ಶ್ರೀಮದ್ವಾದಿರಾಜ ಪೂಜ್ಯ ಚರಣ ವಿರಚಿತಾ ದಶಾವತಾರ ಸ್ತುತಿಃ ಕನ್ನಡ ವ್ಯಾಖ್ಯಾನ : ಎಂ. ರಾಜಗೋಪಾಲಾಚಾರ್ಯ ಪ್ರಕಾಶನ : ಸುಗುಣ ಸಂಸತ್, ಉಡುಪಿ 1933 ಬಿಡುಗಡೆಗೊಳಿಸಿದವರು : ಪರಮಪೂಜ್ಯ ಶ್ರೀ ಶ್ರೀ ವಿದ್ಯಾಮಾನ್ಯತೀರ್ಥರು ಪಲಿಮಾರು ಮಠ, ಉಡುಪಿ ಮುಖಪುಟ ಚಿತ್ರರಚನೆ : ಶ್ರೀ ಗಂಜೀಫಾ ರಘುಪತಿ ಭಟ್ Dashavatarastuti of Vadiraja Swami Kannada Commentary by M. Rajagopala Acharya PP. VI+34 ದಶಾವತಾರ ಸ್ತುತಿಃ ಮೊದಲ ಮುದ್ರಣ : 1993 ಕನ್ನಡ ವ್ಯಾಖ್ಯಾನ: ಎಂ. ರಾಜಗೋಪಾಲಾಚಾರ್ಯ ಕಾದಿರಿಸಿದೆ. ಪ್ರಕಾಶನ : ಸುಗುಣ ಸಂಸತ್, ಶ್ರೀ ಪುತ್ತಿಗೆ ಮಠ, ಉಡುಪಿ. ಮುದ್ರಣ : ಸುಗುಣಾ ಪ್ರಿಂಟರ್, ಉಡುಪಿ. ಆಶೀರ್ವಚನ ಆಚಾರ್ಯ ಮಧ್ವರ ಪಾದಧೂಳಿಯಿಂದ ಪಾವನವಾದ ಪುಣ್ಯಕ್ಷೇತ್ರ ಉಡುಪಿ. ಆಚಾರ್ಯ ಮಧ್ವರು ಅಧ್ಯಾತ್ಮಪ್ರಪಂಚದಲ್ಲಿ ದೈತಸಿದ್ಧಾಂತವನ್ನು ಸ್ಥಾಪಿಸಿ, ಅದರ ಪ್ರಸಾರಕ್ಕಾಗಿ ದಿಗ್ವಿಜಯವನ್ನು ಕೈಗೊಂಡು ಭಾರತದ ಉದ್ದಗಲಕ್ಕೂ ಸಂಚರಿಸಿದ ಮಹನೀಯರು. ಉಡುಪಿಯ ಇತಿಹಾಸದ ಹೊಸ ಅಧ್ಯಾಯವು ಇವ ರಿಂದ ಪ್ರಾರಂಭವಾಯಿತು. ಇವರ ಬಳಿಕ ಉಡುಪಿಯ ಇತಿಹಾಸಕ್ಕೆ ಹೊಸ ತಿರು ವನ್ನು ನೀಡಿದವರು, ಮಾಧ್ವ ಪೀಠದ ಪರಂಪರೆಯಲ್ಲಿ ಬಂದ ಶ್ರೀ ವಾದಿರಾಜ ಶ್ರೀಮಚ್ಚರಣರು. ಇವರು ಸಕಲ ಶಾಸ್ತ್ರಪಾರಂಗತರೂ ಕವಿವರ್ಯರೂ, ಗ್ರಂಥ ಕರ್ತರೂ ಆಗಿದ್ದರು; ಸಿದ್ಧಮಂತ್ರರಾದ ಅಪರೋಕ್ಷಜ್ಞಾನಿಗಳೂ ಸಹ. ಇವರ ಗ್ರಂಥಗಳು ಸಂಸ್ಕೃತದಲ್ಲಿ ವಿಪುಲವಾಗಿವೆ, ಇವರು ಬರೇ ತತ್ವಜ್ಞಾನಿಗಳಾಗಿರದೆ ಸಮಾಜಸುಧಾರಕರೂ ಆಗಿದ್ದರು. ವ್ಯಾಸಕೂಟದಲ್ಲಿ ಹೇಗೋ ಹಾಗೆ ದಾಸಕೂಟ ದಲ್ಲೂ ಇವರು ಅಗ್ರಮಾನ್ಯರಾಗಿದ್ದರು. ಕನಕ, ಪುರಂದರ ಮೊದಲಾದ ಅನೇಕ ಮಂದಿ ದಾಸವರೇಣ್ಯರು ಇವರ ಕಾಲದಲ್ಲಿ ಉಡುಪಿಯ ಕೃಷ್ಣನ ದರ್ಶನ ಮಾಡಿದ ದಾಖಲೆಗಳಿವೆ. ಕನ್ನಡ ಮತ್ತು ತುಳು ಭಾಷೆಗಳಲ್ಲೂ ಸಾಮಾನ್ಯ ಜನರಿಗೆ ತತ್ವ ಜ್ಞಾನ ತಿಳಿಯುವ ಹಾಗೆ ವಾದಿರಾಜರು ಹಾಡುಗಳನ್ನು ಬರೆದಿದ್ದರು. ಇವರ ಹಾಡು ಗಳು ಇಂದಿಗೂ ಪ್ರಸ್ತುತವಾಗಿ ಬಹಳ ಜನಪ್ರಿಯವಾಗಿವೆ. ಸಂಗೀತ ಕಚೇರಿ ಗಳಲ್ಲೂ, ಹರಿಕತೆ ಮತ್ತು ಭಜನೆ ಗೋಷ್ಠಿಗಳಲ್ಲೂ 'ಹಯವದನ' ಅಂಕಿತದ ಇವರ ಹಾಡುಗಳನ್ನು ಯಾರೂ ಕೇಳಬಹುದು. ವಾದಿರಾಜ ಸ್ವಾಮಿಗಳ ಸ್ತೋತ್ರ ಸಾಹಿತ್ಯವು ವಿಪುಲವೂ ವೈವಿಧ್ಯಮಯವೂ ಆಗಿದೆ. ಪೂಜಾಕಾಲದಲ್ಲಿ ಇಂದಿಗೂ ಜನರು ಭಕ್ತಿಯಿಂದ ಆ ಸ್ತೋತ್ರಗಳನ್ನು ಮತ್ತು ಹಾಡುಗಳನ್ನು ಹಾಡುವುದಿದೆ. ಬರೇ ಹಾಡುಗಳಿಂದಲೇ ಷೋಡಶೋಪಚಾರ ಪೂಜೆಯನ್ನು ಮಾಡುವಂತಹ ವಿವಿಧ ರಚನೆಗಳೂ ಇವೆ. ಆವಾಹನ, ಆಸನ ಅಭಿಷೇಕ, ಧೂಪ, ದೀಪ, ನೈವೇದ್ಯ, ಫಲಾಹಾರ, ಮಂಗಳಾರತಿ, ಶಯನೋತ್ಸವ, ಹೀಗೆ ಸಾಂದರ್ಭಿಕ ಮಹತ್ವವುಳ್ಳ ಅನೇಕ ಹಾಡುಗಳು ಇವೆ. ಈ ದಶಾವತಾರ ಸ್ತುತಿಯೂ ಅವುಗಳಲ್ಲಿ ಒಂದು. ಇದು ಆಕೃತಿ ಛಂದಸ್ಸಿನ ಅಶ್ವಧಾಟೀ ವೃತ್ತದಲ್ಲಿದೆ. ಇದರಲ್ಲಿ ನಾಲ್ಕು ಪಾದಗಳು, ಪ್ರತಿ ಪಾದದಲ್ಲೂ ೨೨ ಅಕ್ಷರಗಳಿವೆ. ಯಥಾಸ್ಥಿತವಾದ ಗುರುಲಘುಗಳುಳ್ಳ ಅಕ್ಷರವೃತ್ತವಾದರೂ ಇದರಲ್ಲಿ ಪಂಚಮಾತ್ರಾಗಣದ ಖಂಡ ನಡೆ ಇರುವುದರಿಂದ ಇದು ಉಭಯ ಛಂದಸ್ಸು, ಛಂದಃಸಾರದಲ್ಲಿ ಇದರ ಲಕ್ಷಣ 'ಇಂತಶ್ವಧಾಟ ಗಿರಿ ಶೈಲಸ್ಥಿತಂ ನಿರತಿ ತಂ ಭಂ ಯಜಂ ಸರನ ಗಂ' ಎಂದಿದೆ. ಇದು ಅಪೂರ್ವವಾದ ಛಂದಸ್ಸು. ಹಾಡುವಾಗ ಓಡುವ ಕುದುರೆಯ ಖುರಪುಟಗಳ ಸದ್ದು ಕಿವಿಯ ಮೇಲೆ ಬಿದ್ದಂತೆ ಕೇಳುತ್ತದೆ. ಪ್ರತಿ ಪಾದದ ಏಕಾಂತರ ಪಂಚ ಮಾತ್ರಾಗಣದಲ್ಲಿ ದ್ವಿತೀಯ ಗುರು ಪ್ರಾಸವಾಗಿದ್ದು, ಪಾದಾಂತ್ಯದ ಒಂದು ಗುರುವೂ ೧೦ ಮಾತ್ರಾಕಾಲದಷ್ಟು ವಿಶ್ರಾಂತಿ ಹೊಂದಿ ಲಯವನ್ನು ಸಮತೋಲವಾಗಿ ಕಾಯ್ದುಕೊಳ್ಳುತ್ತದೆ. ಪದ್ಯವಾಗಿ ಹಾಡಿದರೆ ಖಂಡಚಾಪು ತಾಳದಲ್ಲಿ ಕೇಳುತ್ತದೆ, ಇಂಥ ರಚನೆ ತುಂಬ ಅಪೂರ್ವ. ದೇವರಿಗೆ ನೈವೇದ್ಯವನ್ನು ಸಮರ್ಪಿಸುವ ಕಾಲದಲ್ಲಿ ಇದನ್ನು ಹೆಂಗಸರು ಮಕ್ಕಳೂ ಹಾಡುವುದುಂಟು. ಇದರ ರಚನೆ ತೀರ ಸರಲವಾಗಿಲ್ಲ, ಅರ್ಥ ತಿಳಿದು ಓದಿದರೆ ತಪ್ಪು ನುಸುಳಲಾರದು, ಹೆಚ್ಚಿನ ಪರಿಣಾಮವೂ ಉಂಟಾಗಬಹುದು. ಇದಕ್ಕೊಂದು ಸರಲವಾದ ಕನ್ನಡ ಟೀಕೆಯನ್ನು ಬರೆದು ಪ್ರಕಟಿಸಿದರೆ ಬಹಳ ಪ್ರಯೋಜನವಾದೀತೆಂದು ಕೆಲವರು ನಮ್ಮಲ್ಲಿ ಸೂಚಿಸಿದರು. ನಮ್ಮ ಆತ್ಮೀಯರೂ ಶ್ರೀ ಪುತ್ತಿಗೆ ಮಠದ ಶಿಷ್ಯರು, ಸುಗುಣಮಾಲಾ ಸಂಪಾದಕರೂ ಶ್ರೇಷ್ಠ ಸಾಹಿತಿಗಳೂ ಆದ ನಮ್ಮ ಸಂಸ್ಥಾನದ ವಿದ್ವಾಂಸರು ಶ್ರೀ ಮಟಪಾಡಿ ರಾಜಗೋಪಾಲಾಚಾರ್ಯರು ನಮ್ಮ ಸೂಚನೆಯ ಮೇರೆಗೆ ಇದಕ್ಕೆ ಸಂಕ್ಷಿಪ್ತವಾದ ಕನ್ನಡ ಟೀಕೆಯನ್ನು ಸಕಾಲದಲ್ಲಿ ಬರೆದುಕೊಟ್ಟಿದ್ದಾರೆ. ವಾದಿರಾಜರ ಮಾತು ಬಹು ಅರ್ಥಗರ್ಭಿತವಾದುದು. ಆದರೂ ಓದುವವರಿಗೆ ಇದರ ಭಾವಾರ್ಥ ಸಾಮಾನ್ಯವಾಗಿ ಸರಲವಾಗಿ ತಿಳಿದರೆ ಸಾಕು ಎಂಬ ಸೀಮಿತತೆಯಲ್ಲಿ ಈ ಟೀಕೆಯನ್ನು ರಚಿಸಲಾಗಿದೆ. ಇದರ ಭಾವವನ್ನು ಗ್ರಹಿಸಿ ಹಾಡುವಾಗ ಅಂಥವರಿಗೆ ಇದರಿಂದ ವಿಶೇಷ ಪ್ರಯೋಜನವಾದೀತೆಂದು ನಮ್ಮ ಅನಿಸಿಕೆ. ಇದನ್ನು ಸುಗುಣ ಪ್ರಕಾಶನದ ಮೂಲಕ ಪ್ರಕಟಿಸಿ ನಿಮ್ಮ ಕೈಯಲ್ಲಿ ಕೊಡಲು ಸಂತಸವಾಗುತ್ತದೆ. ಈ ಟೀಕೆಯನ್ನು ಬರೆದುಕೊಟ್ಟ ಆಚಾರ್ಯರಿಗೂ, ಕೊಂಡು ಓದುವ ಭಕ್ತಬಾಂಧವರಿಗೂ ಶ್ರೀಕೃಷ್ಣ ಪರಮಾತ್ಮನ, ಮತ್ತು ವಾದಿರಾಜ ಶ್ರೀಗಳ ವಿಶೇಷಾನುಗ್ರಹವುಂಟಾಗಲಿ ಎಂಬುದು ನಮ್ಮ ಹಾರೈಕೆ. ಪರ್ಯಾಯ ಶ್ರೀ ಪುತ್ತಿಗೆ ಮಠ, ಉಡುಪಿ. ಶ್ರಾವಣ ಶು. ಪ್ರತಿ ಸತ್, (20-7-93) ಇತಿ ಶ್ರೀಮನ್ನಾರಾಯಣ ಸ್ಮರಣೆಗಳು, ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅ ರಿ ಕೆ . ಇದರ ಇದು ಶ್ರೀಮದ್ವಾದಿರಾಜ ಶ್ರೀಮಚ್ಚರಣರಿಂದ ರಚಿತವಾದ ದಶಾವತಾರ ಸ್ತುತಿ, ಇದರಲ್ಲಿ ಅಶ್ವಧಾಟೀ ಬಂಧದ ೩೪ ವೃತ್ತಗಳಿವೆ, ಇದಕ್ಕೆ ದಶಾವತಾರ ಸ್ತುತಿಯೆಂಬ ಹೆಸರಿದ್ದರೂ ಇದರಲ್ಲಿ ಹಯಗ್ರೀವ, ಧನ್ವಂತರಿ, ನಾರಾಯಣಿ, ಸೀತಾ (ಲಕ್ಷ್ಮೀ), ನಾರಾಯಣ ಮುಂತಾದ ಅವತಾರಗಳ ಸ್ತುತಿಯೂ ಬಂದಿದೆ. ಶ್ರೀ ಕೃಷ್ಣ ಮಠದಲ್ಲಿ ಹಾಗೂ ಇತರ ಮಾಧ್ವ ಪೀಠದ ಮಠಗಳಲ್ಲಿ ಪೂಜಾಕಾಲದಲ್ಲಿ ಇದನ್ನು ಪಠಿಸುವ ಸಂಪ್ರದಾಯ ಇಂದಿಗೂ ಇದೆ. ಪೂಜಾಕಾಲದಲ್ಲಿ ಈ ಸ್ತೋತ್ರವನ್ನು ಪಠಿಸಿದವರಿಗೆ ಪರದಲ್ಲಿ ಶ್ರೇಯಸ್ಸಾಗುವುದೆಂಬ ಫಲಶ್ರುತಿಯೂ ಇದರ ಕೊನೆಯಲ್ಲಿದೆ. ಬಂಧ ತುಸು ಕಠಿನ. ವಿಚಿತ್ರವೂ ಅಪೂರ್ವವೂ ಆದ ಪದಪ್ರಯೋಗಗಳಿವೆ, ಆದರೂ ಇದಕ್ಕೆ ವಿವರವಾದ ವ್ಯಾಖ್ಯಾನವೊಂದಿಲ್ಲದಿರುವುದು ಕೊರತೆಯೆನಿಸಿತ್ತು. ನನ್ನ ಪೂಜ್ಯ ಗುರುವರ್ಯರಾದ ದಿ। ಅಗ್ನಿ ಹೋತ್ರಿ ಅಲೆಯೂರು ಸೀತಾರಾಮಾಚಾರ್ಯರು ಅನ್ನ ಯಾರ್ಥವಿವೃತ್ತಿ ಎಂಬ ವ್ಯಾಖ್ಯಾನವನ್ನು ಬರೆದು ಈ ಕೊರತೆಯನ್ನು ನಿವಾರಿಸಿ ದ್ದರು. ಅದು ಸಂಸ್ಕೃತದಲ್ಲಿದೆ, ಅದು 1954 ರಲ್ಲಿ ಶ್ರೀ ಸೋದೆ ಮಠದಿಂದ ಪ್ರಕಟವೂ ಆಗಿತ್ತು. ಕನ್ನಡದಲ್ಲಿ ಇದಕ್ಕೆ ಯಾವ ವ್ಯಾಖ್ಯಾನವೂ ಬಂದಿಲ್ಲ, ಹಾಗೆ ಪ್ರಕಟವಾಗಿದ್ದರೆ ಅದು ನನಗೆ ತಿಳಿದಿಲ್ಲ, ಹೆಂಗಸರು ಮಕ್ಕಳೂ ಇತರರೂ ಇದನ್ನು ಹಾಡುವ ರೂಢಿ ಇದೆ. ಇದರ ಭಾವಾರ್ಥ ತಿಳಿಯದೆ ಪಠಿಸಿದಾಗ ಅಲ್ಲಲ್ಲಿ ಲೋಪ ದೋಷಗಳೂ ಕಾಣಿಸಬಹುದು. ಅರ್ಥ ತಿಳಿದು ಪಠಿಸಿದಾಗ ಹೆಚ್ಚು ಸ್ಪಷ್ಟತೆಯುಂಟಾ ಗುತ್ತದೆ. ಸಾಮಾನ್ಯ ಜನರಿಗೂ ತಿಳಿಯುವಂತೆ ಇದರ ಭಾವಾರ್ಥವನ್ನು ಬರೆದು ಪ್ರಕಟಿಸಿದರೆ ಒಳಿತು ಎಂಬ ತಮ್ಮ ಅಪೇಕ್ಷೆಯನ್ನು ಹಲವಾರು ಮಂದಿ ಶ್ರೀ ಸುಗುಣೇಂದ್ರತೀರ್ಥರ ಮುಂದಿಟ್ಟರು. ಅವರು ಈ ಕೆಲಸವನ್ನು ನನಗೆ ಒಪ್ಪಿಸಿದರು. ಗುರುಗಳ ಅನುಗ್ರಹವೆಂದು ಭಾವಿಸಿ ನಾನಿದನ್ನು ಒಪ್ಪಿಕೊಂಡೆ. ಶ್ರೀ ವಾದಿರಾಜ ಯತಿವರ್ಯರ ಪದ್ಯಗಳ ಭಾವವನ್ನು ಸಮಗ್ರವಾಗಿ ಗ್ರಹಿಸುವಷ್ಟು ವೈದುಷ್ಯ ನನ್ನಲ್ಲಿಲ್ಲವಾದರೂ ಸಂಸ್ಕೃತ ವ್ಯಾಖ್ಯಾನದ ಆಧಾರದ ಮೇಲೆ ನನಗೆ ತಿಳಿದಷ್ಟು ಬರೆದೇನೆಂಬ ಹುಚ್ಚು ಧೈರ್ಯ ನನ್ನ ಕೆಲಸಕ್ಕೆ ಪ್ರಚೋದಿಸಿತು. ಹಾಗೆ ಬರೆದ (iii) ವ್ಯಾಖ್ಯಾನವಿದು. ಇದರಲ್ಲಿರುವ ವಿಷಯಗಳೆಲ್ಲ ಅನ್ವಯಾರ್ಥವಿವೃತ್ತಿಯಲ್ಲಿದ್ದು ದೇ ಹೊರತು ಹೊಸದೇನಿಲ್ಲ, ಇದಕ್ಕೆ ಇನ್ನೂ ಅನೇಕ ಅರ್ಥಗಳು ಇರಲು ಸಾದ್ಯ, ಆದರೆ ಸಾಮಾನ್ಯ ಜನರ ತಿಳಿವಿಗೆ ಎಟಕುವಂತೆ ತಿಳಿಯಾದ ಭಾವಾರ್ಥ ಮತ್ತು ಪ್ರತಿಪದಾರ್ಥ ಬರೆದಿದ್ದೇನೆ. ಇದರಲ್ಲಿ ದೋಷಗಳಿದ್ದರೆ ಕ್ಷಮಿಸಿ, ಗುಣಗಳಿದ್ದರೆ ಗುರುಗಳದೆಂದು ತಿಳಿಯುವುದು. ಇದಕ್ಕೆ ಆಶೀರ್ವಚನದ ತಿಲಕವಿಟ್ಟು ಹರಸಿದ ವರು, ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು. ಪ್ರಕಾಶನದ ಹೊಣೆ ಹೊತ್ತವರು, ಸುಗುಣ ಪ್ರಕಾಶನದವರು. ಸಕಾಲದಲ್ಲಿ ಅಚ್ಚು ಕಟ್ಟಾಗಿ ಮುದ್ರಿಸಿದವರು, ಸುಗುಣ ಪ್ರಿಂಟರ್, ಉಡುಪಿ, ಇವರು, ಇವರೆಲ್ಲರಿಗೂ ನನ್ನ ಕೃತಜ್ಞತೆಗಳು. ಈ ವ್ಯಾಖ್ಯಾನದಿಂದ ಪಠಿಸುವವರಿಗೆ ಏನಾದರೂ ಪ್ರಯೋಜನ ವಾದರೆ ನನ್ನ ಶ್ರಮ ಸಾರ್ಥಕ. ಅವರಿಗೆ ಶ್ರೀವಾದಿರಾಜರ ಅನುಗ್ರಹವಾಗಲಿ ಎಂದು ಶ್ರೀಕೃಷ್ಣನಲ್ಲಿ ನನ್ನ ಪ್ರಾರ್ಥನೆ. ಉಡುಪಿ, 1-7-1993 (iv) ಎಂ. ರಾಜಗೋಪಾಲಾಚಾರ್ಯ ಶ್ರೀಮದ್ವಾದಿರಾಜಪೂಜ್ಯ ಚರಣ ವಿರಚಿತಾ ದಶಾವತಾರ ಸ್ತುತಿಃ (ಅಶ್ವಧಾಟೀ) ಓಂ ಮತ್ಸ್ಯಾಯ ನಮಃ ಪ್ರೋಷ್ಠೀಶವಿಗ್ರಹ! ಸುನಿಷ್ಠೀವನೋದ್ಧ ತ। ವಿಶಿಷ್ಟಾಂಬುಚಾರಿ ಜಲಧೇ ! ಕೋ ಷ್ಠಾಂತರಾಹಿತ ವಿಚೇಷ್ಟಾಗ ಮೌಘಪರಮೇಷ್ಠೀಡಿತ! ತ್ವಮವ ಮಾಮ್ । ಪ್ರೇಷ್ಠಾರ್ಕಸೂನುನುನುಚೇಷ್ಟಾರ್ಥ ಮಾತ್ಮ ವಿದತೀಷ್ಟೋ ಯುಗಾಂತಸಮಯೇ ಸೇಷ್ಠಾತ್ಮಶೃಂಗಧೃತಕಾಷ್ಠಾಂಬುವಾಹನ ವರಾಷ್ಟಾಪದ ಪ್ರಭ ತನೋ ॥ ೧ ॥ ತಾತ್ಪರ್ಯ : ವಿಶಿಷ್ಟವಾದ ಜಲಚರಗಳಿಂದ ತುಂಬಿದ ಸಮುದ್ರದ ನೀರನ್ನು ನಿನ್ನ ಥೂತ್ಕಾರಮಾತ್ರದಿಂದಲೇ ಉಕ್ಕುವಂತೆ ಮಾಡಿದ ಮಹಾಮತ್ಸರೂಪನಾದ ಸ್ವಾಮಿ! ಸಕಲ ವೇದಗಳನ್ನೂ ಸುರಕ್ಷಿತವಾಗಿ ಉದರದಲ್ಲಿಟ್ಟು ಕೊಂಡ (ಅಥವಾ ಹಾಗೆ ವೇದಗರ್ಭನಾದ) ಬ್ರಹ್ಮನಿಂದ ಸ್ತುತನಾದವನೆ! ಪ್ರಲಯ ಬಂದಾಗ ನಿನ್ನ ಪ್ರಿಯ ಭಕ್ತ, ವೈವಸ್ವತ ಮನುವಿಗಾಗಿ ಮುಂದಿನ ಸೃಷ್ಟಿ ಕಾರ್ಯಕ್ಕಾಗಿ ಸಕಲ ಪದಾರ್ಥಗಳನ್ನೂ ಒಂದು ಮರದ ನೌಕೆಯಲ್ಲಿಟ್ಟು ಜಲಪ್ರಲಯದಲ್ಲಿ ಅವು ಕೊಚ್ಚಿಕೊಂಡು ಹೋಗದಂತೆ ನಿನ್ನ ದೃಢವಾದ ಕೋಡಿನಲ್ಲಿ ಹಿಡಿದುಕೊಂಡು ಅವನನ್ನು ರಕ್ಷಿಸಿದ, ಮಿಸುನಿಯಂತೆ ಹೊಳೆಯುವ ಮೈಬಣ್ಣದವನೆ, ಬ್ರಹ್ಮಜ್ಞಾನಿಗಳಿಗೆ ಅತಿ ಪ್ರಿಯನಾದ ಸ್ವಾಮಿ! ನೀನು ನನ್ನನ್ನು ರಕ್ಷಿಸು. ಪ್ರತಿಪದಾರ್ಥ : ಪ್ರೋಷ್ಠೀಶ ವಿಗ್ರಹ =ದೊಡ್ಡ ಮೀನಿನ ಶರೀರವುಳ್ಳವನೆ, ಸುನಿಷ್ಠೀವನ =ಮೂಗಿನಿಂದ ಚೆನ್ನಾಗಿ ಉಸಿರು ಬಿಡುವಾಗ ಥೂತ್ಕರಿಸಿದ್ದರಿಂದ, ಉದ್ಧತ ವಿಶಿಷ್ಟಾಂಬುಚಾರಿ ಜಲಧೇ= ದೊಡ್ಡ ದೊಡ್ಡ ತಿಮಿಂಗಿಲಾದಿ ಜಲಚರಗಳಿಂದ ತುಂಬಿದ ಸಮುದ್ರವನ್ನು ಉಕ್ಕುವಂತೆ ಮಾಡಿದವನೆ! ಕೋಷ್ಠಾಂತರ= ಉದರದೊಳಗೆ, ಆಹಿತ= ಇಟ್ಟು ಕೊಂಡ, ವಿಚೇಷ್ಟಾಗಮೌಘ-ಸುರಕ್ಷಿತವಾದ ವೇದಗಳುಳ್ಳ(ವನೆ!) ಪರಮೇಷ್ಠೀಡಿತ-ಚತುರ್ಮುಖ ಬ್ರಹ್ಮನಿಂದ ಸ್ತುತನಾದವನೆ! ಯುಗಾಂತ ಸಮಯೇ = ಪ್ರಲಯ ಕಾಲದಲ್ಲಿ, ಪ್ರೇಷ್ಠ = ಅತಿಪ್ರಿಯನಾದ, ಅರ್ಕಸೂನು ಮನು- ಸೂರ್ಯಪುತ್ರನಾದ ವೈವಸ್ವತಮನುವಿನ, ಚೇಷ್ಟಾರ್ಥಂ ಸೃಷ್ಟಿ ವ್ಯಾಪಾರಕ್ಕಾಗಿ, ಸ್ಥೆೇಷ್ಠ=ಸ್ಥಿರತರವಾದ, ಆತ್ಮ ಶೃಂಗ - ತನ್ನ ಶೃಂಗದಲ್ಲಿ, ಧೃತ=ಧರಿಸಲ್ಪಟ್ಟ, ಕಾಷ್ಠಾಂಬುವಾಹನವರ =ಮೂಲ ಪದಾರ್ಥಗಳು ತುಂಬಿದ ಮರದ ದೋಣಿಯುಳ್ಳವನೆ, ಅಷ್ಟಾಪದ ಪ್ರಭ ತನೋ= ಚಿನ್ನದ ಮೈಕಾಂತಿಯುಳ್ಳವನೆ, ಆತ್ಮವಿದಾಂ= ಬ್ರಹ್ಮಜ್ಞಾನಿಗಳಿಗೆ, ಅತೀಷ್ಟಃ= ಅತ್ಯಂತ ಪ್ರಿಯನಾದ, ತ್ವಂ=ನೀನು, ಮಾಂ= ನನ್ನನ್ನು, ಅವ= ರಕ್ಷಿಸು. (ಅವ = ರಕ್ಷಣೇ ಧಾ) ಪ್ರೋಷ್ಠೀ= ಒಂದು ಜಾತಿಯ ಮೀನು (ಸ್ತ್ರೀತ್ವ ಶಬ್ದ ರೂಪಕ್ಕೆ ಮಾತ್ರ) ರುಕ್ಮಂ ಕಾರ್ತಸ್ವರಂ ಜಾಂಬೂನದಮಷ್ಟಾಪದೋsಸ್ತ್ರೀಯಾಮ್, (ಅಮರ,) ಪ್ರೋಷ್ಠೀತು ಶಫರೀ ದ್ವಯೋಃ' (ಅಮರ). ಓಂ ಹಯಗ್ರೀವಾಯ ನಮಃ ಖಂಡೀಭವದ್ಭ​ಹುಲಡಿಂಡೀರ ಜೃಂಭಣ । ಸುಚಂಡೀಕೃತೋದಧಿಮಹಾ ಕಾಂಡಾತಿ ಚಿತ್ರಗತಿ ಶೌಂಡಾದ್ಯ! ಹೈಮರದ ಭಾಂಡಾಪ್ರಮೇಯ ಚರಿತ । ಚಂಡಾಶ್ವಕಂಠಮದ ಶುಂಡಾಲದುರ್ಹೃದಯಗಂಡಾಭಿಖಂಡ ಕರದೋ- ಶ್ಚಂಡಾಮರೇಶ ಹಯತುಂಡಾಕೃತೇ ! ದೃಶಮಖಂಡಾಮಲಂ ಪ್ರದಿಶ ಮೇ ॥