ ಪೂರ್ವವರ್ಣ- ವೆಂದರೆ ಧಕಾರವು. ಒಟ್ಟು ಧಂ ಎಂದಾಯಿತು. ಇದು ಅಷ್ಟಾಕ್ಷರಮಂತ್ರವಾಗಿದೆ. 'ಸರ್ವವ್ಯಾಧಿವಿನಾಶನಃ' ಎಂಬ ಪಾಠವನ್ನು ವಸುಧೇಂದ್ರರು ಸ್ವೀಕರಿಸಿದ್ದಾರೆ. ಅಷ್ಟಮಹಾಮಂತ್ರ ಗಳು ಹಾರದಂತಿದ್ದರೆ, ಧನ್ವಂತರೀ ಮಂತ್ರವು ಇವುಗಳಿಗೆಲ್ಲಾ ನಾಯಕಮಣಿಯಂತೆ ರಾರಾಜಿಸುತ್ತಿದೆ[^1]. ಧನ್ವಂತರೀಮಂತ್ರದ ಧ್ಯಾನಶ್ಲೋಕ ಚಂದ್ರೌಘಕಾಂತಿಮಮೃತಾತ್ಮಕರೈರ್ಜಗಂತಿ ಸಂಜೀವಯಂತಮಮಿತಾತ್ಮಸುಖಂ ಪರೇಶಮ್ । ಜ್ಞಾನಂ ಸುಧಾಕಲಶಮೇವ ಚ ಸಂದಧಾನಂ ಶೀತಾಂಶುಮಂಡಲಗತಂ ಸ್ಮರತಾತ್ಮಸಂಸ್ಥಮ್ ॥ ೯೪ ॥ ಅರ್ಥ ಅನೇಕ ಚಂದ್ರಕಾಂತಿಯನ್ನು ಹೊಂದಿರುವ, ತನ್ನ ಅಮೃತ ದಂತಿರುವ ಕಿರಣಗಳಿಂದ ಜಗಜ್ಜೀವನಪ್ರದನಾದ, ಒಂದು ಕೈಯಲ್ಲಿ ಜ್ಞಾನಮುದ್ರೆಯನ್ನು, [^1]. ವಿಶೇಷಾಂಶ ಗಣಪತ್ಯಾದಿ ಮಂತ್ರಗಳಿಂದ ಕೊನೆಮಾಡಲು ಇಚ್ಛಿಸದ ಆಚಾರ್ಯರು ಕಡೆಯಲ್ಲಿ ಧನ್ವಂತರೀಮಂತ್ರವನ್ನು ನಿರೂಪಿಸಿದ್ದಾರೆ. ಮತ್ತೊಂದರಲ್ಲಿ ಅಮೃತತುಂಬಿರುವ ಕಲಶವನ್ನು ಧರಿಸಿ- ಕೊಂಡು, ಚಂದ್ರಮಂಡಲದಲ್ಲಿ ಕುಳಿತಿರುವ, ಧನ್ವಂತರಿ ಮೂರ್ತಿಯು ತನ್ನಲ್ಲಿರುವನೆಂದು ಧ್ಯಾನಿಸಬೇಕು. ಮೂರ್ಧ್ನಿ ಸ್ಥಿತಾದಮುತ ಏವ ಸುಧಾಂ ಸ್ರವಂತೀಂ ಭ್ರೂಮಧ್ಯಗಾಚ್ಚ ತತ ಏವ ಚ ತಾಲುಸಂಸ್ಥಾತ್ । ಹಾರ್ದಾಚ್ಚ ನಾಭಿಸದನಾದಧರಸ್ಥಿತಾಚ್ಚ ಧ್ಯಾತ್ವಾऽಭಿಪೂರಿತತನುಃ ದುರಿತಾನಿ ಹನ್ಯಾತ್ ॥ ೯೫ ॥ ಅರ್ಥ - ಸಾಧಕನು ತನ್ನ ತಲೆ, ಹುಬ್ಬುಗಳ ಮಧ್ಯಭಾಗ, ತಾಲುಮೂಲ, ಹೃದಯ, ನಾಭಿ ಹಾಗೂ ನಾಭಿಯ ಅಧೋಭಾಗ- ಗಳಲ್ಲಿರುವ ಆರುಚಕ್ರಗಳಲ್ಲಿ ಸನ್ನಿಹಿತನಾದ ಧನ್ವಂತರಿಯು ಅಮೃತಧಾರೆಯನ್ನು ಸುರಿಸುತ್ತಿರುವನೆಂದು ಧ್ಯಾನಿಸಿ, ಆ ಅಮೃತದಿಂದ ತನ್ನ ಶರೀರವೆಲ್ಲ ನೆನೆದು ಒದ್ದೆಯಾಗುತ್ತಿದೆ ಎಂದು ಭಾವಿಸಿ ಮಂತ್ರ ಜಪಿಸುತ್ತಾ ಸಮಸ್ತರೋಗಮೂಲವಾದ ಪಾಪಗಳನ್ನು ಕಳೆದುಕೊಳ್ಳಬೇಕು. ಅಜ್ಞಾನದುಃಖಭಯರೋಗಮಹಾವಿಷಾಣಿ ಯೋಗೋSಯಮಾಶು ವಿನಿಹಂತಿ ಸುಖಂ ಚ ದದ್ಯಾತ್ । ಉನ್ಮಾದವಿಭ್ರಮಹರಃ ಪರತಶ್ಚ ಸಾಂದ್ರ- ಸ್ವಾನಂದಮೇವ ಪದಮಾಪಯತಿ ಸ್ಮ ನಿತ್ಯಮ್ ॥ ೯೬ ॥ ಅರ್ಥ- ಈ ಮಂತ್ರಜಪವು ಅಜ್ಞಾನ, ನಾನಾವಿಧದುಃಖ, ಶತ್ರು ಮೊದಲಾದ ಭಯ, ಅನೇಕವಿಧರೋಗಗಳು, ಭಯಂಕರವಿಷ ಇವುಗಳನ್ನು ಪರಿಹರಿಸುತ್ತದೆ. ಹಾಗೂ ಸುಖವನ್ನು ನೀಡುತ್ತದೆ. ಇದಲ್ಲದೆ ಹುಚ್ಚು, ಮಾನಸಿಕವಿಭ್ರಮೆಗಳನ್ನೂ ಪರಿಹರಿಸಿ ಉತ್ತರತ್ರ ಪರಮಪದಪ್ರಾಪ್ತಿಯನ್ನು ನೀಡುತ್ತದೆ. ಧ್ಯಾತ್ವೈವ ಹಸ್ತತಲಗಂ ಸ್ವಮೃತಂ ಸ್ರವಂತಂ ದೇವಂ ಸ ಯಸ್ಯ ಶಿರಸಿ ಸ್ವಕರಂ ನಿಧಾಯ । ಆವರ್ತಯೇತ್ ಮನುಮಿಮಂ ಸ ಚ ವೀತರೋಗಃ ಪಾಪಾದಪೈತಿ ಮನಸಾ ಯದಿ ಭಕ್ತಿನಮ್ರಃ ॥ ೯೭ ॥ ಅರ್ಥ - ಮಂತ್ರಜಪಿಸುವ ಸಾಧಕನು ತನ್ನ ಅಂಗೈಯಲ್ಲಿ ಸನ್ನಿಹಿತನಾಗಿ ಅಮೃತವನ್ನು ಸುರಿಸುತ್ತಿರುವ ಧನ್ವಂತರಿಯನ್ನು ಧ್ಯಾನಿಸಿ, ರೋಗಿಯ ತಲೆಯ ಮೇಲೆ ತನ್ನ ಕೈಯ್ಯನ್ನಿಟ್ಟು, ಈ ಧನ್ವಂತರಿ ಮಂತ್ರವನ್ನು ಜಪಿಸಿದ್ದೇ ಆದರೆ ಆ ರೋಗಿಯು ತನ್ನ ರೋಗವನ್ನು ಕಳೆದುಕೊಂಡು ನೀರೋಗಿ- ಯಾಗುವನು. ಆದರೆ ಭಗವದ್ಭಕ್ತರಿಗೆ ಮಾತ್ರ ಫಲ ಅಭಕ್ತರಿಗಲ್ಲ. ರೋಗಾದಿಗಳಲ್ಲಿ ಧನ್ವಂತರಿ ಜಪದ ಮಹಿಮೆ ಶತಂ ಸಹಸ್ರಮಯುತಂ ಲಕ್ಷಂ ವಾಽऽರೋಗಸಂಕ್ಷಯಾತ್ । ಇಮಮೇವ ಜಪೇನ್ಮಂತ್ರಂ ಸಾಧೂನಾಂ ದುಃಖಶಾಂತಯೇ ॥ ೯೮ ॥ ಅರ್ಥ - ಭಗವದ್ಭಕ್ತರ ರೋಗಾದಿದುಃಖನಿವೃತ್ತಿಗಾಗಿ ಇದೇ ಮಂತ್ರವನ್ನೇ ರೋಗದ ತೀವ್ರತೆಯನ್ನು ಲಕ್ಷಿಸಿ ಅದಕ್ಕೆ ತಕ್ಕಂತೆ ನೂರು, ಸಾವಿರ, ಹತ್ತು ಸಾವಿರ, ಲಕ್ಷಬಾರಿ ಜಪಿಸಬೇಕು. ಜ್ವರದಾಹಾದಿಶಾಂತ್ಯರ್ಥಂ ತರ್ಪಯೇನ್ ಮನುನಾಽಮುನಾ । ಧ್ಯಾತ್ವಾ ಹರಿಂ ಜಲೇ ಸಪ್ತರಾತ್ರಾತ್ ಜೂರ್ತಿರ್ವಿನಶ್ಯತಿ ॥ ೯೯ ॥ ಅರ್ಥ - ಜ್ವರಮೊದಲಾದ ತಾಪವನ್ನು ಪರಿಹರಿಸಿಕೊಳ್ಳುವವರು ಸಪ್ತದಿನ ಪರ್ಯಂತ ಜಲದಲ್ಲಿ ಧನ್ವಂತರಿಯನ್ನು ಧ್ಯಾನಿಸಿ, ಆ ನೀರಿನಿಂದಲೇ ಧನ್ವಂತರಿಯನ್ನುದ್ದೇಶಿಸಿ ತರ್ಪಣವನ್ನಿತ್ತರೆ ಜ್ವರತಾಪವು ಇಲ್ಲದಂತಾಗುವುದು. ಧನ್ವಂತರಿಮಂತ್ರಹೋಮದ ಮಹಿಮ ಅಯುತಾಮೃತಸಮಿದ್ಧೋಮಾದ್ಗೋಘೃತಕ್ಷೀರಸಂಯುತಾತ್ । ಸರ್ವರೋಗಾ ವಿನಶ್ಯಂತಿ ವಿಮುಖೋ ನ ಹರೇರ್ಯದಿ ॥ ೧೦೦ ॥ ಅರ್ಥ ಹಸುವಿನ ಘೃತ, ಗೋಕ್ಷೀರಗಳಿಂದ ಮಿಶ್ರವಾದ ಅಮೃತ- ಬಳ್ಳಿ ಸಮಿತ್ತುಗಳಿಂದ ಹತ್ತು ಸಾವಿರ ಬಾರಿ ಧನ್ವಂತರಿ ಮಂತ್ರ- ದಿಂದ ಹೋಮಿಸಿದರೆ ರೋಗಿಯು ಭಗವದ್ಭಕ್ತನಾಗಿದ್ದ ಪಕ್ಷದಲ್ಲಿ ರೋಗಿಯ ಸಮಸ್ತರೋಗಗಳೂ ಹೇಳ ಹೆಸರಿಲ್ಲದಂತಾಗುತ್ತವೆ. ಭೂತಾಭಿಚಾರಶಾಂತ್ಯರ್ಥಮಪಾಮಾರ್ಗಾಹುತಿಕ್ರಿಯಾ । ದ್ವಿಗುಣಾಽಮೃತಯಾ ಪಶ್ಚಾತ್ ಕೇವಲೇನ ಘೃತೇನ ವಾ ॥ ೧೦೧॥ ಅರ್ಥ - ಭೂತಪೀಡೆ, ಮಾಟ ಮೊದಲಾದ ಭಯಂಕರ ಉಪದ್ರವಗಳ ಶಾಂತಿಗಾಗಿ ಉತ್ತರಾಣಿ ಸಮಿತ್ತಿನಿಂದ ಹೋಮಿಸ- ಬೇಕು. ನಂತರ ಅಮೃತಬಳ್ಳಿಯ ಸಮಿತ್ತಿನಿಂದಾಗಲೀ, ಕೇವಲ ತುಪ್ಪದಿಂದಾಗಲೀ ಅಪಾಮಾರ್ಗಾಹುತಿಯ ಎರಡರಷ್ಟು ಸಂಖ್ಯೆಯಲ್ಲಿ ಹೋಮಿಸಬೇಕು. ಆಯುರ್ವಿವೃದ್ಧಯೇ ನಿತ್ಯಂ ಜನ್ಮನಕ್ಷತ್ರ ಏವ ವಾ । ಚತುಶ್ಚತುರ್ಭಿಃ ದೂರ್ವಾಭಿಃ ಕ್ಷೀರಾಜ್ಯಾಕ್ತಾಭಿರಿಷ್ಯತೇ ॥ ೧೦೨ ॥ ಅರ್ಥ - ನಿತ್ಯವೂ, ಅಥವಾ ತನ್ನ ಜನ್ಮನಕ್ಷತ್ರವಿರುವ ದಿನದಲ್ಲಾ- ಗಲೀ ಗೋಘೃತ, ಕ್ಷೀರಗಳಿಂದ ನೆನೆಸಿದ ನಾಲ್ಕು ನಾಲ್ಕು ದೂರ್ವ- ಗಳನ್ನು ಈ ಮಂತ್ರದಿಂದ ಯಥಾಶಕ್ತಿ ಹೋಮಿಸಬೇಕು. ಇದರಿಂದ ಆಯುರಾರೋಗ್ಯ ವೃದ್ಧಿಸುವುದು. ಹರಿಗುರುಭಕ್ತರಲ್ಲದವರಿಗಿಲ್ಲ ಈ ಮಂತ್ರಗಳ ಫಲ; ಜಪದ ಅಧಿಕಾರಿಲಕ್ಷಣ ಸರ್ವಕ್ರಿಯಾ ಹ ಭಕ್ತೇ ಹರಿಭಕ್ತೈಃ ಸ್ವನುಷ್ಠಿತಾಃ । ಗುರುಭಕ್ತೈಃ ಸದಾಚಾರೈಃ ಫಲಂತ್ಯದ್ಧಾನ ಚಾನ್ಯಥಾ II ೧೦೩ ॥ ಅರ್ಥ - ಈ ಗ್ರಂಥದಲ್ಲಿ ಹೇಳಿರುವ ಜಪವಾಗಲೀ, ಹೋಮ- ವಾಗಲೀ, ದೇವಪೂಜಾದಿ ಯಾವುದೇ ಕಾರ್ಯವಾಗಲೀ ಹರಿಯಲ್ಲಿ ಹಾಗೂ ಗುರುಗಳಲ್ಲಿ ಭಕ್ತಿಯುಳ್ಳವರಿಗೆ ಮಾತ್ರ ಫಲ ನೀಡುತ್ತದೆ. ಹರಿ-ಗುರುಭಕ್ತನಲ್ಲದ ವ್ಯಕ್ತಿಗೆ ಯಥೋಕ್ತ ಫಲ ನೀಡುವುದಿಲ್ಲ. ಬ್ರಹ್ಮಾದಿಗಳ ಗುರುತ್ವವಿಚಾರ ಬ್ರಹ್ಮಾಂತಾ ಗುರವಶ್ಚೈವ ಸಂಪ್ರದಾಯಪ್ರವರ್ತಕಾಃ । ತತ್ತದ್ ಗುಣಾನುಸಾರೇಣ ಪೂಜ್ಯಾ ಮಾನ್ಯಾಶ್ಚ ಸರ್ವಶಃ ॥ ೧೦೪ ॥ ಅರ್ಥ- ನಮಗೆ ಈಗ ತತ್ವೋಪದೇಶಮಾಡುತ್ತಿರುವ ಗುರುಗಳಿಂದ ಆರಂಭಿಸಿ ಬ್ರಹ್ಮದೇವರವರೆಗೂ ಎಲ್ಲರೂ ಗುರುಗಳೆನಿಸಿದ್ದಾರೆ. ಬ್ರಹ್ಮಾದಿದೇವತೆಗಳು ನಮಗೆ ನೇರವಾಗಿ ತತ್ವೋಪದೇಶ- ಮಾಡಿಲ್ಲವಾದರೂ ಅನಾದಿಕಾಲದಿಂದ ನಡೆದು ಬರುತ್ತಿರುವ ವೈದಿಕಸಂಪ್ರದಾಯಪ್ರವರ್ತಕರಾದ್ದರಿಂದ ಪರಂಪರಯಾ ಅವರೆಲ್ಲರೂ ಗುರುಗಳೇ ಆಗಿರುವರು. ಆದ್ದರಿಂದ ಅವರವರಲ್ಲಿರುವ ಭಗವದ್ಭಕ್ತಿ ಮೊದಲಾದ ಗುಣಗಳಿಗೆ ತಕ್ಕಂತೆ ತಾರತಮ್ಯಾನುಸಾರವಾಗಿ ಗೌರವಸಂದಾಯವಾಗಬೇಕು. ಅವರಲ್ಲಿ ಮಾಡುವ ತಿರಸ್ಕಾರ ಭಗವಂತನಿಗೆ ಸೇರುತ್ತದೆ[^1] ಜಪಸಿದ್ಧಿಯ ಉಪಾಯಗಳು ಸರ್ವೇಭ್ಯೋऽಭ್ಯಧಿಕಾ ಭಕ್ತಿರ್ವಿಷ್ಣೌ ಸ್ಯಾದತಿನಿಶ್ಚಲಾ । ಲಕ್ಷ್ಮೀಬ್ರಹ್ಮಾದಿಷು ತತಃ ಕ್ರಮೇಣ ಸ್ಯಾತ್ಸುಭಾವಿತಾ। ಏವಂ ವಿದ್ಯಾಃ ಫಲಿಷ್ಯಂತಿ ನಾನ್ಯಥಾ ತು ಕಥಂಚನ ॥ ೧೦೫ ॥ ಅರ್ಥ - ಯಾವುದೇ ಜಪಾದಿಗಳು ಸಿದ್ಧಿಸಬೇಕಾದರೆ ಜಾಪಕನು ಭಗವಂತನಲ್ಲಿ ಸರ್ವೋತ್ತಮಭಕ್ತಿಯನ್ನು ಮಾಡಬೇಕು. ಈ ಭಕ್ತಿ ಯಾದರೋ ಲಕ್ಷ್ಮ್ಯಾದಿ ಭಗವದಧೀನರಲ್ಲಿ ಮಾಡುವ ಭಕ್ತಿ- ಗಿಂತಲೂ ಅಧಿಕ ಹಾಗೂ ನಿಶ್ಚಲವಾಗಿರಬೇಕು. ಭಗವದಧೀನ- ರಾದ ಲಕ್ಷ್ಮ್ಯಾದಿಗಳಲ್ಲಿಯೂ ತಾರತಮ್ಯಾನುಸಾರವಾಗಿ ಭಕ್ತಿ- ಯನ್ನು ಮಾಡಬೇಕು. ಹೀಗಿದ್ದರೆ ಮಾತ್ರ ವಿದ್ಯೆಗಳು ಸಿದ್ಧಿಸುತ್ತವೆ.[^2]. ಇಲ್ಲವಾದರೆ ಜಪಾದಿಗಳು ವ್ಯರ್ಥವಾಗುತ್ತವೆ. ಶುಭಾಶುಭಫಲವಾದಾಗ ಇರಬೇಕಾದ ಅನುಸಂಧಾನ ಶುಭಾನ್ ಧ್ಯಾಯಂತಿ ಯೇ ಕಾಮಾನ್ ಗುರುದೇವಪ್ರಸಾದಜಾನ್ । ಇತರಾನಾತ್ಮಪಾಪೋತ್ಥಾಂಸ್ತೇಷಾಂ ವಿದ್ಯಾ ಫಲಿಷ್ಯತಿ ॥ ೧೦೬ ॥ ಅರ್ಥ - ಯಾರು ತಮಗೆ ಒಳ್ಳೆಯದಾದರೆ ಗುರುಗಳು ಹಾಗೂ ದೇವತೆಗಳ ಅನುಗ್ರಹವೆಂದು ಬಗೆಯುವರೋ, ತಮಗೆ ಕೆಟ್ಟದ್ದಾ- ದರೆ ಅದು ತಮ್ಮ ಪ್ರಾಚೀನಕರ್ಮದ ದುಷ್ಪಲವೆಂದು ತಿಳಿಯು- ವರೋ ಅವರಿಗೆ ವಿದ್ಯೆಯು ಫಲ ನೀಡಲು ಸಮರ್ಥವಾಗುತ್ತದೆ. [^3]. [^1]. ಉಪೇಕ್ಷಕೇಷು ದೇವಾನಾಂ ಭಕ್ತಿನಾಶಂ ಸ್ವಯಂ ಹರಿಃ । ಕರೋತಿ ತೇನ ವಿಭ್ರಷ್ಟಾಃ ಸಂಸರಂತಿ ಪುನಃ ಪುನಃ ॥ -ಭಾಗ.ತಾತ್ಪರ್ಯ 11/3/34 [^2]. ವಿಷ್ಣೋರತ್ಯುತ್ತಮತ್ವಾದಖಿಲಗುಣಗಣೈಃ ತತ್ರ ಭಕ್ತಿಂ ಗರಿಷ್ಠಾಂ ಸಂಶ್ಲಿಷ್ಟೇ ಶ್ರೀಧರಾಭ್ಯಾಂ ಅಮುಮಥಪರಿವಾರಾತ್ಮನಾ ಸೇವಕೇಷು ॥ - ವಾಯುಸ್ತುತಿ [^3]. ಗುರುಶಿಷ್ಯಯೋಃ ಅಯೋಗ್ಯತ್ವಾತ್ ಗುರುವೃತ್ತೇರಪೂರ್ತಿತಃ । ಅಪ್ರಸಾದಾದ್ ಗುರೋಃ ವಿದ್ಯಾ ನ ತಥೋಕ್ತಫಲಪ್ರದಾ ॥ ಭಗವತ್ಸಾಮ್ಯಾದಿಚಿಂತನೆಯ ನಿಷೇಧ ಮುಕ್ತಾವಪಿ ಚ ಸಂಸಾರೇ ನಾತ್ಮನೋ ವಿಷ್ಣುತಾಂ ಕ್ವಚಿತ್ । ಬ್ರಹ್ಮರುದ್ರಾದಿಭಾವಂ ವಾ ಸಾಮ್ಯಂ ವಾऽऽಧಿಕ್ಯಮೇವ ವಾ ॥ ೧೦೭ ॥ ಅತದ್ವಶತ್ವಮಥವಾ ಯಃ ಸ್ಮರೇತ್ ಸ ತು ಸಿದ್ಧಿಭಾಕ್ । ನಾನ್ಯಥಾ ಸಿದ್ಧಿಮಾಪ್ನೋತಿ ಕಲ್ಪಕೋಟಿಶತೈರಪಿ ॥ ೧೦೮ ॥ ಅರ್ಥ - ಯಾವ ಸಾಧಕನು ತನ್ನನ್ನು, ಮುಕ್ತಿಯಲ್ಲಾಗಲೀ, ಸಂಸಾರದಲ್ಲಾಗಲೀ ತಾನು ಭಗವಂತ ಹಾಗೂ ಬ್ರಹ್ಮಾದಿದೇವತೆ ಗಳಿಗೆ ಅಭಿನ್ನನೆಂದು, ಅವರಿಗಿಂತ ಅಧಿಕನೆಂದಾಗಲೀ, ಅವರಿಗೆ ಸಮಾನನೆಂದಾಗಲೀ, ತಾನು ಯಾರ ವಶದಲ್ಲಿಯೂ ಇರದೇ ಸ್ವತಂತ್ರನೆಂದು ಬಗೆಯುವನೋ ಅವನು ಕೋಟಿಕಲ್ಪಜನ್ಮವೆತ್ತಿ ಸಾಧನೆ ಮಾಡುತ್ತಿದ್ದರೂ ಸಿದ್ಧನಾಗಲಾರನು. ಬದಲಾಗಿ ಈ ರೀತಿ ಭಾವನೆಯನ್ನು ಹೊಂದದೆ ತಾನು ಭಗವಂತ ಹಾಗೂ ಭಗವದ್ಭಕ್ತರ ಅಧೀನನಾಗಿದ್ದೇನೆ ಎಂದು ತಿಳಿದ ಸಾಧಕನು ಮಾತ್ರ ಶೀಘ್ರದಲ್ಲಿ ಸಿದ್ಧನಾಗುತ್ತಾನೆ. ದ್ವಾದಶಗುರುಗಳ ಸ್ಮರಣೆಯ ಮಹಿಮೆ ಸ್ಮೃತ್ವಾ ಗುರುಂ ಪೂರ್ವಗುರುಮಾದಿಮೂಲಗುರೂ ತಥಾ । ದೇವತಾಂ ವಾಸುದೇವಂ ಚ ವಿದ್ಯಾಭ್ಯಾಸೀ ತು ಸಿದ್ಧಿಭಾಕ್ ॥ ೧೦೯ ॥ ಅರ್ಥ - ವಿದ್ಯಾಭ್ಯಾಸದ ಆರಂಭಕಾಲದಲ್ಲಿ ತನಗೆ ನೇರವಾಗಿ ವಿದ್ಯೆಯನ್ನು ನೀಡುತ್ತಿರುವ ಗುರುಗಳನ್ನು (ಗುರುಂ) ತನ್ನ ಗುರುಗಳ ಗುರುಗಳಾದ ಪರಮಗುರುವನ್ನು (ಪೂರ್ವಗುರುಂ) ಆದಿಗುರುಗಳಾದ ಶ್ರೀಮನ್ಮಧ್ವಾಚಾರ್ಯರನ್ನೂ, ಮೂಲಗುರು- ಗಳಾದ ಶ್ರೀವೇದವ್ಯಾಸದೇವರನ್ನೂ (ಮೂಲಗುರುಂ) ಮಂತ್ರಪ್ರತಿಪಾದ್ಯದೇವತೆಯಾದ ವಾಸುದೇವನನ್ನೂ ಸ್ಮರಿಸಿ ಶಾಸ್ತ್ರಾಭ್ಯಾಸ ಪ್ರಾರಂಭಮಾಡಿದರೆ ಆ ವಿದ್ಯಾಃ ಕರ್ಮಣಿ ಚ ಸದಾ ಗುರೋಃ ಪ್ರಾಪ್ತಾ ಫಲಪ್ರದಾ । ಅನ್ಯಥಾ ನೈವ ಫಲದಾಃ ಪ್ರಸನ್ನೋಕ್ತಾಃ ಫಲಪ್ರದಾಃ ॥ - ಭಾಗ.ತಾ. 6/8/43 ದಂಡೋSಪಿ ಭಗವಚ್ಚೀರ್ಣೋ ಮಮೈಷೋಽನುಗ್ರಹಃ ಕೃತಃ । ಇತಿ ಭಕ್ತ್ಯಾ ಚಿಂತಯತಾಂ ಶುಭಕಾರೀ ಭವತ್ಯಲಮ್ ॥ - ಭಾಗ.ತಾ. 10/14/30 ವಿದ್ಯೆ ಅವನಿಗೆ ಸಿದ್ಧಿಸುತ್ತದೆ[^1] ವ.ಟೀ. - ಪೂರ್ವಗುರುಃ = ಪರಮಗುರುಃ, ಆದಿಗುರುಃ= ಪೂರ್ಣಪ್ರಜ್ಞಃ , ಮೂಲಗುರುಃ= ವೇದವ್ಯಾಸಃ, ವಾಸುದೇವಾಖ್ಯಾಂ ದೇವತಾಂ ಚ ಸ್ಮೃತ್ವಾ ವಿದ್ಯಾಮಾರಭೇತ್ ಇತಿ ಭಾವಃ । ಟೀಕಾರ್ಥ- ಪೂರ್ವಗುರುವೆಂದರೆ ಗುರುಗಳ ಗುರುಗಳೆಂದರ್ಥ; ಆದಿಗುರುವೆಂದರೆ ಶ್ರೀಮದಾಚಾರ್ಯರು. ಮೂಲಗುರುವೆಂದರೆ ವೇದವ್ಯಾಸದೇವರು. ವಾಸುದೇವನೆಂಬ ಮಂತ್ರಪ್ರತಿಪಾದ್ಯದೇವತೆ ಯನ್ನೂ ಸ್ಮರಿಸಿ ವಿದ್ಯಾಭ್ಯಾಸಿಯು ವಿದ್ಯೆಯನ್ನಾರಂಭಿಸಬೇಕು ಎಂದರ್ಥ. ಗುರು, ದೈವದ್ರೋಹದಿಂದಾಗುವ ಅನರ್ಥಗಳು ಅವಜ್ಞಾತಾ ಗುರುಣಾಂ ಚ ದೇವತಾನಾಂ ನ ಸಿದ್ಧ್ಯತಿ । ಪ್ರಯಾತಿ ಚ ತಮೋ ಘೋರಂ ಮಂತ್ರಾವಜ್ಞಾಕೃದೇವ ಚ ॥ ೧೧೦ ॥ ಯಸ್ತಾರತಮ್ಯವೇತ್ತಾ ಸ್ಯಾದ್ ಗುರೂಣಾಂ ದೇವತಾಸ್ವಪಿ । ಭಕ್ತಿಮಾನ್ ಗುರುದೇವೇಷು ತದ್ಭಕ್ತೇಷು ಚ ಸಿದ್ಧ್ಯತಿ ॥ ೧೧೧ ॥ ಗುರುದೇವಪ್ರತೀಪಾನಾಂ ವಿಮುಖಸ್ತತ್ಪ್ರಿಯೇ ರತಃ । ಅಕಾಮಕ್ರೋಧಲೋಭಶ್ಚ ನ ಚಿರಾತ್ ಸಿದ್ಧಿಮಾಪ್ನುಯಾತ್ ॥ ೧೧೨ ॥ ಸಕಾಮೇಭ್ಯಃ ಅಮಿತಗುಣಾ ಯಾऽಕಾಮೈಸ್ತು ಕೃತಾ ಕ್ರಿಯಾ । ತಸ್ಮಾದಕಾಮ ಏವಾಲಂ ಭಜೇದ್ ವಿಷ್ಣುಂ ಸನಾತನಮ್ ॥ ೧೧೩ ॥ ಅರ್ಥ ಯಾವ ವಿದ್ಯಾಭ್ಯಾಸಕನು ಗುರು, ಪೂರ್ವಗುರು, ಆದಿಗುರು, ಮೂಲಗುರುಗಳನ್ನು, ಮಂತ್ರಪ್ರತಿಪಾದ್ಯದೇವತೆಯನ್ನೂ ತಿರಸ್ಕರಿಸುವನೋ ಹಾಗೂ ಮಂತ್ರವನ್ನೂ ತಿರಸ್ಕರಿಸುವನೋ ಅವನಿಗೆ ಯಾವುದೇ ಮಂತ್ರಸಿದ್ಧಿಯಾಗುವುದಿಲ್ಲ. [^1]. ಏಳು ಜನ ಮೂಲಗುರುಗಳಿರುವರೆಂದು ಪಂಚರಾತ್ರ ಹೇಳಿದೆ. ಆದ್ದರಿಂದ ಮೂಲಗುರುಗಳನ್ನು ಹೇಳುವಾಗ ಈ ಏಳು ದೇವತೆಗಳನ್ನು ಹೇಳುವ ಸಂಪ್ರದಾಯವಿದೆ : ವ್ಯಾಸಂ ಚ ಭಾರತೀಂ ವಾಣೀಂ ವಿಧಿಂ ವಾಯುಂ ರಮಾಂ ತಥಾ। ತಥಾ ನಾರಾಯಣಂ ಮೂಲಗುರೂನಾಹುಃ ವಿಪಶ್ಚಿತಃ ॥ ಅಷ್ಟೇ ಅಲ್ಲದೆ ಘೋರವಾದ ತಮಸ್ಸಿಗೆ ಬೀಳುವನು. ಆದ್ದರಿಂದ ಮಂತ್ರ, ಮಂತ್ರದೇವತೆ, ಗುರುಗಳಲ್ಲಿ ಅಚಲಭಕ್ತಿಶ್ರದ್ಧೆಯನ್ನು ಹೊಂದಿರಬೇಕು. ಭಕ್ತಿಯನ್ನು ಮಾಡಿದರೆ ಸಾಲದು. ಆ ಭಕ್ತಿ ಗುರುದೇವತೆಗಳಲ್ಲಿ ತಾರತಮ್ಯಜ್ಞಾನಪೂರ್ವಕವಾಗಿರಬೇಕು. ಹರಿಗುರುದೇವತೆಗಳಲ್ಲಿ ಯೋಗ್ಯತಾನುಸಾರ ಭಕ್ತಿಮಾಡುತ್ತಾ, ಅವರಲ್ಲಿ ಎಂದೂ ದ್ವೇಷಭಾವ ತಾಳದೆ ಕಾಮ-ಕ್ರೋಧಾದಿಗಳಿಗೆ ತುತ್ತಾಗದ ಸಾಧಕನಿಗೆ ಕೂಡಲೇ ಮಂತ್ರಸಿದ್ಧಿಸುತ್ತದೆ. ಫಲಕಾಮನೆಯಿಂದ ಮಾಡುವ ಮಂತ್ರಜಪಾದಿಕಾರ್ಯಗಳಿಗಿಂ- ತಲೂ ಭಗವಂತನ ಪ್ರೀತ್ಯುದ್ದೇಶಕವಾಗಿ ಮಾಡಿದರೆ ಅನಂತ ಪಟ್ಟು ಫಲಾಧಿಕ್ಯವಿರುತ್ತದೆ. ಆದ್ದರಿಂದ ನಿಷ್ಕಾಮನೆಯಿಂದ ವಿಷ್ಣುವನ್ನು ಯಜಿಸಬೇಕು. ವೇದೋಕ್ತಧನ್ವಂತರೀಮಂತ್ರ ಅಯಂ ಮೇ ಹಸ್ತ ಇತಿ ಚ ಮಂತ್ರಃ ಪೂರ್ವೋಕ್ತವತ್ ಸ್ಮೃತಃ । ಅತ್ರೋಕ್ತಾಸ್ತು ಕ್ರಿಯಾಃ ಸರ್ವಮಂತೇಷ್ವಪ್ಯುಪಲಕ್ಷಣಮ್ ॥ ೧೧೪ ॥ ಅರ್ಥ - ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ । ಅಯಂ ಮೇ ವಿಶ್ವಭೇಷಜೋಽಯಂ ಶಿವಾಭಿಮರ್ಶನಃ ॥ ಎಂಬ ಋಗ್ವೇದ(10/60/12)ದಲ್ಲಿ ಬರುವ ಮಂತ್ರವೂ ಸಹ ಹಿಂದೆ ಹೇಳಿದ ಧನ್ವಂತರೀಮಂತ್ರದ ವೈದಿಕಮಂತ್ರವಾಗಿದೆ. ಧನ್ವಂತರಿ ಮಂತ್ರದಲ್ಲಿ ಹೇಳಿದ ಹವನಹೋಮ ಸಮಿತ್ತು, ಜಪ-ತರ್ಪಣಾದಿ ಗಳನ್ನು ಇಲ್ಲಿ ಹೇಳಿದ ಮಂತ್ರಗಳಿಗೆಲ್ಲ ಅನ್ವಯವಾಗುತ್ತದೆ ಎಂದು ತಿಳಿಯಬೇಕು[^1]. [^1]. ಅಂಗನ್ಯಾಸಾದಿಗಳು ಅಸ್ಯ ಶ್ರೀ ಧನ್ವಂತರಿವೈದಿಕಮಂತ್ರಸ್ಯ ಬ್ರಹ್ಮಾ ಋಷಿಃ । ಅನುಷ್ಟುಪ್ ಛಂದಃ । ಓಂ ಅಯಂ ಮೇ ಹಸ್ತೋ ಭಗವಾನ್ - ಹೃದಯಾಯ ನಮಃ । ಓಂ ಅಯಂ ಮೇ ಭಗವತ್ತರಃ – ಶಿರಸೇ ಸ್ವಾಹಾ । ಓಂ ಅಯಂ ಮೇ ವಿಶ್ವಭೇಷಜಃ - ಶಿಖಾಯೈ ವಷಟ್ । ಓಂ ಅಯಂ ಶಿವಾಭಿಮರ್ಶನಃ - ಕವಚಾಯ ಹುಮ್। ಓಂ ಅಯಂ ಮೇ ಹಸ್ತೋ ಭಗವಾನಯಂ ಮೇ ಭಗವತ್ತರಃ । ಅಯಂ ಮೇ ವಿಶ್ವಭೇಷಮಂತ್ರಗಳಿಂದಾಗುವ ವಿಶೇಷಫಲಗಳು ವಿವಿಧಮಂತ್ರಗಳ ವಿನಿಯೋಗ ವಿಜಯಸ್ತಂಭನಾದೀನಿ ನಾರಸಿಂಹೈರ್ವಿಶೇಷತಃ । ಜಾಮದಗ್ನೈಶ್ಚ ಕಾರ್ಯಾಣಿ ರಾಘವೈರ್ಯಾದವೈರಪಿ । ವಾರಾಹೈಃ ಸ್ತಂಭನಂ ಕ್ಷಿಪ್ರಂ ಶ್ರೀಕರಾಃ ಕಥಿತಾಃ ಪುರಾ ॥ ೧೧೫ ॥ ಅರ್ಥ - ಶತ್ರುವಿಜಯ, ಅಗ್ನಿಸ್ತಂಭನ, ಜಲಸ್ತಂಭನ, ಪ್ರತಿವಾದಿ ವಾಕ್‌ಸ್ತಂಭನ, ವಿಷಸ್ತಂಭನ, ಶತ್ರುಸ್ತಂಭನ, ಶತ್ರುವಿನ ಉಚ್ಚಾಟನೆ ಮೊದಲಾದವುಗಳ ಸಿದ್ಧಿಯನ್ನು ನಾರಸಿಂಹಮಂತ್ರ, ಪರಶುರಾಮಮಂತ್ರ, ರಾಮಮಂತ್ರ, ಕೃಷ್ಣಮಂತ್ರಗಳ ಜಪಾದಿ- ಗಳಿಂದ ಪಡೆಯಬಹುದು. ಯಾವುದೇ ಸ್ತಂಭನದಲ್ಲಿ ವಾರಾಹ ಮಂತ್ರವು ಶೀಘ್ರಫಲಪ್ರದವಾಗಿದೆ. ಇದೇ ರೀತಿ ಶ್ರೀಕರಮಂತ್ರ (ಉತ್ತಿಷ್ಠಶ್ರೀಕರಸ್ವಾಹಾ') ಹಾಗೂ ಹಂಸಮಂತ್ರ( 'ಹಂಸಃ ಸೋಽಹಂ ಸ್ವಾಹಾ') ಎಂಬ ಹಿಂದೆ ಹೇಳಿದ ಎಲ್ಲಾ ಮಂತ್ರಗಳೂ ಶೀಘ್ರವಾಗಿ ಸಂಪತ್ತನ್ನು ನೀಡುವ ಸಾಮರ್ಥ್ಯಹೊಂದಿವೆ. ಧ್ಯಾನವಿಶೇಷದಿಂದ ಫಲವಿಶೇಷ ಬಹುಬಾಹುಂ ಮಹಾಕಾಯಮುದ್ಯುಕ್ತಂ ಚೋದ್ಯತಾಯುಧಮ್ । ಸ್ಮರನ್ ವಿಜಯಮಾಪ್ನೋತಿ ಸ್ತಂಭನಾದೀಂಶ್ಚ ಕಾರಯೇತ್ ॥ ೧೧೬ ॥ ಅರ್ಥ - ಅನೇಕಬಾಹುಗಳುಳ್ಳ, ಬೃಹದಾಕಾರಶರೀರವುಳ್ಳ, ಶತ್ರು- ಹನನಾದಿಗಳಲ್ಲಿ ಉದ್ಯುಕ್ತನಾದ, ಆಯುಧಗಳನ್ನು ಕೈಯ್ಯಲ್ಲಿ ಎತ್ತಿಹಿಡಿದ ಇತ್ಯಾದಿಯಾಗಿರುವ ನಾರಸಿಂಹಾದಿ ರೂಪಗಳನ್ನು ಚಿಂತಿಸಿದರೆ ಶತ್ರುವಿಜಯಾದಿಗಳನ್ನು ಹೊಂದುವನಲ್ಲದೆ ಅಗ್ನ್ಯಾದಿಸ್ತಂಭನ, ಶತ್ರುಮಾರಣ, ಉಚ್ಚಾಟನಾದಿ ಪ್ರಯೋಜನ ಗಳನ್ನು ಹೊಂದಬಹುದು. ವಸುಪೂರ್ಣಕರಂ ರತ್ನಪರ್ವತಸ್ಥಂ ವಿಭಾವಯನ್ । ವಸುಸಿದ್ಧಿಮವಾಪ್ನೋತಿ ಸೇವ್ಯಮಾನಮಜಾದಿಭಿಃ । ಶ್ರಿಯಾ ವಿಭೂತಿಭಿರ್ಯುಕ್ತಂ ಭಾವಯನ್ ಭೂತಿಮಾಪ್ನುಯಾತ್ ॥ ೧೧೭ ॥ ಜೋSಯಂ ಶಿವಾಭಿಮರ್ಶನಃ ಅಸ್ತ್ರಾಯಫಟ್ ಇತಿ ದಿಗ್ಬಂಧಃ ॥ ಅರ್ಥ- ಧನಧಾನ್ಯಾದಿಸಂಪತ್ತುಗಳಿಂದ ತುಂಬಿರುವ ಹಸ್ತಗಳುಳ್ಳವನೂ ರತ್ನಪರ್ವತದಲ್ಲಿ ಕುಳಿತು ಬ್ರಹ್ಮರುದ್ರಾದಿಗಳಿಂದ ಸೇವಿತನಾಗಿರುವವನೂ ಆಗಿರುವನೆಂದು ಶ್ರೀಹರಿಯನ್ನು ಧ್ಯಾನಿಸಿದರೆ ಧನಧಾನ್ಯಾದಿಸಂಪತ್ತುಗಳನ್ನು ಪಡೆಯಬಹುದಾಗಿದೆ. ಯಾವ ರೀತಿಯ ಕಾಮನೆಯೋ ಆ ರೀತಿಯ ಭಗವದ್ರೂಪಚಿಂತನೆಯು ಅವಶ್ಯವಾಗಿರುತ್ತದೆ. ಸಂಪತ್ತಿಗೆ ಅಭಿಮಾನಿನಿಯಾದ ಶ್ರೀಲಕ್ಷ್ಮೀ ದೇವಿಯರಿಂದಲೂ, ನಾನಾವಿಧಸಂಪತ್ತುಗಳಿಂದಲೂ ಯುಕ್ತ- ನಾಗಿರುವ ಭಗವಂತನನ್ನು ಚಿಂತಿಸಿದರೆ ಧನಾದಿಸಕಲೈಶ್ವರ್ಯ- ವನ್ನೂ ಪಡೆಯುವನು. ಯದ್ಯನ್ಮನೋಗತಂ ತಸ್ಯ ತತ್ತದಾಪ್ನೋತ್ಯಸಂಶಯಮ್ । ತಥಾ ತಥಾ ಹರಿಂ ಧ್ಯಾಯನ್ ಕ್ರಿಯಾಃ ತಾಸ್ತಾಶ್ಚ ಸಾಧಯನ್ ॥ ೧೧೮ ॥ ಅರ್ಥ- ಫಲಕಾಮಿಗೆ ದ್ರವ್ಯಧನಧಾನ್ಯಾದಿಗಳು, ಶತ್ರುಜಯ ಮೊದಲಾದ ಯಾವ ಯಾವ ಕಾಮನೆಗಳು ಅಭಿಲಷಿತವಾಗಿ- ವೆಯೋ, ಅಂತಹ ಫಲವನ್ನು ನೀಡುವ ಭಗವದ್ರೂಪಗಳನ್ನೇ ಚಿಂತಿಸಬೇಕು. ಇದನ್ನು ಸಾಧಿಸುವ ಹೋಮ, ಹವನಾದಿಗಳನ್ನೇ ಮಾಡುತ್ತಿರಬೇಕು. ಇದರಿಂದಾಗಿ ಅಂತಹ ಅಭಿಲಷಿತಫಲಗಳೇ ದೊರೆಯುತ್ತವೆ. ಇದು ನಿಶ್ಚಯವು. ಶ್ರಿಯೇ ಪದ್ಮಾನಿ ಜುಹುಯಾತ್ ಸಂಪ್ರೀತ್ಯಾ ಉತ್ಪಲಾನಿ ಚ । ಶರಾನ್ ಜಯಾಯ ಜುಹುಯಾದಭಿಮಂತ್ರ್ಯ ಪ್ರಯೋಜಯೇತ್ ॥ ೧೧೯ ॥ ಅರ್ಥ ಸಂಪತ್ತು ಹೊಂದುವ ಬಯಕೆಯಿದ್ದರೆ ಘೃತಸಹಿತವಾಗಿ ತಾವರೆ ಹೂವುಗಳನ್ನು ಹೋಮಿಸಬೇಕು. ಇದರಿಂದ ಸಂಪತ್ತಿನ ಪ್ರಾಪ್ತಿಯಾಗುತ್ತದೆ. ಭಗವತ್ಪ್ರೀತಿ ಸಂಪಾದನೆಗಾಗಿ ನೈದಿಲೆ (ನೀಲಿಕಮಲ) ಹೂವುಗಳಿಂದ ಹೋಮಿಸಬೇಕು. ವಿಜಯವನ್ನು ಅಪೇಕ್ಷಿಸುವುದಾದರೆ ಮೊದಲು ನರಸಿಂಹಾದಿ ಮಂತ್ರಗಳಿಂದ ಹೋಮಿಸಿ, ನಂತರ ನೃಸಿಂಹಾದಿಮಂತ್ರಗಳಿಂದ ಅಭಿಮಂತ್ರಿತಬಾಣವನ್ನಾಗಲೀ, ಅಭಿಮಂತ್ರಿತ ನೀರನ್ನಾಗಲೀ ಶತ್ರುವಿನ ಮೇಲೆ ಎಸೆಯಬೇಕು. ವಿದ್ಯಾಯೈ ಮಂತ್ರಿತಂ ವಾರಿ ವಚಾಂ ವಾ ತುಲಸೀಮಪಿ । ಬ್ರಾಹ್ಮೀಂ ಘೃತಂ ಸುವರ್ಣಂ ವಾ ಶತಾವೃತ್ತ್ಯಾ ತು ನಿತ್ಯಶಃ ॥ ೧೨೦ ॥ ಅರ್ಥ- ವೇದವ್ಯಾಸಾದಿಮಂತ್ರಗಳಿಂದ ಪ್ರತಿದಿನವೂ ನೂರೆಂಟು ಬಾರಿ ಅಭಿಮಂತ್ರಿಸಿದ ನೀರನ್ನು ಕುಡಿಯುವಿಕೆಯಿಂದ ವಿದ್ಯೆಯನ್ನು ಹೊಂದಬಹುದಾಗಿದೆ. ಇದೇ ರೀತಿ ಅಭಿಮಂತ್ರಿತ ಬಜೆಯನ್ನೋ, ತುಲಸಿಯನ್ನೋ, ಒಂದೆಲಗವನ್ನೂ ಸಾಣೆಕಲ್ಲಿನಲ್ಲಿ ಸುವರ್ಣವನ್ನು ಉಜ್ಜಿ ತೇದು ಬಂದರಸವನ್ನೋ ಕುಡಿಯಬೇಕು. ಅಕುರ್ವಂಶ್ಚ ಕ್ರಿಯಾ ಭಕ್ತ್ಯಾ ನಿರಪೇಕ್ಷೋ ಭಜನ್ ಹರಿಮ್ । ಸರ್ವಮೇತದವಾಪ್ನೋತಿ ವಿಶೇಷೇಣ ನ ಸಂಶಯಃ ॥ ೧೨೧ ॥ ಅರ್ಥ - ಯಾವ ಭಕ್ತನು ಕೇವಲ ಐಶ್ವರ್ಯಾದಿವಿಷಯಕ ಕಾಮನೆ ಇಲ್ಲದೆ,ಯಾವುದೇ ಈ ಹಿಂದೆ ಹೇಳಿದ ಹವನಾದಿಗಳನ್ನು ಮಾಡದಿದ್ದರೂ ಭಕ್ತಿಯಿಂದ ನಿಷ್ಕಾಮನೆಯಿಂದ ಭಗವಂತನನ್ನು ಭಜಿಸಿದರೆ ಇಲ್ಲಿ ಹೇಳಿದ ಐಶ್ವರ್ಯ, ಶತ್ರುವಿಜಯಾದಿ ಸಕಲಾ- ಭೀಷ್ಟಗಳನ್ನೂ ಹೊಂದಬಲ್ಲನು. ಇದರಲ್ಲಿ ಸಂಶಯ ಬೇಡ. ನ್ಯಾಸಪ್ರಭೇದಗಳು ಸೃಷ್ಟಿಸ್ಥಿತಿಲಯನ್ಯಾಸಾಃ ಪ್ರಾತಿಲೋಮ್ಯಾನುಲೋಮತಃ । ಸ್ಥಿತ್ಯಂತಾ ಏವ ವರ್ಣಾನಾಂ ಶ್ರೇಷ್ಠಾ ಏವ ಚತುರ್ದಶ । ಸಂಹೃತ್ಯಂತಾ ಮೋಕ್ಷಿಣಾಂ ತೇ ಏಕವಿಂಶತಿರೇವ ವಾ ॥ ೧೨೨ ॥ ಅರ್ಥ - ಮೂಲಮಂತ್ರವೇ ಮೊದಲಾದ ಮಂತ್ರಜಾಪಕನು ಮಂತ್ರಗಳಲ್ಲಿರುವ ವರ್ಣಗಳಿಗೆ ಪ್ರಾತಿಲೋಮ್ಯ, ಅನುಲೋಮ್ಯ ಪ್ರತಿಲೋಮ್ಯಾನುಲೋಮ್ಯಕ್ರಮದಿಂದ ಜಪವನ್ನು ಮಾಡುವ- ವರೆಲ್ಲರೂ ಸೃಷ್ಟಿನ್ಯಾಸ, ಸ್ಥಿತಿನ್ಯಾಸ, ಲಯನ್ಯಾಸಗಳನ್ನು ಮಾಡಿಕೊಳ್ಳಬೇಕು[^1] (ಸೃಷ್ಟಿನ್ಯಾಸ) ತಲೆಯಿಂದಾರಂಭಿಸಿ ಶಿರಸ್ಸು, ಕಣ್ಣು, ಮೂಗು, ಬಾಯಿ, ಹೃದಯ, ನಾಭಿ, ಜಾನು, ಪಾದಗಳಲ್ಲಿ ಮೇಲಿನಿಂದಾ- ರಂಭಿಸಿ ಕೆಳಗಿನವರೆಗೂ ವರ್ಣಗಳ ನ್ಯಾಸವು 'ಸೃಷ್ಟಿನ್ಯಾಸ'- ವೆನಿಸುತ್ತದೆ. [^1]. ವಿಶೇಷಾಂಶ ಗೃಹಸ್ಥರಿಗೆ ಸ್ಥಿತಿನ್ಯಾಸವು; ಬ್ರಹ್ಮಚಾರಿಗಳಿಗೆ ಸೃಷ್ಟಿನ್ಯಾಸವು, ಯತಿಗಳಿಗೆ ಲಯನ್ಯಾಸವು. ಗೃಹಸ್ಥರು ಹದಿನಾಲ್ಕು ಬಾರಿ ನಡೆಸಿದರೆ ಶ್ರೇಷ್ಠ, ಸ್ಥಿತಿ, ಲಯ, ಸೃಷ್ಟಿ ಮಾಡಿಕೊಂಡು ಪುನಃ ಸ್ಥಿತಿನ್ಯಾಸಮಾಡಿಕೊಂಡರೆ ಸ್ಥಿತ್ಯಂತವಾಗಿ ಮುಗಿಸಬಹುದು. ಇಷ್ಟಾದರೂ ಕಡೇ ಪಕ್ಷ ಮಾಡಲೇಬೇಕು. ಬ್ರಹ್ಮಚಾರಿಗಳಾದರೋ ಸೃಷ್ಟಿಯಿಂದಾರಂಭಿಸಿ ಸ್ಥಿತಿಲಯ ಮಾಡಿ ಪುನಃ ಸೃಷ್ಟಿನ್ಯಾಸ ಮಾಡಬೇಕು. ಯತಿಗಳಾದರೋ ಲಯವೇ ಕೊನೆಯಾಗುವಂತೆ ಮೂರುನ್ಯಾಸಗಳನ್ನು ಏಳು ಬಾರಿ ಮಾಡಿಕೊಳ್ಳಬೇಕು. (ಲಯನ್ಯಾಸ) ಈ ಕ್ರಮವನ್ನೇ ಪಾದ, ಜಾನು, ನಾಭಿ, ಹೃದಯ, ಬಾಯಿ, ಮೂಗು, ಕಣ್ಣು, ತಲೆಗಳಲ್ಲಿ ಕೆಳಗಿನಿಂದ ನ್ಯಾಸ ಮಾಡಿದರೆ 'ಲಯನ್ಯಾಸವು'. (ಸ್ಥಿತಿನ್ಯಾಸ) ಅರ್ಧಕ್ರಮವಾಗಿ ಸೃಷ್ಟಿನ್ಯಾಸದಿಂದಲೂ, ಉಳಿದರ್ಧ ವ್ಯುತ್ಕ್ರಮವಾಗಿ ಲಯನ್ಯಾಸದಿಂದಲೂ ಅಂದರೆ ತಲೆ, ಕಣ್ಣು, ಮೂಗು, ಬಾಯಿ ಈ ನಾಲ್ಕು ಸ್ಥಾನಗಳಲ್ಲಿ ಕ್ರಮವಾಗಿಯೂ; ಪಾದ, ಜಾನು, ನಾಭಿ, ಹೃದಯಗಳಲ್ಲಿ ವ್ಯುತ್ಕ್ರಮವಾಗಿಯೂ ನ್ಯಾಸಮಾಡುವುದು 'ಸ್ಥಿತಿನ್ಯಾಸವು' ಎಂದು ಕರೆಯಲ್ಪಡುತ್ತದೆ. ಗೃಹಸ್ಥರು ಸೃಷ್ಟಿಸ್ಥಿತಿಲಯನ್ಯಾಸಗಳನ್ನು ನಾಲ್ಕು ಬಾರಿ ಮಾಡಿ, ಪುನಃ ಸೃಷ್ಟಿನ್ಯಾಸ ಹಾಗೂ ಸ್ಥಿತಿನ್ಯಾಸ ಮಾಡಿದಾಗ ಸ್ಥಿತಿನ್ಯಾಸವು ಅಂತ್ಯದಲ್ಲಿರುವ ಹದಿನಾಲ್ಕು ಬಾರಿ ನ್ಯಾಸ ಮಾಡಿದಂತಾಗುತ್ತದೆ. [^1] [^1]. ವಿಶೇಷಾಂಶ ಮೂಲಮಂತ್ರದಲ್ಲಿ ವರ್ಣನ್ಯಾಸ ಸೃಷ್ಟಿಸ್ಥಿತಿಲಯನ್ಯಾಸಗಳ ಕ್ರಮ ಹೀಗಿದೆ. ಓಂ ನಮೋ ನಾರಾಯಣಾಯ ಎಂಬುದು ಮೂಲಮಂತ್ರವು. ಓಂ ಓಂ ವಿಶ್ವಾಯ ನಮಃ (ಶಿರಸ್ಸು) ಓಂ ನಂ ತೈಜಸಾಯ ನಮಃ (ನೇತ್ರ) ಓಂ ಮೋಂ ಪ್ರಾಜ್ಞಾಯ ನಮಃ (ಮೂಗು) ಓಂ ನಾಂ ತುರ್ಯಾಯ ನಮಃ (ಬಾಯಿ) ಓಂ ರಾಂ ಆತ್ಮನೇ ನಮಃ (ಹೃದಯ) ಓಂ ಯಂ ಅಂತರಾತ್ಮನೇ ನಮಃ (ನಾಭಿ) ಓಂ ಣಾಂ ಪರಮಾತ್ಮನೇ ನಮಃ (ಜಾನು) ಓಂ ಯಂ ಜ್ಞಾನಾತ್ಮನೇ ನಮಃ (ಪಾದಗಳು) - ಇದು ಸೃಷ್ಟಿಕ್ರಮ. ಓಂ ಓಂ ವಿಶ್ವಾಯ ನಮಃ (ಶಿರಸ್ಸು) ಓಂ ನಂ ತೈಜಸಾಯ ನಮಃ (ನೇತ್ರ) ಓಂ ಮೋಂ ಪ್ರಾಜ್ಞಾಯ ನಮಃ (ಮೂಗು) ಓಂ ನಾಂ ತುರೀಯಾಯ ನಮಃ (ಬಾಯಿ) ಓಂ ರಾಂ ಆತ್ಮನೇ ನಮಃ (ಪಾದಗಳು) ಓಂ ಯಂ ಅಂತರಾತ್ಮನೇ ನಮಃ (ಜಾನು) ಓಂ ಣಾಂ ಪರಮಾತ್ಮನೇ ನಮಃ (ನಾಭಿ) ಓಂ ಯಂ ಜ್ಞಾನಾತ್ಮನೇ ನಮಃ (ಹೃದಯಾಯ) - ಇದು ಸ್ಥಿತಿಕ್ರಮ ಓಂ ಓಂ ವಿಶ್ವಾಯ ನಮಃ (ಪಾದ) ಪಾದಹೃತ್ಕೇಷು ನಾಭ್ಯಾಸ್ಯಯುಕ್ತಂ ಚ ಸಲಲಾಟಕಮ್ । ಸನಾಸಿಕಾದೃಗ್ ಜಾನ್ವೋಶ್ಚ ಸಶ್ರೋತ್ರಂ ಸೋರುಕಂ ತಥಾ ॥ ೧೨೩ ॥ ಸೋರಸ್ಕಂಚ ಸಕಂಠಂ ಚ ಸಭುಜದ್ವಯಮೇವ ಚ । ಸಗಂಡಯುಗ್ಮಂ ಸಾಲೀಕಂ ಸತುಂಡಂ ಕ್ರೋಡಕಂ ತಥಾ ॥ ೧೨೪ ॥ ಸಮೂಲಂ ಚ ಸಗುಹ್ಯಂ ಚ ಸಪಾರ್ಶ್ವದ್ವಯಮೇವ ಚ । ಸದೋರ್ದ್ವಯಂ ವ್ಯಾಪಕಂ ಚ ಗಲಪಾರ್ಶ್ವದ್ವಯಂ ತಥಾ ॥ ೧೨೫ ॥ ಕಕುತ್ಸ್ತನದ್ವಯೇನಾಪಿ ಪೃಷ್ಠಭಾಗೇನ ಸರ್ವಶಃ। ನ್ಯಾಸೋ ಯಥಾಕ್ರಮಂ ಪ್ರೋಕ್ತೋ ಮಂತ್ರಷ್ಟೇತೇಷು ಕೃತ್ಸ್ನಶಃ ॥೧೨೬ ॥ ಪ್ರತಿಮಾಯಾಮಾತ್ಮನಿ ಚ ನ್ಯಾಸೋಽಯಂ ಸನ್ನಿಧಾನಕೃತ್ । ಅರ್ಥ - (1)ಪಾದ, (2)ಹೃದಯ, (3)ಶಿರಸ್ಸು, (4)ಹೊಕ್ಕಳು, (5)ಮುಖ,(6)ಲಲಾಟ, (7)ಮೂಗು, (8)ನೇತ್ರ, (9)ಮೊಣಕಾಲು, (10)ಕಿವಿ, (11) ಓಂ ನಂ ತೈಜಸಾಯ ನಮಃ (ಜಾನು) ಓಂ ಮೋಂ ಪ್ರಾಜ್ಞಾಯ ನಮಃ (ನಾಭಿ) ಓಂ ನಾಂ ತುರ್ಯಾಯ ನಮಃ (ಹೃದಯ) ಓಂ ರಾಂ ಆತ್ಮನೇ ನಮಃ (ಬಾಯಿ) ಓಂ ಯಂ ಅಂತರಾತ್ಮನೇ ನಮಃ (ಮೂಗು) ಓಂ ಣಾಂ ಪರಮಾತ್ಮನೇ ನಮಃ (ಕಣ್ಣುಗಳು) ಓಂ ಯಂ ಜ್ಞಾನಾತ್ಮನೇ ನಮಃ (ತಲೆ) - ಇದು ಲಯನ್ಯಾಸಕ್ರಮ ಈ ಲಯನ್ಯಾಸವು ಕಡೆಯಲ್ಲಿ ಬರುವಂತೆ ೨೧ಬಾರಿ ನ್ಯಾಸ ಮಾಡುವುದುತ್ತಮ. ಬ್ರಹ್ಮಚಾರಿಗಳಾದರೂ ಸೃಷ್ಟಿಕ್ರಮವು ಕಡೆಯಲ್ಲಿ ಬರುವಂತೆ ಸೃಷ್ಟ್ಯಾದಿನ್ಯಾಸವನ್ನು ಮೂರು ಬಾರಿ ಮಾಡಿ, ಪುನಃ ಸೃಷ್ಟಿನ್ಯಾಸಮಾಡಬೇಕು. ಸನ್ನ್ಯಾಸಿಗಳು ಸೃಷ್ಟ್ಯಾದಿತ್ರಯನ್ಯಾಸವನ್ನು ಏಳೇಳು ಬಾರಿ ಮಾಡಿದಾಗ ಇಪ್ಪತ್ತೊಂದು ಬಾರಿಯಾಗುವುದು ಹಾಗೂ ಲಯನ್ಯಾಸವು ಕಡೆಯಲ್ಲಿ ಬರುವುದು. ಆದ್ದರಿಂದ ಲಯಾಂತನ್ಯಾಸವು. ಹೀಗೆ ವರ್ಣನ್ಯಾಸವನ್ನು ಮಾಡಿಯೇ ಅಷ್ಟಮಹಾಮಂತ್ರಾದಿ ಜಪವನ್ನಾಚರಿಸಿದರೆ ವಿಶೇಷ ಫಲವುಂಟು. ಈ ಪ್ರತಿಮೆಯಲ್ಲಿ ಈ ರೀತಿ ವರ್ಣನ್ಯಾಸಮಾಡಿ ಪೂಜಿಸಿದರೆ ವಿಶೇಷಸಾನ್ನಿಧ್ಯವುಂಟಾಗುತ್ತದೆ. ತೊಡೆ, (12)ಎದೆ, (13)ಕುತ್ತಿಗೆ, (14)ಬಲಭುಜ, (15)ಎಡಭುಜ, (16) ಬಲಗೈ, (17)ಎಡಗೈ, (18)ಶರೀರ, (19)ಕುತ್ತಿಗೆ ಬಲಪಾರ್ಶ್ವ, (20) ಕುತ್ತಿಗೆಯ ಎಡಪಾರ್ಶ್ವ, (21)ಬಲಕೆನ್ನೆ, (22)ಎಡಕೆನ್ನೆ, (23)ಹಣೆ-ತಲೆಗಳ ಮಧ್ಯ, (24)ನಾಭಿಯ ಕೆಳಭಾಗ, (25)ಭುಜಗಳ ಮಧ್ಯ ಭಾಗ, (26)ವೃಷಣ, (27)ಗುಹ್ಯಾಂಗ, (28)ಉದರದ ಬಲಭಾಗ, (29)ಉದರದ ಎಡಭಾಗ, (30)ಕುತ್ತಿಗೆಯ ಹಿಂಭಾಗ, (31) ಬಲಸ್ತನ, (32) ಎಡಸ್ತನ, (33) ಬೆನ್ನಿನ ಮೂಲ. ಹೀಗೆ 33ಸ್ಥಾನಗಳು ನ್ಯಾಸಸ್ಥಾನಗಳಾಗಿವೆ. ಏಕಾಕ್ಷರದಿಂದ ಆರಂಭವಾಗಿ 33ಅಕ್ಷರಾಂತ ಇರುವ ಮಂತ್ರಗಳ ವರ್ಣಸಂಖ್ಯೆಯನ್ನನುಸರಿಸಿ ಈ ಸ್ಥಾನಗಳಲ್ಲಿ ನ್ಯಾಸ ಮಾಡಬೇಕು. ಇಲ್ಲಿ ಪಾದದಿಂದ ಆರಂಭಿಸಿ ಶಿರಃಪರ್ಯಂತ ಹೇಳಿರುವ ನ್ಯಾಸವು ಲಯನ್ಯಾಸ, ಈ ಹಿಂದೆ ಹೇಳಿದ ವರ್ಣ- ನ್ಯಾಸವು ದೇವರಪೂಜೆಯಲ್ಲಿ ತಾನು ಪೂಜಿಸುವ ರಾಮಕೃಷ್ಣಾದಿ ಪ್ರತಿಮೆಗಳಲ್ಲಿಯೂ, ಜಪಾದಿಗಳನ್ನು ಮಾಡುವವನ ದೇಹಾದಿ- ಗಳಲ್ಲಿಯೂ, ದೇಹಾಂತರ್ನಿಯಾಮಕನಾದ ಶ್ರೀಹರಿಯ ಮಂತ್ರವರ್ಣಪ್ರತಿಪಾದ್ಯರೂಪಗಳಿಗೂ ವಿಶೇಷಸನ್ನಿಧಾನ- ವುಂಟಾಗುತ್ತದೆ[^1] ಯಂತ್ರೋದ್ಧಾರವಿಧಿ ಬೀಜಾಂತಃ ಸಾಧ್ಯಮಧ್ಯಂ ಚ ವಿಭಕ್ತದಲಮಂತ್ರಯುಕ್ ॥ ೧೨೭ ॥ ವರ್ಣಾನುಪ್ರಾತಿಲೋಮ್ಯೇನ ವೃತ್ತಂ ಭೂಪುರಸಂಯುತಮ್ । ಬೀಜಸಂದೃಬ್ಧಕೋಣಂ ಚ ಯಂತ್ರಂ ರಕ್ಷಾದಿಸಾಧಕಮ್ ॥ ೧೨೮ ॥ ಅರ್ಥ - ಸುವರ್ಣರಜತತಾಮ್ರಾದಿಲೋಹಗಳಿಂದ ರಚಿತವಾದ ಚತುರಪ್ರಕಾರವಾದ ಯಂತ್ರವನ್ನು ತಯಾರಿಸಿ, ಅದರ ಮಧ್ಯದಲ್ಲಿ ತಾನು ಜಪಿಸುವ ಮಂತ್ರದ [^1]. ಮಂತ್ರವು ಒಂದಕ್ಷರದ್ದಾದರೆ ವ್ಯಂಜನ, ಸ್ವರ, ಅನುಸ್ವಾರ ಹೀಗೆ ಮೂರುವರ್ಣಗಳಿಂದ ಪಾದಾದಿಗಳಲ್ಲಿ ನ್ಯಾಸ ಮಾಡಬೇಕು. ಸೃಷ್ಟಿನ್ಯಾಸದಲ್ಲಿ ತಲೆ-ಹೃದಯ-ಪಾದಗಳು. ನ್ಯಾಸೇ ಏಕಾಕ್ಷರೇ ಮಂತ್ರ ವ್ಯಂಜನ-ಸ್ವರಬಿಂದುಭಿಃ ।. ಪಾದಹೃತ್‌ಕೇಷುವಿಲಯೇ ಹ್ಯುತ್ಪತ್ತೌ ವ್ಯುತ್ಕ್ರಮಾದ್ ಭವೇತ್ ॥ ಮೂರಕ್ಷರದ ಮಂತ್ರವಾದರೆ ಮಂತ್ರದ ವರ್ಣಗಳಿಂದಲೇ ನ್ಯಾಸ. ನಾಲ್ಕು ಅಕ್ಷರವಾದಾಗ ನಾಭಿಯನ್ನು ಸೇರಿಸಿಕೊಳ್ಳುವುದು. ಮೂವತ್ತಮೂರು ಅಕ್ಷರವಿರುವ ವರಾಹಮಂತ್ರವನ್ನು ಜಪಿಸುವಾಗ ಪಾದಾದಿಮೂವತ್ತಮೂರು ಸ್ಥಾನಗಳಲ್ಲಿಯೂ ನ್ಯಾಸವನ್ನು ಮಾಡಿಕೊಳ್ಳಬೇಕು. ಈ ರೀತಿ ಆಯಾಯ ಮಂತ್ರಗಳ ವರ್ಣನ್ಯಾಸಮಾಡಿ ಮಂತ್ರಜಪಿಸಿದರೆ ವಿಶೇಷಫಲವು. ಬೀಜಾಕ್ಷರವನ್ನು ಬರೆದು, ಅದರ ಸುತ್ತಲೂ 'ಮಮ ಗೃಹಾದಿಸಿದ್ಧಿಃ ಸ್ಯಾತ್' ಇತ್ಯಾದಿ ಅಪೇಕ್ಷಿತಪ್ರಯೋಜನವನ್ನು ತಿಳಿಸುವ ವಾಕ್ಯವನ್ನು ಬರೆಯಬೇಕು. ನಂತರ ಜಪಮಂತ್ರಗಳಲ್ಲಿರುವ ಅಕ್ಷರಸಂಖ್ಯೆಗೆ ಅನುಗುಣವಾಗಿ ಪದ್ಮದಳಗಳಂತಿರುವ ಮನೆಯ ರೂಪದ ದಳಗಳನ್ನು ಬರೆದು, ಆ ದಳಗಳಲ್ಲಿ ಮಂತ್ರಗಳ ವರ್ಣಗಳನ್ನು ಕ್ರಮವಾಗಿ ಬರೆಯಬೇಕು. ದಳಗಳ ಮಧ್ಯಭಾಗ- ಗಳಲ್ಲಿ ಅಕಾರದಿಂದಾರಂಭಿಸಿ ಕ್ಷಕಾರಪರ್ಯಂತ ಐವತ್ತು ಅಕ್ಷರಗಳನ್ನು ಕ್ರಮವಾಗಿ ಹಾಗೂ ವ್ಯುತ್ಕ್ರಮವಾಗಿ ಬರೆಯಬೇಕು. ಅದರಿಂದ ಹೊರಗೆ ವೃತ್ತಾಕಾರದ ದ್ವಾರರೇಖೆಯನ್ನೂ, ವೃತ್ತದ ಹೊರಗೆ ಎರಡು ಗೆರೆಗಳ ಚತುರಸ್ರಮಂಡಲ ಬರೆಯಬೇಕು. ಇದು ದ್ವಾರಗಳಿಂದ ಕೂಡಿದ ಭೂಪುರಗಳಿಂದ ಕೂಡಿರಬೇಕು. ಈ ಮಂಡಲದ ಮೂಲೆಗಳಲ್ಲಿ ಮಂತ್ರದ ಬೀಜಾಕ್ಷರಗಳು, ಹಾಗೂ ದಿಕ್ಪಾಲಕರ ಬೀಜಾಕ್ಷರವನ್ನು ಬರೆಯಬೇಕು. ಈ ಯಂತ್ರವು ಸರ್ವತಃರಕ್ಷೆಯನ್ನೂ, ಜ್ಞಾನಾದಿ ಅನೇಕಫಲ- ಗಳನ್ನೂ ನೀಡುವುದು. ಸಮಂ ತತ್ ಸರ್ವಮಂತ್ರೇಷು ಜಪ್ತಂ ಧಾರ್ಯಂ ತು ವಾ ಭುವಿ। ವಿಲಿಖ್ಯ ಮಂಡಲೇ ವಾ ತತ್ ಪೂಜಯೇದ್‌ಹರಿಮಂಜಸಾ ॥ ೧೨೯ ॥ ಅರ್ಥ- ಯಂತ್ರವನ್ನು ಬರೆಯುವ ವಿಧಾನವು ವಾರಾಹಾದಿ ಮಂತ್ರಗಳಲ್ಲಿಯೂ ಸಮಾನವೇ ಆಗಿರುತ್ತದೆ. ಇಂತಹ ಯಂತ್ರ- ವನ್ನು 'ಯಂತ್ರ- ಗಾಯತ್ರೀ'[^1] ಮಂತ್ರದಿಂದ ಅಭಿಮಂತ್ರಿಸಿ ಧರಿಸಬಹುದು. ಅಥವಾ ಭೂಮಿಯಲ್ಲಾಗಲೀ, ಮಂಡಲದಲ್ಲಿ- ಯಾಗಲೀ ಬರೆದು ಆ ಯಂತ್ರದಲ್ಲಿ ಆಯಾಯ ಮಂತ್ರಪ್ರತಿಪಾದ್ಯ ನಾದ ಶ್ರೀಹರಿಯನ್ನು ವಿಧಿವತ್ತಾಗಿ ಪೂಜಿಸಬೇಕು. ಆಚಾರ್ಯಲಕ್ಷಣ [^1]. ಯಂತ್ರಗಾಯತ್ರೀ - 'ಯಂತ್ರರಾಜಾಯ ವಿದ್ಮಹೇ ದೇವಗ್ರಹಾಯ ಧೀಮಹಿ । ತನ್ನೋ ಯಂತ್ರಃ ಪ್ರಚೋದಯಾತ್ ॥' ವಿಶೇಷಾಂಶ - ಯಂತ್ರವೆಂದರೆ ನಿಯಂತ್ರಿಸುವುದು ಎಂದರ್ಥ. ಕಾಮಕ್ರೋಧಾದಿ ದೋಷಗಳಿಂದುಂಟಾಗುವ ದುಃಖಗಳನ್ನು ನಿಯಂತ್ರಿಸುವುದರಿಂದ ಯಂತ್ರವೆಂದು ಹೆಸರು. ಈ ಯಂತ್ರದಲ್ಲಿ ಮಂತ್ರಪ್ರತಿಪಾದ್ಯ ಭಗವಂತನು ಪೂಜಿತನಾದರೆ ಪ್ರೀತನಾಗುವನು. ಕಾಮಕ್ರೋಧಾದಿದೋಷೋತ್ಥಸರ್ವದುಃಖನಿಯಂತ್ರಣಾತ್ । ಯಂತ್ರಮಿತ್ಯಾಹುರೇತಸ್ಮಿನ್ ದೇವಃ ಪ್ರೀಣಾತಿ ಪೂಜಿತಃ ॥ - ಗೌತಮೀ ತಂತ್ರ . ಪ್ರತಿಮಾಲಕ್ಷಣೈರ್ಯಾವದ್ ಯುಕ್ತ ಆಚಾರ್ಯ ಉತ್ತಮಃ । ಸರ್ವವಿತ್ತಪಸಾ ಯುಕ್ತ ಆಜ್ಞಾಶಕ್ತಿಯುತೋ ಹರೇ ॥ ೧೩೦ ॥ ಅರ್ಥ - ಪ್ರತಿಮಾನಿರ್ಮಾಣದಲ್ಲಿ ಹೇಳಿದ ಲಕ್ಷಣಗಳಿಂದ ಯುಕ್ತನಾದವನೂ, ಸರ್ವವನ್ನೂ ಬಲ್ಲವನೂ, ತಪಸ್ವಿಯಾದ- ವನೂ, ಭಗವಂತನ ಆಜ್ಞೆಯಂತಿರುವ ಶ್ರುತಿಸ್ಮೃತಿಗಳಲ್ಲಿ ಹೇಳಿದ 'ಸಕಲಕರ್ಮಗಳನ್ನು ಮಾಡಲು ಶಕ್ತಿಯಿರುವ ಗುರುವೇ ಉತ್ತಮ ಗುರುವು'.[^1] ಗುರುಗಳ ವಿಚಾರ ಯಾವದ್ಭಕ್ತೋ ಯಥಾ ಲಬ್ಧೈಃ ಗುಣಯುಕ್ತೋ ಹಿ ವೈಷ್ಣವಃ । ಗುರುಃ ಸತ್ಸಂಪ್ರದಾಯಜ್ಞಃ ತಾರತಮ್ಯೇನ ಸಿದ್ಧಿದಃ ॥ ೧೩೧ ॥ ಅರ್ಥ - ತನ್ನ ಯೋಗ್ಯತಾನುಸಾರ ಭಗವಂತನಲ್ಲಿ ಭಕ್ತಿಮಾಡು- ವವನು, ಯಥಾಶಕ್ತಿ ಶಾಸ್ತ್ರಾದಿಪಾಂಡಿತ್ಯವುಳ್ಳವನೂ, ವೈಷ್ಣವ ದೀಕ್ಷೆಯನ್ನು ಪಡೆದವನೂ, ಸತ್ಸಂಪ್ರದಾಯವನ್ನು ತಿಳಿದ ಎಲ್ಲ ಸ್ವೋತ್ತಮರೂ ತಾರತಮ್ಯದಿಂದ ಗುರುಗಳೇ ಆಗಿರುವರು. ಇವರು ತಾರತಮ್ಯಾನುಸಾರವಾಗಿಯೇ ಫಲವನ್ನು ನೀಡುವರು. ಉತ್ತಮಾದುತ್ತಮಾ ಸಿದ್ಧಿಃ ಧರ್ಮಮೋಕ್ಷಾದಿಷು ಸ್ಫುಟಮ್ । ತಸ್ಮಾದುತ್ತಮ ಆಚಾರ್ಯೇ ಲಬ್ಧೇ ನಾತೋಽವರಂ ವ್ರಜೇತ್ ॥ ೧೩೨ ॥ ಅರ್ಥ - ಉತ್ತಮರಾದ ಗುರುವಿನಿಂದ ಬರುವ ಸಿದ್ಧಿಯೂ ಸಹ ಉತ್ತಮವೇ ಆಗಿರುತ್ತದೆ. ಉತ್ತಮಗುರುಗಳಿಂದಲೇ ಧರ್ಮ, ಜ್ಞಾನ, ವೈರಾಗ್ಯ, ಮೋಕ್ಷಾದಿಗಳಲ್ಲಿ ಹೆಚ್ಚಿನ ಸಿದ್ಧಿಯನ್ನು ಪಡೆಯಬಹು- ದಾಗಿದೆ. ಆದ್ದರಿಂದ ಉತ್ತಮಗುರುಗಳು ಸಿಕ್ಕಿದಾಗ ಅವರನ್ನು ಹೊಂದದೆ ಅಧಮಗುರುಗಳನ್ನು ಅರಸಬಾರದು. ಇದರಿಂದ ಸಿದ್ಧಿಯಾಗಲಾರದು. [^1]. ದ್ವಾತ್ರಿಂಶಲ್ಲಕ್ಷಣೈರ್ಯುಕ್ತೋ ಗುರುರುತ್ತಮ ಉಚ್ಯತೇ । ಬ್ರಹ್ಮೈವ ತಾದೃಶಸ್ತಸ್ಯ ಸಮೋ ನಾನ್ಯೋSಸ್ತಿ ಕಶ್ಚನ ॥ -ಸನ್ನ್ಯಾಸಪದ್ಧತಿ ಈ ಲಕ್ಷಣವಾದರೋ ಶ್ರೀಮನ್ಮಧ್ವಾಚಾರ್ಯರಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಶ್ರೀತ್ರಿವಿಕ್ರಮಪಂಡಿತಾಚಾರ್ಯರು ತಿಳಿಸಿದ್ದಾರೆ - "ಪ್ರತ್ಯಕ್ಷಮೇವ ಚೈತಲ್ಲಕ್ಷಣಂ ದೃಶ್ಯತೇ ಭಗವತಿ ಭಾಷ್ಯಕಾರೇ'' – ತತ್ವಪ್ರದೀಪ. ಏಕಸ್ಯ ಶಿಷ್ಯತಾಂ ಪ್ರಾಪ್ಯ ತದಾಜ್ಞಾಂ ನ ವಿನಾ ಸಮಮ್ । ಅವರಂ ವಾ ವ್ರಜೇದುಚ್ಚಗುಣಶ್ಚೇನ್ ನೈವ ದುಷ್ಯತಿ ॥ ೧೩೩ ॥ ಅರ್ಥ - ಒಬ್ಬ ಗುರುವಿನ ಶಿಷ್ಯತನವನ್ನು ಹೊಂದಿ, ಅವರ ಅನುಮತಿಯಿಲ್ಲದೆ ಅವರ ಸಮಾನನನ್ನಾಗಲೀ, ಅವರಿಗಿಂತ ಅಧಮಗುರುಗಳನ್ನಾಗಲೀ ಹೊಂದಬಾರದು. ಹಿಂದಿನ ಗುರುಗಳು ಅನುಮತಿ ನೀಡಿದಲ್ಲಿ ಹೊಂದಬಹುದು. ಆದರೆ ಮೊದಲಿನ ಗುರುಗಳಿಗಿಂತ ಜ್ಞಾನಭಕ್ತ್ಯಾದಿಗಳಲ್ಲಿ ಅಧಿಕರಾದ ಗುರುಗಳು ದೊರೆತರೆ ಹಿಂದಿನ ಗುರುಗಳ ಅನುಮತಿಯಿಲ್ಲದೇನೇ ಉತ್ತಮ ಗುರುವನ್ನು ಹೊಂದಿದರೂ ದೋಷವಿಲ್ಲ. ವಿಶೇಷತೋ ಗುಣಶ್ಚ ಸ್ಯಾದ್ ದೇವೇಷ್ಟಪ್ಯೇವಮೇವ ಹಿ । ತಸ್ಮಾದುತ್ತಮಮಾಚಾರ್ಯಂ ದೇವೇಶಂ ಚಾಶ್ರಯೇದ್ ಹರಿಮ್ ॥ ೧೩೪ ॥ ಅರ್ಥ - ಉತ್ತಮಗುರುಗಳನ್ನು ಹೊಂದುವುದರಿಂದ ವಿಶೇಷವಾದ ಜ್ಞಾನಾದಿಗಳನ್ನು ಸಂಪಾದಿಸಬಹುದು. ಗುರುಗಳನ್ನು ಸ್ವೀಕರಿಸುವ ವಿಷಯದಲ್ಲಿ ಮಾನವರಲ್ಲಿ ಮಾತ್ರವಲ್ಲದೆ ದೇವತೆ- ಗಳಲ್ಲಿಯೂ ಇದೇ ನ್ಯಾಯವನ್ನು ಇಟ್ಟುಕೊಳ್ಳಬೇಕು. ಆದ್ದರಿಂದ ಸರ್ವರಿಗೂ ಉತ್ತಮರಾದ ಗುರುಗಳು ಬ್ರಹ್ಮ-ವಾಯುಗಳು, ನಂತರ ವಿದ್ಯಾಭಿಮಾನಿನಿಯರಾದ ಸರಸ್ವತೀ-ಭಾರತಿಯರು, ನಂತರ ಗರುಡಾದಿಗಳನ್ನು ಗುರುತೇನ ಸ್ವೀಕರಿಸಬೇಕು. ಹೀಗೆ ಉತ್ತಮರಾದ ಗುರುಗಳನ್ನೂ, ಸರ್ವೋತ್ತಮನಾದ ಶ್ರೀಹರಿಯನ್ನು ಆಶ್ರಯಿಸಿ ಕೃತಾರ್ಥರಾಗಬೇಕು[^1] [^1]. ವಿಶೇಷಾಂಶ - ಬ್ರಹ್ಮದೇವರೇ ಸರ್ವದಾ ಸರ್ವರಿಗೂ ಮುಖ್ಯ ಗುರುವೆನಿಸಿದ್ದಾರೆ. ಇತರ ದೇವತೆಗಳೂ ಸಹ ತಾರತಮ್ಯಾನುಸಾರ- ವಾಗಿ ಗುರುಗಳೇ ಆಗಿರುವರು. ತಸ್ಮಾದ್ ಬ್ರಹ್ಮಾ ಗುರುರ್ಮುಖ್ಯಃ ಸರ್ವಷಾಮೇವ ಸರ್ವದಾ । ಅನ್ವೇSಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ ಗುರವ ಈರಿತಾಃ ॥ ಮ.ಭಾ.ತಾ.ನಿ. ೧/೧೧೯ ಹಿಂದೆ ಹೊಂದಿದ್ದ ಗುರುವಿಗಿಂತ ಉತ್ತಮನು ದೊರೆತಾಗ ವಿಚಾರ ವಿಲ್ಲದೆ ಸ್ವೀಕರಿಸಬಹುದು. ಪೂರ್ವಗುರುವಿಗೆ ಸಮಾನನಾದರೆ ವಿಕಲ್ಪವು. ಅನುಜ್ಞೆ ಪಡೆಯಬೇಕಿಲ್ಲ. ಪೂರ್ವಗುರುವಿನ ಅನುಮತಿ ಇಲ್ಲದೆ ಇತರ ಅಧಮಗುರುವನ್ನು ಪಡೆಯುವುದಾದಲ್ಲಿ ಗುರುಲಂಘನದೋಷವು. ಇದರ ಪರಿಣಾಮ ರೌರವ ನರಕವು. "ಗುರುಮಂತ್ರಪರಿತ್ಯಾಗೀ ರೌರವಂ ನರಕಂ ವ್ರಜೇತ್'' ಉಪಾಸನಾವಿಧಿ; ಜ್ಞಾನೇನೈವ ಪರಂ ಪದಮ್ ಅಪರೋಕ್ಷದೃಶೇರೇವ ಯಸ್ಮಾನ್ಮೋಕ್ಷೋ ನ ಚಾನ್ಯಥಾ । ಅಪರೋಕ್ಷದೃಶಿಶ್ಚೈವ ಶ್ರವಣಾನ್‌ಮನನಾದನು । ಸಮ್ಯಙ್ನಿಶ್ಚಿತತತ್ತ್ವಸ್ಯ ನಿದಿಧ್ಯಾಸನಯಾ ಭವೇತ್ ॥ ೧೩೫ ॥ ಅರ್ಥ - ಭಗವಂತನ ಅಪರೋಕ್ಷವಾಗದೆ ಈ ಸಂಸಾರದಿಂದ ಮುಕ್ತಿಯಾಗುವುದಿಲ್ಲ. ಕಾಶ್ಯಾದಿಮರಣ(ಕಾಶಿಯಲ್ಲಾಗುವ ಮರಣವೇ) ಮೊದಲಾದ ಯಾವುದೇ ರೀತಿಯಿಂದಲೂ ಮೋಕ್ಷ- ವಾಗಲಾರದು. ಶ್ರವಣ-ಮನನಾದಿಗಳಿಂದ ಭಗವತ್ತತ್ವವನ್ನು ನಿಶ್ಚಯಿಸಿ- ಕೊಂಡಿದ್ದವರಿಗೇನೆ ಭಗವದುಪಾಸನೆಯಿಂದ ಅಪರೋಕ್ಷಜ್ಞಾನ- ವಾಗುವುದು. ಶ್ರವಣಾದಿಗಳಾದರೂ ಗುರುಗಳಿಂದಲೇ ಆಗಬೇಕಾಗಿ ರುವುದರಿಂದ ಶ್ರವಣಾದಿಗಳಿಗಾಗಿ ಉತ್ತಮಗುರುಗಳನ್ನು ಅರಸಬೇಕು. ಉಪಾಸನೆಯಲ್ಲಿ ವಿಧಗಳು ಅವುಗಳ ವಿವರ ದ್ವಿವಿಧಾ ಸಾ ಚ ಸಂಪ್ರೋಕ್ತಾ ವಿಷ್ಣುಶಾಸ್ತ್ರಾವಮರ್ಶನಮ್ । ಏಕಂ ಧ್ಯಾನಂ ಹರೇರನ್ಯತ್ ಚತ್ವಾರ್ಯಂಗಾನಿ ತಸ್ಯ ಚ । ಯಮಶ್ಚ ನಿಯಮಶ್ಚಾऽಸಾ ಪ್ರಾಣಾಯಾಮ ಇತೀರಿತಃ ॥ ೧೩೬ ॥ ಅರ್ಥ - ಅಪರೋಕ್ಷಸಾಧನೀಭೂತವಾದ ಉಪಾಸನೆಯು ಭಗವಚ್ಛಾಸ್ತ್ರಾವಲೋಕವೆಂದೂ, ಧ್ಯಾನರೂಪವೆಂದೂ ಎರಡು ವಿಧವಾಗಿದೆ[^ 1]. ಶಾಸ್ತ್ರಶ್ರವಣಮನನವಾದ ಮೇಲೆ ಅಪರೋಕ್ಷ ಜ್ಞಾನಕ್ಕಾಗಿಯೇ ಸರ್ವದಾ ವಿಷ್ಣುಸರ್ವೋತ್ತಮ ಪ್ರತಿಪಾದಕ ವೈಷ್ಣವಶಾಸ್ತ್ರಗಳನ್ನು ಪಾಠಪ್ರವಚನಾದಿಗಳನ್ನು ಮಾಡುತ್ತಿರು- ವುದೇ ಶಾಸ್ತ್ರಾವಮರ್ಶನರೂಪವಾದ ಉಪಾಸನೆಯು. ಧ್ಯಾನರೂಪವಾದ ಉಪಾಸನೆಯಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ಅಧಮಗುರುವನ್ನು ಬಿಟ್ಟು ಉತ್ತಮಗುರುವನ್ನು ಅರಸುವಾಗಲೂ ಪೂರ್ವಗುರುವಿನ ಅನುಮತಿ ಬೇಕಿಲ್ಲ. "ತಸ್ಮಾದುತ್ತಮಗುರುಪ್ರಾಪ್ತ್ಯೈ ಪೂರ್ವನುಜ್ಞಾ ನ ಮೃಗ್ಯತೇ". [^1]. ಸೋಪಾಸನಾ ಚ ದ್ವಿವಿಧಾ ಶಾಸ್ತ್ರಾಭ್ಯಾಸಸ್ವರೂಪಿಣೀ । ಧ್ಯಾನರೂಪಾ ಪರಾ ಚೈವ ತದಂಗಂ ಧಾರಣಾದಿಕಮ್ ॥ ಅನುವ್ಯಾಖ್ಯಾನ ಎಂದು ನಾಲ್ಕು ವಿಧವಾದ ಅಂಗಗಳಿವೆ. ಯಮ, ನಿಯಮ, ಆಸನಗಳು ಅಹಿಂಸಾ ಸತ್ಯಮಸ್ತೇಯಂ ಬ್ರಹ್ಮಚರ್ಯಾಪರಿಗ್ರಹೌ ಯಮಾಃ ಶೌಚಂ ತಪಸ್ತುಷ್ಟಿಃ ಸ್ವಾಧ್ಯಾಯೋ ಹರಿಪೂಜನಮ್ । ನಿಯಮಾ....................................... ಅರ್ಥ- ಕಾಯಾ, ವಾಚಾ, ಮನಸಾ ಸಮಸ್ತಪ್ರಾಣಿಗಳಿಗೂ ಹಿಂಸೆ ಮಾಡದಿರುವುದೇ ಅಹಿಂಸೆಯು, ಸಮಸ್ತಪ್ರಾಣಿಗಳಿಗೂ ಹಿತವನ್ನು ಬಯಸುವುದೇ ಸತ್ಯವು. ಪರರ ಸ್ವತ್ತುಗಳನ್ನು ಅಪಹರಿಸದಿರು- ವುದೇ ಆಸ್ತೇಯ, ಸರ್ವಾವಸ್ಥೆಗಳಲ್ಲಿಯೂ ಎಂಟುವಿಧವಾದ ಮೈಥುನತ್ಯಾಗವೇ ಬ್ರಹ್ಮಚರ್ಯವು. ವಿಷಯವೈರಾಗ್ಯವೇ ಅಪರಿಗ್ರಹವು. ಹೀಗೆ ಐದು ನಿಯಮಗಳು. ಬಾಹ್ಯ - ಅಭ್ಯಂತರ ಶುದ್ಧಿ, ಜಪ, ಹೋಮ, ಅತಿಥಿಸತ್ಕಾರಾದಿ ರೂಪವಾದ ತಪಸ್ಸು, ವಿಷಯಾಲಂಬುದ್ಧಿ, ವೇದಾಧ್ಯಯನ, ಗುರುಸೇವೆ, ಭಗವಂತನ ಪೂಜೆ ಇವುಗಳು ನಿಯಮಗಳು[^1] ಆಸನಗಳು ...........................ವೀರಪದ್ಮ ಚ ಸ್ವಸ್ತಿಕಾದ್ಯಾನಿ ಚಾಸನಮ್॥ ೧೩೭ ॥ 1. ಯಮನಿಯಮಗಳಲ್ಲಿ ಪ್ರಮಾಣಗಳು ಅಹಿಂಸಾ - ಭೂತಪೀಡಾ ಹ್ಯಹಿಂಸಾ ಸ್ಯಾದ್ ಅಹಿಂಸಾ ಧರ್ಮ ಉತ್ತಮಃ । ಸತ್ಯ - ಯದ್ಭೂತಹಿತಮತ್ಯಂತಂ ವಚಃ ಸತ್ಯಸ್ಯ ಲಕ್ಷಣಮ್ । ಬ್ರಹ್ಮಚರ್ಯ – ಮೈಥುನಸ್ಯ ಪರಿತ್ಯಾಗೋ ಬ್ರಹ್ಮಚರ್ಯಂ ತದಷ್ಟಧಾ । ಶೌಚ – ಶೌಚಂ ತು ದ್ವಿವಿಧಂ ಪ್ರೋಕ್ತಂ ಬಾಹ್ಯಮಾಭ್ಯಂತರಂ ತಥಾ । ಮೃಜ್ಜಲಾಭ್ಯಾಂ ಸ್ಮೃತಂ ಬಾಹ್ಯಂ ಭಾವಶುದ್ಧಿರಥಾಂತರಮ್ ॥ ತೃಪ್ತಿ- ಯಥಾ ಕಥಂಚಿತ್ ಪ್ರಾಪ್ತ್ಯಾಚ ಸಂತೋಷಃ ತುಷ್ಟಿರಿಷ್ಯತೇ। ತಪಸ್ಸು - ಮನಸಶ್ಚೇಂದ್ರಿಯಾಣಾಂ ಚ ಐಕಾಗ್ರ್ಯಂ ತಪ ಉಚ್ಯತೇ । ಹರಿಪೂಜೆ - ವೈದಿಕೋ ತಾಂತ್ರಿಕೋ ಮಿಶ್ರೋ ವಿಷ್ಣೋರ್ವೈ ತ್ರಿವಿಧೋ ಮಖಃ । ಅರ್ಥ - ವೀರಾಸನ, ಪದ್ಮಾಸನ, ಸ್ವಸ್ತಿಕಾಸನ ಮೊದಲಾದವು ಆಸನಗಳು[^1] ಪ್ರಾಣಾಯಾಮ ರೇಚಕಃ ಪೂರಕಶ್ಚೈವ ಕುಂಭಕಶ್ಚ ತ್ರಿಧಾ ಸ್ಮೃತಃ । ಪ್ರಾಣಾಯಾಮಃ ಸ್ಮೃತಿಂ ವಿಷ್ಣೋರ್ವಿನಾ ನಿಯಮ ಉಚ್ಯತೇ ॥ ೧೩೯॥ ಅಧೀತಿಸ್ಮೃತಿಯುಕ್ತೋ ಹಿ ನಿದಿಧ್ಯಾಸನಮೇವ ಹಿ। ಪ್ರಾಣಾಯಾಮೇಽಪಿ ವಿಷ್ಣೋರ್ಯತ್ ಸ್ಮರಣಂ ಧ್ಯಾನಮೇವ ಹಿ ॥ ೧೩೯ ॥ ಅರ್ಥ - ಪ್ರಾಣಾಯಾಮವು ರೇಚಕ, ಪೂರಕ, ಕುಂಭಕವೆಂದು ಮೂರುವಿಧ. ವಿಷ್ಣುವಿನ ಸ್ಮರಣಪೂರ್ವಕವಾದ ವೇದಾಧ್ಯಯ- ನಾದಿಗಳು, ಮಂತ್ರೋಚ್ಚಾರಣ, ದೇವತಾಸ್ಮರಣೆ ಇವುಗಳಿಂದ ಕೂಡಿರುವ ಪ್ರಾಣಾಯಾಮವು ನಿದಿಧ್ಯಾಸನದಲ್ಲಿ ಸೇರುತ್ತದೆ. ವಿಷ್ಣುಸ್ಮರಣೆ ಇಲ್ಲದೆ ಕೇವಲ ವೇದಾಧ್ಯಯನಾದಿರೂಪವಾದ ಪ್ರಾಣಾಯಾಮವು 'ನಿಯಮ'ದಲ್ಲಿ ಸೇರುತ್ತದೆ. ಪ್ರಾಣಾಯಾಮ- ದಲ್ಲಿಯೂ ವಿಷ್ಣುವಿನ ಸ್ಮರಣೆ ಮಾತ್ರವೇ ಇದ್ದರೆ ಪ್ರಾಣಾಯಾಮ [^2] ವು ಧ್ಯಾನವೆನಿಸುತ್ತದೆ. [^1]. ಆಸನಗಳು - 'ಆಸೀನಃ ಸಂಭವಾತ್' ಎಂಬ ಬ್ರಹ್ಮಸೂತ್ರವು ಆಸನದಲ್ಲಿ ಕುಳಿತೇ ಜಪಾದಿಗಳನ್ನು ವಿಧಿಸುತ್ತದೆ. ಆಸನಗಳು ಪದ್ಮ, ಭದ್ರ, ಸ್ವಸ್ತಿಕಾ, ವಜ್ರ, ವೀರಾಸನವೆಂಬ ಐದು ಬಗೆಯಲ್ಲಿವೆ ಎಂದು ಅನ್ಯತ್ರ ಹೇಳಿದೆ. ೧. ವೀರಾಸನ - ಒಂದು ಕಾಲನ್ನು ತೊಡೆಯಮೇಲೂ ಮತ್ತೊಂದು ಕಾಲನ್ನು ತೊಡೆಯಕೆಳಗೂ ಇರಿಸಿ ನೇರವಾಗಿ ಕುಳಿತರೆ 'ವೀರಾಸನ', ಶ್ರೀಮದಾಚಾರ್ಯರು, ಟೀಕಾರಾಯರು ಇದೇ ಆಸನದಲ್ಲಿ ಕುಳಿತಿರುತ್ತಾರೆ. ೨. ಪದ್ಮಾಸನ - ಬಲದ ತೊಡೆಯ ಮೇಲೆ ಎಡಗಾಲು, ಎಡ- ತೊಡೆಯ ಮೇಲೆ ಬಲಗಾಲನ್ನಿರಿಸಿದರೆ ಪದ್ಮಾಸನವು. ೩. ಸ್ವಸ್ತಿಕಾಸನ- ಜಾನು ಹಾಗೂ ತೊಡೆಗಳ ಮಧ್ಯದಲ್ಲಿ ಪಾದಗಳಿರುವಂತೆ ಕುಳಿತುಕೊಳ್ಳುವುದು. [^2]. ಪ್ರಾಣಾಯಾಮ- ಪ್ರಾಣವೆಂದರೆ ವಾಯುವು. ಅದನ್ನು ನಿರೋಧಿಸುವುದೇ ಪ್ರಾಣಾಯಾಮ. ದಕ್ಷಿಣದ ಹೊಳ್ಳೆಯಿಂದ ವಾಯುವನ್ನು ಹೊರಬಿಡುವುದು ರೇಚಕವು. ಎಡ ಹೊಳ್ಳೆಯಿಂದ ವಾಯುವನ್ನು ಸೆಳೆದುಕೊಳ್ಳುವುದು ಪೂರಣವು. ಸುಷುಮ್ನಾ- ನಾಡಿಯಲ್ಲಿ ವಾಯುವನ್ನು ನಿರೋಧ ಮಾಡುವುದೇ ಕುಂಭಕ ಎಂದು ಕರೆಯಲ್ಪಡುತ್ತದೆ. ಆಸನಾದಿಗಳಲ್ಲಿ ತಾರತಮ್ಯ ಆಸಾ ಶೌಚಂ ಪ್ರಾಣಯಮೋ ನಿಷ್ಪರಿಗ್ರಹಪೂರ್ವಕಾಃ । ತಪ ಆದ್ಯಾಃ ಕ್ರಮಾತ್ ಸರ್ವೇ ಉತ್ತರೋತ್ತರತೋSಧಿಕಾಃ । ಸರ್ವಸ್ಮಾತ್ ಶ್ರವಣಾದ್ಯಾಸ್ತು ಮುಖ್ಯಾ ಮುಕ್ತಿಪ್ರಸಾಧನೇ II ೧೪೦ ॥ ಅಜ್ಞಸ್ಯ ಶ್ರವಣಂ ಶ್ರೇಷ್ಠಮ್ ಅಯುಕ್ತೇಃ ಮನನಂ ತಥಾ । ಧ್ಯಾನಂ ನಿಶ್ಚಿತತತ್ತ್ವಸ್ಯ ತಸ್ಮಾತ್ ಶಾಸ್ತ್ರಾವಮರ್ಶನಮ್ ॥ ೧೪೧ ॥ ಅರ್ಥ - ಆಸನ, ಶೌಚ, ಪ್ರಾಣಾಯಾಮ, ವೈರಾಗ್ಯ, ಅಹಿಂಸೆ, ಸತ್ಯ, ಆಸ್ತೇಯ ಮೊದಲಾದವುಗಳು, ತಪಸ್ಸು, ತುಷ್ಟಿ ಇವುಗಳೆಲ್ಲವೂ ಕ್ರಮವಾಗಿ ಮೊದಲು ಮೊದಲು ಉಕ್ತವಾದವುಗಳಿಗಿಂತ ಮುಂದು ಮುಂದು ಹೇಳಿದವುಗಳು ಶ್ರೇಷ್ಠವಾಗಿರುತ್ತವೆ. ಹಿಂದೆ ಹೇಳಿದ ಎಲ್ಲಾ ಆಸನಾದಿಗಳಿಗಿಂತಲೂ ಶ್ರವಣ, ಮನನ, ಶಾಸ್ತ್ರಾರ್ಥವಿಮರ್ಶೆಯೆಂಬ ನಿದಿಧ್ಯಾಸನಗಳು ಮೋಕ್ಷಸಾಧನೆ ಯಲ್ಲಿ ಪ್ರಧಾನಸಾಧನಗಳು. ಶಾಸ್ತ್ರಜ್ಞಾನರಹಿತರಾದವರಿಗೆ ಗುರುಮುಖದಿಂದ ಶಾಸ್ತ್ರಾರ್ಥಶ್ರವಣವೇ ಮುಖ್ಯವಾಗಿರುತ್ತವೆ ಹೊರತು ಮನನಾದಿಗಳಲ್ಲ. ಶಾಸ್ತ್ರಶ್ರವಣಮಾಡಿದ್ದರೂ ಶಾಸ್ತ್ರಪ್ರಮೇಯದಲ್ಲಿ ಸಂಶಯವಿರುವವನಿಗೆ ದಾರ್ಢ್ಯಕ್ಕಾಗಿ ಮನನವು ಮುಖ್ಯವಾಗಿರುತ್ತದೆ. ಶ್ರವಣ-ಮನನಾದಿಗಳಿಂದ ಅಜ್ಞಾನ, ಸಂಶಯ, ವಿಪರ್ಯಯ- ಗಳನ್ನು ಕಳೆದುಕೊಂಡು ತತ್ವನಿಶ್ಚಯವುಳ್ಳವನಿಗೆ ಧ್ಯಾನವು ಹಾಗೂ ಶಾಸ್ತ್ರಾವಿಮರ್ಶವು ಮಾಡಬೇಕು. (???)) ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾ ಚ ವಾಮತಃ । ಕುಂಭಕಶ್ಚ ಸುಷುಮ್ನಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥ ಪ್ರಾಣಾಯಾಮ ಮಾಡುವಾಗ ಮಂತ್ರ, ಮಂತ್ರದೇವತೆ, ವಾಯು, ಭಗವಂತ ಇವರನ್ನು ಸ್ಮರಿಸುತ್ತಾ ಇದ್ದರೆ ಈ ಪ್ರಾಣಾಯಾಮ 'ನಿದಿಧ್ಯಾಸನ'ವೆನಿಸುತ್ತದೆ. ಕೇವಲ ವಿಷ್ಣುವಿನ ಸ್ಮರಣೆ ಮಾತ್ರವಿದ್ದರೆ ಇದು 'ಧ್ಯಾನ' ಎಂಬ ಪ್ರಕಾರದ ಪ್ರಾಣಾಯಾಮ. ಭಗವಂತನ ಸ್ಮರಣೆಯಿಲ್ಲದೆ ಕೇವಲ ಮಂತ್ರಸ್ಮರಣೆಯು 'ನಿಯಮ'ವೆನಿಸುತ್ತದೆ. ಪ್ರವಚನದ ಶ್ರೇಷ್ಠತೆ ವರಂ ದಶಗುಣಂ ತಸ್ಮಾದ್ ವ್ಯಾಖ್ಯೆಕಸ್ಯ ಶತೋತ್ತರಾ। ಅಪರೋಕ್ಷದೃಶಾऽಪ್ಯೇಷಾ ಕರ್ತವ್ಯಾ ವಿಷ್ಣುತುಷ್ಟಿದಾ ॥142 ॥ ಅರ್ಥ -ಧ್ಯಾನಕ್ಕಿಂತಲೂ ಶಾಸ್ತ್ರಾವಲೋಕನಾದಿನಿದಿಧ್ಯಾಸನವು ಶ್ರೇಷ್ಠವು. ಹೇಗೆಂದರೆ ವಿಷ್ಣುಶಾಸ್ತ್ರವಾದ ಭಾರತಭಾಗವತಾದಿ ಗ್ರಂಥಾವಲೋಕನ ಪಾಠ-ಪ್ರವಚನಾದಿಗಳಿಂದ ಭಗವಂತನು ಸರ್ವೋತ್ತಮನೆಂದು ಈ ಶಾಸ್ತ್ರಗಳೆಲ್ಲ ಶ್ರೀಹರಿಸರ್ವೋತ್ತಮ- ಪ್ರತಿಪಾದಕಗಳೆಂದು ನಿಶ್ಚಯವಾಗುವುದರಿಂದ ಧ್ಯಾನಕ್ಕಿಂತಲೂ ಶಾಸ್ತ್ರವಿಚಾರವೇ ಹತ್ತುಪಟ್ಟು ಮಿಗಿಲಾಗಿರುತ್ತದೆ. ತಾನೊಬ್ಬನೇ ಶಾಸ್ತ್ರಾವಲೋಕನ ಮಾಡುವುದಕ್ಕಿಂತ ಅದನ್ನೇ ಒಬ್ಬ ಶಿಷ್ಯನಿಗಾದರೂ ಪಾಠ ಹೇಳುವುದರಲ್ಲಿ ನೂರುಪಟ್ಟು ಫಲ ಅಧಿಕವಾಗಿರುತ್ತದೆ. ಅಪರೋಕ್ಷಜ್ಞಾನಿಯಾದವನೂ ಸಹ ವಿಷ್ಣುಪ್ರೀತಿಯನ್ನುಂಟುಮಾಡುವ ಶಾಸ್ತ್ರಪಾಠಪ್ರವಚನಾದಿಗಳನ್ನು ನಡೆಸುತ್ತಲೇ ಇರಬೇಕು[^1] ಪ್ರವಚನದ ಸಾಫಲ್ಯತೆ; ಶ್ರವಣಯೋಗ್ಯ ಅಧಿಕಾರಿ ಯ ಇಮಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ । ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯ ಸಂಶಯಃ ॥ ೧೪೩ ॥ ನ ಚ ತಸ್ಮಾನ್‌ಮನುಷ್ಯೇಷು ಕಶ್ಚಿನ್ ಮೇ ಪ್ರಿಯಕೃತ್ತಮಃ । ಭವಿತಾ ನ ಚ ಮೇ ತಸ್ಮಾದನ್ಯಃ ಪ್ರಿಯತಮೋ ಭುವಿ II ೧೪೪ ॥ ಅರ್ಥ - ಯಾರು ಈ ಪರಮಗೋಪ್ಯವಾದ ಸರ್ವಶಾಸ್ತ್ರಾರ್ಥ- ನಿರ್ಣಯವನ್ನು ನನ್ನ ಭಕ್ತರಲ್ಲಿ ಪ್ರವಚನಾದಿಗಳಿಂದ ಉಪದೇಶಿಸುವನೋ ಅಂತಹ ಭಕ್ತನು ನನ್ನಲ್ಲಿ ಉತ್ತಮವಾದ ಭಕ್ತಿಯನ್ನು ಮಾಡಿ ನನ್ನನ್ನೇ ಹೊಂದುತ್ತಾನೆ. ಪ್ರವಚನದಿಂದ ಭಗವದ್ಭಕ್ತಿ, ಭಗವದ್ಭಕ್ತಿಯಿಂದ ಭಗವಂತನ ಸಾನ್ನಿಧ್ಯಲಾಭ- ವೆಂದು ಭಾವ. [^1]. ಸ್ವಾಧ್ಯಾಯ ಹಾಗೂ ಪ್ರವಚನವನ್ನು ನಿರಂತರ ಮಾಡುತ್ತಲೇ ಇರಬೇಕು. ಶ್ರವಣಾದಿಗಳಿರದೆ ಒಂದು ಕ್ಷಣವನ್ನೂ ವ್ಯರ್ಥಮಾಡಬಾರದು. ಈ ರೀತಿ ಸ್ವಾಧ್ಯಾಯ, ಪ್ರವಚನ ಮಾಡಿದವನೇ ನಿರಂತರ ತಪಸ್ವೀ ಎನಿಸುವನು. 'ಸ್ವಾಧ್ಯಾಯಪ್ರವಚನೇ ಏವೇತಿ ನಾಕೋ ಮೌದ್ಗಲ್ಯಃ ತದ್ಧಿ ತಪಃ ತದ್ಧಿ ತಪಃ' – ತೈತ್ತರೀಯ ಉಪನಿಷತ್ ಶಾಸ್ತ್ರಪ್ರವಚನವನ್ನು ಮಾಡುವವನಿಗಿಂತ ನನಗೆ ಹೆಚ್ಚು ಪ್ರಿಯವುಂಟು ಮಾಡುವ ಮತ್ತೊಬ್ಬ ಭಕ್ತನು ಇಲ್ಲಿಯವರೆಗೂ ಹುಟ್ಟಿಲ್ಲ. ಮುಂದೆಯೋ ಹುಟ್ಟಲಾರನು. ಪ್ರಾಣಾಯಾಮಾದಿಧರ್ಮಗಳಲ್ಲಿ ತಾರತಮ್ಯ; ಶೌಚಾಸನಗಳು ಕೇವಲ ಅಂಗಗಳು ಶೌಚಾಸನೇ ತ್ವಂಗಮಾತ್ರಂ ನ ಪೃಥಕ್ ಧರ್ಮಕಾರಣಮ್ । ಪ್ರಾಣಾಯಾಮಾದಯಸ್ತುಷ್ಟಿಪರ್ಯಂತಾ ದ್ವಿಗುಣಾಧಿಕಾಃ ॥ ೧೪೫ ॥ ಸ್ವಾಧ್ಯಾಯಕ್ಕೆ ಪ್ರಾಧಾನ್ಯತೆ ಸ್ವಾಧ್ಯಾಯೋಽತಃ ಕೋಟಿಗುಣಸ್ತತೋಽನಂತಗುಣಾ ಹರೇಃ । ಪೂಜಾऽತಸ್ತ್ರಿಗುಣಂ ಧ್ಯಾನಮಿತಿ ಧರ್ಮಕ್ರಮಃ ಸ್ಮೃತಃ ॥ ೧೪೬ ॥ ಅರ್ಥ - ಬಾಹ್ಯಾಂತರಶುದ್ಧಿರೂಪ ಶೌಚಾಸನಗಳು ಸಕಲಕರ್ಮ- ಗಳಿಗೂ ಅಂಗವಾಗಿರುತ್ತವೆ ಹೊರತು ಸ್ವತಂತ್ರವಾಗಿ ಅವುಗಳೇ ಧರ್ಮಸಾಧನಗಳಲ್ಲ.ಪ್ರಾಣಾಯಾಮ, ವಿಷಯವೈರಾಗ್ಯ, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ತಪಸ್ಸು, ತುಷ್ಟಿ ಇವುಗಳಲ್ಲಿ ಹಿಂದು ಹಿಂದಿನವುಗಳಿಗಿಂತ ಮುಂದು ಮುಂದಿನವುಗಳು ಎರಡು ಪಟ್ಟು ಹೆಚ್ಚು ಫಲವುಳ್ಳವುಗಳು. ಕಡೆಯಲ್ಲಿ ಹೇಳಿದ ತುಷ್ಟಿ ಗುಣಕ್ಕಿಂತಲೂ ತಾನು ಗುರುಗಳಲ್ಲಿ ನಡೆಸುವ ಶಾಸ್ತ್ರಾಧ್ಯಯನವು ಕೋಟಿಪಟ್ಟು ಹೆಚ್ಚು ಫಲವುಳ್ಳದ್ದು, ಶಾಸ್ತ್ರಾಧ್ಯಯನಕ್ಕಿಂತಲೂ ಭಗವಂತನ ಪೂಜೆಯು ಅನಂತಾ- ನಂತ ಫಲಾಧಿಕ್ಯವುಳ್ಳದ್ದು. ಭಗವಂತನ ಪೂಜೆಗಿಂತಲೂ ಧ್ಯಾನವು ಮೂರು ಪಟ್ಟು ಫಲಾಧಿಕವಾದದ್ದು. ಇವು ಪರಂಪರಯಾ ಧರ್ಮಸಾಧನಗಳೆನಿಸಿದ ಪ್ರಾಣಾಯಾಮಾದಿಗಳಲ್ಲಿರುವ ಫಲತಾರತಮ್ಯವು. ಆಸನಲಕ್ಷಣಗಳು ಊರ್ವೋರಧಃ ಪದೋರೂರ್ಧ್ವಂ ವಿಭಾಗೇನೇತಿ ಚ ತ್ರಿಧಾ । ಆಸನತ್ರಯಮುದ್ದಿಷ್ಟಂ ಮಂತ್ರಸ್ಮರಣಪೂರ್ವಕಮ್ ॥ ೧೪೭ ॥ ಅರ್ಥ ತನ್ನ ಎರಡು ಕಾಲುಗಳನ್ನೂ ತೊಡಗಳ ಕೆಳಗೆ ಇಟ್ಟುಕೊಂಡು ನೇರವಾಗಿ ಕುಳಿತರೆ 'ಸ್ವಸ್ತಿಕಾಸನವು'. ಎರಡು ಕಾಲುಗಳನ್ನು ತೊಡೆಗಳ ಮೇಲಿರಿಸಿ ಕುಳಿತುಕೊಳ್ಳುವುದು 'ಪದ್ಮಾಸನವು'. ಒಂದು ಕಾಲನ್ನು ತೊಡೆಯ ಮೇಲೂ ಮತ್ತೊಂದನ್ನು ತೊಡೆಯ ಕೆಳಗೂ ಹಾಕಿ ಚಕ್ಕಳಬಕ್ಕಳ ಕೂತರೆ ವೀರಾಸನವೆಂದು ಕರೆಯಲ್ಪಡುತ್ತದೆ. ಎಂಟು ವಿಧ ಆಸನಗಳಲ್ಲಿ ಈ ಮೂರು ಅತ್ಯಂತ ಶ್ರೇಷ್ಠವಾಗಿರುತ್ತವೆ. ಈ ಆಸನಗಳನ್ನು ಭೂಮಿಶುದ್ಧಿಮಂತ್ರದೊಂದಿಗೆ ರಚಿಸಿಕೊಳ್ಳಬೇಕು. ರೇಚಕಾದಿಗಳ ಮಾತ್ರಾ ಕಾಲ; ಪ್ರಾಣಾಯಾಮವಿಧಿ ದ್ವಿಗುಣೋತ್ತರಂ ರೇಚಕಾದಿ ಷೋಡಶಾದಿಕ್ರಮೇಣ ತು। ಮಾತ್ರಾಣಾಂ ಹ್ರಸ್ವವರ್ಣಸ್ಯ ಕಾಲೋ ಮಾತ್ರೇತಿ ಶಬ್ದತೇ ॥ ೧೪೮ ॥ ಕ್ರಮೇಣೈವಾಭ್ಯಸೇನ್ಮಾತ್ರಾವೃದ್ಧಿಮೇಕಾಗ್ರಧೀಃ ಪುನಃ । ಅರ್ಥ - ಹ್ರಸ್ವ ಆಕಾರವನ್ನು ಉಚ್ಚಾರಣೆ ಮಾಡುವಷ್ಟು ಕಾಲಕ್ಕೆ (ಸುಮಾರು ಒಂದು ಸೆಕೆಂಡ್) ಮಾತ್ರಾಕಾಲವೆಂದು ಹೆಸರು. ಇಂತಹ ಹದಿನಾರು ಮಾತ್ರಾ ಕಾಲದಷ್ಟು ಒಳಗಿರುವ ಗಾಳಿ- ಯನ್ನು ಹೊರಹಾಕಲು ಉಪಯೋಗಿಸಬೇಕು. ಅದರ ಎರಡರಷ್ಟು ಅಂದರೆ 32 ಮಾತ್ರಾಗಳಷ್ಟು ಕಾಲ ಶುದ್ಧಗಾಳಿಯನ್ನು ಸೆಳೆದುಕೊಳ್ಳಬೇಕು. ಪೂರಕಪ್ರಾಣಾಯಾಮದ ಎರಡರಷ್ಟು ಕಾಲ ಅಂದರೆ 64ಮಾತ್ರೆಗಳಷ್ಟು ಕಾಲ ಕುಂಭಕದಲ್ಲಿ ವಾಯುವನ್ನು ನಿಲ್ಲಿಸಬೇಕು. ಹೀಗೆ ಸಾಧಕರು ರೇಚಕ, ಪೂರಕ, ಕುಂಭಕಗಳಲ್ಲಿ ಎರಡೆರಡು ಪಟ್ಟು ಹೆಚ್ಚಿಸುತ್ತಾ ಸಿದ್ಧಿಯನ್ನು ಪಡೆಯಬೇಕು. ರೇಚಯಿತ್ವಾ ದಕ್ಷಿಣತಃ ಪೂರಯಿತ್ವಾ ಚ ವಾಮತಃ । ಕುಂಭಕಂ ಚ ಸುಷುಮ್ನಾಯಾಂ ವಿಷ್ಣುಂ ವಾಯುಂ ಚ ಸಂಸ್ಮರೇತ್ ॥ ೧೪೯ ॥ ಅರ್ಥ - ಬಲಭಾಗದ ಮೂಗಿನ ಹೊಳ್ಳೆಯಿಂದ ಒಳಗಿರುವ ಗಾಳಿಯನ್ನು ಹೊರದೂಡಬೇಕು. ಎಡಭಾಗದ ನಾಸಾರಂಧ್ರದಿಂದ ಶುದ್ಧವಾಯುವನ್ನು ಸೆಳೆದುಕೊಂಡು, ಸುಷುಮ್ನಾನಾಡಿಯಲ್ಲಿ ವಾಯುವನ್ನು ಸ್ಥಿರಗೊಳಿಸಿ, ಹರಿವಾಯುಗಳನ್ನು ಭಕ್ತಿಯಿಂದ ಸ್ಮರಿಸುತ್ತಿರಬೇಕು. ನಾಡೀವಿಚಾರ; ವಿಶೇಷನಾಡಿಗಳು ಮೂಲಾಧಾರಂ ಸಮಾರಭ್ಯ ತ್ವಾಮೂರ್ಧಾನಮೃಜುಸ್ಥಿತಾ । ಮಧ್ಯೇ ಸುಷುಮ್ನಾ ವಿಜ್ಞೇಯಾ ವಜ್ರಿಕಾಽಽರ್ಯಾ ಪ್ರಕಾಶಿನೀ ॥ ೧೫೦ ॥ ವೈದ್ಯುತಾ ಬ್ರಹ್ಮನಾಡೀತಿ ಸೈವ ಪಂಚಪ್ರಭೇದಿನೀ। ಅರ್ಥ - ವೃಷಣದ ಮೂಲಭಾಗದಿಂದ ನೆತ್ತಿಯವರೆಗೂ ನೇರವೂ, ದೀರ್ಘವೂ ಆಗಿರುವ ನಾಡಿಯೇ 'ಸುಷುಮ್ನಾ' ನಾಡಿಯು. ಒಂದೇ ಸುಷುಮ್ನಾ ನಾಡಿಯು ವಜ್ರಕಾ, ಆರ್ಯಾ, ಅವಭಾಸಿನೀ, ವೈದ್ಯುತಾ, ಬ್ರಹ್ಮನಾಡೀ ಎಂಬ ಐದು ಪ್ರಭೇದವುಳ್ಳದ್ದಾಗಿದೆ. ಸುಷುಮ್ನೆಯ ಐದು ವಿಭಾಗಗಳು ಪೃಷ್ಠವಾಮಾಗ್ರದಕ್ಷಾಂತಃ ಭೇದಾಸ್ತೇ ಚ ಕ್ರಮೇಣ ತು ॥ ೧೫೧ ॥ ಹರಿರ್ನೀಲಃ ಸಿತಃ ಪಿಂಗೋ ಲೋಹಿತಶ್ಚಾತ್ರ ಕೇಶವಃ । ಪ್ರದ್ಯುಮ್ನಾದಿಸ್ವರೂಪೇಣ ಧ್ಯೇಯಃ ಸಿದ್ಧಿಮಭೀಪ್ಸತಾ ॥ ೧೫೨ ॥ ಅರ್ಥ - ಸುಷುಮ್ನಾ ನಾಡಿಯ ಹಿಂಬದಿಗೆ ವಜ್ರಿಕೆ ಎಂದೂ, ಎಡಬದಿಗೆ ಆರ್ಯಾ ಎಂದೂ, ಎದುರಿಗೆ ಅವಭಾಸಿನೀ ಎಂದೂ, ಬಲಭಾಗಕ್ಕೆ ವೈದ್ಯುತಾ ಎಂದೂ, ಮಧ್ಯಭಾಗಕ್ಕೆ ಬ್ರಹ್ಮನಾಡೀ ಎಂದೂ ಒಂದೊಂದು ದಿಕ್ಕಿನಲ್ಲಿರುವ ಸುಷುಮ್ನಾನಾಡಿಯೇ ಐದು ಪ್ರಭೇದವುಳ್ಳದ್ದಾಗಿದೆ. ಅಭೀಷ್ಟಸಿದ್ಧಿಯನ್ನು ಇಚ್ಛಿಸುವ ಸಾಧಕನು, ವಜ್ರಿಕಾದಿ ಐದುಪ್ರದೇಶಗಳಲ್ಲಿ ಪ್ರದ್ಯುಮ್ನಾದಿ ಐದು ರೂಪಗಳುಳ್ಳ ಭಗವಂತನನ್ನು ಧ್ಯಾನಿಸಬೇಕು. ವಜ್ರಿಕಾ ಎಂಬ ಹಿಂಬದಿಯ ನಾಡಿಯಲ್ಲಿ ಪೀತವರ್ಣದ ಪ್ರದ್ಯುಮ್ನನನ್ನೂ, ಎಡದಲ್ಲಿರುವ ಆರ್ಯಾ ನಾಡಿಯಲ್ಲಿ ನೀಲವರ್ಣದ ಅನಿರುದ್ಧ- ನನ್ನೂ, ಅಗ್ರಭಾಗದಲ್ಲಿರುವ ಅವಭಾಸಿನೀ ಅಥವಾ ಪ್ರಕಾಶಿನೀ ನಾಡಿಯಲ್ಲಿ ಬಿಳಿ ಬಣ್ಣದ ವಾಸುದೇವನನ್ನು, ಬಲಭಾಗದ ವೈದ್ಯುತಾ ನಾಡಿಯಲ್ಲಿ ಅರುಣಬಣ್ಣದ ಸಂಕರ್ಷಣನನ್ನು ಧ್ಯಾನಿಸಿ ಮಧ್ಯದ ಬ್ರಹ್ಮನಾಡಿಯಲ್ಲಿರುವ ರಕ್ತವರ್ಣದ ನಾರಾಯಣನನ್ನು ಧ್ಯಾನಿಸಬೇಕು[^1]. [^1]. ಪಂಚಮೂರ್ತಿಗಳನ್ನು ಆರುದಳಗಳಿಗೆ ಹಂಚುವ ವಿಷಯ ದಲ್ಲಿ ಎರಡು ಅಭಿಪ್ರಾಯಗಳಿವೆ. ಮೂಲಾಧಾರ ಹಾಗೂ ನಾಭಿಗಳಲ್ಲಿ ನಾರಾಯಣರೂಪವು, ಹೃದಯ ಅನಿರುದ್ಧ, ಕಂಠ ಪ್ರದ್ಯುಮ್ನ, ಭ್ರೂಮಧ್ಯ - ಸಂಕರ್ಷಣ, ಶಿರಸ್ಸು - ವಾಸುದೇವ. ಮೂಲಾಧಾರದಲ್ಲಿಯೇ ಐದುಮೂರ್ತಿಗಳನ್ನು ಉಳಿದ ಐದು ಕಮಲಗಳಲ್ಲಿ ಅನಿರುದ್ಧಾದಿ ಪಂಚರೂಪಗಳನ್ನು ಧ್ಯಾನಿಸು- ವುದು. ಎರಡೂ ಪಕ್ಷಗಳಲ್ಲಿಯೂ ದೋಷವೇನೂ ಇರುವುದಿಲ್ಲ- ವೆಂದು ತಿಳಿಯುವುದು. ಶರೀರದಲ್ಲಿರುವ ಷಟ್ ಪದ್ಮಗಳು ಮೂಲೇ ಚ ನಾಭೌ ಹೃದಯೇಂದ್ರಯೋನಿಭ್ರೂಮಧ್ಯಮೂರ್ಧ್ನಿ ದ್ವಿಷಡಂತಕೇಷು । ಚತುಃಷಡಷ್ಟದ್ವಿಚತುರ್ದ್ವಿಷಟ್ಕದಲೇಷು ಪದ್ಮೇಷು ಸಿತಾರುಣೇಷು । ಪಂಚಾತ್ಮಕೋऽಸೌ ಭಗವಾನ್ಸದೈವ ಧ್ಯೇಯೋ ಹೃದಂತಾನ್ಯರುಣಾನಿ ತಾನಿ ॥ ೧೫೩ ॥ ಅರ್ಥ - ಶರೀರದಲ್ಲಿ ಆರು ಪದ್ಮಗಳಿವೆ. ಮೂಲಾಧಾರದಲ್ಲಿ ನಾಲ್ಕುದಳದ ಪದ್ಮವು, ನಾಭಿಯಲ್ಲಿ ಆರುದಳದ ಪದ್ಮ, ಹೃದಯದಲ್ಲಿ ಅಷ್ಟದಳಪದ್ಮವು, ಕಂಠದಲ್ಲಿ ಎರಡು ದಳ ಪದ್ಮವು, ಹುಬ್ಬುಗಳ ಮಧ್ಯೆ ನಾಲ್ಕುದಳ ಪದ್ಮವು, ತಲೆಯಲ್ಲಿ ಹನ್ನೆರಡು ದಳಪದ್ಮವಿರುತ್ತದೆ. ಹೀಗೆ ಶರೀರದ ನಾನಾಭಾಗ- ಗಳಲ್ಲಿರುವ ಆರುಪದ್ಮಗಳಲ್ಲಿರುವ ವಾಸುದೇವಾದಿ ಪಂಚ- ಮೂರ್ತಿಗಳನ್ನು ಚಿಂತಿಸಬೇಕು. ಈ ಪದ್ಮಗಳಲ್ಲಿ ಮೂಲಾಧಾರ, ನಾಭಿ, ಹೃದಯ ಪದ್ಮಗಳು ಕೆಂಪಾಗಿದ್ದರೆ ಉಳಿದ ಕಂಠ, ಹಣೆ, ಶಿರಸ್ಸಿನಲ್ಲಿರುವ ಪದ್ಮಗಳು ಶ್ವೇತವರ್ಣವಾಗಿವೆ. ಪದ್ಮಗಳಲ್ಲಿರುವ ಮಂಡಲಗಳು ತ್ರಿಕೋಣವಹ್ನೌ ಚ ಷಡಶ್ರವಾಯೌ ದ್ವಿಸ್ತಾವದತ್ರವಿವೃತ್ತಶಶಿಸ್ಥವಹ್ನೌ। ವೃತ್ತೇ ವಿಧಾವಪಿ ವಿಚಿಂತ್ಯಮಿದಂ ದಶಾರ್ಧ- ರೂಪಂ ಸಿತಂ ತದಖಿಲಂ ಹೃದಯಾತ್ಪರಸ್ಥಮ್ ॥ ೧೫೪ ॥ ಅರ್ಥ - ಮೂಲಾಧಾರದಲ್ಲಿ ತ್ರಿಕೋಣವಮಂಡಲದಲ್ಲಿಯೂ, ನಾಭಿಯಲ್ಲಿರುವ ಷಟ್ಕೋಣವಾಯುಮಂಡಲದಲ್ಲಿಯೂ, ಹೃದಯದಲ್ಲಿರುವ ದ್ವಾದಶಕೋಣಗಳಿರುವ ವೃತ್ತಾಕಾರದ ಸೂರ್ಯಮಂಡಲದಲ್ಲಿ ವೃತ್ತಾಕಾರದ ಚಂದ್ರ ಮಂಡಲವು, ಅದರ ಮೇಲೆ ತ್ರಿಕೋಣವಹ್ನಿಮಂಡಲ, ಅದರಲ್ಲಿ ಭಗವಂತ- ನನ್ನು ಧ್ಯಾನಿಸಬೇಕು. ಕಂಠ, ಭ್ರೂಮಧ್ಯ ಹಾಗೂ ಶಿರಸ್ಸುಗಳಲ್ಲಿ ವೃತ್ತಾಕಾರದ ಚಂದ್ರಮಂಡಲ, ಅದರಲ್ಲಿ ಭಗವಂತನನ್ನು ಧ್ಯಾನಿಸಬೇಕು. ಈ ಆರುಮಂಡಲಗಳಲ್ಲಿ ಧ್ಯಾನ ಮಾಡಬೇಕಾಗಿರುವ ಪಂಚರೂಪ- ಗಳಲ್ಲಿ ಮೂಲಾಧಾರ, ನಾಭಿ, ಹೃದಯದಲ್ಲಿರುವ ಭಗವದ್ರೂಪ- ಗಳು ಕಮಲಗಳಂತೆಯೇ ಕೆಂಪುಬಣ್ಣದ್ದಾದರೆ ಉಳಿದವು ಬಿಳಿಯ ಬಣ್ಣದವು. ಸುಷುಮ್ನಾ ಇತರನಾಡಿಗಳು ಇಡಾ ಚ ಪಿಂಗಲಾ ಚೈವ ವಜ್ರಿಕಾ ಧಾರಿಣೀ ತಥಾ । ಸುಷುಮ್ನಾಯಾಶ್ಚತುರ್ದಿಕ್ಷು ವಜ್ರಿಕಾದ್ಯಾಸು ತತ್ರ ಚ । ಚತುರ್ಮೂರ್ತಿಃ ಸ ಭಗವಾನ್ ಹೃದಯೇ ಸಂವ್ಯವಸ್ಥಿತಃ ॥ ೧೫೫ ॥ ಅರ್ಥ - ಸುಷುಮ್ನಾನಾಡಿಯ ಐದು ಪ್ರಭೇದವುಳ್ಳ ಸುಷುಮ್ನಾ ನಾಡಿಯ ಪಶ್ಚಿಮಾದಿ ನಾಲ್ಕೂದಿಕ್ಕುಗಳಲ್ಲಿಯೂ ವಜ್ರಿಕಾ, ಇಡಾ, ಧಾರಿಣೀ, ಪಿಂಗಲಾ ಎಂಬ ನಾಲ್ಕು ನಾಡಿಗಳು ಪೂರ್ವಾದಿಕ್ರಮ- ದಿಂದ ಇರುತ್ತವೆ. ವಜ್ರಿಕಾ ಮೊದಲಾದ ನಾಲ್ಕೂ ನಾಡಿಗಳಲ್ಲಿ ವಾಸುದೇವಾದಿ ನಾಲ್ಕುಮೂರ್ತಿಗಳೂ, ನಾಡಿಯಲ್ಲಿ ನಾರಾಯಣ ಮೂರ್ತಿಯೂ ಇರುತ್ತವೆ. ದ್ವಾಸಪ್ತತಿಸಹಸ್ರಾಣಿ ನಾಡ್ಯೋಽನ್ಯಾಸ್ತು ಪ್ರಧಾನತಃ । ಬೃಹತೀಸಹಸ್ರಸ್ಪರ್ಶಾನಾಮೃಚಾಂ ವಾಚ್ಯೋऽತ್ರ ಕೇಶವಃ ॥ ೧೫೬ ll ಅರ್ಥ - ಪ್ರಧಾನವಾದ ಸುಷುಮ್ನಾದಿ ನಾಡಿಗಳಿಂದ ಬೇರೆಯಾದ ಎಪ್ಪತ್ತೆರಡು ಸಾವಿರ ನಾಡಿಗಳೂ ಈ ದೇಹದಲ್ಲಿರುತ್ತವೆ. ಇವು ಬೃಹತೀಸಹಸ್ರಸಂಬಂಧಿಗಳಾದ ಋಕ್‌ಗಳಿಂದ ಪ್ರತಿಪಾದ್ಯನಾದ ವನೂ, ಸ್ವರ-ವ್ಯಂಜನ ಪ್ರತಿಪಾದ್ಯನೂ, ಹಗಲು- ರಾತ್ರಿಗಳ ನಿಯಾಮಕನೂ, ಸ್ತ್ರೀಪುರುಷರೂಪದಿಂದ ಇರುವವನೂ, ಮನುಷ್ಯರ ಪರಮಾಯುಷ್ಯವೆನಿಸಿದ 36,000 ಹಗಲುರಾತ್ರಿ ಪ್ರತಿಪಾದ್ಯನೂ ಆದ ಭಗವಂತನನ್ನು ಈ ನಾಡಿಗಳಲ್ಲಿ ಧ್ಯಾನಿಸಬೇಕು. ನಾಡಿಗಳ ಗೋಪ್ಯತೆ ರೂಪಾಣಾಂ ಲಕ್ಷಣಂ ತೇಷಾಂ ರಹಸ್ಯತ್ವಾನ್ನ ಕಥ್ಯತೇ । ವಿಷ್ಣುನಾ ಬ್ರಹ್ಮಣೇ ಪ್ರೋಕ್ತಂ ಗ್ರಂಥಸಂಕೋಚತಸ್ತಥಾ ॥ ೧೫೭ ॥ ಅರ್ಥ - ಈ ನಾಡಿಗಳಲ್ಲಿ ಸನ್ನಿಹಿತಗಳಾಗಿರುವ ಎಪ್ಪತ್ತೆರಡು ಸಾವಿರ ಭಗವದ್ರೂಪಗಳೆಲ್ಲವನ್ನೂ ಭಗವಂತನು ಬ್ರಹ್ಮದೇವನಿಗೆ ಉಪದೇಶಿಸಿದ್ದಾನೆ. ಆ ರೂಪಗಳು ಅತ್ಯಂತಗೋಪ್ಯಗಳಾಗಿದ್ದು ಸಾಮಾನ್ಯರಿಗೆ ತಿಳಿಸಬಾರದಾದ ಕಾರಣ, ಗ್ರಂಥವು ವಿಸ್ತಾರವಾಗುವುದೆಂಬ ಕಾರಣದಿಂದಲೂ ನನಗೆ ತಿಳಿದಿದ್ದರೂ ತಿಳಿಸುತ್ತಿಲ್ಲ. ಸ್ಮೃತಿವಿಭಾಗ ಖಂಡಸ್ಮೃತಿರ್ಧಾರಣಾ ಸ್ಯಾದ್ ಅಖಂಡಾ ಧ್ಯಾನಮುಚ್ಯತೇ । ಅಪ್ರಯತ್ನಾತ್ ಸಮಾಧಿಶ್ಚ ದರ್ಶನಂ ಚಿರಯಾऽನಯಾ। ಅಥವಾ ಸತತಂ ಶಾಸ್ತ್ರವಿಮರ್ಶೇನ ಭವಿಷ್ಯತಿ ॥ ೧೫೮ ॥ ಪರಮಸ್ನೇಹಸಂಯುಕ್ತಯಥಾರ್ಥಜ್ಞಾನತೋ ಭವೇತ್ । ಸಾ ಭಕ್ತಿರಿತಿ ವಿಜ್ಞೇಯಾ ಸಾಧನಂ ಭೋಗಮೋಕ್ಷಯೋಃ ॥ ೧೫೯ ॥ ಅರ್ಥ- ಸಚ್ಛಾಸ್ತ್ರವನ್ನು ಕೇಳುವುದು, ದರ್ಶನಾದಿಗಳಿಂದ ಉಂಟಾಗುವ ವಾಸನಾಮಯವಾದ ವಸ್ತುವನ್ನು ಮನಸ್ಸಿನಿಂದ ತಿಳಿಯುವುದು ಸ್ಮೃತಿಯು. ಇದು ಖಂಡಸ್ಮೃತಿ ಮತ್ತು ಅಖಂಡ- ಸ್ಮೃತಿ ಎಂದು ಎರಡು ವಿಧವಾಗಿರುತ್ತದೆ. ಅಖಂಡಸ್ಮೃತಿಯೂ ಸಹ ಧ್ಯಾನರೂಪವಾದದ್ದು ಹಾಗೂ ಸಮಾಧಿರೂಪವಾದದ್ದು ಎಂದು ಎರಡು ವಿಧವು. ಇವುಗಳಲ್ಲಿ ಭಗವಂತನ ಯಾವುದಾದ- ರೊಂದು ಅವಯವಗಳ ಸ್ಮರಣೆ, ಅಥವಾ ಕೆಲವು ಕಾಲ ಸ್ಮರಣೆ ಮತ್ತೆ ಕೆಲವು ಕಾಲ ವಿಸ್ಮರಣೆ ಇರುವಿಕೆಯು ಸಾಧಾರಣವಾಗಿ ಖಂಡಸ್ಮೃತಿ ಎನಿಸುತ್ತದೆ. ಸಮಸ್ತಾವಯವಗಳ ಸ್ಮರಣೆ ಹಾಗೂ ಮಧ್ಯೆ ಖಂಡವಾಗದೆ ನಿರಂತರ ಭಗವದ್ಗುಣಗಳ ಸ್ಮರಣೆಯು ಧ್ಯಾನ ಎನಿಸುತ್ತದೆ. ಧ್ಯಾನಮಾಡಲು ಪ್ರಯತ್ನ ಮಾಡದಿದ್ದರೂ ಅನಾಯಾಸವಾಗಿ ನಿರಂತರ ಭಗವಂತನ ಸ್ಮರಣೆಯು ಸಮಾಧಿ ಎನಿಸುತ್ತದೆ. ಹೀಗೆ ಪ್ರಯತ್ನವಿಲ್ಲದೇನೇ ಬಹುಕಾಲದಿಂದ ಅನುವೃತ್ತವಾದ ಸಮಾಧಿ- ಯಿಂದ ಭಗವಂತನ ಅಪರೋಕ್ಷವಾಗುತ್ತದೆ. ಭಗವಂತನ ದರ್ಶಕ್ಕೆ ಪ್ರಾಧಾನ್ಯಾದಿಗಳು ಅಮುಖ್ಯಸಾಧನಗಳಾ- ಗಿದ್ದು, ಭಗವಂತನಲ್ಲಿ ಮಾಹಾತ್ಮ್ಯ ಜ್ಞಾನಪೂರ್ವಕವಾದ ಸುದೃಢಸ್ನೇಹರೂಪವಾದ ಭಕ್ತಿಯೇ ಭಗವಂತನ ಅಪರೋಕ್ಷ- ದಲ್ಲಿ ಪ್ರಧಾನಸಾಧನವು. ಇಂತಹ ಯಥಾರ್ಥ ಭಕ್ತಿಯೇ ಮೋಕ್ಷವು ಹಾಗೂ ಮೋಕ್ಷದಲ್ಲಿ ಆನಂದಾತಿಶಯವು ಉಂಟಾಗಲು ಸಾಧನವು. ಭಕ್ತಿಯ ಮಹಿಮೆ ಮುಖ್ಯಮೇಷೈವ ನಾನ್ಯತ್ ಸ್ಯಾತ್ ಸರ್ವಂ ವ್ಯರ್ಥ೦ ತಯಾ ವಿನಾ। ಸೈಕಾಽಪ್ಯಭೀಷ್ಟಫಲದಾ ಮೋಕ್ಷೋ ದರ್ಶನಯುಕ್ತಯಾ ॥ ೧೬೦ ॥ ದರ್ಶನಂ ತು ತಯಾ ಹೀನಂ ವ್ಯರ್ಥಮನ್ಯತ್ ಕಿಮುಚ್ಯತೇ । ಯೋಗ್ಯಂ ತು ದರ್ಶನಂ ನೈವ ತಯಾ ಹೀನಂ ಭವಿಷ್ಯತಿ ॥ ೧೬೧ ॥ ಅರ್ಥ ಅರ್ಥ - ಸಕಲಮೋಕ್ಷಸಾಧನಗಳಲ್ಲಿಯೂ ಭಕ್ತಿಯೇ ಪ್ರಧಾನ- ಸಾಧನವಾಗಿದೆ. ಭಕ್ತಿ ಇಲ್ಲದೆ ಬೇರೇನು ಇದ್ದರೂ ಮೋಕ್ಷ ಲಭಿಸ- ಲಾರದು. ಭಗವದ್ಭಕ್ತಿ ಇಲ್ಲದೆ ಮಾಡಿದ ಕರ್ಮಾದಿಗಳೆಲ್ಲವೂ ವ್ಯರ್ಥವೇ ಸರಿ. ಭಕ್ತಿಯಿಲ್ಲದ ಅಪರೋಕ್ಷಜ್ಞಾನವಾದರೂ ಕಲ್ಯಾದಿಗಳಿಗೆ ಭಗವದವತಾರದ ಅಪರೋಕ್ಷವಾದಂತೆ ವ್ಯರ್ಥವೇ ಆಗುತ್ತದೆ. ಹೀಗೆ ಭಕ್ತಿಯಿಲ್ಲದ ಶಾಸ್ತ್ರಜನ್ಯ ಅಪರೋಕ್ಷಜ್ಞಾನವೇ ವ್ಯರ್ಥ- ವೆಂದಮೇಲೆ ಕರ್ಮಾದಿಗಳು ವ್ಯರ್ಥವೆಂದು ಹೇಳುವುದೇನು? ಅಷ್ಟೇಕೆ? ಯೋಗ್ಯವಾದ ಸಂಪೂರ್ಣವಾದ ಭಕ್ತಿಯಿಲ್ಲವಾದರೆ ಭಗವಂತನ ಸಾಕ್ಷಾತ್ಕಾರರೂಪವಾದ ಅಪರೋಕ್ಷಜ್ಞಾನವೂ ಆಗಲಾರದು. ಗ್ರಂಥೋಪಸಂಹಾರ ಆನಂದ-ಚಿತ್-ಸದಿತಿಪೂರ್ವಗುಣೈಃ ಸಮಸ್ತೈಃ ಮರ್ತ್ಯಾದಿಭಿಃ ವಿಧಿಪರೈಃ ಭಗವಾನ್ ಕ್ರಮೇಣ । ಧ್ಯಾತೋSಧಿಕೈರಧಿಗುಣೋSಧಿಕಮೇವ ಸೌಖ್ಯಂ ಮುಕ್ತೌ ದದಾತಿ ಸತತಂ ಪರಮಸ್ವರೂಪಃ ॥ ೧೬೨ ॥ ಅರ್ಥ- ಆನಂದ, ಚಿತ್, ಸತ್ ಮೊದಲಾದ ಸಮಸ್ತಗುಣಗಳಿಂದ ಪೂರ್ಣನಾಗಿರುವ ಭಗವಂತನು ಮನುಷ್ಯರಿಂದಾರಂಭಿಸಿ ಬ್ರಹ್ಮ- ದೇವನ ಪರ್ಯಂತವಾಗಿರುವ ಎಲ್ಲ ಅಧಿಕಾರಿ ಜೀವರಿಂದಲೂ ಯೋಗ್ಯತಾನುಸಾರವಾಗಿ ಕ್ರಮದಿಂದ ವೃದ್ಧಿಯಾಗುವ ಬಹುಗುಣ ಗಳಿಂದ ಧ್ಯಾನಿಸಲ್ಪಟ್ಟವನಾಗಿ, ಅವರವರ ಉಪಾಸನೆಗೆ ಅನುಗುಣವಾಗಿ ತಾರತಮ್ಯಾನುಸಾರವಾಗಿ ಮೋಕ್ಷವನ್ನು ಹಾಗೂ ಮೋಕ್ಷದಲ್ಲಿ ತಾರತಮ್ಯಾನುಸಾರವಾಗಿಯೇ ಆನಂದಾದಿಗಳನ್ನೂ ದಯಪಾಲಿಸುತ್ತಾನೆ. ಗ್ರಂಥದ ಉದ್ಧಾರ ಮತ್ತು ಮಹಿಮೆ ನಿರ್ದೋಷಾಖಿಲಸಂಪೂರ್ಣಗುಣೇನ ಹರಿಣಾ ಸ್ವಯಮ್ । ಬ್ರಹ್ಮಣೇ ಕಥಿತಾತ್ ತಂತ್ರಸಾರಾದ್ ಉದ್ಧೃತ್ಯ ಸಾದರಮ್ । ಆನಂದತೀರ್ಥಮುನಿನಾ ಕೃತೋ ಗ್ರಂಥೋಽಯಮಂಜಸಾ ॥ ೧೬೩ ॥ ಗ್ರಂಥೋSಯಂ ಪಾಠಮಾತ್ರೇಣ ಸಕಲಾಭೀಷ್ಟಸಿದ್ಧಿದಃ । ಕಿಮು ಜ್ಞಾನಾದ್ ಅನುಷ್ಠಾನಾದ್ ಉಭಯಸ್ಮಾತ್ ಪುನಃ ಕಿಮು ॥ ೧೬೪ ॥ ಅರ್ಥ ದೋಷಗಂಧರಹಿತನೂ, ಸಮಸ್ತಗುಣಪೂರ್ಣನೂ ಆಗಿರುವ ಶ್ರೀಭಗವಂತನಿಂದ ತಾನೇ ಸ್ವಯಂ ಚತುರ್ಮುಖಬ್ರಹ್ಮ ದೇವನಿಗೆ ಆದರಪೂರ್ವಕವಾಗಿ ಉಪದೇಶಿಸಲ್ಪಟ್ಟ "ತಂತ್ರಸಾರ" ವೆಂಬ ಗ್ರಂಥದಿಂದ ಕೆಲವು ಪ್ರಧಾನಾಂಶಗಳನ್ನು ಸಂಗ್ರಹಮಾಡಿ ಆನಂದತೀರ್ಥರೆಂಬ ಅಭಿಧಾನದಿಂದ ಶೋಭಿಸುತ್ತಿರುವ ನನ್ನಿಂದ ರಚಿಸಲ್ಪಟ್ಟಿದೆ. ಈ ಗ್ರಂಥವಾದರೂ ಅರ್ಥಾನುಸಂಧಾನ ವಿಲ್ಲದೆ ಪಠಿಸಿದರೂ ಸಮಸ್ತ ಇಷ್ಟಾರ್ಥಗಳನ್ನು ಸಲ್ಲಿಸುವುದು(??). ಹೀಗಿರಲು ಅರ್ಥಾನುಸಂಧಾನಪೂರ್ವಕ ಪಠಿಸಿದರೆ ಸರ್ವಾಭೀಷ್ಟಸಿದ್ಧಿಯಾಗುವುದೆಂದು ಹೇಳುವುದೇನು? ಇಲ್ಲಿ ಹೇಳಿದ ಕರ್ಮಾನುಷ್ಠಾನ ಮಾಡಿದರಂತೂ ಇಷ್ಟಾರ್ಥಗಳು ಕೈಗೂಡುವುದರಲ್ಲಿ ಸಂಶಯವೇ ಇರುವುದಿಲ್ಲ. ಜ್ಞಾನಪೂರ್ವಕ- ವಾಗಿ ಕರ್ಮಾನುಷ್ಠಾನ ಮಾಡಿದರಂತೂ ಸಕಲಾಭೀಷ್ಟಗಳೂ ಲಭಿಸುವುದೆಂದು ಸುತರಾಂ ಸಿದ್ಧವೇ! ಆಚಾರ್ಯರ ಸ್ವರೂಪಕಥನ; ಲಘುವಾಯುಸ್ತುತಿ ಯಸ್ಯ ತ್ರೀಣ್ಯುದಿತಾನಿ ವೇದವಚನೇ ರೂಪಾಣಿ ದಿವ್ಯಾನ್ಯಲಂ ಬಟ್ ತದ್ದರ್ಶತಮಿತ್ಥಮೇವ ನಿಹಿತಂ ದೇವಸ್ಯ ಭರ್ಗೋ ಮಹತ್ । ವಾಯೋ ರಾಮವಚೋನಯಂ ಪ್ರಥಮಕಂ ಪೃಕ್ಷೋ ದ್ವಿತೀಯಂ ವಪು- ರ್ಮಧ್ವೋ ಯತ್ತು ತೃತೀಯಮೇತದಮುನಾ ಗ್ರಂಥಃ ಕೃತಃ ಕೇಶವೇ ॥ ೧೬೫ ॥ ಅರ್ಥ - ಯಾವ ಹನುಮ,ಭೀಮ, ಮಧ್ವರೆಂದು ಮೂರು ವಾಯು ದೇವರ ದಿವ್ಯರೂಪಗಳು ಬಳಿತ್ಥಾ ಮೊದಲಾದ ವೇದಮಂತ್ರ- ಗಳಲ್ಲಿ ಹೇಳಲ್ಪಟ್ಟಿರುತ್ತವೆಯೋ ಅಂತಹ ವಾಯುದೇವರ ಮೂಲರೂಪವು ಪೂರ್ಣವಾದ ಬಲ ಹಾಗೂ ಜ್ಞಾನವುಳ್ಳದ್ದಾ- ಗಿದೆ. ಭಗವಂತನ ಆದೇಶದಂತೆ ಭಗವತ್ಪ್ರೇರಿತವಾಗಿ ಹನುಮದಾದಿ ಮೂರು ರೂಪಗಳಿಂದ ಅವತಾರ ಮಾಡಿರುತ್ತಾರೆ. ಆ ಮೂರು ರೂಪಗಳಲ್ಲಿ ಮೊದಲನೆಯ ರೂಪವು ಹನುಮರೂಪವಾಗಿದ್ದು ಶ್ರೀರಾಮನ ಮಾತುಗಳನ್ನು ಸೀತಾಮಾತೆಗೂ, ಸೀತೆಯ ಮಾತುಗಳನ್ನು ಶ್ರೀರಾಮಚಂದ್ರದೇವನಿಗೂ ತಲುಪಿಸಿರುವಂತಹದು. ಎರಡನೆಯ ದ್ದಾದ ಭೀಮಸೇನರೂಪವು ಶತ್ರುಗಳಿಗೆ ಅತಿ ಭಯಂಕರವಾಗಿದ್ದು ಕೌರವಸೇನೆಯನ್ನು ನಾಶಮಾಡಿತು. ಮೂರನೆಯ ಮಧ್ವರೂಪ- ವಾದರೋ ಶ್ರೀಹರಿಯ ಸರ್ವೋತ್ತಮತ್ವ ಪ್ರತಿಪಾದಕ ಗ್ರಂಥ- ಗಳನ್ನು ರಚಿಸಿದ್ದು ಭಗವಂತನಿಗೆ ಆನಂದವುಂಟುಮಾಡುವ ಶಾಸ್ತ್ರರಚನೆಯಿಂದಾಗಿ 'ಮಧ್ವ' ಎಂದು ಪ್ರಸಿದ್ಧವಾಗಿದೆ. ಇಂತಹ ಮೂರನೆಯ ಮಧ್ವರೂಪದಿಂದಲೇ ಪರಮಾತ್ಮನ ಪ್ರೀತಿಗಾಗಿ ಈ ತಂತ್ರಸಾರಸಂಗ್ರಹವೆಂಬ ಗ್ರಂಥವು ರಚಿಸಲ್ಪಟ್ಟಿತು. ಆಪ್ತರಿಂದ ರಚಿತವಾದ್ದರಿಂದ ಸಜ್ಜನರು ಸ್ವೀಕರಿಸಿ ಉದ್ಧಾರವಾಗಬೇಕು. ಗ್ರಂಥಸಮಾಪ್ತಿ - ಉತ್ತರಮಂಗಳಾಚರಣೆ ಅಶೇಷದೋಷೋಜ್ಝಿತಪೂರ್ಣಸದ್ಗುಣಂ ಸದಾ ವಿಶೇಷಾಪಗತೋರುರೂಪಮ್ । ನಮಾಮಿ ನಾರಾಯಣಮಪ್ರತೀಪಂ ಸದಾ ಪ್ರಿಯೇಭ್ಯಃ ಪ್ರಿಯಮಾದರೇಣ ॥ ೧೬೬ ॥ ॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಪ್ರಣೀತಶ್ರೀಮತ್ತಂತ್ರಸಾರ ಸಂಗ್ರಹೇ ಚತುರ್ಥೋಧ್ಯಾಯಃ ॥ ॥ಸಮಾಪ್ತೋಯಂ ಗ್ರಂಥಃ ॥ ಅರ್ಥ - ಸಮಸ್ತದೋಷದೂರನೂ, ಸರ್ವಸದ್ಗುಣಭರಿತನೂ, ಸರ್ವದಾ ತಾರತಮ್ಯವಿಲ್ಲದ ಅನಂತಾನಂತರೂಪವುಳ್ಳವನೂ, ಅಪ್ರತಿಮನೂ, ಪ್ರೀತಿವಿಷಯಗಳಾದ ಸಮಸ್ತವಸ್ತುಗಳಿಗಿಂತಲೂ ಅತ್ಯಂತ ಪ್ರಿಯತಮನೂ ಆದ ನಾರಾಯಣನನ್ನು ಅತ್ಯಾದರ- ದಿಂದ ನಮಸ್ಕರಿಸುತ್ತೇನೆ. ಇಲ್ಲಿಗೆ ತಂತ್ರಸಾರಸಂಗ್ರಹಸಟೀಕೆಯ ಕನ್ನಡಾನುವಾದದಲ್ಲಿ ನಾಲ್ಕನೆಯ ಅಧ್ಯಾಯವು ಮುಗಿದುದು ॥ ಶ್ರೀಮಧ್ವೇಶಾರ್ಪಣಮಸ್ತು ॥ 201 ಪ್ರಕಾಶನ ಶ್ರೀ ಗುರು ಸಾರ್ವಭೌಮ ಸಂಶೋಧನಾ ಮಂದಿರ ಗುರುಸಾರ್ವಭೌಮ ಸಂಸ್ಕೃತ ವಿದ್ಯಾಪೀಠ ಮಂತ್ರಾಲಯ - ಆಂಧ್ರಪ್ರದೇಶ