೨॥ ತಾತ್ಪರ್ಯ : ನೊರೆಗಳು ತುಂಡು ತುಂಡಾಗಿ ಮುರಿದೇಳುತ್ತ ಭೋರ್ಗರೆಯುವ ಮಹಾಸಾಗರದ ಅಗಾಧ ಜಲರಾಶಿಯಲ್ಲಿ ಬಹು ವಿಚಿತ್ರವಾಗಿ ಸಂಚರಿಸುವುದರಲ್ಲಿ ನಿಪುಣನೆ, ಬಲಯುತವಾದ ನಿನ್ನ ಬಾಹುಗಳಿಂದ ಹಯಗ್ರೀವನೆಂಬ ಸೊಕ್ಕಿನ ಸಲಗದ (ದೈತ್ಯನ) ಕ್ರೂರವಾದ ಹೃದಯ ಮತ್ತು ಗಂಡಸ್ಥಳಗಳನ್ನು ಸೀಳಿದ ಹಯಗ್ರೀವ ಸ್ವರೂಪನೆ, ನಿನ್ನ ಮಹಿಮೆಯನ್ನಾರು ಬಲ್ಲರು? ಚಿನ್ನದ ಮತ್ತು ದಂತದ ಆಭರಣಗಳಿಂದ ಶೋಭಿಸುತ್ತಿರುವ, ಜಗದಾದಿ ಕಾರಣ! ದೇವತೆಗಳ ಒಡೆಯ, ನನಗೆ ಅಖಂಡವಾದ ಧೀಶಕ್ತಿಯನ್ನು ಕರುಣಿಸು. ಪ್ರತಿಪದಾರ್ಥ : ಖಂಡೀಭವದ್ತುಂ=ಡು ತುಂಡಾಗಿ ಮುರಿದೇಳುವ, ಬಹುಲ ಡಿಂಡೀರ ಬಹಳ ನೊರೆಗಳ, ಜೃಂಭಣ ಅಬ್ಬರದಿಂದ ಭೋರ್ಗರೆವ, ಸುಚಂಡೀಕೃತ ಅತಿ ಘೋರವಾಗಿ ಮಾಡಲ್ಪಟ್ಟ, ಉದಧಿ ಮಹಾಕಾಂಡ-ಸಮುದ್ರದ ಅಗಾಧ ಜಲ ದಲ್ಲಿ, ಅತಿಚಿತ್ರಗತಿ =ವಿಚಿತ್ರವಾಗಿ ಸಂಚರಿಸುವುದರಲ್ಲಿ, ಶೌಂಡ =ನಿಪುಣನೆ! ಆದ್ಯ=ಜಗದಾದಿ ಕಾರಣ! ಹೈಮರದ ಭಾಂಡ = ಚಿನ್ನದ ಮತ್ತು ದಂತದ ಆಭರಣಗಳಿಂದ ಶೋಭಿತನೆ! ಅಪ್ರಮೇಯ ಚರಿತ= ಊಹೆಗೂ ಮೀರಿದ ಮಹಿಮೆಯುಳ್ಳ ಸ್ವಾಮಿ! ಚಂಡಾಶ್ವಕಂಠ ಪ್ರಚಂಡನಾದ ಹಯಗ್ರೀವ ದೈತ್ಯ ಎಂಬ, ಮದಶುಂಡಾಲ ಮದ ಭರಿತವಾದ ಆನೆಯ, ಹೃದಯ ಗಂಡ= ಕಠಿನವಾದ ಎದೆ ಮತ್ತು ಗಂಡಸ್ಥಲಗಳನ್ನು, ಅಭಿಖಂಡಕರ =ಭೇದಿಸಲು ತಕ್ಕುದಾದ, ದೋಶ್ಚಂಡ =ಬಾಹುಗಳಿಂದ ಪ್ರಚಂಡನಾದವನೆ, ಅಮರೇಶ ದೇವತೆಗಳ ಒಡೆಯ! ಹಯತುಂಡಾಕೃತೇ ಕುದುರೆಯ ಮುಖವುಳ್ಳ ಹಯಗ್ರೀವ ಸ್ವಾಮಿ! ಮೇ = ನನಗೆ, ಅಖಂಡಾಂ=ಪೂರ್ಣವಾದ, ದೃಶಂ=ದೃಷ್ಟಿಯನ್ನು (ಜ್ಞಾನವನ್ನು) ಆಲಂ= ಸಾಕಷ್ಟು, ಪ್ರದಿಶ =ಕೊಡು. ಇದರಲ್ಲಿ ಹಯಗ್ರೀವನೆಂಬ ದೈತ್ಯ ವೇದಗಳನ್ನು ಕದ್ದೊಯ್ದಾಗ ಹರಿಯು ಹಯ ಗ್ರೀವಾವತಾರವನ್ನು ತಳೆದು ಆ ದೈತ್ಯನನ್ನು ಸಂಹರಿಸಿದ ಕತೆ ಸೂಚಿತವಾಗಿದೆ. ಕಾಂಡ = ನೀರು, ಕಾಂಡೋsಸ್ತ್ರೀ ದಂಡ ಬಾಣರ್ವವರ್ಗಾವಸರ ನಾರಿಸು; ಭಾಂಡಂ = - " ಸ್ಯಾದ್ಭಾಂಡಮಶ್ವಾಭರಣೇಮತ್ರೇ ಮೂಲವಣಿಗ್ದ​ನೇ' ಕುದುರೆಗೆ ತೋಡಿಸುವ ಆಭರಣ. (ಅಮರ) ಓಂ ಕೂರ್ಮಾಯ ನಮು ಕೂರ್ಮಾಕೃತೇ! ತ್ವವತು ನರ್ಮಾತ್ಮ ಪೃಷ್ಠಧೃತ ಭರ್ಮಾತ್ಮಮಂದರಗಿರೇ! ಧರ್ಮಾವಲಂಬನ, ಸುಧರ್ಮಾಸದಾಂ ಕಲಿತಶರ್ಮಾಸುಧಾವಿತರಣಾತ್ । ದುರ್ಮಾನರಾಹುಮುಖ ದುರ್ಮಾಯಿ ದಾನವ ಸುಮರ್ಮಾಭಿಭೇದನ ಪಟ್ ಘರ್ಮಾರ್ಕಕಾಂತಿವರ ವರ್ಮಾ ಭವಾನ್ ಭುವನ ನಿರ್ಮಾಣ ಧೂತ ವಿಕೃತಿಃ ॥ ॥ ೩ ॥ ತಾತ್ಪರ್ಯ: ಸಮುದ್ರಮಥನಕಾಲದಲ್ಲಿ ಹೊಂಬೆಟ್ಟವಾದ ಮಂದರವನ್ನು ಲೀಲಾ ಜಾಲವಾಗಿ ಬೆನ್ನ ಮೇಲೆ ತಳೆದ ಕೂರ್ಮರೂಪನೆ! ಮದಾಂಧರಾದ ರಾಹು ಮೊದಲಾದ ಕವಡು ರಕ್ಕಸರ ಮರ್ಮ ಭೇದನದಲ್ಲಿ ನೀನು ಜಾಣನೇ ಸರಿ. ಧರ್ಮಾಭಿಮಾನಿ ದೇವತೆಗಳಿಗೆ ಅಮೃತವನ್ನು ಕೊಟ್ಟು ಅವರನ್ನು ಅಮರರನ್ನಾಗಿ ಮಾಡಿದವನು. ಬೇಸಗೆಯ ಸೂರ್ಯನಂತೆ ಥಳಥಳಿಸುವ ಕವಚವನ್ನು ಧರಿಸಿದ ಸ್ವಾಮಿ, ಸೃಷ್ಟಿಕಾರ್ಯದಲ್ಲು ನಿರ್ವಿಕಾರನಾಗಿಯೇ ಇರುವ ಕೂರ್ಮರೂಪಿ ಪರಮಾತ್ಮನೆ ನೀನೇ ನನ್ನನ್ನು ರಕ್ಷಿಸಬೇಕು. ಪ್ರತಿಪದಾರ್ಥ: ನರ್ಮ= ಅನಾಯಾಸದಿಂದ, ಆತ್ಮಪೃಷ್ಠ = ತನ್ನ ಬೆನ್ನ ಮೇಲೆ, ಧೃತ ಭರ್ಮಾತ್ಮ ಮಂದರಗಿರೇ=ಸುವರ್ಣಮಯವಾದ ಮಂದರ ಪರ್ವತವನ್ನು ಧರಿಸಿದವನೆ, ದುರ್ಮಾನ= ದುರಭಿಮಾನಿಗಳಾದ, ರಾಹುಮುಖ =ರಾಹು ಮುಂತಾದ, ದುರ್ಮಾಯಿ ದಾನವ = ಕೆಟ್ಟ ಮಾಯಾವಿಗಳಾದ ದೈತ್ಯರ, ಸುಮರ್ಮಾಭಿಭೇದನ ಪಟೋ=ಮರ್ಮ ಸ್ಥಾನಗಳನ್ನು ಭೇದಿಸುವುದರಲ್ಲಿ ಜಾಣನೆ, ಧರ್ಮಾವಲಂಬನ- ಸದ್ಧರ್ಮಗಳಿಗೆ ಆಶ್ರಯವಾಗಿರುವ, ಸುಧರ್ಮಾಸದಾಂ = ದೇವತೆಗಳಿಗೆ, ಸುಧಾ ವಿತರಣಾತ್ =ಅಮೃತವನ್ನು ಕೊಡುವುದರಿಂದ, ಕಲಿತ ಶರ್ಮಾ -ಸುಖವನ್ನು ನೀಡಿದವನು, ಘರ್ಮಾರ್ಕಕಾಂತಿ= ಬೇಸಗೆಯ ಸೂರ್ಯನಂತೆ ಕಾಂತಿಯುಳ್ಳ, ವರವರ್ಮಾ =ಶ್ರೇಷ್ಠವಾದ ಕವಚವನ್ನು ಧರಿಸಿ, ಭುವನ ನಿರ್ಮಾಣ= ಭೂಮಿಯ ಸೃಷ್ಟಿ ಯ ವಿಷಯದಲ್ಲಿ, ಧೂತ ವಿಕೃತಿಃ= ನಿರ್ವಿಕಾರನಾಗಿ ಇರುವವನು ಕೂರ್ಮಾಕೃತೇ=ಆಮೆಯ ರೂಪದ ಸ್ವಾಮಿ, ಭವಾನ್ ನೀನು, ತು= ವಿಶೇಷವಾಗಿ, ಅವತು= ರಕ್ಷಿಸು. ಇದರಲ್ಲಿ ಹರಿಯು ಕೂರ್ಮಾವತಾರ ತಾಳಿ ಮುಳುಗುತ್ತಿರುವ ಮಂದರಗಿರಿಯನ್ನು ಹೊತ್ತ ಕತೆ, ಅಮೃತವನ್ನು ದುಷ್ಟರಾದ ದೈತ್ಯರಿಗೆ ನೀಡದೆ ವಂಚಿಸಿದ ವಿಚಾರಗಳ ಸೂಚನೆ ಇವು ಬಂದಿವೆ. ತು= ವಿಶೇಷವಾಗಿ, ತು ಸ್ಯಾದೇಽವಧಾರಣೇ (ಅಮರ) ಓಂ ಧನ್ವಂತರಯೇ ನಮಃ ಧನ್ವಂತರೇಽಙ್ಞರುಚಿ ಧನ್ವಂತರೇಽರಿತರು ಧನ್ವಂಸ್ತರೀ ಭವ ಸುಧಾಭಾನ್ವಂತರಾವಸಥ, ಮನ್ವಂತರಾಧಿಕೃತ ತನ್ವಂತರೌಷಧ ನಿಧೇ । ದನ್ವಂತರಂಗಶುಗು ದನ್ವಂತ-ಮಾಜಿಷು ತನ್ವನ್ಮ​ಮಾಬ್ಧಿತನಯಾ ಸೂನ್ವಂತ​​ಕಾತ್ಮ ಹೃದತ​​ನ್ವಂತರಾವಯವ ತನ್ನಂತರಾರ್ತಿ ಜಲಧೌ । ತಾತ್ಪರ್ಯ: ಸೂರ್ಯನಂತೆ ಹೊಳೆಯುವ ತನುಕಾಂತಿಯುಳ್ಳವನೆ, ಶತ್ರುಗಳನ್ನು ನಿರ್ಮೂಲ ಮಾಡುವವನೂ, ಚಂದ್ರಮಂಡಲ ಮಧ್ಯವರ್ತಿಯೂ, ಪ್ರತಿ ಮನ್ವಂತರದಲ್ಲೂ ದುಷ್ಟರ ನಿಗ್ರಹ, ಶಿಷ್ಟರ ಅನುಗ್ರಹಕ್ಕಾಗಿ ಈ ನೆಲದಲ್ಲಿ ಅವತರಿಸುವವನೂ, ದೇವದಾನವರ ಸಂಗ್ರಾಮದಲ್ಲಿ ದಾನವರನ್ನು ಸಂಹರಿಸಿ ಅವರ ತಾಯಿಯಾದ ದನುವಿನ ಮನಸ್ಸಿಗೆ ವ್ಯಥೆಯುಂಟು ಮಾಡುವವನೂ, ತನ್ನ ಮಗ ಕಾಮನನ್ನು ಹಣೆಗಣ್ಣಿನಿಂದ ಬೂದಿಗೈದ ಮೃತ್ಯುಂಜಯನ ಮನಸ್ಸನ್ನೂ ಮರುಳುಗೊಳಿಸುವ ಅಂಗಲಾವಣ್ಯದಿಂದೊಪ್ಪುವ ಮೋಹಿನೀ ರೂಪ ತಳೆದವನೂ ಆದ ಹೇ ಧನ್ವಂತರಿಯೇ, ನನ್ನ ದುಃಖದ ಕಡಲನ್ನು ದಾಟಲು ನೀನೇ ಹರಿಗೋಲಾಗು, ಅಂಬಿಗನಾಗು. ಪ್ರತಿಪದಾರ್ಥ : ಅಂಗರುಚಿ = ದೇಹಕಾಂತಿಯಿಂದ, ಧನ್ವಂತರೇ ಸೂರ್ಯನಂತಿರುವವನೆ, ಅರಿತರು = ಶತ್ರುಗಳೆಂಬ ಮರಗಳಿಗೆ, ಧನ್ವನ್ =ಮರಳುಗಾಡಾದವನೆ, ಸುಧಾಭಾನು= ಚಂದ್ರಮಂಡಲದ, ಅಂತರಾವಸಥ= ಮಧ್ಯದಲ್ಲಿ ವಾಸವಾಗಿರುವವನೆ, ಮನ್ವಂತರ= ಸ್ವಾಯಂಭುವಾದಿ ಬೇರೆ ಬೇರೆ ಮನುಗಳ ಕಾಲಾವಧಿಯಲ್ಲಿ, ಅಧಿಕೃತ ತನ್ವಂತರ = ಅವತಾರ ಮಾಡುವವನೆ, ಔಷಧ ನಿಧೇ =ಔಷಧಗಳ ನಿಧಿಯೆ, ಆಜಿಷು =ಯುದ್ಧಗಳಲ್ಲಿ, ದನು =ದಾನವರ ತಾಯಿ ದನುವಿನ, ಅಂತರಂಗ =ಮನಸ್ಸಿನಲ್ಲಿ, ಶುಗುದನ್ವಂತಂ = ಅಳಲಿನ ಕಡಲನ್ನು, ವಿತನ್ವನ್= ನಿರ್ಮಿಸುವವನೆ, ಅಬ್ಧಿತನಯಾ =ಕಡಲಿನ ಮಗಳಾದ ಲಕ್ಶ್ಮಿಯ, ಸೂನು =ಮಗನಾದ ಕಾಮನ, ಅಂತಕ =ವೈರಿಯಾದ ರುದ್ರನಿಗೆ, ಆತ್ಮಹತ್ = ಮನೋಹರವಾಗಿ ಕಾಣುವಂತೆ, ಅತನು ಅಂತರಾವಯವ = ತುಂಬಿದ ಅಂಗ ಸೌಷ್ಠವದಿಂದ ಶೋಭಿಸುವ, ತನ್ವಂತರ = ಬೇರೆ (ನಾರಾಯಣೀ ಮೋಹಿನೀ) ರೂಪ ಧರಿಸಿದ, ಹೇ ಧನ್ವಂತರೇ = ಧನ್ವಂತರಿ ಪ​ರಮಾತ್ಮನೆ, ಮಮ= ನನ್ನ, ಆರ್ತಿ ಜಲದೌ =ದುಃಖ ಸಾಗರವನ್ನು ದಾಟಲು (ನೀನು) ತರೀಭವ =ತೆಪ್ಪವಾಗು. ಇದರಲ್ಲಿ ಧನ್ವಂತರಿ ಮತ್ತು ಮೋಹಿನೀ ರೂಪಗಳ ವರ್ಣನೆಯಿದೆ. ಧನ್ವಂತರಿ =ಸೂರ್ಯ, "ಧನ್ವಂತರಿರ್ಧೂಮಕೇತುರಾದಿದೇವೋಽದಿತೇಃಸುತಃ" ಸೂರ್ಯ ಅಷ್ಟೋತ್ತರ ಶತನಾಮ. ತರಿಃ =ದೋಣಿ, ಹರಿಗೋಲು, " ಸ್ತ್ರೀಯಾಂ ನೌಸ್ತರಣಿಸ್ತರಿಃ' (ಆಮ​ರ) ನಾರಾಯಣನ ಮೋಹಿನೀ ರೂಪವನ್ನು ನೋಡಿದ ಕಾಮಾರಿ ಶಿವನಿಗೂ ಕಾಮ ವಿಕಾರವಾಗಿ ಮೋಹಿನಿಯ ಸೆರಗನ್ನು ಹಿಡಿದ. ಆಗ ಶಾಸ್ತಾ ಹುಟ್ಟಿದನೆಂಬ ಪುರಾಣ ಕತೆ ಸೂಚಿತವಾಗಿದೆ. ಓಂ ನಾರಾಯಣ್ಯೈ ನಮಃ ಯಾ ಕ್ಷೀರವಾರ್ಧಿಮಥನಾಕ್ಷೀಣ ದರ್ಪದಿತಿ ಜಾಕ್ಟೋಭಿತಾಮರಗಣಾ। ಪೇಕ್ಷಾಪ್ತಯೇಽಜನಿ ವಲಕ್ಷಾಂಶು ಬಿಂಬ ಜಿದತೀಕ್ಷ್ಣಾಲಕಾವೃತ ಮುಖೀ ॥ ಸೂಕ್ಷ್ಮಾವಲಗ್ನ ವಸನಾಽಽಕ್ಷೇಪಕೃತ್ಕು ಚ ಕಟಾಕ್ಷಾಕ್ಷಮೀಕೃತ ಮನೋ ದೀಕ್ಷಾಸುರಾಹೃತಸುಧಾಽಕ್ಷಾಣಿ ನೋಽವತು ಸುರೂಕ್ಷೆೇಕ್ಷಣಾದ್ಧರಿತನುಃ ॥೫॥ ತಾತ್ಪರ್ಯ: ಹಾಲುಗಡಲನ್ನು ಕಡೆದ ಆಯಾಸದಿಂದಲೂ ದರ್ಪವಡಗದ ಆ ದೈತ್ಯರ ಕಾಟದಿಂದ ಪೀಡಿತರಾದ ದೇವತೆಗಳ ಇಷ್ಟಾರ್ಥವನ್ನು ಸಲಿಸಲಿಕ್ಕಾಗಿಯೇ ನಾರಾಯಣ ಸ್ತ್ರೀ ರೂಪದಿಂದ ಅವತರಿಸಿದ. ಸುಳಿಗುರುಳು ನೊಸಲಲ್ಲಿ ತೊನೆದಾಡುವ ಮತ್ತು ಚಂದ್ರಮುಖಿಯಾದ ಆ ನಾರಾಯಣಿಯು ಬಳುಕುವ ನಡುವಿನಲ್ಲಿ ತೆಳುವಾದ ಸೀರೆಯನ್ನುಟ್ಟುಕೊಂಡು, ದೇವತೆಗಳಿಗೆ ಅಮೃತವನ್ನು ಕೊಡಬಾರದೆಂಬ ದನುಜರ ಮನೋಗತವನ್ನು ಕುಚ-ಕಟಾಕ್ಷ ವಿಕ್ಷೇಪಗಳಿಂದ ತರ್ಜಿಸುತ್ತಾ ಬಂದು, ಅವರಿಗರಿವಿಲ್ಲದ ಹಾಗೆ ಅಮೃತವನ್ನು ಅಪಹರಿಸಿ ದೇವತೆಗಳಿಗೆ ಕೊಟ್ಟಳು. ಇಂಥ ಶ್ರೀಹರಿಯ ನಾರಾಯಣೀ ರೂಪವು ದುರ್ವಿಷಯಗಳ ವೀಕ್ಷಣದಿಂದುಂಟಾಗುವ ಪಾಪಗಳಿಂದ ನಮ್ಮ ಇಂದ್ರಿಯಗಳನ್ನು ಕಾಪಾಡಲಿ, ಪ್ರತಿಪದಾರ್ಥ : ಕ್ಷೀರವಾರ್ಧಿಮಥನ =ಹಾಲುಗಡಲನ್ನು ಕಡೆದರೂ, ಅಕ್ಷೀಣ ದರ್ಪ -ಕುಂದದ ದರ್ಪವುಳ್ಳ, ದಿತಿಜ= ದೈತ್ಯರಿಂದ, ಆಕ್ಷೋಭಿತ -ತುಂಬ ವ್ಯಥೆ ಗೊಳಗಾದ, ಅಮರ ಗಣ =ದೇವತೆಗಳ ಸಮುದಾಯದ, ಅಪೇಕ್ಷಾಪ್ತಯೇಇಷ್ಟಾರ್ಥ ಸಿದ್ಧಿಗಾಗಿ ಯಾ= ಯಾವ ನಾರಾಯಣಿಯು (ನಾರಾಯಣನ ಸ್ತ್ರೀರೂಪ) ಅಜನಿ = ಅವತರಿಸಿದಳೋ ಆಕೆ, ವಲಕ್ಷಾಂಶು ಬಿಂಬಜಿತ್ = ಚಂದ್ರಬಿಂಬಕ್ಕಿಂತಲೂ ಮಿಗಿಲಾದ ಕಾಂತಿಯುಳ್ಳ, ಅತೀಕ್ಷ್ಣಾಲಕಾವೃತಮುಖೀ= ಮೃದುವಾದ ಗುಂಗುರುಗೂದಲು ತುಂಬಿದ ಮೊಗವುಳ್ಳವಳು, ಸೂಕ್ಷ್ಮಾವಲಗ್ನವಸನಾ = ಬಳುಕುವ ನಡುವಿನಲ್ಲಿ ಪಾರದರ್ಶಕವಾದ ಸೀರೆಯುಟ್ಟಿದ್ದಾಳೆ, ಆಕ್ಷೇಪಕೃತ್ = ಮನಸ್ಸನ್ನು ಚಕಿತಗೊಳಿಸುವ, ಕುಚ-ಕಟಾಕ್ಷ =ಸ್ತನ ಮತ್ತು ಕುಡಿನೋಟಗಳಿಂದ, ಅಕ್ಷಮೀಕೃತ = ಅಸಮರ್ಥವಾಗಿ ಮಾಡಲ್ಪಟ್ಟ, ಮನೋದೀಕ್ಷಾ= ದೇವತೆಗಳಿಗೆ ಅಮೃತವೀಯಬಾರ ದೆಂಬ ನಿರ್ಧಾರದ, ಅಸುರಾಹೃತ ಸುಧಾ= ಅಸುರರಿಂದ ಅಮೃತವನ್ನೇ ಅಪಹರಿಸಿ (ದೇವತೆಗಳಿಗೆ ಕೊಟ್ಟಳು) ದ, ಸಾ =ಆ ಹರಿಯ ಮೋಹಿನೀ ರೂಪವು, ನಃ =ನಮ್ಮ ಆಕ್ಷಾಣಿ= ಇಂದ್ರಿಯಗಳನ್ನು, ಸುರೂಕ್ಷೇಕ್ಷಣಾತ್= ದುರ್ವಿಷಯಗಳ ದರ್ಶನ ಮಾತ್ರದಿಂದುಂಟಾಗುವ ಪಾಪಗಳಿಂದ, ಅವತು- ರಕ್ಷಿಸಲಿ. ನಾರಾಯಣನು ಮೋಹಿನೀರೂಪದಿಂದ ದೇವತೆಗಳಿಗೆ ಅಮೃತವನ್ನು ಊಡಿಸಿದ ಸಂದರ್ಭದ ಚಿತ್ರಣವಿದು. ವಲಕ್ಷ= ಬಿಳಿ ಬಣ್ಣ, ಅವಲಗ್ನ =ನಡು, ಮಧ್ಯ ಭಾಗ (ದೇಹದಲ್ಲಿ). ಶಿಕ್ಷಾದಿಯುಙ್ನಾಗಮದೀಕ್ಷಾ ಸುಲಕ್ಷಣ ಪರೀಕ್ಷಾ ಕ್ಷಮಾ ವಿಧಿಸತೀ ದಾಕ್ಷಾಯಣೀ ಕ್ರಮತಿ ಸಾಕ್ಷಾದ್ರಮಾಽಪಿ ನ ಯದಾಕ್ಷೇಪ ವೀಕ್ಷಣ ವಿಧೌ । ಪ್ರೇಕ್ಷಾಽಕ್ಷಿಲೋಭಕರ​ ಲಾಕ್ಷಾರಸೋಕ್ಷಿತ ಪದಾಕ್ಷೇಪ​ಲಕ್ಷಿತಧರಾ ಸಾಽಕ್ಷಾರಿತಾತ್ಮತನುಭೂಕ್ಷಾರಕಾರಿನಿಟಿಲಾಕ್ಷಾಽಕ್ಷಮಾನವತು ನಃ ತಾತ್ಪರ್ಯ : ಶಿಕ್ಷಾ ವ್ಯಾಕರಣಾದಿ ಸಕಲ ವೇದ ವೇದಾಂಗಗಳ ಲಕ್ಷ ಲಕ್ಷಣಜ್ಞೆ ಯೂ ವಿದ್ಯಾಧಿ ದೇವತೆಯೂ ಆದ ಸರಸ್ವತಿಯಾಗಲಿ, ದಕ್ಷ ಪ್ರಜಾಪತಿಯ ಮಗಳ ಸತಿಯೇ ಆಗಲಿ, ಅಥವಾ ಸಾಕ್ಷಾತ್ ಲಕ್ಷ್ಮಿ ಯೇ ಇರಲಿ, ವಿಲಾಸ ವೈಯಾರಗಳಲ್ಲಿ ಯಾರೂ ಈ ನಾರಾಯಣಿಯನ್ನು ಸರಿಗಟ್ಟಲಾರರು. ಈಕೆ ಪ್ರಜ್ಞಾವಂತೆಯೂ ಹೌದು. ಅರಗಿನ ಕೆಂಪಿನ ಲೇಪದಿಂದ ಕಂಗೊಳಿಸುವ ಹೆಜ್ಜೆಯನ್ನು ಇಟ್ಟಲ್ಲಿ, ಆ ಚಿಹ್ನೆಯಿಂದ ನೆಲವು ಪುಲಕಗೊಳ್ಳುವಂತಹ ಚೆಲುವೆ. ತನ್ನ ಮಗ ಮನ್ಮಥನನ್ನು ಸುಟ್ಟು ಬೂದಿಗೈದ ಆ ಹಣೆಗಣ್ಣ ಶಿವನ ಮನಸ್ಸನ್ನೂ ಕಾಮ ವಿಕಾರಕ್ಕೆ ಪಕ್ಕಾಗಿಸಿ, ಆತ ತನ್ನ ಅಕಾರ್ಯಕ್ಕಾಗಿ ತಾನೇ ನಾಚಿಕೊಳ್ಳುವಂತೆ ಮಾಡಿದ ಧೀರೆ, ಈ ನೀರೆ. ಆ ನಾರಾಯಣನ ಹೆಣ್ಣು ರೂಪದ ಮೋಹಿನಿಯು ದೀನರಾದ ನಮ್ಮನ್ನು ರಕ್ಷಿಸಲಿ. ಪ್ರತಿಪದಾರ್ಥ : ಶಿಕ್ಷಾದಿಯುಕ್ =ಶಿಕ್ಷಾ ವ್ಯಾಕರಣಾದಿಗಳಿಂದ ಕೂಡಿದ, ನಿಗಮ ದೀಕ್ಷಾ= ವೇದ ವೇದಾಂಗಾದಿಗಳ ಮತ್ತು ನಿಯಮಗಳ ಸುಲಕ್ಷಣ. ಪರೀಕ್ಷಾ ಕ್ಷಮಾ =ಲಕ್ಷಣಗಳ ಯುಕ್ತಾ ಯುಕ್ತ ಚಿಂತನೆಯಲ್ಲಿ ಸಮರ್ಥಳಾದ, ವಿಧಿ ಸತೀ= ಬ್ರಹ್ಮನ ಮಡದಿ, ಸರಸ್ವತಿಯಾಗಲಿ, ದಾಕ್ಷಾಯಣೀ =ದಕ್ಷನ ಮಗಳಾದ ಸತೀ ದೇವಿಯೇ ಇರಲಿ, ಸಾಕ್ಷಾತ್ ರಮಾಽಪಿ = ಸ್ವಯಂ ಲಕ್ಷ್ಮಿಯೇ ಇರಲಿ, ಯದಾ ಕ್ಷೇಪ ವೀಕ್ಷಣ ವಿಧೌ - ಯಾರ, ಚಿತ್ತ ಚಂಚಲಕರವಾದ ವೈಯಾರದದಲ್ಲಿ, ನ ಕ್ಷಮತಿ =ಸಮರ್ಥರಲ್ಲವೋ, ಆ ಪ್ರೇಕ್ಷಾ= ಉತ್ಕೃಷ್ಟ ಜ್ಞಾನ ಸಂಪನ್ನೆಯೂ ಅಕ್ಷಿಲೋಭಕರ= ಕಣ್ಣನ್ನು ಸೆರೆಹಿಡಿಯುವ, ಲಾಕ್ಷಾರಸೋಕ್ಷಿತ = ಅರಗಿನ ರಸ ಲೇಪಿಸಿದ, ಪದಾಕ್ಷೇಪ = ಹೆಜ್ಜೆಯ ವಿನ್ಯಾಸದಿಂದ, ಲಕ್ಷಿತಧರಾ = ಚಿಹ್ನತವಾದ ನೆಲವುಳ್ಳ, ಮತ್ತು ಆಕ್ಷಾರಿತ = ಮಾಡಬಾರದ ಕೆಲಸ ಮಾಡಿ ಲಜ್ಜಿತನನ್ನಾಗಿಸಿದ, ಆತ್ಮತನುಭೂಕ್ಷಾರಕಾರಿ = ತನ್ನ ಮಗನಾದ ಮನ್ಮಥನನ್ನು ಬೂದಿಗೈದ, ನಿಟಿಲಾಕ್ಷ = ತನ್ನ ಮಗನಾದ ಮನ್ಮಥನನ್ನು ಬೂದಿಗೈದ, ಶಿವನುಳ್ಳ, (ಸ್ಮರಹರನನ್ನೂ ಮೋಹಿಸುವ ರೂಪವುಳ್ಳ) ಸಾ =ಆ ನಾರಾಯಣಿಯು ಅಕ್ಷಮಾನ್ = ದೀನರಾದ, ನಃ = ನಮ್ಮನ್ನು, ಅವತು = ರಕ್ಷಿಸಲಿ. ನಾರಾಯಣನ ಮೋಹಿನೀರೂಪವನ್ನು ನೋಡಿದ ಶಿವನು ಕಾಮಾಸಕ್ತನಾಗಿ ಅವರಲ್ಲಿ ಶಾಸ್ತಾ ಹುಟ್ಟಿದನೆಂಬ ಕತೆ ಇಲ್ಲಿ ಸೂಚಿತವಾಗಿದೆ. ಆಕ್ಷಾರಿತ =ಲೋಕಾಪವಾದದಿಂದ ದೂಷಿತನಾದವನು [ಆಕ್ಷಾರೋಮೈಥುನಂ ಪ್ರತ್ಯಾಕ್ರೋಶೋ ಜಾತೋsಸ್ಯ ಇತಿವಾ] ಕ್ಷಾರ =ಬೂದಿ, "ಕ್ಷಾರೋ ರಕ್ಷಾ ಚ" (ಅಮರ). ಓಂ ವರಾಹಾಯ ನಮಃ ನೀಲಾಂಬುದಾಭ! ಶುಭಶೀಲಾದ್ರಿದೇಹಧರ! ಖೇಲಾಹೃತೋದಧಿಧುನೀ ಶೈಲಾದಿಯುಕ್ತ ನಿಖಿಲೇಲಾಕಟಾದ್ಯಸುರ ತೂಲಾಟವೀ ದಹನ ತೇ ! ಕೋಲಾಕೃತೇ! ಜಲಧಿಕಾಲಾಚಲಾವಯವ ನೀಲಾಬ್ಜದಂಷ್ಟ್ರ ಧರಣೀ ಲೀಲಾಸ್ಪದೋರುತಲ, ಮೂಲಾಶಿಯೋಗಿವರಜಾಲಾಭಿವಂದಿತ ! ನಮಃ ॥ ೭ ॥ ತಾತ್ಪರ್ಯ: ಮಳೆಮುಗಿಲಂತೆ ಎಣ್ಣೆಗಪ್ಪಿನ ಬಣ್ಣದವನೂ, ಭಾರೀಗಾತ್ರದ ದೇಹ ವುಳ್ಳವನೂ ಆದ ಆದಿ ವರಾಹ ರೂಪಿ ಪರಮಾತ್ಮನಿಗೆ ನನ್ನ ನಮನವು. ಹಿಂದೆ ಹಿರಣ್ಯಾಕ್ಷ​ನೆಂಬ ಮಹಾ ದೈತ್ಯನು, ಸಾಗರನದೀ ನದ ಬೆಟ್ಟಗಳಿಂದ ತುಂಬಿದ ಈ ಭೂಮಿಯನ್ನೆ ಚಾಪೆಯಂತೆ ಮಡಚಿಕೊಂಡು ಪಾತಾಳಕ್ಕೆ ಇಳಿದ. ಇವನೇ ಮೊದಲ ಅಸುರನಿರಬೇಕು. ಶ್ರೀಹರಿ ಹಂದಿಯ ರೂಪ ಧರಿಸಿ ಅವನ ಬೆನ್ನಟ್ಟಿ ಹೋಗಿ ಆ ಅಸುರನನ್ನು ಸಂಹರಿಸಿ ತನ್ನ ಮಡದಿ ಭೂದೇವಿಯನ್ನು ರಕ್ಷಿಸಿದ. ಆಗ ಸಮುದ್ರದ ಅಗಾಧ ಜಲದಲ್ಲಿ ವರಾಹನು ಆಟವಾಡುತ್ತಿದ್ದಾಗ ಈ ಭೂಮಿ ಅವನ ದಾಡೆಯಲ್ಲಿ ಅರಳಿದ ನೀಲ ಕಮಲದಂತೆ ಶೋಭಿಸುತ್ತಿತ್ತು, ಬಳಿಕ ಆಕೆಯನ್ನು ತನ್ನ ತೊಡೆಯ ಮೇಲಿರಿಸಿಕೊಂಡು ಭೂವರಾಹ ಸ್ವಾಮಿಯೆನಿಸಿದ, ಕಂದಮೂಲಗಳಿಂದಲೇ ಬದುಕುತ್ತಿದ್ದ ಸಂಯಮಿಗಳಾದ ಮುನಿಗಳು ವರಾಹ ಸ್ವಾಮಿಯನ್ನು ಸ್ತುತಿಸುತ್ತಿದ್ದರು. ಇಂತಹ ವರಾಹರೂಪಿ ಪರಮಾತ್ಮನಿಗೆ ನಮಸ್ಕಾರಗಳು. ಪ್ರತಿ ಪದಾರ್ಥ: ನೀಲಾಂಬುದಾಭ= ಕಾರ್ಮೋಡದಂಥ ತನುಕಾಂತಿಯುಳ್ಳ, ಶುಭಶೀಲ = ಮಂಗಲಕರನಾದ, ಅದ್ರಿದೇಹಧರ = ಪರ್ವತ ಗಾತ್ರದ ಶರೀರವುಳ್ಳ ವರಾಹನೆ! ಖೇಲಾಹೃತ ಉದಧಿಧುನೀ ಶೈಲಾದಿಯುಕ್ತ ನಿಖಿಲ ಏಲಾಕಟ = ಸಮುದ್ರ ನದಿ ಪರ್ವತಗಳು ಇಡಿ ಕಿರಿದ ಈ ಭೂಮಿಯನ್ನೆ ಚಾಪೆಯಂತೆ ಮಡಚಿಕೊಂಡು ಲೀಲಾಮಾತ್ರದಿಂದ ಅಪಹರಿಸಿಕೊಂಡು ಹೋದ, ಆದಿ-ಅಸುರ = ಮೊದಲ ರಕ್ಕಸನಾದ ಹಿರಣ್ಯಾಕ್ಷನೆಂಬ, ತೂಲಾಟವೀ -ಹತ್ತಿಯ ಕಾಡಿಗೆ, ದಹನ = ಬೆಂಕಿಯಂತಿರುವವನೆ (ಹಿರಣ್ಯಾಕ್ಷನನ್ನು ಸಂಹರಿಸಿದವನೆ!) ಜಲಧಿಕಾಲ= ಸಮುದ್ರವನ್ನ ಆಡುಂಬೊಲವಾಗಿ ಆರಿಸಿಕೊಂಡವನೆ, ಅಚಲಾವಯವ ನೀಲಾಬ್ಬದಂಷ್ಟ್ರ =ಭೂಭಾಗವನ್ನೆ ನೀಲ ಕಮಲದಂತೆ ತನ್ನ ದಾಡೆಯಲ್ಲಿರಿಸಿಕೊಂಡವನೆ! ಧರಣೀಲೀಲಾಸ್ಪದೋರುತಲ =ಭೂ ದೇವಿಯ ವಿಹಾರಕ್ಕೆ ಆಸ್ಪದವಾದ ತೊಡೆಯುಳ್ಳವನೆ! ಮೂಲಾಶಿಯೋಗಿವರಜಾಲ =ಕಂದಮೂಲಗಳನ್ನೆ ತಿಂದು ಬದುಕುವ ಸಂಯಮಿಗಳ ಗಡಣದಿಂದ, ಅಭಿವಂದಿತ = ನಮ ಸ್ಮರಿಸಲ್ಪಟ್ಟ, ಕೋಲಾಕೃತೇ =ವರಾಹರೂಪನೆ! ನಮಃ= ನಿನಗೆ ನನ್ನ ವಂದನೆಗಳು. ಹಿರಣ್ಯಾಕ್ಷನನ್ನು ಸಂಹರಿಸಿದ ವರಾಹನ ಕತೆ ಇಲ್ಲಿ ಸೂಚಿತವಾಗಿದೆ. ಕಾಲಃ -ಕಲಯತೀತಿ ಕಾಲಃ (ಜಲಧಿಕಾಲ= ಸಮುದ್ರದಂತೆ ನೀಲ ವರ್ಣನೆ! ಎಂದೂ ಆಗಬಹುದು). ಭೂಮಿಯನ್ನು ಸಮುದ್ರದಲ್ಲಿ ಮುಳುಗಿಸಿ ಹಿಡಿದಾಗ ಆ ಹಿರಣ್ಯಾಕ್ಷನನ್ನು ವರಾಹರೂಪಿ ಪರಮಾತ್ಮ ಸಂಹರಿಸಿದನೆಂದು ಭಾಗವತ. ಓಂ ಶ್ರೀ ನೃಸಿಂಹಾಯ ನಮಃ ದಂಭೋಲಿ ತೀಕ್ಷ್ಣನಖ ಸಂಭೇದಿತೇಂದ್ರರಿಪು' ಕುಂಭೀಂದ್ರ ಪಾಹಿ ಕೃಪಯಾ ಸ್ತಂಭಾರ್ಭಕಾಸಹನ ಡಿಂಭಾಯ ದತ್ತವರ! ಗಂಭೀರನಾದ! ನೃಹರೇ! ಅಂಭೋಧಿಜಾನುಸರಣಾಂಭೋಜಭೂ ಪವನ ಕುಂಭೀನಸೇಶ ಖಗರಾಟ್ ಕುಂಭೀಂದ್ರಕೃತ್ತಿಧರ ಜಂಭಾರಿ ಷಣ್ಮುಖ ಮುಖಾಂಭೋರುಹಾಭಿನುತ ಮಾಮ್ !! ೮ ॥ ತಾತ್ಪರ್ಯ: ಹಿರಣ್ಯ ಕಶಿಪು ತನ್ನ ಮಗ ಪ್ರಹ್ಲಾದನಿಗೆ ಚಿತ್ರಹಿಂಸೆ ಕೊಡು ತ್ತಿರುವಾಗ ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಶ್ರೀಹರಿ ನರಸಿಂಹ ರೂಪದಿಂದ ಕಂಬ ವೊಡೆದು ಕಾಣಿಸಿಕೊಂಡು, ವಜ್ರದಷ್ಟು ದೃಢವೂ ಹರಿತವೂ ಆದ ತನ್ನ ಉಗುರು ಗಳಿಂದ ಆ ದೈತ್ಯನ ಹೊಟ್ಟೆಯನ್ನು ಸೀಳಿದನು. ದುಷ್ಟರಲ್ಲಿ ಎಂದೂ ಸಹನೆ ತೋರದೆ ಸಿಂಹನಾದ ಗೈಯುತ್ತ, ಉಗ್ರರೂಪಿಯಾಗಿ ಕಾಣಿಸಿದ ಆ ನರಸಿಂಹ ಮಗು ಪ್ರಹ್ಲಾದನಿಗೆ ಕರುಣೆದೋರಿ ವರವನ್ನೂ ದಯಪಾಲಿಸಿದ. ಅವನ ಘೋರ ರೂಪವನ್ನು ನೋಡಲಾಗದೆ ಬ್ರಹ್ಮ, ವಾಯು, ಶೇಷ, ಗರುಡ, ಶಿವ, ಇಂದ್ರ, ಷಣ್ಮುಖ ಮೊದಲಾದ ದೇವತೆಗಳು ಅವನ ಉಗ್ರತೆಯನ್ನು ಶಾಂತಗೊಳಿಸಲು ಲಕ್ಷ್ಮೀದೇವಿಯನ್ನು ಮುಂದುಮಾಡಿಕೊಂಡು ಬಂದು ಸ್ತುತಿಸಿದರು. ಆಗ ಪ್ರಸನ್ನನಾದ ಆ ನರಸಿಂಹನು ನನ್ನನ್ನು ದಯೆಯಿಂದ ರಕ್ಷಿಸಲಿ. ಪ್ರತಿಪದಾರ್ಥ : ದಂಭೋಲಿ ತೀಕ್ಷ್ಯನಖ = ವಜ್ರದಂತೆ ಹರಿತವಾದ ಉಗು ರುಗಳಿಂದ, ಸಂಭೇದಿತ = ಸೀಳಲ್ಪಟ್ಟ, ಇಂದ್ರರಿಪು ಕುಂಭೀಂದ್ರ= ದೈತ್ಯ ಹಿರಣ್ಯ ಕಶಿಪು ಎಂಬ ಮದಗಜವುಳ್ಳವನೆ! ಸ್ತಂಭಾರ್ಭಕ =ಕಂಬದಿಂದೊಡೆದು ಮೂಡಿದವನೆ (ಆದ್ದರಿಂದ ಕಂಬದ ಮಗುವೆ) ಅಸಹನ= (ದುಷ್ಟ ದೈತ್ಯರಲ್ಲಿ) ಕ್ಷಮಾ ರಹಿತನೆ, ಡಿಂಭಾಯ =ಮಗು ಪ್ರಹ್ಲಾದನಿಗೆ, ದತ್ತವರ = ವರವಿತ್ತವನೆ, ಗಂಭೀರನಾದ =ತುಂಬುದನಿಯುಳ್ಳವನೆ, ಅಂಭೋಧಿಜಾನುಸರಣ = ಲಕ್ಷ್ಮಿ ದೇವಿಯಿಂದ ಅನುಸರಿಸಲ್ಪಟ್ಟ ವನೆ ! ಅಂಭೋಜ ಭೂ = ಪದ್ಮಯೋನಿಯಾದ ಬ್ರಹ್ಮ, ಪವನ =ವಾಯುದೇವರು, ಕುಂಭೀನಸೇಶ = ಸರ್ಪರಾಜನಾದ ಶೇಷ, ಖಗರಾಟ್ = ಹಕ್ಕಿಗಲೊಡೆಯ ಗರುಡ, ಕುಂಭೀಂದ್ರ ಕೃತ್ತಿಧರ= ಗಜಚರ್ಮಧರನಾದ ಶಂಕರ, ಜಂಭಾರಿ= ಇಂದ್ರ​, ಷಣ್ಮುಖ ಆರು ಮೊಗನಾದ ಕಾರ್ತಿಕೇಯ ಮೊದಲಾದವರ, ಮುಖಾಂಭೋರುಹಾಭಿನುತ = ಮುಖ ಕಮಲಗಳಿಂದ ಸ್ತುತನಾದ, ನೃಹರೇ- ನರಸಿಂಹನೇ, ಕೃಪಯಾ =ದಯೆಯಿಂದ, ಮಾಂ= ನನ್ನನ್ನು, ಪಾಹಿ = ರಕ್ಷಿಸು. ಓಂ ಶ್ರೀ ವಾಮನಾಯ ನಮಃ ಪಿಂಗಾಕ್ಷವಿಕ್ರಮ ತುರಂಗಾದಿಸೈನ್ಯಚತುರಂಗ್ಗಾವಲಿಪ್ತದನುಜಾ- ಸಾಂಗಾಧ್ವ​ರಸ್ಥ ಬಲಿ ಸಾಂಗಾವ​ಪಾತಹೃಷ್ಟಿತಾಂಗಾಮರಾಲಿನುತ ತೇ । ಶೃಂಗಾರಪಾದನಖ ತುಂಗಾಗ್ರ ಭಿನ್ನ ಕನಕಾಂಗಾಂಡಪಾತಿ ತಟನೀ- ತುಂಗಾತಿಮಂಗಲ ತರಂಗಾಭಿಭೂತ ಭಜಕಾಂಗಾಘ! ವಾಮನ! ನಮಃ ॥ ೯ ॥ ತಾ: ಮೊದಲು ಅಸುರರೇ ದೇವತೆಗಳ ಸ್ಥಾನವನ್ನಾಕ್ರಮಿಸಿ ಪೂರ್ವ ದೇವಾ ಎಂದು ಖ್ಯಾತರಾಗಿದ್ದರು. ತಮ್ಮ ಬಳಿ ಸಿಂಹಸಾಹಸವುಳ್ಳ ಕುದುರೆ, ಆನೆ ಮುಂತಾದ ಚತುರಂಗ ಬಲವಿತ್ತು ಎಂಬ ಗರ್ವವೂ ಅವರಿಗಿತ್ತು. ಆಗ ಅಸುರರಾಜನೆನಿಸಿದ ಬಲಿ ಚಕ್ರವರ್ತಿ ಇಂದ್ರಪದವಿಯನ್ನು ಬಯಸಿ ಯಾಗ ಮಾಡಿದ. ಬೇಡಿದವರಿಗೆ ಅವರು ಕೇಳಿದ ವಸ್ತುವನ್ನು ನೀಡದಿದ್ದರೆ ಯಾಗವು ಅಪೂರ್ಣವಾಗುವ ಸಂಭವವಿತ್ತು. ಆಗ ಶ್ರೀಹರಿ ವಟುವೇಷದ ವಾಮನನಾಗಿ ಬಂದು ಮೂರಡಿ ನೆಲವನ್ನು ಬೇಡಿದ. ಯಾಗ ಅಪೂರ್ಣವೆನಿಸುವುದರಿಂದ ಬಲಿ ಅದನ್ನು ದಾನಮಾಡಿದ. ವಾಮನ ಒಂದು ಹೆಜ್ಜೆಯಿಂದ ಭೂಮಿಯನ್ನೆಲ್ಲ ಆಕ್ರಮಿಸಿ, ಮತ್ತೊಂದರಿಂದ ಬಾನನ್ನು ಮುಚ್ಚಿದ. ಮೂರನೇ ಹೆಜ್ಜೆಯನ್ನು ಬಲಿಯ ಅಪೇಕ್ಷೆಯಂತೆ ಆತನ ತಲೆಯ ಮೇಲಿಟ್ಟು ಅವನನ್ನು ಪಾತಾಲಕ್ಕೆ ತಳ್ಳಿದ. " ಆಗ ದೇವತೆಗಳು ಹರ್ಷೋದ್ಗಾರ ಮಾಡಿದರು. ಎರಡನೇ ಪಾದ ಆಕಾಶಕ್ಕೆ ನೆಗೆದು ಬ್ರಹ್ಮಾಂಡ ಕಟಾಹವನ್ನು ಭೇದಿಸಲು, ಅದರಾಚೆಯಿಂದ ದೇವಗಂಗೆ ಕೆಳಗಿಳಿಯತೊಡಗಿದಳು. ಹೇಗೆ ಗಂಗೆ ಹರಿಪಾದೋದ್ಭವೆಯಾಗಿ ಮೂರು ದಾರಿಯಲ್ಲಿ ಮೂರು ಲೋಕದಲ್ಲಿ ಮಂದಾಕಿನೀ (ದೇವಲೋಕ) ಭಾಗೀರಥೀ (ಭೂ ಲೋಕ) ಭೋಗವತೀ (ಪಾತಾಳ) ಎಂಬ ಹೆಸರಿನಿಂದ ಹರಿದು ಲೋಕಪಾವನೆಯಾದಳು. ಈ ಗಂಗೆಯಲ್ಲಿ ಮಿಂದ ಭಕ್ತರು ತಮ್ಮ ಪಾಪಗಳನ್ನೆಲ್ಲ ತೊಳೆದುಕೊಳ್ಳುವಂತೆ ಮಾಡಿದ ವಾಮನಾವತಾರ ಶ್ರೀಹರಿಯೇ ನಿನಗೆ ನನ್ನ ನಮನವು. ಪ್ರ. ಪ: ಪಿಂಗಾಕ್ಷ ವಿಕ್ರಮ = ಸಿಂಹದಂತೆ ಬಲಶಾಲಿಗಳಾದ, ತುರಂಗಾದಿ ಸೈನ್ಯ ಚತುರಂಗ=ಅನೆ, ಕುದುರೆ, ರಥ, ಪದಾತಿಗಳೆಂಬ ಚತುರಂಗ ಬಲದಿಂದ, ಅವಲಿಪ್ತ ದನುಜ= ಉದ್ದೃಪ್ತರಾದ ದಾನವರ, ಅಸಾಂಗಾಧ್ವರಸ್ಥ = ಅಪೂರ್ಣವೆನಿ ಸುವ ಯಜ್ಞದಲ್ಲಿ ಯಜಮಾನನಾಗಿ ಕುಳಿತ, ಬಲಿ=ಬಲೀಂದ್ರನನ್ನು, ಸಾಂಗಾವ ಪಾತ =ಸದೇಹವಾಗಿ ಪಾತಾಳಕ್ಕೆ ತಳ್ಳಿದ್ದರಿಂದ, ಹೃಷಿತಾಂಗ = ಪುಲಕಿತರಾದ, ಅಮರಾಲಿ=ದೇವತೆಗಳ ಗಡಣದಿಂದ, ನುತ=ಹೊಗಳಲ್ಪಟ್ಟವನೆ!, ಶೃಂಗಾರಪಾದನಖ= ಸುಂದರವಾದ ಕಾಲುಬೆರಳಿನ ಉಗುರಿನ, ತುಂಗಾಗ್ರ = ಉನ್ನತವಾದ ತುದಿಯಿಂದ, ಭಿನ್ನ=ಒಡೆಯಲ್ಪಟ್ಟ, ಕನಕಾಂಗಾಂಡ=ಹೇಮಮಯ ಬ್ರಹ್ಮಾಂಡದಿಂದ, ಪಾತಿ=ಸುರಿಯುವ, ತಟಿನೀ=ದೇವಗಂಗೆಯ, ತುಂಗಾತಿ ಮಂಗಲ ತರಂಗ = ಉನ್ನತವೂ ಪಾವನವೂ ಆದ ಪ್ರವಾಹದಿಂದ, ಅಭಿಭೂತ = ನಾಶಮಾಡಲ್ಪಟ್ಟ, ಭಜಕಾಂಗಾಘ=ಭಕ್ತರ ಬಾಹ್ಯಾಭ್ಯಂತರಾಂಗಗಳ ಪಾಪವುಳ್ಳವನೆ, ವಾಮನ = ವಟುರೂಪಿ ವಾಮನನೆ, ತೇ =ನಿನಗೆ, ನಮಃ =ನಮಸ್ಕಾರವು. ಧ್ಯಾನಾರ್ಹ ವಾಮನತನೋ ನಾಥ ಪಾಹಿ ಯಜಮಾನಾಸುರೇಶ ವಸುಧಾ, ದಾನಾಯ ಯಾಚನಿಕ ಲೀನಾರ್ಥವಾಗ್ವಶಿತ (ನಾನಾಸದಸ್ಯದನುಜ । ಮೀನಾಂಕ​ ನಿರ್ಮಲನಿಶಾನಾಥಕೋಟಿ ಲಸಮಾನಾತ್ಮ ಮೌಂಜಿಗುಣ ಕೌ ಪೀನಾಕೃಸೂತ್ರ ಪದ(ಯ)ಗಾನಾತಪತ್ರಕರಕಾನಮ್ಯದಂಡವರಭೃತ್ ॥ ೧೦ ॥ ತಾ. ಯಾಗದಲ್ಲಿ ದೀಕ್ಷಿತನಾಗಿ ಕುಳಿತಿದ್ದ ಬಲಿಯಿಂದ ಮೂರು ಹೆಜ್ಜೆಯಷ್ಟು ನೆಲವನ್ನು ಬೇಡಲು ಗಿಡ್ಡ ಹಾರುವನಾಗಿ ಬಂದೆಯಲ್ಲ, ಧ್ಯಾನಾರ್ಹನಾದ ಸ್ವಾಮಿ ! ನಿನ್ನ ರೋಚಕವಾದ ಮಾತುಗಳಿಂದ ಅಲ್ಲಿದ್ದ ಅಸುರ ಋತ್ವಿಜರನ್ನು ವಶೀಕರಿಸಿಕೊಂಡವನೆ, ಕೋಟಿ ಮನ್ಮಥರಂತೆ ಕಮನೀಯವಾಗಿಯೂ ಕಲಂಕರಹಿತವಾದ ಸಾವಿರಾರು ಚಂದ್ರರಂತೆ ಹೊಳೆಯುವಂಥದೂ ಆಗಿರುವ ನಿನ್ನ ಮೈಯಲ್ಲಿ ಮೇಖಲೆ, ಕೌಪೀನ, ಯಜ್ಯೋಪವೀತ, ಕೊಡೆ ಇವನ್ನು ಧರಿಸಿ, ತುಸು ಬಾಗಿದ ದಂಡವನ್ನೂ ಕಮಂಡಲುವನ್ನೂ ಹಿಡಿದುಕೊಂಡು ಬಾಯಲ್ಲಿ ಋಗ್ವೆೇದ​ ಪದಪಾಠವನ್ನು ಪಠಿಸುತ್ತಾ ಬಂದ ನಾಮನರೂಪನೆ ! ರಕ್ಷಿಸು. ಪ್ರ. ಪ: ಯಜಮಾನ = ಯಾಗದಲ್ಲಿ ದೀಕ್ಷಿತನಾಗಿರುವ, ಅಸುರೇಶ = ರಾಕ್ಷಸ ರಾಜನಾದ ಬಲಿಯಿಂದ, ವಸುಧಾ =ಭೂಮಿಯನ್ನು, ಅದಾನಾಯ = ಪಡೆಯಲು, ಯಾಚನಿಕ = ಯಾಚಕನಾಗಿ ಬಂದ, ಧ್ಯಾನಾರ್ಹ ನಾಥ = ಧ್ಯಾನಯೋಗ್ಯನಾದ ಸ್ವಾಮಿ ! ಲೀನಾರ್ಥವಾಕ್ = ಗೂಢಾರ್ಥದ ಮಾತುಗಳಿಂದ, ವಶಿತ ನಾನಾಸದಸ್ಯ ದನುಜ= ಎಲ್ಲಾ ಅಸುರ ಋತ್ವಿಜರನ್ನು ವಶೀಕರಿಸಿಕೊಂಡವನೆ, ಮೀನಾಂಕ ನಿರ್ಮಲ =ನಿಶಾನಾಥಕೋಟಿ =ಕೋಟಿ ಮನ್ಮಥರಂತೆಯೂ, ನಿಷ್ಕಲಂಕವಾದ ಚಂದ್ರಬಿಂಬ ಕೋಡಿಯಂತೆಯೂ, ಲಸಮಾನಾತ್ಮ =ಶೋಭಿಸುವ ತನ್ನ ದೇಹದಲ್ಲಿ, ಮೌಂಜಿಗುಣ ಮೇಖಲೆ, ಕೌಪೀನ =ಕಚ್ಛೆ, ಅಚ್ಚಸೂತ್ರ (ಆತ್ಮಸೂತ್ರ, ಪಾಠಾಂತರ)= ಯಜ್ಞೋಪವೀತ, ಪದಗಾನ =ಪದ ಪಾಠ ಗಾನ, ಆತಪತ್ರ =ಕೊಡೆ (ಛತ್ರಿ), ಕರಕ =ಕಮಂಡಲು, ಆನಮ್ಯದಂಡವರ =ತುಸು ಬಾಗಿದ ದಂಡ ಇವನ್ನು, ಭೃತ್ =ಧರಿಸಿದ, ವಾಮನತನೋ -ಗಿಡ್ಡ ಹಾರುವನ ರೂಪವುಳ್ಳ ವಾಮನ ಸ್ವಾಮಿ ! ಪಾಹಿ-ರಕ್ಷಿಸು. ಇದರಲ್ಲಿ ವಾಮನಮೂರ್ತಿಯ ಸ್ವಾಭಾವಿಕವಾದ ವರ್ಣನೆಯಿದೆ. ಅಚ್ಛಸೂತ್ರ =ಆತ್ಮಸೂತ್ರ (ಪಾಠಾಂತರ) ಪದಗಾನ= ಪದಯಾನ (ಪಾಠಾಂತರ) ಪದಯಾನ= ಕಾಲ್ನಡಿಗೆ (ಪಾ) ಓಂ ಪರಶುರಾಮಾಯ ನಮಃ ಧೈರ್ಯಾಂಬುಧೇ ಪರಶುಚರ್ಯಾಧಿಕೃತ್ತ​ ಖಲವರ್ಯಾವನೀಶ್ವರ ಮಹಾ ಶೌರ್ಯಾಭಿಭೂತ ಕೃತವೀರ್ಯಾತ್ಮ​ ಜಾತ ಭುಜವೀರ್ಯಾವಲೇಪನಿಕರ । ಭಾರ್ಯಾಪರಾಧ ಕುಪಿತಾರ್ಯಾಜ್ಞಯಾ ಗಲಿತನಾರ್ಯಾತ್ಮಸೂಗಲತರೋ ಕಾರ್ಯಾಪರಾಧಮತ್ತ​ವಿಚಾರ್ಯಾರ್ಯಮೌಘಜಯಿವೀರ್ಯಾಮಿತಾ ಮಯಿ ದಯಾ ॥ ೧೧ ॥ ತಾ: ಜಮದಗ್ನಿಯನ್ನು ಧಿಕ್ಕರಿಸಿ ಅವನ ಕಾಮಧೇನುವನ್ನು ಬಲಾತ್ಕಾರ ದಿಂದ ಕಾರ್ತವೀರ್ಯಾರ್ಜುನ (ಕೃತವೀರ್ಯನ ಮಗ) ಕೊಂಡುಹೋಗಿದ್ದ. ಇದನ್ನು ತಿಳಿದ ಪರಶುರಾಮ (ಜಮದಗ್ನಿಯ ಮಗ) ಆ ಕಾರ್ತವೀರ್ಯನ ಸಾವಿರ ತೋಳುಗಳನ್ನು ಕೊಡಲಿಯಿಂದ ಕತ್ತರಿಸಿದ್ದಲ್ಲದೆ, ಇಪ್ಪತ್ತೊಂದು ಬಾರಿ ಭೂಮಿಯಲ್ಲಿ ತಿರುಗಿದುಷ್ಟ ರಾಜರ ಪಿಳ್ಳೆಯೊಂದೂ ಉಳಿಯದಂತೆ ನಿರ್ಮೂಲ ಮಾಡಿದ ಮಹಾಸಾಹಸಿ. ರೇಣುಕ ನೀರಿಗೆ ಹೋದಾಗ ಗಂಧರ್ವರಾಜನ ವಿಹಾರವನ್ನು ನೋಡುತ್ತಾ ನಿಂತು ತಳುವಿದಳೆಂದು ಕುಪಿತನಾದ ತಂದೆ ಜಮದಗ್ನಿ ರೇಣುಕೆಯ ಕತ್ತನ್ನು ಕತ್ತರಿಸೆಂದು ಆದೇಶವಿತ್ತೊಡನೆ, ತನ್ನ ತಾಯಿಯೆನ್ನದೆ, ಕೊನೆಗೆ ಸ್ತ್ರೀಹತ್ಯೆ ಪಾಪವೆಂದೂ ಪರಿಗಣಿಸದೆ ಆಕೆಯ ಕತ್ತನ್ನು ಮರದ ಕೊಂಬೆಯಂತೆ ಕತ್ತರಿಸಿಬಿಟ್ಟು, ಮತ್ತೆ ತಂದೆಯ ವರದಿಂದಲೇ ಬದುಕಿಸಿದ ಮಹಾತ್ಮ, ಕೋಟಿ ಸೂರ್ಯರ​ ಪ್ರಖರತೆಗಿಂತ ಮಿಗಿಲಾದ ಪರಾಕ್ರಮಶಾಲಿ ಪರಶುರಾಮನೆ! ನನ್ನ ಅಪರಾಧವನ್ನು ಲೆಕ್ಕಿಸದೆ ನನ್ನಲ್ಲಿ ಅಸೀಮವಾದ ದಯೆಯನ್ನು ತೋರು. ಪ್ರ.ಪ: ಧೈರ್ಯಾಂಬುಧೇ =ಧೈರ್ಯದ ಸಾಗರನೆ, ಪರಶುಚರ್ಯಾ =ಕೊಡ ಲಿಯ ಹೊಡೆತದಿಂದ, ಅಧಿಕೃತ =ಖಲವರ್ಯಾವನೀಶ್ವರ= ದುಷ್ಟ ಕ್ಷತ್ರಿಯರನ್ನು ತುಂಡರಿಸಿದವನೆ, ಮಹಾಶೌರ್ಯ =ತುಂಬು ಎದೆಗಾರಿಕೆಯಿಂದ, ಅಭಿಭೂತ ಕೃತವೀರ್ಯಾತ್ಮಜಾತ ಭುಜವೀರ್ಯಾವಲೇಪ ನಿಕರ = ಕೃತವೀರ್ಯನ ಮಗ ಕಾರ್ತವೀರ್ಯನ ಭುಜಬಲದ ಮದವನ್ನು ನಿವಾರಿಸಿದವನೆ, ಭಾರ್ಯಾಪರಾಧ ಕುಪಿತ= ಹೆಂಡತಿಯಾದ ರೇಣುಕೆಯ ತಪ್ಪಿನಿಂದ ಕ್ರುದ್ಧನಾದ, ಆರ್ಯಾಜ್ಞ ಯಾ= ತಂದೆಯಾದ ಜಮದಗ್ನಿಯ ಅಪ್ಪಣೆಯ ಮೇರೆಗೆ, ಗಲಲಿತನಾರ್ಯಾತ್ಮಸೂಗಲತರೋ = ಒಬ್ಬ ಹೆಂಗಸೆಂದು ಬಗೆಯದೆ, ಕೊನೆಗೆ ತನ್ನ ತಾಯಿಯೆಂದೂ ಅಳುಕದೆ ರೇಣುಕೆಯ ಕತ್ತನ್ನು ಮರವನ್ನು ಕಡಿದಂತೆ ಕತ್ತರಿಸಿದವನೆ, ಅರ್ಯಮೌಘಜಯಿ ವೀರ್ಯ ಸಾವಿರಾರು ಸೂರ್ಯರ ಪ್ರಖರತೆಯನ್ನು ಮೀರುವ ಪರಾಕ್ರಮಶಾಲಿಯೆ, ಪರಶುರಾಮನೆ! ಅಪರಾಧಂ =(ನನ್ನ) ತಪ್ಪನ್ನು, ಅವಿಚಾರ್ಯ =ಪರಿಗಣಿಸದೆ, ಮಯಿ =ನನ್ನಲ್ಲಿ, ಅಮಿತಾ =ಮೇರೆಯಿಲ್ಲದ, ದಯಾ =ಕೃಪೆಯು, ಕಾರ್ಯಾ= ಮಾಡತಕ್ಕದು. tr 11 ಓಂ ರಾಮಾಯ ನಮಃ ಶ್ರೀರಾಮ ಲಕ್ಷ್ಮಣಶುಕಾರಾಮಭೂರವತು ಗೌರಾಮಲಾಮಿತ ಮಹೋ- ಹಾರಾಮರಸ್ತುತಯಶೋರಾಮಕಾಂತಿ ಸುತನೋ ರಾಮಲಬ್ಬ ಕಲಹ ! ಸ್ವಾರಾಮವರ್ಯ ರಿಪುವೀರಾಮಯರ್ಧಿಕರ ಚೀರಾಮಲಾವೃತಕಟೇ ಸ್ವಾರಾಮ ದರ್ಶನಜಮಾರಾಮಯಾಗತ ಸುಘೋರಾಮನೋರಥಹರ ॥ ೧೨ ॥ ತಾ: ಶುಭ್ರ, ನಿರ್ಮಲ, ಅಮಿತ ಕಾಂತಿಯುಕ್ತವಾದ ಮುತ್ತಿನ ಸರವನ್ನು ಧರಿಸಿದ, ದೇವತೆಗಳಿಂದ ಕೊಂಡಾಡಲ್ಪಟ್ಟ, ನಯನಾಸೇಚನಕವಾದ ತನುಕಾಂತಿಯುಳ್ಳ ಶ್ರೀ ರಾಮಚಂದ್ರ! ಲಕ್ಷಣ ಎಂಬ ಗಿಳಿಗೆ ಉಪವನವಾಗಿರುವವನೆ, ಪರಶುರಾಮನೊಡನೆ ಸೆಣಸಿ ಜಯಶೀಲನಾದವನೆ, ದೇವೇಂದ್ರನ ಶತ್ರುಗಳಾದ ದೈತ್ಯರಿಗೆ ರೋಗದಾಯಕನೆ, ನಿರ್ಮಲವಾದ ನಾರುಮಡಿಯನ್ನು ಸೊಂಟದಲ್ಲಿ ಧರಿಸಿದವನೆ, ಪಂಚವಟಿಯ ಉಪವನದಲ್ಲಿ ನಿನ್ನ ದರ್ಶನಮಾತ್ರದಿಂದ ಕಾಮಜ್ವರಪೀಡಿತೆಯಾಗಿ ವೈಯಾರದಿಂದ ಎದುರುಬಂದ ಘೋರ ರಕ್ಕಸಿ ಶೂರ್ಪಣಖೆಯ ಮನೋರಥವನ್ನು ಭಂಗಗೊಳಿಸಿದ ಸ್ವಾಮಿ ರಾಮಚಂದ್ರ ! ರಕ್ಷಿಸು. ಪ .ಪ: ಗೌರಾಮಲಾಮಿತಮಹೋಹಾರ = ಶುಭ್ರವೂ, ನಿರ್ಮಲವೂ, ಉಜ್ವ ಲವೂ ಆದ ಮುತ್ತಿನ ಸರವುಳ್ಳ, ಆಮರಸ್ತುತಯಶಃ = ದೇವತೆಗಳಿಂದ ಕೊಂಡಾಡಲ್ಪಟ್ಟ ಕೀರ್ತಿಯುಳ್ಳ, ರಾಮಕಾಂತಿ ಸುತನೋ =ಕಣ್ಣಿಗೆ ತಂಪನ್ನು ಚೆಲ್ಲುವ ಕಾಂತಿಯುತವಾದ ದೇಹವುಳ್ಳ, ಲಕ್ಷ್ಮಣಶುಕಾರಾಮಭೂ= ಲಕ್ಷ್ಮಣ ಎಂಬ ಗಿಳಿಗೆ ಉಪವನಭೂಮಿಯಾಗಿರುವ, ರಾಮಲಬ್ಧ ಕಲಹ = ಪರಶುರಾಮನೊಡನೆ ಯುದ್ಧದಲ್ಲಿ ಗೆದ್ದವನೆ, ಸ್ವಾರಾಮವರ್ಯ = ಸ್ವರ್ಗದಲ್ಲಿ ರಮಿಸುವ ದೇವತೆಗಳ ಒಡೆಯನಾದ ಇಂದ್ರನ, ರಿಪುವೀರ= ಶತ್ರುಗಳಾದ ದಾನವ ವೀರರಿಗೆ, ಆಮಯರ್ದ್ದಿಕರ =ರೋಗತಾಪಗಳನ್ನು ಹೆಚ್ಚಿಸುವವನೆ, ಚೀರಾಮಲಾವೃತಕಟೇ = ಶುಭ್ರವಾದ ನಾರುಮಡಿ ಸುತ್ತಿದ ನಡುವುಳ್ಳವನೆ, ಸ್ವಾರಾಮ = ತನ್ನನ್ನು ಉಪವನ (ಪಂಚವಟ) ದಲ್ಲಿ, ದರ್ಶನಜ =ನೋಡಿದ ಮಾತ್ರದಿಂದ ಹುಟ್ಟಿದ, ಮಾರಾಮಯ = ಕಾಮಜ್ವರದಿಂದ, ಆಗತ =ಬಂದ, ಸುಘೋರಾ = ಘೋರರೂಪಿಯಾದ ಶೂರ್ಪಣಖೆಯ, ಮನೋರಥಹರ= ಇಚ್ಛೆಯನ್ನು ನಾಶಗೊಳಿಸಿದ, ಶ್ರೀರಾಮ =ಶ್ರೀರಾಮಚಂದ್ರ! (ಎಲ್ಲವೂ ಸಂಬುದ್ಧಿ ಆದ್ದರಿಂದ ಇಲ್ಲಿ ಭವಾನ್ =ನೀನು, ಎಂದು ಅಧ್ಯಾಹಾರ) ಅವತು-ರಕ್ಷಿಸು. ಇದರಲ್ಲಿ ರಾಮಚಂದ್ರನ ರೂಪಲಾವಣ್ಯವೂ ಪಂಚವಟಿಯ ಘಟನೆಯೂ ಪ್ರಸ್ತುತವಾಗಿದ. ಶ್ರೀಕೇಶವ! ಪ್ರದಿಶ, ನಾಕೇಶಜಾತ ಕಪಿಲೋಕೇಶ ಭಗ್ನರವಿಭೂ- ಸ್ತೋಕೇತರಾರ್ತಿಹರಣಾಕೇವಲಾರ್ಥಸುಖಧೀ ಕೇಕಿ ಕಾಲಜಲದ ! ಸಾಕೇತನಾಥವರ ಪಾಕೇಶಮುಖ್ಯಸುತ ಕೋಕೇನ! ಭಕ್ತಿ ಮತುಲಾಂ ರಾಕೇಂದುಬಿಂಬಮುಖ! ಕಾಕೇಕ್ಷಣಾಪಹ! ಹೃಷೀಕೇಶ! ತೇಂಘ್ರಕಮಲೇ॥ ೧೩ ॥ ತಾ: ವಾಲಿಯಿಂದ ಪೆಟ್ಟು ತಿಂದು ಮುಖಭಂಗ ಮಾಡಿಸಿಕೊಂಡ ಸುಗ್ರೀವನ ಮಹಾದುಃಖವನ್ನು ನಿವಾರಿಸಿದವನೆ, ಪಾರಮಾರ್ಥಿಕ ಚಿಂತನೆಯಲ್ಲಿ ತೊಡಗಿದ ಬ್ರಹ್ಮಜ್ಞಾನಿಗಳೆಂಬ ನವಿಲುಗಳಿಗೆ ಕಾರ್ಮೋಡದಂತೆ ಸುಖದಾಯಕನೆ, ದಶರಥನ ಪ್ರಿಯಪುತ್ರನೆ, ಮುಖ್ಯ ಪ್ರಾಣನ ಮಗ ಹನುಮಂತನಿಗೆ ದರ್ಶನ ಮಾತ್ರದಿಂದಲೇ ಸೌಹಿತ್ಯದಾಯಕನಾದವನೆ, ಪೂರ್ಣಚಂದ್ರನಂತೆ ದುಂಡಗಿನ ಮುಖವುಳ್ಳವನೆ, ಕಾಕಾಸುರನ ಒಂದು ಕಣ್ಣನ್ನು ಮಾತ್ರ ಕಿತ್ತ ಕರುಣಾಳು, ಇಂದ್ರಿಯಗಳ ನಿಯಾಮಕನೆ, ಬ್ರಹ್ಮರುದ್ರಾದ್ಯರಿಗೂ ಒಡೆಯನಾದ ಶ್ರೀರಾಮಚಂದ್ರ ನಿನ್ನ ಅಡಿದಾವರೆಯಲ್ಲಿ ನನಗೆ ಕವಡಿಲ್ಲದ ಭಕ್ತಿಯನ್ನು ದಯಪಾಲಿಸು. ಪ.ಪ: ನಾಕೇಶ ಜಾತ = ಇಂದ್ರನ ಮಗನೂ, ಕಪಿ ಲೋಕೇಶ= ಕಪಿಗಳ ಲೋಕಕ್ಕೆ ನಾಯಕನೂ ಆದ ವಾಲಿಯಿಂದ, ಭಗ್ನ = ಭಂಗಹೊಂದಿದ, ರವಿಭೂ= ಸೂರ್ಯನ ಮಗನಾದ ಸುಗ್ರೀವನ, ಸ್ತೋಕೇತರ =ವಿಪುಲವಾದ, ಆರ್ತಿಹರಣ= ದುಃಖವನ್ನು ನಿವಾರಿಸಿದವನೆ, ಅಕೇವಲಾರ್ಥಸುಖಧೀ =ಕೇವಲ ವಿಷಯಸುಖ ವನ್ನೊಲ್ಲದೆ ಪಾರಮಾರ್ಥಿಕ ಸುಖವನ್ನೂ ಚಿಂತಿಸುವ ಬ್ರಹ್ಮಜ್ಞಾನಿಗಳೆಂಬ, ಕೇಕಿ= ನವಿಲುಗಳಿಗೆ, ಕಾಲಜಲದ= ಕಾರ್ಮೋಡದಂತೆ ಸಂತಸ ನೀಡುವವನೆ, ಸಾಕೇತನಾಥ ವರಪಾಕ =ಸಾಕೇತಾಧಿಪತಿ ದಶರಥನ ಪುತ್ರಶ್ರೇಷ್ಠನೆ, ಈರಮುಖ್ಯಸುತ =ಮುಖ್ಯ ಪ್ರಾಣನ ಮಗನಾದ ಹನುಮಂತನೆಂಬ, ಕೋಕ =ಚಕ್ರವಾಕ ಪಕ್ಷಿಗೆ, ಇನ =ಸೂರ್ಯನಾಗಿರುವವನೆ, ರಾಕೇಂದುಬಿಂಬಮುಖ= ಹುಣ್ಣಿಮೆಯ ಚಂದ್ರನಂತಿರುವ ಮೊಗದವನೆ, ಕಾಕೇಕ್ಷಣಾಪಹ =ಕಾಕಾಸುರ (ಜಯಂತ)ನ ಒಂದು ಕಣ್ಣನ್ನು ಮಾತ್ರ ಕೆಡಿಸಿದವನೆ, ಹೃಷಿಕೇಶ =ಇಂದ್ರಿಯಗಳ ನಿಯಾಮಕನೆ, ಶ್ರೀಕೇಶವ =ಬ್ರಹ್ಮರುದ್ರಾದ್ಯರಿಗೂ ಒಡೆಯನಾದ ಶ್ರೀರಾಮಾ ! ತೇ =ನಿನ್ನ, ಅಂಫ್ರಿಕಮಲೇ =ಅಡಿದಾವರೆಗಳಲ್ಲಿ, ಅಮಲಾಂ =ನಿಷ್ಕಲ್ಮಶವಾದ, ಭಕ್ತಿಂ= ಭಕ್ತಿಯನ್ನು, ಪ್ರದಿಶ =ಕೊಡು. ಇದರಲ್ಲಿ ಸುಗ್ರೀವನ ಸಖ್ಯ, ಮುನಿಗಳ ರಕ್ಷಣ, ಹನುಮಂತನಿಗೆ ಮಾಡಿದ ಅನು ಗ್ರಹ, ಕಾಕಾಸುರನ ವೃತ್ತಾಂತ ಮೊದಲಾದ ರಾಮಾಯಣದ ಕಥಾನಕಗಳ ಸೂಚನೆ ಬಂದಿದೆ. ರಾಮೇ, ನ್ವ​ಣಾಂ ಹೃದಭಿರಾಮೇ, ನರಾಶಿಕುಲಭೀಮೇ, ಮನೋಽದ್ಯ​ ರಮತಾಂ ಗೋಮೇದಿನೀಜಯಿ ತಪೋsಮೇಯ ಗಾಧಿಸುತ ಕಾಮೇ ನಿವಿಷ್ಟ ಮನಸಿ । ಶ್ಯಾಮೇ, ಸದಾ ತ್ವಯಿ, ಜಿತಾಮೇಯತಾಪಸಜರಾಮೇ, ಗತಾಧಿಕಸಮೇ ಭೀಮೇಶಚಾಪದಲನಾಮೇಯಶೌರ್ಯ ಜಿತನಾಮೇಕ್ಷಣೇ, ವಿಜಯಿನಿ ॥೧೪॥ ತಾ: ಶ್ಯಾಮಲವರ್ಣದ ಶ್ರೀ ರಾಮಚಂದ್ರ ನರರ ಮನಸೂರೆಗೊಳ್ಳುವ ಸುರೂಪಿ, ರಾಕ್ಷಸರಿಗೆ ಭಯಂಕರನಾಗಿರುವವನು, ಭೂವ್ಯೋಮಗಳನ್ನು ಜಯಿಸು ವಂಥ ತಪಸ್ಸಿನಿಂದ ಊಹೆಗೆ ಮೀರಿದ ಸಾಮರ್ಥ್ಯಶಾಲಿಯಾದ ವಿಶ್ವಾಮಿತ್ರನ ಮನೋಗತವನ್ನು ನೆರವೇರಿಸಿದವನು, ಅಜೇಯನಾದ ಪರಶುರಾಮನನ್ನೂ ಗೆದ್ದವನು, ಇವನಿಂದ ಅಧಿಕರಾದವರಾಗಲಿ ಇವನಿಗೆ ಸಮಾನರಾಗಲಿ ಇಲ್ಲ. ಭಯಂಕರವಾದ ಶಿವಧನುಸ್ಸನ್ನು ಮುರಿದು ತನ್ನ ಪರಾಕ್ರಮದಿಂದಲೇ ಸೀತೆಯ ಕೈಹಿಡಿದ ಮಹಾತ್ಮ, ಸದಾ ವಿಜಯಶಾಲಿಯಾದ ಈ ಶ್ರೀರಾಮನಲ್ಲಿ ನನ್ನ ಚಿತ್ತ​ವು ನಲಿದು ರಮಿಸಲಿ. ಪ್ರ. ಪ​ ನೃಣಾಂ= ಮಾನವರ, ಹೃದಭಿರಾಮೇ = ಮನವನ್ನು ಮುದಗೊಳಿ ಸುವಂಥ ಸುರೂಪನೂ, ನರಾಶಿಕುಲ ಭೀಮೇ =ನರಭಕ್ಷಕರಾದ ರಕ್ಕಸರ ವಂಶಕ್ಕೆ ಭಯಂಕರನೂ ಆಗಿರುವ, (ಮತ್ತು) ಗೋ ಮೇದಿನೀ ಜಯಿ =ಸ್ವರ್ಗ ಮತ್ತು ಭೂಲೋಕಗಳನ್ನು ಜಯಿಸಬಲ್ಲ, ತಪಃ =ತಪಸ್ಸಿನಿಂದ, ಅಮೇಯ =ಅಪ್ರಮೇಯನಾದ, ಗಾಧಿಸುತ=ಗಾಧಿಯ ಮಗ ವಿಶ್ವಾಮಿತ್ರನ, ಕಾಮೇ =ಇಚ್ಛೆಯನ್ನು ಪೂರೈಸುವುದರಲ್ಲಿ, ನಿವಿಷ್ಟ ಮನಸಿ =ಮನಸ್ಸನ್ನು ತೊಡಗಿಸಿದ, ಶ್ಯಾಮೇ =ನಸುಗಪ್ಪು ಬಣ್ಣದವನಾದ, ಜಿತಾಮೇಯ ತಾಪಸಜ ರಾಮೇ =ಅಳತೆಮೀರಿದ ಪರಾಕ್ರಮಶಾಲಿ ಪರಶುರಾಮನನ್ನು ಗೆದ್ದ, ಗತಾಧಿಕ ಸಮೇ = ಸಮಾನರಾದವರಾಗಲಿ, ಅಧಿಕರಾಗಲಿ ಇಲ್ಲವೇ ಇಲ್ಲದ, ಭೀಮೇಶ ಚಾಪದಲನ= =ಭಯಂಕರವಾದ ಶಿವಧನುಸ್ಸನ್ನು ಮುರಿದು(ತೋರಿಸಿ), ಅಮೇಯ ಶೌರ್ಯ= ಊಹೆಗೆ ಮೀರಿದ ಶೌರ್ಯದಿಂದ, ಜಿತ​ವಾಮೇಕ್ಷಣೇ= ಪಣವನ್ನು ಗೆದ್ದು ಸೀತೆಯ ಕೈಹಿಡಿದ, ಸದಾ ವಿಜಯಿನಿ =ಯಾವಾಗಲೂ ವಿಜಯಶಾಲಿಯಾದ, ರಾಮೇ =ಶ್ರೀರಾಮನಲ್ಲಿ, ಮನಃ= ನನ್ನ ಮನಸ್ಸು, ಅದ್ಯ =ಈ ಹೊತ್ತು, ರಮತಾಂ= ರಮಿಸಲಿ. ಈ ಪದ್ಯದಲ್ಲಿ ರಾಮಚಂದ್ರನ ರೂಪ - ಗುಣಗಳನ್ನೂ ವಿಶ್ವಾಮಿತ್ರನ ಯಾಗ ರಕ್ಷಣೆ, ಪರಶುರಾಮನ ಸೋಲು, ಸೀತಾ ಕಲ್ಯಾಣ ಮುಂತಾದ ರಾಮಾಯಣದ ಕೆಲವು ಘಟನೆಗಳನ್ನೂ ಸೂಚಿಸಲಾಗಿದೆ. ನ ತ್ವತ್ಸ​ ಮೋsಸ್ತ್ಯ​ಭ್ಯಧಿಕಃ ಕುತೋsನ್ಯಃ ? (ಗೀತಾ ೧೧-೪೩) ಓಂ ಸೀತಾರೂಪಿಣ್ಯೈ ಶ್ರಿಯೇನಮಃ ಕಾಂತಾರಗೇಹಖಲಕಾಂತಾರಟದ್ವ​ದನ ಕಾಂತಾಲಕಾಂತಕ ಶರಂ ಕಾಂತಾಽಽರ, ಯಾಂಬುಜನಿಕಾಂತಾನ್ವ​ವಾಯ ವಿಧುಕಾಂತಾಶ್ಮ​ಭಾಧಿಪ, ಹರೇ! ಕಾಂತಾಲಿಲೋಲದಲಕಾಂತಾಭಿಶೋಭಿ ತಿಲಕಾಂತಾ ಭವಂತಮನು ಸಾ ಕಾಂತಾನುಯಾನ ಜಿತಕಾಂತಾರದುರ್ಗಕಟಕಾಂತಾ ರಮಾತ್ವವತು ಮಾಮ್ ॥ ೧೫ ॥ ತಾ: ಸೂರ್ಯವಂಶಲಲಾಮನಾದ ಶ್ರೀರಾಮಚಂದ್ರನೆ! ಹಣೆಯ ಮೇಲೆ ತುಂಬಿಗಳ ತೊಂಗಲಂತೆ ತೊನೆದಾಡುವ ಮುಂಗುರುಳ, ತುದಿಯಲ್ಲಿ ಶೋಭಿಸುವ ತಿಲಕವನ್ನು ಧರಿಸಿಕೊಂಡಿರುವ, ಮತ್ತು ಕಾಡುಮೇಡುಗಳೆನ್ನದೆ ನಿನ್ನೊಡನೆ ಅಡವಿಯಲ್ಲಿ ದುರ್ಗಮ ಪ್ರದೇಶಗಳನ್ನೂ ಸುಖವಾಗಿ ಸಂಚರಿಸಿದ, ಸಾಕ್ಷಾಲ್ಲಕ್ಶ್ಮೀಸ್ವರೂಪಳಾದ ನಿನ್ನ ಮಡದಿ ಯಾವ ಸೀತಾದೇವಿಯು, ಅಡವಿಯಲ್ಲಿರುವ ರಕ್ಕಸರನ್ನು ಕೊಂದಾಗ ಗೋಳಿಡುವ ಅವರ ಮಡದಿಯರ ಮುಖಗಳಲ್ಲಿ ಹಾರಾಡುವ ಮುಂಗುರುಳಿಗೆ ಕತ್ತರಿಯಂತಿರುವ ಬಾಣಗಳನ್ನು ಧರಿಸಿದ-ನಿನ್ನನ್ನು ಅನುಸರಿಸಿ ನಡೆದಳೋ-ಆ ಸೀತಾದೇವಿಯು ನನ್ನನ್ನು ರಕ್ಷಿಸಲಿ. ಪ್ರ. ಪ: ಅಂಬುಜನಿಕಾಂತ= ಕಮಲ ಬಾಂಧವನಾದ ಸೂರ್ಯನ, ಅನ್ವ ವಾಯ= ವಂಶವೆಂಬ, ವಿಧುಕಾಂತಾಶ್ಮ =ಚಂದ್ರಕಾಂತ ಶಿಲೆಗೆ, ಭಾಧಿಪ =ನಕ್ಷತ್ರೇಶನಾದ ಚಂದ್ರನಂತಿರುವ, ಹರೇ =ಶ್ರೀರಾಮನೆ! ಕಾಂತ =ಮನೋಹರವಾದ, ಅಲಿ=ತುಂಬಿಗಳಂತೆ, ಲೋಲತ್ =ಚೆಲ್ಲಾಡುವ, ಅಲಕಾಂತ= ಸುಳಿಗೂದಲಿನ ತುದಿಯಲ್ಲಿ, ಅತಿಶೋಭಿ= ತುಂಬ ಚೆನ್ನಾಗಿರುವ, ತಿಲಕಾಂತಾ= ತಿಲಕದ ಪ್ರಾಂತ ಭಾಗವುಳ್ಳ(ಸೀತೆಯು), ಕಾಂತ = ಪತಿಯನ್ನು, ಅನುಯಾನ = (ಅರಣ್ಯದಲ್ಲಿ) ಅನುಸರಿಸಿ ಹೋಗುವುದರಿಂದ, ಜಿತಕಾಂತಾರದುರ್ಗಕಟಿಕಾಂತಾ =ದುರ್ಗಮ, ಮತ್ತು ಕಡಿದಾದ ಬೆಟ್ಟಗಳನ್ನೂ ಅನಾಯಾಸವಾಗಿ ಸುತ್ತಿದ, ಕಾಂತಾ =ನಿನ್ನ ಮಡದಿಯಾದ, ಯಾ ರಮಾ =ಲಕ್ಷ್ಮೀ ಸ್ವರೂಪಳಾದ ಯಾವ ಸೀತಾದೇವಿಯು, ಕಾಂತಾರಗೇಹ= ಅಡವಿಯಲ್ಲಿ ಮನೆಮಾಡಿಕೊಂಡ, ಖಲ ಕಾಂತಾ= ರಕ್ಕಸರ ಮಡದಿಯರ, ರಟದ್ವದನ=ಗೋಳಿಡುವ ಮುಖಗಳಲ್ಲಿ, ಕಾಂತ= ಚೆಲುವಾದ, ಅಲಕ =ಮುಂಗುರುಳಿಗೆ, ಅಂತಕ=ಮೃತ್ಯುವಾದ, ಶರಂ =ಬಾಣವುಳ್ಳ, ಭವಂತಮನು= ನಿನ್ನನ್ನು ಅನುಸರಿಸಿ, ಆರ=ನಡೆದಳೋ, ಸಾ =ಆ ಲಕ್ಷ್ಮಿಯು, ಮಾಂ= ನನ್ನನ್ನು, ಅವತು- ರಕ್ಷಿಸಲಿ. (ಋ =ಗತ್, ಲಿಟ್ ) ಇದರಲ್ಲಿ ಸೀತೆ ರಾಮನೊಡನೆ ಕಾಡಿಗೆ ಹೋದುದರಿಂದ ಆಕೆ ದುಷ್ಟ ರಕ್ಕಸರಿಗೆ ಮೃತ್ಯುವಾದಳು ಎಂಬ ಸೂಚನೆ ಇದೆ. ದಾಂತಂ, ದಶಾನನಸುತಾಂತಂ, ಧರಾಮಧಿವಸಂತಂ, ಪ್ರಚಂಡ ತಪಸಾ ಕ್ಲಾಂತಂ, ಸಮೇತ್ಯ ವಿಪಿನಾಂತಂ ತ್ವವಾಪ​ ಯಮನಂತಂ, ತಪಸ್ವಿಪಟಲಮ್ ॥ ಯಾಂತಂ, ಭವಾರತಿ ಭಯಾಂತಂ ಮಮಾಶು ಭಗವಂತಂ ಭರೇಣ ಭಜತಾತ್ ಸ್ವಾಂತಂ ಸವಾರಿದನುಜಾಂತಂ ಧರಾಧರನಿಶಾಂತಂ ಸತಾಪಸವರಮ್॥೧೬ ॥ ತಾ:ಜಿತೇಂದ್ರಿಯರೂ, ಕಠಿನತಪಸ್ಸಿನಿಂದ ಕೃಶಾಂಗರೂ ಆದ ತಾಪಸರು, ರಾವಣನಿಂದ ತುಂಬ ಪೀಡಿತರಾಗಿ, ನೆಲದ ಮೇಲೆ ನಡೆದಾಡುವ ದೇವರು ಅರಣ್ಯಕ್ಕೆ ಹೋದನೆಂಬ ಸುದ್ದಿ ತಿಳಿದು ಅನಾದಿನಿಧನನೂ, ನಾರಾಯಣನೂ ಆದ ಯಾವ ನಿನ್ನನ್ನು ಹೊಂದಿ ಸಾಂಸಾರಿಕ ದುಃಖವನ್ನೂ ಭೀತಿಯನ್ನೂ ಕಳೆದುಕೊಂಡರೋ; ಯಜ್ಞಕ್ಕೆ ಶತ್ರುಭೂತರಾದ ರಕ್ಕಸರನ್ನು ಕೊಂದು, ಚಿತ್ರಕೂಟಾದ್ರಿಯ ಗುಡಿಸಲಿನಲ್ಲಿ, ತಾಪಸರೊಡನಿರುವ, ಆ ಭಗವಂತನಾದ ನಿನ್ನನ್ನು ನನ್ನ ಅಂತರಂಗವು ಕಾಲವಿಲಂಬ ಮಾಡದೆ ಭಕ್ತಿಭಾರದಿಂದ ಭಜಿಸಲಿ, ಪ್ರ. ಪ: ದಾಂತಂ = ಜಿತೇಂದ್ರಿಯರಾದ, ಪ್ರಚಂಡ ತಪಸಾ = ಘೋರ ತಪಸ್ಸಿನಿಂದ, ಕಾಂತಂ =ಕ್ಷೀಣರಾದ; ದಶಾನನ ಸುತಾಂತಂ = ರಾವಣನಿಂದ ಬಹಳ ತೊಂದರೆಗೊಳಗಾದ, ತಪಸ್ವಿಪಟಲಂ =ತಾಪಸರ ಗುಂಪು, ಧರಾಮಧಿವಸಂತಂ= ಈ ನೆಲದಲ್ಲಿ ಇರುವ, ವಿಪಿನಾಂತಂ = ಈಗ ವನಪ್ರಾಂತಕ್ಕೆ, ಯಾಂತಂ =ಬರುತ್ತಿರುವ, ಯಂ ಅನಂತಂ= ಅನಾದಿ ನಿಧನನಾದ ಯಾವ ನಾರಾಯಣನನ್ನು, ಸಮೇತ್ಯ =ಬಳಿ ಸಾರಿ, ಭವ =ಸಂಸಾರದ, ಅರತಿ ಭಯಾಂತಂ= ದುಃಖ ಮತ್ತು ಭೀತಿಗಳ ವಿನಾಶವನ್ನು, ತು. ಆಪ =ಹೊಂದಿದರೋ (ಸಾಂಸಾರಿಕ ದುಃಖದಿಂದ ಮುಕ್ತರಾದರೋ), ಸವಾರಿ (ಸವ, ಅರಿ) ದನುಜಾಂತಂ =ಯಜ್ಞ ವಿರೋಧಿಗಳಾದ ರಕ್ಕಸರ ನಾಶಕನೂ, ಧರಾಧರ ನಿಶಾಂತಂ= ಚಿತ್ರಕೂಟ ಪರ್ವತದ ಉಟಜದಲ್ಲಿರುವವನೂ, ಸತಾಪಸವರಂ =ತಾಪಸಶ್ರೇಷ್ಠರಿಂದ ಸಹಿತನೂ ಆದ, (ತಂ) ಭಗವಂತಂ = ಆ ಪರಮಾತ್ಮನಾದ​ ನಿನ್ನನ್ನು, ಮಮ =ನನ್ನ, ಸ್ವಾಂತಂ= ಮನಸ್ಸು, ಆಶು= ಬೇಗನೆ, ಭರೇಣ =ತೀವ್ರವಾಗಿ (ಅಥವಾ ಭಕ್ತಿಭಾರದಿಂದ) ಭಜತಾತ್ =ಸೇವಿಸಲಿ, (ಭಜ=ಸೇವಾಯಾಂ, ಲೋಟ್ ) ಇದರಲ್ಲಿ ಶರಭಂಗ, ಸುತೀಕ್ಷ್ಯ ಮೊದಲಾದ ಮುನಿಗಳಿಗೆ ತನ್ನ ದರ್ಶನವಿತ್ತು ಮುಕ್ತಿಯನ್ನು ಕೊಟ್ಟದ್ದು. ಚಿತ್ರಕೂಟದ ಸರಹದ್ದಿನಲ್ಲಿರುವ ಮುನಿಗಳ ಭೇಟಿ, ಅರಣ್ಯವಾಸ ಈ ಘಟನೆಗಳ ಉಲ್ಲೇಖವಿದೆ. ಸವ =ಯಜ್ಞ, ಅರಿ = ಶತ್ರು ಸವಾರಿ ಯಜ್ಞವಿರೋಧಿ ಧರಾಧರ ನಿಶಾಂತಂ= (ಚಿತ್ರ ಕೂಟ) ಪರ್ವತವೇ ಮನೆ ( ನಿಶಾಂತಂ) ಯಾಗುಳ್ಳ. ಶಂಪಾಭಚಾಪಲವ ಕಂಪಾಸ್ತ ಶತ್ರುಬಲ ಸಂಪಾದಿತಾಮಿತಯಶಾಃ ಶಂ ಪಾದತಾಮರಸ ಸಂಪಾತಿನೋಲವನುಕಂಪಾರಸೇನ ದಿಶ ಮೇ । ಸಂಪಾತಿಪಕ್ಷಿಸಹಜಂ ಪಾಪರಾವಣಹತಂ ಪಾವನಂ ಯದಕೃಥಾಃ ತ್ವಂ ಪಾಪಕೂಪಪತಿತಂ ಪಾಹಿ ಮಾಂ ತದಪಿ ಪಂಪಾಸರಸ್ತಟ ಚರ ತಾ: ಮಿಂಚಿನಬಳ್ಳಿಯಂತೆ ಕಣ್ಣು ಕೋರೈಸುವ ಬಿಲ್ಲಿನ ಟಂಕಾರಮಾತ್ರ ದಿಂದಲೇ ಶತ್ರುಗಳ ಸದ್ದಡಗಿಸಿ, ಅಮಿತಯಶಃಶಾಲಿಯಾದ ಹೇ ರಾಮಚಂದ್ರ! ನಿನ್ನ ಪಾದಕ್ಕೆರಗಿದ ನನ್ನಲ್ಲಿ ದಯಾರಸವನ್ನು ಸುರಿಸಿ ಸುಖವನ್ನು ನೀಡು. ಹೇ ಪಂಪಾತಟಾಕ ತೀರಚಾರಿಯಾದ ರಾಮಚಂದ್ರ! ನೀನು ಆ ಪಾಪಿ ರಾವಣನಿಂದ ಹತನಾದ ಜಟಾಯುವಿಗೆ, ಅಂತ್ಯಕ್ರಿಯೆಯನ್ನು ನಿನ್ನ ಕೈಯಾರೆ ಮಾಡಿ ಮೋಕ್ಷವನ್ನು ಹೇಗೆ ಕರುಣಿಸಿದೆಯೋ ಹಾಗೆ, ಪಾಪದ ಮಡುವಿನಲ್ಲಿ ಮುಳುಗಿರುವ ನನ್ನನ್ನೂ ಕೈಹಿಡಿದು ಎತ್ತಿಕೋ ಸ್ವಾಮಿ! ಪ್ರ. ಪ ಶಂಪಾಭ -ಮಿಂಚಿನಂತೆ ಹೊಳೆಯುವ, ಚಾಪ =ಬಿಲ್ಲಿನ, ಲವ ಕಂಪ = ಈಷನ್ಮಾತ್ರ ಚಲನದಿಂದಲೇ, ಅಸ್ತಶತ್ರುಬಲ =ನಿರಸ್ತವಾದ ವೈರಿಸಮೂಹದಿಂದ, ಸಂಪಾದಿತ =ಗಳಿಸಲ್ಪಟ್ಟ, ಅಮಿತಯಶಾಃ =ಬಹಳ ಯಶಸ್ಸುಳ್ಳ ನೀನು, ಪಾದತಾಮರಸ ಸಂಪಾತಿನಃ =ಚರಣಕಮಲಗಳಿಗೆ ಯಾವಾಗಲೂ ವಂದಿಸುವ, ಮೇ= ನನಗೆ (ಶೇಷೇ ಷಷ್ಠಿ), ಅನುಕಂಪಾರಸೇನ =ದಯಾರಸದಿಂದ, ಅಲಂ=ಸಾಕಷ್ಟು, ಶಂ =ಸುಖವನ್ನು, ದಿಶ=ಕೊಡು, ಪಂಪಾಸರಸ್ತಟಚರ= ಪಂಪಾಸರೋವರದ ತೀರದಲ್ಲಿರುವವನೆ, ತ್ವಂ= ನೀನು, ಯತ್ =ಯಾವ ರೀತಿಯಿಂದ, ಪಾಪ ರಾವಣಹತಂ= ಪಾಪಿಯಾದ ರಾವಣನಿಂದ ಹತನಾದ, ಸಂಪಾತಿಪಕ್ಷಿಸಹಜಂ =ಸಂಪಾತಿಯ ಸೋದರನಾದ ಜಟಾಯುವನ್ನು (ಪಕ್ಷಿಯನ್ನು), ಪಾವನಂ = ಸದ್ಗತಿಯನ್ನು ಕೊಟ್ಟು ಪೂತನನ್ನಾಗಿ, ಅಕೃಥಾಃ =ಮಾಡಿದೆಯೋ, ತತ್ =ಆ ರೀತಿಯಿಂದಲೇ, ಪಾಪಕೂಪ ಪತಿತಂ = ಪಾಪದ ಬಾವಿಯಲ್ಲಿ ಬಿದ್ದು ಮೇಲೇಳಲಾಗದ, ಮಾಮಪಿ= ನನ್ನನ್ನೂ, ಪಾಹಿ =ಉದ್ಧರಿಸಿ, ರಕ್ಷಿಸು. [ಪಾ= ರಕ್ಷಣೇ ॥೧೭ ॥ ಇದರಲ್ಲಿ ರಾಮನ ಲೋಕೋತ್ತರವಾದ ಪ್ರಭಾವ, ಶೌರ್ಯಾತಿಶಯ, ಪಕ್ಷಿ ರಾಜ ಜಟಾಯುವಿಗೆ ತನ್ನ ಕೈಯಾರೆ ಅಗ್ನಿಸಂಸ್ಕಾರಮಾಡಿ ಮುಕ್ತಿಯನ್ನು ಕರುಣಿ ಸಿದ ಕತೆ ಸೂಚಿತವಾಗಿದೆ. ಲೋಲಾಕ್ಷಪೇಕ್ಷಿತ ಸುಲೀಲಾ ಕುರಂಗ ವಧಖೇಲಾಕುತೂಹಲ ಗತೇ ಸ್ವಾಲಾಪಭೂಮಿಜನಿ ಬಾಲಾಪಹಾರ್ಯನುಜಪಾಲಾದ್ಯ, ಭೋ! ಜಯ ಜಯ ವಾಲಾಗ್ನಿದಗ್ಧ ಪುರಶಾಲಾನಿಲಾತ್ಮಜನಿ ಫಾಲಾತ್ತ ಪುತ್ತಲರಜೋ ನೀಲಾಂಗದಾದಿ ಕಪಿಮಾಲಾ ಕೃತಾಲಿ ಪಥಮೂಲಾಭ್ಯತೀತ ಜಲಧೇ ॥ ೧೮ ॥ ತಾ: ಸೀತೆ ಬಯಸಿದ ಹೊಂಬಣ್ಣದ ಚಿಗರೆಯನ್ನು ಕೊಲ್ಲಲು ವಿಚಿತ್ರಚಾರಿ ಯಿಂದ ಗಮಿಸಿದವನೆ, ಮಧುರಭಾಷಿಣಿಯಾದ ಸೀತೆಯನ್ನು ಅಪಹರಿಸಿದ ರಾವಣನ ತಮ್ಮ [ನಾದ ವಿಭೀಷಣ]ನನ್ನು ಲಂಕೆಯ ರಾಜ್ಯವಿತ್ತು ಸಲಹಿದವನೆ, ಆದಿಪುರುಷನೆ, ಲಂಕೆಯನ್ನು ತನ್ನ ಬಾಲದ ಬೆಂಕಿಯಿಂದ ಸುಟ್ಟುರುಹಿದ ಹನುಮಂತನು ನಿನ್ನ ಪಾದತಲದ ಧೂಲಿಯನ್ನು ಹಣೆಯಲ್ಲಿ ಹಚ್ಚಿಕೊಂಡನಲ್ಲವೆ;! ನೀಲ, ಅಂಗದ ಮೊದಲಾದ ಕಪಿವೀರರು ಕಟ್ಟಿದ ಸೇತುವಿನಿಂದಾಗಿ ಸಮುದ್ರವನ್ನು ದಾಟಿದ ಶ್ರೀ ರಾಮಚಂದ್ರ ನಿನಗೆ ಜಯವಾಗಲಿ. ಪ್ರ. ಪ : ಲೋಲಾಕ್ಷಿ = ಚಂಚಲನೇತ್ರೆ (ಸುಂದರಿ)ಯಾದ ಸೀತೆಯಿಂದ, ಅಪೇಕ್ಷಿತ =ಬಯಸಲ್ಪಟ್ಟ, ಸುಲೀಲಾ ಕುರಂಗ =ಚತುರವಾದ ಚಿನ್ನದ ಚಿಗರೆಯ, ವಧ= ಸಂಹಾರಕ್ಕಾಗಿ, ಖೇಲಾಕುತೂಹಲಗತೇ= ಕುತೂಹಲಕರವಾದ ಲೀಲೆಯಿಂದ ಓಡಿದವನೆ!, ಸ್ವಾಲಾಪ =ಮಧುರವಾಗಿ ಮಾತಾಡುವ, ಭೂಮಿಜನಿ= ಭೂಮಿಯಲ್ಲಿ ಹುಟ್ಟಿದ, ಬಾಲಾ = ಬಾಲೆ (ಸೀತೆಯನ್ನು, ಅಪಹಾರಿ = ಕದ್ದ (ರಾವಣನ), ಅನುಜಪಾಲ =ತಮ್ಮ (ವಿಭೀಷಣ)ನನ್ನು ರಕ್ಷಿಸಿದವನೆ, ಆದ್ಯ =ಜಗದಾದಿ ಕಾರಣನೆ, ಬಾಲಾಗ್ನಿ =ಬಾಲಕ್ಕೆ ಹಚ್ಚಿದ ಬೆಂಕಿಯಿಂದ, ದಗ್ಧಪುರ ಶಾಲಾ =ಲಂಕಾಪುರದ ಮನೆಗಳನ್ನು ಸುಟ್ಟ, ಅನಿಲಾತ್ಮಜನಿ = ವಾಯುಪುತ್ರ ಹನುಮಂತನಿಂದ, ಫಾಲಾತ್ತ =ಲಲಾಟದಲ್ಲಿ ಸ್ವೀಕೃತವಾದ, ಪತ್+ ತಲ​ ರಜಃ =ಪಾದತಲದ ಧೂಳಿಯುಳ್ಳವನೆ, ನೀಲಾಂಗದಾದಿ = ನೀಲ, ಅಂಗದ ಮೊದಲಾದ, ಕಪಿಮಾಲಾ =ಕಪಿಗಳ ನೆರವಿಯಿಂದ, ಕೃತ =ನಿರ್ಮಿತವಾದ, ಆಲಿಪಥ =ಸೇತುಮಾರ್ಗದ, ಮೂಲ= ನಿಮಿತ್ತವಾಗಿ, ಅಭ್ಯತೀತ ಜಲಧೇ =ಸಮುದ್ರವನ್ನು ದಾಟಿದ ಶ್ರೀ (ಭೋ) ರಾಮಚಂದ್ರ ನಿನಗೆ, ಜಯ ಜಯ =ಜಯಕಾರವು. ಇದರಲ್ಲಿ ಮಾರೀಚವಧೆ, ಸೀತಾಪಹಾರ, ಲಂಕಾದಹನ, ಸೇತುನಿರ್ಮಾಣ, ಲಂಕಾಗಮನ ಎಂಬ ರಾಮಾಯಣದ ಘಟನೆಗಳ ಉಲ್ಲೇಖವಿದೆ. ಆಲಿಃ = ಸೇತುವೆ, 'ಸೇತುರಾಲ್ ಸ್ತೀಯಾಂ ಪುಮಾನ್' (ಅಮರ) ತೂಣೀರ ಕಾರ್ಮುಕ ಕೃಪಾಣೀಕಿಣಾಂಕ ಭುಜಪಾಣೀ ರವಿಪ್ರತಿಮಭಾಃ ಕ್ಷೋಣೀಧರಾಲಿನಿಭ ಘೋಣೀಮುಖಾದಿ ಘನವೇಣೀ ಸುರಕ್ಷಣಕರಃ । ಶೋಣೀಭವನ್ನಯನ ಕೋಣೀಜಿತಾಂಬುನಿಧಿ ಪಾಣೀರಿತಾರ್ಹಣಮಣಿ- ಶ್ರೇಣೀವೃತಾಂಘ್ರಿರಿಹ ವಾಣೀಶಸೂನುವರವಾಣೀಸ್ತುತೋ ವಿಜಯತೇ ॥೧೯॥ ತಾ : ಬತ್ತಳಿಕೆ, ಬಿಲ್ಲು, ಖಡ್ಗ ಇವನ್ನು ಹಿಡಿದು ಹಿಡಿದು ಜಡ್ಡು ಗಟ್ಟಿದ ತೋಳು ಮತ್ತು ಕೈಗಳುಳ್ಳವನಾದರೂ ರಾಮ ಸೂರ್ಯನಂತೆ ಪ್ರಖರವಾದ ತೇಜ ಸುಳ್ಳವನು. ಪರ್ವತದಂತೆ ಮಹಾಕಾಯರಾದ ಕಪಿಗಳ ಸೈನ್ಯದ ರಕ್ಷಣೆಯ ಭಾರ ಹೊತ್ತವನು, ಒಮ್ಮೆ ಕೋಪದಿಂದ ಕಣ್ಣು ಕೆಂಪಗಾದಾಗ ಸಮುದ್ರದೇವ ಶ್ರೀರಾಮನ ಪಾದಗಳನ್ನು ಮುಚ್ಚುವಷ್ಟು ರತ್ನರಾಶಿಗಳನ್ನು ಉಪಹಾರವಾಗಿ ತಂದು ಸುರಿಯಲಿಲ್ಲವೆ? ಮೂಲರಾಮಾಯಣದಂಥ ರಾಮಚರಿತೆಯನ್ನು ಹಾಡುವುದರಲ್ಲಿ ಕೃತಾರ್ಥನಾದವನು ಹನುಮಂತ. ಇಂಥ ಮರ್ಯಾದಾ ಪುರುಷೋತ್ತಮನಾದ ರಾಮನೇ ಸರ್ವೋತ್ಕೃಷ್ಟನಾದ ಭಗವಂತ. ಪ್ರ. ಪ : ತೂಣೀರ ಕಾರ್ಮುಕ ಕೃಪಾಣೀ = ಬತ್ತಳಿಕೆ, ಬಿಲ್ಲು, ಖಡ್ಗ ಇವುಗಳನ್ನು ಧರಿಸುವುದರಿಂದುಂಟಾದ, ಕಿಣಾಂಕ ಭುಜಪಾಣಿಃ = ಕಲೆಯಿಂದ ಅಂಕಿತವಾದ ತೋಳು ಕೈಗಳುಳ್ಳವನೂ, ರವಿಪ್ರತಿಮ ಭಾಃ = ಸೂರ್ಯ​ಸಮಾನವಾದ ತೇಜೋವಂತನೂ, ಕ್ಷೋಣೀಧರಾಲಿ ನಿಭ= ಪಪರ್ವತಶ್ರೇಣಿಯಂತಿರುವ, ಘೋಣೀಮುಖಾದಿ= ಕಪಿಗಳೇ ಮೊದಲಾದವರ, ಘನವೇಣಿ =ಮಹಾಸೇನೆಯ, ಸುರಕ್ಷಣ ಕರಃ =ರಕ್ಷಣೆಮಾಡುವವನೂ, ಶೋಣೀಭವತ್ = ಕ್ರೋಧದಿಂದ ಕೆಂಪಾದ, ನಯನ ಕೋಣೀಜಿತ =ಕಡೆಗಣ್ಣ ನೋಟದಿಂದಲೇ ವಶಂವದನಾದ, ಅಂಬುನಿಧಿ =ಸಮುದ್ರಾಭಿಮಾನಿ ವರುಣನ, ಪಾಣಿ =ಕೈಗಳಿಂದ, ಈರಿತ =ಒಪ್ಪಿಸಲ್ಪಟ್ಟ, ಅರ್ಹಣಮಣಿಶ್ರೇಣಿ= ಉಪಹಾರರೂಪವಾದ ರತ್ನರಾಶಿಯಿಂದ, ವೃತಾಂಘ್ರಿಃ =ಮುಚ್ಚಲ್ಪಟ್ಟ ಪಾದ ಗಳುಳ್ಳವನೂ, ವಾಣೀಶಸೂನು=ಭಾರತೀಪುತ್ರನಾದ ಹನುಮಂತನ, ವರವಾಣಿ ಸ್ತುತಃ =ಮೂಲರಾಮಾಯಣಾದಿ ವರ್ಣನೆಗಳಿಂದ ಕೊಂಡಾಡಲ್ಪಟ್ಟವನೂ ಆದ ರಾಮಚಂದ್ರನೇ, ವಿಜಯತೇ = ಸರ್ವೋತ್ಕೃಷ್ಟನಾದ ಸ್ವಾಮಿ, (ವಾಣೀಶ ಸೂನು ಎಂಬಲ್ಲಿ ಜಾಂಬವಂತನಿಂದ ಸ್ತುತನಾದವನೆಂದೂ ಅರ್ಥ). ಇದರಲ್ಲಿ ರಾಮನ ರೂಪ ಗುಣಗಳಲ್ಲದೆ, ಕಪಿಸೈನ್ಯದ ರಕ್ಷಕ, ಎಂಬುದೂ ಸೇತು ರಚಿಸಲು ಸಮುದ್ರ ದಾರಿ ಬಿಡದಿರುವಾಗ ರಾಮನಿಗೆ ಉಂಟಾದ ಕ್ರೋಧ, ವರುಣನ ಶರಣಾಗತಿ, ಹನುಮಂತ ಮಾಡಿದ ರಾಮಸ್ತುತಿ ಇವು ಸೂಚಿತವಾಗಿವೆ. ಘೋಣೀ= ಹಂದಿ, ಕಪಿ, ಹುಂಕಾರಪೂರ್ವಮಥ ಟಂಕಾರನಾದಮತಿ ಪಂಕಾವಧಾರ್ಯ ಚಲಿತಾ ಲಂಕಾ ಶಿಲೋಚ್ಚಯ ವಿಶಂಕಾಪತದ್ಭಿದುರಶಂಕಾಽಽಸ ಯಸ್ಯ ಧನುಷಃ । ಲಂಕಾಧಿಪೋಽಮನುತ ಯಂ ಕಾಲರಾತ್ರಿಮಿವ ಶಂಕಾ ಶತಾಕುಲ ಧಿಯಾ ತಂ ಕಾಲದಂಡಶತಸಂಕಾಶಕಾರ್ಮುಕಶರಾಂಕಾನ್ವಿತಂ ಭಜ ಹರಿಮ್ ॥ ೨೦ ॥ ತಾಃ ರಾಮಚಂದ್ರ ಒಮ್ಮೆ ಹೂಂಕರಿಸಿ ಧನುಷ್ಟಂಕಾರ ಮಾಡಿದ್ದನ್ನು ಕೇಳಿದ ಕೂಡಲೇ, ಪಾಪಿಗಳಿಂದ ತುಂಬಿದ ಲಂಕಾ(ಭಿಮಾನಿ ದೇವತೆ), ಇದು ಪರ್ವತದ ಮೇಲೆ ಬಿದ್ದ ಬರಸಿಡಿಲೆಂದು ಭ್ರಮಿಸಿ ನಡುಗಿತು. ರಾವಣನೋ ನೂರಾರು ಚಿಂತೆಗಳಿಂದ ತಲೆಕೆಡಿಸಿಕೊಂಡು ರಾಮನನ್ನು ಸಾಕ್ಷಾತ್ ಯಮನೆಂದೇ ಬಗೆದ. ಯಮದಂಡ ದಂಥ ಧನುರ್ಬಾಣಗಳನ್ನು ತಳೆದ ಅಂಥ ನಾರಾಯಣಸ್ವರೂಪನಾದ ಶ್ರೀರಾಮನನ್ನು (ಎಲೋ ಮನವೇ) ಧ್ಯಾನಿಸು. ಪ್ರ. ಪ ಅಥ =ಮತ್ತು ಯಸ್ಯ ಧನುಷಃ =ಯಾರ ಬಿಲ್ಲಿನ, ಹುಂಕಾರ ಪೂರ್ವಂ= ಹುಂ ಎಂದ ಬಳಿಕ, ಟಂಕಾರನಾದಂ =ಠಣ್ ಎಂಬ ಶಬ್ದವನ್ನು, ಅವ ಧಾರ್ಯ =ಕೇಳಿ, ಅತಿಪಂಕಾ -ಬಹುಲ ಪಾಪಭೂಮಿಯಾದ, ಲಂಕಾ = ಲಂಕಾ ನಗರಿಯು (ತದಧಿಷ್ಠಾನ ದೇವತೆಯೂ), ಶಿಲೋಚ್ಚಯೇ =ಪರ್ವತದಲ್ಲಿ, ವಿಶಂಕಂ= ನಿಸ್ಸಂದೇಹವಾಗಿ, ಆಪತತ್ =ಬೀಳುತ್ತಿರುವ, ಭಿದುರ ಶಂಕಾ = ಸಿಡಿಲೆಂದು ಭ್ರಾಂತಿಯಿಂದ, ಚಲಿತಾ= ನಡುಕವುಳ್ಳುದಾಗಿ, ಆಸ= ಆಯಿತೋ, (ಮತ್ತು) ಲಂಕಾಧಿಪಃ=ರಾವಣನೂ, ಶಂಕಾಶತಾಕುಲಿತ ಧಿಯಾ =ನೂರಾರು ಚಿಂತೆಗಳಿಂದ ಸಂಭ್ರಾಂತವಾದ ಬುದ್ಧಿಯುಳ್ಳವನಾಗಿ(ಯಿಂದ), ಯಂ =ಯಾವ ರಾಮನನ್ನು, ಕಾಲರಾತ್ರಿಮಿವ=ಕಾಲಮೃತ್ಯುವನ್ನೆಂಬಂತೆ, ಅಮನುತ = ಭಾವಿಸಿದನೋ, ತಂ =ಅಂಥ, ಕಾಲದಂಡ ಶತ ಸಂಕಾಶ =ನೂರಾರು ಯಮನ ದಂಡಗಳಿಗೆ ಸಮಾನವಾದ, ಕಾರ್ಮುಕ ಶರಾಂ ಕಾನ್ವಿತಂ = ಬಿಲ್ಲು ಬಾಣಗಳ ಚಿಹ್ನೆಗಳಿರುವ, ಹರಿಂ =ನಾರಾಯಣಸ್ವರೂಪನಾದ ರಾಮನನ್ನು (ಎಲೆ ಮನವೇ), ಭಜ =ಸೇವಿಸು. ಇದರಲ್ಲಿ ರಾಮನ ವ್ಯಕ್ತಿತ್ವ ಮತ್ತು ರಾಮನು ಲಂಕೆಗೆ ಬಂದ ವಿಚಾರ ಕೇಳಿ ರಾವಣನಿಗುಂಟಾದ ಆತಂಕ ಇತ್ಯಾದಿ ಸೂಚಿತವಾಗಿದೆ. ಧೀಮಾನಮೇಯ ತನು ಧಾಮಾಽಽರ್ತ ಮಂಗಲದ ನಾಮಾ ರಮಾ ಕಮಲಭೂ ಕಾಮಾರಿ ಪನ್ನಗಪ ಕಾಮಾಹಿವೈರಿ ಗುರು ಸೋಮಾದಿವಂದ್ಯ ಮಹಿಮಾ । ಸ್ಥೇಮಾದಿನಾಽಪಗತ ಸೀಮಾsವತಾತ್ಸಖಲ ಸಾಮಾಜರಾವಣರಿಪೂ ರಾಮಾಭಿಧೋ ಹರಿರಭೌಮಾಕೃತಿಃ ಪ್ರತನಸಾಮಾದಿವೇದವಿಷಯಃ ॥ ೨೧ ॥ ತಾ : ಪ್ರಜ್ಞಾವಂತ, ಅಪರಿಮಿತ ಲಾವಣ್ಯಶಾಲಿ, ದುಃಖಿತರಿಗೆ ಶುಭ ಪ್ರದವಾದ ತಾರಕನಾಮ, ಲಕ್ಷ್ಮಿ, ಬ್ರಹ್ಮ, ಶಿವ, ಶೇಷ, ಮನ್ಮಥ, ಇಂದ್ರ, ಬೃಹಸ್ಪತಿ, ಚಂದ್ರ ಮೊದಲಾದ ದೇವತೆಗಳು ಕೊಂಡಾಡುವ ಮಹಿಮೆಯುಳ್ಳವ, ಪ್ರಪಂಚದ ಸೃಷ್ಟಿ ಸ್ಥಿತ್ಯಾದಿ ಕಾರ್ಯಗಳಿಂದ ಅಪ್ರಮೇಯ, ದುಷ್ಟಸಚಿವ ಪರಿವೃತನಾದ ರಾವಣನನ್ನು ಸಂಹರಿಸಿದವ, ಅಪ್ರಾಕೃತ ಶರೀರ, ಇಂಥ ವೇದಪ್ರತಿಪಾದ್ಯನಾದ ರಾಮ ಎಂಬ ಹೆಸರಿನ ಶ್ರೀಹರಿ ನಮ್ಮನ್ನು ರಕ್ಷಿಸಲಿ. ಪ್ರ. ಪ : ಧೀಮಾನ = ಪ್ರಜ್ಞಾಶಾಲಿ, ಅಮೇಯ ತನು ಧಾಮಾ =ಅತಿಶಯವಾದ ಅಂಗಲಾವಣ್ಯಯುಕ್ತ, ಆರ್ತ ಮಂಗಲದ ನಾಮಾ =ಭವಪೀಡಿತರಿಗೆ ಶುಭ ಪ್ರದವಾದ ತಾರಕನಾಮ, ರಮಾ =ಲಕ್ಷ್ಮಿ, ಕಮಲಭೂ= ಬ್ರಹ್ಮ, ಕಾಮಾರಿ = ಶಿವ, ಪನ್ನಗಪ =ಶೇಷ, ಕಾಮ = ಮನ್ಮಥ, ಅಹಿ ವೈರಿ = ವೃತ್ರಾಸುರನ ಶತ್ರುವಾದ ಇಂದ್ರ, (ಅಥವಾ ಸರ್ಪಗಳ ವೈರಿಯಾದ ಗರುಡ), ಗುರು = ಬೃಹಸ್ಪತಿ, ಸೋಮಾದಿ =ಚಂದ್ರ ಮೊದಲಾದ ದೇವತೆಗಳಿಂದ, ವಂದ್ಯಮಹಿಮಾ = ಪೂಜನೀಯವಾದ ಮಹಿಮೆಯುಳ್ಳವನು, ಸ್ಥೇಮಾದಿನಾ= ಪ್ರಪಂಚದ ಸ್ಥಿತಿ, ಲಯ, ಸೃಷ್ಟಿಗಳನ್ನು ಮಾಡುವುದರಿಂದ, ಅಪಗತ ಸೀಮಾ= ಸೀಮಾತೀತನು, ಸಖಲಸಾಮಾಜ ರಾವಣ ರಿಪು= ದುಷ್ಟಪರಿವಾರದಿಂದ ಕೂಡಿದ ರಾವಣನನ್ನು ಕೊಂದ, ಅಭೌಮಾಕೃತಿಃ =ಅಪ್ರಾಕೃತ ಶರೀರವುಳ್ಳ, ಪ್ರತನಸಾಮಾದಿ ವಿಷಯಃ = ಪ್ರಾಚೀನವಾದ ಸಾಮಾದಿ ವೇದಗಳಿಂದ ಪ್ರತಿಪಾದ್ಯನೂ ಆದ, ರಾಮಾಭಿಧಃ= ರಾಮ ಎಂಬ ಹೆಸರುಳ್ಳ, ಹರಿ= ನಾರಾಯಣನು (ಮಾಂ= ನನ್ನನ್ನು) ಅವತಾತ್ =ರಕ್ಷಿಸಲಿ. ಇದರಲ್ಲಿ ಶ್ರೀರಾಮಚಂದ್ರ ಅಪ್ರಾಕೃತ ಶರೀರವುಳ್ಳ ಸಾಕ್ಷಾತ್ ಪರಮಾತ್ಮ, ವೇದಪ್ರತಿಪಾದ್ಯ, ಲೋಕೋತ್ತರವಾದ ಲಾವಣ್ಯಪರಿಪೂರ್ಣ, ಸರ್ವದೇವೈಕವಂದ್ಯ ಎಂಬ ತತ್ವವಿದೆ. ಸಾಮಾಜ = ಸಮಾಜ ದೋಷಾssತ್ಮಭೂವಶ ತುರಾಷಾಡತಿಕ್ರಮಜ ರೋಷಾತ್ಮಭರ್ತವಚಸಾ ಪಾಷಾಣಭೂತಮುನಿಯೋಷಾ ವರಾತ್ಮತನು ವೇಷಾದಿ ದಾಯಿ ಚರಣಃ । ನೈಷಾದಯೋಷಿದಶುಭೇಷಾಕೃದಂಡಜನಿ ದೋಷಾಚರಾದಿ ಶುಭದೋ ದೋಷಾऽಗ್ರ ಜನ್ಮಮೃತಿ ಶೋಷಾಪಹೊsವತು ಸುದೋಷಾಂಘಿೃಜಾತ ಹನನಾತ್ ॥ ೨೨ ॥ ತಾ: ಕಾಮಾತುರನಾದ ದೇವೇಂದ್ರ ರಾತ್ರಿ ಹೊತ್ತಿನಲ್ಲಿ ಅಹಲೈಯಲ್ಲಿ ಆತಿ ಕ್ರಮವನ್ನೆಸಗಿದುದನ್ನು ತಿಳಿದ ಗೌತಮರು ಪತ್ನಿಯಾದ ಅಹಲೈಯನ್ನು ಕೋಪದಿಂದ ಕಲ್ಲಾಗು ಎಂದು ಶಪಿಸಿದರು. ಹಾಗೆ ಕಲ್ಲಾಗಿ ಬಿದ್ದ ಮುನಿಪತ್ನಿ ಅಹಲೈಯನ್ನು ತನ್ನ ಚರಣಸ್ಪರ್ಶಮಾತ್ರದಿಂದಲೇ ಪುನಃ ಮೊದಲಿನ ರೂಪಕ್ಕೆ ತಂದ ಮಹಾತ್ಮ, ಬೇಡಿತಿ (ಶಬರಿ), ಹೆಣವನ್ನು ತಿನ್ನುವ ಹದ್ದು (ಜಟಾಯು), ರಾಕ್ಷಸಕುಲದ ವಿಭೀಷಣ ಇಂಥವರಿಗೂ ಶುಭವನ್ನೇ ಮಾಡಿದ ಭಕ್ತ ಪರಾಧೀನ, ನಿಷ್ಪಕ್ಷಪಾತಿ, ಹಾಗೆ ಕಲ್ಲೆದೆಯವನೂ ಹೌದು. ತನ್ನ ಯೋಗ್ಯತೆಯನ್ನು ಮೀರಿ ತಪಸ್ಸುಗೈದ ಶೂದ್ರತಪಸ್ವಿಯನ್ನು ಕೈಯಾರೆ ಕೊಂದು ಬ್ರಾಹ್ಮಣನ ಮಗನನ್ನು ಬದುಕಿಸಿ, ಅವನ ಪುತ್ರ ಶೋಕವನ್ನು ನಿವಾರಿಸಿದ ಕರುಣಾಳು, ಇಂಥ ರಾಮಚಂದ್ರ ನಮ್ಮನ್ನು ಸಲಹಲಿ. ಪ್ರ. ಪ : ದೋಷಾ =ರಾತ್ರಿ ಹೊತ್ತು, ಆತ್ಮಭೂವಶ =ಕಾಮಪರವಶನಾದ, ತುರಾಷಾಟ್= ಇಂದ್ರನ, ಅತಿಕ್ರಮಜ = (ಪಾತಿವ್ರತ್ಯಭಂಗರೂಪದ) ಅತಿಕ್ರಮ ದಿಂದುಂಟಾದ, ರೋಷ =ಸಿಟ್ಟುಗೊಂಡ, ಆತ್ಮಭರ್ತೃವಚಸಾ= ತನ್ಮ ಪತಿ ಗೌತಮರ ಶಾಪರೂಪದ ಮಾತಿನಿಂದ, ಪಾಷಾಣಭೂತ =ಕಲ್ಲಾಗಿಬಿದ್ದ, ಮುನಿಯೋಷಾ=ಮುನಿಪತ್ನಿ ಅಹಲ್ಯಗೆ, ವರಾತ್ಮತನು ವೇಷಾದಿ =ಸುಂದರವಾದ ಮೊದಲಿನ ದೇಹ, ರೂಪಗಳನ್ನು, ದಾಯಿ =ಕೊಟ್ಟ, ಚರಣ: =ಪಾದಗಳುಳ್ಳವನು, ನೈಷಾದ ಯೋಷಿತ್ =ಬೇಡತಿಯಾದ ಶಬರಿ, ಅಶುಭೇಷಾಕೃತ =ಅಶುಭವಾದ ಹೆಣವನ್ನು ತಿನ್ನುವುದೇ ಮುಂತಾದುವುಗಳಲ್ಲಿ ಇಚ್ಛೆ ಮಾಡುವ, ಅಂಡಜನಿ =ಹದ್ದು, ಜಟಾಯು ಪಕ್ಷಿ, ದೋಷಾಚರಾದಿ =ರಾತ್ರಿಂಚರನಾದ ವಿಭೀಷಣ ಮುಂತಾದ ಭಕ್ತರಿಗೂ, ಶುಭದಃ= ಮಂಗಲಪ್ರದನೂ, ದೋಷಾ ತನ್ನ ಕೈಯಿಂದಲೇ, ಸುದೋಷ ತುಂಬ ದೋಷಯುಕ್ತನಾದ, ಅಂಘಿೃಜಾತ =ಶೂದ್ರ ತಾಪಸನ (ಪದ್ಭ್ಯಾಂ ಶೂದ್ರೋ ಅಜಾಯತ), ಹನನಾತ್ =ಕೊಂದುದರಿಂದ ಅಗ್ರಜನ್ಮ = ಬ್ರಾಹ್ಮಣ (ಪುತ್ರ)ನ, ಮೃತಿ ಶೋಷಾಪಹಃ = ಸತ್ತದುಃಖವನ್ನು ನಿವಾರಿಸಿದಂಥ ರಾಮಚಂದ್ರನು (ಮಾಂ = ನನ್ನನ್ನು ) ಅವತು ರಕ್ಷಿಸಲಿ. ಇದರಲ್ಲಿ ಅಹಲ್ಯಾ ವೃತ್ತಾಂತ, ಭಕ್ತರಾದ ಶಬರಿ, ಜಟಾಯು, ವಿಭೀಷಣಾದಿ ಗಳಿಗೆ ಮಾಡಿದ ಅನುಗ್ರಹ, ಶೂದ್ರ ತಪಸ್ವಿಯ ವಧ ಮುಂತಾದ ಘಟನೆಗಳಿಂದ ರಾಮಚಂದ್ರನ ಗುಣೈಕಪಕ್ಷಪಾತಿತ್ವವನ್ನು ಬಣ್ಣಿಸಿದೆ. ಓಂ ಕೃಷ್ಣಾಯ ನಮಃ ವೃಂದಾವನಸ್ಥ ಪಶುವೃಂದಾವನಂ, ವಿನುತ ವೃಂದಾರಕೈಕ ಶರಣಂ, ನಂದಾತ್ಮಜಂ, ನಿಹತ ನಿಂದಾಕೃದಾಸುರಜನಂ, ದಾಮಬದ್ಧ ಜಠರಮ್ । ವಂದಾಮ​ಹೇ, ವ​ಯಮಮಂದಾವ​ದಾತರುಚಿ ಮಂದಾಕ್ಷಕಾರಿ ವದನಂ, ಕುಂದಾಲಿದಂತಮುತ ಕಂದಾಸಿತಪ್ರಭತನುಂ, ದಾವರಾಕ್ಷಸಹರಮ್ ॥ ೨೩ ॥ ತಾ : ಗೋಕುಲದಲ್ಲಿ ದನಗಳ ಹಿಂಡನ್ನು ರಕ್ಷಿಸುತ್ತಾ, ದೇವತೆಗಳಿಗೂ ಪ್ರಮುಖ ರಕ್ಷಕನಾಗಿ, ನಿಂದಿಸುವ ರಕ್ಕಸರ ಸೊಕ್ಕನ್ನಡಗಿಸಿ, ಅವರ ಸಂಹಾರಕನಾಗಿದ್ದ ಆ ದಾಮೋದರ ಕೃಷ್ಣ. ಚಂದ್ರನೂ ನಾಚಿಕೊಳ್ಳುವಂಥ ಚೆಲುವಿನ ಮುಖ ಇವನದು, ಇವನ ದಂತಪಂಕ್ತಿಯೋ ಸಾಲಿಟ್ಟ ದುಂಡುಮಲ್ಲಿಗೆ ಮೊಗ್ಗುಗಳು, ನೋಡಲು ನೀಲ ಮೇಘಶ್ಯಾಮ, ಕಾಡಿನಲ್ಲಿದ್ದ ದುಷ್ಟ ರಕ್ಕಸರ ಸಂಹಾರವೇ ಇವನ ಕೆಲಸ. ಹೀಗೆ ದುಷ್ಟರ ಸಂಹಾರ, ಶಿಷ್ಟರ ಉದ್ಧಾರ ಮಾಡುತ್ತಿರುವ ನಂದಗೋಪನ ಮಗ ಗೋವಿಂದನನ್ನು ನಾವು ನಮಸ್ಕರಿಸುತ್ತೇವೆ. ಪ್ರ. ಪ : ವೃಂದಾವನಸ್ಥ = ವೃಂದಾವನದಲ್ಲಿದ್ದ, ಪಶುವೃಂದಾವನಂ= ಗೋವುಗಳ ಹಿಂಡಿಗೆ ರಕ್ಷಕನೂ, ವಿನುತ =ಶ್ರೇಷ್ಠರಾದ, ವೃಂದಾರಕ =ದೇವತೆಗಳಿಗೆ, ಏಕಶರಣಂ =ಮುಖ್ಯ ರಕ್ಷಕನೂ, ನಿಹತ =ಕೊಲ್ಲಲ್ಪಟ್ಟ, ನಿಂದಾಕೃದಾಸುರಜನಂ =ನಿಂದೆಗೈಯುವ ಕ್ರೂರಜನರುಳ್ಳವನೂ, ದಾಮಬದ್ಧ ಜಠರಂ = ಹಗ್ಗದಿಂದ ಬಿಗಿಯಲ್ಪಟ್ಟ ಉದರಪ್ರದೇಶವುಳ್ಳವನೂ, ಅಮಂದಾವದಾತರುಚಿ= ಅಮಿತ ಶುಭ್ರಕಾಂತಿಯಿಂದ ಬೆಳಗುವ ಚಂದ್ರನಿಗೆ, ಮಂದಾಕ್ಷಕಾರಿ =ಲಕ್ಷೆಯುಂಟುಮಾಡುವಂಥ, ವದನಂ=ಮುಖವುಳ್ಳವನೂ, ಕುಂದಾಲಿದಂತಂ =ದುಂಡುಮಲ್ಲಿಗೆಯ ಮೊಗ್ಗುಗಳ ಸಾಲಿನಂತೆ ದಂತಪಂಕ್ತಿಯುಳ್ಳವನೂ, ಕಂದ =ನೀರನ್ನು ಕೊಡುವ ಮೋಡದಂತೆ (ಕಂ ದದಾತೀತಿ), ಅಸಿತಪ್ರಭ ತನುಂ= ನೀಲಕಾಯವುಳ್ಳವನೂ ಆಗಿರುವ, ದಾವ =ವನದಲ್ಲಿದ್ದ, ರಾಕ್ಷಸಹರಂ= ರಕ್ಕಸರನ್ನು ಕೊಂದ, ನಂದಾತ್ಮಜಂ= ನಂದನಂದನನನ್ನು, ಉತ= ಪುನಃ, ವಯಂ= ನಾವು, ವಂದಾಮಹೇ =ವಂದಿಸುತ್ತೇವೆ. ಇದರಲ್ಲಿ ವೃಂದಾವನ, ಪಶುಪಾಲನೆ, ದುಷ್ಟ ಜನರ ಶಿಕ್ಷೆಯಿಂದ ದೇವತೆಗಳ ರಕ್ಷಣೆ, ಯಶೋದೆ ಮಗುವಿನ ತುಂಟತನ ತಾಳಲಾರದೆ, ಮಗುವನ್ನು ಹಗ್ಗದಿಂದ ಕಟ್ಟಿದುದು, ಕೃಷ್ಣನ ಲೋಕೋತ್ತರವಾದ ಲಾವಣ್ಯ ಇವೆಲ್ಲವೂ ಸೂಚಿತವಾಗಿದೆ. ದಾನ​=ಆರಣ್ಯ, ದವದಾಮ್ ವನಾರಣ್ಯವಹ್ನೀ (ಅಮರ) ಗೋಪಾಲಕೋತ್ಸವ ಕೃತಾಪಾರ ಭಕ್ಶ್ಯ​ರಸ ಸೂಪಾನ್ನ ಲೋಪ ಕುಪಿತಾ- ಶಾಪಾಲ ಯಾಪಿತಲಯಾಪಾಂಬುದಾಲಿ ಸಲಿಲಾಪಾಯಧಾರಿತ ಗಿರೇ । ಸ್ವಾಪಾಂಗ ದರ್ಶನಜ ತಾಪಾಂಗ ರಾಗಯುತ ಗೋಪಾಂಗನಾಂಶುಕಹೃ ತಿ- ವ್ಯಾಪಾರ ಶೌಂಡ, ವಿವಿಧಾಪಾಯತಸ್ತ್ವಮವ ಗೋಪಾರಿಜಾತ ಹರಣ ॥ ೨೪ ॥ ತಾ : ನಂದಗೋಪ ಮೊದಲಾದ ಗೋವಳ ಹಿರಿಯರು ಪ್ರತಿವರ್ಷ ಮಾಡುವ ಇಂದ್ರೋತ್ಸವಕ್ಕಾಗಿ ವಿವಿಧ ಭಕ್ಷ್ಯಭೋಜ ಶಾಲ್ಯನ್ನಗಳನ್ನು ಅಣಿಗೊಳಿಸಿದಾಗ, ಕೃಷ್ಣ ಆ ಉತ್ಸವವನ್ನು ತಡೆಹಿಡಿದು, ತಮ್ಮನ್ನು ಕಾಪಾಡುವ ಗೋವರ್ಧನಕ್ಕೆ ಉತ್ಸವವಾಗಲಿ ಎಂದು ಸೂಚಿಸಿದ. ತನಗೆ ಸಲ್ಲಬೇಕಾದ ಪೂಜೆಗೆ ವಿಘ್ನ ಮಾಡಿದನೆಂದು ಕುಪಿತನಾದ ಇಂದ್ರ, ಅಲ್ಲಿ ಉತ್ಸವವಾಗದಂತೆ ಮಳೆಗರೆಯಲು ಮೇಘಗಳನ್ನೆಲ್ಲ ಕಳುಹಿಸಿದ. ಎಲ್ಲೆಲ್ಲೂ ಧಾರಾಸಂಪಾತವಾದ ಪ್ರಲಯವೃಷ್ಟಿ ಆಯಿತು. ಗೋವುಗಳನ್ನೂ ಗೋವಳರನ್ನೂ ಈ ಅತಿವೃಷ್ಟಿಯಿಂದ ರಕ್ಷಿಸಲು ಕೃಷ್ಣ ಗೋವರ್ಧನ ಗಿರಿಯನ್ನೆ ಕೊಡೆಯ ಹಾಗೆ ಎತ್ತಿಹಿಡಿದ. ಕೃಷ್ಣನ ಓರೆನೋಟದಿಂದಲೇ ಮೋಹಗೊಂಡ ಗೋಪಿಯರಿಗೆ ಮೈಬಿಸಿಯಾ ಯಿತು, ಅವರು ಚಂದನ ಕುಂಕುಮಾದಿಗಳನ್ನು ಹಚ್ಚಿಕೊಂಡು ಸ್ನಾನಕ್ಕೆ ಇಳಿದೊಡನೆ ಅವರ ಸೀರೆಗಳನ್ನು ಕದ್ದು ಮರವನ್ನೇರಿ ಕುಳಿತ ಜಾಣ (ಮತ್ತೆ ಶರಣಾಗತರಾಗಿ ನಿಂತ ಅವರಿಗೆ ವಸ್ತ್ರಗಳನ್ನು ಹಿಂದಿರುಗಿಸಿದ). ಗೋವಳರ ಶತ್ರುಗಳನ್ನು ತರಿದುಹಾಕಿದ, ಸ್ವರ್ಗದಿಂದ ಪಾರಿಜಾತವೃಕ್ಷವನ್ನು ತಂದು ಭೂಮಿಯಲ್ಲಿ ನೆಟ್ಟ, ಇಂಥ ಅದ್ಭುತಗಳನ್ನು ಮೆರೆದ ಶ್ರೀಕೃಷ್ಣ ನಮ್ಮನ್ನು ಎಲ್ಲ ತರದ ಅಪಾಯಗಳಿಂದ ರಕ್ಷಿಸಲಿ. ಪ್ರ. ಪ : ಗೋಪಾಲಕ =ನಂದ ಮೊದಲಾದವರು ಮಾಡುವ, ಉತ್ಸವಕೃತ= ಇಂದ್ರಪೂಜೆಗಾಗಿ ತಯಾರಿಸಿದ, ಅಪಾರ ಭಕ್ಶ್ಯ​=ರಸ-ಸೂಪ-ಅನ್ನ ಲೋಪ ವಿಶೇಷವಾದ ಭಕ್ಷ್ಯಗಳು, ಪಾಯಸ, ತೋವೆ, ಶಾಲ್ಯನ್ನ ಮುಂತಾದ ವಸ್ತುಗಳು ತನಗೆ ತಪ್ಪಿದುದರಿಂದ, ಕುಪಿತ= ಆಕ್ರೋಧಗೊಂಡ, ಆಶಾಪಾಲ​= ದಿಕ್ಷಾಲಕನಾದ ಇಂದ್ರನಿಂದ, ಯಾಪಿತ =ಕಳುಹಿಸಲ್ಪಟ್ಟ, ಲಯಾಪ = ಪ್ರಲಯಕಾಲದಂತೆ ನೀರು ಸುರಿಸುವ, ಅಂಬುದಾಲಿ= ಮೇಘ ಸಮುದಾಯದ, ಸಲಿಲಾಪಾಯ = ಜಲಪ್ರವಾಹದ ಪರಿಹಾರಕಾಗಿ, ಧಾರಿತಗಿರೇ= ಎತ್ತಿಹಿಡಿದ ಗೋವರ್ಧನಗಿರಿಯುಳ್ಳವನೇ, ಸ್ವಾಪಾಂಗದರ್ಶನಜ ತಾಪ ತನ್ನ ಕಟಾಕ್ಷವೀಕ್ಷಣಮಾತ್ರದಿಂದುಂಟಾದ ತಾಪ (ಶಮನಕ್ಕಾಗಿ), ಅಂಗರಾಗಯುತ - ಚಂದನಾದಿ ಪರಿಮಲದ್ರವ್ಯ ಹಚ್ಚಿಕೊಂಡ, ಗೋಪಾಂಗನಾ ಗೋಪಿಕಾ ಸ್ತ್ರೀಯರ, ಅಂಶುಕಹೃತಿ =ವಸ್ತ್ರಾಪಹಾರದ (ಸ್ತ್ರೀಯಾಂ ಕಿನ್), ವ್ಯಾಪಾರಶೌಂಡ ಕೆಲಸದಲ್ಲಿ ನಿಪುಣನೆ, ಗೋಪ=ಗೋವಳರ, ಅರಿಜಾತ=ಶತ್ರು ಸಮುದಾಯದ, ಹರಣ= ವಿನಾಶಕರನೆ [ಅಥವಾ ಗೋ-ಸ್ವರ್ಗಲೋಕದ, ಪಾರಿಜಾತ=ಪಾರಿಜಾತದ ಮರವನ್ನು, ಹರಣ =ಅಪಹರಿಸಿಕೊಂಡು ಬಂದವನೆ ತ್ವಂ =ನೀನು, ವಿವಿಧಾಪಾಯತಃ=ನಾನಾವಿಧದ ಅಪಾಯಗಳಿಂದ (ನಮ್ಮನ್ನು), ಅವ= ರಕ್ಷಿಸು. ಇದರಲ್ಲಿ ಗೋವರ್ಧನೋದ್ಧಾರ, ಗೋಪೀವಸ್ತ್ರಾಪಹಾರ, ಪಾರಿಜಾತಾಪಹರಣ ಮುಂತಾದ ಭಾಗವತದ ಕತೆ ಸೂಚಿತವಾಗಿದೆ. ಕಂಸಾದಿಕಾಸದವತಂಸಾವನೀಪತಿ ವಿಹಿಂಸಾಕೃತಾತ್ಮ ಜನುಷಂ ಸಂಸಾರ ಭೂತಮಿಹ ಸಂಸಾರಬದ್ಧ ಮನಸಂ ಸಾರಚಿತ್ಸುಖತನುಮ್ । ಸಂಸಾಧಯಂತಮನಿಶಂ ಸಾತ್ವಿಕವ್ರಜಮಹಂ ಸಾದರಂ ಬತ ಭಜೇ ಹಂಸಾದಿ ತಾಪಸರಿರಂಸಾಸ್ಪದಂ ಪರಮಹಂಸಾದಿ ವಂದ್ಯ ಚರಣಮ್॥ ೨೫ ॥ ತಾ: ಕಂಸ ಮೊದಲಾದ ದುಷ್ಟರಾಜರ ಸಂಹಾರಕ್ಕಾಗಿಯೇ ಭೂಲೋಕದಲ್ಲಿ ಅವತರಿಸಿದವನೂ, ಸರ್ವಶ್ರೇಷ್ಠರೂ ಭಕ್ತೋತ್ತಮರಲ್ಲಿ ವಿಶೇಷವಾದ ಆಸಕ್ತಿಯುಳ್ಳ ವರೂ ಆದ ಸಾತ್ವಿಕರಿಗೆ ಜ್ಞಾನಾನಂದಮಯವಾದ ಶರೀರವನ್ನು ಕೊಡುವವನೂ (ಮುಕ್ತಿಪ್ರದನೂ) ಆದ, ಕುಟೀಚಕ ಬಹೂದಕ ಮೊದಲಾದ ಸಂನ್ಯಾಸಿಗಳಿಗೆ ಧ್ಯಾನ ಯೋಗ್ಯನೂ, ಸನಕಾದಿಮುನಿಗಳಿಂದ ವಂದ್ಯನೂ ಆದ ಕೃಷ್ಣನನ್ನು ನಾನು ಎಡೆಬಿಡದೆ ಭಕ್ತಿಯಿಂದ ಮನತುಂಬಿ ಭಜಿಸುತ್ತೇನೆ. ಪ್ರ.ಪ : ಇಹ ಈ ಭೂಲೋಕದಲ್ಲಿ, ಕಂಸಾದಿಕ ಕಂಸ ಮೊದಲಾದ ಅಸದವ ತಂಸಾವನೀಪತಿ=ದುಷ್ಟಶಿಖಾಮಣಿಗಳಾದ ರಾಜರ, ವಿಹಿಂಸಾಕೃತ=ವಿನಾಶಕ್ಕಾಗಿಯೇ ಎತ್ತಿದ, ಆತ್ಮಜನುಷಂ= ಸ್ವ ಅವತಾರವುಳ್ಳವನೂ, ಸಂ+ ಸಾರಭೂತಂ =ಸರ್ವ ಶ್ರೇಷ್ಠರೂ, ಸಂಸಾರ = ಉತ್ತಮ ಭಕ್ತರಲ್ಲಿ (ಅಂಥ ಪ್ರಪಂಚದಲ್ಲಿ), ಬದ್ಧ ಮನಸಂ= ನಿವಿಷ್ಟವಾದ ಮನಸ್ಸುಳ್ಳ, ಸಾತ್ವಿಕವ್ರಜಂ = ಸತ್ವಗುಣ ಸಂಪನ್ನರ (ಸಮುದಾಯ ವನ್ನು, ಸಾರಚಿತ್ಸುಖತನುಂ = ಒಳ್ಳೆಯ ಜ್ಞಾನಾನಂದಮಯವಾದ ಶರೀರವುಳ್ಳವ ರನ್ನಾಗಿ, ಸಾಧಯಂತ =ಮಾಡುತ್ತಿರುವವನೂ, ಹಂಸಾದಿ, ಕುಟೀಚಕ ಬಹೂದಕಾದಿ ತಾಪಸ - ಸಂನ್ಯಾಸಿಗಳ, ರಿರಂಸಾಸ್ಪದಂ= ವಿಹಾರಭೂಮಿಯೂ, ಪರಮಹಂಸಾದಿ =ಸನಕಾದಿ ಯೋಗಿಗಳಿಂದ, ವಂದ್ಯ ಚರಣಂ= ಪೂಜನೀಯವಾದ ಪಾದವುಳ್ಳವನೂ ಆದ, ಕೃಷ್ಣಂ= ಕೃಷ್ಣನನ್ನು, ಅಹಂ = ನಾನು, ಅನಿಶಂ= ಸತತವಾಗಿ, ಸಾದರಂ = ಭಕ್ತಿಯಿಂದ, (ಬತ = ಆಹಾ), ಭಜೇ = ಭಜಿಸುತ್ತೇನೆ. ದುಷ್ಟಶಿಕ್ಷಣ ಶಿಷ್ಟ ರಕ್ಷಣ ಇವೇ ಕೃಷ್ಣಾವತಾರದ ಉದ್ದೇಶ, ಸಾತ್ವಿಕರಿಗೆ ಮಾತ್ರ ಮುಕ್ತಿದಾಯಕ, ಪರಮಹಂಸಾದಿ ಶ್ರೇಷ್ಠ ಮುನಿಗಳು ಮಾತ್ರ ಯಾವಾಗಲೂ ಕೃಷ್ಣಧ್ಯಾನದಲ್ಲಿ ನಿರತರಾಗಿರುತ್ತಾರೆ ಎಂಬ ಭಾವ. ರಾಜೀವನೇತ್ರ ವಿದುರಾಜೀವ ಮಾಮವತು ರಾಜೀವ ಕೇತನ ವಶಂ ವಾಜೀಭಪತ್ತಿ ನೃಪರಾಜೀರಥಾನ್ವಿತ ಜರಾಜೀವಗರ್ವಶಮನ । ವಾಜೀಶವಾಹ ಸಿತವಾಜೀಶ ದೈತ್ಯತನುವಾಜೀಶಭೇದಕರದೋ- ರ್ಜಾಜೀಕದಂಬನವರಾಜೀವ ಮುಖ್ಯಸುಮರಾಜೀಸುವಾಸಿತ ಶಿರಃ ॥ ೨೬ ॥ ತಾಃ ಜ್ಞಾನಿಗಳಿಗೆ ಜೀವನಾಧಾರಭೂತನಾದ ರಕ್ಷಕನೆ, ಚತುರಂಗಬಲೋ ಪೇತನೂ ರಾಜರ ಸಹಾಯವುಳ್ಳವನೂ ಆಗಿದ್ದ ಆ ಜರಾಸಂಧನ ಗರ್ವವನ್ನು ಮುರದವನೆ, ಗರುಡವಾಹನ, ಪಾರ್ಥನ ಸ್ವಾಮಿ, ಕುದುರೆಯ ರೂಪತಳೆದು ಬಂದ ಕೇಶಿ ಎಂಬ ದಾನವನನ್ನು ಕೊಂದವನೆ, ಜಾಜಿ, ಬಯನೆ, ಹೊಸ ತಾವರೆ ಹೂವುಗಳಿಂದ ಪರಿಮಳ ತುಂಬಿದ ಕೇಶವುಳ್ಳ ತಾವರೆಗಣ್ಣನಾದ ಕೃಷ್ಣ ನನ್ನನ್ನು ಕಾಮಬಾಧೆಯಿಂದ ರಕ್ಷಿಸು. ಪ್ರ. ಪ : ರಾಜೀವನೇತ್ರ = ತಾವರೆಗಣ್ಣನೆ, ವಿದುರಾಜೀವ =ಜ್ಞಾನಿಗಳಿಗೆ (ಅಥವಾ ವಿದುರನಿಗೆ ಜೀವನಾಧಾರಭೂತನಾದ ರಕ್ಷಕನೆ, ವಾಜಿ = ಕುದುರೆ, ಇಭ= ಆನೆ, ಪತ್ತಿ = ಕಾಲಾಳು, ನೃಪರಾಜೀ= ರಾಜರ ಸೈನ್ಯ, ರಥ= ತೇರು ಇವುಗಳಿಂದ, ಅನ್ವಿತ= ಕೂಡಿದ, ಜರಾಜೀವ =ಜರೆಯಿಂದ ಬದುಕಿಸಲ್ಪಟ್ಟ ಜರಾಸಂಧನ, ಗರ್ವಶಮನ = ಮದವನ್ನು ಮುರಿದವನೆ, ವಾಜೀಶವಾಹ= ಗರುಡವಾಹನನೆ (ನಗೌಕೋವಾಜಿ ವಿಕಿರಃ), ಸಿತವಾಜೀಶ= ಶ್ವೇತವಾಹನನಾದ ಪಾರ್ಥನ ಸ್ವಾಮಿಯೆ, ದೈತ್ಯತನು ವಾಜೀಶ= ಕುದುರೆಯ ರೂಪದಲ್ಲಿ ಬಂದ ಕೇಶಿ ಎಂಬ ದೈತ್ಯನ ಶರೀರವನ್ನು, ಭೇದಕರದೋಃ =ಭೇದಿಸಿದ ತೋಳುಗಳುಳ್ಳವನೆ, ಜಾಜೀ =ಜಾಜಿಹೂವು, ಕದಂಬ=ಬಯನೆ, ನವ ರಾಜೀವ= ಹೊಸ ತಾವರೆ, ಮುಖ್ಯ =ಮುಂತಾದ, ಸುಮರಾಜಿ= ಹೂವುಗಳಿಂದ, ಸುವಾಸಿತಶಿರಃ = ಪರಿಮಳಿತವಾದ ತಲೆಗೂದಲುಳ್ಳ, ಶ್ರೀಕೃಷ್ಣ,(ಭವಾನ್ =ನೀನು), ರಾಜೀವಕೇತನ ವಶಂ= ಮೀನಕೇತನನಾದ ಮನ್ಮಥನ ಅಧೀನನಾದ, ಮಾಂ= ನನ್ನನ್ನು, (ರಾಜೀವಃ ಶಕುಲಸ್ತಿಮಿಃ), ಅವತು =ರಕ್ಷಿಸು. (ಎಲ್ಲವು ಸಂಬುದ್ಧಿ ಆದ್ದರಿಂದ ಭವಾನ್ ಎಂಬುದಿಲ್ಲಿ ಅಧ್ಯಾಹಾರ) ಜರಾಸಂಧ ವಧೆ, ಕೇಶಿಗರ್ವಮರ್ದನ, ಮುಂತಾದ ಭಾಗವತದ ಕತೆ ಇಲ್ಲಿ ಸೂಚಿತವಾಗಿದೆ. ( ಜ್ಞಾತಾ ತು ವಿದುರೋ ವಿಂದುಃ' (ಅಮರ) ಕಾಲೀಹ್ರದಾವಸಥ ಕಾಲೀಯಕುಂಡಲಿಪಕಾssಲೀಸ್ಥಪಾದನಖರಾ- ವ್ಯಾಲೀನವಾಂಶುಕರವಾಲೀಗಣಾರುಣಿತ ಕಾಲೀರುಚೇ ಜಯ ಜಯ । ಕೇಲೀಲವಾಪಹೃತ ಕಾಲೀಶದತ್ತವರ ನಾಲೀಕದೃಪ್ತದಿತಿ ಭೂ ಚೂಲೀಕ ಗೋಪಮಹಿಲಾssಲೀ ತನೂ ಘುಸೃಣ ಧೂಲೀಕಣಾಂಕ ಹೃದಯ ॥ ೨೭ ॥ ತಾ : ಯಮುನೆಯ ಮಡುವಿನಲ್ಲಿ ವಾಸವಾಗಿದ್ದ ಕಾಲಿಯ ಸರ್ಪನನ್ನು ಮೆಟ್ಟಿ ಅವನ ಹೆಡೆಗಳ ಮೇಲೆ ಕಾಲುಗಳನ್ನಿಟ್ಟು ಕುಣಿಯುವಾಗ ಕೃಷ್ಣನ ಅರುಣವರ್ಣದ ಪಾದನಖಗಳ ಕಾಂತಿ ನೀರಲ್ಲಿ ಪ್ರತಿಫಲಿಸಿ ಆ ಕಪ್ಪು ನೀರೆಲ್ಲ ಕೆಂಪಗಾಗಿ ಕಂಡಿತು. ಶಿವನು ದೈತ್ಯರಿಗೆ ಕೊಟ್ಟ ವರದಿಂದ ಅವರು ಉದ್ವತ್ತರಾದಾಗ ಲೀಲಾಮಾತ್ರ ದಿಂದಲೇ ಅವರ ಶಿರಸ್ಸನ್ನು, ತರಿದುಹಾಕಿದ; ಗೋಪಿಕಾಸ್ತ್ರಿಯರ ಆಲಿಂಗನದಿಂದ ಅವರ ಮೈಯಲ್ಲಿದ್ದ ಸುಗಂಧದ ಕಣಗಳು ಕೃಷ್ಣನ ಎದೆಯಲ್ಲಿ ಸೇರಿದುವು. ಇಂಥ ಕೃಷ್ಣನಿಗೆ ಜಯವಾಗಲಿ. ಪ್ರ. ಪ : ಕಾಲೀಹ್ರದಾವಸಥ=ಯಮುನೆಯ ಮಡುವಿನಲ್ಲಿ ಮನೆಮಾಡಿ ರುವ, ಕಾಲೀಯ ಕುಂಡಲಿಪ= ಕಾಲೀಯ ಎಂಬ ಸರ್ಪರಾಜನ, ಕ+ ಆಲೀ + ಸ್ಥ =ತಲೆಗಳಲ್ಲಿ ಇಟ್ಟ, ಪಾದನಖರ = ಕಾಲುಗುರುಗಳೆಂಬ, ಅವಿ ಆಲೀ =ಸೂರ್ಯ ಸಮುದಾಯದ, (ಅವಯಃ ಶೈಲ ಮೇಷಾರ್ಕಾ) ನವಾಂಶು = ಎಳೆಯ ಕದಿರುಗಳೆಂಬ,ಕರವಾಲೀ ಗಣ = ಖಡ್ಗ ಗಳ ಗಡಣದಿಂದ, ಅರುಣಿತ = ಕೆಂಪಗೆ ಮಾಡಲ್ಪಟ್ಟ, ಕಾಲೀರುಚೇ = ಯಮುನೆಯ ಕಾಂತಿಯುಳ್ಳವನೆ, ಕೇಲೀಲವ = ತುಸು ಲೀಲೆಯಿಂದಲೇ, ಅಪಹೃತ= ಅಪಹರಿಸಲ್ಪಟ್ಟ, ಕಾಲೀಶದತ್ತ = ಶಿವನು ಕೊಟ್ಟ, ವರ ನಾಲೀಕ ದೃಪ್ತ=ಅತಿ ಪ್ರಿಯವಾದ ವರದಿಂದ, (ನ + ಆಲೀಕ, ಸಹಜವಾದ ವರದಿಂದ) ಮದಿಸಿದ, ದಿತಿ ಭೂ ಚೂಲೀಕ= ದೈತ್ಯರ ಶಿರಗಳುಳ್ಳವನೆ, ಗೋಪ ಮಹಿಲಾಲೀ = ಗೋಪಿಯರ ಸಮುದಾಯದ, ತನು ಘುಸೃಣ = ದೇಹದಲ್ಲಿ ಹಚ್ಚಿದ ಸುಗಂಧದ, ಧೂಲೀ ಕಣಾಂಕ ಹೃದಯ = ಧೂಲಿಯ ಕಣಗಳಿಂದ ಚಿಹ್ನತವಾದ ಎದೆಯುಳ್ಳವನೆ, ಕೃಷ್ಣ, ನಿನಗೆ ಜಯ ಜಯ= ಜಯವಾಗಲಿ. ಮೂರನೇ ಪಾದ "ಕೇಲೀಲವಾಪಹೃತ,......., ಮತ್ತು ನಾಲ್ಕನೇ ಪಾದದ ಚೂಲೀಕ' ಎಂಬಲ್ಲಿ ವರೆಗೆ ಸಮಸ್ತ ಪದ. ಕಾಲೀ + ಈಶ = ಶಿವ. ( ಉಮಾ ಕಾತ್ಯಾಯನೀ ಗೌರೀ ಕಾಲೀ ಹೈಮವ ತೀಶ್ವರೀ' (ಅಮರ) ಕೃಷ್ಣಾದಿ ಪಾಂಡುಸುತ ಕೃಷ್ಣಾಮ​ನಃ ಪ್ರಚುರ ತೃಷ್ಣಾಸುತೃಪ್ತಿಕರವಾಕ್ ಕೃಷ್ಣಾಂಕಸಾಽಽಲಿರತ, ಕೃಷ್ಣಾಭಿಧಾಘಹರ ಕೃಷ್ಣಾದಿ ಷಣ್ಮ ಹಿಲ ಭೋಃ । ಪುಷ್ಣಾತು ಮಾಮಜಿತ ನಿಷ್ಣಾತವಾರ್ಧಿಮುದನುಷ್ಣಾಂಶು ಮಂಡಲ ಹರೇ ಜಿಷ್ಣೋ ಗಿರೀಂದ್ರಧರ ವಿಷ್ಣೋ ವೃಷಾವರಜ ದೃಷ್ಣೋ ಭವಾನ್ ಕರುಣಯಾ॥೮॥ ತಾ : ಪಾಂಡವರ ಮತ್ತು ದ್ರೌಪದಿಯ ಮನದ ಬಯಕೆಯನ್ನು (ದುರ್ಯೋ ಧನನ ಸಂಹಾರ) ಪೂರೈಸುವಂತೆ ಮಾಡುವೆನೆಂದು ಮಾತುಕೊಟ್ಟವನೂ, ಶಂಖ ಚಕ್ರಾದಿ ವೈಷ್ಣವಚಿಹ್ನೆಗಳನ್ನು ಧರಿಸಿದ ಭಕ್ತಜನರ ಪಕ್ಷಪಾತಿಯೂ, (ರುಕ್ಷ್ಮಿಣೀ ಸತ್ಯಭಾಮೆಯರಲ್ಲದೆ) ಕಾಳಿಂದೀ ಮೊದಲಾದ ಆರುಮಂದಿ ರಾಣಿಯರುಳ್ಳವನೂ, ಪಾಪಹರನೂ, ಏಕಾಂತಭಕ್ತರೆಂಬ ಕಡಲಿಗೆ ಮುದವುಕ್ಕಿಸುವ ಪೂರ್ಣಚಂದ್ರನೂ, ಜಯಶೀಲನೂ, ಗೋವರ್ಧನಗಿರಿಧಾರಿ, ವ್ಯಾಪ್ತ, ಉಪೇಂದ್ರ, ಧೈರ್ಯಶಾಲಿಯೂ ಆದ ಶ್ರೀಕೃಷ್ಣ ಪರಮಾತ್ಮಾ ! ದಯಮಾಡಿ ನನಗೆ ಏಳೆ ಯಾಗುವಂತೆ ಹರಸು. ಪ್ರ. ಪ : ಕೃಷ್ಣಾದಿ ಪಾಂಡುಸುತ= ಅರ್ಜುನ (ಅಥವಾ) ಭೀಮ ಮೊದ ಲಾದ ಪಾಂಡವರ ಮತ್ತು ಕೃಷ್ಣಾ = ದೌಪದಿಯ, ಮನಃಪ್ರಚುರತೃಷ್ಣಾ= ಮನಸ್ಸಿ ನಲ್ಲಿರುವ ಕೌರವವಧ ಮುಂತಾದ ಹಲವು ಆಸೆಗಳನ್ನು ನೆರವೇರಿಸುವಂಥ, ಸುತೃಪ್ತಿಕರವಾಕ್ = ನೆಮ್ಮದಿ ಕೊಡುವಂಥ ಮಾತುಕೊಟ್ಟವನೇ, ಕೃಷ್ಣಾಂಕಪಾಲಿರತ= ಕೃಷ್ಣನ ಶಂಖಚಕ್ರಾದಿ ಚಿಹ್ನೆ ಧರಿಸಿಕೊಳ್ಳುವ ಸಜ್ಜನ ವೈಷ್ಣವರಲ್ಲಿ, ನಿರತನೆ, (ಅಥವಾ ಕಾಳಿಂದಿಯ ತೊಡೆಯಲ್ಲಿ ವಿಹರಿಸುವವನೆ) ಅಘಹರ= ಪಾಪನಿವಾರಕನೆ, ಕೃಷ್ಣಾದಿ ಷಣ್ಮಹಿಲ -ಕಾಳಿಂದೀ, ಭದ್ರಾ, ನೀಲಾ, ಮಿತ್ರವಿಂದಾ, ಲಕ್ಷಣಾ, ಜಾಂಬವತಿ ಈ ಆರುಮಂದಿ ಅರಸಿಯರುಳ್ಳವನೆ, ಅಜಿತ= ಸೋಲಿಲ್ಲದವನೆ, ನಿಷ್ಣಾತ ವಾರ್ಧಿಮುದನುಷ್ಣಾಂಶು ಮಂಡಲ =ನಿಷ್ಠೆಯಿಂದಿರುವ ಭಕ್ತಸಾಗರದ ಸಂತಸ ಉಕ್ಕಿಸುವ ಚಂದ್ರಬಿಂಬ ವೆನಿಸಿದ, ಜಿಷ್ಟೋ= ಜಯಶಾಲಿಯೆ, ಗಿರೀಂದ್ರಧರ= ಗೋವರ್ಧನವನ್ನೆತ್ತಿ ಹಿಡಿದವನೆ, ವಿಷ್ಣೋ= ವ್ಯಾಪ್ತನೆ, ವೃಷಾವರಜ = ಇಂದ್ರನ ತಮ್ಮನೆನಿಸಿದ, ದೃಷ್ಣೋ = ಜಯಶೀಲನಾದ, ಕೃಷ್ಣಾಭಿಧ =ಕೃಷ್ಣ ಎಂಬ ಪರಮಾತ್ಮಾ ! ಭೋ ಹರೇ= ಎಲೈಹರಿಯೇ, ಕರುಣಯಾ= ದಯೆಯಿಂದ, ಮಾಂ =ನನ್ನನ್ನು, ಪುಷ್ಣಾತು= ಹರಸು. (ಇಲ್ಲಿ ಎಲ್ಲ ಸಂಬುದ್ಧಿ ಇರುವುದರಿಂದ ಭವಾನ್ =ನೀನು, ಎಂಬುದು ಅಧ್ಯಾಹಾರ್ಯ) ಇದರಲ್ಲಿ ಪಾಂಡವರ ಹಿತಚಿಂತಕ, ವೈಷ್ಣವದೀಕ್ಷಾಬದ್ಧರಲ್ಲಿ ಪಕ್ಷಪಾತಿ, ರುಕ್ಷ್ಮಿಣೀ ಸತ್ಯಭಾಮೆಯರು ಮತ್ತು ಉಳಿದ ಆರುಮಂದಿ ಮಹಿಷಿಯರ ಅರಸ, ತನ್ನ ಏಕಾಂತಭಕ್ತರಿಗೆ ಹರ್ಷದಾಯಕ ಮುಂತಾದ ಕೃಷ್ಣನ ಗುಣಗಳ ಉಲ್ಲೇಖವಿದೆ. ಕೃಷ್ಣಾ೦ಕಪಾಲಿರತ = ಯಮುನೆಯ ಅಥವಾ ಕಾಳಿಂದಿಯ ಆಲಿಂಗನದಲ್ಲಿ ನಿರತನಾದವನು, ಎಂಬ ಅರ್ಥವೂ ಆಗಬಹುದು. ವಾಸವೋ ವೃತ್ರ​ಹಾ ವೃಷಾ (ಆಮರ). ರಾಮಾಶಿರೋಮಣಿ ಧರಾಮಾಸಮೇತ, ಬಲರಾಮಾನುಜಾಭಿಧ ರತಿಂ ಮೈಮಾಸುರಾಂತಕರ, ತೇ ಮಾರತಾತ ದಿಶ ಮೇ ಮಾಧವಾಂಘ್ರಿಕಮಲೇ । ಕಾಮಾರ್ತಭೌಮಪುರ ರಾಮಾವಲಿ ಪ್ರಣಯನಾಮಾಕ್ಷಿ ಪೀತ ತನುಭಾ ಭೀಮಾಹಿನಾಥಮುಖ ಮಾನಿಕಭಿನುತ ಭೀಮಾಭಿವಂದ್ಯ​ಚರಣ ॥ ೨೯ ॥ ತಾ: ಚೆಲುವೆಯರ ಬೈತಲೆವಣಿಗಳಂತಿರುವ ಶ್ರೀದೇವಿ ಭೂದೇವಿಯರಿಂದ ಕೂಡಿದ ನೀನು ಬಲಭದ್ರನ ಸೋದರ, ಮಯಪುತ್ರನಾದ ವ್ಯೋಮಾಸುರನನ್ನು ವಧಿಸಿದವನು. ಮದನಜನಕ, ನರಕಾಸುರನ ನಗರದಲ್ಲಿದ್ದ ಹದಿನಾರುಸಾವಿರದ ನೂರುಮಂದಿ ಲಲನೆಯರು ಕಾಮವಶರಾಗಿ ತಮ್ಮ ಮಾದಕವಾದ ಬೊಗಸೆಗಣ್ಣುಗಳಿಂದ ನಿನ್ನ ಅಂಗಲಾವಣ್ಯವನ್ನು ಹೀರಿದರಲ್ಲವೆ! ರುದ್ರ ಶೇಷ ಮುಂತಾದ ದೇವತೆಗಳೂ ನಿನ್ನ ಅನುಚರರು, ಭೀಮಸೇನನಿಗೆ ನಿನ್ನಲ್ಲಿ ಗಾಢ ಭಕ್ತಿ, ಇಂಥ ಲಕ್ಷ್ಮೀಪತಿಯೆ ನಿನ್ನ ಪಾದಕಮಲಗಳಲ್ಲಿ ನನಗೆ ದೃಢವಾದ ಭಕ್ತಿ ಇರುವಂತೆ ಅನುಗ್ರಹಿಸು. ಪ್ರ. ಪ : ರಾಮಾಶಿರೋಮಣಿ =ಲಲನೆಯರ ಮುಂದಲೆ ಮಣಿಯಂತಿರುವ, ಧರಾ ಮಾ ಸಮೇತ =ಭೂದೇವಿ ಶ್ರೀದೇವಿಯರೊಡನಿರುವವನೆ!, ಬಲರಾಮಾನುಜಾಭಿಧ= ಬಲರಾಮನ ತಮ್ಮನೆನಿಸಿದವನೆ!, ವ್ಯೋಮಾಸುರಾಂತಕರ =ಮಯಪುತ್ರ ವ್ಯೋಮಾಸುರನ ಸಂಹಾರಕನೆ, ಮಾರತಾತ =ಮದನ ಜನಕ, ಕಾಮಾರ್ತ =ಕಾಮಪೀಡಿತೆಯರಾದ, ಭೌಮಪುರ ರಾಮಾವಲಿ= ಭೂಮಿಯ ಮಗ​ ನರಕಾಸುರನ ನಗರದಲ್ಲಿದ್ದ (ಹದಿನಾರುಸಾವಿರದ ನೂರುಮಂದಿ) ಸುಂದರಿಯರ, ಪ್ರಣಯ ವಾಮಾಕ್ಷಿ = ಪ್ರೀತಿ ತುಂಬಿದ ಬೊಗಸೆಗಂಗಳಿಂದ, ಪೀತ ತನು ಭಾಃ = ಹೀರಲ್ಪಟ್ಟ ಅಂಗಲಾವಣ್ಯವುಳ್ಳವನೆ!,ಭೀಮಾಹಿನಾಥ ಮುಖ= ರುದ್ರ, ಶೇಷ ಮೊದಲಾದ, ವೈಮಾನಿಕ =ದೇವತೆಗಳಿಂದ ಅಭಿನುತ = -ಅಭಿವಂದಿತನೆ,, ಭೀಮಾಭಿವಂದ್ಯ ಚರಣ = ಭೀಮಸೇನನಿಂದ ನಮಸ್ಕರಿಸಲ್ಪಟ್ಟವನೆ, ಮಾಧವ= ಲಕ್ಷ್ಮೀಪತಿಯೇ, ತೇ =ನಿನ್ನ, ಅಂಘ್ರಿಕಮಲೇ = ಚರಣ ಕಮಲಗಳಲ್ಲಿ, ಮೇ =ನನಗೆ, ರತಿಂ= ಭಕ್ತಿಯನ್ನು, ದಿಶ =ಕೊಡು. (ದಿಶ =ಅತಿಸರ್ಜನೇ ಲೋಟ್ ) ಇದರಲ್ಲಿ ಕೃಷ್ಣಾವತಾರದ ಕೆಲವು ಘಟನೆಗಳ ಸೂಚನೆಯಿದೆ. ( ಇಂದಿರಾ ಲೋಕಮಾತಾ ಮಾ ಕ್ಷಿ ರೋದ ತನಯಾ ರಮಾ' (ಅಮರ) ಸಕ್ಷ್ವೇಲಭಕ್ಷ್ಯ ಭಯದಾಕ್ಷಿ ಶ್ರವೋಗಣಜಲಾಕ್ಷೇಪ ಪಾಶಯಮನಂ ಲಾಕ್ಷಾಗೃಹಜ್ವಲನ ರಕ್ಶೋಹಿಡಿಂಬಬಕ ಭೈಕ್ಷಾನ್ನ ಪೂರ್ವವಿಪದಃ । ಅಕ್ಷಾನುಬಂಧ ಭವ ರೂಕ್ಷಾಕ್ಷರ ಶ್ರವಣಸಾಕ್ಷಾನ್ಮ​ಹಿಷ್ಯವಮತೀ ಕಾಕ್ಷಾನುಯಾನಮಧಮಕ್ಶ್ಮಾಪ ಸೇವನಮಭೀಕ್ಷ್ಣಾಪಹಾಸಮಸತಾಮ್ ॥ ೩೦ ॥ ಚಕ್ಷಾಣ ಏವ ನಿಜಪಕ್ಷಾಗ್ರಭೂದಶಶತಾಕ್ಷಾತ್ಮ ಜಾದಿಸುಹೃದಾ- ಮಾಕ್ಷೇಪಕಾರಿ ಕುನೃಪಾಕ್ಷೌಹಿಣೀ ಶತಬಲಾಕ್ಷೋಭ ದೀಕ್ಷಿತಮನಾಃ । ತಾರ್ಕ್ಷ್ಯಾಸಿಚಾಪಶರ ತೀಕ್ಷ್ಣಾರಿ ಪೂರ್ವನಿಜ ಲಕ್ಷ್ಮಾಣಿ ಚಾಪ್ಯಗಣಯನ್ ವೃಕ್ಷಾ ಲಯಧ್ವ ಜರಿರಕ್ಷಾಕರೋ ಜಯತಿ ಲಕ್ಷ್ಮೀಪತಿರ್ಯದುಪತಿಃ ॥ ೩೧ ॥ ತಾ: ಕೌರವರು ಭೀಮನಿಗೆ ವಿಷದ ಲಡ್ಡುಗೆ ತಿನಿಸಿದ್ದು, ಕ್ರೂರ ಸರ್ಪಗಳಿಂದ ಕಚ್ಚಿಸಿದ್ದು, ಅವನನ್ನು ಹಗ್ಗಗಳಿಂದ ಬಿಗಿದು ನೀರಲ್ಲಿ ಮುಳುಗಿಸಿದ್ದು, ಪಾಂಡವರನ್ನು ಅರಗಿನ ಮನೆಯಲ್ಲಿರಿಸಿ ಅದಕ್ಕೆ ಬೆಂಕಿ ಕೊಟ್ಟಿದ್ದು, ಬಕ ಹಿಡಿಂಬಾದಿ ರಾಕ್ಷಸರೊಡನೆ ಭೀಮ ಹೋರಾಡಿದ್ದು, ಏಕಚಕ್ರನಗರದಲ್ಲಿ ಪಾಂಡವರು ಭಿಕ್ಷೆ ಬೇಡಿ ಜೀವಿಸಿದ್ದು, ಮುಂತಾದ ಹಳೆಯ ಕಷ್ಟಗಳನ್ನೂ ಮತ್ತು ದ್ಯೂತದಲ್ಲಿ ಕೌರವರು ಮರ್ಮಭೇದಕವಾದ ನಿಂದೆಯ ಮಾತುಗಳಿಂದ ಚುಚ್ಚಿ ನುಡಿದುದಲ್ಲದೆ, ಪಾಂಡವರ ಮಡದಿ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ಅವಮಾನ ಮಾಡಿದ್ದು ಇವೆರಡು, ಬಳಿಕ ಪಾಂಡವರ ಅರಣ್ಯಗಮನ, ಅವರು ವಿರಾಟನಂಥ ಅಧಮರಾಜರ ಸೇವೆಗೆ ನಿಂತದ್ದು, ದುರ್ಯೋಧನಾದಿ ದುರ್ಜನರು ಹೆಜ್ಜೆ ಹೆಜ್ಜೆಗೂ ಮಾಡಿದ ಅಪಹಾಸ್ಯ ಇವೆಲ್ಲವನ್ನು ಹಲ್ಲು ಕಚ್ಚಿಕೊಂಡು ನೋಡಿದ ಕೃಷ್ಣ, ಬಳಿಕ ಯುಧಿಷ್ಠಿರ ಭೀಮಾರ್ಜುನಾದಿ ಆತ್ಮೀಯರನ್ನು ನಿಂದಿಸುವ ದ್ವೇಷಿಗಳಾದ ದುಷ್ಟ ರಾಜರ ಹಿಂಡನ್ನು ಧ್ವಂಸಗೈಯುವ ಸಂಕಲ್ಪದಿಂದ, ಗರುಡ, ಖಡ್ಗ, ಚಕ್ರ ಮುಂತಾದ ತನ್ನ ಯಾವ ಆಯುಧಗಳನ್ನೂ ಬಯಸದೆ, ನಿರಾಯುಧನಾಗಿಯೇ ಕಪಿಧ್ವಜನಾದ ಪಾರ್ಥನನ್ನು ರಕ್ಷಿಸಲು ಮನಸ್ಸು ಮಾಡಿದ ಆ ಲಕ್ಷ್ಮೀಪತಿಯಾದ ಶ್ರೀಕೃಷ್ಣನಿಗೆ ನನ್ನ ನಮನವು. ಪ್ರ. ಪಃ ಸಕ್ಷ್ವೇಲಭಕ್ಷ್ಯ= ವಿಷಭರಿತವಾದ ಲಡ್ಡಿಗೆ (ತಿನ್ನಿಸಿದ್ದು), ಭಯ ದಾಕ್ಷಿಶ್ರವೋಗಣ =ಭಯಂಕರವಾದ ವಿಷಸರ್ಪಗಳಿಂದ (ಕಚ್ಚಿಸಿದ್ದು), ಜಲಾಕ್ಷೇಪ= ನೀರಲ್ಲಿ ಮುಳುಗಿಸಿದ್ದು, ಪಾಶಯಮನಂ =ಹಗ್ಗಗಳಿಂದ ಬಿಗಿದದ್ದು, ಲಾಕ್ಷಾಗೃಹ ಜ್ವಲನ =ಅರಗಿನ ಮನೆಯಲ್ಲಿಟ್ಟು ಬೆಂಕಿಕೊಟ್ಟದ್ದು, ರಕ್ಷೋಹಿಡಿಂಬ ಬಕ =ರಾಕ್ಷಸರಾದ ಹಿಡಿಂಬ ಬಕ (ಮುಂತಾದವರೊಡನೆ ನಡೆಸಿದ ಹೋರಾಟ), ಭೈಕ್ಷಾನ್ನ​= ಭಿಕ್ಷಾನ್ನದಿಂದ (ಬದುಕಿದ್ದು), ಪೂರ್ವ -=ತಾದ, ವಿಪದಃ=ದುಃಖಗಳನ್ನೂ ಮತ್ತು ಅಕ್ಷಾನುಬಂಧ ಭವ= ಪಗಡೆಯಾಟದ ಸಂದರ್ಭದಲ್ಲಿ ಹೇಳಿದ, ರೂಕ್ಷಾಕ್ಷರ ಶ್ರವಣ = ಕಠೋರವಾದ ಮಾತನ್ನು ಕೇಳಿದ್ದು, ಸಾಕ್ಷಾನ್ಮಹಿಷ್ಯವಮತೀ = ತಮ್ಮ ಹೆಂಡತಿಗಾದ ಅವಮಾನ ಇವೆರಡು, ಕಕ್ಷಾನುಯಾನಂ =ಕಾಡಿಗೆ ಹೋದುದು, ಅಧಮಕ್ಷಾಪಸೇವನಂ = (ವಿರಾಟನಂಥ) ನೀಚ ರಾಜರನ್ನು ಸೇವಿಸಿದ್ದು, ಅಸತಾಂ= ದುರ್ಯೋಧನಾದಿದುರ್ಜನರ, ಅಭೀಕ್ಷ್ಣಾಪಹಾಸಂ = ಪದೇಪದೇ ಮಾಡಿದ ಪರಿಹಾಸ ಇವನ್ನು, ಚಕ್ಷಾಣ​ಎವ​= ನೋಡಿದ ಶ್ರೀಕೃಷ್ಣ, ನಿಜಪಕ್ಷಾಗ್ರ ಭೂ =ತಮ್ಮ ಪಕ್ಷದ ಹಿರಿಯನಾದ ಯುಧಿಷ್ಠಿರ, ದಶಶತಾಕ್ಷಾತ್ಮಜಾದಿ =ಸಹಸ್ರಾಕ್ಷನಾದ ಇಂದ್ರನ ಮಗ ಅರ್ಜುನ ಮೊದಲಾದ, ಸುಹೃದಾಂ =ಆತ್ಮೀಯರನ್ನು, ಆಕ್ಷೇಪಕಾರಿ=ನಿಂದಿಸುವ ದ್ವೇಷಿಗಳಾದ, ಕುನೃಪಾಕ್ಷೌಹಿಣೀಶತಬಲ = ದುಷ್ಟರಾಜರ ಅಕ್ಷೌಹಿಣೀ ಸೈನ್ಯದ, ಆಕ್ಷೋಭ =ಹಿಂಸೆಯಲ್ಲಿ, ದೀಕ್ಷಿತ ಮನಾಃ = ದೃಢಸಂಕಲ್ಪ ಮಾಡಿದ ಮನಸ್ಸುಳ್ಳವನಾಗಿ, ತಾರ್ಕ್ಷ್ಯ​​ =ಗರುಡ, ಅಸಿ =ನಂದಕವೆಂಬ ಖಡ್ಗ, ಶಾರ್ಙ್ಗ = ಧನುಸ್ಸು, ಶರ =ಬಾಣಗಳು, ತೀಕ್ಷ್ಣಾರಿಪೂರ್ವ= ರೂಕ್ಷವಾದ ಚಕ್ರ ಮೊದಲಾದ, ನಿಜಲಕ್ಷ್ಮಾಣಿಚಾಪಿ =ತನ್ನ ಆಯುಧಗಳನ್ನೂ ಸಹ, ಅಗಣಯನ್= ಲೆಕ್ಕಿಸದೆ ನಿರಾಯುಧನಾಗಿಯೇ, ವೃಕ್ಷಾಲಯ ಧ್ವಜ = ಕಪಿಧ್ವಜನಾದ ಅರ್ಜುನ ನನ್ನು, ರಿರಕ್ಷಾಕರಃ =ರಕ್ಷಿಸುವ ಇಚ್ಛೆ ಮಾಡಿದ, (ಸಃ- ಆ) ಲಕ್ಷ್ಮೀಪತಿಃ= ಲಕ್ಷ್ಮೀ ವಲ್ಲಭನಾದ, ಯದುಪತಿಃ=ಶ್ರೀಕೃಷ್ಣನು, ಜಯತಿ = ಸರ್ವೋತ್ತಮನಾದ ಭಗವಂತ (ಅವನಿಗೆ ನನ್ನ ನಮನಗಳು). ಕಕ್ಷ= The interior of the forest 4 ಕಕ್ಷಾಂತರಗತೋ ವಾಯುಃ' ರಾಮಾಯಣ, ಓಂ ಬುದ್ಧಾಯ ನಮಃ, ಓಂ ಕಲ್ಕಿನೇ ನಮಃ ಬುದ್ದಾವತಾರ ಕವಿಬದ್ಧಾನುಕಂಪ ಕುರು ಬದ್ಧಾಂಜಲೌ ಮಯಿ ದಯಾಂ ಶೌದ್ಧೋದನಿ ಪ್ರಮುಖ ಸೈದ್ಧಾಂತಿಕಾsಸುಗಮ ಬೌದ್ದಾಗಮ ಪ್ರಣಯನ । ಕ್ರುದ್ಧಾಹಿತಾಸುಹೃತಿ ಸಿದ್ಧಾಸಿಪೇಟಧರ, ಶುದ್ಧಾಶ್ವಯಾನ ಕಮಲಾ- ಶುದ್ಧಾಂತ ಮಾಂ ರುಚಿಪಿನದ್ದಾಖಿಲಾಂಗ ನಿಜಮದ್ಧಾಽನ ಕಲ್ಕ್ಯ​ಭಿಧ ಭೋಃ ॥೩೨॥ ತಾಃ ದುರ್ಙೇಯವಾದ​ ಭೌಧ​ ಸಿದ್ಧಾಂತವನ್ನು ಶೌದ್ಧೋದನಿ ಮೊದಲಾದವ ರಿಂದ ಪ್ರಚಾರ ಮಾಡಿಸಿದವನೆ, ಜ್ಞಾನಿಗಳಲ್ಲಿ ದಯೆದೋರುವ ಅಹಿಂಸಾತತ್ವದ ಪ್ರತಿ ಪಾದಕನಾದ ಬುದ್ಧನಾಗಿ ಧರೆಗಿಳಿದ ಪರಮಾತ್ಮನೆ, ಕೈಮುಗಿಯುತ್ತೇನೆ, ನನ್ನಲ್ಲಿ ದಯೆದೋರು, ಕ್ರೋಧಾವೇಶಭರಿತರಾದ ದುರ್ಜನರ (ಅಹಿತರ) ವಿನಾಶಕ್ಕಾಗಿ ಖಡ್ಗ ಗುರಾಣಿಗಳನ್ನು ಧರಿಸಿ ಸನ್ನದ್ಧನಾಗಿ, ಬಿಳಿ ಕುದುರೆಯೇರಿ, ಹೊಳೆವ ಅಂಗಕಾಂತಿಯಿಂದ ಬೆಳಗುತ್ತಾ ಬರುವ ಲಕ್ಷ್ಮೀ ಮನೋಹರನಾದ ಶ್ರೀಹರಿ, ನಿನ್ನವನಾದ ನನ್ನನ್ನು ರಕ್ಷಿಸು. ಪ್ರ. ಪ: ಶೌದ್ಧೋದನಿ ಪ್ರಮುಖ = ಶುದ್ಧೋದನ ಮಗನೇ ಮೊದಲಾದ (ಶುದ್ಧ + ಓದನ ಷೃಷೋದರಾದಿತ್ವಾತ್ ಸಾಧುಃ) ಸೈದ್ಧಾಂತಿಕೈಃ = ಸಿದ್ಧಾಂತ ಪ್ರಚಾರಕರಿಂದ, ಅಸುಗಮ= ದುರ್ಙೇಯವಾದ, ಬೌದ್ಧಾಗಮಪ್ರಣಯನ =ಬೌದ್ಧ ಸಿದ್ಧಾಂತವನ್ನು ನಿರ್ಮಿಸಿ ಪ್ರಸಾರಮಾಡಿದವನೆ! ಕವಿ =ಜ್ಞಾನಿಗಳಲ್ಲಿ, ಬದ್ಧಾನು ಕಂಪ = ದಯೆಯುಳ್ಳ, ಬುದ್ಧಾವತಾರ = ಬುದ್ಧರೂಪನಾಗಿ ಅವತರಿಸಿದವನೆ, ಬದ್ಧಾಂಜಲೌ = ಕೈಮುಗಿದ, ಮಯಿ =ನನ್ನಲ್ಲಿ, ದಯಾಂ =ಕೃಪೆಯನ್ನು, ಕುರು= ಮಾಡು. ಕ್ರುದ್ಧಾಹಿತ = ಕ್ರೋಧಗೊಂಡ ಅಹಿತಜನರ, ಅಸುಹೃತಿ = ಪ್ರಾಣಾಪ ಹಾರಕ್ಕಾಗಿ, ಸಿದ್ಧಾಸಿಖೇಟಧರ =ಖಡ್ಗ ಗುರಾಣಿಗಳನ್ನು ಧರಿಸಿ ಸನ್ನದ್ಧನಾದವನೆ, ಶುದ್ಧಾಶ್ವಯಾನ =ಬಿಳಿ ಕುದುರೆಯನ್ನೇರಿ ಕುಳಿತ, ಕಮಲಾ ಶುದ್ಧಾಂತ = ಲಕ್ಷ್ಮಿ ಯೆ ಅಂತಃಪುರ (ಪತ್ನಿ) ವಾಗಿರುವ, ರುಚಿಪಿನದ್ಧಾಖಿಲಾಂಗ= ಕಾಂತಿಯಿಂದ ಬೆಳಗುವ ಕಾಯವುಳ್ಳ, ಕಲ್ಕ್ಯಭಿಧ =ಕಲ್ಕಿನಾಮಕನಾದ, ಭೋಃ (ಹರೇ)= ಹೇ ಹರಿಯೇ, ನಿಜಂ =ಆತ್ಮೀಯನಾದ, ಮಾಂ =ನನ್ನನ್ನು, ಅದ್ದಾ =ಚೆನ್ನಾಗಿ, ಅವ =ರಕ್ಷಿಸು. (ತತ್ವೇ ತ್ವದ್ದಾಂಜಸಾ ದ್ವಯಂ' (ಅಮರ) ಶುದ್ಧೋದನ ಎಂಬಲ್ಲಿ ಪೃಷೋದರತ್ವಾತ್ ಸಾಧುಪ್ರಯೋಗವೆಂದು ತಿಳಿಯಬೇಕು. ಓಂ ನಾರಾಯಣಾಯ ನಮಃ ಸಾರಂಗಕೃತ್ತಿಧರ ಸಾರಂಗ ವಾರಿಧರ! ಸಾರಂಗರಾಜ ವರದಾ- ಸಾರಂ ಗದಾರಿತರಸಾಽರಂ ಗತಾತ್ಮಮದಸಾರಂ ಗತೌಷಧಬಲಮ್ । ಸಾರಂಗವತ್ಕುಸುಮಸಾರಂ ಗತಂ ಚ ತವ ಸಾರಂಗಮಾಂಘ್ರಿಯುಗಲಂ ಸಾರಂಗವರ್ಣಮಪ ಸಾರಂಗತಾಬ್ಜ​ಮದಸಾರಂಗದಿಂಸ್ತ್ವಮವ ಮಾಮ್ ॥ ೩೩ ॥ ತಾಃ ಮುನಿಗಳೆಂಬ ಚಾತಕಪಕ್ಷಿಗಳಿಗೆ ಮಳೆಮುಗಿಲಿನಂತಿರುವವನೂ, ಗಜೇಂದ್ರವರದನೂ, ಗದಾಧರನೂ ಆದ ಶ್ರೀಹರಿಯೇ ! ಭವರೋಗವೆಂಬ ಶತ್ರುವಿನ ಸೆಳೆತಕ್ಕೆ ಸಿಕ್ಕಿ ದುರ್ಬಲನೂ, 'ನಾನು' ಎಂಬ ಅಹಂಕಾರವೇನೂ ಉಳಿಯದವನೂ, ಈ ರೋಗದಿಂದ ಮುಕ್ತನಾಗಲು ಯಾವ ಔಷಧವನ್ನು (ಉಪಾಯವನ್ನು) ಕಾಣದವನೂ ಆಗಿ ತಾವರೆಯ ಚೆಲುವನ್ನು ನಿಂದಿಸುವಂಥ ಮತ್ತು ಉತ್ತಮ ಪದವಿಗೆ (ನಮ್ಮನ್ನು) ಒಯ್ಯುವಂಥ ಚಿತ್ರವರ್ಣದ ನಿನ್ನ ಪಾದಕಮಲಗಳನ್ನು - ತುಂಬಿಯು ಮಕರಂದಕ್ಕೆ ಹಾತೊರೆಯುವಂತೆ ಈಗ ಮೊರೆಹೊಕ್ಕಿದ್ದೇನೆ. ನನ್ನನ್ನು ರಕ್ಷಿಸು. ಪ್ರ. ಪ : ಸಾರಂಗಕೃತ್ತಿಧರ = ಮೃಗಚರ್ಮಧಾರಿಗಳಾದ ಮುನಿಗಳೆಂಬ, ಸಾರಂಗ =ಚಾತಕಪಕ್ಷಿಗಳಿಗೆ, ವಾರಿಧರ - ಮಳೆಮುಗಿಲಂತಿರುವವನೆ, ಸಾರಂಗರಾಜ= ಗಜೇಂದ್ರನಿಗೆ, ವರದ =ವರವಿತ್ತವನೆ, ಗದಿನ್ = ಗದಾಧರನಾದ ಹರಿಯೇ, ತ್ವಂ =ನೀನು, ಗದಾರಿತರಸಾ =ಭವರೋಗವೆಂಬ ಶತ್ರುವಿನ ಸೆಳೆತದಿಂದ, ಅಸಾರಂ =ದುರ್ಬಲನೂ, ಅರಂ ( ಅಲಂ ) =ಸಂಪೂರ್ಣವಾಗಿ ( ರಲಯೋರಭೇದಃ ), ಗತಾತ್ಮಮದ ಸಾರಂ= ಅಹಂಭಾವರೂಪದ ಮದವನ್ನು ಕಳೆದುಕೊಂಡ, ಮತ್ತು ಗತೌಷಧ ಬಲಂ= ಇದರ ನಿವೃತ್ತಿಗೆ ಯಾವ ಮದ್ದೂ (ಉಪಾಯವೂ) ಕಾಣದ, (ನನ್ನನ್ನು), ಕುಸುಮ ಸಾರಂ (ಪ್ರತಿ) = ಮಕರಂದವನ್ನು ಕುರಿತು, ಸಾರಂಗವತ್ = ದುಂಬಿಯಹಾಗೆ, ಅಪ ಸಾರಂಗತ = ಅಪಸರಣ ಹೊಂದಿದ, ಅಬ್ಜ ಮದಸಾರಂ =ತಾವರೆಯ ಸೌಂದರ್ಯಮದವುಳ್ಳ ( ತಾವರೆಗಿಂತಲೂ ಚೆಲುವಾದ ) ಮತ್ತು, ಸಾರಂಗಮ =ಶ್ರೇಷ್ಠವಾದ ವೈಕುಂಠಕ್ಕೆ ಕರೆದೊಯ್ಯುವ, ಸಾರಂಗವರ್ಣ೦ =ಚಿತ್ರವರ್ಣವುಳ್ಳ, ತವ =ನಿನ್ನ, ಅಂಘ್ರಿಯುಗಲಂ = ಪದದ್ವಂದ್ವಗಳನ್ನು ( ಕುರಿತು ), ಗತಂ=ಶರಣುಬಂದಿರುವ, ಮಾಂ =ನನ್ನನ್ನು, ಅವ= ರಕ್ಷಿಸು. ಇದರಲ್ಲಿ [ನರ] ನಾರಾಯಣಾವತಾರದ ವರ್ಣನೆ ಇದೆ. ಚಾತಕೇ ಹರಿಣೇ ಪುಂಸಿ ಸಾರಂಗಃ ಶಬಲೇ ತ್ರಿಷು' (ಅಮರ) "ಸಾರಂಗಶ್ಚಾತಕೇ ಭೃಂಗೇ ಕುರಂಗೇ ಚ ಮತಂಗಜೇ' (ವಿಶ್ವಃ) ಉತ್ತರೋತ್ತರಮುತ್ಕರ್ಷಃ ಸಾರಃ' ಗ್ರೀವಾಸ್ಯವಾಹತನು ದೇವಾಂಡಜಾದಿದರ ಭಾವಾಭಿರಾಮ ಚರಿತಂ ಭಾವಾತಿಭವ್ಯ ಶುಭಧೀ ವಾದಿರಾಜಯತಿ ಭೂವಾಗ್ವಿಲಾಸ ನಿಲಯಮ್ । ಶ್ರೀವಾಗಧೀಶಮುಖ ದೇವಾಭಿನಮ್ಯ ಹರಿ ಸೇವಾರ್ಚನೇಷು ಪಠತಾ ಮಾವಾಸ ಏವ ಭವಿತಾಽವಾಗ್ಭ​ವೇತರ ಸುರಾವಾಸ ಲೋಕನಿಕರೇ॥ ೩೪ ॥ ಇತಿ ಶ್ರೀಮದ್ವಾದಿರಾಜ ಪೂಜ್ಯಚರಣ ವಿರಚಿತಾ ದಶಾವತಾರ ಸ್ತುತಿಃ ತಾ: ಹಯಗ್ರೀವ ಸ್ವರೂಪನಾದ ಶ್ರೀಹರಿಯ ಮತ್ಸ್ಯಾದಿ ಹತ್ತು (ಹಲವು) ಅವತಾರಗಳ ಚರಿತೆಯನ್ನು ಬಣ್ಣಿಸುವ, ಅತಿಮಂಗಲಪ್ರದವಾದ ಈ ಸ್ತೋತ್ರವನ್ನು ವಿಶುದ್ಧ ಬುದ್ಧಿಯುಳ್ಳ ಶ್ರೀ ವಾದಿರಾಜ ಸ್ವಾಮಿಗಳು ಭಕ್ತಿಯಿಂದ (ಅಶ್ವಧಾಟಿಯಲ್ಲಿ) ರಚಿಸಿದರು. ಬ್ರಹ್ಮಾದಿದೇವತೆಗಳಿಗೂ ವಂದ್ಯನಾದ ಶ್ರೀಹರಿಯ ಪೂಜಾಕಾಲದಲ್ಲಿ ಇದನ್ನು ಪಠಿಸುವ ಭಕ್ತರು ಮುಂದೆ ಯಮಲೋಕಕ್ಕೆ ಹೋಗದೆ ಸ್ವರ್ಗಲೋಕದಲ್ಲಿ ವಾಸಿಸುವರು. ಪ್ರ. ಪ: ಭಾವ= ವಿಶುದ್ಧ ಭಾವದಿಂದ, ಅತಿಭವ್ಯ =ಅತಿ ಮಂಗಲಕರವಾದ, ಶುಭ ಧೀ =ಪ್ರಶಸ್ತವಾದ ಬುದ್ಧಿಯುಳ್ಳ, ವಾದಿರಾಜಯತಿ ಭೂ =ವಾದಿರಾಜ ಯತಿ ಗಳಿಂದ ನಿರ್ಮಿತವಾದ, ವಾಗ್ವಿಲಾಸ ನಿಲಯಂ=ವಾಕ್ಚಾತುರ್ಯಕ್ಕೆ ನೆಲೆಯಾದ ಗ್ರೀವಾಸ್ಯವಾಹ ತನುದೇವ =(ಕಂಠ ಮತ್ತು ಮುಖಗಳು ಕುದುರೆಯಂತೆ ಇರುವ ದೇಹವುಳ್ಳ) ಹಯಗ್ರೀವದೇವರ, ಅಂಡಜಾದಿ ದಶ ಭಾವ= ಮತ್ಸ್ಯಾದಿ ದಶಾವತಾರಗಳ, ಅಭಿರಾಮ ಚರಿತಂ= ಸುಂದರವಾದ ಚರಿತೆಯ ಸ್ತೋತ್ರವನ್ನು, ಶ್ರೀವಾಗಧೀಶ ಮುಖ =ಬ್ರಹ್ಮಾದಿ ದೇವತೆಗಳಿಂದ, ಅಭಿನಮ್ಯ​= ವಂದ್ಯನಾದ, ಹರಿ= ಶ್ರೀಹರಿಯ, ಸೇವಾರ್ಚನೇಷು= ಪೂಜಾ ಕೈಂಕರ್ಯಗಳಲ್ಲಿ, ಪಠತಾಂ= ಪಾರಾಯಣ ಮಾಡುವವರಿಗೆ, ಅವಾಗ್ಭ​ವೇತರ = ದಕ್ಷಿಣದಿಕ್ಕಿನಲ್ಲಿರುವ ಯಮಲೋಕವನ್ನು ಹೊರತು ಬೇರೆ, ಸುರಾವಾಸಲೋಕನಿಕರೇ = ಇಂದ್ರಾದಿ ದೇವತೆಗಳ ಸ್ವರ್ಗಲೋಕದಲ್ಲೇ, ಆವಾಸಃ =ಸ್ಥಿತಿಯು (ವಾಸವು), ಭವಿತಾ = ಆಗುವುದು. ಮಿನೋ ವೈಸಾರಿಣೋಂಡಜಃ (ಅಮರ) ಕ್ವ ವಾದಿರಾಜಃ ಕವಿತಾ ಕೃ ಚ ಮೇ ಕೃಪಣಾ ಮತಿಃ ತಥಾಪಿ ಸಾಹಸಸ್ಯಾಸ್ಯ ಕಾರಣಂ ಗುರ್ವನುಗ್ರಹ: ನರಸಿಂಹತನೂಜೇನ ರಾಜಗೋಪಾಲ ಸೂರಿಣಾ ಟೀಕಾ ವಿರಚಿತಾ ಸೇಯಂ ಹಯಗ್ರೀವ ಪದೇsರ್ಪಿತಾ ॥